Discover millions of ebooks, audiobooks, and so much more with a free trial

Only $11.99/month after trial. Cancel anytime.

Beladingala Godavari
Beladingala Godavari
Beladingala Godavari
Ebook358 pages1 hour

Beladingala Godavari

Rating: 0 out of 5 stars

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN6580201100053
Beladingala Godavari

Read more from Yandamoori Veerendranath

Related to Beladingala Godavari

Related ebooks

Reviews for Beladingala Godavari

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Beladingala Godavari - Yandamoori Veerendranath

    http://www.pustaka.co.in

    ಬೆಳದಿಂಗಳ ಗೋದಾವರಿ

    Beladingala Godavari

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಬೆಳದಿಂಗಳ ಗೋದಾವರಿ
    -ಯಂಡಮೂರಿ ವೀರೇಂದ್ರನಾಥ್
    -ರಾಜಾ ಚೆಂಡೂರ್
    ಮುನ್ನುಡಿ

    ಅವಳ ತಾಯಿ ಅವಳ ಮೇಲೆ ವ್ಯಾಪಾರ ಮಾಡಬೇಕೆಂದಿದ್ದಳು. ಅವಳ ಗಂಡ ಅವಳನ್ನು ಅಡವಿಟ್ಟು ಹಣ ಸಂಪಾದಿಸಬೇಕೆಂದಿದ್ದ. ಅವಳ ಪ್ರಿಯಕರ ಅವಳನ್ನು ಮರೆಯಲಾರದೆ. ಮನೆಯನ್ನು ನರಕವನ್ನಾಗಿಸಿಕೊಂಡು, ಪರೋಕ್ಷವಾಗಿ ಅವಳಿಗೆ ನೋವನ್ನು ಕೊಡಲು ಪ್ರಾರಂಭಿಸಿದ.

    ಹಳ್ಳಿ ಹಳ್ಳಿಯೆಲ್ಲಾ ಅವಳತ್ತ ಪರಿಹಾಸ್ಯದಿಂದ ನೋಡುತ್ತಿತ್ತು. ಆದರೂ ಅವಳು

    ಗೋದಾವರಿಯಂತೆ-

    ಸಣ್ಣಗೆ ಹರಿಯಲು ಪ್ರಾರಂಭಿಸಿ-ಅಡ್ಡ ಬಂದ ಪರ್ವತಗಳನ್ನು ಸುತ್ತಿಕೊಂಡು – ಜೀವನದಿಯಾಗಿ – ಅಣೆಕಟ್ಟು ಹಾಕಿದವನಿಗೆ ಸಹನೆಯಿಂದ ಕಿರುನಗುತ್ತಾ ಅನ್ನವಿಟ್ಟ ಗೋದಾವರಿಯಂತೆ – ವಿಜಯದ ಸಾಗರದಲ್ಲಿ ಸಂಗಮಿಸಿದಳು.

    ಹೊಸ ಶೈಲಿಯ, ಆಕರ್ಷಕ ಪಾತ್ರಗಳ ಈ ಕಾದಂಬರಿ ‘ಪ್ರಜಾಮತ’ದಲ್ಲಿ ಧಾರಾವಾಹಿಯಾಗಿ ಹರಿದು ಬರುತ್ತಿದ್ದಷ್ಟು ದಿನವೂ ಓದುಗರ ಮೆಚ್ಚುಗೆ ಪಡೆಯುತ್ತಿತ್ತು.

    ಓದಿ ಮುಗಿಸಿದ ನಂತರ ಭಾವಗೀತೆಯೊಂದನ್ನು ಕೇಳಿದ ಅನುಭವ ನೀಡುತ್ತದೆ ಎಂದು ಬರೆದಿದ್ದರು ಎಷ್ಟೋ ಓದುಗರು.

    ಪ್ರಕಾಶರಾದ ಸುಧಾ ಎಂಟರ್‍ಪ್ರೈಸಸ್‍ರವರಿಗೆ, ಅಕ್ಷರ ಜೋಡಣೆ ಮಾಡಿದ ಡೇಟಾ ಸೆಲ್ಯೂಷನ್ಸ್‍ನ ಜೈಕುಮಾರ್‍ರವರಿಗೆ, ಮುದ್ರಕರಿಗೆ ಮತ್ತು ನನಗೆ ಪ್ರೋತ್ಸಾಹ ನೀಡುತ್ತಿರುವ ಓದುಗರೇ ನಿಮಗೆ ಚಿರಋಣಿ.

    ರಾಜಾ ಚೆಂಡೂರ್

    1

    ಸರಳಾ ಫರ್ಟಿಲೈಸರ್ಸ್ ಮ್ಯಾನೇಜಿಂಗ್ ಡೈರೆಕ್ಟರ್‍ರವರ ಮನೆಯ ಫೋನು ಒಂದು ರಾತ್ರಿಹನ್ನೆರಡೂವರೆಯ ವೇಳೆಗೆ ಟ್ರಿಣ್ ಗುಟ್ಟಿತು.

    ಎಂ.ಡಿ. ಒಂದೆರಡು ನಿಮಿಷ ಮಾತನಾಡಿ ಫೋನ್ ಇಟ್ಟುಬಿಟ್ಟರು.

    ಫೋನಿನಲ್ಲಿ ಅತ್ತ ಕಡೆಯಿಂದ ಮಾತಾಡಿದುದು ಮೊದಲು ಅರ್ಥವಾಗಲಿಲ್ಲ. ಫೋನನ್ನು ಇಟ್ಟ ಮೇಲೆ ಕೂಡಾ ಅವರಿಗೆ ವಿಷಯ ಸಂಪೂರ್ಣವಾಗಿ ಅರ್ಥವಾಗಿಲ್ಲವೆಂದು ಅವರ ಮುಖವೇ ಹೇಳುತ್ತಿತ್ತು. ಆತುರದಿಂದ ಮೇಲೆದ್ದು ಸಿದ್ಧವಾದರು. ಎಲ್ಲಿಗೇರೀ.... ಇಷ್ಟು ಹೊತ್ತಿನಲ್ಲಿ ಎಂದು ಕೇಳುತ್ತಿದ್ದ ಹೆಂಡತಿಗೆ ಕೂಡಾ ಉತ್ತರಿಸದೆ ಕಾರನ್ನು ತೆಗೆದುಕೊಂಡು ಪೊಲೀಸ್‍ಸ್ಟೇಷನ್ ಕಡೆ ಹೊರಟರು. ಅವರಿಗೆ ನಿದ್ರೆ ಈಗ ಸಂಪೂರ್ಣವಾಗಿ ಓಡಿ ಹೋಗಿತ್ತು.

