Discover millions of ebooks, audiobooks, and so much more with a free trial

Only $11.99/month after trial. Cancel anytime.

Bhesh Bhale Bhesh!
Bhesh Bhale Bhesh!
Bhesh Bhale Bhesh!
Ebook125 pages40 minutes

Bhesh Bhale Bhesh!

Rating: 0 out of 5 stars

()

Read preview

About this ebook

Rani and Raja are twins. They arrive at their aunt's place with their young brother Kumar to spend their holidays. They enjoy gallivanting around the village with their newly acquired friends. But they are forbidden to go near the hill which lies far away beyond the fields. What lies in the hills? Why are the villagers perplexed at the mention of the hills? Unable to withhold their curiosity the gang secretly swings into action! Bhesh Bhale Bhesh! A novel in a drama format.
LanguageKannada
Release dateAug 12, 2019
ISBN6580202300329
Bhesh Bhale Bhesh!

Related to Bhesh Bhale Bhesh!

Related ebooks

Reviews for Bhesh Bhale Bhesh!

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Bhesh Bhale Bhesh! - Chitra Ramachandran

    http://www.pustaka.co.in

    ಭೇಷ್ ಬಲೇ ಭೇಷ್!

    Bhesh Bale Bhesh!

    Author :

    ಚಿತ್ರಾ ರಾಮಚಂದ್ರನ್

    Chitra Ramachandran

    For more books

    http://www.pustaka.co.in/home/author/chitra-ramachandran

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕಾವ್ಯಾಲಯ : ಪ್ರಕಾಶಕರು, ಮೈಸೂರು-14

    ದೃಶ್ಯ-1

    ಸ್ಥಳ: ಸಿಟಿ ರೈಲು ನಿಲ್ದಾಣ-ತಿರುಮಾಲೂರ್.

    ಪಾತ್ರ: ರಾಣಿ, ರಾಜ, ಕುಮಾರ್ ಮತ್ತು ಅವರ ತಾಯಿ ತಂದೆ, ಅತ್ತೆ ಮನೆಯವರು, ಕೆಲಸಗಾರರು. (ರೈಲಿನಲ್ಲಿ ಹತ್ತುವ ಗುಂಪು, ಅದರ ಸಂದಣಿ)

    ವೇಳೆ: ಹಗಲು ಹೊತ್ತು-ಸಂಜೆ.

    (ರಾಣಿ, ರಾಜ ಮತ್ತು ಕುಮಾರ್, ಸೋದರತ್ತೆಯ ಮನಗೆ ಹೋಗಲು ಹೊರಟಿರುವರು. ರಾಣಿ ಮತ್ತು ರಾಜ ಹದಿನಾರು ವರ್ಷದ ಅವಳಿ ಮಕ್ಕಳು. ಕುಮಾರ್ ಅವರ ತಮ್ಮ. ಅವನಿಗೆ ಒಂಭತ್ತು ವರ್ಷ. ತಾಯಿತಂದೆಯರು ಮಕ್ಕಳನ್ನು ರೈಲಿನಲ್ಲಿ ಕೂರಿಸಿ ಬುದ್ದಿವಾದ ಹೇಳಿ ಕಳುಹಿಸುವರು).

    ತಂದೆ : ರಾಜ, ರಾಣಿ ಹೆಣ್ಣು ಮಗು. ಕುಮಾರ್ ಇನ್ನೂ ಚಿಕ್ಕವನು. ನೀನೇ ಅರನನ್ನು ಜೋಪಾನವಾಗಿ ಕರಕೊಂಡು ಹೋಗಬೇಕು....ಹುಷಾರಾಗಿ ನೋಡ್ಕೋ....

    ತಾಯಿ : ರಾಣಿ....ರಾಜ....ಕುಮಾರ್ನ ಸುಮ್ಮನೆ ಗೋಳು ಹುಯ್ಕೊಳ್ಳಬೇಡಿ....ಪಾಪ....ಇದೇ ಮೊಟ್ಟಮೊದಲಾಗಿ ಅವನು ನಿಮ್ಮೊಡನೆ ಬರುತ್ತಿರೋದು....ಕುಮಾರ್....ಜಾಣನಾಗಿರಬೇಕು....ಎಲ್ಲೂ ಚೇಷ್ಟೆ ಮಾಡಬಾರದು.......

