Discover millions of ebooks, audiobooks, and so much more with a free trial

Only $11.99/month after trial. Cancel anytime.

Abhramana
Abhramana
Abhramana
Ebook531 pages2 hours

Abhramana

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200202608
Abhramana

Read more from K.T. Gatti

Related to Abhramana

Related ebooks

Reviews for Abhramana

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Abhramana - K.T. Gatti

    http://www.pustaka.co.in

    ಅಬ್ರಾಹ್ಮಣ

    Abhramana

    Author:

    ಕೆ. ಟಿ. ಗಟ್ಟಿ

    K.T. Gatti

    For more books

    http://www.pustaka.co.in/home/author/kannada/kt-gatti-novels

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ದ್ವಿತೀಯ ಮುದ್ರಣಕ್ಕೆ

    ಮುನ್ನುಡಿ

    ಪುರೋಹಿತಶಾಹಿಯದ್ದು ಎಲ್ಲ ಕಾಲಕ್ಕೂ ಒಂದೇ ದನಿ. ಪುರೋಹಿತಶಾಹಿಗೂ ಪೂರ್ವಗ್ರಹಗಳಿಗೂ ಬಿಡಿಸಲಾಗದ ನಂಡು. ಇದರ ಜೀವ ಅದರ ಕತ್ತಿನಲ್ಲಿ; ಅದರ ಜೀವ ಇದರ ಕತ್ತಿನಲ್ಲಿ. ಜಗತ್ತಿನ ಇತಿಹಾಸದಲ್ಲಿ ಇದಕ್ಕೆ ನೂರಾರು ನಿದರ್ಶನಗಳನ್ನು ಕಾಣಬಹುದು.

    ಭೂಮಿಯ ಆಕಾರದ ಬಗ್ಗೆ

    ಕ್ರಿ.ಪೂ. 500ಕ್ಕಿಂತ ಮೊದಲೇ ಗ್ರೀಸಿನಲ್ಲಿ ಪೈತಾಗೋರಸನು ಭೂಮಿಯು ಗೋಲಾಕಾರವಾಗಿದೆ ಎಂದು ಪ್ರತಿಪಾದಿಸಿದ್ದ. ಕ್ರಿ.ಶ. 1543ರಲ್ಲಿ ಪೋಲಂಡಿನಲ್ಲಿ ಕೊಪರ್ನಿಕಸನು (1473-1543) ಭೂಮಿಯು ಗೋಲಾಕಾವಾಗಿದೆ. ಸೂರ್ಯನು ವಿಶ್ವದ ಕೇಂದ್ರ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಕ್ಕಾಗಿ ಪಟ್ಟ ಭದ್ರ ಪುರೋಹಿತಶಾಹಿಯಿಂದ ಶಿಕ್ಷೆಗೊಳಗಾದ.

    ಏಳನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಇಸ್ಲಾಮಿನ ಧರ್ಮಗ್ರಂಥವಾದ ಕುರಾನಿನ ಪ್ರಕಾರ ಭೂಮಿ ಈಗಲೂ ಚಪ್ಪಟೆಯೇ. 1872-78ರ ನಡುವೆ ಕೈರೊದ ಅಜರ್ ಮಸೀದಿಯಲ್ಲಿ ಮತ ಪ್ರಾಧ್ಯಪಕನಾಗಿದ್ದ ಪ್ರೊ. ಅಫ್ಫ್ರಾನ್ ಜಮಾಲುದ್ದೀನ್ ಎಂಬವನು ಒಂದು ದಿನ ಮಸೀದಿಗೆ ಒಂದು ಬೂಗೋಲವನ್ನು ತಂದು ಭೂಮಿಯ ನಿಜವಾದ ಆಕಾರದ ಬಗ್ಗೆ ವಿವರಿಸಲೆತ್ನಿಸಿದ. ಅವನ ವಿರುದ್ಧ ಇತರ ಪ್ರಾಧ್ಯಾಪಕರುಗಳು ದಂಗೆಯೆದ್ದು ಅವನನ್ನು ಗಡಿಪಾರು ಮಾಡಿಸಿದರು. ಪ್ರೊ. ಜಮಾಲುದ್ದೀನ್‍ನ ಮೇಲೆ ಮಾಡಲಾದ ಅಪಾದನೆ ‘ಪ್ರಜಾಸತ್ತಾತ್ಮಕ ಕ್ರಾಂತಿಕಾರಿ ಯೋಚನೆಗಳನ್ನು ಪ್ರತಿಪಾದಿಸಲೆತ್ತಿಸಿದ’ ಎಂದಾಗಿತ್ತು!

    ಕೊಪರ್ನಿಕಸನ ಸಿದ್ಧಾಂತಗಳನ್ನು ಅಲ್ಲಗಳೆಯಲು ಇಟೆಲಿಯಲ್ಲಿ ಗೆಲಿಲಿಯೊನ (1564-1642) ಮೇಲೆ ಒತ್ತಡವನ್ನು ಹೇರಲಾಯಿತು. ಹಿಂಸೆಯನ್ನು ತಡೆದುಕೊಳ್ಳಲಾರದೆ ಗೆಲಿಲಿಯೊ ಕೊಪರ್ನಿಕಸನ ವಾದವನ್ನು ತಪ್ಪು ಎಂದು ಒಪ್ಪಿದ. ಆದರೆ ಸೆರೆಮನೆಯಿಂದ ಹೊರತರುವಾಗ ‘ಆದರೆ ಭೂಮಿಯು ತಿರುಗುತ್ತಿದೆ’ ಎಂದು ಅವನಷ್ಟಕ್ಕೇ ಹೊಣಗಿಕೊಂಡುದಕ್ಕೆ ಪುನಃ ಅವನನ್ನು ಸೆರೆಮನೆಗೆ ತಳ್ಳಲಾಯಿತು.

    ಕೊಪರ್ನಿಕಸ್ ಮತ್ತು ಟೈಕೊಬ್ರಾಹ (1546-1600)ಯ ವಾದಗಳನ್ನು 1609ರಲ್ಲಿ ಜ್ಹೋನ್ ಕೆಪ್ಲರ್ ಎಂಬ ವಿಜ್ಞಾನಿ ಪ್ರಯೋಗಾಧಾರಿತ ಸಿದ್ಧಾಂತಗಳ ಮೂಲಕ ಮಂಡಿಸಿದಾಗ ಕ್ರೈಸ್ತ ಪುರೋಹಿತ ಶಾಹಿಯು ಭೂಮಿಯು ಗೋಲಾಕಾರದಲ್ಲಿದೆ ಎಂಬ ವಾದವನ್ನು ವಿರೋಧಿಸುವುದನ್ನು ನಿಲ್ಲಿಸಿತು.

    ಆರ್ಯಭಟ್ಟ (ಜನನ ಕ್ರಿ.ಶ. 176) ಭೂಮಿಯು ಗೋಲಾಕಾರವಾಗಿದೆಯೆಂದೂ ಸೂರ್ಯ ಭೂಮಿಯ ಸುತ್ತು ತಿರುಗುತ್ತಿರುವುದಲ್ಲ, ಭೂಮಿಯು ಸೂರ್ಯನ ಸುತ್ತು ತಿರುಗುತ್ತಿರುವುದೆಂದೂ, ಭೂಮಿ ತನ್ನ ಅಕ್ಷದ ಸುತ್ತು ತಿರುಗುತ್ತಿದೆಯೆಂದೂ ಹೇಳಿದ. ಹೀಗೆ ಹೇಳಿದುದಕ್ಕಾಗಿ ಆರ್ಯಭಟ ಶಿಕ್ಷಿಸಲ್ಪಡಲಿಲ್ಲ. ಬದಲು ಗೌರವಿಸಲ್ಪಟ್ಟ ಎಂಬುದು ಭಾರತೀಯರು ಹೆಮ್ಮೆಪಟ್ಟುಕೊಳ್ಳಬೇಕಾದ ವಿಚಾರ.

    ದೇವರು, ಧರ್ಮದ ಬಗ್ಗೆ

    ನಾನು ಆತ್ಮದ ದನಿಗೆ ಕಿವಿಗೊಡುತ್ತೇನೆ. ದೇವರೆಮಬುದು ಎಲ್ಲಾ ಕಡೆ ಇದೆ. ಎಲ್ಲೆಡೆಯಿಂದಲೂ ನನಗೆ ದೇವರ ದನಿ ಕೇಳಿಸುತ್ತದೆ. ನನ್ನೊಳಗೂ ಕೇಳಿಸುತ್ತದೆ ಎಂದು ನಂಬಿದ ಜ್ಹೋನ್ ಆಫ್ ಆರ್ಕ್ (1412-1431) ಎಂಬ ಹತ್ತೊಂಬತ್ತು ವರ್ಷದ ಹುಡುಗಿಯನ್ನು ಪುರೋಹಿತ ಕೂಟ ಬಗೆಬಗೆಯಲ್ಲಿ ವಿಚಾರಿಸಿ, ಮಾನಸಿಕ ಹಿಂಸೆಯನ್ನು ನೀಡಿ, ಇಗರ್ಜಿಯಲ್ಲಿರುವ ದೇವರನ್ನು ಮಾತ್ರವೇ ಒಪ್ಪಿಕೊಳ್ಳುವಂತೆ ಒತ್ತಾಯಿಸಿತು. ತಮ್ಮ ಪ್ರಯತ್ನದಲ್ಲಿ ಸಫಲರಾಗದೆ, ಅವಳು ದೇಶ ರಕ್ಷಣೆಗೆ ಪವಾಡ ಸದೃಶ ಹೋರಾಟ ನಡೆಸಿ ಗೆಲುವನ್ನು ತಂದುಕೊಟ್ಟದನ್ನು ಕೂಡಾ ಪುರೋಹಿತಶಾಹಿ ನೆನಪಿಸಿಕೊಳ್ಳದೆ ವೈರಿವರ್ಗದ ಪುರೋಹಿತಶಾಹಿಯ ಕೈಗೊಪ್ಪಿಸಿತು. ಜ್ಹೋನಳನ್ನು ಮಂತ್ರವಾದಿನಿ ಮತ್ತು ದೈವದ್ರೋಹಿ ಎಂದು ಜೀವಂತ ಸುಡಲಾಯಿತು. ಪರಸ್ಪರ ವೈರಿಗಳಾದ ಫ್ರೆಂಚರು ಮತ್ತು ಇಂಗ್ಲೀಷರು ಪರಸ್ಪರ ಸಹಕರಿಸಿ ಈ ಶಿಕ್ಷೆಯನ್ನು ವಿಧಿಸಿದರು.

