Discover millions of ebooks, audiobooks, and so much more with a free trial

Only $11.99/month after trial. Cancel anytime.

Bottom Item
Bottom Item
Bottom Item
Ebook496 pages3 hours

Bottom Item

Rating: 5 out of 5 stars

5/5

()

Read preview

About this ebook

ನಾವು ಚಿಕ್ಕವರಿರುತ್ತೇವೆ. ಕ್ಷುದ್ರತನವಿರುತ್ತದೆ. ನಮಗೇ ಗೊತ್ತಾಗುವಂಥ ಸಣ್ಣತನಗಳಿರುತ್ತವೆ. ನಮ್ಮ ಬಲಹೀನತೆಗಳು ಭಯ ಹುಟ್ಟಿಸುವಂಥವಾಗಿರುತ್ತವೆ. ನಮ್ಮ ಸಮಸ್ಯೆಗಳು ದುರ್ಭರವೆನಿಸುತ್ತಿರುತ್ತವೆ. ಅವುಗಳನ್ನು ಹೇಗೆ handle ಮಾಡಬೇಕೋ ಅರ್ಥವಾಗದೆ ಕಂಗಾಲಾಗುತ್ತಿರುತ್ತೇವೆ. ಎಲ್ಲೋ ಒಂದು ಪ್ರಜ್ಞಾವಂತ ಸಲಹೆ ಸಿಕ್ಕೀತಾ ಅಂತ ತಡಕಾಡುತ್ತಿರುತ್ತೇವೆ.ಹಾಗೆ ತಡಕಾಡುತ್ತಿದ್ದಾಗ ನನಗೆ ಸಿಕ್ಕಿದ್ದೇ ಈ -ಬಾಟಮ್ ಐಟಮ್.
LanguageKannada
Release dateApr 2, 2021
ISBN6580239606404
Bottom Item

Read more from Ravi Belagere

Related to Bottom Item

Related ebooks

Reviews for Bottom Item

Rating: 5 out of 5 stars
5/5

1 rating0 reviews

What did you think?

Tap to rate

Review must be at least 10 words

    Book preview

    Bottom Item - Ravi Belagere

    http://www.pustaka.co.in

    ಬಾಟಮ್ ಐಟಮ್

    Bottom Item

    Author:

    ರವಿ ಬೆಳಗೆರೆ

    Ravi Belagere

    For more books

    https://www.pustaka.co.in/home/author/ravi-belagere

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕಟ್ಟಕಡೆಯ ದಿನವೂ ತಿದ್ದಿಕೊಳ್ಳಲು ಅವಕಾಶ ನೀಡುವ ಈ ವಿಲಕ್ಷಣ ಬದುಕಿಗೆ ಮತ್ತು ಅದರ ಬೆರಗಿಗೆ ಈ ಪುಸ್ತಕ ಅರ್ಪಿತ

    ರವಿ ಬೆಳಗೆರೆ

    ಪರಿವಿಡಿ

    1. ಅದೆಷ್ಟು ಜನರ ಶ್ರದ್ಧೆ ಸೆಳೆದಿಟ್ಟುಕೊಂಡ ಮಾಯಾವಿಯಲ್ಲವೆ?

    2. ಇಬ್ಬರು ಹೆಂಡಿರ ಪರಶಿವನಿದ್ದ ಹಾಗೆಯೇ ಐವರು ಗಂಡಂದಿರ ಪಾಂಚಾಲಿಯಿದ್ದಾಳೆ!

    3. ಒಬ್ಬಂಟಿ ಹೆಂಗಸರು ಏನು ಮಾಡುತ್ತಿರುತ್ತಾರೆ?

    4. ನನಗಿಂತ ಯಡವಟ್ಟನಿಲ್ಲ ಅಂದುಕೊಂಡಿದ್ದೆ...

    5. ಅವಳನ್ನು ಬಿಗಿದಪ್ಪಿ ಯು ಆರ್ ಮೈ ವೈಫ್ ಅಂದು ಬಿಡಬಲ್ಲ, ಆದರೆ...

    6. ತೆರೆದ ಬಾಗಿಲ ಹಿಂದೆ ಕುಳಿತವನು ಅದೆಂಥ ರಾಮ?

    7. ಅದೆಲ್ಲ ಮಾಡಿ ನೋಡಿದ ಮೇಲೆ ಈ ಮಧ್ಯೆ ಮೂಡು ಕೆಟ್ಟಿಲ್ಲ!

    8. ಒಬ್ಬ ತಾಯಿಗೆ ಮಗನಾಗಲಿಕ್ಕೆ ವಯಸ್ಸಿನ ಹರಕತ್ತು ಯಾಕೆ ಬೇಕು?

    9. ಬದುಕೆಂಬ ಜಾರಿಣಿಯನ್ನು ಮನೆಯ ಜಗುಲಿಯ ಮುಂದೆ ನಿಲ್ಲಿಸಿಕೊಂಡು!

    10. ಪಕ್ಕದ ಮನೆಯ ಹುಡುಗಿಯ ಹೃದಯದೊಳಕ್ಕೆ ಇಣುಕಿದಂತೆ!

    11. ಅವನ್ನೆಲ್ಲ ಕೇವಲ ಘಟನೆಗಳು ಅಂದುಕೊಂಡು ಬಿಟ್ಟರಾಯ್ತು!

    12. ಗೆಳೆತನಕ್ಕೇಕೆ ಆಣೆ ಪ್ರಮಾಣಗಳ ಪ್ರಾಮಿಸರಿ ನೋಟು?

    13. ಗೌರವದ ಮೊದಲ ಇನ್‍ಸ್ಟಾಲ್‍ಮೆಂಟಾಗಿ ಕಾಫಿ ಕೊಟ್ಟೆ

    14. ವಹೀದಾ ರೆಹಮಾನ್ ಬಂಗಲೆಯಲ್ಲಿ ಸ್ವಲ್ಪ ಹೊತ್ತು...

    15. ಆಗ ಬದಲಾದಳು ನೋಡಿ, ಥೇಟು ಹೆಂಗಸರಂತೆ!

    16. ಅವಳಿಗೋಸ್ಕರ ಕೆಂಡದ ಮಳೆಗೆ ನೇರಾನೇರ ತಲೆಯೊಡ್ಡಿದವರು!

    17. ಮಹಾಬುದ್ಧಿವಂತ ಗೆಳತಿ ನೇಮಿಚಂದ್ರ ಮತ್ತು ಬರೆಯುವವನ ಮನೆಯ ಬಾಗಿಲ ಕೆಮೆರಾ

    18. ಆತನ ಸೂರ್ಯೋದಯಕ್ಕಾಗಿ ರಾತ್ರಿಯಿಡೀ ದುಡಿದದ್ದು ಅರ್ಥಪೂರ್ಣ!

    19. ಇವತ್ತು ರಾತ್ರಿ ಸೆಳವಿನಾಳಕ್ಕೆ ಕರೆದೊಯ್ಯುತ್ತಾಳೆ ಕಲ್ಪಾ

    20. ಭೂಕಂಪನದ ನಾಡೊಂದನ್ನು ನೋಡಿ ಬರುವುದು ಬಾಕಿಯುಳಿದಿತ್ತು!

    21. ಅಂಥ ತಂದೆಯ ಮಕ್ಕಳ ಹೆಣ ನಾನು ಹೊರಬೇಕು!

    22. ಎದಿರಾದಾಗೊಮ್ಮೆ ನಿದ್ದೇಲಿದ್ದೀರಾ ಅಂತ ಕೇಳಿ ಪ್ರಾಣ ತಿನ್ನಬೇಡಿ!

    23. ಅಲ್ಲಿಗೆ ಹೋದಾಗೊಮ್ಮೆ ಅವನು ನೆನಪಾಗುತ್ತಾನೆ!

    24. ಇಪ್ಪತ್ತು ನಿಮಿಷ ತೆಪ್ಪಗಿರುವ ಹಟ ಪ್ರಯೋಗವಂತೆ!

    25. ಮನಸ್ಸು ಒಂದೊಂದು ಬಾರಿ ಛೇಂಜು ಕೇಳುತ್ತೆ; ಅಷ್ಟೇ!

    26. ಹೊಸ ಸಂಗೀತದೊಂದಿಗೆ ಬಂದು ನಿಂತಳು ಸುಮತಿ!

    27. ಇಷ್ಟಕ್ಕೂ ಅವಳೇಕೆ ಮೊದಲ ಮಿಲನದ ನಂತರ ಅಳುತ್ತಾಳೆ?

