Discover millions of ebooks, audiobooks, and so much more with a free trial

Only $11.99/month after trial. Cancel anytime.

Mooru Naatakagalu
Mooru Naatakagalu
Mooru Naatakagalu
Ebook315 pages1 hour

Mooru Naatakagalu

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200202609
Mooru Naatakagalu

Read more from K.T. Gatti

Related to Mooru Naatakagalu

Related ebooks

Reviews for Mooru Naatakagalu

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Mooru Naatakagalu - K.T. Gatti

    http://www.pustaka.co.in

    ಮೂರು ನಾಟಕಗಳು

    Mooru Naatakagalu

    Author:

    ಕೆ. ಟಿ. ಗಟ್ಟಿ

    K.T. Gatti

    For more books

    http://www.pustaka.co.in/home/author/kt-gatti-novels

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೆ.ಟಿ. ಗಟ್ಟಿಯವರ ಮೂರು ನಾಟಕಗಳು

    ತ್ರಿಶಂಕು ಮತ್ತು ಇತರರು

    ಆಕಾಶ ಕೆಳಗೆ ಬಿತ್ತು

    ಮಾಯಾಮೃಗ

    ಲೇಖಕರು:

    ಕೆ.ಟಿ. ಗಟ್ಟಿ.

    ಮೊದಲ ಮಾತು

    ಈ ಮೂರು ನಾಟಕಗಳು ಪುಸ್ತಕವಾಗಿ ಹೊರಬರುವ ನಿರೀಕ್ಷೆಯಲ್ಲಿ ಸುಮಾರು ಆರು ವರ್ಷಗಳು ಕಳೆದುಹೋಗಿವೆ. ಈ ಮಧ್ಯೆ ‘ತ್ರಿಶಂಕು ಮತ್ತು ಇತರರು’ ನಾಟಕಕ್ಕೆ ಮುನ್ನುಡಿಯನ್ನು ಬರೆದುಕೊಟ್ಟ ಶ್ರೀ ಜಿ.ಎನ್. ರಂಗನಾಥರಾವ್ ನಾನು ಮುನ್ನುಡಿ ಬರೆದುಕೊಟ್ಟ ನಾಟಕ ಎಲ್ಲಿ ಹೋಯಿತು? ಎಂದು ಗದರಿಸಿ ಕೇಳಿದ್ದಾರೆ. ‘ಮಾಯಾಮೃಗ’ ನಾಟಕವನ್ನು ಬೆಂಗಳೂರು ವಿ.ವಿ. ಕಲಾವಿದರು, ಬೆಂಗಳೂರು, ಉಡುಪಿ, ಮುಂಬಯಿ, ಲಕ್ನೊ, ದೆಹಲಿ ಮುಂತಾದ ಕಡೆಗಳಲ್ಲಿ ಆಡಿದ್ದಾರೆ.

    ಶ್ರೀ ಜಿ.ಎನ್. ರಂಗನಾಥರಾವ್ ಅವರಿಗೆ,

    ಬೆಂಗಳೂರು ವಿ.ವಿ. ಕಲಾವಿದರಿಗೆ, ಪ್ರಕಟಿಸಲು

    ಸಹಕಾರವಿತ್ತ ಆತ್ಮೀಯ ಶ್ರೀ ರಾಜಾಚೆಂಡೂರ್ ಅವರಿಗೆ

    ಹಾಗೂ ಪ್ರಕಟಿಸುತ್ತಿರುವ ಸುಧಾ ಎಂಟರ್‍ಪ್ರೈಸಸ್ ರವರಿಗೆ,

    ಎಲ್ಲಾ ನಾಟಕಾಸಕ್ತರಿಗೆ, ಸಾಹಿತ್ಯಾಸಕ್ತರಿಗೆ ನಾನು

    ಅಭಾರಿಯಾಗಿದ್ದೇನೆ.

    ಕೆ.ಟಿ. ಗಟ್ಟಿ

    ಉಜಿರೆ

    20-10-2003

    ಒಂದು ಸ್ಪಂದನ

    ಕೆ.ಟಿ. ಗಟ್ಟಿಯವರು ಜನಪ್ರಿಯ ಕಥೆಗಾರರು, ಕಾದಂಬರಿಕಾರರು. ಚಂಡೆ ಮದ್ದಳೆಯ ಪರಿಸರದಲ್ಲಿ ಹುಟ್ಟು, ಬೆಳೆದ ಅವರು ನಾಟಕಕಾರರೂ ಹೌದು. ಹಲವಾರು ಬಾನುಲಿ ನಾಟಕಗಳನ್ನೂ, ರಂಗ ನಾಟಕಗಳನ್ನೂ ಬರೆದಿದ್ದಾರೆ. ಪ್ರಸ್ತುತ ತ್ರಿಶಂಕು ಮತ್ತು ಇತರರು ಕೆ.ಟಿ. ಗಟ್ಟಿಯವರ ಮತ್ತೊಂದು ಗಮನಾರ್ಹ ನಾಟಕ.

