Discover millions of ebooks, audiobooks, and so much more with a free trial

Only $11.99/month after trial. Cancel anytime.

EVEREST IN MIND (KANNADA)
EVEREST IN MIND (KANNADA)
EVEREST IN MIND (KANNADA)
Ebook301 pages1 hour

EVEREST IN MIND (KANNADA)

Rating: 0 out of 5 stars

()

Read preview

About this ebook

ಜೀವನದಲ್ಲಾಗಲಿ, ಪ್ರಯಾಣದಲ್ಲಾಗಲಿ ನಮ್ಮ ಸ್ವಶಕ್ತಿಯ ಮೇಲೆ ನಮಗೆ ನಂಬಿಕೆ ಇರಬೇಕು, ಅದುಬಿಟ್ಟು ಏನುಮಾಡಿದರೆ ಏನಾಗುತ್ತ್ತೊ ಎನ್ನುವ ವ್ಯರ್ಥ ಯೋಚನೆಗಳನ್ನು ಮಾಡುವುದರಿಂದ ಯಾವುದೇ ಮೇಲು ಜರುಗುವುದಿಲ್ಲ. ಅವರ ಯೋಚನೆಗಳಲ್ಲಾಗಲಿ, ಕನಸುಗಳಲ್ಲಾಗಲಿ ಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಬಿಟ್ಟು ಯೋಚಿಸಲಾಗದ ಬದುಕುಕುಗಳು, ಹಸಿವಾದರೆ ಒಂದು ತುತ್ತು ಹೊಟ್ಟೆಗೆ ಅನ್ನ ಹಾಕಲು ಸಹಾ ಆಗದೇ ಇರುವವರು, ಎವರೆಸ್ಟ್ ಎನ್ನುವ ಪ

LanguageKannada
Release dateNov 27, 2022
ISBN9788195677351
EVEREST IN MIND (KANNADA)

Related to EVEREST IN MIND (KANNADA)

Related ebooks

Reviews for EVEREST IN MIND (KANNADA)

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    EVEREST IN MIND (KANNADA) - Sudheer Reddy Pamireddy

    ಪರ್ವತಾರೋಹಕನ ಯೋಚನೆಗಳು

    ಒಂದುಕಡೆಎತ್ತರವಾದ ಪರ್ವತಗಳು, ಮತ್ತೊಂದುಕಡೆ ಪ್ರಪಾಳ ಇವು ಎರಡೂ ಪ್ರಕೃತಿಯಲ್ಲಿ ಒಂದು ಭಾಗವೇ.  ಜೀವನದಲ್ಲಿ ಜ್ಞಾನ, ಮಾನವ ನೈಪುಣ್ಯಗಳ ಪಾತ್ರ ಪರ್ವತರೋಹಕರಲ್ಲಿ ತುಂಬಾ ಇರುತ್ತದೆ.  ನನಗೆ ಮಲೇಷಿಯಾದಿಂದ ದಿಢೀರಂತೆ ಫೋನ್ ಮಾಡಿ ಲೇಖಕರಾದಂತಹ ಪಾಮಿರೆಡ್ಡಿ ಸುಧೀರ್ ರೆಡ್ಡಿ ಅವರು ಬರೆದಿರುವ ಎವೆರೆಸ್ಟ್ ಇನ್‌ಮೈಂಡ್ ಪುಸ್ತಕವನ್ನು ಓದಿ ನನ್ನ ಅಭಿಪ್ರಾಯ ಹೇಳಲಿಕ್ಕೆ ಕೋರಿದರು.  ಈ ಪುಸ್ತಕವು ಓದುತ್ತಿದ್ದರೆ ಒಬ್ಬ ಪರ್ವತಾರೋಹಕನಾಗಿ ನನ್ನ ಮನಸಿಗೆ ತುಂಬಾ ಸಂತೋಷವಾಯಿತು.  ನಾನು ೧೯೯೭ರಿಂದಲೂ ರಾಕ್ ಕೈಂಬಿಂಗ್ ಶಿಕ್ಷಕನಾಗಿದ್ದೀನಿ. ೨೦೧೨ರಿಂದ ಪರ್ವತಾರೋಹಣದಲ್ಲಿ ಶಿಕ್ಷಣಕೊಡಲು ಆರಂಭಿಸಿದ್ದೇನಿ, ನಾನು ನನ್ನ ಸಂಸ್ಥೆಯಾದ ಟ್ರಾನ್ಸೆಂಡ್ ಅಡ್ವೆಂಚರ್ಸ್ ರಿಂದ ಶಾಕ್ ರಾಕ್ ಕ್ಲೈಂಬಿಂಗ್ ಮತ್ತು ಮೌಂಟನೀರಿಂಗ್ ಪ್ರಧಾನ ಕೋಚ್‌ನಾಗಿದ್ದೀನಿ.  ನಾನೇನು ಅನುಕೊಂಡಿದ್ದೇನೋ ಅದೇ ಆಗಿದೆ.  ನನ್ನ ಸಂಸ್ಥೆಯ ಪರವಾಗಿ ೨೦೧೪ರಲ್ಲಿ ಪೂರ್ಣ, ಮತ್ತು ಆನಂದ್‌ರವರ ಸಾಹಸವಾದ ಪ್ರಯಾಣದ ಆಪರೇಷನ್‌ನಲ್ಲಿ ನಾನು ಭಾಗಿಯಾಗಿದ್ದೇನಿ.  ಅವರಿಗೆ ತರಬೇತಿ ಕೊಡುವ ಪ್ರಾರಂಭ ದಿನದಿಂದ ಅವರು ಹಿಂತಿರಿಗಿ ಹೈದರಾಬಾದ್‌ಗೆ ಸೇರುವರೆಗೂ ನಾನು ಪ್ರಧಾನ ತರಬೇತಿದಾರನಾಗಿ ನನ್ನ ಕೆಲಸಕಾರ್ಯಗಳನ್ನು ನಿರ್ವಹಿಸಿದ್ದೀನಿ.  ಅಂದಿನ ಘಟನೆಗಳು, ಅನುಭವಗಳು, ನನಗೆ ತುಂಬಾ ಇಷ್ಟವಾದ ಸಿಹಿ ನೆನಪುಗಳೇ ಆಗಿರುತ್ತವೆ.  ಕೆಲವೊಂದು ಘಟನೆಗಳನ್ನು ಬೇಗ ಮರೆಯುವೆ.  ಕೆಲವು ಮರೆಯಲಾರವು.  ನನ್ನ ಜೀವನದ ಬದಲಾವಣೆಗೆ ಹೆಜ್ಜೆ ಕೊಟ್ಟ ಘಟನೆಗಳು ಮರೆಯಲಾರದ ವಿಷಯಗಳಾಗಿರುತ್ತವೆ.  ನಾನು ವಿದ್ಯಾರ್ಥಿಯರಿಗೆ ಕೋಚ್‌ನಾಗಿ ವ್ಯವಹರಿಸಿದ ಎಂಟು ತಿಂಗಳ ಕಾಲದಲ್ಲಿ ಟ್ರಾನ್ಸೆಂಡ್ ಅಡ್ವೆಂಚರ್ಸ್ ಎಷ್ಟೊ ನೂತನ ಯೋಚನೆಗಳು ಜಾರಿಗೆ ತಂದವು.  ಕ್ಲಿಷ್ಟತರವಾದ ಶಿಕ್ಷಣದಲ್ಲಿ ಸಹಾ ಭಾಗವಹಿಸಿದ್ದೀವಿ. ಆನಂದ್, ಪೂರ್ಣರವರು ಸ್ವಲ್ಪ ವ್ಯವಧಿಯಲ್ಲೇ ಮೌಂಟ್  ಎವರೆಸ್ಟ್ ಅನ್ನು ಅಧಿರೋಹಿಸಿ, ಪ್ರಪಂಚ ರೆಕಾರ‍್ಡ್ ಸೃಷ್ಟಿಸಿ ಎಲ್ಲರನ್ನು ಆಶ್ಚರ್ಯರಾಗಿ ಮಾಡಿದರು.

