Discover millions of ebooks, audiobooks, and so much more with a free trial

Only $11.99/month after trial. Cancel anytime.

Karedare Baare..!
Karedare Baare..!
Karedare Baare..!
Ebook339 pages1 hour

Karedare Baare..!

Rating: 0 out of 5 stars

()

Read preview

About this ebook

ಯತಿರಾಜ್ ವೀರಾಂಬುಧಿ

ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ.
1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ.
ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.)
ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ)
ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್.
ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!
LanguageKannada
Release dateAug 12, 2019
ISBN6580207001015
Karedare Baare..!

Read more from Yathiraj Veerambudhi

Related authors

Related to Karedare Baare..!

Related ebooks

Related categories

Reviews for Karedare Baare..!

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Karedare Baare..! - Yathiraj Veerambudhi

    http://www.pustaka.co.in

    ಕರೆದರೆ ಬಾರೆ..!

    Karedare Baare

    Author :

    ಯತಿರಾಜ್ ವೀರಾಂಬುಧಿ

    Yathiraj Veerambudhi

    For more books

    http://www.pustaka.co.in/home/author/yathiraj-veerambudhi

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕರೆದರೆ ಬಾರೆ..!

    ಯತಿರಾಜ್ ವೀರಾಂಬುಧಿ

    Karedare baare..! – A novel by Yathiraj Veerambudhi, #89, Chirasmitha, Pattanagere, Rajarajeshwarinagar, Bengaluru- 560098

    ಕರೆದಾಗ ‘ಬರುವ’ ಮುನ್ನ..!

    ಇದೊಂದು ಹಾಸ್ಯ, ಸಸ್ಪೆನ್ಸ್ ಕಾದಂಬರಿ.

    ಈ ಕಾದಂಬರಿಯ ಶೀರ್ಷಿಕೆ ಮೊದಲ ಬಾರಿ ಪತ್ರಿಕೆಯಲ್ಲಿ ಓದಿದಾಗ ಕಚಗುಳಿ ಇಟ್ಟಂತಾಗಿತ್ತು.

    ಕನ್ನಡ ಹಾಡುಗಳನ್ನು ಯಥೇಚ್ಛವಾಗಿ ಆದರೆ ಸಮಯೋಚಿತವಾಗಿ ಬಳಸಿ ಇದನ್ನು ಬರೆದಿದ್ದೇನೆ.

    ಕೆಲವೆಡೆ ಇದರ ಓಟ ನೋಡಿದರೆ ಸಿನಿಮಾ ನೋಡಿದಂತೆ ಎನಿಸದಿರದು.

    ಹಾಸ್ಯ, ಸಸ್ಪೆನ್ಸ್‍ನೊಂದಿಗೆ ನಾಲ್ಕೈದು ಟ್ರ್ಯಾಕ್‍ಗಳಲ್ಲಿ ಓಡುವ ಕಾದಂಬರಿ ಇದು. ಕೆಲವು ಫ್ಲ್ಯಾಷ್‍ಬ್ಯಾಕ್ ಅಧ್ಯಾಯಗಳೂ ಒಂದು ಟ್ರ್ಯಾಕ್‍ನಲ್ಲಿ ಓಡುತ್ತವೆ.

    ಸಹೃದಯೀ ಓದುಗರ ಸದ್ವಿಮರ್ಶೆಗೆ ಸದಾ ಸ್ವಾಗತ!

    ಯತಿರಾಜ್ ವೀರಾಂಬುಧಿ

    yathirajmv@gmail.com
    ಕಾಣಿಕೆ
    ನಾಟಕ, ಟಿ.ವಿ., ಸಿನಿಮಾಗಳಲ್ಲಿ ನಟಿಸುತ್ತಾ
    ಹಿರಿತೆರೆಯ ನಾಯಕನಾಗಲು ಎಲ್ಲ ಅರ್ಹತೆಗಳನ್ನೂ ಹೊಂದಿರುವ
    ನನ್ನ ಯುವ ಗೆಳೆಯ
    ನವೀನ್ ತೀರ್ಥಹಳ್ಳಿಗೆ
    ಅಭಿಮಾನದಿಂದ.
    ಬೇಗನೆ ಪ್ರವರ್ಧಮಾನಕ್ಕೆ ಬರಲೆಂದು ಆಶಿಸುತ್ತಾ
    -ಯತಿರಾಜ್
    ಕರೆದರೆ ಬಾರೆ..!

    ಸೀತಾಪತಿಗೆ ತನ್ನನ್ನೆಬ್ಬಿಸಿದ್ದೇನೆಂದು ಕ್ಷಣಕಾಲ ಅರ್ಥವಾಗಲಿಲ್ಲ. ಪಕ್ಕದಲ್ಲಿಯೇ ಗೊರಕೆ ಹೊಡೆಯುತ್ತಿದ್ದಳು ಗಜಲಕ್ಷ್ಮಿ. ಅವಳ ಗೊರಕೆಯು...ಹ್ಞುಂ! ಅದು ದಿನ ನಿತ್ಯದ ಗೋಳು. ತನಗೆ ಜೋಗುಳದಂತೆ ಕೇಳಿಸುತ್ತದೆ!

    ಅದು ತನ್ನನ್ನು ಎಚ್ಚರಿಸಲು ಸಾಧ್ಯವಿಲ್ಲ. ಹಾಗಾದರೆ ತನ್ನನ್ನು ಎಚ್ಚರಗೊಳಿಸಿದ್ದೇನು? ಮತ್ತೊಂದು ಸಣ್ಣ ಸ್ವರ ಕಿವಿಗೆ ಬಿತ್ತು. ಥಟ್ಟನೆ ಮಂಚದಿಂದೆದ್ದ. ಗಡಿಯಾರ ಎರಡು ಹೊಡೆಯಿತು.

    ದೀಪದ ಸ್ವಿಚ್ ಹಾಕಲು ಹೋದವನು ಬೇಡವೆಂದುಕೊಂಡು ಕಿಟಕಿಯ ಬಳಿ ಮೆಲ್ಲನೆ ಬಂದ. ಪಕ್ಕದ ಮನೆಯ ಮುಂದೆ ಮಾರುತಿ ಆಮ್ನಿ ವ್ಯಾನ್! ಇಷ್ಟು ಸರಿರಾತ್ರಿಯಲ್ಲಿ?

