Discover millions of ebooks, audiobooks, and so much more with a free trial

Only $11.99/month after trial. Cancel anytime.

O Henne Neeneshtu Olleyavalu
O Henne Neeneshtu Olleyavalu
O Henne Neeneshtu Olleyavalu
Ebook301 pages2 hours

O Henne Neeneshtu Olleyavalu

Rating: 0 out of 5 stars

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN6580201100056
O Henne Neeneshtu Olleyavalu

Read more from Yandamoori Veerendranath

Related to O Henne Neeneshtu Olleyavalu

Related ebooks

Reviews for O Henne Neeneshtu Olleyavalu

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    O Henne Neeneshtu Olleyavalu - Yandamoori Veerendranath

    http://www.pustaka.co.in

    ಓ ಹೆಣ್ಣೇ, ನೀನೆಷ್ಟು ಒಳ್ಳೆಯವಳು!

    O Henne, Neeneshtu Olleyavalu !

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಓ ಹೆಣ್ಣೇ, ನೀನೆಷ್ಟು ಒಳ್ಳೆಯವಳು!

    ಯಂಡಮೂರಿ ವೀರೇಂದ್ರನಾಥ್

    ವ್ಯಕ್ತಿತ್ವ ವಿಕಾಸ ಗ್ರಂಥಮಾಲೆ

    ಅಧ್ಯಾಯ 1

    "Behind every successful man, there

    is a woman."

    ಪ್ರತಿಯೊಬ್ಬ ಯಶಸ್ವಿ ಪುರುಷನ ಹಿನ್ನೆಲೆಯಲ್ಲಿ ಸ್ತ್ರೀಯೊಬ್ಬಳು ಇರುತ್ತಾಳೆ.

    ಈ ವಾಕ್ಯವನ್ನು ಓದಿದ ಸ್ತ್ರೀಯರು ಹಿಗ್ಗಿ ಹೀರೇಕಾಯಿಯಾಗಬಹುದು. ಈ ಜಗತ್ತಿನಲ್ಲಿ ಗಂಡಸು ಯಶಸ್ಸು ಸಾಧಿಸಲು ತಮ್ಮ ಸಹಾಯ ಅಗತ್ಯ ಎಂದು ಹೆಮ್ಮೆಪಟ್ಟುಕೊಳ್ಳಬಹುದು. ಗಂಡಸಿನ ಗೆಲುವಿಗೆ ಸಹಾಯ ಮಾಡುವುದರಲ್ಲೆ ತಮ್ಮ ಹೆಣ್ತನದ ಸಾರ್ಥಕತೆ ಎಂದು ಭಾವಿಸಲೂಬಹುದು.

    ಆದರೆ ಸ್ವಲ್ಪ ವಿಚಾರ ಮಾಡಿದರೆ ಇದರಂತಹ ಮುಠ್ಠಾಳ ಹೇಳಿಕೆ ಮತ್ತೊಂದಿಲ್ಲ ಎನ್ನುವುದು ಅರ್ಥವಾಗುತ್ತದೆ. ಹೆಣ್ಣು ಯಾವುದೇ ಯಶಸ್ಸು ಪಡೆಯಲು ಪ್ರಯತ್ನಿಸಬಾರದು; ಅವಳ ಸಾಮಥ್ರ್ಯವೆಲ್ಲ ತನ್ನ ಯಶಸ್ಸಿಗೆ ಬಳಕೆಯಾಗಬೇಕು ಎನ್ನುವ ದುರುದ್ದೇಶದಿಂದಲೇ ಇಂತಹ ವಾಕ್ಯವನ್ನು ಅವನು ಸೃಷ್ಟಿಸಿರಬೇಕು. ಹೆಣ್ಣಿನ ಅರಿವಿಗೆ ಬರದಂತೆ ಅವಳನ್ನು ತನ್ನ ಬೆನ್ನ ಹಿಂದೆ ಇಟ್ಟುಕೊಳ್ಳಲು ಮಾಡಿದ ಕುತಂತ್ರವೇ ಈ ಹೊಗಳಿಕೆ ರೂಪದ ವಾಕ್ಯ.

    ನೀವು 15 ರಿಂದ 60 ವರ್ಷದೊಳಗಿನ ಸ್ತ್ರೀಯಾಗಿದ್ದು, ನಿಮ್ಮ ಮನಸ್ಸಿನಲ್ಲಿ ಎಂದಾದರೂ ಈ ಕೆಳಗಿನ ಭಾವನೆಗಳು ಮೂಡಿವೆಯೆ? ಒಮ್ಮೆ ಯೋಚಿಸಿ ನೋಡಿ:

    1.      ನಾನು ಗೊತ್ತಿರದ ದೌರ್ಬಲ್ಯವೊಂದು ನನ್ನಲ್ಲಿದೆ.

    2.      ನಾನು ಗಂಡಾಗಿ ಹುಟ್ಟಿದ್ದರೆ ಬಹಳ ಚೆನ್ನಾಗಿರುತ್ತಿತ್ತು.

