Discover millions of ebooks, audiobooks, and so much more with a free trial

Only $11.99/month after trial. Cancel anytime.

Second Innings
Second Innings
Second Innings
Ebook333 pages16 hours

Second Innings

Rating: 0 out of 5 stars

()

Read preview

About this ebook

Geetha B.U. is one of the famous authors in Kannada. She has also written in serials. She currently lives in Bangalore.
LanguageKannada
Release dateAug 12, 2019
ISBN6580202700576
Second Innings

Read more from Geetha B.U.

Related to Second Innings

Related ebooks

Reviews for Second Innings

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Second Innings - Geetha B.U.

    http://www.pustaka.co.in

    ಸೆಕೆಂಡ್ ಇನ್ನಿಂಗ್ಸ್

    Second Innings

    Author :

    ಗೀತಾ ಬಿ.ಯು.

    Geetha.B.U

    For more books
    http://www.pustaka.co.in/home/author/geetha-bu

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಆಸೆ

    ‘ಮಲ್ಲಿಗೆ’ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡ, ‘ಆಸೆ’ ಒಂದು ಸಾಧಾರಣ ಕಥೆ. ಸಂಬಂಧಗಳು, ಅವುಗಳ ನಡುವೆ ಇರುವ ಕೊಡು-ಪಡೆಯುವಿಕೆ ನನ್ನ ತುಂಬಾ ಕಾಡಿರುವ ವಿಚಾರ.

    ಒಂದು ಸಮಾರಂಭದಲ್ಲಿ ಉಡುಗಿರೆ ಕೊಡುವಾಗ ಅದರ ಹಿಂದೆ ಇರುವ, ಹಾಕುವ ಲೆಕ್ಕಾಚಾರದ ಆಳ, ಹರಿವು, ಸ್ವಾರ್ಥ ನನ್ನನ್ನು ಹಲವು ಬಾರಿ ದಿಗ್ಭ್ರಾಂತಳನ್ನಾಗಿ ಮಾಡಿದೆ.

    ಸ್ವಾರ್ಥ, ಆಸೆ, ಕೋಪ, ತಿರಸ್ಕಾರ, ಇತ್ಯಾದಿ ಭಾವನೆಗಳು ನಮ್ಮನ್ನು ಆಳುವಷ್ಟು ಆಳವಾಗಿ ಪ್ರೀತಿ, ವಿಶ್ವಾಸ ಆಳುವುದಿಲ್ಲ ಎಂಬ ವಿಚಾರ ಬೇಸರವನ್ನುಂಟು ಮಾಡುತ್ತದೆ. ಆಸೆಯನ್ನಿಟ್ಟುಕೊಂಡು, ದುರಾಸೆಯನ್ನು ದೂರವಿರಿಸಿ, ನಿರಾಸೆಚಿiÀುನ್ನು ಬದಿಗಿಟ್ಟು ಬೆಳೆಸೋಣ, ಬೆಳೆಯಬೇಕು ಎಂಬುದು ನನ್ನ ಆಸೆ.

    ಈ ಕಥೆಗೆ ಸ್ಫೂರ್ತಿ ನಾನು ಕಂಡ ಕಮಲ. ಈ ಕಥೆಯ ಕಮಲ ಇದ್ದಾಳೆ ಬೇರೊಂದು ಹೆಸರಿನಲ್ಲಿ!

    ನಿಂಗೇನಾದ್ರು ಬುದ್ಧಿ ಇದ್ಯಾ? ನೀವಾದರೂ ಅಕ್ಕನಿಗೆ ಹೇಳಬಾರದೆ ಭಾವ?" ಜಲಜ ಏರುದನಿಯಲ್ಲಿ ಹೇಳಿದಾಗ ಅವಳತ್ತ ಅಚ್ಚರಿಯಿಚಿದ ನೋಡಿದಳು ಕಮಲ. ತಲೆಚಿiÀiÁಡಿಸಿ ಮೇಲೆದ್ದರು ಕಮಲಳ ಗಂಡ ವಾಸುದೇವ.

    ನನ್ನ ಮಾತನ್ನು ನಿಮ್ಮಕ್ಕ ಯಾವತ್ತು ಕೇಳಿದ್ದಾಳೆ? ಇಪ್ಪತ್ತು ಸಾವಿರ ಡ್ರಾ ಮಾಡಿ ತಂದು ಕೊಡು ಅಚಿದ್ಲು ತಂದುಕೊಟ್ಟೆ..... ಬಂಗಾರದ ಅಂಗಡಿಗೆ ನಾನು ಬರುವುದಿಲ್ಲ ಅಂದೆ. ನಿನ್ನ ಕರೆಸಿಕೊಂಡಿದ್ದಾಳೆ ವಾಸುದೇವ ನಿರ್ಲಿಪ್ತರಾಗಿ ಹೇಳಿದರು.

    ಬುದ್ಧಿ ಇಲ್ಲದ್ದು ಏನೇ ಮಾಡ್ತಾ ಇದೀನಿ? ಬಸುರಿ ಹುಡುಗಿಗೆ ಒಂದು ಜೊತೆ ಹಸಿರು ಬಳೆ ಮಾಡಿಸೋಣ ಅಂತ... ಅದೂ ಅವಳ್ಯಾರು? ನನ್ನ ಸೊಸೆ, ನನ್ನ ಮಗನ ಹೆಂಡತಿ. ನಮ್ಮ ವಂಶದ ಕುಡಿ ಹೊತ್ತಿರುವ ಬಸುರಿ ಹುಡುಗಿಗೆ ನಾನು ಒಂದು ಜೊತೆ ಬಳೆ ಮಾಡಿಸ್ತೀನಿ ಅಂದ್ರೆ... ಕಮಲ ನಿಧಾನವಾಗಿ ಹೇಳಿದಾಗ ಜಲಜ ಜೋರಾಗಿ ನಕ್ಕಳು.

