Discover millions of ebooks, audiobooks, and so much more with a free trial

Only $11.99/month after trial. Cancel anytime.

Sabeethu
Sabeethu
Sabeethu
Ebook283 pages1 hour

Sabeethu

Rating: 0 out of 5 stars

()

Read preview

About this ebook

ಯತಿರಾಜ್ ವೀರಾಂಬುಧಿ

ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ.
1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ.
ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.)
ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ)
ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್.
ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!
LanguageKannada
Release dateAug 12, 2019
ISBN6580207000972
Sabeethu

Read more from Yathiraj Veerambudhi

Related authors

Related to Sabeethu

Related ebooks

Reviews for Sabeethu

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Sabeethu - Yathiraj Veerambudhi

    http://www.pustaka.co.in

    ಸಾಬೀತು

    Sabeethu

    Author :

    ಯತಿರಾಜ್ ವೀರಾಂಬುಧಿ

    Yathiraj Veerambudhi

    For more books

    http://www.pustaka.co.in/home/author/yathiraj-veerambudhi

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಸಾಬೀತು

    (ಸಾಮಾಜಿಕ ಕಾದಂಬರಿ)

    ಯತಿರಾಜ್ ವೀರಾಂಬುಧಿ

    ರಾಜೀವ್

    ಪ್ರಕಾಶಕರು

    ನಂ.4, ಸೆಕ್ರೆಟರಿಯಟ್ ಕಾಲೋನಿ

    ವಿಜಯನಗರ, ಬೆಂಗಳೂರು-560040

    ಕಾಣಿಕೆ

    ತನ್ನ ಚಿನಕುರಳಿ ಮಾತುಗಳಿಂದ

    ನಮ್ಮೆಲ್ಲರ ಮನಸ್ಸು ತುಂಬ

    ಹೆತ್ತವರಿಗೆ ಪ್ರೀತಿ ತೋರುವ ವಿಷಯದಲ್ಲಿ

    ಹೆಣ್ಣು ಮಗುವಿಗೂ, ಗಂಡು ಮಗುವಿಗೂ

    ವ್ಯತ್ಯಾಸವಿಲ್ಲವೆಂದು ಸಾಬೀತು

    ಮಾಡುತ್ತಿರುವ ನನ್ನ ಮಗಳು

    ಚಿ.ಸುರಭಿಗೆ ಪ್ರೀತಿಯಿಂದ

    -ಅಪ್ಪ

    ಮುನ್ನುಡಿ

    ಸಾವಿನ ನೇಪತ್ಯ ಹಾಗೂ ಸಾಬೀತು ಉಳಿದಿರುವ ಕೆಲವೇ

    ಸಮಯ……

    ಪುಸ್ತಕವೊಂದನ್ನು ಓದಿದಾಗ ಅದು ಒಂದು ಒಳ್ಳೆಯ (ನಿರೀಕ್ಷಿತ ಯಾ ಅನಿರೀಕ್ಷಿತ) ಕೊನೆ ಮುಟ್ಟಿದಾಗ ಓದುಗರು ತೃಪ್ತಿ ಹೊಂದುವುದರಲ್ಲಿ ಸಂದೇಹವಿಲ್ಲ.

    ಸಾಬೀತು ಈ ಗು೦ಪಿಗೆ ಸೇರಿದ ಕಾದಂಬರಿ. ನನ್ನ ಯತ್ನ ಸಫಲವಾಗಿದೆಯೆಂದು ಓದುಗರು ಮಾತ್ರವೇ ಹೇಳಬಲ್ಲರು.

    ಈ ಕಾದಂಬರಿ ಉದಯವಾಣಿ ದಿನಪತ್ರಿಕೆ ಭಾನುವಾರದ ಪುರವಣಿಯಲ್ಲಿ 40 ವಾರಗಳ ಕಾಲ ಧಾರಾವಾಹಿಯಾಗಿ ಪ್ರಕಟವಾಗಿತ್ತು ಪತ್ರಿಕಾ ಸಂಪಾದಕವರ್ಗಕ್ಕೆ ನನ್ನ ಧನ್ಯವಾದಗಳು.

    ಈ ಕಾದಂಬರಿಯನ್ನು ಪುಸ್ತಕರೂಪದಲ್ಲಿ ಹೊರತರುತ್ತಿರುವ ಶ್ರೀ ರಾಜೀವ್, ಪ್ರಕಾಶಕರು ಹಾಗೂ ಪ್ರಕಟಣೆಗೆ ಸಹಕಾರ ನೀಡಿದ ಪುಟ್ಟಸ್ವಾಮಯ್ಯನವರಿಗೆ, ಸುಂದರ ಮುಖಚಿತ್ರ ಬರೆದ ಶ್ರೀ ರಾ. ಗಂಗಾಧರ್ ಅವರಿಗೆ, ಅಂದವಾಗಿ ಮುದ್ರಣ ಮಾಡಿದ ಮುದ್ರಣ ಬಳಗದವರಿಗೆ ನನ್ನ ನಮಸ್ಕಾರಗಳು.

