Discover millions of ebooks, audiobooks, and so much more with a free trial

Only $11.99/month after trial. Cancel anytime.

Priyathama
Priyathama
Priyathama
Ebook540 pages2 hours

Priyathama

Rating: 0 out of 5 stars

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN9789385545719
Priyathama

Read more from Yandamoori Veerendranath

Related to Priyathama

Related ebooks

Reviews for Priyathama

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Priyathama - Yandamoori Veerendranath

    http://www.pustaka.co.in

    ಪ್ರಿಯತಮ

    Priyatama

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ನಿನ್ನ ಕೊನೆಯಾಸೆ ಏನು?

    ಪ್ರಶ್ನೆ ಕೇಳಿಸಿದತ್ತ ಊಟಮಾಡುತ್ತಿದ್ದ ಮಹರ್ಷಿ ತಲೆ ಎತ್ತಿ ನೋಡಿದ. ಜೈಲರ್ ಮುಖದಲ್ಲಿ ಅಸಹನೆ, ಬೇಸರಿಕೆ ತುಂಬಿತ್ತು. ಅವನ ಕಂಠದಲ್ಲಿ ಮರುದಿನ ನೇಣಿಗೇರಿಸುವ ಖೈದಿಯನ್ನು ಏನೋ ಕೇಳಬೇಕು ಎಂಬ ಕಾಟಾಚಾರದ ಭಾವವಿತ್ತಾಗಲೀ, ಮಹರ್ಷಿಯತ್ತ ಸಹಾನುಭೂತಿ ಲವಲೇಶವೂ ಇರಲಿಲ್ಲ.

    ಏನುತ್ತರವನ್ನೂ ಕೊಡದೇ ಮಹರ್ಷಿ ಮೌನವಾಗಿದ್ದ.

    ಏಕೆ ಮಾತನಾಡ್ತಿಲ್ಲ?

    ಏನು ಕೇಳಲಿ ಅಂತ ಯೋಚಿಸ್ತಿದ್ದೀನಿ ಎಂದಾಗ ಅವನ ಧ್ವನಿಯಲ್ಲಿ ಒಡಕು, ಅಲಕ್ಷ್ಯತೆಗಳು ಹೊರಬಿದ್ದಿದ್ದುವು.

    ಹುಚ್ಚು ಹುಚ್ಚಾಗಿ ಕೇಳಬೇಡ. ನಿನ್ನ ಹೆಸರಿನಲ್ಲಿ ಯಾವುದಾದರೂ ಆಸ್ತಿ ಇದ್ದರೆ ಉಯಿಲು ಬರೆಸುವುದು ಅಥವಾ ನೀನು ಯಾರನ್ನಾದರೂ ನೋಡಬೇಕೆಂದುಕೊಂಡರೆ ಅವರಿಗೆ ಹೇಳಿಕಳಿಸುವುದು ಅಂಥವಾದರೆ ಮಾತ್ರಾ ಅನುಮತಿ ಕೊಡುತ್ತೇವೆ.

    ಅಲ್ಲ ಸಾಧಾರಣವಾಗಿ ನೇಣುಗಂಬವನ್ನೇರುವಾಗ ಕೊನೆಯಾಸೆಯನ್ನು ಕೇಳುತ್ತಾರೆ. ನೀವು ಒಂದು ದಿನ ಮೊದಲೇ ಕೇಳುತ್ತಿದ್ದೀರಲ್ಲಾ?

    ಏನೋಲೇ? ಮಹಾ ರೂಲ್ಸುಗಳನ್ನೆಲ್ಲಾ ತಿಳಿದುಕೊಂಡಿರುವ ಹಾಗೆ ಮಾತಾಡ್ತಿದೀ! ಸಿನಿಮಾ ನೋಡಿ, ಪುಸ್ತಕಗಳನ್ನೋದಿ ತಿಳಿದುಕೊಂಡಿದೀಯಾ? ಅಂಥದೇನೂ ಇಲ್ಲ. ನೀನು ಯಾರನ್ನಾದರೂ ನೋಡಬೇಕೆಂದಿದ್ದರೆ ಹೇಳು-ಕರೆಸ್ತೀನಿ.

    ಕೈಲಿದ್ದ ತುತ್ತನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದ ಮಹರ್ಷಿ. ಅದನ್ನು ನೋಡಿದ ಜೈಲರ್, ಅದಕ್ಕೆ ಕಣೋ ಒಂದು ದಿನ ಮೊದಲು ಕೇಳ್ತಿರೋದು. ನೇಣಿನ ಹಗ್ಗಕ್ಕೆ ಗೋಣೊಡ್ಡುವ ಮುನ್ನ ನಾನು ಇಂಥವರನ್ನು ನೋಡಬೇಕೆಂದು ಹೇಳಿದರೆ ನೇಣಿಗೇರಿಸುವುದನ್ನು ನಿಲ್ಲಿಸಿ ಅವರನ್ನು ಕರೆಸುತ್ತೀವಿ ಅಂದುಕೊಳ್ಳಬೇಡ. ಅದೆಲ್ಲಾ ಕಥೆ ಕಾದಂಬರಿಗಳಲ್ಲಿ ಮಾತ್ರಾ ನಡೆಯುತ್ತವೆ ಅಷ್ಟೇ.

    ಮಹರ್ಷಿ ಇನ್ನೂ ತುತ್ತನ್ನೇ ನೋಡುತ್ತಿದ್ದ.

    ಜೈಲರ್ ಅಸಹನೆಯಿಂದ,

    "ಏನೋ... ಏನಾದ್ರೂ ಹೇಳ್ತೀಯೋ ಅಥವಾ ನಾನು ಹೋಗಿ ನೇಣಿಗೆಲ್ಲಾ ಏರ್ಪಾಟು ಮಾಡಲೋ? ಎಂದು ಕೇಳಿದ.

    ನನಗೊಂದೇ ಒಂದಾಸೆ ಇದೆ ಸಾರ್! ಹೇಳಿದ ಮಹರ್ಷಿ.

    ಏನದು? ಬೇಗ ಬೊಗಳು.

    ಒಬ್ಬ ಹುಡುಗೀನ ನೋಡಬೇಕೆನ್ನಿಸಿದೆ.

    ಜೈಲರ್ ಹೌಹಾರಿ ಮುಖ ಸಿಂಡರಿಸಿಕೊಂಡ. ಹುಡುಗೀನೇ? ನಿನಗೆ ಹೆಣ್ಣು ಮಕ್ಕಳಿರೋದೇ ಗೊತ್ತಿಲ್ವಲ್ಲಾ? ಮದುವೆಯಾದ ಆರು ತಿಂಗಳಿಗೆ ಹೆಂಡತಿಯನ್ನೇ ಕೊಂದುಬಿಟ್ಯಲ್ಲಾ? ಎಂದ.

    ಮಗಳಲ್ಲ...ಗೆಳತಿ!

    ಏನಂದೆ ? ನಿನಗೊಬ್ಬ ಗೆಳತೀನೂ ಇದಾಳ್ಯೆ?

    ಹೌದು, ನಾನು ಓದುತ್ತಿದ್ದಾಗ ಅವಳು ನನ್ನ ಕ್ಲಾಸ್‍ಮೇಟಾಗಿದ್ಲು. ಸಾಯುವ ಮುನ್ನ ಒಂದು ಬಾರಿ ಆ ಹುಡುಗಿಯನ್ನು ನೋಡಬೇಕೆನ್ನಿಸಿದೆ, ಕರೆಸುತ್ತೀರಾ?

    ಆ ಹುಡುಗಿ ಒಪ್ಕೋತಾಳ್ಯೇ?

    ಗೊತ್ತಿಲ್ಲ.

    ಎಲ್ಲಿದ್ದಾಳೆ?

    ಅದೂ ಗೊತ್ತಿಲ್ಲ.

    ಅವನ ಉತ್ತರವನ್ನು ಕೇಳಿದ ಜೈಲರ್‍ನ ಮುಖದಲ್ಲಿ ಸಿಡುಕು, ಅಸಹನೆ ಮತ್ತಷ್ಟು ಪ್ರಸ್ಫುಟವಾಗಿತ್ತು.

    ಹೆಸರೇನು?

    ಚಂದನ.

    ಅವಳು ನಿನಗೇನಾಗಬೇಕು? ಗೆಳತಿ ಎಂದು ಹೇಳಿದ್ಯಲ್ಲಾ?

    ನಾನವಳನ್ನು ಪ್ರೇಮಿಸಿದ್ದೇನೆ.

    ಅವಳೂ ನಿನ್ನನ್ನು ಪ್ರೇಮಿಸಿದ್ದಾಳಡಯೇ? ಉಕ್ಕಿಬರುತ್ತಿದ್ದ ಕೋಪವನ್ನು ಅಡಗಿಸಿಕೊಂಡು ಕೇಳಿದ.

    ಗೊತ್ತಿಲ್ಲ, ನಾನವಳಿಗೆ ಆ ವಿಷಯವನ್ನು ಎಂದೂ ಹೇಳಲಿಲ್ಲ. ಈಗವಳು ಎಲ್ಲಿದ್ದಾಳೋ ಏನೋ ಗೊತ್ತಿಲ್ಲ. ಪ್ರಾಯಶಃ ಮದುವೆಯೂ ಆಗಿರಬಹುದು... ಸುಖವಾಗಿ ಸಂಸಾರವನ್ನೂ ಮಾಡಿಕೊಂಡಿರಬಹುದು. ನನ್ನನ್ನು ಗುರುತಿಸುತ್ತಾಳೋ ಇಲ್ಲವೋ?