    3.      ಬದುಕಿನಲ್ಲಿ ತ್ಯಾಗವೇ ಎಲ್ಲಕ್ಕಿಂತ ಮಿಗಿಲು.

    4.      ಒಳ್ಳೆಯ ಹೆಣ್ಣು ಎನಿಸಿಕೊಂಡವಳು ಲೈಂಗಿಕತೆಯ ಬಗ್ಗೆ ಮಾತಾಡುವುದು ತಪ್ಪು. ಗಂಡನ ಜೊತೆಗಾದರೂ ಸೈ, ಮುಕ್ತವಾಗಿ ಲೈಂಗಿಕ ಸುಖ ಪಡೆಯಬಹುದು.

    5.      ಮನೆಯೇ ಬೃಂದಾವನ; ಸ್ವರ್ಗ ಸಮಾನ.

    6.      ಹೆಣ್ಣಿಗೆ ಸಹನೆಯೇ ಭೂಷಣ.

    7.      ದು:ಖ, ಕಣ್ಣೀರು-ಇವು ಹೆಣ್ಣಿಗೆ ಅನಿವಾರ್ಯ.

    ಮೇಲಿನವುಗಳಲ್ಲಿ ಒಂದಾದರೂ ನಿಮ್ಮ ಮನಸ್ಸಿನಲ್ಲಿ ಗಟ್ಟಿಗೊಂಡಿದ್ದರೆ ನಿಮ್ಮಲ್ಲಿ ಏನೋ ಲೋಪ ಇದೆ ಎನ್ನಬಹುದು.

    ನಿಮ್ಮ ಇಡೀ ಜೀವನ ಇತರರು ಹೇಳಿದಂತೆ ಕೇಳುವುದರಲ್ಲಿ, ಅದರಂತೆ ವರ್ತಿಸುವುದರಲ್ಲಿ ಕಳೆದು ಹೋಯ್ತೆ? ಅಥವಾ ಎಂದಾದರೂ ಸ್ವತ: ನಿರ್ಧಾರ ಕೈಗೊಳ್ಳುತ್ತಾರೆಯೆ? ನಿಮಗೆಷ್ಟು ವಿದ್ಯಾಭ್ಯಾಸದ ಬಗ್ಗೆ, ಮದುವೆಯ ಬಗ್ಗೆ, ಮದುವೆಯ ಬಗ್ಗೆ ಇತರರು ನಿರ್ಧಾರ ಕೈಗೊಳ್ಳುತ್ತಾರೆಯೆ? ನಿಮಗೆಷ್ಟು ಮಕ್ಕಳು ಬೇಕು, ಆ ಮಕ್ಕಳು ಏನು ಓದಬೇಕು, ಹೇಗೆ ಬೆಳೆಯಬೇಕು ಎನ್ನುವುದನ್ನೂ ಬೇರೆಯವರು ನಿರ್ಧರಿಸುತ್ತಾರೆಯೆ? ಅಡಿಗೆ ಮಾಡುವಾಗಲೂ ಈ ದಿನ ಇಂತಹ ಪ್ರಶ್ನೆಗಳಿಗೆ ನಿಮ್ಮಲ್ಲಿ ಬಹುಪಾಲು ಜನರಿಂದ ‘ಹೌದು’ ಎನ್ನುವ ಉತ್ತರವೇ ಬರುತ್ತದೆ. ಇತರರ ನಿರ್ಧಾರಕ್ಕೊಳಪಟ್ಟು ನಡೆಯುವುದು ತಮಗೆ ಸಂತೋಷವನ್ನೀಯುತ್ತದೆಂದು ಬಹುಪಾಲು ಜನ ಮೇಲ್ನೋಟಕ್ಕೆ ಅಂದುಕೊಂಡಿರಬಹುದು. ಆದರೂ ಮನಸ್ಸಿನಾಳದಲ್ಲಿ ಅಸಂತೃಪ್ತಿ ಹೆಪ್ಪುಗಟ್ಟಿಕೊಳ್ಳುತ್ತಿದ್ದರೆ, ಅವರಲ್ಲಿ ಏನೋ ಲೋಪ ಇದೆ ಎಂದರ್ಥ.

    ಕೆಲವರಿಗೆ ಅವರ ಮನಸ್ಸಿಗೆ ಹಿಡಿಸಿದ ಕೆಲಸ ಮಾಡಬೇಕೆಂದಿರುತ್ತದೆ. ಆದರೆ ಅದನ್ನು ಮಾಡಲು ಅವರಿಂದಾಗುವುದಿಲ್ಲ. ಕಾರಣ-ಅವರು ಆರ್ಥಿಕವಾಗಿ ಸ್ವತಂತ್ರರಲ್ಲ. ಗಂಡನನ್ನು ಆಧರಿಸಿಯೇ ಅವರ ಬದುಕು. ಆದರೆ ಇಲ್ಲೊಂದು ಮಾತು. ಒಬ್ಬಳು ತನ್ನ ಮನಸ್ಸಿಗೊಪ್ಪಿದುದನ್ನು ಮಾಡಲಾಗದಿರಲು ಇದೊಂದೇ ಕಾರಣ ಎನ್ನಲಾಗದು. ಹಾಗೇನಾದರೂ ಇರುವುದಾದಲ್ಲಿ, ಆಗಲೂ ಅವಳಲ್ಲಿ ಏನೋ ಒಂದು ಕೊರತೆ ಇದೆ ಎನ್ನಬಹುದು.

