Discover millions of ebooks, audiobooks, and so much more with a free trial

Only $11.99/month after trial. Cancel anytime.

Mrityorma Amritam Gamaya
Mrityorma Amritam Gamaya
Mrityorma Amritam Gamaya
Ebook698 pages3 hours

Mrityorma Amritam Gamaya

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200202351
Mrityorma Amritam Gamaya

Read more from K.T. Gatti

Related to Mrityorma Amritam Gamaya

Related ebooks

Reviews for Mrityorma Amritam Gamaya

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Mrityorma Amritam Gamaya - K.T. Gatti

    http://www.pustaka.co.in

    ಮೃತ್ಯೋರ್ಮಾ ಅಮೃತಂ ಗಮಯಾ

    Mrityorma Amritam Gamaya

    Author:

    ಕೆ. ಟಿ. ಗಟ್ಟಿ

    K.T. Gatti

    For more books
    http://www.pustaka.co.in/home/author/kt-gatti-novels

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೊನೆ ಪುಟದ ಬ್ಲರ್ಬ್

    ನಾವು ನಮ್ಮ ಸುತ್ತ ಮುತ್ತ ದಿನಾ ಕಾಣುವ ವ್ಯಕ್ತಿಗಳಲ್ಲಿ ಬಹುತೇಕ ಎಲ್ಲರೂ ನಮಗೆ ಅಪರಿಚಿತರಾಗಿಯೇ ಉಳಿಯುತ್ತಾರೆ. ಕೆಲವರನ್ನು `ನಮ್ಮ ಪರಿಚಯದವರು' ಅಂತ ನಾವು ಹೇಳಿಕೊಂಡರೂ ಅವರ ನಿಜವಾದ ವ್ಯಕ್ತಿತ್ವ ಮತ್ತು ಬದುಕಿನ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿರುವುದಿಲ್ಲ. ಆದ್ದರಿಂದ ಅವರ ಜೊತೆಗಿನ ಸಂಬಂಧದಲ್ಲಿ ಹಿತದ ಜೊತೆಗೆ ಒಂದಷ್ಟು ಅಹಿತವನ್ನು ಕೂಡ ಅನುಭವಿಸುತ್ತಾ ಇರುತ್ತೇವೆ.

    `ಮೃತೋರ್ಮಾ ಅಮೃತಂ ಗಮಯಾ' ಒಂದು ಸಾಮಾಜಿಕ ಪರಿವೇಷದಲ್ಲಿ ಕೆಲವು ವ್ಯಕ್ತಿಗಳ ಅಧ್ಯಯನ. ಜೊತೆಗೆ ಅವರ ಬದುಕಿನ ಚಿತ್ರಣ. ಈ ಕಾದಂಬರಿಯಲ್ಲಿ ಮೂರು ಮುಖ್ಯ ಕುಟುಂಬಗಳಿವೆ. ಅವರು ಜೀವಿಸುವ ವಿಶಾಲವಾದ ಒಂದು ಜೀವನ ಕ್ಷೇತ್ರವಿದೆ. ಅದರಲ್ಲಿ ಹಲವಾರು ವ್ಯಕ್ತಿಗಳಿದ್ದಾರೆ. ಅವರೆಲ್ಲರೂ ಈಗಲೂ ನಾವು ಕಾಣುವಂಥ ವ್ಯಕ್ತಿಗಳೇ ಆಗಿದ್ದಾರೆ. ಈ ಕಥೆ ಕೇವಲ ಅವರ ಭೌತಿಕ ಬದುಕಿನ ಹಿತಾಹಿತಗಳ ಕುರಿತಾಗಿಲ್ಲ. ಇದು ಅವರ ನಡೆ ನುಡಿ ವಿಚಾರ-ಅವಿಚಾರಗಳ ವಿವರ ಮತ್ತು ವಿಶ್ಲೇಷಣೆ ಕೂಡ ಆಗಿರುವಂತೆಯೇ ಪ್ರವಾಹದಂತೆ ಹರಿಯುವ ಬದುಕಿನ ಚಿತ್ರಣವೂ ಆಗಿದೆ.

    ಮುನ್ನುಡಿ

    `ಮೃತ್ಯೋರ್ಮಾ ಅಮೃತಂ ಗಮಯಾ 1981ರಲ್ಲಿ `ಸುಧಾ'ದಲ್ಲಿ ಧಾರಾವಾಹಿಯಾದಾಗ ಮತ್ತು ಅನಂತರ ಬಹಳ ಮಂದಿ ನನ್ನನ್ನು, ``ನೀವು ಬ್ರಾಹ್ಮಣ ದ್ವೇಷಿಯೇ' ಎಂದು ಕೇಳಿದ್ದರು. ``ಈ ಕಾದಂಬರಿಯನ್ನು ಯಾವ ಉದ್ದೇಶದಿಂದ ಬರೆದಿದ್ದೀರಿ?'' ಎಂದು ಎಲ್ಲಾ ಕಾದಂಬರಿಗಳ ಬಗ್ಗೆಯೂ ಪ್ರಶ್ನೆ ಕೇಳುವ ಓದುಗರಿದ್ದಾರೆ. ಸಾಮಾನ್ಯವಾಗಿ ಕತೆ ಕಾದಂಬರಿ ಬರೆಹದ ಹಿಂದೆ ಪ್ರತ್ಯೇಕವಾದ `ಉದ್ದೇಶ' ಅನ್ನುವಂಥದೊಂದು ಇರುವುದಿಲ್ಲ. ಆದರೆ ಯಾವುದಾದರೊಂದು ಕಾದಂಬರಿಯ ಬರವಣಿಗೆಯ ಒಳಗೆ ಉದ್ದೇಶ ಇರುವುದು ಕೂಡ ಸಾಧ್ಯ ಎನ್ನುವುದನ್ನು ದಲಿತ ಸಾಹಿತ್ಯ ನಮಗೆ ಸ್ಪಷ್ಟವಾಗಿಸಿದೆ. `ಅದೆಲ್ಲ ಸರಿ, ಉದ್ದೇಶವನ್ನು ಕಲಾತ್ಮಕತೆ ಮುಚ್ಚಿಡಬೇಕು' ಎನ್ನುವ ವಾದ ಇದೆ.

    ತಾನೊಂದು ಕಲಾತ್ಮಕ ಕಾದಂಬರಿ ಬರೆಯಬೇಕು ಎಂದು ಕಾದಂಬರಿ ಬರಹಕ್ಕೆ ತೊಡಗುವ ಲೇಖಕರು ಇದ್ದಾರೋ, ಅಥವಾ ಬರವಣಿಗೆಯ ಸಂದರ್ಭದಲ್ಲೇ ಲೇಖಕನಿಗೆ ಗೊತ್ತಿಲ್ಲದಂತೆ ಅದು ಕಲಾತ್ಮಕವಾಗುತ್ತದೋ, ಅದೆಲ್ಲ ಬರಹದ ಬಗ್ಗೆ ಬರೆಯುವವರು ಮತ್ತು ಮಾತಾಡುವವರು ಮಾಡಬೇಕಾದ ವಿಚಾರ. ಕಲಾತ್ಮಕವಾದುದನ್ನು ಮಾತ್ರ ಬರೆದ ಲೇಖಕರು ಇರುತ್ತಾರೋ ಒಬ್ಬ ಲೇಖಕ ಬರೆದುದೆಲ್ಲವೂ ಕಲಾತ್ಮವಾಗುವುದು ಸಾಧ್ಯವೇ ಎಂಬುದು ಮತ್ತೊಂದು ವಿಚಾರ. ಒಂದೋ ಎರಡೋ ಕಾದಂಬರಿಗಳನ್ನು ಮಾತ್ರ ಬರೆದು `ಕಲಾತ್ಮಕ' ಕಾರಣಕ್ಕೆ ಪ್ರಸಿದ್ಧರೆನಿಸಿದ ಲೇಖಕರು ಇದ್ದಾರೆ. ನಿಜ. ಆದರೆ ಕಲಾತ್ಮಕತೆ ಎನ್ನುವುದರಲ್ಲಿಯೂ ಆರ್ಬಿಟ್ರರಿನೆಸ್ ಇದೆ. ಯಾವುದು ಏನು ಎನ್ನವುದು ಹತ್ತು ಮಂದಿಯ ಒಂದು ಗುಂಪಿನ ಜಜ್ಮೆಂಟಾಗಿರಬಹುದು. ನೂರು ಮಂದಿಯ ಗುಂಪಿನ ಜಜ್ಮೆಂಟ್ ಅಲ್ಲವಾಗಿರಬಹುದು. ಕಾಲ ಕೂಡ ಜಜ್ಮೆಂಟನ್ನು ತಿದ್ದಬಹುದು. ನವ್ಯ ನವ್ಯೋತ್ತರ, ಪ್ರಗತಿಗಾಮಿ, ಪ್ರತಿಗಾಮಿ ಮುಂತಾದ ತೀರ್ಮಾನಗಳನ್ನು ಕಾಲ ತಿದ್ದುತ್ತಾ ಬಂದಿದೆ.

    ವಾದಗಳು ಏನಿದ್ದರೂ ಅವು ನನಗೆ ಮುಖ್ಯವಲ್ಲ. `ಮೃತ್ಯೋರ್ಮಾ ಅಮೃತಂ ಗಮಯಾ' ಕಾದಂಬರಿಯಲ್ಲಿ ಕಲಾತ್ಮಕತೆಯ ಕೊರತೆ ಇರಬಹುದು. ಅಥವಾ ಅದು ಕಲಾತ್ಮಕವೇ ಅಲ್ಲದಿರಬಹುದು. ಈ ಕಾದಂಬರಿಯ ಬರವಣಿಗೆಯಲ್ಲಿ ನನಗೆ ಉದ್ದೇಶ ಇದೆ; ಕೆಲವು ಸಾಮಾಜಿಕ ಸತ್ಯಗಳನ್ನು ಕಲಾತ್ಮಕತೆಯಲ್ಲಿ ಮರೆಯಾಗಿಸದೆ ನೇರವಾಗಿ ಹೇಳಬೇಕೆಂಬುದೇ ಆ ಉದ್ದೇಶ. ಕಲಾತ್ಮಕತೆಯಲ್ಲಿ ಸತ್ಯ ನಷ್ಟವಾಗಬಹುದು. ರೂಪಕದ ಭವ್ಯತೆಯಲ್ಲಿ ಅಡಗಿರುವ ಸತ್ಯವನ್ನು ಕೆಲವೇ ಕೆಲವು ಮಂದಿ ಕಾಣಲು ಶಕ್ತರಿರಬಹುದು. ರೂಪಕತೆ ಬದುಕಿನ ಹೊರಗಿರುತ್ತದೆ. ಅದನ್ನು ಕೆಲವೇ ಕೆಲವು ಕಣ್ಣುಗಳು ಕಾಣಬಹುದು. ರೂಪಕ್ಕೆ ಕಾರಣವಾದ ಸತ್ಯ ಬದುಕಿನ ಒಳಗಿರುತ್ತದೆ. ಕಾಣಿಸಿದರೆ ಅದನ್ನು ಹೆಚ್ಚು ಮನಸ್ಸುಗಳು ಕಾಣಬಲ್ಲವು.

    ಈ ಕಾದಂಬರಿಯ ಬರವಣಿಗೆಯಲ್ಲಿ ನನಗೆ ಉದ್ದೇಶ ಇದೆ ಎಂದು ಹೇಳಿದೆ. ಆದರೆ ಅದು ಇಡೀ ಕಾದಂಬರಿಯ ಉದ್ದೇಶ ಅಲ್ಲ. ಕಾದಂಬರಿ ಮನುಷ್ಯನ ಅಧ್ಯಯನ, ಬದುಕಿನ ಅಧ್ಯಯನ ಆಗಿರಬೇಕು ಎನ್ನುವುದು ನನ್ನ ನಂಬಿಕೆ. ಎಷ್ಟೋ ಸತ್ಯಗಳನ್ನು ಮುಚ್ಚಿಟ್ಟುಕೊಂಡು ಹೇಳುವ ಧೈರ್ಯವಿಲ್ಲದೆ ಜೀವಮಾನವಿಡೀ ಕೊರಗುವ ಮಂದಿಯನ್ನು ನಾನು ನೋಡಿದ್ದೇನೆ. ಅವರ ದುಃಖ ನನ್ನ ದುಃಖವೂ ಆಗಿದೆ.

