Discover millions of ebooks, audiobooks, and so much more with a free trial

Only $11.99/month after trial. Cancel anytime.

Malegaalada Ondu Sanje
Malegaalada Ondu Sanje
Malegaalada Ondu Sanje
Ebook621 pages7 hours

Malegaalada Ondu Sanje

Rating: 5 out of 5 stars

5/5

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN9789385545702
Malegaalada Ondu Sanje

Read more from Yandamoori Veerendranath

Related to Malegaalada Ondu Sanje

Related ebooks

Reviews for Malegaalada Ondu Sanje

Rating: 5 out of 5 stars
5/5

2 ratings0 reviews

What did you think?

Tap to rate

Review must be at least 10 words

    Book preview

    Malegaalada Ondu Sanje - Yandamoori Veerendranath

    http://www.pustaka.co.in

    ಮಳೆಗಾಲದ ಒಂದು ಸಂಜೆ

    Malegaalada Ondu Sanje

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಮಳೆಗಾಲದ ಒಂದು ಸಂಜೆ

    ಏನು ಮಾಡಿದರೆ ತನಗೆ ಲಾಭವಾಗುತ್ತದೋ, ಖಡಾಖಂಡಿತವಾಗಿ ಆ ಕೆಲಸವನ್ನೇ ಮಾಡುವುದನ್ನು ‘ಮೆಟೀರಿಯಾಲಿಸಮ್’ ಎನ್ನುತ್ತಾರೆ ಸೆಂಟಿಮೆಂಟ್ ಮನಸ್ಕರು. ಆದರೆ ಜಗತ್ತಿನ ಇತಿಹಾಸ ತಿರುವಿ ಹಾಕಿದರೆ ಪ್ರತಿಯೊಂದು ರಾಷ್ಟ್ರವೂ ತನ್ನ ಉಳಿವಿಗೋಸ್ಕರ ಅದೇ ರೀತಿ ವರ್ತಿಸಿದ್ದು ಕಂಡುಬರುತ್ತದೆ. ಅಂದರೆ ತಪ್ಪು ಒಪ್ಪುಗಳೆನ್ನುವವು ಮನುಷ್ಯರಿಗೆ ಮಾತ್ರ ಅನ್ವಯಿಸುತ್ತವೆ; ಸಮಾಜ-ರಾಷ್ಟ್ರಗಳು ಅದಕ್ಕೆ ಹೊರತಾದಂಥವು ಎಂದಾಗುತ್ತದೆ.

    ಒಳ್ಳೆಯತನದಿಂದಾಗಿ ಭಾರತಕ್ಕೆ ಎದುರಾದುದು ಸದಾ ಕಷ್ಟಗಳೇ ಎಂಬುದು ಇತಿಹಾಸದ ಪುಟಗಳನ್ನು ಗಮನವಿಟ್ಟು ತಿರುವಿ ಹಾಕಿದ ಯಾರಿಗೇ ಆಗಲಿ ಸ್ಪಷ್ಟವಾಗಿ ಅರ್ಥವಾಗುತ್ತದೆ. ಇನ್ನು ಮುಂದಾದರೂ ಆ ಧೋರಣೆ ಬದಲಾಗಲಿ ಎಂದು ಹೇಳಬೇಕೆನ್ನುವುದೇ ಈ ಕಥೆಯ ಉದ್ದೇಶ.

    (ಇತಿಹಾಸದ ಪ್ರಾಮುಖ್ಯ ಇರುಚ ಕೆಲವು ಪಾತ್ರಗಳನ್ನು ಬಳಸಿಕೊಂಡು ಅದರ ಜತೆಗೆ ಕೆಲವು ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ ಕಥೆ ಓಡಿಸುವ ತಂತ್ರವನ್ನು ಕೆಲ ಪ್ರಮುಖ ಪಾಶ್ಚತ್ಯ ಲೇಖಕರು ಬಳಸಿದ್ದುಂಟು. ಈ ಕಾದಂಬರಿಯಲ್ಲಿಯೂ ಅದೇ ತಂತ್ರ ಬಳಸಿದೆ. ಐತಿಹಾಸಿಕ ವಾಸ್ತವಗಳನ್ನು ಬಳಸಿಕೊಂಡಿದ್ದು ನಾಟಕೀಯತೆ ಕಳೆಗಟ್ಟಲಿ ಎನ್ನುವ ಉದ್ದೇಶದಿಂಧ ಅಷ್ಟೇ ಹೊರತು, ಇದರಲ್ಲಿನ ಪ್ರಾತ್ರಗಳೆಲ್ಲವೂ ಕೇವಲ ಕಾಲ್ಪನಿಕ. ಯಾರನ್ನೂ ಉದ್ದೇಶ ವಾಗಿಟ್ಟುಕೊಂಡು ಬರೆದಂಥವಲ್ಲ -ಲೇಖಕ.)

    ಉಪೋದ್ಘಾತ

    ಪ್ರತಿಯೊಂದು ಕಥೆ ಎಲ್ಲೋ ಒಂದೆಡೆ ಆರಂಭವಾಗಬೇಕು. ಈ ಕಥೆಯನ್ನು ಸುಮಾರು ಸಾವಿರ ವರ್ಷಗಳ ಹಿಂದಿನಿಂದ ಆರಂಭಿಸೋಣ.

    *

    ಕ್ರಿ.ಶ 1026

    ಖೂರಾಸಕ್ ... ದಿ ಲ್ಯಾಂಡ್ ಆಫ್ ರೈಸಿಂಗ್ ಸನ್ (ಉದಯಸೂರ್ಯನ ನಾಡು)!

    ರತ್ನಗರ್ಭವೆಂದು ಖ್ಯಾತಿಗಳಿಸಿದ ಭಾರತದೇಶವನ್ನು ದೋಚಿ ಲೂಟಿಮಾಡಲು ಸುಮಾರು ಸಾವಿರ ವರ್ಷಗಳ ಹಿಂದೆ ಮಹಮ್ಮದ್ ಘಜನಿ ಆ ಪ್ರಾಂತ್ಯದಿಂದಲೇ ಪಯಣಿಸಿದ್ದ. ಹಿಮಾಲಯ ಕಣಿವೆಗಳ ನಡುವೆ ಸಾಗಿಬಂದು ಸೋಮನಾಥ ದೇವಾಲಯವನ್ನು ಧ್ವಂಸ ಮಾಡಿದ.

    ಅನಂತರ ನೂರು ವರ್ಷಗಳಿಗೆ ಘೋರಿ ಮಹಮ್ಮದ್ ಆ ಪ್ರದೇಶದಿಂದಲೇ ಬಂದು ಟಾರಿಯನ್ ಯುದ್ಧದಲ್ಲಿ ಪೃಥ್ವೀರಾಜನನ್ನು ಸೋಲಿಸಿದ. ಆಗ ಅದರ ಹೆಸರು ಅರಿಯಾನ ಎಂದಿತ್ತು. ಆರ್ಯರು ವಾಸಿಸಿದ ನಾಡಾದ್ದರಿಂದ ಅದಕ್ಕೆ ಆ ಹೆಸರು ಬಂದಿದ್ದು ಎನ್ನುತ್ತಾರೆ!

    ಅದು ಧೃತರಾಷ್ಟ್ರನ ಪತ್ನಿ ಗಾಂಧಾರಿ ಜನಿಸಿದ ನಾಡು. ಮಂಗೋಲಿಯಾದಿಂದ ಭಾರತದತ್ತ ಸಾಗಿ ಬಂದ ಚಂಗೇಜ್ ಖಾನ್, ಅಲ್ಲಿನ ಪರ್ವತಾಂತರಾಳದ ಗುಹೆಗಳಲ್ಲೇ ಬಿಡದಿ ಹೂಡಿದ್ದ.

    ಅದಾದ ನಂತರ ಮೂನ್ನೂರು ವರ್ಷಗಳಿಗೆ – ಈ ಬಾರಿ ಇತ್ತಲಿಂದ ಅತ್ತಹೋದ ಅಕ್ಬರ್ ಆ ಪ್ರಾಂತವನ್ನಾಳಿದ.

    ಪರ್ವತಗಳ ಇತ್ತಕಡೆ ಕಾಶ್ಮೀರಿ ಗುಲಾಬಿಗಳು, ಹುಲ್ಲುಗಾವಲುಗಳು! ಅತ್ತಕಡೆ ಬೆಟ್ಟ. ಗುಡ್ಡ, ಗುಹೆಗಳು, ಬೀಳುನೆಲ, ಮರುಭೂಮಿ! ದಿ ಲ್ಯಾಂಡ್ ಆಫ್ ರೈಸಿಂಗ್ ಸನ್!

    ಅಲ್ಲಿನವರು ಮಾತಾನಾಡುವ ಭಾಷೆಯ ಹೆಸರು-ಪುಸ್ತೂ.

    ಅಲ್ಲಿನ ಪರ್ವತಗಳು, ನದಿ-ತೊರೆಗಳು, ಜಲಪಾತಗಳು ಹಾಗೇ ಇದ್ದವು ಹಿಮಪಾತ, ಹಿಮ ತೂಫಾನ್, ಮಂಜಿನ ಬಿಂದು... ಇವ್ಯಾವುವೂ ಬದಲಾಗಲಿಲ್ಲ. ರಾಜರು ಬದಲಾದರು. ರಾಜ್ಯಗಳ ಸೀಮೆಗಳು ಬದಲಾದವು. ವಂಶಗಳು ಬದಲಾದವು. ಕೇವಲ ಹೆಸರುಗಳಷ್ಟೇ ಇತಿಹಾಸದ ಪುಟಗಳಲ್ಲಿ ಉಳಿದುಕೊಂಡವು.

    ಆ ರೀತಿ ಕಾಲಗರ್ಭದಲ್ಲಿ ಎಂಟುನೂರು ವರ್ಷಗಳು ಕರಗಿಹೋದವು.

    ಎಲ್ಲಿ ಸೌಭಾಗ್ಯ ಇಲ್ಲವೋ ಅಲ್ಲಿ ರಕ್ತಪಾತ ಅನಿವಾರ್ಯ. ಎಲ್ಲಿ ಹಸಿವು ರಾಜ್ಯವಾಳುತ್ತದೋ, ಅಲ್ಲಿ ಖಡ್ಗವೇ ಶಾಸನ ಬರೆಯುತ್ತದೆ. ಬೆಳೆ ಬೆಳೆಯದ ಸ್ಥಳದಲ್ಲಿ ನಾಗರೀಕತೆ ಬೆಳೆಯಲೊಲ್ಲೆ ಎನ್ನುತ್ತದೆ. ಹಸಿವಿದ್ದಲ್ಲಿ ನಂಬಿಕೆ ಉಳಿದು. ಅದಕ್ಕೇ ಆ ಜನಾಂದ ಒಡೆದು ಚೂರುಚೂರಾಗಿ ಅನೇಕ ಪಂಗಡಗಳಾಗಿ ಬೇರ್ಪಟ್ಟಿತ್ತು.

