Discover millions of ebooks, audiobooks, and so much more with a free trial

Only $11.99/month after trial. Cancel anytime.

Kai Hididhu Nadesennanu
Kai Hididhu Nadesennanu
Kai Hididhu Nadesennanu
Ebook246 pages2 hours

Kai Hididhu Nadesennanu

Rating: 0 out of 5 stars

()

Read preview

About this ebook

ಕೈ ಹಿಡಿದು ನಡೆಸೆನ್ನನು..‌.....

ಒಂದು ಅಧ್ಬುತ ಕತೆಗಳ ಗುಚ್ಛ ‌. ಓದಿದವರು ತಲ್ಲೀನರಾಗೋದರಲ್ಲಿ ಎರಡು ಮಾತಿಲ್ಲ. ಹೌದು ಅಕ್ಷರ ಸಹ ಮಂತ್ರ ಮುಗ್ಧರಾಗಿಬಿಡುತ್ತಾರೆ. ಒಂದೊಂದು ಕತೆಯು ನಮ್ಮ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತದೆ.

ಗರ್ಭಪಾತದ ಕತೆ, ಬಡ ಬ್ರಾಹ್ಮಣನ ಕತೆ, ಮಗುವಿನ ಮಾನಸಿಕ ಯಾತನೆಯ ಕತೆ..... ಹೀಗೆ ಒಂದಕ್ಕೊಂದು ಸ್ಪರ್ಧೆಯೊಡ್ಡಿ ಓದುಗರನ್ನು ಭಾವನಾತ್ಮಕವಾಗಿ ಅತಿಕ್ರಮಣ ಮಾಡುತ್ತದೆ‌.

ನೈಜತೆಯ ಬಯಸುವ ಓದುಗರಿಗೆ ಇದು ಸರಿಯಾಗಿ ಭಾವನೆಯ ಔತಣ ಕೊಡುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಮಾನವೀಯತೆ ಮರೆಯಾಗುತ್ತಿರುವ ಈ ಪ್ರಪಂಚದಲ್ಲಿ ಮಾನವೀಯತೆ, ಸಹೃದಯತೆ ಎಷ್ಟು ಮುಖ್ಯವಾಗುತ್ತದೆ ಎಂದು ನೇರವಾಗಿ ಈ ಪುಸ್ತಕ ಹೇಳುತ್ತದೆ.

LanguageKannada
Release dateAug 12, 2019
ISBN6580202700386
Kai Hididhu Nadesennanu

Read more from Geetha B.U.

Related to Kai Hididhu Nadesennanu

Related ebooks

Reviews for Kai Hididhu Nadesennanu

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kai Hididhu Nadesennanu - Geetha B.U.

    http://www.pustaka.co.in

    ಕೈ ಹಿಡಿದು ನಡೆಸೆನ್ನನು

    Kai Hididhu Nadesennanu

    Author :

    ಗೀತಾ ಬಿ.ಯು.

    Geetha.B.U

    For more books

    http://www.pustaka.co.in/home/author/geetha-bu

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಜೆ.ಕೆ ಸತ್ಯ

    ಬೇಡದ ಅತಿಥಿ

    ಕಥೆ ಓದುವ ಮುನ್ನ

    ಯಾವುದೋ ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ ಒಂದು ಲೇಖನ ಓದಿದೆ ಆiಟಿಞ Dink Couples ಬಗ್ಗೆ, Dink Couples ಅಂದ್ರೆ Double income No kids ಜೋಡಿ ಅಂತ ಗಂಡ ಹೆಂಡತಿ ಇಬ್ಬರೂ ಕೈತುಂಬಾ ಸಂಪಾದಿಸುತ್ತಾ ಮಕ್ಕಳು ಬೇಡ ಎಂದು ಸ್ವಯಂಪ್ರೇರಿತವಾಗಿ ನಿರ್ಧಾರ ತೆಗೆದುಕೊಂಡಿರುವ ಜೋಡಿಗಳ ಬಗ್ಗೆ ಆ ಲೇಖನವಿತ್ತು. Family Planning ಬಂದು ಹೆರುವುದು ಬಿಡುವುದು ಹೆಣ್ಣಿನ ಕೈಯಲ್ಲಿ ಇದೆ. ನಿಜ. ಆದರೆ ತಾಯಿಯಾಗುವುದು ಒಂದು ಹೆಣ್ಣಿಗೆ ಪರಿಪೂರ್ಣತೆ ಕೊಡುತ್ತದೆ. ಎಂದು ಹಲವರು ಹೇಳುತ್ತಾರೆ. ಅಯ್ಯೋ, ಮಕ್ಕಳು ಮಕ್ಕಳು ಅಂತ ಸಾಯುವುದಷ್ಟೇ. ಮಕ್ಕಳೇ ಇಲ್ಲದೆ ಹಾಯಾಗಿರುವುದೇ ಸೂಕ್ತ ಎಂದು ಹೇಳುವವರೂ ಇದ್ದಾರೆ.