    `ನೀವು ಬರೆದಿರುವುದು ಸುಳ್ಳಲ್ಲ. ಆದರೆ ನಾವು ಹಾಗಿಲ್ಲ' ಎಂದು ನನಗೆ ಸತ್ಯವನ್ನು ಬರೆದು ತಿಳಿಸಿದವರಿದ್ದಾರೆ. ನಿಜ `ಹಾಗೆ' ಇರುವವರ ಸಂಖ್ಯೆ ಸಣ್ಣದು. ಆದರೆ ಒಂದು ವ್ಯಕ್ತಿಯ ಅಥವಾ ಒಂದು ಕುಟುಂಬದ ಅನಾಚಾರ ಅದರ ಸುತ್ತ ಇರುವ ಒಂದು ದೊಡ್ಡ ಸಮೂಹದ ಮನಸ್ಸನ್ನು ಕೆಡಿಸಬಹುದು ಎನ್ನುವುದಕ್ಕೆ ನಮಗೆ ಹೇರಳ ಉದಾಹರಣೆಗಳು ಸಿಗುತ್ತವೆ. ಒಂದು ವ್ಯಕ್ತಿಯ ಕ್ರೋಧ ಆ ವ್ಯಕ್ತಿಯ ಅಸ್ವಾಸ್ಥ್ಯಕ್ಕೆ ಸೀಮಿತ. ಆದರೆ ಒಂದು ಸಮೂಹದ ಕ್ರೋಧ ಆ ಸಮೂಹವನ್ನು ವಿರೂಪಗೊಳಿಸುತ್ತದೆ. ಆದ್ದರಿಂದ ಅನಾಚಾರಿಯಾದ ವ್ಯಕ್ತಿಯ ಚಿಕಿತ್ಸೆಗೆ ಸಮಾಜ ಮುಂದಾಗಬೇಕು.

    ನಾನು ಬ್ರಾಹ್ಮಣ್ಯದ ದ್ವೇಷಿಯೂ ಅಲ್ಲ, ಬ್ರಾಹ್ಮಣ ಜಾತಿಯ ದ್ವೇಷಿಯೂ ಅಲ್ಲ; ಕೇವಲ `ಆಚಾರ ಎಂಬ ಅನಾಚಾರ'ದ ವಿರೋಧಿ ಎಂದು ಅರ್ಥ ಮಾಡಿಕೊಂಡು ತಮ್ಮ ಭಾವನೆಗಳನ್ನು ನನ್ನೊಡನೆ ಹಂಚಿಕೊಂಡವರಿಗೆ ನಾನು ಆಭಾರಿಯಾಗಿದ್ದೇನೆ. ಯಾವ ಮನುಷ್ಯನ ಜಾತಿಯನ್ನೂ ನಾನು ನನ್ನ ಬದುಕಿನಲ್ಲಿ ಕಂಡಿಲ್ಲ, ಕಾಣಲಾರೆ. ನನಗೆ ಕಾಣಿಸಿರುವುದು ನಡೆನುಡಿ ಮಾತ್ರ.

    ಯಾವುದೇ ಜಾತಿಯವನಲ್ಲದಿರುವುದು ಈ ಭರತ ಭೂಮಿಯಲ್ಲಿ ಸಾಧ್ಯವಿಲ್ಲ. ಸಾಧ್ಯ ಯಾವುದೆಂದರೆ, ಜಾತಿ ಭಾವನೆ ಇಲ್ಲದವನಾಗಿರುವುದು. ತಾನು ಇಂಥ ಜಾತಿಯವನು ಎಂದು ಗುರುತಿಸಿಕೊಳ್ಳದಿರುವುದು ಮತ್ತು ಇತರರನ್ನು ಇಂಥ ಜಾತಿಯವರು ಎಂದು ಗುರುತಿಸದಿರುವುದು. ಒಳ್ಳೆಯ ನಡೆ ನುಡಿ ಜಾತಿಗೆ ಸಂಬಂಧಿಸಿದ್ದಲ್ಲ. ಅದು ವ್ಯಕ್ತಿಗೆ ಸಂಬಂಧಿಸಿದ್ದು. ತಾವು ಇಂಥ ಜಾತಿವರು ಎಂದು ನಡೆ ನುಡಿಯ ಮೂಲಕ ಸಮಾಜದಲ್ಲಿ ಎದ್ದು ತೋರುವಂತೆ ಮಾಡುವುದು ಮಾನವೀಯ ಗುಣ ಅಲ್ಲ. ಅದು ಸಾಮಾಜಿಕವಾಗಿ ಅನಾರೋಗ್ಯಕರ. ಜಾತಿ ಏನಿದ್ದರೂ ಅದು ಹೊಟ್ಟೆಯೊಳಗೆ ಇರಲಿ, ಅದನ್ನು ಮೈಗೆ ಹಚ್ಚಿಕೊಂಡು ತಿರುಗಾಡಬೇಕಾದ ಅಗತ್ಯ ಇಲ್ಲ. ತಾವು ಇಂಥ ಜಾತಿಯವರು ಎಂದು ಇತರರಿಗಿಂತ ಭಿನ್ನವಾದ ಆಚಾರ ವಿಚಾರಗಳನ್ನು ಇತರರ ಜೊತೆಗಿನ ವೈಯಕ್ತಿಕ-ಸಾಮಾಜಿಕ ಸಂಬಂಧದಲ್ಲಿ ಮತ್ತು `ಸಾರ್ವಜನಿಕ' ಪರಸ್ಪರ ಕ್ರಿಯೆಯ ಸಂದರ್ಭದಲ್ಲಿ ತೋರಿಸುವುದೇ ನಮ್ಮ ದೇಶದ ಅತಿ ದೊಡ್ಡ ಕಾಯಿಲೆ. ಈ ಕಾಯಿಲೆಯಿಂದ ಆಗುತ್ತಿರುವ ನಷ್ಟದ ಸ್ವರೂಪ ಮತ್ತು ಪರಿಮಾಣ ಅಳತೆಗೆ ಸಿಗದಷ್ಟು ದೊಡ್ಡದು.

    ನಾನು ಸತ್ಯವನ್ನು ಹೇಳಿದ್ದೇನೆ ಎಂದು ನನ್ನನ್ನು ಪ್ರೀತಿಯಿಂದ ಕಂಡವರ ಸಂಖ್ಯೆ ನಾನು ಆಶ್ಚರ್ಯಪಡುವಷ್ಟು ದೊಡ್ಡದಿದೆ. ಪ್ರೀತಿಗೆ ಜಾತಿ ಇಲ್ಲ; ಆಚಾರಗಳ ಕಟ್ಟುಪಾಡು ಇಲ್ಲ. ಪ್ರೀತಿ ಬೆಳಕು. ಪ್ರೀತಿಯ ಬೆಳಕಿನಲ್ಲಿ ನಾನು ಸೂರ್ಯ ಚಂದ್ರರನ್ನು ಕಂಡಿದ್ದೇನೆ. ಪ್ರೀತಿ ಇಲ್ಲವಾದರೆ ಏನೂ ಕಾಣಿಸುವುದಿಲ್ಲ.

    `ಮೃತ್ಯೋರ್ಮಾ ಅಮೃತಂ ಗಮಯಾ' ಪ್ರೀತಿಯ ಹುಡುಕಾಟ. ಅದಕ್ಕೆ ಬಹಳ ಚಿಕ್ಕದಾದ ಒಂದು ಸಂಭವದ ಪ್ರೇರಣೆ ಕೂಡ ಇದೆ. ಸುಮಾರು ನಲ್ವತ್ತು ವರ್ಷಗಳ ಹಿಂದೆ ಈ ದೇಶದ ಪ್ರಧಾನ ಮಂತ್ರಿಯ ಮಗಳು ಮನೆಯ ಮಹಡಿಯಿಂದ ಕೆಳ ಹಾರಿ ಸತ್ತಳು. ಯಾವ ಕಾರಣಕ್ಕಾಗಿ ಅವಳು ಸತ್ತಳೋ ಆ ಕಾರಣವೇ ಇದಕ್ಕೆ ಪ್ರೇರಣೆ.

    ನಂತರದ ದಿನಗಳಲ್ಲಿ ವಿಮರ್ಶಕರ ದೃಷ್ಟಿಯಲ್ಲಿ `ಈ ಕಾದಂಬರಿಯಲ್ಲಿ ಭಾಷಣವೇ ಹೆಚ್ಚು' ಎನ್ನುವ ಮಾತು ಬಂತು. ಎಲ್ಲಾ ಮಾತುಗಳನ್ನು ಸ್ವಾಭಾವಿಕ ಮಾನವ ಪ್ರತಿಕ್ರಿಯೆ ಎಂದೇ ಭಾವಿಸುವ ನನಗೆ ಯಾವುದೂ ಬೆಚ್ಚಿ ಬೀಳಿಸುವ ಮಾತಾಗಿ ಕಾಣಿಸುವುದಿಲ್ಲ. ಎಲ್ಲಾ ವಿಮರ್ಶೆಯೂ ಸಕಾರಾತ್ಮಕವೇ. ಎಲ್ಲಾ ಬೈಗುಳೂ ಸಕಾರಾತ್ಮಕವೇ. ವಿಮರ್ಶೆ ಮತ್ತು ಟೀಕೆಗೆ ಅಡಿಮೇಲು ಮಾಡುವ ಅರ್ಥಾತ್ `ಸಮಗ್ರ ಪರಿವರ್ತನೆ' ಉಂಟುಮಾಡುವ ಸಾಮಥ್ರ್ಯ ಇದ್ದರೆ ಪ್ರಪಂಚ ಪ್ರತಿ ದಿನ ಬದಲಾಗುತ್ತಾ ಇರುತ್ತಿತ್ತು. ನಮ್ಮ ವಿಚಾರಶಕ್ತಿಗೆ ಬೇರು ಅಥವಾ ಪರಂಪರೆ ಇರುತ್ತಿರಲಿಲ್ಲ.

    ನಿಜ. `ಮೃತ್ಯೋರ್ಮಾ ಅಮೃತಂ ಗಮಯಾ'ದಲ್ಲಿ ಭಾಷಣ ಕೂಡ ನನಗೆ ಮುಖ್ಯ. ವೇದಿಕೆಯ ಮೇಲಿನ ಭಾಷಣದಲ್ಲಿ ಏನು ಹೇಳಿದರೂ ಅದು ತಲಪುವುದು ಒಂದು ಸಣ್ಣ ಸಂಖ್ಯೆಗೆ. ಕೇಳಿಸಿಕೊಂಡವರೆಲ್ಲರ ಮನಸ್ಸಿನಲ್ಲಿ ಅದು ಉಳಿಯುವುದಿಲ್ಲ. ಹೇಳಲಿಕ್ಕಿರುವುದನ್ನು ಹೇಳಲು ಸಾವಿರಾರು ಭಾಷಣಗಳನ್ನು ಮಾಡಲಿಕ್ಕಾಗುವುದಿಲ್ಲ. ಭಾಷಣ ಮಾಡುವ ಅವಕಾಶ ಕೂಡ ಲೇಖಕನಿಗೆ ಸೀಮಿತವೇ. ಭಾಷಣಕ್ಕೆ `ವಿಷಯ'ದ ಪರಿಧಿ ಇರಬೇಕಾಗುತ್ತದೆ. ಸಾರ್ವಜನಿಕ ಭಾಷಣದಲ್ಲಿ ಎಲ್ಲವೂ ಹೇಳತಕ್ಕಂಥ `ವಿಷಯ' ಆಗಲಾರದು ಎಂಬ ವಿಚಾರ ಕೂಡ ಎಲ್ಲರಿಗೂ ಗೊತ್ತಿದ್ದದ್ದೇ.

    ಕಾದಂಬರಿಯ ಸ್ವರೂಪ ಏನು? ಕಥನ ಮತ್ತು ಸಂಭಾಷಣೆ. ಚಿಕ್ಕ ಕತೆಯ ಸ್ವರೂಪ ಕೂಡ ಇದೇ ಆಗಿರುತ್ತದೆ. ಎಲ್ಲೋ ಕೆಲವು ಕಾದಂಬರಿಗಳಲ್ಲಿ ಸ್ವಲ್ಪ ಕಾವ್ಯ ಕೂಡ ಇರಬಹುದು. ಕೆಲವು ಕಾದಂಬರಿಗಳಲ್ಲಿ ದೀರ್ಘ ಕಥನ ಹೆಚ್ಚಿರಬಹುದು. ಕೆಲವು ಕಾದಂಬರಿಗಳಲ್ಲಿ ದೀರ್ಘ ಸಂಭಾಷಣೆಯಿರಬಹುದು. ಯಾಕೆ ಕಥನ ದೀರ್ಘವಾಗಿದೆ ಅಥವಾ ಸಂಭಾಷಣೆ ಯಾಕೆ ದೀರ್ಘವಾಗಿದೆ ಎನ್ನುವ ಪ್ರಶ್ನೆಗೆ ಕಾದಂಬರಿಯೇ ಉತ್ತರಿಸಬೇಕೇ ವಿನಾ ಲೇಖಕ ಉತ್ತರಿಸಲಾರ.