    ಸಾವಿರಾರು ರೂಪಾಯಿ ಸಂಪದಿಸ್ತಾನೆ ನಿನ್ನ ಮಗ. ಅವನಿಗೆ ಹೇಳು. ಮಾಡಿಸ್ತಾನೆ. ಅದು ಬಿಟ್ಟು ಭಾವನ ಸೇವಿಂಗ್ಸ್ ಇಂದ ಸುಡ್ಡುಯಾಕೆ ತೆಗಿತ್ಯಾ?....

    ಅವ್ನಿಗೆ ಹೇಳಿ ಅವ್ನ ಹೆಂಡ್ತಿಗೆ ಒಡವೆ ಮಾಡ್ಸಿದ್ರೆ ನಂದೇನು ಹೆಚ್ಚುಗಾರಿಕೆ? ನಾನು ಕೊಡಬೇಕು... ಇಪ್ಪತ್ತು ಸಾವಿರ... ಖರ್ಚು ಮಾಡಿದ್ರೆ ನಮಗೇನು ಕಷ್ಟವಾಗೋಲ್ಲ...... ನಂಗೆ ಆಸೆ...

    ನಿಂಗೆ ಆಸೆ ಅಚಿದ್ರೆ ನೀವೆರಡು ಜೊತೆ ಬಳೆ ಮಾಡಿಸ್ಕೊ...... ನೀನು ಆಡೋದು ನೋಡಿದ್ರೆ ನಿನ್ನ ಬಳಿ ಒಂದೆಂಟು ಜೊತೆ ಬಳೆಗಳಿವೆ ಅಂದ್ಕೋಬೇಕು! ಕೈಗೆ ಹಾಕಿಕೊಂಡಿರೋ ಎರಡು ಜೊತೆ ಬಳೆಗಳ್ನ ಬಿಟ್ರೆ ಬೇರೆ ಇಲ್ಲ... ಜಲಜಳ ಬಳಿ ಸಾಗಿ ಕಮಲ ತಮ್ಮ ಕೈಗಳನ್ನು ಅವರ ಮುಂದೆ ಚಾಚಿದರು.

    ಅಗಲ ಮೆಣಸಿನ ಬಳೆಗಳು. ಕೊಂಚ ಮಾಸಿದ್ದರೂ ಚೆನ್ನಾಗಿದ್ದವು. ಹಸಿರು ಹೂವಿನ ಗಾಜಿನ ಬಳೆಗಳಿಗೆ ಆಸರೆ ಎಂಬಂತೆ ಎರಡೂ ಕೈಗಳಲ್ಲಿದ್ದ ಬಂಗಾರದ ಬಳೆಗಳು.... ಆಸೆ ಅಂದ್ರೆ ನೀನೇ ಮಾಡಿಸ್ಕೋ ಇನ್ನೊಂದು ಜೊತೆ."

    ಜಲಜಾ... ಆಸೆ ಅಂದ್ರೆ ನಾನೇ ಮಾಡಿಸ್ಕೊಬೇಕು, ತೊಟ್ಕೋಬೇಕು, ಉಟ್ಕೊಬೇಕು ಅನ್ನೋದಷ್ಟೇ ಅಲ್ಲ. ಬೇರೆಯವರಿಗೆ, ತನ್ನವರಿಗೆ ಕೊಡಬೇಕು. ಅವರು ಉಟ್ಟು, ತೊಟ್ಟು ಮಾಡಿದ್ರೆ ನೋಡಿ ಸಂತೋಷಪಡಬೇಕು... ನಿಂಗೂ ಮಕ್ಕಳಿದ್ದಾರೆ..... ದೃಷ್ಠಿ ಬದಲಿಸಿಕೋ... ಅವಳ ತಲೆ ಸವರಿ ಮುಂದುವರಿಸಿದರು ಕಮಲ.

    ನಮಗೆ ಧಾರಾಳವಾಗಿ ಇದ್ದರೆ ಮಾತ್ರ ಕೊಡುವ ಬುದ್ಧಿ ಬರುತ್ತದೆ ಎಂದು ಏಕೆ ಭಾವಿಸ್ತ್ಯಾ?.. ನಂಗೆ ಎಂಟು ಜೊತೆ ಇದ್ದರೂ, ಇನ್ನೆರಡು ಜೊತೆ ಬೇಕು ಎಂದು ಆಸೆಪಟ್ಟರೆ, ಮಾಡಿಸಿಕೊಂಡರೆ ಅಡ್ಡಿಪಡಿಸುವವರು ಯಾರು? ಎರಡು ಜೊತೆ ಬಳೆ ಇದ್ದ ಮಾತ್ರಕ್ಕೆ ನಂಗೆ ಇನ್ನೂ ಬೇಕು ಎನ್ನುವ ಆಸೆ ಇರಬೇಕು ಎಂದು ಹೇಗೆ ನಿರ್ಧರಿಸಿದೆ?....

    ಅಬ್ಬಾ!... ಕ್ಷಮಿಸು ತಾಯಿ! ಕೊರೆಯಬೇಡ....ಈಗ ಹೈದರಾಬಾದಿಗೆ ಯಾವಾಗ ಹೊರಟಿದ್ಯಾ?.... ಕೈ ಮುಗಿದಳು ಜಲಜ.

    ನಕ್ಕು, ಅವಳ ಮುಗಿದ ಕೈಗಳನ್ನು ಬೇರ್ಪಡಿಸಿದರು ಕಮಲ.

    ಬರೋ ಸೋಮ್ವಾರ, ಮುಂದಿನ ತಿಂಗಳು ಎರಡಕ್ಕೆ ಸವಿತಾಗೆ ಎಂಟು ತುಂಬುತ್ತೆ..... ಆರತಿ ಶಾಸ್ತ್ರ ಏನೂ ಇಲ್ಲ... ಸುಮ್ಮನೆ ಕುಂಕುಮ ಹಚ್ಚಿಕೊಡೋದು... ತಾಯಿ ಇಲ್ಲದ ಹುಡುಗಿ... ಮೂರು ತಿಂಗಳು ಬಾಣಂತನ ಮಾಡೋದು, ಬರೋದು. ಹೆಚ್ಚಿಗೆ ಇರೋಕೆ ಆಗೋಲ್ಲ.... ಇವ್ರು ರಿಟೈರ್ಡ್ ಆದರೂ ನೂರೆಂಟು ಕೆಲಸ ಹಚ್ಚಿಕೊಂಡಿದ್ದಾರೆ. ಬರೋಲ್ಲವಂತೆ...