    ದಿ ಲ್ಯಾಂಡ್ ಆಫ್ ರೈಸಿಂಗ್ ಸನ್ ಮತ್ತೂ ನೂರು ವರ್ಷಗಳುರುಳಿದವು:

    ಕ್ರಿ.ಶ.1978

    ಕಾಲಚಕ್ರ ತಿರುಗುತ್ತಲೇ ಇತ್ತು. ಬ್ರಿಟೀಷರು ಈ ನೆಲದಿಂದ ಕಾಲ್ತೆಗೆಯುವ ಮುನ್ನ ಭಾರತ - ಪಾಕಿಸ್ತಾನಗಳನ್ನು ಬೇರ್ಪಡಿಸಿಯೇ ಹೋದರು. ಜವಾಹರಲಾಲರ ದಯೆಯಿಂದಾಗಿ ಕಾಶ್ಮೀರ ರಾವಣ ಕಾಷ್ಠ ಹೊತ್ತಿಕೊಂಡಿತು. ಅಮೆರಿಕಾ, ರಷ್ಯಾಗಳು ಜಗತ್ತಿನ ಎರಡು ಸೂಪರ್ ಪವರ್ ರಾಷ್ಟ್ರಗಳಾಗಿ ಬೆಳೆಯತೊಡಗಿದ್ದವು. ದುರದೃಷ್ಟ ವಶಾತ್ ಭಾರತದೇಶ ಸಮಾಜವಾದದತ್ತ ಒಲವು ತೋರಿಸಿ ರಷ್ಯಾಕ್ಕೆ ಹತ್ತಿರವಾಯಿತು. ಅದರಿಂದಾಗಿ ಸ್ವಾಭಾವಿಕವಾಗಿಯೇ ಅಮೆರಿಕಾ ಪಾಕಿಸ್ತಾನವನ್ನು ಬಳಿಗೆಳೆದುಕೊಂಡಿತು.

    ಜಗತ್ತಿನ ಇತರ ಭಾಗದಲ್ಲಿ ಇಷ್ಟೆಲ್ಲ ಬದಲಾವಣೆಗಳಾಗುತ್ತುದ್ದರೂ- ‘ಉದಯ ಸೂರ್ಯನ ನಾಡು’ ಮಾತ್ರ ಹಾಗೇ ಇತ್ತು. ಆದರೆ ಬ್ರಿಟಿಷರು ಗದ್ದುಗೆ ಏರಿಸಿಹೋದ ಜಹೀರ್ ಶಾ ಮಾತ್ರ ನಿರಂಕುಶನಾದ. ಹಸಿವಿನ ಮರುಭೂಮಿಯಲ್ಲಿ ಯಾವುದೇ ಇಸಂ ಕೂಡ ಶಾಶ್ವತವಾಗಿ ನೆಲೆ ನಿಲ್ಲಲಾಗದಲ್ಲವೆ! ಜಹೀರ್ ಶಾನಿಗೆ ವಿರುದ್ಧವಾಗಿ 1973ರಲ್ಲಿ ರಷ್ಯನ್ನರ ಕುಮ್ಮಕ್ಕಿನಿಂದ ಕ್ರಾಂತಿ ತಲೆಯೆತ್ತಿತು. ರಷ್ಯಾದ ಕೃಪಾಕಟಾಕ್ಷವಿದ್ದ ಮಾಕ್ರ್ಸಿಸ್ಟ್ ರಿಪಬ್ಲಿಕನ್ ಪಕ್ಷ ಅಧಿಕಾರಕ್ಕೆ ಬಂತು.

    ಆದರೆ ಅದೇ ಪ್ರದೇಶದಲ್ಲಿರುವ ಮತ್ತೊಂದು ಪಂಗಡ ಮೊಜಾಹಿದೀನರು ಪುಸ್ತೂನ್ ಭಾಷೆಯಲ್ಲಿ ಮೊಜಾಹಿದೀನರೆಂದರೆ ‘ಪವಿತ್ರ ಯುದ್ಧವೀರರು’ ಎಂದರ್ಥ. ಇವರಿಗೆ ಇನ್ನೊಬ್ಬರ ಅಧೀನದಲ್ಲಿರುವುದೆಂದರೆ ಇಷ್ಟವಿದ್ದಿಲ್ಲ, ಆದ್ದರಿಂದ ಕಮ್ಯೂನಿಸ್ಟರ ಮೇಲೆ ಯುದ್ಧ ಘೋಷಿಸಿದರು.

    ಪಕ್ಕದಲ್ಲಿ ಒಂದು ಕಣ್ಣಿಟ್ಟೇ ಇದ್ದ ಪಾಕಿಸ್ತಾನಕ್ಕೆ ರಷ್ಯಾದ ಪ್ರಾಬಲ್ಯವನ್ನು ಎದುರಿಸಲು ಒಳ್ಳೆಯ ಅವಕಾಶ ದೊರಕಿದಂತಾಯಿತು. ತತ್‍ಕ್ಷಣ ಮೊಜಾಹಿದೀನರಿಗೆ ತನ್ನ ಸಹಾಯ - ಸಹಕಾರಗಳನ್ನು ಒದಗಿಸಿತು. ಮಾಕ್ರ್ಸಿಸ್ಟ್ ರಿಪಬ್ಲಿಕನ್ ಪಕ್ಷದ ವಿರುದ್ಧ ದಂಗೆ ಶುರುವಾಯಿತು. ಅದಕ್ಕೆ ಹೇಗೂ ಅಮೆರಿಕಾದ ಒತ್ತಾಸೆ ಇದ್ದೇ ಇತ್ತು.

    ಅದರಿಂದಾಗಿ ರಷ್ಯಾಕ್ಕೆ ಮೈ ಉರಿಯಿತು. ಚಿಕ್ಕದೊಂದು ಪ್ರದೇಶದ ಮೇಲಿನ ತನ್ನ ಹಿಡಿತವನ್ನು ಇನ್ನೊಂದು ಪುಟ್ಟ ರಾಷ್ಟ್ರ ಪಾಕಿಸ್ತಾನ ಪ್ರಶ್ನಿಸುವ ರೀತಿ ವರ್ತಿಸಿದ್ದು ಅದರಿಂದ ಸಹಿಸಲಾಗಲಿಲ್ಲ! ಮತ್ತೊಂದೆಡೆ ಮೊಜಾಹಿದೀನರು ಮಾಕ್ರ್ಸಿಸ್ಟರನ್ನು ಅಧಿಕಾದಿಂದಿಳುವ ಪ್ರಯತ್ನಗಳನ್ನು ತೀವ್ರಗೊಳಿಸಿದ್ದರು! ಎಲ್ಲಕ್ಕಿಂತಲೂ ಮುಖ್ಯವಾಗಿದ್ದ ಮೂರನೆಯ ಕಾರಣ-ಅಮೆರಿಕಾ ವಾಮನನಂತೆ ಒಆದ ಊರಲು ಏಷ್ಯಾದಲ್ಲಿ ಒಂದಿಷ್ಟು ಸ್ಥಳ ಲಭಿಸುತ್ತದೆ! ಅಷ್ಟೇ ಅವಕಾಶ ದೊರೆತರೆ ಸಾಕು, ಇಡಿಇಡಿಯಾಗಿ ಆಕ್ರಮಿಸಿಕೊಂಡುಬಿಡುತ್ತದೆ, ಎಂಬುದು ರಷ್ಯಾಕ್ಕೆ ಗೊತ್ತಿತ್ತು.

    ಈ ಎಲ್ಲ ಪೂರ್ವಾಪರ ಆಲೋಚನೆ ಮಾಡಿ ರಷ್ಯಾ ಮುಖ್ಯವಾದುದೊಂದು ನಿರ್ಣಯ ತೆಗೆದುಕೊಂಡಿತು.

    ಪರಿಣಾಮ-1978ರ ಏಪ್ರಿಲ್ 27ರಂದು ಬೆಳಿಗ್ಗೆ ಲಕ್ಷಗಟ್ಟಲೆ ರಷ್ಯನ್ ಸೈನಿಕರು, ಸಾವಿರಾರು ಟ್ಯಾಂಕರುಗಳೊಂದಿಗೆ ‘ಉದಯಸೂರ್ಯನ ನಾಡು’ ನೊಳಗೆ ಪ್ರವೇಶಿಸಿದರು. ಅಡ್ಡಬಂದವರನ್ನು ಅಡ್ಡಡ್ಡ ಕತ್ತರಿಸುತ್ತ, ರಕ್ತದಿಂದ ಆ ನೆಲವನ್ನು ಕೆಂಪಾಗಿಸುತ್ತ ಅರಿಯನ್ ಪ್ರದೇಶವನ್ನು ವಶಪಡಿಸಿಕೊಂಡರು.

    ಇದನ್ನೇ ‘ಏಪ್ರಿಲ್ ಕ್ರಾಂತಿ’ (ಏಪ್ರಿಲ್ ರೆವಲ್ಯೂಷನ್) ಎನ್ನುವುದು.

    ಅರಿಯನ್ ಪ್ರಾಂತದಲ್ಲಿ ಗಿರಿಜನರೆಲ್ಲರೂ ಒಟ್ಟು ಎರಡು ಕೋಟಿಗಳಿಗಿಂತಲೂ ಜಾಸ್ತಿ ಇದ್ದಿರಲಿಲ್ಲ. ಅಂದರೆ ಭಾರತದಲ್ಲಿ ಕೇರಳದಂತಹ ರಾಜ್ಯದ ಜನಸಂಖ್ಯೆಗಿಂತಲೂ ಕಮ್ಮಿಯೇ! ಆದರೆ ಅವರು ನಿಸರ್ಗದೊಂದಿಗೆ ಸಹವಾಸ ಸಹವಾಸ ಇಟ್ಟುಕೊಂಡಿರುವಂಥವರು! ಸ್ವಾಭಾವಿಕವಾಗಿಯೇ ಸ್ವಾತಂತ್ರ್ಯ ಪ್ರೇಮಿಗಳು.

    ಅವರು ರಷ್ಯನ್ ಸೈನಿಕರ ಜೀವನಗಳನ್ನು ದುರ್ಭರಗೊಳಿಸಿಬಿಟ್ಟರು. ಬೆಟ್ಟ- ಗುಡ್ಡಗಳ ಕಗ್ಗತ್ತಲ ಗುಹೆಗಳೊಂದಿಗೆ ನುಗ್ಗಿ ಬಂದು ಮಿಂಚಿನ ದಾಳಿ ನಡೆಸುತ್ತಿದ್ದರು. ಗೆರಿಲ್ಲಾ ಯುದ್ಧದಲ್ಲಿ ರಷ್ಯನ್ ಸೈನಿಕರನ್ನು ಹಣ್ಣು ಹಣ್ಣು ಮಾಡುತ್ತಿದ್ದರು.

    ಇತ್ತ ರಷ್ಯನ್ನರೇನೂ ಕಮ್ಮಿ ಇರಲಿಲ್ಲ. ಜಗತ್ತಿನ ಎರಡು ಪ್ರಬಲ ಶಕ್ತಿಗಳಲ್ಲಿ ಅದು ಒಂದು...! ರಷ್ಯನ್ನರು ಮತ್ತಷ್ಟು ಕಠಿಣವಗಿ ವರ್ತಿಸಿ, ಹಿಡಿತ ಬಿಗಿ ಮಾಡಿದರು. ಈ ಪ್ರಾಂತದೊಳಗೆ ಅಮೆರಿಕವಾಗಲಿ, ಪಾಕಿಸ್ತಾನವಾಗಲಿ ಕಾಲಿಡಕೂಡದೆನ್ನುವುದು ಅವನ ಉದ್ದೇಶ.

    ಪರಿಣಾಮ-‘ಉದಯಸೂರ್ಯನ ನಾಡು’ ಕೆಂಪೇರಿತು. ಆ ಕೆಂಪಗೆ ಕಾರಣವಾಗಿದ್ದು ಅರುಣೋದಯಕಾಂತಿಯಲ್ಲ, ರಕ್ತ.

