Discover millions of ebooks, audiobooks, and so much more with a free trial

Only $11.99/month after trial. Cancel anytime.

Vishwam Shubham Mangalam
Vishwam Shubham Mangalam
Vishwam Shubham Mangalam
Ebook201 pages1 hour

Vishwam Shubham Mangalam

Rating: 0 out of 5 stars

()

Read preview

About this ebook

M.R.Seshagiri Rao is a famous author in Kannada.
LanguageKannada
Release dateAug 12, 2019
ISBN6580208901126
Vishwam Shubham Mangalam

Related to Vishwam Shubham Mangalam

Related ebooks

Related categories

Reviews for Vishwam Shubham Mangalam

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Vishwam Shubham Mangalam - M.R. Seshagiri Rao

    http://www.pustaka.co.in

    ವಿಶ್ವಂ ಶುಭಂ ಮಂಗಳಂ

    Vishwam Shubham Mangalam

    Author :

    ಎಂ.ಆರ್. ಶೇಷಗಿರಿರಾವ್

    M.R.Seshagiri Rao

    For more books

    http://www.pustaka.co.in/home/author/seshagiri-rao

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ವಿಶ್ವಂ ಶುಭಂ ಮಂಗಳಂ

    ಮುನ್ನುಡಿ

    ಈ ಕೃತಿಯು ಸಮಾಜ ಸೇವಾ ಜಾಗೃತಿಗಾಗಿ ಮುಡಿಪಾಗಿದೆ. ಸಹಕಾರ ಯುಕ್ತ ಸಹನಾಳ್ವೆ ಮಾಡಿದರೆ ಭೂಲೋಕದಲ್ಲಿಯೇ ಸ್ವರ್ಗಾನುಭವ ದೊರೆಯುತ್ತದೆಂದು ಲೇಖಕರ ಆಶಯವಾಗಿದ್ದು ಈ ವಿಚಾರವನ್ನು ಚೆನ್ನಾಗಿ ಉದಾಹರಣೆಗಳ ಮೂಲಕ ಮನದಟ್ಟು ಮಾಡಿದ್ದಾರೆ. ನಮ್ಮನ್ನು ನಾವೇ ನಿರ್ನಾಮ ಮಾಡಿಕೊಳ್ಳುವ ಹವಣಿಕೆಯಲ್ಲಿರುವುದು ಇಂದು ಕಂಡುಬರುತ್ತದೆ. ವಿಶ್ವದ ನಾನಾ ಕಡೆ ವಿವಿಧ ರೀತಿಯ ಗೊಂದಲ, ಗಲಾಟೆಗಳು, ಜನರು ಹೆಚ್ಚು ಹೆಚ್ಚಾಗಿ ಹಿಂಸೆಯತ್ತ ಉಪಕ್ರಮಿಸುತ್ತಿರುವುದು ಇದನ್ನು ಪುಷ್ಟೀಕರಿಸುತ್ತದೆ.

    ಮಾನವನು ‘ವಸುಧೈವ ಕುಟುಂಬಕಂ’ ಎಂದು ಇಡೀ ವಿಶ್ವವನ್ನೇ ತನ್ನ ಕುಟುಂಬವೆಂದು ಭಾವಿಸಿದಾಗ ಈ ದೊಂಬಿ ಗಲಾಟೆಗಳು ನಿರ್ನಾಮವಾಗಿ ಅಲ್ಲಿ ಶಾಂತಿ ಬೆಳೆಯುತ್ತದೆ. ವಿಶ್ವ ಸೌಖ್ಯಕ್ಕೆ ಪೋಷಕವಾದ ವಿಚಾರಗಳು ಈ ಗ್ರಂಥದಲ್ಲಿವೆ. ಮಾನವನ ವಿವಿಧ ವೈಶಿಷ್ಟ್ಯಗಳಲ್ಲಿ ಸಾಮಂಜಸ್ಯವನ್ನು ಅರಸುವುದೇ ವಿಶ್ವದ ವಿಚಾರ ಭಂಡಾರಕ್ಕೆ ನಾವು ಕೊಡಬಹುದಾದ ಕೊಡುಗೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೃಷ್ಟಿಯ ಮಾನವ ಐಕಮತ್ಯ, ಮಾನವ ಸುಖ ಮತ್ತು ವಿಕಸನಗಳಿಗೆ ಕಾರಣವಾಗುತ್ತದೆ.