    ನೀನು ನಿನ್ನ ಹೆಂಡತಿಯನ್ನು ಕೊಂದಿದ್ದು ನಿಜ ತಾನೆ?

    ಕೊಂದಿದ್ದೇನೋ ನಿಜ.

    ಮಾಮೂಲಾಗಲ್ಲ-ಕುತ್ತಿಗೆಯನ್ನು ಸರಳಿನಿಂದ ಚುಚ್ಚಿ ದಾರುಣವಾಗಿ ಕೊಂದೆ, ಹೌದಾ? ನಿನ್ನ ಹೆಂಡತಿಯ ಅಡ್ಡಿಯನ್ನು ತೊಲಗಿಸಿಕೊಂಡು ಪ್ರೇಯಸಿಯನ್ನು ಕೂಡಿಕೊಳ್ಳುವುದಕ್ಕೆ ತಾನೇ?

    ನಾನು ನನ್ನ ಪ್ರೇಯಸಿಯನ್ನು ಭೇಟಿಯಾಗುವುದಕ್ಕೂ, ನನ್ನ ಹೆಂಡತಿಯ ಕೊಲೆಗೂ ಏನೇನೂ ಸಂಬಂಧವಿಲ್ಲ.

    ಮಹರ್ಷಿಯ ಮಾತಿನ್ನು ಪೂರ್ತಿಯಾಗುವ ಮೊದಲೇ ಜೈಲರ್ ಅವನ ಕಾಲರ್ ಹಿಡಿದುಕೊಂಡು ಮೇಲೆತ್ತಿ ಪಟಪಟನೆ ಎರಡು ಕೆನ್ನೆಗೂ ಬಾರಿಸಿದ. ಅದೇ ಆವೇಶದಲ್ಲಿ ಅವನ ಕುತ್ತಿಗೆಯನ್ನು ಬಗ್ಗಿಸಿ ಬೆನ್ನಿನ ಮೇಲೆ ಮೂರು ನಾಲ್ಕು ಗುದ್ದಿ ದೂರ ತಳ್ಳಿದ. ಮಹರ್ಷಿಯ ಮುಂದಿದ್ದ ತಟ್ಟೆಯಲ್ಲಿದ್ದ ಅನ್ನವೆಲ್ಲಾ ಚೆಲ್ಲಾಪಿಲ್ಲಿಯಾಯ್ತು. ಆ ರಭಸಕ್ಕೆ ಮಹರ್ಷಿ ಗೋಡೆಯ ಹತ್ತಿರ ಬಿದ್ದ. ಜೈಲರ್ ಜೋರಾಗಿ ಉಸಿರು ಬಿಡುತ್ತಾ,

    ಕಳ್ಳನನ್ಮಗ್ನೇ! ಯಾವುದೋ ಹುಡುಗಿಯನ್ನು ಪ್ರೇಮಿಸಿ, ಅವಳನ್ನು ಕಟ್ಟಿಕೊಳ್ಳದೇ ಮತ್ತೊಬ್ಬ ಅಮಾಯಕಳನ್ನು ಮಾಡಿಕೊಂಡ್ಯಾ? ಮಾಡಿಕೊಂಡ ಮೇಲೆ ಪ್ರೇಮಿಸಿದವಳನ್ನು ಮರೆಯಲಾರದೆ ಹೆಂಡತಿಯನ್ನು ಕೊಂದ್ಯಾ? ಅಲ್ಲದೇ ಈಗ ಸುಖವಾಗಿ ಸಂಸಾರ ಮಾಡಿಕೊಂಡಿರುವ ಆ ಹುಡುಗಿಯ ಸಂಸಾರವನ್ನು ಬೀಳುಗೆಡವಲು ನಿನ್ನ ನೇಣನ್ನು ನೋಡಲು ಬಾ ಅನ್ನುತ್ತೀಯಾ? ಅದೇನೇನೋ ನಿನ್ನ ಕೊನೆಯಾಸೆ? ಅದಕ್ಕೇ... ಅದಕ್ಕೇ ಕಣೋ ನಿನಗೆ ನೇಣಿನ ಶಿಕ್ಷೆಯಾಗಿರುವುದು ಎನ್ನುತ್ತಾ ಪುನಃ ಆವೇಶ ಉಕ್ಕಿಬಂದು ಮಹರ್ಷಿಯ ಹತ್ತಿರ ಹೋಗಿ ಅವನ ಕುತ್ತಿಗೆಯ ಮೇಲೆ ಮತ್ತೆರಡು ಕೊಟ್ಟ.

    * * * *

    ವೆಂಕಟರಾಮನ್ ಮುತ್ತು ನಿದ್ರೆಯಿಂದೆಚ್ಚೆತ್ತು ಜಡದಿಂದಲೇ ಕೈ ಚಾಚಿ ಎಡೆತಡೆ ಇಲ್ಲದಂತೆ ಅಲಾರಾಂ ಬಡಿಯುತ್ತಿದ್ದ ಗಡಿಯಾರದ ತಲೆಯ ಮೇಲೆ ಮುಟ್ಟಿದ. ಅಲಾರಾಂ ನಿಂತುಹೋಯ್ತು. ಮೇಲೇಳದೇ ಮತ್ತೆ ಹಾಗೇ ಹಾಸಿಗೆಯ ಮೇಲೆ ಕೊಂಚ ಹೊತ್ತು ಮಲಗಿಕೊಂಡ.

    ಆಗ ರಾತ್ರಿ ಎರಡು ಗಂಟೆಯಾಗಿತ್ತು.

    ಅವನಿಗೆ ಶುಭೋದಯವಾಗಿರಲಿಲ್ಲ. ಮುಂದಿನೆರಡು ಘಂಟೆಗಳಲ್ಲಿ ನೇಣಿಗೆ ಎಲ್ಲ ಏರ್ಪಾಟುಗಳನ್ನು ಮಾಡಬೇಕಾಗಿತ್ತು. ಬೆಳಗಿನ ಝಾವದ ಆರು ಘಂಟೆಗೆ ನೇಣು. ಅದಕ್ಕೆ ಮೊದಲು ಎರಡು ಘಂಟೆಯ ಕೆಲಸವಿತ್ತು. ಹತ್ತಿರವೇ ನಿಂತು ಖೈದಿಗೆ ಸ್ನಾನ ಮಾಡಿಸಬೇಕು. ಭಗವದ್ಗೀತೆಯ ಪುಸ್ತಕವನ್ನು ಕೊಡಬೇಕು. ನೇಣುಗಂಬದ ಹತ್ತಿರ ಏರ್ಪಾಟುಗಳೆಲ್ಲಾ ಸರಿಯಾಗಿಯೋ ಇಲ್ಲವೋ ಎಂದು ಕೊನೆಯ ಬಾರಿಗೆ ಪರೀಕ್ಷಿಸಬೇಕು. ಆ ಎಲ್ಲ ಜವಾಬ್ದಾರಿಗಳು ಅವನವೇ.

    ವೆಂಕಟರಾಮನ್ ಮುತ್ತುವಿಗೆ ಐವತ್ತು ವರ್ಷಗಳ ವಯಸ್ಸು. ಕೆಲವೇ ವರ್ಷಗಳಲ್ಲಿ ನಿಚೃತ್ತನಾಗಿ ಕೇರಳಕ್ಕೆ ಹೊರಟುಹೋಗಬೇಕೆಂದು ಅವನ ಆಶಯವಾಗಿತ್ತು. ಇತ್ತೀಚೆಗೆ ಜೈಲಿನಲ್ಲಿ ನೇಣು ಶಿಕ್ಷೆಯಾಗಿರಲಿಲ್ಲ. ಬಹು ದಿನಗಳ ನಂತರ ಬಂದಿತ್ತು.

    ಮುತ್ತುವಿಗೆ, ನೇಣಿಗೆ ಗೋಣೊಡ್ಡುವ ಖೈದಿಗಳತ್ತ ತುಂಬಾ ಸಹಾನುಭೂತಿ ಇತ್ತು. ಅವನು ಸರ್ವಿಸ್‍ನಲ್ಲಿ ಅಂದಿನವರೆಗೂ ಸುಮಾರು ಐವತ್ತು ನೇಣು ಶಿಕ್ಷೆಗಳನ್ನು ಜಾರಿಗೊಳಿಸಿದ್ದ. ಪ್ರತಿ ಬಾರಿಯೂ ನೇಣೆತ್ತುವ ಮುನ್ನ ಅವನು ತುಂಬಾ ಚಿಂತಿಸುತ್ತಿದ್ದ. ಅಪರಾಧಿ ಎಂಥವನೇ ಆಗಲೀ, ಕೊಲೆ ಅನ್ನುವುದನ್ನು ಒಂದು ಆವೇಶದ ಭರದಲ್ಲಿ ಮಾಡಿಬಿಡುತ್ತಾನೆಂಬುದು ಅವನ ನಂಬಿಕೆ. ಅಂಥ ಆವೇಶದಲ್ಲಿ ಮಾಡಿದ ಕೊಲೆಗೆ ಶಿಕ್ಷೆಯಾಗಿ ಅವನನ್ನು ಕೊಲೆ ಮಾಡುವುದು ಎಂಥ ಪರಿಸ್ಥಿತಿಯಲ್ಲೂ ನ್ಯಾಯವಲ್ಲವೆಂಬುದು ಅವನ ನಂಬಿಕೆಯಾಗಿತ್ತು.