    28. ಇದರ ಬದಲು ಅವುಗಳನ್ನೆಲ್ಲ ಬಳಸಬಹುದು ಅಂತ ಗೊತ್ತಿರಲಿಲ್ಲ!

    29. ಪ್ರತಿನಿತ್ಯ ಗಾಯತ್ರಿ ಮಂತ್ರ ಹೇಳಿಕೊಂಡರೆ ಏನಾಗುತ್ತೆ ಗೊತ್ತಾ?

    30. ಎಷ್ಟು ಚಿಕ್ಕ ಸಮಯದಲ್ಲಿ ಎಂಥ ದೊಡ್ಡ ಟೆಸ್ಟು ಬರೆಯಬೇಕಲ್ಲ?

    31. ಹುಲಿ ಬಣ್ಣದ ಚೆಡ್ಡಿಯೂ: ಗಿಫ್ಟ್ ಚೆಕ್ ಎಂಬ ಪೀಡೆಯೂ!

    32. ಕೆಟ್ಟ ಹೆಂಗಸು ಅಂದರೆ ಕೇವಲ ಬಲಹೀನ ಹೆಂಗಸಂತೆ!

    33. ಸುಭಾಷ್‍ಚಂದ್ರ ಬೋಸ್ ಎಂಬ ಚಿಕ್ಕಪ್ಪನನ್ನು ನೋಡಿದ್ದು ಅವತ್ತೇ ಕೊನೆ!

    34. ನಾನು ಪ್ರೀತಿಸಿದ ಹುಡುಗಿಯರಿಗೆ ಸದಾ ಹದಿನೆಂಟು ವರ್ಷ

    35. ಆ ಭೇಟಿಗಿದ್ದುದು ಅಷ್ಟೇ ಆಯುಸ್ಸು ಕಣೋ!

    36. ಬೇಂದ್ರೆ ತಾಕತ್ತು ಎಂಥದಿತ್ತು: ನಮಗೇಕದು ಅರ್ಥವಾಗದೆ ಹೋಗಿತ್ತು?

    37. ಕೊಟ್ಟ ಮಾತು ತಪ್ಪಿಸಿಕೊಳ್ಳಲು ದುಃಖವೇನು ಸುಖವಾ?

    38. ಓದಕ್ಕಾಗಲ್ಲ, ಬರಿಯಕ್ಕಾಗಲ್ಲ, ನಂಗೆ ಕಾನ್ಸಂಟ್ರೇಶನ್ನೇ ಇಲ್ಲ; ಏಕೆಂದರೆ...

    39. ಎಲ್ಲ ರೈಲುಗಳಿಗೂ ಒಂದು ಅಂತಿಮ ನಿಲ್ದಾಣವಿರುತ್ತದೆ!

    40. ಇಬ್ಬರು ಗುಲಾಮರು ಹೇಗೆ ಸಂತೋಷವಾಗಿರಲು ಸಾಧ್ಯ?

    41. ತೆರೆದೇನೆಂದರೆ ಒಂಟಿತನದ ಹುತ್ತಕ್ಕೆ ಕಿಟಕಿಗಳೇ ಇಲ್ಲ?

    42. ನೀನಿದ್ದರೇನು ಹತ್ತಿರ? ಎಷ್ಟೊಂದು ನಡುವೆ ಅಂತರ!

    43. ಈತ ನನಗೇ ಏಕೆ ಗಂಟು ಬಿದ್ದ?

    44. ಪ್ರೇಮವೆಂಬುದು ನೈತಿಕವೋ ಅನೈತಿಕವೋ: ಉತ್ತರ ಸಿಗಬೇಕೆಂಬ ಹಟವಾದರೂ ಯಾಕೆ?

    45. ಲೆಟ್ ಅಸ್ ಫೇಸ್ ದಿ ಕಷ್ಟ!

    46. ನಾನಾಗಲೇ ಅದನ್ನು ಗುರುತಿಸಿಯಾಗಿದೆ!

    47. ಆ ಹೆಣ್ಣು ಮಗಳಿಗೊಂದು ನಂಬುಗಸ್ಥ ಕಿವಿ ಬೇಕು ಅಷ್ಟೆ!

    48. ಗಾಸಿಪ್ಪು ನಮ್ಮನ್ನು ಎಚ್ಚರಿಸುತ್ತದೆ: ನಾವು ಎಚ್ಚೆತ್ತುಕೊಳ್ಳಬೇಕು!

    49. ಕಷ್ಟ ಬಹುಕಾಲ ಉಳಿಯಲ್ಲ, ಕಷ್ಟ ಜೀವಿ ಉಳಿಯುತ್ತಾನೆ

    50. ಯಾವನ ಮನದ ಮೂಲೆಯ ಒಲೆಯ ಮೇಲೆ ಯಾವ ಪಕ್ವಾನ್ನ ಬೇಯುತ್ತಿರುತ್ತದೋ?

    51. ಮೊದಲ ಸಲದ ಪರ್ಫಾರ್ಮೆನ್ಸು ನೆನೆಸಿಕೊಂಡು!

    52. ಎಲ್ಲಿದ್ದಾನವನು, ತುಮೀ ಹೋ ಬಂಧು, ಸಖಾ ತುಮೀ ಹೋ

    53. ಅದನ್ನು ಎಲ್ಲಿಟ್ಟಿರಬೇಕೋ ಅಲ್ಲಿಡಿ!

    54. ಏಕೆಂದರೆ, ಅವನು ಪ್ರತಿ ಹೆಣ್ಣನ್ನೂ ಕೇವಲ ಗಂಡಸಾಗಿ ನೋಡುತ್ತಾನೆ!

    55. ನಾವೇ ಗೀಚಿಕೊಂಡ ನಾಲ್ಕು ಗೆರೆಗಳ ನಡುವಿನ ಜಾಗವೇ ಅಲ್ಲವೇ ಮನೆ?

    56. ಮನ ಮುರಿಯುವುದಕ್ಕೂ ಒಂದು ಮೆಥೆಡ್ ಉಂಟು!

    57. ನಮ್ಮ ಎಲ್ಲ 'ಇಲ್ಲ'ಗಳ ಮಧ್ಯೆ ನಾವಿರುತ್ತೇವಲ್ಲವೆ?

    58. ತುತ್ತು ನಿಮ್ಮ ಕೈಯಲ್ಲೇ ಇರಬಹುದು; ಆದರೆ ಮಗುವಿಗೆ ಹಸಿವೇ ಆಗದಿರಬಹುದು!

    59. ಅಸಲು ಕ್ಯಾಲ್ಕುಲೇಟರ್ರೇ ಬಿಸಾಡಿ ಬಂದವರ ನಡುವೆ ನಾನೂ ಒಬ್ಬ

    60. ಖಚಿತವಾಗುವ ಮುನ್ನ ಖಾಯಿಲೆ ಬೀಳುವುದ್ಯಾಕೆ?

    61. ಚರ್ಚೆಗೆ ಒಲಿಸಿಕೊಂಡ ಗೆಳತಿಯ ಘಮವಿರುತ್ತದೆ!

    62. 'ಏನಂದ್ಕಂಡಿದೀಯ ನನ್ನನ್ನ' ಅಂತ ಯಾರನ್ನೂ ಕೇಳಬೇಡಿ!

    63. ಬೀಸು ಗಾಳಿಗೆ ಮೈಯೊಡ್ಡಲಾಗದವನು ಚಂಡ ಮಾರುತದ ಬೆನ್ನತ್ತಲಾರ!

    64. ಎಲ್ಲ ಯಶಸ್ವಿಗಳೂ ಜೀನಿಯಸ್ಸುಗಳೇನಲ್ಲ!

    ನಾನು ಬರೆದದ್ದು ನಿಮಗೆ ಇಷ್ಟವಾದರೆ...

