Discover millions of ebooks, audiobooks, and so much more with a free trial

Only $11.99/month after trial. Cancel anytime.

Jeevana Maadhurya
Jeevana Maadhurya
Jeevana Maadhurya
Ebook425 pages4 hours

Jeevana Maadhurya

Rating: 4.5 out of 5 stars

4.5/5

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN9789385545641
Jeevana Maadhurya

Read more from Yandamoori Veerendranath

Related to Jeevana Maadhurya

Related ebooks

Reviews for Jeevana Maadhurya

Rating: 4.5 out of 5 stars
4.5/5

2 ratings0 reviews

What did you think?

Tap to rate

Review must be at least 10 words

    Book preview

    Jeevana Maadhurya - Yandamoori Veerendranath

    http://www.pustaka.co.in

    ಜೀವನ ಮಾಧುರ್ಯ

    Jeevana Madurya

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಧೃತಿ ಬಸ್ಸಿಳಿದು ಸರಸರನೆ ನಡೆತಲಾರಂಭಿಸಿದಳು. ಅವಳ ಮುಖದಲ್ಲಿ ಬೇಗನೆ ಹೋಗಬೇಕೆಂಬ ಆತುರತೆ ಸ್ಪಷ್ಟವಾಗಿ ಕಾಣುತ್ತಿತ್ತು. ರಸ್ತೆ ದಾಟುವ ಮೊದಲು ಒಂದು ಕ್ಷಣ ನಿಂತು ಅತ್ತಿತ್ತ ನೋಡಿದಳು. ಏನೂ ಹತ್ತಿರದಲ್ಲಿ ಇಲ್ಲವೆಂದು ನಿರ್ಧರಿಸಿಕೊಂಡು ಹೆಜ್ಜೆಯಿಡುತ್ತಿದ್ದಂತೆ ನಡೆದುಹೋಗಿತ್ತಾ ಘಟನೆ!

    ಒಬ್ಬ ಹತ್ತು ವರ್ಷದ ಹುಡುಗ ಪೇಪರು ಹಿಡಿದುಕೊಂಡು ರಸ್ತೆಗೆ ಅಡ್ಡವಾಗಿ ಓಡುತ್ತಾ, ಅತ್ತ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರನ್ನು ನೋಡಲ್ಲಿಲ್ಲ. ಕಾರು ಬ್ರೇಕ್ ಹಾಕಿ ಕ್ರೀಚ್ ಎನ್ನುತ್ತಾ ನಿಂತು ಹೊಗಿತ್ತು. ಆದರೆ ಆಗಲೇ ತಡವಾದ ಹಾಗೆ ಹುಡುಗ ಕೆಳಕ್ಕೆ ಬಿದ್ದು, ಏಳಲಾರೆನೆಂಬಂತೆ ಒದ್ದಾಡುತ್ತಿದ್ದ. ಕಾಲು ಹಿಡಿದುಕೊಂಡು ವಿಲವಿಲ ಎನ್ನುತ್ತಿದ್ದ.

    ಧೃತಿ ಒಂದೇ ಕ್ಷಣಕ್ಕೆ ಅವನನ್ನು ಸಮೀಪಿಸಿದಳು. ಹುಡುಗನನ್ನು ನೋಡಿದೊಡನೆಯೇ ಪರಿಸ್ಥಿತಿ ಅರ್ಥವಾಗಿತ್ತು. ಏಟುಗಳು ಜೋರಗಿಯೇ ಬಿದ್ದಿದ್ದವು. ಹಣೆಯಿಂದ ರಕ್ತ ಕೂಡಾ ಸುರಿಯುತ್ತಿತ್ತು. ಆಗಲೇ ತುಂಬಾ ಜನ ಸೇರಿದ್ದರು. ಹುಡುಗನನ್ನು ಎತ್ತಿಕೊಳ್ಳುತ್ತಾ, ಕಾರಿನಲ್ಲಿದ್ದ ವ್ಯಕ್ತಿಯನ್ನು ಬೈಯ್ಯುತ್ತಿದ್ದರು.

    ಧೃತಿ ಕಾರಿನ ಹತ್ತಿರ ಹೋಗಿ ಒಳಕ್ಕೆ ನೋಡುತ್ತಾ ಹೇಳಿದಳು, ನಿಮ್ಮ ತಪ್ಪಿನಿಂದಾಗಿ ಹುಡುಗನಿಗೆ ಆಕ್ಸಿಡೆಂಟ್ ಆಗಿದೆ. ಬೇಗನೇ ಬಾಗಿಲು ತೆಗೆದು ಅವನನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆಕೊಂಡು ನಡೀರಿ ಎಂದಳು.

    ಡ್ರೈವರ್ ಮುಂದಿನ ಸೀಟಿನಿಂದ ಗಾಜನ್ನು ಕೆಳಗಿಳಿಸುತ್ತಾ ಹೇಳಿದ, ಆ ಹುಡುಗ ಸಡನ್ ಆಗಿ ಬಂದು ಬಿಟ್ಟನಮ್ಮಾ. ನಾನು ಬ್ರೇಕ್ ಹಾಕಿದೆನಲ್ಲಾ?

    ನಡೆದಿದ್ದರ ಬಗ್ಗೆ ತರ್ಕ ಅನಗತ್ಯ, ಬೇಗನೆ ನಡೆಯುವಂತದ್ದನ್ನು ಮಾತ್ರ ನೊಡಿ ಧೃತಿ ಆತುರದಿಂದ ಹೇಳಿದಳು.

    ಧೃತಿ ಇನ್ನೂ ಏನೋ ಹೇಳಲು ಹೋಗುತ್ತಿದ್ದಂತೆ, ಹಿಂದಿನಿಂದ, ಡ್ರೈವರ್! ಈ ನೂರು ರೂಪಾಯಿ ತೆಗೆದುಕೊಂಡು ಹುಡುಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೆಂದು ಹೇಳು. ಹ್ಞೂಂ, ಬೇಗ ಹೊರಡು ನಮಗೆ ತಡವಾಗುತ್ತಿದೆ" ಎನ್ನುವ ಪುರುಷಧ್ವನಿ ಕೇಳಿಸಿತ್ತು.

    ಧೃತಿ ಹಿಂದಿನ ಕಿಡಕಿಯ ಬಳಿಗೆ ನುಗ್ಗಿಬಂದು, "ಈ ನೂರು ರೂಪಯಿ ಹಿಡಿದುಕೊಂಡು, ಆಟೋಗಾಗಿ ನಿರೀಕ್ಷೆ ಮಾಡಿ, ಆದರಲ್ಲಿ ಹತ್ತಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅಪಾಯ ಉಂಟಾದರೆ ಆದರ ಜವಾಬ್ದಾರಿ ನಿಮ್ಮದೇ, ಈ ಕಾರಲ್ಲೇ ಅವನನ್ನು ಕರೆದುಕೊಂಡು ಹೋಗಿ ಎಂದಳು.

