Discover millions of ebooks, audiobooks, and so much more with a free trial

Only $11.99/month after trial. Cancel anytime.

Anivaasigale Vaasi!
Anivaasigale Vaasi!
Anivaasigale Vaasi!
Ebook149 pages45 minutes

Anivaasigale Vaasi!

Rating: 0 out of 5 stars

()

Read preview

About this ebook

A kannada poet/writer famous for his short humorous poems. Working as Asst.General Manager in Corporation bank, H.O, Mangalore
LanguageKannada
Release dateAug 12, 2019
ISBN6580215501914
Anivaasigale Vaasi!

Related to Anivaasigale Vaasi!

Related ebooks

Reviews for Anivaasigale Vaasi!

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Anivaasigale Vaasi! - H.Dundiraj

    http://www.pustaka.co.in

    ಅನಿವಾಸಿಗಳೇ ವಾಸಿ!

    Anivaasigale Vaasi!

    Author:

    ಎಚ್.ಡುಂಡಿರಾಜ್

    H. Dundiraj

    For more books

    http://www.pustaka.co.in/home/author/h-dundiraj

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಅನಿವಾಸಿಗಳೇ ವಾಸಿ!

    ಅಮೆರಿಕ ಪ್ರವಾಸದ ನೆನಪುಗಳು

    ಎಚ್.ಡುಂಡಿರಾಜ್

    ಅರ್ಪಣೆ

    ಪ್ರಸಿದ್ಧರಂಗಕರ್ಮಿ, ಸದಭಿರುಚಿಯ

    ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿ

    ಆತ್ಮೀಯ ಮಿತ್ರ ಶ್ರೀ ಶ್ರೀನಿವಾಸ್ ಜಿ. ಕಪ್ಪಣ್ಣ

    ಅವರಿಗೆ

    ಮುನ್ನುಡಿ

