Discover millions of ebooks, audiobooks, and so much more with a free trial

Only $11.99/month after trial. Cancel anytime.

Hei Kaapurusha
Hei Kaapurusha
Hei Kaapurusha
Ebook555 pages2 hours

Hei Kaapurusha

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200200206
Hei Kaapurusha

Read more from K.T. Gatti

Related to Hei Kaapurusha

Related ebooks

Reviews for Hei Kaapurusha

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Hei Kaapurusha - K.T. Gatti

    http://www.pustaka.co.in

    ಹೇ ಕಾಪುರುಷ

    Hei Kaapurusha

    Author :

    ಕೆ. ಟಿ. ಗಟ್ಟಿ

    K T Gatti

    For more books :

    http://www.pustaka.co.in/home/author/kt-gatti

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೆ. ಟಿ. ಗಟ್ಟಿ

    ಹೇ ಕಾಪುರುಷ

    ಮುನ್ನುಡಿ

    ಎಲ್ಲರೂ ಉಡುವಂಥದೇ ಉಡುಪು ಉಟ್ಟು ಐವತ್ತು ಅರುವತ್ತು ವರ್ಷ ಲೋಕಕಣ್ಯಾಣಕ್ಕಾಗಿ ಬದುಕು ಸವೆಸಿ ಜನರ ಆದರಾಭಿಮಾನಕ್ಕೊಳಗಾದ ವ್ಯಕ್ತಿಯೊಬ್ಬನ ಬಗ್ಗೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಕೆಟ್ಟ ಮಾತು ಹುಟ್ಟಿ ಆತ ಅಲ್ಲಿ ವರೆಗೆ ಮಾಡಿದ್ದೆಲ್ಲವೂ ಜನರಿಗೆ ಬಹಳ ಸುಲಭದಲ್ಲಿ ಮರೆತುಹೋಗಿ, `ಓ ಹಾಗೊ ಹೀಗೊ, ಅಂಥವನೊ ಇಂಥವನೊ’ ಎಂಬ ಮಾತು ಹಬ್ಬುವುದು ಈ ಪ್ರಪಂಚದಲ್ಲಿ ಸಾಮಾನ್ಯವಾಗಿ ನಡೆಯುವಂಥದು. ಆತ ಜನಸೇವಕ-ಸಮಾಜ ಸೇವಕನಾಗಿರಬಹುದು; ಸಾಹಿತಿಯಾಗಿರಬಹುದು; ವಿಜ್ಞಾನಿಯಾಗಿರಬಹುದು-ಇನ್ಯಾರೋ ಶ್ರೇಷ್ಠ ವ್ಯಕ್ತಿ ಆಗಿರಬಹುದು. ಆದರೆ ಆ ಮಾತು ಸುಳ್ಳೇ ಆಗಿದ್ದರೂ ಅದನ್ನು ಸತ್ಯವೆಂದು ನಂಬುವುದಕ್ಕೇ ಲೋಕ ಸಿದ್ಧ. ಆದರೆ ಕಾವಿ ಉಡುಪು ತೊಟ್ಟ ಒಬ್ಬ ವ್ಯಕ್ತಿ ಮೂವತ್ತು ನಲುವತ್ತು ವರ್ಷ ಅನಾಚಾರ ಅಧರ್ಮದಲ್ಲಿ ಕಳೆದು ನಂತರದ ಮೂವತ್ತು ನಲುವತ್ತು ವರ್ಷ ಲೋಕಕಲ್ಯಾಣಕ್ಕೆ (ಅಸ್ಪಷ್ಟವಾಗಿ) ಉಪಯೋಗಿಸಿ ಸದಾಚಾರಿ ಸದ್ಧರ್ಮಿಯೆಂದು ಹೆಸರು ಮಾಡಿದರೆ ಆತ ನಿಜವಾಗಿಯೂ ಯಾವುದೋ ಕೆಟ್ಟ ಕೆಲಸ ಮಾಡಿದ್ದು ಮತ್ತು ಅದು ಲೋಕಕ್ಕೆ ಸ್ಪಷ್ಟವಾಗಿ ಕಾಣಿಸಿದ್ದು, `ಏನೂ ಅಲ್ಲ’ ಎಂಬಂತಾಗುವುದು-ಇದು ಈ ಪ್ರಪಂಚದಲ್ಲಿ ಸಾಮಾನ್ಯ. ಈ ಕಾದಂಬರಿಯನ್ನು ಬರೆದಾಗಲೂ, ಮೂವತ್ತು ವರ್ಷಗಳ ಹಿಂದೆ, ಈಗಲೂ ಕುತೂಹಲದ ಸಂಗತಿ. ಈ ಮಾತಿನಲ್ಲಿ ಈ ಕಾದಂಬರಿಯ ಬಗ್ಗೆ ಹೇಳಬಹುದಾದ್ದನೆಲ್ಲ ಹೇಳಿದಂತಾಯಿತು.

    * ಕೆ. ಟಿ. ಗಟ್ಟಿ

    ಹೇ ಕಾಪುರುಷ

    ಹಿರಣ್ಯಪ್ರಸ್ಥ ಪ್ರಾಂತದಲ್ಲಿ ಯಾದವಗಿರಿ ಎಂಬ ಕುಗ್ರಾಮ. ಪ್ರಾಂತದ ಇತರ ಗ್ರಾಮಗಳಂತೆ ಯಾದವಗಿರಿಯೂ ಇದೆ. ಬುದ್ಧ ಹುಟ್ಟಿದ ಕಾರಣದಿಂದ ಕಪಿಲವಸ್ತು ಪ್ರತೀತಿ ಹೊಂದಿದಂತೆ ಯಾರಾದರೊಬ್ಬ ಮಹಾತ್ಮ ಹುಟ್ಟಿದ ಎಂಬ ಕಾರಣದಿಂದ ಕುಗ್ರಾಮವೊಂದರ ಹೆಸರು ಪ್ರಸಿದ್ಧವಾಗಬಹುದು; ಯಾವುದೋ ಆಕಸ್ಮಿಕ ಸಂಭವದ ಕಾರಣದಿಂದ ಯಾರೂ ಕೇಳಿರದ ಹಳ್ಳಿಯೊಂದರ ಹೆಸರು ಇಡೀ ಪ್ರಾಂತದಲ್ಲಿ ಅಥವಾ ಇಡೀ ದೇಶದಲ್ಲಿ ಕೇಳಿಬರಬಹುದು. ಸದ್ಯ, ಯಾದವಗಿರಿ ಇದುವರೆಗೆ ಯಾವ ಕಾರಣಕ್ಕೂ ಪ್ರಸಿದ್ಧಿ ಗಳಿಸಿಲ್ಲ.

    ಸಾಮಾನ್ಯವಾಗಿ ಇತರ ಹಳ್ಳಿಗಳಲ್ಲಿರುವುದು ಇಲ್ಲಿಯೂ ಇದೆ. ಹಳ್ಳಿಯ ನಡುವೆ ಹತ್ತಾರು ಅಂಗಡಿಗಳು, ಒಂದೆರಡು ಹೋಟೆಲುಗಳು, ಮನೆಗಳು ಇರುವ ಒಂದು ಡೊಂಕು ರಸ್ತೆಯಿದೆ. ಇಲ್ಲೇ ಒಂದು ಪೋಸ್ಟಾಫೀಸು.,ಒಂದು ಮಾಧ್ಯಮಿಕ ಶಾಲೆ, ಒಂದು ಸರಕಾರಿ ಬ್ಯಾಂಕು ನಾಲ್ಕೈದು ವರ್ಷಗಳ ಹಿಂದೆ ಆರಂಭವಾದ ಒಂದು ಹೈಸ್ಕೂಲು ಇದೆ.

    ಹಳ್ಳಿಯ ಒಂದು ಪಕ್ಕದಲ್ಲಿ ಒಂದು ಹೊಳೆ ಹಾದುಹೋಗುತ್ತದೆ. ಪುಣ್ಯವತಿಯೆಂದು ಇದರ ಹೆಸರು. ನದಿಗಳೆಲ್ಲಾ ಹೆಣ್ಣಾಗಿರುವಂತೆ ಇದು ಕೂಡ ಹೆಸರಿನಲ್ಲಿ ಒಂದು ಹೆಣ್ಣೇ ಆಗಿದೆ. ಆದರೆ ಈ ಪುಣ್ಯವತಿ ಒಂದು ನದಿಯೇನಲ್ಲ; ಒಂದು ದೊಡ್ಡ ತೋಡು ಅಷ್ಟೆ. ಊರ ಜನರ ಭಾಷೆಯಲ್ಲಿ ಅದು ನದಿ. ಬೇಸಗೆಯಲ್ಲಿ ಇದರ ನೀರು ಆರುತ್ತದೆ. ನೀರು ಆರುವ ಹೊತ್ತಿಗೆ ಸಾಮಾನ್ಯವಾಗಿ ಪುನಃ ಮಳೆ ಬಂದು ಪುಣ್ಯವತಿ ತುಂಬಿ ಹರಿಯುತ್ತಾಳೆ, ನದಿಯಾಗುತ್ತಾಳೆ.