    ಆದರೆ ಈ ಬಾರಿ ಹಾಗೇನು ಅವನು ಭಾವಿಸಿರಲಿಲ್ಲ.

    ಮದುವೆಯಾದ ಆರು ತಿಂಗಳಿಗೇ ಹೆಂಡತಿಯನ್ನು ಕೊಂದ ಅಪರಾಧಿಯತ್ತ ಅವನಿಗೆ ಸ್ವಲ್ಪವೂ ಸಹಾನುಭೂತಿ ಇರಲಿಲ್ಲ. ಮೃತಳ ಫೋಟೋಗಳನ್ನು ನೋಡಿದ್ದ. ಒಂದು ಕಬ್ಬಿಣದ ಸರಳು ಕುತ್ತಿಗೆಯ ಹಿಂಭಾಗದಿಂದಿಳಿದು ಮುಂದೆ ಚುಚ್ಚಿಕೊಂಡು ಹೊರಗೆ ಬಂದಿತ್ತು. ಅಂಥ ಘೋರ ಕೊಲೆಯನ್ನು ಅವನೆಂದಿಗೂ ಕಂಡಿರಲಿಲ್ಲ. ಮಾನವರು ತವು ಕೊಲ್ಲಬೇಕೆಂದುಕೊಂಡವರನ್ನು ಅಷ್ಟು ಘೋರವಾಗಿ ಕೊಲ್ಲುತ್ತಾರೆಂದು ಅವನು ಊಹಿಸಿರಲಿಲ್ಲ. ಸ್ವಂತ ಹೆಂಡತಿಯನ್ನು ಹಾಗೇಕೆ ಕೊಲ್ಲಬೇಕಾಯ್ತು ಎಂಬುದಕ್ಕೆ ಅವನಿಗೆ ಕಾರಣ ಹೊಳೆಯಲಿಲ್ಲ. ಅಂದು ಮಧ್ಯಾಹ್ನ ಆ ವಿಷಯ ಜೈಲು ಅಧಿಕಾರಿಗಳ ನಡುವೆ ಚರ್ಚೆಗೆ ಬಂದಿತ್ತು. ಆಗ ಜೈಲರ್ ಅವನಿಗೆ ಗೊತ್ತಿದ್ದ ಒಂದು ಹೊಸ ವಿಷಯವನ್ನು ಹೇಳಿದ್ದ. ಅಪರಾಧಿಗೆ ಮೊದಲೇ ಮತ್ತೊಬ್ಬ ಹೆಣ್ಣಿನೊಂದಿಗೆ ಪರಿಚಯವಿತ್ತು. ಅವಳನ್ನವನು ಪ್ರೇಮಿಸಿದ್ದ. ಅದರಿಂದಾಗಿ ಹೆಂಡತಿಯ ಅಡ್ಡಿಯನ್ನು ತೊಲಗಿಸಿದನೆಂದು ಜೈಲರ್ ಹೇಳಿದಾಗ ಮುತ್ತುವಿಗೆ ರಕ್ತ ಕತಕತನೆ ಕುದಿಯಿತು.

    ಮುತ್ತುವಿಗೆ ದೈವಭಕ್ತಿ ಜಾಸ್ತಿ. ಹೆಂಡತಿಯತ್ತ ಅಪಾರವಾದ ಪ್ರೇಮ. ಅಂಥ ಮುತ್ತು ಆ ವಿಷಯವನ್ನು ತಿಳಿದು... ಮೊಟ್ಟ ಮೊದಲ ಬಾರಿಗೆ ಒಬ್ಬ ವ್ಯಕ್ತಿಯನ್ನು ನೇಣುಗಂಬಕ್ಕೇರಿಸುವುದಕ್ಕೆ ಸಂತೋಷಿಸಿದ್ದ. ಹೆಂಡತಿಯನ್ನು ಅಷ್ಟು ಘೋರವಾಗಿ ಕೊಲೆಮಾಡಿದ್ದರೂ ಅಂತಿಮ ಕೋರಿಕೆಯಾಗಿ ತನ್ನ ಪ್ರೇಯಸಿಯನ್ನು ನೋಡಬೇಕು ಎಂದು ಅಪರಾಧಿ ಕೋರಿದನೆಂದು ತಿಳಿದಾಗ ಮತ್ತಷ್ಟು ಆವೇಶಗೊಂಡಿದ್ದ. ಅವನ ಕೈಲಿ ಅಧಿಕಾರವಿದ್ದಿದ್ದರೆ ಹಿಂದಿನ ದಿನ ಮಧ್ಯಾಹ್ನವೇ ನೇಣಿಗೇರಿಸಿರುತ್ತಿದ್ದ.

    ಎರಡೂವರೆಯ ಹೊತ್ತಿಗೆ ಕಾಲಕೃತ್ಯಗಳನ್ನು ಮುಗಿಸಿಕೊಂಡು ಕ್ವಾರ್ಟರ್ಸ್‍ನಿಂದ ಹೊರಬಂದ. ಸಿಬ್ಬಂದಿಯ ಕ್ವಾರ್ಟರ್ಸ್ ಜೈಲುಗೋಡೆಯ ಹಿಂದೆಯೇ ಇದ್ದವು. ಅಲ್ಲಿಂದ ಹತ್ತು ನಿಮಿಷಗಳಲ್ಲಿ ಜೈಲನ್ನು ಪ್ರವೇಶಿಸಿದ.

    ಇನ್ನೊಂದು ಘಂಟೆಯಲ್ಲಿ ಅಲ್ಲಿ ಒಂದು ನೇಣು ಶಿಕ್ಷೆ ಜಾರಿಯಾಗುತ್ತದೆಂದು ತಿಳಿದಂತೆ ವಾತಾವರವೂ ಸ್ತಬ್ಧವಾಗಿತ್ತು. ಡಿಸೆಂಬರ್ ತಿಂಗಳಾದ್ದರಿಂದ ಛಳಿಯೂ ಜಾಸ್ತಿಯಾಗೇ ಇತ್ತು.

    ಮುತ್ತು ಸೆಂಟ್ರಿಯ ಪುಸ್ತಕದಲ್ಲಿ ಸಹಿ ಮಾಡಿದ. ಅಲ್ಲಿಂದ ಅರ್ಧ ಫರ್ಲಾಂಗ್ ದೂರದಲ್ಲಿದ್ದ ನೇಣುಗಂಬದ ಹತ್ತಿರ ಹೋದ. ವಧೆಕಾರನಿನ್ನು ಬಂದಿರಲಿಲ್ಲ. ಒಬ್ಬ ಪೊಲೀಸರವನು ನೇಣುಗಟ್ಟೆಯ ಪಕ್ಕದಲ್ಲೇ ಕುಳಿತುಕೊಂಡು ತೂಕಡಿಸುತ್ತಿದ್ದ. ಮರಳಿನ ಚೀಲ, ಹಗ್ಗ, ನೇಣುಗಂಬ ಎಲ್ಲವನ್ನು ಪರೀಕ್ಷಿಸಿ ನೋಡಿದ. ನಂತರ ಖೈದಿಯ ಸೆಲ್‍ನತ್ತ ನಡೆದ. ನೇಣಿಗೇರಿಸುವ ಖೈದಿಯನ್ನು ಬಾಕಿ ಖೈದಿಗಳಿಂದ ದೂರದ ಸೆಲ್‍ನಲ್ಲಿರಿಸುತ್ತಾರೆ. ಮುತ್ತುವನ್ನು ನೋಡುತ್ತಲೇ ಅಲ್ಲಿ ನಿಂತಿದ್ದ ಸೆಂಟ್ರಿ ಸೆಲ್ಯೂಟ್ ಮಾಡಿ ಬೀಗ ತೆಗೆದ. ಮುತ್ತು ಎರಡನೆಯ ಕಾಂಪೌಡಿಗೆ ಪ್ರವೇಶಿಸಿದ.

    ಅಲ್ಲಿ ಸಾಲಾಗಿ ಕ್ರೋಟನ್ ಗಿಡಗಳಿದ್ದುವು. ನಡುವಣ ದಾರಿ ಬೆಳದಿಂಗಳಿನಲ್ಲಿ ಹೊಳೆಯುತ್ತಿತ್ತು. ಅವನಿಗೆ ಇದ್ದಕ್ಕಿದ್ದಂತೆ ಏನೋ ಅನುಮಾನವಾಯ್ತು. ಎಲ್ಲಾ ಸರಿಯಾಗಿಲ್ಲ ಎಂಬ ಇದ್ದಕ್ಕಿದ್ದಂತೆ ಏನೋ ಅನುಮಾನವಾಯ್ತು. ಎಲ್ಲಾ ಸರಿಯಾಗಿಲ್ಲ ಎಂಬ ಯಾವುದೋ ಭಾವನೆ ಬಂದಿತ್ತು. ಅದಕ್ಕೆ ಕಾರಣವೂ ಇತ್ತು. ಕಾಂಪೌಂಡಿನ ಬಾಗಿಲು ತೆರೆಯುತ್ತಲೇ ಒಳಗಿದ್ದ ಸೆಂಟ್ರಿ ಅಲ್ಲಿಗೆ ಬರಬೇಕಾಗಿತ್ತು.

    ಅವನು ಬರಲಿಲ್ಲ.

