Discover millions of ebooks, audiobooks, and so much more with a free trial

Only $11.99/month after trial. Cancel anytime.

Baduku Chithra Chittara
Baduku Chithra Chittara
Baduku Chithra Chittara
Ebook465 pages2 hours

Baduku Chithra Chittara

Rating: 0 out of 5 stars

()

Read preview

About this ebook

Born in Mangalore, Shyamala had schooling at Besant National Girls High School and college education at St Agnes College, Mangalore.

Her father, Narayana Uchil, was an educationist and reformist and mother U Vasanthi worked as PT and Guiding teacher at the Besant National Girls School.

With an inborn passion for books and reading and with a treasury of books at home, she read a lot and soon took to writing. Her first poem 'KaDalina Kare' was published in 'Rashtrabandhu, when she was just eleven.

Married life brought her to Mumbai. Memoirs of her grandmother were published in 'Amrita Varshini' in 'BeLLi' in 1971. Her other works are Kannada stories, features, translated stories and travelogues in different magazines in Karnataka and Mumbai.

She has worked for Sound and Picture Archive for Research On Women (SPARROW) in the field of transcription and translation. She has also served on the editorials of Mumbaivani special issues and Nityavani daily in Mumbai. She has presented a research paper on Mumbai-based Kannada fiction at PUKAR in Mumbai.

Besides, she was the president of Srijana, a forum of women writers in Kannada in Mumbai for two years. During her tenure, she had organized seminars, book releases and workshops in collaboration with the Anuvada Academy, Bangalore.

Her published works include 'Alamapanah', translated from the Hindi version of the Urdu novel of the same name by Rafia Manzurul Amin and it was brought out Bhagirathi Prakashana in 1994, translation of Margaret Mitchell's great Classic 'Gone With The Wind' published by Ankita Pustaka, Bangalore in 2004, translation of Mary Shelly's Classic, 'Frankenstein' published by Ankita Pustaka, Bangalore in 2007 and many others.
LanguageKannada
Release dateAug 12, 2019
ISBN6580201900286
Baduku Chithra Chittara

Read more from Shyamala Madhav

Related to Baduku Chithra Chittara

Related ebooks

Reviews for Baduku Chithra Chittara

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Baduku Chithra Chittara - Shyamala Madhav

    http://www.pustaka.co.in

    ಬದುಕು ಚಿತ್ರ ಚಿತ್ತಾರ

    Baduku Chithra Chittara

    Author :

    ಶ್ಯಾಮಲಾ ಮಾಧವ

    Shyamala Madhav

    For more books
    http://www.pustaka.co.in/home/author/shyamala-madhav

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಬದುಕು ಚಿತ್ರ ಚಿತ್ತಾರ
    ಶ್ಯಾಮಲಾ ಮಾಧವ್

    ಮುನ್ನುಡಿ

    ಕಳೆದ 30 ವರ್ಷಗಳಲ್ಲಿ ನಾನಾ ಕಾರಣಗಳಿಂದ ನಾನು ಮುಂಬೈಗೆ ಹೋಗಬೇಕಾಗಿ ಬಂದಿತು. ಮೊದಮೊದಲು ಸದಾ ಬಿಜಿಗುಡುವ ರಾತ್ರಿಯಲ್ಲೂ ನಿದ್ದೆಮಾಡದ ಈ ಶಹರ ನನ್ನನ್ನು ದಿಗಿಲುಗೊಳಿಸುತ್ತಿತ್ತು; ಶಿವರುದ್ರಪ್ಪನವರ ‘ಮುಂಬೈಜಾತಕ’ ಪದ್ಯದ ದಾರುಣ ಚಿತ್ರಗಳೇ ಕಣ್ಣೆದುರು ಬರುತ್ತಿದ್ದವು. ಆದರೆ ಈ ಪತರುಗುಡುವ ದಟ್ಟಣೆಯೊಳಗೆ ಮುಂಬೈಗೇ ವಿಶಿಷ್ಟವಾದ ಮಾನವ ಬಾಳಿನ ಲಯವೂ ಇದೆ ಎಂದೂ, ಈ ಲಯ ಸೃಷ್ಟಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆಯೆಂದೂ ಮೆಲ್ಲಮೆಲ್ಲನೆ ನನಗೆ ಅರಿವಾಗತೊಡಗಿತು. ನನ್ನ ಈ ಅರಿವಿನ ಪಲ್ಲಟಕ್ಕೆ ವ್ಯಾಸರಾಯ ಚಿತ್ತಾಲ ಶಾಂತಿನಾಥ ಜಯಂತ ಉಮಾರಾವ್ ಮುಂತಾದವರ ಬರವಣಿಗೆ ಕೂಡ ಇಂಬು ನೀಡಿರಬಹುದು; ನಾನು ಮುಂಬೈನ ಕಾರ್ಯಕ್ರಮಗಳಲ್ಲಿ ಭೇಟಿಮಾಡುವ ಲೇಖಕಿಯರೂ ಕಾರ್ಯಕರ್ತರೂ ಆದ ಅನೇಕ ಅನೇಕ ಮಹಿಳೆಯರು ಕಾರಣವಾಗಿರಬಹುದು.

    ಕನ್ನಡಿಗರಾದ ಈ ಮುಂಬೈ ಮಹಿಳೆಯರು ನಗರ ಬದುಕಿನ ಹೊಯ್ದಾಟದಲ್ಲಿ ತಮ್ಮನ್ನು ಕಳೆದುಕೊಳ್ಳದೆ, ನೌಕರಿ ಮತ್ತು ಸಂಸಾರಗಳನ್ನು ಏಕಕಾಲಕ್ಕೆ ಸಂಭಾಳಿಸುತ್ತ, ತಮ್ಮೊಳಗಿನ ಚೈತನ್ಯವನ್ನು ಅನೇಕ ಪರಿಯಲ್ಲಿ ಪ್ರಕಟಿಸುತ್ತಿರುವರು. ಮುಂಬೈನ ನಾಗರ ಲಯಕ್ಕೇ ಜನರನ್ನು ಹೀಗೆ ಸದಾ ಜೀವಂತವಿಡುವ ಗುಣವಿದೆಯೊ ತಮಮ್ ಚಟುವಟಿಕೆಯಿಂದ ಈ ಮಹಿಳೆಯರು ಶಹರವನ್ನು ಜೀವಂತವಾಗಿಟ್ಟಿದ್ದಾರೊ ಹೇಳಲಾಗದಂತೆ, ಇವರ ಸಂಬಂಧ ಏರ್ಪಟ್ಟಿದೆ. ಈ ಸಂಬಂಧದ ನಿರ್ವಚನದಂತೆ ಶಾಮಲಾ ಮಾಧವ ಅವರ ಬರೆಹಗಳಿವೆ. ಇವು ಅವರ ಜೀವಂತೆಕೆ ತಲ್ಲಣ ಕನವರಿಕೆ ಕನಸು ಮಿತಿಗಳೆಲ್ಲವಕ್ಕೆ ಕನ್ನಡಿ ಹಿಡಿಯುತ್ತವೆ.