    ಹಾಸ್ಯ ಎನ್ನುವುದು ಸಿದ್ಧಪಡಿಸಿದ ಒಣ ಗ್ರಾಮರ್‍ನಂತೆ ಒಳ ಮನಸ್ಸನ್ನು ತಟ್ಟದೆ ವೇದಿಕೆಗಳ ಮೇಲೆ ನಮ್ಮಿಂದ ದೂರ ನಿಲ್ಲುತ್ತಿರುವ ಈ ಕಾಳದಲ್ಲಿ ಗೆಳೆಯ ಡುಂಡಿರಾಜ್ ಅವರಿಗೆ ಹಾಸ್ಯದ ಬಗ್ಗೆ ಇರುವ ಒಳನೋಟ ಮತ್ತು ಚೈತನ್ಯಗಳು ಅದ್ಭುತವಾದದ್ದು. ಅವರ ಹಾಸ್ಯದಲ್ಲಿ ಮನಸ್ಸು ಮತ್ತು ಬುದ್ಧಿಗಳು ಭಾಗವಹಿಸುವಂತೆ ಆಗುತ್ತದೆ. ಬೀchiಯವರ ಗದ್ಯದಲ್ಲಿನ ಹಾಸ್ಯದ ಘನತೆ ಪದ್ಯರೂಪಕ್ಕೆ ಇಳಿದರೆ ಎಷ್ಟು ಸುಂದರವಾಗಿರಬಲ್ಲದೋ ಅಷ್ಟು ಘನತೆ ಮತ್ತು ತಮಾಷೆ ಡುಂಡಿಯವರ ಚುಟುಕಗಳಲ್ಲಿರುತ್ತದೆ. ಪ್ರಯಾಣದ ವೇಳೆ ಪಕ್ಕದವರ ಜೊತೆ ಎಲ್ಲ ವೇಳೆಯಲ್ಲೂ ರೆಡಿಮೇಡ್ ಜೋಕ್‍ಗಳನ್ನು ಮಾಡುತ್ತಾ ಸೂಕ್ಷ್ಮಗಳಿಂದ ದೂರವಾಗುವ ಜೋಕುಗಾರರನ್ನು ಕಂಡರೆ ನನಗೆ ಸ್ವಲ್ಪ ಭಯ. ಆದರೆ ಡುಂಡಿರಾಜರ ಜೊತೆ ಅಮೆರಿಕಕ್ಕೆ ಹೊರಟಾಗ ಮನಸ್ಸು ನಿರಾಳವಾಗಿತ್ತು. ಏಕೆಂದರೆ ಡುಂಡಿರಾಜ್ ಬದುಕಿನ ಮತ್ತು ಮನಸ್ಸಿನ ಸೂಕ್ಷ್ಮಗಳನ್ನು ಬಲ್ಲವರು. ಅಮೆರಿಕ ಪ್ರವಾಸ ಪೂರ್ತಿ ನನ್ನನ್ನು ಮತ್ತು ಸುತ್ತಲಿನ ಎಲ್ಲರನ್ನೂ ತಮಾಷೆಯ ಸಂಭ್ರಮದಲ್ಲಿಟ್ಟಿದ್ದರು. ಸಾಮಾನ್ಯ ಘಟನೆಗಳಲ್ಲಿ ತಮಾಷೆ ನೋಡಿ ಅದನ್ನು ಸಮರ್ಥ ಮಾತು ಮತ್ತು ಪದ್ಯದಲ್ಲಿಡಬಲ್ಲ ಪ್ರತಿಭೆ ಡುಂಡಿರಾಜ ಅವರದು. ಹೀಗಾಗಿ ನಗು ಮತ್ತು ತಮಾಷೆಗಳು ಇಡೀ ಪ್ರವಾಸದುದ್ದಕ್ಕೂ ಇತ್ತು. ಅಮೆರಿಕದ ಜನ ನನ್ನನ್ನು ಮೆಚ್ಚಿಕೊಳ್ಳುತ್ತಾರೆಂದು ಭಾವಿಸಿದ್ದ ನನಗೆ, ನನಗಿಂತ ಹೆಚ್ಚಾಗಿ ಡುಂಡಿರಾಜರನ್ನು ಮೆಚ್ಚಿಕೊಂಡಿದ್ದರಿಂದ ಸ್ವಲ್ಪ ಅಸೂಯೆ ಬಂದದ್ದು ಸುಳ್ಳಲ್ಲ. ಅಮೆರಿಕ ಪ್ರವಾಸದ ಬಗ್ಗೆ ಕನ್ನಡದಲ್ಲಿ ಕನಿಷ್ಠ ನೂರು ಪ್ರವಾಸ ಕಥನಗಳು ಬಂದಿವೆ. ಯಾರಾದರೂ ಪ್ರವಾಸ ಕಥನ ಬರೆಯಲು ಶುರು ಮಾಡಿದರೆ ಅತಿ ಗಂಬೀರ ಧ್ವನಿಯನ್ನು ಪಡೆದುಕೊಂಡು ತಮಾಷೆ ಮರೆಯುತ್ತಾರೆ. ಒಣ ವರದಿಯ ರೂಪದಲ್ಲಿ ಇರುವ ಸಂಭವ ಇರುತ್ತದೆ. ಆದರೆ ಡುಂಡಿರಾಜ್‍ರ ಈ ‘ಅನಿವಾಸಿಗಳೇ ವಾಸಿ’ ಕೃತಿಯಲ್ಲಿ ಪ್ರವಾಸ ಕಥನಗಳಲ್ಲಿ ಇರಲೇಬೇಕಾದ ಬೆರಗು ಮತ್ತು ತಮಾಷೆ ಯಥೇಚ್ಛವಾಗಿದೆ. ಅಮೆರಿಕ ಪ್ರವಾಸದ ದೈನಂದಿನ ಸಣ್ಣಪುಟ್ಟ ಘಟನೆಗಳಲ್ಲಿ ನಮ್ಮ ಕಣ್ಣಿಗೆ ಕಂಡಿಲ್ಲದ ತಮಾಷೆ, ಅವರ ಹಾಸ್ಯ ಪ್ರತಿಭೆಯ ಕಣ್ಣಿಗೆ ಬಿದ್ದು ನಾವು ಹೊಟ್ಟೆ ತುಂಬಾ ನಗುವಂತೆ ಮಾಡಿದರಲ್ಲದೆ ಹಾಸ್ಯ, ಬೆರಗು ಮತ್ತು ಅಮೆರಿಕಾದ ಚಿತ್ರಗಳನ್ನು ಸಮನಾಗಿ ಹೊತ್ತು ತಂದ ಈ ಪ್ರವಾಸ ಕಥನ ಹೊರತಂದಿದ್ದಾರೆ.

