Discover millions of ebooks, audiobooks, and so much more with a free trial

Only $11.99/month after trial. Cancel anytime.

Putta Puttige Putta Hanate
Putta Puttige Putta Hanate
Putta Puttige Putta Hanate
Ebook77 pages23 minutes

Putta Puttige Putta Hanate

Rating: 0 out of 5 stars

()

Read preview

About this ebook

ಮಕ್ಕಳಿಗಾಗಿ ಕಾದಂಬರಿಗಳಿರುವುದೇ ಕಡಿಮೆ. ಕತೆಗಳಿವೆಯಾದರೂ ಸಣ್ಣ ಕತೆಗಳು, ನೀತಿ ಕತೆಗಳೇ ಹೆಚ್ಚು. ಕಾದಂಬರಿ ಎಂದೊಡನೆ ಅದು ದೊಡ್ಡವರಿಗಷ್ಟೆ ಎಂಬ ಅಭಿಪ್ರಾಯವಿದೆ. ಇಲವೇ ತೀರಾ ಕಾಲ್ಪನಿಕವಾದ ಒಂದಂಶವೂ ಸತ್ಯವಲ್ಲದ ನೀಳ್ಗತೆಗಳು ಸಿಗುತ್ತವೆ. ಆದರೆ ಬದುಕಿನ ವಿವಿಧ ಆಯಾಮಗಳ, ಕಾಲ ದೇಶದ ವಾಸ್ತವ ಪ್ರಪಂಚದ ವಿಚಾರವನ್ನು ಮಗುವಿನ ಮನಸ್ಸಿಗೆ ಅರ್ಥವಾಗುವ ರೀತಿಯಲ್ಲಿ ಕುತೂಹಲಕಾರಿಯಾಗಿ ವಿವರಿಸುವ ಅಜ್ಜಿ-ಮೊಮ್ಮಗಳ ಈ ಕಥಾಲೋಕ ಎಲ್ಲಾ ಮಕ್ಕಳ ಮೆಚ್ಚಿನ ಪುಟ್ಟ ಕಾದಂಬರಿಯಾಗುವುದು ಎನ್ನುವುದಂತೂ ಸುಳ್ಳಲ್ಲ. ಮಕ್ಕಳಿಗೆ ಮನಸ್ಸು ಮಾಗುವ ಸಮಯದಲ್ಲಿ ಇಂತಹ ಕಥೆಗಳ ಮೂಲಕ ಕನ್ನಡ ಭಾಷೆಯ ಬಗ್ಗೆ ಪ್ರೀತಿಯನ್ನೂ, ನಮ್ಮ ನಾಡಿನ ಸಂಸ್ಕೃತಿ ಹಬ್ಬ ಆಚರಣೆಗಳನ್ನೂ ಅವುಗಳಲ್ಲಿ ಸೇರಿಹೋದ ಮೌಲ್ಯಗಳನ್ನೂ ತಿಳಿಸುವುದು ಮುಖ್ಯವಾಗುತ್ತದೆ.
LanguageKannada
Release dateApr 2, 2021
ISBN6580241306738
Putta Puttige Putta Hanate

Related to Putta Puttige Putta Hanate

Related ebooks

Reviews for Putta Puttige Putta Hanate

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Putta Puttige Putta Hanate - Vijayalakshmi S.P.

    https://www.pustaka.co.in

    ಪುಟ್ಟ ಪುಟ್ಟಿಗೆ ಪುಟ್ಟ ಹಣತೆ

    Putta Puttige Putta Hanate

    Author:

    ವಿಜಯಲಕ್ಷ್ಮಿ ಎಸ್. ಪಿ

    Vijayalakshmi S.P

    For more books

    https://www.pustaka.co.in/home/author/vijayalakshmi-sp

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಜಾನಕಿಗೆ ಸಂಭ್ರಮವೋ ಸಂಭ್ರಮ.ಎಂಟೇ ದಿನಗಳು.ಅಮೇರಿಕಾದ ಮೊಮ್ಮಗಳು ಗೌರಿ ಬಂದೇಬಿಡುತ್ತಾಳೆ.ನಾಲ್ಕು ವರುಷಗಳ ಹಿಂದೆ ಅಲ್ಲಿಗೆ ತಂದೆ-ತಾಯಿಯೊಂದಿಗೆ ಹೋದವಳು, ಮತ್ತೆ ನೋಡಲಾಗಿಯೇ ಇಲ್ಲ.ಈಗ ಅವಳಿಗೆ ಹತ್ತು ವರುಷ ತುಂಬಿದ್ದಾಗಿದೆ.ಎದೆಯೆತ್ತರ ಬೆಳೆದಿದ್ದಾಳೆ ಎಂದು ಮಗಳು ಹೇಳಿದಮೇಲೆ ಜಾನಕಿಗೆ ಅವಳನ್ನು ಕಾಣುವ ಕಾತರ ಹೆಚ್ಚಾಗಿದೆ.ಫೋನಿನಲ್ಲಿ ಮಾತನಾಡಿದ್ದುಂಟು.ಆದರೂ, ಕಾಣುವ ಸುಖವೇ ಬೇರೆ...! ಪಿಝ್ಝಾ , ಬರ್ಗರ್, ಕೋಲಾಗಳಲ್ಲಿ ಮುಳುಗೇಳುವ ಇಂದಿನ ಮಕ್ಕಳು ತನ್ನ ಕೈರುಚಿಯನ್ನು ಮೆಚ್ಚುವರೇ...? ಈ ಆತಂಕ ಜಾನಕಿಯನ್ನು ಕಾಡಿದರೂ, ಅವಳೇನೂ ಖಾಲಿಕೈಯ್ಯಲ್ಲಿ ಕೂರಲಿಲ್ಲ.ಕೋಡುಬಳೆ, ಚಕ್ಕುಲಿ, ನಿಪ್ಪಟ್ಟು, ಬೇಸನ್‍ಉಂಡೆ, ರವೆಉಂಡೆಗಳನ್ನು ಮಾಡಿಟ್ಟೇ ಕಾಯುತ್ತಿದ್ದಾಳೆ.ಅವಳಿಗೆ ಗೊತ್ತಿದೆ, ಈ ದೇಶದ ಆಹಾರದ ರುಚಿಗೆ ಸೋಲದವರಿಲ್ಲ ಎನ್ನುವ ಸತ್ಯ.

    ಆ ದಿನ ಬಂದೇಬಂದಿತು.

    ವಿಮಾನದಿಂದ ಇಳಿದ ಪುಟ್ಟಹಕ್ಕಿ ಹಾರಿದಂತೇ ನಡೆದುಬಂದಿತ್ತು.ಮಗಳು ಹೇಳಿದ ಮಾತು ನಿಜವೇ, ಮೊಮ್ಮಗಳು ಎದೆಯೆತ್ತರ ಬೆಳೆದಿದ್ದಾಳೆ.ಅಜ್ಜ, ಅಜ್ಜಿಗೆ 'ಹಾಯ್' ಎನ್ನುತ್ತ ಪಟಪಟನೆ ಇಂಗ್ಳೀಷ್‍ನಲ್ಲಿ ಹರಟುವ ಈ ಗೌರಿಯನ್ನು ನೋಡುತ್ತಲೇ, `ಅಯ್ಯೋ, ಕನ್ನಡ ಮರೆತೇಬಿಟ್ಟಳೇ..?' ಜಾನಕಿಗೆ ಯಾಕೋ ತುಸು ನಿರಾಶೆಯೆನ್ನಿಸಿತು.

    ಮಗಳ ಬಳಿ ಕೇಳಿಯೂ ಬಿಟ್ಟರು, ಏನೇ ನಿನ್ ಮಗಳು ಬರೀ ಇಂಗ್ಳೀಷ್‍ನಲ್ಲೇ ಮಾತಾಡ್ತಿದ್ದಾಳಲ್ಲ, ಕನ್ನಡಕ್ಕೆ `ಬಾಯ್' ಹೇಳಿಬಿಟ್ಟಳೋ ಹೇಗೆ..? ಮಗಳು ನಕ್ಕಳು.

    ಅಮ್ಮಾ, ಯೋಚಿಸ್ಬೇಡ ಸ್ವಲ್ಪ ಸಮಯ ಕೊಡು.ಅಮೇರಿಕೆಯ `ಜೆಟ್ಲ್ಯಾಗ್' ಕಳೀಲಿ, ಅಲ್ಲಿದು ಅಲ್ಲಿಯೇ ಉಳಿಯುತ್ತೆ, ಇಲ್ಲಿದು ತಾನಾಗೇ ಬರತ್ತೆ.

    ಜಾನಕಿಗೆ ನಂಬಿಕೆ ಬಂದಿತಾ..? ಗೊತ್ತಿಲ್ಲ, ಆದರೂ ಸುಮ್ಮನಾದಳು.