    ಕಥನ ಮತ್ತು ಸಂಭಾಷಣೆ ಎರಡೂ ಲೇಖಕನ ಸೃಷ್ಟಿಯೇ ಆಗಿರುವುದರಿಂದ ಎಲ್ಲವೂ ಲೇಖಕನ ಮಾತೇ ಆಗಿರುತ್ತದೆ. ಲೇಖಕ ಹೇಳುವುದನ್ನು ಸಂಭಾಷಣೆಯಲ್ಲಿ ಪಾತ್ರಗಳು ಹೇಳುತ್ತವೆ. ಕಥನ ಅದರ ಚೌಕಟ್ಟಿನೊಳಗೇ ನಡೆಯುವ ಲೇಖಕನ ಮಾತಲ್ಲದೆ ಬೇರೇನಲ್ಲ. ಕೆಲವು ಕಾದಂಬರಿಗಳಲ್ಲಿ ಲೇಖಕ ಕಥನದ ಚೌಕಟ್ಟಿನಿಂದ ಹೊರಬಂದು ಓದುಗರೊಡನೆ ಮಾತಾಡುವುದಿದೆ. ಅದರಿಂದ ಕಾದಂಬರಿಗೆ ಅಪಚಾರವೇನೂ ಆಗುವುದಿಲ್ಲ. ಕಾದಂಬರಿಗೆ ಹೇಗೆ ಪುಟಗಳ ಮಿತಿ ಇಲ್ಲವೋ ಹಾಗೆಯೇ ಅದರಲ್ಲಿ ಕಥೆಗೆ ಸಂಬಂಧಿಸಿದ ಕಥನಕ್ಕೂ ನಿರ್ದಿಷ್ಟ ಅಳತೆ ಇಲ್ಲ. ಸಂಭಾಷಣೆಗೂ ನಿರ್ದಿಷ್ಟ ಅಳತೆ ಇರುವುದಿಲ್ಲ. ಅದರಲ್ಲಿ ಯಾವುದೂ ದೀರ್ಘವಾಗಬಹುದು, ಯಾವುದೂ ಹೃಸ್ವವಾಗಬಹುದು. ಹಾಗೆಂದು ಕಥನಕ್ಕೆ ಸಂಬಂಧಿಸದ ಒಂದು ಲೇಖನವನ್ನು ಕಾದಂಬರಿಯೊಳಗೆ ತುರುಕಲಿಕ್ಕಾಗುವುದಿಲ್ಲ. ಒಂದು ವೇಳೆ ಒಂದು ಪಾತ್ರದ ಕುರಿತು, `ಆತ ಬರೆದ ಲೇಖನ ಇದು' ಎಂದೋ `ಇದು ಆತನ ಯೋಚನೆ'ಯೆಂದೋ ಅಥವಾ ಇದು ಆತನ ಪತ್ರವೆಂದೋ ಕೆಲವು ಪುಟಗಳನ್ನು ಕೊಟ್ಟರೆ ಯಾರಿಂದ ಏನೂ ಮಾಡಲಿಕ್ಕಾಗುವುದಿಲ್ಲ. ಹೆಚ್ಚೆಂದರೆ, ಅದು ಆ ಕಾದಂಬರಿಯ `ದೋಷ' ಎಂದು ಪರಿಗಣಿಸಲ್ಪಡಬಹುದು. ಬಹಳ ಹೃಸ್ವವಾಗಿದ್ದರೆ ಸಾಮಾನ್ಯವಾಗಿ ಓದುಗನಿಗೆ ಒಪ್ಪಿಗೆಯಾಗುತ್ತದೆ.

    ಮುಖ್ಯವಾದ ಪ್ರಶ್ನೆ: ಒಂದು ಕಾದಂಬರಿ ಹೇಗೆ ಓದುಗನನ್ನು ಪಡೆಯುತ್ತದೆ ಎನ್ನುವುದಾಗಿದೆ. ಯಾವುದೋ ಕಾರಣಕ್ಕೆ ಒಂದು ಕಾದಂಬರಿ ಒಬ್ಬ ಓದುಗನಲ್ಲಿ ಆಸಕ್ತಿಯನ್ನುಂಟುಮಾಡುತ್ತದೆ. ಅದು ಏನು? ಈ ತನಕ ಆತನಿಗೆ ಗೊತ್ತಿರದ ಹೊಸ ವಿಚಾರಗಳೆ? ಬೇರೆಯೇ ಆದ ಒಂದು ಸಂಸ್ಕೃತಿ ಅಥವಾ ಸಮಾಜದ ಬದುಕಿನ ವಿವರಗಳೆ? ಓದುಗನದೇ ಆದ ಅನುಭವಗಳು ಮತ್ತು ಅವುಗಳ ವಿಶ್ಲೇಷಣೆಯೆ? ನಾಸ್ಟಾಲ್ಜಿಕ್ ಆದ ಅನುಭವಗಳ ಮಾನಸಿಕ ಪುನರನುಭವವೆ? ರಂಜನೀಯವಾದ ಕಥೆಯೆ? ಒಂದು ನವನವೀನ ಪಾತ್ರ ಚಿತ್ರಣವೆ? ಯಾವುದೂ ಆಗಿರಬಹುದು. ಒಳ್ಳೆಯ ಶೈಲಿಯಲ್ಲಿದ್ದರೆ, ಹೇಳುವ ರೀತಿ ಆಕರ್ಷಕವಾಗಿದ್ದರೆ, ಬೋರು ಹೊಡೆಸುವಂತಿಲ್ಲದಿದ್ದರೆ ಓದುಗ ಓದುತ್ತಾನೆ. ಅಲ್ಲಲ್ಲಿ ಇದು ಬೇಡ ಅನಿಸಿದರೆ, `ಬ್ರೌಜ಼್' ಮಾಡುತ್ತಾನೆ. ಮನೆಯಲ್ಲಿ ಆಫೀಸಿನಲ್ಲಿ ಮಾಡಲೇ ಬೇಕಾದ ಕೆಲಸವನ್ನು ಗೊಣಗುತ್ತಾ ಮಾಡುವವರಿದ್ದಾರೆ. ಆದರೆ ಯಾರೂ ಗೊಣಗುತ್ತಾ ಓದುವುದಿಲ್ಲ. ಯಾಕೆಂದರೆ, ಅದು ಮಾಡಲೇ ಬೇಕಾದ ಕೆಲಸ ಅಲ್ಲ. ಓದುವವರು ಓದುತ್ತಾರೆ; ಓದದವರು ಓದುವುದಿಲ್ಲ.

    ಭಾಷಣಕ್ಕೂ ಅವಕಾಶವಿಲ್ಲ, ಲೇಖನ ರೂಪದಲ್ಲಿ ಪತ್ರಿಕೆಯವರು ಪ್ರಕಟಿಸುವಂಥ `ಸ್ಟಫ್' ಅಲ್ಲ, ವಿಮರ್ಶೆ ಎನ್ನುವ ಮುದ್ರೆ ಒತ್ತಿ ಪುಸ್ತಕ ಮಾಡಲಿಕ್ಕೂ ಆಗುವುದಿಲ್ಲ-ಈಯೆಲ್ಲ ಕಾರಣಗಳಿಂದ ನಾನು ನನ್ನ ಅನಿಸಿಕೆಗಳನ್ನು ನನ್ನದೇ ಪುಸ್ತಕದ ಮುನ್ನುಡಿಯಲ್ಲಿ ಬರೆಯಲು ತೊಡಗಿದೆ. ಮುನ್ನುಡಿ ಪುಸ್ತಕದ ಭಾಗವಾಗಿರುವುದರಿಂದ ಪತ್ರಿಕೆಯಂತೆ ದಿನ ದಾಟುವಷ್ಟರಲ್ಲಿ ಹಾಳೆ ಹಾಳೆಗಳಾಗಿ ಎಲ್ಲೋ ಬಿದ್ದು ಹಾಳಾಗಿ ಹೋಗುವುದಿಲ್ಲ. ಓದುವವರು ಓದುತ್ತಾರೆ ಎನ್ನುವ ವಿಶ್ವಾಸ. ಪುಸ್ತಕದಲ್ಲಿ ಉಳಿಯುತ್ತದಲ್ಲಾ ಎಂಬ ಸಮಾಧಾನ. `ಕಾದಂಬರಿಗಿಂತ ಮುನ್ನುಡಿ ಚೆನ್ನಾಗಿದೆ' ಎಂಬ ಮಾತು ಕೂಡ ನನಗೆ ಖುಷಿ ನೀಡಿದೆ.

    `ಮೃತ್ಯೋರ್ಮಾ ಅಮೃತಂ ಗಮಯಾ' ಕಾದಂಬರಿಯ ಪಾತ್ರಗಳು ನಮ್ಮ ಸುತ್ತ ಮುತ್ತ ಇರುವ ಪಾತ್ರಗಳೇ. ನಮ್ಮ ಮನಸ್ಸಿನಲ್ಲಿ ಹತ್ತು ಹಲವು ಪ್ರಶ್ನೆಗಳಿರುತ್ತವೆ. ಕಾದಂಬರಿಯ ಪಾತ್ರದ ತಲೆಯೊಳಗೂ ಅವೇ ಪ್ರಶ್ನೆಗಳಿರುತ್ತವೆ. ಹತ್ತು ಮಂದಿ ಬೇರೆ ಬೇರೆ ವ್ಯಕ್ತಿಗಳ ಮನಸ್ಸಿನಲ್ಲಿರುವ ಪ್ರಶ್ನೆಗಳು ಏನು ಎಂದು ನಮಗೆ ತಿಳಿಯಬೇಕಾದರೆ ನಾವು ಅವರೆಲ್ಲರನ್ನೂ ಭೇಟಿ ಮಾಡಬೇಕು. ಅದು ಕಷ್ಟ ಸಾಧ್ಯ. ಒಂದು ಕಾದಂಬರಿಯಲ್ಲಿ ಆ ಪ್ರಶ್ನೆಗಳೆಲ್ಲ ಒಂದೇ ಕಡೆ ಸಿಗುತ್ತವೆ. ಪ್ರಶ್ನೆಗಳಿಗೆಲ್ಲ ಕಾದಂಬರಿಯಲ್ಲಿ ಉತ್ತರ ಸಿಗುತ್ತದೆ ಎನ್ನಲಾಗದು; ಸಿಗಬೇಕಾಗಿಯೂ ಇಲ್ಲ.

    ನಮ್ಮ ಮನಸ್ಸಿನಲ್ಲಿ ಇರುವ ಪ್ರಶ್ನೆಗಳು ಆಗೊಮ್ಮೆ ಈಗೊಮ್ಮೆ, ಸ್ವಲ್ಪ ಹೊತ್ತು ತುಸು ತೀವ್ರ ಸ್ಥಿತಿಯಲ್ಲಿರಬಹುದಾದರೂ ಅವು ಸಾಮಾನ್ಯವಾಗಿ `ಪ್ಯಾಸಿವ್ ಸ್ಟೇಟ್'ನಲ್ಲಿ ಇರುತ್ತವೆ. ಅದನ್ನು ಬಹಮಟ್ಟಿಗೆ `ಆ್ಯಕ್ಟಿವ್ ಸ್ಟೇಟಿ'ಗೆ ತಂದು ಮರು ಚಿಂತನೆಗೆ, ವಿಶ್ಲೇಷಣೆಗೆ ಗುರಿಪಡಿಸುವುದು ಓದಿನ ಮೂಲಕ ಸಾಧ್ಯ. ಎಷ್ಟು ಸೃಜನಶೀಲ ಎಂದರೂ ಅದರಲ್ಲಿ ನಮ್ಮನ್ನು ಯೋಚನೆಗೆ, ವಿಶ್ಲೇಷಣೆಗೆ ಹಚ್ಚುವಂಥದು ಇದ್ದೇ ಇರುತ್ತದೆ ಮತ್ತು ಇರಬೇಕು. ಆ ಕಾರಣದಿಂದ `ನಾವೆಲ್ಲ ಈ ಕುರಿತು ಯೋಚಿಸೋಣ' ಎಂಬ ಉದ್ದೇಶ ಪ್ರಾಮಾಣಿಕವಾದ ಬರಹದ ಹಿಂದೆ ಇರುತ್ತದೆ ಎನ್ನುವುದು ನನ್ನ ನಂಬಿಕೆ. ವಿಮರ್ಶೆ ಎನ್ನುವುದು ಅಂಥ ಚಿಂತನೆ ಮತ್ತು ವಿಶ್ಲೇಷಣೆಯದೇ ಇನ್ನೊಂದು ಆಯಾಮ. ಈ ಚಿಂತನೆ ಮತ್ತು ವಿಶ್ಲೇಷಣೆಯನ್ನು ತೀರಾ ಆಕುಂಚಿಸಿ, ಸಂಕೀರ್ಣಗೊಳಿಸುವುದು, ಒಂದರ್ಥದಲ್ಲಿ, ಅಕಾಡೆಮಿಕಾಗಿಸುವುದು ಸಾಹಿತ್ಯ ಪ್ರೀತಿಯಾಗಲಾರದು.