    ಅಂಥ ಪುಸ್ತಕಗಳು ನಿಮಗೆ ತುಂಬ ಸಿಗುತ್ತವೆ. ದಿಢೀರನೆ ದುಡ್ಡು ಮಾಡುವುದು ಹೇಗೆ? ಇವತ್ತಿಂದಿವತ್ತೇ ಕೋಟ್ಯಧೀಶನಾಗುವುದು ಹೇಗೆ? ನಿಮ್ಮನ್ನು ನೀವು ಅರಿಯಿರಿ! ಯಶಸ್ಸಿನ ಶಿಖರ ತಲುಪಲು ಮೂರೇ ಗೇಣು-ಮುಂತಾದವು. ಇಂಗ್ಲಿಷಿನಲ್ಲಿ ನೀವು ಪುಸ್ತಕ ಬರೆಯುವವರ, ಯಶಸ್ಸಿನತ್ತ ಕರೆದೊಯ್ಯುತ್ತೇವೆನ್ನುವವರ, ಅದಕ್ಕಾಗಿ ಹದಿನೈದು ದಿನಗಳ ಕೋರ್ಸು ಕಂಡಕ್ಟು ಮಾಡುವವರ-ಒಂದು ಪಡೆಯೇ ಇದೆ. ಆ ಪೈಕಿ ಒಬ್ಬರು ಬರೆದ ಪುಸ್ತಕ ತರಿಸಿ ಓದಿಬಿಡಿ. ಎರಡನೇ ಪುಸ್ತಕ ಓದಬೇಕು ಅಂತ ನಿಮಗೆ ಅನ್ನಿಸುವುದಿಲ್ಲ. ಎಲ್ಲ ಪುಸ್ತಕಗಳೂ ಒಂದೇ ಸೂತ್ರ ಬಳಸಿ ಬರೆಯಲಾಗಿರುತ್ತವೆ. ಒಂದೇ ತೆರನಾದ ಅಧ್ಯಾಯ ವಿಂಗಡಣೆ, ಒಂದೇ ಶೈಲಿಯ ಅಪ್ಪಣೆಯಂತಹ ವಾಕ್ಯಗಳು ಮತ್ತು ಯಾರ್ಯಾರವೋ ಬರಹಗಳಿಂದ ಆಯ್ದ ಕೊಟೇಷನ್ನುಗಳು. ಈ ಪುಸ್ತಕಗಳು ಚೆನ್ನಾಗಿರುವುದಿಲ್ಲವೆಂದಲ್ಲ. ಕೆಲವು ನಿಜಕ್ಕೂ ಚೆನ್ನಾಗಿವೆ. ಆದರೆ ಅವು ಕೇವಲ ಓದಿಕೊಳ್ಳಲು ಚೆನ್ನಾಗಿರುತ್ತವೆ. ಥಾಮಸ್ ಆಲ್ವ ಎಡಿಸನ್ ತನ್ನ ಅನೇಕ ವರ್ಷಗಳ ಶ್ರಮದ ಫಲವಾಗಿದ್ದ ಲ್ಯಾಬೊರೇಟರಿ ಸುಟ್ಟು ಹೋದದ್ದನ್ನು ಕಂಡು ಹೋಗಲಿ ಬಿಡು, ನಮ್ಮ ತಪ್ಪುಗಳೆಲ್ಲ ಸುಟ್ಟು ಹೋದವು. ನಾಳೆಯಿಂದ ಹೊಸ ಲ್ಯಾಬು ಕಟ್ಟಿಕೊಂಡು, ಹೊಸ ತಪ್ಪುಗಳನ್ನು ಮಾಡುತ್ತ ಹೊಸ ಅನ್ವೇಷಣೆಯತ್ತ ಸಾಗೋಣ ಅಂದನಂತೆ ಎಂಬುದನ್ನು ಓದಿದಾಗ ಆ ಕ್ಷಣದ ಮಟ್ಟಿಗೆ ಥ್ರಿಲ್ ಆಗಬಹುದು. ಆದರೆ, ಬದುಕು ಅಷ್ಟು ಸಲೀಸಾಗಿ ನಮ್ಮ ನಿಮ್ಮಂಥವರ ಬಾಯಿಂದ ಅಂಥ ಉದಾರವಾದ ಮಾತುಗಳನ್ನು ಆಡಿಸಲು ಬಿಡುವುದಿಲ್ಲ. ನಾವು ಚಿಕ್ಕವರಿರುತ್ತೇವೆ. ಕ್ಷುದ್ರತನವಿರುತ್ತದೆ. ನಮಗೇ ಗೊತ್ತಾಗುವಂಥ ಸಣ್ಣತನಗಳಿರುತ್ತವೆ. ನಮ್ಮ ಬಲಹೀನತೆಗಳು ಭಯ ಹುಟ್ಟಿಸುವಂಥವಾಗಿರುತ್ತವೆ. ನಮ್ಮ ಸಮಸ್ಯೆಗಳು ದುರ್ಭರವೆನಿಸುತ್ತಿರುತ್ತವೆ. ಅವುಗಳನ್ನು ಹೇಗೆ handle ಮಾಡಬೇಕೋ ಅರ್ಥವಾಗದೆ ಕಂಗಾಲಾಗುತ್ತಿರುತ್ತೇವೆ. ಎಲ್ಲೋ ಒಂದು ಪ್ರಜ್ಞಾವಂತ ಸಲಹೆ ಸಿಕ್ಕೀತಾ ಅಂತ ತಡಕಾಡುತ್ತಿರುತ್ತೇವೆ.

    ಹಾಗೆ ತಡಕಾಡುತ್ತಿದ್ದಾಗ ನನಗೆ ಸಿಕ್ಕಿದ್ದೇ ಈ -ಬಾಟಮ್ ಐಟಮ್.

    ನನ್ನ ಪಾಲಿಗೆ ಬರವಣಿಗೆಯೆಂಬುದು ಕೇವಲ ಹೊಟ್ಟೆ ಪಾಡಲ್ಲ. Fancy ಅಲ್ಲ. ಅದು ಚಟವೂ ಅಲ್ಲ. ಬರೆಯುತ್ತ-ಬರೆಯುತ್ತ ನನ್ನನ್ನು ನಾನು ನನಗೇ ಅರ್ಥ ಮಾಡಿಸಿಕೊಡುವ ಮತ್ತು ನನ್ನನ್ನು ತಿದ್ದಿಕೊಳ್ಳುವುದಕ್ಕೆ ನೆರವಾಗುವ ವಿಚಿತ್ರ ಸಾಧನ. 'ಬಾಟಮ್ ಐಟಮ್' ಅಂಕಣದಲ್ಲಿ ನಾನು ನನ್ನ ಬಗ್ಗೆ ಬರೆದುಕೊಂಡೆ. ನನ್ನ ಪರಿಚಿತರ ಬಗ್ಗೆ ಬರೆದೆ. ಓದುಗರು ಬರೆದ ಪತ್ರಗಳ ಬಗ್ಗೆ ಬರೆದೆ. ಅವರ ಪ್ರಶ್ನೆಗಳನ್ನು ನನಗೆ ನಾನೇ ಹಾಕಿಕೊಂಡು, ನನ್ನದೇ ಧಾಟಿಯಲ್ಲಿ ಅವುಗಳಿಗೆ ಉತ್ತರ ಕಂಡುಕೊಂಡು ಬರೆದೆ. ಮೊದ ಮೊದಲು ನನ್ನ ಬಗ್ಗೆ, ಪತ್ರಿಕೆಯ ಬಗ್ಗೆ, ನಡೆದು ಹೋದ ಚಿಕ್ಕಪುಟ್ಟ ಘಟನೆಗಳ ಬಗ್ಗೆ, ನನಗಿಷ್ಟವಾಗುತ್ತಿದ್ದ ಹಳೆಯ ನಟ ನಟಿಯರ ಬಗ್ಗೆ, ಸಾಹಿತಿ ಕಲಾವಿದರ ಬಗ್ಗೆ ಬರೆದೆ. ಆಮಾಮೇಲೆ ಈ ಅಂಕಣಕ್ಕೊಂದು ಸ್ಪಷ್ಟ ರೂಪು ದೊರೆಯತೊಡಗಿತು. ನೇರವಾಗಿ ಬದುಕಿನ ಬಗ್ಗೆ ಬರೆಯತೊಡಗಿದೆ. ದಿನ ನಿತ್ಯ ಕಾಡುವ ಸಂಗತಿಗಳ ಬಗ್ಗೆ ಬರೆದೆ. ಗಂಡು-ಹೆಣ್ಣಿನ ಬಗ್ಗೆ, ನೈತಿಕ-ಅನೈತಿಕದ ಬಗ್ಗೆ, ತಪ್ಪು-ಸರಿಗಳ ಬಗ್ಗೆ, ಸ್ವಭಾವಗಳ ಬಗ್ಗೆ ಬರೆದೆ. ಓದುಗರ ಮೇಲೆ ಹೇರದಂತೆ ಬರೆಯಲು ಪ್ರಯತ್ನಿಸಿದೆ. ನೀವು ಬರೆದದ್ದು ಸರಿ. ನಮಗೂ ಇದೆಲ್ಲ ತೋಚುತ್ತಾ ಇರುತ್ತೆ. ಆದರೆ ಬರೆಯೋಕೆ ಗೊತ್ತಾಗಲ್ಲ. ನಮಗೆ ಅನ್ನಿಸಿದ್ದನ್ನೇ ನೀವು ಬರೆಯುತ್ತೀರಿ ಅಂತ ಅನೇಕ ಓದುಗರು ಹೇಳಿದರು. ಈಗಲೂ ಹೇಳುತ್ತಿರುತ್ತಾರೆ. ಈ ಬರವಣಿಗೆಯ ಅಸಲಿ ತಾಕತ್ತೇ ಅದು:

    ಎಲ್ಲರಿಗೂ ಅನ್ನಿಸಿದ್ದನ್ನು ನಾನು ಬರೆಯುವುದು.