    ಯಾದವಗಿರಿ ಹಳ್ಳಿಯ ಕಡೆಗೆ ದೃಷ್ಟಿಯನ್ನು ಹಾಯಿಸಿದರೆ ಕಾಣಿಸುವ ದೃಶ್ಯ ತಕ್ಕಮಟ್ಟಿಗೆ ಸುಂದರವೆಂದೇ ಹೇಳಬಹುದು. ಮುಖ್ಯವಾಗಿ ಪುಣ್ಯವತಿ ತುಂಬಿ ಹರಿಯುವ ಕಾಲದಲ್ಲಿ ಮತ್ತು ಉಳಿದ ಕಾಲದಲ್ಲಿ ಹತ್ತಾರು ಹಸಿರು ಮರಗಳೇ ಯಾದವಗಿರಿ ಪ್ರಕೃತಿಯ ಭಾಗ ಎಂಬುದಕ್ಕೆ ಸಾಕ್ಷಿ. ಅಷ್ಟು ಬಿಟ್ಟರೆ, ಒಂದು ಬೆಂಗಾಡಿನ ಮಧ್ಯೆ ನೂರಿನ್ನೂರು ವಿವಿಧ ಆಕಾರದ ಗೂಡುಗಳ ಒಂದು ರಸಹೀನ ದೃಶ್ಯ. ಮನುಷ್ಯನೂ ಸಾಧಾರಣ ಪಕ್ಷಿಗಳಂತೆಯೇ ಎಂದು ಯಾದವಗಿರಿಯ ಹುಲಿಬೆಟ್ಟಿನ ಎತ್ತರದಲ್ಲಿ ನಿಂತು ಯಾದವಗಿರಿ ಹಳ್ಳಿಯ ಗುಡಿ, ಗುಡಿಸಲುಗಳನ್ನು ವೀಕ್ಷಿಸಿದಾಗ ಅನಿಸುತ್ತದೆ.

    ಯಾದವಗಿರಿಯ ಮತ್ತೊಂದು ವೈಶಿಷ್ಟ್ಯವೆಂದರೆ ಎಲ್ಲರಿಗೂ ಗೊತ್ತಿರುವ ಪ್ರಪಂಚದಿಂದ ಬಹು ದೂರದಲ್ಲಿದೆ. ಪಟ್ಟಣವೆಂಬುದೇನನ್ನಾದರೂ ಕಾಣಬೇಕಾದರೆ ಯಾವ ಕಡೆಯಿಂದಲೇ ಆಗಲಿ, ನೂರು ನೂರೈವತ್ತು ಮೈಲುಗಳ ಪ್ರಯಾಣ ಮಾಡಬೇಕು. ಈ ಕಾರಣದಿಂದ ಯಾದವಗಿರಿ ಒಂದು ಕೋಟೆಯಂತಿದೆಯೆನ್ನಬಹುದು. ಅಲ್ಲಿ ಏನು ನಡೆಯುತ್ತಿದೆಯೆಂದು ಅಲ್ಲಿಯವರಿಗೆ ಮಾತ್ರ ಗೊತ್ತು. ಮತ್ತು ಅಲ್ಲಿ ಏನೂ ನಡೆಯುವುದೂ ಇಲ್ಲ. ಹಳ್ಳಿಯಲ್ಲಿರುವ ಕೆಲವೇ ರೇಡಿಯೋ ಸೆಟ್ಟುಗಳ ಮುಖಾಂತರ ಮತ್ತು ಎಂದಾದರೊಂದು ದಿನ ಬರುವ ಕೆಲವು ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳಿಂದ ಹೊರಗಿನ ಪ್ರಪಂಚದ ಕುರಿತು ಹಳ್ಳಿ ಮಂದಿಗೆ ಅಲ್ಪಸ್ವಲ್ಪ ತಿಳಿಯುತ್ತದೆ..

    ಹಳ್ಳಿಯ ಬಹುಜನರು ಬಡವರು ಎಂದು ಒತ್ತಿಹೇಳಬೇಕಾದ ಅಗತ್ಯವಿಲ್ಲ. ಶೇಕಡಾ ತೊಂಭತ್ತು ಮಂದಿ ಅನಕ್ಷರಸ್ತರು ಎಂದು ಹೇಳಬೇಕಾಗಿಲ್ಲ. ನಿರುದ್ಯೋಗಿ ಬಡಜನರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಉದ್ಯೋಗವಕಾಶಗಳು ಬಹಳ ಕಡಿಮೆ. ಅರೆಹೊಟ್ಟೆಯಲ್ಲಿ ಜೀವಿಸುವವರೇ ಹೆಚ್ಚು ಮಂದಿ ಎಂದು ಕೂಡ ಹೇಳಬೇಕೆಂದಿಲ್ಲ. ಯಾಕೆಂದರೆ ಹೆಚ್ಚು ಕಡಿಮೆ ಎಲ್ಲಾ ಹಳ್ಳಿಗಳ ಕತೆಯೂ ಇದೇ ಆಗಿದೆ.

    ಸುಮಾರು ಮೂರು ವರ್ಷಗಳ ಹಿಂದೆ ಈ ಹಳ್ಳಿಗೆ ವಿದ್ಯುಚ್ಛಕ್ತಿ ಬಂತೆಂದು ಹೇಳಬಹುದು. ಕೆಲವು ವರ್ಷಗಳ ಹಿಂದೆ ಹೈಸ್ಕೂಲಾದುದೂ ಒಂದು ಮುಖ್ಯವಾದ ಸಂಗತಿಯೆನ್ನಬಹುದು. ಆಮೇಲೆ ಮಾತ್ರ ಏನೂ ಆಗಿಲ್ಲ. ಇನ್ನು ಬಹುಶ: ಹತ್ತು ಹದಿನೈದು ವರ್ಷಗಳ ವರೆಗೆ ಇಲ್ಲಿ ಹೇಳಿಕೊಳ್ಳುವಂಥ ಹೊಸದೇನೂ ನಡೆಯಲಾರದು ಎಂದೂ ಹೇಳಿಬಿಡಬಹುದು.

    ಹಳ್ಳಿಯಲ್ಲಿ ಬಡವರಿರುವುದು ಎಷ್ಟು ಸ್ವಾಭಾವಿಕವೋ ನಾಲ್ಕೈದು ಮಂದಿ ಶ್ರೀಮಂತರು ಅರ್ಥಾತ್ ಅನುಕೂಲಸ್ಥರೆಂಬವರು ಇರುವುದೂ ಅಷ್ಟೇ ಸ್ವಾಭಾವಿಕ.

    ಇಂಥ ಅನುಕೂಲಸ್ಥರ ಪೈಕಿ ಶ್ರೀಕಂಠನೊಬ್ಬನೆನ್ನಬಹುದು.

    ಶ್ರೀಕಂಠನಿಗೆ ಐದೆಕ್ರೆ ಭತ್ತದೆ ಹೊಲವಿದೆ. ಏಳೆಂಟು ಖಂಡಿ ಅಡಿಕೆ ಬೆಳೆಯುವ ಒಂದು ಅಡಿಕೆ ತೋಟವಿದೆ. ಅವನು ಯಾದವಗಿರಿ ಸಹಕಾರಿ ಬ್ಯಾಂಕಿನ ಅಧ್ಯಕ್ಷನೂ, ಯಾದವಗಿರಿ ಪಂಚಾಯತ್‍ಬೋರ್ಡಿನ ಅಧ್ಯಕ್ಷನೂ ಆಗಿದ್ದಾನೆ.