    ತ್ರಿಶಂಕು ಮತ್ತು ಇತರರು ಎನ್ನುವ ಹೆಸರೇ ಧ್ವನಿಪೂರ್ಣವಾದದ್ದು. ಪುರಾಣಿ ಮತ್ತು ಮರ್ತಮಾನ ಹಾಗೂ ಮಾನವರು ಮತ್ತು ದೇವತೆಗಳನ್ನು ಅರ್ಥಪೂರ್ಣವಾಗಿ ಸಮೀಕರಿಸುವ ಈ ನಾಟಕ ಮುಖ್ಯವಾಗಿ ವ್ಯಕ್ತಿಗತ ನೆಲೆಯಲ್ಲಿ ಹುಟ್ಟು ಕಾಮನೆಗಳನ್ನೂ ಮತ್ತು ಅಹಮ್ಮನ್ನು ಸತ್ಯದ ನಿಕಶಕ್ಕೆ ಒಡ್ಡುತ್ತದೆ. ವಿಶ್ವಾಮಿತ್ರ ಸೃಷ್ಟಿಯಿಂದ ಹಿಡಿದು ಇಂದ್ರ, ಬೃಹಸ್ಪತಿ, ಬೃಹಸ್ಪತಿಯ ಪತ್ನಿ ಮತ್ತಿತರರವರೆಗೆ ಗಟ್ಟಿಯವರ ಬರವಣಿಗೆ ಶೋಧನಾಮುಖಿಯಾಗಿ ಒಂದೊಂದು ಪಾತ್ರದ ಅಂತರಂಗವನ್ನು ಅನಾವರಣಗೊಳಿಸುತ್ತಾ ಈ ಒಂದೊಂದು ಪಾತ್ರದ ಬಹಿರಂಗ ಕೃತ್ಯಗಳ ಒಳಗಿನ ಮರ್ಮ ಏನಿದ್ದೀತು ಎಂಬುದನ್ನು ಹೆಕ್ಕಿ ತೆಗೆಯುತ್ತದೆ. ಈ ಕ್ರಿಯೆಯಲ್ಲಿ ಗಟ್ಟಿಯವರ ಭಾಷೆ ವಿಡಂಬನೆಯ ಮೊನಚನ್ನು ಪಡೆದುಕೊಳ್ಳುತ್ತದೆ.

    ವಾಸ್ತವವಾಗಿ ವರ್ತಮಾನದ ನೆಲೆಯಲ್ಲಿ ಕುಟುಂಬ ಯೋಜನೆಯ ಚಿಹ್ನೆಯನ್ನು ತಲೆಕೆಳಕಾಗಿ ತೂಗು ಹಾಕುವ ವಿಫಲ ಕ್ರಿಯೆಯೊಂದಿಗೆ ಪ್ರಾರಂಭವಾಗುವ ನಾಟಕದುದ್ದಕ್ಕೂ ಚಂಡೆಮದ್ದಳೆ ಘೋಷಣೆಗಳ ಮೂಲಕ ಸೈಡ್‍ವಿಂಗ್‍ನಿಂದ ಪೌರಾಣಿಕ ಪಾತ್ರಗಳನ್ನು ಮುಖ್ಯವಾಹಿನಿಗೆ ಎಳೆದು ತಂದು ಈ ಪಾತ್ರಗಳಿಗೂ ‘ಮತ್ತಿತರರಿಗೂ’ ತಳುಕು ಹಾಕುವ, ತೂಗಿ ನೋಡುವ, ಅವುಗಳ ನಾಡಿ, ಹೃದಯಗಳ ಮಿಡಿತವನ್ನು ತಿಳಿಯುವ ತುಡಿತ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಾಗಿ ತ್ರಿಕೋನವನ್ನು ತಲೆಕೆಳಗಾಗಿ ನಿಲ್ಲಿಸುವ, ಮೇಲ್ಮುಖವಾಗಿ ನಿಲ್ಲಿಸುವುದರ ಹಿಂದಿನ ತ್ರಿಶಂಕು ಸ್ಥಿತಿ ಅಥವಾ ಅಧಃಪತನದ ಸಂಕೇತಾರ್ಥದೊಂದಿಗೆ ನಾಟಕ ಒಂದಕ್ಕಿಂತ ಹೆಚ್ಚಿನ ಆಯಾಮವನ್ನು ಪಡೆದುಕೊಳ್ಳುತ್ತದೆ.

    ಸ್ವರ್ಗ, ತ್ರಿಶಂಕು ಸ್ಥಿತಿ ಮತ್ತು ಭೂಮಿ ಒಳಗೊಂಡಂತೆ ನಾಟಕದ ಮೂಲ ಆಶಯ ದೇವತೆ-ಮಾನವ ಉಭಯತ್ತರ ಕ್ರಿಯೆಗಳಿಗೂ ಮೀಟುಗೋಲಾಗುವ ಅಹಂ ಮತ್ತು ಸ್ವಾರ್ಥ ಕಾಮನೆಗಳೇ ಎಂದು ಬೆರಳು ಮಾಡಿ ಹೇಳುವುದೇ ಆದರೂಒಂದೊಂದು ಪಾತ್ರದ ಮಾತಿನಲ್ಲೂ ಅದು ಬೇರೆ ಬೇರೆ ಧ್ವನಿಗಳನ್ನು ಪಡೆದುಕೊಳ್ಳುತ್ತದೆ. ಉದಾಹರಣೆಗೆ ಹೇಳುವುದಾದರೆ ಮೇನಕೆಯ ಮಾತುಗಳು ಕಾಲಾನುಕಾಲದಿಂದ ಪುರುಷರ ದಬ್ಬಾಳಿಕೆಯಲ್ಲಿ ನಲುಗಿ ನೊಂದ ಮಹಿಳೆಯ ಮಾತಷ್ಟೇ ಆಗದೆ ಇಂದಿನ ಸ್ತ್ರೀವಾದಿ ದನಿಯನ್ನೂ ಪಡೆದುಕೊಳ್ಳುತ್ತದೆ ಎನ್ನುವಷ್ಟರಲ್ಲೇ ನಿರ್ದಯ ಪುರುಷರೇ ನಿಮಗೆ ಮಗು ಬೇಡ ಮಗು ಹೆಣ್ಣಿಗೆ ಸೇರಿದ್ದು.... ನಾನು ಕಾಡಿನಲ್ಲೆ ನನ್ನ ಮಗುವನ್ನು ಸಾಕಿಸಲಹಿ ದೊಡ್ಡವಳನ್ನಾಗಿ ಮಾಡುತ್ತೇನೆ ಎಂಬ ಕಳಕಳಿಯಲ್ಲಿ ನಿಸರ್ಗ ಸಹಜವಾದ ತನ್ನ ಪಾತ್ರವನ್ನು ಅವಳು ಅರಿತಿರುವ ಧ್ವನಿಯೂ ಕೂಡಿ ಬರುತ್ತದೆ.