    ಬಹಳ ಕಾಲದಿಂದ ರೂಢ ವಾದಗಳು ನಮ್ಮ ಮನಸ್ಸಿನ ಮೇಲೆ ಸವಾರಿ ಮಾಡಲು ಪ್ರಯತ್ನಿಸುತ್ತಿವೆ. ಈ ರೀತಿಯಲ್ಲದೆ ಬೇರೆ ರೀತಿ ಯೋಚಿಸಲು ಸಾಧ್ಯವಿಲ್ಲವೆ ಎನ್ನುವ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಹುಟ್ಟಬೇಕು. ಹಳಸಲಾದ ಮತ್ತು ಅರ್ಥವನ್ನು ಕಳೆದುಕೊಂಡ ಶಬ್ದಗಳನ್ನು ಬಳಸಿಕೊಂಡು ಯೋಚಿಸುವುದನ್ನು ಬಿಡಬೇಕು ಎನ್ನುವುದು ಕೂಡ ಬರಹದ ಉದ್ದೇಶವಾಗಿರಬೇಕು. ಈ ಅರ್ಥದಲ್ಲಿ, ಸಾಹಿತ್ಯ ಅಕಾಡೆಮಿಕ್ ಆಗಬಾರದು.

    ಸಾರ್ವಜನಿಕ ಭಾಷಣದಿಂದ ಲೇಖಕ ಜನಾಕರ್ಷಣೆ ಪಡೆಯಬಹುದು. ವಿವಾದಾಸ್ಪದವಾಗಬೇಕು ಎಂಬ ಉಪ ಉದ್ದೇಶದಿಂದ ಬರೆದಿರುವ ಲೇಖಕ ತನ್ನ ಕೃತಿಯನ್ನು ಇನ್ನಷ್ಟು ವಿವಾದಾಸ್ಪದವಾಗಿಸಬಹುದು. ಅಂಥ ವಿವಾದವನ್ನು ಸೃಷ್ಟಿಸಲು ಇಡೀ ಕೃತಿ ಬೇಕಾಗಿಲ್ಲ; ಅದರೊಳಗೆಲ್ಲೋ ನಾಲ್ಕೈದು ವಾಕ್ಯಗಳು ಸಾಕು. ಇಂಥ ನಾಲ್ಕು ದಿನದ ತಮಾಷೆಯಲ್ಲಿ ನಿಜವಾದ ಲೇಖಕ ಖುಷಿಯನ್ನು ಕಾಣಲಿಕ್ಕಿಲ್ಲ.

    ಪುಸ್ತಕದ ರೂಪದಲ್ಲಾಗಲಿ, ಧಾರಾವಾಹಿಯ ರೂಪದಲ್ಲಾಗಿರಲಿ ನಾನು ಬರೆದುದು ಒಂದಷ್ಟು ಜನ ಓದಲಿ ಎನ್ನುವ ಇರಾದೆ ನನಗಿದೆ. ತನ್ನ ಬರೆಹ ಸರ್ವ ಕಾಲಕ್ಕೂ ಸಲ್ಲುವಂಥದಾಗಿರಬೇಕು ಅಥವಾ ನೂರಾರು ಕಾಲ ಉಳಿಯುವಂಥದಾಗಿರಬೇಕು ಎಂಬ ಭಾವನೆ ಯಾರಿಗಾದರೂ ಇದ್ದರೆ ಆತನನ್ನು ಹುಂಬ ಲೇಖಕನೆನ್ನಬೇಕಾಗುತ್ತದೆ. ಸಾರ್ವಕಾಲಿಕ ಮೌಲ್ಯ ಎನ್ನುವುದಕ್ಕೂ ಒಂದು ಮಿತಿ ಇದೆ. `ಸಾರ್ವಕಾಲಿಕ ಮೌಲ್ಯ' ಎನ್ನುವ ಮಾತನ್ನು ಸಾರ್ವಕಾಲಿಕ ಅಸ್ತಿತ್ವವುಳ್ಳವರು ಬಳಸಿದರೆ ಮಾತ್ರ ಅದು ಸರಿ.

    ಈ ಕಾದಂಬರಿಯನ್ನು ಪುನರ್ಮುದ್ರಣಕ್ಕೆ ಎತ್ತಿಕೊಂಡಿರುವ ಶ್ರೀ ಕೆ. ಎಸ್ ಮುರಲಿಯವರಿಗೆ ಆಭಾರಿಯಾಗಿದ್ದೇನೆ. ಜೊತೆಗೆ, ಈ ಕಾದಂಬರಿ 1981ರಲ್ಲಿ `ಸುಧಾ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದಾಗ ಮತ್ತು ಅನಂತರ ಪುಸ್ತಕ ರೂಪದಲ್ಲಿ ಹೊರಬಂದಾಗ ಓದಿ ಹಿತವಾಗಿಯೂ-ಅಹಿತವಾಗಿಯೂ ಪ್ರತಿಕ್ರಿಯಿಸಿದ ಓದುಗರಿಗೆಲ್ಲ ನಾನು ಕೃತಜ್ಞನಾಗಿದ್ದೇನೆ.

    - ಕೆ. ಟಿ. ಗಟ್ಟಿ

    ಮೃತ್ಯೋರ್ಮಾ ಅಮೃತಂ ಗಮಯಾ

    1

    ಆಕಾಶವಾಣಿಯ ವಾರ್ತಾಪ್ರಸಾರ ಆರಂಭವಾದಾಗಲೇ ಏರುತ್ತ ಬಂದಿದ್ದ ಉದ್ವೇಗ ಮೆಲ್ಲನೆ ತಗ್ಗುತ್ತಾ ಬಂದು, ‘ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು’ ಎಂದೊಡನೆ, ಒಂದು ದೀರ್ಘವಾದ ನಿಟ್ಟುಸಿರಾಗಿ ಹೊರಬಂದು, ರಾಮಕೃಷ್ಣರಾಯರು ಆರಾಮ ಕುರ್ಚಿಯ ಕೈಮೇಲೆ ಊರಿಕೊಂಡಿದ್ದ ಮೊಣಕೈಯನ್ನು ಸಡಿಲುಬಿಟ್ಟು ಹಾಗೆಯೇ ಮೈ ಚೆಲ್ಲಿದರು. ಈ ಹೊತ್ತಿನಲ್ಲಿ ತಾನು ಬೆಂಗಳೂರಿನಲ್ಲಿರುತ್ತಿದ್ದರೆ ಹೇಗಿರುತ್ತಿತ್ತು ಎಂದು ಊಹಿಸಲು ಪ್ರಯತ್ನಿಸಿದರು. ಹಾಗೆಂದು, ಅದೇನೂ ಅನಿರೀಕ್ಷಿತವಾದ ಸುದ್ದಿಯಾಗಿರಲಿಲ್ಲ. ಹಿಂದಿನ ದಿನದ ಪತ್ರಿಕೆಯಿಂದ, ರೇಡಿಯೋದಲ್ಲಿ ಬರುತ್ತಿದ್ದ ಸುದ್ದಿಗಳಿಂದ ಆಗಾಗ ಬರುತ್ತಿದ್ದ ಫೋನಿನ ಕರೆಗಳಿಂದ ಅದು ಸ್ಪಷ್ಟವಾಗುತ್ತಾ ಬಂದಿತ್ತು. ಕಳೆದ ಹದಿನೈದು ದಿನಗಳಲ್ಲಿ ತೀವ್ರವಾಗಿ ಬದಲಾಗುತ್ತಿದ್ದ ವಿದ್ಯಮಾನವನ್ನು ಮಗ ಸುರೇಂದ್ರ, ಮಗಳು ಆರತಿ ಅಥವಾ ಅರುಣ ಪತ್ರಕೆಗಳಿಂದ ಓದಿ ತಿಳಿಸುತ್ತಿದ್ದರು, ಮರಳಿ ಮರಳಿ ಅದೇ ವಾಕ್ಯಗಳು: ಮಂತ್ರಿಮಂಡಲದ ಬಲವು ಕಡಿಮೆ ಆಗಿದೆ, ಎಪ್ಪತ್ತೆರಡು ಎಮ್ಮೆಲ್ಲೇಗಳು ಪಕ್ಷವನ್ನು ತ್ಯಜಿಸಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯಪಾಲರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ, ಸರಕಾರದ ಪತನ ಖಂಡಿತ ಇತ್ಯಾದಿ, ಇತ್ಯಾದಿ.