    .....ಫೋನಿನಲ್ಲಿ ಬಂದ ಆ ವಾರ್ತೆಯೇ ಅವರ ಮನಸ್ಸಿನಲ್ಲಿ ರೀಲಿನಂತೆ ಸುತ್ತುತ್ತಿತ್ತು.

    ನಾನು ಸಾರ್, ವೆಂಕಟಪತಿ ಮಾತನಾಡುತ್ತಿದ್ದೇನೆ

    ಯಾರೂ?

    ಟೂ-ಟೌನ್ ಪೊಲೀಸ್ ಸ್ಟೇಷನ್‍ನಿಂದ ವೆಂಕಟಪತಿ ಎಸ್ಸೈ.....

    ಓ...... ನೀವಾ? ಏನು ವಿಶೇಷ?

    ರಾತ್ರಿ ಇನ್ಸ್‍ಪೆಕ್ಟರ್ ಅವರು ವ್ಯಭಿಚಾರಿಗಳ ಮನೆಗಳ ಮೇಲೆ ರೈಡಿಂಗ್ ಮಾಡಿದರಲ್ಲಾ....

    ಯಾರು? ಸತ್ಯನಾರಾಯಣನೇ? ಹೌದು ಅಂತಹದೇನೋ ಪ್ರೋಗ್ರಾಂ ಇದೆಯೆಂದು ಸಂಜೆಯೇ ಹೇಳುತ್ತಿದ್ದ. ಇಷ್ಟಕ್ಕೂ ಇಂತಹ ಅರ್ಧರಾತ್ರಿಯ ವೇಳೆ ನನಗೇಕೆ ಫೋನ್ ಮಾಡುತ್ತಿದ್ದೀರಿ?

    ಅದರಲ್ಲಿ ಸಿಕ್ಕಿದ್ದ ಒಬ್ಬ ಯುವತಿ ‘ನೀವು ಅವಳ ತಂದೆ’ ಎಂದು ಹೇಳಿದ್ದಾಳೆ.

    ನಿಮಗೇನಾದರೂ ಹುಚ್ಚು ಹಿಡಿದಿದೆಯಾ? ಅವರ ಕೈ ರಿಸೀವರನ್ನು ಬಿಗಿಯಾಗಿ ಹಿಡಿಯಿತು.

    .......ನಿಜ ಸಾರ್ ನಿಜ.

    ಅದು ಈ ಕಥೆಗೆ ಪ್ರಾರಂಭ.

    ಸರಳಳ ಕಥೆ

    ನಮಸ್ಕಾರ. ನನ್ನ ಹೆಸರು ಸರಳ. ಬಿ.ಎ. ಪಾಸಾಗಿದೆ.

    ಮದುವೆ ಆಗುವವರೆಗೂ ನನ್ನನ್ನು ಎಲ್ಲರೂ ಪಿಂಕಿ, ತುಂಟಿ ಎಂದು ಕರೆಯುತ್ತಿದ್ದರು. ಮದುವೆ ಆಗಿ ಇಬ್ಬರು ಮಕ್ಕಳಾದ ಮೇಲೆ ಆ ಸ್ಥಾನದಲ್ಲಿ ಅಹಂಕಾರಿ, ಕೋಪಿಷ್ಠೆ ಎಂಬ ಬಿರುದುಗಳು ಬಂದವು. ನೀವೇ ಹೇಳಿ ಈ ಪ್ರಪಂಚದಲ್ಲಿ ಯಾವ ಬಿರುದೂ ಇಲ್ಲದೆ ಯಾರಾದರೂ ಇರುವರೆ?

    ನಿಮ್ಮ ಪಕ್ಕದ ಮನೆಯ ಹೆಂಗಸು ಯಾರೊಡನೆಯೂ ಸೇರದೆ ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತಾ ಹೋದರೆ ನೀವೆಲ್ಲಾ ಸೇರಿ ಆಕೆಯನ್ನು ‘ಒಳ್ಳೆಯವಳು, ಕೆಲಸದಲ್ಲಿ ತಲ್ಲೀನಳಾಗಿರುವವಳು’ ಎನ್ನುತ್ತೀರೋ ಅಥವಾ ‘ರಿಜûರ್ವ್‍ಡ್ ಯಾರೊಡನೆಯೂ ಬೆರೆಯುವುದಿಲ್ಲ’ ಎನ್ನುತ್ತೀರೋ. ನಾನೇನೋ ಎರಡನೆಯದನ್ನೇ ಅಂದು ಕೊಳ್ಳುತ್ತೀರೆಂದುಕೊಂಡಿದ್ದೇನೆ. ಇದಕ್ಕೆ ವಿರುದ್ಧವಾಗಿ ನೀವಿದ್ದರೆ ನಿಮಗೆ ನನ್ನ ನಮಸ್ಕಾರಗಳು.

    ಮನುಷ್ಯ ಮಾಡುವ ಯಾವ ಕೆಲಸವನ್ನಾದರೂ ಈ ರೀತಿ ಎರಡರ್ಥ ಮಾಡಿಕೊಳ್ಳಬಹುದು. ತನ್ನ ಶತ್ರುವೊಬ್ಬನನ್ನು ಮೇಲೆ ತರಲು ಕೈಚಾಚಿದನೆಂದುಕೊಳ್ಳಿ. ಶತ್ರುವನ್ನು ಒಳ್ಳೆಯವನನ್ನಾಗಿ ಮಾಡಿಕೊಳ್ಳಲು ಕೈಚಾಚುತ್ತಿದ್ದಾನೆಂದಾದರೂ ಅಂದುಕೊಳ್ಳಬಹುದು. ಅಥವಾ ಶತ್ರುವನ್ನು ಕ್ಷಮಿಸುವಷ್ಟು ಒಳ್ಳೆಯ ಗುಣದವನೆಂದು ಬೇಕಾದರೂ ಅಂದುಕೊಳ್ಳಬಹುದು. ಆದರೆ ಜನ ಕತ್ತಲ ಕಡೆಗೇ ಬೆರಳೆತ್ತಿ ತೋರಿಸಲು ಪ್ರಯತ್ನಿಸುತ್ತಾರೆ. ಅದಕ್ಕೇ ನಾನೆಂದೂ ಅವರ ಬಗ್ಗೆ ತಲೆಕೆಡಿಸಿ ಕೊಳ್ಳುವುದಿಲ್ಲ.

