Discover millions of ebooks, audiobooks, and so much more with a free trial

Only $11.99/month after trial. Cancel anytime.

Tappu Maadona Banni!
Tappu Maadona Banni!
Tappu Maadona Banni!
Ebook828 pages6 hours

Tappu Maadona Banni!

Rating: 4 out of 5 stars

4/5

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN6580201100065
Tappu Maadona Banni!

Read more from Yandamoori Veerendranath

Related to Tappu Maadona Banni!

Related ebooks

Reviews for Tappu Maadona Banni!

Rating: 4 out of 5 stars
4/5

2 ratings0 reviews

What did you think?

Tap to rate

Review must be at least 10 words

    Book preview

    Tappu Maadona Banni! - Yandamoori Veerendranath

    http://www.pustaka.co.in

    ತಪ್ಪು ಮಾಡೋಣ ಬನ್ನಿ...!

    Tappu Maadona Banni…!

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಮೊದಲ ಮಾತು

    ‘ತಪ್ಪು ಮಾಡೋಣ ಬನ್ನಿ...!’ ಬಗ್ಗೆ ಒಂದು ಮಾತು.

    ತೆಲುಗು ಸಾಹಿತ್ಯದಲ್ಲಿ ಅಸಂಖ್ಯಾತ ಕಾದಂಬರಿಗಳು ಪ್ರಕಟವಾಗಿವೆ. ವ್ಯಕ್ತತ್ವ ವಿಕಾಸವನ್ನುಂಟು ಮಾಡುವ ಕತೆಯುಳ್ಳ ಹಲವು ಕೃತಿಗಳು ಬೆಳಕು ಕಂಡಿವೆ. ಹತ್ತು ಪೈಸೆ ಬಂಡವಾಳದಿಂದ ಹತ್ತು ಲಕ್ಷ ಗಳಿಸಿದ ಕತೆಯುಳ್ಳ ‘ದುಡ್ಡು ಟು ದಿ ಪವರ್ ಆಫ್ ದುಡ್ಡು’, ಓದುವ ‘ಹುಚ್ಚು’ನಿಂದ ಹೊರಬಂದು ವಾಸ್ತವ ಬದುಕನ್ನು ಅರ್ಥಮಾಡಿಕೊಳ್ಳುವ ಯುವಕನ ಕತೆ ಇರುವ ವಸುಂಧರ ಅವರ ‘ಸೂರ್ಯ ನಮಸ್ಕಾರ’, ಬದುಕಿನಲ್ಲಿ ಗೆಲ್ಲಲೇಬೇಕೆಂಬ ಛಲವಿರುವ ಯುವಕನ ಕತೆ ಇರುವ ಕೊಮ್ಮೂರಿ ವೇಣುಗೋಪಾಲರಾವ್ ಅವರ ‘ಹೌಸ್ ಸರ್ಜನ್’, ರೈಲ್ವೆ ಡ್ರೈವರನ ಬದುಕನ್ನು ಆಧರಿಸಿ ಗಂಟಿಕೋಟ ಬ್ರಹ್ಮಾಜಿರಾವ್ ಬರೆದಿರುವ ‘ಓಡುವ ಚಕ್ರಗಳು-ಪ್ರವಹಿಸುವ ಜೀವನವಾಹಿನಿ’, ಇಷ್ಟಲ್ಲದೆ ಮಾಲತಿ ಚಂದೂರ್ ಅವರ ಅನುವಾದಿತ ಕೃತಿಗಳು, ವಾಸಿರೆಡ್ಡಿ ಸೀತಾದೇವಿ, ವೋಲ್ಲಾ, ಸೂರ್ಯದೇವರ ಮೊದಲಾದವರ ಕೆಲವು ಕೃತಿಗಳು ಓ ಗುಂಪಿನವು. ಇವೆಲ್ಲ ‘ಕಥೆಯ ಮೂಲಕ ವ್ಯಕ್ತಿತ್ವ ವಿಕಾಸ’ ಸಾಧಿಸುವ ಕೃತಿಗಳು.

    ಆದರೆ ವ್ಯಕ್ತಿತ್ವ ವಿಕಾಸ ಪುಸ್ತಕದಲ್ಲಿ ‘ಕಥೆ’ಯೊಂದನ್ನು ಹೊಗಿಸಿದ ಕೃತಿಗಳು ತೆಲುಗಿನಲ್ಲಿ ಈ ವರೆಗೆ ಬಂದಿಲ್ಲ. ಇಂಗ್ಲೀಷಿನಲ್ಲಿ ಇಂತಹ ಕೃತಿಗಳು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿವೆ. ಇಂತಹ ಪುಸ್ತಕಗಳ ಉದ್ದೇಶ ವ್ಯಕ್ತಿತ್ವ ವಿಕಾಸವೇ ಆಗಿದ್ದರೂ ಅವುಗಳಲ್ಲಿ ಕತೆಯೂ ಇರುತ್ತದೆ. Johnathan Livingston Seagull’, ‘Who moved my cheese’, ‘Alchemist’ ಮುಂತಾದ ಫ್ಯಾಂಟಸಿಗಳು, ‘Goal’, ‘Rich Dad-Poor  Dad’, ‘Parable of Pipe Line’ ಮುಂತಾದ ಕೃತಿಗಳು ಇದಕ್ಕೆ ಉದಾಹರಣೆಗಳಾಗುವೆ. ಇವುಗಳಲ್ಲಿ ಕಥೆ ಸಣ್ಣದಾಗಿದ್ದು, ಅದರಲ್ಲಿ ಲೇಖಕ ಹೇಳ ಬೇಕೆಂದಿರುವ ವಿಚಾರಗಳು ಹೆಚ್ಚಾಗಿರುತ್ತದೆ.

    ಈ ರೀತಿಯ ಪ್ರಯೋಗವನ್ನು ತೆಲುಗಿನಲ್ಲಿ ಕೂಡಾ ಮಾಡಬೇಕು ಎಂಬ ಬಯಕೆಯೇ ಈ ಕೃತಿಗೆ ಮೂಲ ಪ್ರೇರಣೆಯಾಗಿದೆ. ಇಂತಹ ಕೃತಿಯು ತೆಲುಗಿನಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು.

    ಮೇಲೆ ಹೇಳಿದ ಇಂಗ್ಲೀಷ್ ಪುಸ್ತಕಗಳಲ್ಲಿ ಮೊದಲ ಮೂರು ಫ್ಯಾಂಟಸಿಗಳು. ಅಂದರೆ ಅದ್ಭುತ, ರಮ್ಯ, ಅವಾಸ್ತವಿಕ ರೂಪಕಲ್ಪನೆಗಳು. ಕೀಲು ಕುದುರೆ, ಪಾತಾಳಭೈರವಿ, ಅಲ್ಲಾವುದ್ದೀನನ ಅದ್ಭುತ ದೀಪ ಮುಂತಾದವು ಈ ಗುಂಪಿಗೆ ಸೇರಿವೆ.

    ಇತ್ತೀಚೆಗೆ ವ್ಯಕ್ತಿತ್ವ ವಿಕಸನ ಸಾಹಿತ್ಯವು ಬಹಳವಾಗಿ ಪ್ರಕಟವಾಗುತ್ತಿರುವುದರಿಂದ ಲೇಖಕರಿಗೆ ಹೇಳುವುದಕ್ಕೆ ಹೆಚ್ಚೇನೂ ಉಳಿದಿಲ್ಲ. ಕೆಲವು ಪುಸ್ತಕಗಳು ‘ಡ್ರೈ’ಯಾಗಿವೆ. ಪರಿಸ್ಥಿತಿ ಹೀಗಿರುವಾಗ ವ್ಯಕ್ತಿತ್ವ ವಿಕಾಸವನ್ನು ಅದ್ಭುತ ಫ್ಯಾಂಟಸಿಯ ಜೊತೆ ಬೆರೆಸಿ ‘ಆಲ್ಕೆಮಿಸ್ಟ್’ ಎಂಬ ಕೃತಿಯನ್ನು ಬರೆದ ಲೇಖಕನು ಅಸಂಖ್ಯಾತ ಓದುಗನ ಅಭಿಮಾನವನ್ನು ಸೂರೆಗೊಂಡನು. (ಈ ಕಥೆಯ ಬಗ್ಗೆ ‘ವಿಜಯಕ್ಕೆ ಆರನೇ ಮೆಟ್ಟಿಲು’ ಪುಸ್ತಕದಲ್ಲಿ ವಿಸ್ತøತ ವಿವರಣೆ ನೀಡಲಾಗಿದೆ.) ಅದೊಂದು ಅಬ್ಸರ್ಡ್ ಫ್ಯಾಂಟಸಿ. ಕಿರಿಯ ಸಾಹಿತ್ಯಾಭಿಮಾನಿಗಳಿಗಾಗಿ ಇಲ್ಲಿ ಸ್ವಲ್ಪ ವಿವರಣೆ ನೀಡುತ್ತಿದ್ದೇನೆ.

    ರಚನೆಗಳಲ್ಲಿ ಹಲವು ವಿಧಗಳಿವೆ. ಮುಖ್ಯವಾಗಿ ನಾಟಕಗಳಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ರಿಯಲಿಸಂ, ನ್ಯಾಚುರಲಿಸಂ, ಫ್ಯಾಂಟಸಿ, ಅಬ್ಸರ್ಡ್, ಫಾರ್ಸ್, ಕಾಮಿಡಿ ಮುಂತಾದ ಪ್ರಯೋಗಗಳನ್ನು ನಾವೆಲ್ಲ ನಾಟಕಗಳಲ್ಲಿ ಮಾಡಿದ್ದೇವೆ. ಕಾದಂಬರಿ ಕ್ಷೇತ್ರದಲ್ಲಿ, ಮುಖ್ಯವಾಗಿ ತೆಲುಗು ಕಾದಂಬರಿ ಪ್ರಕಾರದಲ್ಲಿ ಇಷ್ಟು ವಿಧದ ಕೃತಿಗಳು ಅಷ್ಟಾಗಿ ಪ್ರಕಟವಾಗಿಲ್ಲ. ಅಷ್ಟೇಕೆ? ಫಾರ್ಸ್ ಬೇರೆ-ಕಾಮಿಡಿಯೇ ಬೇರೆ. ತೆಲುಗಿನಲ್ಲಿ ಕಾಮಿಡಿಗಳಷ್ಟು ಫಾರ್ಸಿಕಲ್ ಕಾದಂಬರಿಗಳು ಪ್ರಕಟವಾಗಿಲ್ಲ. ವ್ಯಕ್ತಿಗಳ ಬಗ್ಗೆ, ಸಮಾಜದ ಬಗ್ಗೆ, ಅವಾಸ್ತವಿಕ ಘಟನೆಗಳಿಂದ ಕೂಡಿದ ವ್ಯಂಗ್ಯ ರಚನೆಗಳಿಗೆ ಫಾರ್ಸ್ (ಪ್ರಹಸನ) ಎನ್ನುತ್ತಾರೆ. ‘ಕನ್ಯಾಶುಲ್ಕ’ ನಾಟಕವನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು.

    ಅಬ್ಸರ್ಡ್ ಬೇರೆ-ಸ್ಯಾಟೈರೇ ಬೇರೆ. ನೀವೀಗ ಓದುತ್ತಿರುವುದು ‘ಅಬ್ಸರ್ಡ್ ಫಾರ್ಸಿಕಲ್ ಫ್ಯಾಂಟಸಿ’. ಅಬ್ಸರ್ಡ್ ರಚನೆಗಳ ಬಗ್ಗೆ ತಿಳಿಯಬೇಕಾದರೆ ಅಯನೆಸ್ಕೋನ ಕೃತಿಗಳನ್ನು ಓದಬೇಕು. ಈ ಅಬ್ಸರ್ಡಿಟಿಯ ಬಗ್ಗೆ ‘ಥ್ರಿಲ್ಲರ್’ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದೇನೆ. ಅದೇ ರೀತಿ, ಮೇಲೆ ಒಂದೇ ರೀತಿ ಕಾಣಿಸಿದರೂ ನ್ಯಾಚುರಲಿಸಂ ಮತ್ತು ರಿಯಲಿಸಂ ಸಹಾ ಬೇರೆ ಬೇರೆಯೇ.

    ಪ್ಯೂರ್ ಅಬ್ಸರ್ಡಿಟಿ, ಅಬ್ಸರ್ಡ್ ನ್ಯಾಚುರಲಿಸಂ, ಅಬ್ಸರ್ಡ್ ರಿಯಲಿಸಂಗಳಿಗೆ ಸಂಬಂಧಿಸಿದ ಮೂರು ಕತೆಗಳು ಇದರಲ್ಲಿವೆ. ಅವುಗಳ ಬಗ್ಗೆ (ಸೌದೆ ಒಡೆಯುವವನ ಸಾವಿನ ಕತೆ, ಐದು ಕೋತಿಗಳ ಕತೆ ಮತ್ತು ಓಡಿಹೋದ ತಾಯಿಯ ಕತೆ) ಈ ‘ಮೊದಲ ಮಾತಿ’ನಲ್ಲಿ ಹೇಳುವ ಮೂಲಕ ಓದುಗರಿಗೆ ಅವುಗಳ ಮಧ್ಯೆ ಇರುವ ಸೂಕ್ಷ್ಮವಾದ ವ್ಯತ್ಯಾಸವನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. ‘ತಪ್ಪು ಮಾಡೋಣ ಬನ್ನಿ...!’ ಓದುವ ಮೊದಲು ಇದನ್ನು ತಿಳಿಯುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ. ‘ಸೌದೆ ಒಡೆಯುವವನ ಸಾವು’ ಕತೆ ಈ ರೀತಿಯಲ್ಲಿ ಸಾಗುತ್ತದೆ:

    *    *    *    *

    ಒಬ್ಬನು ಕೊಂಬೆಯ ಮೇಲೆ ಕುಳಿತು. ತಾನು ಕುಳಿತಿರುವ ಕೊಂಬೆಯನ್ನೇ ಕತ್ತರಿಸುತ್ತ ಇರುತ್ತಾನೆ. ಆ ದಾರಿಯಲ್ಲಿ ಹೋಗುತ್ತಿದ್ದ ಸ್ವಾಮೀಜಿಯೊಬ್ಬರು ‘ಕೊಂಬೆ ಜೊತೆಗೆ ನೀನೂ ಬಿದ್ದರೆ ಸಾಯುತ್ತೀ’, ಎಂದು ಎಚ್ಚರಿಸಿ ಹೊರಟುಹೋದರು. ಸ್ವಲ್ಪ ಸಮಯದ ನಂತರ ಅವನು ಕೆಳಗೆ ಬೀಳುತ್ತಾನೆ. ಅವನ ಮೇಲೆ ಆ ಕೊಂಬೆ ಬೀಳುತ್ತದೆ.

