Discover millions of ebooks, audiobooks, and so much more with a free trial

Only $11.99/month after trial. Cancel anytime.

Ithihaasada Mogasaaleyalli
Ithihaasada Mogasaaleyalli
Ithihaasada Mogasaaleyalli
Ebook447 pages6 hours

Ithihaasada Mogasaaleyalli

Rating: 5 out of 5 stars

5/5

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200200370
Ithihaasada Mogasaaleyalli

Read more from K.T. Gatti

Related to Ithihaasada Mogasaaleyalli

Related ebooks

Reviews for Ithihaasada Mogasaaleyalli

Rating: 5 out of 5 stars
5/5

1 rating0 reviews

What did you think?

Tap to rate

Review must be at least 10 words

    Book preview

    Ithihaasada Mogasaaleyalli - K.T. Gatti

    http://www.pustaka.co.in

    ಇತಿಹಾಸದ

    ಮೊಗಸಾಲೆಯಲ್ಲಿ

    Ithihasada Mogasaaleyalli

    Author :

    ಕೆ. ಟಿ. ಗಟ್ಟಿ

    K T Gatti

    For more books :

    http://www.pustaka.co.in/home/author/kt-gatti

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೆ. ಟಿ. ಗಟ್ಟಿ

    ಇತಿಹಾಸದ ಮೊಗಸಾಲೆಯಲ್ಲಿ

    ಕೊನೆಯ ಪುಟದ ಬ್ಲರ್ಬ್

    ತಿಹಾಸದ ಮೊಗಸಾಲೆಯಲ್ಲಿ

    ರಾಬರ್ಟ್ ಕ್ಲೈವನಿಂದ ರಘುರಾಮಯ್ಯನ ವರೆಗೆ ಇತಿಹಾಸದ ಹೆಜ್ಜೆಗಳಲ್ಲಿ ಕಾಲಿಡುತ್ತಾ ಹೋದರೆ, ಬರೀ ಇತಿಹಾಸವೇ ಅಲ್ಲ, ಸಮುದ್ರವನ್ನು ಕಡೆದ ಸುರಾಸುರರನ್ನು, ಮೋಹಿನಿಯ ಬೆನ್ನಿಗೆ ಬಿದ್ದ ಭಸ್ಮಾಸುರರನ್ನು, ಮಗುವನ್ನು ಪೊದರಿನಲ್ಲೆಸೆದುಹೋದ ಮೇನಕೆಯರನ್ನು ದ್ರೌಪದಿಯ ಸೀರೆಯೆಳೆದ ದುಶ್ಯಾಸನರನ್ನು, ಶ್ರೀಕೃಷ್ಣನ ಹದಿನಾರು ಸಾವಿರ ಪ್ರೇಯಸಿಯರನ್ನು, ಇಂದ್ರ, ಚಂದ್ರ, ರಾಹು, ಕೇತುಗಳನ್ನು, ಎಂದೂ ಸಾಯದ ಚೋಮ, ಚುಕ್ರ, ಅಂಗಾರ, ಐತರನ್ನು ಕಾಣಬಹುದು,

    ಇತಿಹಾಸದ ಮೊಗಸಾಲೆಯಲ್ಲಿ ಕುಳಿತು. ಸವಿಯಬಹುದು, ವಿಷವನ್ನು ಮತ್ತು ಅಮೃತವನ್ನು ಜೊತೆಜೊತೆಯಾಗಿ.

    ಮುನ್ನುಡಿ

    ನಮ್ಮ ಜನತಂತ್ರದಲ್ಲಿ ರಾಜರಿಗೆ ಸಮನಾಗಿರುವ ಅಧಿಕಾರಸ್ಥ ರಾಜಕಾರಣಿಗಳು ನಡೆದುಕೊಳ್ಳುವ ರೀತಿ ನೋಡಿದರೆ, ಇವರು ಪುರಾಣದ ರಾವಣ, ಕಂಸ ಮುಂತಾದ ಶಾಪಗ್ರಸ್ಥ ಅಸುರರ ಸಂತತಿಯವರೇನೊ ಎನ್ನುವ ಸಂದೇಹ ಉಂಟಾಗುತ್ತದೆ. ಆ ಅಸುರರರಂತೆಯೇ ಇವರು ಕೂಡ ಒಂದು ದಿನ ಎದುರಾಗಲಿರುವ ದುರಂತದ ಕುರಿತು ಅದೃಷ್ಟವಾದಿಗಳಾಗಿರುವಂತೆ ತೋರುತ್ತದೆ.

    ಅಧಿಕಾರಸ್ಥರೊಡನೆ ತನಗೆ ಸಮಾನರಿಲ್ಲ, ತನ್ನಂಥ ಬುದ್ಧಿವಂತನಿಲ್ಲ ಎಂಬ ಭಾವ ಕೆಲವು ರಾಜಕಾರಣಿಗಳ ಮನಸ್ಸನ್ನು ಕವಿಯುತ್ತದೆ. ಅಧಿಕಾರ ಹೋದ ಮರುದಿನ ತಾವು ಸೃಷ್ಟಿಸಿರುವ ಪೊಳ್ಳು ಪ್ರತಿಷ್ಠೆಯ ಕಟ್ಟಡ ತಟ್ಟನೆ ಕುಸಿದು ತಮ್ಮ ಸ್ಥಿತಿ ಬೀದಿನಾಯಿಯ ಸ್ಥಿತಿಯಾಗುತ್ತದೆ ಎಂಬುದು ಅವರ ಅರಿವಿನಲ್ಲಿ ಮೂಡುವುದೇ ಇಲ್ಲ. ಜಾಣ ಮಾತಿನಡಿಯಲ್ಲಿ ನುಸುಳಿ ಜನರನ್ನು ಮಂಕುಮಾಡುವುದು ರಾಜಕಾರಣಿಯ ಶ್ರೇಷ್ಠ ಗುಣವೆಂದು ನಂಬಿರುವ ರಾಜಕಾರಣಿಯ ಬುದ್ಧಿವಂತಿಕೆಯ ಮಾತುಗಳನ್ನು ಅವನ ಅಧಿಕಾರ ಹೋದ ಮರುದಿನ ಕೇಳುವವರೇ ಇರುವುದಿಲ್ಲ. ತಮ್ಮ ಜಾಣ ಮಾತುಗಳು, ಮೌಲಿಕ ಮಾತುಗಳು-ಪತ್ರಿಕೆಯ ಮುಖಪುಟದಲ್ಲಿ ಮುದ್ರಿಸಲ್ಪಟ್ಟಾಗ ಇವರು ವಾಸ್ತವವನ್ನು ಮರೆಯುತ್ತಾರೆ. ಒಂದು ದಿನ, ಈ ಮಾತುಗಳನ್ನು ಮೆಚ್ಚಿಕೊಂಡ ಜನರೇ ಇವರ ಮುಖಕ್ಕೆ ಉಗುಳುತ್ತಾರೆ. ತೀರಾ ಸಾಮಾನ್ಯ ರಾಜಕಾರಣಿಯಿಂದ ಮಹಾ ಜನನಾಯಕರವರೆಗೆ ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು.