    ಪದ್ಯದಲ್ಲಿ ಅಪಾರ ವ್ಯಂಗ್ಯ ಹಾಸ್ಯ ಮೂಡಿಸುವ ಡುಂಡಿರಾಜ್ ಗದ್ಯದಲ್ಲೂ ಕೂಡಾ ರಂಜನೆಯ ಸಂಭ್ರಮ ಮೂಡಿಸಿದ್ದಾರೆ.

    ಡುಂಡಿರಾಜ್ ಇಲ್ಲದಿದ್ದರೆ ನಮ್ಮ ಅಮೆರಿಕಾ ಪ್ರವಾಸ ತುಂಬಾ ಸಪ್ಪೆಯಾಗುತ್ತಿತ್ತು. ನನ್ನ ಇಡೀ ಪ್ರವಾಸದ ತುಂಬಾ ಹಾಸ್ಯದ ಟಾನಿಕ್ ತುಂಬಿ ನನ್ನ ಮನಸ್ಸಿನ ಒತ್ತಡ ದುಗುಡಗಳನ್ನೂ ಕಡಿಮೆ ಮಾಡಿದವರು ಡುಂಡಿರಾಜರು.

    ಈ ಪುಸ್ತಕ ಕೂಡಾ ಎಲ್ಲರ ಒತ್ತಡ ಮತ್ತು ದುಗುಡಗಳನ್ನು ಕಡಿಮೆ ಮಾಡಬಹುದು ಮತ್ತು ಅಮೆರಿಕದ ಬಗೆಗಿನ ಕುತೂಹಲಗಳನ್ನು ತಣಿಸಬಹುದು.

    ಟಿ.ಎನ್.ಸೀತಾರಾಮ್.

    ಟೇಕಾಫ್‍ಗೆ ಮೊದಲು

    ಸಮ್ಮೇಳನಕ್ಕೆ ಬಾ ಎಂದು ಅಕ್ಕ ಕರೆದ ಮೇಲೆ ಹೋಗದೇ ಇರಲು ಸಾಧ್ಯವೇ? ಆಹ್ವಾನದ ಮೇರೆಗೆ ಅಕ್ಕ ಸಮ್ಮೇಳನಕ್ಕೆ ಹನಿಗವನಗಳ ರಾಜ ಡುಂಡಿರಾಜ್ ಹೋಗಿದ್ದರು. ಅಮೆರಿಕದಲ್ಲಿ ಅವರಿಗೆ ಆದ ಅನುಭವಗಳ ಒಂದು ಸಂಕ್ಷಿಪ್ತ ಪರಿಚಯ ಈ ಪ್ರವಾಸ ಕಥನ. ಅಲ್ಲಿ ನಡೆದ ಪ್ರತಿಯೊಂದು ಘಟನೆಯನ್ನೂ ಹಾಸ್ಯದ ಕೋನದಿಂದ ನೋಡಿರುವುದು ಈ ಕೃತಿಯ ಪ್ಲಸ್ ಪಾಯಿಂಟ್.