    ಸಾವಿರಾರು ರಷ್ಯನ್ ಸೈನಿಕರು ಮರಣಿಸಿದರು. ಅತ್ತ ಲಕ್ಷಗಟ್ಟಲೆ ಮೊಜಾಹಿದೀನರು ಜೀವಕ್ಕೆರವಾದರು. ಆ ಕಾಲದಲ್ಲೇ ಆ ಪ್ರಾಂತದಲ್ಲೆಲ್ಲ ಸುಮಾರು 40 ಲಕ್ಷ ಭೂ ಸ್ಫೋಟಕಗಳು (ಲ್ಯಾಂಡ್ ಮೈನ್ಸ್) ಇದ್ದವೆಂಬುದು ಒಂದು ಅಂದಾಜು!

    ಆ ರೀತಿ, ಆ ಗುಡ್ಡಗಾಡಿನ ಪ್ರಾಂತ ಹತ್ತು ವರ್ಷಗಳ ಕಾಲ ಭಯಂಕರ ರಣರಂಗವಾಗಿ ಮಾರ್ಪಟ್ಟಿತು. ಒಂದೆಡೆ ರಷ್ಯಾ, ಮತ್ತೊಂದೆಡೆ ಅಮೆರಿಕಾ-ಎರಡು ಬಲಿಷ್ಠ ರಾಷ್ಟ್ರಗಳು ಪರಸ್ಪರ ಆಡುವ ಆಟದಲ್ಲಿ, ಪಾಪ, ಆ ಪುಟ್ಟ ಪ್ರದೇಶ ಕೇವಲ ದಾಳವಾಗಿತ್ತು. ಇತಿಹಾಸದುದ್ದಕ್ಕೂ ಹಲವರ ಕೈಗಳಿಗೆ ಸಿಕ್ಕ ಸ್ವಾರ್ಥಿಗಳಿಂದಾಗಿ ಪುಟ್ಟ ಪುಟ್ಟ ತಂಡಗಳಾಗಿ ಒಡೆದು, ಬಗೆಬಗೆಯ ಯುದ್ಧಗಳಿಂದ ನರಳಿ, ನೊಂದು ಬೇಸತ್ತ ರಾಷ್ಟ್ರ ಅದು! ಹಿರಿಯರು ಮಕ್ಕಳ ಕೈಗೆ ಸ್ಲೇಟು-ಬಳಪ ಕೊಟ್ಟು ಅ, ಆ, ಇ, ಈ, ಕಲಿಸುವ ಬದಲಿಗೆ ಬಂದೂಕು ಗುರಿ ಇಡುವುದನ್ನು ಕಲಿಸುವ ಪ್ರಾಂತವದು ಮನುಷ್ಯನ ಬದಲಿಗೆ ಜೀವ ಹುಲ್ಲುಕಡ್ಡಿಗೆ ಸಮವಾಗಿದ್ದರೆ, ಹುಲ್ಲುಕಡ್ಡಿಗೋಸ್ಕರ ಜೀವಬಲಿ ತೆಗೆದುಕೊಳ್ಳುವ ದೇಶ ಅದು!

    ಆ ದೇಶದ ಹೆಸರೇ ಅಫಘಾನಿಸ್ಥಾನ್!

    15 ಜನೆವರಿ, 1989

    ‘ದಿ ಲ್ಯಾಂಡ್ ಆಫ್ ರೈಸಿಂಗ್ ಸನ್’ ನಲ್ಲಿ ರಷ್ಯನ್ ಧ್ವಜ ಹಾರಾಡುತ್ತಿರುವುದು ಅಮೆರಿಕಕ್ಕೆ ಇಷ್ಟವಾಗಲಿಲ್ಲ. ಅದನ್ನು ಗ್ರಹಿಸಿದ ಪಾಕಿಸ್ತಾನ ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿತು. ತನ್ನೊಂದಿಗೆ ಕೈಕೂಡಿಸಿದರೆ ಅಫಘಾನಿಸ್ಥಾನವನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳಬಹುದೆಂದು ಅಮೆರಿಕಕ್ಕೆ ಆಸೆ ತೋರಿಸಿತು. ಅಮೆರಿಕಾ ಅದಕ್ಕೆ ತತ್‍ಕ್ಷಣ ಒಪ್ಪಿಕೊಂಡಿತು.

    ಅಲ್ಲಿಗಾಗಲೇ, ಪಾಕಿಸ್ತಾನ ರಷ್ಯನ್‍ರೊಂದಿಗೆ ಹೋರಾಡುತ್ತಿದ್ದ ಮೊಜಾಹಿದೀನರಿಗೆ ನೆರವು ನೀಡತೊಡಗಿತ್ತು. ಅಮೆರಿಕಾ ಜತೆಯಾದ ಮೇಲೆ ಆ ನೆರವು ಮತ್ತಷ್ಟು ತೀವ್ರವಾಯಿತು. ಅದರಿಂದಾಗಿ ಅಫಘಾನಿಸ್ಥಾನವನ್ನು ಹಿಡಿತದಲ್ಲಿರಿಸಿಕೊಳ್ಳುವುದು ರಷ್ಯನ್ನರಿಗೆ ಕಷ್ಟಸಾಧ್ಯವೆನಿಸತೊಡಗಿತು. ಅದೂ ಅಲ್ಲದೆ ರಷ್ಯಾದ ಆರ್ಥಿಕ ಪರಿಸ್ಥಿತಿಯೂ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ. ಇದೆಲ್ಲದರಿಂದಾಗಿ ದಿನದಿಂದ ದಿನಕ್ಕೆ ಹಿಡಿತ ಸಡಿಲವಾಗತೊಡಗಿತ್ತು.

    ಇದೆಲ್ಲದರ ಪರಿಣಾಮವಾಗಿ 14 ಅಕ್ಟೋಬರ್, 1987ರಂದು ಅಫಘಾನಿಸ್ಥಾನದಿಂದ ತನ್ನ ಸೇವೆ ಹಿಂತೆಗೆದುಕೊಳ್ಳುತ್ತಿರುವುದಾಗಿ ರಷ್ಯಾ ಹೇಳಿಕೆ ನೀಡಿತು. ಆ ರೀತಿ ಸೇನೆ ಹಿಂತೆಗೆದುಕೊಳ್ಳಲು ಸುಮಾರು ಎರಡು ವರ್ಷ ಬೇಕಾಯಿತು. ಅಂದರೆ, 1989 ಜನೆವರಿಯಲ್ಲಿ ರಷ್ಯನ್ ಸೇನೆಯ ಕೊನೆಯ ಟ್ಯಾಂಕರ್ ಅಫಘಾನಿಸ್ಥಾನದ ಗಡಿ ದಾಟಿ ಹೊರಟುಹೋಯಿತು. ರಷ್ಯನ್ ಸೇನೆ ಪೂರ್ತಿಯಾಗಿ ಅಲ್ಲಿಂದ ಕಾಲ್ತೆಗೆದ ಮರುಕ್ಷಣ ಅಂದುಕೊಂಡಿದ್ದು ಅಂದುಕೊಂಡತೆಯೇ ನಡೆದುಬಂದಿತ್ತು. ರಷ್ಯನ್ ಸೇನೆ ತೊಲಗಿದನಂತರ, ಪಾಕಿಸ್ತಾನಕ್ಕೆ ಅಘಾತವಾಗುವ ಘಟನೆ ನಡೆಯಿತು. ಅಲ್ಲಿಯತನಕ ನಿಶ್ಯಬ್ದವಾಗಿ ತಮ್ಮ ಕೆಲಸಮಾಡಿಕೊಂಡು ಬಂದಿದ್ದ ಮೊಜಾಹಿದೀನರು ತಾವು ಸ್ವಾತಂತ್ರರು, ಯಾರ ಕೈಕೆಳಗೂ ಇರುವಂಥವರಲ್ಲ ಎಂದು ಖಡಾಖಂಡಿತಾವಾಗಿ ಹೇಳಿಬಿಟ್ಟರು. ಅವರಿಗೆ ಅಷ್ಟೋ ಇಷ್ಟೋ ಒಲವಿದ್ದುದು ಭಾರತದ ಕಡೆಗೇ. ಅದನ್ನವರು ತೋರ್ಪಡಿಸಿದರು ಕೂಡ.

    ಅದರಿಂದಾಗಿ ಪಾಕಿಸ್ತಾನಕ್ಕೆ ಗಂಟಲಲ್ಲಿ ಗಾಳ ಚುಚ್ಚಿಕೊಂಡತಾಯಿತು. ಭಾರತಕ್ಕೆ ಮಿತ್ರರಾದ ‘ಪವಿತ್ರ ಯುದ್ಧವೀರರು’ ಅಫಘಾನಿಸ್ಥಾದಲಿ ಸ್ಥಿರಗೊಂಡರೆ ತನಗಾಗುವ ಹಾನಿಯ ಬಗ್ಗೆ ಕೂಲಂಕುಷವಾಗಿ ಗೊತ್ತಿತ್ತು. ಅದಕ್ಕೆ ಅಮೆರಿಕಾದತ್ತ ಮುಖಮಾಡಿ ಏನು ಮಾಡೋಣ? ಎಂದಿತು ಅಮೆರಿಕ.

    ಒಡೆದು ಬಿಡೋಣ ಎಂದಿತು.

    ಹೇಗೆ? ಯಾರನ್ನ? ಯಾಕೆ?

    ಅಫಘಾನಿಸ್ಥಾನವೆಂದರೆ ಕೇವಲ ಮೊಜಾಹಿದೀನರು ಪುಸ್ತೂನರಷ್ಟೇ ಅಲ್ಲ. ಇನ್ನೂ ಅನೇಕಾನೇಕ ಗಿರಿಜನ ಪಂಗಡಗಳಿವೆ. ನಾವು ಯಾರಿಗೆ ಸಹಾಯ ನೀಡುತ್ತೇವೋ ಅವರು ಬಲಿಷ್ಠರಾಗುತ್ತಾರೆ. ನಾವು ಆ ಕೆಲಸಕ್ಕೆ ತೊಡಗಿಕೊಳ್ಳುವುದೊಳ್ಳೆಯದು.