    ಅತಿ ಹತ್ತಿರದ ಕೆಲವು ಉದಾಹಾರಣೆಗಳು

    ಆಫ್ರಿಕದ ಬಡ ದೇಶಗಳಲ್ಲೊಂದಾದ ಇತಿಯೋಪಿಯಾದ ಹೈಲೆ ಸೆಲಾಸಿ ಮತ್ತು ಅವನ ಕುಟುಂಬದವರು ದೇಶವನ್ನು ತಮ್ಮ ಖಾಸಗಿ ಆಸ್ತಿಯೆಂಬಂತೆ ಭೋಗಿಸುತ್ತಿದ್ದರು. ಬಸ್ಸು ಸಾರಿಗೆ, ವಿಮಾನ ಸಾರಿಗೆ, ಬ್ಯಾಂಕುಗಳು, ಮಾತ್ರವಲ್ಲ, ಅಡಿಸ್‍ಅಬಾಬದ ದೊಡ್ಡ ದೊಡ್ಡ ಕಟ್ಟಡಗಳು ಕೂಡ ರಾಜಕುಟುಂಬದವರಿಗೆ ಸೇರಿದ್ದುವು. `ದೇವರಾಣೆ’ ಎನ್ನುವ ಬದಲು `ಹೈಲೆಸೆಲಾಸಿಯಾಣೆ’ ಎನ್ನುತ್ತಿದ್ದರು. ರಾಜ ಕುಟುಂಬದವರು ಯಾರಾದರೂ ಸತ್ತರೆ ದೇಶದ ಪ್ರತಿ ಕುಟುಂಬವೂ ಶೋಕಾಚರಣೆ ಮಾಡುತ್ತಿತ್ತು. ಮಾಡಲೇಬೇಕಾಗಿತ್ತು. ಲಕ್ಷಾಂತರ ಜನ ತಲೆಬೋಳಿಸಿಕೊಳ್ಳುತ್ತಿದ್ದರು. ಕಪ್ಪು ಉಡುಗೆ ಧರಿಸುತ್ತಿದ್ದರು. ಅಂಥ ಹೈಲೆಸೆಲಾಸಿ 1974ರಲ್ಲಿ ಪದಚ್ಯುತಿಗೊಂಡು, ಸೈನಿಕರು ಅವರನ್ನು ಸೆರೆಮನೆಗೊಯ್ಯುತ್ತಿರುವಾಗ ಆ ದಿಕ್ಕಿನಲ್ಲಿ ಉಗುಳಿ `ಶೋಷಕ!’ ಎಂದು ಜನ ಕರೆದರು. ಸೆರೆಮನೆಯಲ್ಲಿ ತನ್ನ ಎಪ್ಪತ್ನಾಲ್ಕನೇ ವರ್ಷದಲ್ಲಿ ಹೈಲೆಸೆಲಾಸಿ ಸತ್ತಾಗ `ಒಂದು ನಾಯಿ ಸತ್ತಿತು’ ಎಂದರು ಜನ! ಸ್ವದೇಶದಲ್ಲಿದ್ದ ರಾಜಕುಟುಂಬದವರನ್ನೆಲ್ಲ ಸೈನಿಕರು ಕೊಚ್ಚಿಹಾಕಿದರು.

    ಯಾವುದೇ ಶೋಷಕನ, ನಿರಂಕುಶ ಪ್ರಭುವಿನ ಅದೃಷ್ಟವೂ ಇದಕ್ಕಿಂತ ಭಿನ್ನವಾಗಿಲ್ಲ. ಅಡಾಲ್ಪ್ ಹಿಟ್ಲರ್, ಮುಸೊಲಿನಿ, ಇರಾನಿನ ಷಹಾ, ಬ್ರೆಜಿಲಿನ ಪೆರೋನ್, ಅರ್ಜೆಂಟೀನಾದ ಗಲ್ಟಿಯೇರಿ, ಯುಗಾಂಡದ ಇಡಿ ಅಮೀನ್, ಫಿಲಿಪೀನ್ಸ್‍ನ ಮಾರ್ಕೋಸ್, ರೋಮೇನಿಯಾದ ಚೆಸೆಸ್ಕು, ನೇಪಾಲದ ಬೀರೇಂದ್ರ ಇವರಿಗೆಲ್ಲ ಏನು ಸಂಭವಿಸಿತು? ಇವರು ಜನರ ಜೀವಗಳೊಡನೆ ಆಟವಾಡಿದರು. ಜನರ ಬೆವರಿನಿಂದ ಹುಟ್ಟಿದ ಸಂಪತ್ತನ್ನು ಕೂಡಿ ಹಾಕಿ ಅದರಲ್ಲಿ ಕ್ರೀಡಿಸಿದರು. ಇಡೀ ಬದುಕನ್ನು ಭಯದಲ್ಲೇ ಕಳೆದರು ಕೂಡಾ, ತಮ್ಮ ಅಧಿಕಾರ ಶಾಶ್ವತವಲ್ಲ ಎಂಬ ಅರಿವು ಅವರಿಗೆ ಉಂಟಾಗಲೇ ಇಲ್ಲ.

    ದಿನಕ್ಕೆ ಲಕ್ಷಗಟ್ಟಲೆ ರುಪಾಯಿ ಜನರ ಹಣವನ್ನು ಖರ್ಚು ಮಾಡುವ ಅಧಿಕಾರಸ್ಥ ರಾಜಕಾರಣಿಗಳಿಗೆ ಕೋಟಿಗಳು ಲಕ್ಷಗಳಂತೆಯೂ, ಲಕ್ಷಗಳು ಸಾವಿರಗಳಂತೆಯೂ ಕಾಣಿಸುತ್ತವೆ. ಹಣದಲ್ಲಿ ಎಲ್ಲಾ ಸ್ಥಾನಮಾನ ಮನ್ನಣೆ ಗಳಿಸಿಕೊಂಡು ಮೆರೆಯುವ ಇವರು ಅಧಿಕಾರ ಹೋದ ಬಳಿಕ ತಾವು ಮಾಡಿದ ಪಾಪವನ್ನು ನೆನೆಯುತ್ತಾ, ಯಾರಲ್ಲೂ ಹೇಳಿಕೊಳ್ಳಲಾಗದೆ ಒಳಗೊಳಗೇ ನರಕ ಅನುಭವಿಸುತ್ತಾರೆ. ಇವರ ಮಕ್ಕಳು ಇವರು ಗುಡ್ಡೆ ಹಾಕಿದ ಹಣದಲ್ಲಿ ಸ್ಥಾನಮಾನ ಅಧಿಕಾರ ಗಳಿಸಿಕೊಂಡೋ ಗಳಿಸಿಕೊಳ್ಳದೆಯೋ, ಸುಖ ವೈಭೋಗದ ನಷ್ಟ ಜೀವನ ನಡೆಸಿ ಬೇಗ ಸಾಯುತ್ತಾರೆ. ತಮ್ಮ ನಂತರದ ಸಂತತಿಗೆ ಇವರು ಕಟ್ಟಿಡುವ ಗಂಟು ಅವರಿಗೆ ವಿಷವಾಗಿ ಪರಿಣಮಿಸುತ್ತದೆ. ತಮ್ಮ ನಂತರ ತಮ್ಮ ಗದ್ದುಗೆಗೆ ತಮ್ಮ ಮಕ್ಕಳನ್ನು ತರಬಯಸುವ ಈ ರಾಜಕಾರಣಿಗಳಂಥ ಮೂರ್ಖರು ಬೇರೆ ಇರಲಿಕ್ಕಿಲ್ಲ. ಯಾಕೆಂದರೆ, ಇದಕ್ಕಾಗಿ ತಮ್ಮ ಇಡೀ ಜನ್ಮವನ್ನು ಇವರು ಕೆಡಿಸಿಕೊಳ್ಳುವುದಲ್ಲದೆ, ತಮ್ಮ ಮಕ್ಕಳ ಬಾಳನ್ನು ಕೂಡ ಕೆಡಿಸುತ್ತಾರೆ.

    ಇತಿಹಾಸದ ಸತ್ಯ

    ಜನನಾಯಕರಾದವರು ಮತ್ತು ಜನನಾಯಕರಾಗಬಯಸುವವರು ಎಲ್ಲಕ್ಕಿಂತ ಚೆನ್ನಾಗಿ ತಿಳಿದಿರಬೇಕಾದ್ದು ಇತಿಹಾಸವನ್ನು. ಆದರೆ ಇಂದು ರಾಜಕಾರಣಿಗಳು ಮತ್ತು ಆಡಳಿತ ಸೂತ್ರ ಹಿಡಿದವರ ಪೈಕಿ ಬಹುಮಂದಿ ಇತಿಹಾಸ ಎತ್ತಿ ತೋರಿಸಿದ ಸತ್ಯಗಳ ಕುರಿತು ಅಂಧರಾಗಿದ್ದಾರೆ. ಇತಿಹಾಸವನ್ನವರು ಓದಿರಬಹುದು; ಆದರೆ ಅದರಿಂದ ಅವರು ಪಾಠಗಳನ್ನು ಕಲಿತಿಲ್ಲ. ಕಾನೂನಿನಲ್ಲಿ ಪರಿಣತಿ, ವಾಕ್ಪಟುತೆ ರಾಜಕಾರಣದ ಕೋಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ತಾತ್ಕಾಲಿಕವಾಗಿ ಪ್ರಯೋಜನಕ್ಕೆ ಬರಬಹುದು. ಆದರೆ ಯಾವ ಕಾನೂನೂ ರಾಜಕಾರಣಿಗೆ ಒಂದು ದಿನ ರಕ್ಷಣೆಯನ್ನು ಒದಗಿಸಬಹುದೊ, ಅದೇ ಕಾನೂನು ಇನ್ನೊಂದು ದಿನ ಸಂಕೋಲೆಯಾಗಬಹುದು. ರಾಜಕಾರಣದ ಸುಭದ್ರ ಕೋಟೆಯೇ ಸೆರೆಮನೆಯಾಗಿ ಬದಲಾಗಬಹುದು. ಇತಿಹಾಸದುದ್ದಕ್ಕೂ ಇಂಥದು ಬಹಳ ಬಾರಿ ಆಗಿದೆ.