    ತಂದೆ : ಹುಷಾರಾಗಿ ಹೋಗಿ ಬನ್ನಿ.... ದಾರಿಯಲ್ಲಿ ಎಲ್ಲೂ ಇಳಿಯಕೂಡದು. ತಿರುಮಾಲೂರಿನಲ್ಲಿ ನಿಮ್ಮನ್ನು ಮನೆಗೆ ಕರೆದ ಹೋಗೋದಕ್ಕೆ ಯಾರಾದರೂ ಬರುತ್ತಾರೆ. ಕಾಗದ ಬರೆದಿದ್ದೇನೆ....

    (ರೈಲು ಹೊರಟಿತು)

    ಮಕ್ಕಳು : ಟಾಟಾ......ಟಾಟಾ......

    (ತಾಯಿತಂದೆಯರು ಕೈ ಅಲ್ಲಾಡಿಸುವರು)

        (ರೈಲಿನಲ್ಲಿ)

    ರಾಣಿ : ಕುಮಾರ್....ಯಾಕೋ ಸಪ್ಪಗಿದ್ದೀಯ? ಅಪ್ಪನಿಗೆ ರಜ ಸಿಕ್ಕಿದ ಕೂಡಲೇ, ಅಮ್ಮನ್ನ ಕರಕೊಂಡು ಬಂದುಬಿಡ್ತಾರೆ ಕಣೊ......ಇಲ್ನೋಡು....ನೀನಿನ್ನೂ ಅತ್ತೆಮನೆ ಒಂದು ಸಲವೂ ನೋಡಿಲ್ಲ, ಅಲ್ವೆ? ಅಲ್ಲಿ ದೊಡ್ಡ ತೋಟ, ಉಯ್ಯಾಲೆ, ಅಂತ ಏನೇನೋ ಇದೆ....ಜೋರಾಗಿರುತ್ತೆ ಕಣೋ......

    ರಾಜ : ಹೌದು ಕುಮಾರ್... ಹೊಳೆ....ಬೆಟ್ಟ....ಹೊಲ ಅಂತೂ ತುಂಬ ಸ್ವಾರಸ್ಯವಾಗಿರುತ್ತೆ....ಅಲ್ಲಿ ಹೋದ ಮೆಲೆ, ನಿನಗೆ ವಾಪಸ್ಸು ಬರೋಕೇ ಮನಸ್ಸು ಬರೋಲ್ಲ....ಗೊತ್ತೇ....

    ಕುಮಾರ್ : (ಸಂತೋಷದಿಂದ) ಹಾಗೇನು!! ಅಮ್ಮ ಹೇಳಿದಳು....ಅತ್ತೆ ಮನೆಯಲ್ಲಿ ಜಯಂತಿ ಅಕ್ಕ ಮತ್ತೆ ಅವಳ ಪುಟ್ಟ ಪಾಪೂನೂ ಇದ್ದಾರಂತೆ......

    (ಮಕ್ಕಳು ಈ ರೀತಿ ಮಾತನಾಡುತ್ತ ಪ್ರಯಾಣ ಮಾಡಿದರು....ತಿರುಮಾಲೂರ್ ನಿಲ್ದಾಣದಲ್ಲಿ ರೈಲು ನಿಂತಾಗ)

    ರಾಜ : ಊರು ಬಂತು....ರಾಣಿ....ಕುಮಾರ್....ನೀವಿಬ್ರು ಬೇಗ್ಬೇಗ ಇಳಿಯಿರಿ.... ನಾನು ಸಾಮಾನೆಲ್ಲ ಇಳಿಸ್ಬಿಟ್ಟು ಇಳಿಯಿತಿನಿ....ಇಲ್ಲಿ ರೈಲು ಐದೇ ನಿಮಿಷ ನಿಲ್ಲತ್ತೆ....ಊಂ....ಬೇಗ್ಬೇಗ....

    (ರಾಣಿ ಮತ್ತು ಕುಮಾರ್ ಇಳಿಯುವರು. ಆಗ, ಅತ್ತೆಯ ಮನೆಯ ಗಾಡಿಯವನು ಕಿಟ್ಟಿ ಓಡಿ ಬರುತ್ತಾನೆ)

    ಕಿಟ್ಟಿ : ಬನ್ನಿ ಬುದ್ದೀ....ನೀವೂ ಇಳಿಯಿರಿ....ನಾನು ಸಾಮಾನೆಲ್ಲ ತರ್ತೇನೆ..

    ರಾಜ : (ಹುಸಿನಗುತ್ತ) ಓ....ಕಿಟ್ಟಿ....ಚೆನ್ನಾಗಿದ್ದಿಯೇನಯ್ಯ....ಇನ್ನು ಯಾರು ಬಂದಿದ್ದಾರೆ?