    ಜೀವನದ ಎಲ್ಲಾ ನಿರ್ಧಾರಗಳನ್ನು practical ಆಗಿ ತೆಗೆದುಕೊಂಡು ನಿರ್ವಹಿಸಲು ಸಾಧ್ಯವೇ? ನಮಗೇ ಅರಿವಿಲ್ಲದ ನಮ್ಮ ಮಾನಸಿಕ ದೌರ್ಬಲ್ಯ ಅಥವಾ ಚಂಚಲತೆ ನಮ್ಮನ್ನು practical ಆಗಿ ಇರಲು ಬಿಡುತ್ತವೆಯೇ... ಮಕ್ಕಳು ಕೇವಲ ನಮ್ಮ ಜವಾಬ್ದಾರಿಯೇ... ಅಲೌಕಿಕವಾದುದು ಏನಾದರೂ ಇದೆಯೇ...ಇದ್ದರೆ ನಮ್ಮ ನಿರ್ಧಾರದ ಗತಿಯೇನು... ಕಥೆ ಓದಿ...

    ***

    ನಾನು ಹೊರಟೆ, bye... ಧರಣಿ ಬಾಗಿಲ ಬಳಿಯಿಂದಲೇ ಕೂಗಿದಳು.

    ಒಂದು ನಿಮಿಷ! ಏನಿವತ್ತು? ಇನ್ನೂ ಏಳೂವರೆ! ನಿನ್ನ ಬ್ರೇಕ್‍ಫಾಸ್ಟ್ ಆಯ್ತೇ? ಟವಲ್ಲಿನಿಂದ ತಲೆಯೊರೆಸಿಕೊಳ್ಳುತ್ತಾ ರೂಮಿನಿಂದ ಆಚೆ ಬಂದ ಸಂಜಯ್.

    ನಿಂಗೆ ಮರ್ತ್ಹೋಯ್ತಾ? ನೆನ್ನೆ ರಾತ್ರಿ ಹೇಳಿದ್ನಲ್ಲಾ... ಇವತ್ತು ಒಂದು ಮುಖ್ಯ ಕ್ಲೈಂಟ್ ಹತ್ರ ಮೀಟಿಂಗ್ ಇದೆ. ಸೈಟ್ ಬಳಿ. ಎನ್.ಆರ್.ಐ ಒಬ್ರು! Very rich! ಎರಡು 80 by 120 ಸೈಟ್ ತೊಗೊಂಡಿದ್ದಾರೆ. ಮನೆ, ಗಾರ್ಡನ್, ಈಜುಕೊಳ ಎಲ್ಲಾ ಜesigಟಿ ಮಾಡಬೇಕು. ಇಂಟರ್‍ಸ್ಟಿಂಗ್ ಆಗಿ ಇರುತ್ತೆ. ಬ್ರೇಕ್ ಫಾಸ್ಟ್ ಸ್ಕಿಪ್ ಮಾಡ್ತಾ ಇದ್ದೀನಿ. ನಿನ್ನ ಬ್ರೇಕ್ ಫಾಸ್ಟ್ ಆದ ಮೇಲೆ ರಾಜಿಗೆ ಕ್ಲೀನ್ ಮಾಡಕ್ಕೆ ಹೇಳಿಬಿಡು. ಬಿರ್ಲಾ ಸಾಯಂಕಾಲ ಸಿಗೋಣ...

    ನಾನು ಸಂಜೆ ಬರೋದು ಲೇಟಾಗುತ್ತೆ. ಎಂಟೂವರೆ ಆಗಬಹುದು ಒಳಗಿನಿಂದಲೇ ಕೂಗಿದ ಸಂಜಯ್.

    ನೋ ಪ್ರಾಬ್ಲಮ್, ನಾನು ನಿಧಾನವಾಗಿ ನಿಂಗೆ ಫೋನ್ ಮಾಡ್ತೀನಿ. ಶೂಸ್ ಹಾಕಿಕೊಂಡು, ಬ್ರೀಫ್‍ಕೇಸ್ ಹಿಡಿದುಕೊಂಡು ಹೊರನಡೆದಳು ಧರಣಿ. ಹಿಂದೆಯೇ ಬಾಗಿಲು ಎಳೆದು ಲಾಕ್ ಮಾಡಿದಳು.

    ಸ್ವಿಚ್ ಒತ್ತಿ ಲಿಫ್ಟ್‍ಗೆ ಕಾಯುತ್ತಾ ತನ್ನಪುಟ್ಟ ರಿಸ್ಟ್‍ವಾಚಿನತ್ತ ನೋಡಿದಳು.

    ಹಲೋ.... ದನಿ ಬಂದತ್ತ ತಿರುಗಿದಳು. ಓ ಹಾಯ್ ಸುನೀತಾ....ಏನು ಸ್ವಿಮಿಂಗಾ...