    ತಲೆಯಾಡಿಸಿದ ಪಾಕಿಸ್ತಾನ ತತ್‍ಕ್ಷಣ ಕಣಕ್ಕಿಳಿಯಿತು. ಮೊಜಾಹಿದೀನರಿಗೆ ವ್ಯತಿರೇಕವಾಗಿದ್ದ ಮತ್ತೊಂದು ಗುಂಪನ್ನು ಪ್ರಚೋದಿಸಿ, ಪ್ರೋತ್ಸಾಹಿಸಿತು. ಕಂದಾಚಾರ. ಕಟ್ಟರ್ ಪ್ರವೃತ್ತಿಯನ್ನು ಅಣುಅಣುವಿನಲ್ಲೂ ತುಂಬಿಕೊಂಡು, ಜೀರ್ಣಿಸಿಕೊಂಡಿದ್ದ ಆ ಪಂಗಡ, ಉದಯಸೂರ್ಯನ ನಾಡಿನ ಇತಿಹಾಸವನ್ನು ರಕ್ತಾಕ್ಷರಗಳಲ್ಲಿ ತಿದ್ದಿ ಬರೆಯಲು ಸಂಕಲ್ಪ ಮಾಡಿತು. ದಯೆ, ದಾಕ್ಷಿಣ್ಯ ಮುಂತಾದ ಪದಗಳನ್ನು ದೂರ ತಳ್ಳಿತು. ಮುಖ ತೋರಿಸಿದ ಸ್ತ್ರೀಯರನ್ನು-ಬುರ್ಖಾ ಧರಿಸಿಲ್ಲವೆನ್ನುವ ಕಾರಣಕ್ಕೆ ಬೀದಿಯಲ್ಲಿ ನಿಲ್ಲಿಸಿ ಹಿಂಸಿಸಿತು. ಕದ್ದ ಅಪರಾಧಕ್ಕೆ ಕಲ್ಲುಗಳಿಂದ ಹೊಡೆದು ಸಾಯಿಸುವ ಶಿಕ್ಷೆ ಜಾರಿಗೆ ತಂದಿತು. ಗಂಡಸರಿಗೆ ಗಡ್ಡ ಕಡ್ಡಾಯ ಎಂದು ಆಜ್ಞೆ ಮಾಡಿತು. ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ಹೇರಿತು. ಪಾಕಿಸ್ತಾನದ ಪ್ರೋತ್ಸಾಹದಿಂದ ಅಫಘಾನಿಸ್ಥಾನದ ರಾಜಧಾನಿ ಕಾಬೂಲ್‍ನ ಮೇಲೆ ಮುತ್ತಿಗೆ ಹಾಕಿ ವಶಪಡಿಸಿಕೊಂಡಿತು. ಜೀವ ಉಳಿಸಿಕೊಳ್ಳಲು ವಿಶ್ವಸಂಸ್ಥೆ ಕಛೇರಿಯ ಕಂಪೌಂಡಿನಲ್ಲಿ ತಲೆಮರೆಸಿಕೊಂಡಿದ್ದ ಅಫಘಾನಿಸ್ಥಾನ ಮಾಜಿ ಅಧ್ಯಕ್ಷ ನಜೀಬುಲ್ಲಾನನ್ನು ಹೊರಗೆಳೆದು ತಂದು, ಇಡೀ ಜಗತ್ತು ‘ಬೇಡ-ಬೇಡ’ ಎಂದು ಹಾಹಾಕಾರ ಗೈಯುತ್ತಿದ್ದರೂ ಬೀದಿದೀಪದ ಕಂಬಕ್ಕೆ ನೇತುಹಾಕಿ ಶೂಲಕ್ಕೇರಿಸಿತು. ಅಫಘಾನಿಸ್ಥಾನದ ರಾಜ್ಯಾಡಳಿತವನ್ನು ಆ ರೀತಿ ತನ್ನ ಕರ್ಕಶ ಕೈಗಳಿಗೆತ್ತಿಕೊಂಡ ಆ ಭಯೋತ್ಪಾದಕ ಪಂಗಡದ ಹೆಸರು ಹೆಸರು- ತಾಲೀಬಾನ್.

    ಜೂನ್ 2, 1990

    ಪಾಕಿಸ್ಥಾನದ ಬೆಂಬಲದಿಂದಾಗಿ ತಾಲಿಬಾನ್‍ರು ಮಿತಿಮೀರಿದರು. ಅಫಘಾನಿಸ್ಥಾನದಲ್ಲಿ ಈ ಎಲ್ಲ ಪರಿಣಾಮಗಳಾಗುತ್ತಿದ್ದರೆ, ರಷ್ಯಾದ ಪರಿಸ್ಥಿತಿ ಬೇರೊಂದೆ ರೀತಿ ಇತ್ತು. ರಷ್ಯನ್ ಸೇನೆಗಳು ಅಫಘಾನ್ ನೆಲದಿಂದ ತೆರಳಲಾರಂಭಿದುವುದಕ್ಕಿಂತ ಎರಡು ವರ್ಷ ಮೊದಲು ಜಗತ್ತಿನ ಇತಿಹಾಸದಲ್ಲಿ ಅನೂಹ್ಯ ಪರಿಣಾಮವೊಂದು ಸಂಭವಿಸಿತ್ತು.

    ಗೊರ್ಬಚೇವ್ ಎನ್ನುವ ರಾಜಕೀಯ ಅರ್ಥಶಾಸ್ತ್ರಜ್ಞನೊಬ್ಬ ‘ಪೆರೆಸ್ತ್ರೋಯಿಕಾ’ ಎನ್ನುವ ನೂತನ ಪದವನ್ನು ರಷ್ಯನ್ ನಿಘಂಟುವಿನೊಳಗೆ ಸೇರ್ಪಡೆ ಮಾಡಿದ. ಪೆರಸ್ತ್ರೋಯಿಕಾ ಎಂದರೆ ‘ಪುನರ್ ನಿರ್ಮಾಣ’ ಎಂದರ್ಥ. ಅಷ್ಟು ಹೊತ್ತಿಗಾಗಲೇ ದಿವಾಳಿಯ ಅಂಚು ತಲುಪಿದ್ದ ರಷ್ಯನ್ನರು ಈ ಪುನರ್ ನಿಮಾಶಣವನ್ನು ಸ್ವಾಗತಿಸಿದರು. ಅವರಿಗೆ ಬೇರೆ ದಾರಿಯೇ ಇರಲಿಲ್ಲ.

    ಪರಿಣಾಮ-ರಷ್ಯಾ ಛಿದ್ರವಿಚ್ಛಿದ್ರವಾಯಿತು. ಕಮ್ಯೂನಿಸಮ್ ಕುಸಿದುಬಿತ್ತು.

    ಜೂನ್ 2, 1990ರಂದು ಅಮೆರಿಕಾದ ಅಧ್ಯಕ್ಷ ಬುಷ್, ರಷ್ಯನ್ ಚೀಫ್ ಗೊರ್ಬಚೇವ್ ಸೇರಿ, ಎರಡು ರಾಷ್ಟ್ರಗಳ ನಡುವಿನ ‘ಶೀತಲ ಸಮರ’ವನ್ನು ನಿಷೇಧಿಸುತ್ತ, ಒಪ್ಪಂದಕ್ಕೆ ಸಹಿ ಹಾಕಿದರು. ರಷ್ಯಾ ಸ್ಪರ್ಧೆಯಿಂದ ಹಿಂದೆ ಸರಿದು, ತನ್ನ ಗೌರವ ಉಳಿಸಿಕೊಂಡಿತು.

    ಜಗತ್ತಿನಲ್ಲಿ ಅಮೆರಿಕ ಒಂದೇ ಸೂಪರ್ ಪವರ್ ರಾಷ್ಟ್ರವಾಗಿ ಉಳಿಯಿತು!

    ಅಷ್ಟರೊಳಗೆ ಅಫಘಾನಿಸ್ಥಾನದಲ್ಲಿ ಮೊಜಾಹಿದೀನರಿಗೂ, ತಾಲಿಬಾನೀಯರಿಗೂ ನಡುವೆ ಆಂತರಿಕ ಕಲಹ ಶುರುವಾಗಿತ್ತು. 50,000 ಜನ ಕಾಬೂಲ್ ತೊರೆದು ಓಡಿ ಹೋಗಿದ್ದರು. ಲಕ್ಷಗಟ್ಟಲೆ ಜನ ನಿರಾಶ್ರಿತರಾಗಿದ್ದರು. ತಾಲಿಬಾನಿಗಳ ದೇಶವನ್ನೆಲ್ಲ ಆಕ್ರಮಿಸಿಕೊಳ್ಳುತ್ತ ಮುನ್ನುಗುತ್ತಿದ್ದರು. ಇಸ್ಲಾಮ್ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸುತ್ತ ಅಡ್ಡಪಡಿಸಿ, ಅಭ್ಯಂತರ ಹೇಳಿದವರನ್ನು ಉದ್ದುದ್ದಕ್ಕೆ ಸೀಳಿಬಿಡುತ್ತಿದ್ದರು. ಸ್ತ್ರೀಯರ ಬಗ್ಗೇಯೂ ಕನಿಕರ ತೋರಿಸುತ್ತಿರಲಿಲ್ಲ. ತಮ್ಮ ಧರ್ಮ ಹೇಳಿದಂತೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡೇ ಬುದ್ಧನ ವಿಗ್ರಹಗಳನ್ನೂ ನೆಲಸಮಗೊಳಿಸಿದರು.

    ಜಗತ್ತು ಈ ಎಲ್ಲ ಪರಿಣಾಮಗಳನ್ನು ಕಂಡು, ತಲ್ಲಣಿಸಿ, ಹಾಹಾಕಾರಗೈಯ ತೊಡಗಿತು. ಆಂತರಿಕ ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದ ರಷ್ಯಾ ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿರಲಿಲ್ಲ.

    ಪಾಕಿಸ್ತಾನದ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡ ಅಡಿಕೆಯಂತಾಯಿತು. ತಾಲಿಬಾನಿಗಳನ್ನು ಸಮರ್ಥಿಸಲೇಬೇಕಾದ ಅನಿವಾರ್ಯ ಸ್ಥಿತಿ ತಲೆದೋರಿತು. ಇಲ್ಲದಿದ್ದರೆ ಭಾರತವನ್ನು ಬೆಂಬಲಿಸುವ ಗುಂಪು ಅಧಿಕಾರಕ್ಕೆ ಬಂದುಬಿಡುವ ಅಪಾಯವಿತ್ತು. ತನ್ನನ್ನು ಈ ವಿಷಮ ಪರಿಸ್ಥಿತಿಯಿಂದ ಹೊರಗೆಳೆಯಬೇಕೆಂದು ಪಾಕಿಸ್ತಾನ ಅಮೆರಿಕಾವನ್ನು ಕೇಳಿಕೊಂಡಿತು.

    ಆದರೆ ಅಮೆರಿಕಕ್ಕೆ ಈ ಎಲ್ಲ ವ್ಯವಹಾರದ ಬಗ್ಗೆ ಒಂದಿಂಚ್ಚೂ ಆಸಕ್ತಿ ಉಳಿದಿರಲಿಲ್ಲ. ಯಾವಾಗ ರಷ್ಯಾ ಸ್ಫರ್ಧೆಯಿಂದ ಹಿಂದೆ ಸರಿಯಿತೋ ಆಗ ಅಮೆರಿಕಕ್ಕೆ ಪಾಕಿಸ್ತಾನದ ಮೇಲಾಗಲೀ, ಅಫಘಾನಿಸ್ಥಾನದ ಮೇಲಾಲಿ ಆಸಕ್ತಿ ಯಾಕಿರುತ್ತೆ? ಆದ್ದರಿಂದಲೇ ತಾನು ಆ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದುಬಿಟ್ಟಿತು.

    (ಪ್ರತಿಯೊಂದು ರಾಷ್ಟ್ರ ತನ್ನ ವಿದೇಶಾಂಗ ನೀತಿಯನ್ನು ತನ್ನ ಸ್ವಾರ್ಥಕ್ಕನುಗುಣವಾಗಿ ರೂಪಿಸಿಕೊಳ್ಳುತ್ತದೆ: ಇದರಲ್ಲಿ ಶಾಶ್ವತ ಮೈತ್ರಿ, ಇಸಂ, ಕೃತಜ್ಞತೆ ಮುಂತಾದುವ್ಯಾವುವೂ ಇರುವುದಿಲ್ಲ ಎಂದು ಹೇಳುವುದು ಈ ಉಪೋದ್ಘಾರದ ಮುಖ್ಯ ಉದ್ದೇಶ. ಅದಕ್ಕೇ ಇದನ್ನು ಇಷ್ಟು ವಿವರವಾಗಿ ಹೇಳುತ್ತಿರುವುದು).