    ಪೂರ್ಣ, ಆನಂದ್‌ರವರ ಯಾತ್ರೆ ನನ್ನ ಜ್ಞಾಪಕಗಳಲ್ಲಿ ಪ್ರತ್ಯೇಕತೆಯನ್ನು ಹೊಂದಿದೆ.  ಇವರು ಕೇವಲ ಮೌಂಟ್ ಎವರೆಸ್ಟ್ ಅಲ್ಲದೆ, ಈ ಭೂಮಿಯ ಮೇಲೆ ಇರುವ ಎಲ್ಲಾ ಶಿಖರಗಳನ್ನೂ ಏರಳಷ್ಟು ಬಲ ಇವರಲ್ಲಿದೆ. ಅದನ್ನು ಮಾಡಿತೋರಿಸಿದರು ಕೂಡಾ. ಆಗ ನನಗೆ ಅರ್ಥವಾಗಿರಲಿಲ್ಲ ಒಳ್ಳೆಯ ಜೆಮ್ಸ್ ಅಂತ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದೇನೆಂದು.ಅವರು  ಈಗ ಜಗತ್ತಿನಲ್ಲೆ ವಿಭಿನ್ನ ಯೋಚನೆಗಳನ್ನ ಇಟ್ಟುಕೊಂಡಿದ್ದ ವ್ಯಕ್ತಿಗಳಾಗಿ ಹೆಸರುವಾಸಿಯಾಗಿದ್ದಾರೆ.

