Discover millions of ebooks, audiobooks, and so much more with a free trial

Only $11.99/month after trial. Cancel anytime.

Nimmannu Neevu Gellaballiri
Nimmannu Neevu Gellaballiri
Nimmannu Neevu Gellaballiri
Ebook369 pages1 hour

Nimmannu Neevu Gellaballiri

Rating: 0 out of 5 stars

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN9789385545672
Nimmannu Neevu Gellaballiri

Read more from Yandamoori Veerendranath

Related to Nimmannu Neevu Gellaballiri

Related ebooks

Reviews for Nimmannu Neevu Gellaballiri

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Nimmannu Neevu Gellaballiri - Yandamoori Veerendranath

    http://www.pustaka.co.in

    ನಿಮ್ಮನ್ನು ನೀವು ಗೆಲ್ಲಬಲ್ಲಿರಿ

    Nimmanu Neevu Gellaballiri

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಯಂಡಮೂರಿ ವೀರೇಂದ್ರನಾಥ

    ನಿಮ್ಮನ್ನು ನೀವು ಗೆಲ್ಲಬಲ್ಲಿರಿ

    ಅನುವಾದ:

    ಆರ್.ವಿ. ಕಟ್ಟೀಮನಿ

    ಪಿ.ಎಚ್. ಸ್ವಾಮಿ

    ಪರಿವಿಡಿ

    ಕರಿ ಆರ್ ಪ್ಲಾನಿಂಗ್ (ವೃತ್ತಿ ಜೀವನ ರೂಪಕಲ್ಪನೆ)  1-10

    ಭಾಗ 1  ಸಮಸ್ಯೆಗಳಿವು...  1-10

    ವ್ಯಕ್ತಿತ್ವ ಸಮಸ್ಯೆಗಳು  1-10

    ಭಾಗ 2 ಪ್ರೇಮದಲ್ಲಿ ವಿಫಲತೆ? 1-10

    ಭಾಗ 3 ವಿವಾಹದನಂತರದ ಸಮಸ್ಯೆಗಳು  1-10

    ಭಾಗ 4 ವಿವಾಹೇತರ ಸಂಬಂಧಗಳು 1-10

    ಭಾಗ 5 ವಸ್ತುನಿಷ್ಠ ಮನೋಭಾವದವರಾಗಬೇಕು 1-10

    ಇದರಲ್ಲಿ:

    1.      ‘ಪ್ರೇಮ’ ಪಾಶಕ್ಕೆ ಸಿಲುಕಿದ, ಸಿಲುಕಿ ಒದ್ದಾಡುತ್ತಿರುವ ಹದಿವಯಸ್ಸಿನವರ ಬಗ್ಗೆ;

    2.      ಹದಿನೆಂಟಕ್ಕೆ ಮದುವೆಯಾಗಿ, ಇಪ್ಪತ್ತನೆ ವಯಸ್ಸಿಗೇ ಬದುಕಿನಲ್ಲಿ ನಿರಾಸಕ್ತಿ ಬೆಳೆಸಿಕೊಂಡ ಯುವತಿಯರ ಸಮಸ್ಯೆಗಳ ಬಗ್ಗೆ;

    3.      ಪರಸ್ತ್ರೀಯೊಂದಿಗೆ ಸಂಬಂಧವಿಟ್ಟುಕೊಂಡು, ಹೆಂಡತಿಯೊಂದಿಗೆ ನಿಭಾಯಿಸುವುದು ಹೇಗೆ ಎಂದು ತಳಮಳಿಸುವ ಇಪ್ಪತ್ತೈದರ ಯುವಕರ ಬಗ್ಗೆ;

    4.      ಮೂವತ್ತರಲ್ಲಿದ್ದರೂ ಅತ್ತೆಗೆ ಹೆದರಿ ನಡುಗುವ ಗೈಹಿಣಿಯ ಸಮಸ್ಯೆಗಳ ಬಗ್ಗೆ;

    5.      ನಲ್ವತ್ತು ದಾಟಿದರೂ, ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳದ ವ್ಯಕ್ತಿತ್ವಹೀನರ ಹಂಬಲದ ಬಗ್ಗೆ;

    6.      ನಲವತ್ತೈದು ದಾಟುವವರೆಗೂ ತನ್ನ ಗಂಡನಿಗೆ ಆ ಮೊದಲೇ ಮದುವೆಯಾಗಿತ್ತು ಎನ್ನುವುದನ್ನು ಅರಿಯದಿರುವ ಮುಗ್ಧೆಯರ ಕಣ್ಣೀರಿನ ಬಗ್ಗೆ;

    7.      ಐವತ್ತರ ವಯಸ್ಸಿನಲ್ಲುಂಟಾಗಿರುವ ಖಿನ್ನತೆಯ ಬಗ್ಗೆ;

    8.      ಅರವತ್ತರ ಮುದಿತನದಲ್ಲಿ ಮಕ್ಕಳೆಲ್ಲಿ ದೂರ ಮಾಡುತ್ತಾರೋ ಎನ್ನುವ ಭಯದ ಭಾವನೆಯ ಬಗ್ಗೆ;

    ಇವಿಷ್ಟೇ ಅಲ್ಲದೆ ಮೋಸ ಮಾಡುವವರ, ಮೋಸ ಹೋಗುವವರ. ಇನ್ನಿತರ ಮಾನಸಿಕ ಸಮಸ್ಯೆಗಳಿಂದ ತೊಳಲಾಡುವವರ ಕುರಿತು-ವಿಶ್ಲೇಷಣಾತ್ಮಕ ಚರ್ಚೆ, ಚಿಂತನ-ಮಂಥನವನ್ನು ಕಾಣಬಹುದು.

    ಕರಿಅರ್ ಪ್ಲಾನಿಂಗ್ (career planning)

    ಕರಿಯರ್........