    ವಿಶ್ವಾಮಿತ್ರ, ತ್ರಿಶಂಕು, ಇಂದ್ರನ ಮಾತುಗಳು ಅವರ ಪೌರಾಣಿಕ ಹಾಗೂ ದೈವಿಕ ವ್ಯಕ್ತಿತ್ವಕ್ಕನುಗುಣವಾದ ಅರ್ಧಸ್ಫುರಿಸುವುದರ ಜೊತೆಗೆ ಸ್ವಾರ್ಥಕಾಮನೆಗಳು, ಮದ-ಮಾತ್ಸರ್ಯಗಳು ಉದ್ದೀಪನಗೊಂಡಾಗ ದೇವರೇನು-ಮಾನವರೇನು; ಎಂಬಂಥ ವಿಡಂಬನೆಯ ಧ್ವನಿಯನ್ನೂ ಹೊರಡಿಸುತ್ತದೆ. ಇಂದ್ರ-ವಿಶ್ವಾಮಿತ್ರರ ಸಂಭಾಷಣೆಯಲ್ಲಿ ಇದನ್ನು ಗಮನಿಸಬಹುದು. ವಿಶ್ವಾಮಿತ್ರ ಇಂದ್ರನನ್ನು ನೀನು ಸುಮ್ಸುಮ್ನೆ ಕಾಡಿಗ ಬರೋನಲ್ಲ, ಹತ್ತಿರದಲ್ಲೇ ಯಾವುದಾದ್ರೂ ಆಶ್ರಮದಲ್ಲಿ ಸಣ್ಣ ವಯಸ್ಸಿನ ಮುನಿ ಪತ್ನಿಯರು.... ಎಂದು ಛೇಡಿಸುತ್ತಾನೆ. ಇಂದ್ರನೂ, ವಿಶ್ವಾಮಿತ್ರನಿಗೆ ನೀವು ಪಂಡಿತರು, ಜ್ಞಾನಿಗಳು, ಸ್ತ್ರೀಯರ ಚಲನವಲನ ವಿಚಾರದಲ್ಲಿ ನಿಮ್ಮ ದೃಷ್ಟಿ ನಮ್ಮ ದೃಷ್ಟಿಗಿಂತಲೂ ಚುರುಕು ಎಂದು ತಿರುಗೇಟು ಕೊಡುತ್ತಾನೆ. ಸೂತ್ರಧಾರ ಮತ್ತು ತ್ರಿಶಂಕುವಿನ ಮಾತುಗಳಲ್ಲಿ, ಅವರಿಬ್ಬರ ಅಸಹಾಯಕತೆಯಲ್ಲಿ, ಸೂತ್ರಧಾರ ವಸಿಷ್ಠರ ಅಂತರಂಗವನ್ನು ಎಳೆಎಳೆಯಾಗಿ ಬಿಡಿಸಿಡುವುದರಲ್ಲಿ ಮೂಲಭೂತವಾದ ವ್ಯಕ್ತಿಗತ ಸ್ವಾರ್ಥಕಾಮನೆಗಳು ಹೇಗೆ ಪರರ ಹಿತವನ್ನು ಬಲಿತೆಗೆದುಕೊಳ್ಳುತ್ತವೆ, ಎಂಬ ನಿಷ್ಠುರ ಸತ್ಯ ಢಾಳವಾಗಿ ನಮ್ಮೆದುರು ನಿಲ್ಲುತ್ತವೆ. ವಸಿಷ್ಠ-ವಿಶ್ವಾಮಿತ್ರರ ನಡುವಣ ಹಗೆತನ, ವಸಿಷ್ಠ ವಿಶ್ವಾಮಿತ್ರದ ದೃಷ್ಟಿಯುದ್ಧ, ಸಶರೀರವಾಗಿ ಸ್ವರ್ಗಕ್ಕೆ ಹೋಗುವ ವಿಶ್ವಾಮಿತ್ರನ ಬಯಕೆ, ಇದಕ್ಕೆ ವಸಿಷ್ಠರ ವಿರೋಧ, ವಸಿಷ್ಠರ ಮೇಲಿನ ಸಿಟ್ಟು ತೀರಿಸಿಕೊಳ್ಳಲು ವಿಶ್ವಾಮಿತ್ರರು ತನ್ನನ್ನು ಬಲಿಪಶು ಮಾಡಿದರು ಎಂಬ ತ್ರಿಶಂಕುವಿನ ತಿಳುವಳಿಕೆ ಇವೆಲ್ಲಾ ಪೌರಾಣಿಕವಾಗಿ, ಐತಿಹಾಸಿಕವಾಗಿ ತೀವ್ರ ಸಂಘರ್ಷದಿಂದ ಬರುವ ನಿರ್ಧಾರಗಳು ಎಂಬುದಕ್ಕೆ ನಾಟಕದಲ್ಲಿ ಸಮರ್ಥನೆ ಸಿಗುವುದಿಲ್ಲವಾದರೂ ಇಂದಿನ ಮಾನವ ಸ್ವಾವವನ್ನಂತೂ ಅತ್ಯಂತ ಸಮರ್ಥವಾಗಿ ಧ್ವನಿಸುತ್ತವೆ.