    ಮಹಡಿಯ ತನ್ನ ರೂಮಿನಿಂದ ಸ್ವಲ್ಪ ಬಾಗಿ ಎಚ್ಚರದಿಂದ ಗಮನಿಸಿದ. ಅಚ್ಚರಿ ಅವನ ಕಂಗಳಿಗೆ ನುಗ್ಗಿತ್ತು! ಸಜ್ಜನರಾಯರ ಮನೆಯಲ್ಲಿ ಈ ಸಮಯದಲ್ಲಿ ಮಾರುತಿ ವ್ಯಾನು! ಇನ್ನಷ್ಟು ಬಾಗಿದ.

    ಹಾಳಾದ ಚಕ್ಕೋತದ ಮರ. ಕತ್ತರಿಸಬೇಕು. ಸರಿಯಾಗಿ ಏನೂ ಕಾಣಿಸ್ತಿಲ್ಲ.

    ಮಲಗೋಣವೆಂದುಕೊಂಡ. ಆದರೆ ಕುತೂಹಲದ ಗುಂಡುಸೂಜಿ ಅವನನ್ನು ಚುಚ್ಚಿ ಚುಚ್ಚಿ ಎಬ್ಬಿಸಿತು. ಎಷ್ಟು ಕಾಣುವುದೋ ಅಷ್ಟನ್ನೇ ಅರಗಿಸಿಕೊಳ್ಳುವ ನಿರ್ಧಾರ ಮಾಡಿ ಕಾಣಿಸುವುದಷ್ಟನ್ನೇ ನೋಡಹತ್ತಿದ.

    ಈಗ ವ್ಯಾನನ್ನು ಸ್ವಲ್ಪ ಮುಂದಕ್ಕೆ ತಂದಿದ್ದ ವ್ಯಾನಿನ ಚಾಲಕ. ಸಾಕಾ?ಕೇಳಿದ ಆ ಚಾಲಕ. ಯಾರವನು?

    ಸೀತಾಪತಿ ಆಲೋಚಿಸಿದ. ಯಾರೆಂದು ತಿಳಿಯಲಿಲ್ಲ. ಅಷ್ಟರಲ್ಲಿ ಅವನ ಕಣ್ಣಿಗೆ ಸರಸು ಕಾಣಸಿಕ್ಕಿದಳು.

    ಸರಸು!

    ಅಬ್ಬಾ! ಅದೆಂಥಾ ದಷ್ಟಪುಷ್ಟ ಶರೀರ! ಅವಳ ನೈಟಿಯಂತೂ ಸೀತಾಪತಿಯ ಕಣ್ಣಿಗೆ ಹಬ್ಬವುಂಟುಮಾಡಿತ್ತು.

    ಹ್ಞುಂ! ತನ್ನ ಹೆಂಡತಿ ಗಜಲಕ್ಷ್ಮಿಯೂ ಇದ್ದಾಳೆ. ತಿನ್ನುವುದರಲ್ಲಿ ಯಾವ ಸಂಕೋಚವನ್ನೂ ತೋರದಿದ್ದರೂ ತಿಂದಿದು ಯಾವುದೂ ಅವಳ ಮೈಗಂಟಿಕೊಳ್ಳದೇ ಮಡಿಕೋಲಿನಂತಿದ್ದಳು.

    ಆದರೆ ಸರಸು! ಆ ದೇಹಶ್ರೀ!! ಸೀತಾಪತಿಯ ಮೈ ಬೆಚ್ಚಗಾಗಿತ್ತು.

    ಅವನ ಲಹರಿಗೆ ತಡೆ ಹಾಕಿತ್ತು ಚಲನೆಯೊಂದು. ಇಬ್ಬರು ಯುವಕರು ಅಲ್ಲಿಗೆ ಬಂದಿದ್ದರು. ಅವರಲ್ಲಿ ಅವನ ಗಮನವನ್ನು ಆಕರ್ಷಿಸಿದ್ದು ಅವರು ಹೊತ್ತುಕೊಂಡಿದ್ದ ದೇಹ.

    ಯಾರದದು? ಶವವೇ? ಸೀತಾಪತಿಯ ಮೈ ನಡುಗಿತು.

    ಯುವಕರು ಯಾರೆಂದು ತಿಳಿಯಲಿಲ್ಲ. ಯುವಕರಿರಬಹುದೆಂಬುದು ಅವನ ಊಹೆ. ಇಬ್ಬರದೂ ಕಪ್ಪು ಬಟ್ಟೆ. ಪ್ಯಾಂಟ್, ಷರ್ಟ್, ಜ್ಯಾಕೆಟ್.  ವ್ಯಾನಿನಲ್ಲಿ ಆ ದೇಹವನ್ನು ಕೂರಿಸಿ ಆ ಕಡೆ ಒಬ್ಬ ಈ ಕಡೆ ಒಬ್ಬ ಕುಳಿತರು.

    ಈಗ ಅವನ ಕಣ್ಣಿಗೆ ಮತ್ತೊಬ್ಬ ಬಿದ್ದ.

    ಅವನಾರೆಂದು ತಿಳಿಯದಿದ್ದರೂ ಅವನ ಕೆನ್ನೆಯ ಮೇಲಿನ ಕಪ್ಪು ಗುರುತು ಸೀತಾಪತಿಯ ದೃಷ್ಟಿಗೆ ಬಿತ್ತು.

    ಈಗ ವ್ಯಾನಿನ ಬಾಗಿಲುಗಳು ಮುಚ್ಚಲ್ಪಟ್ಟವು. ಸರಸು ಡ್ರೈವರ್ ಪಕ್ಕದಲ್ಲಿ ಕೂತವನ ಬಳಿಗೆ ಹೋಗಿ ಕಿಟಕಿಯಿಂದ ಹುಷಾರು! ಎಂದಳು.