    ಹಲವಾರು ರಾಷ್ಟ್ರಗಳು ವಿವಿಧ ರೀತಿಯಲ್ಲಿ ಪೈಪೋಟಿಗೆ ಇಳಿಯುತ್ತಿರುವ ಈ ಕಾಲ ಘಟ್ಟದಲ್ಲಿ ರಾಷ್ಟ್ರಗಳ ಸುಸಂಗತ ಸಂಯೋಜನೆಯನ್ನು ಪ್ರತಿಪಾದಿಸುವುದು ಅವಶ್ಯಕವಾಗಿದೆ. ಸಾಮಾನ್ಯವಾಗಿ ಜನತೆ, ಯಾರಿಗೆ ಯಾವ ಸ್ವಭಾವದ ಜನಗಳ ಗುಂಪಿನಲ್ಲಿ ಹೊಂದಿಕೆಯಾಗುತ್ತದೋ, ಯಾರ ಸಹವಾಸದಲ್ಲಿ ತಮ್ಮ ಮನಸ್ಸಿಗೆ ನೆಮ್ಮದಿ ದೊರೆಯುತ್ತದೋ ಅಲ್ಲಿರಲು ಬಯಸುತ್ತಾರೆ. ಈ ಕಾರಣದಿಂದ ಮಾನವ ಜನಾಂಗವು ರಾಷ್ಟ್ರ ರಾಷ್ಟ್ರಗಳಾಗಿ ಭಿನ್ನ ಭಿನ್ನ ಗುಂಪುಗಳಾಗಿ ರೂಪುಗೊಂಡಿವೆ.

    ಈ ಜಗತ್ತನ್ನು ಸರ್ವ ರಾಷ್ಟ್ರಗಳ, ಸರ್ವ ಮಕ್ಕಳ ನಮ್ಮೆಲ್ಲರ ಮಹಾಮಾತೆಯ ಜಗನ್ಮಾತಾ ಮಂದಿರವೆಂದು ಭಾವಿಸಬೇಕು. ಆಗ ನಾವೆಲ್ಲ ವಿಶ್ವ ಕುಟುಂಬಕ್ಕೆ ಸೇರಿದ ಸಹೋದರ ಸಹೋದರಿಯರಾಗುವೆವು. ಕೂಡಿ ಬಾಳುವುದರಲ್ಲಿ ಆನಂದವಿದೆ ಎಂಬುದನ್ನು ಅರಿತು ಜೀವನ ಸಾಗಿಸಬೇಕು. ನಮ್ಮ ದ್ಯೇಯ ಸಾಧನೆಗೆ ಅತ್ಯಂತ ಅಗತ್ಯವಾದದ್ದು ಸರ್ವ ಜನಾದರಣೀಯವಾದ, ಸರ್ವ ಸಮ್ಮತವಾದ ಉತ್ತಮೋತ್ತಮ ಪ್ರಭಾವಿ ತತ್ವಜ್ಞಾನ. ಆನಂದಮಯ ವಿಶ್ವ ಕುಟುಂಬ ಸಂಸ್ಥಾಪನೆಯೇ ನಮ್ಮ ಪರಮ ಗುರಿಯಾಗಬೇಕು. ಎಲ್ಲರ ಸುಖ ದುಃಖಗಳಲ್ಲಿ ಭಾಗಿಯಾಗಲು ಸಿದ್ಧವಾಗಿದ್ದು ಒಂದು ಸುಸಂಸ್ಕೃತ ಸಹಬಾಳ್ವೆಯಲ್ಲಿ ಸಹಕರಿಸುವ ಸ್ವಭಾವವನ್ನು ಬೆಳೆಸಿಕೊಂಡು ಆಯಾ ರಾಷ್ಟ್ರದ ಉತ್ತಮ ಯೋಜನೆಗಳಲ್ಲಿ ಸಂಪೂರ್ಣ ಸಹಭಾಗಿಯಾಗುವಂತಹ ಮನೋಧರ್ಮ ನಮ್ಮಲ್ಲಿ ಕಂಡುಬಂದಾಗ ನಾವು ರಾಷ್ಟ್ರವಾಗಲು ಸಾಧ್ಯ.

