Discover millions of ebooks, audiobooks, and so much more with a free trial

Only $11.99/month after trial. Cancel anytime.

Sagaradaacehya Nadinalli
Sagaradaacehya Nadinalli
Sagaradaacehya Nadinalli
Ebook447 pages2 hours

Sagaradaacehya Nadinalli

Rating: 0 out of 5 stars

()

Read preview

About this ebook

ಹವ್ಯಾಸೀ ಲೇಖಕಿಯಾಗಿ ಅತ್ಯುತ್ತಮ ಕೃತಿಗಳನ್ನು ರಚಿಸುತ್ತಿದ್ದ ವಿಜಯ ಎಸ್.ಪಿ. ಒಬ್ಬ ಪ್ರವಾಸಿ ಪ್ರಿಯರೂ ಹೌದು. ತಾವು ಹೋಗಿಬಂದ ಪ್ರವಾಸವನ್ನು ತಮ್ಮ ಅನುಭವದ ಮೂಸೆಯಿಂದ ಜಾಗ್ರತೆಯಿಂದ ಎಲ್ಲೂ ವಿಷಯ ವಿವರಣೆ ಹೆಚ್ಚಾಗದಂತೆ ಬೇಸರವಾಗದಂತೆ ರಂಜನೀಯವಾಗಿ ವಿವರಿಸಿದ್ದಾರೆ. ಈ ಪುಸ್ತಕದಲ್ಲಿ ತಮ್ಮ ಪತಿಯೊಂದಿಗೆ ಮೊಟ್ಟಮೊದಲ ಬಾರಿಗೆ ದೂರದ ದೇಶಕ್ಕೆ ಪ್ರವಾಸ ಕೈಗೊಂಡ ವಿಚಾರವನ್ನು ಸಹಜವಾಗಿ ತೆರೆದಿಟ್ಟಿದ್ದಾರೆ. ಮೊದಲ ಬಾರಿ ಹೊರದೇಶದ ಪ್ರವಾಸವನ್ನು ಮಾಡುವವರಿಗಾಗಿ ಒಬ್ಬ ಗೆಳತಿಯಾಗಿ ನೀಡುವ ಸಲಹೆ ಸೂಚನೆಗಳು, ಆಪ್ತವೆನಿಸುತ್ತವೆ.
LanguageKannada
Release dateJun 1, 2021
ISBN6580241306737
Sagaradaacehya Nadinalli

Read more from Vijayalakshmi S.P.

Related authors

Related to Sagaradaacehya Nadinalli

Related ebooks

Related categories

Reviews for Sagaradaacehya Nadinalli

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Sagaradaacehya Nadinalli - Vijayalakshmi S.P.

    https://www.pustaka.co.in

    ಸಾಗರದಾಚೆಯ ನಾಡಿನಲಿ...

    Sagaradaacehya Nadinalli

    Author:

    ವಿಜಯಲಕ್ಷ್ಮಿ ಎಸ್. ಪಿ

    Vijayalakshmi S.P

    For more books

    https://www.pustaka.co.in/home/author/vijayalakshmi-sp

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪರಿವಿಡಿ

    1. ಆಗಸಕ್ಕೆ ಹಾರುವ ಮುನ್ನ…

    2. ಯೂರೋಪ್...

    3. ಬೆಲ್ಜಿಯಂ...

    4. ಜರ್ಮನಿ...

    5. ಆಸ್ಟ್ರಿಯಾ...

    6. ರೋಮನ್ ಸಾಮ್ರಾಜ್ಯದ ಹೆಮ್ಮೆ `ಇಟೆಲಿ'

    7. ಭೂಸ್ವರ್ಗ `ಸ್ವಿಟ್ಝರ್‍ಲ್ಯಾಂಡ್'...

    8. ವೈವಿಧ್ಯ, ಬೆಡಗು, ವೈಶಿಷ್ಠ್ಯತೆಯ ಸಂಗಮ `ಫ್ರಾನ್ಸ್'...

    9. ಎಲ್ಲ ಸಂಭ್ರಮಗಳಿಗೂ ಒಂದು ಕೊನೆಯಿದೆ...

    10. `ಬ್ರಿಟನ್'...

    11. ಮರಳಿ ಗೂಡಿಗೆ...

    12. ಪ್ರವಾಸ ಮಾಡುವುದಕ್ಕೆ ಬೇಕಾದ ಕನಿಷ್ಠ ತಯ್ಯಾರಿಗಳು...

    1. ಆಗಸಕ್ಕೆ ಹಾರುವ ಮುನ್ನ…

    ಇದು ಇಂದಿನ ಮಾತಲ್ಲ, ಒಂದೈವತ್ತು ಅರವತ್ತು ವರ್ಷಗಳ ಹಿಂದೆ, ನಗರದ ಗಂಧಗಾಳಿ ಸೋಕದ ಪುಟ್ಟ ಊರಿನ ಪುಟ್ಟ ಮಕ್ಕಳಾದ ನಮ್ಮನ್ನು ಒಂದು ಶಬ್ದ ಅಪರೂಪಕ್ಕೊಮ್ಮೆ ಕಿವಿಗೆ ಬೀಳುತ್ತಾ ಅದೆಷ್ಟು ಮಂತ್ರಮುಗ್ಧರಾಗಿಸುತ್ತಿತ್ತೆಂದರೆ, ಕಿಂದರಿ ಜೋಗಿಯ ಕಿಂದರಿ ನಾದಕ್ಕೆ ಮರುಳಾಗಿ ಓಡುವಂತೆ, . ಆ ಶಬ್ದ ಕಿವಿಗೆ ಬಿದ್ದರೆ ಸಾಕು, ನಿಂತಲ್ಲೆ ಅಥವಾ ಮನೆಯೊಳಗಿದ್ದರೆ ದಬ್ಬಿದಂತೆ ಹೊರಗೋಡಿ ಬರುತ್ತಿದ್ದೆವು; ಆಗಸಕ್ಕೆ ಮುಖಮಾಡಿ ಚಿತ್ರಪಟದಂತೆ ನಿಂತುಬಿಡುತ್ತಿದ್ದೆವು. ಎತ್ತರದಲ್ಲಿ ಭೂಮಿಯ ಛಾವಣಿಯಂತಿದ್ದ ಆಕಾಶ, ಅದರಾಚೆ ಏನಿಲ್ಲವೆಂಬ ಭ್ರಮೆ, ಅಲ್ಲಿ ಗೇಣುದ್ದದ ವಿಮಾನ ಕೆಂಪು ಹಸಿರು ದೀಪಗಳ ಮಿಟುಕಿಸುತ್ತ, ಹಕ್ಕಿಯಂತೆ ಹಾರುತ್ತಿದ್ದ ದೃಷ್ಯ ನೋಡುತ್ತ ನಿಲ್ಲುವಾಗ, ಆಗುತ್ತಿದ್ದ ವಿಸ್ಮಯ, ಪುಳಕವನ್ನು ವರ್ಣಿಸಲೇ ಆಗದೇನೋ. ವಿಮಾನದ ಗಾತ್ರ ಗೊತ್ತಿಲ್ಲ, ಎಷ್ಟು ಎತ್ತರದಲ್ಲಿ ಹಾರುತ್ತಿದೆ ಗೊತ್ತಿಲ್ಲ, ಎಲ್ಲಿಂದ ಬರುತ್ತದೆ ಎಲ್ಲಿಗೆ ಹೋಗುತ್ತದೆ ಗೊತ್ತಿಲ್ಲ, ಅಲ್ಲಿಂದ ನೆಲಕ್ಕೆ ಹೇಗೆ ಬರುತ್ತೆ, ಏರುತ್ತೆ ಗೊತ್ತಿಲ್ಲ. ಒಟ್ಟಾರೆ, ಎಲ್ಲವೂ `ಗೊತ್ತಿಲ್ಲದ ಲೋಕ'. ವಾರವೋ, ತಿಂಗಳಿಗೋ ಒಮ್ಮೆ ಹೀಗೊಂದು ಚಮತ್ಕಾರ ಬಾನಲ್ಲಿ, ಅದಕ್ಕಾಗಿ ಕಾಯುತ್ತಿದ್ದ ಬಹುತೇಕ ಎಲ್ಲ ಕಡೆಯ ಮಕ್ಕಳ ವಿಸ್ಮಯದ ಪ್ರಪಂಚ, ದೃಷ್ಯ, ಕಾತರ ಇದಾಗಿತ್ತು...!