    ಈ ಸಂಕಲನದ ಬರೆಹಗಳಲ್ಲಿ ಆತ್ಮಕಥನಾತ್ಮಕ ಮಾದರಿಯಲ್ಲಿ ಸ್ವಾನುಭವ ವಿಶ್ಲೇಷಣೆ ಮಾಡುವ ಪ್ರಬಂಧಗಳಿವೆ; ಪ್ರವಾಸಾನುಭವಗಳಿವೆ; ವ್ಯಕ್ತಿಚಿತ್ರಗಳಿವೆ. ಇವುಗಳಲ್ಲೆಲ್ಲ ನನಗೆ ಪ್ರಿಯವಾಗಿದ್ದು ಮೊದಲ ಮಾದರಿಯ ಬರೆಹಗಳು. ಮುಂಬೈ ಬದುಕನ್ನು ವಸ್ತುವನ್ನಾಗಿ ಮಾಡಿಕೊಂಡು ಹುಟ್ಟಿರುವ ಈ ಲಲಿತ ಪ್ರಬಂಧಗಳು ಶಾಮಲಾ ಅವರ ಕೋಮಲ ಮನಸ್ಸಿನ ಮತ್ತು ಕಂಪನಶೀಲ (ವೈಬ್ರಂಟ್) ಸಂವೇದನೆಯ ಪ್ರತಿರೂಪಗಳು. ಈ ಪ್ರಬಂಧಗಳಲ್ಲಿ ಅದರ ನಾಯಕಿಯ ತಲ್ಲಣದ ಅನೇಕ ಚಿತ್ರಗಳಿವೆ. ಆಕೆ ಜಲಪ್ರಳಯ ಸ್ವರೂಪಿಯಾದ ಮುಂಬೈಮಳೆಗೆ, ಅಲ್ಲಿನ ಕೋಮುಗಲಭೆಗಳಿಗೆ ಕಂಗಾಲಾಗುವವಳು; ಕೆಲಸಕ್ಕೆ ಹೋದ ಮಗ ಮನೆಗೆ ಸಕಾಲಕ್ಕೆ ಬಾರದಾಗ ಚಡಪಡಿಸುವಳು; ತನ್ನ ಕಿಚನ್ ಕ್ಯಾಬಿನ್ನಿನ ರಿಪೇರಿಯ ಹೊತ್ತಲ್ಲಿ ಕೆಲಸಗಾರರು ಮಾಡುವ ಒರಟು ಕೆಲಸಕ್ಕೆ ಬೆದರುವವಳು; ಅಷ್ಟೇಕೆ, ತನ್ನ ಬಾಲ್ಕನಿಯಲ್ಲಿರುವ ಹೂವಿನ ಗಿಡಗಳನ್ನು ತಿಂದು ಹೋಗುವ ಅಳಿಲುಗಳ ಕಾಟವೂ ಅವಳಿಗೆ ದೊಡ್ಡ ವೇದನೆಯನ್ನು ಹುಟ್ಟಿಸುತ್ತದೆ. ಆದರೆ ಈ ಕಥನಗಳ ನಾಯಕಿ, ಈ ಆತಂಕಗಳೆಲ್ಲವೂ ಹುಸಿಯೆಂದೂ ಇವು ಮುಂಬೈ ಶಹರದ ಬದುಕಿನ ಲಯವೆಂದೂ ಒಪ್ಪಿಕೊಳ್ಳತೊಡಗುತ್ತಾಳೆ. ತನ್ನ ಕಣ್ಣಿಗೆ ಕಂಡದ್ದೇ ಸತ್ಯವಲ್ಲ, ಅದರಾಚೆಗೂ ಸತ್ಯಗಳಿವೆ ಎಂದು ಪರಿಭಾವಿಸತೊಡಗುತ್ತಾಳೆ. ತನ್ನ ಸುಂದರ ಮನೆಯನ್ನು ತಮ್ಮ ಕೆಲಸದಿಂದ ಧೂಳುಮಯಗೊಳಿಸಿದ ಕೆಲಸಗಾರರು, ಮಳೆಯಲ್ಲಿ ತಮ್ಮ ಗೂಡನ್ನು ತಲುಪದೆ ನಡುವೆ ಸಿಕ್ಕಿಹಾಕಿಕೊಂಡು ಕಾಯಿಲೆಬಿದ್ದಾಗ ತಾನೇ ಅವರನ್ನು ಮನೆಯಿಂದ ಹೊರಹಾಕಿದನೇ ಎಂದು ಎಂದು ಕೊರಗುತ್ತಾಳೆ. ಒಬ್ಬ ಕೆಲಸಗಾರ ಆಸ್ಪತ್ರೆಯಲ್ಲಿದ್ದು, ‘ನನಗಿಲ್ಲಿ ಪ್ರಾಣಹೋಗುತ್ತಿದೆ ನಿಮಗೆ ಕಿಚನ್ ಕೆಲಸದ ಅರ್ಜೆಂಟು’ ಎಂದು ಗದರಿದಂತೆ ಉತ್ತರಿಸಿದಾಗ ಹರ್ಟಾದರೂ, ಮಧ್ಯಮವರ್ಗದ ತನ್ನ ಆಲೋಚನೆಗಳು ಹೇಗೆ ತಪ್ಪಾಗಿವೆ ಎಂದು ಪರಿಭಾವಿಸತೊಡಗುತ್ತಾಳೆ. ತನ್ನ ಸಣ್ಣತನವನ್ನು ತಾನೇ ಮುಖಾಮುಖಿ ಮಾಡಿಕೊಂಡು ಲಜ್ಜೆಪಡುತ್ತಾಳೆ. ಮಧ್ಯಮವರ್ಗಕ್ಕೆ ಸಹಜವಾದ ತನ್ನ ಆಲೋಚನೆಯ ಪರಿಮಿತಿಯನ್ನು ದಾಟಿ ಮತ್ತೊಬ್ಬರ ಭಾವನೆಗೆ ಮಿಡಿಯಲಾರಂಭಿಸುತ್ತಾಳೆ. ಅಳಿಲುಗಳಿಗೂ ಅವಕ್ಕೇ ಆದ ಬದುಕುವ ಲಯವಿದೆ ಎಂಬುದನ್ನು ಒಪ್ಪಿಕೊಳ್ಳುತ್ತ ಹೋಗುತ್ತಾಳೆ. ಅಸಹನೆ ಸಿಡಿಮಿಡಿಗಳಿಂದ ಶುರುವಾಗುವ ಮನೋಭಾವವು ಕಡೆಗೆ ಜನರನ್ನು ನಗರವನ್ನು ಕೆಲಸಗಾರರನ್ನು ಒಪ್ಪಿಕೊಳ್ಳುವುದಕ್ಕೂ ಪ್ರೀತಿಸುವುದಕ್ಕೂ ಕಾರಣ ಹುಡುಕುವಂತೆ ಬದಲಾಗುತ್ತ ಹೋಗುತ್ತದೆ. ಅವಳಿಗೆ ಬಾಳಿನ ಸುತ್ತಮುತ್ತ ಇರುವ ಸಣ್ಣಪುಟ್ಟ ಸಂಗತಿಗಳು ಕಾಣತೊಡಗುತ್ತವೆ. ನೆರೆಯವರ ಬೀದಿಯ ಜನರ ವರ್ತನೆ ಮಾತುಕತೆಗಳು, ಅಲ್ಲಿರುವ ಹೋರಾಟ ದಾರುಣತೆಗಳು ಅರ್ಥವಾಗತೊಡಗುತ್ತವೆ. ಇದು ಅನುಭವಗಳಿಗೆ ಸಿಗುವ ಮೊದಲನೇ ಆಯಾಮ; ಬದುಕನ್ನು ಚಿತ್ತಾರವೆಂದು ಬಗೆಯುವ ಪರಿ. ಬಹುಶಃ ಮುಂಬೈ ಸ್ತ್ರೀಜೀವಗಳು ಮಾತ್ರ ಬರೆಯಬಲ್ಲ ಬರೆಹಗಳಿವು.

    ಈ ಮುಂಬೈ ಚಿತ್ರಗಳಿಗೆ ಎರಡನೇ ಆಯಾಮ ಬರುವುದು ಕಥನಗಳ ನಾಯಕಿಯ ಹುಟ್ಟೂರಿನ ನೆನಪುಗಳ ಜೋಡಣೆಯಿಂದ. ನೌಕರಿ ವಿದ್ಯಾಭ್ಯಾಸ ಲಗ್ನ ನಾನಾನಿಮಿತ್ತವಾಗಿ ಮುಂಬೈಗೆ ಬಂದು ನೆಲೆಸಿದ ಜನರ ಬೇರುಗಳು ಮೊದಲ ಹಂತದಲ್ಲಿ ತಂತಮ್ಮ ಊರುಗಳಲ್ಲಿದ್ದು ಮುಂಬೈ ಅನುಭವ ಕೊಂಬೆಯಂತಿರುತ್ತದೆ. ಕೆಲವು ಕಾಲ ಕಳೆದ ಬಳಿಕ ಇದು ಉಲ್ಟಾ ಆಗುತ್ತದೆ. ಬೇರು ಮುಂಬೈನಲ್ಲಿ ತಳೆದು ಕೊಂಬೆರೆಂಬೆಗಳಂತೆ ಊರಿನ ನೆನಪುಗಳು ಬಂದು ಸೇರಿಕೊಳ್ಳಲಾರಂಭಿಸುತ್ತವೆ. ಮುಂಬೈ ಅನುಭವವಿಟ್ಟುಕೊಂಡು ಬರೆದ ಬಹುತೇಕ ಕನ್ನಡ ಲೇಖಕರ ಬರೆಹದಲ್ಲೂ ಈ ಲಕ್ಷಣವಿದೆ. ಇಲ್ಲಿನ ಬರೆಹಗಳಲ್ಲೂ ಮುಂಬೈ ಪ್ರಜ್ಞೆಯ ಮೂಲಕ ಮಂಗಳೂರು ಶಹರದ ಬದುಕಿನಲ್ಲಿ ನಡೆದಿರುವ ಪಲ್ಲಟಗಳ ವಿಶ್ಲೇಷಣೆ ಮತ್ತು ಮೌಲ್ಯಮಾಪನವಿದೆ. ಆದರೆ ಇಲ್ಲಿ ಬರುವ ಮಂಗಳೂರಿನ ಬಹುತೇಕ ನೆನಪುಗಳು ದುಃಖದಾಯಕವಾದವು. ಸಂಪಿಗೆ ಗಿಡ ಕಡಿದು ರೋಡು ಬರುವುದು, ಗದ್ದೆಗಳು ಬಡಾವಣೆ ಆಗುವುದು, ಜನರು ಮತೀಯವಾಗಿ ಮನುಷ್ಯರನ್ನು ಕೊಲ್ಲುತ್ತಿರುವುದು, ಇತ್ಯಾದಿ. ಆದರೆ ಮಂಗಳೂರು ಹಾಗಾಗಲು ಮುಂಬೈ ಸಹವಾಸವೂ ಕಾರಣ ಎಂಬುದು ಈ ಬರೆಹಗಳಲ್ಲಿ ಬಿಂಬಿತವಾಗುವುದಿಲ್ಲ. ಲೇಖಕಿಯ ಭಾವುಕವಾದ ಹೆಂಗರುಳಿನ ಬರೆಹಗಳಿಗೆ ಹೊಳೆಯದೆ ಹೋಗುವ ಸತ್ಯವಿದು.