    ಉತ್ತಮೋತ್ತಮ ಭಾವನೆಗಳು ಮನುಷ್ಯನನ್ನು ಲವಲವಿಕೆಯಿಂದಲೂ, ಉತ್ತಮ ಸಂಬಂಧಗಳಿಂದಲೂ, ಆನಂದೋತ್ಸಾಹಗಳಿಂದಲೂ ನಮ್ಮವರು ತಮ್ಮವರೆಂಬ ಆತ್ಮೀಯ ಭಾವನೆಗಳ ಮಧ್ಯೆ ಅವನ ಜೀವನವನ್ನು ಹೆಚ್ಚು ರಸಮಯ ಹಾಗೂ ಆನಂದಮಯವಾಗಲು ಕಾರಣವಾಗುತ್ತದೆ. ವಿಶ್ವದ ಹಲವಾರು ಮತ ಧರ್ಮಗಳನ್ನು ಅವಲೋಕಿಸಿದಾಗ ಸಮಾಜರೂಪೀ ಪರಮಾತ್ಮನ ಸೇವೆ ಮಾಡುವ ವಿಷಯದಲ್ಲಿ ಎಲ್ಲಾ ಮಹಾಪುರುಷರ ವಿಚಾರಗಳೂ ಒಂದೇ ಆಗಿರುವುದು ಕಂಡುಬರುತ್ತದೆ. ಇವುಗಳಲ್ಲಿ ಸಾಮರಸ್ಯ ಪೂರ್ಣ ಐಕ್ಯತೆ ಸಹಜವಾಗಿಯೇ ಕಂಡುಬರುತ್ತದೆ.

    ಸಾಗರಗಳಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಮಿಗೆ ಭಾರತವರ್ಷ ಎಂದು ಹೆಸರು. ಹಿಮಾಲಯಂ ಸಮಾರಭ್ಯ ಯಾವದಿಂದು ಸರೋವರಮ್| ತಂ ದೇವ ನಿರ್ಮಿತಂ ದೇಶಂ ಹಿಂದುಸ್ತಾನಂ ಪ್ರಚಕ್ಷತೇ| ಹಿಮಾಲಯದ ‘ಹಿ’ ಎಂಬ ಮೊದಲಕ್ಷರವೂ ‘ಇಂದು’ ದಕ್ಷಿಣ ಸಮುದ್ರದ ಹೆಸರಾದ ಇಂದು ಸರೋವರದ ಎರಡಕ್ಷರಗಳೂ ಜೋಡಿಸಲ್ಪಟ್ಟು(ಹಿ ಮತ್ತು ಇಂದು) ಹಿಂದು ಎಂದಾಗಿ ಇಡೀ ನಮ್ಮ ಮಾತೃಭೂಮಿ ಹಿಂದುಸ್ಥಾನ ಎಂಬ ಹೆಸರು ಈ ಭಾರತ ವರ್ಷಕ್ಕೆ ಬಂತೆಂದು ಉಲ್ಲೇಖಿಸಿದ್ದಾರೆ.