    ಐದು ಶತಮಾನಗಳ ನಂತರ ಪುರೋಹಿತಶಾಹಿಗೆ ತುಸು ಜ್ಞಾನೋದಯವಾಗಿ 1920ರಲ್ಲಿ ಜ್ಹೋನಳನ್ನು ಸಂತಳೆಂದು ಪರಿಗಣಿಸಲಾಯಿತು. ದೈವ ವಿರೋಧಿ ಎಂದು ಪರಿಗಣಿಸಲ್ಪಟ್ಟಿದ್ದ ಜ್ಹೋನ್, ಸೈಂಟ್ ಜ್ಹೋನ್ ಆದಳು.

    ಆತ್ಮದ ಧ್ವನಿಯಲ್ಲಿ ವಿಶ್ವಾಸವಿರಿಸಬೇಕು ಎಂದು ಬೋಧಿಸಿದ ಸತ್ಯಾನ್ವೇಷಕ ತತ್ತ್ವಜ್ಞಾನಿ ಸಾಕ್ರಟೀಸ್ (ಕ್ರಿ.ಪೂ. 469-399) ನನ್ನು ಧರ್ಮ ವಿರೋಧಿಯೆಂದು ಕರೆದು ಮರಣದಂಡನೆಗೆ ಗುರಿ ಮಾಡಲಾಯಿತು. ಸಾಕ್ರಟಿಸ್ ಸೈನಿಕನಾಗಿ ದೇಶ ರಕ್ಷಣೆಗೆ ಮಾಡಿದ ಶ್ರೇಷ್ಟ ಮಟ್ಟದ ಸೇವೆ, ಆ ಮೇಲೆ ಆಡಳಿತ ಭ್ರಷ್ಟಾಚಾರದ ವಿರುದ್ಧ ನಡೆಸಿದ ಧೀಮಂತ ಹೋರಾಟ ಧರ್ಮಪೀಠದಲ್ಲಿ ಕುಳಿತವರಿಗೆ ಮುಖ್ಯವಾಗಿ ಕಾಣಿಸಲಿಲ್ಲ.

    ಸತ್ಕರ್ಮ, ಸದ್ಧರ್ಮವನ್ನು ಬೋಧಿಸಿದ ಜಾನ್ ಬನ್ಯನ್ (1628-1688)ನನ್ನು ಲೈಸನ್ಸ್ ಪಡೆಯದೆ ಧರ್ಮ ಪ್ರವಚನ ಮಾಡಿದ ಎನ್ನುವ ಕಾರಣದಿಂದ ಸೆರೆಮನೆಗೆ ಹಾಕಲಾಯಿತು. ಹನ್ನೆರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಸೆರೆಮನೆಯಲ್ಲಿದ್ದ ಬನ್ಯನ್ ಹಲವು ಧಾರ್ಮಿಕ-ವೈಚಾರಿಕ ಗ್ರಂಥಗಳನ್ನು ರಚಿಸಿದ. ಅವುಗಳಲ್ಲಿ ಒಂದಾದ ‘ಪಿಲ್ಗ್ರಿಮ್ಸ್ ಪ್ರೊಗ್ರೆಸ್’ ಎಂಬುದು ಶ್ರೇಷ್ಟ ಸಾಹಿತ್ಯ ಕೃತಿಯಾಗಿದ್ದು, ‘ಬೈಬಲಿನ ನಂತರ ಅತ್ಯಂತ ಜನಪ್ರಿಯ ಗ್ರಂಥ’ ಎಂಬ ಖ್ಯಾತಿ ಗಳಿಸಿದೆ.

    ಸ್ವರ್ಗ ಪ್ರವೇಶದ ಸರ್ಟಿಫಿಕೇಟುಗಳನ್ನು ಮಾರಿ ಬಡವರನ್ನು ಸುಲಿಯುತ್ತಿದ್ದ ಪೋಪನನ್ನು ವಿರೋಧಿಸಿದ್ದಕ್ಕಾಗಿ ಮಾರ್ಟಿನ್ ಲೂಥರನನ್ನು 1521ರಲ್ಲಿ ಧರ್ಮ ಬಾಹಿರನೆಂದು ಘೋಷಿಸಿ ಧರ್ವದಿಂದ ಹೊರಹಾಕಲಾಯಿತು. ಕ್ರೈಸ್ತ ಧರ್ವದಲ್ಲಿ ವೈಚಾರಿಕತೆಯ ಯುಗದ ಆರಂಭಕ್ಕೆ ಅದು ಕಾರಣವಾಯಿತು.

    ಆದರೂ ಮನುಷ್ಯನನ್ನು ಸೃಷ್ಟಿಸಿದ್ದು ದೇವರು. ಭೂಮಿ ವಿಶ್ವದ ಕೇಂದ್ರ ಎಂಬ ಕ್ರೈಸ್ತ ಪುರೋಹಿತ ಶಾಹಿಯ ಮೂಢನಂಬಿಕೆಗೆ 1589ರಲ್ಲಿ ಹೊರಬಂದ ಡಾರ್ವಿನನ ವಿಕಾಸವಾದ ಒಪ್ಪಿಗೆಯಾಗಲಿಲ್ಲ. ಅದನ್ನು ಮಟ್ಟ ಹಾಕಲು ಹಲವು ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಅಷ್ಟರಲ್ಲಿ ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ರಾಂತಿಯೊಡನೆ ವಿಜ್ಞಾನ ಎಚ್ಚೆತ್ತಿತ್ತು. ಜನ ವಿಚಾರ ಮಾಡತೊಡಗಿದ್ದರು. ವಿಕಾಸವಾದ ಜನಕ್ಕೆ ಸ್ವೀಕೃತವಾಗಿ ಪಠ್ಯಪುಸ್ತಕವನ್ನು ಪ್ರವೇಶಿಸಿತು.

    ಭಾರತೀಯ ಸಮಾಜದ ಸ್ಥಿತಿ

    ವ್ಯಾಪಕವಾದ ಧಾರ್ಮಿಕ ಸಂಘರ್ಷಗಳಿಗೆ ಈಡಾಗದಿದ್ದರೂ, ಜೀವನ ಧರ್ವದ ಆಯ್ಕೆಯ ವಿಚಾರದಲ್ಲಿ ಯಾವುದೇ ಕಠಿಣ ನಿಬಂಧನೆಗಳು ಇಲ್ಲದಿದ್ದರೂ, ಭಾರತೀಯ ಸಮಾಜ ಬೇಕು ಬೇಕೆಂದೇ ಅವೈಚಾರಿಕತೆಯ ಪಾಶಕ್ಕೆ ಕೊರಳೊಡ್ಡುತ್ತಲೇ ಬಂದಿದೆ.

    ಜೀವನವನ್ನು ಧಾರ್ಮಿಕ ಕಟ್ಟು ಕಟ್ಟಳೆಗಳ ಚೌಕಟ್ಟಿನಲ್ಲಿ ಹಿಡಿದಿಡುವಂಥ ಏಕಮೇವ ವಿಧಾಯಕ ಧಾರ್ಮಿಕ ಗ್ರಂಥವೆಂಬುದೊಂದಿಲ್ಲವಾದುದರಿಂದ, ವಾಸ್ತವದಲ್ಲಿ, ಭಾರತೀಯ ಸಮುದಾಯದಲ್ಲಿ ಜೀವನ ಧರ್ಮದ ವಿಚಾರದಲ್ಲಿ ಬಹಳ ಮನೋವೈಶಾಲ್ಯ ಇರಬೇಕಾಗಿತ್ತು. ಧಾರ್ಮಿಕ-ಸಾಮಾಜಿಕ ಮನೋವೈಶಾಲ್ಯ ಮತ್ತು ರಾಷ್ಟ್ರೀಯ ಏಕತಾಭಾವ ತೀರಾ ಅಪರೂಪದ ವಸ್ತುಗಳಾದುದರಿಂದಲೇ ಹತ್ತನೇ ಶತಮಾನದಿಂದ ಹದಿನಾರನೇ ಶತಮಾನದವರೆಗೆ ಹಲವು ಅನ್ಯ ದೇಶಿಯರು ಈ ದೇಶದ ಮೇಲೆ ದಾಳಿ ಮಾಡಿದರು. ಮತ್ತು ಪ್ರತಿಸಲವೂ ಅವರೇ ಗೆದ್ದರು. ಅವರು ಈ ದೇಶವನ್ನು ಆಳಿದರು. ಅವರ ಮತ ಮತ್ತು ಭಾಷೆಗಳನ್ನು ಕೂಡಾ ಇಲ್ಲಿ ಬಿತ್ತಿ ಬೆಳೆಸಿ ಗೆಲ್ಲಿಸಿದರು.