    ನಾನು ಯಾವಾಗಲೂ ಮೂರ್ಖಳಂತೆ ವಾದಿಸುತ್ತೇನೆಂದಾಗಲೀ, ನನ್ನದೇ ಸರಿಯೆಂದು ಹಠಹಿಡಿಯುತ್ತೇನೆಂದಾಗಲೀ ನೀವು ತಿಳಿದರೆ ಅದು ನಿಮ್ಮ ತಪ್ಪು.

    ಅದಕ್ಕೆ ನನಗೆ ನಿಮ್ಮ ತಿಳುವಳಿಕೆಯ ಬಗ್ಗೆಯಾಗಲೀ, ವಿಚಕ್ಷಣಾ ಜ್ಞಾನದ ಬಗ್ಗೆಯಾಗಲೀ ಸ್ವಲ್ಪವೂ ಗೌರವವಿಲ್ಲ. ‘ನೀವು’ ಅಂದರೆ ನಮ್ಮ ಹಳ್ಳಿಯವರು, ನನ್ನ ಕ್ಲಾಸ್‍ಮೇಟ್ಸ್ ಮುಂತಾದವರು. ನಿಮಗೆ ನಾನು ಯಾವಾಗ ಗೌರವ ಕೊಡುವುದನ್ನು ಬಿಟ್ಟುಬಿಟ್ಟೇನೋ, ಆಗ ನೀವೆಲ್ಲಾ ಒಂದಾಗಿ ನನಗೆ ಕೊಡುವ ಬಿರುದು ‘ಹಠಮಾರಿ’.... ಮೊದಲೇ ಹೇಳಿದ್ದೆನಲ್ಲಾ – ಈ ಜನರೆಲ್ಲಾ ಯಾವಾಗೆಂದರೆ ಆಗ ತಮ್ಮವಾದಗಳನ್ನು ಸಮರ್ಥಿಸಿಕೊಳ್ಳಲು ಕೆಲವು ಪದಗಳನ್ನು ಮೊದಲೇ ತಮ್ಮ ಚೀಲದಲ್ಲಿ ಇಟ್ಟುಕೊಂಡಿರುತ್ತಾರೆಂದು.

    ಆನಂದರಾವ್‍ನನ್ನು ಪ್ರೀತಿಸಿದ ಹೊಸದರಲ್ಲಿ ಆ ವಿಷಯವನ್ನು ಅಪ್ಪನಿಗೆ ಹೇಳಿದಾಗ ಅಪ್ಪ ನಕ್ಕುಬಿಟ್ಟರು. ಸಣ್ಣ ಹುಡುಗಿ, ನಿನಗೆ ಪ್ರೇಮದ ಅರ್ಥ ಗೊತ್ತಿದೆಯೇ ಎಂದು ಕೇಳಿದರು. ಏಕೆ ಗೊತ್ತಿರಲಿಲ್ಲ? ರೋಮಿಯೋ ಜ್ಯೂಲಿಯೆಟ್ ಓದಿರಲಿಲ್ಲವೆ ನಾನು. ಪ್ರೇಮವೆಂದರೆ ಒಬ್ಬರಿಗೊಬ್ಬರು ಪ್ರಾಣ ಕೊಡುವುದು ಎಂದು ಹೇಳಿರಲಿಲ್ಲವೇ ನಮ್ಮ ಇಂಗ್ಲೀಷ್ ಲೆಕ್ಚರರ್. ಅದು ನೆನಪಿಗೆ ಬಂದಿತ್ತು.

    ಅದೇ ರಾತ್ರಿ ಗೋದಾವರಿಯಲ್ಲಿ ಧುಮುಕಿಬಿಟ್ಟೆ.

    ಅಂದಹಾಗೆ ಗೋದಾವರಿಯನ್ನು ಕುರಿತು ನಾನು ನಿಮಗೇನೂ ಹೇಳಲಿಲ್ಲ ಅಲ್ಲವೆ. ನಮ್ಮ ಹಳ್ಳಿಯ ಪಕ್ಕದಲ್ಲಿ ಅದು ಹರಿಯುತ್ತದೆ. ಬಗ್ಗಿರುವ ತೆಂಗಿನ ಮರಗಳು ಯಾವ ಕ್ಷಣದಲ್ಲಾದರೂ ಬೀಳುವಂತಿತ್ತು.

    ಇಷ್ಟಕ್ಕೂ ನಾನೇನು ಹೇಳುತ್ತಿದ್ದೆ. ನನ್ನ ಬಾಯ್‍ಫ್ರೆಂಡ್ ವಿಷಯವಾಗಿ ನಾನು ಗೋದಾವರಿಯಲ್ಲಿ ಧುಮುಕಿದ ವಿಷಯವಲ್ಲವೆ? ಅಬ್ಬ! ಹದಿನಾರು ವರ್ಷಗಳ ಹಿಂದೆ ನಡೆದ ಸಂಗತಿ.

    ಆ ದಿನ ತುಂಬಾ ಗಲಾಟೆಯಾಯಿತು.

    ನಾನು ಅಪ್ಪನೊಡನೆ ವಾದಿಸಿದೆ. ‘ಪ್ರೇಮದ ಅರ್ಥ ಕೇಳಿದ್ದು ನೀನು ತಾನೇ! ಅದನ್ನು ಹೇಳುವುದಕ್ಕೋಸ್ಕರವೇ ಧುಮುಕಿದೆ. ನಾನು ಸತ್ತು ಹೋಗಿದ್ದರೆ ಊರಿನಲ್ಲೆಲ್ಲಾ ಜ್ಯೂಲಿಯಟ್ಟಳಷ್ಟು ಪ್ರಖ್ಯಾತಿ ಹೊಂದುತ್ತಿದ್ದೆ’ ಎಂದು.

