Discover millions of ebooks, audiobooks, and so much more with a free trial

Only $11.99/month after trial. Cancel anytime.

Nakshatra Jaaridaaga
Nakshatra Jaaridaaga
Nakshatra Jaaridaaga
Ebook222 pages1 hour

Nakshatra Jaaridaaga

Rating: 0 out of 5 stars

()

Read preview

About this ebook

ನಕ್ಷತ್ರ ಜಾರಿದಾಗ:
ಪ್ರಾಕ್ಸಿಮಾ ಸೆಂಕ್ಚುವರಿ ನಕ್ಷತ್ರ, ಆಗಸದ ತೆಕ್ಕೆಯಿಂದ ಜಾರಿ, ಭೂಮಿಯ ಸನಿಹದಲ್ಲಿ ಹಾಯುವಾಗಿನ ಕ್ಷಣದಲ್ಲಿ, ಭೂಮಿಯ ಮೇಲೆ ಉದ್ಭವವಾಗುವ ಸಾಮಾಜಿಕ, ರಾಜಕೀಯ, ಧಾರ್ಮಿಕ, ಪ್ರಾಕೃತಿಕ ಕೋಲಾಹಗಳ ಒಳನೋಟ.
ಈ ಯುಗಾಂತ ತಪ್ಪಿಸಲು ವಿಜ್ಞಾನಿಗಳು ತೊಡುವ ಪಣ, ಭೂಮಿಯ ಅಂತ್ಯವೆಂಬ ಗೌಪ್ಯಮಾಹಿತಿ ಸೋರಿಕೆಯಾದಾಗ ಪದರಪದರವಾಗಿ ಅನಾವರಣಗೊಳ್ಳುವ ಮನುಷ್ಯನ ನಿಜರೂಪವೇ ನಕ್ಷತ್ರ ಜಾರಿದ ಆ ಕ್ಷಣ.
LanguageKannada
Release dateApr 2, 2021
ISBN6580239606434
Nakshatra Jaaridaaga

Read more from Ravi Belagere

Related to Nakshatra Jaaridaaga

Related ebooks

Related categories

Reviews for Nakshatra Jaaridaaga

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Nakshatra Jaaridaaga - Ravi Belagere

    https://www.pustaka.co.in

    ನಕ್ಷತ್ರ ಜಾರಿದಾಗ

    Nakshatra Jaaridaaga

    Author:

    ರವಿ ಬೇಗರೆ

    Ravi Belagere

    For more books

    https://www.pustaka.co.in/home/author/ravi-belagere

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪರಿವಿಡಿ

    1. ಅಧ್ಯಾಯ

    2. ಪ್ರಾರಂಭ: ಜೂನ್ ಇಪ್ಪತ್ತೊಂಬತ್ತು

    3. ಜೂನ್ 29: ಬೆಳಗಿನ ಜಾವ ನಾಲ್ಕೂವರೆ!

    4. ಆಗಸ್ಟ್ ಒಂದು:

    5. ಆಗಸ್ಟ್ ನಾಲ್ಕು-ದೆಹಲಿ

    6. ದೆಹಲಿ. ಆಗಸ್ಟ್ ನಾಲ್ಕು. ರಾತ್ರಿ.

    7. ಹದಿನೈದು ದಿನಗಳ ಹಿಂದೆ: ಸಾನ್‍ಫ್ರಾನ್ಸಿಸ್ಕೊ:

    8. ಆಗಸ್ಟ್ ಆರು

    9. ರಾಮನಾಮವೇ ತಾರಕ

    10. ಆಗಸ್ಟ್ ಹನ್ನೆರಡು

    11. ಆಗಸ್ಟ್ ಹದಿನಾಲ್ಕು

    12. ಆಗಸ್ಟ್ ಹದಿನೈದು

    13. ಆಗಸ್ಟ್ ಹದಿನಾರು; ಲಂಡನ್

    14. ದಿ ಲಾಸ್ಟ್ ಡೆ ಆಗಸ್ಟ್ ಹದಿನೇಳು

    ರಾತ್ರಿ ಎಂಟಾಗಿದೆ

    ಒಂಬತ್ತಾಯಿತು

    ಹತ್ತಾಯಿತು

    ಅಫಿಡವಿಟ್ಟು

    ಸರಿಯಾಗಿ ಒಂದು ನೂರ ಆರು ಕ.ಜಿ ತೂಕವಿದ್ದ ನಾನು ಅರವತ್ತೊಂಬತ್ತು ಕೆ.ಜಿ ಗೆ ಇಳಿದಿದ್ದೇನೆ. ಈಗ ದೇಶ ದೇಶ ತಿರುಗುತ್ತಿದ್ದೇನೆ.ಶಿವಾಜಿನಗರದ ಹಂತಕ ಕೋಳಿ ಫಯಾಜ್ ನ ಸಂದರ್ಶನದಿಂದ ಆರಂಭವಾದ ಪತ್ರಿಕೋದ್ಯ ಮದ, ಬರಹದ ಹುಚ್ಚು ನನ್ನನ್ನು ಇಟಲಿಯ ದುರ್ಭರ ಮಾಫಿಯಾ ವರೆಗೆ ಕರೆದೋಯ್ದಿದೆ. ತನಿಖೆ, ಸಂಶೋಧನೆ ಮತ್ತು ಭಾವುಕತೆ ಇಲ್ಲದೇ ಬರೆಯ ಬಾರದೆಂದು ತೀರ್ಮಾನಿಸಲಿಕ್ಕೆ ಇಷ್ಟುವರ್ಷ ಬೇಕಾಯಿತು.

    ಈ ತನಕ ಸರಿಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳನ್ನ ನೋಡಿದ್ದೇನೆ.

    ಅವುಗಳಿಂದ ಜನ ಓಡಿ ಬರುತ್ತಿದ್ದ ಸಂದರ್ಭದಲ್ಲಿ,ಪ್ರೇಮ, ಇತಿಹಾಸ, ಕಾಮ, ಯದ್ದ, ಅಂಡರ್ವಲ್ಠ್ ಭಯೋತ್ಪಾದನೆ,,ಸಿನಿಮಾ, ಅಮ್ಮ - ಹೀಗೆ ನಾನು ಅನೇಕ ಸಂಗತಿಗಳ ಬಗ್ಗೆ ಬರೆಯಬಲ್ಲೆ. ನನಗೆ ಅಕ್ಷರ ಅನ್ನ ಕೊಟ್ಟಿದೆ.ನಾನು ತೃಪ್ತ. ಇಷ್ಟಾದರೂ ಟಿವಿಯೊಳಕ್ಕೆ ಇಣುಕಿದ್ದೇನೆ. ನಾನು ಜನಶ್ರೀ ಟಿ ವಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದೆ.

    ನನಗೆ ಮೊದಲು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಇಪ್ಪತ್ತಮೂರು ವರ್ಷ- ಆಮೇಲೆ ಎರಡು ಸಲ ಬಂತು, ಶಿವರಾಮ ಕಾರಂತರ ಹೆಸರಿನಲ್ಲಿ ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಶಸ್ತಿ ಹಾಗೂ ಅವರ ಹುಟ್ಟೂರಿನ ಪ್ರಶಸ್ತಿ ಬಂದವು.ಮಾಸ್ತಿಕಥಾ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂತು. ಮಾಡಿದ ಹೊಟ್ಚೆ ಪಾಡಿನ ಪತ್ರಿಕೋದ್ಯಮಕ್ಕೆ ‘ಜೀವಮಾನ ಸಾಧನೆ’ ಅಂತ ಪ್ರಶಸ್ತಿ ಕೊಟ್ಟರು.ನನಗೆ ಯಾವ ಸಂಪತ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟರೋ, ಅದು ಯಡಿಯೂರಪ್ಪನವರಿಗೆ ಗೊತ್ತು. ‘ಚಲಂ’, ಎಂಬ ತೆಲುಗು ಲೇಖನ ಆತ್ಮ ಚರಿತ್ರೆಯ ಅನುವಾದಕ್ಕೆ ನನಗೆ ಕುವೆಂಪು ಭಾಷಾಭಾರತಿ ಪ್ರಶಸ್ತಿ ನೀಡಿದೆ.

    ‘ಸಕ್ಕತ್ತಾಗಿ ಬರೀತಾನೆ ನನ್ಮಗ’ ಎಂಬುದು ಬೆಂಗಳೂರು ಸೇರಿದಂತೆ ಅನೇಕ ಊರುಗಳು ಆಟೋ ಡ್ರೈವರ್ ಗಳು ನನಗೆ ಕೊಟ್ಟ ಅತಿ ದೊಡ್ಡ ಪ್ರಶಸ್ತಿ.