    ಆದರೆ ವಾಸ್ತವವಾಗಿ ಶ್ರೀಕಂಠನ ವಶದಲ್ಲಿರುವ ಆಸ್ತಿಪಾಸ್ತಿಯೆಲ್ಲ ಅವನದೇ ಅಲ್ಲ. ಅದರಲ್ಲಿ ಅರ್ಧಾಂಶ ಅವನಣ್ಣ ಅಚ್ಯುತರಾಯರದು. ಮೇಜರ್ ಅಚ್ಯುತರಾಯರು ಶ್ರೀನಗರದಲ್ಲಿ ಉದ್ಯೋಗದಲ್ಲಿದ್ದಾರೆ. ವರ್ಷಕ್ಕೊಮ್ಮೆ ಅವರು ಊರಿಗೆ ಬಂದು ಒಂದೆರಡು ತಿಂಗಳು ಇದ್ದು ಹೋಗುತ್ತಾರೆ. ಅಷ್ಟು ಕಾಲ ಹೆಚ್ಚು ಕಡಿಮೆ ಅಚ್ಯುತರಾಯರೇ ಮನೆಯ ಯಜಮಾನರೆಂದರೂ ಸರಿ. ಆಗ ಶ್ರೀಕಂಠ ಅಣ್ಣನಿಗೆ ವಿಧೇಯನಾಗಿ ನಡೆದುಕೊಳ್ಳುತ್ತಾನೆ. ಆ ಕಾಲದಲ್ಲಿ ಅವರ ತಾಯಿ ನರಸಮ್ಮನಿಗೂ ತನ್ನ ಕಳೆದುಹೋದ ಒಳ್ಳೆಯ ದಿನಗಳ ನೆನಪು ಆಗುತ್ತದೆ. ಯಾಕೆಂದರೆ ಹಿರಿಯ ಮಗ ಅಚ್ಯುತ ಆ ಕಡೆ ಹೋದೊಡನೆ, ಕಿರಿಯ ಮಗ ಶ್ರೀಕಂಠನ ಹೆಂಡತಿ ಸುಮತಿ ಅವಳನ್ನು ಗಟ್ಟಿಯಾಗಿ ಉಸಿರಾಡದಂತೆ ಮಾಡುತ್ತಾಳೆ. ರಜೆಯಲ್ಲಿ ಆರಾಮವಾಗಿರುವುದಕ್ಕೆಂದು ಕುಟುಂಬ ಸಮೇತ ಬಂದು ಒಂದೆರಡು ತಿಂಗಳು ಇದ್ದು ಹೋಗುವ ಮಗನಲ್ಲಿ ದೂರು ಹೇಳುವ ಧೈರ್ಯ ನರಸಮ್ಮನಿಗೆ ಇಲ್ಲ. ಯಾಕೆಂದರೆ ಹಾಗೇನಾದರೂ ಹೇಳಿದರೆ ಮಗ ಅತ್ತ ಹೋದೊಡನೆ ಸುಮತಿ ತನ್ನ ಗಂಟಲು ಒತ್ತಿ ಸಾಯಿಸಿಬಹುದು ಎಂಬ ಭಯ ನರಸಮ್ಮನಿಗೆ. ಸುಮತಿಗೊಂದು ಮಗುವಾದರೂ ಆದರೆ ಅವಳ ಗಮನ ಮಗುವಿನ ಕಡೆಗೆ ಹರಿದು, ತನ್ನನ್ನು ಅವಳು ಪೀಡಿಸುವುದು ಕಡಿಮೆಯಾಗಬಹುದು ಎಂಬ ಆಸೆಯಿಂದ `ಮಗನಿಗೊಂದು ಮಗುವಾಗಲಿ, ಹೆಣ್ಣಾದರೂ ಪರವಾಗಿಲ್ಲ’ ಎಂದು ನರಸಮ್ಮ ಇದ್ದ ದೇವರುಗಳಿಗೆಲ್ಲಾ ಹರಕೆ ಹೊತ್ತಿದ್ದಾಳೆ. ಆದರೆ ಮದುವೆಯಾಗಿ ಹತ್ತು ವರ್ಷಗಳು ಕಳೆದಿದ್ದು ಇನ್ನು ಸುಮತಿ ಹೆರುವುದು ಅಸಂಭವನೀಯ ಎಂದೇ ನರಸಮ್ಮನಿಗೆ ಅನಿಸಿದೆ. ಆದರೆ `ಯಾಕೆ ಮಕ್ಕಳಾಗಬಾರದು? ಮದುವೆಯಾಗಿ ಹದಿನೈದು-ಇಪ್ಪತ್ತು ವರ್ಷಗಳ ಮೇಲೆಯೂ ಹೆತ್ತವರಿದ್ದಾರೆ’ ಎಂದು ಮೂವತ್ತೈದರ ಹರೆಯದ ಸುಮತಿ ನಂಬಿದ್ದಾಳೆ.  ಸಾಮಾನ್ಯ ಎತ್ತರದ, ಆಕರ್ಷಕವಾದ ಮೈಕಟ್ಟಿನ, ಆರೋಗ್ಯವುಳ್ಳ ದೇಹದ, ಸುಂದರಿಯೆಂದೇ ಕರೆಯಬಹುದಾದ ಹೆಣ್ಣು ಸುಮತಿ. ಅವಳಿಗೆ ದೈಹಿಕವಾಗಿ ಯಾವ ಕೊರತೆಯೂ ಇಲ್ಲ. ಅವಳಿಗೆ ಮಕ್ಕಳಾಗಬಹುದು ಎಂದು ಅವಳ ಗಂಡ ಶ್ರೀಕಂಠನಿಗೂ ನಂಬಿಕೆಯಿದೆ.

    ಎಂಟನೆಯ ತರಗತಿಯವರೆಗೆ ಹಳ್ಳಿಯ ಮಾಧ್ಯಮಿಕ ಶಾಲೆಯೊಂದರಲ್ಲಿ ಕಲಿತಿರುವ ಸುಮತಿ ಬುದ್ಧಿಮತಿ. ಯಾದವಗಿರಿಯ ಮಟ್ಟಿಗೆ ಹೇಳುವುದಾದರೆ ಇಡೀ ಹಳ್ಳಿಯಲ್ಲಿರುವ ಕೆಲವೇ ವಿದ್ಯಾವಂತೆಯರಾದ ಸ್ತ್ರೀಯರಲ್ಲಿ ಸುಮತಿ ಒಬ್ಬಳು. ಗಂಡ ಶ್ರೀಕಂಠ ಊರ ಅತ್ಯಂತ ಗಣ್ಯ ವ್ಯಕ್ತಿ. ಈ ಕಾರಣದಿಂದಲೂ ಸುಮತಿಗೆ ಹೆಚ್ಚು ಗೌರವ ಸಲ್ಲುತ್ತದೆ. ಸುಮತಿ ಈಗೀಗ ಸಾರ್ವಜನಿಕ ಜೀವನದಲ್ಲಿ ಆಸಕ್ತಿ ತಳೆದಿದ್ದಾಳೆ. ಮಹಿಳಾ ಸಂಘವೊಂದು ತಲೆಯೆತ್ತುವುದರಲ್ಲಿದೆ. ಸುಮತಿ ಅದಕ್ಕಾಗಿ ಅತ್ಯಾಸಕ್ತಿಯಿಂದ ಕೆಲಸ ಮಾಡಲಾರಂಭಿಸಿದ್ದಾಳೆ. ಎಂಟು-ಹತ್ತು ವರ್ಷಗಳಿಂದ ಆ ಹಳೆಯ ಕಾಲದ ಹಳೆಯ ಮಾದರಿಯ ಮನೆಯಲ್ಲಿ ಹಳೆಯ ಮನುಷ್ಯಳಾದ ನರಸಮ್ಮನೊಂದಿಗೆ ಅಹರ್ನಿಶಿ ಹೊತ್ತನ್ನು ಕಳೆಯುತ್ತಾ ಹಳಬಳಾಗುತ್ತಿದ್ದೇನೆ ಎಂದನಿಸುತ್ತಿದ್ದ ಸುಮತಿಯ ಜೀವನದಲ್ಲಿ ಮಹಿಳಾಸಂಘ ಒಂದು ಹೊಸ ಅಧ್ಯಾಯವನ್ನು ಆರಂಭಿಸಿದೆ. ತಾನೇ ಮಹಿಳಾ ಸಂಘದ ಅಧ್ಯಕ್ಷಳಾಗಬೇಕೆಂಬ ಬಯಕೆ ಸುಮತಿಗೆ ಇರುವುದಾದರೂ ಶ್ರೀಕಂಠನೂ `ನೀನೇ ಅಧ್ಯಕ್ಷಳಾಗಬೇಕು’ ಎಂದು ಹೆಂಡತಿಯೊಡನೆ ಹೇಳಿರುವನಾದರೂ ಅವಳಿಗೆ ಏನೋ ಒಂದು ಭಯವಿದೆ. ಒಂದು ವರ್ಷ ಕಾರ್ಯದರ್ಶಿಯಾಗಿರ್ತೀನಿ; ಅನುಭವವಾಗಲಿ;  ಅಧ್ಯಕ್ಷ ಪದವಿ ಎಂಬುದು ಅವಳ ಅಭಿಪ್ರಾಯವಾಗಿದೆ. ಆ ಕಾರಣದಿಂದ ಊರಿನ ಇನ್ನೊಬ್ಬ ಗಣ್ಯ ವ್ಯಕ್ತಿಯಾದ ನಿವೃತ್ತ ಪೋಸ್ಟ್ ಮಾಸ್ಟರರಾದ ಸದಾಶಿವರಾಯರ ಪತ್ನಿಯಾದ ಕೃಷ್ಣಮ್ಮ ಮಹಿಳಾ ಸಂಘದ ಅಧ್ಯಕ್ಷಳಾಗಬೇಕೆಂದು ಮಹಿಳೆಯರು ನಿರ್ಧರಿಸಿದ್ದಾರೆ. ಕೃಷ್ಣಮ್ಮ ವಯಸ್ಸಿನಲ್ಲಿ ಹಿರಿಯರಾಗಿದ್ದು, ಓದು ಬರಹ ಬಲ್ಲವರಾಗಿದ್ದು, ಬಹಳ ಕಾಲದಿಂದ ಹಳ್ಳಿಯ ಬಡಜನರ ಸೇವೆಯನ್ನು ಮಾಡಿಕೊಂಡು ಬಂದವರು ಎಂದು ಹೆಸರು ಗಳಿಸಿದ್ದಾರೆ. ಜಾತಿ ಮತ ಎಂಬ ಭೇದವಿಲ್ಲದೆ, ಯಾರೇ ಕಷ್ಟದಲ್ಲಿರಲಿ ಅವರ ಸೇವೆಗೆ ಧಾವಿಸುವ, ತನಗೆ ತಿಳಿದಿರುವ ಊರ ಮದ್ದಿನಿಂದ ರೋಗಪೀಡಿತರ ಶುಶ್ರೂಷೆಯನ್ನು ನಡೆಸುವ, ಅನ್ಯಾಯವನ್ನು ಪ್ರತಿಭಟಿಸಲು ತಕ್ಕ ವಾಕ್ಚಾತುರ್ಯವಿರುವ ಕೃಷ್ಣಮ್ಮನ ಮೇಲೆ ಎಲ್ಲರಿಗೂ ತುಂಬಾ ಆದರ. ಈ ಕಾರಣದಿಂದ ಕೃಷ್ಣಮ್ಮನ ಅಧ್ಯಕ್ಷತೆಯಿಂದಲೇ ಮಹಿಳಾ ಸಂಘ ಆರಂಭವಾಗಬೇಕೆಂಬುದು ಹೆಚ್ಚಿನ ಹೆಂಗಸರ ಅಭಿಪ್ರಾಯವಿದ್ದುದರಿಂದ ಶ್ರೀಕಂಠನೂ `ಇರಲಿ, ಮುಂದಕ್ಕೆ ನೋಡೋಣ’ ಎಂದು ಸುಮ್ಮನಿದ್ದಾನೆ. ಅಲ್ಲವಾದರೆ ಸುಮತಿಯನ್ನೇ ಅಧ್ಯಕ್ಷಳನ್ನಾಗಿ ಮಾಡಬೇಕೆಂದು ಹೆಂಗಸರ ಬೆನ್ನಹಿಂದಿನಿಂದ ಒತ್ತಡ ಹಾಕಿಸುವುದು ಅವನಿಗೆ ಅಸಾಧ್ಯವಾದುದೇನೂ ಅಲ್ಲ.