    ಕೆಲವರು ನನ್ನ ಮುಂದೆಯೇ ನಕ್ಕರು. ಭಯದಿಂದ ಮರೆಯಲ್ಲಿ ನಕ್ಕರು ಮತ್ತೆ ಕೆಲವರು. ಎಲ್ಲಾ ನನಗೆ ತಿಳಿಯುತ್ತಿತ್ತು.

    ಪಾಪ! ಅಪ್ಪನನ್ನು ನೋಡುತ್ತಿದ್ದರೆ ಕರುಣೆ ಹುಟ್ಟಿತು. ಆ ಹಳ್ಳಿಯಲ್ಲಿ ಅಪ್ಪನ ಮಾತಿಗೆ ‘ಎದುರು’ ಇರಲಿಲ್ಲ. ಅಂತಹ ವ್ಯಕ್ತಿ ನನ್ನ ಬಾಯ್‍ಫ್ರೆಂಡ್ ಬಳಿಗೆ ಹೋಗಿ ಕೈ ಹಿಡಿದುಕೊಂಡು ಕೇಳಿಕೊಂಡರಂತೆ. ಅನಂತರ ನನಗೆ ಗೊತ್ತಾಯಿತು. ಹಾಗೆಯೇ ನನ್ನ ಮದುವೆಯೂ ಆಗಿಹೋಯಿತು.

    ಒಟ್ಟಿನಲ್ಲಿ ಗೋದಾವರಿಯಲ್ಲಿ ಹಾರಿ ಹಠ ಸಾಧಿಸಿದಳು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು.

    ನೀನು ಸುಖವಾಗಿರುವುದೇ ನನಗೆ ಬೇಕಾಗಿರುವುದು. ಇನ್ನೆಂದಿಗೂ ಇಂತಹ ಕೆಲಸ ಮಾಡಬೇಡ ಎಂದು ಅಪ್ಪ ಕಣ್ಣೀರು ಸುರಿಸುತ್ತಾ ನನ್ನ ಕೈಯನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡರು.

    ನಿನಗಾಗಿ ಗೋದಾವರಿಯಲ್ಲಿ ಬೇಕಾದರೂ ಹಾರುವಂತಹ ಹೆಂಡತಿ ಸಿಕ್ಕಿದ್ದಾಳೆ. ನೀನೇ ಅದೃಷ್ಟವಂತನಪ್ಪಾ ಎಂದು ಅವರನ್ನು ಅಭಿನಂದಿಸಿದರು.

    ಯಾರಿಗೂ ತಿಳಿಯದ ವಿಷಯವೇನೆಂದರೆ ನಾನು ಗೋದಾವರೀ ತೀರದಲ್ಲಿ ನಡೆಯುತ್ತಾ ತೆಂಗಿನ ಮರದ ಕಡೆ ಒಂದು ಕಲ್ಲನ್ನು ಎಸೆದಿದ್ದೆ. ಕಳ್ಳ ಬಂದಿದ್ದಾನೆಂದು ಅದರ ಕಾವಲುಗಾರ ಓಡುತ್ತಿದ್ದ ನನ್ನನ್ನು ಅಟ್ಟಿಸಿಕೊಂಡು ಬಂದ. ನಾನು ಗೋದಾವರಿಯಲ್ಲಿ ಧುಮುಕಿದ ಕೆಲವೇ ಕ್ಷಣಗಳಲ್ಲಿ ನನ್ನನ್ನು ರಕ್ಷಿಸಿದ. ಅವನನ್ನು ಎಲ್ಲರೂ ಹೊಗಳುತ್ತಿದ್ದರು.

    ಅದಕ್ಕಿಂತಲೂ ದೊಡ್ಡ ವಿಷಯವೆಂದರೆ ನನಗೆ ಚೆನ್ನಾಗಿ ಈಜಲು ಬರುತ್ತಿತ್ತು. ಈ ವಿಷಯ ಪ್ರಮದ್ವರೆಗೆ ಮಾತ್ರ ಗೊತ್ತಿತ್ತು. ಅವಳೊಬ್ಬಳೇ ಮುಸಿಮುಸಿ ನಗುತ್ತಿದ್ದಳು. ನನ್ನ ಆತ್ಮಹತ್ಯೆ ಕಾರ್ಯಕ್ರಮದ ನಂತರದ ಭಾಗವನ್ನು ಅಭಿನಂದಿಸಿದಳು.

    ಅಂದಹಾಗೆ ನಮ್ಮ ಪ್ರಮದ್ವರೆಯ ಬಗ್ಗೆ ಹೇಳಲಿಲ್ಲ ಅಲ್ಲವೇ? ಅದೊಂದು ಹುಚ್ಚು ಹುಡುಗಿ. ಯಾವಾಗಲೂ ಭಾವುಕಳಾಗಿರುತ್ತಾಳೆ. ಸ್ವಲ್ಪ ಪ್ರಕೃತಿಯ ಹುಚ್ಚು.

    ವಸಂತದಲ್ಲಿ ಕೋಗಿಲೆ..... ಎಂದೇನೋ ಹಾಡಿಕೊಳ್ಳುತ್ತಿರುತ್ತಾಳೆ. ನನಗೇನೋ ಅದು ಸಂತೆಯಲ್ಲಿ ಕೋಳಿ.... ಎಂದು ಕೇಳಿಸುತ್ತದೆ. ಆದರೂ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ನನಗೆಷ್ಟೇ ಕೋಪವಿದ್ದರೂ ಅವಳ ಬಗ್ಗೆ ಅಲ್ಲಿಂದಲ್ಲಿಗೇ ಅದನ್ನು ಕ್ಷಮಿಸುತ್ತಿದ್ದುದರಿಂದ ಇದು ಸಾಧ್ಯವಾಗಿರಬೇಕು. ಅವಳು ತಂಬಾ ಒಳ್ಳೆಯ ಹುಡುಗಿ ಎಂದು ಕರೆಯುತ್ತಿದ್ದುದನ್ನು ಕೇಳಿದರೆ ನನಗೆ ನಗು ಬರುತ್ತದೆ. ಸಣ್ಣಗೆರೆ ಪಕ್ಕದಲ್ಲಿದ್ದರೆ ತಾನೇ ದೊಡ್ಡಗೆರೆಯ ಬೆಲೆ ತಿಳಿಯುವುದು.