    ಏಕೆಂದರೆ, ಎಲ್ಲರನ್ನೂ ಕಾಡಿದ್ದೇ ನನ್ನನ್ನೂ ಕಾಡುತ್ತಿರುತ್ತದೆ. ಎಲ್ಲರಂತೆಯೇ ನಾನೂ ಪರಿಹಾರಕ್ಕಾಗಿ ತಡಕಾಡುತ್ತಿರುತ್ತೇನೆ. ಎಲ್ಲರ ಮಧ್ಯೆ ಕುಳಿತೇ ನಾನು ಪರಿಹಾರದತ್ತ ಕೈ ಚಾಚಿರುತ್ತೇನೆ.

    ಇಂಥದೊಂದು ಅಂಕಣವನ್ನು ನಾನು ಹತ್ತು ವರ್ಷಗಳ ಹಿಂದೆ ಓದಿದ್ದಿದ್ದರೆ, ನನ್ನ ಬದುಕು ಇವತ್ತು ಬೇರೆಯದೇ ರೀತಿಯಲ್ಲಿರುತ್ತಿತ್ತು ಎಂದು ಕೋಲಾರದ ಹೆಣ್ಣು ಮಗಳೊಬ್ಬಾಕೆ ಬರೆದ ಪತ್ರವನ್ನು ನಾನು ಸರ್ಟಿಫಿಕೀಟಿನಂತೆ ಎತ್ತಿಟ್ಟುಕೊಂಡಿದ್ದೇನೆ. ಹತ್ತು ವರ್ಷಗಳ ಹಿಂದೆ ನಾನು ಈ ರೀತಿ ಬರೆಯಲು ಸಾಧ್ಯವಾಗಿದ್ದಿದ್ದರೆ ನನ್ನ ಬದುಕೂ ಬೇರೆಯದೇ ಆದ ರೀತಿಯಲ್ಲಿ ಇರುತ್ತಿತ್ತೋ ಏನೋ?

    ಆದರೆ ಈ ಬದುಕನ್ನು ಕಟ್ಟ ಕಡೆಯ ದಿನದಂದು ಕೂಡ 'ಇನ್ನು ಹೇಗೋ' ಬದುಕಲು ಸಾಧ್ಯ. ಸಂಪೂರ್ಣವಾಗಿ ಬದಲಿಸಿಕೊಳ್ಳಲು ಸಾಧ್ಯ. ಮತ್ತು ಅವಶ್ಯಕತೆಯಿದ್ದಾಗ ನಾವು ತಪ್ಪದೆ ಬದಲಿಸಿಕೊಳ್ಳಬೇಕು. ಹಾಗಂತ ನಂಬಿಕೊಂಡಿರುವವನು ನಾನು.

    ನಾನು ಬರೆದಿದ್ದು ನಿಮಗೆ ಇಷ್ಟವಾದರೆ, ನಿಮ್ಮ ಸಮಸ್ಯೆಗೂ ಎಲ್ಲೋ ಒಂದು ಪರಿಹಾರ ಕಾಣಿಸಿದಂತಾದರೆ, ನಾನು ಬರೆದದ್ದು ನಿಮ್ಮ ಬದುಕಿಗೂ ಅನ್ವಯಿಸುವಂತಾದರೆ-ನನ್ನ ಈ ಪುಸ್ತಕ ಸಾರ್ಥಕ.

    ದಯವಿಟ್ಟು ಓದಿಕೊಳ್ಳಿ.

    ಬಿಡುವಿದ್ದರೆ ಯಾವುದಕ್ಕೂ ಒಂದು ಸಾಲು ಬರೆಯಿರಿ.

    - ರವಿ ಬೆಳಗೆರೆ

    ಫೆಬ್ರವರಿ 2, 2002

    ಬೆಂಗಳೂರು

    ಅಫಿಡವಿಟ್ಟು

    ಸರಿಯಾಗಿ ಒಂದುನೂರಾ ಆರು ಕೇಜಿ ತೂಕವಿದ್ದ ನಾನು ಅರವತ್ತೊಂಬತ್ತು ಕೇಜಿಗೆ ಇಳಿದಿದ್ದೇನೆ. ಈಗ ದೇಶದೇಶ ತಿರುಗುತ್ತೇನೆ. ಶಿವಾಜಿನಗರದ ಹಂತಕ ಕೋಳಿ ಫಯಾಜ್‍ನ ಸಂದರ್ಶನದಿಂದ ಆರಂಭವಾದ ಪತ್ರಿಕೋದ್ಯಮದ, ಬರಹದ ಹುಚ್ಚು ನನ್ನನ್ನು ಇಟಲಿಯ ದುರ್ಭರ ಮಾಫಿಯಾದ ತನಕ ಕರೆದೊಯ್ದಿದೆ. ತನಿಖೆ, ಸಂಶೋಧನೆ ಮತ್ತು ಭಾವುಕತೆ ಇಲ್ಲದೆ ಬರೆಯಬಾರದು ಎಂದು ತೀರ್ಮಾನಿಸಲಿಕ್ಕೆ ಇಷ್ಟು ವರ್ಷ ಬೇಕಾಯಿತು.

    ಈತನಕ ಸರಿಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳನ್ನು ನೋಡಿದ್ದೇನೆ : ಅವುಗಳಿಂದ ಜನ ಓಡಿ ಬರುತ್ತಿದ್ದ ಸಂದರ್ಭದಲ್ಲಿ. ಪ್ರೇಮ, ಇತಿಹಾಸ, ಕಾಮ, ಯುದ್ಧ, ಅಂಡರ್‍ವಲ್ರ್ಡ್, ಭಯೋತ್ಪಾದನೆ, ಸಿನೆಮಾ, ಅಮ್ಮ-ಹೀಗೆ ನಾನು ಅನೇಕ ಸಂಗತಿಗಳ ಬಗ್ಗೆ ಬರೆಯಬಲ್ಲೆ. ನನಗೆ ಅಕ್ಷರ ಅನ್ನ ಕೊಟ್ಟಿದೆ. ನಾನು ತೃಪ್ತ. ಇಷ್ಟಾದರೂ ಟಿವಿಯೊಳಕ್ಕೆ ಇಣುಕಿದ್ದೇನೆ. ನಾನು ಜನಶ್ರೀ ಟೀವಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದೆ.

    ನನಗೆ ಮೊದಲು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಇಪ್ಪತ್ಮೂರು ವರ್ಷ-ಆಮೇಲೆ ಎರಡು ಸಲ ಬಂತು. ಶಿವರಾಮ ಕಾರಂತರ ಹೆಸರಿನಲ್ಲಿ ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಶಸ್ತಿ ಹಾಗೂ ಅವರ ಹುಟ್ಟೂರಿನ ಪ್ರಶಸ್ತಿ ಬಂದವು. ಮಾಸ್ತಿ ಕಥಾ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂತು. ಮಾಡಿದ ಹೊಟ್ಟೆಪಾಡಿನ ಪತ್ರಿಕೋದ್ಯಮಕ್ಕೆ `ಜೀವಮಾನದ ಸಾಧನೆ' ಅಂತ ಪ್ರಶಸ್ತಿ ಕೊಟ್ಟರು. ನನಗೆ ಯಾವ ಸಂಪತ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟರೋ, ಅದು ಯಡಿಯೂರಪ್ಪನವರಿಗೇ ಗೊತ್ತು. `ಚಲಂ' ಎಂಬ ತೆಲುಗು ಲೇಖಕನ ಆತ್ಮಚರಿತ್ರೆಯ ಅನುವಾದಕ್ಕೆ ನನಗೆ ಕುವೆಂಪು ಭಾಷಾ ಭಾರತಿ ಅಕಾಡೆಮಿ ಪ್ರಶಸ್ತಿ ನೀಡಿದೆ. `ಸಕತ್ತಾಗಿ ಬರೀತಾನೆ ನನ್ಮಗ' ಎಂಬುದು ಬೆಂಗಳೂರೂ ಸೇರಿದಂತೆ ಅನೇಕ ಊರುಗಳ ಆಟೋ ಡ್ರೈವರುಗಳು ನನಗೆ ಕೊಟ್ಟ ಅತಿ ದೊಡ್ಡ ಪ್ರಶಸ್ತಿ.