    ಇಂದು ಕೂಡಾ ಧಾರ್ಮಿಕ-ಸಾಮಾಜಿಕ ಮನೋವೈಶಾಲ್ಯ ಮತ್ತು ರಾಷ್ಟ್ರೀಯ ಏಕತಾ ಭಾವ ಬಹಳ ಕ್ಷೀಣವಾಗಿಯೇ ಇದೆ. ಸಾವಿರಾರು ಜಾತಿಗಳು, ಸಾವಿರಾರು ದೈವ ದೇವರುಗಳು, ಕಂದಾಚಾರಗಳು ಮತ್ತು ಮೂಢನಂಬಿಕೆಗಳು ಈ ಸ್ಥಿತಿಗೆ ಕಾರಣ ಎನ್ನುವುದು ಸಂಪೂರ್ಣ ಸತ್ಯವಲ್ಲ. ಹಿಂದೂ ಧರ್ಮದ ಹಣೆಪಟ್ಟಿ ಹಾಕಿಕೊಂಡಿರುವ ಸಾವಿರಾರು ಗುರುಗಳು, ಜಗದ್ಗುರುಗಳು, ಸ್ವಾಮಿಗಳು ಅವರೊಡನೆ ಭಾವರತಿ ನಡೆಸುವ ರಾಜಕೀಯ ಮುಖಂಡರು ಮತ್ತು ಇವರೆಲ್ಲರ ನೆರಳಿನಲ್ಲಿ ಬದುಕುವ ಧಾರ್ಮಿಕ-ರಾಜಕೀಯ ಅಥವಾ ರಾಜಕೀಯ-ಧಾರ್ಮಿಕ ಪಾರಾಸೈಟುಗಳು ಇದಕ್ಕೆ ಕಾರಣ. ಜಾತೀಯತೆ, ಮೂಢನಂಬಿಕೆ ಇತ್ಯಾದಿಗಳನ್ನು ಜೀವಂತವಾಗಿಡುವವರು ಇವರು.

    ತಾವು ಎಲ್ಲರಿಗಿಂತ, ಎಲ್ಲದಕ್ಕಿಂತ ಮೇಲೆಂದುಕೊಳ್ಳುವ ಧರ್ಮಪೀಠಸ್ಥರು ತಮ್ಮ ಬಾಯಿಯಿಂದ ಹೊರಡಿಸುವ ಮೂರ್ಖ ವಿಚಾರಗಳಿಗೆ ನೂರಾರು ಉದಾಹರಣೆಗಳನ್ನು ಕೊಡಬಹುದು.

    ಒಬ್ಬ ಜಗದ್ಗುರು (ಗುರುಗಳಿಗಿಂತ ದೊಡ್ಡದು ಜಗದ್ಗುರುಗಳ ಸಂಖ್ಯೆ) ‘ಸತಿ’ ಎಂಬುದು ಹಿಂದೂ ಧರ್ಮದ ಅವಿಭಾಜ್ಯ ಅಂಗ ಎನ್ನುತ್ತಾನೆ. ಈಗ ಹೆಣ್ಣಲ್ಲ. ತಾನು ಹೆಣ್ಣಿನ ಗರ್ಭದಿಂದ ಬಂದವನೆಂಬುದು ಪೀಠವೇರಿದೊಡನೆ ಈತನಿಗೆ ಮರೆತು ಹೋಗಿದೆ. ಹೆಣ್ಣಿನ ಹೃದಯ ಈತನಿಗೆ ಹೇಗೆ ಅರ್ಥವಾದೀತು? ಹಿಂದೂ ಧರ್ಮವೇನೆಂದು ಘೋಷಿಸಲು ಇಂಥವರಿಗೆ ಅಧಿಕಾರ ಅಥವಾ ಅವಕಾಶ ನೀಡಿದ್ದು ಎಷ್ಟು ಸರಿ? ಅದಕ್ಕೆ ಇವರಿಗಿರುವ ಯೋಗ್ಯತೆಯೇನು? ಇಂಥ ಘೋಷಣೆಗಳನ್ನು ಕೇಳಿದರೆ ಹಿಂದೂ ಧರ್ಮ ಎಂದರೆ ಒಂದು ಅನಾಗರಿಕ ಧರ್ಮ ಎಂದು ಜಗತ್ತು ಭಾವಿಸಿದರೆ ತಪ್ಪಲ್ಲ. ಅಂದು ಸ್ವರ್ಗ ಪ್ರವೇಶದ ಟಿಕ್ಕೆಟ್ಟುಗಳನ್ನು ಮಾರಿದ ಪೋಪನ ಮುನರ್ಜನ್ಮ ಇದಾಗಿರಬಹುದೆ ಎಂದು ಸಂದೇಹಿಸಿದರೂ ತಪ್ಪಲ್ಲ.

    ಇನ್ನೊಬ್ಬ ಗುರು ಜಾತಿ ಹುಟ್ಟಿನಿಂದಲೇ ತೀರ್ಮಾನವಾಗುತ್ತದೆ, ವರ್ಣಾಶ್ರಮ ಉತ್ಕೃಷ್ಟ ಸಾಮಾಜಿಕ ಪದ್ಧತಿ ಎನ್ನುತ್ತಾನೆ. ಈ ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣ, ವೈಶ್ಯ ಕ್ಷತ್ರಿಯ ಮಣ್ಣಿಂದ ಮೂರಡಿ ಮೇಲಕ್ಕಿರುವವರು. ಉಳುವವನು, ಬಿತ್ತುವವನು, ಬೆಳೆಯುವವನು ಶೂದ್ರ. ಇದನ್ನು ಎಲ್ಲ ಡುಡಿಯುವವರು ಅರ್ಥಮಾಡಿಕೊಳ್ಳುವವರೆಗೆ ಈ ಗುರುವಿನ ಬಾಯ್ಬಡಕತನ ಮುಂದರಿಯುತ್ತದೆ.

    ಎಷ್ಟೋ ಗುರುಗಳು, ಸ್ವಾಮಿಗಳು, ‘ರಾಜಕೀಯ ಋಷಿ’ಗಳು ಅಧಿಕಾರದಲ್ಲಿರುವ ಮಂತ್ರಿ ಮಹೋದಯರುಗಳ ಶ್ರೇಯೋಭಿವೃದ್ಧಿಗೋಸ್ಕರ ಹೋಮ, ಯಾಗ ಇತ್ಯಾದಿಗಳನ್ನು ಮಾಡುವ ಸಂಪ್ರದಾಯ ಎಲ್ಲಿಯ ವರೆಗಿರುತ್ತದೋ ಅಲ್ಲಿಯವರೆಗೆ ಈ ಸಮಾಜದ ವೈಚಾರಿಕ ಬಡತನ ಮಾತ್ರವಲ್ಲ. ಆರ್ಥಿಕ ಬಡತನ ಕೂಡ ಕಡಿಮೆಯಾಗುವುದಿಲ್ಲ.

    ಕಂದಾಚಾರಗಳನ್ನು, ಮೂಢನಂಬಿಕೆಗಳನ್ನು ಸಮರ್ಥಿಸಿ, ತಮ್ಮ ಪಾಂಡಿತ್ಯವನ್ನು ಉಪಯೋಗಿಸಿ ಜನರನ್ನು ಮಂಕುಮಾಡುವ ವಿದ್ಯಾವಂತರು, ಪಂಡಿತರು, ಸಾಹಿತಿಗಳಿಂದ ಆಗುವ ಸಾಮಾಜಿಕ ಹಾನಿ ಎಲ್ಲಕ್ಕಿಂತ ಮಿಗಿಲಾದುದು. ಇವರ ಮಾತಿನಲ್ಲಿ, ಬರೆಹದಲ್ಲಿ ಸತ್ಯದ, ಮೌಲ್ಯದ ವಿಶ್ಲೇಷಣೆಗಿಂತ ಉಪಕತೆ, ಉದಾಹರಣೆಗಳೇ ಮುಖ್ಯ. ದೇವರೆಂದರೇನು ಎಂದು ಯಾರಾದರೂ ಕೇಳಿದರೆ ತಟ್ಟನೆ ದೇವರು ಕಡಲಿನಲ್ಲಿರುವ ಉಪ್ಪಿನ ಹಾಗೆ. ಉಪ್ಪು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದು ಇದೆ. ದೇವರನ್ನು ಹುಡುಕುವುದೆಂದರೆ ಉಪ್ಪಿನ ಹರಳು ಕಡಲಿಗೆ ಇಳಿದು ಉಪ್ಪನ್ನು ಹುಡುಕಿದ ಹಾಗೆ ಎಂದೆಲ್ಲಾ ಹೇಳಿ ತಮ್ಮ ಜ್ಞಾನವನ್ನು ಮೆರೆಸುತ್ತಾರೆ. ಬಹಳ ಜನ ಉಪ್ಪಿನ ಹರಳು ಕಡಲಿನಲ್ಲಿ ಉಪ್ಪು ಹುಡುಕುವ ಅದ್ಭುತ ರಮ್ಯ ಸಂಗತಿಯ ಬಗ್ಗೆಯೇ ಯೋಚಿಸುತ್ತಾ ತಮ್ಮ ಪ್ರಶ್ನೆಯನ್ನೇ ಮರೆತು ತಲೆಯಾಡಿಸುತ್ತಾರೆ. ನಿಮ್ಮ ಕಡಲು, ಉಪ್ಪು ಇತ್ಯಾದಿ ಉದಾಹರಣೆಗಳು ಬೇಡ, ನೇರವಾಗಿ ಉತ್ತರ ಕೊಡಿ ಎಂದು ಯಾರಾದರೂ ಹೇಳಿದರೆ, ಈ ಗುರು ಕ್ರುದ್ಧನಾಗುತ್ತಾನೆ. ‘ನಾಸ್ತಿಕ!’ ಎಂದು ಬೊಬ್ಬಿಡುತ್ತಾನೆ. ವೈಜ್ಞಾನಿಕ ಚಿಂತನೆಯನ್ನು ಈ ರೀತಿ ಹತ್ತಿಕ್ಕುವುದರಿಂದ ಇವರಿಗೆ ತಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳಲು ಆಗುತ್ತದೆ.

