Discover millions of ebooks, audiobooks, and so much more with a free trial

Only $11.99/month after trial. Cancel anytime.

Aaradirali Belaku
Aaradirali Belaku
Aaradirali Belaku
Ebook343 pages3 hours

Aaradirali Belaku

Rating: 0 out of 5 stars

()

Read preview

About this ebook

Geetha B.U. is one of the famous authors in Kannada. She has also written in serials. She currently lives in Bangalore.
LanguageKannada
Release dateAug 12, 2019
ISBN6580202700384
Aaradirali Belaku

Read more from Geetha B.U.

Related to Aaradirali Belaku

Related ebooks

Reviews for Aaradirali Belaku

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Aaradirali Belaku - Geetha B.U.

    http://www.pustaka.co.in

    ಆರದಿರಲಿ ಬೆಳಕು

    Aaradirali Belaku

    Author :

    ಗೀತಾ ಬಿ.ಯು.

    Geetha.B.U

    For more books
    http://www.pustaka.co.in/home/author/geetha-bu

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಆರದಿರಲಿ ಬೆಳಕು

    ಕಳೆದ ತಿಂಗಳಿಂದ ನಿಮ್ಮನ್ನು ನಿರೀಕ್ಷಿಸುತ್ತಾ ಇದ್ದೇನೆ... ಅಕ್ಷೇಪೆಸಿದ ದನಿಯಲ್ಲಿ ಅಂದರು ತೆಜಸ್ವಿನಿಯ ಕ್ಲಾಸ್ ಟೀಚರ್.

    ಐ ಆಮ್ ಸೋ ಸಾರಿ. ಆದರೆ ನಾನು ತುಂಬಾ ಬಿಜಿಯಾಗಿದ್ದೆ... ಗಡಿಯಾರದತ್ತ ನೋಡಿಕೊಂಡು ತಲೆಯಾಡಿಸಿದಳು ಸೀಮಾ.

    ಹೌದು ಮೇಡಂ. ಐ ಅಂಡರ್ ಸ್ಟಂಡ್. ಎಲ್ರೂ ಬಿಜಿನೇ. ಆದರೆ ತೇಜಸ್ವಿನಿ ನಿಮ್ಮ ಮಗಳು. ಅವಳ ವಿಚಾರವಾಗಿ ಮಾತಡಲು, ಅವಳ ಕ್ಲಾಸ್ ಟೀಚರ್ ಆದ ನನ್ನೊಡನೆ ಮಾತಾಡುವುದು, ಅದೂ ನಾನು ಹೇಳಿ ಕಳಿಸುತ್ತಿದ್ದೇನೆ. ಡೈರೀಲಿ ಬರೆದು ಕಳಿಸಿದ್ಧೇನೆ... ನಿಷ್ಠುರವಾಗಿ ಮಾತನಾಡಿದರು ಆರನೇ ತರಗತಿ ಓದುತ್ತಿರುವ ತೇಜಸ್ವಿನಿಯ ಕ್ಲಾಸ್ ಟೀಚರ್ ಮೀರಾ.

    ಅವಳ ನಿಷ್ಠುರವಾದ ಮಾತು ಕೇಳಿ ಸೀಮಾಳ ಮುಖ ಕೆಂಪೇರಿತು. ಅಬ್ಬಾ ಈ ಮಕ್ಕಳಿಂದ ಎಷ್ಟು ಮಾತು. ಎಂಥೆಂಥವರಿಂದ ಕೇಳಬೇಕು! ಹಲ್ಲು ಮುಡಿ ಕಚ್ಚಿ ಕೋಪ ತಡೆದುಕೊಡು ಅರೆನಗೆ ಬೀರಿದಳು.

    ಹೌದು, ಹೌದು, ಐ ಗಾಟ್ ದಿ ಮೆಸೇಜ್. ಆದ್ರೆ ನೋಡಿ, ನಾನು ವರ್ಕಿಂಗ್ ವುಮೆನ್. ಡೇ ಟೈಂನಲ್ಲಿ ಬಂದು ನಿಮ್ಮನ್ನ ನೋಡಬೇಕು ಅಂದ್ರೆ ತುಂಬಾ ಕಷ್ಟ. ಇವತ್ತು ನನ್ನ ಕಂಪ್ಯೂಟರ್ ಲಾಕ್ ಮಾಡಿ ಬಂದಿದ್ದೇನೆ... ನಾನು ಇಂದು ಬರದಿದ್ದರೆ ನಾಳೆಯಿಂದ ಸ್ಕೂಲಿಗೆ ಸೇರಿಸೋಲ್ಲ ಅಂತ ನೀವು ಹೇಳಿದಿರೆಂದು ನಮ್ಮ ತೇಜೂ ತಿಳಿಸಿದಳು. ಅಂಥಾ ಸೀರಿಯಸ್ ಏನು? ಅದೂ ನಮ್ಮ ತೇಜೂ, ಈ ಈಸ್ ಸಚ್ ಎ ಕ್ವೈಟ್ ಚೈಲ್ಡ್... ಹುಬ್ಬುಗಂಟಿಕ್ಕಿದಳು ಸೀಮಾ.

    ಅದೇ ಪ್ರಾಬ್ಲಮ್... ಅವಳು ತುಂಬಾ ಕ್ವೈಟ್! ಜೊತೆಗೆ ದಿನ ದಿನಕ್ಕೆ ಒಂದು ಚಿಪ್ಪಿನೊಳಗೆ ಹುದುಗಿಕೊಳ್ಳುತ್ತಿದ್ದಾಳೆ. ಯಾರೂ ಫ್ರೆಂಡ್ಸ ಇಲ್ಲ. ಯಾರೊಂದಿಗೂ ಆಟ ಅಡೊಲ್ಲ . ಮಾತು ಆಡೋಲ್ಲ. ಸ್ಟಡೀಸ್ನಲ್ಲಿ ಅ್ಯವರೇಜ್ ಇದ್ಧಳು. ಸುಮ್ಮನಿದ್ದೆ. ಆದ್ರೆ ಈ ನಡುವೆ ಹಿಂವರ್ಕ್ ಮಾಡಿರೋಲ್ಲ... ಕೇಳಿದ ಪ್ರಶ್ನೆಗೆ ಉತ್ತರಿಸೀಲ್ಲ. ಅಟೆಂಟಿವ್ ಆಗಿ ಇರೋಲ್ಲ. ಕ್ಲಾಸಿನಲ್ಲಿ ಯಾವಾಗಲೀ ಏನೋ ಯೋಚನೆ ಮಾಡ್ತಿರ್ತಾಳೆ... ಕಳೆದ ತಿಂಗಳು ಟೆಸ್ಟಿನಲ್ಲಿಯಂತೂ ತೀರಾ ಕಮ್ಮಿ ಮಾಕ್ರ್ಸ್ ತೆಗೆದುಕೊಂಡಿದ್ದಾಳೆ... ನೋಡಲಿಲ್ಲಲವೇ ನೀವು? ಪಟಪಟನೆ ಟೀಚರ್ ಆಡಿದ ಮಾತುಗಳು ಸೀಮಾಳ ತಲೆ ಸಿಡಿಯುವಂತೆ ಮಾಡಿದವು.