    ವ್ಯಾನು ಹೊರಟುಹೋಯಿತು. ಸರಸು ಮತ್ತೆರಡು ನಿಮಿಷ ಅಲ್ಲಿಯೇ ನಿಂತಿದ್ದರಿಂದ ಸೀತಾಪತಿ ಸಂಕೋಚವಿಲ್ಲದೇ ಅವಳ ಸೌಂದರ್ಯ ಹೀರಿದ. ನಂತರ ಅಲ್ಲಿ ಎಲ್ಲವೂ ಕತ್ತಲೆ.

    ಸೀತಾಪತಿ ಮೆಲ್ಲನೆ ಮಂಚ ಸೇರಿದ.

    ಎಲ್ರೀ ಹೋಗಿದ್ರೀ? ಗಜಲಕ್ಷ್ಮಿ ಗದರಿದಳು.

    ಬಾತ್‍ರೂಂ ಸುಳ್ಳು ನಿರರ್ಗಳವಗಿ ಹೊರಬಂತು.

    ಅದೇಕೋ ಗಜಲಕ್ಷ್ಮಿಯೆಂದರೆ ಸೀತಾಪತಿಗೆ ತುಂಬಾ ಭಯ!

    ಕಣ್ಣು ನಿದ್ರಾದೇವಿಗೆ ಶರಣಾಗುವುದು ಸ್ವಲ್ಪ ನಿಧಾನವಾಗಿತ್ತು.

    ಸಜ್ಜನರಾಯರ ಮನೆಯಲ್ಲಿನ ಈ ನಡುರಾತ್ರಿಯ ನಾಟಕದ ಅರ್ಥವೇನು?

    ***

    ಸೀತಾಪತಿಯ ಮೇಲೆ ನೀರು ಬಿದ್ದಿತ್ತು. ಏಳ್ರೀ ಹಾಲು ತನ್ರೀ! ಲೇಟಾದ್ರೆ ಆ ಹಾಲಿನವನು ಐವತ್ತು ಪೈಸೆ ಎಕ್ಸ್‍ಟ್ರಾ ಛಾರ್ಜ್ ಮಾಡ್ತಾನೆ ಎಂದು ಅಲುಗಾಡಿಸಿದಳು ಗಜಲಕ್ಷ್ಮಿ. ನಿರ್ವಾಹವಿಲ್ಲದೇ ಎದ್ದ ಸೀತಾಪತಿ ಗಡಿಯಾರ ನೋಡಿದ.

    ಆರೂ ಇಪ್ಪತ್ತು! ಅಯ್ಯಯ್ಯೋ, ಸರಸು ಹಾಲು ತಂದುಬಿಟ್ಟಿರುತ್ತಾಳೆ! ಇಂದವಳನ್ನು ನೋಡಲು ಸಾಧ್ಯವಾಗದಲ್ಲಾ! ದುಃಖ ಉಕ್ಕಿ ಬಂತು ಸೀತಾಪತಿಗೆ. ವೇಗವಾಗಿ ಹಾಲಿನ ಬೂತ್‍ಗೆ ನಡೆದ ಸೀತಾಪತಿ. ಅವಳನ್ನು ಮಾತಾಡಿಸುವಾಸೆ ಅವನಿಗೆ. ಅವಳು ಅವನನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದಳು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅವಳನ್ನು ಮಾತಾಡಿಸುವ ಪ್ರಯತ್ನವನ್ನು ಮುಂದುವರೆಸಿದ್ದ.

    ಅರ್ಧ ಲೀಟರ್! ಎಂದ ಬೂತ್‍ನ ತೂತಿನಲ್ಲಿ ಕೈ ಹಾಕಿ.

    ರೀ! ಬೆಳಿಗ್ಗೆ ಬೆಳಿಗ್ಗೆ ನೂರು ರೂಪಾಯಿ ತರ್ತೀರಲ್ರೀ. ನಾನೆಲ್ಲಿಂದ ಕೊಡಲಿ ಚಿಲ್ಲರೇನ? ಗದರಿದ ಹಾಲಿನ ಬೂತ್‍ನಾತ. ಒಂದ್ನಿಮ್ಷ ಸೈಡ್ನಲ್ಲಿ ನಿಲ್ರೀ. ಬೇರೇವ್ರಾದ್ರೂ ಹಾಲು ತಗೋತಾರೆ. ಬಂದ್ಬಿಡ್ತಾರೆ ತಲೆ ತಿನ್ನೋಕ್ಕೆ!ಗೊಣಗಿದನಾತ. ಸೈಟ್‍ಗೆ ಬರಲು ಹೋದ ಸೀತಾಪತಿಯ ಮೊಣಕೈಗೆ ಮೃದುವಾದ ವಸ್ತು ತಾಕಿತ್ತು.

    ಸಾರಿ! ಎಂದು ಹೇಳಲು ತಿರುಗಿದವನು ಮೈ ಝುಮ್ಮೆಂದಾಗಿ ಅಲುಗಾಡದೇ ನಿಂತುಬಿಟ್ಟ.

    ಅವನ ಮೊಣಕೈ ಧಾಳಿಗೆ ತುತ್ತಾದವಳು ಸರಸು! ಇವರ ದುಡ್ಡು ನನ್ನ ದುಡ್ಡಲ್ಲಿ ಹಿಡ್ಕೊಳ್ಳಿ ಎಂದಳು ಹಾಲಿನಾತನಿಗೆ. ಸೀತಾಪತಿ ಕೃತಜ್ಞತೆಯಿಂದ ಅವಳತ್ತ ನೋಡಿದ. ಹಾಲು ಪ್ಯಾಕೆಟ್ ಹಿಡಿದು ಅಕ್ಕಪಕ್ಕದಲ್ಲೇ ನಡೆದು ಬಂದರು ಸೀತಾಪತಿ, ಸರಸು. ಅವನಿಗಂತೂ ಸ್ವರ್ಗ ಮೂರೇ ಗೇಣು!

    ಇಲ್ಲಿ ಇವತ್ತು ಗುದ್ದಲಿ ಪೂಜೆ! ಎಂದ ಖಾಲಿ ಸೈಟು ತೋರಿಸಿ.

    ಅಂದರೆ ಎಂಟನೇ ಮನೆ ಬರುತ್ತೆ ಅನ್ನಿ ಎಂದಳು ಸರಸು.

