Discover millions of ebooks, audiobooks, and so much more with a free trial

Only $11.99/month after trial. Cancel anytime.

Suvarna Karavali
Suvarna Karavali
Suvarna Karavali
Ebook167 pages51 minutes

Suvarna Karavali

Rating: 0 out of 5 stars

()

Read preview

About this ebook

ಲೇಖಕನ ಕಿರು ಪರಿಚಯ:

ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್. ಹುಟ್ಟಾ ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ನಾನು ಹವ್ಯಾಸಿ ಕನ್ನಡ ಮತ್ತು ಇಂಗ್ಲೀಷ್ ಬರಹಗಾರ.

ಇದುವರೆಗೂ 12 ಸಣ್ಣ ಕತೆಗಳನ್ನೂ, 4 ಕಿರು ಕಾದಂಬರಿಗಳನ್ನೂ ರಚಿಸಿ ತರಂಗ, ತುಷಾರ, ಉತ್ಥಾನ, ಸುಧಾ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೇನೆ.

ಅಲ್ಲದೇ ಸಖಿ ಯ ಮೇ ೧ ಸಂಚಿಕೆಯಲ್ಲಿ ದೋಹಾ ನಗರದ ಬಗ್ಗೆ ಪ್ರವಾಸಕಥನ ಬರೆದಿದ್ದೇನೆ.

ಕನ್ನಡಪ್ರಭ ಆನ್ ಲೈನ್ ಆವೃತ್ತಿಯಲ್ಲಿ ಮೂರು ಲೇಖನಗಳೂ ಪ್ರಕಟವಾಗಿವೆ

LanguageKannada
Release dateAug 12, 2019
ISBN6580216801974
Suvarna Karavali

Read more from Nagesh Kumar Cs

Related authors

Related to Suvarna Karavali

Related ebooks

Reviews for Suvarna Karavali

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Suvarna Karavali - Nagesh Kumar CS

    http://www.pustaka.co.in

    ಸುವರ್ಣ ಕರಾವಳಿ

    Suvarna Karavali

    Author:

    ನಾಗೇಶ್ ಕುಮಾರ್ ಸಿಎಸ್

    Nagesh Kumar CS

    For more books

    http://www.pustaka.co.in/home/author/nagesh-kumar-cs

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಸುವರ್ಣ ಕರಾವಳಿ

    ನಾಗೇಶ್ ಕುಮಾರ್ ಸಿ ಎಸ್

    ಲೇಖಕರದು

    (ಈ ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು, ಸ್ಥಳಗಳು ಕಾಲ್ಪನಿಕವೆಂದೂ ಯಾವುದೇ ನಿಜಜೀವನದ ವ್ಯಕ್ತಿ/ ಸ್ಥಳಗಳಿಗೆ ಸಂಬಂಧಿಸುದುದಲ್ಲಾ ಎಂದು ತಿಳಿಸಿಸಲಾಗಿದೆ)

    Suvarna Karavali by Nagesh Kumar CS is licensed under a Creative Commons Attribution-NoDerivatives 4.0 International License.

    ಪೀಠಿಕೆ

    ಆಖ್ರಾ, ಘಾನಾ ದೇಶದ ರಾಜಧಾನಿ, ಆಫ್ರಿಕಾ

    ೩-ಎ ಚಾರ್ಟರ್ಡ್ ಎಂಬ ಹೆಸರಿನ ಸರಕು ಸಾಗಿಸುವ ಬೋಯಿಂಗ್ ೭೪೭ ಫ಼್ರೈಟರ್ ವಿಮಾನ ಅಲ್ಲಿನ ಏರ್-ಪೋರ್ಟಿನಲ್ಲಿ ಸಿದ್ಧವಾಗಿ ನಿಂತಿದೆ. ಅದರ ಭಾರ, ಪ್ರಯಾಣಿಕರು ಇತರ ವಿವರಗಳನ್ನು ಪರಿಶೀಲಿಸಿದ ಕಪ್ಪನೆಯ ಕಸ್ಟಮ್ಸ್ ಅಧಿಕಾರಿ ರೇಮನ್, ಅದರ ಒಡೆಯ ಮತ್ತು ಪೈಲಟ್ ಆದ ಅಶ್ವಿನ್ ಮುಖ ನೋಡಿ ಒಮ್ಮೆ ಮುಗುಳಕ್ಕ.