    ಇಲ್ಲಿನ ಅತ್ಯುತ್ತಮ ಬರೆಹಗಳೆಂದರೆ, ಲಲಿಪ್ರಬಂಧ ಮಾದರಿಯಲ್ಲಿರುವ ‘ಪುನರ್ ನವೀಕರಣದ ನೋವು ನಲಿವು’ ‘ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ’ ‘ಆಶಾಕಿರಣವೇ ಕಾಣದೇ?’ ‘ಮುಂಬೈ ಪ್ರಳಯ ದರ್ಶನ’ ‘ಮಾಯಾನಗರಿ ಮುಂಬೈ ನನ್ನಮನೆ’ ‘ಮುಂಬೈ ಬದುಕು’ ‘ಮಳೆಯ ಹಾದಿಯಲ್ಲಿ’ ಮುಂತಾದುವು. ಶಾಮಲಾ ಅವರು ಇಂತಹ ಬರೆಹಗಳ್ನನು ಹೆಚ್ಚುಹೆಚ್ಚು ಬರೆಯಬೇಕು ಎಂದು ಆಗ್ರಹಿಸುತ್ತೇನೆ. ಯಾಕೆಂದರೆ ಇಲ್ಲಿ ಅವರ ಸಣ್ಣಪುಟ್ಟ ಸಂಗತಿಗಳನ್ನು ಗಮನಿಸುವ ತಾಯ್ತನದ ನೋಟಗಳಿವೆ. ಕಾಯಿಲೆಯಾದವರಿಗೆ ತಿಂಡಿ ಕಟ್ಟಿಕೊಂಡು ಹೋದ ಪೊಟ್ಟಣದ ಕಾಗದದಲ್ಲಿ ನಾಗಸಂಪಿಗೆ ಕುರಿತು ತಾನು ಬರೆದ ಬರೆಹ ಇರುವುದನ್ನು ಕಥನ ನಾಯಕಿ ಗಮನಿಸಬಲ್ಲಳು. ಈ ಪ್ರಬಂಧಗಳಿಗೆ ಹೋಲಿಸಿದರೆ ಇಲ್ಲಿರುವ ವ್ಯಕ್ತಿಚಿತ್ರಗಳಲ್ಲಿ ವಿಶೇಷತೆಯೇನಿಲ್ಲ. ಅವು ತೀರ ಸರಳವಾಗಿವೆ; ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರನ್ನು ಪರಿಚಯಿಸುವಾಗ ಕೊಂಡಾಡುವ ನೆಲೆಯಿಂದ ಕೂಡಿವೆ. ವ್ಯಕ್ತಿಗಳ ಪರಿಮಿತಿಗಳನ್ನು ವಿಮರ್ಶೆ ಮಾಡುತ್ತ ನಿಷ್ಠುರವಾಗಿ ಹುಟ್ಟುವ ವ್ಯಕ್ತಿಚಿತ್ರಗಳಿಗೆ ದೊರೆಯುವ ಮಾನುಷ ಸಹಜ ಆಯಾಮ ಇವಕ್ಕಿಲ್ಲವಾಗಿ ಇವು ಆಳವಿಲ್ಲದ ಬರೆಹಗಳಾಗಿವೆ. ತಾಯ್ತನದ ಮನೋಭಾವವೇ ಮಿಗಿಲಾಗಿ ನಿಷ್ಠುರತೆಯಿಲ್ಲದ ಕಾರಣದಿಂದ ಇವು ಹೀಗಾಗಿರಬೇಕು. ಇಲ್ಲಿನ ಪ್ರವಾಸ ಕಥನಗಳೂ ನನಗೆ ಮಾಹಿತಿ ಪ್ರಧಾನ ಡೈರಿಯಂತೆ ಭಾಸವಾದವು.

    ಮಲೆಯಾಳ ಮನೆಮಾತಿನ ತುಳು ಪರಿಸರದಲ್ಲಿ ಬೆಳೆದ ಕನ್ನಡದಲ್ಲಿ ಬರೆಯುತ್ತಿರುವ ಶಾಮಲಾ ಅವರ ಈಗಿನ ವಾಸವಿರುವುದು ಮರಾಠಿ ಮತ್ತು ಹಿಂದಿ ಪರಿಸರದಲ್ಲಿ. ಆದರೆ ಈ ಬಹುಭಾಷಿಕತೆಯು ಅವರ ಕನ್ನಡವನ್ನು ಬೇರೊಂದು ಬಗೆಯಲ್ಲಿ ರೂಪಿಸಿರಬಹುದೇ – ಕಾರ್ನಾಡರ ಕನ್ನಡ ಗದ್ಯಕ್ಕೆ ಕೊಂಕಣಿ ಸಂಸ್ಕøತಿಯ ಅಂಚೊಂದು ಇರುವ ಹಾಗೆ, ನಿಸಾರರ ಕನ್ನಡ ಉರ್ದುಗಂಧಿಯಾಗುವ ಹಾಗೆ, ಬೋಳುವಾರರ ‘ಸ್ವಾತಂತ್ರ್ಯದ ಓಟ’ದಲ್ಲಿಯೂ ಬ್ಯಾರಿತನದ ಸ್ಪರ್ಶವಿರುವ ಹಾಗೆ- ಎಂದು ಗಮನಿಸಿದೆ. ಅಂತಹದ್ದೇನು ನನಗೆ ಕಾಣಲಿಲ್ಲ. ಆದರೆ ಶಾಮಲಾ ನಿರೂಪಿಸಿರುವ ಬದುಕಿನ ಲಯ ಮಾತ್ರ ಸರ್ವಭಾಷಿಕರ ಸರ್ವಧಾರ್ಮಿಕರ ನೆಲೆಯದು. ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿರುವಾಗ ಮರುದಿನ ಮುಂಬೆಳಗಿನಲ್ಲಿ ಮನಕ್ಕೆ ತಂಪೆರೆಯಿತು ಎಂಬ ಸಾಲುಗಳನ್ನು ಶಾಮಲಾ ಬರೆಯಬಲ್ಲಳು. ಕ್ರೈಸ್ತಮಿಶನರಿ ಶಾಲೆಗಳಲ್ಲಿ ಕಲಿತ ಅವರು, ಮಿಶನರಿ ಆಸ್ಪತ್ರೆಗಳಲ್ಲಿ ಜೀವಗಳು ಸಾವಿನ ಜತೆ ಸೆಣಸಾಡುವಾಗ ಹೊಮ್ಮಿಸುವ ಚಿಂತನೆಗಳು, ಅವರ ಜೀವಪರ ಮನೋಭಾವದ ಪ್ರತೀಕದಂತಿವೆ.