    ಈ ಅನೂಹ್ಯವಾದ ಕಾರ್ಯವು ಸುನಾಯಾಸವಾಗಿ ಪೂರ್ತಿ ಮಾಡುವುದರಿಂದ ಇಡೀ ಪ್ರಪಂಚ ದೃಷ್ಟಿಯನ್ನು ಅವರಕಡೆ ತಿರಿಗಿಸಿಕೊಂಡರು.  ಶೋಷಣೆಯ ವರ್ಗದ ಕಡೆಯಿಂದ ಬಂದಿರುವ ವ್ಯಕ್ತಿಗಳಾಗಿ ಬಂದು ಅವರ ಬಾಧೆಗಳನ್ನೆಲ್ಲಾ ಹಿಂದೆ ಹಾಕ್ಕೊಂಡು ಭಾರ ಆಗದಂತೆ ಜ್ಞಾನದ ದೀಪಗಳನ್ನು ಹಚ್ಚಿದರು. ಜೀವಿತಗಳನ್ನು ಬಹಳ ವೇಗದಿಂದ ಮಿಂಚಿನಂತೆ ಕದಲಿಸಿದರು.  ಶೋಷಣೆಯ ಮಕ್ಕಳಿಗೆ ಅವಕಾಶಗಳು ಬಂದ್ರೆ, ಅವರ ಮನಸ್ಸನ್ನು ಗುಂಪಾಲಿಸುವ ಕಡೆ ತಿರಿಗಿಸಿ, ಅಂಕಿತಭಾವದಿಂದ ಕೃಷಿಮಾಡುತ್ತಾರೆಂದು ಅರ್ಥವಾಗುತ್ತದೆ.  ಇದೊಂದು ಸ್ವಪ್ನದ ತರಹ ನಾನು ಭಾವಿಸುತ್ತೇನೆ.  ಬರಹಗಾರರಾದ ಡಾ. ಸುದೀರ್ ರೆಡ್ಡಿ ಸಾಮಿರೆಡ್ಡಿ ಎವರೆಸ್ಟ್ ಇನ್‌ಮೈಂಡ್, ಪುಸ್ತಕವನ್ನು ಬರೆಯುವುದರಲ್ಲಿ ಬಹಳಷ್ಟು ದೊಡ್ಡ ದೀಕ್ಷೆ ,ಶ್ರದ್ಧೆಯನ್ನಿಟ್ಟರು.  ಯಾತ್ರೆ ಪ್ರಾರಂಭವಾದ ದಿನದಿಂದ ಕೊನೆಯಾಗುವವರೆಗೂ ನಮ್ಮ ಜೊತೆಯಲ್ಲೇ ಇದ್ದು ವಿಷಯಗಳನ್ನು ತಿಳಿಕೊಂಡು ಬರೆದಿದ್ದಾರೆ ಅನ್ನುವ ತರಹ ವಿಷಯಗಳನ್ನ ಶೇಕರಿಸಿಕೊಂಡರು.  ಇದೊಂದು ದೃಶ್ಯಕಾವ್ಯವಾಗಿ ಬರೆದಿರುತ್ತಾರೆ ಅಲ್ಲಿ ನಡೆದಿರುವ ಪ್ರತಿಯೊಂದು ನಿಮಿಷ ನಿಮಿಷದ ಸಂಗತಿಗಳನ್ನು ಬರೆದಿರುವುದು ಆಶ್ಚರ್ಯ ಅನಿಸುತ್ತದೆ.  ಸಾಹಸವಾದ ಯಾತ್ರೆ ಆದ ಮೌಂಟನೀರಿಂಗ್‌ನಲ್ಲಿ ನಿಮಿಷಗಳ ವಿವರಗಳನ್ನ ಸಹಾ ಬರೆದಿರುವುದು ಅದ್ಭುತ ಅನಿಸಿತು.  ಶಿಕ್ಷಣದಲ್ಲಿ ನೇಮಕ, ತಂದೆ ತಾಯಿಯರ ಪ್ರೀತಿ, ಭಾವೋದ್ವೇಗಗಳು, ಪ್ರತಿಯೊಂದು ಮನುಷ್ಯ ಎದುರಿಸುವ ಸೋಲಿನ ಭಯದ ವಿಷಯಗಳನ್ನ ವಿವರಣಾತ್ಮಕವಾಗಿ ಬರೆದಿದ್ದಾರೆ.  ಹಿಮಾಲಯ ಪರ್ವತಗಳಲ್ಲಿರುವ ಹವಾಮಾನ, ಪ್ರಮಾದಗಳು, ಹಿಮಾಲಯಗಳ ವೃಕ್ಷಗಳಸಂಗತಿಗಳು, ಮನೋಹರ ಪ್ರಕೃತಿ ಪರ್ವತಾರೋಹಕರ ಜೀವನದಲ್ಲಿ ಷೆರ್ಫಾ ಗಳ ಪಾತ್ರ, ಪೂರ್ಣ ಶಿಭಿರಾಗ್ರ ಅನುಭೂತಿಯನ್ನು ಸಮಗ್ರವಾಗಿ, ತುಂಬಾ ಆಸಕ್ತಿಯಿಂದ ಬರೆದಿದ್ದಾರೆ.  ಸುಧೀರ್ ರೆಡ್ಡಿ ಪಾಮಿರೆಡ್ಡಿರವರು ದೊಡ್ಡ ಸಂಶೋಧಕರು.  ಒಂದು ಪ್ರತ್ಯಕ್ಷವಾದ ಯೋಚನೆಗಳಿಟ್ಟುಕೊಂಡಂತಹ ವ್ಯಕ್ತಿ.  ಸತ್ಯಾನ್ವೇಷಣದಲ್ಲಿ ಪ್ರಯಾಣವನ್ನು ಗಂಭೀರವಾಗಿ ಪ್ರಾರಂಭಿಸಿ, ಸ್ಪಷ್ಟವಾಗಿ ಮುಗಿಸಿದರು.  ಈ ಪುಸ್ತಕದಲ್ಲಿರುವ ಎಲ್ಲಾ ಪಾತ್ರಗಳನ್ನೂ ಮಾನವತ್ವದಿಂದ ಸೃಷ್ಟಿಸಿದ್ದಾರೆ.  ಈ ಗ್ರಂಥದಲ್ಲಿ ಡಾಕ್ಟರ್ ಅಂಬೇಡ್ಕರ ಸ್ವಪ್ನಗಳು, ಎಸ್.ಆರ್. ಶಂಕರನ್ ರವರ ಶ್ರದ್ಧೆ.  ಡಾ. ಆರ್. ಎಸ್. ಪ್ರವೀಣ್ ಕುಮಾರ್‌ರವರ ಬಹುದೊಡ್ಡ ಪಾಲು ಕೃಷಿಯನ್ನು ಸಮಾಜ ಕಲ್ಯಣ ಇಲಾಖೆ ಸಂಸ್ಥೆಗಳ ಅಲೋಚನಾ ವಿದಾನವೂ ಎಲ್ಲಾ ವಿಷಯಗಳನ್ನು ಕಣ್ಣಿಗೆಕಟ್ಟಿದಂತೆ ಬರೆದಿದ್ದಾರೆ.