    ಹೌದು. ಆದ್ರೂ ಹೊಸ ಏರಿಯಾ ಡೆವಲಪ್ ಆಗೋದು ಈ ಬೆಂಗಳೂರಲ್ಲಿ ಇಷ್ಟು ನಿಧಾನ ಅಂತ ತಿಳಿದಿರಲಿಲ್ಲ ಎಂದ ಸೀತಾಪತಿ. ಇವತ್ತೇನು? ಇವಳು ಇಷ್ಟೊಂದು ಮಾತಾಡ್ತಿದ್ದಾಳೆ?

    ನಮ್ಮ ಬೇಬಿ ಹೇಳ್ತಿರ್ತಾಳೆ ಈ ಏರಿಯಾ ಡೆವಲಪ್ ಆಗೋದು ಅವಳು ಅಜ್ಜಿ ಆದಾಗಂತೆ ಹಾಗೆಂದ ಸರಸು ಥಟ್ಟನೆ ಬೇರೆಡೆ ನೋಡಿದಳು.

    ಯಾಕೆ? ಅವಳ ಕಣ್ಗಳಲ್ಲಿ ಭಯದ ಛಾಯೆಯಿತ್ತೇ?

    ಹೌದೂ, ನಿಮ್ಮ ಬೇಬಿಗೆ ಇವತ್ತು ಇನ್ನೂ ಎಚ್ಚರ ಆಗಿಲ್ವಾ? ಎಂದ.

    ಅವನ ದಿನಚರಿಯಲ್ಲಿ ಅದೊಂದು ಭಾಗ ಅರ್ಥಾತೆ ಸಜ್ಜನರಾಯರ ಮಗಳು ಭಾಮಾಳ ಏರೋಬಿಕ್ಸ್ ನೋಡುವುದು. ಇಪ್ಪತ್ತು ವರ್ಷದ ಭಾಮಾ ಅವಳ ಎಕ್ಸರ್‍ಸೈಜ್ ದಿರಿಸಿನಲ್ಲಿ ಮೋಹಕವಾಗಿ ಕಾಣಿಸುತ್ತಿದ್ದಳೂ. ಒಂದು ಗುಟ್ಟಿನ ವಿಷಯವೆಂದರೆ ಭಾಮಾಳಿಗಾಗಲೀ, ಸರಸುವಿಗಾಗಲೀ, ಅಷ್ಟೇ ಏಕೆ, ಅವನ ಗಯ್ಯಾಳಿ ಹೆಂಡತಿ ಗಜಲಕ್ಷ್ಮಿಗೂ ತಿಳಿಯದು. ಅವನು ಅಷ್ಟು ಎಚ್ಚರಿಕೆಯಿಂದ ಆ ನೋಟ ನೋಡಿ ಕಣ್ತುಂಬಿಕೊಳ್ಳುತ್ತಿದ್ದ.

    ಹ್ಞಾಂ... ಬೇಬೀನಾ? ಅವ್ಳು.. ಅವ್ಳ .. ಫ್ರೆಂಡ್.. ಯಾರದು? ಹ್ಞಾಂ ಸಿಲ್ಲಿಯ ಮನೇಲಿ ಉಳಕೊಂಡಿದ್ದಾಳೆ ಎಂದಳು ಸರಸು.

    ಸೀತಾಪತಿಗೆ ರಾತ್ರಿಯ ದೃಶ್ಯ ಕಣ್ಮುಂದೆ ಹಾಜರಾಯಿತು. ತಾನು ನೋಡಿದ್ದೇನು? ಆ ದೇಹ ಯಾರದು?

    ಸಜ್ಜನರಾಯರು ಊರಲ್ಲಿಲ್ಲಾಂತ ಕಾಣತ್ತೆ ಎಂದ ವಿಷಯವನ್ನು ಮತ್ತಷ್ಟು ಅರಿಯಲು.

    ಸರಸು ಚಡಪಡಿಸುತ್ತಾ ಮನೆಗೆ ಯಾವಾಗ ತಲುಪಿಯೇನೋ ಎಂಬಂತೆ ಹೆಜ್ಜೆ ಹಾಕುತ್ತಿದ್ದಳು.

    ಹೌದು. ಸಜ್ಜಣ್ಣ ಬಿಜಿನೆಸ್ ಟೂರ್ ಹೋಗಿದ್ದಾರೆ... ನೀವು ಹೋಗಿ ... ಸೀತಾಪತಿ. ನಾನು ಅಂಗಡೀಲಿ ಏನೋ ತಗೋಬೇಕು ಎಂದು ದುಡುದುಡು ವಾಪಸ್ಸು ಹೊರಟುಹೋದಳು. ಅವಳು ತನ್ನನ್ನು ಕಿತಾಪತಿ ಎಂದಳೇನೋ ಎಂದುಕೊಂಡ. ನಿನ್ನೆ ರಾತ್ರಿ ಏನೋ ನಡೆದಿದೆಯೆಂದು ಶಂಕಿಸಿದ.

    ತಾನು ಅವಳ ಹಿಂದೆಯೇ ಹೋಗಲೇ ಎಂದುಕೊಂಡಾಗ ಅವನ ದೃಷ್ಟಿ ಅವನ ಮನೆಯತ್ತ ಅಯಾಚಿತವಾಗಿ ಬಿತ್ತು.

    ಗಾಬರಿಯಾದ. ಅಲ್ಲಿ ನಿಂತಿದ್ದಳು ಅವನ ಹೆಂಡತಿ! ವೇಗವಾಗಿ ಮನೆ ತಲುಪಿದ

    ***

    ಏನ್ರೀ ಆ ನಾಚಿಕೆ ಇಲ್ಲದ ಹೆಂಗಸಿನೊಂದಿಗೆ ಚಕ್ಕಂದ? ದನಿ ಏರಿತ್ತು.