    ಅಜ್ಜಿ ಮಾಡಿದರು ಎಂದು ಹೇಳಿದಳು ಉತ್ತರ ಗೊತ್ತಿದ್ದರೂ ಪ್ರಶ್ನೆ ಕೇಳಿದ ಟೀಚರ್‍ನೆ ದಿಟ್ಟಿಸಿದಳು ಸೀಮಾ. ‘ಇವರ ಯೋಗ್ಯತೆಯೇನು? ತನಗಿಂಥ ಹತ್ತು ಹದಿನೈದು ವರ್ಷಕ್ಕೆ ಕಿರಿಯಳಿರಬೇಕು. ನಾನು ¸ಂಪಾದಿಸುವ ಹಣದಲ್ಲಿ ಹತ್ತನೇ ಒಂದು ಭಾಗ ಕೂಡ ಸಂಪಾದಿಸಲಾಗದವಳು... ರೋಷ ಉಕ್ಕಿತು ಸೀಮಾಳಿಗೆ.

    ಐ ಥಿಂಕ್ ತೇಜಸ್ಚಿನಿ ಈಸ್ ನೆಗ್ಲೆಕ್ಟೆಡ್! ಅವಳ 4ನೇ ಹಾಗೂ 5ನೇ ತರಗತಿ ಟೀಚರ್‍ಗಳ ಜೊತೆ ಕೂಡ ಮಾತಾಡಿದೆ. ಮೊದಲೇ ವಯಸ್ಸಿಗೆ ಮೀರಿದ ಗಂಭೀರ ಸ್ವಾಭಾವದ ಹುಡುಗಿ... ಈಗಂತೂ ನೀವು ಮನೇಲಿ ನೋಟೀಸ್ ಮಾಡಿರಬೇಕು..." ದೀಮಾಳ ಮನಸ್ಸಿನ ವಿಚಾರವನ್ನು, ಕೋಪವನ್ನು ಅರಿಯದ ಟೀಚರ್ ಮಾತಾಡುತ್ತಲೇ ಇದ್ದಳುಇ.

    ಥ್ಯಂಕ್ ಯೂ ಮೇಡಂ. ಏನುಮಾಡಬೇಕು ಅಂತ ಯೋಚನೆ. ಮಾಡ್ತೀನಿ. ಅವಳಿಗೆ ನಿಮ್ಮ ಸ್ಕೂಲು ಯಾಕೋ ಸರಿಹೋಗ್ತಿಲ್ಲ ಅನ್ನಿಸುತ್ತೆ. ಯಾವುದಾದರೂ ಬೋರ್ಡಿಂಗ್ ಸ್ಕೂಲಿಗೆ ಕಳಿಸುವ ಯೋಚನೆ ಇತ್ತು . ಏನೋ ಮನೆಯ ವಾತಾವರಣದಲ್ಲಿ ಬೆಳೆಯಲಿ ಅಂದುಕೊಂಡೆ. ಈಗ ಬೋರ್ಡಿಂಗ್ ಸ್ಕೂಲಿಗೆ ಕಳಿಸುವ ಬಗ್ಗೆ ಸೀರಿಯಸ್ ಆಗಿ ಯೋಚನೆಮಾಡ್ತೀನಿ.

    ಸೀಮಾಳಿಂದ ಈ ಪ್ರತಿಕ್ರಿಯೆ ನಿರೀಕ್ಷಿಸದಿದ್ದ ಮೇಡಂ ಆಚ್ಚರಿಯಿಂದ ಕಣ್ಣರಳಿಸದಳು.

    ಪ್ಲೀಸ್ ಮಿಸೆಸ್ ಅಜಯ್! ಬೋರ್ಡಿಂಗ್ ಸ್ಕೂಲಿಗೆ ಮಾಥ್ರ ಕಳಿಸಬೇಡಿ. ಮೆನಯ ವಾತಾವರಣ ಈ ವಯಸ್ಸಿನಲ್ಲಿ ಮಕ್ಕಳಿಗೆ ಅತ್ಯವಶ್ಯಕ. ನೀವೂ ನಿಮ್ಮ ಹಸ್ಪೆಂಡ್ ಸ್ವಲ್ಪ ಹೆಚ್ಚು ಹೊತ್ತು ಅವಳೊಂದಿಗೆ ಕಳೆದರೆ...

    ಸಾರಿ... ನೀವು ನಿಮ್ಮ ಹದ್ದುಮೀರಿಮಾತಾಡ್ತಾ ಇದ್ದೀರಿ. ನನ್ನನ್ನು ಅವಮಾನಿಸಲು ಕರೆಸಿದೀರಾಹೀಗೆ? ನಾನು... ನಾನುಇಬ್ಬರು ಮಕ್ಕಳ ತಾಯಿ ನಿಮ್ಮನ್ನು ನೋಡಿದರೆ ಇನ್ನೂ ಮದುವೆಯೂ ಆದ ಹಾಗೆ ಇಲ್ಲ. ನೀವು ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ನನಗೆ ಹೇಳಿಕೊಡ್ತೀರಾ? ವ್ಯಂಗ್ಯವಾಗಿ ರೇಗಿದಳು.

    ಟೀಚರ್ ಮುಖ ಕೆಂಪೇರಿತು. ಪ್ರತಿಕ್ರಿಯಿಸಲು ಉತ್ತರ ಹೊಳೆಯದೆ ತಬ್ಬಿಬ್ಬಾದಳು.

    ಗೆಲುವಿನ ನಗೆ ನಕ್ಕಳು ಸೀಮಾ.