    ಅರೆ, ಅಶ್ವಿನ್..ಈ ವಿಮಾನ ಸುಮಾರು ೨೦೦ ಟನ್ ಭಾರ ಸಾಗಣೆ ಮಾಡತಕ್ಕದ್ದು... ಇವತ್ತು ಅರ್ಧ ಲೋಡಿನಲ್ಲೇ ಹೋಗುತ್ತಿದ್ದೀರಾ? ಬರೀ ಸ್ಕ್ರ್ಯಾಪ್ ಮೆಟೀರಿಯಲ್ಸ್ ತಗೊಂಡು?...ಅದೂ ಇಂಡಿಯಾಗೆ..? ಎಂದು ಹುಬ್ಬೇರಿಸಿದ,

    ಅಶ್ವಿನ್ ಕೂಡಾ ಮುಗುಳ್ನಕ್ಕು ಅವನಿತ್ತ ಪತ್ರಗಳಲ್ಲಿ ಸಹಿ ಹಾಕಿ ಉತ್ತರಿಸಿದ,

    ಇಲ್ಲಿನ ಪರಿಸ್ಥಿತಿ ನಿಮಗೆ ಗೊತ್ತಿದೆ, ರೇಮನ್, ಯಾವ ಕ್ಷಣ ಬಂಡಾಯವೇಳುತ್ತಾರೋ, ಯಾವಾಗ ರಕ್ತಪಾತವಾಗುತ್ತೋ..ಯಾರು ಹೇಳಬಲ್ಲರು?..ಈ ಬಾರಿ ಲೋಡ್ ಕಡಿಮೆಯಿದ್ದರೂ ಮನೆಯವರನ್ನೆಲ್ಲಾ ಇಂಡಿಯಾಗೆ ಕರೆದೊಯ್ಯುತ್ತಿದ್ದೇನೆ..ಮತ್ತೆ ಈ ದೇಶಕ್ಕೆ ವಾಪಸ್ ಬರುವ ಚಾನ್ಸ್ ಕಡಿಮೆ! ಎಂದು ತುಟಿಯುಬ್ಬಿಸಿ ವೈಟಿಂಗ್ ಲೌಂಜಿನಲ್ಲಿ ಕುಳಿತಿದ್ದ ತನ್ನ ಪತ್ನಿ ಅನುಪಮಾ ಮತ್ತು ಮೂರು ವರ್ಷ ವಯಸ್ಸಿನ ಅಖಿಲ್ ಇಬ್ಬರನ್ನೂ ತೋರಿಸಿದ. ಬರಲು ಕೈ ಮಾಡಲು ಅವರೆದ್ದು ಅವನತ್ತ ಸರಸರನೆ ಬಂದರು..

    ರೇಮನ್ ತನ್ನ ಬಿಳಿ ಹಲ್ಲಗಳನ್ನು ಪ್ರದರ್ಶಿಸಿ ನಕ್ಕ, ಅಶ್ವಿನ್, ಅನುಪಮಾ, ಅಖಿಲ್... ಅದಕ್ಕೇ ನಿಮ್ಮ ವಿಮಾನಕ್ಕೆ ೩-ಎ ಎಂಬ ಹೆಸರು, ರೈಟ್?..ಓಕೆ..ಬಾನ್ ವಾಯೇಜ್! ಎಂದು ಅವರ ಕೈಕುಲುಕಿ ಹಾರೈಸಿದ. ವಿಮಾನದ ಕೋ-ಪೈಲಟ್ ರಾಡ್ರಿಗ್ಸ್ ಆಗಲೇ ಕ್ಯಾಬಿನ್ ಏರಿ ಕುಳಿತಿದ್ದ.

    ಈ ನಾಲ್ಕು ಜನ ಇದ್ದ ೩-ಎ ವಿಮಾನ ಅನತಿ ಸಮಯದಲ್ಲೇ ಆಕಾಶಕ್ಕೇರಿತು.

    ಆಗ ರೇಮನ್ ತನ್ನ ಮೊಬೈಲ್ ತೆಗೆದು ಯಾರೊಂದಿಗೋ ಅವಸರವಸರವಾಗಿ ಮಾತನಾಡಲಾರಂಭಿಸಿದ.

