Discover millions of ebooks, audiobooks, and so much more with a free trial

Only $11.99/month after trial. Cancel anytime.

Solu Geluvina Hadiyalli
Solu Geluvina Hadiyalli
Solu Geluvina Hadiyalli
Ebook269 pages2 hours

Solu Geluvina Hadiyalli

Rating: 0 out of 5 stars

()

Read preview

About this ebook

Geetha B.U. is one of the famous authors in Kannada. She has also written in serials. She currently lives in Bangalore.
LanguageKannada
Release dateAug 12, 2019
ISBN6580202700577
Solu Geluvina Hadiyalli

Read more from Geetha B.U.

Related to Solu Geluvina Hadiyalli

Related ebooks

Reviews for Solu Geluvina Hadiyalli

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Solu Geluvina Hadiyalli - Geetha B.U.

    http://www.pustaka.co.in

    ಸೋಲು ಗೆಲುವಿನ ಹಾದಿಯಲ್ಲಿ

    Solu Geluvina Hadiyalli

    Author :

    ಗೀತಾ ಬಿ.ಯು.

    Geetha.B.U

    For more books
    http://www.pustaka.co.in/home/author/geetha-bu

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಸೋಲು ಗೆಲುವಿನ ಹಾದಿಯಲ್ಲಿ
    ಹಾದಿಗಳು ವಿಭಿನ್ನ

    ಮದುವೆ ಒಂದು ಪವಿತ್ರ ಬಂಧನ ಖಚಿತ ದನಿಯಲ್ಲಿ ಹೇಳಿದಳು ಲತಾ.

    "ಬಂಧನ…ಪವಿತ್ರವೋ ಅಲ್ಲವೋ ಅಂತೂ ಬಂಧನವೇ ಅಲ್ಲವೇ?! ಸ್ಮಿತಾ ವ್ಯಂಗ್ಯವಾಗಿ ಅಂದಳು.

    ಅದು ಹಿತವಾದ ಬಂಧನ ಸ್ಮಿತಾ... ಇಲ್ಲದೆ ಹೋಗಿದ್ದರೆ ಶತಶತಮಾನಗಳಿಂದ ಮನುಷ್ಯ ಅದನ್ನು ಪೋಷಿಸಿಕೊಂಡು, ಆಚರಿಸಿಕೊಂಡು ಬರುತ್ತಿದ್ದನೇ ಲತಾ ಕಿಟಕಿಯ ಬಳಿ ಹೋಗಿ ನಿಂತಳು.

    ಹಾಗಾದರೆ ನಿನ್ನ ಪ್ರಕಾರ ಹರಿಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯೂ ಸರಿ. ಯಾಕೆಂದರೆ ಅದೂ ಶತಶತಮಾನಗಳಿಂದಲೂ ನಡೆದು ಬಂದಿದೆಯಲ್ಲವೇ! ಲತಾ, ಜನ ಅದನ್ನು ಆಚರಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅದು ಸರಿಯೇ ಆಗಿರಬೇಕು ಎಂದೇನಿಲ್ಲ ಸ್ಮಿತಾ ಕೂಡ ಕಿಟಕಿಯ ಬಳಿ ಬಂದಳು.

    ಸ್ಮಿತಾ... ನೀನು ಏನೇ ಹೇಳು, ಮದುವೆಗೆ ಜೀವನದಲ್ಲಿ ಒಂದು ಅಗ್ರ ಸ್ಥಾನವಿದೆ. ಗಂಡು ಹೆಣ್ಣುಗಳ ಮಿಲನಕ್ಕೆ ಒಂದು ಪವಿತ್ರ ಬಂಧನ ಬೇಕು, ಅಗ್ನಿಸಾಕ್ಷಿ ಬೇಕು, ಜನಸಾಕ್ಷಿ ಬೇಕು. ಇಲ್ಲದೇ ಹೋದರೆ ಅದು ವ್ಯಭಿಚಾರವಾಗುತ್ತೆ.

    ವ್ಯಭಿಚಾರ! ಅದರಲ್ಲಿ ತಪ್ಪೇನಿದೆ? ಆದರೆ ನಾನು ವ್ಯಭಿಚಾರವನ್ನು ಅಪೇಕ್ಷಿಸುತ್ತೇನೆ, ಎತ್ತಿ ಹಿಡಿಯುತ್ತಿದ್ದೇನೆಂದಲ್ಲ... ಒಂದು ಗಂಡು, ಒಂದು ಹೆಣ್ಣು ಮದುವೆಯಿಲ್ಲದೆ ಒಟ್ಟಿಗೆ ಇರಬಹುದಲ್ಲವೇ? ಅದಕ್ಕೆ ಅವರೇ ಸಾಕ್ಷಿ... ಬೇಸರವೆನಿಸಿದಾಗ ಬೇರೆಯಾಗಬಹುದು ಸ್ಮಿತಾ ಕಿಟಕಿಯ ಸರಳುಗಳನ್ನು ಹಿಡಿದಳು.