    ಅಲ್ಲಿಂದ ಮುಂದಷ್ಟು ಕಾಲ ಓಡಿದರೆ, ಮಾಧ್ಯಮಿಕ ಶಾಲೆಯ ಆರಂಭದ ದಿನಗಳು. ವಿಮಾನದ ಬಗ್ಗೆ ಹಿಂದಿಗಿಂತ ಚೂರು ಹೆಚ್ಚಿನ ಸಂಗತಿ ತಿಳಿದಿತ್ತು, ವಿಮಾನದಲ್ಲಿ ನಮ್ಮೂರಿನವರೂ ಹತ್ತಬಹುದೆಂಬ ಸಂಗತಿಗೆ ತೆರೆದುಕೊಂಡಿದ್ದೆವು. ನಮ್ಮ ಪರಿಚಿತರೊಬ್ಬರು ಬಹುಷಃ ಶೈಕ್ಷಣಿಕ ಕಾರಣವಿರಬಹುದು ರಷ್ಯಾಗೆ ಹೋಗಿ ಬಂದರು. ಊರಿನಲ್ಲೆಲ್ಲ ಅದೇ ಚರ್ಚೆ. ನಮ್ಮೂರಲ್ಲಿ ಅದುವರೆಗೆ ಯಾರೂ ವಿದೇಶ ಕಂಡು ಬಂದವರಿರಲಿಲ್ಲ. ಪುಟ್ಟಹಕ್ಕಿಯಂತಿರುವ ನಮ್ಮ ನಿಗೂಢಜಗತ್ತಿಗೆ ಇವರು ಕಾಲಿಟ್ಟು ಬಂದಿದ್ದಾರೆನ್ನುವ ಅಗಾಧ ಅಚ್ಚರಿ. ನನ್ನ ಶಾಲೆಯ ಮುಖ್ಯೋಪಾಧ್ಯಾಯರು ಅವರನ್ನು ಶಾಲೆಗೆ ಆಹ್ವಾನಿಸಿದರು, ಕಾರಣ, ನಮಗೆ ಇತಿಹಾಸ, ಭೂಗೋಳದಲ್ಲಿ ತುಣುಕು ತುಣುಕಾಗಿ ವಿದೇಶದ ಬಗ್ಗೆ ಪಾಠಗಳಿದ್ದವು. ಹಾಗಾಗಿ ರಷ್ಯಾದ ಬಗ್ಗೆ ಅವರು ಕಂಡಂಥ ಸಂಗತಿಗಳನ್ನು ಮಕ್ಕಳಿಗೆ ತಿಳಿಸಲು ಈ ಏರ್ಪಾಡಾಗಿತ್ತು. ಅವರಿಗೂ ಒಂಥರಾ ಹೆಮ್ಮೆ ವಿದೇಶ ನೋಡಿರುವೆನೆಂದು. ಆ ದಿನ ಅವರು ರಷ್ಯಾದ ಕುರಿತು ಗಂಟಾನುಗಟ್ಟಲೆ ಮಾತನಾಡಿದರು. ಚಿಕ್ಕವಳಾದ ನಾನು ಮೇಲೆ ಕಾಣುತ್ತಿದ್ದ ಪುಟ್ಟ ಲೋಹದಹಕ್ಕಿ ಹುಟ್ಟಿಸಿದ್ದ ಗುಂಗಿನ ಜೊತೆಗೆ, ಎಂಥದ್ದೋ ಲಹರಿಯಲ್ಲಿ ತೇಲಿಬಿಟ್ಟೆ. ಸಣ್ಣದೊಂದು ಊರು, ಆಚೀಚೆಯ ಹತ್ತು ಮೈಲಿ ದೂರದ ಹಳ್ಳಿಗಳನ್ನೂ ಕಂಡಿಲ್ಲದವಳು, ಈ ಬೃಹತ್ ದೇಶದ ಬಗ್ಗೆ ಕೇಳಿ ಏನೋ ರೋಮಾಂಚನ.

    ಬಹುಷಃ, ನನ್ನೊಳಗೆ `ಪ್ರವಾಸಿಗ' ಅಂದೇ ಜನ್ಮ ತಾಳಿರಬೇಕು...!

    ಮತ್ತೆಲ್ಲ ಕನಸೊಂದು ಸದ್ದಿಲ್ಲದೆ, ತಹತಹವಿಲ್ಲದೆ ಬೆಳೆಯಲಾರಂಭವಾಗಿರಬೇಕು, ನನಗೂ ಗೊತ್ತಾಗದಂತೆ...! ಲಿಬರ್ಟಿ ಸ್ಟಾಟ್ಯೂ, ರೆಡ್ ಸ್ಕ್ವೇರ್, ಲೆನಿನ್ ಸಮಾಧಿ, ಫ್ಲೋಟಿಂಗ್ ಸಿಟಿ, ಲಂಡನ್ ಬ್ರಿಜ್, ಐಫೆಲ್ ಟವರ್, ಗೋಲ್ಡನ್ ಬ್ರಿಜ್, ಅಮೇರಿಕಾ, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಹಿರೋಷಿಮಾ, ನಾಗಸಾಕಿ, ಚೈನಾ ವಾಲ್, ಟೋಕಿಯೋ, ಪೀಕಿಂಗ್ ಅಯ್ಯೋ ಒಂದೋ ಎರಡೋ ಹೀಗೆ ಬೆಳೆದು ಉದ್ದವಾದ ಪಟ್ಟಿ, ಕನಸುಗಳಲ್ಲಿ ಬಂದು ಕಾಡಿಸುತ್ತಿದ್ದವು, ರೋಮಾಂಚನಗೊಳಿಸುತ್ತಿದ್ದವು. ಆದರೆ, ಅಂದಿನ ದಿನಗಳಲ್ಲಿ ಈ ಕನಸನ್ನೆಲ್ಲ ಕಟ್ಟಿಕೊಳ್ಳುವ ಸಾಧ್ಯತೆಯೂ ಇಲ್ಲದ, ಅಷ್ಟೇಕೆ, ಯಾರಿಗೂ ಹೀಗೆ ಹೊರದೇಶಕ್ಕೆ ಹೋಗಬಹುದೆನ್ನುವ ಕಲ್ಪನೆಯೂ ಇರದ ಸರಳ ಬದುಕು. ಹಣವಿಲ್ಲ, ಹೆಚ್ಚು ವಿದ್ಯೆಯಿಲ್ಲ, ಶಾಲೆಯ ವಿದ್ಯಾರ್ಥಿಗಳಿಗೆ ಬಿಟ್ಟರೆ ಹಿರಿಯರಿಗೆ ಇಂಥವೆಲ್ಲ ಇವೆ ಎನ್ನುವ ಮೂಲ ಸಂಗತಿಯೂ ತಿಳಿಯದ ಅಮಾಯಕ ಜೀವನ. ನಮ್ಮದಾದರೂ ಚೂರು ಕೇಳಿ ಗೊತ್ತೇ ವಿನಾ ಕನಸು ಕಟ್ಟಬೇಕು, ನನಸಾಗಿಸಿಕೊಳ್ಳಬೇಕೆಂಬ ಅರಿವೇ ಇರಲಿಲ್ಲ. ಅದೊಂದು ಮುಗ್ಧ ಬದುಕಿನ ಶೈಲಿ...!