    ಹತ್ತು ವರ್ಷಗಳಿಂದ ದುರ್ಗಾಪುರ ಕ್ಷೇತ್ರದಿಂದ ಎಮ್ಮೆಲ್ಲೇಯಾಗಿದ್ದು, ಈಗ ಮುರಿದುಬಿದ್ದ ಮಂತ್ರಿಮಂಡಲದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಮಾಜ ಕಲ್ಯಾಣ ಖಾತೆಯ ಮಂತ್ರಿಯಾಗಿದ್ದ ರಾಮಕೃಷ್ಣರಾಯರಿಗೆ ಇತ್ತೀಚೆಗೆ ದೇಶದಲ್ಲಿ ಉಂಟಾಗುತ್ತಿದ್ದ ರಾಜಕೀಯ ಬದಲಾವಣೆಯ ಗತಿ ಮತ್ತು ಸ್ವರೂಪ ಚೆನ್ನಾಗಿಯೇ ತಿಳಿದಿತ್ತು. ವಿರೋಧ ಪಕ್ಷವನ್ನು ಸೇರಿಕೊಳ್ಳಲೆ ಎಂದು ಕೆಲವು ಬಾರಿ ಚಿಂತಿಸಿದ್ದೂ ಇತ್ತು. ಆದರೆ ಮಂತ್ರಿ ಪದವಿಯ ವ್ಯಾಮೋಹ ಮತ್ತು ಅದರ ಸೊಗಸು ಅಂಥ ಒಂದು ಕಠಿಣವಾದ ನಿರ್ಧಾರವನ್ನು ಒಮ್ಮಿಂದೊಮ್ಮೆಲೇ ಮಾಡಲು ಎಡೆಗೊಟ್ಟಿರಲಿಲ್ಲ. ಅಷ್ಟೇ ಅಲ್ಲದೆ ಇತ್ತೀಚೆಗೆ ರಾಮಕೃಷ್ಣರಾಯರ ಆರೋಗ್ಯವೂ ಬಹಳ ಕೆಟ್ಟಿತ್ತು. ಡಯಾಬಿಟೀಸಿನ ಬಾಧೆ ಒಂದು ಕಡೆಯಿಂದಾದರೆ ಆಗಾಗ ಕಾಡುತ್ತಿದ್ದ ಎದೆ ನೋವು ತೀವ್ರವಾಗಿ, ಒಂದು ತಿಂಗಳಿನಿಂದ ದುರ್ಗಾಪುರ ಡಿಸ್ಟ್ರಿಕ್ಟ್ ಹೆಡ್ ಕ್ವಾರ್ಟರ್ಸ್ ಹಾಸ್ಪಿಟಲಿನಲ್ಲಿ ಚಿಕಿತ್ಸೆ ಹೊಂದುತ್ತಿದ್ದರು. ಅಂತೂ ಕೊನೆಗೆ ಡಾಕ್ಟರ ಎಚ್ಚರಿಕೆಯ ಬೆದರಿಕೆಯಿಂದಾಗಿ ಸಿಗರೇಟಿನ ಸೇವನೆಯನ್ನು ನಿಲ್ಲಿಸಿಬಿಟ್ಟಿದ್ದರು. ಆರೋಗ್ಯ ಸುಧಾರಿಸುತ್ತಾ ಬಂದಿತ್ತು. ಇನ್ನೊಂದು ವಾರದಲ್ಲಿ ಬೆಂಗಳೂರಿಗೆ ಹೊರಡಬಹುದು, ವಿಧಾನ ಸಭಾಧಿವೇಶನ ಕೊನೆಗೊಳ್ಳುವ ಸ್ವಲ್ಪ ದಿನದ ಮೊದಲಾದರೂ ಹೋಗಿ ತಲುಪಬಹುದು ಎಂದು ಯೋಜನೆ ಹಾಕಿಕೊಂಡಿದ್ದರು. ಆದರೆ ದೇಶದ ಎಲ್ಲಾ ಭಾಗಗಳಲ್ಲೂ ಪ್ರಬಲವಾಗುತ್ತಾ ಬರುತ್ತಿದ್ದ ವಿರೋಧಪಕ್ಷ ಭಯವನ್ನುಂಟುಮಾಡುತ್ತಿತ್ತು. ಹಾಗಿದ್ದರೂ ತನ್ನ ಸರಕಾರ ಉಳಿದೀತು, ತನ್ನ ರಾಜಕೀಯ ಜೀವನ ಇಷ್ಟರಲ್ಲೇ ಕೊನೆಗೊಳ್ಳಲಾರದು ಎಂದು ಆಶಿಸುತ್ತಿದ್ದ ಬರೀ ಐವತ್ತೆಂಟು ವರ್ಷ ಪ್ರಾಯದ ರಾಮಕೃಷ್ಣರಾಯರ ಆಶಾಗೋಪುರವು ಮುರಿದುಬಿದ್ದಿತ್ತು. ಮಂತ್ರಿಮಂಡಲದ ವಿಸರ್ಜನೆಯಾಗಿ, ರಾಜ್ಯಪಾಲರು ಆಡಳಿತವನ್ನು ವಹಿಸಿಕೊಂಡುಬಿಟ್ಟಿದ್ದರು. ಇನ್ನು ತಾನು ಪಕ್ಷ ಬದಲಾಯಿಸುವ ಅಥವಾ ಪುನಃ ಚುನಾವಣೆಗೆ ನಿಲ್ಲುವ ಅಗತ್ಯವೇ ಇಲ್ಲ ಎಂದುಕೊಂಡರು ರಾಮಕೃಷ್ಣರಾಯರು. ಅಷ್ಟು ಮಾತ್ರವಲ್ಲ, ತನ್ನ ಈ ದೈಹಿಕ ಪರಿಸ್ಥಿತಿಯಲ್ಲಿ ಇನ್ನು ಅಂಥ ತ್ರಾಸದ ಕೆಲಸ ತನ್ನಿಂದ ನಡೆಯುವ ಹಾಗೆಯೂ ಇಲ್ಲ ಎಂದೆನಿಸಿತವರಿಗೆ.

    ಆರತಿ ಮತ್ತು ಅರುಣ ಕಾಲೇಜಿಗೆ ಹೊರಟುಹೋಗಿದ್ದರು. ಮಗ ಸುರೇಂದ್ರ ಇನ್ನೂ ತನ್ನ ಕೋಣೆಯೊಳಗಿರುವಂತೆ ತೋರಿತು. ಹಜಾರದಲ್ಲಿದ್ದ ರೇಡಿಯೋ ಬಿತ್ತರಿಸಿದ ಸುದ್ದಿ ಅವನ ಕಿವಿಗೂ ಬಿದ್ದಿರಬಹುದು ಅಂದುಕೊಂಡರು ರಾಮಕೃಷ್ಣರಾಯರು. ಆದರೆ ಅವನು ಆ ಕೂಡಲೇ ತನ್ನಲ್ಲಿಗೆ ಬರದಿದ್ದುದನ್ನು ಕಂಡು ಕಸಿವಿಸಿಗೊಂಡರು. ಈಗಿನ ಹುಡುಗರ ಮನೋಭಾವವೆಂಥದೆಂದು ತಿಳಿದುಕೊಳ್ಳುವುದು ಬಹಳ ಕಷ್ಟ ಎಂದುಕೊಂಡರು. ಸುರೇಂದ್ರ ಬಿ.ಎ. ಕೊನೆಯ ವರ್ಷದಲ್ಲಿ ಓದುತ್ತಿದ್ದ. ಅವನಿಗೆ ರಾಜಕೀಯದಲ್ಲಿ ಅಂಥ ಆಸಕ್ತಿಯೇನೂ ಇಲ್ಲ ಎಂದು ರಾಯರಿಗೆ ತಿಳಿದಿತ್ತು. ಆದರೆ ತಂದೆಯ ಮಂತ್ರಿ ಪದವಿ ಉರುಳಿಬಿದ್ದಂಥ ಮಹತ್ತಾದ ವಾರ್ತೆ ಕೂಡ ಅವನ ಗಮನವನ್ನು ಸೆಳೆಯಲಾರದೆ ಅಂದುಕೊಂಡರು. ಹೆಚ್ಚು ಬೇಡ, ತಂದೆ ನಿದ್ದೆ ಮಾಡಿರುವರೆ, ಸುದ್ದಿ ಅವರ ಕಿವಿಗೆ ಬಿದ್ದಿರುವುದೆ ಇಲ್ಲವೆ, ಬಿದ್ದಿದ್ದರೆ ಅವರ ಪ್ರತಿಕ್ರಿಯೆ ಏನು ಎಂದು ತಿಳಿಯುವಷ್ಟು ಕುತೂಹಲವಾದರೂ ಅವನಲ್ಲಿರಬೇಡವೆ ಅಂದುಕೊಂಡರು. ಅಷ್ಟು ಮಾತ್ರವಲ್ಲ. ಅಷ್ಟು ತೀವ್ರವಾದ ಎದೆನೋವಿನಿಂದ ಬಳಲುತ್ತಿದ್ದ ತಂದೆ ಸ್ವಲ್ಪ ಸುಧಾರಣೆ ಹೊಂದಿ ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆ ಬಿಟ್ಟು ಮನೆಗೆ ಬಂದುದು ಈ ಸುದ್ದಿ ಅವರ ಮೇಲೆ ಏನಾದರೂ ದುಷ್ಟರಿಣಾಮ ಉಂಟು ಮಾಡಿರಬಹುದೆ ಎಂದು ಸಂದೇಹದಿಂದಲಾದರೂ ಒಮ್ಮೆ ಇಣಿಕಿ ನೋಡುವ ಬುದ್ದಿ ಅವನಿಗಿರಬಾರದೆ ಎಂದು ಮುನಿದುಕೊಂಡರು.

    ಮನೆಯೊಳಗೆಲ್ಲೋ ಕೆಲಸದಲ್ಲಿ ನಿರತಳಾಗಿರುವ ಹೆಂಡತಿ ರೇಣುಕ ರೇಡಿಯೋದಲ್ಲಿ ಬಂದ ಸುದ್ದಿಯನ್ನು ಕೇಳಿಸಿಕೊಂಡಿರಬಹುದೆಂದು ರಾಯರಿಗೆ ಅನಿಸಲಿಲ್ಲ. ಕೇಳಿಸಿಕೊಂಡಿರಲೂಬಹುದು. ಆದರೆ ಅವಳಿಗೆ ಏನು ಎಂಥದು ಎಂದು ಸ್ಪಷ್ಟವಾಗಿದೆಯೋ ಇಲ್ಲವೊ ಅವಳಿಗೇ ಗೊತ್ತು. ಕರೆಯಬೇಕೆಂದೊಮ್ಮೆ ತೋರಿದರೂ, ತನ್ನ ಪತನದ ಅನಿಷ್ಟ ವಾರ್ತೆಯನ್ನು ತಾನೇ ಕರೆದು ಹೆಂಡತಿಯೊಡನೆ ಹೇಳುವುದರಲ್ಲಿ ಏನು ಸ್ವಾರಸ್ಯ ಅಂತ ಸುಮ್ಮನಾದರು. ಅದೂ ಅಲ್ಲದೆ ಗಂಡನ ರಾಜಕೀಯ ವ್ಯವಹಾರದಲ್ಲಿ ರೇಣುಕಮ್ಮನಿಗೆ ಇದ್ದ ಆಸಕ್ತಿ ಅಷ್ಟಕ್ಕಷ್ಟೆ. ಆರು ವರ್ಷಗಳ ಕಾಲ ಗಂಡ ದುರ್ಗಾಪುರದ ಎಮ್ಮೆಲ್ಲೇಯಾಗಿದ್ದಾಗ ರೇಣುಕಮ್ಮನಿಗೆ ಅದು ದೊಡ್ಡ ಹೆಮ್ಮೆಯ ಸಂಗತಿಯೆಂದೇನೂ ತೋರಿರಲಿಲ್ಲ. ರೇಣುಕಮ್ಮನ ಬಾಳ್ವೆಯ ಕೇಂದ್ರ ಬಿಂದು ಆ ಮನೆ ಮತ್ತು ಮೂರು ಮಕ್ಕಳು; ಸುರೇಂದ್ರ, ಆರತಿ ಮತ್ತು ಅರುಣ. ಮಕ್ಕಳು ದೊಡ್ಡವರಾಗಿದ್ದರೂ ತನ್ನ ಜೀವನವಿರುವುದು ಅವರ ನಡುವೆ, ಅವರಿಗಾಗಿ ಎಂದು ಅವರ ನಂಬಿಕೆಯಾಗಿತ್ತು. ಆದ್ದರಿಂದ ಗಂಡ ಮಂತ್ರಿಯಾಗಿ ಬೆಂಗಳೂರಿನಲ್ಲೇ ನೆಲೆಸಬೇಕಾಗಿ ಬಂದಾಗ, ಅವರು ಅಲ್ಲಿಗೆ ಹೋಗಲು ಇಷ್ಟಪಡಲಿಲ್ಲ, ಕೊನೆಗೂ ರೇಣುಕಮ್ಮನ ಹಟವೇ ಗೆದ್ದು ಮಗ ಮತ್ತು ಮಗಳು ಆರತಿಯೊಂದಿಗೆ ತಾವು ದುರ್ಗಾಪುರದಲ್ಲೇ ನಿಂತರು. ತನ್ನನ್ನು ಯಾರು ನೋಡಿಕೊಳ್ಳದಿದ್ದರೂ ಪರವಾಗಿಲ್ಲ. ಮನೆಯನ್ನು ನೋಡಿಕೊಳ್ಳಲು ಯಾರಾದರೊಬ್ಬರು ಬೇಕು, ಎಲ್ಲವನ್ನೂ ಬೇಕುಬೇಕಾದಂತೆ ಇರಿಸಿಕೊಳ್ಳಲು ಮನೆಗೆ ಒಂದು ಹೆಣ್ಣು ಬೇಕು ಎಂದು ರಾಮಕೃಷ್ಣರಾಯರು ಮಗಳು ಅರುಣಳನ್ನು ಬೆಂಗಳೂರಿಗೆ ಕರಕೊಂಡು ಹೋದರು. ರೇಣುಕಮ್ಮ, ತಾನು ದುರ್ಗಾಪುರ ಬಿಟ್ಟು ಅತ್ತಿತ್ತ ಕದಲುವುದಿಲ್ಲ, ಎಂದು ಹಟ ಹಿಡಿದಾಗ ನನ್ನ ಆರೋಗ್ಯ ನೆಟ್ಟಗಿದ್ದಿದ್ದರೆ ನೀವ್ಯಾರೂ ಬೇಕಾಗಿರಲಿಲ್ಲ ನನಗೆ. ನಾನು ಒಬ್ಬನೇ ಇರುತ್ತಿದ್ದೆ ಎಂದಿದ್ದರು ರಾಯರು. ಮನೆಯ ಏಳಿಗೆ ಆ ಮೇಲೆ, ದೇಶದ ಏಳಿಗೆ ಮೊದಲು ಎಂಬುದು ಅವರ ಧ್ಯೇಯವಾಗಿತ್ತು, ನಂಬಿಕೆಯಾಗಿತ್ತು.