    ಅರೆ! ಹಾಗೆಲ್ಲಿ ಅಂದೆ?.. ನಿನ್ನ ಜೊತೆ ಬರೋಲ್ಲ. ಮಗು ಹುಟ್ಟಿದ ಮೇಲೆ ಬಂದು ನೋಡಿಕೊಂಡು ವಾಪಸ್ ಬರ್ತೀನಿ. ಅಲ್ಲೇ ಇದೋಲ್ಲ ಅಂದಿದ್ದು ಅಷ್ಟೆ... ವಾಸುದೇವ ಮಧ್ಯೆ ಸೇರಿಸಿದಾಗ ನಕ್ಕು ತಲೆಯಾಡಿಸಿದರು.

    ಮತ್ತೆ... ಮಗನೂ ನೋಡೋಕ್ಕೆ ಬರೋಲ್ಲ ಅಚಿದ್ರೆ ಸುಮ್ನೆ ಬಿಡ್ತಾನಾ? ತಾತಾ ಆಗ್ತಿದೀರಿ!... ಕೊಂಚ ಅಲೆದಾಟ ಕಮ್ಮಿ ಮಾಡ್ಕೊಳಿ.... ನೀನೇ ಹೇಳೇ..... ನಿಮ್ಮ ಭಾವಂಗೆ... ಜಲಜಾಗೆ ಹೇಳಿದಾಗ ಅವಳು ಮೇಲೆದ್ದಳು.

    ಅಯ್ಯೋ... ನೀವು ನಿಮ್ಮ ಗಂಡ ಹೆಂಡತಿ ಜಗಳದಲ್ಲಿ ನನ್ನ ಎಳಿಬೇಡಿ... ಭಾವಂಗೆ ಅಲ್ಲಿ ಬೋರಾಗಬಹುದು... ನೀನು ಮಗು ಬಾಣಂತಿ ಅಂತ busy ಇರ್ತ್ಯ...

    ಹೂಂ... ಆದ್ರೆ ಏನು ಮಾಡಲಿ ಹೇಳು...? ಮೂರು ತಿಂಗಳಾದರೂ ಬಾಣಂತನ ಮಾಡೋದು ಬೇಡವೇ?.... ಹೋದರೆ ಇವರಿಗೆ ಇಲ್ಲಿ ತೊಂದರೆ..... ಗೊತ್ತು... ಆದ್ರೆ...

    ಏನು ಯೋಚನೆ? ನೀನು ಇಲ್ಲದೆ ಹೋದರೂ ಭಾವ ಹಾಯಾಗಿ ಇರ್ತಾರೆ... ದಿನಕ್ಕೆ ಒಂದೊಂದು ಮೆಸ್ನಲ್ಲಿ ಊಟ... ತಿಂಡಿ... ರಾತ್ರಿ ಎಷ್ಟು ಹೊತ್ತಿಗೆ ಬಂದರೂ ಪ್ರಶ್ನಿಸುವವರಿಲ್ಲ....

    ಹುಶ್ ಶ್... ಸುಮ್ಮನಾಗು... ಆಮೇಲೆ ಇವಳು ಹೊರಡುವುದೇ ಇಲ್ಲ... ವಾಸುದೇವ ಸುಳ್ಳು ಆತಂಕ ತೋರಿದಾಗ ಮುಖ ತಿರುಗಿಸಿದರು ಕಮಲ. ಕಂಗಳಲ್ಲಿ ನಗುವಿದ್ದರೂ ಸುಳ್ಳು ಕೋಪದಿಂದ ತುಟಿ ಕೊಂಕಿಸಿದರು.

    ಯೋಚನೆ ಮಾಡಬೇಡಿ. ಮುಂದಿನ ಸೋಮವಾರ ಹೊರಡ್ತಾ ಇದೀನಿ. ಚಿದಾನಂದ ಏರ್‍ಟಿಕೇಟ್ ಕಳಿಸಿದ್ದಾನಲ್ಲ... ಜಲಜ... ಬಳೆಗೆ ಯಾವತ್ತು ಹೋಗೋಣ?

    ನಾಳೆ ಆಫೀಸ್ಸಿಂದ ಹೀಗೇ ಬರ್ತೀನಿ, ಹೋಗೋಣ. ನಿನ್ನ ಲೆಕ್ಕಾಚಾರವೇ ನಂಗೆ ಅರ್ಥವಾಗೊಲ್ಲ. ಚಿದಾನಂದ ಒಬ್ಬನೇ ಮಗ ನಿಂಗೆ..... ಅವನನ್ನು ನೀನು ಬೆಳೆಸಿದ ಮುಚ್ಚಟೆ ನೋಡಿ..... ಅವನು ಎಲ್ಲಿದ್ದಾನೋ ಅಲ್ಲೇ ಹೋಗ್ತ್ಯಾ ಅಂದ್ಕೊಂಡಿದ್ದೆ. ಹೋಗಲಿಲ್ಲ... ತಿಂಗಳಿಗೆ ಅಷ್ಟೊಂದು ಸಂಪಾದಿಸ್ತಾನಲ್ಲ ಪ್ರತಿ ತಿಂಗಳು ಇಷ್ಟು ಕಳಿಸು ಅಂತ ನಿರ್ಬಂಧ ಮಾಡ್ತ್ಯಾ ಅಂತ ಅಂದ್ಕೊಂಡಿದ್ದೆ... ಅದೂ ಮಾಡಲಿಲ್ಲ....