    ಆತನ ಧ್ವನಿ ಸ್ವಲ್ಪ ಕಟುವಾಗಿ, ಅಸಹನೆ ತುಂಬಿ ಕೇಳಿಸಿತ್ತು, ನನಗೆ ಪ್ರತಿ ನಿಮಿಷ ತುಂಬಾ ಬೆಲೆ ಬಾಳುವಂಥದ್ದು. ಪರಿಸ್ಥಿತಿ ಅಂತಹ ಅಪಾಯಕಾರಿ ಎಂದು ಕೂಡಾ ಅನ್ನುಸುತ್ತಿಲ್ಲ. ಅದಕ್ಕೆ ಅದ್ಯಾವುದೋ ಕೆಲಸವನ್ನು ನೀವೇ ಮಾಡಿ, ಬೇಕಾದರೆ ಇನ್ನೂ ಐವತ್ತು ತೆಗೆದುಕೊಳ್ಳಿ.

    ಧೃತಿ ಅವೇಶದಿಂದ, ನೀವು ಯಾವ ಕೆಲಸದ ಮೇಲೆ ಹೋಗುತ್ತಿದ್ದೀರೋ ಅದಕ್ಕೆ ತಡವಾದರೆ ಏನು ನಷ್ಟವೋ ನನಗೆ ತಿಳಿಯದು. ಆದರೆ ನಾನು ಮಾತ್ರ ತುಂಬಾ ಅಗತ್ಯವಾದ ಕೆಲಸದ ಮೇಲೆ ಹೋಗಿತ್ತಿದ್ದೇನೆ. ನನಗೆ ತಡವಾದರೆ, ನನಗೂ ನನ್ನ ಸಂಸಾರಕ್ಕೂ ಜೀವನಾಧಾರವಾದ ಉದ್ಯೋಗವನ್ನು ನಾನು ಕಳೆದುಕೊಳ್ಳಬೇಕಾಗಬಹುದು. ಇಲ್ಲಿ ನಡೆಯುತ್ತಿರುವ ಈ ವ್ಯರ್ಥ ಪ್ರಸಂಗದಿಂದ ನಾನು ನಷ್ಟಹೊಂದುತ್ತಿರುವುದೇ ಹೆಚ್ಚು.  ಪರವಾಗಿಲ್ಲ, ನಾನೂ ನನ್ನ ಸಂಸಾರದ ಸದಸ್ಯರೂ ಊಟವಿಲ್ಲದೇ ಒಣಗಿದರೂ ಒಂದು ಪ್ರಾಣ ಉಳಿದರೆ ಅಷ್ಟೇ ಸಾಕು. ನೀವು ಇನ್ನೂ ಇನ್ನೂರು ಕೊಟ್ಟರೂ ಸರಿಯೇ, ನಾನು ಒಪ್ಪಲಾರೆ, ನೀವೇ ಈ ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ನಿಮ್ಮ ಬೆಲೆಬಾಳುವ ಸಮಯ ಒಂದು ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ನಿಮ್ಮ ಬೆಲೆಬಾಳುವ ಸಮಯ ಒಂದು ಪ್ರಾಣಕ್ಕಿಂತ ಹೆಚ್ಚಲ್ಲ. ಕೇವಲ ಹಣಬಿಸಾಡಿ ಇತರರ ಬಾಯಿ ಮುಚ್ಚುವ ಪ್ರಯತ್ನಗಳನ್ನು ನಿಲ್ಲಿಸಿದರೆ ಒಳ್ಳೆಯದು ಎಂದಳು.

    ಆಗಲೇ ಅವಳ ಹಿಂದೆ ತುಂಬಾ ಜನ ನಿಂತು, ಹೌದು! ಇಲ್ಲದಿದ್ದರೆ ನಾವು ಸುಮ್ಮನಿರೊಲ್ಲ. ಕಾರಿನ ಗಾಜುಗಳನ್ನು ಒಡೆಯುತ್ತೇವೆ, ಸೀಳುತ್ತೇವೆ ಎಂದು ಇಷ್ಟಬಂದ ಹಾಗೆ ಕಿರುಚತೊಡಗಿದರು. ಅವರ ಕಣ್ಗಳಲ್ಲಿ ಹುಡುಗನ ಬಗೆಗಿನ ಆತಂಕಕ್ಕಿಂತ, ಕಾರಿನಲ್ಲಿನ ವ್ಯಕ್ತಿಯನ್ನು ಹಿಂಸಿಸಬೇಕೆನ್ನುವ ತವಕ ಹೆಚ್ಚಾಗಿ ಕಂಡಿತ್ತು.

    ಅಷ್ಟರಲ್ಲಿ ಕಾರು ಡೋರ್ ತೆಗೆದುಕೊಂಡು ಆ ವ್ಯಕ್ತಿ ಕೆಳಕ್ಕಿಳಿದು, ಧೃತಿಯನ್ನು ಅಪಾದಮಸ್ತಕ ವೀಕ್ಷಿಸಿದರು.

    ಅವಳು ಕೂಡಾ ಆತನನ್ನು ನೇರಾವಾಗಿ ನೋಡಿದಳು. ವಯಸ್ಸು ಐವತ್ತಕ್ಕಿಂತ ಹೆಚ್ಚೇ ಆಗಿತ್ತು. ಬಕ್ಕತಲೆ, ಗೋಲ್ಡಪ್ರೇಮ್ ಕನ್ನಡಕ, ಭಾರೀ ದೇಹಕಾಯ, ನೋಡಿದೊಡನೆ ಗೌರವ ಉಂಟಾಗುವಂತಹ ವ್ಯಕ್ತಿತ್ವ.

    ಡ್ರೈವರ್! ನೀನು ಆ ಕೆಲಸ ನೋಡು. ನಾನು ಆಟೋದಲ್ಲಿ ಹೊಗುತ್ತೇನೆ ಎನ್ನುತ್ತಾ ಡ್ರೈವರ್‍ಗೆ ಸ್ವಲ್ಪ ಹಣ ನೀಡಿ ಆತ ಆಟೋ ಸ್ಟ್ಯಾಂಡ್‍ನತ್ತ ವೇಗವಾಗಿ ಹೊರಟುಹೋದರು.

    ಆತ ಹೋಗುತ್ತಿದ್ದರೆ ಯಾರು ಬಾಯೆತ್ತಿ ಏನೂ ಹೇಳಲಾರದೇ ಹೋದರು. ಸ್ವಲ್ಪ ಜನರ ಮುಖಗಳಲ್ಲಿ ಸಮಸ್ಯೆ ಇಷ್ಟು ಹಗುರವಾಗಿ ಪರಿಹಾರವಾಗಿದ್ದಕ್ಕೆ ಕೊನೆಯಿಲ್ಲದ ನಿರಾಸೆ ಕಂಡುಬಂದಿತ್ತು.

    ಧೃತಿ, ಡ್ರೈವರ್ ಸೇರಿ ಹುಡುಗನನ್ನು ಕಾರಿಗೆ ಹತ್ತಿಸಿಕೊಂಡರು, ಅಷ್ಟರಲ್ಲಿ ಆ ಹುಡುಗನ ತಾಯಿ ಅಲ್ಲಿಗೆ ಅಳುತ್ತಾ ಬಂದಿದ್ದರಿಂದ, ಧೃತಿ ಅಕೆಯನ್ನು ಕಾರಿನಲ್ಲಿ ಹತ್ತಿಸಿ, ಡ್ರೈವರ್‍ಗೆ ಯಾವ ಆಸ್ಪತ್ರೆಗೆ ಕರೆದೊಯ್ಯಬೇಕೋ ವಿವರವಾಗಿ ಹೇಳಿ, ತನ್ನ ಕೆಲಸದ ಮೇಲೆ ತಾನೂ ಹೊರಟಳು.

