Discover millions of ebooks, audiobooks, and so much more with a free trial

Only $11.99/month after trial. Cancel anytime.

Bhutagala University
Bhutagala University
Bhutagala University
Ebook102 pages35 minutes

Bhutagala University

Rating: 0 out of 5 stars

()

Read preview

About this ebook

ಮಿಸ್ಟೇಕನ್ ಐಡೆಂಟಿಟಿಯಿಂದಾಗಿ ಯಮಧೂತರ ಜೊತೆಗೆ ಯಮಲೋಕಕ್ಕೆ ಹೋದ ಲೋ ಶ್ಯಾಮರಾವ್ ತನಗಾದ ಅನ್ಯಾಯಕ್ಕೆ ಕೋಪಗೊಳ್ಳುತ್ತಾನೆ‌. ಅವನನ್ನು ಭೂತವಾಗಿ ಭೂಮಿಯಲ್ಲಿ ಕೆಲವು ವರ್ಷ ಇರಲು ಟ್ರೇನಿಂಗ್ ಕೊಡಲು ನಿರ್ಧರಿಸಲಾಗುತ್ತದೆ. ಭೂತಗಳ ಯೂನಿವರ್ಸಿಟಿಯ ಕರಾಮತ್ತೇನು ಅನ್ನೋದೇ ಕತೆಯ ಹೂರಣ. ಸಖತ್ ಕಾಮಿಡಿ ಜೊತೆಗೆ ಥ್ರಿಲ್ ಅನ್ನಿಸೋ ಕತೆ‌ಯೇ ಭೂತಗಳ ಯೂನಿವರ್ಸಿಟಿ.
LanguageKannada
Release dateApr 2, 2021
ISBN6580237606739
Bhutagala University

Related to Bhutagala University

Related ebooks

Related categories

Reviews for Bhutagala University

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Bhutagala University - Vasudev Murthy

    https://www.pustaka.co.in

    ಭೂತಗಳ ಯೂನಿವರ್ಸಿಟಿ

    Bhutagala University

    Author:

    ವಾಸುದೇವ ಮೂರ್ತಿ

    Vasudeva Murthy

    For more books

    https://www.pustaka.co.in/home/author/vasudev-murthy

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪರಿವಿಡಿ

    ಅಧ್ಯಾಯ 1

    ಅಧ್ಯಾಯ 2

    ಅಧ್ಯಾಯ 3

    ಅಧ್ಯಾಯ 4

    ಅಧ್ಯಾಯ 5

    ಅಧ್ಯಾಯ 1

    ಲೋ ಶಾಮ ರಾವ್ ..ಬಾಗಿಲು ತೆಗೀರಿ ..

    ಎಲ್ಲಿಂದಲೋ ..ಯಾರೋ ಕೂಗುತ್ತಿದ್ದಾರೆ ಅಂದುಕೊಳ್ಳುತ್ತಾ ಎದ್ದೆ. ಕೊಂಚ ಸಾವರಿಸಿ ಕೊಳ್ಳುವಷ್ಟರಲ್ಲಿ  ಧಡಾಲನೆ ಮಂಚ ದಿಂದ ಬಿದ್ದೆ.ಆಶ್ಚರ್ಯ ವೇನೂ ಇಲ್ಲ ..ನಾನು ಮಲಗುವುದೇ ಮಂಚದ ಒಂದು ಮೂಲೆಯಲ್ಲಿ !ಉಳಿದ ಭಾಗವೆಲ್ಲಾ ನನ್ನ ಹೆಂಡತಿಯೇ ತುಂಬಿಕೊಂಡಿರುತ್ತಾಳೆ.

    ಅವಳೊಂದು ಥರ ಕುಂಭಕರ್ಣ ನ ರೀತಿ...

    ಆಕಾರ ... ಆಹಾರ  ಮತ್ತು ನಿದ್ರೆ... ಮೂರರಲ್ಲಿಯೂ!

    ಲೋ. ಶಾಮರಾವ್ ಬಾಗಿಲು ತೆಗಿರೀ ಬೇಗ ...

    ‘ಯಾವನು ಈ ರಾತ್ರಿಯಲ್ಲಿ ಬಂದವನು ...?’ ಎಂದುಕೊಳ್ಳುತ್ತ ಬಾಗಿಲು ತೆರೆದೆ.

    ಇಬ್ಬರು ಕರೀ ಸೂಟಿನಲ್ಲಿದ್ದ ವ್ಯಕ್ತಿಗಳು ....ಸುಮಾರು ಏಳು ಅಡಿ ಎತ್ತರ.. ದಪ್ಪ ಮುಖ ... ಅದಕ್ಕೆ ಅಷ್ಟೇ ದೊಡ್ಡ ಮೀಸೆ ..ತಲೆಯಮೇಲೆ ಒಂದು ಹ್ಯಾಟ್...

    ಯಾರ್ರೀ... ನೀವು ..ಇಷ್ಟು ಹೊತ್ತಿನಲ್ಲಿ ಏನು ನಿಮ್ಮ ಕೆಲಸ ?