    ಸಿಂಗಪುರ, ಥೈಲೆಂಡ್ ಪ್ರವಾಸ ಮುಗಿಸಿ ಆಗಷ್ಟೇ ಬಂದಿದ್ದ ಬ್ಯಾಂಕ್ ಮ್ಯಾನೇಜರ್ ಡುಂಡಿರಾಜ್ ಅಮೆರಿಕಕ್ಕೆ ಹಾರಬೇಕೆಂಬ ಆತುರದಲ್ಲಿ ಇರಲಿಲ್ಲ. ಆದರೆ ಒಳ್ಳೆಯ ತಂಡ ಒಳ್ಳೆಯ ಅವಕಾಶ ಎಂಬುದನ್ನು ಮನಗಂಡು ಅವರು ಅಮೆರಿಕಕ್ಕೆ ತೆರಳಿದ್ದು. ವೀಸಾ ಪಡೆಯುವುದರಿಂದ ಹಿಡಿದು ಅಮೆರಿಕಾ ಸೇರುವವರೆಗೆ ಅವರು ನೀಡಿರುವ ವಿವರಗಳು ಎಲ್ಲರ ಅನುಭವ. ವಿಮಾನದಲ್ಲಿ ಸರಿ ಸುಮಾರು 22 ರಾಸು ಪ್ರಯಾಣ ಮಾಡುವುದು ಎಂದರೆ ಅದು ಕಷ್ಟದ ಕೆಲಸ. ಲಗೇಜುಗಳು ಮಿಸ್ಸಾಗುವುದು, ಅಗತ್ಯ ಆಹಾರ ದೊರೆಯದೆ ಹೋಗುವುದು, ಪಾಸ್ಪೋರ್ಟ್ ಮತ್ತು ಡಾಕ್ಯುಮೆಂಟ್ ಮಿಸ್ಸಾಗುವುದು ಇವೇ ಮೊದಲಾದ ಅನುಭವಗಳು ತಂಡದಲ್ಲಿ ಒಬ್ಬರಿಗಾದರೂ ಆಗುವುದು ಖಚಿತ. ಇಲ್ಲೂ ಸಹ ಅದೇ ಆಗಿದೆ. ಈ ಮೊದಲು ಅಕ್ಕ ಸಮ್ಮೇಳನಕ್ಕೆ ತೆರಳಿದವರಲ್ಲಿ ಎಷ್ಟೋ ಮಂದಿಗೆ ಭಾಷಣ ಮಾಡಲೂ ಸಹ ಕಾಲಾವಕಾಶ ಸಿಗದೆ ಕಾರಿಡಾರ್‍ಗಳಲ್ಲಿ ನಿಂತು ಊಟ ಖಾಲಿ ಮಾಡಿ ಬಂದಿದ್ದುಂಟು. ಇಂಥ ಜನಜಂಗುಳಿಗಳಿಗೆ ಕಾರಣವಾಗುತ್ತಿದ್ದುದು ನಮ್ಮ ರಾಜಕಾರಣಿಗಳು ಎಂದು ಪತ್ರಿಕೆಗಳು ಬರೆದಿದ್ದವು.

    ಲೋಡ್‍ಗಟ್ಟಲೆ ರಾಜಕಾರಣಿಯ ಕುಟುಂಬಗಳು ಅಕ್ಕ ಸಮ್ಮೇಳನಕ್ಕೆ ಅಟೆಂಡೆನ್ಸ್‍ಗಾಗಿ ಹೋಗಿ ಅನಂತರ ಅಮೇರಿಕಾದ ಪ್ರವಾಸ ತಾಣಗಳನ್ನು ಸಂದರ್ಶಿಸಿ, ಮಜಾ ಉಡಾಯಿಸಿ ಸರ್ಕಾರಿ ಸವಲತ್ತುಗಳಲ್ಲಿ ಮೋಜು ಮಾಡಿ ಬಂದ ನೆನಪು ಎಲ್ಲರಿಗೂ ಇದೆ. ಅಕ್ಕ ಕಾರ್ಯಕರ್ತರಿಗೆ ಇದು ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿ ಆತಿಥ್ಯ ನೀಡುವಲ್ಲಿ ಲೋಪದೋಷಗಳು ಆಗಿದ್ದುಂಟು. ಆದರೆ ಈ ಸಲ ಅಕ್ಕ ಸಮ್ಮೇಳನದಲ್ಲಿ ರಾಜಕಾರಣಿಗಳಾಗಲಿ, ಚಿತ್ರತಾರೆಯರಾಗಲಿ ಇರಲಿಲ್ಲವಾದ್ದರಿಂದ ಯಾವುದೇ ಮುಜುಗರಗಳಿಲ್ಲದೆ ಸರಳವಾಗಿ ಸುಂದರವಾಗಿ ಕಾರ್ಯಕ್ರಮ ನೆರವೇರಿತು ಎಂಬುದನ್ನು ಈ ಪ್ರವಾಸ ಕಥನ ಹೇಳುತ್ತದೆ.