    ಸಂಖ್ಯೆ 89, ‘ಚಿರಸ್ಮಿತ’ ವೇರ್ ಹೌಸ್ ಹಿಂಭಾಗ,

    ಪಟ್ಟಣಗೆರೆ, ರಾಜರಾಜೇಶ್ವರಿನಗರ,

    ಬೆಂಗಳೂರು – 560 098

    ಸಾಬೀತು

    ತನ್ನ ಗೆಳೆತಿಯೊಂದಿಗೆ ಮಜವಾಗಿ ಕಾಲ ಕಳೆಯುವ ಬದಲು ರಾತ್ರಿಯ ಈ ಒಂಬತ್ತೂವರೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಬೇಸರದಿಂದ ಮೈಮರೆತಿದ್ದ ಹೋಟೆಲ್ ಪಾರಿಜಾತದ ರಿಸೆಪ್ಷನಿಸ್ಟ್ ಕಂ ಟೆಲಿಫೋನ್ ಆಪರೇಟರ್ ಇಂದಿರೇಶ್ ತನ್ನೆದುರಿನ ಟೆಲಿಫೋನ್ ಬೊರ್ಡ್ ನಲ್ಲಿ ಹತ್ತಿಕೊಂಡಾಗ ಎಚ್ಚರಗೊಂಡ.

    ‘ಯಾವ ರೂಮಿನಿ೦ದ ಬ೦ದಿದೆ?’ ಎಂದು ಕುತೂಹಲಿಯಾಗಿ ನೋಡಿದ

    ರೂಮ್ 260.

    ಓ! ಈ ಮುದುಕಪ್ಪ ತ್ರಯಂಬಕನಿಗೆ ಬೇರೆ ಕೆಲಸವಿಲ್ಲ. ಈಗ ತಾನೇ ರೂಮ್ 314ರ ಒಂಟಿ ಮುದುಕಿ ಲೀಲಾದೇವಿಯೊಂದಿಗೆ ಪ್ರೀತಿಯ ಮಾತಾಡಿದ್ದನ್ನು ಕದ್ದು ಕೇಳಿದ ಇಂದಿರೇಶ. ಇದ್ಯಾಕೆ ಆಗಲೇ ರೂಮಿಗೆ ವಾಪಸ್ಸು ಬಂದುಬಿಟ್ಟಿದ್ದಾನೆ? ಫೋನಿನ ಸಂಭಾಷಣೆಯ ಪ್ರಕಾರ ಅವರಿಬ್ಬರೂ ಅಲ್ಲಿ ಗುಂಡು ಹಾಕುತ್ತಾ ಕೂತಿರಬೇಕಲ್ಲ…..

    ತನ್ನ ಆಲೋಚನೆಯನ್ನು ಬದಿಒತ್ತಿ, ಯಾವ ನಂಬರ್ ಬೇಕು? ಎಂದು ಕೇಳಿದ.

    ರೂಮ್ 260ರಿಂದ ಒಬ್ಬ ಹೆಂಗಸಿನ ಧ್ವನಿ ಏದುಸಿರು ಬಿಡುತ್ತಾ ಕೂಗಿ ಹೇಳಿತ್ತು. ಟೂಸಿಕ್ಸ್ ಟೀನ್ನಲ್ಲಿ ಹೆಣ ಇದೆ. ಅವನನ್ನು ಯಾರೋ ಕೊಲೆ ಮಾಡಿಬಿಟ್ಟಿದ್ದಾರೆ. ಬೇಗ ಬನ್ನಿ! ಎಂದು ಚೀರಿದವಳೇ ಸಂಪರ್ಕವನ್ನು ಕಡಿದಿದ್ದಳು.

    ಇಂದಿರೇಶನ ಕನಸುಗಳೆಲ್ಲಾ ಚೆದುರಿಹೋಗಿದ್ದವು. ಬೆನ್ನು ನೆಟ್ಟಗಾಗಿತ್ತು ಮತ್ತೊಮ್ಮೆ ಬೋರ್ಡಿನತ್ತ ನೋಡಿದ.

    ‘ಅರೆ! ಇದು ತ್ರಯಂಬಕ ಅವರ ರೂಮು’. ಅಂದರೆ ಇನ್ನೂರ ಅರವತ್ತು. ಆದರೆ ಆ ಹೆಂಗಸಿನ ಸ್ವರ ಟೂಸಿಕ್ಸ್ ಟೀನ್ನಲ್ಲಿ…. ಅಂದರೆ ಇನ್ನೂರ ಹದಿನಾರು ಅಂತ ಹೇಳಿದ ಹಾಗಿತ್ತು ಉಹೂ೦, ಅದು ಸಾಧ್ಯವಿಲ್ಲ. ಇದು ಇನ್ನೂರ ಅರವತ್ತೇ. ಏನೋ ತಪ್ಪಾಗಿ ಕೇಳಿಸಿಕೊಂಡಿದ್ದೇನೆ ತಾನು.

    ಕೊಲೆ?

    ಮತ್ತೊಮ್ಮೆಇನ್ನೂರ ಅರವತ್ತಕ್ಕೆ ಕನೆಕ್ಟ್ ಮಾಡಲೆತ್ನಿಸಿದ. ಯಾವ ಉತ್ತರವೂ ಬರಲಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿದ. ನಂತರ ಹತಾಶೆಯಿಂದ ಮತ್ತೊಂದು ನಂಬರನ್ನು ಒತ್ತಿದ.

    ಛೀಫ್ ಸೆಕ್ಯೂರಿಟಿ ಆಫೀಸರ್ ಡಿಸಿಲ್ವಾ ಎಂದಿತ್ತು ನಿದ್ರೆಯ ಮತ್ತಿನಿಂದ ತುಂಬಿದ ದನಿಯೊಂದು.  ಸಾರ್! ಕೊಲೆ…. ಟೂ ಸಿಕ್ಸಟೀನ್… ಟೂ ಸಿಕ್ಸಟೀ ಎಂದು ಬಡಬಡಿಸಿದ ಇಂದಿರೇಶ್.