    ಹಾಂ....ಮಕ್ಕಳಿಬ್ಬರಿಗೂ ತುಂಬಾ ಇಷ್ಟ. ಹತ್ತು ಗಂಟೆಯವರೆಗೆ ಸ್ವಿಮಿಂಗ್ ಪೀಲಿನಲ್ಲಿ....

    ಲಿಫ್ಟ್ ಬಂದಿದ್ದರಿಂದ ಮಕ್ಕಳಿಬ್ಬರನ್ನೂ ಹತ್ತಿಸಿ, ಹಿಂದೆಯೇ ಒಳ ಬಂದಳು. ಧರಿಣಿ ಒಳಗೆ ಬಂದು ಬೇಸ್‍ಮೆಂಟ್ ಸ್ವಿಚ್ ಒತ್ತಿದಳು.

    ನಾನು ಹೊರಟೆ, bye.... ಧರಣಿ ಬಾಗಿಲ ಬಳಿಯಿಂದಲೇ ಕೂಗಿದಳು.

    ಒಂದು ನಿಮಿಷ! ಏನಿವತ್ತು? ಇನ್ನೂ ಏಳೂವರೆ! ನಿನ್ನ ಬ್ರೇಕ್‍ಫಾಸ್ಟ್ ಆಯ್ತೇ? ಟವಲ್ಲಿನಲ್ಲಿ ತಲೆಯೊರೆಸಿಕೊಳ್ಳುತ್ತಾ ರೂಮಿನಿಂದ ಆಚೆ ಬಂದ ಸಂಜಯ್.

    ನಿಂಗೆ ಮರ್ತ್ಹೋಯ್ತಾ? ನೆನ್ನೆ ರಾತ್ರಿ ಹೇಳಿದ್ನಲ್ಲಾ..... ಇವತ್ತು ಒಂದು ಮುಖ್ಯ ಕ್ಲೈಂಟ್ ಹತ್ರ ಮೀಟಿಂಗ್ ಇದೆ. ಸೈಟ್ ಬಳಿ. ಎನ್.ಆರ್.ಐ ಒಬ್ರು! Very rich! ಎರಡು 80 by 120 ಸೈಟ್ ತೊಗೊಂಡಿದ್ದಾರೆ. ಮನೆ, ಗಾರ್ಡನ್, ಈಜುಕೊಳ ಎಲ್ಲಾ design ಮಾಡಬೇಕು. ಇಂಟರ್‍ಸ್ಟಿಂಗ್ ಆಗಿ ಇರುತ್ತೆ. ಬ್ರೇಕ್ ಫಾಸ್ಟ್ ಸ್ಕಿಪ್ ಮಾಡ್ತಾ ಇದ್ದೀನಿ. ನಿನ್ನ ಬ್ರೇಕ್ ಫಾಸ್ಟ್ ಆದ ಮೇಲೆ ರಾಜಿಗೆ ಕ್ಲೀನ್ ಮಾಡಕ್ಕೆ ಹೇಳಿಬಿಡು. ಬರ್ಲಾ ಸಾಯಂಕಾಲ ಸಿಗೋಣ....

    ನಾನು ಸಂಜೆ ಬರೋದು ಲೇಟಾಗುತ್ತೆ. ಎಂಟೂವರೆ ಆಗಬಹುದು ಒಳಗಿನಿಂದಲೇ ಕೂಗಿದ ಸಂಜಯ್.

    ನೋ ಪ್ರಾಬ್ಲಮ್, ನಾನು ನಿಧಾನವಾಗಿ ನಿಂಗೆ ಫೋನ್ ಮಾಡ್ತೀನಿ. ಶೂಸ್ ಹಾಕಿಕೊಂಡು, ಬ್ರೀಫ್‍ಕೇಸ್ ಹಿಡಿದುಕೊಂಡು ಹೊರನಡೆದಳು ಧರಿಣಿ. ಹಿಂದೆಯೇ ಬಾಗಿಲು ಎಳೆದು ಲಾಕ್ ಮಾಡಿದಳು.

    ಸ್ವಿಚ್ ಒತ್ತಿ ಲಿಫ್ಟ್‍ಗೆ ಕಾಯುತ್ತಾ ತನ್ನಪುಟ್ಟ ರಿಸ್ಟ್‍ವಾಚಿನತ್ತ ನೋಡಿದಳು.

    ಹಲೋ.... ದನಿ ಬರುತ್ತ ತಿರುಗಿದಳು. ಓ ಹಾಯ್ ಸುನೀತಾ.... ಏನು ಸ್ವಿಮಿಂಗಾ...