    ಡುಂಡಿರಾಜ್ ಅವರು ತಮ್ಮ ಹಳೆಯ ಗೆಳೆಯರನ್ನು, ಆತ್ಮೀಯರನ್ನು ಅಮೆರಿಕಾದಲ್ಲಿ ಭೇಟಿ ಮಾಡಿದ ರೀತಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕೃಷಿ ಕಾಲೇಜಿನಲ್ಲಿ ಮೇಡಂ ಆಗಿದ್ದ ವಿಜಯಾ ಅವರನ್ನು ಸಹಪಾಠಿ ಎಂದು ಮಿಸ್ಟೇಕ್ ಮಾಡಿಕೊಂಡಿದ್ದಲ್ಲಿ ಇಬ್ಬರಿಗೂ ಖುಷಿಯಾಗಿದ್ದಿದೆ. ಲೇಖಕಿ ಶ್ರೀವತ್ಸ ಜೋಷಿಯವರ ಹಾಸ್ಯ ಪ್ರಜ್ಞೆಯ ಬಗ್ಗೆ ಉಲ್ಲೇಖ ಇದೆ. ಇನ್ನು ನ್ಯೂಜರ್ಸಿಯ ಪ್ರಸನ್ನ ಮತ್ತು ಉಷಾ ಅವರ ಮನೆಯ ಆತಿಥ್ಯವನ್ನು ಅಮೆರಿಕಕ್ಕೆ ಹೋದ ಪ್ರತಿಯೊಬ್ಬ ಕಲಾವಿದ-ಲೇಖಕರು ಸವಿಯದೆ ಬರುವುದಿಲ್ಲ. ನಾನು ಹೋಗಿದ್ದಾಗಲೂ ಆ ಗಂಡ ಹೆಂಡತಿಯ ಜಗಳ ಕಂಡು ದಿಗ್ಭ್ರಾಂತನಾಗಿದ್ದೆ. ಹಸಿದು ಬಂದಿದ್ದ ನಮ್ಮ ತಂಡ ಅವರ ಮೆನಗೆ ಎಂಟ್ರಿಕೊಟ್ಟಾಗ ಉಪ್ಪಿಟ್ಟು ಮಾಡುತ್ತಿದ್ದ ಉಷಾ ಹೇಳಿದ ಮಾತು ಗಾಬರಿ ಹುಟ್ಟಿಸಿತ್ತು. ‘ಉಪ್ಪಿಟ್ಟು ಚೆನ್ನಾಗಿಲ್ಲ ಅಂತ ಯಾರಾದರೂ ಅಂದ್ರೆ ಹಿಡಿದು ಚೆಚ್ಚಿ ಬಿಡ್ತೀನಿ, ಬಾಯಿಮುಚ್ಕೊಂಡು ತಿನ್ನಿ!’. ವಿಮರ್ಶೆ ಮಾಡದೆ ನಾವು ಉಪ್ಪಿಟ್ಟನ್ನು ತಿಂದೆವು. ಅಮೆರಿಕಾದ ಬೆಸ್ಟ್ ಉಪ್ಪಿಟ್ಟಿದು ಎಂಬ ಮೆಚ್ಚುಗೆಯ ಮಾತು ಹೇಳಲು ಸಹ ಧೈರ್ಯ ಬರಲಿಲ್ಲ. ಪ್ರಸನ್ನ-ಉಷಾ ಅವರ ಮಾತುಗಳ ಚಕಮಕಿ ಒಂದು ರೀತಿಯ ಮನರಂಜನೆ ಎಂಬುದು ಅನಂತರ ನನಗೆ ತಿಳಿದು ಬಂತು. ಇವರನ್ನು ಡುಂಡಿರಾಜ್ ಅವರು ಮುದ್ದಣ್ಣ ಮನೋರಮೆಯ ಪ್ರಸಂಗಕ್ಕೆ ಹೋಲಿಸಿರುವುದು ಸಮಂಜಸ. ಉಷಾ-ಪ್ರಸನ್ನರ ಮನೆಯಲ್ಲಿ ಮಿನಿ ಸಾಹಿತ್ಯ, ಸಂಗೀತ ಸಮ್ಮೇಳನಗಳು ನಡೆದಿವೆ.

    ಹಾಗೇ ಲಾಸ್ ಏಂಜಲೀಸ್‍ನ ವಿದ್ಯಾ ಮತ್ತು ಮಲ್ಲೀಶ್ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳು, ಅಲ್ಲಿನ ಆತಿಥ್ಯವನ್ನು

    Enjoying the preview?
    Page 1 of 1