    ಅನೇಕ ಸ್ತ್ರೀಯರು ತಮ್ಮ ಗಂಡಂದಿರೊಂದಿಗೆ ಹೊಟೇಲ್ಲಿಗೆ ಹೋಗಿರುತ್ತಾರೆ. ಅಲ್ಲಿ ಅವರು ತಿಂಡಿ ಆರ್ಡರ್ ಮಾಡುವ ಕೆಲಸವನ್ನೂ ಗಂಡನಿಗೆ ಬಿಟ್ಟುಕೊಟ್ಟಿರುತ್ತಾರೆ. ಅಂತಹವರು ತಮ್ಮ ಗಂಡಂದಿರ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿಸಿರುತ್ತಾರೆನ್ನುವುದು ಈ ಉದಾಹರಣೆಯಿಂದ ಅರ್ಥ ಮಾಡಿಕೊಳ್ಳಬಹುದು.

    ಹೆಣ್ಣಾದವಳು ತನ್ನ ಗಂಡನಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾಳೆ. ಗಂಡು ಅದಕ್ಕಿಂತಲೂ ಹೆಚ್ಚಿನದನ್ನು ಅವಳಿಂದ ನಿರೀಕ್ಷಿಸುತ್ತಾನೆ. ಆದರೆ ಅವಳಿಗೆ ಏನೂ ನೀಡದೆ ತಾನು ಬಯಸಿದುದನೆಲ್ಲ ಅವಳಿಂದ ಪಡೆಯುತ್ತಿರುವನೆಂದರೆ, ಆ ಲೋಪ ಹೆಣ್ಣಿನಲ್ಲಿಯೇ ಇದೆ ಎನ್ನಬಹುದು.

    ಬದುಕಿನಲ್ಲಿ ನನ್ನದಾಗಿ ಏನೂ ಉಳಿಯಲಿಲ್ಲ ಎನ್ನುವ ಭಾವನೆ ಯಾವತ್ತಾದರೂ ನಿಮ್ಮ ಮನಸ್ಸಿನಲ್ಲಿ ಸುಳಿದಾಡಿದೆಯೆ? ಅಥವಾ ನಿಮ್ಮ ನೆರೆಹೊರೆಯ ಗೃಹಿಣಿಯರು ನಿಮಗಿಂತ ಹೆಚ್ಚು ಆನಂದದಿಂದಿರುವರೆಂದು ಆಗಾಗ ಅನ್ನಿಸುತ್ತಿರುತ್ತದೆಯೆ? (ಅವರೂ ನಿಮ್ಮಂತೆಯೇ ಅಂದುಕೊಳ್ಳುತ್ತಿರುತ್ತಾರೆನ್ನಿ.) ಹೀಗೆಂದು ಸ್ತ್ರೀಯರೆಲ್ಲ ತಮ್ಮ ಗಂಡನನ್ನು ಎದುರಿಸಿ ನಿಲ್ಲಬೇಕು; ಗಂಡನನ್ನು ತೊರೆದು ಸ್ವತಂತ್ರವಾಗಿ ಬಾಳಬೇಕು; ಹತ್ತಾರು ಜನ ಸ್ನೇಹಿತರೊಂದಿಗೆ ಚಕ್ಕಂದವಾಡಬಹುದು ಎಂದೇನೂ ಈ ಪುಸ್ತಕದ ಮೂಲಕ ಸೂಚಿಸುತ್ತಿಲ್ಲ. ನಿಜವಾದ ಮಹಿಳಾ ವಿಮೋಚನವಾದಿಗಳ ಉದ್ದೇಶವೂ ಇದಾಗಿರುವುದಿಲ್ಲ. ಸೂಡೋಫೆಮಿನಿಸ್ಟರು ಮಾತ್ರ ಗಂಡಸರೆಲ್ಲರನ್ನು ಪುರುಷಾಹಂಕಾರ-ಸೂಕರಗಳೆಂಬುದಾಗಿ(Male chauvocnist)ವರ್ಣಿಸುತ್ತಾರೆ. " ನೀವು ಪ್ರತಿಯೊಂದಕ್ಕೂ ತಗ್ಗಿ-ಬಗ್ಗಿ ನಡೆಯುವ ಗೃಹಿಣಿಯಾಗಿರಬಾರದು ಅಥವಾ ಮನೆ ತೊರೆದು ಹೊರಬಂದು ಸ್ವತಂತ್ರವಾಗಿ ಬದುಕಬೇಕು ಎಂದೇನೂ ಈ ಪುಸ್ತಕ ಹೇಳುವುದಿಲ್ಲ. ಹೆಣ್ಣು ಗಂಡಿಗೆ ಯಾವುದರಲ್ಲೂ ಕಡಿಮೆಯಿಲ್ಲ; ಅವಳಿಗೂ ಒಂದು ವ್ಯಕ್ತಿತ್ವವಿದೆ; ಅವಳು ತನ್ನದೇ ಆದ ಸ್ವತಂತ್ರ, ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಲ್ಲವಳಾಗಬೇಕು ಎಂಬುದು ನಮ್ಮ ಆಶಯ.