    ಈ ಐತಿಹಾಸಿಕ ಸತ್ಯ ರಾಜಕಾರಣಿಗಳಿಗೆ ಮಾತ್ರವೇ ಅಲ್ಲ. ಈ ದೇಶದ ಸುಮಾರು 50% ಸಂಪತ್ತನ್ನು ಹೊಂದಿರುವ, ಬಂಡವಾಳಶಾಹಿಗಳಿಗೂ ಅನ್ವಯಿಸುವಂಥದ್ದಾಗಿರುತ್ತದೆ. ಇವರು ಪೇರಿಸಿಡುವ ಸಂಪತ್ತಿನ ತಿಜೋರಿಗಳು ಸ್ವಲ್ಪ ಹೆಚ್ಚು ದಿನ ಉಳಿಯಬಹುದು. ಆದರೆ ಒಂದು ದಿನ ಈ ತಿಜೋರಿಗಳು ಒಡೆದೇ ತೀರುತ್ತವೆ. ಯಾಕೆಂದರೆ ಈ ಬಂಡವಾಳಶಾಹಿಗಳು ಪ್ರಸ್ತುತದಲ್ಲಿ ಈ ರಾಜಕಾರಣಿಗಳನ್ನು ಪೋಷಿಸುತ್ತಾ, ಅವರಿಂದ ರಚಿಸಲಾಗುವ ಅನುಕೂಲಕರ ಕಾನೂನುಗಳು ಮತ್ತು ಲೈಸನ್ಸುಗಳಡಿಯಲ್ಲಿ ತಮ್ಮನ್ನು ಬೆಳೆಸಿಕೊಳ್ಳುತ್ತಾ ತಾವು ಬೆಳೆಯುವುದು ಕೋಟಿಗಟ್ಟಲೆ ಜನರ ಶ್ರಮದ ಫಲದಲ್ಲಿ ಎಂಬುದನ್ನು ಮರೆಯುತ್ತಾರೆ. ಈಗ ಎರಡು ಸಾವಿರ ಇರುವ ಸರಾಸರಿ ತಲಾ ಆದಾಯ ಇಪ್ಪತ್ತು ಸಾವಿರ ಆದಾಗಲೂ ಬಡತನ ಇದ್ದೇ ಇರುತ್ತದೆ. ಈಗ ಎರಡು ಸಾವಿರ ಮತ್ತು ಎರಡು ಲಕ್ಷದ ನಡುವೆ ಇರುವ ಅಂತರ ಆಗ ಇಪ್ಪತ್ತು ಸಾವಿರ ಮತ್ತು ಇಪ್ಪತ್ತು ಲಕ್ಷದ ನಡುವೆ ಇರುತ್ತದೆ. ಈಗ ಇರುವ ಅಂತರಕ್ಕಿಂತ ಆಗ ಇರುವ ಅಂತರ ತುಲನೆಯಲ್ಲಿ ದೊಡ್ಡದಾಗಿರುತ್ತದೆ. ಸಿವಿಲ್‍ವಾರ್ ಎಂಬುದು ಹುಟ್ಟುವುದು ಈ ಅಂತರದಲ್ಲಿ. ಎಲ್ಲಾ ಸಿವಿಲ್‍ವಾರ್‍ಗಳ ತಳದಲ್ಲೂ ಈ ಅಂತರವೇ ಮುಖ್ಯ. ಇದು ನಮಗೆ ಬೇಡವೆಂದಾದರೆ ಈಗಲೇ ಬೆಳವಣಿಗೆಯ ರೀತಿಯನ್ನು ಬದಲಾಯಿಸಬೇಕು. ಆದರೆ ಅಡ್ಡಹಾದಿಯಿಂದ ಅಧಿಕಾರವನ್ನು ಅಥವಾ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣವನ್ನು ಸಂಪಾದಿಸುವ ರಾಜಕೀಯ ಮೂರ್ಖರಿಗೆ ಇತಿಹಾಸ ಪ್ರಜ್ಞೆಯಿಲ್ಲ. ಸ್ವಾರ್ಥದಲ್ಲಿ, ಸ್ವಹಿತ ಸಾಧನೆಯಲ್ಲಿ ಇವರು ಎಷ್ಟು ಮೈಮರೆತಿರುವರೆಂದರೆ, ನಾಳೆಯೇ ಬರಲಿರುವ ಅಪಾಯದ ಗಂಟೆ ಕೂಡ ಇವರಿಗೆ ಕೇಳಿಸುವುದಿಲ್ಲ. 

    ಬದಲಾಯಿಸುವವರು ಯಾರು?

    ರೂಸೊಗಳಿಂದ, ವಾಲ್ಟೈರ್‍ಗಳಿಂದ, ಲೋಹಿಯಾಗಳಿಂದ, ಎಂ. ಎನ್. ರಾಯ್‍ಗಳಿಂದ, ಜಯಪ್ರಕಾಶ್‍ಗಳಿಂದ ಈ ಕೆಲಸ ಆಗಬೇಕು. ಆದರೆ ಅವರು ಎಲ್ಲಿದ್ದಾರೆ?

    ಒಂದೋ ಅವರು ಮಂತ್ರಿ ಮಹೋದಯರುಗಳ ಮುಂದೆ ಬಗ್ಗಿ ನಿಲ್ಲುವ ದೊಡ್ಡ ಅಧಿಕಾರಿಗಳಾಗಿದ್ದಾರೆ. ಅಥವಾ ಮಂತ್ರಿಗಳಿಗೆ ಭಾಷಣ ಬರೆದುಕೊಡುವವರಾಗಿದ್ದಾರೆ. ಅಥವಾ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಎಮ್ಡಿಗಳಾಗಿದ್ದಾರೆ. ಅಥವಾ ವಿದೇಶದಲ್ಲಿ ತಮ್ಮ ಪ್ರತಿಭೆಯನ್ನು ಬಿಕರಿ ಮಾಡುತ್ತಿದ್ದಾರೆ. ಅಥವಾ ಮೂರ್ಖ ರಾಜಕಾರಣಿಗಳು ನೀಡಿದ ಸಮೀಪ ದೃಷ್ಟಿಯ ಆಕರ್ಷಕ ಯೋಜನೆಗಳನ್ನು ಪ್ರಶ್ನಿಸದೆ ಜಾರಿ ಮಾಡುತ್ತಿದ್ದಾರೆ.

    ಇವರನ್ನು ಆಕರ್ಷಿಸಿದ್ದು ಏನು? ದೊಡ್ಡ ಸಂಬಳ, ದೊಡ್ಡ ಮನೆ, ಕಾರು, ವಿದೇಶ ಪ್ರಯಾಣ, ಮಕ್ಕಳಿಗೆ ಮೇಲ್ಮಟ್ಟದ ಶಿಕ್ಷಣ, ಮೇಲ್ಮಟ್ಟದ ಹುದ್ದೆ ಮುಂತಾದವುಗಳು.

    ಸರಕಾರ ಸೃಷ್ಟಿಸಿದ ಪ್ರಶಸ್ತಿಗಳು ಮುಖ್ಯವಾಗಿ ಸರಕಾರವನ್ನು ಓಲೈಸುವವರಿಗಾಗಿಯೇ ಇರುತ್ತದೆ. ಭ್ರಷ್ಟ ರಾಜಕಾರಣಿಗಳಿಗೆ ಭಾಷಣ ಬರೆದು ಕೊಟ್ಟ ಬುದ್ಧಿವಂತರಿಗೆ ಕೂಡ ಈ ಪ್ರಶಸ್ತಿ ಕೊಡಲ್ಪಟ್ಟಿದೆ! ಭ್ರಷ್ಟ ಸರಕಾರದ ಸೇವೆ ಮಾಡಿದ ವಿಜ್ಞಾನಿಗಳಿಗೆ ಕೊಡಲಾಗಿದೆ. ಆದರೆ ಭ್ರಷ್ಟ ಸರಕಾರಕ್ಕೆ ತಲೆನೋವುಂಟುಮಾಡಿ ಸಮಾಜಕ್ಕೋಸ್ಕರ ಜೀವ ತೇದವರಿಗೆ ಕೊಡಲಾಗಿದೆಯೇ? ಅಂಥವರಿಗೆ ಪ್ರಶಸ್ತಿ ಕೊಡುವ ನೈತಿಕ ಧೈರ್ಯ ಕೂಡ ಸರಕಾರಕ್ಕಿಲ್ಲ.