    ಕೊಂಬೆ ಬೀಳುತ್ತದೆ ಎಂದು ದಿವ್ಯದೃಷ್ಟಿಯಿಂದ ಕಂಡು ಹೇಳಿದ ಸ್ವಾಮೀಜಿಯವರ ಮಹಾತ್ಮೆ ಅವನಲ್ಲಿ ಆಶ್ಚರ್ಯವನ್ನುಂಟು ಮಾಡಿತು. ಅವರ ಮಾತಿನಂತೆ ತಾನು ಸತ್ತೇ ಹೋಗಿರಬಹುದು ಎಂದು ಯೋಚಿಸಿದ ಅವನು ನಿಶ್ಚಲವಾಗಿ ಬಿದ್ದುಕೊಂಡಿದ್ದನು.

    ಈ ರೀತಿ ಅವನು ಸತ್ತಿರುವಾಗ (ಸತ್ತು ಇರುವಾಗ?), ಮಿಕ್ಕ ಸೌದೆ ಒಡೆಯುವವರು ಅಲ್ಲಿಗೆ ಬಂದು ಕೊಂಬೆಯ ಅಡಿ ಇರುವ ತಮ್ಮ ಸಹಚರನನ್ನು ನೋಡಿದರು. ಅವರು ಎಷ್ಟೇ ಅಲುಗಾಡಿಸಿದರೂ ಅವನು ಮಿಸುಗಾಡಲಿಲ್ಲ. ಆದರೆ ಉಸಿರಾಡುತ್ತಿದ್ದ. ಅವನು ಸತ್ತಿದ್ದಾನೆಯೋ, ಬದುಕಿದ್ದಾನೆಯೋ ಎಂಬುದು ಅವರಿಗೆ ತಿಳಿಯಲಿಲ್ಲ. ಆಗ ಅವರ ನಾಯಕನು ಗಂಭೀರ ಸ್ವರದಲ್ಲಿ ‘ಅವನನ್ನು ಎಬ್ಬಿಸಿ ನಿಲ್ಲಿಸಿರಿ, ಅವನು ಕೆಳಗೆ ಬಿದ್ದು ಹೋದರೆ ಸತ್ತಿದ್ದಾನೆ ಅಂತ ಅರ್ಥ’, ಎಂದನು. ಅವರೆಲ್ಲ ಸೇರಿ ಅವನನ್ನು ಎತ್ತಿ ನಿಲ್ಲಿಸುತ್ತಾರೆ.

    ಸತ್ತವನು ‘ನಿಲ್ಲಿಸಿದರೂ ಕೆಳಗೆ ಬಿದ್ದು ಬಿಡುತ್ತಾನೆ’ ಎಂಬ ನಗ್ನಸತ್ಯವನ್ನು ಅರಿತ ಸೌದೆ ಒಡೆಯುವವನು ಅದೇ ರೀತಿ ಕೆಳಗೆ ಬಿದ್ದುಬಿಟ್ಟನು. ಅವರೆಲ್ಲ ಅವನನ್ನು ಹೊತ್ತುಕೊಂಡು ಹಳ್ಳಿಯ ಕಡೆ ಹೊರಟರು. ಆಗ ಅವನು ‘ನೀವು ನನ್ನ ಕೊಡಲಿ ಮರೆತಿರಲ್ಲಾ?’ ಎಂದು ಜ್ಞಾಪಿಸಿದನು. ಅವರಲ್ಲೊಬ್ಬ ಆ ಕೊಡಲಿಯನ್ನು ಎತ್ತಿಕೊಂಡ. ಸತ್ತರೂ ತನ್ನ ಕೊಡಲಿಯನ್ನು ಮರೆಯಲಿಲ್ಲವಲ್ಲ ಎಂದು ಎಲ್ಲರೂ ಅವನನ್ನು ಅಭಿನಂದಿಸಿದರು. ನಂತರ ಅವನನ್ನು ಹೊತ್ತು ತಂದು ಅವನ ಮನೆಯ ಮುಂದೆ ಮಲಗಿಸಿದರು.

    ಮನೆಯ ಬಾಗಿಲಿಗೆ ಚಿಲಕ ಹಾಕಲಾಗಿತ್ತು. ಆದರೆ ಬೀಗ ಹಾಕಿರಲಿಲ್ಲ. ಅವನ ಹೆಂಡತಿ ಎಲ್ಲಿಗೆ ಹೋಗಿರಬಹುದು? ಎಂದು ಅವರೆಲ್ಲ ಚರ್ಚಿಸುತ್ತಿದ್ದಾಗ ಬೀಗ ಹಾಕದೆ, ಬರೀ ಚಿಲಕ ಮಾತ್ರ ಹಾಕಿದ್ದಾಳೆ ಅಂದ್ರೆ ಪಕ್ಕದ ಮನೆಯಲ್ಲಿ ಹರಟೆ ಹೊಡೆಯುತ್ತಿದ್ದಾಳೆ ಎಂದೇ ಅರ್ಥ, ಎಂದು ಅವನು ಮಲಗಿದ್ದಲ್ಲಿಂದಲೇ ಹೇಳಿದನು. ಒಬ್ಬನು ಹೋಗಿ ಅವಳನ್ನು ಕರೆತಂದನು. ನಿನ್ನ ಗಂಡ ಕೊಂಬೆಯ ಕೆಳಗೆ ಬಿದ್ದು ಸತ್ತ, ಎಂದು ಹೇಳಿದರು. ಇಲ್ಲ ಸುಳ್ಳು ನಾನು ಕುಳಿತಿದ್ದ ಕೊಂಬೆ ಮುರಿದು ಬಿದ್ದು ಸತ್ತೆ, ಎಂದು ಈ ‘ಸತ್ತವನು’ ಹೇಳಿದನು. ಅಷ್ಟರಲ್ಲಿ ಹಳ್ಳಿಯ ಹಿರಿಯ ಅಲ್ಲಿಗೆ ಬಂದು ಕತ್ತಲಾಗುವ ಮೊದಲೇ ದಹನ ಮಾಡದಿದ್ದರೆ ನೂರು ವರಹ ದಂಡ ಹಾಕ್ತೇನೆ, ಎಂದನು. ಇನ್ನೊಂದೆಡೆ ತಾನು ಕೊಟ್ಟ ತಾಯಿತ ಕಟ್ಟಿಕೊಳ್ಳದೇ ಇದ್ದುದರಿಂದ ಅವನು ಸತ್ತ, ಎಂದು ಜ್ಯೋತಿಷಿ ಹೇಳಿದನು. ‘ಅಡಿಗೆ ಮನೆ ದಕ್ಷಿಣದಲ್ಲಿರೋದ ರಿಂದಲೇ ಅವನು ಸತ್ತ ಎಂದು ವಾಸ್ತುಶಾಸ್ತ್ರಿ ಹೇಳಿದನು. ನಂತರ ಅವರಿಬ್ಬರಲ್ಲಿಯೇ ಜಗಳ ಆರಂಭವಾಯ್ತು. ಅದೇ ಸಮಯಕ್ಕೆ ಪಕ್ಕದ ಮನೆಯಾಕೆ ಅಲ್ಲಿಗೆ ಬಂದು ಅಯ್ಯೋ ಪಾಪ! ತನ್ನ ಗಂಡನಿಗೆ ಇಷ್ಟ ಅಂತ ಅವಳು ಮೀನಿನ ಸಾರು ಮಾಡಿದಳು. ಇವನು ಅದನ್ನ ತಿನ್ನದೇನೇ ಸತ್ತನಲ್ಲಾ? ಎಂದಳು.

    ಸೌದೆ ಒಡೆಯುವವನು ಎದ್ದು ಕುಳಿತು ಹೌದಲ್ಲಾ? ವಾಸನೆ ಕೂಡಾ ಗಮ್ಮಂತ ಬರ್ತಾ ಇದೆ ಅಂದವನೇ ಅಡಿಗೆ ಮನೆಯ ಕಡೆ ಓಡಿದ. ಹಳ್ಳಿಯ ಜನರೆಲ್ಲ ಪಾಪ! ಮೀನಿನ ಸಾರು ಅಂದ ಕೂಡ್ಲೇ ಅವನ ಪ್ರಾಣ ಮತ್ತೆ ಬಂತು, ಎಂದು ಸಂತೋಷಪಡುತ್ತಾ ತಂತಮ್ಮ ಮನೆಗಳಿಗೆ ಹೋದರು. ಅವರಲ್ಲಿ ಮೂವರು ಮಾತ್ರ ಚಿಂತೆಗೆ ಒಳಗಾಗಿದ್ದರು.

    *    *    *    *    *

    ಪ್ಯೂರ್ ಅಬ್ಸರ್ಡಿಟಿ ಅಂದರೆ ಇದು, ಅವಾಸ್ತವಿಕವಾದ ವ್ಯಂಗ್ಯ. ಸತ್ಯವಿದ್ದಿದ್ದರೆ ಅದನ್ನು ನ್ಯಾಚುರಲಿಸಂ ಎನ್ನುತ್ತಿದ್ದರು. ಅಬ್ಸರ್ಡ್ ನ್ಯಾಚುರಲಿಸಂ ಅಂದರೆ ನಂಬಲಸಾಧ್ಯವಾದ ನಿಜ ಎಂದರ್ಥ. ಇದರ ಬಗ್ಗೆ ಒಂದು ಕತೆ ಇಲ್ಲಿದೆ. (ನಿಜಕ್ಕೂ ಇದು ಕತೆಯಲ್ಲ, ನಂಬಲಸಾಧ್ಯವಾದ ವಾಸ್ತವ ಇದು.)

    ಒಂದು ದೊಡ್ಡ ಬೋನಿನಲ್ಲಿ ಐದು ಕೋತಿಗಳನ್ನು ಬಿಡಿರಿ. ಮೇಲಿನಿಂದ ಬಾಳೆ ಹಣ್ಣನ್ನು ಇಳಿಬಿಡಿ. ಕೋತಿಯು ಅದನ್ನು ಪಡೆಯಲು ಸುಲಭವಾಗುವಂತೆ ಅಲ್ಲೊಂದು ಏಣಿ ಇರಲಿ.

    ಸ್ವಲ್ಪ ಹೊತ್ತಿನಲ್ಲೇ ಒಂದು ಕೋತಿ ಅದನ್ನು ಗಮನಿಸಿ ಹಣ್ಣನ್ನು ತಿನ್ನಲೆಂದು ಏಣಿ ಹತ್ತಲು ಆರಂಭಿಸುತ್ತದೆ. ಆಗ ಎಲ್ಲ ಕೋತಿಗಳ ಮೇಲೆ ರಭಸವಾಗಿ ನೀರನ್ನು ಚೆಲ್ಲಿರಿ. ಅವುಗಳ ಗದ್ದಲ ಮುಗಿದ ನಂತರ ಇನ್ನೊಂದು ಕೋತಿ ಹಣ್ಣಿಗಾಗಿ ಏಣಿ ಹತ್ತಲಾರಂಬಿಸುತ್ತದೆ. ಆಗ ಮತ್ತೆ ನೀರಿನಿಂದ ಅವುಗಳನ್ನು ‘ಹೊಡೆಯಿರಿ. ಹೀಗೆ ನಾಲ್ಕೈದು ಬಾರಿ ಒದ್ದೆಯಾದ ನಂತರ ಆ ಕೋತಿಗಳು ಹಣ್ಣಿನ ‘ತಂಟೆ’ಗೇ ಹೋಗುವುದಿಲ್ಲ.

    ಈಗ ಅವುಗಳಲ್ಲಿ ಒಂದು ಕೋತಿಯನ್ನು ಹೊರತೆಗೆದು ಹೊಸ ಕೋತಿಯನ್ನು ಆ ಗುಂಪಿಗೆ ಸೇರಿಸಿರಿ. ಹೊಸದಾಗಿ ಬಂದ ಕೋತಿಯು ಹಣ್ಣಿಗಾಗಿ ಏಣಿ ಹತ್ತಲು ಆರಂಭಿಸುತ್ತಿದ್ದ ಹಾಗೇ ಇತರ ನಾಲ್ಕು ಕೋತಿಗಳು ಅದನ್ನು ಕೆಳಗೆಳೆದು ಹಾಕುತ್ತವೆ, ತಮ್ಮ ಮೇಲೆ ನೀರು ಬೀಳದಿದ್ದರೂ ಸಹಾ! ಹೀಗೆ ಎರಡು ಮೂರು ಬಾರಿ ಆದ ಮೇಲೆ ತಾನು ಏಣಿ ಏರಿದರೆ ಮಿಕ್ಕ ಕೋತಿಗಳಿಂದ ಅಪಾಯವಾಗುತ್ತದೆ ಎಂಬುದನ್ನು ಅದು ಅರ್ಥ ಮಾಡಿಕೊಳ್ಳುತ್ತದೆ.