    ಈ ನಾಟಕದ ಮುಖ್ಯಸ್ಥಾಯಿ ವರ್ತಮಾನ ಮತ್ತು ಭೂತಕಾಲಗಳ ಸಮೀಕರಣ ಎಂದು ಈಗಾಗಲೇ ಹೇಳಿಯಾಗಿದೆ. ಇಲ್ಲಿ ರಜೋಗುಣಗಳದೇ ಪ್ರಧಾನ ಪಾತ್ರ. ಭೂತದ ನೆರಳು ವರ್ತಮಾನಕ್ಕೆ ಹೇಗೆ ಅನಿವಾರ್ಯವಾಗಿ ಚಾಚುತ್ತದೆ ಎಂಬುದಕ್ಕೆ ಈ ನಾಟಕದ ವಸ್ತು ಹಾಗೂ ತಂತ್ರವೇ ಒಂದು ಪ್ರತ್ಯಕ್ಷ ನಿದರ್ಶನವಾಗಿದೆ. ಈ ಹಂತದಲ್ಲಿ ನಾಟಕದ ವಸ್ತು ಹಾಗೂ ತಂತ್ರ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುವ ಜಾಣತನವನ್ನೂ ನಾಟಕರಾರರು ತೋರುತ್ತಾರೆ. ನಿದರ್ಶನವಾಗಿ ನಾಟಕದ ಮುಖ್ಯ ಪಾತ್ರವಾದ ಮೇನಕಾ ಅದರ ಮುಖ್ಯ ಹಳಿಗಳಲ್ಲಿ ಒಂದಾದರೆ ಆ ಪಾತ್ರಧಾರಿಯಾದ ನಟಿ ಇದೇ ಹಳಿಯಲ್ಲಿ ಸಮಾನಂತರವಾಗಿ ಸಾಗುವ ಮತ್ತೊಂದು ಕವಲು. ಇಂಥ ಕವಲುಗಳನ್ನು ವಿಶ್ವಾಮಿತ್ರ, ತ್ರಿಶಂಕು, ಬೃಹಸ್ಪತಿಗಳಲ್ಲಿ ಕಾಣಬಹುದಾದರೂ ಇವು ಯಾವುದೇ ಘಟ್ಟದಲ್ಲಿಯೂ ಮುಖಾಮುಖಿಯಾಗುವುದಿಲ್ಲ. ನೇರ ಸಂಘರ್ಷಕ್ಕೆ ಇಳಿಯುವುದಿಲ್ಲ. ಆದರೆ ಇವರೆಲ್ಲರನ್ನೂ ನೇರವಾಗಿ ಒಂದು ಸೂತ್ರಕ್ಕೆ ಪೋಣಿಸುವುದೆಂದರೆ, ನಾಟಕದ ಉದ್ದಕ್ಕೂ ಶೃತಿಹಗಿಡಿದಂತೆ ಸಾಗುವ ಮಗುವಿನ ಅಳಲು. ಈ ಅಳಲು ಹೊಣೆಗಾರಿಕೆಯನ್ನು ನೆನಪಿಸುವ ದನಿಯಾಗಿ ಮೂಡುತ್ತಲೇ ಇರುತ್ತದೆಯಾದರೂ ಸಮಾಧಾನಗೊಳಿಸುವ ತಾಯಿಯ ಪ್ರಯತ್ನ ಹೊರತು ಬೇರಾರೂ ಇದರ ಬಗ್ಗೆ ಕಾಳಜಿ ಮಾಡುವುದಿಲ್ಲ. ಕೊನೆಗೆ ವಿಪರ್ಯಾಸವೆಂಬಂತೆ ತಾಯಿಯಾದ ನಟಿಯೂ ಮೂಲ ಮಾತೃಕೆ (Archetype) ಮೇನಕೆಯಂತೆ ಕೈಕೊಡವಿಕೊಂಡು ಮಾನವೇಂದ್ರನೊಬ್ಬನ ಜೊತೆ ನವಜಾತ ಶಿಶುವನ್ನು ತೊರೆದು ಹೊರಟು ಹೋಗುತ್ತಾಳೆ. ಆದರೆ ಈ ನಟಿಗೆ ಅಂಥ ಒತ್ತಡಗಳೇನಿತ್ತೆಂಬುದಕ್ಕೆ ಸ್ವತಃ ಆಕೆಯಾಗಲೀ ಮತ್ತಿರರಾಗಲೀ ಮಾತನಾಡುವುದಿಲ್ಲ. ಈ ಮೇನಕೆ/ನಟಿಯಂಥ ಹೆಣ್ಣಿನ ಸ್ಥಿತಿ ಇಂದಿಗೂ ಅದೇ ಎಂಬುದನ್ನು ನಾಟಕದ ಕೊನೆಯಲ್ಲಿ ಆಧುನಿಕ ವೇಷ ಭೂಷಣಗಳಲ್ಲಿ ಬರುವ ಬೃಹಸ್ಪತಿ ಮತ್ತು ಆತನ ಪತ್ನಿ ದೃಷ್ಟಾಂತಗಳಾಗಿ ನಿಲ್ಲುತ್ತಾರೆ. ಆದರೆ ಮಾನವೀಯತೆಗೆ ಗುರಿಇಟ್ಟಂತೆ ಬರುವ ಹಸುಳೆಯ ರೋದನ ಆಕ್ರಂದಕನಕ್ಕೆ ಪರಿಹಾರ ಕಾಣುವುದಿಲ್ಲ. ಜಗತ್ತೇ ನಾಟಕರಂಗವಾದಾಗ ಸೂತ್ರಧಾರನೇ ಎಲ್ಲದಕ್ಕೂ ಹೊಣೆಯಾಗುತ್ತಾನೆ ಎಂಬ ಸೃಷ್ಟಿ ಸಿದ್ಧಾಂತವನ್ನು ಒಪ್ಪುವುದು ಬಿಡುವುದರ ಮಾತಿರಲಿ ನಾಟಕ ಮುಂದುವರಿಯಬೇಕಾದ ಅನಿವಾರ್ಯತೆಯನ್ನು ತಳ್ಳಿ ಹಾಕುವ ತಾಕತ್ತು ಪಾತ್ರದಾರಿಗಳಿಗಂತೂ ಇಲ್ಲ.