    ಜೀವಂತ ಸಮಾಜದ ಒಂದು ಭಾಗವಾಗಿರುವ ಸ್ವಾಮೀಜಿಗಳು, ಬಾಬಾಗಳು ಕೂಡ ಪ್ರಶಸ್ತಿಯನ್ನು ಕೊಡುತ್ತಾರೆ. ಜಾತಿಭೇದ, ಮತಭೇದ, ಮೂಢನಂಬಿಕೆ, ಕಂದಾಚಾರಗಳನ್ನು ಪೋಷಿಸುವ ಜನರನ್ನು ಅಂತಃಕರಣಹೀನರನ್ನಾಗಿ, ನಿರ್ವೀರ್ಯರನ್ನಾಗಿ ಮಾಡುವ ಈ `ಸ್ವಾಮಿ’ ಗಳನ್ನು ಮನುಷ್ಯರೆಂದು ಕರೆಯುವುದೂ ಕಷ್ಟ! ಇಂಥವರು ಯಾರಿಗಾಗಿ ಪ್ರಶಸ್ತಿಯನ್ನು ಸೃಷ್ಟಿಸುತ್ತಾರೆ? ಇವರಿಗೆ ಬೀಸಣಿಗೆ ಹಿಡಿದವರಿಗೆ.

    ಒಂದು ಸಮಾಜದ ಪ್ರಗತಿಯನ್ನು, ಇಂಥ ಪ್ರಶಸ್ತಿಯನ್ನು ಪಡೆಯುವ ಬುದ್ಧಿವಂತರ ಪುಸ್ತಕಗಳಿಂದ, ಬರಹ, ಭಾಷಣಗಳಿಂದ ಅಳೆಯಲು ಸಾಧ್ಯವೆ? ಹೇಗೆ ಏರಿದ ಪರ್‍ಕೆಪಿಟ ಇಡೀ ದೇಶದ ಪ್ರಗತಿಯ ಮಾನದಂಡ ಅಲ್ಲವೊ, ಇಂಥ ಬುದ್ಧಿವಂತರ ಸಂಖ್ಯೆಯಲ್ಲಿ ಆದ ಹೆಚ್ಚಳ ಕೂಡ ಸಮಾಜದ ಸರ್ವತೋಮುಖ ಸಾಮಾಜಿಕ-ಸಾಂಸ್ಕತಿಕ ಪ್ರಗತಿಯ ಮಾನದಂಡ ಅಲ್ಲ. ಸಾವಿರಗಟ್ಟಲೆ ಸ್ವಾಮಿಗಳು ಮತ್ತು ಧರ್ಮ ಪಂಡಿತರು ಹುಟ್ಟುತ್ತಿದ್ದಾರೆ. ಈಗ ಅಷ್ಟೇ ಮಂದಿ ನಮ್ಮ ನಡುವೆ ಜೀವಿಸಿದ್ದಾರೆ. ಇಂಥವರಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಬದಲಾವಣೆ ಆಗುವುದು ಕೆಲವೇ ಮಂದಿ ಗಾಂಧಿ, ವಿವೇಕಾನಂದ, ಲೋಹಿಯಾ, ಜೆ. ಪಿ., ಅಂಬೇಡ್ಕರ್‍ರಂಥವರಿಂದ.

    ಇತಿಹಾಸದ ವೈಜ್ಞಾನಿಕ ಸಿದ್ಧಂತಗಳು

    ಇತಿಹಾಸ ತೋರಿಸಿ ಕೊಟ್ಟ ವೈಜ್ಞಾನಿಕ ಸತ್ಯಗಳನ್ನು ನಾವು ಅಭ್ಯಸಿಸಿದರೆ `ಹೀಗೆ ಮಾಡಿದರೆ ಹೀಗೆ ಆಗುತ್ತದೆ’ ಎಂಬ ಸಿದ್ಧಾಂತವನ್ನು ಮಾಡಿಕೊಳ್ಳಬಹುದು. ಇಂದು ಭಾರತದಲ್ಲಿ ಕಾಣಿಸಿಕೊಂಡಿರುವ ಮತ ಸಂಬಂಧಿ ವೈಷಮ್ಯವೇ ಇರಲಿ, ದಕ್ಷ್ಷಿಣ ಆಫ್ರಿಕದ ವರ್ಣಭೇದವೇ ಇರಲಿ, ಎಲ್ಲಾ ತಪ್ಪು ಹೆಜ್ಜೆಗಳ ಪರಿಣಾಮಗಳೇ ಆಗಿವೆ. ಮತ್ತು ಇವು ಒಂದು ಐತಿಹಾಸಿಕ ನಿರ್ಣಯದ ಕಡೆಗೆ ಸಾಗುತ್ತಿರುತ್ತವೆ.

    ಹಿಟ್ಲರನ ನ್ಯಾಟ್ಸಿಸಮ್, ಮುಸೊಲಿನಿಯ ಫ್ಯಾಸಿಸಮ್, ಚೈನಾದಲ್ಲಿ ಬಹುಕಾಲ ಅಮಲಿನಲ್ಲಿದ್ದ ಮಾವೊಇಸಮ್. ರಶ್ಯದಲ್ಲಿ ಬಹಳ ಕಾಲ ಸಫಲವೆಂದು ಪರಿಗಣಿಸಲಾದ ಅಮಾನವೀಯ ಸಮಾಜವಾದ ಹೇಗೆ ತಪ್ಪುದಾರಿಗಳಾಗಿದ್ದುವು ಎಂಬುದನ್ನು ನಾವು ಕಂಡಾಗಿದೆ. ಈಗ ಎಲ್ಲಿ ಈ ಬಗೆಯ ತಪ್ಪು ಧೋರಣೆಗಳನ್ನು ಅನುಸರಿಸಲಾಗುತ್ತದೆಯೋ ಅವುಗಳ ಪರಿಣಾಮವೂ ಇದೇ. ಯೆಹೂದ್ಯರನ್ನು ಮುಗಿಸಿಬಿಡಲು ಹಿಟ್ಲರನಿಂದಾಗಲಿಲ್ಲ. ಸಿಖ್ಖರನ್ನು ಅದುಮುವುದು, ಮುಸಲ್ಮಾನರನ್ನು ಅದುಮುವುದು, ಹಿಂದುಗಳನ್ನು ಅದುಮುವುದು ಯಾವುದೂ ಆಗುವುದಿಲ್ಲ. ಹಾಗೆ ಮಾಡುವುದರ ಪರಿಣಾಮ ಘೋರ. ಆದುದರಿಂದ ಬೇರೆಯೇ ದೃಷ್ಟಿಕೋನದಿಂದ ಚಿಂತಿಸಿ ಪರಿಹಾರ ಕಂಡುಹಿಡಿಯಬೇಕು. ಅಲ್ಲವಾದರೆ ಇತಿಹಾಸ ಮರುಕಳಿಸಲೇಬೇಕು. ಇದೇ ಇತಿಹಾಸದ ವೈಜ್ಞಾನಿಕ ಸಿದ್ಧಾಂತ. ಅಯರ್ಲೆಂಡ್ ಸಮಸ್ಯೆ, ಅಫಘಾನಿಸ್ತಾನ್ ಸಮಸ್ಯೆ ಇತ್ಯಾದಿಗಳನ್ನು ಪರಿಹರಿಸಲಾಗದಿರುವುದಕ್ಕೆ ಇತಿಹಾಸದ ವೈಜ್ಞಾನಿಕ ಸತ್ಯಗಳನ್ನು ಸ್ವೀಕರಿಸಿಕೊಳ್ಳದಿರುವುದೇ ಕಾರಣ. ಯುದ್ಧಗಳು ನೂರು ವರ್ಷ ನಡೆದುದಿದೆ. ಹಾಗಿದ್ದರೂ ಬಲ ಪ್ರಯೋಗದಿಂದ ಒಂದು ಸಮಸ್ಯೆಯನ್ನು ಪರಿಹರಿಸಬಹುದು ಎಂಬ ನಂಬಿಕೆಗೆ ಇತಿಹಾಸ ಪ್ರಜ್ಞೆಯಿಲ್ಲದಿರುವುದೇ ಕಾರಣ.