    ಮನೆವಾರ್ತೆಯನ್ನು ನೋಡಿಕೊಳ್ಳುತ್ತಾ, ಆಸ್ತಿಯಲ್ಲಿ ಏನೇನೋ ಅಭಿವೃದ್ಧಿಗಳನ್ನು ಮಾಡುತ್ತಾ ಶ್ರೀಕಂಠ ದೊಡ್ಡದೊಂದು ಖರ್ಚಿನ ಪಟ್ಟಿಯನ್ನು ಬೆಳೆಸಿದ್ದಾನೆ. ಇನ್ನು ಮೂರು-ನಾಲ್ಕು ವರ್ಷಗಳಲ್ಲಿ ನಿವೃತ್ತನಾಗಿ ಊರಿಗೆ ಬರಲಿರುವ ಅಣ್ಣನಿಗೆ ತೋರಿಸಲು ಈ ಖರ್ಚಿನ ಪಟ್ಟಿಯನ್ನು ಅವನು ಸಿದ್ಧಪಡಿಸುತ್ತಿದ್ದಾನೆ. `ಈ ಖರ್ಚನ್ನು ಅಣ್ಣ ಕೊಡಲಿ,  ಆಸ್ತಿ ಪಾಲು’ ಎಂಬುದು ಶ್ರೀಕಂಠನ ಧೋರಣೆಯಾಗಿದೆ.

    ಅಚ್ಯುತರಾಯರು ಸಾಧುಸ್ವಭಾವದವರೂ, ದೈವಭೀರುಗಳೂ ಆಗಿದ್ದು ಅವರಿಗೆ ಶ್ರೀಕಂಠನ ಈ ಹೊಂಚು ತಿಳಿದಿಲ್ಲ. ಯಾದವಗಿರಿ ಪೇಟೆಯಿಂದ ಸುಮಾರು ಮೂರು ಮೈಲು ದೂರದಲ್ಲಿ ಸೀತಳ್ಳಿ ಎಂಬಲ್ಲಿ ಅವರಿಗೆ ಸರಕಾರದ ವತಿಯಿಂದ ಐದೆಕರೆ ಬೋಳು ನೆಲ ಮಂಜೂರಾಗಿದೆ. ನಿವೃತ್ತನಾಗಿ ಬಂದು ಆ ಜಾಗವನ್ನು ಅಭಿವೃದ್ಧಿಪಡಿಸಬೇಕೆಂಬ ಆಲೋಚನೆಯೂ ಅಚ್ಯುತರಾಯರಿಗಿದೆ. ತಮ್ಮನ ವಶ ಇರುವ ಆಸ್ತಿಯಲ್ಲಿ ಅವರಿಗೆ ಪಾಲು ಸಲ್ಲಬೇಕಾದುದೇ ಆದರೂ ಅದು ಅವನ ವಶವೇ ಇದ್ದರೂ ಇರಲಿ ಹೊಸ ಜಾಗವನ್ನು ಅಭಿವೃದ್ಧಿಗೊಳಿಸಲು ಅವನು ಸ್ವಲ್ಪ ಸಹಾಯ ನೀಡಿದರೆ ಸಾಕು ಎಂಬ ಭಾವ ಅಚ್ಯುತರಾಯರ ಮನಸ್ಸಿನಲ್ಲಿದೆ. 

    ಅಚ್ಯುತರಾಯರ ಮಗ ಸುದರ್ಶನ ಶ್ರೀನಗರದಲ್ಲಿ ಇಂಗ್ಲಿಷ್ ಎಂ.ಎ. ಮುಗಿಸಿ ಅಲ್ಲೇ ಕಾಲೇಜಿನಲ್ಲಿ ಲೆಕ್ಚರರಾಗಿ ಕೆಲಸ ಮಾಡುತ್ತಿದ್ದಾನೆ. ಮಗಳು ಅಶ್ವಿನಿ ಪೀಯೂಸಿಯಲ್ಲಿ ಕಲಿಯುತ್ತಿದ್ದಾಳೆ. ಸುದರ್ಶನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಹೊತ್ತಿನಲ್ಲಿ, ಅಚ್ಯುತರಾಯರು ಅಸ್ಸಾಮಿನ ಗಡಿಯಲ್ಲಿ ಕೆಲಸದ ಮೇಲಿದ್ದಾಗ ಹೆಂಡತಿ ಸರೋಜಮ್ಮ, ಅಶ್ವಿನಿಯನ್ನು ಹೆತ್ತಿದ್ದರು. ತಾಯಿ ಮಗುವಿನ ದೃಷ್ಟಿಯಿಂದಲೂ, ಸುದರ್ಶನನ ವಿದ್ಯಾಭ್ಯಾಸಕ್ಕೆ ಅಲ್ಲಿ ಸರಿಯಾದ ಅನುಕೂಲವಿಲ್ಲದಿದ್ದುದರಿಂದಲೂ ಅಚ್ಯುತರಾಯರು ಸುಮಾರು ಐದು ವರ್ಷಗಳ ಕಾಲ ಅಸ್ಸಾಮಿನಲ್ಲಿರಬೇಕಾಗಿತ್ತು. ಆ ಮೇಲೆ ಅವರಿಗೆ ಶ್ರೀನಗರಕ್ಕೆ ವರ್ಗವಾದಾಗ ಅವರು ಹೆಂಡತಿ ಮಕ್ಕಳನ್ನು ಶ್ರೀನಗರಕ್ಕೆ ಕರೆದುಕೊಂಡು ಹೋಗಿದ್ದರು. ಯಾದವಗಿರಿಯಲ್ಲಿ ಆರಂಭವಾದ ಹೈಸ್ಕೂಲಿನಲ್ಲಿ ಮೊತ್ತ ಮೊದಲಿಗೆ ಎಸ್ಸ್‍ಸ್ಸೆಲ್ಸಿ ಮುಗಿಸಿದ ಹದಿನೆಂಟು ಹುಡುಗರಲ್ಲಿ ಸುದರ್ಶನನೂ ಒಬ್ಬನಾಗಿದ್ದ. ಈ ಐದು ವರ್ಷಗಳ ಕಾಲ ಅಣ್ಣನ ಕುಟುಂಬ ಊರಲ್ಲಿದ್ದಾಗ ಎಷ್ಟು ಖರ್ಚಾಗಿದೆ ಎಂಬ ಲೆಖ್ಖವೂ ಶ್ರೀಕಂಠನ ಲೆಕ್ಕದ ಪುಸ್ತಕದಲ್ಲಿದೆ. ಹೀಗೆ ಲೆಕ್ಕ ಹಾಕಿ ನೋಡಿದರೆ ಅಚ್ಯುತರಾಯರು ತಮ್ಮನಿಗೆ ಒಂದು ಲಕ್ಷ ರೂಪಾಯಿಗಳನ್ನಾದರೂ ಕೊಡಬೇಕಾಗಬಹುದು. ಆದರೆ ಬೃಹದಾಕಾರವಾಗಿ ಬೆಳೆದಿದ್ದ ಈ ಖರ್ಚಿನ ಪಟ್ಟಿಯ ವಿಚಾರ ಶ್ರೀಕಂಠ ಅಣ್ಣನೊಡನೆ ಇದುವರೆಗೆ ಹೇಳಿಲ್ಲ. `ಅಣ್ಣ ಊರಿಗೆ ಬರಲಿ, ಆಮೇಲೆಯೇ ಎಲ್ಲಾ ತೀರ್ಮಾನ’ ಎಂದುಕೊಂಡಿದ್ದಾನೆ ಶ್ರೀಕಂಠ.

    ಅಚ್ಯುತರಾಯರ ಸಹೋದ್ಯೋಗಿಯಾದ ಮೇಜರ್ ಗುರುನಾಥ್ ಎಂಬವರು ಮತ್ತವರ ಕುಟುಂಬ ಅಚ್ಯುತರಾಯರ ಕುಟುಂಬದವರೊಡನೆ ಅತ್ಯಂತ ಸ್ನೇಹದಿಂದ, ಅನ್ಯೋನ್ಯದಿಂದ ಬಹಳ ಕಾಲ ಜೀವಿಸಿದವರು. ಮೇಜರ್ ಗುರುನಾಥರ ಮಗ ಪ್ರಬೋಧ್ ಪೈಲೆಟ್ ಆಫೀಸರ್ ಆಗಿದ್ದಾನೆ. ಮಗಳು ದೀಪ್ತಿ, ಸುದರ್ಶನ, ಪ್ರಬೋಧ್ ಮತ್ತು ಅಶ್ವಿನಿ ನಾಲ್ವರೂ ಒಟ್ಟಿಗೆ ಓಡಿಯಾಡಿ ಬೆಳೆದವರು.