    ನಮ್ಮ ದೇಶದ ಆಮದು-ರಫ್ತು ನೀತಿಯು ಆಮದು ವ್ಯಾಪಾರ ಕನಿಷ್ಠ ಅವಶ್ಯಕತೆಗಳಿಗೆ ಸೀಮಿತಗೊಳಿಸಲ್ಪಟ್ಟು ಇಲ್ಲಿ ವಸ್ತುಗಳನ್ನು ಉತ್ಪಾದಿಸಿ ರಫ್ತು ಮಾಡುವುದಕ್ಕೆ ಉತ್ತೇಜನ ನೀಡುವಂತಿರಬೇಕು. ನಮ್ಮ ಶಿಕ್ಷಣ ನೀತಿಯು ಹೇಗಿರಬೇಕೆಂದರೆ ಈ ದೇಶದಲ್ಲಿ ಶಿಕ್ಷಣ ಪಡೆದ ಯಾವುದೇ ವ್ಯಕ್ತಿ ವಿಶ್ವದ ಯಾವುದೇ ಮೂಲೆಗೆ ಹೋದರೂ ಅವನು ಈ ದೇಶದ ಘನತೆಯನ್ನು ಹೆಚ್ಚಿಸುವಂತಹ ಗೌರವಾರ್ಹ ವ್ಯಕ್ತಿಯಾಗಿ ಬಾಳಬೇಕು. 'ವಿದ್ವಾನ್ ಸರ್ವತ್ರ ಪೂಜ್ಯತೇ', ಎಂಬ ಮಾತು ಕೃತಿಗೆ ಇಳಿಯುವಂತಾಗಬೇಕು. ನಮ್ಮ ಆರೋಗ್ಯ ನೀತಿಯು ದೇಶದ ಪ್ರತಿ ಪ್ರಜೆಯೂ ವಜ್ರ ಶರೀರಿಯೂ, ನೀತಿವಂತನೂ ಆರೋಗ್ಯವಂತನೂ ಸಾಹಸಿಯೂ ಆಗಲಿ ಎಂಬ ಗುರಿ ಹೊಂದಿದ್ದು ಅವುಗಳಿಗೆ ಪೂರಕವಾದ ಆರೋಗ್ಯ ಕೇಂದ್ರಗಳನ್ನು ನಮ್ಮ ದೇಶ ಹೊಂದಬೇಕು.

    ನಮ್ಮ ಮಹಿಳಾ ನೀತಿಯು ಮಿಸ್ ಕ್ವೀನ್, ಮಿಸ್ ವರ್ಲ್ಡ್ಗಳನ್ನು ತಯಾರು ಮಾಡುವುದರ ಬದಲಾಗಿ ವೀರ ಪುತ್ರರಂತೆಯೇ ವೀರ ಪುತ್ರಿಯರು ತಯಾರಿಯಾಗುವತ್ತ ಕೇಂದ್ರೀಕೃತವಾಗಬೇಕು. ಯಾವ್ಯಾವ ಕ್ಷೇತ್ರಗಳಲ್ಲಿ ಸಾಧ್ಯವೋ ಆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರೂ ಸಕ್ರಿಯವಾಗುವಂತಿರಬೇಕು. ನಮ್ಮ ರಕ್ಷಣಾ ನೀತಿಯು ದೇಶರಕ್ಷಣೆಗೆ ಪೂರಕವಾಗಿ ಸೇನೆಯ ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾಗಿದ್ದು ಚತುರಂಗ ಸೇನೆಯಲ್ಲಿ ಯಾವುದರಲ್ಲೂ ಕಡಿಮೆಯಿರಬಾರದು. ನಮ್ಮ ರಣನೀತಿಯು ಸಾಮ, ದಾನ, ಭೇದ, ದಂಡ, ಎಂಬ ಚತುರೋಪಾಯಗಳಲ್ಲಿ ಪಾರಂಗತವಾಗಿದ್ದು ನಿಗ್ರಹಾನುಗ್ರಹ ಶಕ್ತಿಯನ್ನೂ ಅದರ ಆಳವನ್ನೂ ಅರಿತಿರಬೇಕು.

    ಹೀಗೆ ದೇಶದ ನೀತಿಗಳು ವಿಶ್ವ ಕಲ್ಯಾಣಕ್ಕೆ ಪೂರಕವಾಗಿರಬೇಕೆಂಬುದನ್ನು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. ‘ಆಚಾರಃ ಪ್ರಥಮೋ ಧರ್ಮಃ’ ಎಂಬಂತೆ ನಾವು ಸ್ವತಃ ಆಚರಿಸಿ ಇನ್ನೊಬ್ಬರಿಗೆ ಮಾದರಿಯಾಗುವ ಮೂಲಕ ವಿಶ್ವ ಶಾಂತಿಗೆ ಕಾರಣವಾಗಬೇಕೆಂಬ ಆಶಯ ಲೇಖಕರದ್ದು. ವಿಶ್ವಕ್ಕೆ ಶುಭವಾಗಲೀ ಮಂಗಳವಾಗಲೀ ಎನ್ನುವ ಲೇಖಕರ ಆಶಯ ಎಲ್ಲರಲ್ಲೂ ಉಂಟಾಗಿ ವಿಶ್ವಕಲ್ಯಾಣ, ತನ್ಮೂಲಕ ಮಾನವ ಜನಾಂಗದ ಕಲ್ಯಾಣವಾಗಲೆಂದು ಹಾರೈಸೋಣ.