    ಮರೆತ ಧ್ವನಿಗಳು

    `ನಮಗೆ ದೊಡ್ಡ ಮಟ್ಟದ ಕೈಗಾರಿಕೆಗಳು ಬೇಡ’ ಎಂದರು ಗಾಂಧೀಜಿ. ಆದರೆ ಇಂದು ಭಾರೀ ಪ್ರಮಾಣದ ಅಣುಶಕ್ತಿ ಸ್ಥಾವರಗಳನ್ನು ನಿರ್ಮಿಸುವಷ್ಟರ ಮಟ್ಟಿಗೆ ನಮ್ಮ ಸರಕಾರ ಮುಂದರಿದಿದೆ. ಅಣುಶಕ್ತಿ ಸ್ಥಾವರಗಳಿಂದುಂಟಾದ ಭೀಕರ ದುರಂತಗಳನ್ನು ಕಂಡೂ ಸರಕಾರ ಪಾಠ ಕಲಿಯಲಿಲ್ಲ. ಅಣುಸ್ಥಾವರದ ಆಯುಷ್ಯ ಎಷ್ಟೆಂಬುದು ಬಹಳ ಸ್ಪಷ್ಟವಿದೆ. ಆ ಬಳಿಕ ನಾವು ಇಂದು ಅದು ಕೊಟ್ಟ ಸುಖದ ಸಾವಿರ ಪಾಲು ಘೋರವಾದ ದುಃಖದ ಕೂಪಕ್ಕೆ ಬೀಳುತ್ತೇವೆ ಎಂದು ತಿಳಿದಿದ್ದರೂ ಸರಕಾರದ ಪ್ರಭುಗಳು ಕಣ್ಣುಮುಚ್ಚಿಕೊಂಡಿದ್ದಾರೆ. ಎಲ್ಲರಿಗೂ ಇಂದಿನ ಸುಖ ಮಾತ್ರ ಮುಖ್ಯವಾಗಿದೆ. ಹೆಚ್ಚೆಂದರೆ ಮಕ್ಕಳ ಸುಖದವರೆಗೆ ಮಾತ್ರ ಯೋಚನೆ, ಯೋಜನೆ. ಆದರೆ ದುರಂತ ಮಕ್ಕಳಿಗೆ ಕೂಡ ದಕ್ಕದಷ್ಟು ಹತ್ತಿರದಲ್ಲಿದೆ.

    ಅಣುವಿಷ ಎಲ್ಲರ ಜೀವದ ಹತ್ತಿರ ಹತ್ತಿರಕ್ಕೆ ಬರುತ್ತಿದೆ. ಶ್ರೀಮಂತ ರಾಷ್ಟ್ರಗಳು ಅಣುವಿಷವನ್ನು ಬಡ ರಾಷ್ಟ್ರಗಳಿಗೆ ರವಾನಿಸುತ್ತವೆ ಎಂಬ ಕೂಗೆದ್ದಿದೆ. ನಮ್ಮ ಪ್ರಭುಗಳಿಗೆ ಅದು ಕೇಳಿಸುವುದಿಲ್ಲ! ಯುರೋಪಿನಿಂದ ಯುರೇನಿಯಮ್ ಭಾರತಕ್ಕೆ ಕಳ್ಳಸಾಗಾಣಿಕೆಯಾಗುತ್ತಿದೆ. ವಾಸ್ತವದಲ್ಲಿ ಇದು ಕಳ್ಳ ಸಾಗಾಣಿಕೆಯಲ್ಲ! ಸುಳ್ಳು ಹೆಸರಿನಡಿಯಲ್ಲಿ ನೇರ ಸಾಗಾಣಿಕೆ! ಭಾರತದಲ್ಲಿ ಕಂಡ ಕಂಡಲ್ಲಿ ಅಣುಶಕ್ತಿ ಸ್ಥಾವರಗಳನ್ನು ಸ್ಥಾಪಿಸಲು ವಿದೇಶಿ ಸರಕಾರಗಳು ಆಸಕ್ತವಾಗಿವೆ. ಇದರಿಂದ ಅವರಿಗೆ ಹಲವು ಬಗೆಯ ಲಾಭ! ತಮ್ಮನ್ನು ಕೊಲ್ಲಲು ಸಿದ್ಧವಾಗಿರುವ ವಿಷವನ್ನು ಬೇರೆ ಕಡೆಗೆ ರವಾನಿಸುವುದು, ಮಾತ್ರವಲ್ಲ, ಅದನ್ನು ಮಾರಾಟ ಮಾಡುವುದು! (ಪುಕ್ಕಟೆಯಾಗಿ ಕೊಟ್ಟರೆ ವಿಷವೆಂಬ ಸಂದೇಹ ಬರಬಹುದೆಂದು!) ರಶ್ಯ ಮತ್ತು ಅಮೆರಿಕದಷ್ಟೇ ಬಲಶಾಲಿಯಾಗಿ ಇನ್ನು ಹತ್ತು-ಹದಿನೈದು ವರ್ಷಗಳಲ್ಲಿ ಒಂದು `ಸೂಪರ್ ಪವರ್’ ಆಗಲಿರುವ ಭಾರತವನ್ನು ಹಾಗಾಗದಂತೆ ಮಾಡುವುದು!

    ಆದರೆ ಸ್ವಾರ್ಥ ಸಾಧನೆಯಲ್ಲಿ ಮುಳುಗಿರುವ ರಾಜಕಾರಣಿಗಳಿಗೆ ಇತಿಹಾಸವನ್ನು, ಪ್ರಸ್ತುತ ವಿದ್ಯಮಾನವನ್ನು ವಿಶ್ಲೇಷಿಸುವ ಪ್ರಜ್ಞೆ ಇದೆಯೆ? ಅವರು ಮಾಡುವುದಿಲ್ಲವೆಂದಾದರೆ, ಯಾರಾದರೂ ಇದನ್ನು ಮಾಡಲೇಬೇಕು. ಇಲ್ಲವಾದರೆ, ಬೇಗನೆ ನಾವೆಲ್ಲ ಸುಟ್ಟು ಬೂದಿಯಾಗುತ್ತೇವೆ. ಅರ್ಧ ಭಾರತವನ್ನು ಒಂದೇ ದಿನದಲ್ಲಿ ಹೊತ್ತಿ ಉರಿಸುವಷ್ಟು ಅಗ್ನಿಕುಂಡಗಳು ಸಿದ್ಧವಾಗುತ್ತಿವೆ!

    ಬದಲಾಗುತ್ತಿರುವ ಶ್ರಮಿಕ ವರ್ಗ

    ವರಮಾನದ ಆಧಾರದಲ್ಲಿ ಕಾರ್ಮಿಕರನ್ನು ಸಾಮಾನ್ಯ ಕಾರ್ಮಿಕರು ಮತ್ತು ಕುಶಲ ಕಾರ್ಮಿಕರು ಎಂದು ವಿಂಗಡಿಸುವುದಾದರೆ, ಬೌದ್ಧಿಕ ಕೆಲಸಗಾರರನ್ನು ಅಧಿಕ ವರಮಾನದವರು ಮತ್ತು ಸಾಮಾನ್ಯ ವರಮಾನದವರು ಎಂದು ಎರಡು ವಿಭಾಗಗಳನ್ನು ಮಾಡಬಹುದು. ಸಾಮಾನ್ಯ ವರಮಾನ ಎಂದರೆ ತಿಂಗಳಿಗೆ ಸಾವಿರದೈನೂರರಿಂದ ಎರಡು ಸಾವಿರದೈನೂರರವರೆಗೆ ಎಂದಿಟ್ಟುಕೊಂಡರೆ ಈ ಸಂಬಳವನ್ನು ಒಬ್ಬ ದಿನಗೂಲಿ ಶ್ರಮ ಜೀವಿಯ ಗಳಿಕೆಯೊಡನೆ ಹೋಲಿಸಿದಾಗ ಭಾರೀ ವ್ಯತ್ಯಾಸವೇನೂ ಕಾಣಿಸುವುದಿಲ್ಲ.

    ಒಬ್ಬ ಉತ್ತಮ ಕೂಲಿಕಾರ ದಿನಕ್ಕೆ ಮೂವತ್ತು ರುಪಾಯಿ ಗಳಿಸಿದರೆ ಅದು ತಿಂಗಳಿಗೆ ಒಂಬೈನೂರು ರುಪಾಯಿ ಆಗುತ್ತದೆ. ಬೌದ್ಧಿಕ ಉದ್ಯೋಗಿಗಿಂತ ಕೂಲಿಕಾರನ ದಿನವಹಿ ಖರ್ಚು ಕಡಿಮೆ. ಸಾಮಾನ್ಯವಾಗಿ, ಕೆಲಸದ ಜಾಗದಲ್ಲಿ ಅವನಿಗೆ ಒಂದು ಹೊತ್ತಿನ ಊಟ, ಕಾಫಿ, ತಿಂಡಿ ಸಿಗುತ್ತದೆ. ಇದರ ಮೌಲ್ಯ ಕಡಿಮೆಯೆಂದರೆ ದಿನಕ್ಕೆ ಐದಾರು ರುಪಾಯಿ ಆಗಬಹುದು.