    ಈ ಪದಕ್ಕೆ ನಿಘಂಟುವಿನಲ್ಲಿ ನೀಡಿರುವ ಅರ್ಥ ಜೀವನೋಪಾಯ ಎಂದು. ಇದನ್ನು ವೃತ್ತಿ ಜೀವನ ಎಂದೂ ಹೇಳಬಹುದು. ಈ ಜಗತ್ತಿನಲ್ಲಿ ಬಹುಪಾಲು ಜನ ಒಂದಿಲ್ಲೊಂದು ವೃತ್ತಿಯನ್ನು ಕೈಗೊಂಡಿರುತ್ತಾರೆ. ಶ್ರೀದೇವಿಗೆ ಚಲನಚಿತ್ರಗಳಲ್ಲಿ ನಟಿಸುವುದು ಕರಿಅರ್; ಸಚಿನ್ ತೆಂಡೂಲ್ಕರ್‍ನಿಗೆ ಕ್ರಿಕೆಟ್ ವೃತ್ತಿ; ಆಟೋ ರಿಕ್ಷಾ ಓಡಿಸುವವನಿಗೆ ಆಟೋ ಓಡಿಸುವುದು ವೃತ್ತಿ; ಗೈಹಿಣಿಗೆ ಮನೆವಾಳ್ತೆಯ ಕರಿಅರ್; ವಿದ್ಯಾರ್ಥಿಗಳಿಗೆ ಓದುವುದು ಕರಿಯರ್...ಹೀಗೆ.

    ಕರಿಅರ್‍ಅನ್ನು ಸರಿಯಾಗಿ ರೂಪಿಸಿಕೊಳ್ಳಲು ಯೋಜನೆ (planning) ಅತ್ಯಗತ್ಯ. ಇದು ಸ್ಪರ್ಧಾಯುಗ. (ಕ್ಲೀಷೆ ಎನ್ನಿಸುತ್ತಾದರೂ ಈ ಮಾತು ಸುಳ್ಳಂತೂ ಅಲ್ಲ.) ಈ ಕಾಲದಲ್ಲಿ ಸರಿಯಾದ ಯೋಜನೆ ಇದ್ದರೆ ಮಾತ್ರ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳುವುದು ಸಾಧ್ಯ. ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ವೃತ್ತಿ ಜೀವನ ರೂಪಿಸಿಕೊಳ್ಳುವ ಅಗತ್ಯ ಪ್ರತಿಯೊಬ್ಬನಿಗೂ ಇಂದು ಹೆಚ್ಚಾಗಿದೆ. ತನ್ನ ಬದುಕಿಗೆ, ಬದುಕಿನ ವಿಧಾನಕ್ಕೆ ಸರಿಹೊಂದುವ ಕರಿಅರ್ ಆಯ್ದುಕೊಳ್ಳಬೇಕಾದುದು ಮುಖ್ಯ.

    ವೃತ್ತಿ ಜೀವನ ರೂಪಕಲ್ಪನೆಯ ಯೋಜನೆಯಲ್ಲಿ (carrer planning) ಅನೇಕ ಸಮಸ್ಯೆಗಳೆದುರಾಗುತ್ತಿರುತ್ತವೆ. ಈ ಸಮಸ್ಯೆಗಳಲ್ಲಿ ಮೊದಲನೆಯದು ಸರಿಯಾದ ತಿಳುವಳಿಕೆಯ ಕೊರತೆ; ಯೋಜನೆ ಹಾಕಿಕೊಳ್ಳಲಾಗದ ದೌರ್ಬಲ್ಯ.

    ಕೆಲ ವಿದ್ಯಾರ್ಥಿಗಳು, ಓದಲೇಬೇಕಲ್ಲ ಎಂದು ಓದುತ್ತಿರುತ್ತಾರೆ. ಎಸ್.ಎಸ್.ಎಲ್.ಸಿ.ಯ ವರೆಗೆ ಈ ಧೋರಣೆಯಲ್ಲಿ ಓದು ಮುಗಿಸಿದ ವಿದ್ಯಾರ್ಥಿಗಳು, ಕಾಲೇಜ್ ಹಂತದಲ್ಲೂ ಇದೇ ಧೋರಣೆಯನ್ನು ಮುಂದುವರೆಸುತ್ತಾರೆ. ಪಿ.ಯು.ಸಿ.ಯಲ್ಲಿ ಸೈನ್ಸ್ ಸಿಕ್ಕರೆ ಸೈನ್ಸ್, ಆಟ್ರ್ಸ್ ಸಿಕ್ಕರೆ ಆಟ್ರ್ಸ್, ಕಾಮರ್ಸ್ ಸಿಕ್ಕರೆ ಕಾಮರ್ಸ್... ಹೀಗೆ ಅನುಕೂಲಕ್ಕೊದಗಿದ ವಿಭಾಗಕ್ಕೆ ಸೇರಿಸಿಕೊಳ್ಳುತ್ತಾರೆ. ನಿಜವಾಗಿಯೂ ಇದು ಒಳ್ಳೆಯ ಪದ್ಧತಿಯಲ್ಲ. ವಿದ್ಯಾರ್ಥಿಯು ತನ್ನ ಆಸಕ್ತಿಯ ವಿಷಯ ಯಾವುದೆಂಬುದನ್ನು ಅರಿತುಕೊಂಡೇ ಶಿಕ್ಷಣ ಪಡೆಯುವುದೊಳಿತು. ತನಗೆ ಇಷ್ಟವಾದ ವೃತ್ತಿ ಯಾವುದು, ಯಾವುದು ತನಗೆ ಒಗ್ಗೀತು, ಆ ಬಗ್ಗೆ ಏನನ್ನು ಮತ್ತು ಹೇಗೆ ಓದಬೇಕೆಂಬುದನ್ನೆಲ್ಲ ಯೋಜಿಸಿಟ್ಟುಕೊಂಡು ಓದುವುದೊಳ್ಳೆಯದು.

    ಉದಾಹರಣೆಗೆ, ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂದು ಬಯಸುವ ವಿದ್ಯಾರ್ಥಿ ಕಾಮರ್ಸ್ ವಿಷಯ ಆರಿಸಿಕೊಂಡು, ಆ ನಂತರ ಆರ್ಟಿಕಲ್ಸ್ ಮಾಡಬೇಕಿರುತ್ತದೆ. ಈ ರೀತಿ ಸರಿಯಾದ ಕಲ್ಪನೆಯೊಂದಿಗೆ ಯೋಜಿತ ರೀತಿಯಲ್ಲಿ ಓದುವುದರಿಂದ ಒಳ್ಳೆಯ ಫಲ ಪಡೆಯಬಹುದು.