    ಆದರೂ ಕೇಳಿದ್ದೊ, ಓದಿದ್ದೊ ಒಮ್ಮೊಮ್ಮೆ ಕನಸಲ್ಲಿ ಬಂದು ನವಿರೇಳಿಸಿದ್ದು ಮಾತ್ರ ಸುಳ್ಳಲ್ಲ, ಎಲ್ಲಿಯವರೆಗೆ...? ಮದುವೆಯಾಗುವವರೆಗೆ..? ಅಲ್ಲಲ್ಲ, ಮದುವೆಯಾಗಿ ಎಷ್ಟೋ ಕಾಲದವರೆಗೆ...! ಆದರೆ, ಒಳಗಿನ ಕನಸು ವ್ಯರ್ಥವಲ್ಲ, ರೆಕ್ಕೆಪುಕ್ಕ ಬಲಿತು ಹಾರುತ್ತದೆ ಜಗದಗಲ, ಮುಗಿಲಗಲ ಎಂದು ಆ ಬ್ರಹ್ಮರೇಖೆ ನನ್ನ ಕೈನಲ್ಲಿ ಬರೆದಿರುವಾಗ ಕನಸು ಕಾಣುವ ಕಾಲ ಮುಗಿದಿತ್ತು. ಐದನೇ ಕ್ಲಾಸಿನ ಕನಸು ಐವತ್ತರ ಗಡಿಗೆ ನನಸಾಗಿ, ವಿಮಾನಯೋಗ ಕೈ ಹಿಡಿದಿದ್ದು ಇದುವರೆಗೂ ಸುಸೂತ್ರವಾಗಿ ಸಾಗುತ್ತಾ, ನನ್ನ ದೇಶ ಸುತ್ತುವ ಹಪಹಪಿಯನ್ನು ತಣಿಸಿದೆ, ಬೆಳೆಸಿದೆ, ಬೆಳೆಸುತ್ತಲೇ ಇದೆ.

    ಅದೆಷ್ಟು ಕಂಡೆನೋ, ಅದೆಷ್ಟು ಉಂಡೆನೋ ಈಗ ಕುಳಿತು ಯೋಚಿಸಬೇಕಿದೆ. ಪಟ್ಟಿ ಹನುಮಂತನ ಬಾಲವಾಗಿದೆ. `ಫ್ಲೋಟಿಂಗ್ ಸಿಟಿ, ಹೇಗೆ ಸಾಧ್ಯ..?' ಎಂದುಕೊಂಡ ಬಾಲ್ಯದ ಕುತೂಹಲದ ಪ್ರಶ್ನೆಗೆ ಉತ್ತರ ಸಿಕ್ಕಿತು, ಇಟೆಲಿಯ `ವೆನಿಸ್ಸಿನ' ಗೊಂಡೋಲಾದಲ್ಲಿ ಕೂತು, ಸಮುದ್ರ ನುಗ್ಗಿ ಅಪ್ಪಿಕೊಂಡ ದುರಂತಕ್ಕೆ ಕಳೆದುಹೋಗುತ್ತಿರುವ ಸಿಟಿಯ ಅಂದಚಂದ ಕಾಣುತ್ತಾ, ಇಟಾಲಿಯನ್ ಸಂಗೀತ ಕೇಳುತ್ತ ಮೈಮರೆತಾಗ; ಆರೇಳುಸಾವಿರ ಎತ್ತರದ ಪರ್ವತದ ಎದೆಯ ಮೇಲಿನ ಚೈನಾ ವಾಲ್ ಸಾಧ್ಯವೇ ? ಉತ್ತರ ಸಿಕ್ಕಿತು ಅಲ್ಲೇರಿ ಆ ಬೃಹತ್ ರೂಪ ಕಂಡಾಗ; ಬಾಂಬ್ ಎನ್ನುವ ಆಧುನಿಕ ರಕ್ಕಸನ ಏಟಿಗೆ ಸುಟ್ಟು ಬೂದಿಯಾಗಿದ್ದ ಹಿರೋಷಿಮಾ ನಶಿಸೇಹೋಯ್ತೇ? ಇಲ್ಲವೆಂದಿತು ನಳನಳಿಸುವ ರೂಪ ಕಂಡಾಗ; `ಲಿಬರ್ಟಿ ಸ್ಟಾಚ್ಯೂ' ಹೇಗಿರಬಹುದು? ಬೆರಗಾದೆ ಎದುರಲ್ಲೆ ನಿಂತು ನೋಡಿದಾಗ...! `ಫರ್ಬಿಡನ್ ಸಿಟಿ' ಹಾಗೆಂದರೇನು? ಹೀಗೆಂದು ಉತ್ತರಿಸಿ ಮೂಕವಾಗಿಸಿತು ಬೀಜಿಂಗಿನ ಆ ಚೌಕದಲ್ಲಿ ಎದುರೇ ನಿಂತಾಗ; ಹೀಗೇ ಎಷ್ಟೋ...ಎಷ್ಟೋ...ಕಂಡು, ಪ್ರಶ್ನೆ, ವಿಸ್ಮಯಗಳ ತಕ್ಕಡಿಯಲ್ಲಿ ತೂಗಿ, ಉತ್ತರವಿಲ್ಲದ ವಸುಂಧರೆಯ ಅಗಾಧ ರತ್ನಗರ್ಭಕ್ಕೆ ಶರಣೋ ಶರಣು ಅಂದ, ಆನಂದಲಹರಿಯಲ್ಲಿ ಮೈಮರೆತ ಕೋಟಿಕೋಟಿ ಕ್ಷಣಗಳು ನನ್ನ ಬದುಕಿನ ಪುಸ್ತಕದಲ್ಲಿ ಅಚ್ಚಾದ ಅತ್ಯಂತ ಸ್ಮರಣೀಯ, ಸುಂದರಪುಟಗಳು.