    27 ಸೆಪ್ಟೆಂಬರ್, 1996

    ಕಾಬೂಲನ್ನು ಆಕ್ರಮಿಸಿಕೊಂಡ ತಾಲಿಬಾನಿಗಳು ತಮ್ಮನ್ನು ಅಫಘಾನಿಸ್ಥಾನದ ಆಳರಸರೆಂದು ಘೋಷಿಸಿಕೊಂಡರು. ಆದರೆ ಜಗತ್ತಿನಲ್ಲಿ ಯಾವುದೇ ರಾಷ್ಟ್ರವೂ ಅವರನ್ನು ಅಧಿಕೃತ ಪ್ರತಿನಿಧಿಗಳೆಂದು ಪರಿಗಣಿಸಿ ಮನ್ನಣೆ ನೀಡಲು ಸಿದ್ಧವಿರಲಿಲ್ಲ. ಅಂಥ ಸಂದರ್ಭದಲ್ಲಿ ಇಡೀ ಜಗತ್ತಿನಾದ್ಯಂತ ಅಫಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಒಪ್ಪಿಗೆ ನೀಡಲು ಮುಂದೊದಗಿ ಬಂದದ್ದು ಕೇವಲ ಮೂರು ರಾಷ್ಟ್ರಗಳು ಮಾತ್ರ.

    ಅವುಗಳಲ್ಲಿ ಮುಖ್ಯವಾದುದು ಪಾಕಿಸ್ತಾನ!

    ಆ ರೀತಿ ಅದು ಒಬ್ಬಂಟಿಯಾಗಿಬಿಟ್ಟಿತು. ಆದರೆ ತಾಲಿಬಾನಿಗಳು ಬಲು ಬುದ್ಧಿವಂತರು. ಬುದ್ಧಿವಂತಿಕೆ ಎನ್ನುವುದಕ್ಕಿಂತಲೂ ‘ಗುಳ್ಳೇನರಿ ತಂತ್ರ’ ಎನ್ನುವುದು ಸಮಂಜಸವಾಗುತ್ತದೇನೋ!

    ಅಮೆರಿಕವನ್ನು ಒಲಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲವೆನ್ನುವುದು ಅವರಿಗೆ ಗೊತ್ತಿತ್ತು. ಅದೇ ರೀತಿ ಭಾರತ ದೇಶವನ್ನು ಕೂಡ! ಅದಕ್ಕೆ ರಾಯಭಾರ ಕಳಿಸಿತು.

    ‘ಅಫಘಾನಿಸ್ಥಾನದಲ್ಲಿ ಕದ್ದು ಬೆಳೆಯಲಾಗುತ್ತಿರುವ ಗಾಂಜಾ ಬೆಳೆಯನ್ನೆಲ್ಲವನ್ನೂ ನಾಶ ಮಾಡುತ್ತೇವೆ; ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟುತ್ತೇವೆ’ ಎಂದು ಅಮೆರಿಕಕ್ಕೆ ಹೇಳಿಕಳಿಸಿತು. ತಮ್ಮ ಪ್ರಾಮಣಿಕತೆಯನ್ನು ಸಾಬೀತುಪಡಿಸಿಕೊಳ್ಳಲೊಸುಗನರರೂಪ ರಾಕ್ಷಕ ಆಯ್ಷುಲ್ ಖಾನ್ಸೀ ಎನ್ನುವ ಭಯೋತ್ಪಾದಕರನ್ನು 1997ರ ಜೂನ್ ತಿಂಗಳಲ್ಲಿ ಅಮೆರಿಕದ ಗೂಢಚಾರ ಸಂಸ್ಥೆಯ ವಶಕ್ಕೊಪ್ಪಿಸಿದರು ತಾಲಿಬಾನಿಗಳು. ಅವನು 1995ರಲ್ಲಿ ಅಮೆರಿಕದ ಗೂಢಚಾರರನ್ನು ಕೊಂದು ಬಲೂಚಿಸ್ಥಾನಕ್ಕೆ ಓಡಿ ಹೋಗಿದ್ದ. ಅವನನ್ನು ಹಿಡಿದೊಪ್ಪಿಸುವ ಮೂಲಕ ಅಮೆರಿಕಕ್ಕೆ ಹತ್ತಿರವಾಗಲು ತಾಲಿಬಾನ್ ಹವಣಿಸಿತು.

    ಅದೇ ರೀತಿ, ಭಾರತದ ವಿಮಾನವನ್ನು ಪಾಕಿಸ್ತಾನಿ ಭಯೋತ್ಪಾದಕರು ಅಪಹರಿಸಿ ಕಂದಹಾರ್‍ಗೆ (ಗಾಂಧಾರಿ ಜನಿಸಿದ ಪ್ರದೇಶ) ಒಯ್ದಾಗ, ಮರ್ಯಾದಸ್ಥನಂತೆ ಮಧ್ಯವರ್ತಿತ್ವ ವಹಿಸಿ, ಸಂಧಿ (?) ಮಾಡಿತು. ಆದಾಗ್ಯೂ ಭಾರತ ದೇಶ ತನ್ನ ಮೊದಲಿನ ಮಾತಿಗೇ ಕಟ್ಟುಬಿದ್ದ ತಾಲಿಬಾನಿಗಳಿಂದ ದೂರವೇ ಉಳಿಯಿತು.

    ಆದರೆ, ಅಮೆರಿಕಕ್ಕೆ ಮಾತ್ರ ಕ್ರಮಕ್ರಮೇಣ ತಾಲಿಬಾನಿಗಳ ಮೇಲೇ ಪ್ರೀತಿ ಉಂಟಾಗತೊಡಗಿತು. ಅದಕ್ಕೆ ಕಾರಣ, ಅವರು ಅಫೀಮು ಬೆಳೆಯನ್ನು ಧ್ವಂಸ ಮಾಡುತ್ತೇವೆ ಎಂದು ಹೇಳಿದ್ದಲ್ಲ. ಅಂಥ ಸಣ್ಣ-ಪುಟ್ಟ ಆಮಿಷಗಳಿಗೆಲ್ಲ ಅಮೆರಿಕನ್ನರು ಮರುಳಾಗುವಂಥವರಲ್ಲ. ಅಸಲಿ ಕಾರಣ ಬೇರೆಯದೇ ಇತ್ತು! ಅಷ್ಟು ಹೊತ್ತಿಗೆ ಅಮೆರಿಕ ಇರಾಕನ್ನು ತನ್ನ ಪೂರ್ತಿ ಅಧೀನಕ್ಕೆ ತಂದುಕೊಳ್ಳಲಾಗದೆ ನಾನಾ ಯಾತನೆ ಪಡುತ್ತಿತ್ತು. ಅದಕ್ಕೆ ಜತೆಯಾಗಿ ಇರಾನ್ ಕೂಡ ಅಮೆರಿಕಕ್ಕೆ ವಿರುದ್ಧವಾಗಿತ್ತು.

    ಮುಸ್ಲೀಮರಲ್ಲಿ ಸ್ಥೂಲವಾಗಿ ಎರಡು ಪಂಗಡ: ಶಿಯಾ ಮತ್ತು ಸುನ್ನಿ. ಸಾಮಾನ್ಯವಾಗಿ ಒಂದು ಪಂಗಡದವರನ್ನು ಕಂಡರೆ ಇನ್ನೊಂದು ಪಂಗಡದವರಿಗೆ ಆಗದು.

    ಇರಾನೀಯರ ಶಿಯಾ ಪಂಥದವರು!

    ಇರಾನಿಗೆ ನೆರೆಯಲ್ಲಿರುವ ತಾಲಿಬಾನಿಗಳು ಸುನ್ನಿಗಳು! ತಾಲಿಬಾನಿಗಳನ್ನು ಬೇಕು ಮಾಡಿಕೊಂಡು, ಅವರಿಗೆ ಆಯುಧಗಳನ್ನು ಒದಗಿಸಿದರೆ, ಸ್ವಾಭಾವಿಕವಾಗಿಯೇ ಶತ್ರುಗಳಾದ ಇರಾನೀಯರಿಗೆ ಮಗ್ಗುಲ ಮುಳ್ಳಾಗುತ್ತಾರೆ! ಇದು ಅಮೆರಿಕದ ವಿಚಾರ. ಆದ್ದರಿಂದಲೇ ಅದು ತಾಲಿಬಾನಿಗಳ ದುಶ್ಚರ್ಯಗಳನ್ನು ಖಂಡಿಸಲಿಲ್ಲ. ಪಾಕಿಸ್ತಾನಕ್ಕಂತೂ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು. ತಾಲಿಬಾನಿಗಳಿಗೆ ಅಮೆರಿಕದ ಬೆಂಬಲ ದೊರೆತರೆ. ಇನ್ನು ಭಾರತದ ಬಾಲ ಕತ್ತರಿಸಬಹುದು. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಶ್ರೀನಗರದೊಳಗೆ ಅವರನ್ನು ಕಳಿಸಿಕೊಟ್ಟರೆ ತಾಲಿಬಾನಿಗಳು ತಮ್ಮ ರಕ್ತದಾಹ ತೀರಿಸಿಕೊಳ್ಳುತ್ತಾರೆ. ಅಮೆರಿಕಕ್ಕೂ ಏನೂ ಮಾತಾಡುವ ಅವಕಾಶವಿರದು.

    ಈ ರೀತಿ ಎಲ್ಲ ದಾಳಗಳೂ ಸರಿಯಾಗಿವೆಯೋ ಇಲ್ಲವೋ ಎಂಬುದನ್ನು ನೋಡಿಕೊಂಡು, ಚದುರಂಗದಲ್ಲಿ ಕೊನೆಯ ನಡೆ ನಡೆಸಿ, ಭಾರತಕ್ಕೆ ಚೆಕ್ ಹೇಳಿತು ಪಾಕಿಸ್ತಾನ!

    ಆ ಕೊನೆಯ ನಡೆಯ ಹೆಸರು – ಕಾರ್ಗಿಲ್.

    20 ಮೇ, 1999

    ಪ್ರಶಾಂತವಾಗಿ ನಿದ್ದೆ ಮಾಡುತ್ತಿದ್ದ ರಕ್ಷಣಾಮಂತ್ರಿ ಜಾರ್ಜ್ ಫರ್ನಾಂಡಿಸ್. ಕರ್ತವ್ಯವನ್ನು ಹಗುರವಾಗಿ ಭಾವಿಸಿದ ಇಂಟಲಿಜೆನ್ಸ್ ಇಲಾಖೆ ಬೆಚ್ಚಿಬಿದ್ದು ಎಚ್ಚತ್ತು ಕೊಳ್ಳುವಷ್ಟರಲ್ಲಿ ಮೂರು ಸಾವಿರ ಜನ ಭಾರತೀಯ ಸೈನಿಕರು, ನಾಗರಿಕರು ಮರಣಿಸಿದ್ದರು.

    ಭಾರತ ದೇಶ ಶ್ರೀನಗರವನ್ನು ಕಳೆದುಕೊಳ್ಳುವ ಅಪಾಯ ಕಣ್ಣೋಟದ ಮೇರೆಗೇ ಬಂದುಬಿಟ್ಟಿತ್ತು.

    ಆ ಪರಿಸ್ಥಿತಿಯೇ ಮುಂದುವರಿದಿದ್ದರೆ ಅಮೆರಿಕಕ್ಕೆ ಬಲು ಮುಜುಗರದ ಪರಿಸ್ಥಿತಿ ಏರ್ಪಟ್ಟಿರುತ್ತಿತ್ತು. ಏಕೆಂದರೆ ಅದು ಆಗಲೆ ಮುಸ್ಲಿಮ್ ರಾಷ್ಟ್ರಗಳಾದ ಇರಾಕ್, ಇರಾನ್‍ಗಳೊಂದಿಗೆ ಜಗಳ ತಂದುಕೊಟ್ಟಿತ್ತು. ಇನ್ನುಳಿದ ಮುಸ್ಲಿಮ್ ರಾಷ್ಟ್ರಗಳು ತಮಗೆ ಬೆಂಬಲ ಸೂಚಿಸುತ್ತವೆಯೇ ಹೊರತು. ಆಂತರಿಕವಾಗಿ ತಮ್ಮ ಬಗ್ಗೆ ಅವರ್ಯಾರಿಗೂ ಗೌರವವಾಗಲಿ, ಅಭಿಮಾನವಾಗಲೀ ಇಲ್ಲವೆಂಬುದು ಅಮೆರಿಕನ್ನರಿಗೆ ಗೊತ್ತಿತ್ತು. ತಾನೀಗ ಪಾಕಿಸ್ತಾನಕ್ಕೆ ಬೆಂಬಲ ನೀಡಿದರೆ ಏನು ಲಾಭವಾಗುತ್ತೆ? ಎಂದು ಯೋಚಿಸಿತು.

