Discover millions of ebooks, audiobooks, and so much more with a free trial

Only $11.99/month after trial. Cancel anytime.

Samadhana Bhaaga 1
Samadhana Bhaaga 1
Samadhana Bhaaga 1
Ebook530 pages4 hours

Samadhana Bhaaga 1

Rating: 0 out of 5 stars

()

Read preview

About this ebook

`ಓ ಮನಸೇ...' ಪತ್ರಿಕೆಯ ಅತ್ಯಂತ ಪಾಪ್ಯುಲರ್ ಅಂಕಣವೆಂದರೆ `ಸಮಾಧಾನ'. ಅದೊಂದು ಥರದಲ್ಲಿ ಇಬ್ಬರು ಪರಮಾಪ್ತರು ಎದುರಾ ಎದುರು ಕುಳಿತು ಮೆಲ್ಲನೆಯ ದನಿಯಲ್ಲಿ ಮಾತನಾಡಿಕೊಂಡ ಹಾಗೆ. ನೊಂದ ಪಾಪಚ್ಚಿ, ಅಮ್ಮನಿಗೆ ದೂರು ಹೇಳಿದಾಗ ಅಮ್ಮ ಬಾಚಿ ತಬ್ಬಿ ಮೈದಡವಿದ ಹಾಗೆ. ಒಬ್ಬ ಗೆಳತಿ ನೊಂದು ಕುಳಿತಾಗ ಅವಳ best friend ``ಸಾಕು ಏಳೇ... ಬಿಟ್ಟಾಕು ಇದನ್ನೆಲ್ಲ'' ಎಂದು ಆಪ್ತ ದನಿಯಲ್ಲಿ ಗದರಿಸಿದ ಹಾಗೆ. ಈ ಅಂಕಣವನ್ನು, ಅದೇನೇ ಕೆಲಸವಿದ್ದರೂ ನಾನೇ ಕೈಯಾರೆ ಬರೆಯುತ್ತೇನೆ. ಈ ಅಂಕಣಕ್ಕೆ ಬಂದ ಪತ್ರಗಳನ್ನು ನನ್ನ ಸಿಬ್ಬಂದಿಯವರಿಗೂ open ಮಾಡಿ, ಓದಲು ಬಿಡುವುದಿಲ್ಲ. ಅಂಥ ಶ್ರದ್ಧೆ ಇದರೆಡೆಗೆ ನನಗಿದೆ. ಕೆಲವು ಸಲ, ``after all ಇದು ಯಾವ ದೊಡ್ಡ ಸಮಸ್ಯೆ?'' ಅಂತ ಅನ್ನಿಸೋದು. ಅದು ನನಗೆ `after all'. ನಿಜ. ಅನುಭವಿಸುವವರಿಗೆ? ಅದೇ ಸಮಾಧಾನ

- ರವಿ ಬೆಳೆಗೆರೆ

LanguageKannada
Release dateApr 2, 2021
ISBN6580239606435
Samadhana Bhaaga 1

Read more from Ravi Belagere

Related to Samadhana Bhaaga 1

Related ebooks

Reviews for Samadhana Bhaaga 1

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Samadhana Bhaaga 1 - Ravi Belagere

    http://www.pustaka.co.in

    ಸಮಾಧಾನ ಭಾಗ ೧

    Samadhana Bhaaga 1

    Author:

    ರವಿ ಬೆಳಗೆರೆ

    Ravi Belagere

    For more books

    https://www.pustaka.co.in/home/author/ravi-belagere

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಸಮಾಧಾನ

    ಅರ್ಪಣೆ

    ನನ್ನ ಅಂತರಂಗದ ಮಿತ್ರ

    ಜೋಗಿಗೆ

    -ರವಿ ಬೆಳೆಗೆರೆ

    ಅಫಿಡವಿಟ್ಟು

    ಸರಿಯಾಗಿ ಒಂದು ನೂರ ಆರು ಕ.ಜಿ ತೂಕವಿದ್ದ ನಾನು ಅರವತ್ತೊಂಬತ್ತು ಕೆ.ಜಿ ಗೆ ಇಳಿದಿದ್ದೇನೆ. ಈಗ ದೇಶ ದೇಶ ತಿರುಗುತ್ತಿದ್ದೇನೆ.ಶಿವಾಜಿನಗರದ ಹಂತಕ ಕೋಳಿ ಫಯಾಜ್ ನ ಸಂದರ್ಶನದಿಂದ ಆರಂಭವಾದ ಪತ್ರಿಕೋದ್ಯ ಮದ, ಬರಹದ ಹುಚ್ಚು ನನ್ನನ್ನು ಇಟಲಿಯ ದುರ್ಭರ ಮಾಫಿಯಾ ವರೆಗೆ ಕರೆದೋಯ್ದಿದೆ. ತನಿಖೆ, ಸಂಶೋಧನೆ ಮತ್ತು ಭಾವುಕತೆ ಇಲ್ಲದೇ ಬರೆಯ ಬಾರದೆಂದು ತೀರ್ಮಾನಿಸಲಿಕ್ಕೆ ಇಷ್ಟುವರ್ಷ ಬೇಕಾಯಿತು.

    ಈ ತನಕ ಸರಿಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳನ್ನ ನೋಡಿದ್ದೇನೆ.

    ಅವುಗಳಿಂದ ಜನ ಓಡಿ ಬರುತ್ತಿದ್ದ ಸಂದರ್ಭದಲ್ಲಿ ,ಪ್ರೇಮ, ಇತಿಹಾಸ, ಕಾಮ, ಯದ್ದ, ಅಂಡರ್ವಲ್ಠ್ ಭಯೋತ್ಪಾದನೆ, ,ಸಿನಿಮಾ, ಅಮ್ಮ - ಹೀಗೆ ನಾನು ಅನೇಕ ಸಂಗತಿಗಳ ಬಗ್ಗೆ ಬರೆಯಬಲ್ಲೆ . ನನಗೆ ಅಕ್ಷರ ಅನ್ನ ಕೊಟ್ಟಿದೆ .ನಾನು ತೃಪ್ತ . ಇಷ್ಟಾದರೂ ಟಿವಿಯೊಳಕ್ಕೆ ಇಣುಕಿದ್ದೇನೆ. ನಾನು ಜನಶ್ರೀ ಟಿ ವಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದೆ .

    ನನಗೆ ಮೊದಲು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಇಪ್ಪತ್ತಮೂರು ವರ್ಷ- ಆಮೇಲೆ ಎರಡು ಸಲ ಬಂತು, ಶಿವರಾಮ ಕಾರಂತರ ಹೆಸರಿನಲ್ಲಿ ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಶಸ್ತಿ ಹಾಗೂ ಅವರ ಹುಟ್ಟೂರಿನ ಪ್ರಶಸ್ತಿ ಬಂದವು.ಮಾಸ್ತಿಕಥಾ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂತು. ಮಾಡಿದ ಹೊಟ್ಚೆ ಪಾಡಿನ ಪತ್ರಿಕೋದ್ಯಮಕ್ಕೆ ‘ಜೀವಮಾನ ಸಾಧನೆ’ ಅಂತ ಪ್ರಶಸ್ತಿ ಕೊಟ್ಟರು.ನನಗೆ ಯಾವ ಸಂಪತ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟರೋ, ಅದು ಯಡಿಯೂರಪ್ಪನವರಿಗೆ ಗೊತ್ತು . ‘ಚಲಂ’ , ಎಂಬ ತೆಲುಗು ಲೇಖನ ಆತ್ಮ ಚರಿತ್ರೆಯ ಅನುವಾದಕ್ಕೆ ನನಗೆ ಕುವೆಂಪು ಭಾಷಾಭಾರತಿ ಪ್ರಶಸ್ತಿ ನೀಡಿದೆ .

    ‘ಸಕ್ಕತ್ತಾಗಿ ಬರೀತಾನೆ ನನ್ಮಗ’ ಎಂಬುದು ಬೆಂಗಳೂರು ಸೇರಿದಂತೆ ಅನೇಕ ಊರುಗಳು ಆಟೋ ಡ್ರೈವರ್ ಗಳು ನನಗೆ ಕೊಟ್ಟ ಅತಿ ದೊಡ್ಡ ಪ್ರಶಸ್ತಿ.

    ‘ಹಾಯ್ ಬೆಂಗಳೂರ್!’ ನನಗೆ ಅನ್ನವಿಟ್ಟ ತಾಯಿ. ‘ಓ ಮನಸೇ…’ ನನ್ನ ಅಬ್ಸೇಷನ್ .ಟಿ ವಿಗಳಲ್ಲಿ ಕಾಣಿಸಿಕೊಳ್ಳುವುದು ನನ್ನ ಚಟ. ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡಿಗರಷ್ಟೇ ಕ್ಷಮಿಸಬೇಕು .ಸರಿಸುಮಾರು ಎಂಟುವರೆ ಸಾವಿರ ಮಕ್ಕಳು ಡೊನೇಷನ್ ಮತ್ತು ಜಾತಿಯ ಪ್ರಸ್ತಾಪವಿಲ್ಲದೇ ಓದಲು ಸಾಧ್ಯವಗಿರುವ ‘ಪ್ರಾರ್ಥನಾ’ ಶಾಲೆ ,ನನ್ನ ನಿಜವಾದ ಸಾಧನೆ.ಕೆಲವು ಸಿ.ಡಿಗಳನ್ನು ಮಾಡಿದ್ದೇನೆ. ಬೆಂಗಳೂರಿನ ಗಾಂಧೀ ಬಜಾರ್ ನಲ್ಲಿ ಬಿ.ಬಿ.ಸಿ (ಬೆಳೆಗೆರೆ ಬುಕ್ಸ ಆಂಡ್ ಕಾಫಿ) ಹೆಸರಿನ ಪುಸ್ತಕದ ಮಳಿಗೆ ತೆರೆದಿದ್ದು ನನ್ನ ಅಕ್ಷರ ಲೋಕದ ತಿಕ್ಕಲಿನ ಇನ್ನೊಂದು ಮುಖ .ನನಗೆ ಸಮಾನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ನನ್ನ ಮುಖ ಕಂಡರಾಗದವರೂ ಇದ್ದಾರೆ.