    ನನ್ನದೇ ಉದಾಹರಣೆ ನೋಡಿ. ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಗಣಿತದಲ್ಲಿ ಶೇ.90ರಷ್ಟು ಅಂಕಗಳನ್ನು ಪಡೆದಿದ್ದೆ. ಪಿ.ಯು.ಸಿ.ಗೆ ಬಂದಾಗ ಡಾಕ್ಟರ್ ಆಗಬೇಕೆಂದುಕೊಂಡು ಸೈನ್ಸ್‍ಗೆ ಸೇರಿಕೊಂಡೆ. ಎರಡು ವರ್ಷ ಓದುವುದರೊಳಗೆ ಆ ವಿಷಯದ ಬಗ್ಗೆ ಬೇಸರ ಬಂತು. ಅದಾದ ಮೇಲೆ ಡಿಗ್ರಿಯಲ್ಲಿ ಒಂದು ವರ್ಷ ಸಾಹಿತ್ಯ ಓದಿದೆ. ಅದೂ ಹಿಡಿಸದೆ, ನನಗಿಷ್ಟವಿರುವ ಗಣಿತಕ್ಕೆ ಸಂಬಂಧಪಟ್ಟ ಕಾಮರ್ಸ್ ವಿಷಯ ಆರಿಸಿಕೊಂಡು ಬಿ.ಕಾಂ. ಮಾಡಿದೆ. ಅದಾದ ನಂತರ ಸಿ.ಎ ಇದು, ಕರಿಅರ್ ಪ್ಲಾನಿಂಗ್ ಬಗ್ಗೆ ನನಗಾಗಲಿ, ನನ್ನ ಪಾಲಕರಿಗಾಗಲಿ ಸರಿಯಾದ ಕಲ್ಪನೆ, ತಿಳಿವಳಿಕೆ ಇಲ್ಲದಿರುವುದನ್ನು ಸೂಚಿಸುತ್ತದೆ.

    ಕೆಲ ತಂದೆತಾಯಿಗಳಿಗೆ ಮಕ್ಕಳು ತಮ್ಮಿಷ್ಟದಂತೆಯೇ ಓದಬೇಕೆಂಬ ಬಯಕೆ. ಕೆಲವರಿಗೆ ತಾವು ಇಂಜಿನಿಯರ್ ಆಗಬೇಕೆನ್ನುವ ಬಯಕೆ ಇರುತ್ತದೆ. ಆದರೆ ಯಾವುದೋ ಅನಿವಾರ್ಯತೆಯಿಂದಾಗಿ ಅದಾಗಿರುವುದಿಲ್ಲ. ತಮ್ಮ ಆ ಬಯಕೆಯನ್ನು ಮಕ್ಕಳ ಮೂಲಕ ಪೂರೈಸಿಕೊಳ್ಳಬೇಕೆಂದು ಹಂಬಲಿಸುತ್ತಾರೆ. ಒಂದು ರೀತಿಯಿಂದ ನೋಡಿದರೆ, ಇದೇನೂ ತಪ್ಪಲ್ಲ. ಆದರೆ ತನ್ನ ಮಕ್ಕಳಿಗೆ ಎಂಜಿನಿಯರಿಂಗ್‍ನಲ್ಲಿ ಆಸಕ್ತಿ ಇದೆಯೆ, ಇಲ್ಲವೆ ಎನ್ನುವುದನ್ನು ಗಮನಿಸುವುದಿಲ್ಲ. ತಮ್ಮ ಆಸಕ್ತಿಯಂತೆ ಮಕ್ಕಳು ಎಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು ಅಷ್ಟೇ! ಮಗನಿಗೋ, ಲಾ ಓದಬೇಕೆಂದಿರುತ್ತದೆ. ಆದರೆ ತಂದೆಯನ್ನು ಎದುರಿಸಿ ಓದಬಲ್ಲ ಆರ್ಥಿಕ ಸ್ವತಂತ್ರವಾಗಲಿ, ವಾದಿಸಬಲ್ಲ ಪ್ರಭುದ್ಧತೆಯಾಗಲಿ ಇಲ್ಲದ ಅವನು, ತನಗೆ ಆಸಕ್ತಿ ಇಲ್ಲದ ವಿಷಯವನ್ನು ನಿರಾಸಕ್ತಿಯಿಂದ ಓದುತ್ತಿರುತ್ತಾನೆ.

    ಈ ನಿರಾಸಕ್ತಿಯ ಪ್ರಭಾವ ಪರೀಕ್ಷಾ ಫಲಿತಾಂಶದಲ್ಲಿ ಕಂಡು ಬರಲೂ ಬಹುದು. ಪರೀಕ್ಷೆಯಲ್ಲಿ ಅಷ್ಟಕ್ಕಷ್ಟೇ ಅಂಕಗಳನ್ನು ಪಡೆದು ಉತ್ತೀರ್ಣನಾಗಬಹುದು; ಅಥವಾ ಅನುತ್ತೀರ್ಣನಾದರೂ ಆಶ್ಚರ್ಯಪಡಬೇಕಿಲ್ಲ. ತಂದೆತಾಯಿಗಳಿಗೆ ಮಕ್ಕಳ ವೈಫಲ್ಯ ನಿರಾಸೆಯುಂಟು ಮಾಡಬಹುದು. ಅದಕ್ಕಾಗಿ ಅವರನ್ನು ಬೈದು ಹೀಯಾಳಿಸಲೂ ಬಹುದು.

    ಇದರಿಂದಾಗುವ ಪ್ರತಿಕೂಲ ಪರಿಣಾಮಗಳು; ಒಂದೋ, ಮಗ-ಮಗಳು ತಾನು ಯಾವುದಕ್ಕೂ ಪ್ರಯೋಜನವಿಲ್ಲವೆಂದು ಭಾವಿಸಿ, ನಿರಾಸೆಯಿಂದ ಆತ್ಮಹತ್ಯೆಗೆತ್ನಿಸಬಹುದು. ಇಲ್ಲವೆಂದರೆ ನಿರಾಶಾವಾದಿಯಾಗಿ (pessimist) ರೂಪುಗೊಳ್ಳಬಹುದು. ಇವೆರಡೂ ಅವಾಂಛನೀಯ ಪರಿಣಾಮಗಳು.

    ಇಂತಹ ಸಮಸ್ಯೆಯನ್ನೆದುರಿಸುತ್ತಿರುವ ಕುಟುಂಬಗಳು ಇಂದಿನ ಸಮಾಜದಲ್ಲಿ ಅನೇಕ.