    ನಿರ್ಬಂಧ ಯಾಕೆ ಮಾಡಬೇಕು? ನಾನು ಏನೂ ಹೇಳದೆಯೇ ಮೊದಲ ಸಂಬಳ ಪೂರಾ ನನ್ನ ಕೈಗೆ ತಂದುಕೊಟ್ಟವನು ಚಿದಾನಂದ. ನಾನು ಇವರೇ ಬೇಡ ಅಂದದ್ದು. ಅವನಿಗೆ ನಲವತ್ತು ಸಾವಿರ ಸಂಬಳವೆಂದರೂ, ಎಪ್ಪತ್ತು ಸಾವಿರ ಸಂಬಳವೆಂದರೂ ನಂಗೆ ಒಂದೇ! ಸಂತೋಷ ಅಷ್ಟೇ. ಅವನು ನಮ್ಮನ್ನು ಸಾಕಲಿ, ದುಡಿದು ತಂದುಕೊಡಲಿ ಎಂದು ನಾವು ಬೆಳೆಸಲಿಲ್ಲ ಅವನ್ನ... ನಾನು, ಇವ್ರು ನೆಮ್ಮದಿಯಿಂದ ಇದೀವಿ. ನಮ್ಮ ಬಳಿ ನಮಗೆ ಬೇಕಾಗುವಷ್ಟು ಇದೆ. ಸಾಲದೇ ಬಂದಾಗ, ಕೈಲಾಗದಿದ್ದಾಗ ಅವನಿದ್ದಾನೆ ಅನ್ನೋ ನಂಬಿಕೆ ಇದೆ... ಬಿಡು... ಈಗ್ಯಾಕೆ ಆ ಮಾತು. ಕಾಫಿ ಮಾಡ್ಕೊಡ್ತೀನಿ... ಬಾ... ಬೆಳಗ್ಗೆ ಚಕ್ಕುಲಿ ಕರೆದಿದ್ದೆ ಹೇಗಾಗಿದೆ... ಹೇಳು...

    ಅಡಿಗೆ ಮನೆಯತ್ತ ಹೆಜ್ಜೆ ಹಾಕಿದರು ಕಮಲ. ಹಿಂದೆಯೇ ಬಂದಳು ಜಲಜ.

    ನೆನ್ನೆ ಹಿಟ್ಟು ಮಾಡಿದೆ. ಹೇಗಿರುತ್ತೆ ನೋಡೋಣ ಅಂತ ಕರಿದೆ. ಹೈದಾರಾಬಾದಿಗೆ ಹಿಟ್ಟು ತೊಗೊಂಡು ಹೋಗಿ ಅಲ್ಲೇ ಕರೆದುಕೊಡ್ತೀನಿ... ಚಿದಾನಂದಂಗೆ, ಸವಿತಾಗೆ ಮಾತಾಡುತ್ತಲೇ ಡಿಕಾಕ್ಷನ್ನು ಹಾಲು ಬೆರೆಸಿ ಹಿಡಿ ಬಟ್ಟಲಿಗೆ ಹಾಕಿ ಒಲೆಯ ಮೇಲಿಟ್ಟು, ಡಬ್ಬದಿಂದ ಚಕ್ಕುಲಿ ತೆಗೆದು ಹಾಕಿ ಜಲಜಾಳ ಕೈಗೆ ಇತ್ತರು ಕಮಲ.

    ಹಾಂ... ಚೆನ್ನಾಗಾಗಿದೆ. ಚಕ್ಕುಲಿ ಕಡಿಯುತ್ತಾ ಉದ್ಗರಿಸಿದಳು ಜಲಜ.

    ಹೆಮ್ಮೆಯಿಂದ ನಕ್ಕರು ಕಮಲ.

    ಅಚ್ಚೇರು ಹಿಟ್ಟು ಕೊಡ್ತೀನಿ... ಮಕ್ಕಳಿಗೆ ಕರಿದುಕೊಂಡು.... ಕಟ್ಟೆಯ ಕೆಳಗಿದ್ದ ಬುಟ್ಟಿಯಿಂದ ಕವರ್ ಕೈಗೆತ್ತಿಕೊಂಡರು.

    ಅಯ್ಯೋ... ನಂಗೆ ಬೇಡ... ಹಿಟ್ಟು ಕಲಿಸಿ ಎಣ್ಣೆ ಮುಂದೆ ನಿಂತು ಕರಿಯೋರು ಯಾರು?... ಡಬ್ಬಕ್ಕೆ ಕೈ ಹಾಕಿ ಇನ್ನೊಂದು ಚಕ್ಕುಲಿ ಕೈಗೆತ್ತಿಕೊಂಡಳು ಜಲಜ.

    ತಿನ್ನೋಕೆ ಬೇಕು... ಮಾಡೋಕ್ಕೆ ಹಿಂಜರಿದರೆ?! ಹೋಗ್ಲಿ ಬಿಡು... ನಾಳೆ ಬರ್ತ್ಯಲ್ಲ... ನಾನು ಕರೆದು ಡಬ್ಬಿಗೆ ಹಾಕಿಟ್ಟಿರ್ತೀನಿ... ತೊಗೊಂಡು ಹೋಗುವಿಯಂತೆ.... ಹಾಂ..... ಚಿದಾನಂದ ನಿಂಗೇನಾದ್ರೂ ಫೋನ್ ಮಾಡಿದ್ರೆ... ಬಳಿ ವಿಷ್ಯ ಹೇಳಬೇಡ...

    ಕಾಫಿಯನ್ನು ಲೋಟಕ್ಕೆ ಬಗ್ಗಿಸಿ ಕಟ್ಟೆಯ ಮೇಲಿಟ್ಟರು ಕಮಲ.

    ಓಕೆ.... ನಾಳೆ ಹೋಗೋಣ. ನಾನೇನು ಹೇಳಲ್ಲ. ನಾಳೆ ನಿಂಗೆ ಯಾವುದಾದರೂ ಇಷ್ಟವಾದರೆ ನೀನೇ ತೊಗೊಂಡುಬಿಡು... ಕಾಫಿ ಲೋಟವನ್ನು ಕೈಗೆತ್ತಿಕೊಂಡಳು ಜಲಜ.

    ನಿನ್ತಲೆ!.... ಇಷ್ಹೊತ್ತು ನಿಂಗೆ ಹೇಳಿದ್ದೇನು ನಾನು? ಹೊಡೆಯುವಂತೆ ಕಮಲ ಕೈ ಎತ್ತಿದಾಗ ಅಡಿಗೆ ಮನೆಯಿಂದ ಹೊರಕ್ಕೋಡಿದಳು ಜಲಜ.