    ಈಗ ನಾಲ್ಕು ‘ಹಳೆಯ’ ಕೋತಿಗಳ ಪೈಕಿ ಒಂದನ್ನು ಹೊರ ತೆಗೆದು ಇನ್ನೊಂದು ‘ಹೊಸ’ ಕೋತಿಯನ್ನು ಆ ಗುಂಪಿಗೆ ಸೇರಿಸಿರಿ. ಅದು ಬಾಳೆ ಹಣ್ಣಿನ ಕಡೆಗೆ ಹೊರಟ ಕೂಡಲೇ ಕೆಳಕ್ಕೆಳೆದು ಹಾಕುವ ಕಾರ್ಯಕ್ರಮ ಶುರು! ಈ ಬಾರಿ ಹಳೆಯ ಕೋತಿಗಳ ಜೊತೆ ಮೊದಲನೆಯ ‘ಹೊಸ ಕೋತಿ’ಯೂ ಉತ್ಸಾಹದಿಂದಲೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತದೆ. ಈಗ ಮತ್ತೊಂದು ಹಳೆಯ ಕೋತಿಯನ್ನು ಹೊರತೆಗೆದು ಹೊಸ ಕೋತಿಯನ್ನು ಬೋನಿನೊಳಗೆ ಬಿಡಿರಿ. ಅದನ್ನು ಕೆಳಕ್ಕೆಳೆದು ಹಾಕುವ ನಾಲ್ಕು ಕೋತಿಗಳಲ್ಲಿ       ಎರಡಕ್ಕೆ ತಾವೇಕೆ ಹಾಗೆ ಮಾಡುತ್ತಿದ್ದೇವೆಂಬುದೇ ತಿಳಿದಿಲ್ಲ, ಆದರೂ ಹಾಗೆ ಮಾಡುತ್ತವೆ!

    ಇದೇ ರೀತಿ ಐದನೆಯ ‘ಹೊಸ’ ಕೋತಿಯು ಬೋನಿನೊಳಗೆ ಬಂದ ಮೇಲೆ ಅದನ್ನು ಭಯಂಕರವಾಗಿ ಅರಚುತ್ತಾ ಕೆಳಕ್ಕೆಳೆದು ಹಾಕುವ ನಾಲ್ಕು ಕೋತಿಗಳಿಗೂ ತಾವೇಕೆ ಹಾಗೆ ಮಾಡುತ್ತೇವೆಂಬುದೇ ತಿಳಿದಿರುವುದಿಲ್ಲ.

    ಮುಂದೆ ಆ ಐದು ಕೋತಿಗಳಿಗೂ ಬಾಳೆಹಣ್ಣಿನ ಗೊಡವೆಗೆ ಹೋಗುವುದಿಲ್ಲ.

    ಏಕೆ? ಏಕೆಂದರೆ... ಅದು ಹಾಗೇನೇ!

    ಬೆಟ್ಟಗುಡ್ಡಗಳ ಗುಹೆಗಳಲ್ಲಿ ವಾಸವಾಗಿರುತ್ತಿದ್ದ ಅನಾದಿ ಕಾಲದ ಮಾನವರಿಂದ ಹಿಡಿದು ಇಂದಿನ ಆಧುನಿಕ ಸಮಾಜದ ವರೆಗೆ-ಜಾತಿಗಳು, ಧರ್ಮಗಳು, ಆಚಾರಗಳು, ನಂಬಿಕೆ, ಭಕ್ತಿ, ದೇವರುಗಳು, ದೆವ್ವಗಳು, ಭಯ... ಇವನ್ನೆಲ್ಲ ಮೀರಿಸುವ ‘ಇಸಂ’ಗಳು, ರಾಜಕೀಯ... ಇವೆಲ್ಲ ಆ ಐದು ಕೋತಿಗಳ ಕತೆಯ ರೀತಿಯಲ್ಲೇ ಬೆಳೆದು ಬಂದಿದೆ!

    ಈಗಿರುವುದಕ್ಕಿಂತ ಚೆನ್ನಾಗಿ ಬದುಕಿದರೆ ಬಾಳೆಹಣ್ಣು ಸಿಗುತ್ತದೆ ಎಂದು ನಿರ್ಧರಿಸುವವರು ಯಾರು? ಅದು ‘ತಪ್ಪು’ ಎಂದು ಶಾಸಿಸುವ ‘ಕೋತಿಗಳು’ ಯಾರು? ತಪ್ಪು ಮಾಡೋಣ ಬನ್ನಿ...! ಕೃತಿಯ ಕಥಾ ಸಾರಾಂಶವು ಅದೇ ಆಗಿದೆ!

    *    *    *    *    *

    ‘ತಪ್ಪು ಮಾಡೋಣ ಬನ್ನಿ...!’ ಪೂರ್ತಿಯಾಗುವ ಸಮಯದಲ್ಲಿ ಒಂದು ಪುಸ್ತಕ ಬಿಡುಗಡೆಯಾಯಿತು. ಆ ಪುಸ್ತಕದ ಹೆಸರು "THE CURIOUS INCIDENT OF A DOG AT THE NIGHT’. ಆ ಕತೆಯಲ್ಲಿ ಕೋತಿಗಳ ಪ್ರಸ್ತಾಪವಿರದಿದ್ದರೂ ಕತೆ ಕೊನೆಗೊಂಡಾಗ ಅಂತಹುದೇ ಭಾವನೆಯನ್ನು ನೀಡುತ್ತದೆ. ‘ತಾವು ಮಾಡುತ್ತಿರುವುದು ತಮ್ಮ ದೃಷ್ಠಿಯಲ್ಲಿ ತಪ್ಪಲ್ಲದಿದ್ದರೂ ಸಮಾಜದ ದೃಷ್ಟಿಯಲ್ಲಿ ಅದು ತಪ್ಪು ಎಂದು ತಿಳಿದಾಗ ಅದೇಕೆ ಜನ ಭಯಪಡುತ್ತಾರೆ?’ ಎಂಬ ವಿಚಾರ ಇದರ ಕಥಾ ಸಾರಾಂಶವಾಗಿದೆ. ಈ ಅಬ್ಸರ್ಡ್ ರಿಯಲಿಸ್ಟಿಕ್ ಪುಸ್ತಕಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

    ಕ್ರಿಸ್ಟೋಫರ್ ಎಂಬ ಬಾಲಕನಿಗೆ ಹತ್ತು ವರ್ಷ ವಯಸ್ಸು. ಗಣಿತದಲ್ಲಿ ಜೀನಿಯಸ್. ವಿಶ್ರಾಂತಿಯ ಸಮಯದಲ್ಲಿಯೂ ಮನಸ್ಸಿನಲ್ಲಿಯೇ ‘187 X 336 ಎಷ್ಟು?’ ಮುಂತಾದ ಲೆಕ್ಕಗಳನ್ನು ಮಾಡುತ್ತಿದ್ದನು. (ಈ ಪುಸ್ತಕದಲ್ಲಿ ಸಹ ಒಂದು... ಎರಡು... ಮೂರು... ಎಂದಿರದೆ ಮೂರು... ಐದು.... ಏಳುಗಳಂತಹ ಪ್ರೈಮ್ ನಂಬರ್‍ಗಳಲ್ಲಿದೆ)

    ಅವನಲ್ಲಿ ಯಾವ ಭಾವನೆಗಳೂ ಇರಲಿಲ್ಲ. ಯಾರಾದರೂ ಅವನು ಮೈಮೇಲೆ ಕೈ ಹಾಕಿದರೂ ಅವನು ಸಹಿಸುತ್ತಿರಲಿಲ್ಲ. ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರೆ ಇತರರೊಂದಿಗೆ ಯಾವ ರೀತಿಯಲ್ಲೂ ಮಾತುಕತೆ ಆಡುತ್ತಿರಲಿಲ್ಲ. ಮನೆಯಲ್ಲೊಂದು ಇಲಿಮರಿಯನ್ನು ಅವನು ಸಾಕಿದ್ದನು.

    ಕ್ರಿಸ್ಟೋಫರ್‍ನ ತಂದೆ ಬಹಳ ಒಳ್ಳೆಯವನು. ಅವನ ತಾಯಿಯೂ ಒಳ್ಳೆಯವಳೇ. ಇಬ್ಬರು ಒಳ್ಳೆಯವರು ಮದುವೆಯಾದರೆ ಅವರ ಸಂಸಾರವೂ ಚೆನ್ನಾಗಿರಲೇಬೇಕೆಂಬ ನಿಯಮ ಏನಿಲ್ಲವಲ್ಲ? ಅವರಿಬ್ಬರೂ ಸದಾ ಜಗಳವಾಡುತ್ತಿದ್ದರು. ಒಮ್ಮೆ ಅವಳು ಖಾಯಿಲೆಯಿಂದ ಆಸ್ಪತ್ರೆ ಸೇರಿದಳು. ಕ್ರಿಸ್ಟೋಫರ್‍ಗಿನ್ನೂ ಹತ್ತೇ ವರ್ಷ ವಯಸ್ಸಾದ್ದರಿಂದ ಅವನಿಗೆ ಆಸ್ಪತ್ರೆಯಲ್ಲಿ ಪ್ರವೇಶ ಇರುವುದಿಲ್ಲ. ತಂದೆಯ ಮೂಲಕ ಅಮ್ಮನಿಗೆ ಅವನು ಹೂಗಳನ್ನು ಕಳಿಸುತ್ತಿದ್ದನು. ಅವಳು ಆಸ್ಪತ್ರೆಯಲೇ ಸತ್ತಳು.

    ಕ್ರಿಸ್ಟೋಫರ್ ಈಗ ಅಪ್ಪನ ಜೊತೆಯಲ್ಲಿದ್ದು ಬೆಳೆಯುತ್ತಿರುತ್ತಾನೆ. ಹುಡುಗನ ತಲೆ ಬಾಚುವುದರಿಂದ ಹಿಡಿದು ಸ್ಕೂಲ್‍ಗೆ ಕಳಿಸುವವರೆಗೆ ಎಲ್ಲ ಕೆಲಸಗಳನ್ನೂ ಅವನ ಅಪ್ಪನೇ ಮಾಡುತ್ತಿರುತ್ತಾನೆ. ಈ ಕೆಲಸದಲ್ಲಿ ಪಕ್ಕದ ಮನೆಯಾಕೆ ಅವನಿಗೆ ಸಹಾಯ ಮಾಡುತ್ತಿರುತ್ತಾಳೆ. ಆಕೆಗೂ ಈ ಹುಡುಗನ ಬಗ್ಗೆ ಮಮತೆ ಇರುತ್ತದೆ, ಆದರೆ ಅವನಲ್ಲಿ ಅಂತಹ ಯಾವ ಪ್ರೇಮಾಭಿಮಾನವೂ ಇರುವುದಿಲ್ಲ. ಅವನು ಪ್ರಪಂಚವೆಂದರೆ ಗಣಿತ ಮಾತ್ರವೇ ಆಗಿರುತ್ತದೆ.

    ಪಕ್ಕದ ಮನೆಯಾಕೆಯ ಗಂಡ ಯಾವುದೋ ದೂರದ ಊರಿನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಒಂಟಿತನದ ಬೇಸರ ನೀಗಿಸಲು ಆಕೆ ಒಂದು ನಾಯಿಯನ್ನು ಸಾಕಿರುತ್ತಾಳೆ. ಒಂದು ರಾತ್ರಿ ಯಾರೋ ಆ ನಾಯಿಯನ್ನು ಸಾಯಿಸುತ್ತಾರೆ.

    ಆ ನಾಯಿಯನ್ನು ಯಾರು ಸಾಯಿಸಿದರು ಎಂದು ತಿಳಿಯುವ ಕುತೂಹಲದಿಂದ ಕ್ರಿಸ್ಟೋಫರ್ ಪತ್ತೇದಾರಿ ಕೆಲಸಕ್ಕೆ ತೊಡಗುತ್ತಾನೆ. ಅದು ಅವನ ಅಪ್ಪನಿಗೆ ಇಷ್ಷವಾಗುವುದಿಲ್ಲ. ಆದರೆ ಇವನು ಆ ಕೆಲಸವನ್ನು ಗುಟ್ಟಾಗಿ ಮುಂದುವರೆಸುತ್ತಾನೆ. ಆಗ ಅವನಿಗೆ ಅಪ್ಪನ ಕೋಣೆಯಲ್ಲಿ ಪತ್ರಗಳ ಕಟ್ಟೊಂದು ಸಿಕ್ಕುತ್ತದೆ. ‘ಒಮ್ಮೆಯಾದರೂ ಬಂದು ಭೇಟಿ ಮಾಡು’ ಎಂದು ಅವನ ತಾಯಿ ಬರೆದ ಪತ್ರಗಳ ಕಟ್ಟು ಅದು. ತಾಯಿ ಸತ್ತಿಲ್ಲವೆಂದು ಅರಿತಾಗ ಅವನಿಗೆ ಷಾಕ್ ಆಗಲಿಲ್ಲ. ಷಾಕ್, ವೇದನೆ, ದುಃಖ ಮುಂತಾದ ಭಾವನೆಗಳಿಂದ ಅವನು ಬಹಳ ದೂರ ಇರುವವನು. ಹೀಗೇಕೆ ಮಾಡಿದೆ ಎಂದು ಅಪ್ಪನನ್ನು ಕೇಳಿದಾಗ. ನಿನ್ನ ಅಮ್ಮ ಓಡಿ ಹೋಗಿದ್ದಾಳೆ ಅಂತ ನಿನಗೆ ಹೇಳಲಾಗದೆ ಹಾಗೆ ಮಾಡಿದೆ, ಎಂದು ಹೇಳ ಹೇಳುತ್ತ, ಹೇಳುತ್ತಾ ಅವನು ಅತ್ತೇ ಬಿಡುತ್ತಾನೆ. ರಾತ್ರಿಯ ಹೊತ್ತಿನಲ್ಲಿ ತಾನು ಪಕ್ಕದ ಮನೆಗೆ ಹೋಗಿ ಬರುವುದಕ್ಕೆ ಆ ನಾಯಿ ಅಡ್ಡಿಯಾಗಿತ್ತು, ಹಾಗಾಗಿ ಅದನ್ನು ಸಾಯಿಸಿದೆ ಎಂದೂ ಅವನು ಒಪ್ಪಿಕೊಳ್ಳುತ್ತಾನೆ. ಮಗ ಇದನ್ನೆಲ್ಲ ಯಾವ ಭಾವೋದ್ರೇಕವೂ ಇಲ್ಲದೆ ಆಲಿಸುತ್ತಾನೆ. ಆ ನಂತರ ತಂದೆಯನ್ನು ತೊರೆದು ತಾಯಿಯನ್ನು ಹುಡುಕುತ್ತಾ ಅವನು ಊರೂರು ಅಲೆಯುತ್ತಾನೆ. ಬಹಳ ಕಷ್ಟಪಟ್ಟು ಅವಳನ್ನು ಸಂಧಿಸುತ್ತಾನೆ. ಪಕ್ಕದ ಮನೆಯಾಕೆಯ ಗಂಡನ ಜೊತೆ ಅವಳು ಹಾಯಾಗಿ ಸಂಸಾರ ನಡೆಸುತ್ತಿರುತ್ತಾಳೆ.