    ‘ಹಾಯ್ ಬೆಂಗಳೂರ್!’ ನನಗೆ ಅನ್ನವಿಟ್ಟ ತಾಯಿ. ‘ಓ ಮನಸೇ…’ ನನ್ನ ಅಬ್ಸೇಷನ್.ಟಿ ವಿಗಳಲ್ಲಿ ಕಾಣಿಸಿಕೊಳ್ಳುವುದು ನನ್ನ ಚಟ. ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡಿಗರಷ್ಟೇ ಕ್ಷಮಿಸಬೇಕು.ಸರಿಸುಮಾರು ಎಂಟುವರೆ ಸಾವಿರ ಮಕ್ಕಳು ಡೊನೇಷನ್ ಮತ್ತು ಜಾತಿಯ ಪ್ರಸ್ತಾಪವಿಲ್ಲದೇ ಓದಲು ಸಾಧ್ಯವಗಿರುವ ‘ಪ್ರಾರ್ಥನಾ’ ಶಾಲೆ,ನನ್ನ ನಿಜವಾದ ಸಾಧನೆ.ಕೆಲವು ಸಿ.ಡಿಗಳನ್ನು ಮಾಡಿದ್ದೇನೆ. ಬೆಂಗಳೂರಿನ ಗಾಂಧೀ ಬಜಾರ್ ನಲ್ಲಿ ಬಿ.ಬಿ.ಸಿ (ಬೆಳೆಗೆರೆ ಬುಕ್ಸ ಆಂಡ್ ಕಾಫಿ) ಹೆಸರಿನ ಪುಸ್ತಕದ ಮಳಿಗೆ ತೆರೆದಿದ್ದು ನನ್ನ ಅಕ್ಷರ ಲೋಕದ ತಿಕ್ಕಲಿನ ಇನ್ನೊಂದು ಮುಖ.ನನಗೆ ಸಮಾನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ನನ್ನ ಮುಖ ಕಂಡರಾಗದವರೂ ಇದ್ದಾರೆ.

    ನನಗೆ ಎರಡು ಹೆಣ್ಣು,ಎರಡು ಗಂಡು ಮಕ್ಕಳಿದ್ದಾರೆ.ಇಬ್ಬರು ಪತ್ನಿಯರಿದ್ದಾರೆ.ಮೂವರು ಮೊಮ್ಮಕ್ಕಳಿದ್ದಾರೆ.ನಾಲ್ಕನೆಯ ಮೊಮ್ಮಗ ಕಣ್ಣು ಬಿಟ್ಟಿದ್ದಾನೆ.ಸಿಗರೇಟ್.ತಿರುಗಾಟ,ಓದು,ಬರವಣಿಗೆ,ಸಂಗೀತ,ಇತಿಹಾಸ ನನ್ನ ಬಲಹೀನತೆಗಳು. ಜಗತ್ತು ನನ್ನ ಮನೆ, ಸದ್ಯಕ್ಕೆ ಬೆಂಗಳೂರಿನಲ್ಲಿದ್ದೇನೆ.

    ಉಳಿದದ್ದು ತಗೊಂಡು ಏನು ಮಾಡುತ್ತೀರಿ?

    ನಾನೂ ನಿಮ್ಮಂತೆಯೇ ಮನುಷ್ಯ, ಕೊಂಚ ಚಿಲ್ರೆ ಕೊಂಚ ಗಟ್ಟಿ,

    -ರವೀ

    1. ಅಧ್ಯಾಯ

    ಇಂಡಿಯನ್ ಟೈಮ್ಸ್ ಪತ್ರಿಕಾ ಕಾರ್ಯಾಲಯದ ಎರಡನೇ ಅಂತಸ್ತಿನ ಬಲಗಡೆಯ ಹಾಲ್‍ನಲ್ಲಿ ಟೇಬಲ್ ಮೇಲಿರುವ ಒಂದು ಸಣ್ಣ ಕಾಗದದ ಚೂರನ್ನು ಭೂತಕನ್ನಡಿಯಿಂದ ಪರಿಶೀಲಿಸುತ್ತಿದ್ದಾಳೆ ಶೈಲಜ.