    ****

    ರೀ..... ರೀ...

    ಏನ್ರೀ?

    ನನ್ನ ಅಣಕಿಸಬೇಡಿ ಅಂತ ಎಷ್ಟು ಸಾರಿ ಹೇಳಿದ್ದೀನಿ ನಿಮಗೆ...

    ಸಾರಿ.... ಏನ್ಹೇಳು... ರಾಮನಾಥ ಕೇಳಿದಾಗ, ಜಲಜ ಚಕ್ಕುಲಿ ಡಬ್ಬಿ ಅವನ ಮುಂದೆ ಹಿಡಿದಳು.

    ‘ಇದೆಲ್ಲಿಂದ ಬಂತು?..... ನೀನು ಮಾಡ್ದ್ಯಾ!" ಚಕ್ಕುಲಿ ಕೈಗೆ ತೆಗೆದುಕೊಂಡು, ಮುರಿದು ಬಾಯಿಗೆ ಹಾಕಿಕೊಂಡ ರಾಮನಾಥ.

    ‘ಸಧ್ಯ!..... ಅಕ್ಕ ಕೊಟ್ಟು..... ಇವತ್ತು ಸಂಜೆ ಅವಳ ಜೊತೆ ಆರ್.ಕೆ ಜಿವಲರ್ಸ್‍ಗೆ ಹೋಗಿದ್ನಲ್ಲ..... ಅವಳು ಸೊಸೆಗೆ ಹಸಿರು ಬಳೆ ತೊಗೊಂಡ್ಲು..... ಇಪ್ಪತ್ತೆರಡು ಸಾವಿರ ಆಯ್ತು, ತುಂಬಾ ಚೆನ್ನಾಗಿದೆ... ಅಲ್ಲಿ ಮುತ್ತಿನ ಬಳೆ ನೋಡ್ದೆ..... ಎಷ್ಟು ಚೆನ್ನಾಗಿತ್ತು ಅಂತೀರಿ!.... ನಾಳೆ ಬನ್ರೀ..... ಹೋಗೋಣ..... ಹದಿನಾರೇ ಸಾವಿರ....."

    ನಿಮ್ಮಕ್ಕನಿಗೆ ಅವಳೊಬ್ಬಳೆ ಹೋಗೋಕ್ಕೆ ಏನು?..... ನಿನ್ನ ಕರೆಯೋದು ನೀನು ಹೋಗೋದು..... ಅತ್ತ ಇತ್ತ ಕಣ್ಣಾಡಿಸೋದು..... ನನ್ನ ಜೇಬಿಗೆ ಸಂಚಕಾರ! ಇದ್ಯಾವ ನ್ಯಾಯ?

    ಚಕ್ಕುಲಿ ಕಡಿಯುತ್ತಾ ರಾಮನಾಥ ಉದ್ಗರಿಸಿದ. ‘ಅಲ್ಲಾರೀ....’ ಜಲಜಳ ಮಾತುಗಳನ್ನು ಫೋನಿನ ಕರೆಯ ಗಂಟೆಯ ಸದ್ದು ಅಡಗಿಸಿತು.

    ‘ಬಚಾವ್ ಆದೆ ಅಂದ್ಕೊಂಡು ಒಳಗೂ ಹೊರಗೂ ಹೋಗಿಬಿಡಬೇಡಿ..... ಮುತ್ತಿನ ಬಳೆಯ ನಿಮ್ಗೆ ವಿವರಿಸಬೇಕು...." ರಾಮನಾಥನತ್ತ ತೋರುಬೆರಳು ತೋರಿಸಿ ಎಚ್ಚರಿಸುತ್ತಾ..... ರಿಸೀವರ್ ಕೈಗೆತ್ತಿಕೊಂಡಳು ಜಲಜಾ.

    ಹಲೋ... ಓ... ಹಲೋ ಚಿದೂ.....! ಹೇಗಿದ್ಯಾ?.... ಇವತ್ತು ಅಕ್ಕನ ಜೊತೆ..... ನಾಲಿಗೆ ಕಚ್ಚಿ ಮಾತನ್ನು ನುಂಗಿಕೊಂಡಳು ಜಲಜ.

    ಆಫೀಸ್ಸಿಂದ ಅಕ್ಕನ ಮನೆಗೆ ಹೋಗಿದ್ದೆ. ಇಬ್ಬರೂ ಜೊತೆಯಾಗಿ ಹೋಗಿ ತರಕಾರಿ ತಂದ್ವಿ ಅಷ್ಟೇ..... ಏನಂತಾಳೆ ಸವಿತಾ? ಹುಷಾರಾಗಿದಾಳಾ? ನಿಧಾನವಾಗಿ ಉತ್ತರಿಸಿದಳು ಜಲಜ.

    ಚೆನ್ನಾಗಿದ್ದಾಳೆ ಚಿಕ್ಕಮ್ಮ ತುಂಬಾ ದಪ್ಪ ಆಗ್ಹೋಗಿದಾಳೆ..... ನಡೆದಾಡೋದೇ ಕಷ್ಟ ಅಂತಾಳೆ. ಅಮ್ಮ ಬರೋದನ್ನೇ ಕಾಯ್ತಾ ಇದ್ದೀವಿ ಇಬ್ರೂ..... ಚಿಕ್ಕಮ್ಮ...... ನಂಗೆ ಒಂದು ಹೆಲ್ಪ್ ಬೇಕಿತ್ತು..... ಆಕ್ಚುಲಿ ನೀವು ನೋ ಅನ್ನೋ ಹಾಗೇ ಇಲ್ಲ... ನಿಮಗೆ ಆಗಲೇ ಐವತ್ತು ಸಾವಿರ ರೂಪಾಯಿಯ ಚೆಕ್ ಕಳಿಸಿಬಿಟ್ಟಿದ್ದೀನಿ.....!

    ಐವತ್ತು ಸಾವಿರಾನಾ!? ಯಾಕೆ? ದನಿ ಎತ್ತರಿಸಿದಳು ಜಲಜ.