    ಷ್! ಗಜೂ...ಪ್ಲೀಜ್! ಈಗ ನಮ್ಮ ಮನೆಯ ಈ ಕಡೆ ಕೂಡಾ ಮನೆ ಬಂದಿದೆ. ಮೊದಲೆಲ್ಲಾ ನೀನು ಎಷ್ಟು ಜೋರಾಗಿ ಬೈದರೂ ನಾನು ಏನೂ ಹೇಳ್ತಿರಲಿಲ್ಲ. ಈಗ ಬೇಡ ಕಣೇ ಗಜೂ. ಅವರು ನನ್ನ ಬಗ್ಗೆ ಏನು ತಿಳಕೋತಾರೆ? ಎಮದ.

    ಹ್ಞಂ! ನಿಮ್ಮ ಬುದ್ಧಿ ಎಂಥದ್ದೂಂತ ಹೊಸದಾಗಿ ಬಂದಿರೋರಿಗೆ ಗೊತ್ತಿಲ್ಲ ಅಂದ್ಕೊಂಡಿದ್ದೀರಾ? ಮೊನ್ನೆ ಅವರೇನಂದ್ರು ಗೊತ್ತಾ? ಬೇಸರದಿಂದ ಹೇಳಿ ಪತಿಯತ್ತ ದುರುಗುಟ್ಟಿ ನೋಡಿ ನಿಮ್ಮೆಜಮಾನ್ರಿಗೆ ಮೆಳ್ಳಗಣ್ಣಾ ಅಂತ್ಕೇಳಿದ್ರು. ಯಾಕೆ ಹೇಳಿದ್ರೂಂತ ಯೋಚಿಸಿದ್ಮೇಲೆ ತಿಳೀತು. ನೀವು ಓರೆಗಣ್ಣಿಂದ ಆಕೇನ ನೋಡ್ತಿದ್ದನ್ನ ನಾನೇ ಕಣ್ಣಾರೆ ಕಂಡೆ. ಛೀ! ಏನು ಬುದ್ಧೀನೋ! ಎಂದು ಪಟಕ್ಕನೆ ಕೈಯಿಂದ ಹಾಲಿನ ಕವರ್ ಕಿತ್ತುಕೊಂಡು, ಅಡುಗೆ ಮನೆಗೆ ಹೊರಟುಹೋದಳು.

    ಅಬ್ಬಾ! ಬದುಕಿದೆ! ಎಂದುಕೊಂಡ. ಹೌದೂ! ಈ ಕಡೆ ಮನೆಯಾಕೆ ನನ್ನನ್ನು ನೋಡಿ ಹಲ್ಲು ಕಿಸಿಯುತ್ತಾಳೆ. ಆದರೆ ನನ್ನ ಹೆಂಡತಿ ಹತ್ತಿರ ಏನೋ ಕಥೆ ಹೊಡೆದಿದ್ದಾಳಲ್ಲಾ... ಇರಲಿ! ವಿಚಾರಿಸಿಕೊಳ್ತೇನೆ.

    ಹೊರಗೆ ಮೆಟ್ಟಿಲ ಮೇಲೆ ಕುಳಿತು ಪೇಪರ್ ತಿರುಗಿಸುತ್ತಿದ್ದಾಗ ಗಜಲಕ್ಷ್ಮಿ ಸ್ಟೀಲ್ ಲೋಟವನ್ನು ತಂದು ಕುಕ್ಕಿದಳು. ‘ಕುಕ್ಕಿದರೂ ಪರವಾಗಿಲ್ಲ. ಸಧ್ಯ! ಕಾಫಿ ಕೊಟ್ಳಲ್ಲಾ...’ ಎಂದು ಕಾಫಿ ಹೀರುತ್ತಾ ಸರಸುವಿಗಾಗಿ ಕಾದ. ಅವಳು ಇವನ ಮನೆಯ ಮುಂದೆ ಬರಲಿಲ್ಲ. ಹಿಂದಿನ ಬೀದಿಯಲ್ಲಿ ಹೊರಟುಹೋಗಿದ್ದಾಳೆ. ತನ್ನನ್ನು ತಪ್ಪಿಸುತ್ತಿರುವಳೇ? ಏನಾದರೂ ತಪ್ಪು ಮಾಡಿರುವಳೇ? ವಿಚಾರಿಸಬೇಕು.

    ಅದಕ್ಕೆ ಪೀಠಿಕೆಯಾಗಿ ಉಪಾಯವೊಂದನ್ನು ಮಾಡಿದ. ಮೇಲೆದ್ದು ಮೆಲ್ಲನೆ ಒಳಬಂದ. ಗಜ¯ಕ್ಷ್ಮಿ ದೇವರ ಪೂಜೆ ಮಾಡುತ್ತಿದ್ದಳು. ಅವಳ ಪೂಜೆ ಮುಗಿಯುವ ಹೊತ್ತಿಗೆ ಎರಡೇ ನಿಮಿಷಗಳಲ್ಲಿ ‘ಕಾಕ ಸ್ನಾನ’ ಮಾಡಿ ಬಂದ. ಚಕಚಕನೆ ಡ್ರೆಸ್ ಮಾಡಿಕೊಂಡ.

    ತಿಂಡಿಗೆ ಬನ್ನಿ ಎಂದಳು ಗಜಲಕ್ಷ್ಮಿ. ಉಪ್ಪಿಟ್ಟು ತಟ್ಟೆಯಲ್ಲಿ ಹಬೆಯಾಡುತ್ತಿತ್ತು. ಸ್ಪೂನಿನಿಂದ ಒಂದಿಷ್ಟು ಉಪ್ಪಿಟ್ಟು ತೆಗೆದುಕೊಂಡವನು ಗಜೂ! ಎಂದ ಇಲ್ಲದ ಪ್ರೀತಿಯನ್ನು ದನಿಯಲ್ಲಿ ತುಂಬಿ. ಟಕ್ಕನೆ ಅವನತ್ತ ನೋಡಿದಳು ಗಜಲಕ್ಷ್ಮಿ ಅಚ್ಚರಿಯಿಂದ.