    ಮಕ್ಕಳಿಗೆ, ತಮ್ಮ ಅಭಿರುಚಿ, ಆಸಕ್ತಿಗಳ ಬಗ್ಗೆ ಧೈರ್ಯವಾಗಿ, ಮನಸ್ಸು ಬಿಚ್ಚಿ ಹೇಳಲಾಗದ ಹಿಂಜರಿಕೆ. ದೊಡ್ಡವರಿಗೆ ಮಕ್ಕಳ ಅಭಿರುಚಿ, ಇಷ್ಟಾನಿಷ್ಟಗಳನ್ನು ಕೇಳಿ ತಿಳಿದುಕೊಳ್ಳುವ ಸಹನೆಯಾಗಲೀ, ಆ ಅಭಿರುಚಿ, ಆಸಕ್ತಿಗಳಿಗೆ ಮನ್ನಣೆ ನೀಡಬೇಕೆನ್ನುವ ಮುಕ್ತ ಮನಸ್ಸಾಗಲಿ ಇಲ್ಲದಿರುವುದು. (ಅಪವಾದವಿಲ್ಲವೆಂದಲ್ಲ. ಆದರೆ ಅಂತಹವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು!).

    ಪಾಲಕರು, ಮಕ್ಕಳು ಪರಸ್ಪರ ಮುಕ್ತ ಸಂವಹನೆಯಿಂದ ಮೇಲಿನಂತಹ ಸಮಸ್ಯೆಯನ್ನು ಬಹುಮಟ್ಟಿಗೆ ನಿವಾರಿಸಿಕೊಳ್ಳಬಹುದು.

    ಇನ್ನೊಂದು ಮುಖ್ಯ ಸಮಸ್ಯೆ-ಆರ್ಥಿಕ ಸಮಸ್ಯೆ. ಮಕ್ಕಳಿಗೆ ಓದಬೇಕೆನ್ನುವ ಆಸೆ ಇರುತ್ತದೆ; ತಂದೆ ತಾಯಿಗೆ ಓದಿಸಬೇಕೆನ್ನುವ ಆಸೆ ಇರುತ್ತದೆ. ಆದರೆ ಆರ್ಥಿಕ ಸಮಸ್ಯೆ ಅವರ ಆಸೆ, ಆಕಾಂಕ್ಷೆಗಳನ್ನು ಹೊಸಕಿಹಾಕುತ್ತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅನೇಕರು ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಬಿಡುತ್ತಾರೆ. ಈ ರೀತಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವ ಬದಲು, ವಿದ್ಯಾರ್ಥಿಯಾದವನು ತನ್ನ ಓದಿಗೆ ಅಗತ್ಯವಾದ ದುಡ್ಡನ್ನು ತಾನೇ ಸಂಪಾದಿಸುತ್ತ ಓದಬಹುದು. ಇಂದು ಅಂತಹ ಅವಕಾಶಗಳು ಹೇರಳ. ಟ್ಯೂಷನ್ ಹೇಳಬಹುದು, ಹಾಲು ಹಂಚಬಹುದು, ಮನೆಮನೆಗೆ ಪತ್ರಿಕೆ ಹಂಚಬಹುದು, ಯಾವುದಾದರೂ ಅಂಗಡಿಯಲ್ಲಿ ಪಾರ್ಟ್‍ಟೈಮ್ ಕೆಲಸ ಹುಡುಕಿಕೊಳ್ಳಬಹುದು... ಹೀಗೆ. ಹೇಳುವುದು ಸುಲಭ ಎಂದು ಮೂಗು ಮುರಿಯಬೇಕಿಲ್ಲ. ಇಂದಿನ ಆಧುನಿಕ ಜೀವನದಲ್ಲಿ ಈ ರೀತಿಯ ಅವಕಾಶಗಳು ಸಾಕಷ್ಟಿವೆ. ನೊದಲು ನಮ್ಮಲ್ಲಿ ದೃಢ ನಿಶ್ಚಯ ಮೂಡಬೇಕು, ಸ್ವಾವಲಂಬನೆಯ ಪ್ರವೃತ್ತಿ ಬೆಳೆಯಬೇಕು.

    ನೆನಪಿರಲಿ; ಅರ್ಪಣಾ ಮನೋಭಾವದಿಂದ ಕೆಲಸ ಮಾಡುವವನಿಗೆ ಯಾವ ಕೆಲಸವೂ ಕೀಳಾಗಿ ಕಂಡುಬರುವುದಿಲ್ಲ. ಪರದೇಶಗಳಲ್ಲಿ ಮುಖ್ಯವಾಗಿ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್‍ನಂತಹ ದೇಶಗಳಲ್ಲಿ ವಿದ್ಯಾರ್ಥಿಗಳು ತಾವೇ ಸಂಪಾದನೆ ಮಾಡುತ್ತ, ತಮ್ಮ ಶಿಕ್ಷಣಕ್ಕೆ ಬೇಕಾದ ದುಡ್ಡು ಹೊಂದಿಸಿಕೊಳ್ಳುತ್ತಿರುತ್ತಾರೆ. ಯಾವ ಯಾವುದಕ್ಕೋ ಅಮೆರಿಕ, ಇಂಗ್ಲೆಂಡ್‍ಗಳನ್ನು ಮಾದರಿಯಾಗಿಟ್ಟುಕೊಳ್ಳುವ ನಾವು, ಈ ಗುಣವನ್ನೇಕೆ ಮಾದರಿಯಾಗಿಟ್ಟುಕೊಳ್ಳಬಾರದು.

    ‘ಮನಸ್ಸಿದ್ದರೆ ಮಾರ್ಗ’ ಎನ್ನುವುದು ಮನನೀಯ ಮಾತು. ಆತ್ಮಸ್ಥೈರ್ಯ, ತನ್ನ ಕಾಯಕದ ಬಗ್ಗೆ ಗೌರವ ಹೊಂದಿದ್ದಲ್ಲಿ ಭವಿಷ್ಯ ರೂಪಿಸಿಕೊಳ್ಳವುದು ಅಸಾಧ್ಯವೂ ಅಲ್ಲ; ಕಷ್ಟವೂ ಅಲ್ಲ.