    ಆರು ತಿಂಗಳ ನಂತರ,

    ಕರ್ನಾಟಕ-ಗೋವಾ ಗಡಿ:

    ಉತ್ತರ ಕನ್ನಡದ ಕಾರವಾರ ನೌಕಾನೆಲೆ (ನೇವಲ್ ಬೇಸ್) ಕಡೆಗೆ ಎಡಪಲ್ಲಿ-ಪನ್ವೇಲ್ ಎನ್. ಎಚ್. ೧೭ ಹೆದ್ದಾರಿಯಲ್ಲಿ ಸಾಧಾರಣ ವೇಗದಲ್ಲಿ ಒಂದು ನೇವಲ್ ಪೋಲಿಸರ ವ್ಯಾನ್ ಚಲಿಸುತ್ತಿದೆ.

    ಅದರಲ್ಲಿದ್ದ ಕ್ಯಾಪ್ಟನ್ ಸಾತ್ವಿಕ್ ಅರಸ್ ತನ್ನ ಕೈಕೋಳವನ್ನೊಮ್ಮೆ, ಎದುರಿಗಿದ್ದ ಚಿಕ್ಕ ಬೆಂಚಿನಲ್ಲಿ ಕುಳಿತು ತನ್ನನ್ನು ಕರೆದೊಯ್ಯುತ್ತಿದ್ದ ಇಬ್ಬರು ಪೋಲೀಸ್ ಪೇದೆಗಳನ್ನೊಮ್ಮೆ ಪರಿಶೀಲಿಸಿದ.

    ಹತ್ತು ನಿಮಿಷದಲ್ಲಿ ಹತ್ತನೆ ಬಾರಿ ಆತಂಕದಿಂದ ಹೊರಗಿಣುಕಿ ಆಚೆ ನೋಡಿದ. ಸಮಯ ಸಂಜೆ ಐದಾಗುತ್ತಿದೆ.ಇನ್ನೇನು ತಾನು ಇಳಿಯುವ ಸಮಯ ಬಂದೇ ಬಿಟ್ಟಿತು ಎಂದು ಖಚಿತವಾಯಿತು. ತಾವು ಗೋವಾದ ಪೋಲೆಮ್ ಬೀಚ್ ಗಡಿ ದಾಟಿ ಕರ್ನಾಟಕದ ಸೀಮೆಯನ್ನು ತಲುಪಿ ಇದೀಗ ಸರಿಯಾಗಿ ಐದು ನಿಮಿಷವಾಗಿತ್ತು.

    ಒಮ್ಮೆ ಸರಿಯೆಂಬಂತೆ ಅವರಿಬ್ಬರತ್ತ ತಲೆಯಾಡಿಸಿ ಮುಗುಳ್ನಕ್ಕು ತನ್ನ ಕೈ ನೀಡಿದ..ಮೊದಲನೆ ಪೇದೆ ಮರುಮಾತಿಲ್ಲದೇ ಅವನ ಕೈಕೋಳವನ್ನು ತನ್ನ ಜೇಬಿನಲ್ಲಿದ್ದ ಕೀಲಿಕೈ ಬಳಸಿ ತೆಗೆದ. ಕೈಗಳು ಬಿಡುವಾಗುತ್ತಿದ್ದಂತೆಯೇ ಅವರಿಬ್ಬರಿಗೂ ಉದ್ದೇಶಿಸಿ ಸಾರಿ ಬ್ರದರ್ಸ್ ಎನ್ನುತ್ತಾ ಆ ಸ್ಟೀಲಿನ ಕೈಕೋಳವನ್ನು ಮುಷ್ಟಿಯಲ್ಲಿ ಬಿಗಿದು ಅವರಿಬ್ಬರ ತಲೆಯತ್ತ ಜೋರಾಗಿ ಎರಡು ಬಾರಿ ಲಾಟಿಸಿದ..ಅವನ ಏಟಿಗೆ ತತ್ತರಿಸಿ ಹಾ! ಎಂದು ಕೂಗಿ ತಮ್ಮ ರಕ್ತ ಒಸರುತ್ತಿದ್ದ ಹಣೆಯನ್ನು ಒತ್ತಿಕೊಂಡು ಇಬ್ಬರೂ ವ್ಯಾನಿನ ನೆಲಕ್ಕೆ ಬಿದ್ದರು. ಸರಕ್ಕನೆ ಎದ್ದ ಸಾತ್ವಿಕ್ ತಮ್ಮ ಮತ್ತು ಡ್ರೈವರ್ ಮಧ್ಯೆ ಇದ್ದ ಚಿಕ್ಕ ಗೋಡೆಗೆ ಕೈ ಬಡಿದು ಕಿಂಡಿಯ ಮೂಲಕ ಡ್ರೈವರಿಗೆ ಇನ್ನು ನೀನು ಸ್ಟಾಪ್ ಮಾಡಬಹುದು.ಎಂದ..