    ಇತರ ದೇಶಗಳಲ್ಲಿ ಹೆಚ್ಚಿನ ಧಾರ್ಮಿಕ ಸಂಘರ್ಷಗಳು ಧಾರ್ಮಿಕ ಪಟ್ಟಭದ್ರರು ತೋರಿಸಿದ ರೀತಿಯಲ್ಲಿ ದೇವರನ್ನು ಒಪ್ಪಿಕೊಳ್ಳುವವರ ಮತ್ತು ಒಪ್ಪಿಕೊಳ್ಳದವರ ನಡುವೆಯಾಗಿತ್ತು. ಭಾರತದಲ್ಲಿ ಈ ತೆರನ ಸಂಘರ್ಷ ಇರಲೇ ಇಲ್ಲ. ಈಗಲೂ ಇಲ್ಲ. ಸಂಘರ್ಷ. ಅದೂ ಕೂಡ ಮೊನ್ನೆಮೊನ್ನೆ ಆರಂಭವಾದ ಸಂಗತಿ. ದೇವಾಲಯ ಎಲ್ಲರಿಗೂ ಬೇಕು. ದೇವಾಲಯಕ್ಕೆ ಪ್ರವೇಶವಿಲ್ಲದ ಜನ ಪ್ರವೇಶ ಬಯಸಿದ ಕಾರಣಕ್ಕೆ ಮೇಳುಜಾತಿಯವರೊಡನೆ ಬೆರೆಯಲಪೇಕ್ಷಿಸಿದ್ದಕ್ಕೆ ಇಲ್ಲಿ ತಿಕ್ಕಾಟಗಳು ನಡೆದಿವೆ. ಈಗಲೂ ನಡೆಯುತ್ತಿವೆ. ಇಲ್ಲಲಿ ಇಸ್ಲಾಮೀ, ಕ್ರಿಸ್ತೀಯ ಮಾದರಿ ಧಾರ್ಮಿಕತೆ ಎಂದೂ ಇರಲಿಲ್ಲ. ಇಸ್ಲಾಮ್ ಮತ್ತು ಕ್ರೈಸ್ತ ಮತ ಇತರ ಧರ್ಮದ ಜನಗಳನ್ನು ನುಂಗಲು ಸದಾ ಬಾಯ್ತೆರೆದು ಕುಳಿತಿದ್ದರೆ ಹಿಂದೂ ಧರ್ಮ ತನ್ನ ಜನಗಳನ್ನು ತುಪ್ ತುಪ್ ಎಂದು ಉಗುಳುವುದರಲ್ಲೇ ಹೆಚ್ಚುಗಾರಿಕೆಯನ್ನು ತೋರಿಸಿದೆ.

    ಒಂದು ಕಾಲದಲ್ಲಿ, ಈ ದೇಶದಲ್ಲಿ ಜಾತಿ ವ್ಯವಸ್ಥೆ ಇತ್ತು ನಿಜ. ಬ್ರಾಹ್ಮಣರೇ ಬರೆಯುವಂಥ, ಕ್ಷತ್ರಿಯರೇ ಯುದ್ಧ ಮಾಡುವಂಥ, ವೈಶ್ಯರೇ ವ್ಯಾಪಾರ ಮಾಡುವಂಥ ವ್ಯವಸ್ಥೆ ಇತ್ತು. ಇದರಲ್ಲಿ ಕೊಚ್ಚಿಕೊಳ್ಳಬೇಕಾದ ಸಾಂಸ್ಕೃತಿಕ ಅಥವಾ ಸಾಮಾಜಿಕ ಭವ್ಯತೆ ಏನೂ ಇಲ್ಲ. ಈ ವ್ಯವಸ್ಥೆಯಿಲ್ಲದ ಇತರ ದೇಶಗಳೇನೂ ಕೆಟ್ಟುಹೋಗಿಲ್ಲ.

    ವರ್ಣವ್ಯವಸ್ಥೆ ಈಗ ಇತಿಹಾಸ ಮಾತ್ರ. ಇಂದು ಬರೆಯುವವರಲ್ಲಿ, ಪಾಠ ಹೇಳುವವರಲ್ಲಿ, ಬ್ಯಾಂಕುಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಸೈನ್ಯದಲ್ಲಿ ದುಡಿಯುವವರಲ್ಲಿ, ವ್ಯಾಪಾರಸಾಪಾರ ಮಾಡುವವರಲ್ಲಿ ಎಲ್ಲಾ ವರ್ಗದವರೂ ಇದ್ದಾರೆ. ಇಂದು ಜಾತಿಯನ್ನು ಮಾತ್ರವೇ ಏಕೆ ಕ್ರೈಸ್ತ, ಮುಸಲ್ಮಾನ, ಪಾರ್ಸಿ, ಸಿಖ್ಖ ಎಂದು ಮತವನ್ನು ಗುರುತಿಸಬೇಕಾದ ಅವಶ್ಯಕತೆಯೂ ಇಲ್ಲ. ಇದು ಒಳ್ಳೆಯ ಬೆಳವಣಿಗೆ.

    ಮಂದೇನೆಂಬ ಪ್ರಶ್ನೆ

    ಯಾವುದಾದರೊಂದು ವೇಷವನ್ನು ತೊಟ್ಟು ಭಾರತದಲ್ಲಿ ಸಿವಿಲ್‍ವಾರ್‍ ಕಾಣಿಸಿಕೊಳ್ಳುವ ಸಂಭವ ಇಲ್ಲದಿಲ್ಲ. ಸಣ್ಣ ಮಟ್ಟದಲ್ಲಿ ಇದು ದೇಶದಲ್ಲಿ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇದೆ. ತೀವ್ರ ಸಮಾಜವಾದ (Extreme socialism)ದ ಅಫೀಮು ಬರುವವರೆಗೆ ಸಂಕುಚಿತ ಧಾರ್ಮಿಕತೆಯ ಅಮಲು ಅಗತ್ಯ. ಇಲ್ಲವಾದರೆ ಸಾಮಾಜಿಕ ವ್ಯವಸ್ಥೆ ಕೆಟ್ಟುಹೋದೀತು ಎಂದು ಜನರಿಗನಿಸಬಹುದು. ಆದರೆ ಬಹಳ ಕಾಲ ಜನ ಹೀಗೇ ಸೂತ್ರದ ಗೊಂಬೆಗಳಂತೆ ಮಠ ಮಂದಿರ ದೇವಾಲಯಗಳಿಗೆ ನುಗ್ಗುತ್ತಾರೆ. ಭಕ್ತಿಯ ಅಮಲಿನಲ್ಲಿ ತಮ್ಮ ಕಷ್ಟವನ್ನು ಮರೆಯುತ್ತಾರೆ ಎನ್ನುವಂತಿಲ್ಲ. ಬಂಡವಾಳಶಾಹಿಗಳು ದೇವಾಲಯವನ್ನು ಕಟ್ಟಿಸಿ ಹಾಕಿರುವುದರ ಹಿಂದಿರುವ ರಹಸ್ಯ ಹೆಚ್ಚು ಹೆಚ್ಚು ಜನಗಳಿಗೆ ತಿಳಿಯುತ್ತದೆ. ದೇವಸ್ಥಾನ, ಗುಡಿ, ಮಂದಿರ, ತೀರ್ಥಕ್ಷೇತ್ರಗಳೆಲ್ಲ ಇಂಡಸ್ಟ್ರಿಗಳು ವ್ಯಾಪಾರದ ಮಂಡಿಗಳು ಎಂಬುದು ಹೆಚ್ಚಿನ ಜನಗಳಿಗೆ ಅರ್ಥವಾಗಿದೆ. ಇನ್ನು ಹದಿನೈದು-ಇಪ್ಪತ್ತು ವರ್ಷಗಳಲ್ಲಿ ದೇವರ ಹೆಸರಿನ ಮೂಲಕ ನಡೆಯುವ ನೂರಾರು ಬಗೆಯ ಮೋಸದ ಬಗ್ಗೆ ಇನ್ನೂ ಹೆಚ್ಚಿನ ಸತ್ಯ ದರ್ಶನ ಆಗುತ್ತದೆ. ಖೊಮೆನಿ ಮತ್ತು ಜಿಯಾ ಉಲ್‍ಹಕ್ಕರ ನಂತರ ಇಸ್ಲಾಮಿನಲ್ಲೂ ಅಂಥ ಧಾರ್ಮಿಕತೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ಭಾರತದಲ್ಲಿ ಹಿಂದುಗಳ ಕುರಿತಾದ ಅವಿಶ್ವಾಸದಿಂದ ಮುಸ್ಲಿಮರ ಧಾರ್ಮಿಕತೆಯನ್ನು ಬಲಗೊಳಿಸುವ, ಮುಸ್ಲಿಮರ ಕುರಿತಾದ ಅವಿಶ್ವಾಸದಿಂದ ಹಿಂದುಗಳ ಧಾರ್ಮಿಕತೆಯನ್ನು ಬಲಪಡಿಸುವ ಧಾರ್ಮಿಕ-ರಾಜಕೀಯ ವ್ಯವಹಾರ ಸಾಕಷ್ಟು ನಡೆಯುತ್ತಿದೆ. ಈ ಅವಿಶ್ವಾಸ ಕಡಿಮೆಯಾದರೆ, ಎರಡು ಸಮಾಜಗಳ ನಡುವೆ ಸಾಮರಸ್ಯವುಂಟಾದರೆ ಸಾಮಾಜಿಕವಾಗಿ ಈ ಸಮುದಾಯ ಮುಂದುವರಿಯಲು ಸಾಧ್ಯ. ಎಲ್ಲಿ ಜನ ಸಾಮಾಜಿಕವಾಗಿ ಆರ್ಥಿಕವಾಗಿ ಮುಂದುವರಿದಿದ್ದಾರೊ ಅಲ್ಲಿ ಈ ಧಾರ್ಮಿಕ ಅಥವಾ ಮತೀಯ ಜಿಗುಟುತನ ಇರುವುದಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದ ದೇಶಗಳಲ್ಲಿ ಧರ್ಮದ ಕುರಿತಾದ ಚರ್ಚೆ, ಕಲಹ ತೀರಾ ಅಪರೂಪ. ಭಾರತದಲ್ಲೂ ಧರ್ಮ, ದೇವರು ದಿಂಡರು, ಮಸೀದಿ ದೇವಾಲಯ ಇತ್ಯಾದಿಗಳ ಬಗ್ಗೆ ಇಷ್ಟೊಂದು ಬಡಕೊಳ್ಳಲು ಕಾರಣ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿತ.