    ಮುತ್ತುವಿನ ಅನುಮಾನ ನಿಜವಾಗಿತ್ತು. ಅವನಡಿಗಳು ಜೋರಾದವು. ಓಡುವ ನಡಿಗೆಯಿಂದಲೇ ಸೆಲ್ ಹತ್ತಿರ ಹೋದ. ಸೆಂಟ್ರಿ ಮೆಟ್ಟಿಲ ಹತ್ತಿರ ಬಿದ್ದಿದ್ದ. ಅರೆದೆರೆದಿದ್ದ ಬಾಗಿಲು ಅವನನ್ನು ಅಣಕಿಸಿತ್ತು.

    ಒಳಗೆ ಮಹರ್ಷಿ ಇರಲಿಲ್ಲ.

    .................

    ಜೇಬಿನಿಂದ ವಿಷಲ್ ತೆಗೆದು ಮುತ್ತು ಗಟ್ಟಿಯಾಗೂದಿದ.

    ಪೊಲೀಸರ ಅಡಿಗಳ ಸಪ್ಪಳ ದೂರದಿಂದ ಕೇಳಿಸಿತು.

    ಸೆಂಟ್ರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ.

    ಆ ಸೆಂಟ್ರಿಯತ್ತಲೇ ಅಚೇತನನಂತೆ ನೋಡುತ್ತಿದ್ದ ಮುತ್ತು.

    ಒಬ್ಬ ವ್ಯಕ್ತಿ ಮತ್ತೊಬ್ಬನನ್ನು ಅಷ್ಟು ನಿರ್ದಾಕ್ಷಿಣ್ಯವಾಗಿ ಕೊಲ್ಲಬಲ್ಲನೆಂದು ಮುತ್ತು ಕನಸು ಮನಸಿನಲ್ಲೂ ಊಹಿಸಿರಲಿಲ್ಲ.

    ಸೆಂಟ್ರಿಯ ಮುಖ ಜಜ್ಜಿಹೋಗಿತ್ತು. ಮುತ್ತು ಸೆಂಟ್ರಿಯ ಆತ್ಮಶಾಂತಿಗಾಗಿ ಒಂದು ಘಳಿಗೆ ಮೌನವಾಗಿ ದೇವರನ್ನು ಪ್ರಾರ್ಥಿಸಿದ. ಹೆಂಡತಿಯನ್ನೇ ಕೊಂದ ಖೈದಿಯ ಮೇಲೆ ಅವನ ಕ್ರೋಧ ಹತ್ತುಪಟ್ಟು ಜಾಸ್ತಿಯಾಗಿತ್ತು.

    ನಿನ್ನನ್ನು ನಮ್ಮವರು ಹೇಗಾದರೂ ಖಂಡಿತಾ ಹಿಡಿಯುತ್ತಾರೆ, ಮಹರ್ಷಿ! ಆಗ ನಾನೇ ನಿನ್ನ ಕುತ್ತಿಗೆಗೆ ನೇಣುಹಗ್ಗ ಹಾಕುತ್ತೇನೆ. ನಿನ್ನಂಥ ನರರೂಪ ರಕ್ಷಸನ ಶರೀರದಿಂದ ಕೊನೆಯುಸಿರು ಹೋಗುವಾಗ ನೀನು ವಿಲವಿಲನೆ ಒದ್ದಾಡುವುದನ್ನು ನೋಡಿದಲ್ಲದೇ ನಾನು ರಿಟೈರಾಗುವುದಿಲ್ಲ. ತನ್ನಲ್ಲೆ ಶಪಥ ಮಾಡಿದ.

    ಎರಡು

    ಕಾಲಿಂಗ್‍ಬೆಲ್‍ನ ಶಬ್ದ ಕೇಳಿ ಓದುತ್ತಿದ್ದ ಪುಸ್ತಕವನ್ನು ಬದಿಗಿರಿಸಿ ಬಂದು ವರ್ಮ ಬಾಗಿಲು ತೆರೆದ. ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಯನ್ನು ನೋಡಿ ಅಪ್ರಯತ್ನವಾಗಿ ಎರಡಡಿ ಹಿಂದಿರಿಸಿ, ನೀನಾ...! ತನ್ನ ಕಣ್ಣನ್ನು ತಾನೇ ನಂಬದವನಂತೆ ಕೇಳಿದ.

    ಮಹರ್ಷಿ ಒಳಗಡಿಯಿರಿಸುತ್ತಾ, ಏಕೆ? ದೆವ್ವವಾಗಿ ಬಂದೆ ಅಂದು ಕೊಂಡ್ಯಾ? ನಗಲು ಪ್ರಯತ್ನಿಸುತ್ತಾ ಕೇಳಿದ.

    ವರ್ಮ ಬಾಗಿಲವರೆಗೂ ಹೋಗಿ ಅತ್ತ ಇತ್ತ ನೋಡಿ ತನ್ನ ಮನೆಯನ್ನು ಯಾರು ನೋಡುತ್ತಿಲ್ಲವೆಂದು ಖಚಿತಪಡಿಸಿಕೊಂಡು ಬಂದ.

    ಜೈಲಿನಿಂದ ತಪ್ಪಿಸಿಕೊಂಡ್ಯಾ?

    ತಪ್ಪಿಸಿಕೊಳ್ಳದಿದ್ದರೆ ಈ ಬೆಳಗಿನ ಝಾವ ಗಲ್ಲಿಗೇರಬೇಕಾಗಿತ್ತು.

    ಇದ್ಯಾವುದೂ ಪೇಪರಿನಲ್ಲಿ ಬಂದಿಲ್ಲವಲ್ಲಾ?

    ಬೆಳಗಿನ ಝಾವ ಎರಡು ಗಂಟೆಗೆ ತಪ್ಪಿಸಿಕೊಂಡೆ. ಅಷ್ಟು ಹೊತ್ತುಗೆಲ್ಲಾ ಪೇಪರು ಪ್ರಿಂಟಾಗಿರುತ್ತದೆ. ನಾಳೆ ಬರಬಹುದು... ಎಂದು ಹೇಳಿ ಕುರ್ಚಿಯಲ್ಲಿ ಕೊಡುತ್ತಾ, ರವಿವರ್ಮಾ, ತುಂಬಾ ಆಯಾಸವಾಗಿದೆ ಕಣೋ. ಒಂದು ಲೋಟ ಕಾಫಿ ಬೇಕು ಎಂದ.

    ವರ್ಮ ಒಳಗೆ ಹೋಗಿ ಸ್ವೌವ್‍ನ ಮೇಲೆ ನೀರಿರಿಸಿ ಬಂದ. ಅವನಿಗೆ ತುಂಬಾ ಎಗ್ಸೈಟಿಂಗ್ ಆಗಿತ್ತು. ಮಹರ್ಷಿಯ ಎದುರಿಗೆ ಕುಳಿತು, ಇದನ್ನು ನಂಬೋಕೆ ಆಗ್ತಿಲ್ಲ. ನೀನು ಇಂಥ ಸಾಹಸ ಮಾಡ್ತೀ ಅಂದ್ಕೊಂಡಿರ್ಲಿಲ್ಲ ಎಂದ.

    ಮಾಡಬೇಕು ಅಂತ ನಾನೂ ಅಂದ್ಕೊಂಡಿರ್ಲಿಲ್ಲ, ಇದರ ಫಲಿತಾಂಶ ಏನೂಂತಾನೂ ಗೊತ್ತು. ಎಂದಾದರೊಂದು ದಿನ ಪೊಲೀಸರು ನನ್ನನ್ನು ಹಿಡಿಯುತ್ತಾರೆ. ನೇಣುಗಂಬವನ್ನು ಹತ್ತಿಸುವವರೆಗೂ ನಿದ್ರಿಸುವುದಿಲ್ಲ.

    ಅದೇ ನಿಜವಾದ ಪಕ್ಷದಲ್ಲಿ...

    ಮಹರ್ಷಿ ಗೆಳೆಯನ ಅನುಮಾನವನ್ನರ್ಥ ಮಾಡಿಕೊಂಡಂತೆ ನಕ್ಕ.

    ನೇಣುಗಂಬ ಹೇಗೂ ಅನಿವಾರ್ಯವೆಂದಿರುವಾಗ ಇಷ್ಟು ಕಷ್ಟಪಟ್ಟೇಕೆ ತಪ್ಪಿಸಿಕೊಂಡೆ ಅನ್ನುವುದು ನಿನ್ನ ಪ್ರಶ್ನೆಯಲ್ಲವೇ?

    ವರ್ಮ ಏನೂ ಮಾತೂ ಆಡಲಿಲ್ಲ. ಮಹರ್ಷಿ ನಿಡಿಯುಸಿರೆಳೆದು,

    ಸಾಯುವ ಮುನ್ನ ಒಮ್ಮೆ ಚಂದನಳನ್ನು ನೋಡಬೇಕೆಂದುಕೊಂಡೆ, ಜೈಲಿನವರನ್ನು ಕೇಳಿದಾಗ ಒಪ್ಪಿಕೊಳ್ಳಲಿಲ್ಲ. ಸಾವು ಸನುಹವಾದಂತೆ ಚಂದನಳನ್ನು ನೋಡಬೇಕೆಂಬ ಬಯಕೆ ಜಾಸ್ತಿಯಾಯ್ತು. ಇನ್ನು ಸಹಿಸಲಾರದೆ ಹೊರಬಂದೆ!

    ಇದು ಎಂಥ ರಿಸ್ಕು ಎಂದು ಯೋಚಿಸಿದ್ದೀಯಾ?