    ಕೆಳಕ್ಕೆ ಬಿದ್ದಿದ್ದ ಪೇದೆಯೊಬ್ಬನ ಗನ್ ಎತ್ತಿಕೊಂಡು ಅದರಲ್ಲಿದ್ದ ಬುಲೆಟ್ಸ್ ಹೊರತೆಗೆದು ಜೇಬಿನಲ್ಲಿ ತುಂಬಿಕೊಂಡ. ವ್ಯಾನ್ ಜರ್ಕ್ ಕೊಟ್ಟು ನಿಲ್ಲುತ್ತಿದ್ದಂತೇ ಬಾಗಿಲು ತೆಗೆದು ಹೊರಕ್ಕೆ ಜಿಗಿದು ಡ್ರೈವರ್ ಕಿಟಕಿಯ ಬಳಿ ಹೋದ. ಅಲ್ಲಿ ಸ್ವಲ್ಪ ಮುಗುಳ್ನಗುತ್ತಿದ್ದ ಡ್ರೈವರಿಗೆ, ನಮ್ಮ ಬೇಸ್‌ನಲ್ಲಿ ಕೇಳಿದಾಗ ಇಂತಾ ಸ್ಪಾಟಿನಲ್ಲಿ ವ್ಯಾನ್ ನಿಲ್ಲಿಸಲು ನಮ್ಮ ಪೇದೆಗಳು ಹೇಳಿದರು, ನಿಲ್ಲಿಸಿದೆ...ಕ್ಯಾಪ್ಟನ್ ಸಾತ್ವಿಕ್ ನನಗೆ ಹೊಡೆದು ತಪ್ಪಿಸಿಕೊಂಡರು ಅನ್ನು...ಆಯಿತೆ? ಎಂದ ಗಂಭೀರವಾಗಿ.

    ಡ್ರೈವರ್ ಕಕ್ಕಾಬಿಕ್ಕಿಯಾಗಿ ಹುಬ್ಬೇರಿಸಿ,ನನಗೆ ಹೊಡೆದು ಅಂದರೆ...?ಎನ್ನಲು, ಮತ್ತೊಮ್ಮೆ ‘ಸಾರಿ ಬ್ರದರ್ ಎಂದ ಸಾತ್ವಿಕ್ ಮತ್ತದೇ ರೀತಿಯಲ್ಲಿ ಕೈಯಲ್ಲಿದ್ದ ಕೈಕೋಳವನ್ನು ಅವನ ತಲೆಯತ್ತ ಬೀಸಿದನು.

    ಹಾ, ವಾಟ್...?ಎನ್ನುತ್ತಾ ಗಾಯಗೊಂಡ ಡ್ರೈವರ್ ತನ್ನ ಪಕ್ಕದ ಸೀಟಿಗೆ ಮುಲುಗುತ್ತಾ ಒರಗಿದ..

    ಚೆನ್ನಾಗಿ ನಟಿಸುತ್ತಾರೆ, ಪರವಾಗಿಲ್ಲ...ಆದರೆ, ಪಾಪಾ, ಗಾಯಗಳು ನಂಬುವಂತೆಯೇ ಆಯಿತು.ಎಂದುಕೊಳ್ಳುತ್ತಾ ಸಾತ್ವಿಕ್ ಅಕ್ಕ ಪಕ್ಕ ನೋಡಿದನು.

