Discover millions of ebooks, audiobooks, and so much more with a free trial

Only $11.99/month after trial. Cancel anytime.

Muluguva Kola
Muluguva Kola
Muluguva Kola
Ebook142 pages43 minutes

Muluguva Kola

Rating: 0 out of 5 stars

()

Read preview

About this ebook

ಲೇಖಕನ ಕಿರು ಪರಿಚಯ:

ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್. ಹುಟ್ಟಾ ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ನಾನು ಹವ್ಯಾಸಿ ಕನ್ನಡ ಮತ್ತು ಇಂಗ್ಲೀಷ್ ಬರಹಗಾರ.

ಇದುವರೆಗೂ 12 ಸಣ್ಣ ಕತೆಗಳನ್ನೂ, 4 ಕಿರು ಕಾದಂಬರಿಗಳನ್ನೂ ರಚಿಸಿ ತರಂಗ, ತುಷಾರ, ಉತ್ಥಾನ, ಸುಧಾ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೇನೆ.

ಅಲ್ಲದೇ ಸಖಿ ಯ ಮೇ ೧ ಸಂಚಿಕೆಯಲ್ಲಿ ದೋಹಾ ನಗರದ ಬಗ್ಗೆ ಪ್ರವಾಸಕಥನ ಬರೆದಿದ್ದೇನೆ.

ಕನ್ನಡಪ್ರಭ ಆನ್ ಲೈನ್ ಆವೃತ್ತಿಯಲ್ಲಿ ಮೂರು ಲೇಖನಗಳೂ ಪ್ರಕಟವಾಗಿವೆ

LanguageKannada
Release dateAug 12, 2019
ISBN6580216801970
Muluguva Kola

Read more from Nagesh Kumar Cs

Related authors

Related to Muluguva Kola

Related ebooks

Reviews for Muluguva Kola

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Muluguva Kola - Nagesh Kumar CS

    http://www.pustaka.co.in

    ಮುಳುಗುವ ಕೊಳ

    Muluguva Kola

    Author:

    ನಾಗೇಶ್ ಕುಮಾರ್ ಸಿಎಸ್

    Nagesh Kumar CS

    For more books

    http://www.pustaka.co.in/home/author/nagesh-kumar-cs

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಮುಳುಗುವ ಕೊಳ

    (ಒಂದು ರಹಸ್ಯಮಯ ಪತ್ತೇದಾರಿ ಕಾದಂಬರಿ)

    * ನಾಗೇಶ್ ಕುಮಾರ್ ಸಿ ಎಸ್

    (ಈ ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು, ಸ್ಥಳಗಳು ಕಾಲ್ಪನಿಕವೆಂದೂ ಯಾವುದೇ ನಿಜಜೀವನದ ವ್ಯಕ್ತಿ/ ಸ್ಥಳಗಳಿಗೆ ಸಂಬಂಧಿಸುದುದಲ್ಲಾ ಎಂದು ತಿಳಿಸಿಸಲಾಗಿದೆ)

    1

    ವಿನಯನಗರದ ನ್ಯೂ ಗ್ಲೋಬಲ್ ಇನ್ಷೂರೆನ್ಸ್ ಕಂಪನಿಯ ಸುಸಜ್ಜಿತ ಹವಾನಿಯಂತ್ರಿತ ಕಚೇರಿಯಲ್ಲಿ ಅಂದು ಬೆಳಿಗ್ಗೆ ಒಂಬತ್ತಕ್ಕೇ ಬಿಸಿಯೇರಿದ ವಾತಾವರಣವಿತ್ತು.

    ತನ್ನ ಟೇಬಲ್ ಹಿಂದೆ ಕುಳಿತು ಎದುರಿಗಿದ್ದ ಪತ್ತೇದಾರ ಕೀರ್ತಿಮಾನ್‌ ಕಡೆಗೆ ಹುಬ್ಬುಗಂಟಿಕ್ಕಿ ಅಂದಿನ ದಿನಪತ್ರಿಕೆಯಲ್ಲಿ ಮಡಿಚಿದ್ದ ಸುದ್ದಿಯನ್ನು ಟೇಬಲ್ ಮೇಲೆ ಬಡಿದು ಸಿಡಿದರು, ಉದ್ರಿಕ್ತ ಮುಖದ ಭೀಮರಾವ್:

    ನಾನೆಷ್ಟು ಬಡ್ಕೊಂಡರೂ ಕೇಳುವುದಿಲ್ಲಯ್ಯಾ, ಈ ಆಫೀಸಿನಲ್ಲಿ,... ಐದು ಕೋಟಿ ರೂಪಾಯಿ ವಿಮಾ ಪಾಲಿಸಿ ಯಾರಾದರೂ ಸುಮ್ಮನೇ ಮಾರುತ್ತಾರೆಯೆ?... ಅದೂ ಅದನ್ನು ಕೊಂಡವರು ಇಷ್ಟು ಬೇಗ ಸಾಯುವಂತಾದರೆ?...ಈಗ ನೋಡು ಯಾರ ತಲೆಗೆ ಬಂತು?

    ಅವರ ಈ ಸಿಟ್ಟಿನ ಗುಡುಗುವ ದನಿ ಕೀರ್ತಿಮಾನ್‍ಗೆ ಅಪರೂಪವೇನಲ್ಲ... ಭೀಮರಾವ್ ಪ್ರಕಾರ ಪಾಲಿಸಿ ಮಾರುವುದೇ ಈ ವಿಮಾ ಕಂಪನಿಯ ದೊಡ್ಡ ಅಪರಾಧ!... ಏಕೆಂದರೆ ಅದರಿಂದ ಪಾಲಿಸಿದಾರರ ಕ್ಲೈಮ್ಸ್ ಬರುತ್ತಲ್ಲಾ.?. ಅವರೇ ಆ ಕ್ಲೈಮ್ಸ್ ವಿಭಾಗದ ಮುಖ್ಯಸ್ಥ... ಜನ್ಮತಃ ಮಹಾ ಜಿಪುಣ...ಒಂದು ಚಿಕ್ಕಾಸೂ ಕಂಪನಿಯಿಂದ ವ್ಯಯವಾಗಬಾರದು ಎನ್ನುವ ಓಬೀರಾಯನ ಕಾಲದಲ್ಲಿ ಕಲಿತ ಸಿದ್ಧಾಂತವನ್ನೇ ಪ್ರತಿಪಾದಿಸುತ್ತಾ ಇಪ್ಪತ್ತೈದು ವರ್ಷ ಸರ್ವೀಸ್ ಮಾಡಿದ್ದವರು. ಕೀರ್ತಿಮಾನ್ ಇಲ್ಲಿಗೆ ನಾಲ್ಕು ವರ್ಷದ ಕೆಳಗೆ ಕೆಲಸಕ್ಕೆ ಸೇರಿದಾಗಿನಿಂದ ಅವರನ್ನು ಗಮನಿಸುತ್ತಲೇ ಇದ್ದ... ಪ್ರತಿ ಕ್ಲೈಮ್ ಬಂದಾಗಲೂ ಅವರದು ಏನಾದರೂ ಒಂದು ತಕರಾರು, ಹಣ ಪಾವತಿ ತಪ್ಪಿಸಿಕೊಳ್ಳುವ ಹುನ್ನಾರ. ಅದಕ್ಕೆ ತನ್ನ ಕೈ ಕೆಳಗೆ ದುಡಿಯುವ ಕೀರ್ತಿಮಾನ್ ಯಾವುದಾದರೂ ಪತ್ತೇದಾರಿ ಚಮತ್ಕಾರ ಮಾಡಬೇಕೆಂದು ಬಯಸುವರು...ಕೀರ್ತಿಮಾನ್ ಒಬ್ಬ ನೀಳ ಕೂದಲಿನ ಸದೃಢ ಮೈಕಟ್ಟಿನ ಸ್ಪುರದ್ರೂಪಿ ಯುವಕ...ಅವನಿಗಿನ್ನೂ ಈ ನೌಕರಿಯಲ್ಲಿ ಅನುಭವ ಕಡಿಮೆ ಎಂದವರ ಅಸಮಾಧಾನ.