    ಮತ್ತೊಂದು ಮುಖ್ಯ ಸಮಸ್ಯೆ-ಹುಡುಗ, ಹುಡುಗಿ ಎನ್ನುವ ವ್ಯತ್ಯಾಸದಿಂದಾಗಿ ಉಂಟಾಗುವಂತಹುದು. ಅನೇಕರಿಗೆ ತಮ್ಮ ಮಗಳನ್ನು ಹೆಚ್ಚಿನ ವ್ಯಾಸಂಗಕ್ಕೆ ಕಳಿಸುವುದು ಬೇಕಿರುವುದಿಲ್ಲ. ಅವಳು ಓದಿ ನೌಕರಿ ಮಾಡಬೇಕಿದೆಯೆ? ದೇಶ ಆಳಬೇಕಿದೆಯೆ? ಎಷ್ಟೇ ದುಡ್ಡು ಸುರಿದು ಓದಿಸಿದ್ರೂ ಅತ್ತೆ ಮನೆಗೆ ಹೋಗುವವಳು ತಾನೆ? ಅವಳು ಓದಿ, ನೌಕರಿ ಮಾಡಿ ಸಂಪಾದಿಸಿದ್ರೂ ನಮಗೇನು ಲಾಭ? ಎಂದು ತಾತ್ಸಾರ ಮಾಡುತ್ತಾರೆ. ಇನ್ನು ಕೆಲವರಿಗೆ ಮಗಳಿಗೆ ಓದಿಸಲು ಮಾಡುವ ಖರ್ಚಿನಲ್ಲೇ ಮಗನನ್ನು ಓದಿಸಿದರೆ ಮುಪ್ಪಿನ ಕಾಲಕ್ಕಾಗುತ್ತಾನೆ ಎನ್ನುವ ಭಾವನೆ ಇರುತ್ತದೆ. (ಇದು ಎಷ್ಟರಮಟ್ಟಿಗೆ ಸತ್ಯ ಎನ್ನುವುದು ಬೇರೆ ವಿಷಯ.)

    ಇಂತಹವರು ಒಂದು ವಿಷಯ ಮರೆಯುತ್ತಾರೆ. ‘ವಿದ್ಯೆ’ ಎನ್ನುವುದು ಪ್ರತಿಯೊಬ್ಬನ ಬದುಕಿಗೆ ಅಗತ್ಯ. ಈ ವಿಷಯಕ್ಕೆ ಸಂಬಂಧಿಸಿದಂತೆ ಲಿಂಗಭೇದ ಮಾಡುವುದು ಅನುಚಿತ. ವಿದ್ಯೆ (ಶಿಕ್ಷಣ) ಬರೀ ನೌಕರಿಗಷ್ಟೇ ಉಪಯೋಗವಾಗುವ ಮಾರ್ಗವಲ್ಲ. ಅದು ಜ್ಞಾನಕ್ಕೂ, ಅಜ್ಞಾನಕ್ಕೂ ನಡುವಿನ ಸೇತುವೆ. ‘ಕರಿಅರ್’ ಎನ್ನುವ ಪದಕ್ಕೆ ‘ವೃತ್ತಿ’ ಎಂದಷ್ಟೇ ಅಲ್ಲದೆ, ‘ಭವಿಷ್ಯ’ ಎಂದೂ ಅರ್ಥೈಸಬಹುದು. ಭವಿಷ್ಯ ಚೆನ್ನಾಗಿರಬೇಕೆಂದು ಗಂಡು, ಹೆಣ್ಣು ಸಮಾನವಾಗಿಯೇ ಬಯಸುತ್ತಾರೆ.

    ಇಂದಿನ ಸಮಾಜದಲ್ಲಿ ಹೆಣ್ಣಿಗೆ ಶಿಕ್ಷಣ ತುಂಬ ಅಗತ್ಯ. ಸರಿಯಾದ ಶಿಕ್ಷಣವಿದ್ದಲ್ಲಿ, ಅವಳು ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಿಕೊಳ್ಳಬಲ್ಲವಳಾಗುತ್ತಾಳೆ; ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲವಳಾಗುತ್ತಾಳೆ; ಎಂತಹುದೇ ಪರಿಸ್ಥಿತಿಯಲ್ಲಾದರೂ ತನ್ನ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಾಳಬಲ್ಲಳು. ತಂದೆ ತಾಯಿ (ಹುಡುಗಿಯರೂ ಕೂಡ) ಇದನ್ನು ಗ್ರಹಿಸಬೇಕಾದ ಅಗತ್ಯವಿದೆ. (ಇತ್ತೀಚೆಗೆ ತಂದೆ ತಾಯಿಯರ ಧೋರಣೆಯಲ್ಲಿ ಬದಲಾವಣೆ ಕಂಡು ಬರುತ್ತಿದೆ ಎನ್ನಿ.)

    ಮನುಷ್ಯನ ಜೀವನದಲ್ಲಿ ವರ್ತಮಾನಕ್ಕಿಂತಲೂ ಭವಿಷ್ಯಕ್ಕೆ ಹೆಚ್ಚು ಬೆಲೆ. ವರ್ತಮಾನ ಭವಿಷ್ಯದ ತಳಹದಿ. ಆ ‘ತಳಹದಿ’ಯನ್ನು ಸಕ್ರಮವಾಗಿ ಯೋಜಿಸುವುದು ಅಗತ್ಯ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಪ್ರತಿಯೊಬ್ಬರೂ ತಮ್ಮ ಯೋಚನೆ, ಅಭಿರುಚಿ, ಹವ್ಯಾಸಗಳಿಗೆ ತಕ್ಕುದಾದ ‘ಕರಿಅರ್’ ಅಥವಾ ಗುರಿಯನ್ನು ಆಯ್ದುಕೊಳ್ಳಬೇಕು; ಅದನ್ನು ಸಾಧಿಸಲು ಶ್ರಮಬೇಕು. ನಮ್ಮಿಂದ ಆ ಗುರಿ ಸಾಧಿಸಲಾಗುತ್ತದೋ, ಇಲ್ಲವೋ ಎನ್ನುವಂತಹ ಕೀಳರಿಮೆಯ, ನೇತ್ಯಾತ್ಮಕ ಭಾವನೆಯ ಕಪಿಮುಷ್ಟಿಗೆ ಸಿಲುಕಿ ನರಳದೆ, ಧೈರ್ಯದಿಂದ ಮುನ್ನಡೆಯಬೇಕಾದರೆ, ಸರಿಯಾದ ಯೋಜಿತ ವ್ಯವಸ್ಥೆ (Planning) ಅಗತ್ಯ. ಯಾವುದೋ ಒಂದು ಸಿಕ್ಕಿದ ದಾರಿ ಎನ್ನುವ ಪ್ರವೃತ್ತಿಯನ್ನು ಬಿಟ್ಟು, ಗುರಿ ತಲುಪಲು ನಿರ್ದಿಷ್ಟ ಮಾರ್ಗ ಹಿಡಿಯುವುದು ಶ್ರೇಯಸ್ಕರ.