    ಮರುವಿನಲ್ಲಿ ತ್ರಿಕೋನ ತಲೆಕೆಳಗಿನ ಸ್ಥಿತಿಯಲ್ಲಿ ಹಾಗೂ ಯಥಾಸ್ಥಿತಿಯಲ್ಲಿ ಎರಡು ರಾಜಕೀಯ ಪಕ್ಷಗಳ ಸಂಕೇತವಾಗುವುದರಲ್ಲಿ ಮತ್ತು ಭೂಭತ್ರಿಶಂಕುಗಲಾದ ‘ಹೆಂ’, ‘ಬಂ’, ‘ಮಾಂ’, ಗಳು ಅಯೋಧ್ಯೆಯ ಪ್ರಜೆಗಳಾಗಿದ್ದು ಅವರಿಗೆ ಹಾಗೂ ಅವರ ಗುರುಗಳಿಗೆ ಸರಿಯಾದ ದಾರಿ ಗೊತ್ತಿದ್ದೂ ಕಾಲುಗಳು ಆ ದಾರಿಯಲ್ಲಿ ನಡೆಯಲೊಪ್ಪದ ಸ್ಥಿತಿಯ ಮಾತುಗಳಲ್ಲಿ ಪ್ರಸಕ್ತ ರಾಜಕಾರಣದ ಲೇವಡಿಯ ಘಾಟನ್ನು ಕಾಣಬಹುದು.

    ಇನ್ನು ಈ ನಾಟಕದ ತಂತ್ರದ ಬಗ್ಗೆ ಸಭಾಂಗಣದಿಂದ ಪ್ರೇಕ್ಷಕರು ರಂಗಭೂಮಿಗೆ ಬಂದು ಪಾತ್ರಗಳಲ್ಲಿ ಒಂದಾಗುವುದು ಕನ್ನಡ ರಂಗಭೂಮಿಗೆ ಹೊಸದೇನೂ ಅಲ್ಲ. ಶ್ರೀರಂಗರಾದಿಯಾಗಿ ಈ ತಂತ್ರ ಅನೇಕ ನಾಟಕಗಳಲ್ಲಿ ಬಳಕೆಯಾಗಿದೆ. ಪ್ರೇಕ್ಷಕನ ಮಧ್ಯೆ ಪ್ರವೇಶ ಒಂದು ಅಧುನಿಕ ಕಲ್ಪನೆ. ಅವನೊಂದು ಸಂವಹನ ತಂತು. ಪ್ರಸ್ತುತ ಈ ನಾಟಕದಲ್ಲೂ ಪ್ರೇಕ್ಷಕ ರಂಗದ ಮಧ್ಯಕ್ಕೆ ಬಂದು ನಾಟಕದ ಜೋಡಿ ತನ್ನ ಸಂಬಂಧವನ್ನು ಸಾಬೀತುಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ತಂತ್ರ ಕೇವಲ ತಂತ್ರಗಾರಿಕೆಯಾಗಿ ಮಾತ್ರ ಉಳಿಯದೇ ಇಡೀ ಪ್ರಕ್ರಿಯೆಯಲ್ಲಿ ಒಂದು ಕೊಂಡಿಯಾಗಿ ಬೆಸುಗೆಗೊಳ್ಳುವುದರಿಮದ ವಸ್ತುವಿನ ಸಾತತ್ಯತೆಗೆ ಪುಷ್ಟಿಯಾಗುತ್ತದೆ. ಇದೆಲ್ಲಾ ಬುದ್ಧಿವಮತಿಕೆಯ ಮಾತು ಎಂದು ಭೂತವನ್ನು ಗುಮಾನಿಯಲ್ಲಿ ನೋಡುವುದರ ಜೊತೆಗೇ ಈ ಪಾತ್ರಗಳು ವರ್ತಮಾನದ ಇದೇ ವಿಪರ್ಯಾಸಗಳಿಗೆ ಸಾಕ್ಷಿಯಾಗಿ ನಿಲ್ಲುವುದರಲ್ಲಿ ನಾಟಕದ ಅರ್ಥವಂತಿಕೆಗೆ ಹೆಚ್ಚು ಮಹತ್ವ ಬರುತ್ತದೆ. ಇಡೀ ಚಕ್ರದಲ್ಲಿ ವಸಿಷ್ಠ, ವಿಶ್ವಾಮಿತ್ರ, ಮೇನಕೆ, ತ್ರಿಶಂಕುಗಳಂತೆ ಪ್ರೇಕ್ಷಕರೂ ಒಂದು ಕೊಂಡಿಯಾಗುವುದು ವಸ್ತುವಿನ ಸಾರ್ವತ್ರಿಕತೆಯನ್ನು ಮಿಡಿಯುತ್ತದೆ. ಈ ಸಾರ್ವತ್ರಿಕತೆಯನ್ನು ತಂದುಕೊಡುವಂಥ ಸಾರ್ವಕಾಲಿಕ ಗುಣಗಳೋ ದೌರ್ಬಲ್ಯಗಳೋ ಆದ ಅಹಂ, ಸ್ವಾರ್ಥ, ಕಾಮನೆಗಳೇ It is only a beginning ಎಂಬಂಥ ಭರತ ವಾಕ್ಯಕ್ಕೆ ಕಾರಣವಾಗುತ್ತದೆ ಎಂಬುದು ಈ ನಾಟಕದಲ್ಲಿ ಗಮನಿಸಬೇಕಾದಂಥ ಮುಖ್ಯಾಂಶ.