    ಎಲ್ಲರೂ ಎಲ್ಲವನ್ನೂ ನೋಡಲು ಸಾಧ್ಯವೇ? ಖಂಡಿತಕ್ಕೂ ಇಲ್ಲ. ಎಷ್ಟೋ ದೇಶಗಳ ಕಂಡರೂ ನನ್ನದೂ ಅಪೂರ್ಣವೇ, ಅತ್ಯಲ್ಪವೇ. ಈ ವಿಶ್ವವೆಂಬ ಗೋಲ ಅಗಾಧವಾದದ್ದು...! ಹೀಗಿರುವಾಗ ಏನನ್ನೂ ಕಾಣದವರು, ಚೂರು ಕಂಡು ಇನ್ನಷ್ಟು ಕಾಣಲು ಹಾತೊರೆಯುವವರು, ವಿಶ್ವದ ಬಗ್ಗೆ ಕುತೂಹಲಿಗಳಾಗಿರುವವರು, ಒಂದಿಷ್ಟಾದರೂ ವಿಷಯ ತಿಳಿವ ಜ್ಞಾನದಾಹಿಗಳು ಇಂತಹ ಮಂದಿ ಲಕ್ಷಾಂತರ ಇರುವಾಗ, ನನಗೆ ದಕ್ಕಿದ್ದು ನನ್ನಲ್ಲೇ ಸಮಾಧಿ ಯಾಕೆ, ಕಾಣಲಾಗದವರ ಓದಿ ತಿಳಿವ ಹಪಹಪಿಯನ್ನು ತಣಿಸಬಾರದೇಕೆ, ನನ್ನ ಬರವಣಿಗೆಯ ತುಡಿತಕ್ಕೆ ಹಾದಿಯೊಂದ ಕಾಣಬಾರದೇಕೆ, ಹೀಗೆ `ಯಾಕೆ'ಗಳಿಗೆ ಉತ್ತರವೆಂಬಂತೆ ಪ್ರವಾಸ ಲೇಖನಗಳ ಬರೆಯಲಾರಂಭಿಸಿದೆ. `ಕಂಡದ್ದರಲ್ಲೊಂದು ತುಂಡು' ಎನ್ನುವಂತೆ, ಸಾಕಷ್ಟು ವಿಷಯ ಸಂಗ್ರಹಣೆ ಮಾಡಿ, ನನ್ನ ಅನುಭವದ ಮಿತಿಯಲ್ಲಿ ಲೇಖನದೌತಣ ಬಡಿಸಿದ ತೃಪ್ತಿ ನನಗಿದೆ. ಪ್ರವಾಸದಲ್ಲಿ ಕಣ್ಣಾರೆ ಕಂಡಿದ್ದು, ಅಲ್ಲಿ ಸಿಕ್ಕ ಮಾಹಿತಿಪುಸ್ತಕಗಳು, ಮಾರ್ಗದರ್ಶಕರು ಹೇಳಿದ್ದು, ಅಲ್ಲಿಲ್ಲಿ ಸಿಕ್ಕ ಮಾಹಿತಿಗಳು, ಅಂತರ್ಜಾಲ ಹೀಗೆ ಅನೇಕ ವಿಧಗಳಲ್ಲಿ ಕ್ರೋಢೀಕರಿಸಿದ ಸಂಗತಿಗಳು ನನ್ನ ಮಾತಾಗಿ ಲೇಖನಗಳಲ್ಲಿ ಹೊರಬಿದ್ದಿವೆ.

    ಈಗ ಇಲ್ಲಿ ಹೀಗೊಂದು ಪ್ರವಾಸ ಕಥನ ಬರೆಯಲು ಅಣಿಯಾಗಿದ್ದೇನೆ. ನಮ್ಮ ವಸುಂಧರೆ ಹೇಗಿದ್ದಾಳೆ, ಏನೇನು ವಿಸ್ಮಯ-ಅದ್ಭುತ-ಸೌಂದರ್ಯಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ, ಯಾವ ದೇಶ ಹೇಗಿದೆ, ಮಾಹಿತಿಗಳೇನು, ಸುಂದರ ದೃಷ್ಯಗಳು, ಅಲ್ಲಿನ ಅಗಾಧತೆಗಳೇನು, ನನಗೆ ಸಿಕ್ಕ ಅನುಭವಗಳೇನು ಈ ಎಲ್ಲವನ್ನೂ ನಿಮಗೆ ತಿಳಿಸುವ ಇರಾದೆ ನನ್ನದು. ಬನ್ನಿ ನನ್ನೊಡನೆ, ನನ್ನನುಭವಗಳ ಮೂಲಕ ನೀವೂ ಈ ವಿಶ್ವವೆಂಬ ಅನನ್ಯಗೋಲದ ಒಡಲನ್ನು ಆವರಿಸಿಕೊಂಡಿರುವ ಸೊಬಗಿನ ಪುಟ್ಟ ಪರಿಚಯ ಮಾಡಿಕೊಳ್ಳಿ. `ಲೋಕಜೋಕಾಲಿ'ಯಲ್ಲಿ ಒಮ್ಮೆ ಕೂತು, ಹದವಾಗಿ ತೂಗಿಕೊಳ್ಳುವ ಮಧುರ ಅನುಭವ ನಿಮ್ಮದಾಗಿಸಿಕೊಳ್ಳಿ...!!!

    ಈಗ ವಿದೇಶ ಪ್ರಯಾಣ ಬಹಳ ಸುಲಭ ಮತ್ತು ಹೋಗುವ ಸಾಧ್ಯತೆಯ ಮಂದಿ ಬಹಳ. ಆದರೂ, ಪ್ರಥಮ ಬಾರಿಗೆ ಹೋಗುವವರಿಗಾಗಿ ಕೆಲವೊಂದು ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ಪುಸ್ತಕದ ಕೊನೆಯಲ್ಲಿ ಬರೆದಿರುವೆ. ಗಮನಿಸಿ...! ಈಗ, ಪ್ರವಾಸಕ್ಕೆ ಹೊರಡಲು ನಾನೂ, ನನ್ನೊಂದಿಗೆ ನೀವೂ ಉತ್ಸುಕರಾಗಿರುವಾಗ, ನೀರಸವೆನ್ನಿಸುವ ಸೂಚನೆಗಳ ಹೊರೆ ಯಾಕೆ ಓದುಗರೇ...? ಹಾಗಾಗಿ, ಇನ್ನು ಯಾವುದೇ ಅಡೆತಡೆಗಳಿಲ್ಲದೆ ನಮಗೆ ರೆಕ್ಕೆಯಿಲ್ಲದಿದ್ದರೂ, ರೆಕ್ಕೆ ಕಟ್ಟಿಕೊಂಡ ವಿಮಾನದಲ್ಲಿ ಜಗದಗಲ ಒಂದು ಸುತ್ತು ಹೋಗೇಬಿಡೋಕೆ ನಾನು ತಯ್ಯಾರಾಗುತ್ತಿರುವೆ. ಓದಿನ ಮೂಲಕ ನೀವೂ ನನ್ನೊಂದಿಗೆ ಬನ್ನಿ ಎಂದು ಪ್ರೀತಿಯ ಆಹ್ವಾನ...! ಹೋಗ್ತಾ ಹೋಗ್ತಾ ನನ್ನ ಬೊಗಸೆಯಲ್ಲಿ ಸಿಕ್ಕಷ್ಟು ವಿಭಿನ್ನ ನೆಲ, ನಾಡಿನ ಅಂದಚಂದ ಮಹತ್ವವನ್ನು, ಅಲ್ಲಲ್ಲಿ ಅಗತ್ಯವಾದ ನನ್ನನುಭವಕ್ಕೆ ಬಂದ ಚೂರುಪಾರು ಮಾಹಿತಿಗಳ ಸಲಹೆ, ಸೂಚನೆಗಳನ್ನು ಒಂದಿಷ್ಟಾದರೂ ನಿಮಗೆ ಕೊಡುವ ಪ್ರಯತ್ನದ ಅಭಿಲಾಷೆಯೂ ನನ್ನದು...!!!

    ಪ್ರಥಮಯಾನದ ತೆಕ್ಕೆಯಲ್ಲಿ...