    ಪಾಕಿಸ್ತಾನದ ಆರ್ಥಿಕ ಸ್ಥಿತಿ ಬಲು ದಾರುಣವಾಗಿತ್ತು. ಯುದ್ಧದಲ್ಲಿ ಭಾರತವನ್ನು ಸೋಲಿಸಿ ಶ್ರೀನಗರವನ್ನು ಆಕ್ರಮಿಸಿಕೊಂಡರೂ ದೀರ್ಘಾವಧಿಯವರೆಗೆ ಅದನ್ನು ಉಳಿಸಿಕೊಳ್ಳುವುದು ಪಾಕಿಸ್ತಾನದಿಂದಾಗದು. ಅದು (ಪಾಕಿಸ್ತಾನ) ಈಗಾಗಲೇ ಹತ್ತು ಸಾವಿರ ಮಿಲಿಯನ್ ಡಾಲರ್‍ಗಳಷ್ಟು ಆರ್ಥಿಕ ದುಸ್ಥಿತಿಯಲ್ಲಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ತನ್ನ ಬಳಿಯಿಂದ ಯುದ್ಧ ಸಾಮಗ್ರಿ ಖರೀದಿಸುವಷ್ಟು ದುಡ್ಡಿನ ತಾಕತ್ತು ಆ ದೇಶಕ್ಕಿರಲಿಲ್ಲ. ಅದಾಗಲೇ ತನಗೆ ಎರಡು ಸಾವಿರ ಮಿಲಿಯನ್ ಡಾಲರ್‍ಗಿಂತಲೂ ಜಾಸ್ತಿ ಸಾಲ ಕೊಡುವುದು ಬಾಕಿಯಿತ್ತು.

    ಈ ಸಮಯದಲ್ಲಿ ಭಾರತಕ್ಕೆ ದೂರವಾದರೆ ರಷ್ಯಾ, ಇರಾಕ್, ಇರಾನ್, ಭಾರತ-ಇವೆಲ್ಲ ಒಂದುಗೂಡಬಹುದು. ಅದರಿಂದ ತನ್ನ ಸಾರ್ವಭೌಮತ್ವಕ್ಕೆ ಅಪಾಯ ತಪ್ಪಿದ್ದಲ್ಲ! ತಾಲಿಬಾನಿಗಳು, ಪಾಕಿಸ್ತಾನ್ ಸ್ವಾತಂತ್ರ್ಯ ಯುದ್ಧವೀರರು ಕಾಶ್ಮೀರದ ಗಡಿಯಲ್ಲಿ ಹೋರಾಡುವುದಕ್ಕಿಂತಲೂ ಇರಾನ್, ಇರಾಕ್‍ಗಳಿಗೆ ಮನಶ್ಯಾಂತಿ ಇಲ್ಲದಂತೆ ಮಾಡಿದರೇನೇ ತನಗೆ ಒಳ್ಳೆಯದು... ಇದೆಲ್ಲವನ್ನೂ ಆಲೋಚಿಸಿಯೇ ಅಮೆರಿಕ ಒಂದು ನಿರ್ಧಾರಕ್ಕೆ ಬಂತು. ತತ್‍ಕ್ಷಣವೇ ಬರಬೇಕೆಂದು ಪಾಕಿಸ್ತಾನದ ಪ್ರಧಾನಿಗೆ ಹೇಳಿಕಳಿಸಿತು. ಇದಾಗಿದ್ದು ಜುಲೈ ನಾಲ್ಕನೆಯ ತಾರೀಕಿನಂದು.

    ಅಮೆರಿಕ (ಆಗಿನ) ಅಧ್ಯಕ್ಷ ಬಿಲ್ ಕ್ಲಿಂಟನ್, ಪಾಕಿಸ್ತಾನದ (ಆಗಿನ) ಪ್ರಧಾನಿ ನವಾಜ್ ಷರೀಫರೊಂದಿಗೆ ಪರಿಸ್ಥಿತಿಯನ್ನು ಸಮೀಕ್ಷಿಸಿದರು.

    ಶರೀಫ್ ಮುಗ್ಧನಂತೆ- ನನಗೇನೂ ಗೊತ್ತಿಲ್ಲ ಮಿಸ್ಟರ್ ಪ್ರೆಸಿಡೆಂಟ್. ಆ ತಾಲಿಬಾನಿಗಳೂ ಕಾಶ್ಮೀರ್ ಪವಿತ್ರ ಯುದ್ಧ ವೀರರೂ ಮಾಡುತ್ತಿರುವ ಯುದ್ಧ ಅದು. ಅದರೊಂದಿಗೆ ನಮ್ಮ ದೇಶಕ್ಕೆ ಯಾವ ಸಂಬಂಧವೂ ಇಲ್ಲ ಎಂದ.

    ಕಿವೀಲಿಡೋದಿಕ್ಕೆ ಪಾಕಿಸ್ತಾನದಲ್ಲಿ ಹೂಗಳು ಎಲ್ಲೂ ಸಿಗೋದಿಲ್ಲ ಶರೀಫ್, ಕಾಶ್ಮೀರದಲ್ಲಾದರೆ ಸಿಗುತ್ತೆವೆ. ಅದಕ್ಕೆ ಬಹುಶಃ ನೀವು ಅದನ್ನು ಆಕ್ರಮಿಸಿಕೊಳ್ಳಬೇಕೆಂದುಕೊಳ್ತಿದೀರಿ ಅಂತ ಅಂದ್ಕೋತೀನಿ.

    ನೀವೇನು ಮಾತಾಡ್ತಿದೀರೋ ನನಗೆ ಅರ್ಥವಾಗ್ತಿಲ್ಲ.

    ಪಾಕಿಸ್ತಾನ್ ಸೇನಾ ಬೆಂಬಲವಿಲ್ಲದೆ ಕೇವಲ ಕಾಶ್ಮೀರ್ ಯುದ್ಧವೀರರು, ತಾಲಿಬಾನಿಗಳು ಸೇರಿ ಹಿಮಾಲಯ ಶಿಖರಗಳ ಮೇಲೆ ಎಲುಬು ತೂತು ಕೊರೆಯುವ ಚಳಿಯಲ್ಲಿ, ಬಲಿಷ್ಠ ಭಾರತದ ಸೇನೆಯನ್ನು ಎದುರಿಸಿ ಹೋರಾಡಿ ಗೆಲ್ಲಬೇಕು ಅಂದ್ಕೋಳ್ತಿದಾರಾ? ಯಾರ ಕಿವೀಲಿ ಹೂವಿಡಬೇಕು ಅಂತ ಇದನ್ನೆಲ್ಲ ಹೇಳ್ತಿದೀರಿ?

    ಜಮ್ಮು-ಶ್ರೀನಗರಗಳನ್ನು ಒಂದುಗೂಡಿಸುವ ರಹದಾರಿಯನ್ನು ಕಾರ್ಗಿಲ್ ಬಳಿ ಆಕ್ರಮಿಸಿದರೆ ಕಾಶ್ಮೀರ ಪ್ರತ್ಯೇಕವಾಗಿ ಬಿಡುತ್ತೆ ಮಿಸ್ಟರ್ ಪ್ರೆಸಿಡೆಂಟ್.

    ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಯಾವುದೇ ಎರಡು ದೇಶಗಳ ನಡುವೆ ಯುದ್ಧ ಆಗೋದನ್ನು ಬಯಸುತ್ತಿಲ್ಲ ಶರೀಫ್. ಯುದ್ಧ ಅಂತೇನಾದರೂ ಮಾಡೋದಿದ್ರೆ ಅದನ್ನು ಅಮೆರಿಕವೇ ಮಾಡಬೇಕು! ಅದಾದರೂ ಕೇವಲ ಇತರ ದೇಶಗಳಿಗೆ ಶಾಂತಿ-ಭದ್ರತೆಗಳನ್ನೋದಗಿಸುವುದಕ್ಕೋಸ್ಕರ...!

    ಪಾಕಿಸ್ತಾನ್ ಪ್ರಧಾನಿ ಮತ್ತೊಮ್ಮೆ ಯೋಚಿಸಿ, ಮೋಡಿ ಎನ್ನುವ ಧೋರಣೆಯಲ್ಲಿ ನುಡಿದ- ಅಫಘಾನನ್ನು ಗೆದ್ದ ನಂತರ ತಾಲಿಬಾನಿಗಳು ಬಲು ಉತ್ಸಾಹದಿಂದಿದ್ದಾರೆ. ‘ಯುದ್ಧ’ ಅವರನ್ನು ಬಲು ಉತ್ಸಾಹದಿಂದಿರಿಸುತ್ತದೆ. ಮತ್ತೊಂದೆಡೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಸ್ವಾಂತತ್ರ್ಯ ಯೋಧರು ಅವರಿಗೆ ಜೊತೆಯಾಗಿದ್ದಾರೆ. ಕಾಶ್ಮೀರಕ್ಕೆ ವಿಮುಕ್ತಿ ದೊರಕಿಸಿಕೊಡಲು ಇದಕ್ಕಿಂತಲೂ ಒಳ್ಳೆಯ ಅವಕಾಶ ಮತ್ತೊಂದು ಸಿಗೋದಿಲ್ಲ. ಸ್ವಲ್ಪ ನಮ್ಮ ಕಡೆಯಿಂದಲೂ ಯೋಚಿಸಿ.

    ಪ್ರೆಸಿಡೆಂಟ್ ನಕ್ಕ. ಅಮೆರಿಕ ತನ್ನ ಕಡೆಯಿಂದ ಬಿಟ್ಟು ಬೇರಾರ ಕಡೆಯಿಂದಲೂ ಯೋಚಿಸೋದಿಲ್ಲ ಮಿಸ್ಟರ್ ಪ್ರೈಮ್ ಮಿನಿಸ್ಟರ್. ಈಗಾಗಲೇ ನಾವು ಸಾಕಷ್ಟು ಮುಖಭಂಗಕ್ಕೀಡಾಗಿದ್ದೇವೆ. ಇರಾಕ್‍ನಂತಹ ಪುಟ್ಟ ದೇಶವನ್ನು, ಸದ್ದಾಮ್ ಹುಸೇನನನ್ನೂ ನಿಯಂತ್ರಿಸಲು ನಮ್ಮಿಂದಾಗುತ್ತಿಲ್ಲ. ಇರಾನಿನಲ್ಲಿ ಕೂಡ ಹೆಚ್ಚು ಕಮ್ಮಿ ಸೋಲುವ ಪರಿಸ್ಥಿತಿಯೇ ತಲೆದೋರಿ ನಿಮ್ಮ ತಾಲಿಬಾನಿಗಳ ಸಹಾಯ ಪಡೆಯೋಹಾಗಾಗಿದೆ... ಎಂದು ಕ್ಷಣ ತಡೆದು ಮುಂದುವರೆಸಿದ: ಈ ಪರಿಸ್ಥಿತಿಯಲ್ಲಿ ಭಾರರದೊಂದಿಗೆ ಯುದ್ಧವಾದರೆ ನಾವು ನಿಮಗೇನೂ ನೆರವು ನೀಡುವ ಪರಿಸ್ಥಿತಿಯಲ್ಲಿರೋದಿಲ್ಲ.  ಭಾರತ ಕೂಡ ಅಷ್ಟು ಸುಲಭವಾಗಿ ಕಾಶ್ಮೀರವನ್ನು ಬಿಟ್ಟುಕೊಡೋದಿಲ್ಲ. ಯೋಚನೆ ಮಾಡಿ ನೋಡಿ! ಹಾನಿಗೊಳಗಾಗೋದು ನೀವೇ. ಹೋಗಿ, ಯುದ್ಧ ನಿಲ್ಲಿಸಿ.