    ಈಗಂತೂ ಗಂಡನ ಮಂತ್ರಿ ಪದವಿ ಹೋದುದು ರೇಣುಕಮ್ಮನಿಗೆ ಸಂತೋಷದ, ಸಮಾಧಾನದ ವಿಷಯವೇ ಆಗಿತ್ತು. ಮಂತ್ರಿ ಪದವಿ ಎಂಬುದು ಬೆಂಗಳೂರಿನಲ್ಲಿ ವಿಧಾನ ಸೌಧದಲ್ಲಿ, ರೇಡಿಯೋದಲ್ಲಿ, ಪೇಪರಿನಲ್ಲಿ ದೊಡ್ಡ ಸಂಗತಿಯಾಗಿರಬಹುದಾದರೂ ಅವರಿಗೆ ಅದೂ ಏನೂ ಆಗಿರಲಿಲ್ಲ. ಅದರ ದೊಡ್ಡತನ ಅವರ ಕಣ್ಣಿಗೇನೂ ಕಾಣಿಸಿರಲಿಲ್ಲ. ಗಂಡ ಮಂತ್ರಿಯಾದುದು ಅವರ ಜೀವನದಲ್ಲಿ ಯಾವ ಬದಲಾವಣೆಯನ್ನೂ ಉಂಟು ಮಾಡಿರಲಿಲ್ಲ. ಯಾವ ಬದಲಾವಣೆಯ ಅಪೇಕ್ಷೆಯೂ ಅವರಿಗಿರಲಿಲ್ಲ.

    ಇಡೀ ದುರ್ಗಾಪುರದಲ್ಲಿ ಅತಿ ದೊಡ್ಡ ಶ್ರೀಮಂತರಾದ ಗಣಪತಿರಾಯರ ಇಬ್ಬರೇ ಗಂಡುಮಕ್ಕಳಲ್ಲಿ ಹಿರಿಯವರಾದ ರಾಮಕೃಷ್ಣರಾಯರಿಗೆ ಹತ್ತು ತಲೆಮಾರು ಕುಳಿತುಣ್ಣಲು ಬೇಕಾದಷ್ಟು ಅಡಿಕೆ ತೋಟ, ಗದ್ದೆ ಆಸ್ತಿ ಪಾಸ್ತಿಯಿತ್ತು. ರಾಮಕೃಷ್ಣರಾಯರ ತಮ್ಮ ಗಂಗಾಧರರಾಯರು ತಂದೆ ಜೀವಿಸಿದ್ದಾಗಲೇ ತಂದೆಯೊಡನೆ ಜಗಳಾಡಿ ದುರ್ಗಾಪುರದಿಂದ ಎಂಟು ಮೈಲು ದೂರದ ಅತ್ತೂರಿನಲ್ಲಿದ್ದ ತಂದೆಯದೇ ಆಸ್ತಿಯನ್ನು ತನ್ನ ಪಾಲಾಗಿ ಪಡೆದುಕೊಂಡು ಸ್ವತಂತ್ರವಾದ ಮನೆ, ವ್ಯವಹಾರದಲ್ಲಿ ತೊಡಗಿದ್ದರು.

    ರಾಮಕೃಷ್ಣರಾಯರು ಮತ್ತು ತಮ್ಮ ಗಂಗಾಧರರಾಯರ ನಡುವೆ ಅಷ್ಟೊಂದು ಅನ್ಯೋನ್ಯತೆಯಿರಲಿಲ್ಲ. ಆದರೂ ವಿಶೇಷ ಸಂದರ್ಭಗಳಲ್ಲಿ, ಅಗತ್ಯದ ವಿಷಯಗಳಿಗೆ ಬರುವುದು ಹೋಗುವುದು ಇತ್ತು. ಮಂತ್ರಿಪದವಿ ದೊರೆತಾಗ ಸಂಸಾರ ಸಮೇತ ಬೆಂಗಳೂರಿಗೆ ಹೋಗುವ ಯೋಚನೆ ರಾಮಕೃಷ್ಣರಾಯರದಾಗಿತ್ತು. ಆಗ ಆಸ್ತಿಪಾಸ್ತಿಯ ವ್ಯವಹಾರವನ್ನು ನೋಡಿಕೊಳ್ಳಲು ತಮ್ಮನೊಡನೆ ಹೇಳಬಹುದೆಂದು ಯೋಚಿಸಿದ್ದರು. ಗಂಗಾಧರರಾಯರೂ ಅದಕ್ಕೆ ತುದಿಗಾಲ ಮೇಲೆ ಸಿದ್ಧರಿದ್ದರು. ಆದರೆ ರೇಣುಕಮ್ಮ ಅದಕ್ಕೆ ಸಮ್ಮತಿಸಲಿಲ್ಲ. ಒಮ್ಮೆ ಆಸ್ತಿಯನ್ನು ಪರಭಾರೆ ಮಾಡಿದರೆ ಅದರ ರೂಪವನ್ನು ಕೆಡಿಸಿದಂತೆಯೇ ಎಂಬುದು ರೇಣುಕಮ್ಮನ ವಾದವಾಗಿತ್ತು. ನಿಸ್ವಾರ್ಥ ಬುದ್ಧಿಯಿಂದ ಗಂಗಾಧರ ರಾಯರು ಎಲ್ಲವನ್ನೂ ನೋಡಿಕೊಳ್ಳುವರು ಎಂಬ ನಂಬಿಕೆ ಏನೂ ಇರಲಿಲ್ಲ. ಗಂಗಾಧರರಾಯರಿಗೆ ಏಳು ಮಕ್ಕಳಿದ್ದರು. ಸುರೇಂದ್ರನ ಪ್ರಾಯದ ಇಬ್ಬರು ಹುಡುಗರಿದ್ದರು. ಹಿರಿಯವನಿಗೆ ಮದುವೆಯಾಗಿ ಒಂದು ಮಗುವಿನ ತಂದೆಯೂ ಆಗಿದ್ದ. ಅಣ್ಣ ತನ್ನ ಮನೆ ಮತ್ತು ಆಸ್ತಿಯನ್ನು ನೋಡಿಕೊಳ್ಳಲು ತನ್ನೊಡನೆ ಹೇಳಿದರೆ ತನ್ನ ಅರ್ಧ ಸಂಸಾರವನ್ನು ಅಲ್ಲಿಗೆ ಸಾಗಿಸಲು ಆಗಲೇ ಗಂಗಾಧರರಾಯರು ಯೋಜನೆ ಹಾಕಿದ್ದರು. ಐದು ವರ್ಷದ ಅವಧಿಯಲ್ಲಿ ಒಬ್ಬ ಮಗನಿಗೆ ಬೇಕಾದಷ್ಟನ್ನು ಕರಗಿಸಿಕೊಳ್ಳುವ ಯೋಚನೆ ಅವರಿಗಿತ್ತು. ತಮ್ಮನ ಉತ್ಸಾಹದ ಮಾತಿನಿಂದ ರಾಮಕೃಷ್ಣರಾಯರಿಗೆ ಅವನ ಮನದ ಇಂಗಿತವನ್ನು ಸ್ವಲ್ಪ ಮಟ್ಟಿಗೆ ಅರ್ಥಮಾಡಿ ಕೊಳ್ಳಲು ಸಾಧ್ಯವಾಗಿತ್ತು. ಆದರೂ ಎಷ್ಟೆಂದರೂ ತಮ್ಮನಲ್ಲವೆ ಎಂಬ ದಾಕ್ಷಿಣ್ಯಭಾವವೂ ಇತ್ತು. ಆದರೆ ರೇಣುಕಮ್ಮ ಬೆಂಗಳೂರಿಗೆ ಹೋಗಲು ಸರ್ವಥಾ ಸಿದ್ಧರಿರಲಿಲ್ಲ. ಗಂಡ ಮಂತ್ರಿ ಪದವಿಯನ್ನು ಬಿಟ್ಟು ದುರ್ಗಾಪುರದಲ್ಲೇ ಇದ್ದರೆ ಚೆನ್ನ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ರಾಮಕೃಷ್ಣರಾಯರನ್ನು ಮಂತ್ರಿಪದವಿ ಕರೆಯುತ್ತಿತ್ತು. ಅಲ್ಲದೆ ಇಡೀ ಸರಕಾರದಲ್ಲಿ ಅವರೊಬ್ಬರೇ ಬ್ರಾಹ್ಮಣ ಮಂತ್ರಿ. ಇದು ಬ್ರಾಹ್ಮಣರಿಗೆ ಸಿಕ್ಕಿದ ಬಹುದೊಡ್ಡ ಅವಕಾಶ, ಅವರಿಗೆ ದೊಡ್ಡ ಗೌರವದ ಸಂಗತಿ ಎಂದು ದುರ್ಗಾಪುರ ಮಾತ್ರವಲ್ಲ, ಇಡೀ ರಾಜ್ಯದ ಬ್ರಾಹ್ಮಣರ ಅಭಿಪ್ರಾಯವಾಗಿತ್ತು. ಬ್ರಿಟಿಷರ ಕಾಲದಿಂದಲೇ ಮುಖ್ಯವಾಗಿ ಸರಕಾರಿ ಕೆಲಸಗಳಲ್ಲಿ ಮಾತ್ರ ಬ್ರಾಹ್ಮಣರ ಪಾಂಡಿತ್ಯ ಸವೆಸಲ್ಪಡುತ್ತಿತ್ತು. ಸಿವಿಲ್ ಸರ್ವೀಸ್ ಅಧಿಕಾರಿಗಳು, ನ್ಯಾಯಾಧೀಶರು, ದೊಡ್ಡ ದೊಡ್ಡ ಲೆಖ್ಖಪರಿಶೋಧಕರೆಲ್ಲಾ ಹಣೆಯ ಮೇಲೆ ಗಂಧ ಬಳೆದು ಹೊಟ್ಟೆಯ ಮೇಲೆ ನೂಲು ಬಿಟ್ಟವರಾಗಿದ್ದರು. ಮೊಟ್ಟಮೊದಲಿಗೆ, ಬ್ರಾಹ್ಮಣರಿಗೆ ರಾಜಕೀಯದಲ್ಲೂ ಮೇಲ್ಮೆಯನ್ನು ಸಾಧಿಸಲು ಸಾಧ್ಯ ಎಂದು ರಾಮಕೃಷ್ಣರಾಯರು ತೋರಿಸಿಕೊಟ್ಟಿದ್ದರು.

    ಆದ್ದರಿಂದಲೇ ತನ್ನ ಜಾತಿಯ ಮೊತ್ತಮೊದಲ ಮಂತ್ರಿ ತಾನು ಎಂದು ರಾಮಕೃಷ್ಣರಾಯರು ಎದೆಯುಬ್ಬಿಸಿ ನಿಂತಿದ್ದರು. ಹೆಂಡತಿ ಮಕ್ಕಳ ಸುಖ ದುಃಖಕ್ಕನುಸಾರವಾಗಿ ಬಿಟ್ಟುಕೊಡುವಂಥ ಅವಕಾಶವಾಗಿರಲಿಲ್ಲ ಅದು.

    ರಾಜಕೀಯವನ್ನು ಪ್ರವೇಶಿಸಬೇಕೆಂದು ರಾಮಕೃಷ್ಣರಾಯರು ಎಂದೂ ಅಪೇಕ್ಷಿಸಿರಲಿಲ್ಲ. ಬ್ರಿಟಿಷರ ಕಾಲದಲ್ಲಿ ಇಂಟರ್‍ವರೆಗೆ ಓದಿ, ಆ ಮೇಲೆ ಸ್ವಾತಂತ್ರ್ಯ ಆಂದೋಲನದಲ್ಲಿ ಸೇರಿ ಒಂದೆರಡು ಬಾರಿ ಜೈಲಿಗೆ ಹೋಗಿದ್ದುದೇನೋ ಹೌದು. ಆದರೆ ಅಂದು ಅದು ರಾಜಕೀಯವಾಗಿರಲಿಲ್ಲ. ದೇಹದಲ್ಲಿ ಆತ್ಮಗೌರವದ, ಸ್ವದೇಶಾಭಿಮಾನದ ರಕ್ತ ಹರಿಯುತ್ತಿದ್ದವರೆಲ್ಲ ಪಾರತಂತ್ರ್ಯದೆದುರು ಸಿಡಿದೆದ್ದು ನಿಂತ ಸಂಭವ ಆಗಿತ್ತದು.