    ಅದು 2000 ಇಸವಿಯ ಸೆಪ್ಟೆಂಬರ್ ತಿಂಗಳು. ಬಾಲ್ಯದ ಕನಸು ಕುತೂಹಲಗಳು ನನಸಾಗಿ ರೆಕ್ಕೆ ಕಟ್ಟಿಕೊಂಡು ಹಾರುವ ಘಳಿಗೆ ಮನೆಯ ಹೊಸ್ತಿಲ ಬಳಿ ಬಂದಾಯ್ತು. ಪ್ರಥಮಯಾನಕ್ಕೆ ರಂಗ ಸಿದ್ಧವಾಯ್ತು. ನಾವೀ ಪ್ರವಾಸಕ್ಕೆ ಆಯ್ದುಕೊಂಡ ಕಂಪೆನಿ `ಕಾಸ್‍ಮಾಸ್' ಎಂದು, ಲಂಡನ್‍ನಲ್ಲಿದೆ. ಇದನ್ನು ಆಯ್ದುಕೊಳ್ಳಲು ಕಾರಣ, ಆಗ ಇಲ್ಲಿ ಈ ಪ್ಯಾಕೇಜ್ ಟೂರುಗಳು ಅಷ್ಟೊಂದು ಜನಜನಿತವಾಗಿರಲಿಲ್ಲ. ಜೊತೆಗೆ ನನ್ನ ಪತಿ ಕುಮಾರ್‍ಗೆ ಜರ್ಮನಿ ಒಂಥರಾ ತೌರು ಎಂದೇ ನಾನು ತಮಾಷೆ ಮಾಡುತ್ತೇನೆ. ನಾನು ವರ್ಷವೊ, ಎರಡುವರ್ಷಕ್ಕೊ ತೌರಿಗೆ ಹೋದರೆ, ಇವರೋ ಕೆಲಸದ ನಿಮಿತ್ತ ಜರ್ಮನಿಗೆ ಎಡತಾಕುತ್ತಲೇ ಇರಬೇಕಿತ್ತು. ಯೂರೋಪಿನ ಪರಿಚಯ ಸಾಕಷ್ಟಾಗಿತ್ತು, ಅಲ್ಲಿಯ ಶಿಸ್ತು, ಬೆಳವಣಿಗೆಯ ವಿದ್ಯಮಾನಗಳು ಪ್ರಿಯವೂ ಆಗಿತ್ತು, ದೊಡ್ಡ ಮಗಳ ಮದುವೆ ಮುಗಿದಿದೆ, ಸರಿ, ಹೆಂಡತಿಗೊಂದು ವಿದೇಶಪ್ರವಾಸ ಮಾಡಿಸೇಬಿಡೋಣ ಅಂತ ಹುಡುಕಿದಾಗ ಸಿಕ್ಕಿದ್ದೆ ಲಂಡನ್‍ನಲ್ಲಿರುವ ಈ ಪ್ರವಾಸೀ ಕಂಪೆನಿ. ಇದು ಲಂಡನ್‍ನಿಂದ ಆರಂಭವಾಗಿ ಲಂಡನ್ನಿನಲ್ಲಿ ಮುಗಿಯುವ ಟೂರ್.

    ಈಗಲೂ ಈ ಟೂರ್ ಕಂಪೆನಿಗಳು ಪ್ರವಾಸ ನಡೆಸುತ್ತವೆ, ಬೇಕಿದ್ದವರು ಅವುಗಳನ್ನು ಆಯ್ದುಕೊಂಡೂ ಪ್ರವಾಸ ಹೋಗಬಹುದು.

    ನನ್ನೀ ಪ್ರಥಮ ಪ್ರವಾಸ ಯೂರೋಪಿನ ಆರುದೇಶಗಳದ್ದಾಗಿದ್ದು ಅವಧಿ 19 ದಿನಗಳದ್ದಾಗಿತ್ತು. ಲಂಡನ್‍ನಿಂದಲೇ ಹೊರಡುವುದರಿಂದ ಈ ಪ್ರವಾಸದಲ್ಲಿ ಲಂಡನ್ ಸೇರಿರಲಿಲ್ಲ. ಅಷ್ಟು ದೂರ ಹೋಗಿ ಲಂಡನ್ ನೋಡದೇ ಬರೋದೆ? ಸಾಧ್ಯವಿಲ್ಲ, ಹಾಗಾಗಿ, ಲಂಡನ್ ನೋಡಲೆಂದೇ ನಾಲ್ಕು ದಿನ, ಹೋಗಿ ಬರೋಕೆ ಎರಡು ದಿನ, ಹೀಗೆ ಸೇರು, ಪಾವು, ಕೊಸರು ಅಂತ ಇಪ್ಪತ್ತೇಳು ದಿನಗಳ ಭರ್ತಿ ಟೂರ್ ಫಿಕ್ಸ್ ಆಯಿತು. ಬೆಲ್ಜಿಯಂ, ಜರ್ಮನಿ, ಇಟೆಲಿ, ಫ್ರಾನ್ಸ್, ಸ್ವಿಟ್ಜರ್‍ಲ್ಯಾಂಡ್, ಆಸ್ಟ್ರಿಯಾ ದೇಶಗಳ ಮೂರುಮೂರು ಮುಖ್ಯ ನಗರಗಳ ಪ್ರವಾಸ ಕಂಪೆನಿಯೊಂದಿಗಾಗಿತ್ತು. ನಂತರ ಲಂಡನ್ನಿನ ನಾಲ್ಕು ದಿನ ನಮ್ಮ ಸ್ವಂತ ಖರ್ಚಿನಲ್ಲಿ, ಸ್ವಂತದ್ದೇ ಏರ್ಪಾಡುಗಳು..

    ಟೂರ್ ಕಂಪೆನಿಯಿಂದ ಪ್ರವಾಸದ ವಿವರಗಳ ಪೇಪರ್(`ಐಟಿನರಿ') ಸಿಕ್ಕಿತು. ಊರು, ಹೋಟೆಲ್ ವಿವರ, ಊಟತಿಂಡಿ ವ್ಯವಸ್ಥೆ, ಆಪ್ಷನಲ್ ಟೂರುಗಳು ಹೀಗೆ ಪ್ರವಾಸಕ್ಕೆ ಸಂಬಂಧಪಟ್ಟ ಸ್ಥೂಲಮಾಹಿತಿ ಅದರಲ್ಲಿತ್ತು....

    ಯಾವುದೇ ಪ್ಯಾಕೇಜ್ ಟೂರಿನಲ್ಲಿ ಹೋದರೂ ಉಳಿಯುವ ಹೋಟೆಲ್ಲಿನಲ್ಲಿ ಬೆಳಗಿನ ಉಪಹಾರ-ಬ್ರೇಕ್‍ಫಾಸ್ಟ್-ಉಚಿತವಿರುತ್ತೆ. ನಮ್ಮಲ್ಲಿಯ ಕಂಪೆನಿಗಳು ಲಂಚ್-ಡಿನ್ನರ್ ಕೂಡ ನಮ್ಮ ಪ್ಯಾಕೇಜ್ ದರದಲ್ಲಿ ಸೇರಿಸಿರುವುದರಿಂದ ಅದನ್ನೂ ಒದಗಿಸುತ್ತವೆ. ಕೆಲವು ಕಂಪೆನಿಗಳಲ್ಲಿ ಇಲ್ಲದಿರುವ ಸಾಧ್ಯತೆಯೂ ಉಂಟು. ನಮ್ಮದು ವಿದೇಶೀ ಟೂರ್ ಕಂಪೆನಿಯಾದ್ದರಿಂದ ಮಧ್ಯಾಹ್ನದ ಊಟ ಒಳಗೊಂಡಿರಲಿಲ್ಲ. ಹತ್ತೊಂಬತ್ತು ದಿನದಲ್ಲಿ ಒಂಬತ್ತು ದಿನ ರಾತ್ರಿಯೂಟವಿತ್ತು. ಈ ಕಂಡೀಷನ್‍ನಿಂದ ನಮ್ಮ ಲಂಚ್ ಡಿನ್ನರ್ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕಿತ್ತು. ವಿದೇಶದ ಖರ್ಚೆಂದರೆ ಸಾಮಾನ್ಯವಲ್ಲ. 20 ಲಂಚ್, 20 ಡಿನ್ನರ್ ಅಂದರೆ ಸಾವಿರಾರು ರೂಗಳು ಕೈಬಿಡುತ್ತೆ. ಅಷ್ಟೆಲ್ಲಾ ದುಡ್ಡು ಕುಣಿವ ಕಾಲವಲ್ಲ. ಜೊತೆಗೆ ಅಲ್ಲಿ ನಮಗೆ ರುಚಿಸುವ ಊಟವೂ ಸಿಗುವುದಿಲ್ಲ. ಇಂಜಿನಿಯರ್ ಪತಿಯ ತಲೇಲಿ ಒಂದು ಐಡಿಯಾ ಹೊಳೆಯಿತು.