    ಏನದು ಅಷ್ಟೊಂದು ಪರೀಕ್ಷಿಸಿ ನೋಡ್ತಿದ್ದೀಯಾ? ಟೈಪಿಸ್ಟ್ ರಾಣಿ ಹತ್ತಿರ ಬರುತ್ತ ಕೇಳಿದಳು.

    ಯಾವುದೋ ಹಳೇ ಕಾಗದ. ಏನು ಬರೆದಿದೆ ಅಂತ ನೋಡ್ತಿದೀನಿ.

    ಸಬ್ ಎಡಿಟರ್ ಲಕ್ಷಣ ಬಿಟ್ಟು ಕೊಡಲಿಲ್ಲ ನೀನು. ಪ್ರತಿಯೊಂದನ್ನೂ ಶೋಧನೆ ಮಾಡದಿದ್ದರೆ ಮನಸ್ಸು ಕೇಳೋದಿಲ್ವೊ ಏನೋ?

    ಶೈಲಜ ನಕ್ಕಳು. ನಾವೆಷ್ಟೋ ವಾಸಿ. ಅಮೆರಿಕಾದ ಜರ್ನಲಿಸ್ಟ್ಗಳಾದ್ರೆ...

    ಸಾಕು ಸಾಕು- ಎನ್ನುತ್ತಾ ರಾಣಿ ಟೇಬಲ್ ಮೇಲಿದ್ದ ಕಾಗದವನ್ನು ತೆಗೆದುಕೊಂಡಳು.

    ಯಾವುದೋ ಪುರಾತನ ಕಾಲದ ಪುಸ್ತಕದ ಹರಿದುಹೋದ ಚೂರು ಅದು. ಬಿಸಿಲಿಗೆ ಬಾಡಿ, ಮಳೆಯಲ್ಲಿ ನೆನೆದು ಶಿಥಿಲಾವಸ್ಥೆಯಲ್ಲಿತ್ತು.

    ಎಲ್ಲಿ ಸಿಕ್ಕಿದ್ದಿದು?

    ನಮ್ಮ ಮನೆ ಹಿತ್ತಲಲ್ಲಿ.

    ರಾಣಿ ನಕ್ಕಳು. ಹಿತ್ತಲಲ್ಲಿ ಸಿಕ್ಕ ಕಾಗದಗಳನ್ನೆಲ್ಲಾ ಇಲ್ಲಿಗೆ ತಂದು ಶೋಧನೆ ಮಾಡಿ ನೋಡೋದಿಕ್ಕೇನು ನಿನಗೆ ಸಂಬಳ ಕೊಡ್ತಿರೋದು?

    ಯಾವ ಹುತ್ತದಲ್ಲಿ ಯಾವ ಕಾಗದ ಇದೆಯೋ ಯಾರಿಗೆ ಗೊತ್ತು?

    ಸರಿ ನಡಿ. ಟೀಗೆ ಟೈಮಾಗ್ತಿದೆ.

    ಇಬ್ಬರೂ ಕ್ಯಾಂಟೀನ್ ಕಡೆಗೆ ನಡೆಯುತ್ತಿದ್ದರೆ ಶೈಲಜ ಹೇಳಿದಳು. ನಮ್ಮನೆ ಹಿತ್ತಲಿಂದಾಚೆ ಗೋರಿಗಳಿವೆ. ಅಲ್ಲಿಂದ ಗಾಳಿಗೆ ಹಾರಿ ಬಂದಿರಬಹುದು.

    ಯಾವ ಪುಸ್ತಕದೊಳಗಿನದೋ ಹರಿದುಹೋಗಿರಬೇಕು. ಅದಕ್ಕಷ್ಟು ಪ್ರಾಮುಖ್ಯತೆ ಕೊಡೊ ಅಗತ್ಯವಿಲ್ಲ.

    ಶೈಲಜ ಮಾತನಾಡಲಿಲ್ಲ.

    ಇಬ್ಬರೂ ಕ್ಯಾಂಟೀನಿನ ಒಂದು ಮೂಲೆಯಲ್ಲಿ ಕುಳಿತುಕೊಂಡರು. ಹುಡುಗ ಟೀ ತೆಗೆದುಕೊಂಡು ಬಂದು ಮುಂದಿಟ್ಟ.

    ರಾಣಿ ಮುಂದೆ ಬಾಗುತ್ತ ಎಷ್ಟು ಚೆನ್ನಾಗಿದೆಯೋ! ಎಂದಳು.