    ಅವಳನ್ನು ದೊಡ್ಡ ಗೆರೆಯನ್ನಾಗಿ ಮಾಡಲು ನಾನು ಸಣ್ಣ ಗೆರೆ ಆಗುವ ಕೆಲವು ಪದ್ಧತಿಗಳನ್ನು ಅವಲಂಬಿಸುತ್ತಿದ್ದೆ.

    ನನ್ನ ಗಂಡನ ಹೆಸರು ಆನಂದರಾವ್. ಆತನಿಗಾಗಿಯೇ ನಾನು ಗೋದಾವರಿಯಲ್ಲಿ ಧುಮುಕಿದ ನಾಟಕವಾಡಿದ್ದು.

    ನಾನು ಮಾಡಿದ್ದು ಒಳ್ಳೆಯ ಕೆಲಸ. ತುಂಬಾ ಪ್ರೇಮವಿವಾಹಗಳು ವಿಫಲವಾಗುತ್ತವೆ ಎಂದು ಕೇಳಿದ್ದೆ. ಒಳ್ಳೆಯ ಗಂಡ ಸಿಕ್ಕಿದ. ಆನಂದರಾವ್ ನಿಜವಾಗಿಯೂ ಒಳ್ಳೆಯ ವ್ಯಕ್ತಿ. ಒಂದೇ ಒಂದು ಸಲ ನನ್ನ ಕೆನ್ನೆಗೆ ಹೊಡೆದಿದ್ದರು, ಅಷ್ಟೇ! ಮದುವೆ ಆದ ಹೊಸದರಲ್ಲಿ ಯಾವ ಹೆಂಡತಿಯೂ ಗಂಡನಿಗೆ ಹೊಂದಿಕೊಳ್ಳುವುದು ಕಷ್ಟವೇ ಅಲ್ಲವೇ? ಈ ಅವಸ್ತೆ ಪ್ರತಿ ಕುಟುಂಬದಲ್ಲಿಯೂ ಇರುತ್ತದೆ ಅಂದುಕೊಂಡಿದ್ದೇನೆ. ನಮ್ಮಲ್ಲಿಯೂ ಹಾಗೇ ಇತ್ತು. ಆದರೆ ಅದು ತುಂಬಾ ದಿನ ಇರಲಿಲ್ಲ ಬಿಡಿ. ಮದುವೆ ಆದ ಐದಾರು ತಿಂಗಳು ಮಾತ್ರ. ಆ ನಂತರ ಹಾಲೂ-ನೀರಿನಂತೆ ಬೆರೆತೆವು. ನಮ್ಮ ಪ್ರೀತಿಗೆ ಎರಡು ಉದಾಹರಣೆಗಳು: ಸಾಹಿತಿ, ಸಂಕೇತ. ಅಂದ ಹಾಗೆ ಹೇಳುವುದನ್ನು ಮರೆತಿದ್ದೆ. ನನ್ನ ಗಂಡನಿಗೆ ಕೂಡಾ ಸ್ವಲ್ಪ ಕಾವ್ಯದ ಹುಚ್ಚಿದೆ. ಅದಕ್ಕೇ ಇಬ್ಬರು ಹೆಣ್ಣುಮಕ್ಕಳಿಗೂ ಈ ಹೆಸರುಗಳನ್ನು ಇಟ್ಟರು.

    ನಮ್ಮಲ್ಲಿ ಎಷ್ಟು ಜನ ಹೆಂಡತಿಯರು ತಮ್ಮ ಜೀವನಕಾಲದಲ್ಲಿ ಒಮ್ಮೆಯಾದರೂ ಗಂಡಂದಿರಿಂದ ಕೆನ್ನೆಗೆ ಹೊಡೆಸಿಕೊಂಡಿರುತ್ತಾರೆ? ನಿಮಗೇನಾದರೂ ಅಂದಾಜಿದೆಯೇ. ಈಗ ಹೊಸದಾಗಿ ಮದುವೆ ಆದ ಜೋಡಿಗಳ ಬಗ್ಗೆ ಅಲ್ಲ ನಾನು ಹೇಳುತ್ತಿರುವುದು. ಈಗಿನ ಗಂಡಂದಿರು ಹೆಂಡತಿಯನ್ನು ಬೆಲ್ಲದಂತೆ ನೋಡಿಕೊಳ್ಳುತ್ತಿದ್ದಾರೆ ಬಿಡಿ. ನಾನು ಹೇಳುತ್ತಿರುವುದು ಇಪ್ಪತ್ತು ವರ್ಷಗಳ ಹಿಂದಿನ ಸಮಾಚಾರ. ಆಗಿನ ಸಂಸಾರಗಳು ಅಷ್ಟು ಅನ್ಯೋನ್ಯವಾಗಿರುತ್ತಿರಲಿಲ್ಲ. ಇದೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ ಮದುವೆ ಆದ ಆರು ತಿಂಗಳ ಅನಂತರ ನಮ್ಮಿಬ್ಬರ ಮಧ್ಯೆ ಯಾವುದೇ ವಿಧವಾದ ತೆರೆಯೂ ಇರಲಿಲ್ಲ. ಈ ಆರು ತಿಂಗಳಲ್ಲಿ ಅವರು ನನ್ನ ಕೆನ್ನೆ ಹರಿಯುವಂತೆ ಹೊಡೆದಿದ್ದರು. ಅದೂ ಯವಾಗ ಗೊತ್ತಾ? ನಮ್ಮ ಮೊದಲ ರಾತ್ರಿಯ ನಂತರದ ಬೆಳಿಗ್ಗೆ ಎಂಟು ಗಂಟೆಗೆ.