    ನನಗೆ ಎರಡು ಹೆಣ್ಣು,ಎರಡು ಗಂಡು ಮಕ್ಕಳಿದ್ದಾರೆ.ಇಬ್ಬರು ಪತ್ನಿಯರಿದ್ದಾರೆ.ಮೂವರು ಮೊಮ್ಮಕ್ಕಳಿದ್ದಾರೆ.ನಾಲ್ಕನೆಯ ಮೊಮ್ಮಗ ಕಣ್ಣು ಬಿಟ್ಟಿದ್ದಾನೆ .ಸಿಗರೇಟ್ .ತಿರುಗಾಟ,ಓದು ,ಬರವಣಿಗೆ, ಸಂಗೀತ ,ಇತಿಹಾಸ ನನ್ನ ಬಲಹೀನತೆಗಳು . ಜಗತ್ತು ನನ್ನ ಮನೆ, ಸದ್ಯಕ್ಕೆ ಬೆಂಗಳೂರಿನಲ್ಲಿದ್ದೇನೆ.

    ಉಳಿದದ್ದು ತಗೊಂಡು ಏನು ಮಾಡುತ್ತೀರಿ?

    ನಾನೂ ನಿಮ್ಮಂತೆಯೇ ಮನುಷ್ಯ, ಕೊಂಚ ಚಿಲ್ರೆ ಕೊಂಚ ಗಟ್ಟಿ,

    -ರವೀ

    ಮುನ್ನುಡಿ

    ಸಮಾಧಾನವೊಂದನ್ನು ಹೇಳುವ ಮೊದಲು

    ಸಮಾಧಾನ!

    ಜಗತ್ತಿನಲ್ಲಿ ಎಷ್ಟು ಜನಕ್ಕಿದೆ?

    ನಾವೆಲ್ಲ ಒಂದು ಮುಟಿಗೆಯಷ್ಟು ಸಮಾಧಾನಕ್ಕಾಗಿ ಒದ್ದಾಡುತ್ತೇವೆ. ಸಿಕ್ಕವರು ಪುಣ್ಯವಂತರು.

    "ನೀವು ಹೀಗೆ ಮಾತಾಡಿದ್ರೆ ಹೇಗೆ? ಲಕ್ಷಾಂತರ ಜನಕ್ಕೆ ಸಮಾಧಾನ ಹೇಳೋರು ನೀವು. ನೀವೇ ಧೃತಿಗೆಟ್ಟರೆ ಹೇಗೆ?'' ಅನ್ನುತ್ತಾರೆ ಅನೇಕರು. ಯಾಕೆ? ನಾನು ಮನುಷ್ಯನಲ್ಲವೆ? ಸಮಾಧಾನ ನನಗೂ ಬೇಕು. ಎಲ್ಲರಿಗೂ ಆಗುವಂತೆ ಹಸಿವು, ನೀರಡಿಕೆ, ಸಿಟ್ಟು, ಕಾಮಾತುರ-ಎಲ್ಲ ನನಗೂ ಆಗುತ್ತದೆ. ಕೆಲವೊಮ್ಮೆ ದಿನಗಟ್ಟಲೆ, ಸುಮ್ಮನೆ ಮಲಗಿ ಬಿಡುತ್ತೇನೆ: ನಿಶ್ಚಲ. ಸಣ್ಣ ದನಿಯಲ್ಲಿ ಅಳು. ಬಿಕ್ಕುತ್ತೇನೆ. ನನ್ನ ಸಮಸ್ಯೆ ಏನು ಅಂತ ನನಗೆ ಗೊತ್ತು. ಅದರ ಪರಿಹಾರವೂ ಗೊತ್ತು. ಆದರೆ ಪರಿಹಾರ ಕೈಗೆ ನಿಲುಕಬೇಕಲ್ಲ? ಎಷ್ಟೋ ಸಲ ಈ ಬದುಕು ಸಾಕು ಅನ್ನಿಸಿದೆ. ರಿವಾಲ್ವರ್ ತಬ್ಬಿಕೊಂಡು ಮಲಗಿಬಿಡುತ್ತೇನೆ. ಏನಿದೆ ಕಷ್ಟ? ಒಂದೇ ಒಂದು shot ಹಣೆಗೆ. ಆದರೆ ಮನಸಾಗುವುದಿಲ್ಲ. ಮೊನ್ನೆ ಮೂರು ದಿನಗಳಿಗೆ ಮುಂಚೆ ನನ್ನ ನೆರಳಿನಂಥ ಸಹಾಯಕ ಸೀನ ಅದನ್ನು ಎತ್ತಿಟ್ಟು lock ಮಾಡಿದ.

    ಆದರೆ ಕಷ್ಟ ಏನೇ ಇರಲಿ. ನಾನು ದೇವರಿಗೆ ಕೈ ಮುಗಿದು "ನನ್ನ ಕಾಪಾಡಪ್ಪಾ'' ಅಂತ ಕೇಳಿಲ್ಲ. ದೇವರಿಗೂ-ನನಗೂ ಅಷ್ಟಕ್ಕಷ್ಟೆ. ಆತ್ಮಹತ್ಯೆ ನನ್ನ ನಿರಂತರ ಪ್ರಯತ್ನವೇನಲ್ಲ. ಮೊನ್ನೆ ಯಾಕೋ ಹಂಗೆ ಮಾಡಿದೆನಾದರೂ, ಸುಲಭಕ್ಕೆ ಸಾಯುವ ಘಟ ಅಲ್ಲ ನಾನು. ಇನ್ನು ಖಾಯಿಲೆಗಳು: ಡಯಾಬಿಟಿಸ್ ಬಂದು ಇಪ್ಪತ್ತೈದು ವರ್ಷಗಳಾಗಿವೆ. ಬ್ಲಡ್ ಪ್ರೆಷರ್ ಮೊನ್ನೆ ಹತ್ತು ವರ್ಷದ ಹಿಂದೆ ತಗುಲಿಕೊಂಡಿತು. ಎರಡೂ ಪಾಪ, ತಮ್ಮ ಪಾಡಿಗೆ ತಾವಿವೆ. ಅವುಗಳನ್ನು ತೀರ ಮುದ್ದು ಮಾಡಬಾರದು. ವೈಷಮ್ಯವನ್ನೂ ಕಟ್ಟಿಕೊಳ್ಳಬಾರದು. live and let live ಆದರೆ ಮನಸನ್ನು ಕಾಡುವ ರೋಗಗಳು? ಮನೋರೋಗಕ್ಕೆ ಮದ್ದೆಲ್ಲಿದೆ?

    ನಾನು `ಓ ಮನಸೇ' ಆರಂಭಿಸಿದ್ದು ದೊಡ್ಡ ಮಹತ್ವಾಕಾಂಕ್ಷೆಯಿಂದ. ಅದರ ಸರ್ಕ್ಯುಲೇಷನ್ `ಹಾಯ್ ಬೆಂಗಳೂರ್!'ಗಿಂತ ಹೆಚ್ಚಿಗಿದೆ. ಆದರೆ bad luck. ಅದನ್ನು ನಾನು ಒಬ್ಬನೇ ನೋಡಿಕೊಳ್ಳೋದು ಕಷ್ಟ. ನೋಡಿಕೊಳ್ಳುತ್ತಿದ್ದ ಗೆಳೆಯ ಅನಂತ್ ಚಿನಿವಾರ್ ಹಠಾತ್ತನೆ ಅದನ್ನು ಬಿಟ್ಟು ಹೋದ. ಆಗ ಪತ್ರಿಕೆ ನಿಲ್ಲಿಸಿದೆ. ದುಃಖದ ಸಂಗತಿಯೆಂದರೆ ಅದನ್ನು ನೋಡಿಕೊಳ್ಳುತ್ತಿದ್ದ ಉದಯ ಮರಕಿಣಿಗೆ ಹಠಾತ್ತನೆ ಪಾರ್ಶ್ವವಾಯು ತಗುಲಿತು. ಅದು ಬಲು ಕೆಟ್ಟ ಖಾಯಿಲೆ. ಮನುಷ್ಯನನ್ನು ಅರ್ಧ ಕೊಂದು ಬಿಡುತ್ತದೆ. ಅದರಿಂದ ನರಳಿದ ನನ್ನ ತಾಯಿಯನ್ನು ನಾನು ಹದಿನೆಂಟು ವರ್ಷ ನೋಡಿಕೊಂಡಿದ್ದೇನೆ. ಉದಯ ಮಲಗಿದ ಮೇಲೆ ಮತ್ತೆ ಪತ್ರಿಕೆ ನಿಲ್ಲಿಸಿದೆ.