    ಏನು?

    ನೀನು ಹಾಗೆ ಮುಂದೆ ಬಾಗಿ ಕುಳಿತಾಗ ಕಾಣುವ ನಿನ್ನ ಹೊಟ್ಟೆಯ ಮೇಲಿನ ನೆರಿಗೆ.

    ಶೈಲಜ ಚಕ್ಕನೆ ಸರಿಯಾಗಿ ಕೂಡುತ್ತಾ, ಈಡಿಯಟ್ ಎಂದಳು.

    ರಾಣಿ ನಕ್ಕಳು. ನಾನು ಹೇಳಿದ್ರಲ್ಲಿ ತಪ್ಪೇನಿದೆ?

    ತಪ್ಪಿಲ್ಲ, ಶೈಲಜಳ ಪಕ್ಕದಿಂದ ಹೋಗುವ ಹತ್ತು ಜನರಲ್ಲಿ ಒಂಬತ್ತು ಜನ ಅವಳನ್ನು ಮತ್ತೊಮ್ಮೆ ತಿರುಗಿ ನೋಡುತ್ತಾರೆ.

    ನಿನ್ನ ವಯಸ್ಸೆಷ್ಟು? ರಾಣಿ ಕೇಳಿದಳು.

    ಇಪ್ಪತ್ತಾರು

    ಮೈಗಾಡ್! ಎಂದಳು ರಾಣಿ. ಇಪ್ಪತ್ತಾರು ವರ್ಷದ ಜೀವನವನ್ನು ಡ್ರೈಯಾಗೇ ಕಳೆದುಬಿಟ್ಟೆಯಾ?"

    ಡ್ರೈ... ಅಂದರೆ?

    ವೆಟ್ ಆಗದಿರೋದು.

    ಸ್ವಲ್ಪ ನಿಶ್ಶಬ್ದ. ಟೀ ಕಪ್ಪನ್ನು ತೆಗೆದುಕೊಂಡು ಕುಡಿಯುತ್ತ ಮತ್ತೆ ರಾಣಿಯೇ ಹೇಳಿದಳು. ಬಿಸಿಬಿಸಿ ಕಪ್ಪಲ್ಲಿನ ಟೀಯಂತೆ ಯೌವನ.

    ಹೌದು, ಮೂರು ಗುಟುಕು ಕುಡಿದರೆ ಮುಗಿದುಹೋಗುತ್ತೆ.

    ಇಲ್ಲದಿದ್ದರೆ ತಣ್ಣಗಾಗಿ ಹೋಗುತ್ತೆ.

    ಈ ಮಾತಿಗೆ ಶೈಲಜ ನಕ್ಕಳು. ಎರಡೂ ಕೈಯಲ್ಲಿ ಕಪ್ಪನ್ನು ತೆಗೆದುಕೊಂಡಳು. ನನ್ನ ಜೀವನವನ್ನು ಹೀಗೆ ಅಂಗೈಯಲ್ಲಿಟ್ಟು ಅರ್ಪಿಸಬೇಕೆಂದು ಎದುರು ನೋಡುತ್ತಿದ್ದೇನೆ. ಈ ಮನಸ್ಸು, ಈ ಶರೀರ ಒಬ್ಬನಿಗೆ. ಆ ಒಬ್ಬ ಯಾರೋ ನನಗೆ ಗೊತ್ತಿಲ್ಲ. ಇದೊಂದು `ವೇ ಆಫ್ ಲೈಫ್.' ನೀನಂದಂತೆ ಜೀವನವನ್ನು ಇನ್ನೊಂದು ರೀತಿಯಲ್ಲೂ ಅನುಭವಿಸಬಹುದು. ಅದು ದೊಡ್ಡ ಕಷ್ಟವೇನಲ್ಲ. ಆದರೆ ಯಾವ ರೀತಿ ಜೀವಿಸಬೇಕು ಅನ್ನೋದು ಪ್ರಶ್ನೆ. ನಾನು ಮೊದಲನೆಯದನ್ನೇ ಇಷ್ಟಪಡ್ತೀನಿ.