    ಅನೇಕರಿಗೆ "ಕರಿಯರ್’’ ಅಂದರೆ ಓದುವುದು; ಪದವಿ ಪಡೆಯುವುದು ಎನ್ನುವ ತಪ್ಪು ಕಲ್ಪನೆ ಇರುತ್ತದೆ. ಅದರಿಂದಾಗಿಯೇ ತಮ್ಮ ಮಕ್ಕಳು ಓದುವುದೊಂದು ಬಿಟ್ಟು ಬೇರೆ ಚಟುವಟಿಕೆಗಳತ್ತ ಗಮನ ಹರಿಸುವುದನ್ನು ಇಷ್ಟಪಡುವುದಿಲ್ಲ.

    ಉದಾಹರಣೆಗೆ; ಒಬ್ಬ ಹುಡುಗನಿಗೆ ಹೈಜಂಪ್ ಮಾಡುವುದು ತುಂಬಾ ಇಷ್ಟ. ಅವನ ತಂದೆ ತಾಯಿಗೆ ಅದು ಸ್ವಲ್ಪವೂ ಹಿಡಿಸುವುದಿಲ್ಲ. ಮಗನನ್ನು ಗದರಿಸುತ್ತ, ಓದೋದು ಬಿಟ್ಟು ಎಗರಾಡೋದು ಅಂದ್ರೇನು, ಎಂದು ಅವನ ಅಭಿರುಚಿಯನ್ನು ಪ್ರಾರಂಭದಲ್ಲಿಯೇ ತುಂಡರಿಸುತ್ತಿರುತ್ತಾರೆ. ಈ ರೀತಿ ಮಾಡುವುದು ಒಳ್ಳೆಯದಲ್ಲ. ಓದು ಬದುಕಿಗೆ ಅಗತ್ಯ, ನಿಜ. ಆದರೆ ಓದೊಂದೇ (ಅಥವಾ ಪದವಿ ಪಡೆಯುವುದೊಂದೆ) ಜೀವನದ ಪರಮ ಗುರಿಯಲ್ಲ ಎನ್ನುವುದೂ ಅಷ್ಟೇ ಸತ್ಯ.

    ಬರೀ ಓದಿನಲ್ಲೊಂದೇ ಅಲ್ಲದೆ, ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಕಂಗೊಳಿಸಬಹುದು; ಹೆಸರು ಮಾಡಬಹುದು. ಜಗದ್ವಿಖ್ಯಾತ ಕಲಾವಿದ ರವಿವರ್ಮ ಪದವೀಧರನಲ್ಲ! ಸಾಕಷ್ಟು ದುಡ್ಡು, ಸಮಾಜದಲ್ಲಿ ಮನ್ನಣೆ ಇರುವ ನಟಿ-ನಟಿಯರೆಲ್ಲನೇಕರು ಹೈಸ್ಕೂಲ್ ಮಟ್ಟವನ್ನು ದಾಟಿದವರಲ್ಲ. ಅಂತಹವರ ವೃತ್ತಿ ಜೀವನಕ್ಕೆ ಅದರಿಂದೇನೂ ಧಕ್ಕೆ ಇಲ್ಲ. ಮ್ಯಾಂಡಲಿನ್ ವಾದಕ ಶ್ರೀನಿವಾಸ್‍ನ ತಂದೆ, ಸಚಿನ್ ತೆಂಡೂಲ್ಕರ್‍ನ ತಂದೆ, ವಿಶ್ವನಾಥ್ ಆನಂದ್‍ನ ತಂದೆ- ಇವರೆಲ್ಲ ತಮ್ಮ ಮಕ್ಕಳ ಅಭಿರುಚಿಗೆ ಅಡ್ಡಿ ಒಡ್ಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು?

    ಕೆಲ ಮಕ್ಕಳು ಚಿಕ್ಕಂದಿನಿಂದ ಚಿತ್ರ ಬರೆಯಲು ಯತ್ನಿಸುವುದುಂಟು. ಅಂತಹ ಮಕ್ಕಳ ತಂದೆ ತಾಯಿ, ಏನೋ ಅದು ಹುಚ್ಚುಚ್ಚು ಗೆರೆ ಎಳೀತಿದೀಯಾ. ಗೋಡೆಯೆಲ್ಲ ಹಾಳು ಎಂದು ಬೈದು, ಗದರಿಸುವ ಬದಲು ಆ ಮಕ್ಕಳಲ್ಲಿರುವ ಕಲಾಭಿರುಚಿಗೆ ಪ್ರೂತ್ಸಾಹ ನೀಡುವುದು ಮೇಲು. ಆ ರೀತಿ ಮಾಡಿದರೆ, ಯಾರಿಗೆ ಗೊತ್ತು. ಮುಂದೆ ಆ ಮಕ್ಕಳು ಒಳ್ಳೆಯ ಕಲಾವಿದರಾದರೂ ಆಶ್ಚರ್ಯವಿಲ್ಲ! ಈ ಕೆಳಗಿನ ಮಾತು ಕಟುವೆನಿಸಬಹುದಾದರೂ, ಯೋಚಿಸಿದರೆ ಅದರೊಳಗಿನ ಮರ್ಮ ಅರ್ಥವಾಗಬಲ್ಲದು: ಇಷ್ಟವಿಲ್ಲದೆ ಕುಡಿಯುವ ಅಮೃತಕ್ಕಿಂತಲೂ ಇಷ್ಟಪಟ್ಟು ಕುಡಿಯುವ ವಿಷ ಹೆಚ್ಚು ಉಪಯುಕ್ತವೆನಿಸಬಲ್ಲದು!