    ಡ್ರೈವರ್ ಸರಿಯಾದ ನಿರ್ಜನ ಸ್ಪಾಟಿನಲ್ಲೇ ಹೆದ್ದಾರಿಗೆ ಮರೆಯಾಗಿಸಿ ವ್ಯಾನ್ ನಿಲ್ಲಿಸಿದ್ದ. ತಾನಿನ್ನು ಈ ಮರಗಳ ನೆರಳಿನಲ್ಲೇ ರಸ್ತೆ ಬದಿಯಲ್ಲಿ ಓಡಬೇಕು, ಅರ್ಧ ಗಂಟೆಯ ನಂತರ ಇದೇ ಹೆದ್ದಾರಿಯಲ್ಲೇ ತನಗೆ ಮುಂದಿನ ಸುಳಿವು ಸಿಗಲಿದೆ ಎಂದು ಅವನು ಓಡಲಾರಂಭಿಸಿದ..ಕೆಲವೇ ಕ್ಷಣಗಳಲ್ಲೇ ಅವನು ಹೆದ್ದಾರಿಯಿಂದ ಮರೆಯಾಗಿಬಿಟ್ಟ. ಬುಲೆಟ್ಸ್‌ಗಳನ್ನು ಮಧ್ಯೆ ಒಂದೆಡೆ ಸಿಕ್ಕಿದ ಹಾಳು ಬಾವಿಗೆ ಎಸೆದ.

    ಕ್ಯಾಪ್ಟನ್ ಸಾತ್ವಿಕ್ ಅರಸ್ ಮೂವತ್ತೊಂದು ವರ್ಷ ವಯಸ್ಸಿನ ಆರಡಿ ಎತ್ತರದ ಪ್ರಬಲ ವ್ಯಕ್ತಿತ್ವದ ಯುವಕ. ನೇವಲ್ ಅಕಾಡೆಮಿಯಿಂದ ಅತ್ಯುತ್ತಮ ಫಲಿತಾಂಶ ಪಡೆದು ಬಂದ ಕಳೆದ ಹತ್ತು ವರ್ಷಗಳಲ್ಲೇ ಜತೆಯವರನ್ನು ಹಿಂದೆ ಹಾಕಿ, ಕ್ಯಾಪ್ಟನ್ ಪದವಿಗೇರಿದವ. ಸದ್ಯಕ್ಕೆ ಸಬ್‌ಮೆರೀನ್ ವಿಭಾಗವಲ್ಲದೇ, ನೌಕಾಪಡೆಯ ಗುಪ್ತಚರ ವಿಭಾಗದಲ್ಲೂ ಎಲ್ಲರಿಗೂ ಬೇಕಾದವ...

    ಹಿಂದಿನ ವಾರವಷ್ಟೇ ನೇವಿ ಬೇಸ್‌ನಲ್ಲಿ ತನ್ನ ಚೀಫ್ ಶಶಾಂಕ್ ಪಾಟೀಲ್ ನೆಡೆಸಿದ್ದ ಹೈ-ಲೆವೆಲ್ ಮೀಟಿಂಗಿನ ಪ್ರಕಾರವೇ ಇದುವರೆಗೂ ನೆಡೆದಿದೆ..ಎಲ್ಲರ ಸಹಕಾರವೂ ಸಿಕ್ಕಿದೆ..ಇನ್ನು ತನ್ನ ಮೇಲೆ ಹೆಚ್ಚು ಜವಾಬ್ದಾರಿ ಮತ್ತು ಅಪಾಯಕಾರಿ ಕರ್ತವ್ಯ ನಿರ್ವಹಣೆಯಿದೆ. ಅದನ್ನು ಮಾಡುವುದರಲ್ಲಿ ಸಾತ್ವಿಕ್‌ಗೆ ಭಯವಾಗಲೀ, ಅಪನಂಬಿಕೆಯಾಗಲೀ ಇರಲಿಲ್ಲ.,.ಕೇವಲ ಕುತೂಹಲವಲ್ಲದೇ ಒಂದು ಖಾಸಗಿ ಕೌಟುಂಬಿಕ ಕಾರಣವೂ ಅವನನ್ನು ಈ ಆಪರೇಶನ್ನಿನಲ್ಲಿ ಹುರಿದುಂಬಿಸಿ ಮುನ್ನುಗ್ಗಿಸುತ್ತಿದೆ..