    *    *    *    *    *

    ಮಾನವ ಸಂಬಂಧಗಳಿಗೆ ತಳಪಾಯವಾದ ‘ಪ್ರೇಮ, ದಯೆ, ತೃಪ್ತಿ’ ಮೊದಲಾದವುಗಳು ಮನುಷ್ಯ ತನ್ನ ಆನಂದ ಹಾಗು ತಾನು ಇತರರಿಗೆ ನೀಡುವ ಆನಂದಗಳ ನಡುವಿನ ‘ಲೆಕ್ಕ’ ಎಂದು ನಂಬಿದ್ದ ಕ್ರಿಸ್ಟೋಫರ್‍ಗೆ ಒಂದು ವಿಚಾರ-(ಇತರರಿಗೆ ತೊಂದರೆಯಾಗದಂತೆ ತಮ್ಮ ಕೆಲಸ ಮಾಡಿಕೊಳ್ಳುವುದಕ್ಕೆ ನಮ್ಮ ಜನ ಏಕೆ ಹಿಂಜರಿಯುತ್ತಾರೆ ಎಂಬ ವಿಚಾರ) ಅರ್ಥವಾಗಲಿಲ್ಲ.

    ತನ್ನ ಪ್ರಿಯಕರನ ಜೊತೆ ಪಕ್ಕದ ಮನೆಗೆ ಬಂದು ವಾಸ ಮಾಡಲು ತಾಯಿಗೆ ತಿಳಿಸುತ್ತಾನೆ. ತಂದೆಯ ಮನೆಗೆ ಪಕ್ಕದ ಮನೆಯಾಕೆಯನ್ನು, ತನ್ನ ತಾಯಿಯಾಗಿ ಬಂದಿರಲು, ಆಹ್ವಾನಿಸುತ್ತಾನೆ. ಬಹಳ ದೊಡ್ಡ ಪರಿಹಾರವನ್ನು ಅವನು ಒಂದು ಸಣ್ಣ ಲೆಕ್ಕದ ಮೂಲಕ ಸೂಚಿಸುತ್ತಾನೆ... ಇಷ್ಟೇ ಕತೆ.

    ಆದರೆ ಅಂತ್ಯವನ್ನು ಲೇಖಕ ಬಹಳ ಸೊಗಸಾಗಿ, ಸಿಂಬಾಲಿಕ್ ಆಗಿ ಬರೆದಿದ್ದಾನೆ.

    *    *    *    *    *

    ಇಪ್ಪತ್ತೈದು ವರ್ಷಗಳ ಹಿಂದೆ ನಾನು ದುನ್ನಪೋತಲು (ಕೋಣಗಳು) ಎಂಬ ಒಂದು ಕಾಮಿಡಿ ನಾಟಕವನ್ನು ಬರೆದೆ. ಅದರಲ್ಲಿ ಒಬ್ಬ ಭಾಷಾ ಅಭಿವೃದ್ಧಿ ಮಂಡಲಿಯ ಅಧ್ಯಕ್ಷನಿಗೆ ಕಲಗಚ್ಚು ಕುಡಿಯಬೇಕೆಂಬ ಬಯಕೆ ಹುಟ್ಟುತ್ತದೆ. ಕ್ರಮೇಣ ನೆತ್ತಿಯ ಮೇಲೆ ಎರಡು ಕೊಂಬುಗಳು ಮೂಡುತ್ತವೆ. ಎಲ್ಲರೂ ಅವನನ್ನು ವಿಚಿತ್ರವಾಗಿ ನೋಡುತ್ತಾರೆ. ಮುಂದೆ ಅವನು ಭಾಷೆಯನ್ನು ವಿಧವಿಧವಾದ ಪ್ರಯೋಗಗಳಿಂದ ಕೊಲೆ ಮಾಡುತ್ತಾನೆ. ರಾಜ್ಯಾದ್ಯಂತ ತೆಲುಗು ಅಂಕಿಗಳನ್ನು ಬರೆಸಿ ಜನರನ್ನು ಗಲಿಬಿಲಿಗೊಳಿಸುತ್ತಾನೆ. ಆಶ್ಚರ್ಯದ ವಿಷಯವೇ ನೆಂದರೆ ಜನ ಆ ಅಧಿಕಾರಿಯನ್ನು ವಿರೋಧಿಸುವುದಿಲ್ಲ. ಆ ಪರಿಣಾಮವಾಗಿ ಕ್ರಮೇಣ ಅವರ ಚರ್ಮವೂ ದಪ್ಪವಾಗುತ್ತದೆ. ಮನುಷ್ಯರೆಲ್ಲ ಕಾಲಕ್ರಮೇಣ ಕೋಣಗಳಾಗಿ ಬದಲಾಗುತ್ತಾರೆ. ಇಬ್ಬ ವ್ಯಕ್ತಿ ಮಾತ್ರ ಅವನನ್ನು ವಿರೋಧಿಸುತ್ತಾನೆ. ‘ಮನುಷ್ಯನಂತೆ’ ಯೋಚಿಸುವ ಅವನನ್ನು ಎಲ್ಲ ಕೋಣಗಳು ಸೇರಿ ಸಾಯಿಸಿಬಿಡುತ್ತವೆ!

    ಸ್ಥೂಲವಾಗಿ ಆ ಕತೆ ಹಾಗಿದೆ.

    ಈ ನಾಟಕವನ್ನು ಬರೆದಿ ಇಷ್ಟು ವರ್ಷಗಳಾದ ಮೇಲೆ ಈಗ ಅದೇ ನಡೆಯುತ್ತಿದೆ. ಈಗ ಹೊಸದಾಗಿ ಬಂದಿರುವ ಒಂದು ಇಲಾಖೆಯ ಚೇರ್ಮನ್ ಹತ್ತನೆಯ ತರಗತಿವರೆಗೆ ಶಿಕ್ಷಣವನ್ನು ತೆಲುಗಿನಲ್ಲೇ ನೀಡಬೇಕೆಂದು ಹೇಳುತ್ತಿದ್ದಾನೆ. ಪ್ರೋಫೆಷನಲ್ ಕಾಲೇಜುಗಳಿಗೆ ಸೇರಿದ ವಿದ್ಯಾರ್ಥಿಗಳು ಯಾವ ರೀತಿ ಕಷ್ಟಪಡುತ್ತಿದ್ದಾರೆಂಬುದನ್ನು ತಿಳಿದೂ, ಇಡೀ ಕಂಪ್ಯೂಟರ್ ಪ್ರಪಂಚವು ಇಂಗ್ಲೀಷಿನಲ್ಲೇ ನಾಗಾಲೋಟದಿಂದ ಓಡುತ್ತಿರುವಾಗ, ಇತ್ತೀಚಿಗಷ್ಟೇ ಉತ್ತಮಗೊಳ್ಳುತ್ತಿರುವ ಶಿಕ್ಷಣ ಪದ್ಧತಿಯನ್ನು ಇಪ್ಪತ್ತೈದು ವರ್ಷಗಳಷ್ಟು ಹಿಂದಕ್ಕೆ ದೂಡಲು ಪ್ರಯತ್ನಿಸುತ್ತಿದ್ದಾನೆ. (ಕೈಯಲ್ಲಿ ಅಧಿಕಾರವಿದೆಯಲ್ಲ? ಕೋತಿಯ ಕೈಗೆ ಮಾಣಿಕ್ಯ ಕೊಟ್ಟ ಹಾಗೆ ಆಗಿದೆ). ಇದು ಜಾರಿಯಾಗದಿರಬಹುದು, ಅದು ಬೇರೆ ವಿಚಾರ.

    ಎಲ್ಲರೂ ಮೂರ್ಖರಾಗಿ ಬದಲಾಗಿ ಒಬ್ಬನು ಮಾತ್ರ ಬದಲಾಗದಿದ್ದರೆ ಅದೊಂದು ಸಮಸ್ಯೆ. ಒಬ್ಬನು ಶೀಘ್ರವಾಗಿ ಬದಲಾಗಿ ಮಿಕ್ಕವರು ಬದಲಾಗದಿದ್ದರೆ ಅದು ಇನ್ನೂ ದೊಡ್ಡ ಸಮಸ್ಯೆ.

    ಒಬ್ಬ ಮಹಿಳೆಯ ಮದುವೆಯಾಗಿ ಒಂದು ವರ್ಷವಾಗಿತ್ತು. ವರ್ಷವಿಡೀ ನರಕವನ್ನು ಅನುಭವಿಸಿದ್ದಳು. ಗಂಡ ನಪುಂಸಕ. ಅವಳನ್ನು ನಾನ ರೀತಿಯಲ್ಲಿ ಹಿಂಸಿಸಿದ್ದನು. ಅವನೊಬ್ಬ ಸ್ಯಾಡಿಸ್ಟ್ ಎಂಬ ವಿಚಾರ ಎಲ್ಲರಿಗೆ ತಿಳಿದಿತ್ತು. ಪ್ರಸ್ತುತದಲ್ಲಿ ಅವನು ಸತ್ತಿದ್ದಾನೆ, ಅವಳು ಭೋರೆಂದು ಅಳುತ್ತಿದ್ದಾಳೆ. ಬಂಧುಗಳು ಹಾಗೂ ಆ ಬೀದಿಯ ಮಧ್ಯವಯಸ್ಕ ಗಂಡಸರು ತಮ್ಮ ಮೇಲೆ ತಾವೇ ಹಿರಿತನವನ್ನು ಹೊರೆಸಿಕೊಂಡು ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿರುವವರಲ್ಲಿ ತರ್ಕಬದ್ಧವಾಗಿ ಯೋಚಿಸಬಲ್ಲ ಒಬ್ಬನು- ... ಕಲಿತಿದ್ದೀಯ, ನೌಕರಿ ಸಹ ಮಾಡುತ್ತಿದ್ದೀಯ, ಅಂತಹ ಗಂಡ ಸತ್ತಿದ್ದಕ್ಕೆ ಅಳ್ತಿದ್ದೀಯಲ್ಲಾ? ಸಂತೋಷಪಡು. ನಿನ್ನ ಮನಸ್ಸಿಗೆ ಒಳಗೆ ಒಮ್ಮೆ ಇಣುಕಿ ನೋಡು... ಅದು ಸಂತೋಷ ಪಡುತ್ತಿಲ್ಲವೇನು? ನಿನ್ನನ್ನು ಸಮಾಧಾನ ಮಾಡ್ತಾ ಇರುವ ಇವರ ಕಡೆ ನೋಡುತ್ತಾ ‘... ಐಯಾಂ ಹ್ಯಾಪೀ... ಈಗಿಂದೀಗಲೇ ಎರಡನೆಯ ಮದುವೆಗೆ ರೆಡಿ’, ಎಂದು ಹೇಳಿ ನೋಡು. ಮೊದಲು ಇವರೆಲ್ಲರಿಗೆ ಷಾಕ್ ಆಗುತ್ತದೆ, ಆಶ್ಚರ್ಯವೂ ಆಗುತ್ತದೆ. ಎಲ್ಲರೂ ಪಬ್ಲಿಕ್ಕಾಗಿ ನಿನ್ನನ್ನು ಬೈಯುತ್ತಾರೆ. ಆದರೆ ಆಮೇಲೆ ಪ್ರೈವೇಟಾಗಿ ಒಬ್ಬೊಬ್ಬರೇ ಬಂದು ನಿನ್ನನ್ನು ಇಂಪ್ರೆಸ್ ಮಾಡುವುದಕ್ಕಾಗಿ ತಮ್ಮ ಲೋಕಜ್ಞಾನವನ್ನೆಲ್ಲ ನಿನ್ನ ಮುಂದೆ ಸುರಿಯುತ್ತಾರೆ. ರಹಸ್ಯವಾಗಿ ಜೀವನವನ್ನು ಅನುಭವಿಸಿದರೆ (ಮುಖ್ಯವಾಗಿ ತಮ್ಮ ಜೊತೆ) ತಪ್ಪೇನಿಲ್ಲ ಎಂದು ಹೇಳುತ್ತಾ ಸ್ನೇಹಹಸ್ತವನ್ನು ಚಾಚುತ್ತಾರೆ, ಎಂದು ಹೇಳಿ ಸುತ್ತಲೂ ಇರುವವರನ್ನು ನೋಡುತ್ತಾ ಅಲ್ವೇನ್ರಿ? ನೀವೇನು ಹೇಳ್ತೀರಿ? ಎಂದು ಕೇಳಿದರೆ ಏನಾಗುತ್ತದೆ?

    ಎಲ್ಲರೂ ಸೇರಿ ಅವನು ಸತ್ತು ಬೀಳುವ ಹಾಗೆ ಹೊಡೆಯುತ್ತಾರೆ!