    ಸಾವಿನತ್ತ ನನಗೆ ಹೆದರಿಕೆ ಇಲ್ಲ. ಸಾಯುವ ಮುನ್ನ ಅವಳನ್ನು ನೋಡಲೇಬೇಕೆಂಬ ಒಂದು ಆಸೆ.

    ಲೋ! ನಿನ್ನ ಹುಚ್ಚ ಅನ್ನಬೇಕೋ ಅಥವಾ ಪ್ರೇಮಕ್ಕೆ ಯಾರೂ ಕೊಡದಷ್ಟು ಮೌಲ್ಯವನ್ನು ಕೊಡುತ್ತಿರುವುದಕ್ಕೆ ಅದ್ಭುತ ವ್ಯಕ್ತಿ ಎಂದು ಕರೆಯುವುದೋ ಯಾವುದು ಅರ್ಥವಾಗಲಿಲ್ಲ.

    ನೀನೇನಾದರೂ ಅಂದುಕೋ, ನಾನು ಚಂದನಳನ್ನು ನೋಡಲೇಬೇಕು.

    ಸರಿ, ಅವಳೆಲ್ಲಿದ್ದಾಳೆ?

    ಗೊತ್ತಿಲ್ಲ.

    ನಿನಗಾಗಿ ಪೊಲೀಸರು ಹುಡುಕುತ್ತಿರುವಾಗ ಆ ಹುಡುಗಿ ಎಲ್ಲಿದ್ದಾಳೇಂತ ಹೇಗೆ ತಿಳಿದುಕೊಳ್ಳೋದು? ಯಾರನ್ನಾದ್ರೂ ಮದುವೆ ಗಿದುವೆ ಮಾಡಿಕೊಂಡಿದ್ದಾಳೋ ಏನೋ? ಈ ರಾಜ್ಯದಲ್ಲಿದ್ದಾಳೋ ಇಲ್ಲವೋ, ಯಾವುದೂ ಗೊತ್ತಿಲ್ಲವಲ್ಲಾ?

    ಕಲೇಜಿಗೆ ಹೋಗಿ ಹಳೆಯ ರೆಕಾರ್ಡ್‍ಗಳನ್ನು ಪರಿಶೀಲಿಸಿದರೆ ಅವಳ ಅಡ್ರೆಸ್ ಸಿಗಬಹುದು. ಅಲ್ಲಿಂದ ಹುಡುಕಲು ಪ್ರಯತ್ನಿಸಬೇಕು.

    ಒಂದು ಪಕ್ಷ ಅವಳು ಈ ದೇಶದಲ್ಲೇ ಇಲ್ಲದಿದ್ದರೆ...?

    ಮೊದಲು ರೆಕಾರ್ಡ್‍ಗಳಲ್ಲಿ ಪ್ರಯತ್ನಿಸಿದರೆ ಅವಳ ಪರ್ಸನಲ್ ಅಡ್ರೆಸ್ ಸಿಗಬಹುದು. ಅಲ್ಲಿಂದ ಎನ್‍ಕ್ವೈರ್ ಮಾಡಿಕೊಂಡು ಹೋದರೆ ಈಗಿನ ಅಡ್ರೆಸ್ ಸಿಗಬಹುದು.

    ಇದಕ್ಕೆಲ್ಲಾ ಕೊನೆಯ ಪಕ್ಷ ಒಂದು ವಾರವಾದರೂ ಆಗುತ್ತದೆ.

    ಒಂದು ತಿಂಗಳಾದರೂ ಸರಿ, ನಾನವಳನ್ನು ನೋಡಬೇಕು.

    ವರ್ಮ ಮಹರ್ಷಿಯತ್ತ ವಿಸ್ಮಿತನಾಗಿ ನೋಡಿದ. ಅವಳ ಸಹಪಾಠಿಯಗಿದ್ದಾಗ ನಿನ್ನ ಪ್ರೇಮವನ್ನು ಅವಳ ಮುಂದೆ ವ್ಯಕ್ತಪಡಿಸಲಿಲ್ಲ. ಅವಳಿಗೆ ನಿನ್ನ ಹೆಸರಾದರೂ ನೆನಪಿದೆಯೋ ಇಲ್ಲವೋ? ಈಗ ಸಾಯುವ ಮುನ್ನ ಅವಳನ್ನು ಒಂದು ಬಾರಿ ನೋಡಬೇಕು ಎನ್ನುತ್ತಿದ್ದೀ! ಎಂದು ಹೇಳಿ ನಿಡಿದಾದ ಉಸಿರೆಳೆದು, ಸರಿ ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಅದ್ಸರಿ, ಈ ಹತ್ತು ದಿನ ಎಲ್ಲಿರ್ತೀ?

    ಎಲ್ಲಿದ್ರೆ ಒಳ್ಳೇದು ಅಂತೀ? ಮಹರ್ಷಿ ಎದಿರು ಪ್ರಶ್ನೆ ಕೇಳಿದ.

    ನನ್ನ ಮನೆಯಲ್ಲೇ ಇದ್ದರೆ ಅಪಾಯ. ಪೊಲೀಸರು ನಿನ್ನನ್ನು ಅರೆಸ್ಟ್ ಮಾಡಿದಾಗ, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ನಾನು ನಿನಗೆ ಸಹಾಯ ಮಾಡಿದ್ದು ಎಲ್ಲರಿಗೂ ಗೊತ್ತು. ನೀನು ತಪ್ಪಿಸಿಕೊಂಡಿದ್ದಿ ಎಂದು ತಿಳಿಯುತ್ತಲೇ ಅವರ ಅನುಮನ ನನ್ನ ಮೇಲೇ ಬರುತ್ತದೆ. ಆದ್ದರಿಂದ ಇಲ್ಲಿರುವುದು ಕ್ಷೇಮವಲ್ಲ!

    ಯಾವುದಾದ್ರೂ ಹೋಟೆಲ್‍ನಲ್ಲಿರುತ್ತೇನೆ! ಎಂದ ಮಹರ್ಷಿ.

    ಹೋಟೆಲ್‍ನಲ್ಲೇ? ವರ್ಮ ಆಶ್ಚಂiÀರ್iದಿಂದ ಕೇಳಿದ.

    ಹೌದು, ಸಾಧಾರಣವಾಗಿ ಜೈಲಿನಿಂದ ತಪ್ಪಿಸಿಕೊಂಡವರು ಎಲ್ಲಾರೂ ಅಡಿಗಿಕೊಂಡಿರುತ್ತಾರೆ. ಹೊರಗೆ ಬರಲು ಹೆದರುತ್ತಾರೆಂದು ಎಲ್ಲರೂ ತಿಳಿದುಕೊಂಡಿದ್ದಾರೆ. ನಾನು ಮಾಮೂಲಾಗಿ ಹೋಟೆಲಿನಲ್ಲಿದ್ದರೆ ಯಾರಿಗೂ ಅನುಮಾನ ಬರುವುದಿಲ್ಲ. ಸ್ವಲ್ಪ ನನ್ನ ಅವತಾರವನ್ನು ಬದಲಾಯಿಸಿಕೊಳ್ಳುತ್ತೇನೆ. ಆ ಹುಡುಗಿ ಎಲ್ಲಿದ್ದಾಳೆಂದು ನೀನು ಪ್ರಯತ್ನ ಮಾಡಿ ಗೊತ್ತಾಗುತ್ತಲೇ ನನಗೆ ಹೇಳು. ಹೋಗಿ ಒಂದು ಸಾರಿ ನೋಡಿ ಅಲ್ಲಿಂದ ಹಾಗಿಂದ ಹಾಗೇ ಮತ್ತೆ ಜೈಲಿಗೇ ಹೊರಟುಹೋಗುತ್ತೇನೆ.

    ಆ ಹುಡುಗಿಯನ್ನು ನೋಡಿದ ಮೇಲೆ ಮತ್ತೆ ಜೈಲಿಗೇ ಹೋಗುತ್ತೀಯೋ, ಅಥವಾ ಪುನಃ ಪ್ರಾಣದ ಮೇಲೆ ಆಸೆ ಬರುತ್ತೋ ಯಾರಿಗೆ ಗೊತ್ತು? ಸರಿ, ಆ ಹುಡುಗಿಯನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿ ಎದ್ದು, ಹ್ಞುಂ... ನಡಿ, ನಿನ್ನನ್ನು ಹೋಟೆಲಿನಲ್ಲಿ ಬಿಟ್ಟು ಬರ್ತೀನಿ ಎಂದ.

    ಬೇಡ... ನೀನೂ, ನಾನೂ ಒಟ್ಟಿಗೆ ಹೋದರೆ ಯಾರಿಗಾದರೂ ಅನುಮಾನ ಬಂದರೆ ಅಪಾಯ, ನಾನೊಬ್ಬನೇ ಹೋಗಿ ರೂಂ ತೊಗೋತೀನಿ. ನಾಳೆ ನಾನು ಸಿಕ್ಕಿಬಿದ್ದರೂ ಇದರಲ್ಲಿ ನಿನ್ನ ಪಾತ್ರವಿರುವುದಿಲ್ಲ ಎಂದು ಹೇಳಿ ಮಹರ್ಷಿ ಹೊರಗೆ ನಡೆದ.

    ಮಹರ್ಷಿ ಬಾಗಿಲು ತೆರೆದು ಹೊರಗಡಿಯಿರಿಸಲಿದ್ದಾಗ ವರ್ಮ ಹಿಂದಿನಿಂದ, ಮಹರ್ಷಿ! ಎಂದು ಕರೆದ.