    ಸುದರ್ಶನ ಮತ್ತು ದೀಪ್ತಿಯರ ನಡುವೆ ಅನುರಾಗ ಭಾವವಿದೆ ಎಂಬ ವಿಚಾರ ಅವರ ತಾಯ್ತಂದೆಯರಿಗೂ ಗೊತ್ತು. ಅವರು ಮದುವೆಯಾಗಲಿಚ್ಛಿಸುವುದಾದರೆ ಮದುವೆಯಾಗಲಿ ಎಂಬ ಅಭಿಪ್ರಾಯ ಅಚ್ಯುತರಾಯರು ಮತ್ತು ಸರೋಜಮ್ಮರಲ್ಲಿದೆ. ಗುರುನಾಥ್ ಮತ್ತವರ ಪತ್ನಿ ಸುಧಾಮ್ಮನವರಿಗೂ ಇದು ಒಪ್ಪಿಗೆಯಾದ ಸಂತೋಷಪ್ರದವಾದ ವಿಚಾರವೇ ಅಗಿದೆ. ದೀಪ್ತಿಯ ಎಂ. ಎ. ಆದೊಡನೆ ಮದುವೆ ಮುಗಿಸಿಬಿಡೋಣ ಎಂದು ಎರಡು ಕುಟುಂಬಗಳ ನಡುವೆ ಗುಟ್ಟಾಗಿ ಮಾತುಕತೆ ನಡೆದಿದೆ. ದೀಪ್ತಿ ಮಾತ್ರ `ನನಗೆ ಪಿ.ಎಚ್. ಡಿ. ಮಾಡ್ಬೇಕು’ ಅನ್ನುತ್ತಿದ್ದಾಳೆ. ಸುದರ್ಶನನ ಮೇಲೂ ಅವಳಿಗೆ ಪ್ರೇಮವಿದೆ. ಸಮಾಜ ಶಾಸ್ತ್ರವೆಂದರೂ ಅಷ್ಟೇ ಪ್ರೇಮ ಅವಳಿಗೆ. ಇನ್ನೊಂದು ವರ್ಷದಲ್ಲಿ ಅವಳ ಎಂ.ಎ. ಮುಗಿಯುತ್ತೆ. ಆಮೇಲೆ ಮದುವೆಯಾಗಬೇಕು ಎಂಬ ಅಭಿಪ್ರಾಯ ಸುದರ್ಶನನದು. ಪಿ.ಎಚ್. ಡಿ. ಎಂದುಕೊಂಡು ಮತ್ತೂ ಮೂರು-ನಾಲ್ಕು ವರ್ಷ ಕಾಯಲು ಸುದರ್ಶನ ಸಿದ್ಧನಿಲ್ಲ. ಆದರೆ ಮದುವೆಯೊಂದು ಮುಗಿದುಹೋದರೆ ಮತ್ತೆ ಕಲಿಯುವ ಕತೆ ಮುಗಿದಂತೆಯೇ ಎಂಬುದು ದೀಪ್ತಿಯ ಅಭಿಪ್ರಾಯ.

    ಮೇಜರ್ ಗುರುನಾಥರಿಗೆ ಇನ್ನೂ ಹತ್ತು ವರ್ಷದ ಸರ್ವೀಸಿದೆ. ಮಗ ಪ್ರಬೋಧ ಪೈಲಟ್ ಆಫೀಸರನಾಗಿ ಗೋರಖಪುರದಲ್ಲಿದ್ದಾನೆ. ದೀಪ್ತಿಯ ಮದುವೆಯಾದ ಮೇಲೆ ಗಂಡ ಹೆಂಡತಿ ತಾವಿಬ್ಬರೇ ಇರಬೇಕಲ್ಲ. ಸುದರ್ಶನ ಶ್ರೀನಗರದಲ್ಲೇ ತನ್ನ ಉದ್ಯೋಗದಲ್ಲಿ ಮುಂದರಿದರೆ ಒಳ್ಳೆಯದು. ಮಗಳು ಮತ್ತು ಅಳಿಯ ತಮ್ಮೊಂದಿಗೆ ಇರುತ್ತಾರೆ. ಮೊಮ್ಮಕ್ಕಳನ್ನು ಕಂಡು ಸಂತೋಷವಾಗಿರಬಹುದು ಎಂಬುದೆಲ್ಲ ಅವರ ಕನಸು. ಪೈಲೆಟ್ ಆಫೀಸರನಾಗಿರುವ ಮಗ ತಮ್ಮೊಂದಿಗೇ ಇರುವುದಂತೂ ಸಾಧ್ಯವಿಲ್ಲ. ಸರ್ವೀಸು ಮುಗಿಸಿ ತಮ್ಮ ಊರಾದ ಬಿಜಾಪುರಕ್ಕೆ ಮರಳಿದ ಮೇಲೆ ವಾನಪ್ರಸ್ಥಾಶ್ರಮವೆಂಬುದಂತೂ ಖಂಡಿತ. ಅಲ್ಲಿಯವರೆಗಾದರೂ ಮಗಳು ಬಳಿಯಲ್ಲಿರಲಿ ಎಂಬ ಆಸೆ ತಾಯ್ತಂದೆಗಳದು. ಆದರೆ ಬಹಳ ಮುದ್ದಿನಿಂದ ಬೆಳೆದ ದೀಪ್ತಿಯ ಮನಸ್ಸು ಯಾವ ಬಗೆಯದು ಎಂದು ಅವರಿಗೆ ಕೆಲವೊಮ್ಮೆ ಸ್ಪಷ್ಟವಾಗುವುದಿಲ್ಲ. ಅವಳಿಗೆ ಸುದರ್ಶನನ ಮೇಲೆ ಮೆಚ್ಚುಗೆ, ಅಭಿಮಾನ, ಇರುವುದೆಲ್ಲ ಸಾಮಾನ್ಯ ಸ್ಪಷ್ಟವೇ. ಆದರೆ ಅದಕ್ಕಿಂತ ಗಾಢವಾದ ಪ್ರೇಮವೆಂಬುದೊಂದು ಅವಳಲ್ಲಿದೆಯೇ, ಅವಳು ಸುದರ್ಶನನನ್ನು ಮದುವೆಯಾಗಲು ನಿರ್ಧರಿಸಿದ್ದಾಳೆಯೇ ಎಂಬುದು ಅಷ್ಟೊಂದು ಸ್ಪಷ್ಟವಾಗಿಲ್ಲ. ಅಂಥ ವಿಷಯಗಳಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನೆಲ್ಲ ತಮಾಷೆಯಾಗಿ ತೇಲಿಸಿಬಿಡುವ ದೀಪ್ತಿಯ ಮನಸ್ಸನ್ನು ಹಿಡಿದಿರಿಸಿಕೊಂಡು ಅವಳಿಂದ ಸ್ಪಷ್ಟವಾದ ಉತ್ತರವನ್ನು ಪಡೆಯುವುದು ಇದುವರೆಗೆ ಗುರುನಾಥರಿಗೆ ಮತ್ತು ಸುಧಾಮ್ಮನಿಗೆ ಸಾಧ್ಯವಾಗಿಲ್ಲ. ಇವಳು ಎಲ್ಲಿ ಮನಸ್ಸು ಬದಲಿಸಿ ಬಿಡುವಳೊ ಎಂಬೊಂದು ಶಂಕೆಯೂ ಇಲ್ಲದಿಲ್ಲ. ಆ ಕಾರಣದಿಂದ ಆದಷ್ಟು ಬೇಗ ದೀಪ್ತಿ-ಸುದರ್ಶನರ ಮದುವೆ ನಡೆದುಹೋಗಲಿ ಎಂಬ ಕಾತರ ಅವರಿಗಿದೆ.

    ಈ ಬಗೆಯ ಅವರ ಭಯಕ್ಕೆ ಬೇರೊಂದು ಕಾರಣವೂ ಇದೆ. ಸ್ವಲ್ಪ ಕಾಲದಿಂದ ತನ್ನು ಹೊಸ ಸೋಷಿಯಾಲಜಿ ಲೆಕ್ಷರರ್ ಸುಂದರ ತರುಣ ಅತುಲನ ಬಗ್ಗೆ ದೀಪ್ತಿ ಆಗಾಗ ಬಹಳ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾಳೆ. ಸಮಾಜ ಶಾಸ್ತ್ರದಲ್ಲಿ ಅತುಲನಿಗೆ ಅಗಾಧವಾದ ಪಾಂಡಿತ್ಯವಿದೆ; ತನಗೂ ಸಮಾಜ ಶಾಸ್ತ್ರವೆಂದರೆ ಅಷ್ಟೇ ಆಸಕ್ತಿ; ಅತುಲನಷ್ಟೇ ಚೆನ್ನಾಗಿ ಲೆಕ್ಷರ್ ಮಾಡುವ ಅಧ್ಯಾಪಕರನ್ನೇ ತಾನು ಇದುವರೆಗೆ ಕಂಡಿಲ್ಲ; ಅತುಲ ಭಾರೀ ವಾಗ್ಮಿ ಎಂದೆಲ್ಲಾ ಅತುಲನ ಕುರಿತು ಆಗಾಗ ಬಹಳ ಹೊಗಳಿಕೆಯ ಮಾತುಗಳನ್ನು ಹೇಳತೊಡಗಿದ್ದಾಳೆ. ಒಂದೆರಡು ಬಾರಿ ಅತುಲನ್ನು ಸಮಾಜ ಶಾಸ್ತ್ರ ಡಿಪಾರ್ಟ್‍ಮೆಂಟಿನಲ್ಲಿ ಭೇಟಿಯಾಗಿ ತಾನು ಬರೆದ ಕೆಲವು ಸಮಾಜ ಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಅವನಿಗೆ ತೋರಿಸಿದಾಗ ಅವನು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಲ್ಲದೆ ತನಗೆ ಸಮಾಜ ಶಾಸ್ತ್ರದಲ್ಲಿರುವ ಆಸಕ್ತಿಯನ್ನು ಕಂಡು ತಾನು ಖಂಡಿತವಾಗಿಯೂ ಡಾಕ್ಟರೇಟ್ ಮಾಡಬೇಕು ಎಂಬ ಅಭಿಪ್ರಾಯವನ್ನು ಡಾಕ್ಟರ್ ಅತುಲ್ ವ್ಯಕ್ತಪಡಿಸಿದನೆಂದೂ ಹೇಳಿದ್ದಾಳೆ.