    ಮಕ್ಕಳು...? ನಾಳೆ ಅವರಿಗೆ ಹುಟ್ಟುವ ಮಕ್ಕಳು ಏನು ಮಾಡಬೇಕು? ಬೀದಿಪಾಲಾಗಬೇಕಷ್ಟೆ ಲತಾ ಹೊರಗೆ ಮುಳುಗುತ್ತಿದ್ದ ಸೂರ್ಯನನ್ನು ದಿಟ್ಟಿಸಿದಳು.

    ಥೂ! ನಿಲ್ಲಿಸ್ರೇ ಸಾಕು... ದೀಪ ಹಚ್ಚೋ ಹೊತ್ಗೆ ಏನು ಮಾತು ಅಂಥ ಆಡ್ತೀರಾ? ಸುಮಿತ್ರಮ್ಮ ಬಂದು ಅವರ ಚರ್ಚೆಗೆ ಮುಕ್ತಾಯ ಹಾಡಿ, ಏಳ್ರೆ... ಮುಖ ತೊಳೆದುಕೊಂಡು ಜಡೆ ಹಾಕ್ಕೊಳ್ಳಿ. ಸಂಜೆ ಹೊತ್ತು ಹಾಗೆ ಕೂತಿರ್ಬೇಡಿ... ತಲೆಹರಟೆ ಮಾಡ್ತಾ ಇಬ್ಬರನ್ನೂ ಎಬ್ಬಿಸಿದರು.

    ಇವತ್ತು ನೀನೇ ಜಡೆ ಹಾಕಮ್ಮ ಲತಾ ತನ್ನ ಜಡೆಯನ್ನು ಬಿಚ್ಚಿಕೊಳ್ಳತೊಡಗಿದಳು.

    ಸ್ಮಿತಾ ಎದ್ದು ಹೊರ ನಡೆದಳು.

    ಸುಮಿತ್ರಮ್ಮ ಲತಾಳ ಹೊರೆಗೂದಲು ಬಾಚತೊಡಗಿದರು. ಹೌದು, ಅಕ್ಕ ತಂಗಿಯರಿಬ್ಬರೂ ಒಂದು ಹೊರೆ ಕೂದಲು, ಲತಾ ಕೂದಲಿಗೆ ಕತ್ತರಿ ತಾಗಿಸುತ್ತಿರಲಿಲ್ಲ. ಕೂದಲು ರಟ್ಟೆಗಾತ್ರವಿದ್ದು, ಮಂಡಿಯನ್ನು ತಾಕುತ್ತಿತ್ತು.

    ಆದರೆ ಸ್ಮಿತಾ ತನ್ನ ಕೂದಲನ್ನು ಸೊಂಟದವರೆಗೆ ಕತ್ತರಿಸಿಕೊಂಡಿದ್ದಳು. ಆ ದಿನ ಸುಮಿತ್ರಮ್ಮ ಅತ್ತು ಗೋಳಾಡಿದರು.

    ಆದರೆ ಸ್ಮಿತಾಳ ಬುದ್ಧಿಯೇ ಹಾಗೆ. ಯಾರು ಏನೇ ಹೇಳಿದರೂ ತನಗೆ ಸರಿತೋಚಿದಂತೆ ಮಾಡುತ್ತಿದ್ದಳು.

    ಚಿಕ್ಕವಳಿದ್ದಾಗ ಅವಳು ತಿಂದ ಪೆಟ್ಟುಗಳಿಗೆ ಲೆಕ್ಕವಿಲ್ಲ. ದೊಡ್ಡವಳಾಗಿ ಕಾಲೇಜಿಗೆ ಹೋಗುತ್ತಿರುವಾಗಲೂ ದಿನವೂ ಯಾವುದಾದರೂ ಕಾರಣಕ್ಕೆ ಬೈಯಿಸಿಕೊಳ್ಳುತ್ತಿದ್ದಳು.

    ಸ್ಮಿತಾ ಮಾತಾಡುವ ಸ್ವಭಾವದವಳಲ್ಲ. ಆದರೆ ಮಾತಾಡಿದರೆ ಅದು ವ್ಯಂಗ್ಯ ನುಡಿಯೇ! ಆದರೆ ಲತಾ ಹಾಗಲ್ಲ. ಅವಳದು ಬಿಚ್ಚು ಮಾತಿನ ಸ್ವಭಾವ. ಅಮ್ಮ ಹೇಳಿದ ಹಾಗೆ ಕೇಳಿ, ಕೊಡಿಸಿದ್ದರಲ್ಲಿ ತೃಪ್ತಿ, ಸಂತೋಷಪಡುವ ಮುಗ್ಧ ಮನಸ್ಸಿನವಳು.