          (ಕೇಳುತ್ತ ಇಳಿದ ರಾಜ. ಅಷ್ಟರಲ್ಲಿ ಅಲ್ಲಿಗೆ ಬಂದರು ಅತ್ತೆಯ ಮಕ್ಕಳಾದ ಸುರೇಶ್ ಮತ್ತು ವಿಧ್ಯ. ವಿಧ್ಯ ರಾಣಿಯ ಜೊತೆ. ಸುರೇಶ್ ಸ್ವಲ್ಪ ದೊಡ್ಡವನು.)

    ಸುರೇಶ್ : ಹಲ್ಲೋ........ರಾಜ....ಬಾ ರಾಣಿ......ಓಹೊಹೋ.......

    ಕುಮಾರ್!........ಎಷ್ಟು ಎತ್ರಕ್ಕಾಗ್ಬಿಟ್ಟಿದ್ದೀಯ !

    ವಿಧ್ಯ : ಹಾಯ್........ರಾಣಿ........ಬನ್ನಿ ಬನ್ನಿ ಎಲ್ರು ಗಾಡಿಗೆ ಹೋಗೋಣ..........

          (ಎಲ್ಲರೂ ರೈಲು ನಿಲ್ದಾಣದಿಂದ ಹೊರಗೆ ಬರುವರು)

    ಸುರೇಶ್ : ಸ್ಟೇಷನ್ನಿಗೆ ಅಪ್ಪ ಜೀಪನ್ನೇ ತರಬೇಕೆಂದಿದ್ರು........ಆದರೆ.......ಕೊನೇ ನಿಮಿಷದಲ್ಲಿ ಏನೋ ‘ಅರ್ಜೆಂಟು’ ಕೆಲಸ ಬಂದು ಬಿಡುತು. ಅದಕ್ಕೇ ನಾವು ಗಾಡಿಕಟ್ಕೊಂಡು ಬಂದೆವು.

    ರಾಜ: ಒಳ್ಳೆಯದಾಯಿತು ಬಿಡು.......ಕುಮಾರ್‍ಗೆ ಇದು ಹೊಸ ಅನುಭವವಾಗಿರುತ್ತೆ...........

    ಕುಮಾರ್: ಹೈಯ್ಯ....ಎತ್ತಿನಗಾಡೀಂತ ಅಣ್ಣ ಹೇಳಿದಾಗ ಹೇಗಿರುತ್ತೊ ಅಂದುಕೊಂಡಿದ್ದೆ. ಟಯರು ಚಕ್ರ ಇದೆ! ಜೋರಾಗಿ ಓಡುತ್ತೆ.

    ರಾಣಿ : ಇದೇನು ನಮ್ಮೂರು ಲೊಡಕಾಸಿ ಗಾಡಿ ಅಂದುಕೊಂಡೆಯೇನು? ಇದು ನಮ್ಮ ತಲೆಯನ್ನು ಹದ ನೋಡೋಲ್ಲ.......ಕರುಳನ್ನು ಕೀಳೋಲ್ಲ. (ಮಕ್ಕಳು ನಕ್ಕರು)

    ಕಿಟ್ಟಿ : ಊಂ....ಹಾಗೆ ಹೇಳಿ ಅವ್ವ........ನಿಮ್ಮೂರು ಮೋಟಾರೆಲ್ಲ ಯಾವ ಮೂಲೆಗೆ ಇದರ ಮುಂದೆ? ಸುಮ್ನೆ ‘ಸರ್’ ಅಂತ ಈರಾಪ್ಲೇನ್ ತರ ಹೋಗತ್ತೇಪ್ಪ ನಮ್ಮ ಗಾಡಿ........

    ವಿಧ್ಯ : ಸಾಕು ಸುಮ್ಮನಿರೋ.......ನಿನ್ನ ಜಂಬವೋ ನೀನೋ........

    ಕುಮಾರ್ : (ನಾನಾ ಕಡೆಯೂ ಗಮನಿಸುತ್ತ) ಇದೇನು? ಸ್ಟೇಷನ್ ಕಡೆ ಇಷ್ಟು ಭಾರಿ ಕಟ್ಟಡಗಳು?

    ವಿಧ್ಯ : ಅವೆಲ್ಲ ಈಗ ಹೊಸದಾಗಿ ಕಟ್ಟಿದ್ದಾರೆ .... ....ಆ ಕೆಂಪುಕಟ್ಟಡ ಪೋಲೀಸ್ ಸ್ಟೇಷನ್. ಅಲ್ಲಿ ....... ಆ ಮಣಿಯ ಮಾವ ಪೋಲೀಸ್ ಇನ್‍ಸ್ಪೆಕ್ಟರಾಗಿದ್ದಾರೆ.