    ಡಿಸಿಲ್ವಾನ ನಿದ್ರೆ ಹಾರಿಹೋಗಿತ್ತು. ಹೋಟೆಲ್ ಪಾರಿಜಾತದಲ್ಲಿ ತಾನು ಸೇರಿದಾಗಿನಿಂದ ಎಂದೂ ನಡೆಯದಿದ್ದ ಘಟನೆಯೆಂದರೆ ಕೊಲೆ!

    ನುಗ್ಗಿ ಬರುತ್ತಿದ್ದ ಆಕಳಿಕೆಯನ್ನು ತಡೆದುಕೊಂಡು ಇಂದಿರೇಶ್.. ಎಚ್ಚರವಾಗಿದ್ದೀಯಾ ಇಲ್ಲಾ ನಿದ್ದೇಲಿ ಬಡಬಡಿಸ್ತಿದ್ದೀಯಾ? ಎಂದು ಗದರಿದ ಡಿಸಿಲ್ವಾ.

    ಸಾರ್…. ದೈನ್ಯತೆಯಿಂದ ಹೇಳಿದ ಇಂದಿರೇಶ್, ಯಾರೋ ಹೆಂಗಸು ಇನ್ನೂರರವತ್ತರಿಂದ ಫೋನ್ ಮಾಡಿ ಒಬ್ಬ ಮನುಷ್ಯನ ಕೊಲೆಯಾಗಿದೆ ಅಂತಂದ್ಲು

    ಯಾರು.. ತ್ರಯಂಬಕ ತಾನೇ ಆ ರೂಮಲ್ಲಿರೋದು? ಎಂದು ಗೊಣಗಿದ ಡಿಸಿಲ್ವಾ, ಹೌದು ಸಾರ್, ಅಂದ್ರೆ ಆ ರೂಮಿಂದ ಫೋನ್ ಮಾಡಿದವ್ಳು ಹೆಂಗ್ಸು ಅಂತ ಹೇಳಿದ್ನಲ್ಲಾ? ಅಲ್ಲೊಂದು ಹೆಣ ಇದ್ಯಂತೆ

    ತ್ರಯಂಬಕಾನಾ? ಗೊತ್ತಿಲ್ಲ ಸಾರ್. ದಯವಿಟ್ಟು ಬೇಗ ಹೋಗಿ ನೋಡಿ. ಪೊಲೀಸ್ ಗೆ ಫೋನ್ ಮಾಡ್ಲಾ?

    ಕೊಲೆ ಅಂತಂದ್ಯಾ? ಈಗ ಅವನ ಧ್ವನಿಯಲ್ಲಿ ಅಧಿಕಾರವಿತ್ತು. ಯಾರಿಗೂ ಫೋನ್ ಮಾಡಬೇಕಿಲ್ಲ ಕೂತಿದ್ದವನು ದಢಕ್ಕನೆ ಮೇಲೆದ್ದು ತನ್ನ ರೂಮಿನಿಂದ ಹೊರಬಂದ. ನೇರವಾಗಿ ರಿಸೆಪ್ಷನ್ ಗೆ ನಡೆದ. ಹೋಟೆಲ್ ಗೆ ಪೊಲೀಸರು ಬಂದರೆ ಹೋಟೆಲ್ ನ ಮರ್ಯಾದೆಯ ಗತಿಯೇನು ನಾಳೆಯಿಂದ ಗಿರಾಕಿಗಳು ಯಾರು ಬರ್ತಾರೆ?

    ಆದರೆ ಕೊಲೆಯೇನಾದರೂ ನಡೆದುಹೋಗಿದ್ದರೆ ಪೊಲೀಸರನ್ನು ಕರೆಯಿಸದೇ ವಿಧಿಯಿಲ್ಲ. ಅವನಿಗೆ ಹೆಚ್ಚು ಕಡಿಮೆ ಈ ಊರಿನ ಎಲ್ಲಾ ಪೊಲೀಸರೊಂದಿಗೂ ಪರಿಚಯವಿರೋದರಿಂದ ಅತಿ ಕಡಿಮೆ ಪಬ್ಲಿಸಿಟಿಯೊಂದಿಗೆ ಕೆಲಸ ಮುಗಿಸಬಹುದು.

    ರಿಸಪ್ಷನ್ನಲ್ಲಿ ರೂಮ್ ಬಾಯ್, ಲಿಫ್ಟ್ ಬಾಯ್ ರಿಸಪ್ಷನಿಸ್ಟ್ ಇಂದಿರೇಶನೊಂದಿಗೆ ಕುತೂಹಲ ಗಾಬರಿಗಳಿಂದ ಮಾತಾಡುತ್ತಿದ್ದರು.

    ಅಲ್ಲಿಗೆ ವೇಗವಾಗಿ ಬಂದ ಡಿಸಿಲ್ವಾನ ಆಜ್ಞೆಗಾಗಿ ಕಾಯತೊಡಗಿದರು. ಅವನು ನೇರವಾಗಿ ಇಂದಿರೇಶನ ಹತ್ತಿರಕ್ಕೆ ನಡೆದು, ಸರಿಯಾಗಿ ವಿವರ ಹೇಳು ಎಂದ.