    ನಂಘೆ ಬಹಳ ಲೇಟಾಗುತ್ತಿದೆ. ಎನೀವೇ ಥ್ಯಾಂಕ್ಯೂ... ನಾನು ತೇಜಸ್ವಿನೀನ ವಿಚಾರಿಸ್ತೀನಿ...

    ಟೀಚರಳ ಪ್ರತಿಕ್ರಿಯೆಗೂ ಕಾಯದೆ ಗಾಗಲ್ಸ್ ಏರಿಸಿ, ಬೆನ್ನು ತಿರುಗಿಸಿ ಬಿರುಸು ನಡಿಗೆಯಿಂದ ಅಲ್ಲಿಂದ ನಿರ್ಗಮಿಸಿದಳು ಸೀಮಾ.

    ತನ್ನ ಮಾರುತಿ ಕಾರ್ ಹತ್ತಿ ದೊಪ್ಪನೆ ಬಾಗಿಲುಹಾಕಿ ಸ್ಟಾರ್ಟ್ ಮಾಡಿದಳು. ಸಂಜೆಗೆ ರಮಾಕಾಂತ್ ಅಂಡ್ ಸನ್ಸ್ ಅವರಿಗೆ ಕೊಟ್ಟಿರುವ ಅಪಾಯಿಟ್ ಮೆಂಟನ್ನು ಕ್ಯಾನ್ಸಲ್ ಮಾಡಬೇಕು. ಮನೇಲಿದ್ದು ತೇಜಸ್ವಿನೀನ ವಿಚಾರಿಸಬೇಕು... ಈ ಗಾಡ್!" ಆಪೀಸಿಗೆ ಹೋಗುವ ಮನಸ್ಸಾಗಲಿಲ್ಲ. ಮನೆಯತ್ತ ಕಾರು ಓಡಿಸಿದಳು.

    ಅನಿರುದ್ಧ ಜಾಣ. ಅವನದು ಮೊದಲಿಂದಲೂ ಏನೂ ಪ್ರಾಬ್ಲಂ ಇಲ್ಲ... ಬಹಳ ಜಾಣ ಹುಡುಗ. ಇನ್ನೂ ನಾಲ್ಕನೇ ಕ್ಲಾಸಿನಲ್ಲಿದ್ದರೂ ಎಷ್ಟೊಂದು ಚೂಟಿ. ಎಷ್ಟು ನಿರರ್ಗಳವಾಗಿ ಮಾತಾಡ್ತಾನೆ. ನನ್ನಿಂದ ಬಂದಿರಬೇಕು ಆ ಗುಣ, ಫಿಲ್ಮ್ ಸಾಂಗÉ್ಸ್ನಲ್ಲಾ ಎಷ್ಟು ಚೆನ್ನಾಗಿ ಹಾಡ್ತಾನೆ... ತಬಲಾಗೆ ಬೇರೆ ಎಷ್ಟು ಆಸಕ್ತಿಯಿಂದ ಹೋಗ್ತಾನೆ..."

    "ಸ್ವಿಮಿಂಗ್‍ಗೆ ಕೂಡ ತಾಪತ್ರಯ ಮಾಡದೆ ಹೋದ. ಅದೇ ಇವಳು ಪೂಲ್‍ನಲ್ಲಿ ಇಳಿಯಲೂ ನಿರಾಕರಿಸುತ್ತಾಳೆ. ಬಲವಂತವಾಗಿ ದಬ್ಬಿದರೆ.... ಕೈಕಾಲಾಡಿಸಿ ದಡ ಮುಟ್ಟುತ್ತಾಳೆ ಅಷ್ಟೇ. ಮೂರು ವಾರಕ್ಕೆ ಮೂರು ಮೂರು ಸಾವಿರ ಎನಿಸಿದ್ದಾಯಿತು. ಇವಳು ಮುರಡಿ ಕೂಡ ಮುಂದೆ ಸ್ವಿಮ್ ಮಾಡಲಿಲ್ಲ. ದುಡ್ಡು ದಂಡ. ಈ ಮಕ್ಕಳಿಗಾಗಿ ನಾನು ಮಾಡಿದರು ವ ಸ್ಯಾಕ್ರಿಫೈನ್ ಎಷ್ಟು ಎಂದು ಇವಕ್ಕೇನಾದರೂ ಗೊತ್ತಿದೆಯಾ?

    ‘ಅಜಯ್... ಅಜಯ್... ಹಾಯಾಗಿ ಜೆಡಾನಲ್ಲಿ ಕುಳಿತಿದ್ದಾನೆ. ಇಲ್ಲಿ ನಾನು ಮನೇಲೂ ಮಾಡಿ ಮಕ್ಕಳ ಮೇಲೆ ನಿಗಾ ಇಟ್ಟು, ಮನೆ, ಇಷ್ಟು ದೊಡ್ಡ ಮನೆ ಮ್ಯಾನೇಕ್ ಮಾಡಿ... ಅಬ್ಬ! ಅಮ್ಮ ಇರೋದರಿಂದ ಪರವಾಗಿಲ್ಲ... ಕಲಸ ಎಷ್ಟೋ ಹಗುರ. ಅದಕ್ಕಾಗಿ ಕೆಲಸಕ್ಕೆ ಬೇರೆ ಹೋಗಿ... ಈ ಜನರ ಮಾತುಗಳನ್ನು ಕೇಳಿಕೊಂಡು ಅಬ್ಬಾ! ಇ ಜನರಿಗೆ ಬುದ್ದಿ ಇಲ್ಲ. ಇನ್ನೊಬ್ಬರ ಪ್ರೈವೆಸಿಯನ್ನು ಗೌರವಿಸಿಲ್ಲ. ಎಲ್ಲರೂ ಅವರವರ ಮೂಗಿನ ತುದಿಗೆ ನಕ್ಕ ಹಾಗೆ ಮಾತು.

    ‘ನೀವ್ಯಾಕೆ... ಇಲ್ಲಿದ್ದೀರಿ?.. ನಿಮ್ಮ ಹಸ್ಪೆಂಡ್ ಯಾವಾಗ ಬರ್ತಾರೆ...? ಅಥವಾ ನೀವೇ ಹೋಗ್ತೀರಾ?...... ಯಾವಾಗ ಹೋಗ್ತೀರಾ?’