    ಮಗಳಲ್ಲಿ ಡಾಕ್ಟರ್ ಅತುಲನ ಮೇಲೆ ಹುಟ್ಟಿರುವ ಈ ವಿಪರೀತವಾದ ಅಭಿಮಾನ, ಮೆಚ್ಚುಗೆಯ ಬಗ್ಗೆ ಒಂದು ದಿನ ಗಂಡ ಹೆಂಡತಿಯ ನಡುವೆ ದೀರ್ಘವಾದ ವಿಮರ್ಶೆ ನಡೆಯಿತು. ಇದು ಯಾವ ದಿಕ್ಕಿನಲ್ಲಿ ಸಾಗುತ್ತದೊ ಎಂಬ ಗೊಂದಲದಲ್ಲಿ ಹೆಂಡತಿಯಿರುವುದನ್ನು ಕಂಡು ಗುರುನಾಥರು `ಇಷ್ಟಕ್ಕೇ ದೀಪ್ತಿ ಅತುಲನಲ್ಲಿ ಅನುರಕ್ತಳಾಗಿರುವಳೆಂದೇನೂ ಹೇಳುವಂತಿಲ್ಲ. ಅತುಲ ಸ್ಫುರದ್ರೂಪಿಯಾದ ತರುಣನೇನೋ ಹೌದು. ಆದರೆ ಸುದರ್ಶನನೂ ಅಷ್ಟೇ ಬುದ್ಧಿವಂತ, ಗುಣವಂತ. ದೀಪ್ತಿ ನಾವು ಭಯಪಡಬೇಕಾದಷ್ಟು ಚಂಚಲ ಮನಸ್ಸಿನವಳು ಎಂದು ನನಗನಿಸುವುದಿಲ್ಲ’ ಎಂದರು. 

    `ನಿಮಗೇ ಗೊತ್ತು ಅವಳ ಮನಸ್ಸು ಏನು ಅಂತ. ನನಗಂತೂ ಒಂದೂ ತಿಳಿಯುವುದಿಲ್ಲ. `ಒಂದು ದಿನ ಡಾಕ್ಟರ್ ಅತುಲನನ್ನು ಇಲ್ಲಿಗೆ ಕರೆದುಕೊಂಡು ಬರ್ತೀನಿ’ ಅಂತ ನಿನ್ನೆ ಹೇಳಿದಳು ದೀಪ್ತಿ’ ಸುಧಾಮ್ಮ ಹೇಳಿದರು.

    `ಹೌದೆ? ಆ ವಿಚಾರ ದೀಪ್ತಿ ನನ್ನಲ್ಲೇನೂ ಹೇಳಿಲ್ಲ’ ಎಂದು ಗುರುನಾಥರು ಸ್ವಲ್ಪ ತಡೆದು, `ಒಳ್ಳೆಯದಾಯ್ತು, ಕರೆದುಕೊಂಡು ಬರಲಿ. ಡಾಕ್ಟರ್ ಅತುಲ್ ಎಂಥ ಮನುಷ್ಯ ಎಂದು ಕಂಡುಕೊಳ್ಳಲು ಅನುಕೂಲವಾಗುತ್ತೆ’ ಎಂದರು.

    `ಅದರಿಂದೇನು ಪ್ರಯೋಜನ?’

    `ಅವಳಿಗೆ ಅತುಲನ ಮೇಲೆ ಅಷ್ಟೊಂದು ಆಸಕ್ತಿ ಅರ್ಥಾತ್ ಪ್ರೇಮ ಇರುವುದಾದರೆ ಅವನನ್ನೇ ಮದುವೆಯಾಗಲಿ’ ಗುರುನಾಥರು ನಕ್ಕು ನುಡಿದರು.

    `ಒಳ್ಳೆಯ ಮಾತು ನಿಮ್ಮದು. ಇಷ್ಟು ಕಾಲ ಒಳ್ಳೆ ಗಂಡಹೆಂಡತಿಯರ ಹಾಗೆ ಜೊತೆಜೊತೆಯಾಗಿ ನಡೆದಾಡಿದವರು ಸುದರ್ಶನ ಮತ್ತು ದೀಪ್ತಿ’

    `ಹಾಗೆ ನಾನು ತಿಳಿಯುವುದಿಲ್ಲ ಸುಧಾ. ಕಾಲ ಬದಲಾಗಿದೆ. ಹುಡುಗ ಹುಡುಗಿಯರು ಸ್ವತಂತ್ರವಾಗಿ ಅಡ್ಡಾಡ್ತಾರೆ. ಸ್ನೇಹ, ಅನ್ಯೋನ್ಯ ಅಂದುಕೊಳ್ಳಬಹುದು. ಎಲ್ಲವನ್ನೂ ಪ್ರೇಮವೆಂದೇ ಕರೆಯುವಂತಿಲ್ಲ. ದೀಪ್ತಿ ಸ್ವಲ್ಪ ವಿಚಿತ್ರ ಸ್ವಭಾವದ ಹುಡುಗಿ ನಿಜ. ಅವಳ ಇಷ್ಟಕ್ಕೆ ಅಡ್ಡಿ ಬಂದರೆ ಅವಳೂ ಸುಖವಾಗಿರಲಾರಳು; ನಮ್ಮನ್ನೂ ಸಂತೋಷವಾಗಿರಲು ಬಿಡಲಾರಳು. ಅವಳಿಗೆ ಹೇಗೆ ಇಷ್ಟವಿದೆಯೋ ಹಾಗೇ ಆಗಲಿ. ಸುದರ್ಶನನಿಗೆ ಹೆಣ್ಣು ಸಿಗುವುದೊಂದು ಸಮಸ್ಯೆಯೆ?’

    `ನಿಮಗ್ಗೊತ್ತಿಲ್ಲ, ಸುದರ್ಶನ ಅವಳನ್ನು ಬಹಳ ಹಚ್ಚಿಕೊಂಡಿದ್ದಾನೆ. ದೀಪ್ತಿ ಮನಸ್ಸು ಬದಲಾಯಿಸಿದೆ ಸುದರ್ಶನನ ಮನಸ್ಸಿಗೆ ತುಂಬಾ ನೋವಾಗಬಹುದು’

    ಸ್ವಲ್ಪ ಹೊತ್ತು ಚಿಂತಿಸಿ ಗುರುನಾಥರು ಹೇಳಿದರು:

    `ಇಷ್ಟಕ್ಕೂ ಅತುಲನ ಮೇಲೆ ದೀಪ್ತಿಗೆ ಇರುವ ಭಾವ ಎಂಥದು ಎಂದು ನಮಗೆ ಸ್ಪಷ್ಟವಿಲ್ಲ. ಸ್ವಲ್ಪ ಕಾದು ನೋಡೋಣ. ದೀಪ್ತಿಯೊಡನೆ ಮದುವೆಯ ಪ್ರಸ್ತಾಪವನ್ನು ಬೇಗನೇ ಎತ್ತಬೇಕು. ಅವಳು ಅತುಲನನ್ನು ಇಲ್ಲಿಗೆ ಕರೆದುಕೊಂಡು ಬಂದರೆ ಒಳ್ಳೆಯದೇ ಅಯ್ತು. ಅವನು ಬರುವುದನ್ನು ದೀಪ್ತಿ ಮೊದಲೇ ತಿಳಿಸಲಿ. ಸುದರ್ಶನನ್ನೂ ಕರೆಯೋಣ. ಮಾತುಕತೆಯ ನಡುವೆ ಪರ್ಯಾಯವಾಗಿ ಸುದರ್ಶನ ಮತ್ತು ದೀಪ್ತಿ ಮದುವೆಯಾಗಲಿರುವವರು ಎಂಬ ವಿಚಾರವನ್ನು ನಾನು ಸೂಚಿಸುತ್ತೇನೆ, ಏನಂತಿ?’

    `ಪರವಾಗಿಲ್ಲ, ಒಳ್ಳೆಯ ಯೋಚನೆ!’ ಸುಧಾಮ್ಮ ತೃಪ್ತಿಯಿಂದ ನುಡಿದರು.

    2.