    ‘ಅಬ್ರಾಹ್ಮಣ’ ಪ್ರಥಮ ಮುದ್ರಣದ ಪ್ರತಿಗಳು ಮುಗಿದು ಬಹಳ ಕಾಲ ಆಗಿದ್ದರೂ ದ್ವೀತೀಯ ಮುದ್ರಣ ಹೊರ ಬರಲು ಇಷ್ಟು ತಡವಾಯಿತು. ಇಷ್ಟು ಆಕರ್ಷಕ ರೂಪ ತಳೆದು ಹೊರ ಬಂದ ಪುನರ್ಮುದ್ರಣದ ಹಿಂದೆ ಇರುವುದು ಮಿತ್ರ ಶ್ರೀಸುಬ್ರಹ್ಮಣ್ಯರ ಆಸ್ತಿಕತೆ ಮತ್ತು ಉತ್ಸಾಹ. ಅವರಿಗೆ ನಾನು ಅಭಾರಿ.

    ಕೆ.ಟಿ.ಗಟ್ಟಿ.

    ಮೂರನೆ ಮುದ್ರಣದ ಬಗ್ಗೆ

    ಕನ್ನಡ ಪುಸ್ತಕಲೋಕದಲ್ಲಿ ಮರುಮುದ್ರಣ ಒಂದು ಸಾಹಸವೂ ಹೌದು. ಸೌಜನ್ಯವೂ ಹೌದು. ಹನ್ನೆರಡು ವರ್ಷಗಳ ನಂತರ ‘ಅಬ್ರಾಹ್ಮಣ’ವನ್ನು ಮತ್ತೆ ಓದುಗರಿಗೆ ಲಭ್ಯವಾಗಿಸುತ್ತಿರುವ ಶ್ರೀ ಸುರೇಶ್ ಸಿ. ಶಹಾ ಅವರಿಗೆ ಕೃತಜ್ಞತೆ ಮತ್ತು ಸಂತೋಷವನ್ನು ಜೊತೆಜೊತೆಯಾಗಿ ವ್ಯಕ್ತಪಡಿಸಬಯಸುತ್ತೇನೆ.

    ಕೆ.ಟಿ. ಗಟ್ಟಿ.

    ನಾಲ್ಕನೇ ಮುದ್ರಣ ಕುರಿತು

    ಹನ್ನೊಂದು ವರ್ಷಗಳ ನಂತರ ‘ಅಬ್ರಾಹ್ಮಣ’ ಕೃತಿಯು ಮತ್ತೆ ಓದುಗರಿಗೆ ಸಿಗುವಂತೆ ಮಾಡಿದ ಬರಹ ಪಬ್ಲಿಷಿಂಗ್ ಹೌಸ್‍ನ ಕೆ.ಬಿ. ಪ್ರಗತಿ, ಈ ಕಾರ್ಯ ಆಗುಮಾಡುವಲ್ಲಿ ಸಹಕರಿಸಿದ ಡಾ. ಎಂ. ಬೈರೇಗೌಡರಿಗೆ, ಅಂದವಾ ಮುಖಪುಟ ಬರೆದುಕೊಟ್ಟ ಕಲಾವಿದ ಪರಮೇಶ್ ಡಿ. ಜೋಳದ್‍ ಅವರಿಗೆ ಮುದ್ರಿಸಿದ ಪ್ರಗತಿ ಗ್ರಾಫಿಕ್ಸ್‍ನ ಮಾಲೀಕರು ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.

    ಕೆ.ಟಿ. ಗಟ್ಟಿ.

    ಅಬ್ರಾಹ್ಮಣ

    ಜಗದೀಶ ತನ್ನ ಹೆಸರಿಗೆ ಅಂಟಿಕೊಂಡಿದ್ದ ಬ್ರಾಹ್ಮಣೀಯ ಉಪನಾಮವನ್ನು ಯಾವಾಗ ಕೊಡವಿಕೊಂಡನೆಂದು ತಿಳಿಯದು. ಮೂರು ವರ್ಷಗಳ ಹಿಂದೆ ಉಡುಪಿ ಕನಕದಾಸ ಕಾಲೇಜಿನಲ್ಲಿ ತತ್ವಶಾಸ್ತ್ರ ಉಪನ್ಯಾಸಕನಾಗಿ ಸೇರಿಕೊಂಡಂದಿನಿಂದ ಅವನು ಜಗದೀಶ ಎಂಬ ಹೆಸರಿನಿಂದಲೇ ಕರೆಯಲ್ಪಡುತ್ತಿದ್ದ. ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಗಿಸುವವರೆಗೂ ಅವನು ಜಗದೀಶ ಭಟ್ಟನಾಗಿದ್ದ. ಆಮೇಲೆ ದೆಹಲಿಗೆ ಹೋಗಿ, ದೆಹಲಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯವರೆಗೆ ಓದಿ ಮರಳಿ ಬಂದಾಗ ಬಹಳ ಜನರಿಗೆ ಅವನ ಗುರುತು ಹಿಡಿಯುವುದೇ ಕಷ್ಟವಾಗಿತ್ತು. ಜುಟ್ಟು ಮತ್ತು ಜನಿವಾರಗಳನ್ನು ಅವನೆಲ್ಲೋ ಕಳಕೊಂಡಿದ್ದ. ಊರವರು, ಅವನ ಬಾಲ್ಯ ಕಾಳದ ಸ್ನೇಹಿತರು ಮತ್ತು ಪರಿಚಿತರು ಈ ಬದಲಾದ ಮನುಷ್ಯ ‘ಜಗದೀಶ’ ಎಂಬ ಬೇರೆಯೇ ಒಬ್ಬ ಮನುಷ್ಯ ಎಂಬ ದೃಷ್ಟಿಕೋನದಿಂದ ನೋಡಿದರು. ಇದಕ್ಕೆ ಕೆಲವು ಕಾರಣಗಳಿರಬಹುದು. ಹೈಸ್ಕೂಲು ವಿದ್ಯಾಭ್ಯಾಸ ಮುಗಿಸುವ ಹೊತ್ತಿಗೆ ಅವನು ನಾಲ್ಕಡಿ ಎತ್ತರದ ಒಂದು ಗಿಡ್ಡನೆ, ಗುಂಡಗಿನ ಮಾಣಿಯಾಗಿದ್ದ. ಈಗ ಅವನು ಸುಮಾರು ಆರಡಿಯೆತ್ತರದ ಇಪ್ಪತ್ತೈದು ವರ್ಷದ ಯುವಕನಾಗಿದ್ದ. ಜುಟ್ಟಿನ ಸ್ಥಳದಲ್ಲಿ ಚಲೋದಾಗಿ ಕ್ರಾಪು ಬಿಟ್ಟಿದ್ದ. ಮಾತೃಭಾಷೆಯನ್ನು ಸ್ವಲ್ಪ ವಿಸಿತ್ರವಾದ ರೀತಿಯಲ್ಲಿ ಆಡುತ್ತಿದ್ದ. ಒಂದು ರೀತಿಯ ಸ್ಪಷ್ಟವಾದಿಯಾಗಿ ಅಹಂಕಾರಿಯಂತೆ ತೋರುತ್ತಿದ್ದ. ಮಿತಭಾಷಿಯಾಗಿದ್ದ. ರೂಢಿಗೆ ಸ್ವಲ್ಪ ಭಿನ್ನವಾದ ಪದಪ್ರಯೋಗ ಮತ್ತು ವಾಕ್ಯರಚನೆಯಿಂದಾಗಿ ಕೆಲವರ ಮನಸ್ಸಿನಲ್ಲಿ ಪರದೇಶಿ ಎಂಬ ಭಾವನೆಯನ್ನು ಉಂಟುಮಾಡಿದ್ದ. ಈ ಎಲ್ಲಾ ಕಾರಣಗಳಿಂದಾಗಿ ಅವನನ್ನು ಹಿಂದಿನಂತೆ ‘ಜಗ್ಗು’ ಅಥವಾ ‘ಜಗ್ಗುಭಟ್ಟ’ ಎಂದು ಕರೆಯುವುದು ಯಾರಿಗೂ ಸಾಧುವೆನಿಸಲಿಲ್ಲ.