    ಯಾರಾದರೂ ಒಬ್ಬ, ನಿನಗೆ ಐದು ಲಕ್ಷ ರೂಪಾಯಿ ಕೊಡುತ್ತೇನೆ. ಅದನ್ನು ಬ್ಯಾಂಕಿನಲ್ಲಿ ಠೇವಣಿಯಾಗಿಟ್ಟರೆ ತಿಂಗಳಿಗೆ ಐದು ಸಾವಿರ ಬಡ್ಡಿ ಬರುತ್ತದೆ. ನನ್ನನ್ನು ಬಿಟ್ಟು ಸ್ವತಂತ್ರವಾಗಿ ಬದುಕು ಎಂದು ತನ್ನ ಹೆಂಡತಿಗೆ ಹೇಳಿದನೆಂದುಕೊಳ್ಳಿ. ಅವಳು ಅದಕ್ಕೆ ಒಪ್ಪಿಕೊಳ್ಳುತ್ತಾಳೆಯೆ? ಇಲ್ಲ. ಏಕೆ? ಕಾರಣಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಬಹುದು:

    1. ಸ್ತ್ರೀಯರು ಗಂಡಂದಿರನ್ನು ಅವಲಂಬಿಸಲು ತಮಗೆ ಆರ್ಥಿಕ ಭದ್ರತೆ ಇಲ್ಲದಿರುವುದೊಂದೇ ಕಾರಣವಲ್ಲ.

    2. ಸಮಾಜ ಏನನ್ನುತ್ತದೋ ಎನ್ನುವ ಅಳುಕು.

    3. ಗಂಡ-ಮಕ್ಕಳ ಬಗ್ಗೆ ಇರುವ ಅನುಬಂಧ.

    4. ಮನೆಯಿಂದ ಹೊರ ಬಂದು ಒಂಟಿಯಾದರೆ ಹೆಚ್ಚಿನ ಕಷ್ಟ ಅನುಭವಿಸಬೇಕಾಗುತ್ತದೇನೋ ಎನ್ನುವ ಭಯ; ಅಭದ್ರತೆಯ ಅಂಜಿಕೆ.

    5. ಒಂಟಿ ಬದುಕಿನಲ್ಲಿರುವ ನಿರಾಸಕ್ತಿ

    6. ತವರು ಮನೆಯವರು ತನ್ನನ್ನು ದೂರ ಮಾಡಿಬಿಡುತ್ತಾರೆ ಎನ್ನುವ ಭಯ.

    7. ಊಟ, ತಿಂಡಿ, ಉಸಿರಾಟದಂತೆ ಗಂಡಿನ ಸಹವಾಸವೂ ಅನಿವಾರ್ಯ ಎಂದು ಭಾವಿಸಿರುವುದು.

    ಒಬ್ಬಾಕೆಯ ಬಳಿ ನೂರು ರೂಪಾಯಿಗಳಿವೆ. ಅಂಗಡಿಯಲ್ಲಿ ಆಕೆಗೊಪ್ಪಿದ ಸೀರೆಯೊಂದು ಕಣ್ಣಿಗೆ ಬೀಳುತ್ತದೆ. ಅದರ ಬೆಲೆ ನೂರು ರೂಪಾಯಿ. ತನ್ನಲ್ಲಿರುವ ನೂರು ರೂಪಾಯಿಗಿಂತಲೂ ಆ ಸೀರೆ ಹೆಚ್ಚಿನ ತೃಪ್ತಿ ನೀಡಬಲ್ಲದು ಎಂದು ಆಕೆಗನ್ನಿಸಿದಲ್ಲಿ ಕೊಂಡುಕೊಳ್ಳುತ್ತಾಳೆ. ಇಷ್ಟು ಸಣ್ಣ ವಿಷಯವನ್ನು ಹೆಣ್ಣು ತನ್ನ ಬದುಕಿಗೆ ಅನ್ವಯಿಸಿಕೊಳ್ಳುವುದಿಲ್ಲ. ಇಲ್ಲಿ ಸೀರೆಯದು ಬರೀ ಉದಾಹರಣೆ. ಅಂದರೆ ಸೀರೆ ಬದಲಾಯಿಸಿದಂತೆ ಗಂಡನನ್ನು ಬದಲಾಯಿಸಿ ಎನ್ನುವುದಲ್ಲ. ಈಗಿರುವ ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸಿಕೊಂಡು ಚೆನ್ನಾಗಿ ಬಾಳಬೇಕೆಂದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲವಲ್ಲ!