    ಪೂರ್ಣ, ಆನಂದ್ ಶಿಕ್ಷಕರಾದ  ಶೇಖರ್ ಬಾಬು, ವಿಂಗ್ ಕಮಾಂಡರ್ ಶ್ರೀಧರನ್, ಯೋಗಾ ಟೀಚರ್ ARJವೇಣುಗೋಪಾಲಚಾರ್ಯರು.  ಪೂರ್ಣಗೆ ಹದಿಮೂರು ವರ್ಷಗಳೇ ಇರುವುದರಿಂದ ಎಸ್ಕರ್ಟ್ ರಾಗಿ ಹೋಗಿದ್ದ ಬನಾವತ್ ಸುರೇಖ ಟೀಚರ್, ಮತ್ತೆ ರಾಳ್ಳಬಂಡಿ ಶ್ರೀಲತ ರವರು, HMIಡಾರ್ಜಲಿಂಗ್ ಗೆ  ಸಂಬಂಧಿಸಿದ ಕೋರ‍್ಸ್ ಡೈರೆಕ್ಟರ್ ರೋಷನ್ ಗಹಟ್ರಾಜ್‌ರವರನ್ನು ಗುರ್ತಿಸಿ ಪುಸ್ತಕದಲ್ಲಿ ಚಿತ್ರಗಳಾಗಿ ಇಟ್ಟಿರುವುದು ಅವರ ಕೃಷಿಗೆ ನಿದರ್ಶನ ಎಂದು ಹೇಳಬಹುದು.

    ಕಾಡಿನ ಮಗಳಾಗಿ ಪೂರ್ಣ ಬಾಲ್ಯ ಸ್ಮೃತಿಗಳನ್ನು ಕಥೆಯ ರೂಪದಲ್ಲಿ ತೋರಿಸಿರುವ ವಿಧಾನವು ಬಹುದೊಡ್ಡ ಅನುಭೂತಿಯನ್ನು ಕೊಡುತ್ತೆ.ನಭೂತೋ ನಭವಿಷ್ಯತಿ, ಭಾರತದೇಶದ ಚಾರಿತ್ರಿಕವಾದ ಅಂಶಗಳನ್ನು, ಬಂಜಾರರ ಚರಿತ್ರೆಯನ್ನು ವಿವರಿಸುವ ವಿಧಾನದಲ್ಲಿ ಬರಹಗಾರ ಚರಿತ್ರೆಯನ್ನು ಎಷ್ಟು ಶೋಧಿಸಿ, ಅಧ್ಯಯನ ಮಾಡುತ್ತಿರುತ್ತಾರೆ ಎಂದು ನಮಗೆ ಅವರ ಪುಸ್ತಕಗಳನ್ನು ಓದಿದರೆ ಅರ್ಥವಾಗುತ್ತೆ.

    ನಾನು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟಿದ್ದೀನಿ.  ಅವರಲ್ಲಿ ಜಾಸ್ತಿ ಮಂದಿ ಎವರೆಸ್ಟ್ ಮತ್ತು ಪ್ರಪಂಚದಾದ್ಯಂತ ಇರುವ ಪರ್ವತಗಳನ್ನು ಅಧಿರೋಹಿಸಿದ್ದಾರೆ.  ಇಲ್ಲಿ ಕೋಚ್ ಆಗಿ ನನ್ನ ಪಾತ್ರವನ್ನು ಆಸಕ್ತಿಯಿಂದ ಬರೆಯಲು ನೋಡಿದರೆ ಲೇಖಕರಲ್ಲೂ ಸಹಾ ದೊಡ್ಡ ಕೋಚ್ ಇದ್ದಾನೆಂದು ಭಾವಿಸುತ್ತೇನೆ. ಇವರು ನನ್ನನ್ನು ಭೇಟಿ ಸಹಾ ಆಗಿರಲಿಲ್ಲ.  ನಮ್ಮಿಬ್ಬರ ಮಧ್ಯೆ ಫೋನ್ ಸಂಭಾಷಣೆಯು ಸಹಾ ಇಲ್ಲ. ಆದರೂ ಸಹಾ ನಾನು ನನ್ನ ವಿದ್ಯಾರ್ಥಿಗಳಿಗೆ ಪ್ರೇರಣ ನೀಡಿರುವ ಮಾತುಗಳನ್ನು ೯೦% ಉಪಯೋಗಿಸಿ ಪ್ರಸ್ತಕ ಪ್ರೇಮಿಗಳಿಗೆ ಉತ್ಸಾಹವನ್ನು ತುಂಬುವ ತರಹ ಬರೆದಿದ್ದಾನೆ.  ಈ ಪುಸ್ತಕವನ್ನು ಓದಿದರೆ ಯಾರಿಗಾದರೂ, ಉತ್ಸಾಹ, ಆತ್ಮವಿಶ್ವಾಸ, ಅಂಕಿತಭಾವ, ಮನಸ್ಸು ದೃಢವಾಗಿರುತ್ತದೆ ಎಂದು ಹೇಳಬಹುದು.  ಈ ಪ್ರಸ್ತಕವು ಅಸಾಧ್ಯವಾದಂತಹ ವಿಷಯಗಳನ್ನು ಸುಸಾಧ್ಯಮಾಡಬೇಕೆಂಬ ಆತ್ಮವಿಶ್ವಾಸವನ್ನು ತುಂಬಿಕೊಡುತ್ತದೆ.  ‘ಎವರೆಸ್ಟ್ ಇನ್‌ಮೈಂಡ್’ ಓದಿದನಂತರ, ಪ್ರತಿಯೊಬ್ಬ ವ್ಯಕ್ತಿ ನಾನು ವಿದ್ಯಾರ್ಥಿಯಾಗಿ ಬದಲಾವಣೆ ಆಗಿ ಪೂರ್ಣ ತರಹಾ ಯಶಸ್ಸನ್ನಮಾಡಬೇಕೆಂದು ಬಯಸುತ್ತಾನೆ. ಪೂರ್ಣತನ್ನ ಜೀವನದಲ್ಲಿ ನೂತನ ಗುರಿಗಳನ್ನ ಮುಟ್ಟಬೇಕೆಂದು ನಾನು ಭಾವಿಸುತ್ತೇನೆ.  ಲೇಖಕರರಾದ  ಪಾಮಿರೆಡ್ಡಿ ಸುಧೀರ್ ರೆಡ್ಡಿರವರಿಗೆ  ನನ್ನ ಹೃತ್ಪೂರ್ವಕ ಶುಭಾಶಯಗಳು.