    ಸೃಜನಶೀಲ ಲೇಖಕನಿಗೆ ಪ್ರತಿಯೊಂದು ಕೃತಿಯೂ ಮಹತ್ವಾಕಾಂಕ್ಷೆಯ ಕೃತಿಯೇ ಇಂಥ ಒಂದು ಕೃತಿಯ ನಂತರ ಅತೃಪ್ತಿ, ಅಸಮಾಧಾನಗಳೇ ಮತ್ತೊಂದು ಮಹತ್ವಾಕಾಂಕ್ಷೆಯ ಕೃತಿಗೆ ಮೆಟ್ಟಿಲು. ಪ್ರಸ್ತುತ ಕೆ.ಟಿ. ಗಟ್ಟಿಯವರು ಈ ನಾಟಕ ತಮ್ಮ ಮಹತ್ವಾಕಾಂಕ್ಷೆಯ ಕೃತಿ ಎಂದು ಎಲ್ಲೂ ಹೇಳಿಕೊಂಡಿಲ್ಲವಾದರೂ ಅಂಥ ಹೊಳಹುಗಳನ್ನು ಈ ಕೃತಿಯ ವಿವಿಧ ಸ್ತರಗಳಲ್ಲಿ ಕಾಣಬಹುದಾಗಿದೆ. ಇದು ಈಡೇರಿಕೆಯೇ ಇಲ್ಲವೇ ಎಂಬುದು ವಿಮರ್ಶಕರಿಗೆ ಬಿಟ್ಟ ಮಾತು. ನಾನು ಇಂಥ ಕೆಲಸಕ್ಕೆ ಇಲ್ಲಿ ಕೈ ಹಾಕಿಲ್ಲ. ಪರದೆ ಎಳೆದು ನಾಟಕವನ್ನು ಅನಾವರಣಗೊಳಿಸುವ ಕೆಲಸವನ್ನಷ್ಟೇ ಮಾಡಿದ್ದೇನೆ ಎಂದು ನನ್ನ ನಮ್ರ ಅನಿಸಿಕೆ. ಓದುಗರು, ಪ್ರೇಕ್ಷಕರು ನಿರ್ದೇಶಕರಾದಿಯಾಗಿ ಸಕಲ ರಂಗಕರ್ಮಿಗಳಿಗೂ ಈ ನಾಟಕ ಪ್ರವೇಶಕ್ಕೆ ಸಿದ್ಧವಾಗಿದೆ.

    ಕೊನೆಯದಾಗಿ ಒಂದು ಮಾತನ್ನು ಹೇಳಬೇಕು. ಯಾವುದೇ ನಾಟಕದ ಸಾರ್ಥಕ್ಯ ಮತ್ತೆ ಹೇಳಬೇಕಾಗಿ ಬಂದಿರುವುದರಿಂದ ನಮ್ಮ ರಂಗಭೂಮಿಗೆ ಒದಗಿರುವ ದೌರ್ಭಾಗ್ಯವನ್ನು ಮಾತ್ರ ಮತ್ತೆ ಹೇಳಿದಂತಾಗುತ್ತದೆ. ಒಂದು ಕಡೆ ಟಿ.ವಿ. ಸೆಟ್‍ಗಳಿಗೆ ಮುಗಿಬಿದ್ದಿರುವ ಪ್ರೇಕ್ಷಕರು ಮತ್ತೊಂದು ಕಡೆ ಕನ್ನಡದಲ್ಲಿ ನಾಟಕಗಳಿಲ್ಲ ಎಂದು ಟಿ.ವಿ.ಯ ಪ್ರಲೋಭನೆಗೆ ಮಾರು ಹೋಗುತ್ತಿರುವ ನಿರ್ದೇಶಕರಾದಿಯಾಗಿ ರಂಗಕರ್ಮಿಗಳ ನಡುವೆ ನಿಂತು ಇಲ್ಲೊಂದು ನಾಟಕ ಇದೆ ಎಂದು ಹೇಳುವಂಥ ಸಂದಿಗ್ಧ ಸ್ಥಿತಿಯಲ್ಲಿ ನಾವು ನಿಂತಿದ್ದೇವೆ. ಈ ಸ್ಥಿತಿಯಲ್ಲಿ ಗಟ್ಟಿಯವರ ‘ತ್ರಿಶಂಕು ಮತ್ತಿತರರು’ ನಾಟಕ ಮತ್ತಿತರರ ದೃಷ್ಟಿಗೆ ಬಿದ್ದಾದರೂ ರಂಗದ ಮೇಲೆ ಮೈವೆತ್ತಿ ಬರಲಿ ಎಂದು ಹಾರೈಸುವುದಷ್ಟೇ ಉಳಿದ ಮಾತು.

    ಕನ್ನಡ ರಂಗಭೂಮಿಗೆ ಒಂದು ಒಳ್ಳೆಯ ನಾಟಕವನ್ನು ಕೊಟ್ಟಿರುವ ಕೆ.ಟಿ.ಗಟ್ಟಿಯವರು ಕಥೆ ಕಾದಂಬರಿಯಷ್ಟೇ ಅಲ್ಲದೆ ರಂಗಭೂಮಿಯಲ್ಲೂ ಒಂದು ‘ಗಟ್ಟಿ’ ಕುಳ ಎನ್ನುವುದರಲ್ಲಿ ಅನುಮಾನವಿಲ್ಲ. ಇದಕ್ಕಾಗಿ ಅವರು ಅಭಿನಂದನಾರ್ಹರು. ಅವರಿಂದ ಇಂಥ ಇನ್ನೂ ಅನೇಕ ಸತ್ತ್ವಶಾಲಿ ನಾಟಕಗಳು ಬರಲಿ ಎಂದು ಹಾರೈಸಿ ಅವರಿಗೆ ಶುಭ ಕೋರುತ್ತೇನೆ.