    ‘ಅವರಿಗೆ ಉತ್ತರಿಸೋದು ಹೇಗೆ... ಹಾಗೆ ನೋಡಿದರೆ ಅವರಿಗೆಲ್ಲಾ ಅವರ ಪ್ರಶ್ನೆಗೆ ಉತ್ತರ ಬೇಕಿಲ್ಲ... ಸುಮ್ಮನೆ ಆಡ್ಕೋಳೋಣ... ಆಂತ ಅಷ್ಟೇ...

    ‘ಈ ಮಕ್ಕಳಿಗಾಗಿಯೇ ಅಲ್ಲವೇ... ನಾಲ್ಕು ವರ್ಷದಿಂದ ಹೀಗಿರುವುದು. ಸಂಸಾರ ಸುಖವನ್ನು ಬಿಟ್ಟು ಅಲ್ಲಿ ಸಹಾಯದಲ್ಲಿ ಮಕ್ಕಳಿಗೆ ಸರಿಯಾದ ಶಾಲೆಯಿಲ್ಲ... ಸರಿಯಾಗಿ ಶಾಲೆಗಳಿಲ್ಲದೆ ಉಸಿರುಗಟ್ಟಿಸುವ ವಾತಾವರಣದಲ್ಲಿ ನನ್ನ ಮಕ್ಕಳು ಬೆಳೆಯುವುದು ಬೇಡ. ನಮ್ಮ ಸಂಸ್ಕøತಿ, ಸಂಸ್ಕಾರ, ರೀತಿ, ನೀತಿ ತಿಳಿಯಲಿ ಒಳ್ಳೆಯ ಶಾಲೆಯಲ್ಲೊ ಓಸಿ ಮುಂದೆ ಬರಲಿ ಎಂದು ಅವರಿಬ್ಬರನ್ನೂ ಕರೆದುಕೊಂಡು ಬಂದು ಆ ಪಾಟಿ ದುಡ್ಡು ಸುರಿದು ದೊಡ್ಡ ಜನಪ್ರಿಯ ಶಾಲೆಗೆ ಸೇರಿಸಿ, ಇಲ್ಲೇ ಸೆಟಲ್ ಅಗಿರೋದು. ಅಜ್ಯ್ ಧಾರಾಳವಾಗಿ ದುಡ್ಡು ಕಲಿಸಿದರೂ ಟೈಮ್ ವೇಸ್ಟ್ ಮಾಡಬಾರದು. ಓದಿದರುವ ವಿದ್ಯೆ ಉಪಯೋಗಿಸಿಕೊಳ್ಳಬೇಕು ಎಂದು ಕೆಲಸಕ್ಕೆ ಸೇರಿರುವುದು. ಈ ದೊಡ್ಡ ಮನೆಯಲ್ಲಿ ಅಜತಯ್‍ನಿಲ್ಲದೆ ಒಂಟಿಯೆನ್ನಿಸಿದರೂ ಮಕ್ಕಳಿಗಾಗಿ. ಅವರ ಭವಿಷ್ಯತ್ತಿಗಾಗಿ ಇಷ್ಟು ಸ್ಯಾಕ್ರಿಫೈಸ್ ಮಾಡ್ತಾ ಇರೋದು.

    ‘ನನ್ನ ಸಂಸಾರ ಸುಖವನ್ನು ಬಲಿಕೊಟ್ಟು ಇಷ್ಟೇಲ್ಲಾ ಮಾಡುತ್ತಿದ್ದರೂ ಒಂದು ಚೂರು ಗ್ರ್ಯಾಟಿಟ್ಯುಡ್ ಇಲ್ಲ. ಅವರವರದೇ ರೂಮು. ವಾರ್ಡ್‍ರೋಬ್. ಟೇಬಲ್. ಚೇರ್, ಲೆಕ್ಕವಿಲ್ಲದಷ್ಟು ಆಟದ ಸಾಮಾನು. ಬಟ್ಟೆ ಬರೆಗಳು... ಈ ಅನುಕೂಲ ಯಾವ ಮಕ್ಕಳಿಗಿರುತ್ತೆ!

    ‘ಇಷ್ಟು ಮಾಡಿ ಈ ಮೂರು ಕಾಸಿಗೆ ಬೆಲೆಯಿರದ ಆ ಚಿಕ್ಕ ಹುಡಗಿ ಟೀಚರ್ ಕೈಲು ಅನಿಸಿಕೊಳ್ಳಬೇಕಾಯಿತು!’

    ಅವುಡುಗಚ್ಚಿದಳು ಸೀಮಾ, ಮನಸ್ಸು ಮಾರಿಯಂತೆ ಅಲಿಯುತ್ತಿದ್ದರೂ ಕಾರು ನೆಟ್ಟಗೆ ಮನೆ ಸೇರಿತು.

    ನಾಲ್ಕು ಬಾರಿ ಬೆಲ್ ಮಾಡಿದ ಮೇಲೆ ಬಾಗಿಲು ತೆರೆದ ಕೆಲಸದ ಮಾದೇವಿಯತ್ತ ದುರುಗುಟ್ಟಿನೋಡಿದಳು. ಆ ನೋಡಕ್ಕೆ ನಡುಗಿದಳು ಮಾದೇವಿ.

    ತಪ್ಪಾಯ್ತಮ್ಮ, ಕೆಲಸ ಎಲ್ಲಾ ಆಗಿತ್ತು. ನೀವು ಬರೋ ಟೈಮೂ ಆಗಿರಲಿಲ್ಲ. ನಮ್ಮ ಯಜಮಾನರು ತಲೆನೋವು ಅಂತ ಬಂದು ಮಲಗಿದ್ದಾರೆ. ಅಮೃತಾಂಜನ ಹಚ್ಚುತ್ತಿದ್ದೆ... ಕೆದರಿದ ಕೂಲು, ಹರಡಿದ್ದ ಕುಂಕುಮ, ಮಂಪರು ತುಂಬಿದ ಕಂಗಳು. ಕೆಂಪು ತುಟಿಗಳು ಬೇರೆಯೇ ಕಥೆ ಹೇಳಿದವು. ಮುಖ ಸಿಂಡರಿಸಿದಳು ಸೀಮಾ.