    ಅವಳ ಮುಖದಲ್ಲಿ ಈಗ ಅವಸರ ಕಾಣಿಸಲಿಲ್ಲ. ಅದರ ಜಾಗದಲ್ಲಿ ತೃಪ್ತಿ, ಆತ್ಮ ವಿಶ್ವಾಸ ಮನೆಮಾಡಿಕೊಂಡಿದ್ದವು. ಸಾಧಿಸಬೇಕೆಂಬ ತವಕವಿದ್ದರೆ ಸಾಧಿಸಲಾಗಿದ್ದು ಏನೂ ಇಲ್ಲ. ಮನುಷ್ಯ ಒಂದು ಸಲ ಧ್ಯೆರ್ಯವನ್ನು ಕಳೆದುಕೊಂಡರೆ, ಇನ್ನೂ ಕಳೆದುಕೊಳ್ಳಲು ಬೇರೇನೂ ಇರುವುದಿಲ್ಲ. ಸರ್ವಸ್ವವನ್ನು ಕಳೆದುಕೊಂಡಂತೆಯೇ!

    *******

    ಧೃತಿಗೆ ಹೆಚ್ಚು ಆತಂಕವೇನೂ ಇರಲಿಲ್ಲ. ಅವಳಿಗೆ ಇಂಟರವ್ಯೂಗಳೂ ಹೊಸತಲ್ಲ. ಸುತ್ತಲೂ ಇರುವ ಯುವಕ, ಯುವತಿಯರನ್ನು ಪರಿಶೀಲಿಸಿ ನೋಡಿದಳು. ಎಲ್ಲರಲ್ಲಿಯೂ ಏನೋ ಆತಂಕ, ಉದ್ಯೋಗ, ಅದನ್ನು ಬಚ್ಚಿಡಲು ಒಬ್ಬರಲ್ಲೋಬ್ಬರು ಗುಸುಗುಸು ಏನೋ ಮಾತಾಡಿಕೊಳ್ಳುತ್ತಿದ್ದರು. ಮೊದಲನೆಯ ಸಲ ಇಂಟರ್‍ವ್ಯೂಗೆ ಬಂದವರು ಮುಖಗಳಂತೂ ಇನ್ನೂ ಸುಲಭವಾಗಿ ಗೊತ್ತಾಗಿ ಹೋಗುತ್ತಿತ್ತು. ಕೈಗಳು, ಕಲ್ಗಳೂ ನಡುಗುತ್ತಿದ್ದರೆ ಬಿಗಿದುಕೊಂಡು ಕುಳಿತಿದ್ದರು. ಕೆಲವರು ಗಂಟಲಿನ ಹತ್ತಿರ ತಡವಿಕೊಳ್ಳುತ್ತಾ ನಮಸ್ಕಾರ ಮಾಡಿಕೊಳ್ಳುತ್ತಿದ್ದರು.

    ಧೃತಿ ತುಟಿಗಳ ಮೇಲೆ ಕಿರುನಗೆ ಮೂಡಿತು. ತಾನೂ ಅಷ್ಟೇ...ಮೊದಲನೆ ಸಲ ತುಂಬಾ ಕನ್ಫಿಡೆನ್ಸ್‍ನಲ್ಲಿ, ತುಂಬಾ ಜನ ದೇವರುಗಳಿಗೆ ಹರಕೆ ಹೊತ್ತು ಇಂಡರ್‍ವ್ಯುಗೆ ಬಂದಿದ್ದಳು. ಮನೆಯನ್ನು ತಲುಪಿದ ಮರುಕ್ಷಣದಿಂದ ಅವರು ಕಳಿಸುವ ಅಪಾಯಿಂಟ್‍ಮೆಂಟ್ ಆಡರ್‍ಗೆ ನಿರೀಕ್ಷಿಸುತ್ತಿದ್ದಳು. ನಂತರ... ನಂತರ... ಅನುಭವಪೂರ್ವಕವಾಗಿ ತಿಳಿಸಿತ್ತು. ಕೆಲಸ ಸಿಗುವುದು ಅಷ್ಟು ಸುಲಭವಲ್ಲವೆಂದು.

    ಇದ್ದಕ್ಕಿದ್ದಂತೆ ಧರ್ಮಾ ಎಲೆಕ್ಟ್ರಾನಿಕ್ಸ್‍ನಿಂದ ಪ್ರಿಲಿಮಿನರಿ ಇಂಟರ್‍ವ್ಯೂನ ಸೆಲೆಕ್ಟ್ ಆದಂತೆಯು, ಫೈನಲ್ ಇಂಟರ್‍ವ್ಯೂಗೆ ಬರುವಂತೆಯೂ ಬಂದಿದ್ದರಿಂದ ಮನೆಯಲ್ಲಿ ಎಲ್ಲಾರಿಗೂ ಸ್ವಲ್ಪ ಆಸೆ ಉಂಟಾಗಿತ್ತು ಧೃತಿಯ ಹೊರತಾಗಿ ಎಷ್ಟು ನೋಡಿಲ್ಲ ಇಂಥದ್ದು... ಎನ್ನಿಸಿದ್ದರಿಂದ.

    ಧೃತೀ! ಧೃತೀ!

    ತನ್ನ ಹೆಸರು ಗಟ್ಟಿಯಾಗಿ ಕೇಳಿಸಿದ್ದರಿಂದ ಎದ್ದು ನಿಂತಳು.

    ಪ್ಯೂನ್ ಒಳಕ್ಕೆ ಹೋಗೆಂದು ಸನ್ನೆ ಮಾಡಿದ.

    ಒಳಕ್ಕೆ ಹೋಗಿ ನಮಸ್ತೆ! ಎಂದು ಕೈಗಳನ್ನು ಜೋಡಿಸುತ್ತಲ್ಲೇ ಅವಳು ಅವಕ್ಕಾದಳು. ಕಾರಣ.... ಅಲ್ಲಿ ಕುಳಿತಿದ್ದ ವ್ಯಕ್ತಿ ಇಂದು ಕಾರಿನಿಂದಿಳಿದಿದ್ದ ವ್ಯಕ್ತಿಯಗಿದ್ದರಿಂದ!

    ಆತ ಕೂಡಾ ಸ್ವಲ್ಪವೇ ಆಶ್ವರ್ಯದಿಂದ ಅವಳನ್ನು ನೋಡಿ, ಅಷ್ಟರಲ್ಲಿಯೇ ಚೇತರಿಸಿಕೊಂಡು ಪ್ಲೀಜ್ ಸಿಟ್‍ಡೌನ್ ಎಂದರು.

    ಆವಳು ಥ್ಯಾಂಕ್ಸ್ ಹೇಳಿ ಎದುರಿನ ಕುರ್ಚಿಯಲ್ಲಿ ಕುಳಿತಳು.

    ಆತ ಗಂಟಲು ಸಡಿಪಡಿಸಿಕೊಂಡರು.

    ಅವಳು ಉಸಿರುಬಿಗಿಹಿಡಿದು ಇಂದು ನಡೆದ ಘಟನೆಯ ಬಗ್ಗೆ ಏನಾದರೂ ಹೇಳುತ್ತಾರೇನೋ ಎಂದು ನಿರೀಕ್ಷಿಸತೊಡಗಿದಳು.