    ಇದನ್ನು ನೆನೆಯುವಾಗ ಕಳೆದ ಹತ್ತು ವರ್ಷಗಳಲ್ಲಿ ಮುಂಬಯಿ ಸಹವಾಸ ಮಾಡಿದ ಮಂಗಳೂರಿನ ಚಿತ್ರಗಳು ನೆನಪಾಗುತ್ತವೆ. ಅಲ್ಲೀಗ ಧರ್ಮ ಮತ್ತು ಸಂಸ್ಕøತಿ ರಕ್ಷಣೆಯಲ್ಲಿ ಒಂದು ಸೈನ್ಯವು ಸಿದ್ಧವಾಗಿದೆ. ಅದು ದನದ ಸಾಗಣೆ ಅಂತ ಜನರನ್ನು ಬತ್ತಲೆಗೊಳಿಸಿ ಹೊಡೆಯುತ್ತದೆ; ಕ್ರೈಸ್ತರ ಚರ್ಚುಗಳ ಮೇಲೆ ಆಕ್ರಮಣ ಮಾಡುತ್ತದೆ; ಪಬ್‍ನಲ್ಲಿದ್ದರೆಂದು ತರುಣಿಯರನ್ನು ಓಡಾಡಿಸಿ ಚಚ್ಚುತ್ತದೆ; ಬುರುಖಾ ಹಾಕಬೇಕೆಂದು ಫತ್ವಾ ಹೊರಡಿಸಲಾಗುತ್ತದೆ; ತೀರ ಈಚೆಗೆ ಹುಟ್ಟುಹಬ್ಬಕ್ಕೆಂದು ಸೇರಿದ ತರುಣ ತರುಣಿಯರನ್ನು, ಹಿಡಿದು ದನಕ್ಕೆ ಬಡಿದಂತೆ ಬಡಿದುಹಾಕಲಾಯಿತು. ಮುಂಬೈಯಲ್ಲಿಯೂ ಇಂತಹ ಸೈನ್ಯವಿದೆ. ಆದರೆ ಇಷ್ಟು ಅತಿರೇಕಕ್ಕೆ ಅದು ಹೋದಂತಿಲ್ಲ. ಇಂತಹ ಹೊತ್ತಿನಲ್ಲಿ ಜನ್ಮದೂರು ಮಂಗಳೂರು ಮತ್ತು ಬಾಳುತ್ತಿರುವ ಊರು ಮುಂಬೈ ಕುರಿತು ಶಾಮಲಾ ಅವರು ಬರೆದಿರುವ ಈ ಬರೆಹಗಳು ಚಿಂತನೆಗೆ ಹಚ್ಚಬಲ್ಲವಾಗಿವೆ. ಇಂತಹ ನವಿರಾದ, ಅನುಕಂಪಿತ, ಚಿಂತನಶೀಲ ಬರೆಹಗಳನ್ನು ಓದುಗರು ಇಷ್ಟಪಡುವರು ಎಂದು ಭಾವಿಸುತ್ತೇನೆ.

    ರಹಮತ್ ತರೀಕೆರೆ

    ನಿವೇದನೆ

    ವರ್ಷಗಳಿಂದಲೂ ಲೇಖನರೂಪವಾಗಿ ಪ್ರಕಟಗೊಂಡ ನನ್ನ ಭಾವಾಭಿವ್ಯಕ್ತಿಯ ಬಿಂಬಗಳೆಲ್ಲ ಇಲ್ಲಿ ಸಂಚಯನಗೊಂಡು, ಸಂಕಲನ ರೂಪದಲ್ಲಿ ಬದುಕು ಚಿತ್ರ ಚಿತ್ತಾರವಾಗಿ ಓದುಗರ ಕೈಸೇರುತ್ತಿದೆ. ಈ ಸಾಹಸಕ್ಕೆ ಮುಂದಾಗುವಂತೆ ಬೆಂಬಿದ್ದು, ಒತ್ತಾಸೆಯಿಂದ ಅಡಿಗಡಿಗೆ ನೆನಪಿಸಿ, ಈ ಲೇಖನ ಸಂಚಯವನ್ನು ಸಾಧ್ಯವಾಗಿಸಿದ ಬದುಕು ಬೆಳಗುವ ಸಾಹಿತಿ, ಗೆಳತಿ ನೇಮಿಚಂದ್ರರಿಗೆ ನಾನು ಚಿರಋಣಿ. ಅವರ ಸ್ನೇಹ, ಪ್ರೀತಿ ಹೃದಯದಲ್ಲಿ ಬೆಚ್ಚಗೆ ಕುಳಿತಿದೆ.

    ತಮ್ಮ ಪ್ರತಿಭಾಪೂರ್ಣ ಬರಹ, ವಿದ್ವತ್ತು ಮತ್ತು ಸಹೃದಯತೆಯಿಂದ ಆತ್ಮೀಯರಾಗಿ ನನ್ನ ಸಾಹಿತ್ಯರುಚಿಯನ್ನು ಹೆಚ್ಚಿಸಿದ ಡಾ. ರಹಮತ್ ತರೀಕೆರೆ ಅವರು ನನ್ನೀ ಕೃತಿಯನ್ನು ತಮ್ಮ ಮುನ್ನುಡಿಯಿಂದ ಹರಸಿದ್ದಾರೆ. ಅಗಾಧವೂ, ಅಮೂಲ್ಯವೂ ಆದ ತಮ್ಮ ಸಾಹಿತ್ಯ ಕೃಷಿಯ ಪ್ರಖರ ಬೆಳಕಿನಿಂದ ನನ್ನ ಈ ಕಿರು ಹಣತೆಯನ್ನು ಬೆಳಗಿದ ಅವರ ಸಹೃದಯತೆಗೆ ಕೃತಜ್ಞತೆಯ ಬೆಲೆ ಕಟ್ಟಲಾದೀತೇ?

    ಡಾ. ಎಂ. ಬೈರೇಗೌಡರು ಪ್ರೀತಿಯಿಂದ ನನ್ನೀ ಲೇಖನ ಸಂಕಲನಕ್ಕೆ ಪ್ರಕಾಶನದ ಬೆಳಕು ತೋರಲು ಮುಂದಾಗಿ ಸೊಗಸಾಗಿ ಪುಸ್ತಕರೂಪದಲ್ಲಿ ಹೊರತಂದಿದ್ದಾರೆ. ಅವರ ಪ್ರೀತಿ, ವಿಶ್ವಾಸದ ಸಹೃದಯಕ್ಕೆ ನನ್ನ ನಮನ.

    ಇಲ್ಲಿನ ಹೆಚ್ಚಿನೆಲ್ಲ ಲೇಖನಗಳನ್ನು ಪ್ರಕಟಿಸಿದ ಸುಧಾ, ತರಂಗ, ಉದಯವಾಣಿ, ಮುಂಬಯಿವಾಣಿ ವಾರ್ತಾಭಾರತಿ ಹಾಗೂ ಕೆಂಡಸಂಪಿಗೆ ಅಂತರ್ಜಾಲ ತಾಣದ ಸಂಪಾದಕ ವರ್ಗಕ್ಕೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

    ಪ್ರಕಟಣಾ ಸಂಬಂಧ, ಆತ್ಮೀಯರಾದ ಶ್ರೀ ಕೆ.ಟಿ. ಗಟ್ಟಿ ಅವರ ಮಾರ್ಗದರ್ಶನವನ್ನು ಮರೆಯುವಂತೆಯೇ ಇಲ್ಲ.

    ಅನುವಾದಗಳಿರಲಿ; ಜೊತೆಗೆ ಸ್ವತಂತ್ರ ಬರಹದ ಕೃತಿಗಳೂ ಬರಲಿ ಎಂದು ಪ್ರೀತಿಯಿಂದ ಹರಸಿದ ಸಾಹಿತಿ ಯಶವಂತ ಚಿತ್ತಾಲ, ಬಿ.ಎ. ಸನದಿ, ಅಮೃತ ಸೋಮೇಶ್ವರ ಹಾಗೂ ದಿ. ವ್ಯಾಸರಾಯ ಬಲ್ಲಾಳರನ್ನು ಹೃದಯ ತುಂಬಿ ನೆನೆಯುತ್ತೇನೆ.