    ಹತ್ತು ವರ್ಷದ ಹಿಂದೆ ದುರ್ಗಾಪುರದ ಜನರು ಒತ್ತಾಯಿಸದಿರುತ್ತಿದ್ದರೆ ರಾಮಕೃಷ್ಣರಾಯರು ಚುನಾವಣೆಗೆ ನಿಲ್ಲುವ ಮನಸ್ಸು ಮಾಡುತ್ತಿರಲಿಲ್ಲ. ಮೊದಲ ಚುನಾವಣೆಯಲ್ಲೇ ತನ್ನ ಎದುರಾಳಿಯನ್ನು ಹಲವು ಸಾವಿರ ಓಟುಗಳ ಬಹುಮತದಿಂದ ಸೋಲಿಸಿ ಗೆದ್ದ ರಾಮಕೃಷ್ಣರಾಯರ ಸ್ಥಾನ ದುರ್ಗಾಪುರ ಕ್ಷೇತ್ರದಲ್ಲಿ ಖಾಯಂ ಎನಿಸಿತು.

    ಈಗ ಎಲ್ಲವೂ ಬದಲಾಗಿತ್ತು. ತನ್ನ ಹೆಸರಿಗೆ ರಾಜಕೀಯದ ಕೊಳಕು ಏನೂ ಅಂಟದಿದ್ದುದರಿಂದ ಮುಂದಿನ ಚುನಾವಣೆಯಲ್ಲಿ ತಾನು ದುರ್ಗಾಪುರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೆ ಪುನಃ ಅದೇ ಪಕ್ಷದಿಂದ ಗೆದ್ದು ಬರುವುದು ಅಸಂಭವವಲ್ಲ ಎಂದು ತೋರಿದರೂ, ಮಂತ್ರಿ ಪದವಿಯನ್ನು ಕಳಕೊಂಡು ಇನ್ನು ಬರೀ ಎಮ್ಮೆಲ್ಲೆ ಆಗಿ ವಿರೋಧಪಕ್ಷದ ಬೆಂಚಿನಲ್ಲಿ ಕುಳಿತುಕೊಳ್ಳುವುದು ರುಚಿಸುವಂಥ ಸಂಗತಿಯಾಗಿ ಅವರಿಗೆ ತೋರಲಿಲ್ಲ.

    ಸರಿ, ಇಂದಿಗೆ ತನ್ನ ರಾಜಕೀಯ ಜೀವನ ಕೊನೆಗೊಂಡಂತಾಯಿತು ಎಂದು ರಾಮಕೃಷ್ಣರಾಯರು ಇನ್ನೊಮ್ಮೆ ನಿಟ್ಟುಸಿರು ಬಿಟ್ಟರು. ದೀರ್ಘವಾಗಿ ರೇಡಿಯೋದಲ್ಲಿ ಕನ್ನಡ ಭಾವಗೀತೆಯೊಂದು ರಸವತ್ತಾಗಿ ಹೊರ ಹೊಮ್ಮತ್ತಿತ್ತು. ಆದರೆ ಈಗಿನ ನಿಟ್ಟುಸಿರಿನಲ್ಲಿ ಅಷ್ಟೊಂದು ಬಿಸಿಯಿರಲಿಲ್ಲ. ರಾಯರು ಹಾಡಿಗೆ ಕಿವಿಗೂಡುತ್ತಾ ಮಲಗಿದ್ದರು. ಆದರೆ ಹಾಡಿನಲ್ಲೇ ರಾಯರ ಮನಸ್ಸು ಬಹಳ ಹೊತ್ತು ತಂಗಲಿಲ್ಲ.

    ರಾಜಕೀಯದಿಂದ ರಾಯರ ಒಳನೋಟ ತನ್ನ ಸಂಸಾರ ಮತ್ತು ಸಾಂಸಾರಿಕ ಜೀವನದ ಕಡೆಗೆ ತಿರುಗಿತ್ತು. ಮಂತ್ರಿ ಪದವಿಯೇನೋ ಅವರ ಅಂತಸ್ತನ್ನು ಹೆಚ್ಚಿಸಿತ್ತು. ಕೀರ್ತಿಯನ್ನು ತಂದಿತ್ತು. ಆದರೆ ಆರೋಗ್ಯವನ್ನು ಬಹಳವಾಗಿ ಕುಂದಿಸಿತ್ತು. ಇನ್ನಾದರೋ ಹೊಲ ತೋಟಗಳನ್ನು ನೋಡಿಕೊಂಡು ಸ್ವಲ್ಪ ಕಾಲ ಚೆನ್ನಾಗಿ, ಹಾಯಾಗಿ ಜೀವಿಸಬಹುದೆಂದುಕೊಂಡರು. ರಾಜಕೀಯ ತನಗಂಟಿದಂದಿನಿಂದ ಇದುವರೆಗೆ ಹಾಯಾಗಿ ನಾಲ್ಕು ದಿನ ಊರಲ್ಲಿರಲು ಅವಕಾಶವಾಗಲಿಲ್ಲ; ತಲೆಗೆ, ಮೈಗೆ ಸರಿಯಾದ ಒಂದು ಬಿಡುವು ಎಂಬುದು ಸಿಕ್ಕಿರಲಿಲ್ಲ. ಹೀಗಾದುದು ಒಳ್ಳೆಯದೇ ಆಯ್ತು, ಇನ್ನುಳಿದ ಆಯಸ್ಸನ್ನು ಯಾವೊಂದು ತಲೆಬೇನೆ ಇಲ್ಲದೆ ಇಲ್ಲೇ ಕಳೆಯುತ್ತೇನೆ ಅಂದುಕೊಂಡರು.

    ಮಕ್ಕಳ ಕಡೆಗೆ, ಅವರ ವಿದ್ಯಾಭ್ಯಾಸ ಮತ್ತು ಭವಿಷ್ಯದ ಕಡೆಗೆ ರಾಯರ ಗಮನ ಹರಿಯಿತು. ಮಗ ಸುರೇಂದ್ರನನ್ನು ಡಾಕ್ಟರಾಗಿಸಬೇಕೆಂದು ಅವರು ಆಶಿಸಿದ್ದರೂ ಅವನಿಗಾಗಲೀ, ಆ ಮೇಲಿನ ಅವಳಿಜವಳಿ ಮಕ್ಕಳಾದ ಆರತಿ ಮತ್ತು ಅರುಣರಿಗಾಗಲಿ ಸಯನ್ಸ್ ರುಚಿಸಲಿಲ್ಲ. ಎಲ್ಲರೂ ದುರ್ಗಾಪುರ ಆಟ್ರ್ಸ್ ಅ್ಯಂಡ್ ಸಯನ್ಸ್ ಕಾಲೇಜು ಹತ್ತಿದರು. ಸುರೇಂದ್ರ ಇಂಗ್ಲೀಷ್ ಸಾಹಿತ್ಯದ ಬೆನ್ನುಹತ್ತಿ ಬಿ.ಎ. ಫೈನಲ್‍ನಲ್ಲಿದ್ದ. ಬಿ.ಎ ಮುಗಿಸಿ ಎಂ.ಎ ಗೆ ಹೋಗಬೇಕು ಐ.ಎ.ಎಸ್ ಮಾಡಬೇಕು ಎಂಬ ಆಸೆಯಿಟ್ಟುಕೊಂಡಿದ್ದ ಆರತಿ ಬಿ.ಎಸ್‍ಸಿ. ಮೊದಲ ವರ್ಷದಲ್ಲಿ ಗಣಿತದೊಂದಿಗೆ ಹೆಣಗಾಡುತ್ತಿದ್ದಳು. ಅರುಣ ಅರ್ಥಶಾಸ್ತ್ರ ಬಿ.ಎಯ ಮೊದಲ ವರ್ಷದಲ್ಲಿ ಓದುತ್ತಿದ್ದಳು.

    ಮಗ ಕಲಿಯುವುದರಲ್ಲಿ ನಿಪುಣ, ಅವನ ಭವಿಷ್ಯ ಅವನೇ ನೋಡಿಕೊಂಡಾನು. ಡಾಕ್ಟರಾಗದಿದ್ದರೂ ಐ.ಎ.ಎಸ್. ಅಧಿಕಾರಿಯಾದರೆ ಪರವಾಗಿಲ್ಲ ಅಂದುಕೊಂಡರು. ಇನ್ನು, ಹುಡುಗಿಯರಿಬ್ಬರಿಗೆ ಒಮ್ಮೆ ಅವರ ಡಿಗ್ರಿಯ ಓದು ಮುಗಿಸಿದರೆ ಸಾಕು ಗಂಡನ ಮನೆಯ ದಾರಿ ತೋರಿಸುವುದು, ಅವರು ಡಾಕ್ಟರಾದರೂ ಆಗದಿದ್ದರೂ ದೊಡ್ಡ ವ್ಯತ್ಯಾಸವೇನೂ ಇಲ್ಲ ಅಂದುಕೊಂಡರು.

    ಅಷ್ಟರಲ್ಲಿ ಸುರೇಂದ್ರನನ್ನು ಕೇಳಿಕೊಂಡು ಮನೋಹರ ಮನೆಯೊಳಗೆ ಬಂದುದರಿಂದ ರಾಯರ ಯೋಚನೆಗೆ ಭಂಗವುಂಟಾಯಿತು.

    ಏನೊ, ಹೊರಡಲು ಹೊತ್ತಾಗಿಲ್ವೆ? ಮನೋಹರನ ಸ್ವರ.

    ಆಯ್ತು, ಬಂದುಬಿಟ್ಟೆ ಸುರೇಂದ್ರನ ಸ್ವರ.

    ಮನೋಹರ ರಾಮಕೃಷ್ಣರಾಯರ ಕೋಣೆಯ ಬಳಿ ಬಂದು ಮೆಲ್ಲನೆ ಇಣಿಕಿ ನೋಡಿದ.

    ಯಾರು ಮನೋಹರನೆ? ರಾಯರು ಕೇಳಿದರು.

    ಹೌದು ಹೇಗಿದ್ದೀರಿ ಇವತ್ತು? ಮನೋಹರ ಕೇಳಿದ.

    ಪರವಾಗಿಲ್ಲ ಚೆನ್ನಾಗಿದೀನಿ ರಾಯರೆಂದರು.

    ಅಷ್ಟರಲ್ಲಿ ಗೇಟಿನ ಬಳಿ ಕಾರು ಬಂದು ನಿಂತ ಸದ್ದಾಯಿತು.

    ಡಾಕ್ಟ್ರು ಬಂದ್ರು ಮನೋಹರನೆಂದ.

    ಒಳಗಿನಿಂದ ರೇಣುಕಮ್ಮ ಹೊರಬಂದರು. ಅಷ್ಟರಲ್ಲಿ ಸುರೇಂದ್ರನೂ ಪುಸ್ತಕಗಳನ್ನು ಹಿಡಕೊಂಡು ತನ್ನ ಕೋಣೆಯಿಂದ ಹೊರಬಂದ. ಡಾಕ್ಟರ್ ಉಪೇಂದ್ರ ಪೈ ಮುಗುಳ್ನಕ್ಕು ಒಳಬರುತ್ತಾ,

    ಹೇಗಿದ್ದಾರೆ ರಾಯರು? ಎಂದು ಕೇಳಿದರು ರೇಣುಕಮ್ಮನನ್ನು ನೋಡಿ, ಮೆತ್ತಗಿನ ಸಣ್ಣ ದನಿಯಲ್ಲಿ.

    ಚೆನ್ನಾಗಿಯೇ ಇದ್ದಾರೆ ರೇಣುಕಮ್ಮ ಹೇಳಿದರು.

    ಸುದ್ದಿ ತಿಳಿದಿರಬೇಕಲ್ಲ ಅವರಿಗೆ ಇಷ್ಟರಲ್ಲೆ? ಡಾಕ್ಟರ್ ಉಪೇಂದ್ರ ಪೈ ಕೇಳಿದರು.

    ಏನು, ಏನು ಸುದ್ದಿ? ರೇಣುಕಮ್ಮ ಕುತೂಹಲದಿಂದ ಕೇಳಿದರು.

    ವಿಷಯ ಮನೋಹರನಿಗೂ ತಿಳಿದಿರಲಿಲ್ಲ. ಅವನೂ ಬೆರಗಿನಿಂದ ಡಾಕ್ಟರ್ ಉಪೇಂದ್ರ ಪೈಯವರ ಮುಖ ನೋಡಿದ.

    ಅದೇ, ಅವರ ಸರಕಾರ ಕೊನೆಯ ಶ್ವಾಸ ಎಳೆಯಿತು ಸುರೇಂದ್ರನೆಂದ ಕೋಣೆಯಿಂದ ಹೊರಬರುತ್ತಾ.

    ಅಂದ್ರೆ? ರೇಣುಕಮ್ಮ ಸ್ಪಷ್ಟವಾಗದೆ ಕೇಳಿದರು.