    ಆಗ್ಲೇ ಹೇಳಿದ್ನಲಾ, ಇನ್ನೂರರವತ್ತರಿಂದ ಒಬ್ಬ ಹೆಂಗಸು ಫೋನ್ ಮಾಡಿ ಅಲ್ಲೊಬ್ಬ ಮನುಷ್ಯನ ಹೆಣ ಬಿದ್ದಿದೆ ಅಂತಂದ್ಲು. ನಾನು ಏನಾದ್ರು ಕೇಳೋಕ್ಕೆ ಮುಂಚೆನೇ ಫೋನಿಟ್ಟುಬಿಟ್ಟಳು. ನಾನು ಮತ್ತೆ ಫೋನ್ ಮಾಡಿದ್ರೆ ಅವಳು ಫೋನೆತ್ತಲಿಲ್ಲ

    ಹಾಗಾದ್ರೆ ಹೋಗೋಣ ಬಾ ಶಿವಾನಂದ್ ಎಂದು ಹೋಟೆಲ್ ಮ್ಯಾನೇಜರ್ ನನ್ನು ಕರೆದುಕೊಂಡು ಹೋಗುತ್ತಾ, ಅಲ್ಲಿಯೇ ಇದ್ದ ಕ್ಲರ್ಕ್ ಗೆ ಜಯಣ್ಣ, ನೀನಿಲ್ಲಿ ಗಮನ ಇಟ್ಟಿರು. ಯಾರನ್ನೂ ಮೇಲಕ್ಕೆ ಬಿಡಬೇಡ ಎಂದು ಹೇಳಿದ.

    ಲಿಫ್ಟ್ ಬಾಯ್ ಓಡಿಹೋಗಿ ತನ್ನ ಜಾಗದಲ್ಲಿ ನಿಂತಿದ್ದ ಲಿಫ್ಟ್ ಹತ್ತುತ್ತಾ ಯಾರನ್ನಾದ್ರೂ ಕೆಳಕ್ಕೆ ಕರಕೊಂಡು ಬಂದ್ಯಾ? ಎಂದು ಹೇಳಿದ.

    ಸ್ವಲ್ಪ ಹೊತ್ತಿಗೆ ಮುಂಚೆ ಐದನೇ ನಂಬರಿಂದ ಒಬ್ಳು ಹೆಂಗ್ಸು ಬಂದ್ಲು ಸಾರ್ ಎಂದ ಅವನು. ಅವರಿಬ್ಬರೂ ಇಳಿಯುವಾಗ ನಾನೇನು ಮಾಡ್ಲಿ ಸಾರ್? ಎಂದು ಕೇಳಿದ.

    ಸ್ವಲ್ಪ ಹೊತ್ತು ಯಾರನ್ನು ಲಿಫ್ಟ ನಲ್ಲಿ ಓಡಾಡೋಕ್ಕೆ ಬಿಡಬೇಡ ಎಂದು ಆಣತಿ ಇತ್ತು ಮ್ಯಾನೇಜರ್ ಶಿವಾನಂದ್ನೊಂದಿಗೆ ತೆರೆದ ಬಾಗಿಲಿನತ್ತ ನಡೆದೆ. ಬೆಳಕು ರೂಮಿನಿಂದ ಹೊರಗೆ ರಾಚುತ್ತಿತ್ತು.

    ತೆರೆದ ಬಾಗಿಲಿನ ಮೇಲೆ 260 ಎಂದು ಬರೆಯಲ್ಪಟ್ಟಿತ್ತು ರೂಮಿನೊಳಗೆ ದೀಪಗಳು ಉರಿಯುತ್ತಿದ್ದವು, ಹಾಸಿಗೆಯ ಮೇಲೆ ದುಪ್ಪಟಿಗಳು ನೀಟಾಗಿ ಇಡಲ್ಪಟ್ಟಿದ್ದವು. ಅಲ್ಲಿ ಯಾವ ಹೆಂಗಸಾಗಲೀ, ಗಂಡಿಸಿನ ಹೆಣವಾಗಲೀ ಇರಲಿಲ್ಲ. ಏಕಾಂಗಿ ಗಂಡಸೊಬ್ಬನ ಕೊಟಡಿಯೆಂದು ಅಲ್ಲಿದ್ದ ಷೂಗಳು, ಹ್ಯಾಂಗರ್ ನಲ್ಲಿದ್ದ ಷರ್ಟು, ಪ್ಯಾಂಟುಗಳು ಹೇಳುತ್ತಿದ್ದವು.

    ಸುಮಾರು ನಲವತ್ತೈದು ಸೆಕೆಂಡುಗಳ ಕಾಲ ರೂಮನ್ನು ಪರಿಶೀಲಿಸಿದ ಡಿಸಿಲ್ವಾ ಎಲ್ಲವೂ ಖಾಲಿ ಖಾಲಿ. ಬೇರೆಲ್ಲೂ ಏನೂ ಮುಚ್ಚಿಟ್ಟುಕೊಳ್ಳಲಾಗಲೀ, ಮುಚ್ಚಿಡಲಾಗಲೀ ಜಾಗವಿರಲಿಲ್ಲ. ಪ್ರತಿಯೊಂದು ಮೂಲೆಯಲ್ಲಿ ನಿರುಕಿಸಿದ ಡಿಸಿಲ್ವಾ.