    ಹಾಂ.....ಮಕ್ಕಳಿಬ್ಬರಿಗೂ ತುಂಬಾ ಇಷ್ಟ. ಹತ್ತು ಗಂಟೆಯವರೆಗೆ ಸ್ವಿಮಿಂಗ್ ಪೂಲಿನಲ್ಲಿ.....

    ಲಿಫ್ಟ್ ಬಂದಿದ್ದರಿಂದ ಮಕ್ಕಳಿಬ್ಬರನ್ನೂ ಹತ್ತಿಸಿ, ಹಿಂದೆಯೇ ಬಳಿ ಬಂದಳು. ಧರಿಣಿ ಒಳಗೆ ಬಂದು ಬೇಸ್‍ಮೆಂಟ್ ಸ್ವಿಚ್ ಒತ್ತಿದಳು.

    ಅರೆ...ಫಸ್ಟ್ ಗ್ರೌಂಡ್ ಫ್ಲೋರ್ ಒತ್ತಬೇಕಿತ್ತು...

    ಓ ಐಮ್ ಸಾರಿ.. ನಾನು ಹರಿಯಲ್ಲಿದೀನಿ ನಂಗೆ ಹೊಳೀಲಿಲ್ಲ...

    ಪರ್ವಾಗಿಲ್ಲ......ನೀವು ಇಳಿದ ಮೇಲೆ ತಿರುಗಿ ಮೇಲೆ ಬರ್ತೀನಿ.... okay ಕಿಡ್ಸ್.." ಸುನೀತಾ ಹೇಳಿದಳು.

    ಧರಿಣಿ ನಕ್ಕು ಸುಮ್ಮನಾದಳು. ಪೂಲ್, ಕ್ಲಬ್, ಹೌಸ್ ಎಲ್ಲಾ ಇದೆ ಅಂತ ಈ ಅಪಾರ್ಟ್‍ಮೆಂಟ್ಗೆ ಬಂದಿದ್ದು. ಆದ್ರೆ ಅದಕ್ಕೆಲ್ಲಾ ನಂಗೆ, ಸಂಜಯ್ಗೆ ಇಬ್ಬರಿಗೂ ಟೈಮ್ ಇಲ್ಲ....

    ಲಿಫ್ಟ್ ನಿಂತ ತಕ್ಷಣ ಸುನೀತಾಗೆ ಹೇಳಿ ಹೊರಗೆ ಧಾವಿಸಿದಳು. ಪರ್ಸಿನಿಂದ ಕೇಸ್ ತೆಗೆಯುತ್ತಾ.

    ತನ್ನ ಮಾರುತಿ ಥೌಸಂಡ್ ಅನ್‍ಲಾಕ್ ಮಾಡಿ ಬ್ರೀಫ್‍ಕೇಸ್ ಹಿಂದಿನ ಸೀಟಿಗೆ ಹಾಕಿ ಮೊಬೈಲ್ ಫೋನ್ ಮುಂದಿನ ಖಾಲಿ ಸೀಟಿನ ಮೇಲಿಟ್ಟು, ಸ್ಟೀರಿಂಗ್ ವ್ಹೀಲ್ ಹಿಂದೆ ಕುಳಿತು ಸ್ಟಾರ್ಟ್ ಮಾಡಿದಳು.

    ಅರ್ಧ ದಿನವೆಲ್ಲಾ ಮಕ್ಕಳಿಗಿಷ್ಟ ಎಂದು ಸ್ವಿಮಿಂಗ್ ಪೂಲ್ನಲ್ಲಿ ಕಳೆಯುವ ಸುನೀತಾಳ ಮೇಲೆ ಮರುಕವುಕ್ಕಿತು. ಗೇಟಿನ ಬಾಗಿಲು ತೆಗೆದು ಸಲ್ಯೂಟ್ ಮಾಡಿದ ವಾಚ್‍ಮ್ಯಾನಿಗೆ ಒಂದು ಅರೆನಗೆ ಬೀರಿ ಆಕ್ಸಲೇಟರ್ ಮೇಲೆ ಕಾಲು ಒತ್ತಿದಳು.

    ಗೇಟಿನ ಆಚೆ ಸ್ಕೂಲಿನ ವ್ಯಾನಿಗಾಗಿ ಕಾದು ನಿಂತ ವಿವಿಧ ವಯಸ್ಸಿನ ಮಕ್ಕಳತ್ತ ಕಣ್ಣು ಹಾಯಿಸಿದಳು. ಚಿಕ್ಕ ಚಿಕ್ಕ ಮಕ್ಕಳ ತಾಯಂದಿರು ಮಕ್ಕಳೊಂದಿಗೆ ನಿಂತಿದ್ದರು. ಅಳುತ್ತಿದ್ದ ಕೆಲವು ಮಕ್ಕಳನ್ನು ಎತ್ತಿಕೊಂಡು ಸಮಾಧಾನ ಮಾಡುತ್ತಿದ್ದರು.