    ಆದರೆ ಬಹುತೇಕ ಕೂಲಿಕಾರರಿಗೆ ಒಂದು ಬಗೆಯ ಕೀಳರಿಮೆಯಿದ್ದು, ತಾವು ಸಾಮಾಜಿಕ ಸ್ಥಾನ ಮಾನವಿಲ್ಲದವರು ಎಂದು ತಮ್ಮನ್ನು ತಾವೇ ಪರಿಗಣಿಸುವುದರಿಂದ ಕೆಲವು ದುಶ್ಚಟಗಳಲ್ಲಿ (ಮುಖ್ಯವಾಗಿ, ಕುಡಿತ) ಹಣ ವ್ಯಯಿಸುತ್ತಾರೆ. ಬಡಗಿ, ಮೇಸ್ತ್ರಿ, ಪೈಂಟರ್, ಡ್ರೈವರ್, ದರ್ಜಿ, ಕ್ಷೌರಿಕ ಮುಂತಾದ ಕುಶಲ ಕಾರ್ಮಿಕರ ದಿನವಹಿ ಸಂಪಾದನೆ 50 ರುಪಾಯಿಯವರೆಗೂ ಇದ್ದು, ಇವರು ಬೌದ್ಧಿಕ ಉದ್ಯೋಗಿಗಳಿಗಿಂತ ಹೆಚ್ಚು ಗಳಿಸುತ್ತಾರೆ.

    ಒಂದು ಊರಿನಲ್ಲಿರುವ ಬೌದ್ಧಿಕ ಉದ್ಯೋಗಿಗಳ ಸಂಖ್ಯೆಗೆ ಹೋಲಿಸಿದರೆ, ಸಾಮಾನ್ಯ ಕಾರ್ಮಿಕರು ಮತ್ತು ಕುಶಲ ಕಾರ್ಮಿಕರ ಒಟ್ಟು ಸಂಖ್ಯೆ ತುಂಬಾ ದೊಡ್ಡದು. ಹಲವು ವಿಚಾರದಲ್ಲಿ, ಬ್ಯಾಂಕು ಉದ್ಯೋಗಿಗಳು, ಸರಕಾರಿ ಕಚೇರಿ ಉದ್ಯೋಗಿಗಳು, ಅಧ್ಯಾಪಕರು, ಪ್ರಾಧ್ಯಾಪಕರುಗಳಿಗೆ ಹೋಲಿಸಿದರೆ ಕಾರ್ಮಿಕರ ಸ್ಥಿತಿಯೇ ಮೇಲು. ಯಾಕೆಂದರೆ, ತಿಂಗಳು ಸಂಬಳದ ಉದ್ಯೋಗಿಗಳಲ್ಲಿ ನೂರರಲ್ಲಿ ತೊಂಬತ್ತು ಮಂದಿಯೂ ಬಾಡಿಗೆ ಮನೆಯಲ್ಲಿ ವಾಸಿಸುವವರಾಗಿರುತ್ತಾರೆ. ಆಗಾಗ ವರ್ಗಾವಣೆಯ ಬವಣೆಗೊಳಗಾಗುವವರಾಗಿರುತ್ತಾರೆ. ಕಾರ್ಮಿಕ ವರ್ಗದಲ್ಲಿ ಹೆಚ್ಚಿನವರು ತಮ್ಮ ಸ್ವಂತ ಊರಿನಲ್ಲಿ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದು ಉಪವೃತ್ತಿಗಳಿಂದಲೂ ಗಳಿಸುತ್ತಾರೆ. ಈ ವರ್ಗದ ದುಡಿಮೆಗಾರರು (ಕೃಷಿಕರೂ ಸೇರಿದಂತೆ) ವೃತ್ತಿಗೌರವವನ್ನು ಹೊಂದಿ, ದುಶ್ಚಟಗಳಿಗೆ ಬಲಿಬೀಳದೆ, ಉಪವೃತ್ತಿ ನಡೆಸಿ ತಮ್ಮ ಗಳಿಕೆಯನ್ನು ಹೆಚ್ಚಿಸಿಕೊಂಡರೆ ಈ ದೇಶದ ಚರಿತ್ರೆ ಬದಲಾಗುತ್ತದೆ. ದೇಶದ ಕೆಲವು ಮುಂದುವರಿದ ಭಾಗಗಳಲ್ಲಿ ಈಗಾಗಲೇ ಈ ಬದಲಾವಣೆ ಆಗತೊಡಗಿದೆ. ಇದಕ್ಕೆ ಇನ್ನಷ್ಟು ಉತ್ತೇಜನ ದೊರೆತರೆ, ಕೆಲವೇ ವರ್ಷಗಳಲ್ಲಿ ದೇಶದ ಆರ್ಥಿಕ ಸಾಮಾಜಿಕ ಸ್ಥಿತಿ ಬದಲಾಗುತ್ತದೆ. ಕಮ್ಯೂನಿಸಮ್ಮಿನ ಅಗತ್ಯವಿಲ್ಲದೆ ಒಂದು ವಿಶಿಷ್ಟವಾದ ಆರ್ಥಿಕ ಸಾಮಾಜಿಕ ಪರಿವರ್ತನೆ ಉಂಟಾಗುವುದು ಅಸಂಭವವೇನಲ್ಲ. ಕಳೆದ ಅರುವತ್ತು ವರ್ಷಗಳ ಅವಧಿಯಲ್ಲಿ ರಶ್ಯದಲ್ಲಿ ಆದ ಅತ್ಯಂತ ಗಮನೀಯವಾದ, ಅತ್ಯಂತ ಸುಂದರವಾದ ಬದಲಾವಣೆಯೆಂದರೆ ಇದೇ.

    ನಮ್ಮ ದೇಶದಲ್ಲಿ ಇಂಥ ಬದಲಾವಣೆಗೆ ಇರುವ ಒಂದೇ ಒಂದು ಅಡ್ಡಿ ಎಂದರೆ ಕಾರ್ಮಿಕ ವರ್ಗದ ನಿರಕ್ಷರತೆ ಮತ್ತು ಈ ನಿರಕ್ಷರತೆಗೆ ತಳಕು ಹಾಕಿಕೊಂಡಿರುವ ಹಲವು ಬಗೆಯ ಅಜ್ಞಾನಗಳು, ಮೂಢನಂಬಿಕೆಗಳು, ಭಯಗಳು ಇತ್ಯಾದಿ.

    ಸಂಪಾದನೆಯನ್ನು ತುಲನೆ ಮಾಡಿ ನೋಡಿದರೆ ಒಬ್ಬ ಸಾಮಾನ್ಯ ಡಾಕ್ಟರನ, ಇಂಜಿನಿಯರನ ಅಥವಾ ಟೆಕ್ನೀಶಿಯನನ ಸಂಬಳಕ್ಕೂ ಒಬ್ಬ ಸ್ಕಿಲ್ಡ್ ಕಾರ್ಮಿಕನ ಗಳಿಕೆಗೂ ಹೆಚ್ಚಿನ ವ್ಯತ್ಯಾಸ ತೋರದ ಸ್ಥಿತಿ ಬಹಳ ಬೇಗನೆ ಉಂಟಾಗುತ್ತದೆ. ಒಂದು ಚಿಕ್ಕ ಪಟ್ಟಣದಲ್ಲಿರುವ ಇಬ್ಬರು ಡಾಕ್ಟರುಗಳು ತಿಂಗಳಿಗೆ ತಲಾ 3000 ರುಪಾಯಿ ಸಂಪಾದಿಸಿದರೆ, ಅದೇ ಊರಿನಲ್ಲಿರುವ ಇಬ್ಬರು ಕಮ್ಮಾರರು ವರ್ಷದಲ್ಲಿ ಎಂಟು ತಿಂಗಳು ಪ್ರತಿ ತಿಂಗಳು ತಲಾ 4000 ರುಪಾಯಿ ಗಳಿಸುತ್ತಾರೆ!