    ಯಾರಿಗೂ ಇಂತಹ ಅನುಭವ ಆಗಿರುವುದಿಲ್ಲವಲ್ಲವೇ? ಆಗೇನೋ ಅಳು ಬಂದಿತ್ತಾಗಲೀ ಅದನ್ನು ಈಗ ನೆನೆಸಿಕೊಂಡರೆ ನಗು ಬರುತ್ತದೆ. ಈ ನಮ್ಮ ಇಬ್ಬರೂ ಮಕ್ಕಳಿಗೆ ಆ ವಿಷಯ ಹೇಳಿ ನಗಿಸುತ್ತಿರುತ್ತೇವೆ. ಅಷ್ಟೇ. ಮೊದಲ ರಾತ್ರಿಯ ಬಗ್ಗೆ ಹೇಳುವುದಿಲ್ಲ. ಆಗ ಅವರ ಮುಖ ಕೆಂಪಗಾಗುತ್ತದೆ. ಸ್ವಲ್ಪ ಹೊತ್ತಿನವರೆಗೂ ಮೂಡಿಯಾಗಿರುತ್ತಾರೆ. ಅನಂತರ ಸಾಮಾನ್ಯ ಮನುಷ್ಯರಾಗುತ್ತಾರೆ.

    ಈ ಬರಹಗಾರರೆಲ್ಲಾ ಯಾವ ಕನಸಿನ ರಾಜ್ಯದಲ್ಲಿ ತೇಲುತ್ತಾ ಬರೆಯುತ್ತಾರೋ ನನಗರ್ಥವಾಗದು. ಮುಖ್ಯವಾಗಿ ಮೊದಲನೆ ರಾತ್ರಿಯನ್ನು ಅವರು ವರ್ಣಿಸುವ ರೀತಿಯನ್ನು ನೋಡಬೇಕು. ಬೆಳಗಿನ ಜಾವವೇ ಮದುವೆಯ ಹೆಣ್ಣು ಮೇಲೆದ್ದು ಗಂಡನ ಪಾದಗಳಿಗೆ ನಮಸ್ಕರಿಸಿ ಯಾರಾದರೂ ವಯಸ್ಸಾದ ಹೆಂಗಸಿನ ಪಕ್ಕದಲ್ಲಿ ಮಲಗುತ್ತಿದ್ದಳಂತೆ ನಾಚಿಕೆಯಿಂದ. ಆದರೆ ನಾನು ಧೈರ್ಯವಾಗಿ ಅದೇ ರೂಮಿನಲ್ಲಿ ಮಲಗಿದ್ದೆ. ನನ್ನನ್ನು ಎಬ್ಬಿಸುವ ಧೈರ್ಯ ನಮ್ಮ ಮನೆಯಲ್ಲಿ ಯಾರಿಗೂ ಇರಲಿಲ್ಲ. ಎಂಟು ಗಂಟೆಗೆ ಯಾವುದೋ ಸಪ್ಪಳದಿಂದ ಎಚ್ಚರವಾಯಿತು. ಅವರು ಮಂಚಕ್ಕೆ ಕಟ್ಟಿದ್ದ ಮಲ್ಲಿಗೆ ಹೂವಿನ ಹಾರವನ್ನೆಲ್ಲಾ ಕಿತ್ತು ಬಿಸಾಡುತ್ತಿದ್ದರು. ತಡವಾಗಿ ನಾನೆದ್ದುದ್ದಕ್ಕೆ ಕೋಪವಿರಬೇಕು. ಏನ್ರೀ, ಏನಾಯ್ತು? ಎಂದು ಕೇಳಿದೆ. ಅದೇ ಸಿಟ್ಟಿನಲ್ಲಿ ಹಿಂದಕ್ಕೆ ತಿರುಗಿ ನನ್ನ ಕೆನ್ನೆ ಛಳ್ಳೆನ್ನುವಂತೆ ಬಾರಿಸಿದ್ದರು.

    ಅದೇ ಮೊದಲು– ಅದೇ ಕೊನೆ.

    ಅದಾದ ನಂತರ ಎಂದೂ ನಾನೂ ಐದು ಗಂಟೆಯ ನಂತರ ಮಲಗುತ್ತಿರಲಿಲ್ಲ. ನನ್ನಲ್ಲಿರುವ ಗುಣಗಳಲ್ಲಿ ಅದು ಒಂದು. ನನಗಿಷ್ಟವಗಿರುವವರು ಏನು ಹೇಳಿದರೆ ಅದನ್ನು ಕೇಳಿ, ಅವರಿಗಿಷ್ಟವಾದ ರೀತಿಯಲ್ಲಿ ನಡೆದುಕೊಳ್ಳುವುದು. ಆದರೆ ನೋವಿನ ಸಂಗತಿಯೇನೆಂದರೆ, ಅವರು ಆ ರೀತಿ ಹೊಡೆಯದೆ ಮರ್ಯಾದೆಯಿಂದ ಹೇಳಿದ್ದರೂ ಆ ಮಾತನ್ನು ಕೇಳುತ್ತಿದ್ದೆ. ಮಲ್ಲಿಗೆ ಹೂವಿನ ಮೇಲೆಲ್ಲಾ ಸಿಟ್ಟನ್ನು ಪ್ರದರ್ಶಿಸಿ ನನ್ನ ಕೆನ್ನೆಯ ಮೇಲೆ ಅವರ ಬೆರಳಿನ ಮುದ್ರೆಯನ್ನು ಮೂಡಿಸುವ ಅಗತ್ಯವೇ ಇರಲಿಲ್ಲ.

    ಆದರೂ ಅದು ಒಂದು ರೀತಿಯಲ್ಲಿ ಒಳ್ಳೆಯದೇ.