    ಅಷ್ಟರಲ್ಲಿ ಆತನ ಧ್ವನಿ ಖಣೀರೆಂದು ಮೊಳಗುತ್ತಾ ಕೇಳಿಸಿತು... ನಿನಗೊಂದು ಚಿಕ್ಕ ಪರೀಕ್ಷೆಯಿಡುತ್ತೇನೆ. ನನ್ನ ಪರ್ಸನಲ್ ಅಸಿಸ್ಟೆಂಟ್ ಕೆಲಸ ಅಂದರೆ ತುಂಬಾ ಚುರುಕಾಗಿರುವವರು ಮಾತ್ರವೇ ಮಾಡಬಲ್ಲರು. ಆದ್ದರಿಂದ ನೀನು ತಕ್ಷಣವೇ ಪೇಪರ್, ಪೆನ್ನು ತೆಗೆದುಕೊಂಡು ನಿನ್ನ ಎದುರಿಗೆ ಕಾಣಿಸಿತ್ತಿರುವ ವಸ್ತುಗಳ ಬಗ್ಗೆ ನೀನು ಗಮನಿಸಿದ್ದನ್ನು ನಿಲ್ಲಿಸದೇ ಎರಡು ನಿಮಿಷಗಳ ಕಾಲ ಬರೆಯಬೇಕು. ಸರಿಯಾಗಿ ಎರಡು ನಿಮಿಷಗಳ ತಕ್ಷಣವೇ ನಿಲ್ಲಿಸಬೆಕು. ನಾನು ಸ್ಟಾಪ್ ಹೇಳುತ್ತೇನೆ.

    ಧೃತಿ ತಕ್ಷಣವೇ ಪೇಪರ್, ಪೆನ್ ತೆಗೆದುಕೊಂಡು ಬರೆಯಲು ಪ್ರಾರಂಭಿಸಿದಳು. ಅತ ಅವಳ ಕೈಬೆರಳುಗಳ ವೇಗವನ್ನು ಗಮನಿಸತೊಸಗಿದರು.

    ಅವಳು ಆಲೋಚಿಸಲು ಕೂಡಾ ನಿಲ್ಲಿಸದೇ ತುಂಬಾ ವೇಗವಾಗಿ ಚಕಚಕನೆ ಬರೆಯತೋಡಗಿದಳು. ಸ್ಟಾಫ್! ಎಂದು ಕೇಳಿಸಿದೊಡನೆ ನಿಲ್ಲಿಸಿಬಿಟ್ಟಳು.

    ಆತ ಅವಳ ಕೈಯಿಂದ ಪೇಪರ್ ತೆಗೆದುಕೊಂಡು ಓದತೊಡಗಿದರು. ಆತ ಓದುತ್ತಿದ್ದರೆ ಧೃತಿಯ ತುಟಿಗಳು ಕಿರುನಗೆಯಿಂದ ಅರಳಿದ್ದವು. ಅದರಲ್ಲಿ ಧೃತಿ ಹೀಗೆ ಬರೆದಿದ್ದಳು.

    ‘ಈತ ನನಗೆ ಕೆಲಸ ಕೊಡುವರೋ ಇಲ್ಲವೋ ಆ ದೇವರಿಗೇ ಗೊತ್ತು. ತುಂಬಾ ಅಳವಾದ ಮನುಷ್ಯನೆಂದು ಕಣ್ಣು ನೋಡಿದೊಡನೆಯೇ ತಿಳಿದು ಹೋಗುತ್ತದೆ. ಮನುಷ್ಯ ಮಾತ್ರ ಕುರ್ಚಿಯಲ್ಲಿ ತುಂಬಿಕೊಂಡು, ಗಂಬೀರವಾಗಿ, ನೆರಳಿನಲ್ಲಿ ಕುಳಿಸಿರುವುದರಿಂದ ಬಂದ ಇರುವ ಬಣ್ಣದಲ್ಲಿ ಚೆನ್ನಾಗಿದ್ದರೆ. ನೋಡಿದೊಡನೆಯೇ ಇಂತಹ ಸೋದರಮಾವನೋ, ತಾತನೋ ಇದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸುವಂತಿದ್ದಾರೆ. ಬಹುಶಃ ಹಾಗೆ ಅನ್ನಿಸಲು ಕಾರಣ ಆತನ ಕಿವಿಗಳಿಂದ ಹೊರಕ್ಕೆ ಕಾಣಿಸುತ್ತಿರುವ ಕೂದಲುಗಳೇನೋ! ಈತ ನಗೆ ಎನ್ನುವುದನ್ನೆ ಮರೆತುಹೋಗಿದ್ದಾರೇನೋ ಪಾಪ! ನನಗೇನಾದರೂ ಕೆಲಸ ಕೊಟ್ಟರೆ ಈತನಿಗೆ ನಗುವುದನ್ನು ಕಲಿಸುತ್ತೇನೆ. ಈತ ನನ್ನನ್ನು ಚುಚ್ಚೀ ಚುಚ್ಚೀ ನೋಡುತ್ತಿದ್ದರೆ ಈತ ತುಂಬಾ ಬುದ್ದಿವಂತನೆಂದೂ.... ಯೌವ್ವನದಲ್ಲಿರುವಾಗ ಬಹುಶಃ ಈತ ತುಂಬಾ....’ಎಂದು ನಿಲ್ಲಸಿಬಿಟ್ಟಿದ್ದಳು.

    ಅದನ್ನು ಓದುವಾಗ ಕೂಡಾ ಆತನ ಮುಖದಲ್ಲಿ ಯಾವ ಭಾವನೆಯೂ ಕಾಣಿಸಿರಲಿಲ್ಲ. ಪೇಪರ್ ಮಡಿಸಿ ಇಟ್ಟು, "ನಾನು ವಸ್ತುಗಳ ಬಗ್ಗೆ ಹೇಳಿದರೆ.... ನೀನು ನನ್ನ ಬಗ್ಗೆ ಬರೆದಿದ್ದೀಯೇಕೆ? ಎಂದು ಕೇಳಿದರು?

    ಧೃತಿ ಕಿರುನಗೆ ಬೀರಿ, ನಿಜ ಹೇಳಬೇಕೆಂದರೆ ಭಾವನಾರಹಿತವಾಗಿ ಕುಳಿತಿದ್ದ ನಿಮ್ಮನ್ನು ನೋಡುತ್ತಿದ್ದರೆ ನನಗೆ.... ಎನ್ನುತ್ತಾ ಪೂರ್ತಿ ಮಾಡದೇ ನಕ್ಕು ತಕ್ಷಣವೇ ಸಾರಿ ಎಂದೂ ಹೇಳಿಬಿಟ್ಟಳು.

    ನಾನು ನಿನಗೆ ವಸ್ತುವಿನಂತೆ ಕಾಣಿಸಿದೆನೆನ್ನುತ್ತಿದ್ದೀ- ಅಷ್ಟೇ ತಾನೆ! ಅಭಾವನಾಗಿ ಕೇಳಿದರಾತ.

    ಅವಳು ನಗುವನ್ನು ತಡೆದುಕೊಂಡು ತಲೆದೂಗಿದಳು.

    ನೋಡಮ್ಮಾ, ನಮಗೆ ಅರ್ಜೆಂಟಾಗಿ ತಲುಪಬೇಕಾದ ಗೂಡ್ಸ್ ಯಾಕೋ ಬರಲಿಲ್ಲ. ಅವು ತಕ್ಷಣವೇ ಬೇಕೆಂಬ ತೀವ್ರತೆಯನ್ನು ಧ್ವನಿಸುವಂತೆ ಮಾಡುವ ಒಂದೇ ವಾಕ್ಯವನ್ನು ಫೋನಿನಲ್ಲಿ ಹೇಳಬೇಕು. ಏನು ಹೇಳ್ತೀ? ಕೇಳಿದರು ಗಂಭೀರವಾಗಿ.