    ಯಾದವಗಿರಿ ಪೇಟೆಯಿಂದ ಸುಮಾರು ಎರಡು ಮೈಲು ದೂರದಲ್ಲಿರುವ ಹುಲಿಬೆಟ್ಟ ಎಂಬ ಗುಡ್ಡದ ಒಂದು ಪಕ್ಕದಲ್ಲಿ ಗೋದಮ್ಮನ ಮನೆಯಿದೆ. ಗೋದಮ್ಮನ ಮನೆ ಅರ್ಥಾತ್ ಗುಡಿಸಲಿನಿಂದ ಸುಮಾರು ನೂರು ಗಜ ಮುಂದಕ್ಕೆ ಬೆಟ್ಟದ ಬುಡದಲ್ಲಿ ಭಾರೀ ಬಂಡೆಗಳೆಡೆಯಿಂದ ಒಂದು ಸಣ್ಣ ಚಿಲುಮೆ ಹೊರ ಚಿಮ್ಮುತ್ತದೆ. ಹಾಗೆ ಹೊರ ಚಿಮ್ಮಿದ ಚಿಲುಮೆ ಕಲ್ಲುಗಳೆಡೆಯಲ್ಲಿ ನುಸುಳಿ ವಕ್ರವಕ್ರವಾಗಿ ಹರಿಯುತ್ತಾ ಬೆಟ್ಟದಿಂದ ಕೆಳಗೆ ಇಳಿಯುತ್ತಾ ಪುಣ್ಯವತಿ ಹೊಳೆಯಾಗುತ್ತದೆ. ಈ ಚಿಲುಮೆ ಹುಟ್ಟುವಲ್ಲಿಂದ ಮೂಡುಗಡೆಗೆ ದಟ್ಟವಾದ ಕಾಡು ಆರಂಭವಾಗುತ್ತದೆ. ಹಿಂದೆ ಹುಲಿಗಳು ನಿರ್ಭಯವಾಗಿ ತಿರುಗಾಡುತ್ತಿದ್ದ ಜಾಗವದು. ಆದುದರಿಂದಲೇ ಹುಲಿಬೆಟ್ಟ ಎಂಬ ಹೆಸರು. ಈಗ ಮಾತ್ರ ಯಾದವಗಿರಿ ಗ್ರಾಮದ ಜನರಿಗೆ ಸೊಪ್ಪು ಸೌದೆಗಳನ್ನು ಒದಗಿಸುತ್ತಾ ಆ ಕಾಡು ತೆಳ್ಳಗಾಗುತ್ತಾ ಬಂದಿದೆ. ಹತ್ತಿರದಿಂದ ಬಹಳ ತೆಳ್ಳಗಾಗಿ ಕಂಡರೂ ಸುಮಾರು ಒಂದು ಮೈಲು ಉದ್ದ ಮತ್ತು ಸುಮಾರು ಅಷ್ಟೇ ಅಗಲಕ್ಕೆ ಅದು ಇನ್ನೂ ಕಾಡು ಎಂಬ ಹೆಸರನ್ನು ಉಳಿಸಿಕೊಂಡಿದ್ದು ಯಾದವಗಿರಿಯ ಹಸಿರಾಗಿ ಉಳಿದಿದೆ.

    ಗೋದಮ್ಮನ ಮನೆ ಮತ್ತು ಈ ಪುಣ್ಯವತಿಯೆಂಬ ಚಿಲುಮೆಯ ನಡುವೆ ಬಹ್ವಂಶ ಸಮತಟ್ಟಾದ ಜಾಗದಲ್ಲಿ ಊರಿನವರು `ಬನ’ ಎಂದು ಕರೆಯುವಂಥ ಏಳೆಂಟು ಭಾರೀ ಗಾತ್ರದ ವೃಕ್ಷಗಳ ಒಂದು ಗುಂಪಿದೆ. ಈ ವೃಕ್ಷಗಳ ಗುಂಪಿನಲ್ಲಿ ಎಲ್ಲಾ ಕಡೆ ಯಾವ್ಯಾವುದೋ ಬಗೆಯ ಬಿಳಲುಗಳು ಬೆಳೆದು ಹಬ್ಬಿವೆ. ಈ ಬನದ ನಡುವೆ ಒಂದು ಹಾಳುಬಿದ್ದ ಕಲ್ಲಿನ ಗುಡಿಯಿದೆ. ಈ ಗುಡಿಯು ಬಹಳ ಚಿಕ್ಕದಾಗಿದ್ದು ದೂರದಿಂದ ನೋಡಿದರೆ ಒಂದು ಬುಟ್ಟಿಯನ್ನು ಕವಚಿ ಹಾಕಿದಂತೆ ಕಾಣುತ್ತದೆ ಅಷ್ಟೆ. ಅದೊಂದು ಅಖಂಡ ಶಿಲೆಯಾಗಿದ್ದು ಅದರ ದ್ವಾರ, ದಾರವಂದ ಎಲ್ಲವೂ ಒಂದೇ ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ಆದರೆ ಆ ಗುಡಿಯೊಳಗೆ ಮೂರ್ತಿಯಿಲ್ಲ. ಐದಾರು ವರ್ಷದ ಒಂದು ಮಗುವಿಗೆ ನಿಲ್ಲುವಷ್ಟು ಮಾತ್ರವೇ ವಿಸ್ತಾರವಿರುವ ಅದರೊಳಗೆ ಒಂದು ಖಾಲಿ ಕಲ್ಲಿನ ಪೀಠವಿದೆ. ಆ ಪೀಠದ ಮೇಲೆ ಯಾವುದೋ ಒಂದು ವಿಗ್ರಹವಿತ್ತೆಂದೂ ಎಂದೋ ಒಂದು ಕಾಲದಲ್ಲಿ ಅದು ನಾಪತ್ತೆಯಾಯಿತೆಂದೂ ಊರಿನ ಹಿರಿಯರೆನ್ನುತ್ತಾರೆ. ಅದು `ಭೂತನಾಥ’ ಎಂಬ ದೇವರೆಂದೂ, ಊರ ಜನರು ಅದನ್ನು ಅವಗಣಿಸಿದ್ದರಿಂದ ಅದು ಅಲ್ಲಿ ಮಾಯವಾಗಿ ಮತ್ಯಾವುದೋ ಒಂದು ಊರಿನಲ್ಲಿ ಉದ್ಭವಗೊಂಡಿತೆಂದೂ ಕೆಲವರು ಹೇಳುತ್ತಾರೆ. ಈಗಿನ ತಲೆಮಾರಿನವರು `ಅದೆಲ್ಲಾ ಸುಳ್ಳು, ಯಾರೋ ವಿಗ್ರಹ ಚೋರರು ಅದನ್ನು ಅಪಹರಿಸಿ ಈ ಕತೆಯನ್ನು ಕಟ್ಟಿರಬೇಕು’ ಅನ್ನುತ್ತಾರೆ. ಆದರೆ ಹಳಬರು ಇದನ್ನು ಒಪ್ಪುವುದಿಲ್ಲ. `ಆ ವಿಗ್ರಹವನ್ನು ಮುಟ್ಟುವುದಂತಿರಲಿ, ಆ ಬನದೊಳಗೆ ಕಾಲಿಡುವ ಧೈರ್ಯ ಯಾರಿಗೂ ಇಲ್ಲ. ಅದರೊಳಗೆ ಇಂಚಿಗೊಂದರಂತೆ ನಾಗರಹಾವುಗಳು, ಘಟಸರ್ಪಗಳು ಹರಿದಾಡುತ್ತಿರುತ್ತವೆ’ ಎಂದು ಅವರು ವಾದಿಸುತ್ತಾರೆ.