    ನಂತರ ಮಂಚದ ಕೆಳಗೆ ಬಾಗಿ ನೋಡಿದ ಡಿಸಿಲ್ವಾನ ಮುಖದ ಮೇಲೆ ವಿಸ್ಮಯಭರಿತ ಚಿಹ್ನೆಯಿತ್ತು. ಉಹೂಂ, ಯಾವ ಮನುಷ್ಯನ ಹೆಣವೂ ಅಲ್ಲಿರಲಿಲ್ಲ!

    ಮೂಲೆಯಲ್ಲಿದ್ದ ಫೋನ್ ಕಣ್ಣಿಗೆ ಬಿದ್ದೊಡನೆ ಅದನ್ನೆತ್ತಿ ಇಂದಿರೇಶ್, ನಿನಗೇನಾದರೂ ತಲೆ ಕೆಟ್ಟಿದೆಯಾ? ರಾತ್ರಿ ಒಂಭತ್ತೂವರೆ ದಾಟಿರೋದ್ರಿಂದ ನಿದ್ರೆ ಹತ್ತುತ್ತಾ ಇದೆಯಾ? ಈ ರೂಮಲ್ಲಿ ಸತ್ತಿರುವವರು, ಬದುಕಿರುವವರು ಯಾರೂ ಇಲ್ಲ!

    ಸಾರ್…! ಇಂದಿರೇಶನ ಆತಂಕಭರಿತ ಧ್ವನಿ ದೂರಾವಾಣಿ ವೈರುಗಳ ಮೇಲಿಂದ ಬಂದಿತ್ತು, ಆ ಹೆಂಗಸು ಹೇಳಿದ್ದನ್ನ ನಾನು ಹೇಳಿದೆ ಅಷ್ಟೇ. ಆ ರೂಮಲ್ಲಿ ಒಬ್ಬನ ಹೆಣ ಇದೆ. ಕೊಲೆಯಾಗಿದ್ದಾನೆ ಅಂತಂದ್ಲು, ಅವಳು ಹಾಗೆ ಹೇಳಿದ್ರೆ ನಾನೇನು ಮಾಡೋಕ್ಕಾಗುತ್ತೆ ಮಿಸ್ಟರ್ ಡಿಸಿಲ್ವಾ….

    ಡಿಸಿಲ್ವಾ ಅವನ ಮಾತನ್ನು ನಡುವೆಯೇ ಕತ್ತಿರಸಿ ಸಾಕು ಸಾಕು. ಈ ವಿಷ್ಯ ಹೇಳು. ತ್ರಯಂಬಕ ಇರಬೇಕಲ್ವಾ ಈ ರೂಮಲ್ಲಿ? ಎಂದು ಪ್ರಶ್ನಿಸಿದ.

    ಅವರು ... ತಡವರಿಸಿದ್ಧ ಇಂದಿರೇಶ ಆಗಲೇ ಇದ್ದ್ರು. ಆದ್ರೆ ಮುನ್ನೂರ ಹದಿನಾಲ್ಕು ಅವರನ್ನು ಅರ್ಧಗಂಟೆ ಹಿಂದೆ ಕರೆದ್ರು

    ಡಿಸಿಲ್ವಾ ನಿಟ್ಟುಸಿರಿಟ್ಟು, ಮುನ್ನೂರ ಹದಿನಾಲ್ಕು ಯಾರು? ಎಂದ

    ಮಿಸ್ ಲೀಲಾದೇವಿ ಯಾರು ಆ ತೆಳ್ಳಗೆ, ಬೆಳ್ಳಗೆ, ತಲೆಗೆ ಬಣ್ಣ ಹಚ್ಚಿರೋ ಹೆಂಗ್ಸು? ಆಕೆಯ ರೂಮಿಗೆ ಹೋದ್ನಾ ಈ ಮುದುಕ? ಆ ವಿಷ್ಯ ನನಗೇನು ಗೊತ್ತು? ಫೋನ್ ಕನೆಕ್ಷನ್ ಕೇಳಿದ್ರು ತ್ರಯಂಬಕ ಕೊಟ್ಟೆ. ಆಮೇಲೆ ಅವರ ಮಾತನ್ನು ಕದ್ದು ಕೇಳ್ದೆ. ಹೌದು ತಾನೇ? ಡಿಸಿಲ್ವಾ ಕಣ್ತೆರೆಯದೇ ಮಾತಾಡುತ್ತಿದ್ದ.

    ನನ್ನ ಕಿವಿಗೆ ಅವ್ರ ಮಾತುಗಳು ಕೇಳಿಸಿದ್ರೆ ನನ್ನ ತಪ್ಪಾ? ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳಲಾರಂಭಿಸಿದ ಇಂದಿರೇಶ್.

    ನೀನೀ ಕಳ್ಳಬುದ್ಧಿ ಯಾವತ್ತು ಬಿಡ್ತಿಯೋ? ಎಂದು ಗದರಿ ಫೋನಿಟ್ಟು ಮ್ಯಾನೇಜರ್ ಶಿವಾನಂದನೊಂದಿಗೆ ಮತ್ತೆ ಮುನ್ನೂರಹದಿನಾಲ್ಕರತ್ತ ನಡೆದ.