    ರಶ್ಯದಲ್ಲಿ ಆದ ಬದಲಾವಣೆ

    ರಶ್ಯದ 15 ಮಿಲಿಯನ್ ಇಂಜಿನಿಯರುಗಳು ಮತ್ತು ತಾಂತ್ರಿಕಜ್ಞರ ಪೈಕಿ ಸುಮಾರು 3 ಮಿಲಿಯನ್ ಇಂಜಿನಿಯರುಗಳು ಮತ್ತು ತಾಂತ್ರಿಕಜ್ಞರು ಸಾಮಾನ್ಯ ಕಾರ್ಮಿಕ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಇಂಜಿನಿಯರುಗಳ ಉತ್ಪಾದನೆ, ಅಪರಿಪೂರ್ಣ ತರಬೇತಿ ಇದಕ್ಕೆ ಒಂದು ಕಾರಣವಾಗಿದೆ. ಅಲ್ಲದೆ, ಸಾಮಾನ್ಯ ಕೆಲಸಗಾರನ ಸಂಪಾದನೆಯು ಇಂಜಿನಿಯರನ ಸಂಪಾದನೆಗಿಂತ ಹೆಚ್ಚಿರುವುದೇ ಇದಕ್ಕೆ ಕಾರಣ. ಬೌದ್ಧಿಕ ಶ್ರಮಜೀವಿಗಳ ಪಟ್ಟಿಯಲ್ಲಿ ಇಂಜಿನಿಯರುಗಳನ್ನು ಸೇರಿಸಿದರೆ, ಇಂಜಿನಿಯರುಗಳ ಸ್ಥಾನವು ಅತ್ಯಂತ ಕೆಳಗಿನದ್ದಾಗಿರುತ್ತದೆ. ಇದು ತಟ್ಟನೆ ಆದ ಬದಲಾವಣೆಯೇನೂ ಅಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಬದಲಾವಣೆ ಆಗುತ್ತಿದೆ. ಕೆಲವು ಸಾಮಾನ್ಯ ಶ್ರಮದ ಕೆಲಸಗಳು ಮೇಲ್ಮಟ್ಟದ್ದೆಂದು ಪರಿಗಣಿಸಲಾದ ಕೆಲವು ಬೌದ್ಧಿಕ ಉದ್ಯೋಗಗಳಿಗಿಂತ ಹೆಚ್ಚು ಸಂಬಳವನ್ನು ತರುತ್ತವೆ. ನಿಜವಾದ ಉತ್ಪಾದನಾ ಉದ್ಯೋಗವೇ ಜೀವನಾವಶ್ಯಕ ಸಾಮಾಗ್ರಿಗಳನ್ನು ತರುತ್ತದೆ ಎಂಬ ವಾಸ್ತವವನ್ನು ಎಲ್ಲರೂ ಮನವರಿಕೆ ಮಾಡಿಕೊಂಡುದರಿಂದ, ಶ್ರಮದ ದುಡಿಮೆಯು ಹೆಚ್ಚು ಮಾನ್ಯತೆಯುಳ್ಳದ್ದೂ ಹೆಚ್ಚು ಸಂಬಳವನ್ನು ತರುವಂಥದ್ದೂ ಆಗಿ ಬದಲಾಗಿದೆ.

    ನಮ್ಮಲ್ಲಿ ಹತ್ತಿರದ ಭವಿಷ್ಯದಲ್ಲಿ

    ಇನ್ನು ಸುಮಾರು 15-20 ನಮ್ಮ ದೇಶದಲ್ಲಿ ಒಬ್ಬ ಸಾಮಾನ್ಯ ಡಾಕ್ಟರ್ ಅಥವಾ ಇಂಜಿನಿಯರ್ ಆಗುವುದಕ್ಕಿಂತ ಒಬ್ಬ ಕೃಷಿಕ ಕಾರ್ಮಿಕನೊ, ಬಡಗಿಯೊ, ಮೇಸ್ತ್ರಿಯೊ ಆಗುವುದು ಹೆಚ್ಚು ಒಳ್ಳೆಯದು ಎಂಬ ಪರಿಸ್ಥಿತಿ ನಿರ್ಮಾಣವಾಗಬಹುದು. ಗಳಿಕೆಯ ಅಂಶವನ್ನು ಗಮನಕ್ಕೆ ತೆಗೆದುಕೊಂಡು ನೋಡಿದರೆ, ಈಗಾಗಲೇ ಎಷ್ಟೋ ಡಾಕ್ಟರುಗಳಿಗಿಂತ ಒಳ್ಳೆಯ ಬಡಗಿ, ದರ್ಜಿ, ಕ್ಷೌರಿಕ, ಮೇಸ್ತ್ರಿ ಮುಂತಾದವರು ಹೆಚ್ಚು ಗಳಿಸುತ್ತಾರೆ ಎಂಬುದು ಒಂದು ವಾಸ್ತವ. ಒಂದು ಊರಿನಲ್ಲಿ ಒಬ್ಬರೋ ಇಬ್ಬರೋ ಡಾಕ್ಟರಿದ್ದರೆ, ಇಂಥ ಕುಶಲಕಾರ್ಮಿಕರ ಸಂಖ್ಯೆ ನೂರಕ್ಕೆ ಮಿಕ್ಕಿ ಇರಬಹುದು. ಆದರೂ ಇವತ್ತು ಡಾಕ್ಟರ್, ಇಂಜಿನಿಯರ್, ಬ್ಯಾಂಕು ಉದ್ಯೋಗಿ ಮುಂತಾದವರಿಗೆ ಇರುವ ಪ್ರತಿಷ್ಠೆ ಕುಶಲಕಾರ್ಮಿಕನಿಗಿಲ್ಲ. ಆದರೆ ಕುಶಲಕಾರ್ಮಿಕರು ಒಳ್ಳೆಯ ವಿದ್ಯಾವಂತರಾಗಿ, ಗಳಿಸಿದುದನ್ನು ಉಳಿಸಿಕೊಂಡು ಮನೆ ಕಟ್ಟಿಸಿಕೊಂಡು ಕಾರಿನಲ್ಲಿ ಓಡಾಡತೊಡಗಿದರೆ ಸಮಾಜದಲ್ಲಿ ಬದಲಾವಣೆ ಉಂಟಾಗುತ್ತದೆ.

    ಅಧಿಕ ವರಮಾನ

    ಬಡಗಿ, ದರ್ಜಿ, ಮೇಸ್ತ್ರಿ ಮುಂತಾದವರ ಉದ್ಯೋಗ ಎಂದಿಗೂ ತಮ್ಮ ಉದ್ಯೋಗಕ್ಕೆ ಸಮನಾಗಲಾರದು ಎಂದು ಒಬ್ಬರು ಡಾಕ್ಟರು ವಾದಿಸುತ್ತಾರೆ. ಬಹುಶಃ ದೊಡ್ಡ ಸಂಬಳದ ಬಹಳ ಉದ್ಯೋಗಸ್ಥರ ವಾದವೂ ಇದೇ ಆಗಿರಬಹುದು. ರಸ್ತೆಯ ಮೇಲೆ ಕಾರಿನಲ್ಲಿ ಚಲಿಸುವಾತ ಮತ್ತು ಆ ರಸ್ತೆಗೆ ಡಾಮರು ಬಳಿಯುವ ಕಾರ್ಮಿಕ ಸಮಾನರೆಂದು ತಿಳಿಯಬೇಕು. ಮನುಷ್ಯ ಏನಾಗುತ್ತಾನೊ ಅದರ ಹಿಂದೆ ಆರ್ಥಿಕ, ಸಾಮಾಜಿಕ ಸನ್ನಿವೇಶದ ಪ್ರಭಾವ ಇರುತ್ತದೆ. ಸಮಾಜವೆಂಬ ಯಂತ್ರದ ಸಣ್ಣ ದೊಡ್ಡ ಚಕ್ರಗಳಾಗಿ, ಸ್ಕ್ರೂಗಳಾಗಿ ಬೋಲ್ಟುಗಳು ನಟ್ಟುಗಳಾಗಿ ಮನುಷ್ಯ ರೂಪ ತಾಳುವುದು ಸಾಮಾಜಿಕ ಅಗತ್ಯಕ್ಕನುಸಾರವಾಗಿಯಲ್ಲದೆ, ಆತನ ಅದೃಷ್ಟದ ಕಾರಣದಿಂದಲ್ಲ. ಯಾವುದೋ ಉದ್ಯೋಗದ ಕಾರಣದಿಂದ ತಾನು ಮೇಲು, ಮತ್ತೊಬ್ಬ ಕೀಳು ಎಂದು ಮನಷ್ಯ ಭಾವಿಸುವುದಾದರೆ ಅದು ಆತನ ಒಳಗಿನ ದೃಷ್ಟಿಯ ದೋಷವೆನ್ನಬೇಕಾಗುತ್ತದೆ. ಇದು ಕಮ್ಯುನಿಸಮ್, ಸೋಶಿಯಲಿಸಮ್ ಇತ್ಯಾದಿಗಳಿಗೆ ಸಂಬಂಧಿಸಿದ ವಾದವೇನೂ ಅಲ್ಲ. ಇದು ಮಾನವೀಯತೆಗೆ ಸಂಬಂಧಿಸಿದ ವಿಚಾರ.