    ನನ್ನ ಸೃಜನಾ ಮುಂಬಯಿ ಲೇಖಕಿಯರ ಬಳಗದ ಸ್ನೇಹ, ಪ್ರೀತಿ ಜೊತೆಗಿದೆ. ಈ ಹಿಂದೆ ಪ್ರಕಟವಾದ ನನ್ನ ಇತರ ಕೃತಿಗಳಂತೆ ಈ ನನ್ನ ಲೇಖನ ಸಂಚಯವನ್ನೂ ಕೈಗೆತ್ತಿಕೊಂಡು ಹೃದ್ಯವಾಗಿಸಿಕೊಳ್ಳುವ ಪ್ರಿಯ ಓದುಗರೆಲ್ಲರಿಗೆ ನನ್ನ ನಲ್ಮೆ.. ಅಭಿಪ್ರಾಯಗಳಿಗೆ ಸದಾ ಸ್ವಾಗತ.

    ಪರಿವಿಡಿ

    ಪುನರ್‍ನವೀಕರಣದ ನೋವು-ನಲಿವು / 1

    ನಾಗಸಂಪಿಗೆ ಮತ್ತು ನಗರೀಕರಣ / 9

    ಬದುಕು ಚಿತ್ರ ಚಿತ್ತಾರ / 12

    ನಮ್ಮ ಮನೆಯ ತುಂಟರು / 17

    ಆತಂಕ –ಒಂದು ಅನುಭವ / 20

    ಮಳೆಯ ಹಾದಿಯಲ್ಲಿ... / 27

    ಮತಧರ್ಮಗಳು ಮತ್ತು ಮಾನವೀಯತೆ / 31

    ಒಂದು ಇರುಳ ಕಥೆ /39

    ಮುಂಬೈ ಬದುಕು / 42

    ಸಿಹಿ-ಕಹಿ / 46

    ಗುರುರ್ಧೇವೋಭವ / 49

    ಕೊಂಕಣ ಸುತ್ತಿ ಮೈಲಾರಕ್ಕೆ / 58

    ಮುಂಬಯಿ ಪ್ರಳಯ ದರ್ಶನ / 64

    ಮಾಯಾನಗರಿ ಮುಂಬೈ ನನ್ನ ಮನೆ / 70

    ಪ್ರೀತಿ, ಶಾಂತಿಯ ಕಾರುಣ್ಯಧಾಮ / 75

    ರಸಾಸ್ವಾದ-ಕುಮಾರಸಂಭವ / 80

    ಆಶಾಕಿರಣ ಕಾಣದೇ ? / 87

    ಆಶಾಕಿರಣ ಕಾಣದೇ? / 92

    ಮುಗ್ಧಪ್ರಹಾರಗಳು / 95

    ದಟ್ಟಡವಿಯ ಬೆಡಗಿ ಕೂಡ್ಲುತೀರ್ಥ / 98

    ದೆಹಲಿ ಆಗ್ರಾಗಳತ್ತ / 101

    ವಡೋದರಾದ ಸುತ್ತಮುತ್ತ / 112

    ಜೀವವೈವಿಧ್ಯ, ಸಂಸ್ಕøತಿ, ಪರಂಪರೆಯ ನೆಲೆ / 117

    ಕನ್ನಡದ ದೀವಿಗೆ ಅ.ನ.ಕೃ. / 125

    ಕನ್ನಡದ ತುತ್ತೂರಿಯೂದಿದ ಜಿ.ಪಿ. ರಾಜರತ್ನಂ / 128

    ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾಖಾನ್ / 132

    ಪಂಡಿತಶ್ರೀ ಪಿ.ಕೆ. ನಾರಾಯಣ ಸಂಸ್ಮರಣೆ /134

    ವಾತ್ಸಲ್ಯಪಥದ ಪಥಿಕ ವ್ಯಾಸರಾಯ ಬಲ್ಲಾಳ / 139

    ನಾಡು ನುಡಿಯ ಸಾಂಸ್ಕøತಿಕ ಪ್ರತಿನಿಧಿ ಡಾ. ಅಮೃತಸೋಮೇಶ್ವರ /141

    ವಿದ್ವಾಂಸ ರಾಮಚಂದ್ರ ಉಚ್ಚಿಲ /144

    ಸಾಹಿತ್ಯ ಸ್ನೇಹಾನುಬಂಧ –ಕೆ.ಟಿ. ಗಟ್ಟಿ /147

    ಚಿರಜಾಗೃತ ಚೇತನ ನೇಮಿಚಂದ್ರ /152

    ಭಾಷೆ, ಸಂಸ್ಕøತಿಯ ದೀವಿಗೆ ಡಾ. ಸುನೀತ ಮಹಾಬಲಶೆಟ್ಟಿ /155

    ಕಥನ ಕಲೆಯ ಸೌಂದರ್ಯಶಿಲ್ಪಿ ಮಿತ್ರಾ ವೆಂಕಟರಾಜ್ /158

    ಬದುಕು-ಬರಹದ ನಿರಂತರ ಶೋಧಕಿ ತುಳಸಿ ವೇಣುಗೋಪಾಲ್ /161

    ಸಾಧನಾ ಪಥಗಾಮಿ ಮಮತಾರಾವ್ / 164

    ಅಪ್ರತಿಮ ಕಥೆಗಾರ ಪ್ರೀತಿಯ ಹರಿಕಾರ ಯಶವಂತ ಚಿತ್ತಾಲ / 167

    ಸತ್ಸಂಚಯ / 169

    ಭಾವ ಬಿಂಬ
    ಪುನರ್‍ನವೀಕರಣದ ನೋವು-ನಲಿವು

    ಬಹುಕಾಲದಿಂದ ಕಾದಿದ್ದ ನಮ್ಮ ಅಡುಗೆಕೋಣೆಯ ಪುನರ್‍ನವೀಕರಣಕ್ಕೆ ಕೊನೆಗೂ ಮುಹೂರ್ತ ಒದಗಿಬಂತು. ಈ ಅನುಭವವನ್ನು ಹಂಚಿಕೊಳ್ಳಬೇಕೆಂದರೆ, ಸ್ಥಳಪುರಾಣದ ಕಿರು ಪರಿಚಯವೊಂದು ಅಗತ್ಯವೆನಿಸುತ್ತದೆ. ಹೀಗೆ ಬನ್ನಿ. ನಮ್ಮಲ್ಲಿಗೆ: ಮುಂಬೈ ಉಪನಗರ ಘಾಟ್‍ಕೋಪರ್ ಪೂರ್ವದ ರಾಜಮಾರ್ಗವೇ ಮಹಾತ್ಮಾ ಗಾಂಧಿ ರಸ್ತೆ. ಈ ರಸ್ತೆಯಲ್ಲಿನ ಗಾಂಧೀಮಾರ್ಕೆಟ್‍ಗೆ ಎದುರಾಗಿರುವ ವಲ್ಲಭ್ ಬಾಗ್ ರಸ್ತೆಯಲ್ಲಿ ಜಲರಾಮ್ ನಗರ್ -3 ಎಂಬುದೇ ಮೂರನೆಯ ಕಟ್ಟಡ. ಇಲ್ಲಿ ಒಳಹೊಕ್ಕು, ಎಪ್ಪತ್ತೈದು ಮೆಟ್ಟಿಲುಗಳನ್ನೇರಿ – ಕ್ಷಮಿಸಿ. ಲಿಫ್ಟ್ ಎಂಬ ಸೌಕರ್ಯ ಇಲ್ಲಿಲ್ಲ - ನಾಲ್ಕನೆಯ ಮಹಡಿಯ ನಮ್ಮ ಮನೆಯೊಳಗೆ ದಯಮಾಡಿಸಿ. ನೊಂದುಕೊಳ್ಳಬಾರದು, ನೋಡಿ ಇನ್ನೂ ಹದಿನೆಂಟು ಅಂದರೆ ಒಟ್ಟು ತೊಂಭತ್ತಮೂರು ಮೆಟ್ಟಿಲುಗಳನ್ನೇರಿ. ಅಗೋ ಎಂಬತ್ತೈದರ ವಯೋವೃದ್ಧ ಸೋಮಾನಿಜೀ ಮೇಲೆ ಹೋಗುತ್ತಿದ್ದಾರೆ. ಶತಾಯುಷ್ಯ ಸಂಭ್ರಮ ಕಳೆದು, ಮತ್ತೈದು ಸಂವತ್ಸರಗಳನ್ನೂ ದಾಟಿರುವ ದಾದಾಜಿ ಹರಿರಾಮ್ ಭಟ್, ಮೂರನೇ ಮಹಡಿಯೇರಿ ತಮ್ಮ ಮನೆಗೆ ಹೋಗುತ್ತಾರೆ. ಇದು ಸ್ಥಳ ಮಹಾತ್ಮೆಯಲ್ಲದೆ ಮತ್ತಿನ್ನೇನು?