    ಟ್ರಾಷ್ ಎಂದಳು ರಾಣಿ. ಇವೆಲ್ಲ ಸೆಂಟಿಮೆಂಟ್ಸ್. ನಿನ್ನೊಬ್ಬಳ ಜೀವನದ ಮೇಲೆ ನಿಮ್ಮ ಕುಟುಂಬ ಆಧಾರಪಟ್ಟಿದೆ. ಆದ್ದರಿಂದ ನಿಮ್ಮ ತಂದೆ ನಿನಗೆ ಸಂಬಂಧಗಳನ್ನು ನೋಡೋದಿಲ್ಲ. ನಿನ್ನ ತಮ್ಮಂದಿರು ರೆಕ್ಕೆ ಬಲಿಯುವವರೆಗೂ ನಿನ್ನನ್ನು ಪ್ರೇಮದಿಂದ ನೋಡಿ ಆಮೇಲೆ ಹಾರಿ ಹೋಗ್ತಾರೆ. ಆಗ ನಿನಗೆ ನಲ್ವತ್ತು ವರ್ಷಗಳಾಗಿರುತ್ತೆ."

    ಒಂದು ಕ್ಷಣ ನಿಶ್ಶಬ್ದ.

    ಶೈಲಜ ಖಾಲಿ ಕಪ್ಪನ್ನು ಕೆಳಗಿಟ್ಟು, ಮೆಲುದನಿಯಿಂದ ಇವನ್ನೆಲ್ಲ ನಾನು ಯೋಚಿಸಲಿಲ್ಲಾಂತೀಯಾ?

    ಯೋಚಿಸಿದ್ದರೆ ಹೀಗೆ ನಿಸ್ಸಾರವಾಗಿ ಕಳೀತಿರಲಿಲ್ಲ ಎಂದಳು ರಾಣಿ. ದೂರದಲ್ಲಿ ಸಣ್ಣ ಬೆಳಕರೇಖೆ ಕೂಡ ಕಾಣದಂತಹ ಕತ್ತಲೆಯೇ ಭವಿಷ್ಯತ್ತಾದರೆ, ದೊರಕಿದ ಮಿಂಚುಹುಳಗಳೊಂದಿಗೆ ಆಡಿಕೊಳ್ಳುವುದೇ ಒಳ್ಳೆಯದು. ನಿಮ್ಮ ಮನೆಯನ್ನು ಬೆಳಗಿಸಿಕೊಳ್ಳಿ ಎಂದು ಒಂದು ಅಪರಂಜಿ ಬೊಂಬೆಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಕಳುಹಿಸಿದರೆ ಅವರು ತೃಪ್ತಿ ಹೊಂದೋಲ್ಲ. ಪಕ್ಕದಲ್ಲಿ ನೋಟಿನ ಕಂತೆ ಇದೆಯೋ, ಇಲ್ಲವೋ ಅಂತ ನೋಡ್ತಾರೆ. ನಿನ್ನ ಶರೀರವನ್ನು ನೀನೆಷ್ಟೇ ಪವಿತ್ರವಾಗಿಟ್ಟುಕೊ, ನಿನ್ನ ಮನಸ್ಸನ್ನೂ ಪವಿತ್ರವಾಗಿಟ್ಟುಕೊಂಡರೂ-ಮದುವೆ ಹತ್ತಿರ ಬಂದ ಕೂಡಲೇ ಮತ್ತೆ ಹಣವೇ ಪ್ರಧಾನ ಪಾತ್ರ ವಹಿಸುತ್ತೆ. ಹಾಗಿರುವಾಗ ಅಂತಹ ಗಂಡಿಗಾಗಿ ಯಾಕೆ ಶರೀರವನ್ನು ಪವಿತ್ರವಾಗಿಟ್ಟುಕೊಳ್ಳಬೇಕು? ಎಂಜಾಯ್!

    ಕಣ್ರೆಪ್ಪೆಯನ್ನು ಅಲುಗಿಸದೆ ಅವಳನ್ನೇ ನೋಡಿದಳು ಶೈಲಜ.

    ಅಂತರ್ಲೀನವಾಗಿ ಹಣ, ಮನುಷ್ಯನ ನೈತಿಕ ತಳಹದಿಯ ಮೇಲೆ ಎಷ್ಟು ಪ್ರಭಾವ ತೋರಿಸುತ್ತಿದೆ!

    ಈ ಹೊಸ ಥಿಯರಿ ಕಹಿಯಾದರೂ ಸತ್ಯ. ಆದರೆ ಜೀರ್ಣಿಸಿಕೊಳ್ಳಬೇಕು.