    *    *    *    *    *

    ‘ತಪ್ಪು ಮಾಡೋಣ ಬನ್ನಿ...!’ ಕೃತಿಯಲ್ಲಿ ಇಂತಹ ಮೆಟೀರಿಯಲಿಸ್ಟಿಕ್ ಅಭಿಪ್ರಾಯಗಳು ಅಲ್ಲಲ್ಲಿ ತಲೆ ಹಾಕಿವೆ. ಜೇಮ್ಸ್ ಪಾತ್ರ ಅಂತಹುದೇ. ಮೊದಲನೆ ಭೇಟಿಯ ಸಮಯದಲ್ಲೇ ಅವನು ಒಬ್ಬ ಹುಡುಗಿಗೆ ಪ್ರಪೋಸ್ ಮಾಡುತ್ತಾನೆ. ಆ ಹುಡುಗಿಗೆ ಷಾಕ್ ಆಗುತ್ತದೆ. ನನ್ನ ಬಗ್ಗೆ ಇಷ್ಟು ಚೀಪಾಗಿ ತಿಳಿದಿದ್ದು ಹೇಗೆ? ಎಂದು ಅವಳು ಅಳುತ್ತಾಳೆ. ಅವಳೇಕೆ ಅಳುತ್ತಿದ್ದಾಳೆ ಎನ್ನುವುದೇ ಜೇಮ್ಸ್‍ಗೆ ಅರ್ಥವಾಗುವುದಿಲ್ಲ. ನಾನು ಕೇಳಿದೆ-ನೀವು ಇಲ್ಲ ಎಂದಿರಿ. ಇದರಲ್ಲಿ ಅಳುವಂತಹುದು ಏನಿದೆ? ನೀವು ನನ್ನ ಕಣ್ಣಿಗೆ ‘ಚೀಪ್’ ಆಗಿ ಕಂಡಿದ್ದರೆ ನಾನೇಕೆ ಪ್ರೊಪೋಸ್ ಮಾಡ್ತಿದ್ದೆ? ನಿಮ್ಮನ್ನು ನಾನು ಮೆಚ್ಚಿಕೊಂಡಿದ್ದರಿಂದ ಪ್ರೊಪೋಸ್ ಮಾಡಿದೆ, ಎಂದನು ಜೇಮ್ಸ್.

    ಕೊನೆಯಲ್ಲಿ ಇನ್ನು ಮೂರು ವಿಷಯಗಳನ್ನು ಹೇಳಿ ಈ ‘ಮೊದಲ ಮಾತ’ನ್ನು ಮುಗಿಸುತ್ತೇನೆ.

    ಈ ಪುಸ್ತಕದಲ್ಲಿರುವ ಕೆಲವು ಕತೆಗಳನ್ನೂ, ಉದಾಹರಣೆಗಳನ್ನೂ ಹಲವಾರು ಹಳೆಯ ಗ್ರಂಥಗಳಿಂದ ಮತ್ತು ಇಂಟರ್ನೆಟ್‍ನಿಂದ ಆಯ್ದುಕೋಂಡಿದ್ದೇನೆ. ಬಹುಪಾಲು ನನ್ನ ಸ್ವಂತದ್ದು.

    ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ‘ತಪ್ಪು’ ಬಗ್ಗೆ ವಿವರಣೆ ಇದೆ. ಎರಡನೆಯ ಭಾಗದಲ್ಲಿ ಕಥೆಯು ಪ್ರಾರಂಭವಾಗುತ್ತದೆ.

    ಇದರಲ್ಲಿ ‘ಶೃತಿಮೀರಿದ’ ಒಂದೆರಡು ಜೋಕುಗಳಿವೆ. ‘ವಿಜಯಕ್ಕೆ ಐದು ಮೆಟ್ಟಿಲು’ ಲೇಖಕನಾದ ನಾನು ಅವುಗಳನ್ನು ಕಿತ್ತಿ ಹಾಕಿದ್ದರೆ ಚೆನ್ನಾಗಿತ್ತು. ಆದರೆ ಇದರ ಶೀರ್ಷಿಕೆಯನ್ನು ಓದಿ ‘ಏನೇನೋ’ ಊಹಿಸಿಕೊಂಡಿರುವವರಿಗೆ ಅತೃಪ್ತಿಯಾಗಬಾರದು ಎಂದು ಹಾಗೇ ಉಳಿಸಿ ಕೊಂಡಿದ್ದೇನೆ. ಅವು ಕೇವಲ ನಕ್ಕು ಮರೆಯುವ, ಪಾರ್ಟಿಗಳಲ್ಲಿ ಹೇಳಿಕೊಳ್ಳಲು ಮಾತ್ರ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

    ಮತ್ತೊಂದು ಮಾತು. ಈ ಪುಸ್ತಕದ ಎರಡು ಮೂರು ಕಡೆ ನನ್ನ ಹಳೆಯ ಪುಸ್ತಕಗಳಿಂದ ಕೆಲವು ಕೋಟೇಶನ್‍ಗಳನ್ನು, ವಿಚಾರಗಳನ್ನು ಬಳಸಿಕೊಂಡಿದ್ದೇನೆ. ನನ್ನ ವಿಚಾರಗಳು ಹೆಚ್ಚು ಜನರನ್ನು ತಲುಪಲಿ ಎಂಬ ಉದ್ದೇಶದಿಂದ ಹಾಗೆ ಮಾಡಿದ್ದೇನೆಯೇ ಹೊರತು ವಿಚಾರ ದಾರಿದ್ರ್ಯದಿಂದ ಅಲ್ಲ; ಇದಕ್ಕೆ ಟೀಕೆ ಅನಗತ್ಯ. ಅದೇ ರೀತಿ ಮನುಷ್ಯನು ದೇವರೊಂದಿಗೆ ಮಾತನಾಡುವ ಸಂದರ್ಭಗಳು ನನ್ನ ಇನ್ನೆರಡು ಕೃತಿಗಳಾದ ‘ಅಂತರ್ಮುಖಿ’ ಹಾಗು ‘ಥ್ರಿಲ್ಲರ್’ಗಳಲ್ಲಿ ಸಹ ಇವೆ. ಇದು ಮೂರನೆಯದು. ಆ ಎರಡರಲ್ಲಿ ಮಾನವ ಸಂಬಂಧಗಳನ್ನು ಕುರಿತು ಬರೆಯಲಾಗಿದ್ದರೆ ಇದು ಸಮಾಜವನ್ನು ಕುರಿತು ಬರೆಯಲಾದ ಕೃತಿ. ದೇವರ ಬಗ್ಗೆ, ಸಮಾಜದ ಬಗ್ಗೆ ಪ್ರಸ್ತಾಪ ಬಂದಿರುವಾಗಲೇ ನಾನು ಇತ್ತೀಚೆಗೆ ಕೇಳಿದ ಮಲೆಯಾಳಿ ನಾಟಕದ ಬಗ್ಗೆ ಬರೆದರೆ ಅಪ್ರಸ್ತುತವಾಗಲಾರದು. ಕೆಂಪಿರುವೆಗಳು, ಕಪ್ಪಿರುವೆಗಳು ಜಗಳವಾಡಿ ಕೋತಿಯನ್ನು ತೀರ್ಪು ಕೊಡಲು ಕೇಳಿಕೊಳ್ಳುತ್ತವೆ. ಅದು ಒಂದು ಪಕ್ಷಪಾತ ತೋರಿಸುತ್ತದೆ. ಆಗ ಮತ್ತೊಂದು ಪಕ್ಷವು ದೇವರ ಸಹಾಯವನ್ನು ಕೋರುತ್ತದೆ. ಅವನು ಎರಡೂ ಕಡೆ ನಾಟಕ ಮಾಡಿ ತಾನು ಲಾಭ ಹೊಂದಲು ನೋಡುತ್ತಾನೆ. ಈ ಕಥೆಯು ಕಮ್ಯುನಿಸ್ಟ್ ಭಾವನೆಯನ್ನು ಒತ್ತಿ ಹೇಳುವ ಒಂದು ನಾಟಕವಾಗಿದೆ. ಬಹಳ ಜನರಿಗೆ ಇದು ಇಷ್ಟವಾಗದೇ ಹೋಗಬಹುದು. ಮೆಚ್ಚಿಗೆ ಆಗುವುದು ಬಿಡುವುದು ಅವರವರ ಅಭಿರುಚಿ ಹಾಗೂ ನಂಬಿಕೆಗಳ ಮೇಲೆ ಆಧಾರಪಟ್ಟಿದೆ-ಈ ಪುಸ್ತಕವೂ ಅಷ್ಟೇ!

    ಮಳೆಯು ಮೇಕೆಗಳಿಗೆ ಶತ್ರು, ಆದರೆ ಕುರಿಗಳಿಗೆ ಮಿತ್ರ. ಮಳೆ ಬರುವಾಗ ಕುರಿಗಳು ಸಂತೋಷದಿಂದ ಮೈದಾನ ಸೇರಿ ನಿಲ್ಲುತ್ತದೆ. ಆದರೆ ಮೇಕೆಗಳು ಶತ್ರುವು ಹಿಂಬಾಲಿಸಿ ಬಂದನೇನೋ ಅನ್ನುವ ಹಾಗೆ ಓಡಿ ಹೋಗಿ ಮರಗಳ ಕೆಳಗೆ ನಿಲ್ಲುತ್ತವೆ. ಬಿಸಿಲು ಬಹಳವಿದ್ದರೆ ಕುರಿಗಳು ಮರಗಳ ನೆರಳು ಸೇರುತ್ತವೆಯಾದರೆ ಮೇಕೆಗಳು ಆಹಾರ ಹುಡುಕುತ್ತ ಹೊರಡುತ್ತವೆ. ಇದೆಲ್ಲ ಅವುಗಳ ಸ್ವಭಾವ. ಒಬ್ಬರ ಅಭಿಪ್ರಾಯ ತಪ್ಪು ಎಂದು ಬೇರೆಯವರು ಹೇಳುವುದು ಸರಿಯಲ್ಲ. ಅದೇ ರೀತಿ ಈ ಪುಸ್ತಕವನ್ನು ಓದಿರಿ. ತಪ್ಪುಗಳಿದ್ದರೆ ತೋರಿಸಿಕೊಡಿ, ಟೀಕಿಸಿರಿ. ಆದರೆ ನೆನಪಿರಲಿ, ಟೀಕೆಯೇ ಬೇರೆ; ಅಭಿಪ್ರಾಯಭೇದವೇ ಬೇರೆ. ವಾದ ಮಾಡುವುದರಿಂದ ಅಭಿಪ್ರಾಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಕೆಲವರಿಗೆ ಈ ಪುಸ್ತಕವು ವಿತಂಡವಾದದ ಹಾಗೆ ಕಾಣಬಹುದು. ಅಂತಹವರು ಇದನ್ನು ಓದುವುದನ್ನು ಒಲ್ಲಿಗೇ ನಿಲ್ಲಿಸುವುದು ಒಳ್ಳೆಯದು.

    -ಯಂಡಮೂರಿ ವೀರೇಂದ್ರನಾಥ್

    ತಪ್ಪು ಮಾಡೋಣ ಬನ್ನಿ...!

    (A Book on Change Management)

    ತಪ್ಪು ಮಾಡೋಣ ಬನ್ನಿ...! ಎಂದ ಕೂಡಲೇ ಯಾವುದೋ ‘ಕರಾಳ ತಪ್ಪಿನ’ ಕುರಿತು ಯೋಚಿಸುವುದೇ ಮೊದಲನೇಯ ತಪ್ಪು.

    *    *    *    *    *

    ಹತ್ತು... ಹನ್ನೊಂದು... ಹನ್ನೆರಡು... ಆ ಮೇಲೇನೋ? ಎಂದು ಕೇಳಿದರು ಗುರುಗಳು.

    ಒಂದು ಎಂದ ವಿದ್ಯಾರ್ಥಿ ಭೂಪ.

    ದಡ್ಡಾ! ಹನ್ನೆರಡು ಆದ ಮೇಲೆ ಹದಿಮೂರು ಅಲ್ವೇನೋ? ಇಷ್ಟು ಸಣ್ಣ ಲೆಕ್ಕಾನೇ ತಪ್ಪು ತಪ್ಪಾಗಿ ಮಾಡಿದರೆ ಮುಂದೆ ಹೇಗಯ್ಯಾ ಮೇಲಕ್ಕೆ ಬರ್ತೀಯ? ಇದನ್ನು ನಂಬರ್ ಸೀರಿಸ್... ಅಂದರೆ ಅನುಕ್ರಮ ಎನ್ನುತ್ತಾರೆ! ಈಗ ಹೇಳು ಹತ್ತು... ಹನ್ನೊಂದು... ಹನ್ನೆರಡು ಆದಮೇಲೆ ಒಂದೇನು?

    ಗಡಿಯಾರದಲ್ಲಿ ಒಂದೇ ತಾನೆ ಸಾರ್? ಎಂದು ಕೇಳಿದ ಆ ವಿದ್ಯಾರ್ಥಿ, ನಮ್ರತೆಯಿಂದ.

    ಮೂರ್ಖ! ನಾನು ಅನುಕ್ರಮದ ಬಗ್ಗೆ ಕೇಳಿದರೆ ನೀನು ಗಡಿಯಾರದ ಬಗ್ಗೆ ಹೇಳ್ತೀಯಾ? ಎಂದು ಮಿಕ್ಕ ವಿದ್ಯಾರ್ಥಿಗಳ ಕಡೆಗೆ ತಿರುಗಿ... ... ಮಕ್ಕಳೆ ನೀವು ಹೇಳಿ, ಹನ್ನೆರಡು ಆದ ಮೇಲೆ ಎಷ್ಟು? ಎಂದು ಕೇಳಿದರು.

    ಎಲ್ಲರೂ ಹದಿಮೂರು ಎಂದು ಒಟ್ಟಾಗಿ ಹೇಳಿದರು.

    ಗುಡ್ ಅನುಕ್ರಮ ಅಥವಾ ವರಸೆಕ್ರಮ ಅಂದರೆ ಅದು...! ಈಗ ‘ಟ’ ಅಕ್ಷರದಿಂದ ಆರಂಭವಾಗುವ ಪದ ಬಳಸಿ ಒಂದು ಆಂಗ್ಲ ವಾಕ್ಯವನ್ನು ಹೇಳಿರಿ, ಎಂದು ಮೇಷ್ಟ್ರು ಕೇಳಿದಾಗ-

    I is... ಎಂದು ಒಬ್ಬ ವಿದ್ಯಾರ್ಥಿ ಉತ್ತರಿಸತೊಡಗಿದೆ.

    ಮೂರ್ಖ! I ಆದ ಮೇಲೆ am ಬರಬೇಕು, ಎಂದು ಮೇಷ್ಟ್ರು ತಿದ್ದಿದರು.