    ಬನ್ನಿ, ಪೂರ್ವಾಭಿಮುಖವಾದ ನಮ್ಮ ಹಾಲ್‍ನೊಗಳಗೆ ಬಂದಿರಷ್ಟೇ? ಹೌದು. ಪ್ಯಾಸೇಜ್‍ನ ಇಕ್ಕಡೆಗಳಲ್ಲಿ ದಕ್ಷಿಣೋತ್ತರವಾಗಿ ಬೆಡ್‍ರೂಮ್‍ಗಳು. ಪಶ್ಚಿಮಾಭಿಮುಖವಾದ ನಮ್ಮ ಅಡುಗೆ ಕೋಣೆಯ ಬಾಲ್ಕನಿ ಬಾಗಿಲನ್ನು ತೆರೆದಿಡುವಂತಿಲ್ಲ. ನಾಲ್ದಿಕ್ಕುಗಳ ಬಾಲ್ಕನಿಗಳಿಂದ ಬದಗುವ ಕ್ರಾಸ್‍ವೆಂಟಿಲೇಶನ್‍ನ ಅಬ್ಬರದನುಭವ ನಿಮಗಾಯ್ತಲ್ಲವೇ? ಅಡುಗೆ ಕೋಣೆಯ ಬಾಲ್ಕನಿಯಿಂದ ಬೀಸುವ ವಾಯುಪ್ರಕೋಪದ ಪರಿಯಂತೂ...! ಬಾಗಿಲು ತೆರೆದಿಟ್ಟು, ಎದುರಿನ ವಿಶಾಲ ಅಶ್ವತ್ಥ ವೃಕ್ಷದಲ್ಲಿನ ಸಾವಿರಾರು ಗಿಳಿಗಳು, ಮತ್ತೆ ಮೂರ್ದಿಕ್ಕುಗಳಲ್ಲೂ ಹಬ್ಬಿ ಹರಡಿದ ಬಾದಾಮಿ. ಗುಲ್‍ಮೊಹರ್, ಮೇ ಫ್ಲವರ್, ಹುಣಿಸೆ, ತೆಂಗುಗಳಲ್ಲಿನ ಅಸಂಖ್ಯ ಅಳಿಲುಗಳು. ಕೊಕ್ಕರೆ, ಗಿಡುಗ, ಗುಬ್ಬಿ, ಸೂರಕ್ಕಿಗಳ ಸೊಗಸನ್ನು ಸವಿಯಲುಂಟೇ? ಬೀಸುವ ಗಾಳಿಗೆ ಬಾಗಿಲುಗಳು ರಪ್ಪೆಂದು ರಾಚಿದಾಗ, ಧರಾಶಾಯಿಯಾಗುವ ಹೂದಾನಿಗಳು, ಶೋಪೀಸ್‍ಗಳು ಹೃದಯವನ್ನು ಬಿರಿಯುವಾಗ... ಪಕ್ಕದ ಮರಗಳಿಂದ ಟಣ್ಣನೆ ನೆಗೆದು ಬಾಲ್ಕನಿ ಮೂಲಕ ಒಳನುಸುಳುವ ಅಳಿಲುಗಳು. ಪೈಪ್ ಏರಿ ತೂರಿ ಬರುವ ಇಲಿಗಳು, ಬಾಲ್ಕನಿಗಳಲ್ಲಿನ ನನ್ನ ಹೂಕುಂಡಗಳೆಲ್ಲ ತಮ್ಮ ಸಂತಾನಾಭಿವೃದ್ಧಿಯ ತೊಟ್ಟಿಲುಗಳೆಂದುಕೊಂಡು ಮರಳಿ ಯತ್ನವ ಮಾಡುವ ಪಾರಿವಾಳಗಳು ದಿನವೂ ನನ್ನನ್ನು ಅಣಕಿಸುವಾಗ... ಇಪ್ಪತ್ತೆರಡು ವರ್ಷಗಳಿಂದ ಗಾಳಿ, ಮಳೆಗೆ ಹಿಗ್ಗಿ, ತಗ್ಗುವ ಮುರುಕು ಕಿಟಕಿ, ಬಾಗಿಲುಗಳು ದಯನೀಯವಾಗಿ ತೋರುವಾಗ... ಹೌದು, ಈ ಮನೆಗೊಂದು ಪುನರ್‍ನವೀಕರಣ ಬೇಕೇಬೇಕು ಎಂಬು ತುಡಿತ. ಲಿಫ್ಟ್ ಇರದ ಈ ನಾಲ್ಕು ಮಾಳಿಗೆಯೆತ್ತರದ ಅವಾಸಕ್ಕೆ ವೃಥಾ ಖರ್ಚು ಮಾಡಲೇಕೆ ಎಂಬ ಹಿತನುಡಿಗಳೇ ಈ ಆಶಯವನ್ನು ಸತತ ಮುಂದೂಡಿದ್ದವು.

    ಉಪನಗರದ ಮುಖ್ಯ ಬಡಾವಣೆ ಕೈಯೆಟುಕಿನಲ್ಲೇ ಎಲ್ಲ ಸೌಲಭ್ಯಗಳು. ಐಷಾರಾಮದ ತಿನಿಸುಪ್ರಿಯರ ಖಾವುಗಳಲ್ಲಿ ಎಂದೇ ಪ್ರಖ್ಯಾತವಾದ ವ್ಯಸ್ತ ಬೀದಿಯಲ್ಲಿನ ಕತ್ತಲಿರದ ರಾತ್ರಿಗಳು, ಹಸಿರಿನ ವೃಕ್ಷರಾಜಿಯ ಆಕರ್ಷಣೆ- ಹೀಗಾಗಿ ಈ ನೆಲೆಯನ್ನು ಬಿಟ್ಟು ಹೋಗುವುದೂ ಸುಲಭವಿರಲಿಲ್ಲ. ಇಂತಲ್ಲಿ ಇನ್ನು ನವೀಕರಣವಾಗದೆ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬರಲು ಕಾರಣವಾದ ಘಟನೆಯ ಬಗ್ಗೆ ಹೇಳುತ್ತೇನೆ.