    ಅಲ್ಲಿ ಹೋಟೆಲ್ಲುಗಳಲ್ಲಿ `ಕಾಂಪ್ಲಿಮೆಂಟರಿ' ಅಂದರೆ, ನಿಮ್ಮನ್ನ ಮೆಚ್ಚಿಸುವುದಕ್ಕಾಗಿ, ಆ ಹೋಟೆಲ್ ಬಗ್ಗೆ ನಿಮ್ಮ ತಾರೀಫ್‍ಗಾಗಿ ಕಾಫಿ ಮಾಡಿಕೊಳ್ಳಲು ಬೇಕಾದ ಕಾಫಿಪುಡಿ, ಸಕ್ಕರೆ, ಹಾಲು ಟೀ ಎಲ್ಲವೂ ಪುಡಿಯ ರೂಪದ ಪ್ಯಾಕೆಟ್‍ಗಳಲ್ಲಿ ಮತ್ತು ಕಾಫಿ ಮೇಕರ್ ಕೂಡ ಇಟ್ಟಿರುತ್ತಾರೆ. ಕೆಲವು ಹೋಟೆಲ್ಲುಗಳಲ್ಲಿ ಧಾರಾಳವಾಗಿ ಪ್ಯಾಕೆಟ್ಟುಗಳ ಇಟ್ಟರೆ ಕೆಲವು ಕಂಜೂಸ್ ಹೋಟೆಲ್ಲುಗಳೂ ಇರುತ್ತವೆ, ನೀವು ಒಂದು ದಿನ ಉಳಿಯುವುದಾದರೆ ಒಂದೇ ಸಲ ಮಾಡುವಷ್ಟು..ಆದರೆ, ಕಾಫಿಪ್ರಿಯರಾದ ನಮ್ಮಂಥ ಪ್ರವಾಸಿಗರು ಬಂದ ತಕ್ಷಣ ಆಯಾಸ ಪರಿಹಾರಕ್ಕೆ, ಮತ್ತೆ ರಾತ್ರಿ, ಬೆಳಿಗ್ಗೆ ಹೀಗೆ ಕಾಫಿ ಸಮಾರಾಧನೆ ಮಾಡಿಕೊಳ್ಳುತ್ತಲೇ ಇರುವ ಅಭ್ಯಾಸ. ಆಗ, ಅಗತ್ಯವಿದ್ದರೆ ಫೋನ್ ಮಾಡಿದರೆ ತಕ್ಷಣ ಕಳಿಸಿಕೊಡುತ್ತಾರೆ. ಇದು ಸುಮಾರಾಗಿ ಎಲ್ಲ ಕಡೆ ಇರುವ ಪ್ರವಾಸೋದ್ಧಾರ ಟೆಕ್ನಿಕ್ಕು. `ಕಾಫಿ ಎಲ್ಲ ಕಡೆ ಲಭ್ಯ, ಯೋಚಿಸಬೇಕಿಲ್ಲ. ಊಟಕ್ಕೆ ಹೀಗೆ ಮಾಡಬಹುದಲ್ವಾ, ನೀರು ಬಿಸಿಮಾಡಲು ಜಗ್ ಹಾಗೂ ಅದಕ್ಕೆ ತಕ್ಕ ಪ್ಲಗ್ ಪಾಯಿಂಟ್ಗಳಿರುವ ವ್ಯವಸ್ಥೆಯಿರುತ್ತೆ. ಏನಾದ್ರೂ ಹೆಚ್ಚು ಕಷ್ಟವಿಲ್ದೆ ಮಿನಿಮಮ್ ಅಡಿಗೆ ಸಾಧ್ಯನಾ...' ತಲೆಗೊಂದು ಹುಳ ಬಿಟ್ಟರು. ಯೋಚನೆ ಮಾಡಿದೆ...

    `ಯುರೇಕಾ...' ಸಾಧ್ಯತೆ ಹೊಳೆದೇಬಿಟ್ಟಿತು. ನಾವೊಂದು ಪುಟ್ಟ ಎಲೆಕ್ಟ್ರಿಕ್ ರೈಸ್ ಕುಕ್ಕರ್ ತೆಗೆದುಕೊಂಡೆವು ಒಂದು ಲೋಟ ಅಕ್ಕಿ ಅನ್ನವಾಗುವಷ್ಟು...! ಮುಂದಿನ ಸ್ಟೆಪ್, ಒಂದು ಕೆ.ಜಿ ಅಕ್ಕಿ- ಒಂದು ಕೆ.ಜಿ ಒಗ್ಗರಣೆ, ಮಸಾಲೆ ಎಲ್ಲ ಹಾಕಿ ಹುರಿದು ರೆಡಿ ಮಾಡಿದ ಉಪ್ಪಿಟ್ಟಿನ ರವೆ- ಒಂದು ಕೆ.ಜಿ ಕುಟ್ಟವಲಕ್ಕಿ(ಅವಲಕ್ಕಿ ಪುಡಿಗೆ ಹುಣಿಸೆಹುಳಿ, ಖಾರ, ಉಪ್ಪು, ಒಗ್ಗರಣೆ, ಕೊಬ್ಬರಿ ಸೇರಿಸಿದ ಒಣಪುಡಿ) ಇದಿಷ್ಟು ಮುಖ್ಯ ಆಹಾರ ಪ್ಯಾಕ್ ಮಾಡಿದೆ. ಅನ್ನಕ್ಕೆ ವ್ಯಂಜನವಾಗಿ ಮೆಂತ್ಯದಹಿಟ್ಟಿನ ಗೊಜ್ಜಿನ ಪುಡಿ(-ಅದಕ್ಕೆ ಸಣ್ಣ ಡಬ್ಬಿಯಲ್ಲಿ ಒಗ್ಗರಣೆ, ಕುದಿಸಿ ಗಟ್ಟಿಮಾಡಿದ ಹುಣಿಸೆರಸ ಈ ಎಲ್ಲ ಬೆರೆಸಿದರೆ ಗೊಜ್ಜು ರೆಡಿ), ಒಂದಿಷ್ಟು ಪುಳಿಯೋಗರೆ ಗೊಜ್ಜು, ನಿಂಬೇಹಣ್ಣಿನ ಉಪ್ಪಿನಕಾಯಿ, ಇಷ್ಟು ರೆಡಿಯಾಯಿತು. ಕಾಳುಗಳು, ಡ್ರೈಫ್ರೂಟ್ಸ್ ಹುರಿದು ಪುಡಿ ಮಾಡಿ ಬೆಲ್ಲ ಕೊಬ್ಬರಿ ಹಾಕಿ 30 ಪೌಷ್ಠಿಕ ಲಡ್ಡು ತಯ್ಯಾರು ಮಾಡಿದೆ. ಇದೆಲ್ಲ ಮಾಡ್ತಾ ಮಾಡ್ತಾ ನನಗೇ ನಗು, ಸಂಶಯ. ಅಲ್ಲಿ ಇದೆಲ್ಲ ಮಾಡಕ್ಕಾಗತ್ತಾ, ಲಗೇಜ್ ಸಿಕ್ಕಾಪಟ್ಟೆ ಆಗತ್ತಲ್ಲ, ಕೆಲಸ ಹೆಚ್ಚಾಗತ್ತೆ ಹೀಗೇ ಸಂಶಯಗಳು...!