    ಕೀರ್ತಿಮಾನ್ ಕೈಯೆತ್ತಿ ಸಿಟ್ಟಿಗೆದ್ದಿದ್ದ ಅವರನ್ನು ತಡೆದು ಜಸ್ಟ್ ಎ ಮಿನಿಟ್ ಸಾರ್, ನಾನು ಓದಿ ಹೇಳಲೇ? ಎಂದು ಅವರಿತ್ತ ಪತ್ರಿಕೆಯನ್ನೆತ್ತಿಕೊಂಡು ಓದತೊಡಗಿದ.

    ಅಂದಿನ ಮುಖ್ಯ ಸುದ್ದಿ ಕಣ್ಣಿಗೆ ರಾಚುವಂತಾ ತಲೆಬರಹದಲ್ಲಿದ್ದುದು:

    "ಕೋಟ್ಯಾದೀಶ್ವರಿಯ ನಿಗೂಢ ಸಾವು: ಅಂಚನಾ ದೇಸಾಯಿ ನೀರಲ್ಲಿ ಮುಳುಗಿದ್ದೇಕೆ?"

    ...ಹುಟ್ಟುಹಬ್ಬದ ಮೋಜಿನಲ್ಲಿ ಕೊನೆಯುಸಿರೆಳೆದ ನತದೃಷ್ಟೆ…"

    ಕೀರ್ತಿಮಾನ್‌ಗೆ ತಿಳಿದಂತೆ ಆಕೆ ನಗರದ ಪ್ರಖ್ಯಾತ ಚಿನ್ನದ ವ್ಯಾಪಾರಿ ಶಶಿಧರ್ ದೇಸಾಯಿಯವರ ಸುಂದರ ಪತ್ನಿ…ಆಕೆ ತಮ್ಮ ಪಾಲಿಸಿ ವಿಷಯವಾಗಿ ಕೆಲ ತಿಂಗಳ ಕೆಳಗೆ ಕಚೇರಿಗೆ ಬಂದಾಗ ಆಕೆಯ ಚೆಲುವನ್ನು ಕಂಡೂ ಎಲ್ಲರಂತೆ ತಾನೂ ಮೂಕವಿಸ್ಮಿತನಾಗಿದ್ದ.

    ದೇಶ ವಿದೇಶದಲ್ಲೂ ನಂ.೧ ಆಭರಣಗಳ ಅಂಗಡಿ ಚೈನ್ ಎಂದೇ ಸುಪ್ರಸಿದ್ಧವಾದ ’’ದೇಸಾಯಿ ಜ್ಯುವೆಲೆರ್ಸ್’‌‌ನ ಮಾಲೀಕ ೫೫ ವರ್ಷ ವಯಸ್ಸಿನ ಶಶಿಧರ್ ತನ್ನ ಮೊದಲನೆ ಪತ್ನಿ ರೀಮಾ ಕ್ಯಾನ್ಸರ್ ಬಂದು ತೀರಿಕೊಂಡ ಎರಡು ವರ್ಷದೊಳಗೆ ನಗರದ ಜನಪ್ರಿಯ ನಟಿ- ಮಾಡೆಲ್ ಅಂಚನಾ ಜತೆಗೆ ಒಂದು ಎಡೆಬಿಡದ ರೋಮಾನ್ಸ್‌ನಲ್ಲಿ ತೊಡಗಿ ಹೋದ ವರ್ಷವಷ್ಟೇ ಮದುವೆಯಾಗಿದ್ದರು. ಜನಪ್ರಿಯ ಚಿತ್ರತಾರೆಯರು, ಸಂಗಿತಗಾರರೂ, ಮಂತ್ರಿಗಳು. ಉದ್ಯಮಿಗಳು… ಎಲ್ಲರೂ ಹಿಂದೆಂದೂ ನೆಡೆಯದಂತ ಆ ವೈಭವೋಪೇತ ಮದುವೆ ಸಮಾರಂಭಕ್ಕೆ ಬಂದು ಇವರ ಹೆಗಲಿಗೆ ಹೆಗಲು ಉಜ್ಜಿ ಮಾಧ್ಯಮಗಳ ಮುಂದೆ ಮಿಂಚಿದ್ದರು… ಮೂವತ್ತರ ಸುಂದರಿಗೂ ಐವತ್ತೈದರ ಈತನಿಗೂ ಏನು ವರಸಾಮ್ಯ ಎಂದು ಸಾಮಾನ್ಯ ಜನರು ಕೊಂಕಿಯಾಡಿದ್ದುಂಟು. ಕೊನೆಗೆ ಎಲ್ಲಾ ಹಣದ ಮಹಿಮೆ! ಎಂದು ಮತ್ಸರದಿಂದ ನಿಡುಸುಯ್ದವರೇ ಹೆಚ್ಚು...