    ಪಾಕಿಸ್ತಾನದ ಪ್ರಧಾನಿ ಮಾತಾಡಲಿಲ್ಲ. ಮಾತಾಡಲು ಏನೂ ಇರಲಿಲ್ಲ ಕೂಡಾ!

    ಸಾವಿರಾರು ಮಿಲಿಯನ್‍ಗಟ್ಟಲೆ ಡಾಲರ್‍ಗಳನ್ನು ಸಾಲ ನೀಡಿದವನೊಂದಿಗೆ ಒಬ್ಬ ದುರ್ಬಲ ಏನು ಮಾತಾಡಬಲ್ಲ? ಇನ್ನೊಂದು ಯುದ್ಧಕ್ಕೆ ಮತ್ತೆ ಸಹಾಯ ಮಾಡೆಂದು ಯಾವ ಬಾಯಲ್ಲಿ ಕೇಳಬಲ್ಲೆ? ಅದಕ್ಕೆ ಸುಮ್ಮನೆ ಅಲ್ಲಿಂದೆದ್ದು ಪಾಕಿಸ್ತಾನಕ್ಕೆ ಬಂದುಬಿಟ್ಟೆ.

    ಯುದ್ಧ ನಿಂತಿತು.

    ಮೊದಲಿಗೆ ಪಾಕಿಸ್ತಾನ್ ಕಾರ್ಗಿಲ್ ಯುದ್ಧದೊಂದಿಗೆ ತನಗೇನೂ ಸಂಬಂಧವಿಲ್ಲ ಎಂದಿತ್ತು. ಆದರೆ ಅಮೆರಿಕ ನೀಡಿದ ಎಚ್ಚರಿಕೆಯಿಂದಾಗಿ ಯುದ್ಧ ನಿಂತುಹೋಯಿತು. ಅಂದರೆ ಏನರ್ಥ?

    ಈ ಪ್ರಶ್ನೆಗೆ ಉತ್ತರ ಏನೆಂಬುದು ವಿಶ್ವದ ಎಲ್ಲ ರಾಷ್ಟ್ರಗಳಿಗೂ ಗೊತ್ತು. ಆದರೆ ಯಾರೂ ಬಾಯಿಬಿಟ್ಟು ಹೇಳಲಾರರು. ಅವರವರ ಸಂಕಟ ಅವರಿಗೆ? ಅವರವರ ಉಳಿವು ಅವರವರಿಗೆ ಮುಖ್ಯ ಒಟ್ಟಿನಲ್ಲಿ ಶಾಂತಿ ಸ್ಥಾಪನೆಯಂತೂ ಆಯಿತು.

    ಪರಿಸ್ಥಿತಿ ಇಷ್ಟಕ್ಕೇ ನಿಂತಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಆ ರೀತಿ ನಿಂತರೆ ಅದು ಇತಿಹಾಸ ಹೇಗಾಗುತ್ತದೆ?

    ಇಲ್ಲೇ ನಾಟಕೀಯವಾದೊಂದು ಬದಲಾವಣೆ ಸಂಭವಿಸಿತು.

    ... ಅಮೆರಿಕದ ಅಧ್ಯಕ್ಷರಿಂದ ಬೀಳ್ಕೊಡುಗೆ ಪಡೆದು ತನ್ನ ದೇಶಕ್ಕೆ ಮರಳುವ ಮುನ್ನ ಪಾಕಿಸ್ತಾನದ ಪ್ರಧಾನಿ ಈ ರೀತಿ ಹೇಳಿದ: ನೀವು ಬಯಸಿದಂತೆಯೇ ಪ್ರತ್ಯಕ್ಷ ಕಾರ್ಗಿಲ್ ಯುದ್ಧವನ್ನು ನಿಲ್ಲಿಸುತ್ತೇವೆ. ಆದರೆ ಕಾಶ್ಮೀರ್ ಸ್ವಾತಂತ್ರ್ಯಕ್ಕೋಸ್ಕರ ಹಪಹಪಿಸುತ್ತಿರುವ ಜೆಹಾದ್ ವೀರರನ್ನಾಗಲಿ, ಭಾರತದ ಮೇಲೆ ಸೇಡಿನಿಂದ ಕುದಿಯುತ್ತಿರುವ ತಾಲಿಬಾನಿಗಳನ್ನಾಗಲಿ ತಡೆಯೋದು ನಮ್ಮಂದಾಗದು...

    ಇಬ್ಬರು ರಾಜಕೀಯ ಧುರೀಣರು ಮಾತಾಡುವಾಗ ಇಷ್ಟು ಲೌಕಿಕ ಜಾಣ್ಮೆಯಿಂದಲೇ ಮಾತಾಡುತ್ತಾರೆ. ಶರೀಫ್ ಹೇಳುತ್ತಿರುವುದೇನೆಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧನಾಗಿರಲಿಲ್ಲ ಅಮೆರಿಕನ್ ಪ್ರೆಸಿಡೆಂಟ್...

    ‘ನಮ್ಮ ಕೆಲಸ ನಾವು ಮಾಡಲು ಬಿಡಿ. ನೀವು ಅಡ್ಡ ಬರಬೇಡಿ. ಚಾಪೆ ಕೆಳಗೆ ಹರಡಿಕೊಳ್ಳುವ ನೀರಿನಂತೆ ನಾವು ಗುಟ್ಟಾಗಿ ನಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತೇವೆ ನೀವು ಬಯಸಿದಂತೆ ಪ್ರತ್ಯಕ್ಷ ಯುದ್ಧ ಮಾತ್ರ ಮಾಡೋದಿಲ್ಲ...’ ಎನ್ನುತ್ತಿದ್ದಾನೆ ಪಾಕ್ ಪ್ರಧಾನಿ!

    ತನಗೇನೂ ಅರ್ಥವಾಗಿಲ್ಲ ಎನ್ನುವಂತೆ ನುಡಿದ ಅಮೆರಿಕನ್ ಪ್ರೆಸಿಡೆಂಟ್- ಯಾರೋ ಭಯೋತ್ಪಾದಕರು ನಿಮ್ಮ ದೇಶದಲ್ಲಿ ರಹಸ್ಯವಾಗಿ ಶಿಬಿರಗಳನ್ನೇರ್ಪಡಿಸಿಕೊಂಡು ಭಾರತದ ಮೇಲೆ ದಾಳಿ ಮಾಡಿದರೆ, ಅದಕ್ಕೆ ಪಾಪ, ನೀವೇನು ಮಾಡಬಲ್ಲಿರಿ? ನಾವು ಅದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ.

    (ಈ ಮಾತುಗಳನ್ನಾಡಿದ ಎರಡು ವರ್ಷಗಳಿಗೆ ತಾವು ಆಡಿದ ಮಾತುಗಳೆಷ್ಟು ತಪ್ಪು ಎನ್ನುವುದು ಅಮೆರಿಕನ್ನರಿಗೆ ಅರ್ಥವಾಯಿತು).

    ಕಾರ್ಗಿಲ್‍ನಿಂದ ಪಾಕಿಸ್ತಾನದ ಸೇನೆ ಹಿಂದೆ ಸರಿದ ಅನಂತರ ಪರೋಕ್ಷ ಯುದ್ಧದಿಂದಾಗಿ ಕಾಶ್ಮೀರದ ಮೇಲೆ ಒತ್ತಡ ಜಾಸ್ತಿಯಾಯಿತು. ಮತೋನ್ಮಾದದಿಂದಾಗಿ ಪ್ರಾಣವನ್ನೂ ಬಲಿಗೊಡಲು ಹಿಂತೆಗೆಯದ ‘ಮಾನವ ಬಾಂಬು’ಗಳನ್ನು ತಯಾರಿಸುವುದನ್ನು ಮಾನವ ಜನಾಂಗ ಹೊಸದಾಗಿ ಕಲಿತುಕೊಂಡಿತು. ಕಾಶ್ಮೀರದಲ್ಲಿ ಭಾರತದ ಭದ್ರತಾ ಪಡೆಗಳ ಮೇಲೆ ಮಾರಣಹೋಮ ಆರಂಭವಾಯಿತು. ಸಹಾನುಭೂತಿಯ ವಾಕ್ಯಗಳನ್ನು ಆಡುವುದರ ಹೊರತಾಗಿ ಯಾರೇನು ಮಾಡುವಂತಿದ್ದರು? ಪರೋಕ್ಷ ಯುದ್ಧವೆಂದರೆ (ಪ್ರಾಕ್ಸಿದಾರ್) ಎಲ್ಲೋ ಯಾರೋ ಇದ್ದು. ಇಲ್ಲಿ ವಿಧ್ವಂಸ ಸೃಷ್ಟಿಸುವುದು! ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ಈ ಯುದ್ಧಕ್ಕೆ ಯಾವ ದೇಶದಿಂದಲೂ ಪರಿಹಾರ ಸೂಚಿಸಲಾಗಲಿಲ್ಲ. ಈ ಯುದ್ಧಗಳಿಗೆ ಮುಖ್ಯವಾಗಿ ಬಲಿಯಾದದ್ದು- ಭಾರತ, ಇಸ್ರೇಲ್, ಐರ್ಲೆಂಡುಗಳು.

    ಸರಿಯಾಗಿ ಅದೇ ಸಮಯಕ್ಕೆ ಜಗತ್ತಿನ ವಿವಿಧ ರಾಷ್ಟ್ರಗಳ ರಾಜಧಾನಿಗಳಲ್ಲಿರುವ ಅಮೆರಿಕನ್ ರಾಯಭಾರಿ ಕಚೇರಿಗಳಲ್ಲಿ ಒಂದೇ ದಿನ ಬಾಂಬ್ ಸ್ಫೋಟಗಳು ಸಂಭವಿಸಿದವು. ನೂರಾರು ಜನ ಮರಣಿಸಿದರು. ಕೆನಡಾ, ಯೂರೋಪಿಯನ್ ರಾಷ್ಟ್ರಗಳಲ್ಲಿ ಹಾಹಾಕಾರವಾಯಿತು. ಈ ಬಾಂಬ್ ಸ್ಫೋಟಗಳಿಗೆ ಕಾರಣ – ಇಸ್ರೇಲ್ ಯಹೂದಿಗಳಿಗೂ ಪ್ಯಾಲೆಸ್ತೀನ್ ಮುಸ್ಲಿಮರಿಗೂ ನಡೆಯುತ್ತಿರುವ ಯುದ್ಧ!

    ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಯುದ್ಧದಲ್ಲಿ ಅಮೆರಿಕದ ಬೆಂಬಲ ಇಸ್ರೇಲಿಗಿದೆ. ಅದಕ್ಕೆ ಆಯುಧಗಳನ್ನು ಒದಗಿಸುತ್ತಿರುವುದು ಅಮೆರಿಕವೆ. ಪ್ಯಾಲೆಸೀನ್ ಮುಸ್ಲಿಮರ ಮೇಲೆ ಆಗುತ್ತಿರುವ ದಾಳಿಯನ್ನು ಸಹಿಸಲಾಗದೆ, ಮತೋನ್ಮಾದ ಸಿದ್ಧಾಂರವನ್ನು ಮೈದುಂಬಿಕೊಂಡು ಒಂದು ಸಂಸ್ಥೆ, ಅಮೆರಿಕನ್ನರನ್ನು ನಿರ್ನಾಮ ಮಾಡಿ ಮಣ್ಣುಗೂಡಿಸಲು ಕಂಕಣ ತೊಟ್ಟಿತು. ರಾಯಭಾರ ಕಚೇರಿಗಳಲ್ಲಿ ಬಾಂಬುಗಳನ್ನಿರಿಸುವ ಮೂಲಕ ತನ್ನ ಪ್ರಥಮ ಪ್ರಯತ್ನ ಪ್ರಾರಂಭಿಸಿತು. ಜಗತ್ತಿನ ಇತಿಹಾಸದಲ್ಲಿ ಅನಾದಿಕಾಲದಿಂದಲೂ ಮುಸ್ಲಿಮರಿಗಾಗುತ್ತಿರುವ ಅನ್ಯಾಯವನ್ನು ಎದುರಿಸಲೆಂದೇ ತಾನು ಜನಿಸಿರುವುದಾಗಿ ನಂಬುವ ಒಬ್ಬ ವ್ಯಕ್ತಿ ಈ ಮತೋನ್ಮಾದ ಸಂಸ್ಥೆಗೆ ಮೂಲಪುರುಷ.

    ಅವನ ಹೆಸರು – ಒಸಾಮ - ಬಿನ್ - ಲಾಡೆನ್.

    11 ಸೆಪ್ಟೆಂಬರ್, 2001

    ಯಾರೋ ಭಯೋತ್ಪಾದಕರು ನಿಮ್ಮ ದೇಶದಲ್ಲಿ ಶಿಬಿರಗಳನ್ನೇರ್ಪಡಿಸಿಕೊಂಡು ನೆರೆ ರಾಷ್ಟ್ರಗಳ ಮೇಲೆ ಕತ್ತಲಲ್ಲಿ ದಾಳಿ ನಡೆಸಿದರೆ, ಅದಕ್ಕೆ ಪಾಪ, ನೀವೇನು ಮಾಡಬಲ್ಲಿರಿ? ಎಂದಿದ್ದ ಅಮೆರಿಕ, ಈಗ ಆ ಮಾತು ಹಿಂತೆಗೆದುಕೊಳ್ಳಬೇಕಾಗಿ ಬಂತು. ಅದಕ್ಕೆ ಕಾರಣ ‘ಸೆಪ್ಟೆಂಬರ್ 11’ ರಂದು ನಡೆದ ಘಟನೆ.

    ಆ ದಿನ ನಾಲ್ಕು ವಿಮಾನಗಳು, ಅಮೆರಿಕದ ಸೈನಿಕ ಬಲವನ್ನೂ ಗೂಢಚಾರ ವ್ಯವಸ್ಥೆಯನ್ನೂ ಅಪಹಾಸ್ಯ ಮಾಡುವಂತೆ ಡಬ್ಲ್ಯು. ಓ. ಸಿ. ಕಟ್ಟಡಗಳಿಗೆ ಅಪ್ಪಳಿಗೆ, ಸಾವಿರಾರು ಜನ ಅಮೆರಿಕನ್ನರನ್ನೂ ಪೆಂಟಗಾನ್ ಸೈನಿಕರನ್ನೂ ಬಲಿ ತೆಗೆದುಕೊಂಡು ಧ್ವಂಸವಾದವು. ಊಹೆಗೂ ನಿಲುಕದ ಈ ಭಯೋತ್ಪಾದಕ ಚಟುವಟಿಕೆಗೆ ಜಗತ್ತು ದಿಗ್ಭ್ರಮೆಗೀಡಾಯಿತು. ಇತ್ತೀಚಿನ ಕಾಲದಲ್ಲಿ ಇದರಂತಹ ನರರೂಪ ರಾಕ್ಷಸ ಚಟುವಟಿಕೆ ಮತ್ತೊಂದು ನಡೆದಿಲ್ಲ.

    ಇದರ ಹಿಂದಿರುವುದು ಒಸಾಮ - ಬಿನ್ - ಲಾಡೆನ್ ಎನ್ನುವುದು ಅಮೆರಿಕದ ನಂಬಿಕೆ. ಸಾಕ್ಷ್ಯಾಧಾರಗಳಿಲ್ಲ. ಆದರೆ ನಂಬಿಕೆ ಮಾತ್ರ ಬಲವಾಗಿತ್ತು. ಮುಸ್ಲಿಮ್ ಮತರಕ್ಷಣೆಯನ್ನು ತನ್ನ ಹೆಗಲಿಗೇರಿಸಿಕೊಂಡ ಲಾಡೆನ್, ಒಂದೊಮ್ಮೆ ಪಶ್ಷಿಮ ಏಷ್ಯಾದಲ್ಲಿರುತ್ತದೆ. ಅವನ ವಿಧ್ವಂಸಕರ ಚಟುವಟಿಕೆಗಳನ್ನು ಸಹಿಸಿಕೊಳ್ಳಲಾಗದೆ ಮಾತೃದೇಶ ಒದ್ದೋಡಿಸಿತ್ತು. ಸೌದಿ ಅರೆಬಿಯಾದಿಂದ ಪರಾರಿಯಾಗಿ ಅಫಘಾನಿಸ್ಥಾನದಲ್ಲಿ ತಲೆಮರೆಸಿಕೊಂಡ.

    ಅಸಲಿ ಕಥೆ ಆರಂಭವಾಗಿದ್ದು ಇಲ್ಲೇ. ಒಳ್ಳೆಯದೋ, ಕೆಟ್ಟದ್ದೋ, ಮಾನವರೋ, ರಾಕ್ಷಸರೋ-ಅದೇನೇ ಇದ್ದರೂ ಮಾತಿಗೂ ಮತಕ್ಕೂ ಕಟ್ಟುಬೀಳುವ ಸ್ವಭಾವ ತಾಲಿಬಾನಿಗಳದು. ಇವರು ಲಾಡೆನ್‍ಗೆ ಆಶ್ರಯ ನೀಡಿದರು. ಒಂದೊಮ್ಮೆ ಇವರನ್ನು ಲಾಲಿಸಿ, ಪ್ರೋತ್ಸಾಹಿಸಿದ್ದು ಅಮೆರಿಕನ್ನರೇ! ಆದರೆ ಭಯೋತ್ಪಾದಕರಿಗೆ ಆಶ್ರಯ ನೀಡಿದಕ್ಕೆ ಅಫಘಾನಿಸ್ಥಾನದಿಂದ ತಾಲಿಬಾನಿಗಳ ಹೆಸರು ಅಳಿಸಿಹಾಕಬೇಕೆಂದು ಅಮೆರಿಕ ನಿರ್ಧರಿಸಿತು. ವಿಶ್ವದ ರಾಷ್ಟ್ರಗಳ ಸಹಾನುಭೂತಿ ಪಡೆಯಿತು. ಇಲ್ಲವೆನ್ನುವ ಧೈರ್ಯ ಯಾರಿಗಿರಲು ಸಾಧ್ಯ? ಆದರೆ ಇಲ್ಲೊಂದು ತೊಡಕು ತಲೆಯೆತ್ತಿತು.

    ತಾಲಿಬಾನಿಗಳನ್ನು ಒಂದು ದೇಶ ಎಂಬುದಾಗಿ ಮನ್ನಣೆ ನೀಡಿದ ಮೂರು ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದುದು ಪಾಕಿಸ್ತಾನ. ತಾಲಿಬಾನಿಗಳೂ ಪಾಕಿಸ್ತಾನಿಗಳೂ ಆಪ್ತರು. ಆದರೆ ಪಾಕಿಸ್ತಾನದ ನೆರವಿಲ್ಲದೆ ಅಫಘನ್ ಸರೋವರದಲ್ಲಿ ಬಚ್ಚಿಟ್ಟುಕೊಂಡು ಲಾಡೆನ್ ದುರ್ಯೋಧನನನ್ನು ಹಿಡಿಯುವುದು ಕಷ್ಟ! ಆದರೆ ಪಾಕಿಸ್ತಾನ ಅಮೆರಿಕಕ್ಕೆ ಸಾವಿರಾರು ಕೋಟಿ ಡಾಲರ್‍ಗಳಷ್ಟು ಸಾಲಗಾರನಾಗಿತ್ತು. ಅಮೆರಿಕ ಆ ಟ್ರಂಪ್ ಕಾರ್ಡನ್ನು ಬಳಸಿತು!

    ತಾಲಿಬಾನಿಗಳನ್ನು ನಾಶಮಾಡಲು ನೆರವಾದರೆ, ನೀವು ನಮಗೆ ಕೊಡಬೇಕಿರುವ ಸಾಲವನ್ನೆಲ್ಲ ಮನ್ನಾ ಮಾಡುತ್ತೇವೆ ಎಂದು ಒತ್ತಡ ಹೇರಿತು ಅಮೆರಿಕ.

    ಪಾಪ, ಪಾಕಿಸ್ತಾನ ಏನು ಮಾಡಬೆಕು? ‘ಇಲ್ಲ, ಒಲ್ಲೆ’ ಎಂದ ಮರುಕ್ಷಣ ಅದರ ಆರ್ಥಿಕ ವ್ಯವಸ್ಥೆ ಇನ್ನಿಲ್ಲದಂತೆ ಕುಸಿಯುತ್ತದೆ!

    ನೀತಿ-ನಿಜಾಯಿತಿ, ಮಾತಿಗೆ ಕಟ್ಟುಬೀಳುವುದು, ಗೆಳೆತನ-ಇವ್ಯಾವುವೂ ರಾಜನೀತಿಯಲ್ಲಿ ಶಾಶ್ವತವಲ್ಲ!

    ಪಾಕಿಸ್ತಾನ ತಾಲಿಬಾನಿಗಳಿಗೆ ವಿರೋಧವಗಿ ಅಮೆರಿಕದೊಂದಿಗೆ ಕೈ ಕೂಡಿಸಿತು.

    ಹನ್ನೆರಡು ವರ್ಷಗಳ ಹಿಂದೆ ರಷ್ಯನ್ನರನ್ನೂ ಭಾರತೀಯರನ್ನೂ ಅಫಘನ್‍ನಿಂದ ದೂರ ಮಾಡಲೋಸುಗ ಯಾವ ಗುಂಪನ್ನು ಬಳಿಗರೆದುಕೊಂಡು ಪೋಷಿಸಿ, ಬೆಳೆಸಿದ್ದವೋ ಈಗ ಆ ಗುಂಪನ್ನು ಬೇರುಸಹಿತ ನಿರ್ಮೂಲ ಮಾಡಲು ಅಮೆರಿಕಾ-ಪಾಕಿಸ್ತಾನಗಳು ಕಂಕಣ ತೊಟ್ಟವು!

    ಇಲ್ಲೇ ಭಾರತ ಕಲಿಯಬೇಕಿರುವ ಪಾಠ ಒಂದಿದೆ! ಅದಕ್ಕೋಸ್ಕರವೇ ಇಷ್ಟೆಲ್ಲ ಉಪೋದ್ಘಾತ!

    "ನೀನು ಬಲಶಾಲಿಯಾದರೆ, ನೀನೇನು ಹೇಳಿದರೂ ಎಲ್ಲರೂ ಕೇಳುತ್ತಾರೆ. ಇಷ್ಟವಿರಲಿ, ಇಲ್ಲದಿರಲಿ, ನೀನಾಡುವ ಮಾತಿಗೆಲ್ಲ

    Enjoying the preview?
    Page 1 of 1