    ಆದರೆ, ಇದೆಷ್ಟು ಉಪಯೋಗವಾಯಿತು, ನಮ್ಮನ್ನು ಹೇಗೆಲ್ಲ ಕಾಪಾಡಿತು ಎಂದು ಮುಂದೆ ಹೇಳುವೆ...

    ಯೂರೋಪಿನ ಬಹುಪಾಲು ದೇಶಗಳಿಗೆ ಹೋಗಲು ನಮಗೆ ಒಂದೇ ವೀಸಾ ಅಂದರೆ, `ಷೆಂಗೆನ್ ವೀಸಾ' ಇದ್ದರೆ ಸಾಕು. ಜರ್ಮನಿ, ಇಟೆಲಿ, ಫ್ರಾನ್ಸ್ ಇತ್ಯಾದಿಗಳಿಗೆ ನಿರಾಳವಾಗಿ ಹೋಗಬಹುದು. ಯಾಕೆಂದರೆ ಇವೆಲ್ಲ ಯೂರೋಪಿಯನ್ ಒಕ್ಕೂಟದ ಸದಸ್ಯರು. ಆದರೆ, ಬ್ರಿಟನ್ ಪಾಲಿಸಿಯೇ ಬೇರೆ, ಎಲ್ಲರಿಗೂ ತಿಳಿದಿದೆ ಇತ್ತೀಚೆಗೆ `ಬ್ರೆಕ್ಸಿಟ್' ಎನ್ನುವ ವಿವಾದ. ಬ್ರಿಟನ್ ಒಕ್ಕೂಟದಲ್ಲಿದ್ದರೂ ಒಂಥರಾ ಇಲ್ಲದಂತ ನೀತಿ ಅನುಸರಿಸುತ್ತೆ. ಜಗತ್ತನ್ನೆ ಆಳಿ ಅಭ್ಯಾಸ. ಒಟ್ಟಲ್ಲಿ ನಾವು ಮೊದಲು ಬ್ರಿಟನ್ ನೆಲವನ್ನೆ ಮೆಟ್ಟಬೇಕಾಗಿದ್ದರಿಂದ ಷೆಂಗೆನ್ ವೀಸಾ ಕೆಲಸ ಮಾಡದೆ, ಬ್ರಿಟನ್ ವೀಸಾ ಪಡೆಯಬೇಕಿತ್ತು. ವೀಸಾಗೆ ಆಗ ಮದ್ರಾಸಿಗೇ ಹೋಗಬೇಕಿತ್ತು. ಸರಿ, ಮದ್ರಾಸಿನ ಬಸ್ಸು ಹತ್ತಿಳಿದು,. ಬ್ರಿಟನ್ ಕಾನ್ಸುಲೇಟ್ ಆಫೀಸಿಗೆ ಹೋದೆವು. ಆ ಕಾನ್ಸುಲೇಟ್ ಸಿಬ್ಬಂದಿಯೋ ಬಹಳ ಸ್ಟ್ರಿಕ್ಟ್. ಕೂಲಂಕುಷವಾಗಿ ತನಿಖೆ ಮಾಡಿ, ಆ ಪೇಪರ್ ಈ ಪೇಪರ್ ಅಂತ ಗೊಂದಲ ಮಾಡಿ ಕಡೆಗೂ ವೀಸಾ ಮುದ್ರೆ ಬೀಳುವ ಹೊತ್ತಿಗೆ `ಕಲ್ಲು ಕೋಳಿ ಕೂಗಿ ಮರ ಕೋಳಿ ಮಾತಾಡ್ತು ಅನ್ನೊ ಗಾದೆಯಷ್ಟು' ಸುಸ್ತಾಗಿತ್ತು.

    ಸರಿ, ವೀಸಾ, ಪಾಸ್ಪೋರ್ಟ್, ಬಟ್ಟೆಗಳು, ಕೂಲಿಂಗ್ ಗ್ಲಾಸ್, ಪೆನ್ನುಪುಸ್ತಕ, ಛತ್ರಿ, ಕಾಸ್ಮೆಟಿಕ್ಸ್, ಸಣ್ಣಪುಟ್ಟ ತೊಂದರೆಗೆ ಮಾತ್ರೆಗಳು ಎಲ್ಲ ದೊಡ್ಡದೊಂದು ಸೂಟ್ಕೇಸ್ ಆದರೆ, ನಮ್ಮ ಉದರಪೋಷಣೆಯ ಕುಕ್ಕರ್, ಆಹಾರಸಾಮಗ್ರಿಗಳದೇ ಒಂದು ಪುಟ್ಟ ಸೂಟ್ಕೇಸ್ ರೆಡಿಯಾಯಿತು.. ಈ ಹಂತದಲ್ಲಿ, ಇಲ್ಲಿಯವರೆಗೆ ಅಪ್ಪಟ ಭಾರತೀಯ ನಾರಿಯಾಗಿ ಸೀರೆಯಲ್ಲೇ ಸಡಗರಿಸುತ್ತಿದ್ದವಳಿಗೆ ಮಕ್ಕಳು ಹೊಸದೊಂದು ಅಹವಾಲು ಇಡುತ್ತಾ ಬೆನ್ನು ಬಿದ್ದರು. `ಅಮ್ಮಾ, ಈಗ ಚೂಡಿದಾರ್ ಎಲ್ಲರೂ ಹಾಕ್ಕೊಳ್ಳೋ ಡ್ರೆಸ್ಸು. ತುಂಬಾ ಅನುಕೂಲ ಕೂಡ ಹಾಕ್ಕೊ..' ದುಂಬಾಲು ಹೆಚ್ಚಿತು. ನಾನೋ, `ಅದಕ್ಕೆಲ್ಲ ಯಾರು ದುಡ್ಡು ಸುರೀತಾರೆ, ಟೂರ್ ಬಿಟ್ರೆ ಮತ್ತೆ ನಾನೆಲ್ಲಿ ಹಾಕ್ಕೋತೀನಿ...'ಎಂದು ಹಳೇ ರಾಗ ಹಾಡುತ್ತ್ತ, ನನ್ನೆತ್ತರ ಮೀರಿ ಬೆಳೆದಿದ್ದ ಮಕ್ಕಳ ನಾಲ್ಕಾರು ಡ್ರೆಸ್ ಸೂಟ್ಕೇಸಿಗೆ ತುಂಬಿದ್ದೆ...!

    ವಿಮಾನದಲ್ಲಿ ಲಗೇಜ್ ಹಾಕಲು ನಿಯಮಗಳಿವೆ....