    ನನಗೆ ಹಿಂದೆಯೇ ಇರಲಿಕ್ಕೆ ಮನೆ ಕೊಟ್ಟಿದ್ದೇನೆ ನೋಡು, ನಂದೇ ತಪ್ಪು ಇಲ್ಲಿ ಗಲೀಜಾಗಿ ಕೆಲಸ ಮಾಡಿ ಮನೆಗೆ ಓಡಿ ಹೋಗ್ಥೀಯ. ನಿನ್ನ ಗಂಡಂಗೆ ಮದ್ಯಾಹ್ನ ಮನೆಗೆ ಬಂದು ಮಲಗುವಷ್ಟು ಸಲೀಸು ಕೆಲಸವೇ.? ಸೀಮಾಳ ಮಾತು ಯಾವಾಗಲು ಛಾಟೀ ಏಟು.

    ತಲೆನೋವು ಅಂತ...

    ಕಳ್ಳನಿಗೊಂದು ಪಿಳ್ಳೆ ನೆವ... ಹೋಗು ಸ್ಟ್ರಾಂಗಾಗಿ ಬಿಸಿಯಾಗಿ ಕಾಫಿ ಮಾಡಿಕೊಂಡು ಬಾ... ಅಮ್ಮ, ಅಪ್ಪ ಎಲ್ಲಿ...?

    ರೂಮಾಗೆ ಮಲ್ಕೊಂಡಿದ್ಧಾರೆ, ಬಾಗಿಲು ಹಾಕಿದ ತಾಯಿನ ರೂಮಿನತ್ತ ಕೈ ತೋರಿಸಿ, ತಲೆಗೂದಲು ಸರಿ ಮಾಡಿಕೊಳ್ಳುತ್ತ ಅಡಿಗೆ ಮನೆಯತ್ತ ನಡೆದಳು ಮಾದೇವಿ.

    ‘ಈ ಮಾದೇವಿ ಕೆಲಸಕ್ಕೆ ಸಿಕ್ಕಿರುವುದು ಎಷ್ಟು ಹಾಯಿ! ಎಲ್ಲಾದಿಕ್ಕೂ ಈ ಅಮ್ಮನ್ನ ನೆಚ್ಚುಕೊಂಡಿದ್ದರೆ ಆಗುತ್ತಾ ಇತ್ತಾ! ಬಂದ ಮೊದಲ ವರ್ಷ ಎಷ್ಟು ಕಷ್ಟವಾಗಿತ್ತು. ಇವಳು ಸಿಕ್ಕ ಮೇಲೆ ವಾಸಿ. ನಮ್ಮ ಜನದ್ದೇ ಹುಡುಗಿ... ಗಂಡ- ಹೆಂಡತಿ ಇಬ್ಬರೇ. ಎಲ್ಲ ಕೆಲಸ ಮಾಡಿಕೊಂಡು ಹೋಗ್ತಳೆ. ಬಿಟ್ಟು ಹೋದರೆ ಕಷ್ಟ ಬೈಯುವುದು ಕಮ್ಮಿ ಮಾಡಬೇಕು’ ಮನಸ್ಸಿನಲ್ಲೇ ಮನನ ಮಾಡಿಕೊಂಡಳು.

    ಪರ್ಸ್, ಗಾಗಲ್ಸ್ ಕೀಸೆಲ್ಲಾ ಟೀಪಾಯ್ ಮೇಲೆ ಎಸೆದು, ಸೋಫಾದ ಮೇಲೆ ಕಾಲು ಮೇಲಕ್ಕೆತ್ತಿ ಮಡಚಿಕೊಂಡು ಕುಳಿತಳು ಸೀಮಾ.

    ತಾವು ಸಂಸಾರ ನಡೆದುತ್ತಿದ್ಧಾಗ ಕೆಲಸದವಳನ್ನು ಕಳಿಸಿಯಾದ ಮೇಲೇ ಬಾಗಿಲು ಹಾಕಿಕೊಂಡು ನಿದ್ರಿಸುತ್ತಿದ್ದ ತಾಯಿ, ಈಗ ಮಗಳ ಮನೆಯಲ್ಲಿ... ಎಲ್ಲಾ ಕೆಲಸದವಳ ಮೆಳೆ ಬಟ್ಟು ರೂಮಿನ ಕದವಿಕ್ಕಿಕೊಂಡು ತಂದೆಯೊಂದಿಗೆ ಮಲಗಿರುವರಲ್ಲ!

    ‘ಛೇ! ಕಾಮಾಲೆ ಕಣ್ಣಿನವರಿಗೆ ಲೊಕವೆಲ್ಲಾ ಹಳದಿ ಎನ್ನುವ ಹಾಗೆ ಅಮ್ಮ ಸಂಸಾರ ನಡೆಸುತ್ತಿದ್ಧಾಗ, ಕೆಲಸದವಳು ಅಂದರೆ... ಗುಡಿಸಿ, ಸಾರಿಸಿ, ಪತ್ರ ತೊಳೆದು, ಬಟ್ಟೆ ಒಗೆದು ಒಂದು ಗಂಟೆಂiÀiಲ್ಲಿ ಎಲ್ಲಾ ಕೆಲಸ ಮುಗಿಸು ಓಡಿಹೋಗುತ್ತಿದ್ದಳು. ಈಗ... ಮಾದೇವಿ ಮನೆಯಲ್ಲೇ ಇದ್ದರೆ, ಮೂರು ಹೊತ್ತು... ಅಮ್ಮ ತಾನೇ ಏನು ಮಾಡಿಯಾರು? ಮುಖ್ಯ ನನ್ನ ಮನಸ್ಸು ಸರೀಗಿಲ್ಲ ಇಂದು ಎಂದು ತನ್ನನ್ನೇ ದಂಡಿಸಿಕೊಂಡಳು.

    ‘ಅಜಯ್... ಅಜಯ್ಗೆ ಫೋನ್ ಮಾಡಿಬೇಕು. ಅವರು ಅಲ್ಲಿ ಹಾಯಾಗಿ ಇದ್ಧಾರೆ. ತಿಂಗಳು ತಿಂಗಳು ದುಡ್ಡು ಕಳಿಸಿಬಿಟ್ರೆ ಆಯಿತು. ಸುಖಪುರುಷರು! ಹೌದು, ಹೀಗೆ ಇರುವ ಐಡಿಯಾ ಯಾರದು?’ ಆಂತರಾತ್ಮ ಕೆಣಕಿತು.