    ಸುಮಿತ್ರಮ್ಮ, ವಾಸುದೇವರಾಯರಿಗೆ ಎರಡು ಕಣ್ಣುಗಳಂತೆ, ಲತಾ, ಸ್ಮಿತಾ. ಲತಾ ಕೊನೇವರ್ಷದ ಕೆಮಿಸ್ಟ್ರಿ ಎಂ.ಎಸ್ಸಿ. ಮಾಡುತ್ತಿದ್ದಳು. ಸ್ಮಿತಾ ಕೊನೇ ವರ್ಷದ ಬಿ.ಎಸ್ಸಿ ಮಾಡುತ್ತಿದ್ದಳು.

    ವಾಸುದೇವರಾಯರು ಈ ನಡುವೆ ಲತಾಳ ಮದುವೆ ಮಾಡುವ ಬಗ್ಗೆ ಓಡಾಡುತ್ತಿದ್ದಾರೆ.

    ಸುಮಿತ್ರಮ್ಮ ಮಗಳ ಜಡೆ ಹೆಣೆದು ಎದ್ದರು.

    ಆ ಹೊತ್ತಿಗೆ ಸ್ಮಿತಾ ಮುಖ ತೊಳೆದು ರೂಮಿಗೆ ಬಂದಳು.

    ಬಾರೆ ನಿಂಗೂ ಜಡೆಹೆಣೀತೀನಿ ಸುಮಿತ್ರಿಮ್ಮ ಪ್ರೀತಿಯಿಂದ ಕರೆದರು.

    ಬೇಡ, ನಾನೇ ಹಾಕ್ಕೋತೀನಿ ಅಮ್ಮನ ಕಡೆ ತಿರುಗಿಯೂ ನೋಡದೆ ಉತ್ತರಿಸಿದಳು.

    ಸರಿ ಸುಮಿತ್ರಮ್ಮ ಪೆಚ್ಚುಮುಖ ಹಾಕಿಕೊಂಡು ಹೊರಹೋದರು.

    2

    ವಾಸುದೇವರಾಯರು ಅಂಥ ಆಸ್ತಿವಂತರೇನಲ್ಲ... ಆದರೆ ಉಂಡುಡಲು ಏನೂ ಕೊರತೆಯಿರಲಿಲ್ಲ. ವಾಸಿಸಲು ಸ್ವಂತ ಮನೆಯಿತ್ತು. ಹಳ್ಳಿಯಲ್ಲಿದ್ದ ಗದ್ದೆಯನ್ನು ಅವರ ಅಣ್ಣನೇ ನೋಡಿಕೊಳ್ಳುತ್ತಿದ್ದರು. ವರ್ಷಕ್ಕೆ ಆಗುವಷ್ಟು ದವಸಧಾನ್ಯ ಕಳುಹಿಸುತ್ತಿದ್ದರು.

    ವಾಸುದೇವರಾಯರು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರಿಗೆ ತಕ್ಕ ಹೆಂಡತಿ ಸುಮಿತ್ರಮ್ಮ.

    ಆಗಿನ ಕಾಲದಲ್ಲೇ ಅವರದು ಪ್ರೇಮವಿವಾಹ. ಅಂದರೆ ಮನೆಯವರು ಒಪ್ಪಲಿಲ್ಲ ಎಂದೇನಲ್ಲ. ಪ್ರೇಮ-ಪ್ಲಸ್ ಅರೇಂಜ್ಡ್ ಮ್ಯಾರೇಜ್ ಅಂತಾರಲ್ಲ ಹಾಗೆ.

    ಕಾಲೇಜಿನ ಪ್ರಾಧ್ಯಾಪಕರಾಗಿ ಸೇರಿದ ಹೊಸತರಲ್ಲಿ ವಾಸುದೇವರಾಯರು ಎರಡನೇ ಪಿ.ಯು.ಸಿ ಓದುತ್ತಿದ್ದ ಸುಮಿತ್ರಾಳನ್ನು ಪ್ರೇಮಿಸಿ ಮದುವೆಯಾಗಿದ್ದರು. ಅನುರೂಪ ದಾಂಪತ್ಯ ಅವರದು.

    ಮದುವೆಯಾಗಿ ಮೂರು ವರ್ಷದ ನಂತರ ಹುಟ್ಟಿದಳು ಲತಾ. ಅವಳು ಹುಟ್ಟಿದ ಎರಡು ವರ್ಷಕ್ಕೆ ಹುಟ್ಟಿದವಳೇ ಸ್ಮಿತಾ. ನಂತರ ಒಂದು ಗಂಡು ಮಗು ಹುಟ್ಟಿ ಹೋಗಿಬಿಟ್ಟಿತು. ಆಮೇಲೆ ಸುಮಿತ್ರಮ್ಮನಿಗೆ ಮಕ್ಕಳಾಗಲೇ ಇಲ್ಲ.