    -ಜಿ.ಎನ್. ರಂಗನಾಥ ರಾವ್

    ಸ್ನೇಹ

    266, 3ನೇ ಮೈನ್, 8ನೇ ಬ್ಲಾಕ್,

    ಕೋರಮಂಗಲ ಲೇಔಟ್, ಬೆಂಗಳೂರು-560 095.

    ತ್ರಿಶಂಕು ಮತ್ತು ಇತರರು

    ಸುತ್ರಧಾರ

    ಮತ್ತಿತರರು (ಇಬ್ಬರು)

    ಪ್ರೇಕ್ಷಕರು (ಮೂವರು)

    ವಿಶ್ವಾಮಿತ್ರ

    ಮೇನಕಾ

    ಇಂದ್ರ

    ತ್ರಿಶಂಕು

    ವಿಶ್ವಾಮಿತ್ರನ ಪತ್ನಿಯರು (ಇಬ್ಬರು)

    ಬೃಹಸ್ಪತಿ

    ಬೃಹಸ್ಪತಿಯ ಪತ್ನಿ

    ಸೂಚನೆಗಳು:

    ನಾಟಕದ ಅವಧಿ 1½   - 1 ¾ ಗಂಟೆ

    ಮತ್ತಿತರರು ಆರಂಭದಲ್ಲಿ ಕೆಲಸಗಾರರ ಉಡುಪಿನಲ್ಲಿ ಆ ಬಳಿಕ, ಯಕ್ಷಗಾನದ ಕೋಡಂಗಿ ವೇಷದಲ್ಲಿ.

    ವಿಶ್ವಾಮಿತ್ರ : ಪೌರಾಣಿಕ (ಯಕ್ಷಗಾನ) ವೇಷ.

    ಇಂದ್ರ : ಪೌರಾಣಿಕ (ಯಕ್ಷಗಾನ) ವೇಷ. ಆದರೆ ಕಿರಾತ ರಾಜನ ಛಾಯೆ.

    ತ್ರಿಶಂಕು : ಪೌರಾಣಿಕ (ಯಕ್ಷಗಾನ) ಐತಿಹಾಸಿಕ. ಸಾಮಾಜಿಕ ಬೆರಕೆ ಪೋಷಾಕು.

    ಮಗುವಿನ ಅಳುವನ್ನು ಅಣಕ (ಮಿಮಿಕ್ರಿ)ದಲ್ಲಿ ಮಾಡಬಹುದು.

    ಒಟ್ಟು ಪಾತ್ರಗಳು : ಹದಿನಾಲ್ಕು.

    ತ್ರಿಶಂಕು ಮತ್ತು ಇತರರು

    [ರಂಗದಲ್ಲಿ ಎಡಗಡೆಗೆ ಹಿಂಭಾಗದಲ್ಲಿ ಒಂದು ಚಿಕ್ಕ ಕೋಣೆಯಂತೆ ಪರದೆ ಎಡ ಅರ್ಧ ಭಾಗ ಮುಚ್ಚಿದ್ದು, ಅರ್ಧ ತೆರೆದು ತೋರುವ ಬಾಗಿಲಿನ ಮೂಲಕ ಒಳಗಡೆ ಒಂದು ಬಟ್ಟೆಯ ತೊಟ್ಟಿಲು ತೂಗಾಡುವುದು ಕಾಣಿಸುತ್ತದೆ. ತೊಟ್ಟಿಲಲ್ಲಿ ಮಗು ಇದೆ. ಆಗೊಮ್ಮೆ ಈಗೊಮ್ಮೆ ಮಗು ಅಳುವ ಶಬ್ದ ಕೇಳಿಸುತ್ತದೆ.

    ರಂಗವು ನಾಟಕ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿರುವ ಮಂದಸ್ಥಿತಿಯಲ್ಲಿದೆ. ರಂಗದ ಬಲಗಡೆಗೆ ಮುಂಭಾಗದಲ್ಲಿ ಇಬ್ಬರು ರಂಗ ಕೆಲಸಗಾರರು (ವಾಸ್ತವದಲ್ಲಿ ನಾಟಕದ ಪಾತ್ರಧಾರಿಗಳು) ಒಂದು ಕಂಬದ ಮೇಲಿನ ಮೊಳೆಯಲ್ಲಿ ಒಂದು ದೊಡ್ಡ ಗಾತ್ರದ ತ್ರಿಕೋನಾಕೃತಿಯನ್ನು ರಟ್ಟು ಅಥವಾ ಪ್ಲೈವುಡ್ಡಿನಿಂದ ತಯಾರಿಸಬಹುದು. (ಒಂದು ಬದಿ ಕೇಸರಿ ಇನ್ನೊಂದು ಬದಿ ಕೆಂಪು) ನೇತುಹಾಕುವ ಮಹಾಪ್ರಯತ್ನದಲ್ಲಿ ಮಗ್ನರಾಗಿದ್ದಾರೆ. ತ್ರಿಕೋನಾಕೃತಿಗೆ ಮೂರುಗೊನೆಗಳಲ್ಲಿಯೂ ಮೊಳೆ ಹೋಗುವಂಥ ರಂಧ್ರಗಳಿರಬೇಕು. ಆದರೆ ಅದನ್ನು   ಈ ರೀತಿ ಕಂಬಕ್ಕೊರಗಿಸಿ ನಿಲ್ಲಿಸುವ ಪ್ರಯತ್ನದಲ್ಲಿ ಅವರು ಪ್ರತಿಬಾರಿಯೂ ಸೋಲುತ್ತಿದ್ದಾರೆ. ಬಹಳ ಜಾಗ್ರತೆಯಿಂದ ಆ ರೀತಿ ನಿಲ್ಲಿಸಿದ್ದೇ ತಡ ಅದು  ಈ ರೀತಿ ತೂಗುಬೀಳುತ್ತದೆ. ಪ್ರೇಕ್ಷಕರು ಅವರು ಮಾಡುವುದನ್ನೇ ನೋಡುತ್ತಿದ್ದಾರೆ ಎಂದು ಬೇರೆ ಹೇಳಬೇಕಾಗಿಲ್ಲ. ಅವರು ತ್ರಿಕೋನಾಕೃತಿಯನ್ನು ಹಾಗೆ ಇರಿಸುವಾಗ ಕೆಂಪುಬದಿ ಪ್ರೇಕ್ಷಕರ ಕಡೆಗಿರುವಂತೆ ಇರಿಸಬೇಕು. ಆದರೆ ಕೆಲವು ಬಾರಿ ಮರೆತು ಹೋಗಿ ಕೇಸರಿ ಬದಿ ಪ್ರೇಕ್ಷಕರ ಕಡೆಗೆ ಬರುತ್ತದೆ. ತಕ್ಷಣ ನೆನಪಿಸಿಕೊಂಡು ಸರಿಯಾಗಿ ಇರಿಸುತ್ತಾರೆ. ಆದರೆ ಮೊಳೆಯ ಮೇಲೆ ಹೇಗೆ ಇರಿಸಬೇಕೋ ಹಾಗೆ ಇರಿಸಲಾಗುತ್ತಿಲ್ಲ.