    ಡಾ. ಹೆಚ್.ಆರ್.ನಾಗೇಂದ್ರ M.E., Ph.D., ಅಧ್ಯಕ್ಷರು, ವಿವೇಕಾನಂದ ಯೋಗ ಕೇಂದ್ರ,

    Deemed University's

    (S. Vysa Movement) first Vice-chancellor

    ೨. ಹೊನ್ನುಡಿ

    ನಾನು ಎನ್ನುವುದಕ್ಕಿಂತ ನಾವು ಎನ್ನುವುದರಲ್ಲಿ ರುಚಿ ಇದೆ ಎಂಬ ಸಂದೇಶ ನೀಡುವ ಶ್ರೀ ಶೇಷಗಿರಿರಾಯರ ಈ ಕೃತಿ ಕನ್ನಡ ಓದುಗರ ಸುಕೃತಿ, 'ವಿಶ್ವಂ ಶುಭಂ ಮಂಗಳಂ' ಎನ್ನುವ ಶೀರ್ಷಿಕೆಯಲ್ಲೇ ಲೇಖಕರ ಆಶಯವೂ ವ್ಯಕ್ತವಾಗಿದೆ. 'ನಾಲಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದಾಗುತ್ತದೆ ಎಂಬಲ್ಲಿ ಮಾತು ಮುತ್ತಿನಂತಿರಬೇಕು, ಜೋಡಿಸಬೇಕೇ ಹೊರತು ಕಡಿಯಬಾರದು ಎಂಬ ಸಂದೇಶವನ್ನು ಶ್ರೀಯುತರು ನೀಡಿದ್ದಾರೆ. ದಾದಾ ವಾಸ್ವಾನಿಯವರ, ಗಾಂಧೀಜಿಯವರ, ಆನೆಯ, ದ್ರೌಪದಿಯ, ಬದುಕಿನ, ಅನುಭವ, ನೀತಿಮಾತುಗಳಿಂದ, ದೃಷ್ಟಾಂತಗಳಿಂದ ಅಪೂರ್ವ ಚಿಂತನೆಯ ಲಹರಿಗಳನ್ನು ಈ ಕಣಜದಲ್ಲಿ ಲೇಖಕರು ತುಂಬಿಟ್ಟಿದ್ದಾರೆ. ದೇಶದ ಎಲ್ಲ ಪ್ರಜೆಗಳಿಗೂ ಹೊಟ್ಟೆ ತುಂಬ ಎರಡು ಹೊತ್ತು ಊಟ, ವಾಸಕ್ಕೆ ಮನೆ, ಉಡಲು ಬಟ್ಟೆ, ಔಷಧೋಪಚಾರ ಹಾಗೂ ಶಿಕ್ಷಣ. ಕನಿಷ್ಠ ಇಷ್ಟನ್ನು ನೀಡಲು ಸಾಮರ್ಥ್ಯವನ್ನು ನಾವು ಮೊದಲು ಸಂಪಾದಿಸಬೇಕು ಎನ್ನುವ ಲೇಖಕರ ಕಳಕಳಿಯನ್ನು ನಮ್ಮ ದೇಶದ ಎಲ್ಲ ರಾಜಕಾರಣಿಗಳು, ಅಧಿಕಾರಿವರ್ಗ ಹಾಗೂ ಸಮಾಜ ಸೇವಾ ಬಂಧುಗಳು ಅರ್ಥಮಾಡಿಕೊಂಡರೆ ಅಂದೇ ದೇಶಕ್ಕೆ ಮಹಾ ಸುದಿನ. ಇಂದು ಸಿಂಧೂನದಿ ಪಾಕೀಸ್ಥಾನ ಆಕ್ರಮಿತ ಪ್ರದೇಶದಲ್ಲಿ ಇದ್ದರೂ ಅದು ಇಂದಿಗೂ ನಮ್ಮ ಪವಿತ್ರ ನದಿಯೇ, ನಮ್ಮ ಶ್ರದ್ಧಾ ಭಾವನೆಗಳು ಅಳಿಸಿಲ್ಲ ಎಂಬಲ್ಲಿ ಭಾರತೀಯರ ವಿಶಾಲ ಹೃದಯವನ್ನು ಲೇಖಕರು ತೆರೆದಿರಿಸುತ್ತಾರೆ.