    `ಹಾಯ್ ಬೆಂಗಳೂರ್!' ನನಗೆ ಅನ್ನವಿಟ್ಟ ತಾಯಿ. `ಓ ಮನಸೇ...' ನನ್ನ ಅಬ್ಸೆಷನ್. ಟೀವಿಗಳಲ್ಲಿ ಕಾಣಿಸಿಕೊಳ್ಳುವುದು ನನ್ನ ಚಟ. ಸಿನೆಮಾಗಳಲ್ಲಿ ನಟಿಸಿದ್ದು, ಕನ್ನಡಿಗರಷ್ಟೇ ಕ್ಷಮಿಸಬೇಕು. ಸರಿಸುಮಾರು ಎಂಟೂವರೆ ಸಾವಿರ ಮಕ್ಕಳು ಡೊನೇಷನ್ ಮತ್ತು ಜಾತಿಯ ಪ್ರಸ್ತಾಪವಿಲ್ಲದೆ ಓದಲು ಸಾಧ್ಯವಾಗಿರುವ `ಪ್ರಾರ್ಥನಾ' ಶಾಲೆ ನನ್ನ ನಿಜವಾದ ಸಾಧನೆ. ಕೆಲವು ಸಿ.ಡಿ.ಗಳನ್ನು ಮಾಡಿದ್ದೇನೆ. ಬೆಂಗಳೂರಿನ ಗಾಂಧಿ ಬಜಾರ್‍ನಲ್ಲಿ ಬಿ.ಬಿ.ಸಿ. (ಬೆಳಗೆರೆ ಬುಕ್ಸ್ ಆ್ಯಂಡ್ ಕಾಫಿ) ಹೆಸರಿನ ಪುಸ್ತಕದ ಮಳಿಗೆ ತೆರೆದಿದ್ದು ನನ್ನ ಅಕ್ಷರ ಲೋಕದ ತಿಕ್ಕಲಿನ ಇನ್ನೊಂದು ಮುಖ. ನನಗೆ ಸಮಾನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ನನ್ನ ಮುಖ ಕಂಡರಾಗದವರೂ ಇದ್ದಾರೆ.

    ನನಗೆ ಎರಡು ಹೆಣ್ಣು, ಎರಡು ಗಂಡು ಮಕ್ಕಳಿದ್ದಾರೆ. ಇಬ್ಬರು ಪತ್ನಿಯರಿದ್ದಾರೆ. ಮೂವರು ಮೊಮ್ಮಕ್ಕಳಿದ್ದಾರೆ. ನಾಲ್ಕನೆಯ ಮೊಮ್ಮಗ ಆಟವಾಡಿಕೊಂಡಿದ್ದಾನೆ. ಸಿಗರೇಟು, ತಿರುಗಾಟ, ಓದು, ಬರವಣಿಗೆ, ಸಂಗೀತ, ಇತಿಹಾಸ ನನ್ನ ಬಲಹೀನತೆಗಳು. ಜಗತ್ತು ನನ್ನ ಮನೆ.

    ಉಳಿದದ್ದು ತಗೊಂಡು ಏನು ಮಾಡುತ್ತೀರಿ?

    ನಾನೂ ನಿಮ್ಮಂತೆಯೇ ಮನುಷ್ಯ : ಕೊಂಚ ಚಿಲ್ರೆ, ಕೊಂಚ ಗಟ್ಟಿ.

    -ರವೀ

    1. ಅದೆಷ್ಟು ಜನರ ಶ್ರದ್ಧೆ ಸೆಳೆದಿಟ್ಟುಕೊಂಡ ಮಾಯಾವಿಯಲ್ಲವೆ?

    ನೀನು ಸಣ್ಣ ಕತೆಯಂಥವಳು ಆಕೆಗೆ ಹೇಳಿದ್ದೆ.

    ಬೇಗ ಮುಗಿದು ಹೋಗುತ್ತೇನಾ? ಗಾಬರಿಗೊಂಡು ಕೇಳಿದ್ದಳು.

    ಆದರೆ ತುಂಬ ದಿನ ನೆನಪಿರುತ್ತೀ ಅಂತ ಸಮಾಧಾನ ಹೇಳಿದ್ದೆ. ಅದು ಸಮಾಧಾನವಷ್ಟೇ ಅಲ್ಲ. ಸತ್ಯ ಕೂಡ. ಕಾದಂಬರಿಯ ಒಟ್ಟು ಕಥೆ ನೆನಪಿರಬಹುದು. ಆದರೆ ಯಾವುದೇ ತಿರುವು, ಅದರ ಮೈಯೊಳಗಿನ ಯಾವುದೇ ಮಚ್ಚೆಯಂಥ ಪಾತ್ರ, ಕಾದಂಬರಿಯ ಸಣ್ಣಪುಟ್ಟ ಥ್ರಿಲ್ಲುಗಳೆಲ್ಲ ಮರೆತು ಹೋಗಬಹುದು. ಇವತ್ತು ತುಂಬ ಇಷ್ಟವಾಗುವ ಕವಿತೆಯೊಂದು ಹತ್ತು ವರ್ಷಗಳ ನಂತರ ಏನೇ ಬಾಯಿ ಬಡಿದುಕೊಂಡರೂ ನೆನಪಿಗೆ ಬಾರದೆ ಕೈ ಕೊಡಬಹುದು. ಓದಿದ ಲಲಿತ ಪ್ರಬಂಧ ಕೆಲಕಾಲದ ನಂತರ ಮರೆವಾಗಬಹುದು. ಆದರೆ ಕಥೆಯಿದೆಯಲ್ಲ?

    ಅದು ಮೊದಲ ಪ್ರೇಯಸಿಯ ಮೋಸದಂತಹುದು. ಮರೆಯಲು ಸಾಧ್ಯವೇ ಇಲ್ಲ. ನಾನು ತುಂಬ ಕತೆಗಳನ್ನು ಓದಿದವನಲ್ಲ. ಜಗತ್ತಿನ ಎಷ್ಟೋ ಸರ್ವಶ್ರೇಷ್ಠ ಕತೆಗಳನ್ನು ಓದಿಯೇ ಇಲ್ಲ. ಆದರೆ ಈತನಕ ಓದಿದ ಯಾವ ಕತೆಯನ್ನೂ ಮರೆತಿಲ್ಲ. ಅದಕ್ಕಿಂತ ಹೆಚ್ಚಾಗಿ ಚಿಕ್ಕಂದಿನಲ್ಲಿ ಕೇಳಿಸಿಕೊಂಡ ಒಂದೇ ಒಂದು ಕತೆ ನನ್ನಿಂದ ಮರೆವಾಗಿಲ್ಲ. ನಾನೇ ಬರೆದ ಅವೆಷ್ಟೋ ಲೇಖನಗಳು, ವರದಿಗಳು, ಪತ್ರಗಳು-ಯಾವತ್ತಿಗಾದರೂ ಮರೆತು ಹೋಗಬಹುದೇನೋ; ಆದರೆ ನನ್ನ ಇಪ್ಪತ್ತೈದು-ಇಪ್ಪತ್ತಾರು ಕತೆಗಳಿವೆಯಲ್ಲ? ಅವುಗಳ ಪ್ರತಿಸಾಲು, ಪ್ರತಿ ಪಾತ್ರ, ಪ್ರತಿ ತಿರುವು, ಪ್ರತಿ ಅಂತ್ಯ ನನಗೆ ಹಚ್ಚೆ ಹುಯ್ದಷ್ಟು ಕರಾರುವಾಕ್ಕಾಗಿ ನೆನಪಿವೆ.