    ‘ಅದನ್ನೆಲ್ಲಾ ಯೋಚಿಸಲು ಈಗ ಸಮಯವಲ್ಲಾ’ ಎಂದು ಓಡುತ್ತಲೇ ತಲೆ ಕೊಡವಿಕೊಂಡನು..ಶರ್ಟ್ ಬಿಚ್ಚಿ ಕತ್ತಿಗೆ ಕಟ್ಟಿಕೊಂಡನು. ಅಬ್ಬಾ ಸಮುದ್ರದ ಬದಿಯ ತೇವಾಂಶದ ಸೆಕೆ!..ಅವನ ನೇವಿ ಬೂಟ್ಸ್ ಚರಪರನೆ ಮರಗಿಡದ ಎಲೆಗಳು, ಪೊದೆಗಳನ್ನು ಮೆಟ್ಟುತ್ತಾ ದೌಡಾಯಿಸುತ್ತಿದೆ..‘ಅತಿ ವೇಗವೇನೂ ಬೇಕಿಲ್ಲ..ಅವರಿಬ್ಬರೂ ಪೇದೆಗಳು ಮತ್ತು ಡ್ರೈವರ್ ಎದ್ದೇಳಲೂ ಹದಿನೈದು ನಿಮಿಷ ಬೇಕೆಂದು ಲೆಕ್ಕ ಹಾಕಿದ್ದ, ಜತೆಗೆ ಅವರು ನೇರವಾಗಿ ಕಾರವಾರ ಬೇಸ್‌ಗೆ ಹೋಗಿ ರಿಪೋರ್ಟ್ ಮಾಡಿಕೊಳ್ಳಲು ನೇಮಿಸಲಾಗಿತ್ತು, ತನ್ನ ಹಿಂದೆ ಅಟ್ಟಿಸಿಕೊಂಡು ಬರಲು ಅಲ್ಲವಲ್ಲಾ?’

    ಯಾವಾಗಲೂ ಪರಿಶ್ರಮ ಪಟ್ಟು ದೇಹದಾರ್ಢ್ಯವನ್ನು ಕಾಪಾಡಿಕೊಂಡು, ಫಿಟ್ ಆಗಿರುತ್ತಿದ್ದ ಸಾತ್ವಿಕ್‌ಗೆ ಈ ಓಟ ಒಂದು ಸವಾಲೆನಿಸುತ್ತಿಲ್ಲ...ಉಟ್ಟ ಬಟ್ಟೆ ಬಿಟ್ಟರೆ ಅವನ ಬಳಿ ಬೇರೊಂದಿಲ್ಲ, ಯಾವುದೇ ಆಯುಧ, ವಯರ್ ಲೆಸ್ಸ್, ಮೊಬೈಲ್ ಫೋನ್?..ಊಹೂಂ!..ಯಾವ ಬಂಧಿಯ ಬಳಿ ಇದೆಲ್ಲಾ ಇರುತ್ತದೆ? ಎಲ್ಲಾ ನೈಜವಾಗಿಯೇ ಇರಬೇಕೆಂದು ನಿರ್ಧರಿಸಿದ್ದ ತಮ್ಮವರು ತನ್ನ ಜೇಬಿನಲ್ಲಿದ್ದ ಪರ್ಸಿನಲ್ಲಿ ತನ್ನ ಹೊಸ ಐಡಿ ಮತ್ತು ಐನೂರು ರುಪಾಯಿ ಚಿಲ್ಲರೆ ಮತ್ತು ತಿರುಪತಿ ವೆಂಕಟರಮಣನ ಚಿತ್ರ ಮಾತ್ರ ಇಟ್ಟು ಕಳಿಸಿದ್ದರು..’ಗೋವಿಂದಾ, ಇನ್ನೇನು ಐದು ನಿಮಿಷಕ್ಕೆ ತನಗೆ ಮಾಡಿದ್ದ ಪೂರ್ವ ನಿಯೋಜನೆ ಪ್ರಕಾರ ಸಿಗಬೇಕಾದವರು ಸಿಕ್ಕಲಿ ಎಲ್ಲಾ ಸರಿ ಹೋಗಲಪ್ಪಾ..." ಎಂದುಕೊಳ್ಳುತ್ತಾ ಒಮ್ಮೆ ಮರಗಳ ನಡುವೆ

    Enjoying the preview?
    Page 1 of 1