    ನುಡಿದಂತೆ ನಡೆಯುವಂತಹ ಆಚರಣೆ ನಮ್ಮದಾಗಬೇಕು ಎನ್ನುವ ಲೇಖಕರು ಭಾರತ ದೇಶದ ಶ್ರೇಷ್ಠತೆಯನ್ನು ಎತ್ತಿ ಹಿಡಿದು ಹೆತ್ತತಾಯಿ ಮತ್ತು ಹುಟ್ಟಿದ ನೆಲ ಸ್ವರ್ಗಕ್ಕಿಂತಲೂ ಪವಿತ್ರವಾದುದು ಎ೦ದು ಸಾರುತ್ತಾರೆ. ಎ೦ಭತ್ಮೂರರ ಇಳಿವಯಸ್ಸಿನಲ್ಲಿಯೂ ಹದಿನೆಂಟರ ಲವಲವಿಕೆಯಿಂದ, ನನ್ನ ದೇಶ, ಹಾಗೂ ಸರ್ವಜನರೂ ಸುಖವಾಗಿರಲಿ, ಇಡೀ ವಿಶ್ವವೇ ಒಂದು ಕುಟುಂಬದಂತಿರಲಿ ಎಂಬ ಸದ್ಭಾವನೆಯ ಸೇವಾಕೈಂಕರ್ಯದ ಲೇಖಕರು ಸಮಾಜದಿಂದ ಪಡೆದದ್ದಕಿಂತಲೂ ಸಮಾಜಕ್ಕೆ ನೀಡಿದ್ದೇ ಹೆಚ್ಚು. ಆದರ್ಶ ಸಮಾಜದ ಪರಿಕಲ್ಪನೆಯೇ ಕಡಿಮೆಯಾಗುತ್ತಿರುವ, ವಿಶ್ವಕುಟುಂಬದ ಕನಸು ಕಾಣುವ ಜನರೇ ವಿರಳವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಲೇಖಕರು ಆದರ್ಶ ಹಾಗೂ ನಿಷ್ಠೆಗಳ ಅದ್ಭುತ ಸಹಸ್ಪಂದನವಾಗಿದ್ದಾರೆ. ಈ ಇಳಿವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಾಗಿರುವ ಲೇಖಕರ ಕಾಳಜಿ, ನಿಸ್ಪೃಹತೆ, ಸಮಾಜಮುಖೀ ಚಿಂತನ ಅನ್ಯಾದೃಶವಾದುದು.