    ಬಾಯಿ ತೆಗಿ ಎಂದು ಅವಳ ಬಾಯಿಗೆ ಉಪ್ಪಿಟ್ಟು ತುರುಕಿದ. ಹ್ಞಾಂ ಬಿಸಿ! ನಾಲಗೆ ಸುಟ್ಹೋಯ್ತು! ಎಂದು ಕಿರುಚಿದವಳು, ಆದರೂ ಮದುವೆಯಾದ ಹೊಸತರಲ್ಲಿ ನೀವು ಹೀಗೆ ಮಾಡಿದ್ದು ನೆನಪು ಎಂದಳು ಸಂತಸದಿಂದ.

    ಮಿಕ ಬಲೆಗೆ ಬಿತ್ತು! ಇನ್ನು ಬಲೆ ಬಿಗಿಯಬೇಕೆಂದು ನಿರ್ಧರಿಸಿಗಜೂ! ನಿನ್ನ ತಂಗಿ ಮನೆಗೆ ಹೋಗಬೇಕೂಂತಿದ್ದೀಯಲ್ಲಾ! ನಿನ್ನನ್ನು ನನ್ನ ಸ್ಕೂಟರ್‍ನಲ್ಲಿ ಬಿಡ್ತೀನಿ ಎಂದ. ಗಜಲಕ್ಷ್ಮಿ ಹಿಗ್ಗಿದಳು.

    ಕೆಲವೇ ನಿಮಿಷಗಳಲ್ಲಿ ಪತಿಯ ಹಿಂದೆ ಸ್ಕೂಟರ್ ಹತ್ತಿ ಕುಳಿತಿದ್ದಳು. ಬೇಡವೆಂದರೂ ಸ್ವಂತ ಮನೆಯನ್ನು ಊರಾಚೆ ಕಟ್ಟಿ ಸರಿಯಾದ ವಾಹನ ಸೌಲಭ್ಯವಿಲ್ಲದೇ ಎಲ್ಲಿಗೂ ಹೋಗಲಾಗಿರಲಿಲ್ಲ.

    ‘ಈಗ ಪತಿ ತನ್ನ ಕೆಲಸ ಬಿಟ್ಟು ನನ್ನನ್ನು ಕರೆಯುತ್ತಿದ್ದಾರೆ!’

    ಪಾಪ ಗಜಲಕ್ಷ್ಮಿ! ಪತಿಯೆಂಬ ಕಿತಾಪತಿಯ ಆಲೋಚನೆ ತಿಳಿದಿದ್ದರೆ ಎದೆಯೊಡೆದು ಸಾಯುತ್ತಿದ್ದಳೇನೋ!

    ‘ಸರಸುವನ್ನು ಇಂದು ಅಟ್ಯಾಕ್ ಮಾಡಬೇಕು. ಹೇಗೂ ಅವಳಣ್ಣ ಸಜ್ಜನರಾವ್ ಇಲ್ಲ. ಇನ್ನು ಆ ಬೇಬಿ...ಭಾಮಾ ಅವಳೂ ಇಲ್ಲ. ಅದ್ಯಾರೋ ಸಿಲ್ಲಿ ಮನೆಗೆ ಹೋಗಿದ್ದಾಳೆ. ನಿನ್ನೆ ನೋಡಿದ ಡೆಡ್ ಬಾಡಿ ವಿಷಯ ಹೇಳಿ ಅವಳನ್ನು ಹೆದರಿಸಿ...’

    ರೀ! ತಿವಿದಿದ್ದಳು ಗಜಲಕ್ಷ್ಮಿ. ಬೆಚ್ಚಿದ.

    ವಿದ್ಯಾಲಕ್ಷ್ಮಿಯ ಮನೆಯ ಬಾಗಿಲಲ್ಲಿ ಇಳಿಸಿ, ತುಂಬಾ ಅರ್ಜೆಂಟ್ ಕೆಲಸ ಇದೆಯಮ್ಮಾ. ನೀನು ಬಸ್ಸು ಹಿಡಕೊಂಡು ಬಾ ಎಂದು ಹೇಳಿ ಅಲ್ಲಿಂದ ಹೊರಟುಬಿಟ್ಟ.

    ಅವನ ತಲೆಯಲ್ಲಿ ಅನೇಕ ಆಲೋಚನೆಗಳು ಗುದ್ದಾಡುತ್ತಿದ್ದವು. ಸರಸು ಯಾರ ದೇಹವನ್ನು ಕಳಿಸಿದಳು? ಆ ಮಾರುತಿ ಆಮ್ನಿ ವ್ಯಾನ್ ಯಾರದು? ಆ ಮೂವರು ಯುವಕರು ಯಾರು?

    ಹಾಳಾದ ಚಕ್ಕೋತ ಮರ! ತನಗೆ ಪೂರ್ತಿ ನೋಡಲು ಸಹಾಯ ಮಾಡಲಿಲ್ಲ. ಮನೆ ಹತ್ತಿರವಾಗುತ್ತಿದ್ದಂತೆ ಅವನ ಯೋಚನೆ ಹೊಸದಾರಿ ಹಿಡಿಯಿತು.

    ಈ ಏರಿಯಾ ಯಾವಾಗ ಬೆಳೆಯುವುದೋ? ಯಾವುದೇ ರೀತಿಯ ಅನುಕೂಲವಿಲ್ಲ ಇಲ್ಲಿ. ಸೈಟು ಅಗ್ಗವಾಗಿ ಸಿಕ್ಕಿತೆಂದು ಮನೆ ಕಟ್ಟಿದ. ಪ್ರತಿ ಎರಡು ವರ್ಷಕ್ಕೊಮ್ಮೆ ಏರುವ ಬಾಡಿಗೆಗಿಂತ, ಬ್ಯಾಂಕಿನ ಸಾಲಕ್ಕೆ ಕಟ್ಟಿದರೆ ಒಂದಲ್ಲ ಒಂದು ದಿನ ಮನೆ ತನ್ನದೇ ಆಗುತ್ತದೆ. ಈ ಯೋಚನೆಯೇ ಅವನನ್ನು ಇಲ್ಲಿಗೆ ಕರೆತಂದಿದ್ದು.