    ನಿಮಗೆ ಮದುವೆ ಆಗಿದೆಯಾ? ಆಗಿರುವ ಪಕ್ಷದಲ್ಲಿ ಗಂಡನ ಕೈಯಲ್ಲಾಗಲೀ, ಹೆಂಡತಿಯ ಕೈಯಲ್ಲಾಗಲೀ, ಒಂದು ಸಲ ಈ ರೀತಿ ಏಟಿನ ರುಚಿ ನೋಡಿ. ತಪ್ಪು ಯಾರದ್ದಾದರೂ ಹೊಡೆದವರು ಅವರಾದ್ದರಿಂದ ಸಮಾಧಾನಗೊಳಿಸುವ ಜವಾಬ್ದಾರಿಯೂ ಅವರದೇ ಆಗಿರುತ್ತದೆ. ನಾವು ಸ್ವಲ್ಪ ಬಿಂಕವಾಗಿದ್ದರೆ, ಅವರು ಸಮಾಧಾನಪಡಿಸುತ್ತಿರುವಷ್ಟು ಹೊತ್ತೂ ನಮಗೆ ತುಂಬಾ ಹಾಯಾಗಿರುತ್ತದೆ. ಅವರಿಂದಲೂ ಅದೇ ನಿರೀಕ್ಷಿಸಿದೆ. ಸ್ವಲ್ಪ ಸಮಯದ ನಂತರ ಅವರು ಬಳಿಗೆ ಬಂದರು. ನನ್ನ ಗುಣಗಳಲ್ಲೆಲ್ಲಾ, ತುಂಬಾ ಜನ ಇಷ್ಟಪಡದ ಗುಣವೊಂದಿದೆ. ತಪ್ಪು ಮಾಡಿದವರನ್ನು ಕ್ಷಮಿಸಲಾರದೇ ಹೋಗುವುದು. ಆ ನಂತರ, ಅವರು ತಮ್ಮ ತಪ್ಪನ್ನು ಒಪ್ಪಿಕೊಂಡರೂ ನಾನು ಕ್ಷಮಿಸಲಾರೆ. ಇದನ್ನು ನಿಜವಾಗಿಯೂ ಕೆಟ್ಟ ಗುಣವೆನ್ನುತ್ತೀರಾ? ಏನೋ ನನಗೆ ಹಾಗೆ ಅನ್ನಿಸುವುದಿಲ್ಲ. ತಪ್ಪು ಮಾಡುವುದೇ ಒಂದು ತಪ್ಪು. ಅದನ್ನು ಒಪ್ಪಿಕೊಂಡ ತಕ್ಷಣ ಅದರ ಪ್ರಭಾವವಾಗಲೀ, ಪಾಪವಾಗಲೀ, ಫಲಿತಾಂಶವಾಗಲೀ ಕಡಿಮೆ ಆಗುವುದಿಲ್ಲವಲ್ಲಾ!

    ನಮ್ಮ ಮನೆಯಲ್ಲಿ ಒಬ್ಬ ಹುಡುಗಿ ಇದ್ದಳು. ಒಂದು ದಿನ ಐದು ರೂಪಾಯಿ ಕದ್ದಳು. ಹೆದರಿಸಿದರೆ ತೆಗೆದುಕೊಂಡೆನೆಂದು ಒಪ್ಪಿಕೊಂಡಳು. ನೀವಾಗಿದ್ದರೆ ಏನು ಮಾಡುತ್ತಿದ್ದೀರಿ? ಮೊದಲು ಅವಳಿಗೆ ಹಣ ಕಾಣದಂತೆ ಎಚ್ಚರದಿಂದ ಇಡುತ್ತಿದ್ದೀರಿ. ಅವಳನ್ನು ಕೆಲಸದಿಂದ ತೆಗೆದುಹಾಕುತ್ತಿದ್ದಿರಿ.

    ನಾನು ಆ ರೀತಿ ಮಾಡಲಿಲ್ಲ.

    ಇನ್ಸ್‍ಪೆಕ್ಟರ್ ಸತ್ಯನಾರಾಯಣ ನಮ್ಮವರ ಫ್ರೆಂಡ್. ಮೂರು ದಿನ ಅವಳನ್ನು ಲಾಕಪ್ಪಿನಲ್ಲಿರಿಸಿದೆ. ಅನಂತರ ಕೆಲಸದಿಂದ ತೆಗೆದುಹಾಕಿದೆ.

    ಸ್ವಲ್ಪ ದಿನದ ನಂತರ ಮತ್ತೆ ಮನೆಯಲ್ಲಿ ನೂರು ರೂಪಾಯಿ ಕಳುವಾಯಿತು. ಕದ್ದದ್ದು ನಮ್ಮ ಮೊದಲ ಮಗಳು ಸಾಹಿತಿ.

    2

    ಈಗ ನೀವೇನು ಮಾಡುತ್ತೀರಿ? ನಿಜ ಹೇಳಿ. ನಿಮ್ಮ ಮುದ್ದು ಮಗಳು ನಿಮಗೆ ಹೇಳದೆ ಪರ್ಸಿನಿಂದ ನೂರು ರೂಪಾಯಿ ಹೊಡೆದುಬಿಟ್ಟರೆ ಏನು ಮಾಡುತ್ತೀರಿ?

    ನನ್ನ ದೃಷ್ಟಿಯಲ್ಲಿ, ನೀವು ಬೈಯಬಹುದು. ಇನ್ನೂ ಸ್ವಲ್ಪ ಮುದ್ದು ಮಾಡುವವರಾದರೆ, ‘ತಪ್ಪಮ್ಮ, ಹಾಗೆ ಮಾಡಬಾರದು’ ಎಂದು ಬುದ್ಧಿ ಹೇಳುತ್ತೀರಿ. ಮತ್ತೂ ಕೋಪಿಷ್ಟರಾದರೆ ಚೆನ್ನಾಗಿ ಬಡಿಯುತ್ತೀರಿ. ನಾನು ಈ ಮೂರನ್ನೂ ಮಾಡಲಿಲ್ಲ.

    ಸಾಹಿತಿಯನ್ನು ನಿಲ್ಲಿಸಿದೆ.

    ನೋಡು ತಪ್ಪು ಮಾಡಿದರೆ ನಾನು ಸುಮ್ಮನಿರುವುದಿಲ್ಲವೆಂದು ನಿನಗೆ ಗೊತ್ತು. ನಿನಗೆ ಬುದ್ಧಿ ಬಂದಿದೆಯೆಂದು ಹೇಳಿದೆಯೆಂದರೂ ಸರಿ - ಪನಿಷ್‍ಮೆಂಟ್ ತಪ್ಪದು. ನಾನು ಈಗ ಮಾಡಬಹುದಾದ ಸಹಾಯವೇನೆಂದರೆ ನಿನಗೆ ಯಾವ ಪನಿಷ್‍ಮೆಂಟ್ ಬೇಕೋ ನೀನೇ ಹೇಳು.

