Discover millions of ebooks, audiobooks, and so much more with a free trial

Only $11.99/month after trial. Cancel anytime.

Kempu Nakshatra
Kempu Nakshatra
Kempu Nakshatra
Ebook77 pages17 minutes

Kempu Nakshatra

Rating: 0 out of 5 stars

()

Read preview

About this ebook

ಈಗಾಗಲೇ ಒಂದು ಆಪಾದನೆಯ ಮೇಲೆ ಜೈಲು ಶಿಕ್ಷೆ ಅನುಭವಿಸಿತ್ತಿರುವ ವಿನಂತಿ ಜೈಲು ನಲ್ಲೇ ಕುಳಿತು ಇಡೀ ಪೋಲೀಸ್ ಸಿಸ್ಟಮ್ ನೆಲಸಮ ಮಾಡುವ ಪ್ರಯತ್ನ ಮಾಡುತ್ತಾಳೆ ,ಡಿಟೆಕ್ಟಿವ್ ಟೈಡ್ ತನ್ನ ಬುದ್ಧಿವಂತಿಕೆ ಯಿಂದ ಈ ಪ್ರಯತ್ನ ವಿಫಲಗೊಳಿಸುತ್ತಾನೆ
LanguageKannada
Release dateApr 2, 2021
ISBN6580238906257
Kempu Nakshatra

Related to Kempu Nakshatra

Related ebooks

Reviews for Kempu Nakshatra

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kempu Nakshatra - Pradeep Kumar

    http://www.pustaka.co.in

    ಕೆಂಪು ನಕ್ಷತ್ರ

    Kempu Nakshatra

    Author:

    ಪ್ರದೀಪ್ ಕುಮಾರ್

    Pradeep Kumar

    For more books

    http://www.pustaka.co.in/home/author/pradeep-kumar

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೆಂಪು ನಕ್ಷತ್ರ

    ಪಿ. ವಿ. ಪ್ರದೀಪ್ ಕುಮಾರ್

    ಟೈಡ್ ತನ್ನ ಕಛೇರಿಗೆ ಆಗಮಿಸಿದಾಗ ಅವನಿಗೆ ನಿರಾಳವಾಯ್ತು!

    ಇನ್ನೂ ಕೆಲವಾರು ದಿನಗಳು ತಾನು

    ನೆಮ್ಮದಿಯಾಗಿರಬಹುದೆಂದುಕೊಂಡ! ಅವನ ಸಹಾಯಕಿ ನಮ್ರತಾ

    ತನ್ನ ಸ್ಥಳದಲ್ಲಿ ಕುಳಿತು ಕೆಲಸವನ್ನು ಮಾಡುತ್ತಿದ್ದಾಳೆ! ತನ್ನ ಬಾಸ್‍ಗೆ ಕುಳಿತಲ್ಲಿಂದಲೇ ವಿಶ್ ಮಾಡಿದಳು. ಅವನು ಅದಕ್ಕೆ ಪ್ರತಿ ವಿಶ್ ಮಾಡಿದ. ಆ ಸಮಯಕ್ಕೆ ತನ್ನ ಇರುವಿಕೆಯನ್ನು ತೋರಿಸುವಂತೆ ಮೊಬೈಲ್ ರಿಂಗಾಯ್ತು.

    ನಿಮ್ಮ ನೆನಪಾಗಿ ವಿನಂತಿ ಕಾಲ್ ಮಾಡಿದ್ದಾಳೆ, ರಿಸೀವ್ ಮಾಡಿ ಎಂದು ಛೇಡಿಸಿದಳು ನಮ್ರತಾ. ಅವಳಿಗೂ ಗೊತ್ತು ವಿನಂತಿ ಕಾನೂನಿನ ಕದಂಬ ಬಾಹುವಿನಲ್ಲಿ ಬಂಧಿಯಾಗಿದ್ದಾಳೆ. ಅವಳಿಗೆ ನ್ಯಾಯಾಲಯ 7 ವರ್ಷಗಳ ಕಾಲ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ ಎಂದು. ಹಾಗಿದ್ದರೂ ಅವಳು ಕಾಲ್ ಮಾಡುತ್ತಾಳೆ? ತನ್ನನ್ನು ಬೇಕೆಂದೆ ರೇಗಿಸಲು ನಮ್ರತಾ ಹೇಳುತ್ತಿದ್ದಾಳೆ.