    ನಮಗೆ ಆ ಗೂಡ್ಸ್ ನಿನ್ನೆ ಬೇಕಿತ್ತು ಎನ್ನುತ್ತೇನೆಎಂದಳು ಇಂಗ್ಲಿಷ್‍ನಲ್ಲಿ.

    ಅವರು ಮೆಚ್ಚುಗೆಯಿಂದ ತಲೆದೂಗಿ, ನಿನ್ನ ಜೀವನ ಹೇಗಿದ್ದರೆ ಚೆನ್ನವೆಂದು ನೀನಂದುಕೊಂಡಿದ್ದೀ? ಎಂದು ಕೇಳಿದರು.

    ಅವಳು ಸೀರಿಯಸ್ಸಾಗಿ ಹೇಳಿದಳು, ನನ್ನವರೆಲ್ಲರೂ ಸಂತೃಪ್ತಿಯಿಂದ ಆರ್ಥಿಕವಾಗಿ ಕೊರತೆಯಿಲ್ಲದೇ, ಹಯಾಗಿ ಕಾಲ ಕಳೆಯುವಂತೆ ನಾನು ಮಾಡಬಲ್ಲೆನಾದರೆ ಅದೇ ಸಾಕೆಂದುಕೊಂಡಿದ್ದೇನೆ.

    ಆರ್ಥಿಕವಾದ ಇಕ್ಕಟ್ಟುಗಳನ್ನು ಬಿಟ್ಟರೆ ನಿನಗೆ ಬೇರೆ ಯಾವ ಇಕ್ಕಟ್ಟೂ ಇಲ್ಲವೇನು?

    ಇಲ್ಲ, ನಾನು ತುಂಬಾ ಅದೃಷ್ಟವಂತೆ, ನಾನೆಂದರೆ ಪ್ರಾಣಬಿಡುವ ಕುಟುಂಬ ಸದಸ್ಯರೊಂದಿಗೆ ಕೂಡಿದ ಪ್ರೇಮಪೂರಿತವಾದ ಗೃಹವಾತಾವರಣ ನನಗಿದೆ. ಹಣ ನನ್ನ ಕುಟುಂಬದ ಅಗತ್ಯಗಳನ್ನು ತೀರಿಸುವಷ್ಟು ಸಿಕ್ಕಿದರೆ ಸಾಕು.

    ನಿನ್ನ ಕುಟುಂಬ ಅಗತ್ಯಗಳು ತೀರಿಸುವಷ್ಟು ಹಣ ನಿನಗೆ ಸಿಕ್ಕಿದ ಪಕ್ಷದಲ್ಲಿ ನಿನ್ನ ಕುಟುಂಬಕ್ಕೆ ದೂರವಾಗಿರುತ್ತೀಯಾ?

    ಅವಳು ಅವನ ಮಾತು ಅರ್ಥವಾಗದವಳಂತೆ ನೋಡಿದಳು. ಆತನ ಕಂಠದಲ್ಲಿ ಸ್ಥಿರತ್ವವಿತ್ತೇ ಹೊರತು ತೀವ್ರತೆಯಿರಲಿಲ್ಲ. ನಿನ್ನವರ ಅಗತ್ಯಗಳನ್ನು ತೀರಿಸುವುದಕ್ಕಾಗಿ ನಿನ್ನವರ ಒಡನಾಟವನ್ನು ನೀನು ತ್ಯಾಗಮಾಡಬಲ್ಲೆಯಾ? ಕೇಳಿದರು.

    ಅವಳು ತಕ್ಷಣವೇ, ಅದಕ್ಕೆ ನಮ್ಮವರು ಕೂಡಾ ಒಪ್ಪಿಕೊಳ್ಳಬೇಕಲ್ಲವಾ? ಹಣಕ್ಕಾಗಿ ನನಗೆ ದೂರವಾಗಿ ಇರಲು ಅವರು ಒಪ್ಪಿಕೊಳ್ಳುವುದಿಲ್ಲ ಎಂದಳು.

    ಅವರು ನಿಧಾನವಾಗಿ ಒತ್ತಿ ಹೇಳಿತ್ತಾ, ನಾನು ಕೇಳುತ್ತಿರುವುದು ನೀನು ಸಿದ್ದವೇನಾ ಎಂದು? ಎಂದರು.

    ನನ್ನವರ ಶ್ರೇಯಸ್ಸಿನ ಹೊರತಾಗಿ ನನಗೆ ಬೇರೆ ಯಾವುದೂ ಸಂತೋಷ ನೀಡುವುದಿಲ್ಲ. ಅವರು ನೊಂದುಕೊಳ್ಳದೇ ಒಪ್ಪಿಕೊಳ್ಳದೇ ಒಪ್ಪಿಕೊಳ್ಳುವುದಾದರೆ ನಾನದಕ್ಕೆ ಸಿದ್ದವೇ. ಆದರೆ ಅವರು ನನ್ನನ್ನು ಬಿಟ್ಟಿರಲು ಯಾವ ಪರಿಸ್ಥಿತಿಯಲ್ಲಿಯೂ ಒಪ್ಪಿಕೊಳ್ಳುವುದಿಲ್ಲ ಎಂದಳು ಒಂದು ರೀತಿಯ ಗರ್ವದಿಂದ.

    ಪೂರ್ತಿಯಾಗಿ ಬಿಟ್ಟಿಬಿಡುವ ಅಗತ್ಯವಿಲ್ಲ, ವಾರಕ್ಕೆ ಒಂದು ಸಲ ಮನೆಗೆ ಹೋಗಿ ಬರಬಹುದು ಎಂದರು ಹಾಯಾಗಿ.

    ಧೃತಿ ಸ್ವಲ್ಪವೇ ಹುಬ್ಬುಗಳನ್ನು ಗಂಟಿಕ್ಕಿ, ನನ್ನ ಉದ್ಯೋಗಕ್ಕೆ, ಕುಟುಂಬದಿಂದ ದೂರವಾಗಿರುವುದಕ್ಕೆ ಸಂಬಂಧವೇನು? ಕೇಳಿದರು.

    ಆತ ಈ ಸಲ ಸ್ವಲ್ಪ ತೀವ್ರವಾಗಿ, ನಿನ್ನ ಕುಟುಂಬ ವ್ಯಕ್ತಿಗಳ ಮೇಲಿರುವ ಪ್ರೀತಿ, ಮಮತಾನುರಾಗಗಳು ಅವರಿಗೆ ನಿನ್ನ ಮೇಲಿದೆಯೋ? ಇಲ್ಲಾ, ನೀನು ಸಂಪಾದಿಸುವ ಹಣದ ಮೇಲೆ ಮಾತ್ರವೇ ಇದೆಯೋ ನಿನಗೆ ತಿಳಿಯಪಡಿಸಲು ಎಂದರು.