    ಅದರ ಬಗ್ಗೆ ಸುಮಿತ್ರಮ್ಮ ತಲೆಕೆಡಿಸಿಕೊಳ್ಳಲೂ ಇಲ್ಲ. ಇರುವ ಇಬ್ಬರು ಹೆಣ್ಣು ಮಕ್ಕಳನ್ನೇ ಪ್ರೀತಿಯಿಂದ ಬೆಳೆಸಿದರು. ಹೆಣ್ಣುಮಕ್ಕಳೆಂದು ಅವರನ್ನು ಕಡೆಗಾಣಿಸಲೂ ಇಲ್ಲ. ಗಂಡುಮಕ್ಕಳು ಬೇಕೆಂದು ಹಂಬಲಿಸಲೂ ಇಲ್ಲ.

    ಲತಾ ಸ್ಮಿತಾರನ್ನು ನೋಡಿದರೆ ಒಂದೇ ತಾಯಿಯ ಮಕ್ಕಳೆಂದು ಹೇಳಲಾಗುತ್ತಿರಲಿಲ್ಲ.

    ಇಬ್ಬರಲ್ಲಿ ಲತಾಳದು ನೂರು ಜನರಲ್ಲಿ ಎದ್ದು ಕಾಣುವ ರೂಪ. ಆದರೆ ಸ್ಮಿತಾ ನಾಲ್ಕು ಜನರಲ್ಲಿ ಎದ್ದು ಕಾಣುತ್ತಾಳೆ. ನೂರು ಜನರಲ್ಲಿ ಬೆರೆತರೆ ಅವರಲ್ಲಿ ಸಾಮಾನ್ಯವಾಗಿ ಕರಗಿ ಹೋಗುವ ರೂಪ ಅವಳದು.

    ಲತಾಳ ಸ್ವಭಾವ ಅವಳ ರೂಪದಂತೆ ಸ್ವಚ್ಛ, ನಿರ್ಮಲ, ಕೊಂಕಿಲ್ಲದೆ ಎಲ್ಲರೊಡನೆ ನಗುನಗುತ್ತಾ ಬೆರೆತು ಮಾತಾಡುತ್ತಾಳೆ. ಕನಸುಗಳ ಪ್ರಪಂಚದಲ್ಲಿ ತೇಲಿದರೂ ವಾಸ್ರವಿಕತೆಯ ಅರಿವಿದೆ. ಜೀವನದ ಬಗ್ಗೆ ತುಂಬಾ ಆಸೆ-ಅಕ್ಕರೆ. ಆದರೆ ಅವಳು ಮನೆಯಲ್ಲಿ ಯಾರಿಗೂ ಹೇಳದೆ ಬಚ್ಚಿಟ್ಟಿರುವ ವಿಷಯ ಅಶೋಕನದು!

    ಅಶೋಕ ಲತಾಳ ಕನಸು, ನನಸು ಎಲ್ಲಾ. ಮನೆಯಲ್ಲಿ ಮಾತ್ರ ಅವನ ವಿಷಯಹೇಳಲು ಅವಳಿಗೆ ಇನ್ನೂ ಧೈರ್ಯಬಂದಿಲ್ಲ. ಆದರೆ ಅಮ್ಮ ಅಪ್ಪ ಒಪ್ಪೇಒಪ್ಪುವರೆಂಬ ನಂಬಿಕೆ ಅವಳನ್ನು ಅವನೊಡನೆ ತಿರುಗಾಡುವಂತೆ ಮಾಡಿತ್ತು.

    ಅಶೋಕ್ ಲತಾಳಿಗೆ ರೂಪ, ಸ್ವಭಾವ ಎಲ್ಲದರಲ್ಲೂ ತಕ್ಕಗಂಡು. ಹೇಳಿ ಮಾಡಿಸಿದ ಜೋಡಿ ಅಂತಾರಲ್ಲ ಹಾಗೆ.

    ಅಶೋಕ್ ಯೂನಿವರ್ಸಿಟಿಯಲ್ಲಿ ಕೆಮಿಸ್ಟ್ರಿ ಪ್ರೊಫೆಸರ್. ಎರಡು ಪಿ.ಎಚ್.ಡಿ ಪಡೆದಿದ್ದಾನೆ.

    ಲತಾಳ ಸ್ವಭಾವಕ್ಕೆ ತದ್ವಿರುದ್ಧ ಸ್ಮಿತಾಳದು. ಅವಳ ಹೆಸರಿಗೆ ತದ್ವಿರುದ್ಧ ಅವಳ ಸ್ವಭಾವ. ಸಿಡುಕು, ಒರಟುಮಾತು, ತನ್ನ ಮಾತಿನಿಂದ ಇನ್ನೊಬ್ಬರಿಗೆ ನೋವಾಗಬಹುದು ಎಂಬ ಯೋಚನೆ ಇಲ್ಲದವಳು, ಹೆಚ್ಚು ಮಾತಿನವಳಲ್ಲ. ಆದರೆ ಆಡಿದರೆ ವ್ಯಂಗ್ಯ ಮಾತೇ!

    ಅವಳಿಗೆ ದೈವದತ್ತವಾಗಿ ಬಂದಿದ್ದ ವರವೆಂದರೆ ಅವಳ ಕಂಠ. ಅದನ್ನು ಪಳಗಿಸಿ ಒಳ್ಳೆ ಹಾಡುಗಾರ್ತಿಯಾಗಿದ್ದಳು. ಅವಳಿಗೆ ಅದರ ಬಗ್ಗೆ ಬಹಳ ಹೆಮ್ಮೆ.