    ಅವಳು ಮಾತನಾಡಲಿಲ್ಲ.

    ಹೊಡೆಯಲಾ? ಎಂದೆ.

    ಅವಳು ತಲೆ ಆಡಿಸಿದಂತೆ ಕಂಡಿತು.

    ನಮ್ಮ ಮನೆ ಕಾಂಪೌಂಡಿನಲ್ಲಿ ಒಂದು ಸೀಬೆ ಮರವಿದೆ. ಅದರ ಕೊಂಬೆಯನ್ನು ಮುರಿದು ಅವಳ ಎರಡೂ ಕೈಗಳ ಮೇಲೆ ಚೆನ್ನಾಗಿ ಬಾರಿಸಿದೆ. ಕೊನೆಯ ಏಟನ್ನು ಹೊಡೆಯುತ್ತಿದ್ದಾಗ ಅವರು ಬಂದರು. ಮಗಳನ್ನು ಹಿಡಿದುಕೊಂಡು ಪಕ್ಕಕ್ಕೆ ಎಳೆದು ನೀನು ಮನುಷ್ಯಳಾ? ರಾಕ್ಷಸಿಯಾ ಎಂದು ಕೇಳಿದರು.

    ಆಗಲೇ ಅವಳ ಕೈಗಳ ಮೇಲೆ ಬಾಸುಂಡೆಗಳೆದಿದ್ದವು.

    ಕೈಯಲ್ಲಿದ್ದ ಬೆತ್ತವನ್ನು ಬಿಸಾಡಿ ಹೇಳಿದೆ: ರಾಕ್ಷಸಿಯಲ್ಲ. ನಾನೂ ಮನುಷ್ಯಳೇ. ನಿಮ್ಮ ಮಗಳನ್ನು ಮನುಷ್ಯಳನ್ನಾಗಿ ಮಾಡೋಣವೆಂಬುದೇ ನನ್ನ ಉದ್ದೇಶ ಅಂದೆ. ಅವರು ಸಾಹಿತಿಯನ್ನು ಅಲ್ಲಿಂದ ಕರೆದುಕೊಂಡು ಹೋದರು.

    ಆ ರಾತ್ರಿ ಅವರನ್ನು ತರಾಟೆಗೆ ತೆಗೆದುಕೊಂಡೆ.

    ನನ್ನನ್ನು ರಾಕ್ಷಸಿ ಎಂದಿರಲ್ಲವೆ. ಆದರೆ ನಮ್ಮ ಮಗಳು ಒಬ್ಬ ಕಳ್ಳಿಯಗುವುದು ನಿಮಗೆ ಇಷ್ಟವೇ? ಹದಿಮೂರನೇ ವಯಸ್ಸಿನಲ್ಲಿ ಅವಳು ಕಳ್ಳತನ ಮಾಡಿದ್ದಾಳೆಂದರೆ ಅದೆಷ್ಟು ಅವಮಾನ? ಈ ವಿಷಯ ಹೊರಗೆ ತಿಳಿದರೆ ನಮಗೆಷ್ಟು ಅವಮಾನ? ನೀವು ಆಲೋಚಿಸಿದ್ದೀರಾ?

    ಅವರು ತಲೆ ತಿರುಗಿಸಿಕೊಂಡರು.

    ನೋಡಿದಿರಾ? ನೀವು ಹೇಳುವುದಿಲ್ಲ. ಹೇಳಲಾರಿರಿ! ನೀವೂ ಮಾಡುವುದಿಲ್ಲ, ನನ್ನಿಂದಲೂ ಮಾಡಿಸುವುದಿಲ್ಲ.

    ನೀನು ಹೊಡೆದರೆ ಅವಳು ಬಿಟ್ಟುಬಿಡುತ್ತಾಳಾ?

    ಕನಿಷ್ಟ ಇನ್ನೊಂದು ಸಲ ಹಾಗೆ ಮಾಡಲು ಭಯಪಡುತ್ತಾಳೆ.

    ನಿಧಾನವಾಗಿ ಹೇಳಿದ್ದಿದ್ದರೆ ಅವಳು ಕೇಳುತ್ತಿದ್ದಳು.

    ಮನುಷ್ಯರ ಒಳ್ಳೆಯತನದ ಬಗ್ಗೆ ನಿಮಗಿರುವಷ್ಟು ನಂಬಿಕೆ ನನಗಿಲ್ಲ. ವ್ಯಂಗ್ಯವಾಗಿ ಹೇಳಿದೆ.

    ಮಾಡಿದ ಪ್ರತಿ ತಪ್ಪಿಗೂ ಶಿಕ್ಷೆ ಅನುಭವಿಸಿದ್ದರೆ ಈ ಮನುಷ್ಯರೆಲ್ಲಾ ಎಂದೋ ನಶಿಸಿಹೋಗುತ್ತಿದ್ದರು. ನಿರ್ಲಿಪ್ತವಾಗಿ ಹೇಳಿದರು ಅವರು.

    ಸಾಕು ಬಿಡಿ ನಿಮ್ಮ ಸಿನಿಮಾ ಡೈಲಾಗ್

    ಅಷ್ಟರಲ್ಲಿ ಪಕ್ಕದ ರೂಮಿನಿಂದ ಮುಲುಗಾಟ ಕೇಳಿಸುತ್ತಿತ್ತು.

    ಸಾಹಿತಿ ಹಾಸಿಗೆಯಲ್ಲಿ ಮಲಗಿ ಮುಲುಗುತ್ತಿದ್ದಳು.

    ಅವಳ ತಲೆ ಸವರಲು ಎತ್ತಿದ್ದ ಕೈಯನ್ನು ಹಾಗೆಯೇ ಇಳಿಸಿದೆ. ಉಹ್ಞು.... ಈಗ ಸ್ವಲ್ಪ ಕನಿಕರ ತೋರಿದರೂ ಮಧ್ಯಾಹ್ನ ಕೊಟ್ಟ ಶಿಕ್ಷೆ ವ್ಯರ್ಥವಾಗುತ್ತದೆ. ಹೆಣ್ಣು ಹುಡುಗಿಯಾಗಿ ಈ

    Enjoying the preview?
    Page 1 of 1