    ಪರಮೇಷ್ ಕುಮಾರ್ ಸಿಂಗ್

    ರಾಕ್ ಕ್ಲೈಂಬಿಂಗ್ ಮತ್ತು ಮೌಂಟನೀರಿಂಗ್ ಕೋಚ್

    ಹೈದರಾಬಾದ್, ತೆಲಂಗಾಣ, ಭಾರತದೇಶ.

    ವಳ ಆಟೋಗ್ರಾಫ್

    ಒಂದು ಪರಿಪೂರ್ಣವಾದ ವಿಜಯದ ಪ್ರತೀಕ

    ಕೆಲವು ಲಕ್ಷಾಂತರ ಜನರಲ್ಲಿ ಅವಕಾಶವು  ನಮ್ಮಮನೆ ಬಾಗಿಲಿಗೆ ಬಂದಿದೆ.  ತಲೆಮಾರಿಗಳಿಂದ ಬಂದಂತಹ ಅಸಮಾನತೆಯನ್ನು ಹೋಗಲಾಡಿಸಿ  ಸಮಾನತೆ ತೋರಿಸುವ ಅವಕಾಶ  ನನಗೆಸಿಕ್ಕಿತು.  ನೀವು ನನ್ನನ್ನು ಆಶೀರ್ವದಿಸಿ ಕಳುಹಿಸಿ ಕೊಡಿ, ನಿಮ್ಮ ಆಶೀಸ್ಸುಗಳಿಂದ ನಾನು ಸುರಕ್ಷಿತವಾಗಿ ಹಿಂತಿರುಗುತ್ತೇನೆ.  ದಯವಿಟ್ಟು ನನ್ನನ್ನು ಕಳುಹಿಸಿ  ನಾನು ಹೋಗುತ್ತೇನೆ.  ಈ ಮಾತುಗಳನ್ನು ಆಡಿದವರು ಯಾರೋ ಅಲ್ಲ ,  ೧೩ ವರ್ಷದ ಮಲಾವತ್ ಪೂರ್ಣ ಹೇಳಿದ ಮಾತುಗಳು. ತಾನು ಹೋಗುತ್ತಿರುವುದು ಶಾಲೆಗೋ,  ವಿಹಾರಕ್ಕೋ ಅಲ್ಲ.  ಮೌಂಟ್ ಎವರೆಸ್ಟ್ ಏರಲು ಹೊರಟಿದ್ದಾಳೆ.  ಅನೇಕ ತಲೆಮಾರುಗಳಿಂದ ನಮ್ಮ ಜನಾಂಗವು ಏನನ್ನೂ ಸಾಧಿಸದಿದ್ದಲೇ ನಿರ್ಜೀವವಾಗಿದ್ದಾರೆ ನಾನು ಸಾಧಿಸುತ್ತೇನೆ.  ಯಶಸ್ಸು ಸಾಧಿಸಲು ತಾಳ್ಮೆ,, ಧೈರ್ಯವಿರಬೇಕೇ ಹೊರೆತು ಜಾತಿ, ಧರ್ಮ, ವರ್ಗ, ಲಿಂಗ ಬೇದಗಳಲ್ಲ ಎಂಬುದನ್ನು ಸಾಬೀತು ಪಡಿಸಲು ಅಂತಹ ದೊಡ್ಡ ಸಾಧನವನ್ನು ಸಾಧಿಸಲು ಅವಳು ತನ್ನ ಪ್ರಾಣವನ್ನು ಪಣಕ್ಕಿಡಲು ಸಿದ್ಧಳಾದಳು. ಕಡುಬಡತನದಲ್ಲಿ ಬದುಕುತ್ತಿರುವ ಬುಡಕಟ್ಟು ಹುಡುಗಿಯೊಬ್ಬಳ ಯಶಸ್ಸಿನ ಗಾಥೇ, ಸುಧೀರ್ ರೆಡ್ಡಿ ಪಾಮಿರೆಡ್ಡಿರವರು ಬರೆದ ಎವರೆಸ್ಟ್ ಇನ್‌ಮೈಂಡ್.  ಪುಸ್ತಕದ ಹೆಸರಲ್ಲೇ ಒಂದು ಆಕರ್ಷಣೀಯ ಶಕ್ತಿ ಇದೆ.  ಈ ಪುಸ್ತಕದ ಲೇಖಕರು ಸುಧೀರ್ ರೆಡ್ಡಿ  ಪಾಮಿರೆಡ್ಡಿರವರು ನನಗೆ ಗೊತ್ತಿರುವ ಮಟ್ಟಿಗೆ ಬಹಳ ವಿಸ್ತೃತವಾದ ಅಧ್ಯಯನಶೀಲಿ.  ಇವರು ತೆಲುಗು, ಇಂಗ್ಲೀಷ್, ಸಾಹಿತ್ಯಗಳನ್ನು ಮತ್ತು ವಿಜ್ಞಾನಶಾಸ್ತ್ರಗಳನ್ನೂ ಬಹಳಷ್ಟು ಅಧ್ಯಯನ ಮಾಡಿದ್ದಾರೆ.  