    ಪಕ್ಕದ ಸೈಟಿನ ಸಜ್ಜನರಾಯರು ಭಾರೀ ಕುಳ. ಎರಡು 40 ಬೈ 80 ಸೈಟು ಕೊಂಡು ಬಂಗಲೆ ಕಟ್ಟಿ ಸುತ್ತಲೂ ತೋಟ ಮಾಡಿದ್ದರು. ಅವರ ಒಬ್ಬಳೇ ಮಗಳು ಭಾಮಾ. ಇಪ್ಪತ್ತರ ರಸಪೂರಿ ಮಾವಿನಹಣ್ಣಿನಂತಹ ಯುವತಿ. ಅವರಿಬ್ಬರನ್ನು ಬಿಟ್ಟರೆ ಆ ಮನೆಯ ಮೂರನೆಯ ವ್ಯಕ್ತಿ ಸರಸು.

    ಸರಸು! ಅವಳಿಗೆ ನಲವತ್ತು ದಾಟಿದೆಯೆಂದು ಯಾರು ಅಂದಾರು? ಅದೇನು ಮೈಮಾಟ...

    ಯಾಂತ್ರಿಕವಾಗಿ ಸ್ಕೂಟರನ್ನು ಷೆಡ್‍ನೊಳಗಿಟ್ಟ. ನಂತರ ತಮ್ಮ ಕಾಂಪೌಂಡಿನ ಅಂಚಿನಲ್ಲಿ ಬೆಳೆದಿದ್ದ ಚಕ್ಕೋತದ ಮರದಿಂದ ಮಜಬೂತಾದ, ಸ್ವಲ್ಪವೇ ಬಣ್ಣ ಬಂದಿದ್ದ ಹಣ್ಣು ಕಿತ್ತ. ಮನೆಗೆ ಬೀಗ ಹಾಕಿ ಹೊರಬಂದವನು, ಮತ್ತೆ ಏನೋ ನೆನಪಾಗಿ ಒಳಗೆ ಹೋಗಿ ಗಜಲಕ್ಷ್ಮಿ ಸ್ಟೀಲಿನ ಡಬ್ಬದಲ್ಲಿಟ್ಟಿದ್ದ ‘ಮಾರಿ’ ಬಿಸ್ಕೆಟ್ ಒಂದನ್ನು ಕೈಗೆ ತೆಗೆದುಕೊಂಡ. ಅವನು ಬೀಗ ಹಾಕಿ ಗೇಟಿಗೆ ಬಂದಾಗ ಅವನನ್ನೇ ಗಮನಿಸುತ್ತಿದ್ದವು ಕಣ್ಣುಗಳೆರಡು!

    ಒಮ್ಮೆ ನಗುವ ಪ್ರಯತ್ನ ಮಾಡಿದ. ಆಕೆ ತಾನು ಮರೆಯಾಗಿ ನಿಂತಿದ್ದುದು ಸೀತಾಪತಿಯ ಕಣ್ಣಿಗೆ ಬಿದ್ದಿತೆಂದು ಅರಿವಾದೊಡನೆ ಒಳಗೆ ಹೊರಟುಹೋದಳು. ಇನ್ನು ಈ ಸಿ.ಐ.ಡಿ. ಸುಂದರಿಯ ಕಣ್ತಪ್ಪಿಸದಿದ್ದರೆ ನನಗೆ ಗಜೂನ ಗೋಳು ತಪ್ಪಿದ್ದಲ್ಲ ಎಂದು ಬೈದುಕೊಳ್ಳುತ್ತಾ ಸರಸುವಿನ ಮನೆಯ ವಿರುದ್ಧದಿಕ್ಕಿನಲ್ಲಿ ನಡೆದು ಮನೆಯ ಹಿಂಭಾಗಕ್ಕೆ ಬಂದು ಸರಸುವಿನ ಮನೆಯÁ ಆ ಕಡೆಗೆ ನಡೆದ. ಅವನಿಗೆ ಗೊತ್ತಿಲ್ಲದ ವಿಷಯವೆಂದರೆ ಆ ಕಡೆ ಪಕ್ಕದ ಮನೆಯ ಸಿ.ಐ.ಡಿ. ಸುಂದರಿ ಅವನನ್ನು ಗಮನಿಸುತ್ತಲೇ ಇದ್ದುದು!

    ಗೇಟು ಮುಟ್ಟಿದೊಡನೆ ಬಂದಿತ್ತು ರಾಕ್ಷಸಾಕಾರದ ನಾಯಿಯೊಂದು! ಭೌವ್! ಎಂದೊಡನೆ ಬೆಚ್ಚಿದ ಸೀತಾಪತಿ. ತಕ್ಷಣವೇ ಕೈಲಿದ್ದ ಮಾರಿ ಬಿಸ್ಕೆಟ್ ಮೂಸಿಸಿದ. ಬಾಲವಾಡಿಸಿತು ನಾಯಿ.

    ಬ್ರಿಸ್ಕೀ! ಯಾರು ಬಂದ್ರು? ಎನ್ನುತ್ತಾ ಸರಸು ಮನೆಯ ಬಾಗಿಲಿಗೆ ಬಂದಿದ್ದಳು. ಈಗ ಸ್ವಲ್ಪ ಹೊಸದಾಗಿದ್ದ ಮ್ಯಾಕ್ಸಿ! ಸೀತಾಪತಿಯ ಹೃದಯದಲ್ಲಿ ನಟರಾಜ ತಾಂಡವ ನೃತ್ಯವಾಡಿದ್ದ. ಓ! ನೀವಾ? ಎಂದಳು ಸರಸು. ಆ ದನಿಯಲ್ಲಿ ಬೇಸರವಿತ್ತೇ? ಅಥವಾ ಹೆದರಿಕೆಯೇ?

    ಹೌದೂ, ಈ ನಾಯಿ ಬ್ರಿಸ್ಕಿ ನೆನ್ನೆ ಬೊಗಳಲಿಲ್ಲವಲ್ಲ! ಹೊಸಬರು ಬಂದರೆ ಸೀಳಿ ಬಿಡುವಂತಹ ಆಲ್ಸೇಷನ್ ನಾಯಿ ಬ್ರಿಸ್ಕಿ.

    ಅಂದರೆ ಬಂದವರು ಪರಿಚಯದವರೇ?