    ಏಕೆಂದರೆ, ಸಣ್ಣ ಕತೆಯೆಂಬುದು ಅವಳಂತಹುದು! ಅವಳು ಎಲ್ಲರಂತಲ್ಲ. ಮಹಾಬಿನ್ನಾಣಗಿತ್ತಿ. ಕೆಟ್ಟ ಸೆಡವಿನ ಹುಡುಗಿ. ಅತ್ತಿತ್ತ ನೋಡುವಂತಿಲ್ಲ. ಅಸಡ್ಡೆಯ ಕುರುಹು ಕಂಡರೂ ಮುನಿದುಬಿಡುತ್ತಾಳೆ. ಕೊಂಚ ಆಚೀಚೆ ಹೋಗಿ ಇನ್ಯಾರೊಂದಿಗೋ flirt ಮಾಡಿದರೆ ಮುಗಿದೇ ಹೋಯಿತು. ಮತ್ತೆ ನನ್ನೆಡೆಗೆ ತಿರುಗಿ ನೋಡುವುದಿಲ್ಲ. ಅವಳನ್ನೇ ನೋಡಬೇಕು. ಮಾತೆಲ್ಲ ಅವಳೊಂದಿಗೇ. ಕಣ್ಣು ಕದಲುವಂತಿಲ್ಲ. ತುಂಬ ಮುದ್ದು ಮಾಡಬೇಕು. ನಿನ್ನದೇ ಪೂಜೆ, ನೀನೇ ದೇವತೆ, ನೀನು ಪವಿತ್ರ ಶ್ರೀಚಕ್ರದ ಕೇಂದ್ರಬಿಂದು. ನಾನು ನಿನ್ನೆದುರು ಕುಳಿತ ಪದ್ಮಾಸನಿ. ಇನ್ನಾದರೂ ಒಲಿಯೇ...

    ಹಾಗಂತ ವಿನಂತಿಸದ ಹೊರತು ಸಣ್ಣಕತೆ ಒಲಿಯುವುದಿಲ್ಲ. ಕೆಲವು ಬಾರಿ ಲೇಖಕರನ್ನು ಪರಿಚಯಿಸುವಾಗ ಅವರು ಕತೆ, ಕಾದಂಬರಿ, ನಾಟಕ, ಕವಿತೆ, ವೈಚಾರಿಕ ಲೇಖನ, ಪ್ರಬಂಧ ಹೀಗೆ ನಾನಾ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ ಅಂತ ಉಬ್ಬುಬ್ಬಿಸಿ ಬರೆದು ಬಿಡುತ್ತೇವೆ. ಅಂಥ ಪುಣ್ಯಾತ್ಮರ ಬರಹಗಳನ್ನು ಹುಡುಕಿ ನೋಡಿ? ಆತ ಅತ್ಯುತ್ತಮ ಕವಿಯಾಗಿದ್ದರೆ, ಒಂದಷ್ಟು ಒಳ್ಳೆಯ ನಾಟಕಗಳನ್ನು ಬರೆದಿರುತ್ತಾನೆ. ತುಂಬ ಒಳ್ಳೆ ಕಾದಂಬರಿಕಾರ ಒಂದೆರಡು ವೈಚಾರಿಕ ಲೇಖನ ಬರೆದಿರುತ್ತಾನೆ. ಪ್ರಬಂಧ ಬರೆದು ಪಳಗಿದಾತ ಒಂದಷ್ಟು ಕತೆಗಳನ್ನು 'ಪ್ರಯತ್ನಿ'ಸಿರುತ್ತಾನೆ. ಆದರೆ ಎಲ್ಲ ಥರದವುಗಳನ್ನೂ ಬರೆದು ಜಯಿಸುತ್ತೇನೆ ಅಂತ ಹೊರಟಿರುತ್ತಾನಲ್ಲ?

    ಅವನ ಸಣ್ಣಕತೆಗಳು ಹುಟ್ಟುವ ಮೊದಲೇ ಸತ್ತು ಹೋಗಿರುತ್ತವೆ! ಏಕೆಂದರೆ, ಸಣ್ಣಕತೆ ಸುಮ್ಮನೆ ಒಲಿಯುವುದಿಲ್ಲ. ಅದು ತಕ್ಷಣ ಹೊಳೆದು, ತಕ್ಷಣ ಹೆಣೆದು, ಮರುಕ್ಷಣಕ್ಕೆ ಮುದ ನೀಡುವಂತಹ ಕವಿಭಾವದ product ಅಲ್ಲ. ಕಾದಂಬರಿಯಂತೆ ಮೈಯೆಲ್ಲ ಹಿಂಜಿಕೊಂಡು ಮಲಗಿ ಎಲ್ಲಿಂದ ಬೇಕಾದರೂ ಉದ್ಭವವಾಗಿ, ಎಲ್ಲಿಗೆ ಬೇಕಾದರೂ ಮುಗಿಯುತ್ತೇನೆ ಅನ್ನುವಂಥ ಔದಾರ್ಯ ಅದಕ್ಕಿರುವುದಿಲ್ಲ. ಒಂದು ಸಣ್ಣಕತೆ ಹುಟ್ಟುವ ಮುನ್ನ ಸಾವಿರ ಯಾತನೆಗಳು ಕಾಡತೊಡಗುತ್ತವೆ. ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಬಸಿರೊಳಗಿನ ಮಗುವಿನಂತೆ ಕತೆಯೊಂದು ಒದೆಯುತ್ತಲೇ ಇರುತ್ತದೆ. ಕೊಂಚ ಅಸಡ್ಡೆ ಮಾಡಿದರೂ ಗರ್ಭಪಾತ. ಅರ್ಧ ಬರೆದಿಟ್ಟು, ನಾಳೆ ಉಳಿದದ್ದು ಬರೆದು ಮುಗಿಸೋಣವೆಂದುಕೊಂಡೇನಾದರೂ ಎದ್ದಿರೋ-ಅಲ್ಲಿಗೇ ಆ ಕತೆ ಆತ್ಮಹತ್ಯೆ ಮಾಡಿಕೊಂಡೀತು. ಒಂದೇ ಉಸಿರಿನಲ್ಲಿ ಹೆತ್ತು ಮುಗಿಸಬೇಕು.

    ಅಂದುಕೊಂಡದ್ದನ್ನೆಲ್ಲ ಚಿಕ್ಕಚಿಕ್ಕ ವಾಕ್ಯಗಳಲ್ಲಿ, ಪುಟ್ಟ ಪುಟ್ಟ ಮಾತುಗಳಲ್ಲಿ, ಎಲ್ಲೂ ಬಂಧ ಬಿಟ್ಟು ಹೋಗದ ಹಾಗೆ, ಕೆಲವೇ ಕೆಲವು ಪುಟಗಳಲ್ಲಿ, ಒಂದೆರಡು ಮೂರು ಘಟನೆಗಳ ಸುತ್ತ, ಒಂದು nut shellನಲ್ಲಿ ಬಿಗ್ಗಬಿಗಿ ಉಸಿರು ಹಿಡಿದಂತೆ ಹೇಳಿ ಮುಗಿಸದಿದ್ದರೆ, ಅದಕ್ಕೊಂದು ಅನೂಹ್ಯ ತಿರುವು, ಕಡೆತನಕ ನೆನಪಿಡುವಂಥ ಅಂತ್ಯ ದೊರಕಿಸದಿದ್ದರೆ-ಅದೂ ಒಂದು ಕಥೆನಾ? ಎಷ್ಟು ಶ್ರದ್ಧೆ ಬೇಕು, ಎಂಥಾ ನಿಷ್ಠೆ, ಅದೆಂಥಾ ಏಕಾಗ್ರತೆ! ಕೊಂಚ ಅತ್ತಿತ್ತ ಹೊರಳಿದರೂ ಕಥೆ ಮುನಿಯುತ್ತದೆ. ಅರ್ಧಕ್ಕೇ ಸಾಯುತ್ತದೆ. ಅಂತ್ಯ ಕೈಕೊಡುತ್ತದೆ. ಕೆಲವೊಮ್ಮೆ ಅಂತ್ಯಕ್ಕೆ ಮೊದಲೇ ಮುಗಿದು ಹೋಗಿರುತ್ತದೆ. ಬೇಕಾದರೆ ಪರೀಕ್ಷಿಸಿ ನೋಡಿ, ಕೆಲವು ಕತೆಗಳನ್ನು ಓದಿದಾಗ 'ಇದನ್ನು ಅಲ್ಲಿಗೇ ನಿಲ್ಲಿಸಬಹುದಿತ್ತಲ್ಲ?  ಕತೆ ಮುಗಿದ ಮೇಲೂ ಹಟಕ್ಕೆ ಬಿದ್ದು ಬರೆಯುತ್ತ ಹೋಗಿದ್ದಾನೆ ಕತೆಗಾರ' ಅನ್ನಿಸಿಬಿಡುತ್ತದೆ. ಅರೆರೆ, ಇಲ್ಲಿಗೇ ಮುಗಿದುಹೋಯಿತೇ? ಎಂದು ಹಂಬಲಿಸುವಂತೆ ಮಾಡುವ ಕತೆಗಳು ಅಪರೂಪ. ದಿನಗಟ್ಟಲೆ ಓದುಗನ ಬೆನ್ನತ್ತಿ ಕಾಡುವ, ಮತ್ತೆ ಮತ್ತೆ ಓದಿಸಿಕೊಳ್ಳುವ, ತನ್ನ ಪ್ರತಿ ಪಾತ್ರದಲ್ಲೂ ಓದುಗನಿಗೆ ಮೋಹ ಹುಟ್ಟುವಂತೆ ಮಾಡುವ ಕತೆಗಳು ಎಷ್ಟು ಅಪರೂಪ!