    ಭವಿಷ್ಯವನ್ನು ಸುಗಮಗೊಳಿಸಿಕೊಳ್ಳಲು ಎಂ.ಎ, ಬಿ.ಎ. ಓದುವುದೊಂದೇ ಮಾರ್ಗವಲ್ಲ. ನಮಗೆ ಬರುವ ಮನಸ್ಸಿಗೆ ಹಿಡಿಸಿದ ಯಾವ ವಿದ್ಯೆಯಿಂದಲೇ ಆಗಲಿ, ನಾವು ಜೀವನದಲ್ಲಿ ಅಭಿವೃದ್ಧಿ ಸಾಧಿಸಬಹುದು. ತುಂಬಾ ಕಷ್ಟಪಟ್ಟು, ಜೀವನದ ಹದಿನೈದು, ಹದಿನಾರು ವರ್ಷಗಳನ್ನು ವೆಚ್ಚ ಮಾಡಿ ಸ್ನಾತಕೋತ್ತರ ಪದವಿ ಪಡೆದವನಿಗಿಂತ, ಹತ್ತನೆ ತರಗತಿಯವರೆಗೆ ಓದಿ, ಟಿ.ವಿ., ರೇಡಿಯೋ, ವಾಚ್... ಇತ್ಯಾದಿ ಮಾಡುವುದನ್ನು ಕಲಿತ, ಅದನ್ನೇ ವೃತ್ತಿಯಾಗಿ ಆರಿಸಿಕೊಂಡ ವ್ಯಕ್ತಿ ಹೆಚ್ಚು ನಿಶ್ಚಿಂತೆಯಿಂದಿರಬಲ್ಲ; ಬದುಕಬಲ್ಲ. ಪ್ರತಿಯೊಂದಕ್ಕೂ ಅದರದ್ದೇ ವೈಶಿಷ್ಟ್ಯ ಇದೆ ಎನ್ನುವುದರಿಂದ, ಯಾವ ವಿದ್ಯೆಯಿಂದಲೇ ಆಗಲಿ ಅಥವಾ ವೃತ್ತಿಯಿಂದಲೇ ಆಗಲೀ ನಮ್ಮ ಜೀವನಕ್ಕೊಂದು ಸಕ್ರಮ ಗುರಿಯನ್ನು ಏರ್ಪಡಿಸಿಕೊಳ್ಳಬಹುದು.

    ಇನ್ನು ಕೆಲವು ಪಾಲಕರು ತಮಗೆ ಇಷ್ಟವಿರುವ (ಅಥವಾ ಅವರು ಆ ರೀತಿ ಅಂದುಕೊಂಡಿರುವ) ಅಭಿರುಚಿ, ಹವ್ಯಾಸಗಳನ್ನು ಮಕ್ಕಳ ಮೇಲೆ ಹೇರಲು ಯತ್ನಿಸುತ್ತಾರೆ. ಉದಾಹರಣೆಗೆ; ನನಗೆ ಪರಿಚಯವಿರುವ ಒಬ್ಬ ವ್ಯಕ್ತಿಗೆ ‘ಕಂಪ್ಯೂಟರ್’ ಎಂದರೆ ಸಾಕು, ಕಿವಿ ನೆಟ್ಟಗಾಗುತ್ತವೆ. ಕಂಪ್ಯೂಟರ್ ಮಹಿಮೆಯ ಬಗ್ಗೆ ಕೇಳುಗರ ತಲೆ ಚಿಟ್ಟು ಹಿಡಿಯುವಂತೆ ಕೊರೆಯತೊಡಗುತ್ತಾನೆ (ಮೋಜಿನ ವಿಷಯ ಏನೆಂದರೆ, ಆತನಿಗೆ ಕಂಪ್ಯೂಟರ್ ಬಗ್ಗೆ ಗಂಧವಿಲ್ಲದಿರುವುದು! ಹೇಳಿಕೊಳ್ಳುವುದು ಮಾತ್ರ ತಾನೊಬ್ಬ ಕಂಪ್ಯೂಟರ್ ತಜ್ಞನೆಂದೇ!)

    ಆತನಿಗೆ ಕಂಪ್ಯೂಟರ್ ಬಗ್ಗೆ ಅಭಿರುಚಿ (?) ಇದೆ ಎನ್ನುವುದೇನೋ ಸರಿ. ಆದರೆ ತನಗೆ ಆಸಕ್ತಿ ಇದೆಯೆಂದು ತಮ್ಮ ಪೈಕಿ ಒಬ್ಬ ಹುಡುಗನಿಗೆ ‘ಕಂಪ್ಯೂಟರ್ ಸೈನ್ಸ್ ಕೋರ್ಸ್ ಓದಲೇಬೇಕೆಂದು ಕಡ್ಡಾಯವಾಗಿ ತಾಕೀತು ಮಾಡಿ, ಆ ಕೋರ್ಸಿಗೆ ಸೇರಿಸಿಯೂ ಬಿಟ್ಟ. ಆ ಹುಡುಗನಿಗೋ, ಕೃಷಿ ವಿಜ್ಞಾನದಲ್ಲಿ ಆಸಕ್ತಿ. ಎಳ್ಳಷ್ಟೂ ಆಸಕ್ತಿ ಇರದ ಕಂಪ್ಯೂಟರ್ ಸೈನ್ಸ್‍ಗೆ ಸೇರಿರುವ ಆ ಹುಡುಗನ ಗತಿ ಏನೋ?

    ‘ಕಂಪ್ಯೂಟರ್ ತಜ್ಞ’ನಿಗೆ (?) ತನ್ನ ಮನಸ್ಸಿನ ಬಕೆಯನ್ನು ಆ ಹುಡುಗನ ಮೂಲಕ ತೀರಿಸಿಕೊಳ್ಳುತ್ತಿರುವ ಮಾನಸಿಕ ತೃಪ್ತಿ ಲಭಿಸುತ್ತಿರಬಹುದು. ಆದರೆ, ಆ ಹುಡುಗನ ಬಗ್ಗೆ ಯೋಚಿಸಿದರೆ, ಈ ರೀತಿಯ ಬಲವಂತ ಮಾಘಸ್ನಾನದಿಂದ ಅವನ ಭವಿಷ್ಯಕ್ಕೇನಾದರೂ ಉಪಯೋಗ ಉಂಟೆ ಎನ್ನುವ ಪ್ರಶ್ನೆ ತಲೆ ಎತ್ತುತ್ತದೆ. ಪ್ರಯೋಜನದ ಮಾತು ಒತ್ತಟ್ಟಿಗಿಟ್ಟು ನೋಡಿದರೆ, ಆಸಕ್ತಿ ಇಲ್ಲದಿರುವುದನ್ನು ಆ ಹುಡುಗ ಕಲಿತನಾದರೂ ಹೇಗೆ? ಅವನ ಸಮಯ, ಶ್ರಮ ಎರಡೂ ಹಾಳಾದಾವಷ್ಟೆ.