    ಅಜ್ಜಿಯ ಹತ್ರ ದಪ್ಪಗೆ ಬಂಗಾರದ ಬಳೆಗಳಿದ್ದು..... ನಿಮ್ಗೆ ಜ್ಞಾಪಕ ಇದ್ಯ?

    ಹೂಂ ಗೊಲಸು ಬಳೆಗಳು.... ನಿನ್ನ ಸೋದರ ಮಾನ ಅದನ್ನು ಮುರಿಸಿ ತನ್ನ ಮಗಳಿಗೆ ಬಳೆ, ಸರ ಮಾಡಿಸಿದ್ನಲ್ಲ.... ಅಮ್ಮನ ಕೈಗಳನ್ನು ಅಲಂಕರಿಸಿದ್ದ ಗುಂಡನೆಯ ಗೊಲಸು ಬಳೆಗಳು ಅಮ್ಮ ಹೋದ ಮೇಲೆ ಹೆಣ್ಣು ಮಕ್ಕಳಾದ ನಾವು ಯಾವಾಗ ಕೇಳಿಬಿಡ್ತೀವೋ ಎಂದು ಅಮ್ಮ ಹೋದ ತಿಂಗಳಿಗೇ ಅಳಿಸಿ, ಮಗಳಿಗೆ ಒಡವೆ ಮಾಡಿಸಿದ ಅಣ್ಣನ ನೆನಪು ದನಿಯನ್ನು ಕಹಿಯಾಗಿಸಿತು.

    ಬಿಡಿ ಚಿಕ್ಕಮ್ಮ...

    ಕಂದಿದ ಚಿದಾನಂದನ ದನಿಗೆ ಎಚ್ಚೆತ್ತಳು ಜಲಜ.....

    "ಹೋಗ್ಲಿ ಬಿಡು..... ಈಗ ಆ ಬಳೆಗಳ ನೆನಪೇಕೆ....?

    ಏನಿಲ್ಲ.... ಐವತ್ತು ಸಾವಿರ ಕಳಿಸಿದೀನಲ್ಲ... ಆ ದುಡ್ಡಿಗೆ ಆ ತರಹದ ಎರಡು ಬಳೆಗಳನ್ನು..... ಕೊಂಡು, ಅಮ್ಮನ ಜೊತೆ ಅಮ್ಮನಿಗೆ ಗೊತ್ತಾಗದ ಹಾಗೆ ಪ್ಯಾಕ್ ಮಾಡಿ ಕಳಿಸಬೇಕು ನೀವು...

    ಕೈ ಜಾರುತ್ತಿದ್ದ ರಿಸೀವರ್ ಭದ್ರವಾಗಿ ಹಿಡಿದಳು ಜಲಜ.

    ಅಕ್ಕನಿಗೆ ಗೊತ್ತಾದರೆ ಏನಂತೆ?..... ನಿನ್ನ ಹೆಂಡ್ತಿಗೆ ನೀನು ಗೊಲಸು ಬಳೆ ಮಾಡ್ಸಿದ್ರೆ ಅವಳೇನು ಆಕ್ಷೇಪಣೆ ಮಾಡಲ್ಲ ಕಣೋ..... ಅಮ್ಮ ಹೀಗೆ ತೊಗ್ಹೊಂಡ್ಬಾ ಅಂತ ಅವಳಿಗೆ ಫೋನ್ ಮಾಡಿದ್ರೂ ಖುಷಿಯಿಂದ ತಂದಿರೋಳು.....

    ಉಕ್ಕಿಬಂದ ದುಃಖ, ಕೋಪದಿಂದ ಮುಂದೇ ಮಾತಾಡಲಾಗಲಿಲ್ಲ ಜಲಜಾ. ಅತ್ತ ಕಡೆ ಅವನ ದನಿಯೂ ಕಿವಿಗೆ ಬೀಳಲಿಲ್ಲ. ತಾನು ಅಷ್ಟು ಹೇಳಿದರೂ ಕೇಳದೆ ಸೊಸೆಗೆ ಹಸಿರು ಬಳೆ ಕೊಂಡು, ಅವನ್ನ ಜೋಪಾನವಾಗಿ ಹೆಮ್ಮೆಯಿಂದ ಪರ್ಸಿನೊಳಗೆ ಇಟ್ಟುಕೊಂಡ ಅಕ್ಕನ ಚಿತ್ರ ಕಣ್ಮುಂದೆ ಬಂದು ಜಲಜಾಳ ಕಣ್ಣುಗಳು ತುಂಬಿದವು...... ಅಂಥಹ ತಾಯಿಯಲ್ಲಿ ಈ ಮುಚ್ಚುಮರೆ ಯಾಕೆ?

    ಚಿಕ್ಕಮ್ಮಾ.... ಚಿಕ್ಕಮ್ಮಾ.....

    ಆ್ಞಂ.....! ಸರಿ... ಹೇಳಪ್ಪಾ..... ಉಗುಳು ನುಂಗಿದಳು ಜಲಜ.

    ಏನಾಯ್ತು ಚಿಕ್ಕಮ್ಮ? ಅಮ್ಮನನಿಗೆ ಆ ತರಹದ ಬಳೆ ಇಷ್ಟತಾನೇ? ಚಿದಾನಂದನ ದನಿಯಲ್ಲಿ ಅನುಮಾನದ ಛಾಯೆಯನ್ನು ಕೇಳಿ ರೇಗಿತು ಜಲಜಳಿಗೆ.

    ಅವಳಿಗೆ ಇಷ್ಟವೇ!..... ಹೀಗ್ಹೀಗೇ. ತೊಗೊಂಡ್ಬಾ..... ಅಂತ ಅಕ್ಕನಿಗೇ ದುಡ್ಡು ಕಳಿಸಿದ್ರೆ ತಂದಿರೋಳು! ಈ ಗುಟ್ಟೆಲ್ಲಾ ಯಾಕೋ? ತಡೆಯದೆ ಮಾತುಗಳು ಹೊರಬಂದವು.