    ಒಂದು ದಿನಪತ್ರಿಕೆಯಲ್ಲಿ ನಾನೊಂದು ಅಂಕಣವನ್ನು ನಿರ್ವಹಿಸುತ್ತಿದ್ದೆ. ಆ ಅಂಕಣಕ್ಕೆ ಹೆಚ್ಚಾಗಿ ಪತ್ರಗಳನ್ನು ಬರೆಯುತ್ತಿದ್ದುದು ಸ್ತ್ರೀಯರೇ. ಅವರಲ್ಲಿ ಅನೇಕರು ತಮ್ಮ ಬದುಕಿನ ಬಗ್ಗೆ ತಮಗಿರುವ ಅಸಂತೃಪ್ತಿ, ಅಸಮಾಧಾನವನ್ನು ತೋಡಿಕೊಂಡಿರುತ್ತಿದ್ದರು. ಅವರೆಲ್ಲರಿಗೂ ಇದ್ದ ಸಮಸ್ಯೆ ಕೇವಲ ಆರ್ಥಿಕ ಪರವಾದುದಾಗಿರಲಿಲ್ಲ. ಇತರ ಸಮಸ್ಯೆಗಳ ಬಗ್ಗೆಯೂ ಬರೆದಿರುತ್ತಿದ್ದರು.

    ದುರ್ದೈವದ ವಿಷಯವೇನೆಂದರೆ, ಪ್ರತಿಯೊಬ್ಬರೂ ಸ್ತ್ರೀಯರತ್ತ ಬೊಟ್ಟು ಮಾಡಿ ನಿನ್ನಲ್ಲಿ ಏನೋ ತಪ್ಪಿದೆ...! ಎಂದು ಹೇಳಲು ಸದಾ ಪ್ರಯತ್ನಿಸುತ್ತಿರುವುದು!

    ಕೆಲ ಮಹಿಳಾ ವಿಮೋಚನಾವಾದಿ ಲೇಖಕಿಯರು ತಮ್ಮ ಕೃತಿಗಳಲ್ಲಿ, ಕಥಾನಾಯಕಿ ಗಂಡನ ಕಾಟದಿಂದ ಪಾರಾಗಲು ಮತ್ತು ಮನೆ ಬಿಟ್ಟು ಹೊರಬರಲು ಬೇರೊಬ್ಬ ಗಂಡಸಿನ ಸಹಾಯ ಪಡೆಯುವಂತೆ ಚಿತ್ರಿಸಿದ್ದಾರೆ. ಗಂಡನಿಂದ ಬೇರ್ಪಟ್ಟ ಹೆಣ್ಣಿಗೆ ವಿ..ಶಾ..ಲ ಹೃದಯದ ಮತ್ತೊಬ್ಬ ಗಂಡಸಿನ ಪರಿಚಯವಾಗುವುದರೊಂದಿಗೆ ಕಥೆ-ಕಾದಂಬರಿ ಸುಖಾಂತವಾಗುತ್ತದೆ. ಇದು ತುಂಬಾ ಶೋಚನೀಯ. ಲೇಖಕಿಯರಲ್ಲಿ ಹುದುಗಿರುವ ಅಭದ್ರತೆಯ ಸೂಚನೆ ಇದು. (‘ಅಗ್ನಿ ಪ್ರವೇಶ’ ಕಾದಂಬರಿಯಲ್ಲಿ ನನ್ನಿಂದಲೂ ಇಂತಹ ತಪ್ಪಾಗಿದೆ.)

    ಈ ಸಂಸಾರ ನಮ್ಮಿಬ್ಬರದು. ಇಲ್ಲಿ ನಾವಿಬ್ಬರೂ ಸಮಾನರು. ನಿನ್ನೊಂದಿಗೆ ಸಮನಾಗಿ ಆನಂದವನ್ನು ಅನುಭವಿಸುವ ಹಕ್ಕು ನನಗಿದೆ. ಅದಕ್ಕೋಸ್ಕರ ಇಬ್ಬರೂ ಪ್ರಯತ್ನಿಸೋಣ ಎಂದು ಸ್ತ್ರೀ ಧೈರ್ಯವಾಗಿ ಹೇಳಬಲ್ಲವಳಾಗಬೇಕು. ಅವಳಲ್ಲಿ ಆ ಆತ್ಮವಿಶ್ವಾಸ ಬೆಳೆಯಬೇಕು. ಅದು ಬಿಟ್ಟು ‘ಈ ಗಂಡು ಜಾತಿಯೆ ಹೀಗೆ; ಇವರೊಂದಿಗೆ ಸುಖ ಕಾಣುವುದು ಕನಸು’ ಎನ್ನುವ ಸಿನಿಕತನದ ಭಾವನೆಗೆ ಎಡೆಕೊಡಬಾರದು.