    ನಿಮಗೆ ಬೇಸರವೆನ್ನಿಸಬಹುದು. ಇವನ್ಯಾರೋ ತಿಕ್ಕಲ ಅನ್ನಿಸಬಹುದು. ಆದರೆ ಯಾವತ್ತಾದರೂ ಒಂದು ಒಳ್ಳೆ ಕತೆ ಬರೆಯಬೇಕು ಅನ್ನೋ ಆಸೆ ನಿಮಗಿದ್ದರೆ, ಇವತ್ತಿನಿಂದಲೇ ನೀವು ಇತರರ ಕತೆಗಳನ್ನು ಓದುವುದನ್ನು ನಿಲ್ಲಿಸಿಬಿಡಿ. ಕತೆಗೊಂದು ಕತೆ ಹುಟ್ಟುತ್ತೆ ಅಂತಾರೆ. ಆದರೆ ಅವರಿವರ ಕತೆಗಳನ್ನು ಓದುತ್ತ ಓದುತ್ತ ನಿಮ್ಮೊಳಗಿನ ಕತೆ ಸತ್ತು ಹೋಗಿಬಿಡುತ್ತೆ. ನೂರು ಸಿನೆಮಾ ನೋಡಿ ಒಂದು ಸಿನೆಮಾ ಮಾಡೋ ನಿರ್ದೇಶಕನ ಸ್ಥಿತಿ. ಅದ್ಯಾರಿಗೆ ಬೇಕು? ನಿಮ್ಮ ಕತೆಗೆ ನೀವೇ ಶ್ರುತಿಯಾಗಿ, ಮಾತಾಗಿ, ಅಕ್ಷರವಾಗಿ, ಬಸಿರು ಹೊತ್ತು, ಅದರ ತೊನೆಯುವಿಕೆಯನ್ನೆಲ್ಲ ಸಹಿಸಿಕೊಂಡು, ಇನ್ನು ಭರಿಸಲಾರೆನೆಂಬಷ್ಟು ತೀವ್ರತೆಗೆ ಬಿದ್ದಾಗ ಒಂದು ಅಜ್ಞಾತ ಮೂಲೆಯಲ್ಲಿ ಕುಳಿತು ನೆಮ್ಮದಿಯ ದನಿಯಲ್ಲಿ ಕತೆ ಹೇಳುತ್ತಾ ಹೋಗಿ. ಅವಳಷ್ಟೇ ಅದ್ಭುತವಾಗಿ ನಿಮಗೆ ಒಲಿಯುತ್ತ ಹೋಗುತ್ತದೆ ಸಣ್ಣಕತೆ.

    ಇಂಗ್ಲಿಷಿನ ನೂರಾರು ಕತೆಗಳನ್ನು ಓದಿ, ಚರ್ಚಿಸಿ, ಅದನ್ನೇ ಮೆಲುಕು ಹಾಕಿ, ಅವುಗಳಿಂದ ಪ್ರಭಾವಿತರಾಗಿ ನಮ್ಮ ಕನ್ನಡದ ನವ್ಯರು, ನವ್ಯೋತ್ತರರು ಬರೆದ ಕತೆಗಳನ್ನು ಒಮ್ಮೆ ಓದಿ ನೋಡಿ. ಪ್ರತಿಯೊಬ್ಬರ ಕತೆಯಲ್ಲೂ ಕೊಂಚ ಕಾಫ್ಕಾ, ಅರಪಾವಿನಷ್ಟು ಸಾರ್ತ್ರೆ, ಚಟಾಕಿನಷ್ಟು ಲಾರೆನ್ಸ್, ತೆಕ್ಕೆಗಟ್ಟಲೆ ಮಾರ್ಕ್ವೆಜ್ ಎಷ್ಟು ಬೇಡವೆಂದರೂ ಗೋಚರಿಸಿ ಬಿಡುತ್ತಾರೆ. ಅವರೆಲ್ಲರನ್ನೂ ಓದಿ ಕೂಡ, ಅವರಿಂದ ಪ್ರಭಾವಿತರಾಗದೆ ಅಚ್ಚಕನ್ನಡದ ಕತೆ ಹೇಳಿ ಕಡೆತನಕ ಕೈಹಿಡಿದು ಓದಿಸಿದ ಏಕೈಕ ಸಣ್ಣಕತೆಗಾರರೆಂದರೆ ಪಿ. ಲಂಕೇಶ್. ಅವರು ತಮ್ಮ ನಿಷ್ಠೆಯನ್ನು ಕವಿತೆಗೆ, ನಾಟಕಕ್ಕೆ, ಕಾದಂಬರಿಗೆ, ಪತ್ರಿಕೋದ್ಯಮಕ್ಕೆ -ಹೀಗೆ ಹರಿದು ಹಂಚಿದರೂ ಕೂಡ ಸಣ್ಣ ಕತೆಯೆಂಬುದು ಬಹಳ ದಿನಗಳ ತನಕ ಅವರಿಗೆ ಒಲಿಯುತ್ತಲೇ ಬಂತು: ತೀರ ಅವರಾಗಿ ಕೊಸರಿ ಕೈಚೆಲ್ಲುವ ತನಕ!

    ಇವತ್ತಿಗೂ ನನಗೆ ತೀವ್ರವಾಗಿ ಅನ್ನಿಸುವುದೆಂದರೆ, ಒಂದಷ್ಟು ದಿನ ಪತ್ರಿಕೆಗೆ ರಜೆ ಹಾಕಿ, ಎಲ್ಲಿಗಾದರೂ ತಲೆಮರೆಸಿಕೊಂಡು ಹೋಗಿ ಕುಳಿತು, ಕೆಲ ದಿನಗಳ ನಂತರ ನಾಲ್ಕು ಚೆಂದನೆಯ ಕತೆ ಹೆಣೆದು ತಂದು ನಿಮ್ಮ ಕೈಗಿಡಬೇಕು. ಐದು ವರ್ಷಗಳಿಂದ ಒಂದೇ ಒಂದು ಸಣ್ಣ ಕತೆಯನ್ನು ಒಲಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದೇನೆ. ಯಾವತ್ತಿಗಾದರೂ ಒಂದು ಒಳ್ಳೆ ಕತೆ ಬರೆದು ನಿರುಮ್ಮಳಗೊಳ್ಳಬೇಕು. ಎಂದಿಗೆ ಸಾಧ್ಯವಾದೀತೋ?

    ಮೊನ್ನೆ ತೆಲುಗಿನ 'ಕೃಷ್ಣಾವತಾರಂ' ಅನ್ನೋ ಸಿನೆಮಾ ನೋಡುತ್ತಿದ್ದೆ. ಅದರ ಕೊನೆಯಲ್ಲಿ ಕೃಷ್ಣನ ಕಾಲಿಗೆ ಬೇಡನೊಬ್ಬ ಬಾಣ ಬಿಟ್ಟು ಸಾಯಿಸುತ್ತಾನೆ. ಸಾಯುತ್ತಿರುವುದು ಕೃಷ್ಣ ಅಂತ ಗೊತ್ತಾದ ಕೂಡಲೆ ಕ್ಷಮಿಸು ಮಹಾಪ್ರಭೋ ಎಂದು ಗೋಳಾಡುತ್ತಾನೆ. ಅದಕ್ಕೆ ಕೃಷ್ಣ,

    ಅಳೋದು ನಿಲ್ಸು. ಕೊಂದುದರಲ್ಲಿ ನಿನ್ನ ತಪ್ಪೇನಿಲ್ಲ. ತ್ರೇತಾಯುಗದಲ್ಲಿ ನಾನು ರಾಮಚಂದ್ರನೆಂಬ ಅವತಾರ ತಾಳಿದಾಗ ನೀನು ವಾಲಿಯಾಗಿದ್ದೆ. ನಾನು ಮರದ ಹಿಂದೆ ಅಡಗಿ ನಿಂತು ನಿನ್ನೆಡೆಗೆ ಬಾಣ ಬಿಟ್ಟು ಕೊಂದಿದ್ದೆ. ಅದರ ಪ್ರತಿಫಲವಿದು! ಅಂದುಬಿಡುತ್ತಾನೆ.