    ಈ ಕಾರಣದಿಂದಲೇ ಆ ಬನದಲ್ಲಿರುವ ಮರದ ಒಂದೇ ಒಂದು ಎಲೆಯನ್ನು ಕೂಡ ಜನರು ಮುಟ್ಟುವುದಿಲ್ಲ, ಹೆಚ್ಚೇಕೆ, ಉದುರಿಬಿದ್ದ ಒಣ ಎಲೆಗಳನ್ನು, ಒಣ ಸೌದೆಯನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ. ಆ ಬನದ ಸೊಪ್ಪು ಸೌದೆಗಳನ್ನು ಎತ್ತಬಂದವರು ಯಾರನ್ನೂ ವಿಷಸರ್ಪಗಳು ಜೀವಂತವಾಗಿ ಉಳಿಸಿಲ್ಲ ಎಂಬ ಕತೆ ಇಡೀ ಊರಲ್ಲಿ ಪ್ರತೀತಿಯಲ್ಲಿದೆ. ಯಾದವಗಿರಿ ಗ್ರಾಮದ ಬೇರೆ ಬೇರೆ ಭಾಗಗಳ ಜನರು ಮಧ್ಯರಾತ್ರಿಯ ಹೊತ್ತಿಗೆ ಈ ಬನದೆದುರಿನ ಪ್ರದೇಶದಲ್ಲಿ ಪ್ರಕಾಶಮಾನವಾದ ನೂರಾರು ದೊಂದಿಗಳ ನೃತ್ಯವನ್ನು ಕಂಡುದಾಗಿ ಹೇಳುತ್ತಾರೆ. ಅಚ್ಯುತರಾಯರ ದೂರದ ಸಂಬಂಧಿಯಾದ ಗೋದಮ್ಮ ಅವಳ ಗುಡಿಸಲಲ್ಲಿ ಏಕಾಕಿಯಾಗಿ ವಾಸಿಸುತ್ತಾಳೆ. ದಿನದ ಹೆಚ್ಚಿನ ಕಾಲದಲ್ಲಿ ಬಡ ಹೆಂಗಸೊಬ್ಬಳು ಗೋದಮ್ಮಳೊಂದಿಗಿರುತ್ತಾಳೆ. ಸುಮಾರು ಅರುವತ್ತರ ಹರೆಯದ ಗೋದಮ್ಮ ಯಾದವಗಿರಿಯಲ್ಲಿ ಅತ್ಯಂತ ಪರಿಚಿತ ವ್ಯಕ್ತಿ. ಗೋದಮ್ಮನ ಕೈಯಿಂದ ತಯಾರಾದ ಎಳ್ಳುಂಡೆ ಮತ್ತು ಚಕ್ಕುಲಿಯನ್ನು ಸವಿಯದವರು ಆ ಗ್ರಾಮದಲ್ಲಿ ಯಾರೂ ಇಲ್ಲವೆಂದರೆ ತಪ್ಪಲ್ಲ. ಈ ವಯಸ್ಸಿನಲ್ಲೂ ಗೋದಮ್ಮನ ಗುಡಿಕೈಗಾರಿಕೆ ಸುಗಮವಾಗಿ ಮುಂದರಿದಿದೆ. ಅವಳ ಬೆನ್ನು ಸ್ವಲ್ಪ ಬಾಗಿದ್ದರೂ ಬೆನ್ನೆಲುಬು ಗಟ್ಟಿಯಾಗಿದೆ. ಅವಳ ಕೆಲಸದಲ್ಲಿ ಚಿನ್ನು ಸಹಾಯಕಳಾಗಿ ಕೆಲಸ ಮಾಡುತ್ತಿರುವುದರಿಂದ ಅವಳ ಉಂಡೆ ಮತ್ತು ಚಕ್ಕುಲಿಯ ಕೈಗಾರಿಕೆ ಚಲೋದಾಗಿ ನಡೆಯುತ್ತದೆ. ಬೇಡಿಕೆಯನ್ನೆಲ್ಲ ಪೂರೈಸುವಷ್ಟು ಉಂಡೆ ಮತ್ತು ಚಕ್ಕುಲಿಯನ್ನು ತಯಾರಿಸುವುದು ಗೋದಮ್ಮಳಿಂದ ಸಾಧ್ಯವಾಗುತ್ತಿಲ್ಲ. ಅಷ್ಟು ಬೇಡಿಕೆ ಗೋದಮ್ಮನ ಉಂಡೆ, ಚಕ್ಕುಲಿಗಿದೆ. ಮನೆಗೆ ಯಾರೇ ವಿಜಾತಿಯವರು ಬರಲಿ, ಅವರು ಹೋದ ಮೇಲೆ ಅವರು ಕುಳಿತಿದ್ದ ಆಸನವನ್ನು ಗೋಮೂತ್ರದಲ್ಲಿ ತೊಳೆಯುವ ನರಸಮ್ಮ ಕೂಡ ಗೋದಮ್ಮನ ಚಕ್ಕುಲಿಯನ್ನು ಕಷ್ಟಪಟ್ಟು ಜಗಿದು ಸವಿಯುತ್ತಾಳೆ. ಯಾವುದೋ ಕೀಳುಜಾತಿಯವಳಾದ ಅಥವಾ ಸ್ಪಷ್ಪವಾದ ಜಾತಿಯೆಂಬುದಿಲ್ಲದ ಚಿನ್ನು ಗೋದಮ್ಮನ ಚಕ್ಕುಲಿ ತಯಾರಿಯ ಕಾಯಕದಲ್ಲಿ ಅರೆವಾಸಿ ಪಾಲುದಾರಳು ಎಂದು ಬಹುಶ: ನರಸಮ್ಮನಿಗೆ ತಿಳಿದಿಲ್ಲ. ತಿಳಿದರೂ ಆ ಚಕ್ಕುಲಿಯನ್ನು ಗೋಮೂತ್ರದಲ್ಲಿ ಮುಳುಗಿಸಿ ತಿನ್ನುವುದಂತೂ ಅಸಾಧ್ಯವಾದ ಮಾತು. ಗೋದಮ್ಮನ ಚಕ್ಕುಲಿಯ ರುಚಿ ಅಂಥದು. ಅದಕ್ಕೆ ಅಮೃತ ಸಮಾನವಾದ ವಸ್ತುವನ್ನೇ ಬೆರೆಸಿದೂ ಅದರ ರುಚಿ ಕೆಡುವುದು ಖಂಡಿತ. ಅದನ್ನು ಅದನ್ನಾಗಿ ಮಾತ್ರವೇ ತಿಂದು ರುಚಿ ನೋಡಬೇಕು.

    ಗೋದಮ್ಮ ದೂರದ ಸಂಬಂಧದಲ್ಲಿ ನರಸಮ್ಮನಿಗೆ ಅತ್ತಿಗೆಯೆಂಬುದರಿಂದಲೂ ಎರಡು ವಾರಕ್ಕೊಂದಾವರ್ತಿ ನೂರು ಚಕ್ಕುಲಿಯನ್ನು ತಂದೊಪ್ಪಿಸಲೇಬೇಕೆಂಬ ಶ್ರೀಕಂಠನ ಕಟ್ಟಪ್ಪಣೆಯ ಕಾರಣದಿಂದಲೂ ಗೋದಮ್ಮ ಶ್ರೀಕಂಠನ ಮನೆಯನ್ನು ಆಗಾಗ ಸಂದರ್ಶಿಸುವ ಹೆಂಗಸು. ಹಾಗೆ ಸಂದರ್ಶಿಸಿದರೆ ಮಧ್ಯಾಹ್ನದ ಒಪ್ಪೊತ್ತು ಊಟ ಕೂಡ ಶ್ರೀಕಂಠನ ಮನೆಯಲ್ಲೇ. ನರಸಮ್ಮ ಮಾಡಿದ್ದೆಲ್ಲದಕ್ಕೂ ಆಕ್ಷೇಪವೆತ್ತುವ ಸುಮತಿ ಗೋದಮ್ಮ ಬಂದಾಗ ತನ್ನ ಘನತೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಅತ್ತೆಯನ್ನು ಗದರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಆದುದರಿಂದ ಮುದುಕಿಯರಿಬ್ಬರೂ ಮನೆಯ ಒಂದು ಮೂಲೆಯಲ್ಲಿ ಕುಳಿತು ಮೆಲ್ಲಮೆಲ್ಲಗಿನ ದನಿಯಲ್ಲಿ ತಮ್ಮ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಗೋದಮ್ಮ ಅರುವತ್ತು ದಾಟಿದವಳು, ನರಸಮ್ಮ ಎಪ್ಪತ್ತರ ಸಮೀಪದಲ್ಲಿರುವವಳು. ಇಬ್ಬರಿಗೂ ಹೇಳಿದರೆ ಹೇಳತೀರದಷ್ಟು, ನೆನಪಿಸಿಕೊಂಡರೆ ನೆನೆದು ಮುಗಿಯದಷ್ಟು ಕಣ್ಣೀರು ಸುರಿಸಿದರೆ ಸುರಿಸಿ ಮುಗಿಯದಷ್ಟು ಸಂಗತಿಗಳು ಇವೆ. ಇಬ್ಬರಲ್ಲಿ ಯಾರು ಎಷ್ಟು ಹೆಚ್ಚು ಸುಖಿ ಎನ್ನುವುದಕ್ಕಿಂತಲೂ ಇಬ್ಬರಲ್ಲಿ ಯಾರು ಹೆಚ್ಚು ದುಃಖಿ ಎಂದು ಕೇಳುವುದು ಹೆಚ್ಚು ಸಮಂಜಸ. ತನ್ನ ಹಿರಿಯ ಮಗ ಎಂದು ಊರಿಗೆ ಬರಲಿಲ್ಲ ಎಂಬ ನಿರೀಕ್ಷೆ, ಕಾತರ ಇನ್ನುಳಿದ ಆಯಸ್ಸನ್ನು ಅವನೊಂದಿಗೆ ಕಳೆಯಲೇಬೇಕೆಂಬ ಆಸೆ ನರಸಮ್ಮನದು. ಇನ್ನು ನಾಲ್ಕೈದು ವರ್ಷದಲ್ಲಿ ಬರುತ್ತಾನಲ್ಲ ಎಂಬ ಸಮಾಧಾನವೂ ಇದೆ. ಆದರೆ ಇನ್ನೂ ನಾಲ್ಕು ವರ್ಷ ಈ ದುರ್ಮತಿಯಾದ ಸೊಸೆ ಸುಮತಿಯ ಕಾಟವನ್ನು, ಹಿಂಸೆಯನ್ನು ತಾಳಿಕೊಂಡಿರಬೇಕಲ್ಲ ಎಂಬ ಬೇಗುದಿ, ದುಃಖ. ಶ್ರೀಕಂಠನಂತೂ ಹೆಂಡತಿಯ ಪುಂಗಿಯ ನಾದಕ್ಕೆ ತಕ್ಕಂತೆ ಕುಣಿಯುವವನು, ವಯಸ್ಸಾದ ತಾಯಿಯನ್ನು ಗಮನಿಸಿಕೊಳ್ಳುವ ವಿಶಾಲ ಹೃದಯ ಅವನಿಗಿಲ್ಲ. ಊರಿಗೆ ಅವನು ಮಹಾರಾಜ. ಅವನನ್ನು ಕಂಡರೆ ಬೆದರದವರೇ ಅಪೂರ್ವ. ಅವನ ಇಬ್ಬರು ಪುತ್ರರಾದ ತಾಂಡವ ಮತ್ತು ವೀರಭದ್ರರ ಮೂಲಕ ಅವನು ಯಾದವಗಿರಿಯಲ್ಲಿ ಏನೂ

    Enjoying the preview?
    Page 1 of 1