    `ಓ ಮನಸೇ...' ಒಂದರ್ಥದಲ್ಲಿ ಆಪ್ತ ಬಂಧುವಿನಂಥದು. ಆ ಪತ್ರಿಕೇನ ಯಾಕೆ ನಿಲ್ಲಿಸಿದಿರಿ ಅಂತ ಹೋದಲ್ಲೆಲ್ಲ ನನ್ನನ್ನು ಕೇಳಿದ್ದಾರೆ. ಅದರಲ್ಲೂ ಯುವಕರು ಮತ್ತು ಹೆಣ್ಣುಮಕ್ಕಳು. `ಓ ಮನಸೇ...' ರೂಪಿಸಲಿಕ್ಕೆ ಬೇರೆಯದೇ ಮನಸ್ಥಿತಿ ಬೇಕು. ಪತ್ರಿಕೋದ್ಯಮಿಗಳು ನೂರಾರು ಜನ ಇದ್ದಾರೆ. ಆದರೆ ಇದಕ್ಕೆ suit ಆಗೋ mentality ಎಲ್ಲರಿಗೂ ಇರೋದಿಲ್ಲ.

    `ಓ ಮನಸೇ...' ಪತ್ರಿಕೆಯ ಅತ್ಯಂತ ಪಾಪ್ಯುಲರ್ ಅಂಕಣವೆಂದರೆ `ಸಮಾಧಾನ'. ಅದೊಂದು ಥರದಲ್ಲಿ ಇಬ್ಬರು ಪರಮಾಪ್ತರು ಎದುರಾ ಎದುರು ಕುಳಿತು ಮೆಲ್ಲನೆಯ ದನಿಯಲ್ಲಿ ಮಾತನಾಡಿಕೊಂಡ ಹಾಗೆ. ನೊಂದ ಪಾಪಚ್ಚಿ, ಅಮ್ಮನಿಗೆ ದೂರು ಹೇಳಿದಾಗ ಅಮ್ಮ ಬಾಚಿ ತಬ್ಬಿ ಮೈದಡವಿದ ಹಾಗೆ. ಒಬ್ಬ ಗೆಳತಿ ನೊಂದು ಕುಳಿತಾಗ ಅವಳ best friend ಸಾಕು ಏಳೇ... ಬಿಟ್ಟಾಕು ಇದನ್ನೆಲ್ಲ'' ಎಂದು ಆಪ್ತ ದನಿಯಲ್ಲಿ ಗದರಿಸಿದ ಹಾಗೆ. ಈ ಅಂಕಣವನ್ನು, ಅದೇನೇ ಕೆಲಸವಿದ್ದರೂ ನಾನೇ ಕೈಯಾರೆ ಬರೆಯುತ್ತೇನೆ. ಈ ಅಂಕಣಕ್ಕೆ ಬಂದ ಪತ್ರಗಳನ್ನು ನನ್ನ ಸಿಬ್ಬಂದಿಯವರಿಗೂ open ಮಾಡಿ, ಓದಲು ಬಿಡುವುದಿಲ್ಲ. ಅಂಥ ಶ್ರದ್ಧೆ ಇದರೆಡೆಗೆ ನನಗಿದೆ. ಕೆಲವು ಸಲ, after all ಇದು ಯಾವ ದೊಡ್ಡ ಸಮಸ್ಯೆ?'' ಅಂತ ಅನ್ನಿಸೋದು. ಅದು ನನಗೆ `after all'. ನಿಜ. ಅನುಭವಿಸುವವರಿಗೆ?

    ಅನೇಕ ಸಲ ಗೆಳೆಯರು ಕೇಳುತ್ತಾರೆ. ಇವೆಲ್ಲ ಪತ್ರ ನಿಜಕ್ಕೂ ಬರ್ತವಾ? ಅಥವಾ ನೀನೇ ಸೃಷ್ಟಿಸಿಕೊಂಡು ಬರೀತೀಯಾ?'' ಅಂತ. ಬನ್ನಿ, ನನ್ನ trayನಲ್ಲಿ ಅವೆಷ್ಟು ಪತ್ರ ತುಂಬಿವೆಯೋ ನೋಡಿ'' ಅನ್ನುತ್ತೇನೆ. Of course, ಪ್ರಶ್ನೋತ್ತರಗಳ ಶೈಲಿ ನೋಡಿದಾಗ ಹಾಗೆ ಅನ್ನಿಸುವುದುಂಟು. ಅದಕ್ಕೆ ಕಾರಣವೆಂದರೆ, ಕೆಲವು ಪ್ರಶ್ನೆಗಳನ್ನು ನಾನು ತಿದ್ದಿ, ಮತ್ತೆ ಬರೆಯುತ್ತೇನೆ. ಏಕೆಂದರೆ ಆ ಪ್ರಶ್ನೆಗಳು ತುಂಬ ಅಮಾಯಕವಾಗಿರುತ್ತವೆ. ಅದರಲ್ಲೂ ಹೆಣ್ಣುಮಕ್ಕಳು ಬರೆಯುವಂಥವು. ಅವರ ಸಮಸ್ಯೆ ಬಲು ತೀವ್ರವಾಗಿರುತ್ತದೆ. ಅದನ್ನು ಕೊಂಚ ಮುಚ್ಚಿಟ್ಟು, ತಿದ್ದಿ, ಬದಲಿಸಿ, ಮರೆ ಮಾಡಿ ಬರೆದರೆ ಅವರು safe. ಬರೆದ ಹಾಗೇ ತಿದ್ದದೆ ಬರೆದರೆ, finish. ಇವರೇ ಬರೆದದ್ದು ಅಂತ ಅವರ ಆಸುಪಾಸಿನವರಿಗೆ, ಮನೆಯವರಿಗೆ ಗೊತ್ತಾದರೆ ಕಷ್ಟ. ಹೀಗಾಗಿ ತಿದ್ದಿ ಬರೆಯುತ್ತೇನೆ. ಕೆಲಬಾರಿ ಇಡೀ ಪತ್ರ rewrite ಮಾಡುತ್ತೇನೆ.

    ನನ್ನ ಅಂಕಣಗಳು ಪುಸ್ತಕಗಳಾಗಿ ಮುದ್ರಣಗೊಂಡಿವೆ. `ಖಾಸ್‍ಬಾತ್' ಆಗಿದೆ. `ಬಾಟಮ್ ಐಟಮ್' ಆರೇಳು ಕಂತು ಕಂಡಿವೆ. `ಲವ್‍ಲವಿಕೆ'ಯೂ ಅಷ್ಟೆ. ಆದರೆ `ಓ ಮನಸೇ'ಯ ಒಂದು ಅಂಕಣ ಪ್ರಕಟವಾಗುತ್ತಿರೋದು ಇದೇ ಮೊದಲು. ಈ ಅಂಕಣ ನೀವು ಬಿಡಿ ಬಿಡಿಯಾಗಿ ಓದಿದ್ದೀರಿ. ಪುಸ್ತಕ ರೂಪದಲ್ಲಿ ಓದುತ್ತಿರೋದು ಇದೇ ಮೊದಲು. ನನ್ನ ಪ್ರಕಾರ ಇದು ಎಲ್ಲ ಕಾಲಕ್ಕೂ valuable. ಓದುವ ಸಂತಸ, ಸಂಕಟ ಎರಡೂ ನಿಮ್ಮದಾಗಲಿ.

    -ರವಿ ಬೆಳಗೆರೆ

    ಪರಿವಿಡಿ

    1. ಅಂಕಲ್ಅವನಿಗೆ ಏನು ಹೇಳಲಿ?

    2. ಅವನು ಯಾಕೆ ಅರ್ಥ ಮಾಡ್ಕೊಳ್ತಿಲ್ಲ?

    3. ನನ್ನ ಲೈಫ್‍ಸ್ಟೈಲ್ ಹೇಗಿರಬೇಕು?

    4. ಯಾರು ಹಿತವರು ನನಗೆ ಈ ಇಬ್ಬರೊಳಗೆ?

    5. ಅನುಮಾನದ ಹೊಗೆ ಗೆಳೆತನವನ್ನು ಸುಟ್ಟೀತೇ?

    6. ಅಕ್ಕನಿಗಿಂತ ಮುಂಚೆ ತಂಗಿ ಮದುವೆ ಆಗಬಾರದು ಅನ್ನೋ ನಿಯಮವೆಲ್ಲಿದೆ?

    7. ದುರುಳ ತಂದೆಗೆ ಮರುಳಾದ ಮಕ್ಕಳು

    8. ಜ್ಯೋತಿಷ್ಯ ನಂಬುವ ಹುಡುಗಿಗೆ ಲಗ್ನ ಬಲವಿಲ್ಲ?

    9. ಪಪ್ಪಾ ನಾನು ಏನು ಮಾಡಲಿ ಹೇಳಿ ಎಂದ ಮಗಳಿಗೆ

    10. ಮಿತ್ರಾ... ನಿಮ್ಮ ಮದುವೆಗೆ ನಾನೇ ಪುರೋಹಿತ

    11. ಮನೆಯಲ್ಲಿ ಉಳಿದ ರಾತ್ರಿ ಅವನು ತಬ್ಬಿಕೊಂಡ!

    12. ಮನಸ್ಸು ಕೊಟ್ಟೆ, ದೇಹವನ್ನೂ ಕೊಟ್ಟೆ, ಇನ್ನೇನ ಕೊಡಲಿ ಅವನಿಗೆ?

    13. ವಿಕಲಚೇತನ ಎಂಬ ಪದವೇ ಅಪದ್ಧ

    14. ಹೆಣ್ಣುಮಗಳ ನಡುನೆತ್ತಿಯಲ್ಲಿ ಒಂದು ಬಾಲ್ಡ್ ಪ್ಯಾಚ್

    15. ಎಚ್ಚರವಿರಲಿ! ಅವನು ತೊಂದರೇನೂ ಮಾಡಬಲ್ಲ

    16. ನೀನು ಮಾಡಿದ್ದೆಲ್ಲ ಸರಿ ಅನ್ಸುತ್ತಾ ಹೇಳು?