    ಅದ್ಭುತವಾದ ಸಾಧನೆಗಳ ಹಿಂದೆ ಅಷ್ಟೇ ಮಹತ್ವವೆನಿಸುವ ಚಿಂತನೆ ಇರುತ್ತದೆ. ಚಿಂತನೆಗಳಿಂದಲೇ ಸಾಧನೆ. ಅಮೆರಿಕಾ ದೇಶ ಕೇವಲ ಎರಡೂವರೆ ಶತಮಾನಗಳಲ್ಲಿ ಜಗತ್ತಿನ ಸಾರ್ವಭೌಮ ರಾಷ್ಟ್ರದೆತ್ತರ ಬೆಳೆದಿದ್ದರೆ ಅದರ ಹಿಂದೆ ಅನೇಕರ ಚಿಂತನೆಗಳಿವೆ. ಹೆನ್ರಿಕ್ಲೇ ಎಂಬ ವ್ಯಕ್ತಿಶತಮಾನದ ಹಿಂದೆಯೇ ಅಮೆರಿಕಾದ ಐವತ್ತು ವರ್ಷಗಳ ಭವಿತವ್ಯದ ರೂಪಕಲ್ಪನೆಯನ್ನು ಬರಹದಲ್ಲಿ ನೀಡಿದ್ದ. ಅಂತಹ ಅನೇಕ ಚಿಂತನಗಳೇ ಮುಂದೆ ಕೃತಿಯಾಗಿ ಲಕ್ಷಾಂತರ ಜನರ ಬದುಕಿನ ಶೃತಿಯಾದವು. ನಮ್ಮದೇಶದ ಆಮದು-ರಫ್ತು ನೀತಿ ಹೇಗಿರಬೇಕು, ಆಯವ್ಯಯ ನೀತಿ ಹೇಗಿರಬೇಕು, ಶಿಕ್ಷಣ ನೀತಿ ಹೇಗಿರಬೇಕು, ಆರೋಗ್ಯ ನೀತಿ ಹೇಗಿರಬೇಕು, ಮಹಿಳಾ ನೀತಿ, ರಣನೀತಿ ಹೀಗೆ ಹತ್ತು ಹಲವು ಆಯಾಮಗಳಲ್ಲಿ ನಮ್ಮ ದೇಶ ಹೇಗೆ ಪುನರುತ್ತಾನದತ್ತ ಹೆಜ್ಜೆ ಹಾಕಬೇಕೆನ್ನುವ ಕೆಲವು ಅತ್ಯುಪಯುಕ್ತ ಸಲಹಾ ಚಿಂತನಗಳು ಈ ಪುಸ್ತಕದಲ್ಲಿವೆ. ಎಲ್ಲ ಕಡೆಯಿಂದಲೂ ಬೆಳಕು ಮುಕ್ತವಾಗಿ ಬರಲಿ ಎಂಬ ವೇದವಾಣಿ ನಮ್ಮದು. 'ಲೋಕಾ ಸಮಸ್ತಾಃ ಸುಖಿನೋ ಭವಂತು' ಎಂಬ ಆರ್ಷವಾಣಿ ನಮ್ಮದು, 'ವಸುದೈವ ಕುಟುಂಬಕಂ' ಎಂಬ ಆರ್ಯೊಕ್ತಿ ನಮ್ಮದು, ಈ ನಿಟ್ಟಿನಲ್ಲಿ ಇಡೀ ವಿಶ್ವಕ್ಕೇ ಶುಭವಾಗಲಿ, ಮಂಗಳವಾಗಲಿ ಎನ್ನುವ ಲೇಖಕರ ಮಹತ್ವಾಕಾಂಕ್ಷೆಯೂ ಮುಂದಿನ ಪೀಳಿಗೆಯ ಜನಕ್ಕೆ ಆದರ್ಶ ಹಾಗೂ ದಾರಿದೀಪವಾಗುತ್ತದೆ. ನಮ್ಮ ಸಮಾಜಕ್ಕೆ ಇಂದು ಯೋಗ್ಯ ಮಾರ್ಗದರ್ಶನ ನೀಡುವ ಸಹೃದಯರು ಬೇಕಾಗಿದ್ದಾರೆ. ಭಾರತೀಯತೆಯನ್ನು ಕಾಯ್ದುಕೊಂಡು ವಿಶ್ವಕಲ್ಯಾಣವನ್ನು ಸಾಧಿಸುವುದು ಅಗತ್ಯ ಹಾಗೂ ಸಾಧ್ಯವೆಂದು ಈ ಪುಸ್ತಕದಲ್ಲಿ ಲೇಖಕರು ವಿಶೇಷ ರೀತಿಯಿಂದ ಪ್ರತಿಪಾದನೆ ಮಾಡಿದ್ದಾರೆ. ಸ್ವಧರ್ಮ ನಿಷ್ಠೆಯೊಡನೆ ಪರಧರ್ಮ ಸಹಿಷ್ಣುತೆ, ಬಡಜನರತ್ತ ಸೋದರಭಾವ, ಪ್ರಚಂಡ ಆತ್ಮವಿಶ್ವಾಸದ ಮಂತ್ರ ಹಾಗೂ ಅಲ್ಲಿ ಹಿರಿಯ ಚೇತನಗಳ ಜೀವನಾನುಭವದ ಒಳಕಾಳುಗಳ ಹೊರ ಅಭಿವ್ಯಕ್ತಿ ಇವುಗಳಿಂದಾಗಿ ಈ ಕೃತಿ ಅತ್ಯಂತ ಉಪಯುಕ್ತವೆನಿಸುತ್ತದೆ. ಶ್ರೀ ಶೇಷಗಿರಿರಾಯರಿಗೆ ಪರಮಾತ್ಮ ಆಯುರಾರೋಗ್ಯ ಭಾಗ್ಯ

    Enjoying the preview?
    Page 1 of 1