    I is the 9th letter in English, ಎಂದನು ಹುಡುಗ.

    ಗುರುಗಳಿಗೆ ಸಿಟ್ಟು ಬಂತು. ತಪ್ಪು ಮಾಡಿದ್ದಲ್ಲದೆ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದೀಯಾ? ಎಂದು ಅಂಗೈ ಕೆಂಪಗಾಗುವಂತೆ ಬೆತ್ತದಿಂದ ಹೊಡೆದರು. ವಿದ್ಯಾರ್ಥಿ ಶಿಕ್ಷೆಯನ್ನು ಅನುಭವಿಸಿದ. ಆದರೆ ತಾನು ಹೇಳಿದ್ದು ಸಹ ಸರಿ ಎಂಬುದು ಅವನಿಗೆ ತಿಳಿದಿತ್ತು. ತಾನು ತಿಳಿದಿರುವುದು ಮಾತ್ರ ಸರಿ ಎಂದು ಗುರುಗಳು ನಂಬಿದ್ದರು.

    ಆ ವಿದ್ಯಾರ್ಥಿ ಬಹಳ ಬುದ್ಧಿವಂತ, ಇತರರಿಗಿಂತ ಒಂದು ಹೆಜ್ಜೆ ಮುಂದಿರುವವನು.

    ಗುರುಗಳು ಬಲಶಾಲಿಗಳು. ಬದಲಾವಣೆಯನ್ನು ವಿರೋಧಿಸುವವರು. ಪ್ರಪಂಚ ಅವರನ್ನು ಅನುಸರಿಸುತ್ತದೆ. ಅದು ತಪ್ಪೋ-ಸರಿಯೋ, ಲಾಭವೋ-ನಷ್ಟವೋ ಎಂದು ಯೋಚಿಸುವುದಿಲ್ಲ –ಅದರಲ್ಲಿ ಕಷ್ಟವಿದ್ದರೂ ಸರಿಯೇ! ಬದಲಾಗುವುದರಲ್ಲಿ ಲಾಭವಿದ್ದರೂ ಸರಿಯೇ! ಆದ್ದರಿಂದಲೇ ಬುದ್ದಿವಂತನಾದವನು ಮಿಕ್ಕವರಿಗಿಂತ ಮೊದಲು ಬದಲಾಗುತ್ತಾನೆ. ಭವಿಷ್ಯದ ಬಗ್ಗೆ ಸರಿಯಾಗಿ ಊಹಿಸುತ್ತಾನೆ. ಪ್ರಪಂಚವು ‘ತಪ್ಪು’ ಎಂದು ತಿಳಿದಿರುವುದನ್ನು ಮೊದಲು ಮಾಡಿ ತೋರಿಸುತ್ತಾನೆ. ಟೀಕಿಸಲ್ಪಡುತ್ತಾನೆ. ಶಿಕ್ಷೆಗೊಳಗಾಗುತ್ತಾನೆ. ಶಿಲುಬೆಯೇರುತ್ತಾನೆ. ಆದರೆ ಮುಂದೆ ಜನರು ಅವನನ್ನೇ ‘ಮಾರ್ಗದರ್ಶಿ’ ಎನ್ನುತ್ತಾರೆ. ಮೊದಲು ‘ತಪ್ಪು’ ಎನಿಸಿಕೊಂಡಿದ್ದು ಮುಂದೆ ‘ಒಪ್ಪು’ ಎನ್ನಿಸಿಕೊಳ್ಳುತ್ತದೆ. ಇದರಲ್ಲಿ ನಾನು ಹೇಳಬಯಸುತ್ತಿರುವುದು ಅದನ್ನೇ.

    *    *    *    *    *

    "ಅನುಭವದಿಂದ ಕಲಿಯದವನು ಮೂರ್ಖ

    ತನ್ನ ಅನುಭವದಿಂದ ಕಲಿಯುವವನು ಸಾಮಾನ್ಯ ಮಾನವ

    ಇತರರ ಅನುಭವದಿಂದ ಪಾಠ ಕಲಿತವನು ಮೇಧಾವಿ

    ಯಾವ ಅನುಭವವೂ ಇಲ್ಲದೆ ಕಲಿತವನು ಜ್ಞಾನಿ ಎಂದು ನಾನೇ ಎಲ್ಲಿಯೋ ಬರೆದಿದ್ದೇನೆ. ನಾವೆಲ್ಲರೂ ಜ್ಞಾನಿಗಳಲ್ಲದೇ ಇರಬಹುದು. ಕನಿಷ್ಟಪಕ್ಷ ಮೇಧಾವಿಗಳಾಗಿ ಯಾದರೂ ಬದುಕಬೇಕೆ. ‘ತಪ್ಪು ಮಾಡೋಣ ಬನ್ನಿ!’ ಬರೆಯುವ ಮೂಲಕ ಬದಲಾಗುತ್ತಿರುವ ಪ್ರಪಂಚವನ್ನು ಹೊಸ ಕನ್ನಡಿಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇದರಲ್ಲಿನ ಕೆಲವು ಅಭಿಪ್ರಾಯಗಳು ಮೈನಡುಗುವ ಹಾಗೆ ಮಾಡುತ್ತವೆ. ಕೆಲವು ... ಅಮ್ಮಯ್ಯ!" ಎನಿಸುತ್ತವೆ. ಇನ್ನು ಕೆಲವು ಜೀರ್ಣವೇ ಆಗುವುದಿಲ್ಲ. ಸ್ಪೇನ್ ದೇಶದ ಒಂದು ಹೊಟೆಲ್‍ನಲ್ಲಿ ಕೀಲುರೋಗ ನಿವಾರಣೆಗೆ ಒಂದು ‘ಸ್ಪೆಷಲ್’ ಸಾಂಬಾರ್ ಮಾಡುತ್ತಾರೆ. ಅದನ್ನು ಜನ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಅದನ್ನು ಹೇಗೆ ತಯಾರಿಸುತ್ತಾರೆ ಗೊತ್ತೇ? ಚರ್ಮ ಸುಲಿದ ಇಲಿಯ ಮಾಂಸವನ್ನು ಗೂಬೆಯ ರೆಕ್ಕೆಯಲ್ಲಿಟ್ಟು ಬೇಯಿಸಿ ಮಾಡುತ್ತಾರೆ!

    ಮೈ ಜುಮ್ ಎಂದಿತೇನೋ? ರಾಬರ್ಟ್‍ಗ್ರೀನ್ ಬರೆದಿರುವ 48 Laws of power ಎಂಬ ಪುಸ್ತಕವನ್ನು ಓದಿದಾಗಲೂ ಇದೇ ಭಾವನೆ ಉಂಟಾಗುತ್ತದೆ. ಈ ರಚನೆಗೆ ಕೊಂಚ ಮಟ್ಟಿಗೆ ಆ ಪುಸ್ತಕವೂ ಪ್ರೇರಣೆ ನೀಡಿದೆ. ತನ್ನ ಪುಸ್ತಕದಲ್ಲಿ ಗ್ರೀನ್ ಹೀಗೆ ಹೇಳಿದ್ದಾನೆ- ನೀನು ಮಾಡಬೇಕಾದ ಕೆಲಸವನ್ನು ಬೇರೆಯವರು ಮಾಡಲು ಸಾಧ್ಯ ಎನ್ನುವುದಾದರೆ ಅವರಿಂದಲೇ ಅದನ್ನು ಮಾಡಿಸು. ಅದರ ಫಲವು ಮಾತ್ರ ನಿನಗೆ ಸಿಗುವ ಹಾಗೆ ವ್ಯವಸ್ಥೆ ಮಾಡಿಕೋ, ಇದು ವ್ಯಾವಹಾರಿಕವಾಗಿ ಇದೆ ಅಲ್ಲವೇ?

    ಇದಕ್ಕೆ ಉದಾಹರಣೆ ಎಂದರೆ ಹದ್ದು! ಆಹಾರಕ್ಕಾಗಿ ಹುಲಿಯು ತನ್ನೆಲ್ಲ ಶಕ್ತಿಯನ್ನು ತೊಡಗಿಸಿ ಓಡುತ್ತಾ ನೆಲದ ಮೇಲೆ ಜಿಂಕೆಯನ್ನು ಬೇಟೆಯಾಡುವ ಸಮಯದಲ್ಲಿ ಮೇಲೆ ಆಕಾಶದಲ್ಲಿ ಹದ್ದು ನಿ...ಧಾ...ನ...ವಾಗಿ ಸುತ್ತು ಹಾಕುತ್ತಿರುತ್ತದೆ. ‘ಆ ಜಿಂಕೆಯನ್ನು ಹುಲಿಯು ಬೇಟೆಯಾಡುವುದು ತಾನು ತಿನ್ನಲಿ ಎಂದು’ ಎಂದೇ ಅದು ತಿಳಿದಿರುತ್ತದೆ.

    ನಿನಗಾಗಿ ಇನ್ನೊಬ್ಬರು ಕೆಲಸ ಮಾಡುವುದು ಅಂದರೆ ಅದೇನೇ!

    Eagle’s Eye View ಎಂದರೆ ಒಂದು ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಲ್ಲ ಕೋನಗಳಿಂದ ಸಮಾನವಾಗಿ, ನಿಪ್ಪಕ್ಷಪಾತವಾಗಿ ಅಂದಾಜು ಮಾಡುವುದು ಎಂದರ್ಥ. ಒಂದು ಕೆಲಸವನ್ನು ಮಾಡುತ್ತಿರುವಾಗ ಇನ್ನೊಂದನ್ನು ಮಾಡಿದ್ದರೆ ಚೆನ್ನಾಗಿತ್ತು ಎಂದು ನೊಂದುಕೊಳ್ಳದಿರುವುದು! ಮೇಲ್ಮೇಲೆ ಇದು ಬಹಳ ಸುಲಭವೆಂದು ತೋರಿದರೂ ಆಚರಣೆಗೆ ತರುವುದು ಕಷ್ಟದ ಕೆಲಸ.

    ಎಷ್ಟೋ ಆಮಿಷಗಳು ಮನುಷ್ಯನನ್ನು ಆಯಸ್ಕಾಂತದ ಹಾಗೆ ಸೆಳೆಯುತ್ತ ಅವನು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಹಾಗೆ ಮಾಡುತ್ತವೆ. ಉದಾಹರಣೆಗೆ ಒಬ್ಬ ವ್ಯಕ್ತಿ ಸಂಜೆ ಸಿನಿಮಾಗೆ ಹೋಗೋಣ ಎಂದು ಹೆಂಡತಿಗೆ ಹೇಳಿರುತ್ತಾನೆ ಎಂದಿಟ್ಟುಕೊಳ್ಳಿ. ಆಫೀಸಿನಲ್ಲಿ ಬಾಸ್ ಇನ್ನೆರಡು ತಾಸು ಕೆಲಸ ಮಾಡು ಎನ್ನುತ್ತಾನೆ. ಮಧ್ಯಾಹ್ನ ಯಾವುದೋ ಸುಳ್ಳು ನೆಪ ಹೇಳಿ ಬಂದುಬಿಡು ಎಂದು ಸ್ನೇಹಿತರು ಹೇಳಿರುತ್ತಾರೆ. ಅದೇ ಊರಿನಲ್ಲಿರುವ ತಾಯಿ ಸಂಜೆ ಬಂದು ತನ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ಹೇಳುತ್ತಾಳೆ. ಆಗ ಅವನು ಏನು ಮಾಡಬೇಕು?

    ತನ್ನ ಸ್ವಂತ ಇಚ್ಛೆಗನುಸಾರವಾಗಿ ನಿರ್ಣಯ ತೆಗೆದುಕೊಳ್ಳುತ್ತಾನೆ, ಯಾವುದು ಸರಿ ಎಂದು ಯೋಚಿಸುವುದಿಲ್ಲ. ನಂತರ ತಾನು ಮಾಡಿದ್ದೇ ಸರಿ ಎಂದೂ ಸಮರ್ಥಿಸಿಕೊಳ್ಳುತ್ತಾನೆ. ‘ತಪ್ಪು’ ಎಂಬುದರ ಬಗ್ಗೆ ನಮ್ಮ ಅಭಿಪ್ರಾಯ ಬದಲಾಗುವುದು ಹೀಗೆ.

    *    *    *    *    *

    ನಮ್ಮ ಆಲೋಚನೆಗಳೆಲ್ಲವೂ ನಮ್ಮ ಸುತ್ತಲಿನ ಪರಿಸರ, ನಮ್ಮ ನೈತಿಕ ಮೌಲ್ಯಗಳು ಆಚಾರಗಳು, ಸಮಾಜದ ನಿಯಮಗಳು, ಇವುಗಳ ಮೇಲೆ ಅವಲಂಬಿಸಿರುತ್ತವೆ. ಒಂದು ಮತದವರು ಹೆಣವನ್ನು ಹೂಳುತ್ತಾರೆ, ಇನ್ನೊಂದು ಮತದವರು ಸುಡುತ್ತಾರೆ, ಮತ್ತೊಂದು ಮತದವರು ಹೆಣವನ್ನು ಪಕ್ಷಿಗಳಿಗೆ ಆಹಾರವಾಗಿ ಬಿಟ್ಟುಬಿಡುತ್ತಾರೆ! ಹೆಂಡತಿಯೊಬ್ಬಳು ಬದುಕಿರುವಾಗ ಮತ್ತೊಂದು ಹೆಣ್ಣನ್ನು ಮದುವೆಯಾಗಬೇಕೆಂಬ ಬಯಕೆ ಒಬ್ಬ ಹಿಂದೂಗೆ ಉಂಟಾಗುವುದಿಲ್ಲ. ನಾಲ್ವರು ಹೆಂಡಿರನ್ನು ಕಟ್ಟಿಕೊಳ್ಳುವ ಹಕ್ಕು ಇನ್ನೊಂದು ಮತದ ಗಂಡಸಿಗಿದೆ! ಹೆಂಡತಿ ಸತ್ತರೆ ಅವಳ ತಂಗಿಯನ್ನು ಮದುವೆಯಾಗುವ ಸಂಪ್ರದಾಯವೂ ಇದೆ. ಗಂಡ ಸತ್ತಾಗ ಹೆಂಡತಿಯ ತಲೆ ಬೋಳಿಸುವ ಆಚಾರವೂ ಇದೆ.