    17. ಇಲ್ಲಿಯ ತನಕ ಈಜಿ ಬಂದೆ, ಆದರೆ ಮುಂದೆ?

    18. ಎಲ್ಲ ಪ್ರೀತಿಯ ಮರೆತು ಅವಳು ಚಪ್ಪಲಿಯಲ್ಲಿ ಹೊಡೆದಳಾ?

    19. ಇವನೆಂಥ ಎರಡನೇ ಗಂಡ ಗಂಟು ಬಿದ್ದ?

    20. ಅಗೋಚರ ಧ್ವನಿಗಳ ನಿರಂತರ ಕಿರಿಕಿರಿ

    21. ಎಷ್ಟೆಲ್ಲ ಕಷ್ಟಗಳನ್ನು ಸಹಿಸುತ್ತಲೇ ಬೆಳೆದೆ ಗೊತ್ತಾ?

    22. ನಮ್ಮೆಜಮಾನ್ರು ಮೊದಲಿನಂತಿಲ್ಲ!

    23. ಏಕೆ ಕಾಡುತಿದೆ ಹೀಗೆ ಸುಮ್ಮನೆ, ಯಾವುದು ಈ ರೋಗ?

    24. ಒಂದು ಬಾಟಲಿಗಾಗಿ ಅಮ್ಮ ನಮ್ಮನ್ನೇ ಮಾರತೊಡಗಿದಳು!

    25. ಅಪ್ಪ ಬೇಕು ಅಪ್ಪ

    26. ಕೈಬಿಟ್ಟು ಹೋದ ಗೆಳೆಯನಿಗಾಗಿ ಈ ಪರಿ ಒದ್ದಾಡುವ ಗಂಡಸಿರುತ್ತಾನಾ?

    27. ಗೆಳತಿ, ನೀನೇಕೆ ಹೀಗೆ ಸುಡುತಿ?

    28. ಆ ಅಚಾತುರ್ಯ ನಡೆದೇ ಹೋಯಿತು!

    29. ಮಾತಿಗೊಮ್ಮೆ ನಾಪತ್ತೆಯಾಗುವ ಪತಿಯ ಜೊತೆ ಏಗುವುದು ಹೇಗೆ?

    30. ಅವಳು ಅಮ್ಮ ಅಲ್ಲ ಗುಮ್ಮ!

    31. ಹೇಡಿಗಳು ಪ್ರೇಮಿಸಲೇಬಾರದು

    32. ಆಸೆಗೆ ಬಿದ್ದ ಅಮಾಯಕ ಮನಸ್ಸಿಗೆ ಅನುಮಾನವೇ ಬರಲಿಲ್ಲ!

    33. ದಾರಿತಪ್ಪಿದ ತಮ್ಮನನ್ನು ದಂಡಿಸುವುದು ಹೇಗೆ?

    34. ಮೊಬೈಲ್ ಅಂಗಡಿಯ ಈ ಹುಡುಗನನ್ನು ನಂಬಲಾ?

    35. ಪತ್ರದಲ್ಲಿ ಕರೆದವಳು ಮಾತಿಗ್ಯಾಕೆ ಬರಲಿಲ್ಲ?

    36. ನೂರು ವರುಷ ಸುಖವಾಗಿ ಬಾಳಬೇಕು...

    37. ಈ ಪರಿಚಯ-ಸ್ನೇಹಗಳು ನನ್ನನ್ನು ಎಲ್ಲಿಗೆ ತಂದು ನಿಲ್ಲಿಸಿದವೋ ನೋಡಿ!

    38. ಹಗಲು ಅತ್ತೆಯ ಕಾಟ: ಇರುಳು ಗಂಡನ ಕಾಟ

    39. ಅವಳು ಜೀವದ ಗೆಳತಿ: ಈಗ ಅವಳೇ ನನ್ನ ಸವತಿ!

    40. ಜಗಳ ಏನೇ ಇರಲಿ: ಅದರ ರೀತಿ ಮಾತ್ರ ಹಾಗಿರಬಾರದು

    41. ನೋಡ ನೋಡ್ತ ಕೈತಪ್ಪಿ ಹೋದಳು

    42. ಆಕೆಯನ್ನು ಇದೊಂದು ಸಲ ನೀನು ಕ್ಷಮಿಸಬೇಕು

    43. ಇರುಳು ಈತನ ಕಾಟ: ಹಗಲೆಲ್ಲ ಆಕೆಯ ಕಾಟ

    44. ವಿಪರೀತ ಸಿಟ್ಟಿನವನಾದ ನಾನು ಏನೆಲ್ಲ ಮಾಡಿಕೊಂಡೆ!

    45. ಅದಕ್ಕೆ ಯಾರನ್ನಾದರೂ ನೋಡಿಕೋ ಅಂತ ಅನ್ನಬಹುದಾ?

    46. ಷಂಡನಿಗೆ ಗಂಡನಾಗಿ ಬದುಕು ದಂಡವಾಗಿ ಹೋಯಿತು

    47. ಮೊಬೈಲ್ ಖಾಲಿ: ಅವನೇಕೆ ಹೀಗೆ ಆಡ್ತಾನೆ ಅಂತ ನೀವು ಹೇಳಿ!

    48. ಅದೆಷ್ಟು ಸಲ ಅವಳಿಗೆ ಗಿಫ್ಟ್ ಕೊಟ್ಟೆ ಗೊತ್ತಾ?

    49. ನಾನು ಮಾಡಿದ್ದು ಸರಿಯಲ್ಲವೇ? ನಿರ್ಧರಿಸಿ ಹೇಳಿ ಅಂಕಲ್

    1. ಅಂಕಲ್ಅವನಿಗೆ ಏನು ಹೇಳಲಿ?

    ಪ್ರೀತಿಯ ಅಂಕಲ್,

    ನಾನು ಬಿ.ಇ., ಮುಗಿಸಿ ಮನೆಯಲ್ಲಿದ್ದೇನೆ. ನಾಲ್ಕು ವರ್ಷ ಬೇರೆ ಊರಿನಲ್ಲಿದ್ದು ಓದಿದೆ. ಅಲ್ಲಿ ಎರಡು ವರ್ಷಗಳ ಹಿಂದೆ ನನಗೆ ಒಬ್ಬರ ಪರಿಚಯವಾಯಿತು. ನಾವು ಪರಸ್ಪರರನ್ನು ಪ್ರೀತಿಸಿದೆವು. ಆದರೆ ಒಂದು ದಿನ ಫೋನ್ ಮಾಡಿ ನನ್ನನ್ನು ಮರೆತುಬಿಡು ಎಂದು ಹೇಳಿದ. ಜಾತಿ ಬೇರೆ ಬೇರೆಯಾದ್ದರಿಂದ ಮನೆಯಲ್ಲಿ ಒಪ್ಪುತ್ತಿಲ್ಲ ಅಂದ. ಓದು ಮುಗಿಯುವವರೆಗೂ ಕಾದಿದ್ದು ಆನಂತರ ಒಪ್ಪಿಸೋಣ ಅಂದಿದ್ದಕ್ಕೆ ಅವನು ಒಪ್ಪಿದ. ಆನಂತರ ಒಂದು ವರ್ಷದ ತನಕ ನಮ್ಮ ಪ್ರೀತಿ ಸಾಗಿತು. ನಾನು ಪದವಿ ಮುಗಿಸಿ ಊರಿಗೆ ಹಿಂತಿರುಗಿದೆ. ಅವನು ಮತ್ತೆ ಅದೇ ರಾಗ ತೆಗೆದ. ನನ್ನನ್ನು ಮರೆತು, ಮನೆಯವರು ತೋರಿಸಿದ ಬೇರೆ ಹುಡುಗನನ್ನು ಮದುವೆಯಾಗು. ನಾನು ನಿನ್ನನ್ನು ತುಂಬ ಪ್ರೀತಿಸುತ್ತಿರುವುದು ನಿಜ. ಆದರೆ ಮದುವೆಯಾಗುವುದು ಸಾಧ್ಯವಿಲ್ಲ ಅನ್ನತೊಡಗಿದ. ಇಬ್ಬರೂ ಮನೆ ಬಿಟ್ಟು ಓಡಿ ಹೋಗೋಣ ಎಂದು ಕೇಳಿದ್ದಕ್ಕೆ `ನಿನ್ನ ತಂಗಿಯ ಭವಿಷ್ಯದ ಬಗ್ಗೆ ಯೋಚಿಸು. ತ್ಯಾಗ ಮಾಡು. ಅದೇ ಅಮರ' ಅಂತೆಲ್ಲ ಮಾತನಾಡಿದ.

    ಈಗ ಒಂದು ತಿಂಗಳಿಂದ ಅವನು ನನ್ನ ದೇಹ ಸಂಪರ್ಕ ಬಯಸುತ್ತಿದ್ದಾನೆ. ಈ ಮುಂಚೆ ಎಲ್ಲ ಪ್ರೇಮಿಗಳ ನಡುವೆ ಆಗುವಂತೆ ತಬ್ಬುಗೆ, ಚುಂಬನ ಇತ್ಯಾದಿಗಳು ಆಗಿದ್ದವು. ಮದುವೆಗೆ ಮೊದಲು ದೇಹ ಸಂಪರ್ಕ ತಪ್ಪು ಎಂದು ನಾನು ತಡೆಯುತ್ತಿದ್ದೆ. ಈಗ ಮದುವೆಯ ಮಾತೂ ಇಲ್ಲ. `ನಾನು ಪ್ರೀತಿಸಿದವಳನ್ನು ಒಂದು ಸಲವಾದರೂ ಹೊಂದಿದೆ ಎಂಬ ತೃಪ್ತಿ ನನಗಿರುತ್ತದೆ. ಅದರ ನೆನಪು ನನ್ನಲ್ಲಿ ಶಾಶ್ವತವಾಗಿರುತ್ತದೆ. ಒಪ್ಪಿಕೋ' ಎಂದು ಒತ್ತಾಯಿಸುತ್ತಾನೆ. ನನಗೆ ಇದು ಅಸಹ್ಯವೆನಿಸುತ್ತದೆ. ಆದರೆ ಅವನನ್ನು ಮರೆಯಲು ಆಗುತ್ತಿಲ್ಲ. ನಾನು ಏನು ಮಾಡಲಿ? ಅವನಿಗೆ ಏನು ಹೇಳಲಿ?