    ಆದರೆ ತಾಯಿ ಮೀನಾಕ್ಷಿಗೆ ಮತ್ತು ತಂದೆ ಮಾಧವಭಟ್ಟನಿಗೆ ಅವನು ‘ಜಗ್ಗು’ವೇ ಆಗಿದ್ದ. ‘ಭಟ್ಟ’ ಎಂಬುದನ್ನು ಅವನು ಕಳೆದುಕೊಂಡುದು ತಾಯಿ ಮೀನಾಕ್ಷಿಯ ಗಮನಕ್ಕೇನೂ ಬರಲಿಲ್ಲ. ಜುಟ್ಟಿನ ಬದಲು ಕ್ರಾಪು ಬಂದುದು ಅಂಥ ದೊಡ್ಡ ಸಂಗತಿಯೇನೂ ಆಗಿರಲಿಲ್ಲ. ಕ್ರಾಪಿನಲ್ಲಿ ಅವನು ಅವಳಿಗೆ ಹೆಚ್ಚು ಆಕರ್ಷಕವಾಗಿ ತೋರಿದ. ಆದರೆ ಊರಿಗೆ ಬಂದ ಮರುದಿನ ಬೆಳಿಗ್ಗೆ ಸ್ನಾನಮಾಡಿ ಬರುತ್ತಿರುವ ಮಗನ ಮೈಮೇಲೆ ಜನಿವಾರ ಇಲ್ಲದುದನ್ನು ಕಂಡು ಅವಳಿಗೆ ಸಿಡಿಲು ಬಡಿದಂತಾಯಿತು.

    ಏನೋ ಜಗ್ಗು ಇದು, ಶೂದ್ರನಂತೆ ಬರಿ ಮೈ ಬಿಟ್ಟುಕೊಂಡಿದ್ದಿ? ನಿನ್ನ ಜನಿವಾರ ಎಲ್ಲಿ ಹೋಯಿತು? ಎಂದಳು ಆಕ್ಷೇಪಣೀಯವಾದ ದನಿಯಲ್ಲಿ.

    ಈ ಪ್ರಶ್ನೆಗೆ ಏನುತ್ತರ ಹೇಳಿದರೂ, ತಾಯಿಗೆ ಬೇಕಾದ ಉತ್ತರವಾಗಲಾರದೆಂದು ತಿಳಿದಿದ್ದ ಜಗದೀಶ ಸುಮ್ಮನೆ ನಕ್ಕುಬಿಟ್ಟ. ಇದನ್ನು ಕಂಡು ಮೀನಾಕ್ಷಿ ಕಿಡಿಕಿಡಿಯಾದಳು. ಶಿವ ಶಿವಾ, ಏನು ಮಾಡಿದ್ಯೊ ನೀನು? ನೀನು ಬ್ರಾಹ್ಮಣನೋ ಚಾಂಡಾಲನೋ? ಬೇಕ ಹಾಕ್ಕೊ ಜನಿವಾರ ಎಂದು ಗದರಿದಳು.

    ಜನಿವಾರ ಇರಲಿ ಇಲ್ಲದಿರಲಿ ನಾನು ನಾನೇ ಕಣಮ್ಮ. ಅದು ಇಲ್ಲದದ್ದರಿಂದ ಏನಾಯ್ತೀಗ? ಎಂದ ಜಗದೀಶ ನಕ್ಕು.

    ಛಿ! ಎಂತ ಅಪಚಾರದ ಮಾತು ಆಡ್ತೀಯೊ! ಯಾವ ಶೂದ್ರನ ಉಪದೇಶ ಇದು? ನಿನ್ನಪ್ಪನಿಗೆ ತಿಳಿದರೆ ಸೀಳಿಬಿಟ್ಟಾರು. ಬೇಗ ಹಾಕ್ಕೊ ಜನಿವಾರ ಮೀನಾಕ್ಷಿ ರೇಗುತ್ತಾ ಹೇಳಿದಳು.

    ದೆಹಲಿಯಲ್ಲಿ ಮೈಮೇಲೆ ಜನಿವಾರ ಕಂಡರೆ ಇದು ಏನು ಹಗ್ಗ ಅಂತ ಕೇಳ್ತಾರಮ್ಮ. ಅಲ್ಲಿ ಕಲಿಸುವವರಿಗೆ, ಕಲಿಯುವವರಿಗೆ, ಅಡಿಗೆ ಮಾಡುವವರಿಗೆ, ಉಣ್ಣುವವರಿಗೆ ಯಾರಿಗೂಜನಿವಾರ ಇಲ್ಲ. ಜಗದೀಶನೆಂದ ನಗುತ್ತಾ.

    ದೆಹಲಿ ಅಂದರೆ ಇಂಗ್ಲೆಂಡು ಅಲ್ಲ. ನನಗೂ ಗೊತ್ತು. ಸುಳ್ಳು ಸುಳ್ಳೇ ಏನೆಲ್ಲಾ ಹರಟಬೇಡ. ಈಗ ನೀನು ಜನಿವಾರ ಹಾಕ್ಕೊಳ್ತೀಯೋ ಇಲ್ವೊ? ಮೀನಾಕ್ಷಿ ಕೇಳಿದಳು.

    ಅದರ ಅಗತ್ಯವಿಲ್ಲ ಅನ್ಸುತ್ತೆ ಜಗದೀಶನೆಂದ.

    ಏನಂದಿ? ಬ್ರಾಹ್ಮಣನಾಗಿ ಹುಟ್ಟು ಜನಿವಾರ ಬೇಡ ಅಂತೀಯ? ನೀನು ಜನಿವಾರ ಹಾಕ್ಕೊಳ್ಳದಿದ್ರೆ ಈ ಮನೆಯಲ್ಲಿ ನಾನು ನೀರು ಮುಟ್ಟೋದಿಲ್ಲ ಎಂದು ಮೀನಾಕ್ಷಿ ಕುಳಿತುಬಿಟ್ಟಳು.

    ಅಮ್ಮನ ಸತ್ಯಾಗ್ರಹವನ್ನು ಮುರಿಯದೆ ನಿರ್ವಾಹವಿಲ್ಲದವಾದುದರಿಂದ ಜಗದೀಶ ಜನಿವಾರ ತೊಟ್ಟುಕೊಂಡ.

    ಮಗನನ್ನು ಎಲ್ಲರೂ ‘ಮಿಸ್ಟರ್ ಜಗದೀಶ್ ಎಂದು ಸಂಬೋಧಿಸುತ್ತಿರುವುದನ್ನು ಕೇಳಿದ ತಂದೆ ಮಾಧವಭಟ್ಟನೊಮ್ಮೆ, ಏನೋ ಅದು, ಶೂದ್ರನನ್ನು ಕರೆಯೋ ಹಾಗೆ ನಿನ್ನ ಕರೀತಾರೆ ಜನ? ನೀನು ಬ್ರಾಹ್ಮಣ ಅಂತ ತಿಳಿಯದೇನೋ ಅವರಿಗೆ? ಎಂದು ಕೇಳಿದ್ದ.

    ಅದಕ್ಕೆ ಜಗದೀಶ ನಸುನಕ್ಕು, ಶಾಲೆ ಕಾಲೇಜು ಹೊಕ್ಕ ಮೇಲೆ ಬ್ರಾಹ್ಮಣರು ಶೂದ್ರರು ಎಲ್ಲಾ ಒಂದೇ ಆದಹಾಗೆ ಎಂದಿದ್ದ.

    ಈ ಶಾಲೆ ಕಾಲೇಜಗಿಷ್ಟು ಬೆಂಕಿಹಾಕಿತು. ನಾನೂ ನೋಡಿದ್ದೀನಿ ಶಾಲೆ. ನನ್ನನ್ನು ‘ಮಾಧವ ಭಟ್ರೆ’ ಅಂತ ಹೊರತು ‘ಮಿಸ್ಟರ್ ಮಾಧವ್’ ಅಂತ ಯಾರೂ ಇದುವರೆಗೆ ಕರೆದಿಲ್ಲ.

    ಇಂಗ್ಲೀಷರಿರುವಾಗೆ ಹಾಗೆ ಕರೀತಿದ್ರು ಈಗ ಹೀಗೆ ಕರೀತಾರೆ ಎಂದು ಜಗದೀಶ ನಗು ತಡೆದುಕೊಂಡು.

    ಸಾಕು ನಿನ್ನ ಒರಟು ಹಾಸ್ಯ ಎಂದು ಮಾಧವಭಟ್ಟ ಗದರಿಕೊಂಡ.

    ಯಾರಾದರೂ ಸ್ನೇಹಿತರು, ಸಹೋದ್ಯೋಗಿಗಳು ವಿಚಾರಿಸಿದರೆ, ದೆಹಲಿಯ ಬೀದಿಯಲ್ಲಿ ತನ್ನ ‘ಭಟ್ಟ’ ಉಪನಾಮವನ್ನು ಕಳಕೊಂಡುಬಿಟ್ಟೆನೆಂದು ಹೇಳಿಕೊಳ್ಳುತ್ತಿದ್ದ. ಮತ್ತು ಆ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದ. ಇದರಿಂದ ತನಗೆ ಎಲ್ಲಾ ಬಗೆಯ ಮನುಷ್ಯರೊಡನೆಯೂ ಅವರಿಗೆ ಸಮಾನವಾಗಿ ಬೆರೆಯಲು ಸಾಧ್ಯವಾಗುತ್ತಿತ್ತು ಎನ್ನುತ್ತಿದ್ದ. ಜಗದೀಶ ಎಂಬ ಹೆಸರನ್ನು ತನಗೆ ಏಕೆ ಇರಿಸಿದರು ಎಂದು ಕೂಡಾ ಅವನು ಹಲವು ಬಾರಿ ಚಿಂತಿಸಿದ್ದ. ಅವನಣ್ಣ ‘ಶಂಭು’, ಅಂದರೆ ಸುಖವನ್ನುಂಟು ಮಾಡುವವ, ಅಂದರೆ ವಿಷ್ಣುವೊ, ಶಿವನೊ, ಬ್ರಹ್ಮನೊ ಯಾರೂ ಆಗಬಹುದು; ಇನ್ನು ತಮ್ಮ ‘ವಿಶ್ವನಾಥ’, ಅವನ ಹೆಸರಿಗೂ ಜಗತ್ತಿನ ಒಡೆಯನೆಂಬುದೇ ಅರ್ಥ. ಆದರೆ ವ್ಯಕ್ತಿಯ ಹೆಸರಿನ ಅರ್ಥಕ್ಕೆ ಪ್ರಾಧಾನ್ಯವಿಲ್ಲ. ಹೆಸರೆಂಬುದು ಜಗತ್ತಿನ ಮೇಲೆ ತುಂಬಿಕೊಂಡ ಜನಜಂಗುಳಿಯಲ್ಲಿ ಒಬ್ಬೊಬ್ಬನ್ನನ್ನು ಗುರುತಿಸಿಕೊಳ್ಳುವುದಕ್ಕಾಗಿ ಇರುವ ಮುದ್ರೆ ಎಂಬುದು ಸ್ಪಷ್ಟವಿತ್ತು. ಆದರೆ ಅದಕ್ಕೆ ‘ಭಟ್ಟ’ ಎಂಬುದು ಏಕೆ ಅಂಟಿಕೊಮಡಿರಬೇಕು. ಅದು ಪ್ರತ್ಯೇಕವಾಗಿ ಗುರುತಿಸುವುದಾದರೂ ಏನು. ಒಬ್ಬ ಮನುಷ್ಯನಿಗೆ ಎರಡು ಗುರುತಿನ ಮುದ್ರೆಗಳ ಅಗತ್ಯವು ಏನು ಎಂದು ಅನಗತ್ಯವಾದುದನ್ನು ಅವನು ಕಳೆದುಬಿಟ್ಟ.