    ರಾಣಿ : ಓ........ಆ ಜಂಬದ್ಕೋಳಿ ಮಣೀನೇ! ಅವನ ಮಾವ ಪೋಲೀಸ್ ಇನ್‍ಸ್ಪೆಕ್ಟರೇ!

    ಸುರೇಶ್ : ಅವನು ಜಂಬ ಹೊಡಕೊಳ್ಳಕ್ಕೆ ತಕ್ಕಂತೆ, ಅವನ ಮಾವ ಈ ಊರಿನ ಆಫೀಸರ ಉಪಯೋಗಕ್ಕಾಗಿ ಒಂದು ಒಳ್ಳೆ ಪುಸ್ತಕಾಲಯನ ಶುರು ಮಾಡಿದ್ದಾರೆ........ಪೋಲಿಸ್ ಸ್ಟೇಷನ್ ಪಕ್ಕದಲ್ಲಿರೋದೇ ಲೈಬ್ರರಿ....

    ವಿಧ್ಯ : ಆ ಮೇಲೆ....ಅಲ್ಲಿ....ಅಲ್ಲಿ ನೋಡು....ಬಿಳಿ ಕಿಟಕಿಗಳಿರುವ ಕಟ್ಟಡ ಒಂದು ಕಾಣುತ್ತಲ್ಲ....ಅದೇ ಪೋಸ್ಟಾಫೀಸು. ಈ ಗ್ರಾಮ ಇತ್ತೀಚೆಗೆ ವೃದ್ಧಿಯಾಗ್ತಾ ಇದೆ....ಮುಂಚೆ ಇಲ್ಲಿ ಏನಿರಲಿಲ್ಲ....ಇದೊಂದು ಪುಟ್ಟ ಗ್ರಾಮವಾಗಿತ್ತು. ಅಲ್ಲಲ್ಲಿ ಹೊಲದಲ್ಲಿ ಕೆಲಸ ಮಾಡುವವರ ಗುಡಿಸಲುಗಳು ಮತ್ತು ಅಲ್ಲೊಂದು ಇಲ್ಲೊಂದಾಗಿ ನೆಲದ ಸ್ವಂತಗಾರರ ಮನೆ .... ಅಷ್ಟೇ ಇದ್ದಿದ್ದು.

    ಸುರೇಷ್ : ಆಮೇಲೆ....ಇಲ್ಲಿ ಒಂದು ಸಕ್ಕರೆ ಕಾರ್ಖಾನೆ ಬಂದ ಮೇಲೆ ಸರ್ಕಾರದವರು ಇಲ್ಲಿಗೆ ನೀರಿನ ವಸತಿ, ಮನೆ ವಸತಿ, ವಿದ್ಯುಚ್ಛಕ್ತಿ ಮುಂತಾದ ಅನೇಕ ವಸತಿಗಳನ್ನು ಮಾಡಿಕೊಟ್ಟಿರುವರು. ಅಕ್ಕ ಪಕ್ಕದಿಂದ ಕಬ್ಬು ಕಾರ್ಖಾನೆಗೆ ಬರುವುದಕ್ಕಾಗಿ ರೈಲಿನ ಅಗತ್ಯವೂ ಬಂದಿತು. ಆದ್ದರಿಂದ ಒಂದು ರೈಲು ನಿಲ್ದಾಣವೂ ಏರ್ಪಟ್ಟಿತು.

    ಕುಮಾರ್ : ಅದೆಕ್ಕ ಸರಿಯೇ.......ಆ ಮಣಿ ಯಾರು?

    ರಾಣಿ : ನಿನಗೆ ಯಾಕೋ ಅವನ ವಿಚಾರ?

    ಸುರೇಷ್ : ಕೇಳಲಿ ಬಿಡು. ಅವನಿಗೂ ತಿಳಿಯಬೇಕಾದ್ದೇ ಅಲ್ವೇ? ಕುಮಾರ್.... ಆ ಮಣಿ ಒಬ್ಬ ಸರಿಯಾದ ಮಂಕು. ತಂದೆ ಇಲ್ಲದ ಮಗೂಂತ ಅವನ್ನ ಬಹಳ ಮುದ್ದು ಮಾಡಿ ಸಾಕಿದ್ದಾರೆ, ಅವನ ತಾಯಿ. ಪಾಪ ಬಹಳ ಒಳ್ಳೆಯವರು. ಅವರ ತಮ್ಮನೂ ಸಹ ಒಳ್ಳೆಯವರು. ಆದರೆ....ಈ ಹುಡುಗ ಮಾತ್ರ....ಯಾವಾಗಲೂ

    Enjoying the preview?
    Page 1 of 1