    -ಎಸ್

    ಪ್ರೀತಿಯ ಮಗೂ,

    ತಿನ್ನಲಾಗದ, ತಿನ್ನಬಾರದ ವಸ್ತುವನ್ನು ಎದುರಿಗಿಟ್ಟು ತಿನ್ನು ಅಂತ ಬಲವಂತ ಮಾಡಿದಾಗ ಹೇಗೆ ಎದ್ದು ಬಿಡುತ್ತೀವೋ ಹಾಗೆ, ಒಂದೇ ಒಂದು ಸಲಕ್ಕೆ `No' ಅಂತ ಹೇಳಿ ಈ ಸಂಬಂಧದಿಂದ ಕಳಚಿಕೊಂಡುಬಿಡು. `ನಾನು ಪ್ರೀತಿಸಿದವಳನ್ನು ಒಂದು ಸಲದ ಮಟ್ಟಿಗಾದರೂ ಹೊಂದಿದೆ' ಎಂಬ ಅವನ ತೃಪ್ತಿ ಹಾಳು ಬಿದ್ದು ಹೋಗಲಿ. ಬದುಕಿನಲ್ಲಿ ಯಾವುದಕ್ಕೂ ಕೆಲಸಕ್ಕೆ ಬರದವನಿಗೆ ಇಷ್ಟು ವರ್ಷ ಕಾದಿಟ್ಟುಕೊಂಡು ಬಂದ ಶೀಲವನ್ನು ಅರ್ಪಿಸಿದೆ ಎಂಬ ನೋವು, ಬೇಸರ, ಅಸಹ್ಯ ನಿನ್ನಲ್ಲಿ ಶಾಶ್ವತವಾಗಿ ಉಳಿದು ಹೋಗುತ್ತವೆ. ಯಾವ ಕಾರಣಕ್ಕೂ ಆ ಕೆಲಸ ಮಾಡಿಕೊಳ್ಳಬೇಡ.

    ನಿನಗೇ ಚೆನ್ನಾಗಿ ಗೊತ್ತು. ನಾನು ಪ್ರೇಮದ ವಿರೋಧಿಯಲ್ಲ. ನೂರಾರು ಪ್ರೇಮ ವಿವಾಹಗಳಿಗೆ ಸಾಕ್ಷಿಯಾಗಿದ್ದೇನೆ. ಪಕ್ವಗೊಂಡ ವಯಸ್ಸು, ಮನಸ್ಸು, ದುಡಿಯುವ ಯೋಗ್ಯತೆ ಮತ್ತು ಒಳ್ಳೆಯತನ-ಇವಿಷ್ಟೂ ಇದ್ದರೆ ಸಾಕು : ಪ್ರೇಮಿಗಳು ಮದುವೆಯಾಗಬಹುದು. ಆದರೆ ಪ್ರೀತಿಸುವಾಗ ಇನ್ನಿಲ್ಲದ ಉತ್ಸಾಹ ತೋರಿಸಿ, ಮದುವೆಯ ಮಾತು ಬಂದ ಕೂಡಲೆ ಜಾತಿಯ ನೆಪ ಹೇಳಿ ಹಿಂದಕ್ಕೆ ಸರಿಯುವ ಹುಡುಗ, ಜೀವನ ಪರ್ಯಂತ ಒಳ್ಳೆಯ ಸಂಗಾತಿಯಾಗಿ ಇರಬಲ್ಲನಾ? ಅದು ಮೊದಲನೆಯ ಪ್ರಶ್ನೆ. ಆಯ್ತು, ಹುಡುಗನಿಗೆ ಧೈರ್ಯವಿಲ್ಲದಂತಾಗಿರಬಹುದು. ತಂದೆ-ತಾಯಿಯರ ತಕರಾರೂ ಆತನನ್ನು ತಡೆದಿರಬಹುದು. ಹಾಗಾದಾಗ ಅನಿವಾರ್ಯವಾಗಿ, ಗೌರವದಿಂದ ನಿನ್ನೊಂದಿಗೆ ಮಾತನಾಡಿ ಶಾಶ್ವತವಾಗಿ ದೂರವಾಗಿದ್ದಿದ್ದರೆ ಆತ ಕೊಂಚವಾದರೂ ಗೌರವಕ್ಕೆ ಅರ್ಹನಾಗುತ್ತಿದ್ದ.

    ನೋಡು ಮರಿ, ಒಂದು ಸಂಬಂಧ ಅನಿವಾರ್ಯವಾಗಿ ಸಾಯಬೇಕು ಅಂತಾದಾಗ ಅದಕ್ಕೆ ಬಹು ಗೌರವಯುತ ಅಂತ್ಯಸಂಸ್ಕಾರ ನೀಡಿ ಕೈ ತೊಳೆದುಕೊಂಡು ಬಿಡಬೇಕು. ಸೆಕ್ಸ್ ಎಂಬುದನ್ನು ಜೀವನ ಪರ್ಯಂತ ಅನುಭವಿಸುವುದು ಇದ್ದೇ ಇದೆ. ಈ ಸಂಬಂಧದಿಂದ ಹೊರಕ್ಕೆ ಬಾ. ನಿನಗೆ ಒಳ್ಳೆಯದಾಗುತ್ತದೆ.

    -ಆರ್.ಬಿ.

    2. ಅವನು ಯಾಕೆ ಅರ್ಥ ಮಾಡ್ಕೊಳ್ತಿಲ್ಲ?

    ಪ್ರೀತಿಯ ರವಿ,

    ನೀವು ನನಗೆ ಆತ್ಮೀಯ ಸ್ನೇಹಿತ. ನಿಮ್ಮ ಅನುಭವಕ್ಕೆ ಹೋಲಿಸಿದರೆ ನನ್ನ ವಯಸ್ಸು ಚಿಕ್ಕದು : ಇಪ್ಪತ್ತೆರಡು ವರ್ಷ. ನಾನು ಎರಡನೇ ಪಿಯು ಮುಗಿಸಿ ನರ್ಸ್ ಟ್ರೇನಿಂಗ್ ಸೇರಿಕೊಂಡೆ. ಆಮೇಲೆ ಸರ್ಕಾರಿ ಕೆಲಸ ಸಿಕ್ಕಿತು. ಆದರೆ ನನ್ನ ಸಮಸ್ಯೆಯೆಂದರೆ ನನಗೆ ನನ್ನ ಮೇಲೆ ನಂಬಿಕೆಯೇ ಇಲ್ಲ. ಯಾವ ಕೆಲಸ ಮಾಡಬೇಕಾದರೂ ನನ್ನಲ್ಲಿ ಈ ಕೆಲಸ ಮಾಡೋ ಶಕ್ತಿ ಇಲ್ಲ ಅನ್ಸುತ್ತೆ. ಕೆಲಸಕ್ಕೆ ಟೂ ವೀಲರ್‍ನಲ್ಲಿ ಹೋಗುವಾಗ ಆ್ಯಕ್ಸಿಡೆಂಟ್ ಆಗುತ್ತೇನೋ ಅಂತ ಹೆದರಿಕೆಯಾಗುತ್ತೆ. ಹಾಗಂತ ಹೊಸದಾಗಿ ಕಲಿತವಳೇನಲ್ಲ. ಗಾಡಿ ಓಡಿಸುವುದು ಕಲಿತು ಆರು ವರ್ಷಗಳಾದವು. ಈಗೀಗ ಹೀಗೆ ಆಗುತ್ತದೆ. ಮನಸಿನಲ್ಲಿ ತಳಮಳ, ಕಸಿವಿಸಿ. ಯಾವಾಗಲೂ ಏನಾದರೂ ಯೋಚನೆ ಮಾಡ್ತಾನೇ ಇರ್ತೀನಿ. ಒಂದೊಂದು ಸಲ ಒಬ್ಬಳೇ ಹೋಗಿ ಎಲ್ಲಾದರೂ ಸಮುದ್ರ ತೀರದಲ್ಲಿ ಕೂತ್ಕೋಬೇಕು ಅನ್ನಿಸುತ್ತೆ. ನನ್ನಲ್ಲಿ ಆತ್ಮವಿಶ್ವಾಸವೇ ಇಲ್ಲ ಅನ್ನಿಸುತ್ತೆ. ಬದುಕಿರೋದೇ waste ಅನ್ನಿಸಿಬಿಟ್ಟಿದೆ. ಯಾಕೆ ಹೀಗೆ ರವೀ?