    ಹಲೋ ಎಂದ, ನಮ್ರತಾಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ.

    ಹಲೋ ಮಿ ಟೈಡ್... ಹೇಗಿದ್ದೀರಾ ಎಂದಳು ತನ್ನ ಪತಿಯನ್ನು ಕೇಳುವಂತೆ.

    ಯಾರು? ಎಂದ.

    ನಾನು... ಗೊತ್ತಾಗ್ಲಿಲ್ವಾ ವಿನಂತಿ.

    ಏನು? ಏನಂತೀಯಾ?

    ಹೌದು ಟೈಡ್. ನನ್ನನ್ನು ನೀನು ಕಾನೂನಿನ ಕಬಂಧ ಬಾಹುವಿಗೆ ಒಪ್ಪಿಸಿದೆ ಎಂದು ಸಂತೋಷ ಮತ್ತು ನೆಮ್ಮದಿಯಿಂದ ಇದ್ರೆ ನನ್ನ ಸೇಡು ತೀರುತ್ತೇನು? ಎಂದಿತು ಆ ಬದಿಯ ಮಧುರವಾದ ಧ್ವನಿ.

    ಆ ಧ್ವನಿ

    ವಿನಂತಿಯ ಸೌಂದರ್ಯದಷ್ಟೇ ಸುಂದರವಾಗಿ ಮಧುರವಾಗಿದೆ.

    "ನೋಡು ವಿನಂತಿ, ನನಗೆ ನಿನ್ನ ಮೇಲೆ ಏನೂ ದ್ವೇಷವಿಲ್ಲ.

    ನೀನು ಮಾಡಿದ ದೇಶದ್ರೋಹದ ಕೆಲಸಕ್ಕೆ ನಿನಗೆ ಶಿಕ್ಷೆಯಾಗಿದೆ ಹೊರತು ಮತ್ತೇನಲ್ಲ."

    "ಅದೆಲ್ಲ ನನಗೆ ಗೊತ್ತಿಲ್ಲ ಟೈಡ್. ನಾನು ನೆಮ್ಮದಿಯಾಗಿ

    ಸ್ವತಂತ್ರವಾಗಿದ್ದೆ. ಆ ಸ್ವತಂತ್ರವನ್ನು ನೀನು ಕಸಿದುಕೊಂಡೆ. ಅದರ

    ಫಲವನ್ನು ನೀನು ಅನುಭವಿಸಬೇಕು ತಾನೆ?" ಎಂದಿತು ಆ ಬದಿಯ ಧ್ವನಿ.

    ***

    ಅದು ವಿನಂತಿಯಾ? ಅವಳಿಗೆ ಫೋನ್ ಮಾಡಲು ಹೇಗೆ

    ಸಾಧ್ಯ? ಅವಳನ್ನು ಜೈಲಿಗೆ ಅಟ್ಟಿದವನು ತಾನೇ! ಹಾಗಿದ್ದರೂ ಹೇಗೆ

    ಫೋನ್ ಮಾಡಲು ಸಾಧ್ಯ?

    ಟೈಡ್ ವಿನಂತಿಯ ಹೆಸರನ್ನು ಹೇಳುತ್ತಿರುವಂತೆ ಅವನ ಕಡೆ ತಿರುಗಿ ನೋಡಿದಳು ನಮ್ರತ. ತಾನು

    Enjoying the preview?
    Page 1 of 1