    ಜೀವನದಲ್ಲಿ ಹೇಗಾದರೂ ಮಾಡಿ ಹೆಸರು ಗಳಿಸಬೇಕೆಂಬುದು ಅವಳ ಹೆಬ್ಬಯಕೆ. ಅದಕ್ಕೆ ಸರಿಯಾಗಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ.ಯಲ್ಲಿ ರ್ಯಾಂಕ್ ಪಡೆದಿದ್ದಳು.

    3

    ಅಶೋಕ್, ಮುಂದೇನು? ವಿಶ್ವವಿದ್ಯಾಲಯದ ಉಪಹಾರಗೃಹದಲ್ಲಿ ಅವನೆದುರು ಕಾಫಿ ಕುಡಿಯುತ್ತ ಲತಾಳೇ ಮಾತೆತ್ತಿದಳು. ಅಂದಿಗೆ ಅವಳ ಪರೀಕ್ಷೆಗಳು ಮುಗಿದಿದ್ದವು. ಮಾರನೇದಿನದಿಂದ ಅವಳು ಕಾಲೇಜಿಗೆ ಬರುವ ಹಾಗಿರಲಿಲ್ಲ.

    ಹುಂ......ಏನು ತಿರುಗಿ ಅವಳನ್ನೇ ಪ್ರಶ್ನಿಸಿ ಅವಳೆಡೆಗೆ ತುಂಟ ನೋಟವನ್ನೆಸೆದ ಅಶೋಕ್.

    ಥೂ! ಹೋಗೀಪ್ಪ. ನಿಮಗೆ ಸೀರಿಯಸ್ ಆಗಿ ಯೋಚನೆ ಮಾಡೋಕೆ, ಮಾತಾಡೋಕೆ ಬರಲ್ಲ. ಅದ್ಹೇಗೆ ಪಿಹೆಚ್‍ಡಿ ತೊಗೊಂಡ್ರೋ?! ಹುಸಿ ಮುನಿಸು ತೋರಿದಳು ಲತಾ.

    ಹಾಂ. ಹಾಂ... ಬುಡಕ್ಕೆ ಕೊಡಲು ಹಾಕಬೇಡ ಗಾಬರಿಯಾದಂತೆ ಹೇಳಿದ ಅಶೋಕ್.

    ಹೌದು, ನಾನು ಹಾಕೋಳೇ! ನಾನು ನಾಳೆಯಿಂದ ಕಾಲೇಜಿಗೆ ಬರೋಲ್ಲವಲ್ಲ. ರಾಯರನ್ನ ನೋಡೋದು ಹೇಗೆ, ಏನು ಅಂತ ಯೋಚ್ನೆ ಮಾಡ್ತಾ ಇದ್ರೆ, ನೀವು ಹಾಯಾಗಿದ್ದೀರಿ. ನನ್ನ ಸಂಕಟ ನಿಮಗೆ ಹೇಗೆ ಗೊತ್ತಾಗಬೇಕು! ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಅನ್ನೋ ಹಾಗೆ. ಕಾಫಿ ಬಟ್ಟಲನ್ನು ಕೆಳಗಿಟ್ಟು, ಉಕ್ಕಿಬರುತ್ತಿದ್ದ ಕಣ್ಣೀರನ್ನು ತಡೆದು, ಎದ್ದು ಹೊರಗಿ ನಡೆದಳು ಲತಾ.

    ಅಶೋಕ್ ತಟ್ಟನೆ ಎದ್ದು ಅವಳನ್ನು ಹಿಂಬಾಲಿಸಿದ. ಏ ಲತಾ......ತಮಾಷೆಗೆ ಮಾತಾಡಿದ್ರೆ... ಗುರ್ ಅಂಥ ಎದ್ಹೋಗ್ತೀಯಲ್ಲ? ಒಂಚೂರೂ ಸೆನ್ಸ್ ಆಫ್ ಹ್ಯೂಮರ್ ಇಲ್ಲ ನಿಂಗೆ.

    ಹೌದು. ನಿಮಗೆ ಎಲ್ಲಾ ವಿಷಯದಲ್ಲೂ ಹಾಸ್ಯ. ಮನೇಲಿ ಅಪ್ಪ ನನ್ನ ಮದುವೆಗೆ ಪ್ರಯತ್ನಪಡ್ತಿದಾರೆ ಗೊತ್ತಾ ಕ್ಯಾಂಟೇನ್ ಎದುರಿಗಿದ್ದ ಮರಕ್ಕೆ ಒರಗಿ ನಿಂತಳು ಲತಾ.

    ಹೌದಾ? ಇನ್ನೂ ನಗುತ್ತಲೇ ಇದ್ದ ಅಶೋಕ್.