    ‘ನಂದೇ’ ಒಪ್ಪಿಕೊಂಡಳು ಸೀಮಾ. ‘ಅಜಯ್ಗೆ ಬಿಟ್ಟರೆ ನನ್ನ ಮಕ್ಕಳನ್ನ ಅಲ್ಲಿಗೆ ಕರೆದುಕೊಂಡು ಹೋಗಿಬಿಡ್ತಾರೆ. ಕೆಲವು ಇಂಡಿಯನ್ ಫ್ಯಾಮಿಲೀಸ್ ಮಕ್ಕಳನ್ನು ಅಲ್ಲೇ ಓದಿಸುತ್ತಿಲ್ಲವೇ ಹಾಗೇ ನಮ್ಮ ಮಕ್ಕಳು ಅಲ್ಲೇ ಓದಲಿ ಬಾ ಅಂತ. ತೇಜೂ ಸ್ವಲ್ಪ ಕಾಲ ಅಲ್ಲಿ ಸ್ಕೂಲಿಗೆ ಹೋಗಿಯೂ ಇದ್ದಳಲ್ಲ! ಅಂತ ಅಥವಾ ಸಾವಿರಾರು ಡಾಲರ್ ಬರುವ ಉದ್ಯೋಗವನ್ನು ಬಿಟ್ಟು ಇಲ್ಲಿಗೆ ಹಾರಿ ಬಂದ್ಬಿಡ್ತಾರೆ ನಮ್ಮೆಲ್ಲರ ಜೊತೆ ಇರಬೇಕು ಆಂತ. ಒಂದು ಚೂರೂ ವ್ಯಾವಹಾರಿಕ ಜ್ಞಾನ ಇಲ್ಲ. ನನಗಿರುವ ಬುದ್ದಿಯನ್ನೆಲ್ಲಾ ಖರ್ಚು ಮಾಡಬೇಕಾಯಿತು. ಈ ಏರ್ಪಾಟಿಗೆ ಅವರನ್ನು ಒಪ್ಪಿಸಲು.

    ‘ಈಗ ಸ್ವಲ್ಪ ಸ್ಯಾಕ್ರಿಫೈಸ್ ಮಾಡಿದರೆ ನಾಳೆ ಚೆನ್ನಾಗಿ ಇರಬಹುದಲ್ಲವೇ’ ಯಾವಾಗಲು ಹೀಗೆ ಎಂದೇನಲ್ಲವಲ್ಲ... ಇನ್ನೊಂದೆರಡು ಮೂರು ವರ್ಷ. ಅಂದರೆ ಒಟ್ಟು ಆರೇಳು ವರ್ಷ... ಅಷ್ಟೇ! ಮುರು ವರ್ಷ ಕಳೆಯುತ್ತಿದ್ದ ಹಾಗೆ ಅವರು ಇಲ್ಲಿಗೇ ಬಂದು ಹಾಯಾಗಿ ಇರಬಹುದು.

    ಅಮ್ಮಾ ಕಾಫಿ ಮಾದೇವಿಯ ದನಿ ಕೇಳಿ ಈ ಲೋಕಕ್ಕೆ ಬಂದಳು ಸೀಮಾ.

    ಕೊಡಿಲ್ಲಿ ಕಾಫಿ ಈಸುಕೊಂಡು ಗುಟುಕರಿಸಿದಳು. ಆ ಕಾರ್ಡ್‍ಲೆಸ್ ಫೋನ್ ತಂದುಕೊಡು

    ಮಾದೇವಿ ಆ ಫೋನ್ ತರುವ ವೇಳೆ ಅದು ರಿಂಗಾಗಲು ತೊಡಗಿತು. ಬಟನ್ ಒತ್ತಿ ಪೋನನ್ನು ಕಿವಿಗೆ ಹಚ್ಚಿದಳು ಮಾದೇವಿ.

    ಹಲೋ...

    ಅಮ್ಮಾ... ಸಹಾಯದಿಂದ, ಯಜಮಾನರಿರಬೇಕು...

    ‘ಹಲೋ..." ಪೋನನ್ನು ಕವಿಗೆ ಹಚ್ಚಿದಳು ಸೀಮಾ. ‘ನಾನು ಅಂದುಕೊಂಡೆ. ಅವರೇ ಮಾಡಿಬಿಟ್ಟರು’ ತುಟಿಗಳಲ್ಲಿ ಮಂದಹಾಸ ಮಿನಿಗಿತು.

    ‘ಅಜಯ್ ಯಾರಾದರೊಡನೆ ನಾನು ಅವರನ್ನು ಯಜಮಾನರು ಅಂದರೆ ಹಾಸ್ಯ ಮಾಡುತ್ತಾರೆ... ಎಲ್ಲಾ ಹೇಳೋದು ನೀನು. ಸೇವಕನಂತೆ. ನೀನು ಹೆಳಿದ್ದಕ್ಕೆಲ್ಲಾ ಜೀ ಹುಜೂರ್ ಅನ್ನುವವನು ನಾನು. ನಾನ್ಹೇಗೆ ನಿನ್ನ ಯಜಮಾನ... ಎಂದು!’ ಗಡಿಯಾರದತ್ತ ನೋಡಿದಳು. ಮಾಮುಲಾಗಿ ಇಷ್ಟೊತ್ತಿನಲ್ಲಿ ನಾನು ಮನೆಯಲ್ಲಿ ಇರೊಲ್ಲಂತ ಅಜಯ್ಗೆ ಗೊತ್ತು. ಯಾಕೆ ಫೋನ್ ಮಾಡಿದ್ರು?"

    ಹಲೋ ಹಾಂ... ಹೌದಯ. ಮಿಸೆಸ್ ಅಜಯ್ ಇಲ್ಲಿ. ಹಾಂ... ಜೋರಾಗಿ ಹೇಳಿ... ಏನು? ನೋಪ್ಲೀಸ್. ಸರಿಯಾಗಿ ಹೇಳಿ... ನೋ.. ನಾನು ನಂಬೊಲ್ಲ...ಅಲ್ಲಾ... ಅವರೇ ಡಾಕ್ಟ್ರು... ಗೊತ್ತಾಗಲಿಲ್ಲವೇ! ಸ್ಸರಿ... ಟಿಕೆಟ್ ಸಿಕ್ಕ ತಕ್ಷಣ... ಡೆಪನೆಟ್ಲಿ... ಹೌದೂ... ಫೋನ್ ಕೈಯಿಂದ ಜಾರಿ ಬಿತ್ತು. ಕಾಫಿಯ ಲೋಟ ಕೆಳಗೆ ಬಿದ್ದು ಉಳಿದಿದ್ದ ಕಾಫಿಯೆಲ್ಲಾ ಚೆಲ್ಲಿ ನೆಲದ ಮೇಲೆ ಹೊಸ ಚಿತ್ತಾರ ಮೂಡಿಸಿತ್ತು.