    ಸುಮಾರು ಇಪ್ಪತ್ತು ಹೆಜ್ಜೆ ಹಾಕಿದ್ದರು ಮೊಗಸಾಲೆಯಲ್ಲಿ. ನಂತರ ಬಲಕ್ಕೆ ತಿರುಗಿ ಮೂರನೆಯ ಮಹಡಿಯನ್ನು ಹತ್ತಿದರು. ಬಾಗಿಲಿನಡಿಯಿಂದ ಬೆಳಕು ಕಾಣಿಸುತ್ತಿತ್ತು.

    ಸ್ವಲ್ಪ ಜೋರಾಗಿಯೇ ಬಾಗಿಲನ್ನು ಬಡಿದ ಡಿಸಿಲ್ವಾ. ಯಾರೂ ಬಾಗಿಲು ತೆರೆಯಲಿಲ್ಲ. ಹತ್ತು ಸೆಕೆಂಡುಗಳ ನಂತರ ಮತ್ತೆ ಬಡಿದ. ಚಿಲಕವನ್ನು ಜೋರಾಗಿ ದಬದಬನೆ ಅಲ್ಲಾಡಿಸಿದ. ಈಗ ಬೆದರಿದ ಹೆಣ್ಣಿನ ಧ್ವನಿಯೊಂದು ಬೀಗದಕೈ ರಂಧ್ರದ ಮೂಲಕ ಕೇಳಿಸಿತು. ಯಾರು?

    ಸೆಕ್ಯೂರಿಟಿ ಆಫೀಸರ್. ಸ್ವಲ್ಪ ಬಾಗಿಲು ತೆಗೀರಿ, ಮಿಸ್ ಲೀಲಾದೇವಿ

    ನಾನು ಬಾಗಿಲು ತೆಗೆಯೋಲ್ಲ. ಎಷ್ಟು ಧೈರ್ಯ ನಿಮಗೆ? ಈ ಸಲ ಧ್ವನಿ ಇನ್ನಷ್ಟು ಜೋರಾಗಿ ಕೇಳಿಸಿತ್ತು. ಇಲ್ಲಿಂದ ಹೊರಟುಹೋಗಿ.

    ಬಾಗಿಲನ್ನು ಮತ್ತೊಮ್ಮೆ ಜೋರಾಗಿ ಬಡಿದು, ಬೀಗದಕೈ ರಂದ್ರದೊಳಗೆ ಬಾಯಿ ಹಾಕಿ ನೋಡಿ ಲೀಲಾದೇವಿ, ನೀವೀಗ ಬಾಗಿಲು ತೆಗೀದಿದ್ರೆ ನಾನು ಮಾಡ್ತಿರೋ ಗಲಾಟೆಗೆ ಇಲ್ಲಿ ಜನ ಬಂದು ತುಂಬ್ಕೋತಾರೆ. ಆಮೇಲೆ ನಿಮಗೇ ಮುಜುಗರವಾಗುತ್ತೆ, ಬೇಗ ತೆಗೀರಿ. ಇಲ್ಲದಿದ್ರೆ ನನ್ನ ಹತ್ರ ಇರೋ ಕೀ ಇಂದ ಬಾಗಿಲು ತೆಕ್ಕೊಂಡು ಬರಬೇಕಾಗುತ್ತದೆ ಎಂದ ಗಟ್ಟಿಯಾಗಿಯೇ.

    ಸುಮಾರು ಅರ್ಧನಿಮಿಷಗಳ ಕಾಲ ತನ್ನ ಪಾದವನ್ನು ನೆಲಕ್ಕೆ ತಾಡಿಸುತ್ತಾ ನಿಂತುಕೊಂಡ ಡಿಸಿಲ್ವಾ, ಆಗ ತೆರೆದುಕೊಂಡಿತ್ತು ದ್ವಾರ.

    ಬಾಗಿಲನ್ನು ತಳ್ಳಿ ಒಳಕ್ಕೆ ಹೋದ ಡಿಸಿಲ್ವಾನಿಗೆ ಬೆಡ್ ರೂಮ್ ನೀಟಾಗಿ ಕಾಣಸಿರಲಿಲ್ಲ. ಲೀಲಾದೇವಿ ಅವನ ಹಿಂದೆಯೇ ಬಂದಿದ್ದಳು. ಅವಳ ಮುಖ ಸಿಟ್ಟಿನಿಂದ ಧುಮುಗುಟ್ಟುತ್ತಿತ್ತು.

    ಏನಿದೆಲ್ಲಾ? ಯಾಕೆ ಹೀಗೆ ನನ್ನ ರೂಮಿಗೆ ನುಗ್ಗಿದ್ದೀರಿ? ಸ್ವರ ಕಂಪಿಸಿತ್ತು. ಲೀಲಾದೇವಿ ಮಾತಾಡಿದಾಗ.

    ನಾನು ಮಿಸ್ಟರ್ ತ್ರಯಂಬಕರನ್ನು ಹುಡುಕುತ್ತಿದ್ದೀನಿ ಎನ್ನುತ್ತಾ ಬಾತ್ ರೂಮಿನತ್ತ ನೋಡಿದ ಡಿಸಿಲ್ವಾ. ಎರಡು ದೊಡ್ಡ ಕಿಟಕಿಗಳಿದ್ದ ಈ ರೂಮಿಗೆ ತಂಗಾಳಿ ಒಳಗೆ ನುಗ್ಗುತ್ತಿತ್ತು. ಹೋಟೆಲ್ಲಿನ ಹಿಂದೆಯೇ ಇದ್ದ ದೊಡ್ಡಕೆರೆಯೇ ಅದಕ್ಕೆ ಕಾರಣ.