    ನಾನು ಇದುವರೆಗೂ ಇಷ್ಟಪಟ್ಟ ಒಂದು ವಸ್ತುವೂ ಸಿಕ್ಕಿಲ್ಲ. ಸಿಕ್ಕಿದ್ದನ್ನೇ ಅನುಭವಿಸಬೇಕಾಗಿ ಬಂದಿದೆ. ನಾನು ಎಸೆಸೆಲ್ಸಿ ಓದುವಾಗ ಹತ್ತಿರದ ಮನೆಯ ಹುಡುಗ ಇಷ್ಟವಾಗಿದ್ದ. ಕಪ್ಪಗಿದ್ದರೂ ಚೆನ್ನಾಗಿದ್ದ. ಅವನು ನನ್ನ first love. ಮನೇಲಿ ವಿಷಯ ಗೊತ್ತಾದಾಗ ಬೈದರು. ಅವನು ನಮ್ಮ ಜಾತಿಯವನೇ ಆದರೂ ಯಾರಿಗೂ ಇಷ್ಟವಾಗಿರಲಿಲ್ಲ. ಮುಂದೆ ಪಿಯುಸಿ ಸೇರಿದ ಮೇಲೆ ಅವನಿಂದ ದೂರವಾಗುತ್ತಾ ಬಂದೆ. ಪಿಯುಸಿಯಲ್ಲಿ ದೊಡ್ಡ ಪರ್ಸಂಟೇಜ್ ಬರಲಿಲ್ಲ. ಒಂದು ವರ್ಷ ಮನೆಯಲ್ಲಿಯೇ ಇದ್ದೆ. ಈ ಮಧ್ಯೆ ಮನೆ ಬದಲಾಯಿಸಿದರು. ಹೊಸಮನೆ ಪಕ್ಕದ ಅಂಗಡಿಗೆ ಟೆಂಪೋ ಓಡಿಸಲಿಕ್ಕೆ ಒಬ್ಬ ಹುಡುಗ ಬಂದು ಸೇರಿಕೊಂಡ. ಹದಿನೆಂಟು ವರ್ಷದವಳು ನಾನು. ಅವನು ಐದು ವರ್ಷಕ್ಕೆ ಹಿರಿಯ. ಅವನಿಗೆ ನನ್ನ ಕಣ್ಣು ಇಷ್ಟವಾದವು. ಪ್ರಪೋಸ್ ಮಾಡಿದ. ನನ್ ಹಳೆಯ affair ಬಗ್ಗೆ ಅವನಿಗೆ ಎಲ್ಲಾ ಗೊತ್ತು. ಆದರೂ ನನ್ನನ್ನು ಇಷ್ಟಪಟ್ಟ, ಪ್ರೀತಿಸಿದ. ನೀವು ಹೇಳುವ ಹಾಗೆ ನನ್ನದು ಪಿಯುಸಿ ವಯಸ್ಸು. ಕ್ರಮೇಣ ಜೀವನ ಅಂದರೇನು ಅಂತ ಅರ್ಥವಾಗುತ್ತ ಬಂತು. ಕಾಡಿ ಬೇಡಿದರೂ ನನ್ನ ಅಮ್ಮ ಬಿ.ಎಸ್ಸಿ. ಮಾಡಲು ಕಳಿಸಲಿಲ್ಲ. ನಾನು ಇಷ್ಟಪಟ್ಟಿದ್ದು ಏನೂ ಸಿಗಲ್ಲ ಅಂದುಕೊಂಡು ಸುಮ್ಮನಾದೆ. ಅಷ್ಟರಲ್ಲಿ ನರ್ಸಿಂಗ್ ತರಬೇತಿಗೆ ಕರೆ ಮಾಡಿದರು. ನಾನು ಪ್ರೀತಿಸಿದವನನ್ನು ಮದುವೆಯಾಗಬೇಕಾದರೆ ಕೆಲಸಕ್ಕೆ ಸೇರಿಕೊಳ್ಳಬೇಕು ಅಂತ ತೀರ್ಮಾನಿಸಿದೆ. ಯಾಕೆ ಅಂದ್ರೆ ಅವನು ವಿದ್ಯಾವಂತನಲ್ಲ. ಡ್ರೈವಿಂಗ್ ಮಾತ್ರ ಗೊತ್ತು. ನಾವಿಬ್ಬರೂ ಯೋಚನೆ ಮಾಡಿ ನಿರ್ಧಾರಕ್ಕೆ ಬಂದೆವು. ಅವನ ಸಹಾಯ ಪಡೆದು ನರ್ಸಿಂಗ್ ತರಬೇತಿಗೆ ಸೇರಿಕೊಂಡೆ. ಆದರೆ ಅವನದು ಬೇರೆ ಜಾತಿ. ವಿಷಯ ಗೊತ್ತಾಗಿರುವುದರಿಂದ ನಮ್ಮ ಮನೆಯಲ್ಲಿ ಒಂದೇ ಬೈಗುಳ. ಏನು ಮಾಡಲಿ ರವೀ, ನಾನು ಅವನಿಗೆ ನನ್ನ ಸರ್ವಸ್ವವನ್ನೂ ಕೊಟ್ಟಿದ್ದೇನೆ. ಅವನ ಹೊರತಾಗಿ ಬೇರೆ ಯಾರನ್ನಾದರೂ ಮದುವೆಯಾದರೆ ಜೀವನ ಪರ್ಯಂತ guilt ಕಾಡುತ್ತದೆ. ಅವನು ನಿನ್ನನ್ನೇ ಮದುವೆಯಾಗ್ತೇನೆ, ಮೋಸ ಮಾಡಲ್ಲ ಅಂತ ಮಾತು ಕೊಟ್ಟಿದ್ದಾನೆ. ಹಾಗೇ ನಡ್ಕೋತಿದ್ದಾನೆ ಕೂಡ. ನನಗೆ ಅವನ ಮೇಲೆ ನಂಬಿಕೆಯಿದೆ: ನನ್ನ ಮೇಲೇ ನನಗೆ ನಂಬಿಕೆಯಿಲ್ಲ.

    ಈಗ ಬಂದಿರುವ ಸಮಸ್ಯೆ ಅಂದ್ರೆ ನಮ್ಮಿಬ್ಬರಲ್ಲಿ ಒಂದೆರಡು ದಿನಗಳಿಂದ ತಪ್ಪು ತಿಳುವಳಿಕೆ ಶುರುವಾಗಿದೆ. ನನ್ನ ಸ್ನೇಹಿತರನ್ನು ಕಂಡರೆ ಅವನಿಗೆ ಆಗುವುದಿಲ್ಲ. ಅವನಿಗೋಸ್ಕರ ಫ್ರೆಂಡ್ಸ್ಗೆ ಮೆಸೇಜ್ ಮಾಡುವುದನ್ನೂ ಬಿಟ್ಟೆ. ಆದರೂ ನನ್ನಲ್ಲಿ ತಪ್ಪು ಹುಡುಕುತ್ತಾನೆ. ನನ್ನಲ್ಲಿನ ತಪ್ಪುಗಳನ್ನು ತಿದ್ದುತ್ತಾನೆ. ಕೆಲವೊಮ್ಮೆ ತುಂಬಾ ಒರಟಾಗಿ ಮಾತನಾಡುತ್ತಾನೆ. ಜೀವನದಲ್ಲಿ ಯಾರಾದರೊಬ್ಬರು ಸೋಲಬೇಕು ಅಂತ ಅರ್ಥವಾಗಿರುವುದರಿಂದ ನಾನೇ ಸೋಲುತ್ತೇನೆ. ಆದರೂ ಅವನು ಅರ್ಥ ಮಾಡಿಕೊಳ್ಳೋದು ಕಡಿಮೇನೇ. ನಾನು ಅವನನ್ನ ತುಂಬ ಪ್ರೀತಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ಗೌರವಿಸುತ್ತೇನೆ. ಇನ್ನೊಂದೆರಡು ತಿಂಗಳಲ್ಲಿ ಮದುವೆಯಾಗಬೇಕು ಅಂದುಕೊಂಡಿದ್ದೇನೆ. ಮನೆಯವರ ವಿರೋಧ ಕಟ್ಟಿಕೊಂಡು ಹೊರಗೆ ಹೊರಟಿದ್ದೇವೆ. ನಾಳೆ ನಾವು ಚೆನ್ನಾಗಿ ಆದರೆ, ಮನೆಯವರೂ ನಮ್ಮನ್ನು ಸ್ವೀಕರಿಸುತ್ತಾರೆ ಎಂಬ ವಿಶ್ವಾಸ. ನಾನು ಮಾಡ್ತಿರೋದು ತಪ್ಪೇ ಆದರೂ, ಮುಂದೆ ಕಾದಿರುವ ದೊಡ್ಡ ಅಪಘಾತದ ಬಗ್ಗೆ ನನಗೆ ಅರಿವಿದೆ. ಬೇರೆಯವರನ್ನು ಮದುವೆಯಾದರೆ ನನಗೆ ನಾನೇ ಮೋಸ ಮಾಡಿಕೊಂಡ ಹಾಗೆ ಆಗುತ್ತದೆ. ಆಗ ಮೂರು ಜನಾನೂ ನೆಮ್ಮದಿಯಾಗಿ ಇರಕ್ಕಾಗಲ್ಲ. ನಿಮ್ಮನ್ನೊಬ್ಬ ಫ್ರೆಂಡ್ ಅಂತ ತಿಳಿದುಕೊಂಡು ಇದನ್ನೆಲ್ಲ ಹೇಳ್ತಿದೀನಿ. ನನ್ನ ತಪ್ಪು ಏನಾದರೂ ಇದ್ರೆ ಹೇಳು: ತಿಳಿದು ತಿದ್ದಿಕೊಳ್ಳುತ್ತೇನೆ. ಇನ್ನೊಂದು ವಿಷ್ಯ. ನೀನು ನಮ್ಮ ಮದುವೆಗೆ ಬಂದು ಆಶೀರ್ವದಿಸಬೇಕು, ಆಯ್ತಾ?