    ಸುಖಿಯಾದ ಸಂಸಾರಕ್ಕಿಂತಲೂ ಮಿಗಿಲಾದುದು ಬೇರೊಂದಿಲ್ಲ. ಅಂತಹ ಸಂಸಾರ ಹೆಚ್ಚಿನ ಆನಂದವನ್ನು ನೀಡುತ್ತದೆ. ಯಾರೇ ಪ್ರಯತ್ನಿಸಲಿ, ಅದಕ್ಕಾಗಿಯೇ ಪ್ರಯತ್ನಿಸಬೇಕು. ಅಂತಹ ಸಾಂಸಾರಿಕ ಜೀವನ ಸಾಧ್ಯವಾಗದಿದ್ದರೆ ಏನು ಮಾಡಬೇಕು ಎನ್ನುವುದೇ ಮುಂದಿನ ಪ್ರಶ್ನೆ.

    ಇತಿಹಾಸ

    ಜ್ಞಾನ ವೃಕ್ಷದ ಸೇಬುಹಣ್ಣನ್ನು ಮೊದಲು ತಿಂದವನು ಆ್ಯಡಂನೆ? ಅಥವಾ ಅಬಲೆ(ಎಂದು ಅವನು ಭಾವಿಸಿದ) ಈವ್‍ಳಿಗೆ ಮೊದಲು ಸ್ವಲ್ಪ ನೀಡಿ, ನಂತರ ತಾನು ತಿಂದನೆ?

    ಆ್ಯಡಂ-ಈವ್‍ರು ಸೇಬು ಹಣ್ಣು ತಿಂದ ಕಾಲದಿಂದಲೂ ಸ್ತ್ರೀಯರು ಶಾರೀರಿಕವಾಗಿ, ಮಾನಸಿಕವಾಗಿ ಪುರುಷರಿಗಿಂತ ದುರ್ಬಲರು ಎನ್ನುವ ಭಾವನೆ ರೂಢಿಗೆ ಬಂದಿದೆ. ಪುರುಷರು ಪ್ರಬಲರು, ಸ್ತ್ರೀಯರು ಅಬಲೆಯರು; ಪುರುಷನಾದವನು ಸಮಾಜದಲ್ಲಿ ನಿಯಮಗಳನ್ನು ಏರ್ಪಡಿಸುತ್ತಾನೆ; ಸಮಾಜವನ್ನು ಪರಿಪಾಲಿಸುತ್ತಾನೆ; ಅಭಿವೃದ್ಧಿ ಸಾಧಿಸುವುದೂ ಪುರುಷನೇ. ಸ್ತ್ರೀ ಸೃಷ್ಟಿಯಾಗಿರುವುದು ಪುರುಷನಿಗೋಸ್ಕರ. ಅವನಿಗೆ ಅಡಿಯಾಳಾಗಿ ಜೀವನವಿಡೀ ಸೇವೆ ಮಾಡುವುದರಲ್ಲೇ ಅವಳ ಜನ್ಮದ ಸಾರ್ಥಕತೆ ಅಡಗಿದೆ. ಹೆಣ್ಣಿಗೆ ಗಂಡನ ಸೇವೆ ಬಿಟ್ಟರೆ ಬೇರೆ ಯಾವ ಕಲ್ಪನೆಯೂ ಇರಬಾರದು. ಇವೆಲ್ಲ ತಲೆ ತಲಾಂತರದಿಂದ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿಕೊಂಡಿರುವ ಅಭಿಪ್ರಾಯಗಳು. ನಮ್ಮ ಪುರಾತನರು ಹೆಣ್ಣನ್ನು ಮಾತೃ ಮೂರ್ತಿ, ಆದಿಶಕ್ತಿ ಎಂದು ಹೊಗಳಿ ಅಟ್ಟಕ್ಕೇರಿಸುತ್ತಲೇ ‘ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ’ ಎಂದು ಹೇಳಬಲ್ಲವರಾಗಿದ್ದಾರೆ. ಪಾಶ್ಚಾತ್ಯರಲ್ಲೂ ಇದಕ್ಕಿಂತ ಭಿನ್ನ ಭಾವನೆ ಇರಲಿಲ್ಲ. ಎಲ್ಲ ಪಾಪಗಳಿಗೂ ಹೆಣ್ಣೆ ಮೂಲ ಕಾರಣ ಎಂದು ಸಾಕ್ರೆಟಿಸ್ ಹೇಳಿದ್ದಾನೆ. ಈ ಸೃಷ್ಟಿಯಲ್ಲಿ ಹೆಣ್ಣು ಜಾತಿಗಿಂತ ಗಂಡು ಜಾತಿಯೇ ಹಿರಿಮೆಯುಳ್ಳದ್ದು. ಅದೇ ಪ್ರಬಲವಾದುದು. ಒಂದು ಆಳುತ್ತದೆ; ಇನ್ನೊಂದು ಆಳಿಸಿಕೊಳ್ಳುತ್ತದೆ. ಇದೇ ಸೂತ್ರ ಮಾನವ ಜಾತಿಗೂ ಅನ್ವಯಿಸುತ್ತದೆ, ಎಂದು ಅರಿಸ್ಟಾಟಲ್‍ನು ಹೇಳಿದ್ದಾನೆ.