    ಏನಾಯ್ತಮ್ಮ...? ಮಾದೇವಿ ಪ್ರಶ್ನಿಸುತ್ತಲೇ ಇದ್ದಳು... ಫೋನಿನಲ್ಲಿ ಅಜಯನ ಸ್ನೇಹಿತ ಪ್ರಭುಶಂಕರ ಹೇಳಿದ ಕರಾಳ ಸುದ್ದಿಯನ್ನು ನಂಬಲೂ ಆಗದೆ, ಯಾರಿಗೂ ಬಿತ್ತಿರಿಸಲೂ ಆಗದೆ, ದಂಬುಬಡಿದವಳಂತೆ ಕುಳಿತಳು ಸೀಮಾ.

    ದೊಡ್ಡ ಮ್ಮಾವ್ರನ್ನ ಎಬ್ಬಿಸು...

    ಮಾದೇವಿ ಬಾಗಿಲುತಟ್ಟುವ ಮೊದಲೇ ಇವಳ ಜೋರು ದನಿ ಕೇಳಿ ಎದ್ದಿದ್ದ ಸೀಮಾಳ ತಾಯಿ ಲಲಿತಮ್ಮ ಹಾಗೂ ತಂದೆ ರಾಮಯ್ಯ ಬಾಗಿಲು ತೆರೆದು ಹೊರಗೆ ಬಂದರು.

    ಏನಮ್ಮ... ಇಷ್ಟೊತ್ತಿನಲ್ಲಿ ಮನೆಗೆ ಬಂದಿದ್ಯಾ.? ಯಾರದು ಫೋನು? ಯಾಖೆ ಹೀಗಿದ್ದೀಯಾ? ಆತಂಕದಿಂದ ಪ್ರಶ್ನಿಸಿದರು ಲಲಿತಮ್ಮ.

    ಅಮ್ಮ... ಅಮ್ಮ... ಅಜಯ್... ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟರಂತೆ ಪ್ರಭುಶಂಕರ್ ಫೋನ್ ಮಾಡಿದ್ರು...

    ಆ್ಞಂ... ಸರಿಯಾಗಿ ಕೇಳಿಸಿಕೊಂಡೆಯೇನೆ? ಇಬ್ಬರೂ ಕಣ್ಣರಳಿಸಿದರು.’

    ಅಯ್ಯೋ ದೇವರೇ... ಏನನ್ಯಾಯ ಮಾಡಿಬಿಟ್ಟೆಯಪ್ಪಾ! ಎದೆ ಹಿಡಿದು ಅಲ್ಲೇ ನೆಲದ ಮೇಲೆ ಕುಸಿದ ರಾಮಯ್ಯನವರತ್ತ ಧಾವಿಸಿದಳು ಲಲಿತಮ್ಮ.

    ಅಪ್ಪ ಹಾರ್ಟ್ ಪೇಷೆಂಟ್ ಅಂತ ತಿಳಿಗೂ ಹೀಗೆ ಧಡ್ ಅಂತ ಹೇಳಿಬಿಟ್ಟೆಯಲ್ಲಮ್ಮಾ... ಆಕ್ಷೇಪಿಸಿದರು.

    ದಂಗಾಗಿ ತಾಯಿಯನ್ನೇ ನೋಡಿದಳು ಸೀಮಾ...ನನಗೇನು ಆಗಿಲ್ಲ... ರಾಮಯ್ಯ ಮಗಳ ಮನಸ್ಸನ್ನು ಅರಿತರು.

    ನಾನು ಇಮ್ಮಿಡಿಯೆಟ್ ಆಗಿ ಹೊರಡ್ತೀನಿ...

    ಮಕ್ಕಳು?

    ಆಂ... ಹುಂ... ಹೇಳ್ತೀನಿ. ಆದ್ರೆ ಕರ್ಕೊಂಡ್ಹೋಗಕ್ಕೆ ಆಗಲ್ಲ... ಏರ್ ಟಿಕೇಟಿಗಾಗಿ ಏಜೆನ್ಸಿಗೆ ಫೋನ್ ಮಾಡಿದಳು.

    ಬೆಂಗಳೂರಿನಿಂದ ಮುಂಬಯಿಗೆ. ಮುಂಬಾಯಿಂದ ಜೆಡಾಗೆ... ಪ್ಲೇನಿನಲ್ಲಿ ಟಿಕೇಟ್ ಕನ್ ಫರ್ಮೆಶನ್ ಸಿಕ್ಕಾಗ ಸ್ವಲ್ಪ ಭಾರ ಇಳಿಸಿದಂತಾಯಿತು. ಜೆಡಾದಿಂದ ಅಜಯ್ ಇರುವ ಸಹಾಗೆ ಕಾರಿನಲ್ಲಿ ಹೋಗಬೇಕು... ಪ್ರಭುಶಂಕರ್ ಜೆಡಾಗೆ ಬರುವುದಾಗಿ ಹೇಳಿದ್ದಾರೆ.

    ಮಾರನೇ ದಿನ ಬೆಳಗ್ಗೆ ಏಳು ಗಂಟೆಗೆ ಮುಂಬಯಿ ಪ್ಲೈಟ್...

    ನಾನೂ ಬರಲೇ ಸೀಮಾ...?

    ಬೇಡಾಪ್ಪ... ನಾನು ಮ್ಯಾನೇಕ್ ಮಾಡ್ತೀನಿ... ಪ್ರಭುಶಂಕರ್ ಜೆಡಾಗೆ ಬರ್ತೀನಿ ಆಂತ ಹೇಳಿದ್ಧಾರೆ. ‘ಓ ಗಾಡ್! ಅಜಯ್ ಇನ್ನಿಲ್ಲ ಅಂದರೆ ನನಗೆ ನಂಬಿಕೆಯೇ ಬರುತ್ತಿಲ್ಲ. ಏನು ಮಾಡಲಿ?’ ಎದ್ದು ಶತಪಥ ಹಾಕಿದಳು ಸೀಮಾ.