    ಕಾಲಕ್ಕೆ ತಕ್ಕಂತೆ ಬದಲಾದ ಆಲೋಚನೆಗಳನ್ನು ಹೊರತುಪಡಿಸಿ ಹೊಸ ರೀತಿ ಯೋಚಿಸುವುದಕ್ಕೆ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಹಾಗೆ ಯೋಚಿಸಲು ಸಾಧ್ಯವಾದಲ್ಲಿ ಅದನ್ನು Paradigm shift ಎನ್ನುತ್ತಾರೆ. ವೈಚಾರಿಕ ಬದಲಾವಣೆ ಅಂದರೆ ಅದೇ. ಅದು ಹೇಗೆ ಸಾಧ್ಯವಾಯ್ತು? ಒಂದು ಅಭಿಪ್ರಾಯವನ್ನು ಪೂರ್ತಿಯಾಗಿ ಅಳಿಸಿ ಹಾಕಿ ಹೊಸ ರೀತಿಯಲ್ಲಿ ಯೋಚಿಸುವುದರ ಮೂಲಕ (LATERAL THINKING) ಇದು ಸಾಧ್ಯವಾಯ್ತು. ಹೇಳಿದಷ್ಟು ಸುಲಭವಲ್ಲ ಇದು. ಉದಾಹರಣೆಗೆ ಸೂಟ್‍ಕೇಸ್ ಕೆಳಗಡೆ ಚಕ್ರಗಳನ್ನು ಸೇರಿಸಿದ್ದು, ಶಾಂಪೂ ಶೀಶೆಯ ಮುಚ್ಚಳವನ್ನು ಪೂರ್ತಿಯಾಗಿ ತೆಗೆಯದೆ ಮೇಲಿರುವ ಬಿರಡೆಯಿಂದ ಸುರಿಯುವಂತೆ ವ್ಯವಸ್ಥೆ ಮಾಡಿದ್ದು, ಸೋಡಾವನ್ನು ಪ್ಲಾಸ್ಟಿಕ್ ಬಾಟೆಲ್‍ನಲ್ಲಿ ಮಾರಾಟ ಮಾಡುವುದು, ಇವೆಲ್ಲ ಹೊಸ ಯೋಚನೆಗಳೇ, ಆದರೆ ಈ ಯೋಚನೆಗಳು ಮನುಷ್ಯನಿಗೆ ಹೊಳೆಯಬೇಕಾದರೆ ಬಹಳ ವರ್ಷ ಬೇಕಾಯಿತು. ಅದೇ ರೀತಿ ಭೂಮಿ ಗುಂಡಗಿದೆ ಎಂದು ಅರಿಯಲು ಇಪ್ಪತ್ತೈದು ಸಹಸ್ರ ವರ್ಷಗಳು ಬೇಕಾದವು. ವಿಚಿತ್ರದ ಸಂಗತಿ ಏನೆಂದರೆ ಅದನ್ನು ಕಂಡು ಹಿಡಿದವನನ್ನು ಇತರರು ಸಾಹಿಸಿದರು. ಅವರ ದೃಷ್ಟಿಯಲ್ಲಿ ಅವನ ವಿಚಾರವೇ ‘ತಪ್ಪು’ ಎಂದಾಗಿತ್ತು.

    2

    Fair ಅಂದರೆ ಅರ್ಥವೇನು?

    ಒಂದೊಂದು ಬಾರಿ ನಾವು ಸರಿ ಎಂದು ತಿಳಿದಿರುವುದು ನಿಜಕ್ಕೂ ತಪ್ಪಾಗಿರಬಹುದು. ನಮ್ಮ ದೃಷ್ಟಿಕೋನದಲ್ಲಿ ಬದಲಾವಣೆ ಆಗದೇ ಇರುವಷ್ಟು ಕಾಲ ನಮಗೆ ಇಷ್ಟವಾಗದ, ಅರ್ಥವಾಗದ ಎಲ್ಲಾ ವಿಚಾರಗಳು ತಪ್ಪಾಗಿಯೇ ಕಾಣಿಸುತ್ತವೆ.

    ಉದಾಹರಣೆಗೆ ಓರ್ವ ಮುದಿ ಬೆಗ್ಗರ್ ಖಾಸ ತಮ್ಮ ಸತ್ತು ಹೋದ. ಅವನು ಕೂಡಾ ಒಬ್ಬ ಬೆಗ್ಗರ್ರೇ. ಆದರೆ ಸತ್ತವರಿಗೆ ಅಣ್ಣದಿಂರೇ ಇರಲಿಲ್ಲ... ಇದು ಹೇಗೆ ಸಾಧ್ಯ?

    ಮತ್ತೊಂದು ಉದಾಹರಣೆಗೆ-ಒಬ್ಬ ಫ್ರೆಂಡ್‍ನ ನಾನು ಒಂದು ಪ್ಲಾಟ್ ಫಾರ್ಮಿನ ಮೇಲೆ ಹತ್ತು ವರ್ಷಗಳ ನಂತರ ಭೇಟಿಯಾದೆ. ನನ್ನ ಫ್ರೆಂಡ್‍ಗೆ ಮದುವೆಯಾದ ವಿಚಾರವೇ ನನಗೆ ಗೊತ್ತಿರಲಿಲ್ಲ. ಜೊತೆಗಿದ್ದ ಮಗುವನ್ನು ನೋಡಿ-ನಿನ್ನ ಹೆಸರೇನು ಮರೀ ಎಂದು ಕೇಳಿದೆ. ನಮ್ಮ ಅಮ್ಮನ ಹೆಸರೇ ನನ್ನ ಹೆಸರು ಕೂಡಾ... ಎಂದು ಈ ಸಣ್ಣ ಹುಡುಗಿ ಹೇಳಿದಳು. ಒಂದು ಕ್ಷಣ ಯೋಚಿಸಿ-ಹಾಗಾದರೆ ನಿನ್ನ ಹೆಸರು ಸೀತಾಲಕ್ಷ್ಮಿ ಎಂದು ಹೇಳಿದೆ. ಆ ಹುಡುಗಿ ತಲೆಯಾಡಿಸಿದಳು... ಇದು ಹೇಗೆ ಸಾಧ್ಯ?

    ನಿಮ್ಮ ಗೆಳೆಯರನ್ನು ಮೇಲಿನ ಎರಡು ಪ್ರಶ್ನೆಗಳನ್ನು ಕೇಳಿ ನೋಡಿ. ...ನಾನ್ಸೆನ್ಸ್! ಈ ಪ್ರಶ್ನೆಯೇ ಸರಿಯಿಲ್ಲ ಎಂದು ಅವರಲ್ಲಿ ಬಹಳ ಮಂದಿ ಹೇಳಬಹುದು. ನಿಮ್ಮ ಪ್ರಶ್ನೆಗಳು ತಪ್ಪು ಎಂದು ಹೇಳಿದವರ ಅಭಿಪ್ರಾಯವೇ ತಪ್ಪು ಎಂಬುದು ನಿಮಗೆ ತಿಳಿದಿದೆ.

    ಯಾರು ಸರಿ?

    ರಾಮು ಹಸಿದು ಬಂದನು. ಆಗ A ಬಳಿ 4 ಹಾಗೂ B ಬಳಿ 5 ಸೇಬುಗಳಿರುತ್ತದೆ. ಅವುಗಳಲ್ಲಿ ಮೂವರು ಸಮನಾಗಿ ಹಂಚಿಕೊಂಡು ತಿನ್ನುತ್ತಾರೆ. ತಾನು ತಿಂದ ಹಣ್ಣುಗಳಿಗೆ ರಾಮು 9 ರೂಪಾಯಿ ಕೊಟ್ಟು ಹೊರಟು ಹೋಗುತ್ತಾನೆ. A ನಾಲ್ಕು ರೂಪಾಯಿಗಳನ್ನು ತಾನಿಟ್ಟುಕೊಂಡು 5 ರೂಪಾಯಿಗಳನ್ನು Bಗೆ ಕೊಡುತ್ತಾನೆ. A ಸಿಟ್ಟಾಗಿ-ಇದು ಅನ್ಯಾಯ... ನನಗೆ ಇನ್ನೊಂದು ರೂಪಾಯಿ ಬರಬೇಕು, ಎನ್ನುತ್ತಾನೆ. Aಗೆ ಅರ್ಥವಾಗುವುದಿಲ್ಲ.

    ನನ್ನ ಹತ್ತಿರ ಇದ್ದದ್ದು ನಾಲ್ಕು ಹಣ್ಣುಗಳು. ನಿನ್ನವು ಐದು. ಅವನು ಒಬ್ಬತ್ತು ರೂಪಾಯಿ ಕೊಟ್ಟ. ನಾನು ನಾಲ್ಕು ರೂಪಾಯಿ ಇಟ್ಟುಕೊಂಡು ನಿನಗೆ 5 ರೂಪಾಯಿ ಕೊಟ್ಟಿದೀನಲ್ಲ... FAIR ತಾನೇ? ಎಂದು ಕೇಳಿದನು.

    ಫೇರ್ ಎಂಬ ಪದಕ್ಕೆ ಕನ್ನಡದಲ್ಲಿ ಸರಿಯಾದ ಅರ್ಥವಿಲ್ಲ. ನ್ಯಾಯವಾಗಿ... ನಿಷ್ಪಕ್ಷಪಾತವಾಗಿ.... ಪ್ರಾಮಾಣಿಕವಾಗಿ ಎಂದು ಅರ್ಥ ಮಾಡಿಕೊಳ್ಳಬಹುದು. ಆದರೆ ನಿಘಂಟುಗಳು ಹೇಳುವ ಅರ್ಥವೇ ಬೇರೆ. ಅರ್ಥಶಾಸ್ತ್ರಜ್ಞರು ಬೇರೆ ಅರ್ಥವನ್ನು ಹೇಳುತ್ತಾರೆ. ಗಣಿತಜ್ಞರು ಇನ್ನೊಂದು ಅರ್ಥವನ್ನು ನೀಡುತ್ತಾರೆ.

    ಮೇಲಿನ ಲೆಕ್ಕದಲ್ಲಿ Bಗೆ ಅನ್ಯಾಯವಾಗಿಲ್ಲ ಎಂದು ಕೆಲವರು ಹೇಳಬಹುದು. ಆದರೆ ಅದು ತಪ್ಪು.

    ಒಟ್ಟು 9 ಹಣ್ಣುಗಳಲ್ಲಿ 3ನ್ನು ರಾಮು ತಿಂದು 9 ರೂಪಾಯಿಗಳನ್ನು ಕೊಟ್ಟನು. ಅಂದರೆ ಒಂದು ಹಣ್ಣಿಗೆ 3 ರೂಪಾಯಿ ಎಂದಾಯಿತು.

    ರಾಮು Aಯಿಂದ ಒಂದು, Bಯಿಂದ 2 ಹಣ್ಣು ಪಡೆದಿದ್ದ. ಆದ್ದರಿಂದ Aಗೆ ಮೂರು ರೂಪಾಯಿ Bಗೆ 6 ರೂಪಾಯಿ ಸಿಗಬೇಕು. ಆದ್ದರಿಂದ B ಹೇಳಿದ ಮಾತು ಸರಿ, ಅವನಿಗೆ ಇನ್ನೂ ಒಂದು ರೂಪಾಯಿ ಸಿಗಬೇಕು.

    ಆದರೆ ಬಹಳ ಜನ ಈ ರೀತಿ ಲೆಕ್ಕ ಹಾಕುವುದಿಲ್ಲ. B ಹೇಳಿದ್ದು ತಪ್ಪು ಎಂದೇ ಹೇಳುತ್ತಾರೆ.

    ಅದೇ ರೀತಿ ಮೊದಲು ಹೇಳಿದ ಎರಡು ಉದಾಹರಣೆಗಳನ್ನು ಗಮನಿಸೋಣ: ಮೊದಲನೆಯದರಲ್ಲಿ ಒಬ್ಬ ಬೆಗ್ಗರ್ ತಮ್ಮ ಸತ್ತಿರುತ್ತಾನೆ. ಸತ್ತವನಿಗೆ ಅಣ್ಣಂದಿರಿರುವುದಿಲ್ಲ. ‘ಹೇಗೆ ಸಾಧ್ಯ?’, ‘ಇಂಪಾಸಿಬಲ್’, ‘ಪ್ರಶ್ನೆಯೇ ತಪ್ಪು’ ಎನ್ನುತ್ತಾರೆ. ಬೆಗ್ಗರ್ ಎನ್ನುವುದಕ್ಕೆ ‘ಬಿಕ್ಷುಕ, ಬಿಕ್ಷುಕಿ ಎಂದು ಸಹಾ ಅರ್ಥೈಸಬಹುದು. ಸತ್ತವನಿಗೆ ಅಣ್ಣಂದಿರಿರಲಿಲ್ಲ-ಅಕ್ಕ ಇದ್ದಿರಬಹುದಲ್ಲ ಎಂದು ಅವರು ಯೋಚಿಸುವುದಿಲ್ಲ.

    ಪ್ಲಾಟ್ ಫಾರ್ಮಿನ ಮೇಲೆ ಭೇಟಿಯಾದ ಫ್ರೆಂಡ್ ಮಗಳ ಹೆಸರು ಸೀತಾಲಕ್ಷ್ಮಿ ಎಂದು ನಾನು ಹೇಳಿದೆ. (ಎರಡನೆಯ ಉದಾಹರಣೆಯಲ್ಲಿ). ಹೇಗೆ ಹೇಳಿದೆ? ಪ್ಲಾಟ್ ಫಾರ್ಮಿನ ಮೇಲೆ ನಾನು ಭೇಟಿ ಮಾಡಿದ ಫ್ರೆಂಡ್ ‘ಗಂಡಸು’ ಎಂದು ಯೋಚಿಸುವಷ್ಟು ಹೊತ್ತು ಉತ್ತರ ಹೊಳೆಯುವುದಿಲ್ಲ. Paradigm Shift (ದೃಷ್ಟಿಕೋನದ ಬದಲಾವಣೆ) ಅಂದರೆ ಇದೇನೇ. ಬುದ್ದಿವಂತಿಕೆಯಿಂದ ಕೂಡಿದ, ದೃಷ್ಟಿಕೋನದಲ್ಲಾದ ಬದಲಾವಣೆ.