    ಒಂದು ಮಧ್ಯಾಹ್ನ, ಎಂದಿನಂತೆ ನಾನು ಬರೆಯುತ್ತ ಕುಳಿತಿದ್ದೆ. ಹುಡುಗಿ ರೂಪಾಯಿ ನೆಲ ಒರೆಸುತ್ತಿದ್ದಳು. ಅಡುಗೆ ಕೋಣೆಯ ಬಾಲ್ಕನಿ ಬಾಗಿಲನ್ನು ಮುಚ್ಚಲು ಮರೆತ ರೂಪಾಲಿ. ಹಾಲ್‍ಗೆ ಬರುತ್ತಿದ್ದಂತೆ ಅತ್ತ ಅಡುಗೆಕೋಣೆ ಬಾಗಿಲು ರಪ್ಪೆಂದು ರಾಚಿದ ರಭಸಕ್ಕೆ ಇತ್ತ ಪ್ಯಾಸೇಜ್‍ನಿಂದ ಅಡುಗೆ ಕೋಣೆ ಹೋಗುವ ಬಾಗಿಲೂ ರಪ್ಪೆಂದು ಮುಚ್ಚಿಕೊಂಡಿತು. ಮಳೆಗೆ ಹಿಗ್ಗಿ ಮುಚ್ಚಲಾಗದಿದ್ದ ಬಾಗಿಲು, ಕಿಟಕಿಗಳನ್ನು ಮುನ್ನಾದಿನವಷ್ಟೇ ಚಿಕ್ಕಮಟ್ಟದ ಬಡಗಿಯೊಬ್ಬನಿಂದ ಕೀಸುಳಿ ಹಾಕಿ ಸರಿಪಡಿಸಲಾಗಿತ್ತು. ಹೀಗೆ ಸಡಿಲಾದ ಆ ಬಾಗಿಲು ಬಡಿದ ರಭಸಕ್ಕೆ ಒಳಗಿನಿಂದ ಅಗುಳಿಯೂ ಸಂದಿಯಲ್ಲಿ ತೂರಿ ಭದ್ರವಾಗಿ ಮುಚ್ಚಿಕೊಂಡಿತು. ಆಗ ಒಳಬಂದ ರೂಪಾಲಿಯ ಅಕ್ಕ ಸ್ವಾತಿ ಹಾಗೂ ನಾನು ಸೇರಿ ಎಷ್ಟೇ ಒದ್ದು ಬಡಿದರೂ ಬಾಗಿಲು ತೆರೆಯಲಿಲ್ಲ. ಅಬ್ ಕ್ಯಾ ಕರೇಂಗೇ, ಅಮ್ಮಾ? ಬಾಹರ್ ಸೇ ಕೋಯಿ ಜಾ ಸಕೇಗಾ ಕ್ಯಾ? ಎಂದು ಸ್ವಾತಿ ಅಂದಾಗ, ಭಾಪ್‍ರೇ, ಉದರ್ ಸೇ ಕೌನ್ ಜಾಯೇಗಾ? ರಹನೇದೋ ಸ್ವಾತಿಃ ಉಸ್ ಕಾರ್ಪೆಂಟರ್ ಕೋ ಬುಲಾ ಲೇಂಗೇ ಎಂದ ನಾನು, ಇನ್ನೊಂದು ಬಾಲ್ಕನಿಯಲ್ಲಿದ್ದ ದಪ್ಪದ ಮರದ ತುಂಡೊಂದನ್ನು ತಂದು, ಜೊತೆಯಾಗಿ ಬಾಗಿಲನ್ನು ಬಡಿಯುವ ಎಂದು ಸ್ವಾತೀ, ಸ್ವಾತೀ! ಎಂದು ಕರೆದರೆ, ಸ್ವಾತಿಯ ಪತ್ತೆಯಿಲ್ಲ. ನೆಲ ಉಜ್ಜುತ್ತಿದ್ದ ರೂಪಾಲಿಯೊಡನೆ ಸ್ವಾತಿ ಎಲ್ಲಿ? ಎಂದು ಕೇಳಿದರೆ, ವೋ ಉದರ್‍ಗಯೀ ಅಮ್ಮಾ ಎಂದು ಇತ್ತಣ ಕೋಣೆಯ ಬಾಲ್ಕನಿ ತೋರಿದಳು ಕೂಲ್ ಆಗಿ, ನಾನು ಆ ಬಾಲ್ಕನಿಗೆ ಬಂದು ನೋಡುತ್ತೇನೆ... ನನ್ನ ಹೃದಯ ಧಸಕ್ಕೆಂದು ವಿಹ್ವಲಳಾಗಿ, ಸ್ವಾತೀ, ಸ್ವಾತೀ... ಎಂದು ನಾನು ಅಳತೊಡಗಿದರೆ, ರೂಪಾಲಿ ಬಳಿ ಬಂದು ನನ್ನ ಕೈ ಹಿಡಿದು, ವೋ ಆಯೇಗೀ ಅಮ್ಮಾ, ಉಸೇ ಕುಛ್ ನಹೀಂ ಹೋಗಾ... ಎಂದು ಸಂತೈಸತೊಡಗಿದಳು. ಮನುಷ್ಯ ಮಾತ್ರದ ಕಣ್ಗಳು ನಂಬುವ ದೃಶ್ಯ ಅದಾಗಿರಲಿಲ್ಲ. ಈ ಬಾಲ್ಕನಿಯ ಬೀಗ ಜಡಿಯದಿದ್ದ ಕಂಡಿಯ ಮೂಲಕ ಹೊರಗಿಳಿತ ಸ್ವಾತಿ. ನಾಲ್ಕು ಮಾಳಿಗೆಯೆತ್ತರದಲ್ಲಿ ಆ ಹೊರಗೋಡೆಯನ್ನು ತಬ್ಬುತ್ತಾ, ಕೆಳಗಣ ಅರ್ಧ ಅಡಿಯ ಪ್ಯಾರಾಪೆಟ್ ಮೇಲೆ ಹೆಜ್ಜೆಯಿಟ್ಟು ಸಾಗಿ, ಕಿಚನ್ ಬಾಲ್ಕನಿಯ ಹೊರ ಅಂಕಣವನ್ನು ತಲುಪಿದ್ದಳು. ಅಲ್ಲಿಂದ ಅಳುತ್ತಿದ್ದ ನನ್ನತ್ತ ನೋಡಿ, ಆತೀ ಹ್ಞೂಂ. ಅಮ್ಮಾ, ಅಪ್ ರೊವ್ ಮತ್, ಎನ್ನುತ್ತಾ ಆ ಬಾಲ್ಕನಿಯ ಕಂಡಿ ತೆರೆದು ಒಳನೆಗೆದು, ಬಾಲ್ಕನಿಯ ಬಾಗಿಲು ತೆರೆದು ಒಳಬಂದು, ಅಗಳಿ ಸರಿಸಿ ಪ್ರತ್ಯಕ್ಷಳಾದಾಗ.. ಏನೆನ್ನಲಿ? ಇನ್ನೆಂದೂ ಹೀಗೆ ಮಾಡೆನೆಂದು ಅವಳಿಂದ ಪ್ರಮಾಣ ವಚನ ತೆಗೆದುಕೊಂಡೆ. ಪುನಃ ಆ ಬಾಲ್ಕನಿಗೆ ಹೋಗಿ ಹೊರಗೆ ನೋಡಿದಷ್ಟೂ ನನ್ನ ಹೃದಯ ಹೆಚ್ಚು ಕುಸಿಯುತ್ತಿತ್ತು. ಸ್ವಾತಿ ನಡೆದ ದಾರಿಯಲ್ಲಿ ನಡುವೆ ಒಂದೆಡೆ ಗೋಲಾಕಾರದ ಬೀಮ್ ಇದ್ದು ಅವನ್ನು ಬಳಸಿ ಅತ್ತ ಹೆಜ್ಜೆಯಿಡಬೇಕಿತ್ತು. ಮಳೆಗಾಲದ ದಿನಗಳಿದ್ದರಿಂದ ಹಾವಸೆ ಹಿಡಿದು ಅಲ್ಲೆಲ್ಲ ಹಸಿಯೂ, ಹಸಿರೂ ಇತ್ತು. ಕಾಲು ಜಾರಿದ್ದರೆ, ಅವಳ ದುಪ್ಪಟ ಎಲ್ಲಾದರೂ ಸಿಕ್ಕಿ ಕೊಂಡಿದ್ದರೆ, ಕೆಳಗೆ ನೋಡಲಿಲ್ವೇ, ಭಯವಾಗಲಿಲ್ವೇ ಎಂಬ ಪ್ರಶ್ನೆಗೆ ನಹೀಂ ಅಮ್ಮಾ, ನೀಚೇ ನಹೀಂ ದೇಖಾ ಎಂದು ನಕ್ಕಿದ್ದಳು ಸ್ವಾತಿ. ಒಂದು ನೀಲಿ-ಹಳದಿ ವರ್ಣದ ಹಕ್ಕಿಯಂತೆ ಸ್ವಾತಿ ಹಾಗೆ ಹೋಗುತ್ತಿದ್ದಾಗ, ಕೆಳಗಿನ ಅಂಗಡಿಗಳ ಜನರ್ಯಾರಾದರೂ ಮೇಲೆ ನೋಡಿ ಅವಳನ್ನು ಕಂಡಿದ್ದರೆ, ನಾನೇ ಕಳುಹಿಸಿದೆನೇನೋ ಎಂದಂದುಕೊಳ್ಳುತ್ತಿರಲಿಲ್ಲವೇ? ಏನಾದರೂ ಆಗಿದ್ದರೆ.... ಎಂಬ ಆತಂಕ... ತಲ್ಲಣದಿಂದ ಅಂದು ರಾತ್ರಿಯೆಲ್ಲ ನಾನು ನಿದ್ರಿಸಿರಲಿಲ್ಲ. ಕಿಚನ್ ಬಾಲ್ಕನಿಗೆ ಬೀಗ ಹಾಕಿರದಿದ್ದರಿಂದಾಯ್ತು. ಬೀಗ ಬಿದ್ದಿದ್ದರೆ. ಸ್ವಾತಿ ಹೋದಂತೆಯೇ ಹಿಂದೆ ಬರಬೇಕಿತ್ತು. ಬರುತ್ತಿದ್ದಳೇನೋ. ಆದರೆ ಅಷ್ಟರಲ್ಲಿ ನನ್ನ ಹೃದಯ ಖಂಡಿತ ಗೊಟಕ್ ಅನ್ನುತ್ತಿತ್ತು.