ಅವುಗಳ ಜೊತೆಗೆ ಇತಿಹಾಸವೂ ವಿಶೇಷವಾಗಿ ಓದಿದ್ದಾರೆ.  ಓದಿರುವ ವಿಷಯಗಳನ್ನು ಅರಗಿಸಿಕೊಂಡು  ಹೇಗೆ  ಅದನ್ನು ವ್ಯಕ್ತಪಡಿಸ ಬೇಕು ಎಂದು ತಿಳಿದಿರುವ ನುರಿತ ವ್ಯಕ್ತಿ. ಅವರು ಭೌತಿಕವಾಗಿ ಭಾರತದಿಂದ ದೂರವಾಗಿದ್ದರೂ, ಒಬ್ಬ ಭಾರತೀಯನಾಗಿ, ಒಬ್ಬ ತೆಲುಗು ಪ್ರೇಕ್ಷಕನಾಗಿ, ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿ, ಒಬ್ಬ ವಾಗ್ಮಿಯಾಗಿ ನಮಗಿಂತಲೂ ಹತ್ತಿರವಾಗಿ ಬಿಡಿಸಲಾಗದ ಅನುಬಂಧವನ್ನು ಇಟ್ಟುಕೊಂಡು ಬದುಕುತ್ತಿದ್ದಾರೆ.  ಅವರಮಾತು, ಅವರ ಪ್ರತಿಸ್ಪಂದನೆ ಅವರೊಂದಿಗೆ ಒಡೆನಾಟವಿದ್ದವರಲ್ಲಿ ನಾನೂ ಒಬ್ಬನಾಗಿ ಹೇಳುತ್ತಿದ್ದೇನೆ.  ಅಸ್ಪೃಶ್ಯತಾ ಜಾಢ್ಯವನ್ನು ನೀಗಿಸಲು ಕೃಷಿಮಾಡುತ್ತಿರುವ ದಾರ್ಶನಿಕರು.  ಡಾ.ಬಿ.ಆರ್. ಅಂಬೇಡ್ಕರ್‌ರವರ ಆಶಯಗಳನ್ನು ಪ್ರಚಾರಮಾಡಲು ಪಾತ್ರಧಾರಿಯಾಗಿತ್ತಿರುವುದು ನಾನು ಗಮನಿಸುತ್ತಿದ್ದೇನೆ.  ಅದರಲ್ಲಿ ಒಂದು ಭಾಗವಾಗಿ ಅವರು ಈ ಪುಸ್ತಕವನ್ನು ಬರೆದಿರಬಹುದು ಎಂದು ನಾನಂತೂ ಭಾವಿಸುತ್ತೇನೆ.

    ಈ ಪುಸ್ತಕವನ್ನು ಓದುವಾಗ ತುಂಬಾ ಭಾವುಕನಾದೆ.  ಪೂರ್ಣ ಒಂದು ಆದಿವಾಸಿ ಕುಟುಂಬದಿಂದ ಬಂದಿರುವ ಹೆಣ್ಣು ಆ ತಾಯಿ ಹೇಗೆ ಏಳು ಶಿಖರಗಳನ್ನು ಏರಿದಳೋ ಗೊತ್ತಿಲ್ಲ.  ಈ ಪುಸ್ತಕವನ್ನು ಓದುತ್ತಿರುವಾಗ ನಾನೇ ಎವರೆಸ್ಟ್ ಶಿಖರವನ್ನು ಹತ್ತಿರುವನೆಂಬ ಭಾವನೆ ನನಗಾಯಿತು.  ಆ ಹುಡುಗಿಯೇ ನನ್ನನ್ನು ಎವರೆಸ್ಟ್ ಶಿಖರದ ಮೇಲೆ ಸಿಂಹಾಸನ ಹಾಕಿ ಕುಂಡಿರಿಸಿದರು ಎನ್ನುವ ಭಾವನೆ ನನಗಾಯಿತು.  ಈ ಪುಸ್ತಕ ಓದುತ್ತಿರುವಾಗ ಒಬ್ಬ ಮಹಾ ಸಾಹಿಸಿಯರ ಜೀವನ ಚರಿತ್ರೆಯನ್ನು ಓದುವುದಂತೆ ಅನಿಸಿತು.  ಒಂದು ಅದ್ಭುತವಾದ ಪ್ರಪಂಚವು ನಮ್ಮ ಕಣ್ಣುಗಳ ಮುಂದೆ ಪ್ರತ್ಯಕ್ಷ ಮಾಡಿಸಿದರೆಂತೆ ಇತ್ತು.  ಪುಸ್ತಕವನ್ನು ಓದುವವರಿಗೆ ಒಂದು ಚರಿತ್ರೆಯನ್ನು, ಕಾದಂಬರಿಯನ್ನು ಮಿಳತವಾಗಿ ಓದುತ್ತಿರುವಂತೆ ಅನಿಸಿತು.