    -ಎಂ

    ಅಕ್ಕರೆಯ ಗೆಳತಿ ಎಂ,

    ನನ್ನನ್ನು ಆತ್ಮೀಯನೆಂದು ಭಾವಿಸಿದ್ದಕ್ಕೆ ಋಣಿ. ವಯಸ್ಸಿನ ಲೆಕ್ಕಾಚಾರವೇಕೆ? ನಿನ್ನ ಬದುಕಿನ ಘಟನೆಗಳ ಬಗ್ಗೆ ಯೋಚಿಸುತ್ತ ಕುಳಿತಿದ್ದೇನೆ. ತುಂಬ ಭಾವುಕ ಹುಡುಗಿ ಅಂತ ಕಾಣ್ತೀಯ. ಎಸೆಸೆಲ್ಸಿ ಎಂಬುದು ಆಡುವ-ಓದುವ ವಯಸ್ಸು. ಪಕ್ಕದ ಮನೆಯ ಲಕ್ಷಣವಾದ ಕಪ್ಪನೆಯ ಹುಡುಗ ಇಷ್ಟವಾಗಿದ್ದ ಅನ್ನುವುದಿದೆಯಲ್ಲ? ಅದು ಪ್ರೇಮವಲ್ಲ. Small little crush. ಪಿಯುಸಿಗೆ ಸೇರುತ್ತಿದ್ದಂತೆಯೇ, ಹೊಸಮನೆಗೆ ಹೋಗುತ್ತಿದ್ದಂತೆಯೇ ಈ crush ಬಲಹೀನಗೊಂಡು ಅದು ಮನಸ್ಸಿನಿಂದ ಕಣ್ಮರೆಯಾಗಿಬಿಡುತ್ತವೆ. ನಿನ್ನ ವಿಷಯದಲ್ಲಿ ಅದೇ ಆಯ್ತು. ಆದರೆ ಅವಸರದ ಹುಡುಗಿ: ಪಿಯು ಮುಗಿಯುತ್ತಿದ್ದ ಹಾಗೇ ಇನ್ನೊಂದು ಅಫೇರ್‍ನ ತೆಕ್ಕೆಗೆ ಬಿದ್ದೆ. ನಾನು ಪ್ರೇಮದಲ್ಲಿ ನೊಂದ, ನಿರಾಸೆಗೊಂಡ, ಪೆಟ್ಟು ತಿಂದ ಹುಡುಗ-ಹುಡುಗಿಯರಿಗೆ ಹೇಳುವುದೇ ಅದು. ತಕ್ಷಣ ಇನ್ನೊಂದು ಹೆಗಲಿನ ಆಸರೆ ಹುಡುಕಬೇಡಿ. ಕೆಲವು ವರ್ಷ ಮೌನವಾಗಿರಿ. ಏನನ್ನಾದರೂ ಸಾಧಿಸಿ. ಉಹುಂ, ವಯಸ್ಸು ಅದನ್ನೆಲ್ಲ ಕೇಳುವುದಿಲ್ಲ. ನೀನು ಮತ್ತೊಂದು ಮೈತ್ರಿಗಾಗಿ ಕೈ ಚಾಚಿದೆ. `ಹೋಗೀ ಹೋಗಿ, ಡ್ರೈವರ್‍ನ ಪ್ರೀತಿಸಿದೆಯಾ' ಅಂತ ನಾನು ಆಕ್ಷೇಪಿಸುವುದಿಲ್ಲ. ಡಿಗ್ರಿ, ಸರ್ಟಿಫಿಕೇಟು, ಮಾಕ್ರ್ಸ್ ಕಾರ್ಡುಗಳನ್ನು ನೋಡಿ ಯಾರನ್ನೂ ಪ್ರೀತಿಸಲಾಗದು. ಆದರೆ ಒಮ್ಮೆ ಪ್ರೀತಿಸಿದ ಮೇಲೆ ಆ ವ್ಯಕ್ತಿಯನ್ನು educate ಮಾಡಿಕೊಳ್ಳುವ ಕಲೆ ಮತ್ತು ಜವಾಬ್ದಾರಿ ನಮ್ಮ ಮೇಲಿರುತ್ತದೆ. ನಾನು ಕೈ ಹಿಡಿದಾಗ ನನ್ನ ಹೆಂಡತಿ ಉದ್ದಾಮ ಸಾಹಿತಿಯೇನಾಗಿರಲಿಲ್ಲ. ಆದರೆ ನನ್ನ ರುಚಿ, ಅಭಿರುಚಿ, ಬಯಕೆ, ಓದು, ಜೀವನದ ವೇಗ, ಬದುಕುವ ಪರಿ, ಅದರಲ್ಲಿನ ವಿಶೇಷತೆ-ಎಲ್ಲದಕ್ಕೂ ಅವಳನ್ನು ಒಗ್ಗಿಸಿಕೊಂಡೆ. ಪ್ರೇಮದಲ್ಲಿ ಪರಸ್ಪರರು elevate ಆಗಬೇಕಾದ್ದು ಹೀಗೇ ಅಲ್ಲವಾ ಫ್ರೆಂಡ್?

    ಪ್ರೇಮದಲ್ಲಿ ನಾವು `ಬೀಳ'ಬಾರದು. ಪ್ರೇಮ ನಮ್ಮನ್ನು ಮೇಲಕ್ಕೆತ್ತಬೇಕು. ಇದೆಲ್ಲದರ ಮಧ್ಯೆ ನಾನು ಕೇಳುವ ಪ್ರಶ್ನೆಯೆಂದರೆ, ಪ್ರೀತಿಸಿದ ಮಾತ್ರಕ್ಕೆ, ನಂಬಿಕೆ ಹುಟ್ಟಿದ ಮಾತ್ರಕ್ಕೆ ಸಮಸ್ತವನ್ನೂ ಸಮರ್ಪಿಸಿಕೊಂಡು ಬಿಡುವ ಆತುರವೇಕೆ? ನಾನೇ ಎಲ್ಲೋ ಬರೆದ ಒಂದು ಮಾತಿದೆ, ಹೇಳ್ತೀನಿ ಕೇಳು: `ಒಂದು ಗರ್ಭಪಾತದ ನಂತರ ಹೆಣ್ಣು ಬದಲಾಗುತ್ತಾಳೆ. ಗಂಡಸು ಬದಲಾಗಲಿಕ್ಕೆ ಒಂದು ಮೈಥುನ ಸಾಕು'.

    ಇದೆಲ್ಲದರ ನಡುವೆ ನೀನು ನರ್ಸ್ ಟ್ರೈನಿಂಗ್ ಮುಗಿಸಿ ಸರ್ಕಾರಿ ನೌಕರಿ ಪಡೆದುದಕ್ಕೆ ನಿನಗೆ ಅಭಿನಂದನೆಗಳು. ಇನ್ನು ಮುಂದೆ ಜೀವನವನ್ನು ಇಂಟೆಲಿಜೆಂಟ್ ಆಗಿ ರೂಪಿಸಿಕೊಳ್ಳುತ್ತ ಹೋಗು. ಈಗ ಪ್ರೀತಿಸಿರುವವರನ್ನೇ ಮದುವೆಯಾಗು. ಮನೆಯವರು ಜಾತಿಯ ಅಂತರ ಮರೆತು ಇಂದಲ್ಲ ನಾಳೆ ಸರಿ ಹೋಗುತ್ತಾರೆ. ಅದಕ್ಕೆ ಮುನ್ನ ನಿನ್ನ ಕೈ ಹಿಡಿಯಲಿರುವಾತನ ನಂಬಿಕೆ ಗಳಿಸಿಕೋ. ಚಿಕ್ಕ ಅಪನಂಬಿಕೆಯೂ ನುಸುಳದಂತೆ ನೋಡಿಕೋ. ಕೆಲವು ದಿನ ಗೆಳೆಯರು-ಗೆಳತಿಯರು ದೂರವೇ ಇರಲಿ. ಆತನ ಮನೆಯವರನ್ನು ಗೌರವಿಸಿ ಮಾತನಾಡು. ಆರಂಭದ ದಿನಗಳ ಸಿಟ್ಟು ಸಿಡಿಮಿಡಿ ಕ್ರಮೇಣ ತಣ್ಣಗಾಗುತ್ತದೆ. ಜೊತೆಗೆ ನಿನ್ನ ಅಭದ್ರತೆ, ಅಪಘಾತವಾದೀತೆಂಬ ಭಯ, ಇಷ್ಟಪಟ್ಟದ್ದು ಕಳೆದು ಹೋದೀತೆಂಬ ಹೆದರಿಕೆ-ಇವು ಕೂಡ ತಂತಾನೆ ವಾಸಿಯಾಗುತ್ತವೆ. ನೆಮ್ಮದಿಯಾಗಿ ಮದುವೆಯಾಗು. ಯಾರ ಬೆಂಬಲವೂ ಇಲ್ಲದೆ ಮದುವೆಯಾಗುವ ಎಲ್ಲ ಹುಡುಗ-ಹುಡುಗಿಯರಿಗೂ ನನ್ನ ಬೆಂಬಲವಿರುತ್ತದೆ.

    -ಆರ್.ಬಿ.

    3. ನನ್ನ ಲೈಫ್‍ಸ್ಟೈಲ್ ಹೇಗಿರಬೇಕು?

    ನಮಸ್ತೆ ಅಂಕಲ್.