    ಬೇರೆ ಯಾರೂ ಇದ್ದಂತೆ ಕಾಣಿಸಲಿಲ್ಲ ಡಿಸಿಲ್ವಾನಿಗೆ. ನಿರಾಸೆಯಿಂದ ಹಿಂದಿರುಗಲೆಣಿಸುತ್ತಿದ್ದವನಿಗೆ ಟೀಪಾಯ್ ಮೇಲಿದ್ದ ದೊಡ್ಡ ಜಗ್ ಹಾಗೂ ಎರಡು ಗಾಜಿನ ಲೋಟಗಳು ಬೇರಾರೋ ಈ ರೂಮಲ್ಲಿದ್ದಾರೆಂಬ ಸುಳಿವನ್ನು ನೀಡಿತ್ತು. ಮತ್ತೆ ಲೀಲಾದೇವಿಯನ್ನು ದಿಟ್ಟಿಸಿ ನೋಡಿದ. ಆಕೆ ಅವನನ್ನು ದುರುಗುಟ್ಟಿ ನೋಡಿ ಬೇರೆಡೆಗೆ ತಲೆ ತಿರುಗಿಸಿಕೊಂಡಳು.

    ತ್ರಯಂಬಕ ಅವರನ್ನು ನೋಡಲು ಬಂದೆ ಎಂದು ತನ್ನ ಮಾತನ್ನು ಪುನರುಚ್ಚಿಸಿದ ಡಿಸಿಲ್ವಾ.

    ಯಾಕೆ ಹೀಗೆ ನನ್ನ ಪ್ರಾಣ ತೆಗೀತಿದ್ದೀರಿ ಮಿಸ್ಟರ್? ನಾನೊಬ್ಳೇ ಇಲ್ಲಿರೋದು ನಿಮಗೆ ಕಾಣಿಸ್ತಿಲ್ವಾ? ಎಂದಳು ಲೀಲಾದೇವಿ ಮತ್ತೆ ಅವನತ್ತ ತಿರುಗಿ, ಆದರೆ ಆ ಮಾತಿನಲ್ಲಿ ಬಲವಿರಲಿಲ್ಲವೆಂಬುದು ಡಿಸಿಲ್ವಾನ ಗಮನಕ್ಕೆ ಬಂದಿತ್ತು.

    ನೋಡಿ ಮಿಸ್. ಲೀಲಾದೇವಿಯವರೇ ಅವಳತ್ತ ಒಮ್ಮೆತನ್ನ ತೋರುಬೆರಳನ್ನು ತೋರಿ ಡಿಸಿಲ್ವಾ ಹೇಳಿದ. ನೀವು ಅಂದುಕೊಂಡ ಹಾಗೆ ನಾನು ಯೋಚಿಸುತ್ತಿಲ್ಲ. ಇಬ್ರು ಮನುಷ್ಯರು ಒಟ್ಟಿಗೆ ಕೂತು ಜ್ಯೂಸ್ ಕುಡಿಯುತ್ತಾ ಕೂತರೆ ತಪ್ಪಿಲ್ಲ ಜ್ಯೂಸ್ ಎನ್ನುವ ಪದವನ್ನು ಒತ್ತಿ ಹೇಳಿ ಅವಳತ್ತ ಮಾರ್ಮಿಕವಾಗಿ ನೋಡಿದ. ಅವಳು ತಲೆ ತಗ್ಗಿಸಿದಳು. ನಾನು ಬಂದಿರೋದು ಬೇರೆ ವಿಷಯಕ್ಕೆ. ಸ್ವಲ್ಪ ಹೊತ್ತಿನ ಮುಂಚೆ ಮಿಸ್ಟರ್ ತ್ರಯಂಬಕ ಅವರ ರೂಮಿನಲ್ಲಿ ಯಾರೋ ಮನುಷ್ಯ ಸತ್ತಿದ್ದಾನೇಂತ ಸುದ್ದಿ ಸಿಕ್ತು" ಎಂದ ಸ್ವಲ್ಪ ಗಟ್ಟಿಯಾಗಿಯೇ.

    ಆಗ ತೆರೆದುಕೊಂಡಿದ್ದ ಬಾತ್ರೂಮಿನ ಬಾಗಿಲು, ಸುಮಾರು ಅರವತ್ತೈದರ ಗುಂಡಗಿನ ತ್ರಯಂಬಕ ಹೊರಗೆ ಬಂದಿದ್ದ. ಷರ್ಟಿನ ಸ್ಲೀವ್ಗಳನ್ನು ಮಡಿಚಿಕೊಂಡಿದ್ದನ್ನು ಬಿಟ್ಟರೆ ಮೈಮೇಲಿನ ಬಟ್ಟೆ ನೀಟಾಗಿಯೇ ಇತ್ತು.

    ತನ್ನ ಮಾತನ್ನು ಕೇಳಿಕೊಂಡಿದ್ದರ ಪ್ರಭಾವವೇನೋ- ತ್ರಯಂಬಕನ ಹಣೆಯ ಬೆವರಿನ ಸಾಲು ಮೂಡಿದ್ದು ಇಷ್ಟು ದೂರಕ್ಕೂ ಕಾಣಿಸಿತ್ತು ಡಿಸಿಲ್ವಾನಿಗೆ.