    ಅಬ್ಬಾ ಇನ್ನೂ ನೈಟಿಯಲ್ಲೇ ನಿದ್ದೆಗಣ್ಣಿನಲ್ಲೇ ಇದ್ದಾರಲ್ಲ ಎಂದುಕೊಂಡಳು. ಹಿಂದೆಯೇ ಆ ಮಕ್ಕಳಿಂದ ಎಷ್ಟು ರಾತ್ರಿಗಳು ನಿದ್ದೆಗೆಟ್ಟಿರಬಹುದವರು ಎಂಬ ಯೋಚನೆ ಬರುತ್ತಲೇ ತನ್ನ ಸ್ಥಿತಿಯ ಬಗ್ಗೆ ಹೆಮ್ಮೆಯೆನಿಸಿತು.

    ಸೀದಾ ಸೈಟಿನತ್ತ ಕಾರು ಓಡಿಸಿದಳು.

    ***

    ಧರಿಣಿ ರಾತ್ರಿ ಫ್ಲಾಟಿಗೆ ಬಂದಾಗ ಸಂಜಯ್ ಇನ್ನೂ ಬಂದಿರಲಿಲ್ಲ. ಮನೆಯಲ್ಲೆ ಇದ್ದ ಕೆಲಸದ ಹುಡುಗಿ ರಾಜಿ ಫೋನಿನಲ್ಲಿ ಹೇಳಿದಂತೆ ಬೇಳೆ, ಅಕ್ಕಿ, ಕುಕ್ಕರಿನಲ್ಲಿಟ್ಟು ಕೂಗಿಸಿ, ಹುರುಳಿಕಾಯಿ ಬೇಯಿಸಿ, ಕ್ಯಾರೆಟ್, ಸೌತೆಕಾಯಿ ಸಾಲೆಡ್ಗೆ ಹೆಚ್ಚಿಟ್ಟಿದ್ದಳು.

    ಹೇಳಿಕೊಟ್ಟಂತೆ ನಿರ್ವಂಚನೆಯಿಂದ ಕೆಲಸ ಮಾಡುವ ರಾಜಿ ಸಿಕ್ಕಿರುವುದು ತನ್ನ ಪುಣ್ಯ ಎಂದು ಕೊಳ್ಳುತ್ತಾ ಬೆಂದಿದ್ದ ಹುರುಳಿಕಾಯಿಗೆ ಬೆಂದ ಬೇಳೆ, ಉಪ್ಪು, ಹುಳಿಪುಡಿ, ಕರಿಬೇವು, ಹುಣಸೇಹಣ್ಣಿನ ಪುಡಿ ಸೇರಿಸಿ ಒಗ್ಗರಣೆ ಕೊಟ್ಟಳು. ಅನ್ನ, ಹುಳಿ, ಸಾಲೆಡ್ ಎಲ್ಲಾ ಟೇಬಲ್ ಮೇಲೆ ತಂದಿಡುವುದಕ್ಕೂ ಸಂಜಯ್ ಒಳ ಬರುವುದಕ್ಕೂ ಸರಿಯಾಯಿತು.

    ಹಾಂ....ಏನು? ಘಮ ಘಮ ಅಂತಿದೆ. ರೈಟ್ ಟೈಮಿಗೆ ಬಂದಿದ್ದೀನಲ್ಲ ಧರಿಣಿ..." ಟೈ ಸಡಲಿಸಿಕೊಳ್ಳುತ್ತಾ ರೂಮಿಗೆ ಹೋದ ಸಂಜಯ್.

    ಬೇಗ ಬಾ ಸಂಜು. ನಂಗೆ ಹಸಿವು. ನಾನು ತಿನ್ನೊಕೆ ಸ್ಪಾರ್ಟ್ ಮಾಡ್ತೀದ್ದೀನಿ. ಆಮೇಲೆ ಜಗಳ ಆಡಬೇಡ ಸಿ.ಡಿ.ಪ್ಲೇಯರ್ರಿನಲ್ಲಿ ಇಬ್ಬರಿಗೂ ಇಷ್ಟವಾಗುವ ಹಿಂದುಸ್ಥಾನಿ ಸಂಗೀತದ ಸಿ.ಡಿ.ಹಾಕಿದಳು.

    ಏನಿವತ್ತಿ ಹುಳಿ ಮಾಡ್ಬಿಟ್ಟಿದ್ದೀಯಾ!" ತಟ್ಟೆಗೆ ಹುಳಿ ಹಾಕಿಕೊಳ್ಳುತ್ತಾ ಹುಬ್ಬೇರಿಸಿದ ಸಂಜಯ್.

    ಮುಂಚೆ ಅಮ್ಮನ ಮನೇಲಿ ನಿತ್ಯಾ ಹುಳಿ, ಸಾರು ತಿಂದು ಬೇಜಾರಾಗ್ಹೋಗಿತ್ತು. ಈಗ ಅಪರೂಪವಾಗಿರೋದರಿಂದ ಸ್ಪೆಷಲ್ ಆಗಿಬಿಟ್ಟಿದೆ ಅಲ್ವಾ... ಮುಗುಳ್ನಕ್ಕಳು ಧರಿಣಿ.