    ಮನುಷ್ಯ ಸಮಾಜವನ್ನು ರಚಿಸಿಕೊಂಡಾಗಲೇ ಗಂಡಿಗೆ ಪ್ರಥಮ ಸ್ಥಾನವನ್ನು ನೀಡಿರಬೇಕು. ಆದಿಯಿಂದಲೂ ಪುರುಷ ಪ್ರಧಾನ ಸಮಾಜ ಜೀವನವೇ ಎಲ್ಲ ಜನಾಂಗದವರಲ್ಲಿ ರೂಢಿಗೆ ಬಂದಿರಬೇಕು. ಆಗಿನಿಂದಲೇ ಹೆಣ್ಣು ಎರಡನೇ ಸ್ಥಾನ ಪಡೆದಿದ್ದಾಳೆ. ಸಂತಾನವನ್ನು ನೀಡುವ ಯಂತ್ರ ಎನ್ನುವುದಕ್ಕಿಂತಲೂ ಹೆಚ್ಚಿನ ಗೌರವವನ್ನು ಆಕೆಗೆ ನೀಡಿರಲಿಲ್ಲ. (ಈಗ ನೀಡಿದ್ದಾರೆಯೆ? ಎನ್ನುವುದು ಈಗಲೂ ಚರ್ಚಾಸ್ಪದವಾದ ವಿಷಯವೇ!)

    ಪುರುಷ ಪ್ರಧಾನವಾದ ಈ ಸಮಾಜದಲ್ಲಿ, ಪುರುಷರಿಗೆ ಅನುಕೂಲವಾಗುವಂತೆಯೆ ನಿಯಮಗಳನ್ನು ಸೃಷ್ಟಿಸಲಾಗಿದೆ. ಅಂತೆಯೇ ಪುರುಷನ ಗುರಿ ಸಾಧನೆಗೆ, ಏಳಿಗೆಗೆ ಸ್ತ್ರೀಯರ ಬದುಕು ಸಮರ್ಪಿತವಾಗಿರಬೇಕು ಎನ್ನುವ ಅಲಿಖಿತ ಒಪ್ಪಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪುರುಷನಿಗೆ ತಗ್ಗಿ ಬಗ್ಗಿ ನಡೆಯುತ್ತಿರುವಷ್ಟು ದಿನ ಸ್ತ್ರೀಯನ್ನು ಹಿರಿಮೆಯುಳ್ಳವಳೆಂದು ಚಿತ್ರಿಸಲಾಗುತ್ತದೆ.

    ನಿನ್ನ ಮನಸ್ಸಿನಲ್ಲಿ ಅದೆಷ್ಟೇ ಅಸಂತೃಪ್ತಿ ತುಂಬಿಕೊಂಡಿರಲಿ; ನಿರಾಶೆ, ಹತಾಶೆಗಳು ಬೆಟ್ಟದೆತ್ತರಕ್ಕೆ ಬೆಳೆದಿರಲಿ; ನೀನು ಯಾವ ಭಾವನೆಯೂ ಇಲ್ಲದ ಸಜೀವ ಯಂತ್ರದಂತಾದರೂ ಪರವಾಗಿಲ್ಲ. ಆ ಹಿರಿಮೆಯನ್ನು (ಒಳ್ಳೆಯತನವನ್ನೂ!) ಕಾಪಾಡಿಕೊಳ್ಳುವುದು ನಿನ್ನ ಕರ್ತವ್ಯ ಎನ್ನುವ ಸಿದ್ಧಾಂತ ಮನಸ್ಸಿನಲ್ಲಿ ಬೇರೂರಿ, ರಕ್ತಗತವಾಗುವಂತೆ ಮಾಡುವಲ್ಲಿ ನಮ್ಮ ಸಮಾಜ ಯಶಸ್ವಿಯಾಗಿದೆ. ಸ್ತ್ರೀಯರು ಆ ಸಿದ್ಧಾಂತವನ್ನು ಕಾಯಾ, ವಾಚಾ, ಮನಸಾ ಅನುಷ್ಠಾನಕ್ಕೆ ತಂದಿದ್ದಾರೆ. ಆದ್ದರಿಂದಲೇ ನಮ್ಮಲ್ಲಿ ಸತಿ ಸಕ್ಕೂಬಾಯಿ, ಮಹಾಸತಿ ಅನಸೂಯದಂತಹ ಚಲನಚಿತ್ರಗಳು ನೂರುದಿನಗಟ್ಟಲೆ ತುಂಬಿದ ಗೃಹಗಳಿಗೆ ಪ್ರದರ್ಶನಗೊಂಡಿವೆ. (ಇದು ಸಾಲದು ಎನ್ನುವಂತೆ ದೂರದರ್ಶನವೂ ‘ಸತಿ ಸಕ್ಕೂಬಾಯಿ’ ಅಂತಹ ಚಲನಚಿತ್ರವನ್ನು ಪ್ರಸಾರ ಮಾಡಿ ‘ಪುಣ್ಯವನ್ನು’ ಕಟ್ಟಿಕೊಳ್ಳುತ್ತಿದೆ!)