    ನಮ್ಮ CEO ನಿಮ್ಮನ್ನ ಕರ್ಕೊಂಡು ಬಾ ಅಂತಾ ಹೇಳಿದ್ದಾರೆ ...ಬನ್ನಿ

    ಯಾರ್ರೀ ನಿಮ್ಮ CEO..ಇಷ್ಟು ಹೊತ್ತಿನಲ್ಲಿ .. ಅದೂ ಇನ್ನೂ  ಬೆಳಗ್ಗೆ ಆಗಿಲ್ಲ ..?

    ‘ಬೇರೆ ಕೆಲಸಕ್ಕೆ ಅಪ್ಲೈ ಮಾಡಿದ್ದೆ ...ಬಹುಶಃ ಆ ಬಾಸ್ ಬೆಳಗ್ಗೆ ಎಲ್ಲೋ ಫ್ಲೈಟ್ ಗೆ ಹೋಗಬೇಕೆನೋ ... ಅಷ್ಟರೊಳಗೆ ನನ್ನ ಕರೆಸಿ ನೋಡಿ ಓಕೆ ಮಾಡಲಿಕ್ಕೆ ಕರೆಯುತ್ತಿರಬಹುದು’ ಅನ್ನೋ ಆಸೆ ಮೂಡಿತು. ಆದರೂ...ಇಷ್ಟು ಹೊತ್ತಿನಲ್ಲಿ ಇಂಟರ್ವ್ಯೂ ನಾ ... ಬೆಳಗ್ಗೆ ಬರ್ತೀನಿ ಅಡ್ರೆಸ್ ಕೊಟ್ಟು ಹೋಗಿ ...ರೀ ..ಶಾಮ ರಾವ್ ... ನಮ್ಮ ಬಾಸ್ ಯಾವಾಗ ಕರಿತಾರೋ ಅವಾಗಲೇ ಬರಬೇಕು ...ಅಷ್ಟೇ ಎಂದ ಗಡುಸಾಗಿ ಬಂದಿರುವರಲ್ಲೊಬ್ಬ.

    ‘ಬೇರೆ ಕೆಲಸ ಬೇಕಿತ್ತು ...ಇದ್ದ ಕೆಲಸದಲ್ಲಿ ಸಂಬಳ ಕಡಿಮೆ ,ಕೆಲಸ ಜಾಸ್ತಿ ..ಹೆಂಡತಿಯ ತೂಕ ಮತ್ತು ಬೇಡಿಕೆ ಏರುತ್ತಲೇ ಇತ್ತು ...ಹೊಸ ಕೆಲಸಕ್ಕೆ ಹೋದರೆ ಸಂಬಳ ಜಾಸ್ತಿ ಆಗಬಹುದು .ಪಾಪ ಅವರಿಗೆ ಎಲ್ಲೋ ಹೋಗಬೇಕೆನೋ ...ನಾವೇ ಹೋಗಿ ನೋಡಿದರಾಯಿತು ... ನಾಳೆ ಮಾಡುವ ಕೆಲಸ ಇಂದೇ ಮಾಡು ...’

    ಸರಿ ಸ್ವಲ್ಪ ಇರಿ ..ಬಟ್ಟೆ ಬದಲಾಯಿಸಿ ಕೊಂಡು ಬರ್ತೀನಿ...

    ಹೇಗಿದ್ದಿರೋ ಹಾಗೇ ಬನ್ನಿ ಪರವಾಗಿಲ್ಲ ...

    ರೀ ನಿಮಗೇನು ತಲೆ ಕೆಟ್ಟಿದೆಯಾ ..ಇಂಟರ್ವ್ಯೂ ಗೆ ಯಾರಾದರೂ ಬನಿಯನ್ ಮತ್ತು ಶಾರ್ಟ್ಸ್ ಹಾಕಿಕೊಂಡು  ಬರ್ತಾರ ..?

    ಬನ್ನಿ ಸ್ವಾಮಿ ..ನೀವು ಹೇಗೆ ಯಾವ ಬಟ್ಟೆಯಲ್ಲಿ ಬಂದರೂ ಆಮೇಲೆ ಆಗುವುದು ಅಂಗೈ ಗಾತ್ರವೇ ಅಲ್ಲವಾ ...

    ಅದರಲ್ಲಿ ಏನು ಜೋಕ್ ಇತ್ತೋ ...ಇಬ್ಬರೂ ನಗತೊಡಗಿದರು .

    ಒಳ್ಳೆ ತಮಾಷೆ ನಿಮ್ಮದು ..ಇರಿ ಬಟ್ಟೆ ಬದಲಾಯಿಸಿ ಬರ್ತೀನಿ .. ಎಂದೆ.

    ನಾವು ಕರೆದಾಗ ನೀವು ಹೊರ ಬಂದಿರಿ ಅಂದರೆ ನೀವು ಮತ್ತೆ ಒಳಗಡೆ ಹೋಗುವಂತಿಲ್ಲ.. ಎಂದ ಅವರಲ್ಲೊಬ್ಬ.