    ಪಕ್ಕ ಪಕ್ಕ ಕುಳಿತು ನಿಧಾನವಾಗಿ ಊಟ ಮಾಡಿದರು. ಮಾಮೂಲಾಗಿ ರಾತ್ರಿ ಊಟ ಒಟ್ಟಿಗೆ ಮಾಡುತ್ತಿದ್ದರು. ತಿಂಡಿಯೆಂದರೆ ಒಲೆ ಹಚ್ಚುವ ತಂಟೆಯಿಲ್ಲದ ಬ್ರೆಡ್ಡು, ಕಾರ್ನ್‍ಫ್ಲೇಕ್ಸ್, ಹಾಲು ಹಣ್ಣು ಅಷ್ಟೆ. ಬೆಳಗಿನ ಊಟ ಕೂಡ ಕೆಲಸ ಮಾಡುವ ಕಡೆಯೇ ರಾತ್ರಿಊಟ ಮಾತ್ರ ಒಟ್ಟಿಗೆ, ಮನೆ ಅಥವಾ ತಿರುಗಿ ಹೋಟೆಲ್.

    ನಾವು ಮನೆಗೆ ದಿನಸಿ ಸಾಮಾನು ತರುವ ಅವಶ್ಯಕತೆ ಇಲ್ಲ ಅಲ್ವಾ ಎಂದು ರೇಗಿಸುತ್ತಿದ್ದ ಸಂಜಯ್.

    ನಮ್ಮಮ ತಿಂಗಳಿಗೊಮ್ಮೆ ಇಷ್ಟುದ್ದ ಚೀಟಿ ಬರೆದು ಮೂಲೆ ಅಂಗಡಿಗೆ ಓಡಿಸುತ್ತಿದ್ದಳು. ಪ್ರತಿ ತಿಂಗಳು ಮೂರನೇ ತಾರೀಖು ಮನೆಗೆ ಸಾಮಾನು ತರುವ ದಿನ. ಒಂದು ದಿನ ಹೆಚ್ಚು ಕಡಿಮೆಯಾಗುತ್ತಿರಲಿಲ್ಲ.... ಸಂಜಯ್ ಕೆಲವೊಮ್ಮೆ ತನ್ನ ತಾಯಿಯನ್ನು ನೆನೆಯುತ್ತಿದ್ದ.

    ಮಧ್ಯಮ ವರ್ಗದ ತಂದೆ ತಾಯಿಗೆ ಒಬ್ಬನೇ ಮಗನಾಗಿ ಕಷ್ಟಪಟ್ಟು ಮುಂದೆ ಬಂದಿದ್ದ. ಸಂಜಯ್ ಅವನ ಶ್ರೇಯಸ್ಸನ್ನು ಸದಾ ಹಾರೈಸುತ್ತಿದ್ದ ಅವನ ತಂದೆ ತಾಯಿ ಅವನ ಈಗಿನ ಶ್ರೀಮಂತಿಕೆಯನ್ನು ನೋಡಲು ಬದುಕಿರಲಿಲ್ಲ. ಸಾಫ್ಟ್‍ವೇರ್ ಇಂಜನೀಯರ್ರಾಗಿ ತಿಂಗಳಿಗೆ ಲಕ್ಷದ ತನಕ ಸಂಪಾದಿಸುತ್ತಿದ್ದ. ತನ್ನ ನಲವತ್ತೆರಡನೇ ವಯಸ್ಸಿನಲ್ಲಿ, ಅವನ ಹೆಂಡತಿ ಧರಿಣಿ ಆರ್ಕಿಟೆಕ್ಟ್ ಆಗಿ ಹೆಚ್ಚು ಕಡಿಮೆ ಅವನಷ್ಟೇ ಸಂಪಾದಿಸುತ್ತಿದ್ದಳು. ಸ್ವಂತ ಪ್ರಾಕ್ಟೀಸು ಮಾಡುತ್ತಿದ್ದುದರಿಂದ ತಿಂಗಳಿಗೇ ಅಂತ ವರಮಾನವಿರದಿದ್ದರೂ ಆಗಾಗ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಳು.

    ಧರಿಣಿಯ ತಾಯಿ ಅವರ ಮಗನೊಡನೆ ಕ್ಯಾಲಿಫೋರ್ನಿಯಾದಲ್ಲಿದ್ದರು.

    ಮದುವೆಯಾಗಿ ಹದಿನೈದು ವರ್ಷದಲ್ಲಿ ಇವರೂ ಅಲ್ಲಿಗೆರಡು ಬಾರಿ ಹೋಗಿ ಬಂದಿದ್ದರು.