    ಐವತ್ತು ಖಂಡಿ ಅಡಿಕೆ ಮತ್ತು ಎಂಭತ್ತು ಮುಡಿ ಅಕ್ಕಿಯ ವರಮಾನವಿದ್ದ ಮಾಧವಭಟ್ಟ ತನ್ನ ಮಕ್ಕಳಿಗೆ ಹೆಸರನ್ನಿರಿಸುವಾಗ ಆ ಹೆಸರುಗಳಿಗಿರುವ ಅರ್ಥವನ್ನು ತಿಳಿದಿದ್ದನೆ, ಅಥವಾ ಗಮನದಲ್ಲಿಟ್ಟುಕೊಂಡಿದ್ದನೆ ಎಂಬುದು ಸ್ಪಷ್ಟವಿಲ್ಲ. ಆದರೆ ಇಷ್ಟು ಶ್ರೀಮಂತಿಕೆಯಲ್ಲದೆ, ತನ್ನ ಯೌವನದಲ್ಲಿ ಹುಲಿಯೊಂದನ್ನು ಕೊಂಡ ಕೀರ್ತಿಯನ್ನೂ ಹೊಂದಿದ್ದ ಮಾಧವಭಟ್ಟ (ಅದರ ಚರ್ಮ ಈಗಲೂ ದೇವರ ಕೋಣೆಯಲ್ಲಿದೆ) ತಾನು ಜಗತ್ತಿಗೆ, ಅಂದರೆ ಅವನ ಜಗತ್ತಾದ ಬೆಳ್ಮಣ್ಣು ಗ್ರಾಮಕ್ಕೆ ಅಧಿಪತಿಯೆಂದು ತಿಳಿದುಕೊಂಡಿದ್ದುದು ಹೌದು. ಅಂಥದೇ ಯೋಗ್ಯತೆ ತನ್ನ ಮಕ್ಕಳಲ್ಲೂ ಇರಬೇಕೆಂದು ಅವನು ಬಯಸಿದ್ದಿರಲೂಬಹುದು.

    ಆದರೆ ಬೆಳ್ಳೆಗಣ್ಣಿನ, ತೆಳ್ಳಗಿನ ಮತ್ತು ಕುಳ್ಳನಾದ ಹಿರೇಮಗ ಶಂಭು ಭಟ್ಟ ಐದನೇ ದರ್ಜೆಯ ಪಾಂಡಿತ್ಯವನ್ನು ದಾಟಿ ಆ ಕಡೆ ಹೋಗಲಿಲ್ಲ. ಆ ಮೇಲೆ ತನಗಿಷ್ಟ ಬಂದಂತೆ ಬೆಳೆದು, ಪಾದಗಳ ತುಂಬಾ ಆಣಿಯಿದ್ದುದರಿಂದ ಮೋಟುತ್ತಾ ಮೋಟುತ್ತಾ ತೋಟ, ಗದ್ದೆ, ಊರಿನೊಳಗೆಲ್ಲಾ ಅಲೆಯುತ್ತಾ ಅಲೆಯುತ್ತಾ ತರುಣನಾದ. ಅವನಿಗೆಂದೇ ತಯಾರು ಮಾಡಿರಿಸಿದಂತಿದ್ದ ಬ್ರಹ್ಮಾವರ ಗೋವಿಂದಭಟ್ಟರ ಹಿರೇಮಗಳು, ನಾಲ್ಕಡಿ ಎತ್ತರದ ಸರಸ್ವತಿಯನ್ನು ಮದುವೆಯಾಗಿ ಆರು ವರ್ಷದಲ್ಲಿ ನಾಲ್ಕು ಮಕ್ಕಳ ತಂದೆಯಾಗಿ ಜಗದೀಶ ದೆಹಲಿಯಿಂದ ಮರಳುವ ಕಾಲಕ್ಕೆ ಐದನೇ ಮಗುವಿಗೂ ತಳಪಾಯ ಹಾಕಿದ್ದ. ‘ಶಂಭುಭಟ್ಟ’ನೆಂದು ಅವನನ್ನು ಅರಿಯದವರು ಹೇಳುವ ರೀತಿ. ಬೆಳ್ಮಣ್ಣಿಗೆ ಅವನು ‘ಶಂಭಟ್ಟ’. ಊರಿನಲ್ಲಿ ಬಹಳ ರಸಿಕ ಮನುಷ್ಯ ಎಂಬ ಕೀರ್ತಿಯನ್ನು ಸಂಪಾದಿಸಿದ್ದ. ಅವನಿಗಾಗದವರು ಅವನನ್ನು ‘ಕುಂಭಟ್ಟ’ ಎಂದು ಹೇಳುತ್ತಿದ್ದರೂ ಕುತಂತ್ರ, ಕುಚೋದ್ಯ ಮತ್ತು ಕುತ್ಸಿತ ವಿಚಾರಧಾರೆಯಲ್ಲಿ ಅವನ ಬುದ್ಧಿಯು ಬಹಳ ಮೇಲ್ಮಟ್ಟದಲ್ಲಿದ್ದು ಆ ಹೆಸರು ಅವನಿಗೆ ಚೆನ್ನಾಗಿ ಒಪ್ಪುತ್ತಿತ್ತು. ತಮ್ಮಂದಿರಿಬ್ಬರೂ ಕಲಿತು ಹೆಸರು ಗಳಿಸಿದ್ದು ಅವನಿಗೆ ಹೊಟ್ಟೆಯಲ್ಲಿ ಒಂದು ಥರಾ ಸಂಕಟವುಂಟುಮಾಡಿತ್ತು. ಆದರೆ ತಮ್ಮಂದಿರ ಪಾಂಡಿತ್ಯ ಎಷ್ಟಿದ್ದರೂ, ಶೃಂಗಾರ ಮತ್ತು ಹಾಸ್ಯರಸಗಳಿಗೆ ಶಂಭಟ್ಟನೇ ಅಧಿಪತಿಯಾಗಿದ್ದ. ನಾಲ್ಕೈದು ಮಂದಿ ಸೇರಿದಲ್ಲಿ ತನ್ನ ಶೃಂಗಾರದ ಮತ್ತು ಹಾಸ್ಯದ ಚಟಾಕಿಗಳಿಂದ ಜನರನ್ನು ನಗಿಸಬಲ್ಲವನಾಗಿದ್ದ. ಆದುದರಿಂದ ತಾನು ಕಾಲೇಜಿಗೆ ಹೋಗದಿದ್ದರೂ ಬುದ್ಧಿಯಲ್ಲಿ ಬೃಹಸ್ಪತಿಗೆ ಸಮಾನ. ತನ್ನ ಜ್ಞಾನ ಸಂಪತ್ತು ಎಂಬುದು ಒಣ ಪುಸ್ತಕಗಳಿಂದ ಬಂದುದಲ್ಲ. ಮೂಲತಃ ಹುಟ್ಟಿ ಬಂದುದು. ಅದು ಬೂದಿ ಮುಚ್ಚಿದ ಕೆಂಡ ಎಂದು ತಿಳಿದುಕೊಂಡಿದ್ದ.

    ಮಾಧವಭಟ್ಟನ ಹಿಂದಿನ ತಲೆಮಾರಿನ ಯಾವನೋ ಒಬ್ಬ ಕಟ್ಟಿಸಿದ್ದ ಗೋಪಾಲಕೃಷ್ಣ ದೇವಾಲಯ ಮಾಧವಭಟ್ಟನ ಮನೆಯ ಸ್ವಂತ ದೇವಾಲಯವೆಂದು ತಿಳಿಯಲ್ಪಡುತ್ತಿತ್ತು. ಮಾಧವಭಟ್ಟ ಅದನ್ನು ದುರಸ್ತಿಪಡಿಸಿ ಎದುರಿಗೆ ದೊಡ್ಡ ಗೋಪುರ, ನಾಲ್ಕು ಪಕ್ಕದಲ್ಲೂ ಕಟ್ಟಡ ಉಗ್ರಾಣ, ಅಡಿಗೆ ಕೋಣೆಗಳನ್ನು ಕಟ್ಟಿಸಿ, ವರ್ಷಕ್ಕೆ ಐದು ದಿವಸ ಉತ್ಸವವನ್ನು ಏರ್ಪಡಿಸಿ ಊರಿನ ಗೌರವಾದರಗಳಿಗೆ ಪಾತ್ರನಾದ. ದೇವಸ್ಥಾನಕ್ಕೂ ಒಂದಷ್ಟು ಆಸ್ತಿಯಿತ್ತು. ಇಂಗ್ಲೀಷರ ಕಾಲದಲ್ಲಿ ಅಕ್ಕಿ, ಭತ್ತ ಇತ್ಯಾದಿಗಳನ್ನು ಅಡಗಿಸಿಡಲು ಉಪಯೋಗಿಸುತ್ತಿ ಒಂದು ಬರಿಯ ಗರ್ಭಗುಡಿಯಾಗಿದ್ದ ದೇವಾಲಯ, ಈಗ ಭವ್ಯವಾಗಿ ಎದ್ದು ನಿಂತು ಜನರನ್ನು ಆಕರ್ಷಿಸತೊಡಗಿತ್ತು. ಅದರ ಮ್ಯಾನೇಜರಿಕೆ, ಮತ್ತಿತರ ಉಸ್ತುವಾರಿಯನ್ನೆಲ್ಲಾ ನೋಡಿಕೊಳ್ಳುತ್ತಿದ್ದ ಶಂಭಟ್ಟನಿಗೆ ಮಾಧವಭಟ್ಟನ ನೆರಳಿನಲ್ಲೇ ಭಾರೀ ಮರ್ಯಾದೆ ಸಲ್ಲುತ್ತಿತ್ತು.