    ನಮ್ಮ ಕಿಚನ್ ಕ್ಯಾಬಿನೆಟ್ ಗೆದ್ದಲು ಹುಳಗಳಿಗೆ ಆಹಾರವಾಗಿ ತನ್ನ ಹೊರಕವಚವನ್ನು ಮಾತ್ರ ಉಳಿಸಿಕೊಂಡು ವರ್ಷಗಳೇ ಕಳೆದಿತ್ತು. ಕಟ್ಟಡದ ನವೀಕರಣ ನಡೆದಾಗ ಬಿದಿರಿನ ಅಟ್ಟಣಿಗೆಗಾಗಿ ಕೊರೆದ ತೂತುಗಳನ್ನು ಮುಚ್ಚದೆ, ಅಲ್ಲಿಂದ ಇಲಿ, ಹಲ್ಲಿಗಳು ಸರಾಗವಾಗಿ ಒಳ ಹೊರಗೆ ಓಡುತ್ತಿದ್ದವು. ನನ್ನ ಬಾಲ್ಕನಿಗಳನ್ನು ತುಂಬಿದ ಹೂಕುಂಡಗಳನ್ನಿರಿಸಲು ಬಾಕ್ಸ್ ಟೈಪ್ ಗ್ರಿಲ್ ಬೇಕಿತ್ತು. ಮೇಲ್ಮಹಡಿಯ ಸೋಮಾನಿಜೀ ಅವರ ಮನೆ ಮಾರ್ಬಲ್ ಮಾಯವಾದಾಗ, ಕುಸಿದ ನಮ್ಮ ಛಾವಣಿಯ ಪ್ಲಾಸ್ಟರ್‍ನಿಂದಾಗಿ ಅಡುಗೆಕಟ್ಟೆಯೂ ಕೆಟ್ಟು ಬಿಟ್ಟಿತು. ಹೀಗೆಲ್ಲ ಸಕಾರಣವಾಗಿಯೇ ಕೊನೆಗೊಂದು ದಿನ ಕೆಟ್ಟದ್ದನ್ನು ಕೆಡಹುವ ಕಾರ್ಯ ಮೊದಲಾಯ್ತು.

    31, ಮೇ 2005 ಹೊಸರೂಪ ನೀಡುವ ಉತ್ಸಾಹದಿಂದ ಅಡುಗೆ ಕೋಣೆಯ ಒಡಲನ್ನು ಬರಿದು ಮಾಡಲಾಯ್ತು. ಇಷ್ಟೊಂದು ಸಾಮಾನು ಎಲ್ಲಿ ತುಂಬಿತ್ತೆಂದು ಅಚ್ಚರಿಪಡುವಂತೆ. ಅವು ನಮ್ಮ ಬೆಡ್ ರೂಮ್‍ಗಳನ್ನು ಅತಿಕ್ರಮಿಸಿದವು. ಗ್ಯಾಸ್ ಕನೆಕ್ಷನ್ ಕಟ್ ಮಾಡುವಂತೆ ಮಹಾನಗರ್ ಗ್ಯಾಸ್ ಕಂಪೆನಿಗೆ ಕರೆ ಮಾಡಿದರೆ, ನಾಲ್ಕು ದಿನಗಳ ಬಳಿಕ ಬರುವುದಾಗಿ ಉತ್ತರ. ನಮ್ಮ ಕಿಚನ್‍ನಲ್ಲಿ ಕೆಲಸ ಶುರುವಾಗಿದೆ, ಪೈಪ್‍ಗೆ ಹಾನಿಯಾದರೇನು, ಮಾಡುವುದು, ಎಂದರೆ ಇಲ್ಲ, ಮ್ಯಾಮ್, ತುಂಬ ಕರೆಗಳು ದಾಖಲಾಗಿವೆ. ನಿಮ್ಮ ಸರದಿಗೆ ಕಾಯಬೇಕು ಎಂಬ ಉತ್ತರ. ಅದೇನು, ಎಲ್ಲ ಮನೆಗಳಲ್ಲೂ ರಿನೋವೇಶನ್ ನಡೀತಿದೆಯೇ ಎಂದು ಅಚ್ಚರಿಯಿಂದ ಕೇಳಿದರೆ ಹೌದೆಂದರು. ಆರಂಭದಲ್ಲೇ ಬಂದು ಕಿಚನ್ ಕ್ಯಾಬಿನೆಟ್ ಕಳಚಬೇಕಾಗಿದ್ದ ಕಾರ್ಪೆಂಟರ್ ಬರದೇ ಹೋದ. ಬಂದ ಮೇಸ್ತ್ರಿ ಹಾಗೂ ಅವನ ಆಳುಗಲು ಉಳಿದೆರಡು ಗೋಡೆಗಳ ಪ್ಲಾಸ್ಟರ್ ಕೆಡಹುವ ಕಾರ್ಯಕ್ಕೆ ಇಳಿದೇಬಿಟ್ಟರು. ಸಿಮೆಂಟ್, ರೇತಿ ತಂದು ಸುರಿದರು. ಗ್ಯಾಸ್ ಸ್ಟೌವ್‍ನ ಸ್ಥಳ ಬಿಟ್ಟು ಉಳಿದ ಅಡುಗೆ ಕಟ್ಟೆಯನ್ನೂ ಕಡವಿದರು.

    ಆ ಎಲ್ಲ ಮಣ್ಣು ಧೂಳಿನ ನಡುವೆ ಅವರಿಗಾಗಿ ಚಾ, ತಿಂಡಿ ಸರಬರಾಜಿನ ಕೆಲಸ, ಸಂಜೆ ಅವರು ಹೋದ ಬಳಿಕ ನಮ್ಮ ಅಡುಗೆಯ ಹೊಣೆ.

    ಮರುಬೆಳಗು ಗಾರೆ ಕೆಲಸದ ಒಬ್ಬಳೇ ಆಳು ಪ್ರತ್ಯಕ್ಷಃ ಉಳಿದವರು ಇನ್ನೆಲ್ಲೋ. ಹೀಗೆ ಎರಡು ದಿನ ಕಳೆದ ನಾಲ್ಕನೆಯ ದಿನ ಮಹಾನಗರ್ ಗ್ಯಾಸ್‍ನವರು ಪ್ರತ್ಯಕ್ಷರಾಗಿ ಕನೆಕ್ಷನ್ ಕಡಿದು, ಪೈಪ್‍ಗಳನ್ನು ತೆಗೆದಿಟ್ಟು, ಹಣ ಪಡೆದು ಹೋದರು. ಮನೆಯಲ್ಲಿ ಉಳಿಸಿಕೊಂಡಿದ್ದ ಎಲ್.ಪಿ.ಜಿ. ಸಿಲಿಂಡರ್‍ಗೆ ಕನೆಕ್ಷನ್ ಮಾಡಿಕೊಡುವಂತೆ ಕೇಳಿದರೆ, ಆಫೀಸ್‍ಗೆ ಕರೆಯಿತ್ತರೆ ಟೆಕ್ನಿಶಿಯನ್‍ನನ್ನು ಕಳಿಸಿಕೊಡುವರೆಂದರು. ಅದಕ್ಕಿನ್ನೆಷ್ಟು ದಿನಗಳೋ ಎಂದರೆ, ಪುಣ್ಯಾತ್ಮ, ದಯೆತೋರಿ ಮೊಬೈಲ್ ನಂಬರ್ ಕೊಟ್ಟ. ಕರೆ ಮಾಡಿ ಗೋಗರೆದ ಮೇಲೆ, ಮರುದಿನ ತಂತ್ರಜ್ಞ ಹಾಜರಾದ. ಬೆಡ್‍ರೂಮ್‍ನಲ್ಲಿರಿಸಲಾದ ಊಟದ ಮೇಜಿನ ಗ್ಯಾಸ್ ಸ್ಟೌವ್ ಇರಿಸಿ ಸಿಲಿಂಡರ್ ಕನೆಕ್ಟ್ ಮಾಡಿಕೊಟ್ಟ. ಬೆಡ್‍ರೂಮ್ ಟಡಿಗೆ ಆರಂಭವಾಯಿತು.

    ಅದೇ ಸಂಜೆ ಬಡಗಿಯೊಬ್ಬ ಬಂದು ಕಿಚನ್ ಕ್ಯಾಬಿನೆಟ್ ಕೆಡವಿ, ಮಣ್ಣು, ಮರಳು ಸಿಮೆಂಟ್‍ನ

    Enjoying the preview?
    Page 1 of 1