    ಅದೇ ಸಮಯದಲ್ಲಿ  ಏನುಂದ್ರೆ... ಎನ್ನುವ ಭೀಕರ ಶಬ್ದ ಕೇಳಿಸಿತು.

    ಒಳಗಡೆ ಓಡಿದೆ.ಹೆಂಡತಿ ನನ್ನ ಎದೆಯಮೇಲೆ ...ಗುದ್ದುತ್ತಿದ್ದಳು...ಅಳುತ್ತಿದ್ದಳು..ಗುದ್ದುತ್ತಿದ್ದಳು..

    ‘ಅರ್ಥವಾಯಿತು .... ನಾನು ಬದುಕಿಲ್ಲ !’

    ‘ಸಧ್ಯ ಬದುಕಿಲ್ಲ... ! ಇಲ್ಲದಿದ್ದರೆ ಆ ಹೊಡೆತಕ್ಕೆ ಖಂಡಿತಾ ಸತ್ತು ಹೋಗುತ್ತಿದ್ದೆ...!’

    ‘ಅಂದರೆ ಬಾಗಿಗಲ್ಲಿ ಬಂದು ನಿಂತವರು ಯಮದೂತರು ! ಆದರೆ ಅವರಿಗೆ ಕರೀ  ಕೊಂಬಿನ ಟೋಪಿ ..ಕರೀ ಪಂಚೆ,ದಪ್ಪ ಮೀಸೆ ...ಕೈಯಲ್ಲೊಂದು ಹಗ್ಗ ಎಲ್ಲ ಇರಬೇಕಿತ್ತಲ್ಲವಾ...? ಅದ್ಯಾರೋ CEO ಅಂತಾರೆ ಅವರ್ಯಾರು?’

    ಬನ್ರೀ ಬೇಗ ..ನಿಮ್ಮನ್ನು ಡ್ರಾಪ್ ಮಾಡಿ ಮತ್ತೆ ಬರಬೇಕು ..ಬೆಳಗ್ಗೆ ಬೆಳಗ್ಗೆನೇ ಒಂದು ಆಕ್ಸಿಡೆಂಟ್ ಕೇಸ್ ..5 ಜನರ ಪಿಕಪ್ ಇದೆ. ಹೊರಗಿನಿಂದ ಒಬ್ಬ ಕೂಗಿದ.

    ಅವನಿಗೆ ಅವನದೇ ಚಿಂತೆ ! ನನಗೆ ... ಸಧ್ಯ ಈ ಕಾಟದಿಂದ ಮುಕ್ತನಾದೆ ಅನ್ನುವ ಖುಷಿ! ನನ್ನ ಮದುವೆ ಆಗಿರುವುದಕ್ಕಾಗಿ ನನ್ನ ಪಾಲಿಸಿ ಗಳ ನಾಮಿನೆಶನ್ ಅವಳ ಹೆಸರಿನಲ್ಲಿದೆ ..ಅದು ಎಲ್ಲಿದೆ ಅನ್ನುವುದಾದರೂ ಹೇಳುವುದು ನನ್ನ ಕರ್ತವ್ಯ ..ಅದೊಂದಕ್ಕೆ ನನಗೆ ಅವಕಾಶ ಮಾಡಿಕೊಡಿ ಅಂತಾ ಕೇಳಿಕೊಂಡೆ. ಅಷ್ಟರಲ್ಲಾಗಲೇ ಅವಳು ನನ್ನ ಬೆರಳಚ್ಚು ಮೂಡಿಸಿ ,ನನ್ನ ಮೊಬೈಲ್ ಆನ್ ಮಾಡಿ ಆಗಿತ್ತು.‘ಅಂದರೆ ನನ್ನ ವಾಟ್ಸಾಪ್..ಫೇಸ್ಬುಕ್ ಎಲ್ಲಾ ನೋಡ್ತಾಳೆ ...ಅಯಯ್ಯೋ ..ನಡೀರಿ ಬೇಗ ಹೋಗೋಣ ..." ಎಂದು ಕೂಗಿದೆ.

    ನೀವು ಸತ್ತು ಆಗಿದೆ ...ಇನ್ನು ಅವರು ಏನಾದರೂ ಮಾಡಿಕೊಳ್ಳಲಿ ಬನ್ನಿ .. ಎಂದು ನನ್ನ ಕೈ ಹಿಡಿದು ಎಳೆದೊಯ್ದರು.

    ಹೌದು ... ನಿಮ್ಮ CEO ಅಂದರಲ್ಲ... ಅವರು ಯಮಧರ್ಮ ತಾನೇ ?

    ಹೌದು ನಿಮಗೆ ಹೇಗೆ ತಿಳಿಯಿತು ?

    "ಎಷ್ಟು ಕಥೆಲಿ ಓದಿಲ್ಲ..ಎಷ್ಟು ಸಿನಿಮಾದಲ್ಲಿ ನೋಡಿಲ್ಲ ..ಅದೇ ಕೋಣನ ಮೇಲೆ

    Enjoying the preview?
    Page 1 of 1