    ಯಾನಾದಿಯರು, ಟ್ರೈಬಲ್ ಕ್ರಿಮಿನಲ್ ಯಾಕ್ಟ್ ಕುರಿತು ವೆನ್ನೆಲಕಂಟಿ ರಾಘುವಯ್ಯ, ಆದಿವಾಸಿಯರ ಬಗ್ಗೆ ಕುರಿತು, ಡಾ. ಡಿ.ಬಿ. ನಾಯಕ್ ಮುಂತಾದರವರು  ಸಂಶೋಧನಾತ್ಮಕ ರಚನೆಗಳು ಮಾಡಿದ್ದಾರೆ.  ಈ ವಿಷಯಗಳೆಲ್ಲದೇ ಅನೇಕ ವಿಷಯಗಳು ತುಂಬಾ ನಿಯತ್ತಾಗಿ ಪ್ರಸ್ತುತಪಡಿಸಿದ್ದಾರೆ ಲೇಖಕರು.  ಈ ಪುಸ್ತಕ ಬರೆಯುವುದಕ್ಕಿಂತ ಮುಂಚೆನೇ ಪೂರ್ಣ ಮಾಡಿರುವ ವಿಜಯಗಳನ್ನು ಕುರಿತು  ಹಿಂದೀ, ತೆಲುಗು, ಆಂಗ್ಲ ಭಾಷೆಗಳಲ್ಲಿ ಚಲನಚಿತ್ರಗಳು ಸಹಾ ತೆಗೆದಿದ್ದಾರೆ.Poorna (the youngest girl in the world to scale mount Everest) ಎಂಬ ಪೆಸರಿನ ಮೇಲೆ ಅಪರ್ಣ ತೋಟರವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಅದಕ್ಕೆ ತೆಲುಗು ಅನುವಾದವೂ ಸಹಾ ಬಂದಿದೆ, ಅವೆಲ್ಲಾ ಪರ್ಸ್ತುತಪಡೆಸುವುದು ನನ್ನ ಉದ್ದೇಶವಲ್ಲ.ಲೇಖಕರಾದ ಪಾಮಿರೆಡ್ಡಿ ಸುಧೀರ ರೆಡ್ಡಿರವರು ಕೇವಲ ಈ ಪುಸ್ತಕವನ್ನು ಎವರೆಸ್ಟ್ ಶಿಖರವನ್ನು ಏರುವುದರಷ್ಟಕ್ಕೆ ಮಾತ್ರ ಸೀಮಿತಗೊಳಿಸಿ ಬರೆಯುವುದರಲ್ಲಿ ಮಾತ್ರ ಅಲ್ಲದೆ ಅದರ ಹಿಂದೆ ಯಾವುದೋ ದೊಡ್ಡ ಕಾರಣ ಇರಬಹುದೆಂದು ಅನಿಸುತ್ತದೆ.  ಆದುದರಿಂದ ಈ ಪುಸ್ತಕವನ್ನು ಓದಿದನಂತರ ನನಗನಿಸಿರುವ ಅನಿಸಿಕೆಗಳನ್ನು ಹಂಚುಕೋಬೇಕೆಂದು ಅನಿಸುತ್ತಿದೆ.

    ಇವರ ಬರಣಿಗೆಯ ಶೈಲಿ ಯಾರನ್ನಾದರೂ ಇವರಕಡೆ ಗಮನ ಸೆಳೆಯುವಂತೆ ಇರುತ್ತದೆ.  ಕಾಡಿನಲ್ಲಿ ಮಗಳು ಕಳೆದುಹೋದಾಗ ಪೂರ್ಣಳನ್ನು ಅವರ ತಂದೆ ಹುಡುಕುತ್ತಿರುವಾಗ ದೃಶ್ಯವನ್ನು ವಿವರಿಸುತ್ತಾರೆ.  ನೆರಳು ತನ್ನ ಮಗುವಿನ ಯೋಗಕ್ಷೇಮವನ್ನು ಕೋರಿ ತನಗಿಂತಲೂ ಮುಂದೆ ಓಡುತ್ತಿದೆ ಅಂತ ಬರೆಯುತ್ತಾರೆ ಈ ರಚನೆಯಲ್ಲಿ ವಿವರಿಸಿದ ಕಾಡು, ಕಾಡಿನಲ್ಲಿರುವ ಮರಗಳು, ಪಕ್ಷಿಗಳು, ಪ್ರಾಣಿಗಳು ಅವುಗಳ ವರ್ತನೆಗಳನ್ನು ಆಳವಾಗಿ ಗಮನಿಸಿದರೆ ಹೊರತು, ಅವುಗಳ ನಡವಳಿಕೆಗಳನ್ನು ಅಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಈ ವರ್ಣನೆಗಳು ಪೂರ್ಣ ಜೀವನಶೈಲಿಯನ್ನುವಾಸ್ತವಿಕವಾಗಿ  ಇದ್ದು ಆತ್ಮೀಯತೆಯನ್ನು ಉಂಟುಮಾಡುತ್ತವೆ. ಪೂರ್ಣಳನ್ನು ತಂದೆ  ಹುಡುಕುವುದರಲ್ಲಿ ಮಾಡಿರುವ ವರ್ಣನೆಗಳು ಡಾ. ಕೇಶವರೆಡ್ಡಿರವರು ಬರೆದಿರುವ ಕಾದಂಬರಿ ಅತಡು ಅಡವಿನಿ ಜಯಿಂಬಾಡು" ಕಾದಂಬರಿಯನ್ನ ನೆನಪಿಗೆ ತರುತ್ತದೆ.