    ತುಂಬ ಒಳ್ಳೆಯ ವಿದ್ಯಾಭ್ಯಾಸ ಮಾಡುವ ಎಲ್ಲ ಅನುಕೂಲಗಳೂ ಇರುವ ಒಂದು ಪುಟ್ಟ ಊರಿನಲ್ಲಿ ಮೊದಲನೇ ಪಿಯು ಓದುತ್ತಿದ್ದೇನೆ. ಎಸೆಸೆಲ್ಸಿಯಲ್ಲಿ ನನಗೆ 93% ಅಂಕಗಳು ಬಂದವು. ನಾನು ಎಲ್ಲರೊಂದಿಗೂ ಬೆರೆಯುವ ಮನಸ್ಸಿನವಳು. ಒಳ್ಳೆಯ ಚರ್ಚಾಪಟು. ನಾಟಕಗಳಲ್ಲೂ ಅಭಿನಯಿಸುತ್ತೇನೆ. ಮನೆಯಲ್ಲಿ ಅಮ್ಮ ಮತ್ತು ತಾತ ಇದ್ದಾರೆ. ಅಮ್ಮನಿಗೆ ನೌಕರಿಯಿದೆ. ಜೀವನದಲ್ಲಿ ಎಲ್ಲ ಸಂತೋಷಗಳೂ ಇರುವ ನಾನು, ನಾನಾಗಿಯೇ ಕೆಲವು ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದ್ದೇನೆ. ಇಷ್ಟು ಚಿಕ್ಕ ವಯಸ್ಸಿಗೇನೇ ನನಗೆ ನಾಲ್ಕು love failureಗಳಾಗಿವೆ. ಒಬ್ಬ ಮಾತ್ರ ತಾನಾಗಿ ಬಂದು ನನಗೆ ಪ್ರಪೋಸ್ ಮಾಡಿದ್ದ. ಉಳಿದ ಮೂರು ಜನರನ್ನ ನಾನಾಗೇ contact ಮಾಡಿದ್ದೆ. ಮೊದಲನೆಯವನು ನನ್ನ ಗೆಳೆಯ `M'. ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವ ಸ್ನೇಹಿತರು. ಇನ್ನೊಬ್ಬ ನನ್ನ ಸೀನಿಯರ್ `Y' ಅಂತ ಇಟ್ಟುಕೊಳ್ಳಿ. ಅವನನ್ನು ನಾನೇ ಸಮೀಪಿಸಿದ್ದೆ: ಅಂದ್ರೆ, ಮೊದಲನೆಯ ಪ್ರೀತಿ ಬ್ರೇಕ್ ಅಪ್ ಆದಾಗ. ಆದರೆ `Y' ನನ್ನಿಂದ ಬೇರೇನನ್ನೋ ನಿರೀಕ್ಷಿಸಿದ್ದ. ಅದಕ್ಕೆ ನಾನು ಒಪ್ಪಲಿಲ್ಲ. ಒಂದು ತಿಂಗಳೊಳಗಾಗಿ ದೂರವಾದೆವು. ಮುಂದೆ ನನಗೆ `L' ಪರಿಚಯವಾದ. ಅವನನ್ನು ನಾನು ತುಂಬ ಹಚ್ಚಿಕೊಂಡಿದ್ದೆ. ಆದರೆ ಅವನು ಊರಲೆಲ್ಲ ನಾನು ಪ್ರೀತಿಸುತ್ತೇನೆ ಅಂತ ಹೇಳಿಕೊಂಡು ಓಡಾಡಿದ. ಆ ವಿಷಯ ತಿಳಿದು ನಾನೇ ಅವನಿಂದ ದೂರವಾದೆ. ಅಷ್ಟರಲ್ಲಿ ಪರೀಕ್ಷೆಗಳು ಹತ್ತಿರ ಬಂದದ್ದರಿಂದ `ಇದೆಲ್ಲ ಬೇಡ' ಎಂದು ತೀರ್ಮಾನಿಸಿ ನಾನು ಓದತೊಡಗಿದೆ. ಇನ್ನು ಮೇಲೆ ನನ್ನ ಜೀವನದಲ್ಲಿ ಯಾರಿಗೂ ಎಂಟ್ರಿ ಕೊಡಬಾರದು ಅಂತ ನಿರ್ಧರಿಸಿದ್ದೆ. ಆದರೆ ಪರೀಕ್ಷೆ ಮುಗಿದ ಕೆಲವೇ ದಿನದೊಳಗಾಗಿ ನನ್ನ ಸೀನಿಯರ್ ಆದ `J' ನನ್ನನ್ನು ಸೆಳೆದ. ಅವನು ಚೂರೂ handsome ಆಗಿರಲಿಲ್ಲ. ಆದರೂ ಇಷ್ಟವಾದ. ಅವನನ್ನು ನಾನು ಫೋನ್ ಮೂಲಕ ಸಂಪರ್ಕಿಸಿದೆ. ಒಂದು ವಾರದ ಮಟ್ಟಿಗೆ ಎಲ್ಲವೂ ಚೆನ್ನಾಗಿತ್ತು. ಗಂಟೆಗಟ್ಟಲೆ ಮಾತನಾಡಿದೆವು. ಆದರೆ `J' ಕೂಡ ನನ್ನಿಂದ `ಅದನ್ನ' ಬಯಸಿದ. ನಾನು ಒಪ್ಪದೆ ಇದ್ದುದಕ್ಕೆ ಅವನು ನನ್ನನ್ನು avoid ಮಾಡಿದ. ಆದರೆ ನಾನು ಅವನಿಗೆ ಹತ್ತಿರವಾಗುವುದಕ್ಕೆ ಪ್ರಯತ್ನಿಸುತ್ತಲೇ ಇದ್ದೆ. ಆದರೆ ತೀರ ಇತ್ತೀಚೆಗೆ ಅವನು, ನೀನು ನನ್ನ ಪ್ರೀತಿಯ ತಂಗಿ. ನಾನು ಲವ್ ಮಾಡ್ತಿರೋದು ನಿನ್ನ ಗೆಳತಿಯನ್ನ. ನಂಗೆ help ಮಾಡ್ತೀಯಾ?'' ಅಂತ ಮೆಸೇಜು ಕೊಟ್ಟ. ಹೇಗಾಗಬೇಕು ಅಂಕಲ್ ನನಗೆ! ಅವನು ಪೊರ್ಕಿ ಅಂತ ಗೊತ್ತಿದ್ದೂ ಇಷ್ಟಪಟ್ಟಿದ್ದು ನನ್ನ ತಪ್ಪು. ಆದರೆ ಈ ವಿಷಯ ಆಗಲೇ ಕಾಲೇಜಿನಲ್ಲಿ ಗೊತ್ತಾಗಿದೆ. ಈ ಮಧ್ಯೆ ನನ್ನ ಗೆಳೆಯ `M' ನನಗೆ ಫೋನು ಮಾಡಿ, ನಿನ್ನ ಆಟಗಳನ್ನೆಲ್ಲ ನಿಲ್ಲಿಸು. ಎಷ್ಟು ಜನರ life ಜೊತೆಗೆ ಆಟ ಆಡ್ತೀಯ? ನಿನ್ನ ಜೊತೆ ಮಾತಾಡೋಕೂ ನಂಗೆ ಇಷ್ಟವಿಲ್ಲ'' ಅಂತ ಹೇಳಿ ಫೋನ್ ಇಟ್ಟ. ಆರಾಮಾಗಿದ್ದ ಜೀವನದಲ್ಲಿ ನಾನೇ ಸಮಸ್ಯೆಗಳ ಮಹಾಪೂರವನ್ನು ತಂದುಕೊಂಡೆ.

    ನಿಂಗೆ ಸದಾ ಜೊತೆಗೆ ಒಬ್ಬ ಯಾಕೆ ಬೇಕು ಅಂತ ನೀವು ಕೇಳಬಹುದು. ಅಂಕಲ್, ಈ ನಾಲ್ಕೂ ಜನ ಹುಡುಗರಿಂದ ನಾನು ನಿರೀಕ್ಷಿಸಿದ್ದು ಅಪ್ಪನ ಪ್ರೀತಿಯನ್ನ. ಅಪ್ಪ ತೀರಿ ಹೋಗಿದ್ದಾರೆ. ಅವರನ್ನು ನಾನು ತುಂಬ ಪ್ರೀತಿಸುತ್ತೇನೆ. ಮನೆಗೆ ಬಂದ ಕೂಡಲೆ ನನಗೆ ತುಂಬ ಒಬ್ಬಂಟಿ ಅನ್ನಿಸುತ್ತದೆ. ಇವತ್ತೇನೇನಾಯ್ತು ಅಂತ ಯಾರ ಬಳಿಯಾದರೂ ಹೇಳಿಕೊಳ್ಳೋಣ ಅನ್ನಿಸುತ್ತೆ. ನನಗೆ ಹುಡುಗರ ಮನಸ್ತತ್ವ ಅರ್ಥವಾಗುವುದಿಲ್ಲ. ಪುರುಷರ ಒಡನಾಟ ನನಗಿಲ್ಲ. ನನಗೆ ಅವರಿಂದ ತಂದೆಯ ಪ್ರೀತಿ ಬೇಕು. ಅವರಿಗೆ ಸಿನೆಮಾ, ಸುತ್ತಾಟ, ಡೇಟಿಂಗ್-ಈ ಥರದ್ದು ಬೇಕು. ಅದಕ್ಕೆ ನಾನು ಬಿಲ್‍ಕುಲ್ ಒಪ್ಪಲಿಲ್ಲವಾದ್ದರಿಂದ ಎಲ್ಲರೂ ದೂರ ನಡೆದರು. ಇದೆಲ್ಲ ಗೊತ್ತಿಲ್ಲದ ಕೆಲವರು ನನ್ನ

    Enjoying the preview?
    Page 1 of 1