    ಇನ್ನು ಕೆಲವರಿಗೆ ಸಮಾಜದಲ್ಲಿ ತಮ್ಮ ಪ್ರತಿಷ್ಠೆಯನ್ನು ತೋರಿಸಿಕೊಳ್ಳಬೇಕಿರುತ್ತದೆ. ಅದಕ್ಕಾಗಿ ತಮ್ಮ ಮಕ್ಕಳಿಗೆ ನೃತ್ಯ, ಸಂಗೀತದಂತಹವುಗಳನ್ನು ಕಲಿಸಬೇಕೆಂದುಕೊಳ್ಳುತ್ತಾರೆ. ನನ್ನ ಮಗಳಿಗೆ ಡ್ಯಾನ್ಸ್ ಬರುತ್ತೆ. ನನ್ನ ಮಗ ಚೆನ್ನಾಗಿ ಹಾಡಬಲ್ಲ ಎಂದು ಸರೀಕರೆದುರಿಗೆ ಕೊಚ್ಚಿಕೊಳ್ಳುವುದೇ ಇವರಿಗೆ ಮುಖ್ಯ. ಮುಂದೆ ಆ ಮಕ್ಕಳು ಅವೇ ಅಭಿರುಚಿ, ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆಂದೇನೂ ಇಲ್ಲ. ಈ ರೀತಿಯ ಒಣ ಪ್ರತಿಷ್ಠೆಯಿಂದಾಗಿ ಹಣ, ಸಮಯ ವ್ಯರ್ಥವಾಗುವುದರ ಹೊರತು ಬೇರೇನೂ ಪ್ರಯೋಜನವಿಲ್ಲ.

    ಯಾವುದೇ ಕಲೆ ಇರಲಿ, ಅದನ್ನು ಹೊತ್ತು ಕಳೆಯಲೆಂದು ಕಲಿಯದೆ ಜೀವನೋಪಾಯ (carrer) ಎಂಬ ಉದ್ದೇಶದಿಂದ ಕಲಿಯುವುದು ಸೂಕ್ತ ಎಂದರೆ ತಪ್ಪಾಗಲಾರದು. ಹೊತ್ತು ಕಳೆಯಲೆಂದು ಮಾಡುವ ಇಂತಹ ‘ಕಸರತ್ತು’ ಹಣ, ಸಮಯ ಎರಡನ್ನೂ ವ್ಯರ್ಥ ಮಾಡಬಲ್ಲದು. ಅದಕ್ಕೇ, ಪ್ರತಿಯೊಬ್ಬ ವ್ಯಕ್ತಿ ತನ್ನ ಕರಿಅರನ್ನು ತಾನೇ ನಿರ್ಧರಿಸಿಕೊಂಡು, ಅದಕ್ಕನುಗುಣವಾಗಿ ಶ್ರಮಿಸಬೇಕು.

    ಇಲ್ಲಿಯವರೆಗೆ ನಿಮಗೆ ‘ಕರಿಅರ್ ಪ್ಲಾನಿಂಗ್’ ಬಗ್ಗೆ, ಅದರ ಮಹತ್ವದ ಬಗ್ಗೆ ಹೇಳಿದೆ. ಇದನ್ನು ಓದಿದ ನಿಮಗೆ ಹಲವಾರು ಸಮಸ್ಯೆಗಳು, ಸಂದೇಹಗಳು ತಲೆ ಎತ್ತಬಹುದು. ‘ನಾನು ನಿಜಕ್ಕೂ ಶ್ರಮಪಡುತ್ತಿದ್ದೇನೆ. ಆದರೆ ತಕ್ಕ ಪ್ರತಿಫಲ ಲಭಿಸುತ್ತಿಲ್ಲ’, ‘ಜೀವನದಲ್ಲಿ ಏಳ್ಗೆ ಹೊಂದಬೇಕೆಂದರೆ ಅದೃಷ್ಟದ ಬೆಂಬಲವಿರಬೇಕು’... ಇತ್ಯಾದಿತ್ಯಾದಿ.

    ನಿಮ್ಮೆಲ್ಲ ಸಂದೇಹಗಳಿಗೆ ಉತ್ತರ ರೂಪವಾಗಿ ನಾನು ಹೇಳುವುದಿಷ್ಟೇ; ನಾವು ಸಮಸ್ಯೆ ಎಂದುಕೊಂಡಿರುವುದು ವಾಸ್ತವವಾಗಿ ಸಮಸ್ಯೆಯೆ; ಸಮಸ್ಯೆಯಾಗಿದ್ದರೂ, ಅದನ್ನು ಬಗೆಹರಿಸಿಕೊಳ್ಳಲು ನಮ್ಮಿಂದಗುತ್ತದೆಯೆ, ಇಲ್ಲವೆ; ಆ ಸಮಸ್ಯೆಯ ವಿಶ್ಲೇಷಣೆ ಹೇಗೆ... ಇತ್ಯಾದಿಯಾಗಿ ನಮ್ಮಲ್ಲೇ ತರ್ಕಿಸಿಕೊಂಡು ಅದಕ್ಕನುಗುಣವಾಗಿ ವರ್ತಿಸಿದರೆ, ಬಹಳಷ್ಟು ಸಮಸ್ಯೆಗಳು (ಅಥವಾ ಸಮಸ್ಯೆಗಳಂತಹವು) ಹಾಗೆಯೇ ಕರಗಿಹೋಗುವುದನ್ನು ಕಾಣಬಹುದು. ಇದಕ್ಕೆ ಬೇಕಿರುವುದು: ಸಾವಧಾನವಾಗಿ ಎಲ್ಲ ದೃಷ್ಟಿಕೋನಗಳಿಂದ ಸಮಸ್ಯೆಯ ಸ್ವರೂಪವನ್ನರಿಯುವುದು; ಅದನ್ನು ವಿಶ್ವೇಷಿಸುವುದು; ಕೊನೆಯಲ್ಲಿ, ಪರಿಹಾರ ಮಾರ್ಗಗಳ ಬಗ್ಗೆ ಯೋಚಿಸುವುದು. ಅಷ್ಟೇ!

    ನಾನು ವಾರಪತ್ರಿಕೆಯೊಂದರಲ್ಲಿ ‘ಪ್ರಶ್ನೋತ್ತರ’ ಅಂಕಣ ನಿರ್ವಹಿಸುತ್ತಿದ್ದೆ. ವಾರಕ್ಕೆ ನೂರಾರು ಪತ್ರಗಳು

    Enjoying the preview?
    Page 1 of 1