    ಮಹರ್ಷಿ ನಿಂತು ಹಿಂದಿರುಗಿ ನೋಡಿದ.

    ಒಂದು ನಿಮಿಷ ಒಂದು ಹೇಳಿ ವರ್ಮ ಒಳಗೆ ಹೋದ. ಸುಮಾರು ಐದು ನಿಮಿಷ ಹುಡುಕಿ, ಪೆಟ್ಟಿಗೆಯ ಒಳಗೆ ಹುಡುಕಿ ಕೆಳಗಿನಿಂದ ಒಂದು ಪುಸ್ತಕವನ್ನು ತೆಗೆದುಕೊಂಡು ಬಂದ.

    ಏನಿದು? ಕೇಳಿದ ಮಹರ್ಷಿ.

    ನಿನಗೆ ನೇಣು ಶಿಕ್ಷೆಯಾಯ್ತೆಂದು ತಿಳಿಯುತ್ತಲೇ ಇನ್ನಿದರ ಅಗತ್ಯ ಬರದೆಂದು ಪೆಟ್ಟಿಗೆಯ ಬುಡದಲ್ಲಿರಿಸಿದ್ದೆ. ಈಗ ನೀನು ಹೇಗೊ ಹೊರಬಂದಿರುವುದರಿಂದ ಇದನ್ನೊಂದು ಬಾರಿ ಓದಿದರೆ ಒಳ್ಳೆಯದು.

    ಮಹರ್ಷಿ ಆಶ್ಚರ್ಯದಿಂದ ಅದನ್ನು ತೆಗೆದುಕೊಂಡ. ಮೊದಲ ಪುಟ ತಿರುಗಿಸಿದ. ಅದೊಂದು ಡೈರಿ. ಮೊದಲ ಪುಟದಲ್ಲಿನ ಹೆಸರನ್ನು ನೋಡುತ್ತಲೇ ಅವನ ಮುಖದ ಚಹರೆಯೇ ಬದಲಾಯ್ತು.

    ಶ್ರೀವಾಣಿ.

    ಅವನ ಹೆಂಡತಿ!!

    ಮುಖದ ಮೇಲೆ ನಗೆಯ ತೆರೆಯನ್ನು ತಂದುಕೊಳ್ಳಲು ಪ್ರಯತ್ನಿಸುತ್ತಾ,

    ವರ್ಮ, ಈ ಡೈರಿಯನೋದಿ ನಾನು ಹೊಸದಾಗಿ ತಿಳಿದುಕೊಳ್ಳುವಂಥದು ಏನಿದೆ?

    ಓದಯ್ಯಾ! ಅದರಿಂದ ನಿನಗೆಂಥಾ ನಷ್ಟವೂ ಆಗುವುದಿಲ್ಲವಲ್ಲಾ? ವರ್ಮ ಕ್ಲುಪ್ತವಾಗಿ ಹೇಳಿದ.

    ಸರಿ... ಹೋಗಿಬರ್ತೀನಿ ಡೈರಿಯನ್ನು ಕೈಲಿ ಹಿಡಿದುಕೊಂಡು ಮಹರ್ಷಿ ಹೊರಗಡಿಯಿರಿಸಿದವನೇ ನೇರವಾಗಿ ಒಂದು ಹೋಟೆಲಿಗೆ ಹೋದ. ಬದುಕಿನ ಕೊನೆಯ ಹತ್ತು ದಿನಗಳನ್ನಾದರೂ ಒಂದು ಒಳ್ಳೆಯ ಹೋಟೆಲಿನಲ್ಲಿ ಕಳೆಯಬೇಕೆಂದುಕೊಂಡಿದ್ದ. ವರ್ಮ ಕೊಟ್ಟಿದ್ದ ಹಣ ಜೇಬಿನಲ್ಲಿತ್ತು.

    ಜೈಲಿನಿಂದ ತಪ್ಪಿಸಿಕೊಂಡ ಖೈದಿ ಎಂದು ಶೀರ್ಷಿಕೆ ಕೊಟ್ಟು ಫೋಟೋ ಹಾಕಿ ಹಿಡಿದುಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡಲಾಗುವುದು ಎಂದು ಪ್ರಕಟಿಸುವುದು ಸಿನಿಮಾದಲ್ಲಿ ಮಾತ್ರವೇ ಎಂಬುದು ಅವನಿಗೆ ಗೊತ್ತಿತ್ತು. ಅಂದು ಬೆಳಗಿನ ಝಾವ ನಡೆದಿದ್ದು ಇನ್ನೂ ಹೊರಬಿದ್ದಿರಲಿಲ್ಲ. ಆದ್ದರಿಂದ ಅವನು ಹೆದರುವ ಅಗತ್ಯವಿರಲಿಲ್ಲ. ಮಾಮೂಲಾಗಿ ಹೋಗಿ ಕೌಂಟರಿನಲ್ಲಿ ಸಹಿ ಹಾಕಿ ರೂಂ ತೆಗೆದುಕೊಂಡ. ಅದು ಮೂರಂತಸ್ತಿನ ಹೋಟೆಲು. ಅವನಿಗೆ ಸಿಕ್ಕಿದ್ದು ಮೂರನೆಯ ಅಂತಸ್ತಿನಲ್ಲಿ ಕೋಣೆ. ಒಂದು ರೀತಿಯಲ್ಲಿ ಅದೂ ಒಳ್ಳೆಯದೇ ಎಂದುಕೊಂಡು ರಿಸೆಪ್ಷನ್‍ನಿಂದ ರೂಂನ ಬೀಗದ ಕೈ ತೆಗೆದುಕೊಂಡು ರೂಂಗೆ ಹೋದ.

    ಕೈಲಿದ್ದ ಡೈರಿಯನ್ನು ಹಾಸಿಗೆಯ ಮೇಲೆ ಹಾಕಿ ಬಾತ್‍ರೂಂಗೆ ಹೋಗಿ ಸುಮಾರು ಒಂದು ಘಂಟೆಯ ಕಾಲ ಸ್ನಾನ ಮಾಡಿದ. ಬಹಳ ದಿನಗಳ ನಂತರ ಮೈ ಮೇಲೆ ಬಿಸಿ ನೀರು ಬಿದ್ದಿದ್ದರಿಂದ ಆಹ್ಲಾದಕರವಾಗಿತ್ತು.

    ಹಿಂದಿನ ದಿನ ರಾತ್ರಿ ಜೈಲಿನಿಂದ ತಪ್ಪಿಸಿಕೊಂಡಿದ್ದರಿಂದ ನಿದ್ರೆಯಿರಲಿಲ್ಲ. ಹಗೇ ಹಾಸಿಗೆಯ ಮೇಲುರುಳಿಕೊಂಡ. ಕೈಗೆ ಡೈರಿ ತಾಕಿತು. ಅಸಹನೆಯಿಂದ ಅದನ್ನು ಪಕ್ಕಕ್ಕೆ ಬಿಸಾಡಿದ.

    ಹೆಂಡತಿಗೆ ಸಂಬಂಧಿಸಿದ ವಸ್ತುಗಳೇ ಅಲ್ಲ, ಅವಳ ನೆನಪೂ ಅವನ ಮನಸ್ಸನ್ನು ಕದಡುತ್ತಿದ್ದುವು. ಅಷ್ಟು ಹೊತ್ತು ಮುತ್ತಿ ಬಂದಿದ್ದ ನಿದ್ದೆ ದೂರವಾಯ್ತು. ಬಲವಂತದಿಂದ ನಿದ್ರಿಸಲು ಪ್ರಯತ್ನಿಸಿದ. ಮೆಲ್ಲಮೆಲ್ಲನೆ ನಿದ್ರೆಗೆ ಜಾರುತ್ತಿದ್ದಾಗ ಅವನ ಯೋಚನೆ ಹಿಂದೆ ಹಿಂದೆ ಸರಿಯಿತು.

    ಮೂರು

    ಹೆಣ್ಣು – ಗಂಡುಗಳ ಬದುಕಿನಲ್ಲಿ ಎರಡನೆಯ ಹಂತದತ್ತ ಅಡಿಯಿರಿಸುವ ಮೊದಲ ರಾತ್ರಿ... ನಿಷೇಕದ ದಿನದ ರಾತ್ರಿ? ವಧುವಿನ ಕನಸಿನ ಮನೆಗೆ ಬುನಾದಿ ಬೀಳಬೇಕಾದರೂ, ವರನ ಭವಿಷ್ಯ ಮಂದಿರ ಬುಡಸಮೇತ ಉರುಳಬೇಕಾದರೂ ಆ ರಾತ್ರಿಯೇ ಪ್ರಾರಂಭವಾಗುವುದು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು, ಒಬ್ಬರ ಮೇಲೊಬ್ಬರಿಗೆ ವಿಮುಖತೆಯುಂಟಾಗಲೂ ಕೂಡ ಬಾಳ ಸಂಪುಟದ ಮೊದಲ ವಾಕ್ಯ ಕಂಡುಬರುವುದೂ ಅಂದು ರಾತ್ರಿಯೇ.

    ಅನಾಘ್ರಾಣಿತ ಕುಸುಮಗಳ ಪರಿಪೂರ್ಣತೆಯನ್ನು ಪಡೆಯಬೇಕಾಗಲೀ, ಶಲಭಗಳಂತೆ ಬಾಡಬೇಕಾದರೂ ಆ ರಾತ್ರಿಯೇ ಅಂಕುರಾರ್ಪಣವಗುವುದು.