    ಪೊರೆಪೊರೆಯಾಗಿ ಬಿಡಿಸಿ ನೋಡಿದರೆ ಮುಗ್ಧಳಾಗಿರಬೇಕಿದ್ದ ಸ್ತ್ರೀಯನ್ನು ಬಲಿತು ಹೋಗುವ ಹಾಗೆ ಮಾಡಿದ್ದು ಈ ವ್ಯವಸ್ಥೆಯೇ ಏನೋ ಎನಿಸುತ್ತೆ.

    ಏನು ಯೋಚಿಸ್ತಿದೀಯಾ?

    ವ್ಯವಸ್ಥೆ ಬದಲಾಗಬೇಕಾದರೆ ಏನು ಮಾಡಬೇಕು?

    ರಾಣಿ ನಕ್ಕಳು. ಪ್ರಳಯ ಬರಬೇಕು.

    ಶೈಲಜ ನಗಲಿಲ್ಲ. ಈ ವ್ಯವಸ್ಥೆ ಬದಲಾಗುವುದಕ್ಕಾಗಿ ಪ್ರಳಯವೇ ಬರಬೇಕಾದರೆ, ಆ ಪ್ರಳಯವನ್ನು ಈ ಕ್ಷಣವೇ ಆಹ್ವಾನಿಸ್ತಿದ್ದೀನಿ ನಾನು. ಪ್ರಳಯ ಬರಬೇಕು. ಆ ಪ್ರಳಯ ಕಾಲ ಝಂಝಾಮಾರುತದಲ್ಲಿ...... ಪರಿಶುದ್ಧವಾದ ಮನಸ್ಸಿನಿಂದ, ಪರಿಶುದ್ಧವಾದ ವ್ಯವಸ್ಥೆಯಲ್ಲಿ, ಮನುಷ್ಯ ಹೊಸ ಜೀವನವನ್ನು ಪ್ರಾರಂಭಿಸಬೇಕು.

    ರಾಣಿ ಅವಳ ಕೈ ಹಿಡಿದುಕೊಂಡು, ಏಯ್ ಏನಿದು? ಎಲ್ಲರೂ ನೋಡ್ತಿದ್ದಾರೆ ಎಂದಳು.

    ಶೈಲಜ ತನ್ನ ಆವೇಶಕ್ಕೆ ತಾನೇ ನಾಚಿಕೆಪಟ್ಟು ಸಾರಿ, ನಡಿ ಹೋಗೋಣ ಎಂದಳು.

    ಇಬ್ಬರೂ ಮೇಲಕ್ಕೆ, ಶೈಲಜಳ ಸೀಟಿನ ಹತ್ತಿರ ಬಂದರು. ರಾಣಿ ಕುರ್ಚಿಯಲ್ಲಿ ಹಿಂದಕ್ಕೊರಗಿ ಕುಳಿತು, ಯಾವುದೀ ಫೈಲು? ಎಂದು ಕೇಳಿದಳು ಫೈಲನ್ನು ಬಿಚ್ಚುತ್ತ.

    ಇಂಟರ್‍ವ್ಯೂ ಅಪ್ಲಿಕೇಷನ್ಸ್. ನಾಳೆ ಇಂಟರ್‍ವ್ಯೂ ಇದಿಯಲ್ಲ.

    ಹೊಸ ಹುಡುಗರು ಬರ್ತಿದ್ದಾರನ್ನು. ಒಂದೊಂದೇ ಅಪ್ಲಿಕೇಷನ್ನನ್ನು ಅದರ ಬಲಭಾಗದ ಮೂಲೆಯಲ್ಲಿದ್ದ ಫೋಟೋ ನೋಡುತ್ತ ಪೇಜುಗಳನ್ನು ತಿರುಗಿಸಲಾರಂಭಿಸಿದಳು ರಾಣಿ.

    ಹಾಗೆ ನೋಡುತ್ತಿದ್ದವಳು ಒಂದೆಡೆ ನಿಲ್ಲಿಸಿ ಹಾಯ್! ಎಂದಳು. ಈ ಹುಡುಗ ನೋಡು ಎಷ್ಟು ಚೆನ್ನಾಗಿದ್ದಾನೋ.

    ಶೈಲಜ ಅತ್ತ ನೋಡಲಿಲ್ಲ.

    Enjoying the preview?
    Page 1 of 1