    ಬ್ರಿಸ್ಕಿ ಅವನ ಕೈಲಿದ್ದ ಬಿಸ್ಕೆಟ್ ಮೂಸುತ್ತಾ ಅವನನ್ನು ಹಿಂಬಾಲಿಸಿತು. ಗೂಡಿನ ಬಳಿಗೆ ನಡೆದು ಬಿಸ್ಕೆಟ್ ಒಳಗೆಸೆದು ಬ್ರಿಸ್ಕಿ ಒಳಗೆ ಹೋದಾಗ ತಟಕ್ಕನೆ ಗೂಡಿನ ಬಾಗಿಲು ಹಾಕಿ ‘ಹಮ್ಮಯ್ಯ’ ಎಂದುಕೊಂಡ. ಆಗ ಅವನ ಕಣ್ಣಿಗೆ ಬಿದ್ದಿತ್ತು ಒಂದು ಬುಟ್ಟಿ. ನಾಯಿಯ ಬಾಯಿಗೆ ಕಟ್ಟುವ ಸೈಜಿನದು.

    ಅಂದರೆ ನೆನ್ನೆ ರಾತ್ರಿ ನಾಯಿಯ ಬಾಯಿ ಮುಚ್ಚಿದ್ದಾರೆ! ಯಾಕೆ? ಅದು ಬೊಗಳಬಾರದೆಂದು! ಇವರ ಕಳ್ಳಕೆಲಸ ಯಾರಿಗೂ ತಿಳಿಯಬಾರದೆಂದು. ಈಗವನು ನೇರವಾಗಿ ಮನೆಯೊಳಗೆ ನಡೆದ.  ಸರಸು ಅವರೇಕಾಯಿ ಸುರಿದುಕೊಂಡು ಸುಲಿಯುತ್ತಿದ್ದಳು. ಅವಳ ಭಂಗಿ ಇವನ ತಲೆ ಬಿಸಿ ಮಾಡಿತ್ತು.

    ಏನು ಬಂದಿದ್ದು? ನೇರವಾಗಿ ಪ್ರಶ್ನಿಸಿದ್ದಳು.

    ಹಣ್ಣು... ಕೊಡೋಕ್ಕೆ ಬಂದೆ ಎಂದ ತಡವರಿಸಿ.

    ನಂತರ ಗಂಟಲೊಣಗಿದಂತಾಗಿ ಸ್ವಲ್ಪ ನೀರು ಕೊಡ್ತೀರಾ? ಎಂದ.

    ಯಾಕೆ? ನಿಮ್ಮ ಬೋರ್‍ವೆಲ್‍ನಲ್ಲಿ ನೀರು ಮುಗಿದುಹೋಯ್ತಾ?

    ಎದ್ದು ನಿಂತು ಕೇಳಿ ಒಳನಡೆದಳು. ಅವಳ ಜಡೆ ಅಲುಗಾಡುವುದನ್ನೇ ನೋಡುತ್ತಿದ್ದ ಸೀತಾಪತಿ.

    ತಗೊಳ್ಳಿ, ನೀರು ಕೊಡದಿದ್ರೆ ಹಲ್ಲಿ ಜನ್ಮ ಬರುತ್ತದಂತೆ ಎಂದಳು ಅವನ ಕೈಗೆ ಗಾಜಿನ ಲೋಟ ನೀಡಿ.

    ಅವಳ ಬೆರಳು ಮುಟ್ಟುವ ಪ್ರಯತ್ನ ಮಾಡಿದ ಸೀತಾಪತಿ. ಸರಕ್ಕನೆ ಕೈ ಹಿಂದಕ್ಕೆ ಎಳೆದುಕೊಂಡಳು. ನೀರು ಕುಡಿದ ನಂತರ ಹಣ್ಣು ಎಂದ.

    ನಾನು, ಬೇಬಿ, ಅಣ್ಣ ಯಾರೋ ತಿನ್ನೋಲ್ಲ. ಅದು ಹುಳಿ ಇರುತ್ತದೆ. ಇಲ್ದಿದ್ರೆ ಒಗಚಾಗಿರುತ್ತೆ ಮುಖ ಕಿವಿಚಿದಳು ಸರಸು.

    ಸೀತಾಪತಿ ನಿರಾಶೆ ಹೊಂದಿದ.

    ಸರಸಮ್ನೋರೇ ನಾನು ಓಯ್ತೀನಿ ಎಂಬ ಸ್ವರ ಕೇಳಿಸಿದಾಗ ‘ಓ! ಕೆಲಸದ ದುರ್ಗಾ ಇದ್ದಾಳೆ. ಈಗ ಅವಳೂ ಜಾಗ ಖಾಲಿ ಮಾಡ್ತಾಳೆ’ ಎಂದುಕೊಂಡ ಸೀತಾಪತಿ.

    ಇರು ದುರ್ಗಾ ಸ್ವಲ್ಪ ಸಾರು ಕೊಡ್ತೀನಿ. ನೆನ್ನೆ ನೆಂಟರು ಬಂದಿದ್ದರಿಂದ ಊಟ ಎಲ್ಲಾ ಖರ್ಚಾಗಿಹೋಯ್ದು ಎನ್ನುತ್ತಾ ಅವಳಿಗೆ ಸಾರು ಕೊಡಲು ಸರಸು ಒಳನಡೆದಳು. ಹೋಗುವ ಮೊದಲು ‘ಈ ಪ್ರಾಣಿ ಯಾವಾಗ ತೊಲಗುತ್ತದೆ?’ ಎಂಬ ನೋಟವನ್ನು ಸೀತಾಪತಿಯತ್ತ ಎಸೆದಿದ್ದು ಅವನಿಗೆ ಅರ್ಥವಾಗದೇ ಇರಲಿಲ್ಲ.  ಆದರೆ ಅವನು ಭಂಡ. ತಾನು ಬಂದ ವಿಷಯದ ಬುಡ ಶೋಧಿಸದೇ ಬಿಡುವುದಿಲ್ಲ.

    ರಾತ್ರಿ ನೆಂಟರು ಬಂದಿದ್ರಾ? ಯಾರು? ತಾನು

    Enjoying the preview?
    Page 1 of 1