    ಅಂದ್ರೆ ಅಪ್ಪನ ಮಿನಿಸ್ಟರ್‍ಗಿರಿ ಇವತ್ತಿಗೆ ಮುಗಿಯಿತು ಸುರೇಂದ್ರನೆಂದ ಮುಗುಳ್ನಗುತ್ತಾ.

    ಈ ಮಾತೆಲ್ಲಾ ರಾಯರ ಕಿವಿಗೆ ಬಿತ್ತು. ಈ ಹುಡುಗ ಈ ವಿಚಾರವನ್ನು ಎಷ್ಟು ಲಘವಾಗಿ ತಕ್ಕೊಂಡಿದ್ದಾನೆ! ಇವನಿಗೆ ಇದೊಂದು ಸುದ್ದಿಯೇ ಅಲ್ಲ. ಅವನು ಮಾತನಾಡುವ ಧಾಟಿ ನೋಡಿದರೆ ಹಾಸ್ಯ ಮಾಡುತ್ತಿರುವಂತೆ ತೋರುತ್ತಿದೆ. ಒಮ್ಮೆ ಈ ಕಡೆ ಇಣಿಕಿ ನೋಡಿ ಒಂದೆರಡು ಮಾತು ಆಡಿಹೋಗುವಷ್ಟು ಗಂಭೀರವಾದ ವಿಷಯವಾಗಿ ಅವನಿಗೆ ತೋರಲಿಲ್ಲ ಛೆ ಅನಿಸಿತು.

    ಡಾಕ್ಟರ್ ಉಪೇಂದ್ರ ಪೈ ಸುರೇಂದ್ರನ ಮಾತಿಗೆ ಏನೂ ಪ್ರತಿಕ್ರಿಯೆ ತೋರಿಸಲಿಲ್ಲ.

    ಒಳ್ಳೆಯದೇ ಆಯಿತು ಎಂಬ ರೇಣುಕಮ್ಮನ ಮಾತಿನಿಂದ ಮಾತ್ರ ಡಾಕ್ಟರ್ ಪೈಯವರ ಅವರ ಕಿವಿ ಚುರುಕಾಯಿತು. ಅವರು ರಾಯರ ಕೋಣೆಯ ಕಡೆಗೆ ಹೆಜ್ಜೆ ಹಾಕಿದರು. ರೇಣುಕಮ್ಮನೂ ಅವರೊಂದಿಗೆ ಗಂಡನ ಕೋಣೆಯೊಳಗೆ ನಡೆದರು.

    ಸುರೇಂದ್ರ ಹೊರ ಹೊರಟಾಗ, ಅಷ್ಟು ಹೊತ್ತು ಸುಮ್ಮನೆ ನಿಂತಿದ್ದ ಮನೋಹರನೂ ಅವನೊಂದಿಗೆ ಹೆಜ್ಜೆ ಹಾಕಿದ. ಗೇಟು ದಾಟಿ ಮಾರ್ಗಕ್ಕೆ ತಲುಪಿದಾಗ ಮನೋಹರ ಕೇಳಿದ,

    ಅದೇನೂ ಅಪ್ಪನ ಮಂತ್ರಿ ಪದವಿ ಹೋದ್ದಕ್ಕೆ ಸಂತೋಷ ಪಡೋ ಹಾಗಿದೆಯಲ್ಲ ನೀನು?

    ಸಂತೋಷವೂ ಇಲ್ಲ, ದುಃಖವೂ ಇಲ್ಲ ಸುರೇಂದ್ರನೆಂದ.

    ಕಾರಣ?

    ಅಪ್ಪ ಮಂತ್ರಿಯಾಗಿಬಿಟ್ಟರೆ ನನಗೇನು ಕೋಡು ಮೂಡುತ್ತದೆಯೆ? ಅಪ್ಪನ ಇನ್‍ಫ್ಲುಯೆನ್ಸಿನಿಂದ ಸರಕಾರಿ ಭೂಮಿಯೋ, ಫ್ಯಾಕ್ಟರಿಗೆ ಲೈಸೆನ್ಸೋ, ಬೇರೇನಾದರೂ ಕೃಪೆಯೋ ನನಗೆ ಬೇಕಾಗಿಲ್ಲ. ನಾನು ಮಾಡಿದ್ದು ನನ್ಗೆ, ಅಪ್ಪ ಮಾಡಿದ್ದು ಅಪ್ಪನಿಗೆ ಎಂದ ಸುರೇಂದ್ರ ನಕ್ಕು.

    ಆದ್ರೂ ನೀನು ಮಾತಾಡಿದ ರೀತಿ ಸ್ವಲ್ಪ ವಿಚಿತ್ರವೇ ಸರಿ. ಅವರು ಕೇಳಿಸಿಕೊಂಡ್ರೆ ಬೇಸರ ಪಟ್ಕೊಳ್ತಾರೆ ಮನೋಹರನೆಂದ.

    ``ಅವರಿಗೂ ಗೊತ್ತು ಬಿಡು, ನನಗೆ ಅವರು ಮಂತ್ರಿ ಅಲ್ಲ, ಅಪ್ಪ ಮಾತ್ರ ಅಂತ. ಮಂತ್ರಿ ಅಂತ ನಾನು ಅವರಿಗೆ ಸ್ಪೆಷಲ್ಲಾಗಿ ಒಂದು ಸಲಾಂ ಹೊಡಿಯೊಲ್ಲ. ಮಂತ್ರಿ ಅಲ್ಲ ಅಂತ ಅಗೌರವ ತೋರಿಸೋಲ್ಲ. ಅಪ್ಪ ಅಂತ ಇರೋ ಪ್ರೀತಿ ಆಗ ಇದ್ದ ಹಾಗೆ ಈಗ್ಲೂ ಇದೆ" ಸುರೇಂದ್ರನೆಂದ.

    "ಕಿಂಗ್ ಲಿಯರನ ಮಗಳು ಹೇಳಿದ ಹಾಗೆ ‘ನೈದರ್ ಮೋರ್ ನಾರ್ ಲೆಸ್’ ಎಂದ ಮನೋಹರ ನಕ್ಕು.

    ಮಾತೆತ್ತಿದರೆ ಕೊಟೇಶನ್ ಹೇಳಿ ಬೋರ್ ಮಾಡ್ತಿ ಸುರೇಂದ್ರನೆಂದ.

    ಐ ಆಮ್ ಸಾರಿ ಫಾರ್ ದಟ್. ಅಂತೂ ಅವರ ಮಂತ್ರಿ ಪದವಿ ಹೋಗಿರೋದು ನಿಮಗೆಲ್ಲರಿಗೂ ಸಂತೋಷವನ್ನೇ ಉಂಟುಮಾಡಿದೆ ಅನ್ಸುತ್ತೆ ಎಂದ ಮನೋಹರ.

    ಒಂದು ಕ್ಷಣ ತಡೆದು ಸುರೇಂದ್ರನೆಂದ.

    ನನ್ನ ವಿಚಾರ ಬಿಡು. ಅಮ್ಮನಿಗೆ ತುಂಬಾ ಸಂತೋಷ ಆಗಿದೆ. ಅದ್ರಿಂದಲೇ ನಮಗೆಲ್ಲರಿಗೂ ಸಂತೋಷ. ನಿನ್ನೆಯೇ ಆರತಿ ಹೇಳ್ತಾ ಇದ್ಲು. ‘ಅಪ್ಪನ ಮಂತ್ರಿ ಪದವಿ ಹೋಗುತ್ತೆ’ ಅಂತ ಮಂತ್ರಿ ಪದವಿ ಮಾತ್ರವಲ್ಲ್ಲ, ಎಮ್ಮೆಲ್ಲೇ ಕೂಡ ಅದರ ಹಿಂದೇನೇ ಹೋಗುತ್ತೆ. ಅವರು ರಾಜಕೀಯ ಸೇರ್ಕೊಂಡ ಮೇಲೆ ಅವರು ಏನೂ ಸುಖಪಡ್ಲಿಲ್ಲ. ನಮಗ್ಯಾರಿಗೂ ಹೇಳಿಕೊಳ್ಳುವಂಥ ಹೊಸದೇನೂ ಬಂದು ಸೇರ್ಕೊಂಡಿಲ್ಲ.

    ಅವರು ಎಲ್ಲಾ ಮಂತ್ರಿಗಳಂತೆ ಹಣ ಮಾಡ್ಲಿಲ್ಲ. ಅದ್ರಿಂದ ತಾನೆ? ಮನೋಹರ ಮುಗುಳ್ನಗುತ್ತಾ ಕೇಳಿದ.

    ಹಣ ಮಾಡೋದು ಅವರ ಜಾಯಮಾನಕ್ಕೆ ಸೇರಿದ್ದಲ್ಲ. ನಿನಗ್ಗೊತ್ತಲ್ಲ. ಬಹಳ ಕಟ್ಟುನಿಟ್ಟಿನ ಮನುಷ್ಯ ಅವರು. ಆದ್ರಿಂದ್ಲೇ ನಾನನ್ನೋದು ರಾಜಕೀಯ ಅವರಿಗೆ ಹಿಡಿಸಿದ್ದಲ್ಲ ಅಂತ. ಊರು, ಊರಿನ ನೀರು ಮತ್ತು ಊರಿನ ಮಣ್ಣೇ ಅಂಥವರ ಆರೋಗ್ಯಕ್ಕೆ ಒಳ್ಳೆಯದು.

    ಮತ್ತೆ ರಾಜಕೀಯ ಯಾರಿಗೆ ದಗಾಖೋರರಿಗೆ, ಗೂಂಡಾಗಳಿಗೆ ಅನ್ತೀಯಾ? ಮನೋಹರ ಕೇಳಿದ.

    ಅಲ್ಲ, ಆದರೆ ನನ್ನಪ್ಪನಂಥವರಿಗೂ ಅಲ್ಲ, ಸ್ಪಷ್ಟವಾಗಿ ಹೇಳೋದಾದ್ರೆ ರಾಜಕೀಯದಲ್ಲಿರಬೇಕಾದವರು ನಿನ್ನಂಥವರು ಸುರೇಂದ್ರನೆಂದ ನಗುತ್ತಾ.

    ಯಾಕೆ? ಮನೋಹರ ಆಶ್ಚರ್ಯದಿಂದ ಕೇಳಿದ.

    ಇನ್ನೊಂದು ದಿನ ಹೇಳ್ತೀನಿ ಸುರೇಂದ್ರನೆಂದ.

    ಒಂದೆರಡು ನಿಮಿಷದ ಬಳಿಕ ತಟ್ಟನೆ ಜ್ಞಾಪಿಸಿಕೊಂಡು ಮನೋಹರನೆಂದ,

    ಹೌದೇನೊ ಸುರೇಂದ್ರ, ಈಗೊಂದು ಸಮಸ್ಯೆಯುಂಟಾಯ್ತಲ್ಲ?

    ಏನು?

    ಕಾಲೇಜು ಡೇಯ ವಿಚಾರ ಮರೆತೇ ಹೋಗಿತ್ತು ನೋಡು.

    ಏನಾಯ್ತೀಗ?

    ಏನೂ ತಿಳಿಯದ ಹಾಗೆ ಮಾತಾಡ್ತೀಯಲ್ಲ? ನಿಮ್ಮಪ್ಪನ ಅಧ್ಯಕ್ಷತೆ ಅಂತ ಇಷ್ಟರಲ್ಲೇ ಇನ್ವಿಟೇಶನ್ ಕೂಡ ಹಂಚಿ ಆಗಿದೆ.

    ಸರಿ, ಏನು ಗಾಬರಿ?

    ಇನ್ನೀಗ ಅವರು ಬರುತ್ತಾರೋ ಇಲ್ವೋ ಅಂತ? ಮನೋಹರ ಆತಂಕದಿಂದ ಕೇಳಿದೆ.

    ನೀನು ಸ್ಪೀಕರ್ ಅಂತ ತಾನೆ ಇಷ್ಟು ಕಳಕಳಿ! ಹೆದರ್ಕೋಬೇಡ ಬಂದೇಬರ್ತಾರೆ. ಸದ್ಯಕ್ಕೆ ಬೆಂಗ್ಳೂರಿಗೆ ಗಾಡಿ ಹತ್ತಲ್ಲ, ಮತ್ತೆಲ್ಲಿಗೆ ಹೋಗ್ತಾರೆ? ಸುರೇಂದ್ರ ಹೇಳಿದ ನಗುತ್ತಾ.

    Enjoying the preview?
    Page 1 of 1