    ಮಾಧವಭಟ್ಟನ ಕೊನೆ ಮಗ ವಿಶ್ವನಾಥ ಬೆಂಗಳೂರಿನಲ್ಲಿ ಪಿ.ಎಚ್.ಡಿ. ಕಲಿಯುತ್ತಿದ್ದ. ಜಗದೀಶ ಕನಕದಾಸ ಕಾಲೇಜಿನಲ್ಲಿ ಫಿಲಾಸಫಿ ಲೆಕ್ಚರರ್ ಆಗಿ ಸೇರಿಕೊಂಡುದು ಮಾಧವಭಟ್ಟನಿಗೆ ಹೆಮ್ಮೆಯ ವಿಚಾರವಾದರೂ, ಅವನ ಹೆಚ್ಚಿನ ಒಲವು ಇದ್ದುದು ವಿಶ್ವನಾಥನ ಮೇಲೆ. ಜಗದೀಶ ಸ್ವಲ್ಪ ಒರಟು ಮನುಷ್ಯ. ಕನಿಕರವಿಲ್ಲದವ ಎಂಬ ಮಾಧವಭಟ್ಟನ ತೀರ್ಮಾನವೇ ಇದಕ್ಕೆ ಕಾರಣ. ತಂದೆಯ ಹೆಚ್ಚಿನ ಒಲವು ಯಾರ ಮೇಲೆಯೇ ಇರಲಿ, ಜಗದೀಶ ಅದಕ್ಕೆ ಲಕ್ಷ್ಯ ಕೊಟ್ಟಿರಲಿಲ್ಲ. ಅವನು ಅತಿ ಹೆಚ್ಚಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯೆಂದರೆ ವಿಶ್ವನಾಥ. ಜಗದೀಶ ಮತ್ತು ವಿಶ್ವನಾಥನ ಅಣ್ಣ ತಮ್ಮಂದಿರಂತಿರಲಿಲ್ಲ. ಸ್ನೇಹಿತರಂತಿದ್ದರು. ಇನ್ನೊಂದು ವರ್ಷದಲ್ಲಿ ವಿಶ್ವನಾಥನ ವ್ಯಾಸಂಗ ಮುಗಿಯುವುದಿತ್ತು. ಆದರೆ ಅವನ ಆರೋಗ್ಯ ಚೆನ್ನಾಗಿರಲಿಲ್ಲವಾದುದರಿಂದ ಆಗಾಗ ರಜೆ ಮಾಡಬೇಕಾಗಿ ಬರುತ್ತಿತ್ತು. ಅವನಿಗೆ ಅಸೌಖ್ಯವಾದಾಗಲೆಲ್ಲಾ ಜಗದೀಶ ಬೆಂಗಳೂರಿಗೆ ಹೋಗಿ ತಮ್ಮನ್ನನ್ನು ಕಂಡು ಬರುತ್ತಿದ್ದ. ತಮ್ಮನ ಭವಿಷ್ಯದ ಬಗ್ಗೆ ಬಹಳ ಆಸೆಯನ್ನಿರಿಸಿಕೊಂಡಿದ್ದ ಜಗದೀಶ ಅವನ ಅನಾರೋಗ್ಯವನ್ನು ಕಂಡು ಕಳವಳಪಡುತ್ತಿದ್ದ.

    ***

    ಉಡುಪಿಯ ಕನಕದಾಸ ಕಾಲೇಜು ಬ್ರಾಹ್ಮಣರ ಕಾಲೇಜು ಎಂದು ಜಿಲ್ಲೆಯಲ್ಲಿ ಪ್ರಸಿದ್ಧವಾಗಿತ್ತು. ಕಾಲೇಜಿನ ಏಳುಮಂದಿ ಟ್ರಸ್ಟಿಗಳು, ಪ್ರಿನ್ಸಿಪಾಲರು, ಆಡಳಿತ ವರ್ಗದವರು ಎಲ್ಲರೂ ಬ್ರಾಹ್ಮಣರಾಗಿದ್ದರು. ಮಾತ್ರವಲ್ಲೆ, ಅಧ್ಯಾಪಕ ವರ್ಗದಲ್ಲೂ ಗೋವಿಂದರಾಜನೆಂಬ ಒಬ್ಬನೇ ಒಬ್ಬ ವ್ಯಕ್ತಿಯನ್ನುಳಿದು ಉಳಿದೆಲ್ಲರೂ ಬ್ರಾಹ್ಮಣರಾಗಿದ್ದರು. ಜಿಲ್ಲೆಯಲ್ಲೇ ಪ್ರತಿಭಾವಂತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿರುವ ಕಾಲೇಜು ಎಂಬ ಖ್ಯಾತಿಯೂ ಅದಕ್ಕಿತ್ತು. ರಾಂಕು ವಿಜೇತರ ಕಾಲೇಜು ಎಂದು ಕೂಡಾ ಜನರದನ್ನು ಕರೆಯುತ್ತಿದ್ದರು.

    ಅಲ್ಪ ಸಂಖ್ಯಾತರಾದ ಬ್ರಾಹ್ಮಣರಿಗಾಗಿ ಒಂದು ಕಾಲೇಜಿನ ಅವಶ್ಯಕತೆಯಿದೆಯೆಂದು ತೀರ್ಮಾನಿಸಿ ಕೆಲವರು ಈ ಕಾಲೇಜಿನ ಸ್ಥಾಪನೆಗೆ ಕೈ ಹಾಕಿದರೆಂದು ಜನರಲ್ಲಿ ತಿಳುವಳಿಕೆಯಿತ್ತು. ಹೇಗಿದ್ದರೂ ವಿದ್ಯಾರ್ಥಿ ಸಮುದಾಯದಲ್ಲಿ ಈ ಭೇದವಿರಲಿಲ್ಲ. ಆದರೂ ಬ್ರಾಹ್ಮಣ ವಿದ್ಯಾರ್ಥಿಗಳ ಸಂಖ್ಯೆಯೂ ಬಹಳ ಹೆಚ್ಚಿನದು ಎಂಬುದು ಖಂಡಿತ. ಇದಕ್ಕೆ ಕಾರಣ, ಮ್ಯಾನೇಜುಮೆಂಟು ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿಯೇ ನಿರ್ಮಿಸಿದ ಒಂದು ಉಚಿತ ವಸತಿಗೃಹ ಮತ್ತು ಅದಕ್ಕೆ ಹೊಂದಿಕೊಂಡು ಇರುವ ಒಂದು ಸಂಸ್ಕೃತ ಪಾಠಶಾಲೆ ಎನ್ನಬಹುದು.

    ಅಧ್ಯಾಪಕ ವರ್ಗಕ್ಕಾಗಿ ಕಾಲೇಜಿನ ಮ್ಯಾನೇಜುಮೆಂಟು ಇಪ್ಪತ್ತೈದು ಮೂವತ್ತು ಮನೆಗಳನ್ನು ಕಟ್ಟಿಕೊಟ್ಟು ಬಹಳ ಔದಾರ್ಯ ತೋರಿತ್ತು. ಜಿಲ್ಲೆಯ ಇತರ ಯಾವ ಕಾಲೇಜಿನ ಅಧ್ಯಾಪಕರಿಗೂ ಇಂಥ ಸವಲತ್ತು ಇರಲಿಲ್ಲ.

    ಅವಿವಾಹಿತ ಅಧ್ಯಾಪಕರಿಗೆ ಕ್ವಾರ್ಟರ್ಸ್‍ನ್ನು ಕೊಡಲು ಮ್ಯಾನೇಜುಮೆಂಟು ಸುಲಭದಲ್ಲಿ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಜಗದೀಶ ತನಗೆ ಕ್ವಾರ್ಟರ್ಸ್ ಸಿಗಲೇಬೇಕೆಂಬ ಷರತ್ತನ್ನು ಒಡ್ಡಿದಾಗ ಸ್ವಲ್ಪ ಹಿಂದೆ ಮುಂದೆ ನೋಡಿ ಒಪ್ಪಿಕೊಂಡಿತು. ದೆಹಲಿ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಎಂ.ಎ.ಯಲ್ಲಿ ಚಿನ್ನದ ಪದಕ ಪಡೆದುಕೊಂಡ, ಊರಿನವನೇ ಆದ ಬ್ರಾಹ್ಮಣ ತರುಣನೊಬ್ಬನನ್ನು ಕಳೆದುಕೊಳ್ಳಲು ಮ್ಯಾನೇಜುಮೆಂಟು ಇಷ್ಟಪಡಲಿಲ್ಲ.

    Enjoying the preview?
    Page 1 of 1