    ಧರಿಣಿ ನಮ್ಮ ಮದುವೆಯಾಗಿ ಮುಂದಿನ ತಿಂಗಳಿಗೆ ಹದಿನೈದು ವರ್ಷವಾಗುತ್ತೆ ಎಂದು ನಂಬಿಕೆಯೇ ಬರ್ತಾ ಇಲ್ಲ...

    ಹಾಂ... ಹದಿನೈದು ವರ್ಷ ಅಂದ್ರೆ ನಂಗೆ ಮೂವತ್ತೆಂಟು ವರ್ಷ ಆಗ್ಹೋಯ್ತಲ್ಲ ಸಂಜೂ! ಮುಂದಿನ ವರ್ಷ ನಲವತ್ತು ಆಗಿಬಿಡುತ್ತಲ್ಲ! ವಿಷಾದದಿಂದ ಹೇಳಿದಳು ಧರಿಣಿ.

    ನಂಗೆ ಮೂರು ವರ್ಷದ ಹಿಂದೆಯೇ ನಲವತ್ತು ಆಗಿ ಹೋಯ್ತಲ್ಲ. ನನ್ನಲ್ಲೇನಾದರೂ ಛೇಂಜ್ ಕಾಣಿಸುತ್ತಾ ನಿಂಗೆ.... ಸಂಜಯ್ ಧರಿಣಿಯ ಮುಖಕ್ಕೆ ಮುಖ ಕೊಟ್ಟು ಕೇಳಿದ.

    ತನ್ನ ಎಡಗೈಯಿಂದ ಅವನ ಮುಖವನ್ನು ಅತ್ತ ತಳ್ಳಿದಳು ಧರಿಣಿ.

    ಓಹೋ.... ಸ್ವಲ್ಪ ಜಾಸ್ತಿ ನಾಟಿಯಾಗಿದ್ದೀಯಾ

    ನೋ.... ಮುಂದಿನ ವರ್ಷ ನಿಂಗೂ ನಲವತ್ತಾಗಿ ನೀನೂ ನಾಡಿಯಾದ್ರೆ ನಾವು ಎಷ್ಟೊಂದು ಮಜವಾಗಿರಬಹುದು ಅವಳತ್ತ ಕಣ್ಣು ಹೊಡೆದ ಸಂಜಯಾ

    ಓ.... ಸ್ಟಾಪ್ ದಿನ ಟಾಪಿಕ್ ಸಂಜೂ. ಈಗ ಹೇಳು. ಮುಂದಿನ ತಿಂಗಳು ಏನು ಪ್ರೋಗ್ರಾಂ ಧರಣಿ ಅವನ ಕಿವಿ ಹಿಂಡಿದಳು.

    ನಾನೇನೋ ಎರಡು ವಾರ ರಜಾ ತೊಗೊಳ್ತೀನಿ. ನೀನು ತೊಗೋ ಇಬ್ರೂ ಎಲ್ಲಾದರೂ ಹೋಗಿಬರೋಣ

    ಎಲ್ಲಿಗೆ ಹೋಗೋದು? ಎಲ್ಲಾ ನೋಡಿಯಾಗಿದೆ. ನಾವು ಯು.ಕೆ, ಯು.ಎಸ್.ಎ, ಸಿಂಗಪೂರ್, ಆಸ್ಟ್ರೇಲಿಯಾ ಎಲ್ಲಾ ನೋಡಿಯಾಗಿದೆ. ನೇಪಾಲ್, ಶ್ರೀಲಂಕಾಗೆ ಕೂಡ ಹೋಗಿಯಾಗಿದೆ. ಇನ್ನು ಪಾಕಿಸ್ಥಾನಕ್ಕೆ ಹೋಗಬೇಕಷ್ಟೇ ಜೋರಾಗಿ ನಕ್ಕಳು ಧರಿಣಿ. ನಗೆಯ ಹಿಂದೆ ಸಂತೃಪ್ತಿಯ ಹೆಮ್ಮೆಯಿತ್ತು.

    ಮದುವೆಯಾದಾಗನಿಂದ ಪ್ರತಿ ವರ್ಷ ಎಲ್ಲಾದರು ಹೋಗಿಯೇ ಇದ್ದೇವೆ ಅಲ್ಲವೇ? ಕೆಲವು ಬಾರಿ ವರ್ಷಕ್ಕೆ ಎರಡು ಬಾರಿ! ಇಂಡಿಯಾದಲ್ಲಿ ಕಾಶ್ಮೀರವನ್ನೂ ಬಿಟ್ಟಿಲ್ಲ ನಾವು ಎಂದು ಸೇರಿಸಿದಳು.