    ಕಣೀ ಕೇಳ್ಹೋಗಿ... ನಾಳೆ ಯಾರೋ ಹುಡುಗ ನನ್ನ ನೋಡೋಕೆ ಬರ್ತಾ ಇದಾನಂತೆ. ನೀವ್ಯಾವಾಗ ನಮ್ಮನೇಗೆ ಬರೋದು, ನಮ್ಮಪ್ಪನ ಜೊತೆ ಮಾತಾಡೋದು...? ... ಬರೀ ನನ್ಹತ್ರ ಮಾತೇ ಆಗೋಯ್ತು!

    ತನ್ನ ಜಡೆಯ ತುದಿಯೊಂದಿಗೆ ಆಟವಾಡುತ್ತಾ ಕೇಳಿದಳು ಲತಾ. ಅವಳ ಸ್ವಭಾವವೇ ಹಾಗೆ. ಒಂದು ನಿಮಿಷ ದುಃಖ, ಕೋಪ, ಮತ್ತೊಂದು ನಿಮಿಷದಲ್ಲಿ ಯಥಾಪ್ರಕಾರ ನಗುಮುಖ.

    ನಾನ್ಯಾಕೆ ಬರ್ಲಿ? ನಾಳೆ ಬರ್ತಾನಲ್ಲ, ಒಬ್ಬ ಹುಡ್ಗ’ ಅವನನ್ನೇ ಮದ್ವೆಮಾಡ್ಕೊ. ಹಾಂ...ಅಂಗ್ಹಾಗೆ ಆ ಹುಡ್ಗ ಯಾರು ಅಂತ ಕೇಳಿದ್ಯಾ?

    ನಾನ್ಯಾರನ್ನ ಬೇಕಾದ್ರೂ ಮದ್ವೆ ಮಾಡ್ಕೋತೀನಿ. ನಿಮ್ಗೇನು? ಸಿಟ್ಟಿನಿಂದ ಕೇಳಿದಳು ಲತಾ.

    ಆ ಹುಡುಗ ಯಾರು ಅಂಥ ಕೇಳಿದ್ಯಾ?

    ಇಲ್ಲ...ಆದ್ರೆ ನೋಡ್ತೀನಿ. ಸರಿಹೋದ್ರೆ ಮಾಡ್ಕೊಂಡ್ಬಿಡ್ತೀನಿ. ನಿಮಗೆ ನಾನು ಬೇಕಾಗಿಲ್ಲವಾದ ಮೇಲೆ ನಂಗೆ ಯಾರಾದರೇನು?

    ಸಿಟ್ಟಿನಿಂದ ಉತ್ತರಿಸಿ, ಅವನು ಕರೆಯುತ್ತಿದ್ದರೂ ಕೇಳಿಸದವಳ ಹಾಗೆ ಸರಸರನೆ ನಡೆದಳು.

    ಅಶೋಕ ಅವಳ ಮುಂದೆ ಸ್ಕೂಟರ್ ತಂದು ನಿಲ್ಲಿಸಿದಾಗ ಮಾತಾಡದೆ ಹತ್ತಿದಳು. ಅಶೋಕ್ ನಗುನಗುತ್ತಾ ಗಾಡಿಯನ್ನೋಡಿಸಿದ. ಓಹ್... ಯಾವಾಗಲೂ ಹೀಗೇ ಲತಾಳೊಡನೆ ಓಡಾಡುತ್ತಿದ್ದರೆ ಎಷ್ಟು ಚೆನ್ನ!

    ಅಶೋಕ್ ಬೆನ್ನಿನ ಮೇಲೆ ತಲೆ ಒರಗಿಸಿ ಪಿಸುಗುಟ್ಟಿದಳು ಲತಾ.

    ಏನು?

    ಹೀಗೆ ಯಾವಾಗ್ಲೂ ನೀವು ಜೊತೆಯಾಗಿದ್ರೆ ನಂಗೆ ಇನ್ನೇನೂ ಬೇಡ.

    ಹುಚ್ಚಿ. ನಿಂಗೊಬ್ಬಳಿಗೇ ಹಾಗೆ ಅನ್ನಿಸುತ್ತೆ ಅಂದ್ಕೊಂಡಿದೀಯ? ನಾನು ಸಾಯೋವರ್ಗೂ ನೀನು ನನ್ನ ಜೊತೇಲೇ ಇರಬೇಕು ಲತಾ" ಅಶೋಕ ಭಾವಪರವಶನಾದ.

    ಥೂ... ಸಾಯೋಮಾತಾಡಬೇಡಿ. ನೀವು ನೂರು ವರ್ಷ ಬದುಕಬೇಕು, ಯಾಕೆ ಗೊತ್ತಾ? ನಂಗೆ ನೂರು ವರ್ಷಗಳು ಬದುಕಬೇಕೆಂಬ ಆಸೆ. ನೀವಿಲ್ದೆ ಹೋದ್ರೆ ನಾನ್ಹೇಗೆ ಇರೋದು?