    ತ್ರಿಕೋನದ ಕೆಲಸಗಾರರ ಈ ವ್ಯರ್ಥಯತ್ನ ಸುಮಾರು ಹೊತ್ತು ನಡೆಯುತ್ತದೆ. ಹೊತ್ತು ಮೀರುತ್ತಿದೆ ಎಂಬ ಭಾವ ಪ್ರೇಕ್ಷಕರಲ್ಲಿ ಉಂಟಾಗಬಹುದು. ಅದು ಹಾಗೆ ನಿಲ್ಲುವುದು ಅಸಂಭವ. ಕೆಲಸಗಾರರು ಹೆಡ್ಡರು ಎಂದು ಪ್ರೇಕ್ಷಕರಿಗೆ ಅನಿಸಬಹುದು. ಆದರೆ ಕೆಲಸಗಾರರಿಗೆ ಪರಿಸರದ ಪ್ರಜ್ಞೆ ಏನೇನೂ ಇಲ್ಲ.

    ಮೊದಲ ಸಾಲಿನಲ್ಲಿ ಕುಳಿತ ಪ್ರೇಕ್ಷಕರ ಪೈಕಿ ಒಬ್ಬ ಯುವ ಪ್ರೇಕ್ಷಕ ಎದ್ದು ನಿಂತು ಅಸಹನೆಯಿಂದ ಒಮ್ಮೆ ಅವರ ಕೆಲಸವನ್ನು ಒಮ್ಮೆ ಕೈಗಡಿಯಾರವನ್ನು ವೀಕ್ಷಿಸಿ, ಸಹನೆ ಕಳೆದುಕೊಂಡವನಂತೆ]

    ಪ್ರೇ 1      : (ಎತ್ತರದ ದನಿಯಲ್ಲಿ) ಏಯ್, ಏನ್ರಿ ಅದು ನೀವು ಮಾಡ್ತಿರೋದು? (ಅವನ ಪ್ರಶ್ನೆ ಕೇಳಿಸದಷ್ಟು ಅವರು ತಮ್ಮ ಕೆಲಸದಲ್ಲಿ ತನ್ಮಯರಾಗಿದ್ದಾರೆ. ತಾಳ್ಮೆಗೆಟ್ಟ ಪ್ರೇಕ್ಷಕ ರಂಗ ಹತ್ತಿ ಅವರ ಬಳಿ ಹೋಗಿ) ಅಲ್ರಿ, ಇದು ನೀವು ಮಾಡ್ತಿರೋದು ಏನು? (ಅವರಿಗೆ ಕೇಳಿಸಿದಂತಿಲ್ಲ; ಆತ ಕೈ ಗಡಿಯಾರ ನೋಡಿ ಇನ್ನಷ್ಟು ಸಮೀಪಹೋಗಿ) ರೀ, ಹೊತ್ತಾಯ್ತು, ನಾಟ್ಕ ಯಾವಾಗ ಶುರು ಆಗೋದು?

    ಕೆ 1      : (ಏರು ಪೇರಿಲ್ಲದ ದನಿಯಲ್ಲಿ, ತನ್ನ ಕೆಲಸದಲ್ಲಿ ಮುಳುಗಿರುವಂತೆಯೇ) ಈಗ ಶುರುವಾಗುತ್ತೆ.

    ಪ್ರೇ 1       : ಈಗ ಅಂದ್ರೆ ಯಾವಾಗ? ಆಗ್ಲೇ ಹತ್ತು ನಿಮಿಷ ತಡವಾಗಿದೆ.

    ಕೇ 2       : (ಒಂದನೇ ಕೆಲಸಗಾರ ಮಾತಾಡಿದ ರೀತಿಯಲ್ಲೇ) ನೀವು ನಾಟ್ಕ ನೋಡೋಕ್ಬಂದವ್ರ?

    ಪ್ರೇ 1       : ಮತ್ತೆ ನಿಮ್ಮನ್ನ ನೋಡೋಕ್ಬಂದಿರೋದು ಅಂತ ತಿಳ್ಕೊಂಡ್ರ?

    ಕೆ 1       : ಸಿಟ್ಟು ಮಾಡ್ಬಡಿ. (ಒಮ್ಮೆ ಕೈಗಡಿಯಾರದ ಕಡೆ ಕಣ್ಣು ಹಾಯಿಸಿ)

    Enjoying the preview?
    Page 1 of 1