    ಅದಕ್ಕೆ ಇಬ್ಬರೂ ಸೇರಿ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದರೂ, ಈ ಫ್ಲಾಟೊಂದನ್ನು ಬಿಟ್ಟು ಬೇರೆ ಯಾವ ಆಸ್ತಿಯನ್ನೂ ಮಾಡಿಲ್ಲ ನಾವು ನಕ್ಕ ಸಂಜಯಾ.

    ಹೂಂ, ನನ್ನ ಪ್ರಕಾರ ಈ ಫ್ಲಾಟೂ ಡೆಡಡ್ ಇನ್ವೆಸ್ಟ್‍ಮೆಂಟ್ ನಾವು ಹೋಗಿ, ಮಾಡಿ, ಅನುಭವಿಸಿದ್ದಷ್ಟೇ ನಮ್ಮದು. ನಮ್ಮ ಮನದಲ್ಲಿ ಅಡಕವಾಗಿರುವ ಆ ಮನಮೋಹಕ ನೆನಪುಗಳೆಲ್ಲಾ ನಮ್ಮವು. ಅದನ್ನು ಯಾರೂ ಏನೂ ಮಾಡಲಾರರು.... ಆ ಸಂತಸವನ್ನು ಒಂದು ಡೈಮಂಡ್ ನೆಕ್ಲೇಸ್ ಹಾಕಿಕೊಳ್ಳುವುದರಿಂದ ಖಂಡಿತಾ ನನಗೆ ಸಿಗುವುದಿಲ್ಲ... ಪರವಶಳಾಗಿ ಹೇಳಿದ್ದಳು ಧರಿಣಿ.

    ಅಯ್ಯಯ್ಯೋ ಈ ಅನಿವರ್ಸರಿಗೆ ನಿಂಗೆ ಡೈಮಂಡ್ ನೆಕ್ಲೇಸ್ ಕೊಡೋಣ ಅಂತ ಇದ್ನಲ್ಲಾ...

    ಈಗ ಅದೇ ಗತಿ ಅನ್ಸುತ್ತೆ ಯಾವ ಜಾಗವೂ ತೋಚದಿದ್ದರೆ...

    "ಯಾಕೆ? ಇನ್ನೂ ಟೈಮ್ ಇದ್ಯಲ್ಲ ಯೋಚನೆ ಮಾಡೋಣ. ಈಜಿಪ್ಟ್‍ಗೆ ಇಲ್ಲ ಆಫ್ರಿಕಾಗೆ ಹೋಗೋಣ. ಇಲ್ಲ ತಿರುಗಿ ಡಿಸ್ನಿಲ್ಯಾಂಡ್ಗೆ ಹೋಗೋಣ. ನಿಂಗೆ ತುಂಬಾ ಇಷ್ಟವಾಗಿತ್ತಲ್ಲ.

    ಹಾಂ...ಚೆನ್ನಾಗಿರುತ್ತೆ.... ಎಕ್ಸ್‍ಕ್ಯೂಸ್ ಮೀ... ವಾಕರಿಸಿಕೊಂಡು ಒಳಗೆ ಓಡಿಹೋದಳು ಧರಿಣಿ. ತಿಂದಿದ್ದೆಲ್ಲಾ ಸಿಂಕಿನ ಪಾಲಾಯಿತು.

    ಹಿಂದೆಯೇ ಧಾವಿಸಿ ಬಂದ ಸಂಜಯಾ.

    ಯಾಕೆ? ಏನಾಯ್ತು?... ರಿಲ್ಯಾಕ್ಸ್ ಧರಿಣಿ.... ತಿಂದದ್ದೆಲ್ಲಾ ಆಚೆ ಬಂದಾಯ್ತು. ಇನ್ನೂ ಯಾಕೆ ವಾಕರಿಸ್ತ್ಯಾ...ರಿಲ್ಯಾಕ್ಸ್ ನಿಧಾನವಾಗಿ ಅವಳ ಬೆನ್ನು ಸವರಿದ.

    ನೀನು ಇನ್ಮೇಲೆ ಸೈಟ್ ಹತ್ತಿರ ಮೀಟಿಂಗು ಹಾಗೆ ಹೀಗೆ ಅಂತಬಿಸಿಲ್ನಲ್ಲಿ ಅಲೀಬೇಡ...ಬಾ... ಮಲ್ಕೋ ಬಾ. ಹಾಂ ಹೀಗೆ, ನೀರು ತರ್ತೀನಿ ಇರು

    ನೀರುಬೇಡ ಸಂಜೂ, ಇಲ್ಲೆ ಕೂತ್ಕೋ, ನಂಗೆ ಹೆದರಿಕೆಯಾಗ್ತಾ ಇದೆ

    ಮಂಚದ ಕೊನೆಗೆ ಕುಳಿತ ಅವನ ತೊಡೆಯನ್ನು ಬಳಸಿ ಅದರ ಮೇಲೆ ತಲೆಯಿಟ್ಟಳು. ಮೆಲ್ಲನೆ

    Enjoying the preview?
    Page 1 of 1