    ಓಹ್! ನೀನು ಜತೆಗಿದ್ದರೆ ನನಗೆ ಸಾವಿರ ಸಾವಿರವರ್ಷ ಬದುಕಬೇಕು ಅನ್ನಿಸುತ್ತದೆ!

    ಬಸ್‍ಸ್ಟಾಪಿನ ಬಳಿ ಬಂದಾಗ ಜಯನಗರಕ್ಕೆ ಹೋಗುವ ಬಸ್ಸು ಹೊರಟಿತ್ತು. ಅವರಿಗೆ ಮಾತು ಮುಂದುವರೆಸಲಾಗಲಿಲ್ಲ. ಅಶೋಕನಿಗೆ ಹೇಳಿ ಬಸ್ಸು ಹತ್ತಿದಳು ಲತಾ.

    4

    ರೆಡೀನ ಲತಾ, ಅವರುಗಳು ಬರೋ ಟೈಮಾಯ್ತು ಸುಮಿತ್ರಮ್ಮ ರೂಮಿಗೆ ಬಂದರು. ಮಗಳು ಹಾಗೇ ಕುಳತಿದ್ದನ್ನು ನೋಡಿ ದಂಗಾದರು.

    ಯಾಕೆ ಲತಾ? ಬೇಗ ಸೀರೆ ಉಟ್ಕೊಂಡು ಏಳು ಹತ್ತಿರ ಬಂದು ಮೈದಡವಿದರು.

    ಸರೀಮ್ಮ ಲತಾ ಮೇಲೆದ್ದಳು.

    ಅಮ್ಮನನಿಗೆ ಅಶೋಕನ ವಿಚಾರ ಈಗಲೇ ಹೇಳಿಬಿಡಲೇ ಎಂದು ಚಡಪಡಿಸಿದಳು. ಆದರೆ ಅಮ್ಮನ ಕಾತರ ತುಂಬಿದ ಮುಖ ನೋಡಿ ಹೇಳಲು ಮನಸ್ಸು ಬರಲಿಲ್ಲ.

    ರಾತ್ರಿ ಖಂಡಿತ ಹೇಳಿಬಿಡಬೇಕು ಎಂದುಕೊಂಡು ಅಮ್ಮ ತೆಗೆದಿಟ್ಟಿದ್ದ ಸೀರೆಯ ಮಡಿಕೆ ಬಿಚ್ಚಿದಳು.

    ಸ್ಮಿತಾ ಅಲ್ಲೇ ಕಥೆ ಪುಸ್ತಕ ಓದುತ್ತಾ ಕುಳಿತಿದ್ದಳು. ಅಕ್ಕನತ್ತ ನೋಡಿ ನಕ್ಕು, ತಿರುಗಿ ಪುಸ್ತಕದಲ್ಲಿ ಮುಳುಗಿದಳು. ಅವಳಿಗೆ ತಾಯಿಯ ಕಾತರ, ಅಕ್ಕನ ನಡವಳಿಕೆ ಎಲ್ಲ ವಿಚಿತ್ರವಾಗಿ ಕಾಣಿಸುತ್ತಿತ್ತು.

    ಹೊರಗೆ ಕಾರು ನಿಂತ ಶಬ್ದವಾಯಿತು. ಸುಮಿತ್ರಮ್ಮ ರೂಮಿಗೆ ಬಂದು ಲತಾಳಿಗೆ ಎಚ್ಚರಿಸಿ ಹೊರಗೆ ಧಾವಿಸಿದರು. ಕೆಲ ನಿಮಿಷಗಳ ನಂತರ ಸುಮಿತ್ರಮ್ಮ ರೂಮಿಗೆ ಬಂದು ಲತಾಳನ್ನು ತಮ್ಮ ಸಂಗಡ ಕರೆದೊಯ್ದರು ಬಲವಂತದ ನಗುವನ್ನು ತಂದುಕೊಂಡು ರೂಮಿನಿಂದ ಹೊರಬಂದಳು ಲತಾ. ಅಲ್ಲೇ ಚಾಪೆಯ ಮೇಲೆ ಕುಳಿತಿದ್ದ ಹುಡುಗನ ತಾಯಿ ಅಂಬುಜಮ್ಮನ ಪಕ್ಕ ಹೋಗಿ ಕುಳಿತಳು. ತಗ್ಗಿಸಿದ ತಲೆ ಮೇಲೆತ್ತಲಿಲ್ಲ. ಹುಡುಗನನ್ನು ನೋಡಲೇಬಾರದೆಂದು ನಿರ್ಧರಿಸಿದ್ದಳೇನೋ!

    ಎಲ್ಲೀವರೆಗೆ ಓದಿದ್ದೀಯಮ್ಮ? ಅಂಬುಜಮ್ಮ ಪ್ರಶ್ನಿಸಿದರು.

    ನೆನ್ನೆಗೆ ನನ್ನ ಎಂ.ಎಸ್ಸಿ. ಪರೀಕ್ಷೆಗಳು ಮುಗಿದವು ತಲೆ ಮೇಲೆತ್ತದೆ ಉತ್ತರಿಸಿದಳು.