    * * * *

    ಆ ಕೋಣೆಯಲ್ಲಿ... ಜಾಜಿ ಹೂವಿನ ಪರಿಮಳ, ಅಗರಬತ್ತಿಯ ಸುಗಂಧದ ವಾಸನೆ, ಚಪ್ಪರಗಾಲಿನ ಮಂಚ, ಮೆತ್ತನೆಯ ಹಾಸಿಗೆ... ಎಲ್ಲವೂ ವಿರಹದಿಂದ ನೊಂದುಕೊಳ್ಳುತ್ತಿದ್ದುವು.

    ನಿಷೇಕವೆನ್ನುತ್ತಲೇ ಅಷ್ಟು ದಿನವೂ ಸುರುಳಿ ಸುತ್ತಿಕೊಂಡು ಜಡತನದಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಮೆತ್ತನೆಯ ಹಾಸಿಗೆಗಳು ಎದೆ ಬಿಚ್ಚಿ ಧೂಳು ಕೊಡವಿಕೊಂಡು ಹೊಸ ದುಪ್ಪಟಿಗಳನ್ನು ಹರಡೆಂದವು.

    ಇನ್ನು ಆ ಮಂಚದ ಕಾತರ ಹೇಳತೀರದು. ಕದಲಿಕೆಗೆ ಕಿರ್ ಎಂದು ಶಬ್ಧ ಮಾಡಿದರೆ ಆ ಹೊಸ ಜೋಡಿ ನಾಚಿಕೆಪಡಬಹುದೆಂದುಕೊಂಡು ಬೋಲ್ಟುಗಳನ್ನೆಲ್ಲಾ ಬಿಗಿದುಕೊಂಡಿತ್ತು. ಇನ್ನು ಹೂವುಗಳು ನಮಗಿಂತಲೂ ಕೋಮಲವಾಗಿರುವ ವಧುವಿನ ಶರೀರ ಅವನ ತೂಕದಿಂದ ಎಲ್ಲಿ ಕಂದಿಹೋಗುತ್ತದೋ ಎಂದುಕೊಂಡು ಹಾಸಿಗೆಯ ತುಂಬಾ ಹರಡಿಕೊಂಡು ಮುಗ್ಧ ಮುತ್ತೈದೆಯರಂತಿದ್ದವು.

    ಧೂಪಕ್ಕೆ ವಿರಹ ಜಾಸ್ತಿಯಾಗಿ ಸುಳಿ ಸುತ್ತುತ್ತಾ ಕೋಣೆಯ ತುಂಬಾ ತುಂಬಿಕೊಂಡು ಅವಳೆಲ್ಲಿ ಎಂದು ಹುಡುಕಾಡುತ್ತಿದ್ದುವು.

    ಎಲ್ಲಿಕ್ಕಿಂತಲೂ ವಿಷಾದದಿಂದಿದ್ದುದು ಆ ರೂಂನಲ್ಲಿದ್ದ ಒಂದೇ ಒಂದು ದೀಪ. ಅಂದು ರಾತ್ರಿಗೆ ಅವರಿಗೆ ತನ್ನ ಅಗತ್ಯವಿಲ್ಲವೆಂಬ ಚಿಂತೆಯಿಂದ ಡಿಂ ಆಗಿ ಬೆಳಗುತ್ತಿತ್ತು.

    ಅದೇ ಸಮಯದಲ್ಲಿ... ಹೆಂಗಳೆಯರ ನಗು ಬಾಗಿಲನ್ನು ತಳ್ಳಿತು. ಬಳೆಗಳ ಗಲಗಲ ಸದ್ದು ಅವಳನ್ನು ಒಳಕ್ಕೆ ನೂಕಿದವು. ನಗೆಯ ಚಟಾಕಿ ಮತ್ತೆ ಬಾಗಿಲನ್ನು ಮುಚ್ಚಿಕೊಂಡಿತ್ತು.

    ತಾನೆ ಮುಂದಡಿ ಇರಿಸಬೇಕೋ, ಅವನೇ ಬಂದು ತೋಳಿನಿಂದ ಸೊಂಟ ಬಳಸಿ ಕರೆದುಕೊಂಡು ಹೋಗುತ್ತಾನೋ... ಎಂದು ಅರ್ಥವಾಗದಂತೆ ಅಲ್ಲೇ ಕೊಂಚ ಹೊತ್ತು ನಿಂತುಬಿಟ್ಟಳು.

    ಅವನ ಪರಿಸ್ಥಿತಿಯೂ ಹಾಗೇ ಇತ್ತು.

    ಕೊನೆಗವಳೇ ಮುಂದಡಿಯಿರಿಸಿದಳು.

    ಅವನೆದುರಿಗೆ ಬಂದು ತಲೆತಗ್ಗಿಸಿ ನಿಂತುಕೊಂಡಳು.

    ಆ ರಾತ್ರಿಗಾಗಿ ಮನಸ್ಸಿನಲ್ಲಿ ಏನೇನೋ ರಿಹರ್ಸಲ್ಸ್ ಮಾಡಿಕೊಂಡು, ಎಲ್ಲಾವನ್ನು ಮರೆತು, ಏನು ಮಾಡಬೇಕೆಂದು ತೋಚದೇ ಹಾಗೇ ಕುಳಿತುಬಿಟ್ಟ.

    ಗಡಿಯಾರದ ಸೆಕೆಂಡಿನ ಮುಳ್ಳು ಘಳಿಗೆ ಘಳಿಗೆಗೂ ‘ಮುಳ್ಳು’ ಚುಚ್ಚಿದಂತಾಗಿ, ಗಂಟಲು ಸರಿಪಡಿಸಿಕೊಂಡು, ಕುತ್ಕೋ ಶ್ರೀವಾಣಿ...! ಎಂದ.

    ಶ್ರೀವಾಣಿ ಹಾಲಿನ ಲೋಟವನ್ನು ಕೊಟ್ಟು ಮಂಚದ ಕೊನೆಯಲ್ಲಿ ಕುಳಿತುಕೊಂಡಳು.

    ಅವನು ಅರ್ಧದಷ್ಟು ಕುಡಿದು ಅವಳ ಕೈಗೆ ಲೋಟವನ್ನು ಕೊಟ್ಟ. ಅವಳೂ ಕುಡಿದು ನಂತರ ಲೋಟವನ್ನು ತಾನೇ ತೆಗೆದುಕೊಂಡು ಪಕ್ಕದಲ್ಲಿರಿಸಿ ನೇರವಾಗಿ ಅವಳ ಮುಖವನ್ನು ನೋಡಿದ.

    ತುಂಬಿಕೊಂಡಿದ್ದ ನಿಶ್ಶಬ್ದ ಅವನನ್ನು ‘ಅನೀಸಿ’ಯ ಪಾಲು ಮಾಡಿತ್ತು. ಅದನ್ನು ಭಂಗಪಡಿಸುವವನಂತೆ, ಶ್ರೀವಾಣೀ, ಏನಾದ್ರೂ ಮಾತನಾಡು ಎಂದು ಕೇಳಿದ.

    ‘ಏನು ಮಾತನಾಡಲಿ?’ ಎನ್ನುವಂತೆ ಅವನ ಮುಖ ನೋಡಿದಳು. ಅವನ ಮಾತಿಗೆ ಏನಾದರೂ ಉತ್ತರ ಹೇಳದಿದ್ದರೆ ಚೆನ್ನಾಗಿರುವುದಿಲ್ಲ ಎಂದುಕೊಂಡು ಮೆಲ್ಲಗೆ ತಲೆ ಎತ್ತಿ, ಏನು ಮಾತಾಡಲಿ? ಕೇಳಿದಳು.

    ಏನಾದ್ರೂ ನಿನಗಿಷ್ಟವಾದ ಟಾಪಿಕ್ ಎಂದ.

    ಅವಳು ಉತ್ತರಿಸಲಿಲ್ಲ. ನೆಲದತ್ತಲೇ ನೋಡುತ್ತಿದ್ದ ಅವಳ ಕಣ್ಣಿನಲ್ಲಿ ಎಂಥ ಯೋಚನೆಗಳಿದ್ದುವೆಂದು ಅವನಿಗೆ ಅರ್ಥವಾಗಲಿಲ್ಲ.

    ನಿಶ್ಶಬ್ದವನ್ನು ಸಹಿಸಲಾರದವನಂತೆ ಅವಳಿಗೆ ಹತ್ತಿರವಾಗಿ ಜರುಗಿದ. ಸಲಿಗೆಯಿಂದ ಅವಳ ಕೈ ಹಿಡಿದುಕೊಂಡು, ನನ್ನ ವಿಚಾರವನ್ನು ಸ್ವಲ್ಪ ಹೇಳಬೇಕೆಂದುಕೊಂಡಿದ್ದೇನೆ ಎಂದ.