    ಲಕ್ಷಗಟ್ಟಲೇ ಬಾವುಲಿಗಳು ತಲೆಕೆಳಗಾಗಿ ನೇತಾಡುತ್ತಿರುವಾಗ ಒಂದು ಬಾವುಲಿ ಮಾತೆ ನೇರವಾಗಿದ್ದರೆ ತಪ್ಪೇನಿಲ್ಲ!-ಅದು ಶೀರ್ಷಾಸನದ ಅಭ್ಯಾಸ ಮಾಡುತ್ತಿರಬಹುದು!!

    *    *    *    *    *

    ಒಗೆದ ಬಟ್ಟೆಗಳು ಬೇಗ ಒಣಗಬೇಕಾದರೆ ಏನು ಮಾಡಬೇಕು?

    ಚಿ)      ಬಿಸಿಲಿನಲ್ಲಿ ಒಣಗಿಸಬೇಕು. b) ಬಿಸಿ ಇಸ್ತ್ರೀ ಮಾಡಬೇಕು. ಛಿ) ಮನೆಯನ್ನು ಸೂರ್ಯನ ಕಡೆಗೆ ತಿರುಗಿಸಬೇಕು.

    ಮೇಲಿನ ಪ್ರಶ್ನೆಗೆ ನಾನು ‘ಮನೆಯನ್ನು ತಿರುಗಿಸಬೇಕು’ ಎಂದು ಟಿಕ್ (-) ಮಾಡಿದರೆ ನಗುತ್ತಾರೆ. ಆದರೆ ಬ್ರೆಜಿಲ್ ದೇಶದ ಕರ್ಟಿಬಾ ಪಟ್ಟಣದಲ್ಲಿ ಒಂದು ಟವರ್ ಇದೆ. ಅದರ ಪ್ರತಿ ಅಂತಸ್ತು ಸ್ವಿಚ್ ಹಾಕಿದರೆ ನಮಗೆ ಬೇಕಾದ ದಿಕ್ಕಿಗೆ ತಿರುಗುತ್ತದೆ. ಬೆಲೆ ಕೂಡ ‘ಬಹಳ ಕಡಿಮೆ’-ಚದರ ಅಡಿಗೆ 500 ರೂಪಾಯಿ ಮಾತ್ರ! ಒಂದು ಸುತ್ತು ಸುತ್ತಲು ಸರಿಯಾಗಿ ಒಂದು ಗಂಟೆ ಬೇಕಾಗುತ್ತದೆ. ಬೇಕಿದ್ದರೆ ಮಧ್ಯದಲ್ಲಿಯೇ ‘ಆಫ್’ ಮಾಡಬಹುದು. ಇದರಿಂದ ಏನು ತಿಳಿಯುತ್ತದೆ?

    ಪ್ರಪಂಚವು ಮೊದಲಿದ್ದ ಹಾಗೆ ಈಗ ಇಲ್ಲ. ವಿಪರೀತ ವೇಗದಿಂದ ಬದಲಾಗುತ್ತಿದೆ. ನೂರು ವರ್ಷಗಳ ಹಿಂದೆ ತಿಂಗಳಿಗೆ ಒಂದು ಹೊಸ ಪದಾರ್ಥದ ಆವಿಷ್ಕಾರವಾಗುತ್ತಿತ್ತು. ಈಗ ದಿನಕ್ಕೆ ನೂರು ವಸ್ತುಗಳು ಮಾರುಕಟ್ಟೆ ಪ್ರವೇಶ ಮಾಡುತ್ತವೆ. ಮತ್ತೊಂದೆಡೆ ಬುದ್ದಿವಂತಿಕೆ, ಸ್ವಾರ್ಥ, ಮೆಟೀರಿಯಲಿಸಂ (ಭೌತಿಕವಾದ) ಹೆಚ್ಚಾಗುತ್ತಿವೆ. ಮೌಲ್ಯಗಳು ಬದಲಾಗುತ್ತಿವೆ. ಬದಲಾವಣೆಯ ಬಗ್ಗೆ ಮೊದಲೇ ಊಹಿಸಿದವನು ಏಣಿಯ ಮೆಟ್ಟಿಲನ್ನು ಏರಿ ಮೇಲೆ ಹೋಗುತ್ತಿದ್ದಾನೆ. ತಪ್ಪು-ಒಪ್ಪುಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಿಂದೆ ಹುಡುಗ-ಹುಡುಗಿ ಅದೆಷ್ಟೇ ಗಾಢವಾಗಿ ಪ್ರೇಮಿಸಿದ್ದರೂ ದೈಹಿಕ ಸಂಪರ್ಕಕ್ಕಾಗಿ ಹಾತೊರೆಯೊತ್ತಿರಲಿಲ್ಲ. ಈಗ ಬ್ರೌಸಿಂಗ್ ಸೆಂಟರ್‍ಗಳಲ್ಲಿ ‘ಅಡಾವುಡಿ’ ನಡೆಸಿದ್ದಾರೆ. ಇನ್ನು ಕೆಲವರು ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ-ಎ.ಟಿ.ಎಂ. ಕ್ಯಾಬಿನ್‍ಗಳ ಕಾವಲುಗಾರನಿಗೆ ಲಂಚ ಕೊಟ್ಟು ಅರ್ಧರಾತ್ರಿ ಹೊತ್ತಿನಲ್ಲಿ ಏರ್ ಕಂಡೀಷನ್ ‘ಸುಖ’ ಅನುಭವಿಸುತ್ತಿದ್ದಾರೆ. ಇದನ್ನು ಕೇಳಿದ ಸನಾತನಿಗಳು ನಂಬಲಾರರು, ನಂಬಲು ಇಚ್ಛಿಸುವುದೂ ಇಲ್ಲ.

    ಅಗತ್ಯಗಳು ಬೆಳೆದ ಹಾಗೆ ಆಲೋಚÀನೆಗಳೂ ಬದಲಾಗುತ್ತವೆ. ಗಿರಾಕಿಗಳ ಅಭಿರುಚಿ ಬದಲಾದ ಹಾಗೆಲ್ಲ ವ್ಯಾಪಾರಿಗಳೂ ಹೊಸ ರೀತಿಯ ಬಿಸಿನೆಸ್ ಆರಂಭಿಸುತ್ತಾರೆ. ನ್ಯಾಯ-ಅನ್ಯಾಯ, ನೈತಿಕತೆ-ಅನೈತಿಕತೆಗಳ ನಡುವೆ ಇದ್ದ ಅಂತರವು ಕಡಿಮೆಯಾಗುತ್ತಿದೆ. ಇಂಟರ್‍ನೆಟ್ ಚಾಟ್‍ನ ‘ರೋಮ್ಯಾನ್ಸ್-ಲೆಸ್ಟಿಯನ್-ಗೇಚಾಟ್’ ಇವೆಲ್ಲ ಮತ್ತೇನು? ಅವನ್ನೆಲ್ಲ ಜನ ತಪ್ಪೆಂದು ಪರಿಗಣಿಸುತ್ತಿಲ್ಲ! ಆ ರೀತಿಯಾಗಿ ಯಶಸ್ಸಿನ ವಿವರಣೆಯೇ ಬದಲಾಗುತ್ತಿದೆ.

    ಯಶಸ್ಸಿಗೆ ಅಗತ್ಯವಾಗಿ ಬೇಕಾಗಿರುವುದಾದರೂ ಏನು? ಹಿಂದೆ ‘ಬುದ್ದಿವಂತಿಕೆ, ಶ್ರಮ’ ಎಂದು ಉತ್ತರಿಸುತ್ತಿದ್ದರು. ಅದೀಗ ಬದಲಾಗಿದೆ. ಭರ್ತೃಹರಿ ಹೇಳುತ್ತಾನೆ-‘ತಮ್ಮ ಕೆಲಸವನ್ನು ನಿರ್ಲಕ್ಷಿಸಿಯಾದರೂ ಪರರ ಕೆಲಸವನ್ನು ಮಾಡಿಕೊಡುವವನು ಉತ್ತಮನು. ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಲೇ ಇತರರ ಕೆಲಸವನ್ನೂ ಮಾಡುವವನು ಮಧ್ಯಮನು’ ಎಂದು. ಅದು ಅಂದಿನ ಮಾತಾಯ್ತು. ಪರರಿಗಾಗಿ ತನ್ನ ಕೆಲಸವನ್ನು ನಿರ್ಲಕ್ಷಿಸಿದವನನ್ನು ಜನ ಈಗ ‘ಹುಚ್ಚ’ ಎಂದು ಕರೆಯುತ್ತಾರೆ. ತನ್ನ ಕೆಲಸವನ್ನು ಮಾಡಿಕೊಳ್ಳುತ್ತಲೇ ಇತರರಿಗೆ ಸಹಾಯ ಮಾಡುವವನು (WIN-WIN) ಉತ್ತಮನು ಎಂದು ಆಧುನಿಕ ಮನಃಶಾಸ್ತ್ರಜ್ಞರಾದ ಪೀಲೇ, ಕೋವೆ ಮೊದಲಾದವರು ಹೇಳುತ್ತಾರೆ.

    ಬಹುತೇಕ ಎಲ್ಲರನ್ನು ಮೂರು ಗುಂಪಿಗೆ ಸೇರಿಸಬಹುದು. ಕೆಲಸ ಮಾಡುವ ದಡ್ಡರು, ಕೆಲಸ ಮಾಡದ ಬುದ್ದಿವಂತರು ಹಾಗೂ ಕೆಲಸ ಮಾಡದ ದಡ್ಡರು. ಇದು ಹಿಂದಿನ ಕಾಲದ ಅರ್ಥ ವಿವರಣೆ. ಹಿಂದಿನ ಕಾಲದಲ್ಲಿ ಕೆಲಸ ಮಾಡುವ ಬುದ್ದಿವಂತರು ಒಬ್ಬಿಬ್ಬರಿರುತ್ತಿದ್ದರು. ಈಗ ಹಾಗಲ್ಲ. ಪ್ರತಿ ಮೂವರಲ್ಲಿ ಇಬ್ಬರು ಅಂತಹವರು. ಆದ್ದರಿಂದ ಇಂದಿನ ಮೇಲಾಟದಲ್ಲಿ ಗೆಲ್ಲಬೇಕಾದರೆ ಶ್ರಮ, ಬುದ್ದಿವಂತಿಕೆಗಳ ಜೊತೆಗೆ ಇನ್ನೂ ಕೆಲವು ಬೇಕು! ಅವು ಯಾವುವು?

    ನೀತಿ, ಪ್ರಾಮಾಣಿಕತೆ.

    ಗ್ರಾಬೋ ಮಾಕ್ರ್ಸ್ ಎಂಬ ಅರ್ಥಶಾಸ್ತ್ರಜ್ಞನು ಯಶಸ್ಸಿಗೆ ಏನು ಬೇಕು ಎಂಬುದನ್ನು ಹೀಗೆ ವಿವರಿಸಿದ್ದಾನೆ: "ಪ್ರತಿಯೊಬ್ಬನ ಯಶಸ್ಸು ಅವನ ನೀತಿ-ಪ್ರಾಮಾಣಿಕತೆಗಳನ್ನು ಅವಲಂಬಿಸಿರುತ್ತದೆ. ಅಂದರೆ ಅವು ಎಷ್ಟರಮಟ್ಟಿಗೆ ಇರಬೇಕು ಎಂದಲ್ಲ... ಕಾನೂನು ಬದ್ದವಾಗಿಯೇ ಅವುಗಳನ್ನು ಎಷ್ಟು ದೂರ ಇರಿಸಬಹುದು ಎಂಬುದನ್ನು ತಿಳಿಯುವುದರ ಮೇಲೆ ಅವಲಂಬಿಸಿರುತ್ತದೆ.

    ಮೊದಲ ವಾಕ್ಯವನ್ನು ಓದಿ ತಲೆದೂಗಿದವರೇ ಎರಡನೆಯ ವಾಕ್ಯವನ್ನು ಓದಿದಾಗ ಬೆಚ್ಚಿ ಬೀಳುತ್ತಾರೆ.

    *    *    *    *    *

    ಚಿಕ್ಕಂದಿನಲ್ಲಿ ನಾವು ಕೂಡಾ ಜನಪ್ರಿಯ ಸಾಹಿತ್ಯವನ್ನು ಓದಿದವರೇ. ಅದರಲ್ಲಿ ಅನಾಥನಾಗಿದ್ದ ಹೀರೋ ಪ್ರಾಮಾಣಿಕವಾಗಿ ಬದುಕುತ್ತಾ ಇಪ್ಪತ್ತೇ ವರ್ಷಗಳಲ್ಲಿ ಹಡಗಿನಂತಹ ಕಾರನ್ನೂ, ಬಂಗಲೆಯನ್ನೂ, ದ್ರಾಕ್ಷಿ ತೋಟವನ್ನೂ ಸಂಪಾದಿಸುತ್ತಾನೆ. ಇಂತಹ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆಯುತ್ತಿದ್ದೆವು. ಮುಂದೆ ನಾವೂ ಅವನ ಹಾಗೆ ಆಗಬೇಕೆಂದು ಬಯಸುತ್ತ ಇದ್ದೆವು. ಆದರೆ ಆರಡಿ ಎತ್ತರಕ್ಕೂ ಬೆಳೆಯಲಿಲ್ಲ. ಇನ್ನು ಆಸ್ತಿಗಳ ವಿಚಾರಕ್ಕೆ ಬಂದರೆ, ಮೊದಲನೆಯದನ್ನು ಕೊಳ್ಳಲಿಕ್ಕೆ

    Enjoying the preview?
    Page 1 of 1