    ಅರೆರೆ, ಕತೆಯೆಂಬುದು ಎಲ್ಲಿಂದ ಎಲ್ಲಿಗೆ ನೆಗೆಯಿತಲ್ಲಾ ಅಂದುಕೊಳ್ಳುತ್ತಲೇ ನಾನು ಪಂಚತಂತ್ರದ ಕತೆ, ಜಾತಕ ಕತೆ, ಈಸೋಪನ ಕತೆ, ಪುರಾಣಗಳಲ್ಲಿನ ಕತೆ-ಉಪಕತೆ, ಮರಿಕತೆ, ಹರಿಕಥೆ, ಮಿನಿ ಕತೆ, ಹನಿ ಕತೆಗಳನ್ನೆಲ್ಲ ಮತ್ತೆ ಕೆದರಿಕೊಂಡು ಕುಳಿತೆ. ಈ ಸಣ್ಣ ಕತೆಯೆಂಬುದು ಅದೆಷ್ಟು ಜನರ ಶ್ರದ್ಧೆಯನ್ನು ಸೆಳೆದಿಟ್ಟುಕೊಂಡ ಮಾಯಾವಿಯಲ್ಲವೇ ಅನ್ನಿಸಿತು.

    2. ಇಬ್ಬರು ಹೆಂಡಿರ ಪರಶಿವನಿದ್ದ ಹಾಗೆಯೇ ಐವರು ಗಂಡಂದಿರ ಪಾಂಚಾಲಿಯಿದ್ದಾಳೆ!

    ಒಂದೇ ಊರಿನಲ್ಲಿದ್ದೇವೆ. ಭೇಟಿಯಾಗುವುದಿಲ್ಲ. ಪದೇಪದೇ ನೆನಪಾಗುತ್ತೇವೆ. ಫೋನೆತ್ತಿಕೊಳ್ಳುವುದಿಲ್ಲ. ಮಾಡಿಕೊಂಡ ಪ್ರಾಮಿಸ್ಸುಗಳು ಇಬ್ಬರಿಗೂ ನೆನಪಿವೆ. ಬೆವೆತ ಅಂಗೈಗಳನ್ನು ನೋಡಿಕೊಳ್ಳುವುದಿಲ್ಲ. ನಾನು ಆಕೆಯನ್ನು ಮರೆತಿದ್ದೇನೆನ್ನುವುದು ಸುಳ್ಳು. ಸರಿಯಾಗಿ ಇದೇ ಹೊತ್ತಿಗೆ ಆಕೆ ನನ್ನನ್ನು ನೆನಪಿಸಿಕೊಳ್ಳುತ್ತಿರುತ್ತಾಳೆ ಅಂತ ಕೂಡ ಖಚಿತವಾಗಿ ಗೊತ್ತು. ಆದರೆ ಖಾಲಿ ಮಾಡಿದ ಬಾಡಿಗೆ ಮನೆಯನ್ನು ಮತ್ತೆ ಯಾರೂ ಹುಡುಕಿಕೊಂಡು ಹೋಗುವುದಿಲ್ಲವಲ್ಲ? ಬೆವೆತ ಅಂಗೈಗೆ ಅಂಟಿಕೊಂಡ ಪ್ರಾಮಿಸ್ಸುಗಳ ನೆನಪನ್ನು ನಾನು ಕಣ್ಣೀರ ಜೊತೆಯಲ್ಲಿ ಷರಾಯಿಯ ಮುದುರುಗಳಿಗೆ ಒರೆಸಿಕೊಂಡು ಬಿಟ್ಟಿದ್ದೇನೆ.

    ಹೀಗೇಕಾಯಿತು ಅಂತ ಗೊತ್ತಿಲ್ಲ.

    ಮುಖೇಶನ ಹಾಡು ಕೇಳುತ್ತಿದ್ದೆ. ಭೂಪೇಂದ್ರನ ಗಜಲು ಗುನುಗುತ್ತಿದ್ದೆ. ಲತಾ ಅವಳಿಗಿಷ್ಟವಾಗುತ್ತಿದ್ದಳು. ನಂಗೆ ಆಶಾ ಭೋಂಸ್ಲೆ. ರಾಜ್‍ಕಪೂರನ ಸಿನೆಮಾ ಒಟ್ಟಿಗೆ ಕುಳಿತು ನೋಡಿದ್ದೆವು. 'ಬಂಗಾರದ ಹೂವು' ಸಿನೆಮಾದ ಹಾಡು ಕೇಳುವಾಗ ಅದೇಕೋ ಇಬ್ಬರ ಕಣ್ಣಲ್ಲೂ ಹಿಮವಿತ್ತು. ಒಂದು ಸಣ್ಣ ಜೋಕಿಗೂ ತುಂಬ ಹೊತ್ತು ನಗುತ್ತಿದ್ದೆವು. ಊಟಿಯಲ್ಲಿ ಮೋಡವಿದೆಯಾ? ಮೋಡದಲ್ಲಿ ಊಟಿಯಿದೆಯಾ? ಸುಳ್ಳೇ ಜಗಳಕ್ಕೆ ಅಷ್ಟು ಸಬ್ಜೆಕ್ಟು ಸಾಕಿತ್ತು. ಅದ್ಯಾವತ್ತೋ ಹುಟ್ಟಬೇಕಾಗಿರುವ ಮಗನಿಗೆ ಇವತ್ತಿನಿಂದಲೇ ಒಂದು ಹೆಸರು ಹುಡುಕಿಡುವ ಮೂರ್ಖ ಮುಂಜಾಗರೂಕತೆ.

    ತಮಾಷೆಯೆಂದರೆ, ಇದನ್ನೆಲ್ಲ ನಾವು ಪ್ರೀತಿ ಅಂದುಕೊಂಡಿದ್ದೆವು. ನಮ್ಮಿಬ್ಬರ ಸಂಬಂಧಕ್ಕೆ, ಅದರ ಶಾಶ್ವತತೆಗೆ ಪ್ರೀತಿಯೇ ಬುನಾದಿ ಅಂದುಕೊಂಡಿದ್ದೆವು. ಎಲ್ಲರೂ ಅಂದುಕೊಳ್ಳುವುದೇ ಹಾಗೆ; ಪ್ರೀತಿಯಿದ್ದರೆ ಸಾಕು; ಕಡೆತನಕ ಕೈ ಕೈ ಹಿಡಿದುಕೊಂಡೇ ಬದುಕಿರುತ್ತೇವೆಂದುಕೊಳ್ಳುತ್ತಾರೆ. ಅನೇಕರಿಗೆ ಗೊತ್ತಿಲ್ಲ.

    ಸಂಬಂಧಗಳು ಬೇಡುವುದು ಪ್ರೀತಿಯನ್ನಲ್ಲ.

    ನಂಬುಗೆಯನ್ನ!

    ಎಷ್ಟೋ ಸಲ ಹಾಗಾಗುತ್ತೆ; ಪ್ರೀತಿಯೇ ಇರದಿದ್ದರೂ ಅವರಿಬ್ಬರೂ ಒಟ್ಟಿಗಿರುತ್ತಾರೆ. ಒಟ್ಟಿಗಿರಲು ಸಾಧ್ಯ. ಆದರೆ ನಂಬುಗೆ ಇದೆಯಲ್ಲ? ಅದಿಲ್ಲದ ಮನುಷ್ಯನೊಂದಿಗೆ ಒಂದೇ ಒಂದು ರಾತ್ರಿ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ಎತ್ತ ಹೊರಳಿದರೂ ಅನುಮಾನದ ಹುತ್ತವೇ. ನಾನೇ ಮೊನ್ನೆಯೆಲ್ಲೋ ಬರೆದೆ. ಸುತ್ತ ಹೆಂಗಸರನ್ನು ನಿಲ್ಲಿಸಿಕೊಂಡ ಮನುಷ್ಯ ಯಾರನ್ನೂ ಪ್ರೀತಿಸಲಾರ. ಎಲ್ಲರನ್ನೂ ತಿನ್ನುತ್ತೇನೆಂದುಕೊಳ್ಳುತ್ತಾನೆ. ಆತ ಯಾವತ್ತೂ ಹೊಟ್ಟೆ ತುಂಬಿಸಿಕೊಳ್ಳಲಾರ.

    "ನನ್ನ

    Enjoying the preview?
    Page 1 of 1