    ಧೃತಿ ಅವೇಶ ನುಗ್ಗಿಬಂತು. ನಿಮಗೇನು ಗೊತ್ತೆಂದು ಈ ರೀತಿಯಾಗಿ ನಮ್ಮ ಸಂಸಾರದ ಸದಸ್ಯರನ್ನು ವಿಮರ್ಶೆ ಮಾಡಿತ್ತಿದ್ದೀರಿ? ಹಣವಿಲ್ಲದಿದ್ದರೂ ನಮ್ಮಲ್ಲಿ ಒಬ್ಬರೆಂದರೆ ಮತ್ತೊಬ್ಬರಿಗೆ ತುಂಬಾ ಪ್ರೀತಿಯಿದೆ. ಆ ಆಪ್ಯಾಯತೆ, ಅನುಬಂಧಗಳಿಂದಲೇ ಒಬ್ಬರಿಂದೊಬ್ಬರು ದೂರ ಇರಲಾರೆವು ಎಂದಳು.

    ಒಬ್ಬರನ್ನೊಬ್ಬರು ಬಿಟ್ಟು ಇರದಿರುವುದೇ ಆಪ್ಯಾಯತೆಗೆ ಅಳತೆಗೋಲಾ? ಸ್ವಲ್ಪ ವ್ಯಂಗ್ಯದಿಂದ ಕೇಳಿದರು.

    ಅಲ್ಲ, ಒಬ್ಬರಿಗಾಗಿ ಒಬ್ಬರು ಏನನ್ನಾದರೂ ಮಾಡಿ ಆ ಇನ್ನೊಬ್ಬರನ್ನು ಸಂತಸಪಡಿಸಬೆಕೆಂಬ ಆಸೆ, ನಮ್ಮವರು ಸುಖವಾಗಿಲ್ಲದಿರುವಾಗ ನನಗೆ ಎಷ್ಟು ಸುಖ್ಳಿದ್ದರೂ ವ್ಯರ್ಥ ಎಂದುಕೊಳ್ಳುವುದು- ಇವೆಲ್ಲಾ ಆಪ್ಯಾಯತೆಗೆ ಋಜುವಾತು. ಆಷ್ಟೇಅಲ್ಲದೇ ಆಪ್ಯಾಯತೆಯನ್ನು ಆಳೆಯುವುದು ಯಾರಿಗು ಸಾಧ್ಯವಿಲ್ಲ ಆಕ್ರೋಶದಿಂದ ಹೇಳಿದಳು.

    ಹಾಗಿರುವಾಗ ಬೇರೆಯಾಗಿದ್ದು, ನಿನ್ನ ಕುಟುಂಬಕ್ಕೆ ಸಹಾಯ ಮಾಡುವುದರಲ್ಲಿ ನಿನಗೆ ಅಭ್ಯಂತರ ಯಾಕೆ? ಅಷ್ಟರಲ್ಲಿ ಹಣದ ಪ್ರಾಮುಖ್ಯತೆ ಈ ಕುಟುಂಬ ಸಂಬಂಧಗಳಲ್ಲಿ ಎಷ್ಟಿರುತ್ತದೆಂಬ ವಿಷಯ ನಿನಗೂ ಅರ್ಥವಾಗುತ್ತದೆ ಸ್ಪಷ್ಟವಾಗಿತ್ತು ಆತನ ಧ್ವನಿ.

    ಹಣಕ್ಕಾಗಿ ನಾವು ಯಾವಾಗಲೂ ಬದಲಾಗುವುದಿಲ್ಲ. ಇರುವಾಗಲೂ, ಇಲ್ಲದಿರುವಗಲೂ ಒಂದೇ ರೀತಿಯ ಪ್ರೀತಿ ನಮ್ಮ ನಡುವೆ ಇರುತ್ತದೆ ಎಂದಳು ರೋಷದಿಂದ.

    ಆತ ಸ್ವಲ್ಪ ಮುಂದಕ್ಕೆ ಬಾಗಿ ಕನ್ನಡಕವನ್ನು ಸರಿಪಡಿಸಿಕೊಂಡು, ನಿನ್ನ ಮಾತಿನಲ್ಲಿ ಸತ್ಯ ಎಷ್ಟಿದೆಯೋ ತಿಳಿಯದಾಗಲೀ, ನನಗೆ ಇನ್ನೂ ಒಂದು ಕಾರಣ ಕೂಡಾ ಇದೆ ಎಂದರು.

    ಅವಳು ಏನೆಂಬಂತೆ ನೋಡಿದಳು.

    ಕುಟುಂಬವೆಂದರೆ ವಿವಿಧ ರೀತಿಯ ಸಮಸ್ಯೆಗಳಿರುತ್ತವೆ. ಅವುಗಳ ಪ್ರಭಾವ ನಿನ್ನ ಮೇಲೆ ಬಿದ್ದು, ನೀನು ನಿನ್ನ ಕರ್ತವ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸದೇ ಹೋಗಬಹುದು. ಆದ್ದರಿಂದ ನಾನು ನಿನಗೆ ಕೊಡುವ ಸಂಬಳದಲ್ಲಿ ಒಂದು ರೂಪಾಯಿ ನಷ್ಟವಾದರೂ ನಾನು ಸಹಿಸಲಾರೆ. ನಾನು ಪಕ್ಕಾ ಮೆಟೀರಿಯಲಿಸ್ಟು?ಎಂದು ಕೇಳಿದಳು.

    "ಯಸ್, ಅರ್ಫಕೋರ್ಸ್?’

    ಅವಳು ಎದ್ದು ನಿಂತು, ತುಂಬಾ ಜನ ಕುಟುಂಬದೊಂದಿಗೆ ಇರಲಾಗದೇ ಬೇರೆಯಾಗಿದ್ದುಕೊಂಡು ಕೆಲಸ ಮಾಡುತ್ತಿರುತ್ತಾರೆ. ಆದರೆ ನೀವು ಹೇಳಿದ ಕಾರಣದಿಂದ ಮಾತ್ರವಲ್ಲ; ಮನಸ್ಸು ಸಂತೋಷವಾಗಿ, ಆಹ್ಲಾದವಾಗಿ ಇರುವುದಕ್ಕೆ ಕುಟುಂಬ ವಾತಾವರಣ ತುಂಬಾ ಸಹಾಯ ಮಾಡುತ್ತದೆ. ನನ್ನ ಸ್ವಂತದವರಿಂದ ನನಗೆ ಮನಃಶಾಂತಿ ಇರುವುದಿಲ್ಲ ಎಂದುಕೊಂಡ ಪಕ್ಷದಲ್ಲಿ, ಅವರು ನಮ್ಮವರು ಎಂದು ಹೇಗೆ ಹೇಳಿಕೊಳ್ಳುತ್ತೇವೆ? ಎಂದಳು ಆವೇಶದಿಂದ.

    ಆತ ಎಲ್ಲವನ್ನೂ ಕೇಳಿ, ಮೊದಲು ಕೂತ್ಕೋ ಎಂದ ಪ್ರಶಾಂತವಾಗಿ.

    ಅವಳು ಮತ್ತೆ ಕುಳಿತು ಸೆರಗಿನಿಂದ ಮುಖ ಒರೆಸಿಕೊಂಡಳು.