    ಕೀರ್ತಿಮಾನ್ ಪತ್ರಿಕೆ ವರದಿಯನ್ನು ಆಸಕ್ತಿಯಿಂದ ಓದತೊಡಗಿದ. ಅದರ ಸಾರಾಂಶವಿಷ್ಟೇ:

    ’ ನಿನ್ನೆ ನೆಡೆದ ಆಕೆಯ ೩೧ ನೇ ಬರ್ತ್-ಡೇ ಪಾರ್ಟಿಯಲ್ಲಿ ರಾತ್ರಿ ಹನ್ನೆರಡರ ಹೊತ್ತಿಗೆ ಬಿರುಸಾಗಿ ಕುಡಿತ ಕುಣಿತ ನೆಡೆಯುತಿದ್ದ ಮೋಜಿನ ಸ್ಥಿತಿಯಲ್ಲಿ ಮನೆಯ ಹಿಂದಿನ ಅಂಗಳದ ಈಜುಕೊಳದ ಒಂದು ಮೂಲೆಯಲ್ಲಿ ಆಕೆಯ ಹೆಣ ಅರೆಬರೆ ಮುಳುಗಿದ್ದು ಕಾಣಿಸಿದೆ… ಪೋಲೀಸ್ ಪ್ರಕಾರ ಆಕೆ ಪಾರ್ಟಿ ಸಮಯದಲ್ಲೇ ಆಕಸ್ಮಿಕವಾಗಿ ನೀರಿಗೆ ಬಿದ್ದು, ಕುಡಿದ ಮತ್ತಿನಿಂದಲೋ ಅಥವಾ ಮತ್ಯಾವುದೋ ಕಾರಣದಿಂದಲೋ ಹೊರಬರಲಾರದೇ ಮುಳುಗಿ ಸತ್ತಿರಬೇಕು ಎಂದೂ, ಇನ್ನು ಶವದ ಮರಣೋತ್ತರ ಪರೀಕ್ಷೆಯ ನಂತರವೇ ಎಲ್ಲ ವಿವರಗಳೂ ಹೊರಬರುವುವು, ದುಃಖತಪ್ತರಾದ ಪತಿ ಶಶಿಧರ್ ವರದಿಗಾರರ ಬಳಿ ಯಾವ ಹೇಳಿಕೆ ಕೊಡಲೂ ಸಿದ್ಧರಿಲ್ಲಎಂದೆಲ್ಲಾ ವರದಿಯಾಗಿತ್ತು.

    ಕೀರ್ತಿಮಾನ್ ತಲೆಯೆತ್ತಿ ತಾಳ್ಮೆಗೆಟ್ಟು ಕಾಯುತ್ತಿರುವ ಭೀಮರಾಯರತ್ತ ನೋಡಿ ಕೇಳಿದ:

    ಒಂದು ವರ್ಷದ ಹಿಂದೆಯಷ್ಟೇ ಅಲ್ಲವೆ?... ಆಕೆಗೆ ಐದು ಕೋಟಿ ರೂ ಮೊತ್ತದ ಜೀವ ವಿಮಾ ಪಾಲಿಸಿ ನಾವು ಮಾರಿದ್ದು... ?

    ಭೀಮರಾವ್ ಅಸಹನೆಯಿಂದ ತಲೆಯಾಡಿಸಿ ಗದರಿದರು: ‘ನಾವು’ ಅಲ್ಲಯ್ಯಾ, ಪ್ರತಿವರ್ಷವೂ ನಮ್ಮ ಕಂಪನಿಯ ನಂಬರ್ ಒನ್ ಏಜೆಂಟ್ ಎಂಬ ಪ್ರಶಸ್ತಿ ಸಂಪಾದಿಸಿ ಎಲ್ಲರಿಗೂ ಮೋಸಮಾಡುತ್ತಿದ್ದಾನಲ್ಲ, ಶರಭ್… ಅವನು!... ಅವನಿಂದ ಅನ್ನು, ಈ ಪಾಲಿಸಿಯನ್ನು ಕಣ್ಣು ಮುಚ್ಚಿ ನಾವು ಪಾಸ್ ಮಾಡಿದ್ದು…ಅದೂ ನಾನು ರಜಾ ಇದ್ದ ಆ ಒಂದು ವಾರದಲ್ಲೇ….