    ಕಮ್ಯುನಿಸಮ್ಮಿನ ಸೋಲು ಎಂದರೆ ಬಂಡವಾಳಶಾಹಿಯ ಗೆಲುವು ಎಂದು ಬಂಡವಾಳಶಾಹಿ ಭ್ರಮಿಸತೊಡಗಿದೆ! ಆದರೆ ಇದು ಬಂಡವಾಳಶಾಹಿಯ ಗೆಲುವಲ್ಲ. ಇದು ಮತ್ತೊಂದು ಆರ್ಥಿಕ-ಸಾಮಾಜಿಕ ತಿರುವಿನ ಆರಂಭ. ಉಳ್ಳವರು ಶೇಕಡಾ 10 ಅಥವಾ 20. ಇಲ್ಲದವರು ಶೇಕಡಾ 80 ಅಥವಾ 90. ಇಂಥ ಸನ್ನಿವೇಶದಲ್ಲಿ ಬಂಡವಾಳಶಾಹಿಯ ಗೆಲುವು ಹೇಗೆ ಸಾಧ್ಯ? ಶ್ರೀಮಂತ ವಣಿಕರು, ಉದ್ಯಮಿಗಳು, ಅಧಿಕಾರಿಗಳು ತಮ್ಮನ್ನು ಸುಲಿಯುತ್ತಿದ್ದಾರೆ ಎಂಬುದು ಜನಕ್ಕೆ ತಿಳಿದಿದೆ. ವರ್ಷದಿಂದ ವರ್ಷಕ್ಕೆ ಆಡಳಿತ ವೆಚ್ಚ ಏರುತ್ತಿದೆ, ಕೋಟಿಗಟ್ಟಲೆ ರುಪಾಯಿ `ಆಫೀಸುಗಳು’ ತಿಂದು ಹಾಕುತ್ತವೆ ಮತ್ತು ಅದು ಅನಗತ್ಯ ವ್ಯಯ ಎಂದು ಜನಕ್ಕೆ ತಿಳಿದಿದೆ. ಒಂದು ಸೇವೆಗೆ ಅಥವಾ ಸಾಮಾಗ್ರಿಗೆ ತಾವು ತೆರುವ ಬೆಲೆಯಲ್ಲಿ ಅರ್ಧಕ್ಕಿಂತ ಹೆಚ್ಚು ಬಂಡವಾಳಶಾಹಿಯ ಮತ್ತು ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ ಎಂಬ ಅರಿವು ಉಂಟಾಗಿದೆ. `ಕಮ್ಮೂನಿಸಮ್ಮಿನಲ್ಲಿ ಉತ್ಪಾದನೆಗಾಗಿ ಸಂಘಟನೆ’ ಈಗ ಜನಕ್ಕೆ ಬೇಕಾಗಿರುವುದು ಅಂಥ ಸಂಘಟನೆಯಲ್ಲ. ಉತ್ಪಾದನೆ ಉದ್ಯಮಿಗಳ ಮತ್ತು ಸರಕಾರದ ನಿಯಂತ್ರಣದಲ್ಲಿದೆ. ಆದುದರಿಂದ ಈಗ ಜನ ಯೋಚಿಸುತ್ತಿರುವುದು ಬಳಕೆಯಲ್ಲಿ ಸಂಘಟನೆ ತನ್ಮೂಲಕ ಉತ್ಪಾದನೆ ಮತ್ತು ವಿತರಣೆಯನ್ನು ನಿಯಂತ್ರಿಸುವ ಸಂಘಟನೆ. ಕಮ್ಮೂನಿಸಮ್ಮಿಗೆ ಕ್ಯಾಪಿಟಲಿಸಮ್ಮನ್ನು ಸೋಲಿಸಲಾಗಲಿಲ್ಲ. ಒಂದು ದಿನ, ಅದು ಸಾಧ್ಯವಾಗುವುದು ಕನ್ಸ್ಯೂಮರಿಸಮ್ಮಿನಿಂದ. ಮಧ್ಯಮವರ್ಗದ, ಮೇಲು ವರ್ಗದ ಕನ್‍ಸ್ಯೂಮರುಗಳಿಂದಲ್ಲ. ಬಡ ಕನ್‍ಸ್ಯೂಮರುಗಳಿಂದ.

    ತಿಂಗಳಿಗೆ ನಾಲ್ಕು ಸಾವಿರದಿಂದ ಮೇಲೆ ಹತ್ತು-ಹದಿನೈದು ಸಾವಿರದವರೆಗೂ ಸಂಬಳವನ್ನು ಪಡೆಯುವ ಉದ್ಯೋಗಿಗಳು ನಮ್ಮ ದೇಶದಲ್ಲಿ ಒಂದು ವಿಶಿಷ್ಟವಾದ ಸಾಮಾಜಿಕ ಸ್ತರದಲ್ಲಿರುತ್ತಾರೆ. ಇವರು ಇತರ ಮನುಷ್ಯರಿಂದ ಬಹಳ ದೂರ ಮತ್ತು ಎತ್ತರದಲ್ಲಿರುತ್ತಾರೆ. ಇವರಲ್ಲಿ ಬಹುಮಂದಿ ಅಂಥ ಉದ್ಯೋಗಗಳಿಗಾಗಿಯೇ ತಯಾರುಗೊಂಡವರಾಗಿರುತ್ತಾರೆ. ಕೆಲವರು ತಮ್ಮ ನಿಜವಾದ ಯೋಗ್ಯತೆಯಿಂದಲೂ ಪಡೆದಿರುತ್ತಾರೆ ಎಂಬುದನ್ನು ಅಲ್ಲಗಳೆಯಲಾಗದು. ಒಟ್ಟಿನಲ್ಲಿ, ಇವರಲ್ಲಿ ಬಹುಮಂದಿಗೆ ಸಾಮಾಜಿಕ ಸ್ಪಂದನಗಳನ್ನು ಗುರುತಿಸುವ ಶಕ್ತಿ ತೀರಾ ಕ್ಷೀಣ ಎಂಬುದರಲ್ಲಿ ಸಂದೇಹವಿಲ್ಲ. ಇವರು ಕೂಡ ರಾಜಕಾರಣಿಗಳಂತೆಯೇ ಪ್ರತಿ ತಿಂಗಳು ಸಾವಿರಾರು ರುಪಾಯಿಗಳನ್ನು ವಿವಿಧ ರೀತಿಯಲ್ಲಿ ಖರ್ಚುಮಾಡುತ್ತಾರೆ. ಸಾಮಾನ್ಯ ಪ್ರಜೆಯ ಬದುಕಿನ ಕುರಿತಾದ ಯೋಚನೆ ಇವರಿಗೆ ಎಂದೂ ಬರುವುದಿಲ್ಲ. ಇವರ ಪೈಕಿ ಇರುವ ಬುದ್ಧಿಜೀವಿಗಳಿಂದಾಗಿಯೇ ಈ ದೇಶ ಇಷ್ಟು ಕೆಟ್ಟಿರುವುದು!

    ಉದಾಹರಣೆಗೆ ನಮ್ಮ ದೇಶದಲ್ಲಿರುವ ಸುಮಾರು 4500 ಅಣು ವಿಜ್ಞಾನಿಗಳನ್ನೇ ತೆಗೆದುಕೊಳ್ಳೋಣ. ಇವರೆಲ್ಲ ಸರಕಾರದ ಕೋಟ್ಯಾಧಿಪತಿ ಉದ್ಯಮಿಗಳ ದಾಸರಾಗಿದ್ದಾರೆ. ಸಾವಿರಾರು ಜನ ಒಂದೇ ಕ್ಷಣದಲ್ಲಿ ಸುಟ್ಟು ಬೂದಿಯಾಗುವಂಥ `ಪ್ರಗತಿ’ಯ ಯೋಜನೆಗಳನ್ನು ಕೂಡ ಇವರು ತಯಾರು ಮಾಡುತ್ತಾರೆ. ಇವರ ಆಸಕ್ತಿಗಳೇ ಬೇರೆ. ಇಂಥ

    Enjoying the preview?
    Page 1 of 1