    ಈಗ್ಯಾಕೆ? ದಂಡ, ಬೇ, ಸುಮ್ಮನಿರು ಅಂದಿರೋಳು ಅಮ್ಮ.

    ಸುಮ್ಮನಿರೋ..... ಬಸುರಿ ಹುಡುಗೀಗೆ ಬಳಿ ಮಾಡಿಸ್ತೀನಿ ಅಂದ್ರೆ, ಯಾಕೆ?.... ಬೇಡ ಅಂತ ಹೇಳೋಷ್ಟು ಕೆಟ್ಟವಳಲ್ಲ ನಮ್ಮಕ್ಕ!... ರೇಗಿದಳು ಜಲಜ.

    ಅಯ್ಯೋ..... ಸವಿತಾಗಲ್ಲ ಬಳೆಗಳು! ನನ್ನ ಮಾತು ಸರಿಯಾಗೆ ಕೇಳಿಸಿಕೊಳ್ಳಲಿಲ್ಲ ನೀವು. ಅಮ್ಮಂಗೆ ಅವರಮ್ಮನ ಬಳೆಗಳು ತುಂಬಾ ಇಷ್ಟ ಇತ್ತು. ನಂಗೆ ಗೊತ್ತು... ಸುಮ್ನೆ ಕೊಡಿಸಿದ್ರೆ ಬೇಡ ಅಂತ ಗಲಾಟೆ ಮಾಡ್ತಾಳೆ. ಅದಕ್ಕೆ ಈಗ ಬಂದು ಸವಿತಾಗೆ ಬಾಣಂತನ ಮಾಡ್ತಾಳಲ್ಲ... ಆಗ ಉಡುಗೊರೆ ಅಂತ ಕೊಟ್ರೆ ಹೆಚ್ಚು ಗಲಾಟೆ ಮಾಡದೆ ತೊಗೊಳ್ತಾರೆ ಅಂತ ಸವಿತಾ ಪ್ಲಾನು..... ಇಲ್ಲಿ ಒಂದೆರಡು ಅಂಗ್ಡೀಲಿ ನೋಡಿದ್ಲು..... ಸಿಗಲಿಲ್ಲ... ಅವಳಿಗೆ ಹೆಚ್ಚು ಓಡಾಡೋಕ್ಕೆ ಆಗಲ್ಲ... ಅಮ್ಮ ಇಲ್ಲಿಗೆ ಬಂದ ಮೇಲೆ ಹೋಗಿ ಹುಡುಕಿ, ತರೋಕ್ಕೆ ಆಗಲ್ಲ.... ನೀವು ಅಲ್ಲಿ ತೊಗೊಂಡು ಅದು ಬಳೆಗಳು ಅಂತ ಗೊತ್ತಾಗದ ಹಾಗೆ ಪ್ಯಾಕ್ ಮಾಡಿ ಸವಿತಾಗೆ ಕೊಡು ಎಂದು ಹೇಳಿ ಕೊಟ್ಟು ಕಳಿಸಿ..... ಬೇರೆಯವರದು ಅಂದರೆ ಅಮ್ಮ ತೆಗೆದೆಲ್ಲಾ ನೋಡಲ್ಲ..... ಏನೂ ಎತ್ತ ಅಂತಲೂ ವಿಚಾರಿಸೊಲ್ಲ..... ಅಮ್ಮ ಇಲ್ಲಿಂಗ ಹೊರಡ್ತಾರಲ್ಲ.... ಆಗ ಕೊಡೋಣ ಅಂದ್ಕೊಂಡಿದ್ದೀನಿ..... ಕಳಿಸ್ತೀರಲ್ಲಾ? ನಾಳೆನೇ ಚೆಕ್ ಬರುತ್ತೆ...ಐದು ದಿವಸ ಟೈಮ ಇರುತ್ತೆ.... ತರೋಕ್ಕೆ ಆಗುತ್ತಲ್ವಾ?..... ಅಮ್ಮಂಗೆ ಬಿಲ್‍ಕುಲ್ ಹೇಳಬಾರದು..... ಹೆಚ್ಚು ದುಡ್ಡಾದ್ರೆ ಕೊಟ್ಟಿರಿ.... ನಾನು ಆಮೇಲೆ ಕೊಡ್ತೀನಿ ನಿಮ್ಗೆ..... ಚಿಕ್ಕಮ್ಮಾ..... ಕೇಳಿಸ್ಕೋತಿದ್ದೀರಿ ತಾನೇ....?

    ಹಾಂ..... ಹಾಂ ಕೇಳಿಸ್ಕೊತಿದೀನಿ ಕಣೋ! ಹಿಂಗೈಯಿಂದ ಕೆನ್ನೆಯ ಮೇಲೆ ಹರಿದ ಕಂಬನಿ ಒರೆಸಿಕೊಂಡಳು ಜಲಜ.

    ಕೆಟ್ಟತನದಿಂದ, ಸ್ವಾರ್ಥತೆಯಿಂದ ಹೆತ್ತವರ ಕಂಗಳಲ್ಲಿ ಕಂಬನಿ ತರಿಸುವ ಮಕ್ಕಳಿರ್ತಾರೆ... ಆದರೆ ಒಳ್ಳೆಯತನ ಕೂಡ ಕಂಬನಿ ತರಿಸುತ್ತದೆ..... ಆದರೆ ಹೀಗೆ ಅಳಲು ಕಂಗಳು ಸೋಲುವುದಿಲ್ಲ... ಮನ ನೊಯ್ಯುವುದಿಲ್ಲ..... ಆನಂದದ ಕಂಬನಿಯ ಸೆಲೆ ಬತ್ತದಿರಲಿ..... ಬತ್ತದಿರಲಿ.....

    ಹಕ್ಕು ಬಾಧ್ಯತೆ

    ಇದು ತರಂಗ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಸಣ್ಣಕಥೆ, ಎರಡು ತಲೆಮಾರುಗಳ ನಡುವಿನ ತಿಣಕಾಟ ತಿಕ್ಕಾಟ, ಈ ಕಥೆಯ ವಸ್ತು.