    ಕೀರ್ತಿಮಾನ್ ಮೆಲ್ಲಗೆ ಮುಗುಳ್ನಕ್ಕ. ಈ ಮಾತು ಅವನಿಗೆ ನ್ಯಾಯವೆನಿಸಲಿಲ್ಲ.

    ಶರಭ್ ನಿಜಕ್ಕೂ ಪ್ರತಿಭಾವಂತ , ಯಶಸ್ವಿ ಪಾಲಿಸಿ ಎಜೆಂಟ್ ಮತ್ತು ತನ್ನ ಗೆಳೆಯ ಕೂಡಾ…ಅವನ ಯಾವ ಪಾಲಿಸಿಯೂ ಇದುವರೆಗೂ ಕಂಪನಿಗೆ ಅನಾವಶ್ಯಕ ನಷ್ಟವನ್ನೇನೂ ಮಾಡಿರಲಿಲ್ಲಾ... ಹಾಗೆ ನೋಡಿದರೆ ಅವನು ತನ್ನ ಹಸನ್ಮುಖಿ ಚಾರ್ಮ್‌ನಿಂದ ಊರಿನ ಶ್ರೀಮಂತರನ್ನೆಲ್ಲಾ ಬುಟ್ಟಿಗೆ ಹಾಕಿಕೊಂಡು ಅವರಿಂದ ಭಾರಿ ಮೊತ್ತದ ಪಾಲಿಸಿಗಳನ್ನು ಗಿಟ್ಟಿಸಿಕೊಂಡು ಕಂಪನಿಗೆ ಕೀರ್ತಿಯನ್ನೇ ತಂದಿದ್ದ…ಅವನು ತರುವ ದೊಡ್ಡ ಮೊತ್ತದ ಪಾಲಿಸಿಗಳ ಮೇಲೆ ಯಾವಾಗಲೂ ಕೆಂಗಣ್ಣು ಬಿಟ್ಟು ಆಕ್ಷೇಪಣೆಯೆತ್ತುತ್ತಿದ್ದವರು ಈ ಭೀಮರಾಯರೇ… ಆದರೂ ಇವತ್ತೇನೋ ಶರಭ್‌ನ ಗ್ರಹಚಾರ ಕೆಟ್ಟಿದಂತಿದೆ…

    ಸರಿ... ಈಗ ಈ ಪಾಲಿಸಿಯಿಂದ ನಮಗೆ ಬಂದ ಆಪತ್ತಾದರೂ ಏನು? ಎಂದು ಮೆತ್ತಗೆ ಪ್ರಶ್ನಿಸಿದ ಕೀರ್ತಿಮಾನ್.

    ಊದಿದ ಬೆಲೂನಿಗೆ ಪಿನ್ ಚುಚ್ಚಿದಂತೆ ಬುಸ್ಸ್ ಎಂದು ಧೀರ್ಘವಾಗಿ ನಿಟ್ಟುಸಿರಿಟ್ಟರು ಭೀಮರಾವ್, ಮತ್ತೆ ಅಸಹನೆಯಿಂದ.

    ಸರಿ ಹೋಯ್ತು!... ನಿನಗೆ ಕೊಟ್ಟಿದ್ದ ಫೈಲ್ ಕಾಪೀನಾ ನೀನು ಓದೊದೇ ಇಲ್ಲಾ ಅನ್ನು...! ಎಂದು ಅಲ್ಲಿದ್ದ ಆ ಕೇಸಿನ ದಪ್ಪ ಕಡತವನ್ನು ಕೈಗೆತ್ತಿಕೊಂಡು ದುರುಗುಟ್ಟಿದರು.

    ಶುಕ್ರವಾರ ಸಂಜೆಯಷ್ಟೇ ಅವರು

    Enjoying the preview?
    Page 1 of 1