    ತೇಜಸ್ವಿನಿ, ಅನಿರುದ್ದ ಸ್ಕೂಲಿನಿಂದ ಬಂದವರು ತೆಪ್ಪಗೆ ತಬ್ಬಿಬ್ಬಾಗಿ ನಿಂತರು.

    ತೇಜೂ, ಅನಿ... ಹೋಗಿ ಬ್ಯಾಗ್ಸ್ ರೂಮುಲ್ಲಿ ಇಟ್ಟು, ಕೈಕಾಲು ತೊಳೆದುಕೊಂಡು, ಹಾಲು ಕುಡೀರಿ. ಮಾದೇವಿ ಮಕ್ಳನ್ನ ಕರ್ಕೊಂಡ್ಹೋಗು...

    ಅಜ್ಜಿ ಯಾಕೆ ಆಳ್ತಿದ್ದಾರೆ? ಅನಿರುದ್ಧ ಕಣ್ಣರಳಿಸಿದ.

    ‘ಅಯ್ಯೋ ಪುಟ್ಟಾ..."

    ಅಮ್ಮಾ! ನಾನು ಹೇಳ್ತೀನಿ, ನೀನು ಸುಮ್ಮನಿರು ಎಲ್ಲಾನೂ ದೊಡ್ಡದು ಮಡ್ತ್ಯಾ ನೀನು. ಮೊದಲು ಹಾಲು ಕುಡಿದು ಬರಲಿ...

    ಸುಮ್ಮನಿರೆ ಸಾಕು. ಇದೇನು ಚಿಕ್ಕ ವಿಷಯವೇ ನಾನು ದೊಡ್ಡದು ಮಾಡಲು! ಹಾಲು ಕುಡಿದು ಬನ್ನಿ ಎಂದು ಯಾವ ಬಾಯಲ್ಲಿ ಹೇಳ್ತಿದ್ದೀಂiÀi?

    ಅಮ್ಮಾ!

    ಸುಮ್ಮನಿರು ಲಲಿತ ರಾಮಯ್ಯನವರು ಕೂಡ ದನಿಯೇರಿಸಿದರು.

    ಮಾದೇವಿ ಮಕ್ಕಳನ್ನು ಒಳಗೆ ಕರೆದುಕೊಂಡು ಹೋದಳು.

    ಅಪ್ಪ ಮಗಳು ಸರಿಯಾಗಿದ್ದೀರಿ ಎಲ್ಲಾದಿಕ್ಕೂ ಸುಮ್ಮನಿರು... ಅಂತ ನನ್ನ ಬಾಯಿ ಬಿಡಿದುಬಿಡ್ತಿರಾ.. ನಾಲ್ಕು ಜನರ ಮಾತು ಕೇಳಬೇಕಾಗಿರುವುದು ನಾನು. ನೀವಿಬ್ಬರೇ ಮಾತಾಡಿಕೊಂಡು ನಾಳೆ ಅವಳೊಬ್ಬಳೆ ಹೋಗುವುದೇಂದು ನಿರ್ಣಯಿಸಿಬಿಟ್ಟಿರಲ್ಲ! ಅಜಯ್‍ನ ತಂದೆ ಬದುಕಿದ್ದಾರೆ. ಅಜಯ್‍ನ ತಮ್ಮ, ತಮ್ಮನ ಹೆಂಡತಿ ಇದ್ಧಾರೆ.

    ಅವರಿಗೆ ಈಗ ಪೋನ್ ಮಾಡಿ ಸಮಾಚಾರ ತಿಳಿಸುತ್ತೆನೆ... ರಾಮಯ್ಯ ಸಮಜಾಯಿಷಿ ನೀಡಿದರು.

    ಏನೇ ಆದರೂ ನಾನೊಬ್ಬಳೇ ತಾನೇ ಹೋಗುವುದು? ನಮ್ಮ ಮಾವನವರು, ಮೈದುನ ಆಂತೆಲ್ಲಾ ಈಗ ದುಡ್ಡು ಖರ್ಚು ಮಾಡಿಕೊಂಡು ಕರ್ಕೊಂಡು ಹೋಗಕ್ಕಾಗುತ್ತೇನು? ಅವರೇ ಖರ್ಚು ಹಾಕಿಕೊಂಡು ಬರುವಂತಿದ್ದಾರೇನು? ಖರವಾಗಿ ಅಂದಳು ಸೀಮಾ.

    ಹಾಗಾದರೆ ಸರಿಯಾಗಿ ಸಂಸ್ಕಾರವಾಗಬೇಕಾದ್ದರಿಂದ ಅಜಯ್ ನ ಬಾಡೀನ ತಗೊಂಡು ಬರಲೇಬೇಕು. ಅವರ ತಂದೆ ಪಾಪಾ...

    ನಂಗೊತ್ತಿಲ್ಲಮ್ಮ. ಅಲ್ಲಿ ಹೋದ ಮೇಲೆ ಹೇಗಾಗುತ್ತೋ ಏನೋ! ಅಲ್ಲಿಯ ರೂಲ್ಸ್ ಏನು, ಎತ್ತ, ಎಷ್ಟು ಖರ್ಚಾಗುತ್ತೆ ಅಂತೆಲ್ಲಾ ಯೋಚನೆ ಮಾಡಬೇಕು...

    ದುಡ್ಡಿನ ಮೆನ ಹಾಳಾಯ್ತು. ಯಾವಾಗಲೂ ದುಡ್ಡು. ಖರ್ಚು ಎಂದೇಕೆ ಮಾತಡುತ್ತೀಯ? ದೇವರು ಧಾರಾಳವಾಗಿ ಕೊಟ್ಟಿದ್ದಾನೆ

    ಹೌದು ಕೊಟ್ಟಿದ್ದಾನೆ. ಅದನ್ನು ಯೋಚನೆ ಮಾಡಿ ಖರ್ಚು ಮಾಡಿದರೆ ಮಾತ್ರ ಧಾರಾಲವಾಗಿರುತ್ತೆ. ಇಲ್ಲದಿದ್ದರೆ ಖಾಲಿ ಕೈ ಅಷ್ಟೇ.

    "ಏನೊಮ್ಮ. ಅವನ್ನ ಹೆತ್ತ ಅವನ ತಂದೆ. ಅವನ ವಂಶದ ಕುಡಿಗಳಾದ ನಿನ್ನ ಮಕ್ಕಳು...

    Enjoying the preview?
    Page 1 of 1