    ನಮ್ಮ ಮಕ್ಕಳು ನಮ್ಮ ಪ್ರತಿರೂಪ, ಅವರ ಬದುಕು ನಮ್ಮ ಬದುಕಿನ ಮುಂದುವರಿದ ಭಾಗ ಎಂದುಕೊಳ್ಳುವ ತಂದೆ, ತಾಯಂದಿರು ನಮ್ಮ ನಡುವೆ ಇದ್ದಾರೆ. ಅವರನ್ನು ಹುಟ್ಟಿಸಿ, ಸಾಕಿ ಬೆಳೆಸಿದ್ದರಿಂದ ಅವರು ನಾವು ಹೇಳಿದಂತೆ ಕೇಳಬೇಕು. ಅವರ ಬದುಕಿನ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ನಮ್ಮದು ಎಂದು ನಂಬಿರುವ ತಂದೆತಾಯಂದಿರಿದ್ದಾರೆ. ಈ ಹಕ್ಕು ಬಾಧ್ಯತೆಗಳ ಜಂಜಾಟ ಇಂದು ನೆನ್ನೆಯದಲ್ಲ. ನಾವು ದೊಡ್ಡವರಾಗಿದ್ದೇವೆ ಎಂದು ಬೇಗ ಒಪ್ಪಿಕೊಳ್ಳುವ ನಾವು, ನಮ್ಮ ಮಕ್ಕಳು ದೊಡ್ಡವರಾಗಿದ್ದಾರೆ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ. ನೋವಾದಾಗ ಈ ವ್ಯಾಮೋಹ ಕೆಟ್ಟದು ಎಂದು ಪರಿತಪಿಸುತ್ತೇವೆ. ಆದರೆ ತಿರುಗಿ ಹೊಸ ಹೊಸ ವ್ಯಾಮೋಹ, ಬಂಧನಗಳಿಗೆ ಕೆಟ್ಟದು ಎಂದು ಪರಿತಪಿಸುತ್ತೇವೆ. ಆದರೆ ತಿರುಗಿ ಹೊಸ ಹೊಸ ವ್ಯಾಮೋಹ, ಬಂಧನಗಳಿಗೆ ಒಳಗಾಗುತ್ತೇವೆ...... ಮನುಷ್ಯನ ಸೂಕ್ಷ್ಮ ಮನಸ್ಸಿನ ಒಂದು ನೋಟ ಈ ಕಥೆ......

    ಹೊರಟುಬಿಡ್ತೀರಾ? ದೀನವೆನ್ನಿಸುವ ದನಿ. ಹೊಟ್ಟೆಯಲ್ಲಿ ತಳಮಳ ಆರಂಭವಾಯಿತು.

    ಹೋಗಬೇಕಲ್ಲಪ್ಪ ಎಷ್ಟು ದಿನ ಇರೋಕ್ಕೆ ಆಗುತ್ತೆ?

    ಅಂದರೆ ನಾನು? ನಾನು ಏನು ಮಾಡಲಿ? ಅಸಹಾಯಕ ದನಿ. ಅಪ್ಪನ ಈ ದನಿ ನನಗೆ ಅಪರಿಚಿತ.

    ಬನ್ನಿ. ನಮ್ಮ ಜತೆ ಬನ್ನಿ.

    ಈ ಬಂಗಲೆ? ಆಸ್ತಿ....? ನನ್ನ ಕಾರು...? ಅಪ್ಪ ಬಿಡಿಸಿ ಬಿಡಿಸಿ ನಿಧಾನವಾಗಿ ಹೇಳಿದಾಗ ಉಗುಳು ನುಂಗಿ ಅವರತ್ತ ನೋಡಿದೆ.

    ಅಮ್ಮನ ಸೀರೆ ಮಡಿಸೋಕ್ಕಾಗೋಲ್ಲ. ಅಪ್ಪನ ದುಡ್ಡು ಎಣಿಸೋಕ್ಕಾಗೋಲ್ಲ... ಬಾಲ್ಯದ ಗೆಳತಿ ಸುನಂದಾ ಹೇಳುತ್ತಿದ್ದ ಒಗಟು.... ಉತ್ತರ ಹೊಳೆಯದೆ ಮೊರೆ ಹೋಗಿದ್ದು ಅಪ್ಪನಿಗೆ.

    ಅಮ್ಮನ ಸೀರೆ ಅಂದರೆ ಆಕಾಶ, ಅಪ್ಪನ ದುಡ್ಡು ಅಂದರೆ ನಕ್ಷತ್ರ..... ಹೋಗಿ ಹೇಳು ಅವಳಿಗೆ.... ಆದರೆ ನಮ್ಮಪ್ಪನಲ್ಲಿ ಅಷ್ಟೊಂದು ದುಡ್ಡು ಇಲ್ಲ ಅಂತಲೂ ಹೇಳು... ಎಂದು ಹೇಳಿ ಕಳಿಸಿದ್ದರು.

    ನಂಗೆ ಎಂಟು ದಿನ ಅದೇ ಯೋಚನೆ. ಅಪ್ಪನ ಬಳಿ ಹೆಚ್ಚು ದುಡ್ಡು ಇಲ್ಲವೇ...? ದುಡ್ಡೆಲ್ಲಾ ಆಗಿಹೋದರೆ ಏನು ಮಾಡುವುದು ಎಂಬ ಹೆದರಿಕೆ ಅಂದಿನಿಂದಲೇ ಕಾಡಲು ಶುರು ಮಾಡಿತ್ತು. ಚೆನ್ನಾಗಿ ಓದಬೇಕು, ಒಳ್ಳೆಯ ಕೆಲಸ ಹಿಡಿಯಬೇಕು, ಉತ್ತಮ ಸಂಪಾದನೆ ಇರಬೇಕು.... ಎಣಿಸಲಾರದಷ್ಟು ದುಡ್ಡು ಕೂಡಿದಬೇಕು ಎಂಬ ನಿರ್ಧಾರ ನನ್ನ ಮನದಲ್ಲಿ ಮೂಡಿದಾಗ ನನ್ನ ವಯಸ್ಸು

    Enjoying the preview?
    Page 1 of 1