    ಹಿಮಾಲಯ ಪರ್ವತ ಮೇಲೆ ಹೆಜ್ಜೆ ಇಟ್ಟಿದ ಪೂರ್ಣ ತನ್ನ ಮನಸ್ಸಿನಲ್ಲಿರುವ ಬಯಕೆಗಳನ್ನು ಲೇಖಕರು ಅರಿದು ಆ ವಿಷಯಗಳನ್ನು ಈ ತರಹ ಹೇಳೀಕೊಳ್ಳುತ್ತಾರೆ.  ಬೆಳಗಿನ ಜಾವ ಆಕಾಶವು ನೀಲಮಣಿಗಳಂತೆ ಇರುವ ನಕ್ಷತ್ರಗಳಿಂದ ತುಂಬಿ ಬಹಳ ಅಂದವಾಗಿ ಮಿಂಚುತ್ತಿದೆ. ಅಲ್ಲಿಗೆ ಬೇಗ ತಲುಪಿ ನಕ್ಷತ್ರಗಳನ್ನು ಮುಟ್ಟಿದರೆ ಎಷ್ಟು ಸಂತೋಷವಾಗುತ್ತದೆ ಎಂದು ಮನಸುನಲ್ಲಿ ಅನುಕೊಳ್ಳುತ್ತಾಳೆ ಅದು ಎಷ್ಠು ಅದ್ಭುತವಾದ ಕಲ್ಪನೆಯಲ್ಲವೆ.

    ದಲಿತರು, ಆದಿವಾಸಿಗಳು ಶೂದ್ರರು ಹೀಗೆ ಅನೇಕ ಜಾತಿಗಳ ಬಗ್ಗೆ ಇತಿಹಾಸಕಾರರು ಇವರ ಚರಿತ್ರೆಗಳನ್ನು ಕಟ್ಟುವಲ್ಲಿ ಸರಿಯಾದ ದೃಷ್ಟಿಕೋನನನ್ನು ಅನುಸರಿಸಲಿಲ್ಲ.  ಅದನ್ನು ಭರ್ತಿಮಾಡಬೇಕಾಗಿರುವ ಅವಶ್ಯಕತೆ ಇದೆ.  ಸ್ವಲ್ಪ ಈಗ ಈ ರಚನೆಯಲ್ಲಿ ಭರ್ತಿ ಆಗಿದೆ ಎಂದು ಅನಿಸುತ್ತದೆ.  (ಬುಡಕಟ್ಟು) ಜನಾಂಗದವರು ಗಿರಿಜನರು ಈ ದೇಶಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ.  ಸಾಧಾರಣ ಇತಿಹಾಸಕಾರರಿಂದ, ನಿರ್ಲಕ್ಷಿಸಲ್ಪಟ್ಟ ಮತ್ತು ಕತ್ತಲೆಯಲ್ಲಿ ಮರೆಮಾಚಿಸಲ್ಪಟ್ಟಿದ ಇತಿಹಾಸಿಕ ದೃಷ್ಟಿಕೋಣವನ್ನು  ಪೂರ್ಣ ಅವರತಂದೆ ದೇವಿದಾಸ್ ಮೂಲಕ ಹೇಳಿಸಿದ್ದಾರೆ, ಚರಿತ್ರೆಯನ್ನುಪುನರ್ನಿರ್ಮಾಣ ವಾಗವಾಗಬೇಕೆಂಬುವುದು ಇದರ ಅರ್ಥ,ಇದು ಲೇಖಕರ ದೃಷ್ಟಿಕೋನವನ್ನು ತೋರಿಸುತ್ತದೆ.  ಪೂರ್ಣ ತನ್ನ ಜೀವನವನ್ನು ಯಶಸ್ಸಿನ ಹಾದಿಯಲ್ಲಿ ನಡೆಸುವುದರಲ್ಲಿ I.P.S. ಆಫೀಸರ್ ಆರ್.ಎಸ್. ಪ್ರವೀಣ್ ಕುಮಾರರವರನ್ನು ಕರ್ಮಯೋಗಿ ಎಂದು ವರ್ಣಸಿದರುವುದು,  ಜೊತೆಗೆ ಅವರ ಉಲ್ಲೇಖವನ್ನು ಸೂಕ್ತ ಎನಿಸಿತು.  ಜೊತೆಗೆ ಈ ಪುಸ್ತಕಕ್ಕೆ ಶ್ರೀಮಂತಿಕೆಯನ್ನು ಸಹಾ ಆ ವಿಷಯಗಳು ಎಡಮಾಡಿಕೊಟ್ಟವು.  ಲೇಖಕರು ಯಾವುದೇ ರಾಜಕೀಯ ಸಿದ್ಧಾಂತಗಳಿಗೆ

    Enjoying the preview?
    Page 1 of 1