    ಆತ ಶಾಂತ ಗಂಬೀರಸ್ವರದಲ್ಲಿ, ನಿನ್ನ ಜೊತೆ ವಾದ ಮಾಡಲಾಗಲೀ, ನಿನ್ನನ್ನು ಒಪ್ಪಸಲಾಗಲೀ, ನನಗೆ ಅಷ್ಟು ಸಮಯವಾಗಲೀ, ಆಗತ್ಯವಾಗಲೀ ನಿಜವಾಗಿಯೂ ಇಲ್ಲ. ನೀನು ಇಂಟರ್‍ವ್ಯೂನಲ್ಲಿ ಮಾಕ್ರ್ಸ್ ಚೆನ್ನಾಗಿ ಸ್ಕೋರ್ ಮಾಡಿದ್ದರಿಂದ, ನಿನ್ನ ವರ್ತನೆ ನನಗೆ ಆಸಕ್ತಿಕೆವಾಗಿದ್ದುದರಿಂದ ನಿನ್ನ ಜೊತೆ ಇಷ್ಟು ತಾಳ್ಮೆಯಿಂದ ಮಾತಾಡುತ್ತಿದ್ದೇನೆ. ನಿನ್ನ ಕುಟುಂಬದ ಸದಸ್ಯರೊಂದಿಗೆ ಈ ವಿಷಯ ಪ್ರಸ್ತಾಪ ಮಾಡು. ಅವರ ಅಭಿಪ್ರಾಯ ಹೀಗೆ ಇರಬೇಕೆಂಬ ರೂಲೇನೂ ಇಲ್ಲ, ಅಲ್ಲವಾ? ಎಂದರು.

    ಧೃತಿಗೆ ಆ ಮಾತು ನೇರವಾಗಿ ಹೋಗಿ ಹೃದಯದಲ್ಲಿ ನಾಟಿತ್ತು.

    ಅಂದರೆ, ನಿಮ್ಮ ಅಭಿಪ್ರಾಯದಲ್ಲಿ ಹಣದ ಹೊರತಾಗಿ ಮನುಷ್ಯರ ನಡುವೆ ಮತ್ಯಾವ ಬಂದವೂ ಇಲ್ಲವಾ? ಹಣಕ್ಕಾಗಿ ಏನನ್ನಾದರೂ ತ್ಯಾಗ ಮಾಡಿಬಿಡ್ತಾರಾ? ಹಣ ಒಬ್ಬ ಅಮ್ಮನನ್ನೂ, ತಂದೆಯನ್ನೂ, ತಂಗಿಯನ್ನೂ ಕೊಡಬಲ್ಲದಾ? ಕುಟುಂಬದಲ್ಲಿ ಅಂತರ್ಲೀನವಾಗಿ ಪ್ರವಹಿಸುವ ಆಪ್ಯಾಯತೆ, ಅನುಂಬಂಧಗಳು ಎಷ್ಟು ಶ್ರೇಷ್ಟವೋ ಅನುಭವಿಸಿದರೆ ಮಾತ್ರ ತಿಳಿಯುತ್ತದೆ. ಬಹುಶಃ ನಿಮಗೆ ಅದರ ರುಚಿ ತಿಳಿಸಬೇಕೆಂದುಕೊಂಡಿದ್ದೇನೆ ಎಂದಳು ಅನಾಲೋಚಿತವಾಗಿ ಕಂಪಿಸುತ್ತಾ.

    ಆ ಕೊನೆಯ ಮಾತಿಗೆ ಆತ ಪ್ರತಿಸ್ಪಂದಿಸುತ್ತಾ, ಹೌದು, ನಾನು ಅವುಗಳನ್ನು ಅನುಭವಿಸಿಲ್ಲ. ಬಹುಶಃ ಬಿದ್ದಿವಂತರ್ಯಾರೂ ಅನುಭವಿಸಲಾರರು. ಲಾಭವಿಲ್ಲದೇ ಯಾರು ಈ ಪ್ರಪಂಚದಲ್ಲಿ ಮತ್ತೊಬ್ಬ ಮನುಷ್ಯನ ಮೇಲೆ ನೀನು ಹೇಳುತ್ತಿರುವ ಪ್ರೀತಿ, ಆಪ್ಯಾಯತೆ, ಅಭಿಮಾನಗಳಂಥದ್ದನ್ನು ಸುರಿಸುವುದಿಲ್ಲ. ತಾಯ್ತಂದೆಯರು ಮಕ್ಕಳನ್ನು ಬೆಳೆಸಿ, ದೊಟ್ಟವರನ್ನಾಗಿ ಮಾಡಿದ ನಂತರ ಅವರಿಗೆ, ಆ ಮಕ್ಕಳ ಮೂಲಕ ಸುಖಗಳನ್ನೂ, ಆನಂದಗಳನ್ನೂ ಹೊಂದಬೇಕೆಂಬ ಸ್ವಾರ್ಥ ಆರಂಭವಾಗುತ್ತದೆ. ಅದಕ್ಕೆ ಅವರು ಕಷ್ಟಪಟ್ಟು ಬೆಳೆಸಿದ್ದೇವೆ ಎಂಬ ರೀಜನಿಂಗ್ ಕೊಡತ್ತಾರೆ. ಗಂಡ ಹೆಂಡಿರ ನಡುವೆ ಎಲ್ಲವೂ ಬಾರ್ಟರ್ ಸಿಸ್ಟಮ್ಮೇ. ನಾನು ನನಗೆ ಇದನ್ನು ಕೊಡುತ್ತೇನೆ. ಇನ್ನು ಅಣ್ಣ, ತಂಗಿ, ಅಕ್ಕ, ತಮ್ಮಂದಿರಂಥಾ ಸಂಬಂಧಗಳು ಕೇವಲ ಅವರವರ ಜೀವನ ಒಂದು ದಾರಿಗೆ ಬೀಳುವವರಿಗೆ ಮಾತ್ರ. ಆ ನಂತರ ಒಬ್ಬರ ಬಗ್ಗೆ ಇನ್ನೂಬ್ಬರು ಯೋಚಿಸುವುದಕ್ಕೆ ಕೂಡಾ ಆಸಕ್ತಿ ಇರುವುದಿಲ್ಲ.

    ನೀವು ಹೇಳುತ್ತಿರುವುದನ್ನು ನಾನು ಒಪ್ಪಲಾರೆ... ಎಂದು ತಡೆಯಲು ಹೋದಳು.

    ಆತ ಅಂಗೈ ತೋರಿಸಿ ತಡೆದು, ನಾನೂ ಒಪ್ಪುತ್ತಿರಲಿಲ್ಲ ನಿನ್ನ ವಯಸ್ಸಿನಲ್ಲಿ ಅಂದರೆ ಇಪ್ಪತ್ತರಡರ ಮುಗ್ಧತೆಯಲ್ಲಿರುವಾಗ, ಆ ವಯಸ್ಸಿನಲ್ಲಿ ಲೋಕವೆಲ್ಲಾ ಸ್ವಚ್ಚವಾಗಿ ಕಾಣುತ್ತದೆ. ನಾವು ನಕ್ಕಾಗ ನಗುತ್ತಿರುವಂತೆಯೂ, ನಾವು ನೋಂದುಕೊಂಡರೆ ದುಖಃಸುತ್ತಿರುವಂತೆ ಅನ್ನಿಸುವುದಾಗಲೀ, ಅದು ಯಾವಾಗಲೂ ನಮ್ಮನ್ನು ನೋಡಿ ನಗುತ್ತಲೇ ಇರುತ್ತದೆ. ಆನಂದದಿಂದಲ್ಲ- ಅವಹೇಳನೆಯಿಂದ! ಅದರ ಬಾಯಿ ಮುಚ್ಚಿಸುವುದು ಕೇವಲ ಹಣ ಮಾತ್ರವೇ.... ಅದೂ ನೀನು ಪುಷ್ಕಳವಾಗಿ ಸಂಪಾದಿಸಿದರೆ, ನಿನ್ನ ತಪ್ಪುಗಳು ಕೂಡಾ ಸರಿಯಾಗಿಯೇ ಕಾಣಿಸುವುದಿಲ್ಲ ಎಲ್ಲಾರಿಗೂ ಅದೇ ಇಲ್ಲದ ದಿನ ನೀನು ಹೇಳುವ ಬಂಧಗಳೂ, ಆಪ್ಯಾಯತೆಗಳೂ ಏನೂ ಇರುವುದಿಲ್ಲ, ದೂರವಾಗಿ ಓಡಿಹೋಗುತ್ತವೆ.