    ಕಣ್ಣುಗಳನ್ನು ವಿಶಾಲಗೊಳಿಸಿ ಕಷ್ಟಪಟ್ಟು ಬಾಯ್ತೆರೆದಿದ್ದ ತ್ರಯಂಬಕ ಸತ್ತ ಮನುಷ್ಯನಾ? ನನ್ನ ರೂಮಿನಲ್ಲಾ?

    ನಮಗೆ ಸುದ್ದಿ ಸಿಕ್ಕಿದ್ದು ಹಾಗೇನೇ. ಇಲ್ಲಿ ಎಷ್ಟು ಹೊತ್ತಿಂದ ಇಲ್ಲಿದ್ದೀರಿ ನೀವು? ಡಿಸಿಲ್ವಾ ನೋಟ ನೇರವಾಗಿ ತ್ರಯಂಬಕನನ್ನು ಇರಿಯುತ್ತಿತ್ತು.

    "ಅವನು ತಡಬಡಿಸಿ ಲೀಲಾದೇವಿಯತ್ತ ನೋಡಿದ. ಅವಳು ಕಣ್ಸನ್ನೆ ಮಾಡಿದ್ದು ಡಿಸಿಲ್ವಾನ ಕಂಗಳು ಗುರುತಿಸಿದ್ದವು.

    ಸುಮಾರು ಅರ್ಧಗಂಟೆಯಿಂದ ಇಲ್ಲೇ ಇದ್ದೀನಿ ಮಿಸ್ಟರ್. ಮೇಡಂ ನನ್ನನ್ನ ಬರಹೇಳದ್ರು. ಅವ್ರು ಬರೆದಿರೋ ಹೊಸಕಾದಂಬರಿಯ ಪ್ಲಾಟ್ ಬಗ್ಗೆ ಹೇಳ್ತಾ ಇದ್ರು. ಅದಕ್ಕೆ ಬಂದೆ. ಸುಮ್ನೆ ಮಾತಾಡ್ತಾ ಹಾಗೇ ಜ್ಯೂಸ್ ಕುಡೀತಾ ಕೂತಿದ್ವಿ ಎಂದ ಬಡಬಡನೆ ಹೇಳಿ ತಲೆ ತಗ್ಗಿಸಿಕೊಂಡ ತ್ರಯಂಬಕ.

    ಅಂದ್ರೆ ಇನ್ನೂರ ಅರವತ್ತನೇ ರೂಮ್ಗೆ ನೀವಿಬ್ರೂ ಆಗ್ಲಿಂದ ಹೋಗೇ ಇಲ್ವಾ? ಪೊಲೀಸನಂತೆ ಪ್ರಶ್ನಿಸಿದ ಡಿಸಿಲ್ವಾ.

    ಇಬ್ಬರೂ ಒಟ್ಟಿಗೇ ಸ್ಪಷ್ಟವಾಗಿ ಇಲ್ಲ! ಎಂದರು. ಅಂದರೆ ನಿಮಗೆ ನಿಮ್ಮ ರೂಮಲ್ಲಿರೋ ಮನುಷ್ಯನಾಗಲೀ, ಅವನ ಹೆಣ ಅಲ್ಲಿ ಇದ್ದಿದ್ದಾಗಲೀ ತಿಳಿಯದು. ಸರಿಯಾ?

    ಖಂಡಿತ ಗೊತ್ತಿಲ್ಲ! ಅಂಥದ್ದನ್ನು ನನ್ನ ರೂಮಲ್ಲಿ ಆಗೋಕ್ಕೆ ನಾನು ಯಾಕೆ ಬಿಡ್ತೀನಿ. ಅದಿರಲೀ, ನೀವು ನಿಜ ತಾನೇ ಹೇಳ್ತಿದ್ದೀರಿ? ಮೆಲ್ಲನೆ ಕೇಳಿದ ತ್ರಯಂಬಕ.

    ಅವನ ಅನುಮಾನ ಅರ್ಥವಾದ ಡಿಸಿಲ್ವಾನಿಗೆ ನಗು ಬಂತು. ಈ ಹೆಣದ ನೆಪದಲ್ಲಿ ತಮ್ಮಿಬ್ಬರ ರಹಸ್ಯ ಭೇಟಿಯನ್ನು ಕಂಡು ಹಿಡಿಯಲು ಬಂದಿರುವೆಯಾ ಎಂದು ಪರೋಕ್ಷವಾಗಿ ಕೇಳುತ್ತಿದ್ದಾನೆ ಈ ಘಾಟಿ ಮುದುಕ!

    ಏನೋ ಗೊತ್ತಿಲ್ಲ. ನಮಗೊ೦ದು ಫೋನ್ ಕಾಲ್ ಬ೦ತು. ನೀವು ನಿಮ್ಮ ರೂಮನ್ನ ಲಾಕ್ ಮಾಡಲಿಲ್ವಾ? ಸುಮ್ಮನೆ ಬಾಗಿಲು ಮುಂದೆ ಮಾಡಿಕೊಂಡು ಬಂದ್ರಾ? ಕೇಳಿದ ಡಿಸಿಲ್ವಾ ಇನ್ನೇನು ಮಾತಾಡಲು ಉಳಿದಿಲ್ಲವೆಂದುಕೊಳ್ಳುತ್ತಾ.

    ಹೌದೂನ್ಸುತ್ತೆ ಆಲೋಚಿಸಿ ಹೇಳಿದ ತ್ರಯಂಬಕ. ಹೌದು.

    Enjoying the preview?
    Page 1 of 1