    ಏನೋ ಮೊಮ್ಮಗಳಂತೂ ಮನೆಗೆ ಬಂದಿದ್ದಾಳೆ, ಅವಳೀಗ ಏನೇನೆಲ್ಲಾ ಕಲಿತಿರಬಹುದು ಎನ್ನುವುದನ್ನು ತಿಳಿಯುವ ಕಾತರ.ಪುಟ್ಟಮಗು ಇಷ್ಟೆತ್ತರ ಬೆಳೆದು ನಿಂತಿದ್ದಾಳೆ, ಪಾಶ್ಚಾತ್ಯನೆಲದಲ್ಲಿ, ಆಧುನಿಕತೆಯಲ್ಲಿ ಅರಳುತ್ತಿರುವವಳಿಗೆ ಇಲ್ಲಿಯ ಪದ್ಧತಿ, ರೀತಿರಿವಾಜು, ಆಹಾರ ಯಾವುದೂ ಸರಿಯೆನ್ನಿಸದೆ ಕಿರಿಕಿರಿ ಮಾಡಿದರೆ ಎನ್ನುವ ಆತಂಕ; ಬರೀ ಇಂಗ್ಳೀಷ್ ಒದರುತ್ತ ಕನ್ನಡ ಮರೆತೇಬಿಟ್ಟರೆ ಎನ್ನುವ ಸಂಕಟ...

    ಈ ಯೋಚನೆಯಲ್ಲಿರುವಾಗಲೇ ಧುತ್ತೆಂದು ಹಿಂದಿನಿಂದ ಬಂದು ಕೊರಳಿಗೆ ಕೈಸುತ್ತಿ,

    'ಅಮ್ಮಮ್ಮಾ, ದಿಸ್ ಕೂಡ್ಬಳೆ ಈಸ್ ಆಸಮ್..ವಾವ್! ದಿಸ್ ಉಂಡೆ ಐ ಲವ್ ದಿಸ್..' ಅರಗಿಳಿ ಅಂಗ್ರೇಜಿಯಲ್ಲಿ ಪಟಪಟನೇ ನುಡಿಯಿತು.ಹಿಂದೆ ತಿರುಗಿದಳು.ಮೊಮ್ಮಗಳು ಗೌರಿಯ ಮುದ್ದು ಮುಖವನ್ನೇ ನೋಡಿದಳು.`ಅಬ್ಬಾ! ಬದುಕಿದೆ' ಎಂದುಕೊಂಡಳು ಜಾನಕಿ.ಅಂತೂ ಗೌರಿಗೆ ನನ್ನ ಅಡಿಗೆ ರುಚಿಯಂತೂ ಹಿಡಿಸಿತು.ಇನ್ನು ಉಳಿದವು ...?

    ಇರಲಿ, ಕಾದುನೋಡ್ತೀನಿ ಎಂದುಕೊಂಡವಳೇ,

    ಚಿನ್ನು, ಎಲ್ಲಾ ಸರಿ ಕಣಮ್ಮ, ಇದನ್ನೇ ಕನ್ನಡದಲ್ಲಿ ಹೇಳು ನೋಡೋಣ.

    ಆಂ, ಊಂ, .... ಗೌರಿ ತಡವರಿಸುವಾಗಲೇ ಮಗಳು ಬಾಯ್ಬಿಟ್ಟಳು.

    ಏನು ಆಂ, ಊಂ, ಅಂತಿದೀಯಾ..? ಮನೇಲಿ ಕನ್ನಡ ಮಾತಾಡ್ಬೇಕು ಅಂತ ಹೇಳಿದ್ದು ಮರ್ತ್ ಬಿಟ್ಯಾ...ಅಲ್ಲಿ ಕೂಡ ವಾರಕ್ಕೆರಡು ದಿನ ಕನ್ನಡ ಮಾತು ಕಡ್ಡಾಯ ಅಂತ ಮಾಡಿದ್ದೀನಿ ತಾನೇ..? ಯೆಸ್, ಈಗ ಇಲ್ಲಿರೋತನ್ಕ ನೋ ಇಂಗ್ಳೀಷ್, ಜಸ್ಟ್ ಕನ್ನಡ ಓಕೇ...?

    ಓಕೇ..ಅಗ್ರೀಡ್ ಮಾಮ್... ಹೇಳುತ್ತಲೇ,

    "ಅಮ್ಮಮ್ಮಾ, ನಾನೂ ಇಲ್ಲೀ ಕನಡಾನೇ ಮಾತು ಆಡ್ತೀನಿ.ಆದುರೆ ಒನ್ ಕಂಡೀಷನ್, ನೀವು ನಂಗೆ ದಿನಾಗೂ

    Enjoying the preview?
    Page 1 of 1