    ಏನು ಮಾತನಾಡಬೇಕೆಂದು ಅವಳಿಗೆ ತೋಚಲಿಲ್ಲ. ನಿಮ್ಮಷ್ಟ ಕ್ಲುಪ್ತವಾಗಿ ಹೇಳಿದಳು. ಅವಳ ಬಾಯಿಂದ ಆ ಮಾತು ಹೊರಬರುತ್ತಲೇ ಅವಳತ್ತ ಮತ್ತಷ್ಟು ಜರುಗಿ ಅವಳ ತಲೆಯನ್ನು ತೋಳಿನಲ್ಲಿ ಹಿಡಿದುಕೊಂಡು ನಾನೊಂದು ಪ್ರಶ್ನೆಯನ್ನು ಕೇಳುತ್ತೇನೆ. ತಪ್ಪು ತಿಳಿದುಕೊಳ್ಳುವುದಿಲ್ಲ ತಾನೇ? ಕೇಳಿದ.

    ಮೊದಲ ರಾತ್ರಿ ಗಂಡನಾದವನು ಒಂದು ಪ್ರಶ್ನೆ ಕೇಳಲೂ ಪರ್ಮಿಷನ್ ಕೇಳುವುದು ಹೆಣ್ಣಾದವಳಿಗೆ ಒಂದು ತುಂಬು ತೃಪ್ತಿಯನ್ನು ಕೊಡುತ್ತದೆ.

    ಕೇಳಿ ಎಂದಳು.

    ಮದುವೆಗೆ ಮೊದಲು... ಒಂದು ಘಳಿಗೆ ನಿಲ್ಲಿಸಿ, ಯಾರನ್ನಾದ್ರೂ ಪ್ರೇಮಿಸಿದ್ಯಾ?

    ಅವನ ಮಾತು ಮೊದಮೊದಲು ಅರ್ಥವಾಗಲಿಲ್ಲ. ಅರ್ಥವಾಗುತ್ತಲೇ ಅವನಿಂದ ಕೊಂಚ ದೂರ ಸರಿದು, ಆ ಅನುಮಾನ ನಿಮಗ್ಯಾಕೆ ಬಂತು? ಕೇಳಿದಳು.

    ಅವನು ನಗುತ್ತಾ ಅವಳ ಕೈಯನ್ನು ತನ್ನ ಕೈಲಿ ಹಿಡಿದುಕೊಂಡು,

    ಗಾಬರಿಯಾಗಬೇಡ... ಸುಮ್ಮನೆ ಕೇಳಿದೆ... ತಿಳಿಯೋಣವೆನ್ನಿಸಿತು.

    ಅವಳು ತಕ್ಷಣ ತಲೆಯನ್ನು ಅಡ್ಡವಾಗಿ ಆಡಿಸಿ,

    ಅಂಥವುಗಳಿಂದ ನಾನು ತುಂಬಾ ದೂರ ಎಂದಳು.

    ಅವಳ ಕಂಠದಲ್ಲಿ ಧ್ವನಿಸಿದ ಅಮಾಯಕತೆಗೆ ಮುಗ್ಧನಾಗಿ ಅವಳನ್ನು ಗಾಢವಾಗಿ ಆಲಂಗಿಸಿಕೊಂಡು, ನನಗೆ ಈಗಲೇ ಮದುವೆಯಾಗವುದಕ್ಕೆ ಇಷ್ಟವಿರಲಿಲ್ಲ. ನಿನ್ನನ್ನು ಮದುವೆ ಮಾಡಿಕೊಂಡು ತಪ್ಪು ಮಾಡಲಿಲ್ಲ ಅನಿಸುತ್ತಿದೆ. ಎಂದ.

    ಅವಳು ತಕ್ಷಣ ಒಂದು ವೇಳೆ ನಾನು ಯಾರನ್ನಾದರೂ ಪ್ರೇಮಿಸಿದ್ದೆ ಎಂದು ಹೇಳಿದಿದ್ದರೆ ನಿನಗೇನನ್ನಿಸುತ್ತಿತ್ತು? ಎಂದು ಕೇಳಿದಳು.

    ಅವನು ಒಂದರೆಘಳಿಗೆ ಅವಕ್ಕಾದ. ಅವಳು ಹಾಗೆ ಕೇಳಬಹುದೆಂದು ಅವನು ಊಹಿಸಿರಲಿಲ್ಲ. ನಂತರ ನಗಲು ಪ್ರಯತ್ನಿಸುತ್ತಾ, ಹಾಗಾಗದು ಎಂದ.

    ಒಂದು ವೇಳೆ ಆಗಿದ್ದಿದ್ದರೆ...?

    ನಿಮ್ಮನ್ನು ಮತ್ತೆ ಒಂದುಗೂಡಿಸಲು ಪ್ರಯತ್ನಿಸುತ್ತಿದ್ದೆ ದೃಢವಾಗಿ ಹೇಳಿದ.

    ಅವಳು ಕತ್ತೆತ್ತಿ ಅವನ ಮುಖವನ್ನೇ ನೋಡಿ ತಲೆ ತಗ್ಗಿಸಿಕೊಂಡು, ನಾನು ಇಂದಿನವರೆಗೂ ಅಂಥ ಯೋಚನೆಯನ್ನೇ ಮಾಡಲಿಲ್ಲ. ನನ್ನ ಈ ಇಪ್ಪತ್ತು ವರ್ಷಗಳೂ ವಿದ್ಯಾಭ್ಯಾಸಕ್ಕೆ ಸರಿಹೋಯ್ತು. ಬೇರೆ ಯೋಚನೆ ಮಾಡಲು ನನಗೆ ಅವಕಾಶವೇ ಇರಲಿಲ್ಲ. ಆದರೆ ಬದುಕಿನಲ್ಲಿ ಮದುವೆ ಅನ್ನುವುದಾದರೆ ನನ್ನ ಸರ್ವಸ್ವವನ್ನು ಅವನಿಗೆ ಅರ್ಪಿಸಬೇಕೆಂದು ಅಂದುಕೊಳ್ಳುತ್ತಿದ್ದೆ.

    ಅವಳ ಮಾತು ಕೇಳಿದ ಮಹರ್ಷಿ ಪರವಶಗೊಂಡ. ಅವನ ಕಣ್ಣು ಆದ್ರ್ರವಾಯ್ತು. ಅವನು ಸಂತೋಷದಿಂದ ನಸುಗಂಪಿಸಿದ. ತಕ್ಷಣ ಅವಳ ಕೆನ್ನೆಯ ಮೇಲೆ ಮುತ್ತಿನ ಮುದ್ರೆಯೊತ್ತಿದ. ನಂತರ ಮೆಲ್ಲಗೆ ಕೊಂಚ ದೂರ ಸರಿದ. ಅವಳ ಪವಿತ್ರತೆಯ ಮುಂದೆ ನಿಜಾಯಿತಿಯಿಂದ ಹೇಳಿಬಿಡಬೇಕೆನ್ನಿಸಿತು. ಮನಸೂ ಮನಸೂ ಒಂದಾಗಬೇಕಾದರೆ ತೆರೆ ತೊಲಗಬೇಕು!

    ಶ್ರೀವಾಣಿ, ನಾನೊಂದು ಹುಡುಗಿಯನ್ನು ಪ್ರೀತಿಸಿದ್ದೆ.

    ಅಗ್ನಿ ಪರ್ವತಗಳು ಸಿಡಿಯಲಿಲ್ಲ-ಲಾವಾ ಉಕ್ಕಿ ಹರಿಯಲಿಲ್ಲ-ನಸುಗಂಪನವೂ ಇಲ್ಲದೇ ತಲೆ ಎತ್ತಿ ಅವನ ಕಣ್ಣನ್ನೇ ನೋಡುತ್ತಾ,

    ನನ್ನನ್ನು ಛೇಡಿಸಬೇಕೆಂದು ನೋಡ್ತೀದೀರಾ? ಕೇಳಿದಳು.

    ಅವಳ ನಂಬಿಕೆಯನ್ನು ಸಟೆಮಾಡಲಿಷ್ಟವಿಲ್ಲಬಾದರೂ, ಮೊದಲೇ ಎಲ್ಲವನ್ನು ಹೇಳಿ ಮರೆಮಾಚುವುದಕ್ಕೆ ಮತ್ತೇನೂ ಇಲ್ಲವೆಂದ ಮೇಲೆ ವೈವಾಹಿಕ ಬದುಕನ್ನು ಆವಿಷ್ಕಾರ ಮಾಡಬೇಕೆಂದುಕೊಂಡು ಎಲ್ಲವನ್ನು ಹೇಳಿಬಿಟ್ಟ.

    ಹೌದು ವಾಣೀ! ನಾನೊಬ್ಬ ಯುವತಿಯನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೇಮಿಸಿದ್ದೆ. ಅವಳನ್ನೇ ನನ್ನ ಭಾವೀ ಪತ್ನಿ ಎಂದೂ ಊಹಿಸಿಕೊಂಡಿದ್ದೆ.

    ಅವಳು... ನಿಮ್ಮನ್ನು ಬಿಟ್ಟು ಹೊರಟುಹೋದಳೇ? ಅವಳ ಪ್ರಶ್ನೆಯಲ್ಲಿ ತೀವ್ರತೆಗೆ ಬದಲಾಗಿ ಸಹಾನೂಭೂತಿಯಿತ್ತು. ಅದನ್ನು ಗಮನಿಸಿ ಅವನು ರಿಲ್ಯಾಕ್ಸ್ ಆಗಿ,

    "ಇಲ್ಲ, ಅವಳು ನನ್ನನ್ನೆಂದೂ ಆ ದೃಷ್ಟಿಯಿಂದ ನೋಡಲೇ ಇಲ್ಲ. ಎಂದೂ ನನ್ನ ಆರಾಧನೆಯೊಂದೇ

    Enjoying the preview?
    Page 1 of 1