    ಬಹುಶಃ ನಿಮ್ಮ ಜಿವನದಲ್ಲಿ ಯಾವುದೋ ಗಟ್ಟಿಯಾದ ಎದಿರೇಟುಗಳು ಬಿದ್ದಿವೆಯೇನೋ! ಅದಕ್ಕೆ ಹೀಗೆ ಸ್ವಂತ ಮನುಷ್ಯರ ನಡುವೆ ಇರುವ ಅನುಬಂಧಗಳನ್ನೂ ಅನುರಾಗಗಳನ್ನೂ ಹೀಗೆ ಕೆಟ್ಟದಾಗಿ ಹೇಳುತ್ತಿದ್ದೀರಿ. ಅವಳ ಮೂಗಿನ ಹೊಳ್ಳೆಗಳು ರೋಷದಿಂದ ಕೆಂಪಾಗಿದ್ದವು.

    ಆತನ ಮುಖದ ಮೇಲೆ ಮೊಟ್ಟ ಮೊದಲನೆಯ ಸಲ ಅಸ್ಪಷ್ಟವಾಗಿ ನಗೆ ಕಾಣಿಸಿಕೊಂಡಿತ್ತು. "ನಿನಗೆ ಅನುಭವವಿಲ್ಲದಿರುವುದರಿಂದಲೋ, ಅಜ್ಞಾನದಿಂದಲೋ ಹೀಗೆ ವಾದಿಸುತ್ತಿದ್ದೀ. ಇವೇ ಮಾತುಗಳನ್ನು ಇನ್ನೂ ಇಪ್ಪತ್ತು ವರ್ಷಗಳು ಕಳೆದ ಮೇಲೆ ಹೇಳುವುದಿಲ್ಲ. ನಿನ್ನನ್ನು ನೋಡುತ್ತಿದ್ದರೆ ನನಗ್ಯಾಕೋ ನೀನು ನಂಬಿಕೊಂಡಿರುವ ಸಿದ್ಧಾಂಗಳೆಲ್ಲವೂ ಟ್ರಾಷ್ ಎಂದೂ, ಹಣ ಬಿಟ್ಟರೆ ಮತ್ಯಾವುದೂ ಈ ಪ್ರಪಂಚದಲ್ಲಿ ಮನುಷ್ಯ-ಮನುಷ್ಯರನ್ನು ಕಟ್ಟಿಡಲಾರದೆಂದು ರುಜುವಾತು ಮಾಡಬೇಕೆನ್ನಿಸುತ್ತಿದೆ.

    ಅವಳು ತಡ ಮಾಡದೇ, ಒಂದು ವೇಳೆ ನಾನೇ ನಿಮ್ಮಿಂದ ನಾನು ನಂಬಿಕೊಂಡಿರುವ ಸಿದ್ಧಾಂತಗಳೆಲ್ಲವೂ ನಿಜವೆಂದೂ, ಆಪ್ಯಾಯತೆ, ಅನುಬಂದಗಳಿಲ್ಲದ ಹಣದಿಂದ ಆನಂದವಿಲ್ಲವೆಂದೂ ಒಪ್ಪಿಸಬಲ್ಲವಳಾದರೆ? ಎಂದಳು.

    ಅವರ ಮುಖದ ಮೇಲಿನ ನಗೆ ಅಳಿಸಿಹೋಗಿತ್ತು. ಹುಬ್ಬುಗಳನ್ನು ಗಂಟಿಕ್ಕಿದರು ನನ್ನ ಜೊತೆ ಪಂದ್ಯ ಕಟ್ಟುತ್ತೀಯಾ? ಎಂದರು ದರ್ಪದಿಂದ. ಆ ಕೇಳುವಿಕೆಯಲ್ಲಿ ‘ನಾನ್ಯಾರೆಂದು ನಿನಗೆ ತಿಳಿದಿದೆಯಾ?’ ಎನ್ನುವ ಗರ್ವವಿತ್ತು.

    ಧೃತಿ ಕಿರುನಗೆ ಬೀರುತ್ತಾ. "ಪಂಧ್ಯವೆಂದರೆ ನನಗೆ ಇಷ್ಟ. ಅದರಲ್ಲೂ ನಾನೀ ಪಂದ್ಯದಿಂದ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಎಂತಹ ಬೆಲೆಬಾಳುವ ವಸ್ತುವನ್ನು ಕಳೆದುಕೊಂಡಿರುವನೋ ತಿಳಿದುಕೊಳ್ಳುವ ಅವಕಾಶ ಸಿಕ್ಕಿದರೆ ಅದಕ್ಕಿಂತ ಬೇಕಾಗಿರುವುದು ಇನ್ನೇನು....? ಎಂದು ಕೇಳಿದಳು.

    ಪಂದ್ಯ ಏನು? ಎಂದು ಕೇಳಿದರು ಸೀರಿಯಸ್ಸಾಗಿ.

    ನಾನು ಕೊಡಬಲ್ಲವಳಾಗುವಂಥದ್ದು ಏನಾದರೂ ಸರಿಯೇ! ಅವಳು ಆ ವಿಷಯದಲ್ಲಿ ಹಣದ ಬಗ್ಗೆ ಯೋಚಿಸಿಯೇ ಹಾಗೆ ಹೇಳಿದ್ದಳು.

    ಸರಿ.... ನೀನು ಸೋತು ಹೋದಾಗಲೇ, ನೀನು ಕೊಡಬಲ್ಲವಂಥದ್ದನ್ನು ಕೇಳುತ್ತೇನೆ. ಒಂದು ವೇಳೆ ನಾನು... ಆತ ಆ ಮಾತು ಪೂರ್ತಿ ಮಾಡಲಾರದವರಂತೆ ಸ್ವಲ್ಪ ಹೊತ್ತು ಸುಮ್ಮನಿದ್ದು, ನನ್ನ ಸಂಪೂರ್ಣ ಆಸ್ತಿ ನಿನಗೆ ಬರೆದುಕೊಡುತ್ತೇನೆ ಎಂದು ಪೂರ್ತಿ ಮಾಡಿದರು.

    ಮಿಂಚು ಸೀಳಿ ಮೇಲೆ ಬಿದ್ದಂತಹ ಆಶ್ವರ್ಯದಿಂದ ನೋಡಿದಳು. ಈ ಮುದುಕನಿಗೆ ಬುದ್ದಿ ಸ್ಥಿಮಿತದಲ್ಲಿದೆಯೋ ಇಲ್ಲವೋ ಎಂಬ ಅನುಮಾನ ಕೂಡಾ ಉಂಟಾಗಿತ್ತು.

    Enjoying the preview?
    Page 1 of 1