    ನಾವು ಅಬಲೆಯರು. ನಮ್ಮ ಕೈಲಿ ಏನೂ ಆಗದು ಎನ್ನುವ ಭಾವನೆ ಬಹಳಷ್ಟು ಸ್ತ್ರೀಯರಲ್ಲಿ ತುಂಬಿಕೊಂಡಿದೆ. ಈ ಭಾವನೆಯೇ ಅವರ ಮನಸ್ಸಿನಲ್ಲಿ ನಿರ್ಲಿಪ್ತತೆ ತುಂಬಿಕೊಳ್ಳುವಂತೆ ಮಾಡಿದೆ. ಯಾವ ವಯಸ್ಸಿನ ಸ್ತ್ರೀಯನ್ನೇ ಗಮನಿಸಿದಲ್ಲಿ (ಅವರು ಮದುವೆಯಾದವರಾಗಲಿ ಅಥವಾ ಅವಿವಾಹಿತರಾಗಲಿ; ನೌಕರಿ ಮಾಡುವವರಾಗಲಿ ಅಥವಾ ಮನೆವಾಳ್ತೆಯ ಗೃಹಿಣಿಯರಾಗಿರಲಿ), ಅವರೆಲ್ಲರ ಮನಸ್ಸಿನಲ್ಲಿ ಸರ್ವೇಸಾಮಾನ್ಯವಾಗಿರುವ ಭಾವನೆ-ನಾವು ಹೆಂಗಸರು, ಗಂಡಸರು ಹಾಕಿದ ಗೆರೆ ದಾಟಬಾರದು; ಹಾಗೇನಾದರೂ ದಾಟಿದರೆ ಈ ಸಮಾಜ ನಮ್ಮನ್ನು ಕೆಟ್ಟವರೆನ್ನುತ್ತದೆ. ಈ ಅಳುಕಿನಿಂದಲೇ ಸ್ತ್ರೀಯರು ತಗ್ಗಿ ಬಗ್ಗಿ ನಡೆಯುತ್ತಾರೆ. ವಾಸ್ತವಕ್ಕೆ ಆ ‘ಕೆಟ್ಟತನ’ ಏನೆಂಬುದು ಅವರಿಗೆ ಗೊತ್ತಿಲ್ಲ.

    ಕಿರಣ್‍ಬೇಡಿ ಮತ್ತು ವಕೀಲರ ನಡುವೆ ನಡೆದ ಘರ್ಷಣೆ ಗೊತ್ತಿರಬಹುದಲ್ಲ! ಆ ಸಂದರ್ಭದಲ್ಲಿ ವಕೀಲರೆಲ್ಲ ಗುಂಪುಗೂಡಿ ನ್ಯಾಯಾಲಯಗಳನ್ನು ಬಹಿಷ್ಕರಿಸಿದ್ದರು. ಆ ಸುದ್ದಿ ಪತ್ರಿಕೆಗಳಲ್ಲೆಲ್ಲ ಪ್ರಕಟವಾಗಿತ್ತು. ಅದನ್ನು ಓದಿದವರಲ್ಲಿ ಬಹುಪಾಲು ಮಂದಿ ಹೆಂಗಸು ಪೊಲೀಸ್ ನೌಕರಿ ಮಾಡುವುದು ಅಂದ್ರೇನು? ಮಾಡಿದರೂ ಗಂಡಸರ ಜೊತೆ ತಂಟೆ-ತಕರಾರೇಕೆ ಮಾಡಿಕೊಳ್ಳಬೇಕಿತ್ತು? ಅಂದುಕೊಂಡಿರಬಹುದು. ಕಿರಣ್‍ಬೇಡಿ ಬಗ್ಗೆ ಇಂತಹವರ ಮನಸ್ಸಿನಲ್ಲಿ ಅಭಿಮಾನವೂ ಇರುತ್ತದೆ. ಆದರೆ ಇತರರು ತಮ್ಮನ್ನು ಕೆಟ್ಟವರೆನ್ನುತ್ತಾರೆಂದು ಹೆದರುತ್ತಿರುತ್ತಾರೆ. ಈ ರೀತಿ ಅಂದುಕೊಳ್ಳುವವರಲ್ಲಿ ಬಹುಪಾಲು ಜನ ಸ್ತ್ರೀಯರೇ ಇರುವುದು ದುರ್ದೈವದ ಸಂಗತಿ ಎನ್ನಬಹುದು.

    ಸ್ತ್ರೀಯ ಮನೋಭಾವವನ್ನು ಪುರುಷ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಆದ್ದರಿಂದಲೇ, ನನ್ನಿಂದ ಸುಖ ಸಂತೋಷಗಳನ್ನು ನಿರೀಕ್ಷಿಸಬೇಡ. ನನಗೆ ಮಾತ್ರ ಸುಖ ಸಂತೋಷವನ್ನೊದಗಿಸು ಎನ್ನುವ ರೀತಿ ವರ್ತಿಸಬಲ್ಲವನಾಗಿದ್ದಾನೆ. ಅದರಂತೆ ನಡೆದುಕೊಳ್ಳುತ್ತಲೂ ಇದ್ದಾನೆ. ಹೆಣ್ಣಿಗೆ

    Enjoying the preview?
    Page 1 of 1