    ಓಹೋ ಎಂ.ಎಸ್ಸಿ. ಅಂದ್ರೆ ನೀನು ನಮ್ಮ ಅಶೋಕನ್ನ ಮೊದಲೇ ನೋಡಿರಬೇಕಲ್ವೆ?

    ತಟ್ಟನೆ ತಲೆ ಎತ್ತಿದಳು ಲತಾ. ಎದುರಿಗೆ ವರನಾಗಿ ನಗುತ್ತಾ ಕುಳಿತಿದ್ದ ಅಶೋಕ್. ನಾಚಿಕೆಯಿಂದ ಕೆನ್ನೆ ಕಂಪೇರಿತು.

    ಅಶೋಕನ ಪಕ್ಕದಲ್ಲಿ ಕುಳಿತಿದ್ದ ಅವನ ತಂದೆ ಶಾಮರಾಯರು ಪರಿಸ್ಥಿತಿಯನ್ನು ಅರಿತವರಂತೆ ದೊಡ್ಡದಾಗಿ ನಕ್ಕರು.

    ಹ್ಹಾ ಹ್ಹಾ ಹ್ಹಾ... ವಾಸುದೇವರಾಯರೇ ನಂಗೆ ಈ ಸಂಬಂಧ ಹೇಳಿದವರು ಯಾರುಗೊತ್ತೆ? ದಕ್ಷಿಣಾಮೂರ್ತಿಗಳು. ಅವರು ನಿಮಗೆ ಗೊತ್ತೇ?

    ಇಲ್ವಲ್ಲ ವಾಸುದೇವರಾಯರು ಕಣ್ಣು ಕಣ್ಣು ಬಿಟ್ಟರು.

    ಹಾಂ... ಅರ್ಥವಾಯಿತು ನೋಡಿ. ಅಶೋಕ... ನಿಂಗೆ ಗೊತ್ತಾ ಅವರು... ಹುಂ ಹುಂ... ಗೊತ್ತಾಯ್ತು... ಮೂರ್ತಿಗಳು ಈ ಸಂಬಂಧ ನನಗೆ ಹೇಳಲು ನಿನ್ನ ಜೇಬಿನಿಂದ ಎಷ್ಟು ಕಿತ್ತರು... ಆಂ..."

    ಅಶೋಕ್ ಮಾತಾಡದೆ ತಂದೆಯತ್ತ ನೋಡಿ ನಸುನಕ್ಕು ದೃಷ್ಟಿಯನ್ನು ಬದಲಿಸಿ ಲತಾಳಲ್ಲಿ ನೆಟ್ಟ. ಲತಾ ಇನ್ನಷ್ಟು ಕೆಂಪಾಗಿ ತಲೆ ತಗ್ಗಿಸಿದಳು. ಶಾಮರಾಯರೇ ಮುಂದುವರಿಸಿದರು.

    ಹಾಂ... ನೋಡಿದ್ರಾ ರಾಯರೇ. ಈ ಹುಡುಗ್ರು ಮೊದ್ಲೇ ಎಲ್ಲಾ ಮಾತಾಡಿಕೊಂಡು ಹೋಗೆ ನಮ್ಮನ್ನ ಬೇಸ್ತು ಬೀಳಿಸಿದ್ದಾರೆ...ಊಂ...ಈಗ ನಾವು ಒಪ್ಪಿಕೊಳ್ಳುವುದೇ ಸೂಕ್ತವಲ್ಲವೇ? ಅಂಬುಜ ನೀನು ಏನು ಹೇಳ್ತಿ? ತಮ್ಮ ಪತ್ನಿಯನ್ನು ಪ್ರಶ್ನಿಸಿದರು.

    ನಾನು ಏನು ಹೇಳೋದು. ತುಳಸೀದಳ ಇಟ್ಟು ಧಾರೆ ಎರೆದು ಕೊಟ್ಟರೂ ಸರಿ, ಧಾರೆಯೆರೆಸ್ಕೊತೀನಿ. ಹುಡುಗಿ ಕೈತೊಳೆದು ಮುಟ್ಟೋ ಹಾಗಿದ್ದಾಳೆ. ಎಲ್ಲಕ್ಕೂ ಹೆಚ್ಚಾಗಿ ನಮ್ಮ ಅಶೂ ಮೆಚ್ಚಿದ್ದಾನೆ. ಅಂದ್ಮೆಲೆ ಮುಗಿದುಹೋಯಿತು ಅಂಬುಜಮ್ಮ ಅಶೋಕನನ್ನೊಮ್ಮೆ ಲತಾನನ್ನೊಮ್ಮೆ ಮೆಚ್ಚುಗೆಯಿಂದ ನೋಡಿದರು.

    "ದೊಡ್ಡ ಮಾತಾಡಿದಿರಿ ನೀವು.

    Enjoying the preview?
    Page 1 of 1