    `ಚೆಕಿನ್'ಗೆ ಹಾಕಲು ಎರಡು ಸೂಟ್ಕೇಸ್ ರೆಡಿಯಾಯಿತು, ಎಲ್ಲವೂ ನಿಯಮಾನುಸಾರ... `ಏನಿದು `ಚೆಕಿನ್', ವಿಮಾನದಲ್ಲಿ ಲಗೇಜ್ ತೆಗೆದುಕೊಂಡು ಹೋಗೋಕೆ ನಿಯಮವೆ?' ನಿಮಗನ್ನಿಸಬಹುದು, ಹೌದು, ನಿಯಮಗಳಿವೆ. ಅಂದರೆ, ಪಯಣಿಸುವ ವಿಮಾನದ ರೂಲ್ಸ್ ಪ್ರಕಾರ ಅವರು ಹೇಳಿದ ಭಾರದ ಮಿತಿಯಲ್ಲಿ ನಮ್ಮ ಸಾಮಾನಿನ ಸೂಟ್ಕೇಸ್ ಸಿದ್ಧಮಾಡಬೇಕು. ಒಂದೆರಡು ಕೆಜಿ ಕೂಡ ಹೆಚ್ಚಿರಕೂಡದು. ಮನೆಯಲ್ಲೆ ತೂಕ ಮಾಡಿರಬೇಕು. ಕೌಂಟರಿನಲ್ಲಿ ನಮ್ಮ ಟಿಕೆಟ್ ತೋರಿಸಿ, `ಬೋರ್ಡಿಂಗ್ ಪಾಸ್'(ವಿಮಾನ ಹತ್ತಲು ಅನುಮತಿ ಟಿಕೆಟ್) ಪಡೆಯುವಾಗಲೇ ಅವರಿಗೆ ಒಪ್ಪಿಸಬೇಕು. ಅವುಗಳನ್ನು ತೂಕಮಾಡಿ ಸರಿಯಿದ್ದರೆ ಪಕ್ಕದ ಬೆಲ್ಟಿಗೆ ಹಾಕುತ್ತಾರೆ, ಸಿಬ್ಬಂದಿಯ ಮುಖಾಂತರ ಅವು ವಿಮಾನದ ಸ್ಟೋರೇಜ್ ವಿಭಾಗದಲ್ಲಿ ಸಂಗ್ರಹವಾಗಿ, ನಾವು ವಿಮಾನ ಇಳಿದು ಹೊರಬರುವಾಗ, `ಲಗೇಜ್ ಬೆಲ್ಟ್' ಎನ್ನುವ ವಿಭಾಗದಲ್ಲಿ ನಮಗಾಗಿ ಕಾಯುತ್ತ ಸುತ್ತುತ್ತಲೇ ಇರುತ್ತವೆ. ಯಾವ ಆತಂಕವೂ ಇಲ್ಲ. ಅಲ್ಲಿ ತೆಗೆದುಕೊಂಡರಾಯ್ತು.

    ಇನ್ನು `ಕ್ಯಾಬಿನ್ ಬ್ಯಾಗ್' ಅಂದರೆ ನಮ್ಮ ಜೊತೆಯಲ್ಲೆ ವಿಮಾನದೊಳಗೆ ಒಯ್ಯಬಹುದಾದ, ಇಂತಿಷ್ಟು ಕೆ.ಜಿ.(ಸುಮಾರಾಗಿ 7 ಕೆ.ಜಿ)ಎಂದು ನಿಗದಿಪಡಿಸಿದ ಬ್ಯಾಗ್‍ಗೆ ಅನುಮತಿಯಿರುತ್ತದೆ. ಇದರಲ್ಲಿ ನೀರಿನ ಬಾಟಲಿ, ಚಾಕು ಚೂರಿ, ಪೌಡರ್, ಕ್ರೀಂ, ಕತ್ತರಿ ಒಳಗೊಂಡು ಹರಿತವಾದ ಯಾವುದೇ ವಸ್ತುಗಳನ್ನು ಇಡುವಂತಿಲ್ಲ. ಕೆಲವು ದೇಶಗಳಲ್ಲಿ ಈ ಪಟ್ಟಿ ಇನ್ನೂ ಬೆಳೆಯುತ್ತೆ. ಇವೆಲ್ಲ ವಿಮಾನದೊಳಗಿನ ಸುರಕ್ಷಿತೆಯ ದೃಷ್ಟಿಯಿಂದ ಮಾಡಿದ ನಿಯಮಗಳು. ಭಯೋತ್ಪಾದನೆ, ವಿಮಾನದ ಹೈಜ್ಯಾಕ್(ಅಪಹರಣ) ಅಥವಾ ಯಾವುದೇ ತೆರನ ಕೆಟ್ಟ ಘಟನೆಗಳು ಘಟಿಸದೆ ವಿಮಾನ ಪ್ರಯಾಣಿಕರನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸಬೇಕಲ್ಲ. ಹಾಗಾಗಿ, ನಿಷೇಧವಸ್ತುವೇನಾದರೂ ಕ್ಯಾಬಿನ್ ಬ್ಯಾಗಿನಲ್ಲಿದ್ದರೆ ಕಿತ್ತುಕೊಳ್ಳುತ್ತಾರೆ, ಆತಂಕದ್ದಾದರೆ ವಿಚಾರಣೆ ಜೋರಾಗಿರುತ್ತೆ, ಪ್ರಯಾಣಕ್ಕೆ ಅನುಮತಿಯೂ ಸಿಗದಿರಬಹುದು.

    ಹಾಗಾಗಿ ಯಾವುದೇ ಏರ್ಲೈನ್ಸಿನ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಅದಕ್ಕೆ ಬದ್ಧರಾಗಿ ನಡೆದುಕೊಳ್ಳಲೇಬೇಕು. ಇದರಲ್ಲಿ ಯಾರಿಗೇ, ಯಾವುದೇ ವಿನಾಯಿತಿಯಿಲ್ಲ...!

    ಸರಿ, ನನ್ನ ಕತೆಗೆ ಬರುವೆ. ಪ್ಯಾಕಿಂಗ್ ಎಲ್ಲ ಮುಗಿಯಿತು.

    ಹೊರಡುವ ಕ್ಷಣ ಹತ್ತಿರ ಬಂದಾಗ ಎಂಥ ಆತಂಕ ಎಂದರೆ, `ಯಾಕೆ ವಿದೇಶಕ್ಕೆಲ್ಲ ಹೋಗ್ತಿದೀನಿ, ಅಲ್ಲಿ ನನ್ನೋರು(ಪತಿಯ ಹೊರತು) ಯಾರಿರಲ್ಲ, ಕಂಡಿರದ ಜಾಗ, ಹೇಗೋ ಏನೋ. ಏನಾದ್ರೂ ಆದರೆ...' ತಳಬುಡವಿಲ್ಲದ ಆತಂಕ. ವಿಮಾನದಲ್ಲಿ ಗಂಟಾನುಗಟ್ಟಲೆ ಕೂತು ಹೋಗುವ ಪ್ರಸಂಗ ನೆನೆದೇ ಅರ್ಥವಿಲ್ಲದ ತಳಮಳ...!

    ಆದರೆ, ಒಂದು ವಿಚಾರ ಹೇಳುವೆ, ನಮ್ಮ ಈ ವಸುಂಧರೆ ನಿಜಕ್ಕೂ ರತ್ನಗರ್ಭಸಂಜಾತೆ. ನಾವು ಹೇಳುವ ಬ್ರಹ್ಮಾಂಡ ಏನಿದೆ, ಅದರಲ್ಲಿರೋ ಅನೇಕ ಗ್ರಹ ಉಪಗ್ರಹಗಳಲ್ಲಿ ಭೂಮಿಯೊಂದೇ ವಾಸಯೋಗ್ಯ ಅಂತ ನಮಗೆಲ್ಲ ಗೊತ್ತಿದೆ.. ಸತ್ಯ-ಶಿವ-ಸೌಂದರ್ಯ ಅಂತ ಏನು ಹೇಳುತ್ತೇವೋ ಅವು ಈ ಭೂಮಿಯ ಅಣುಅಣುವಿನಲ್ಲಿ ತುಂಬಿದೆ. ಪರ್ವತ, ಬೆಟ್ಟಗುಡ್ಡ, ನದಿ ಸಮುದ್ರ ತೊರೆ, ಕಾಡು ಕಣಿವೆ, ಅಗ್ನಿಪರ್ವತ, ವಿಸ್ಮಯಗುಹೆ, ಹೂವು ಹಕ್ಕಿ, ಪ್ರಾಣಿಪಕ್ಷಿ ಎಲ್ಲ ಎಲ್ಲ ನಿಗೂಢಸೌಂದರ್ಯದ ಜೊತೆಜೊತೆಗೆ, ದೇವನನ್ನೇ ಮೀರಿಸುವ ಬುದ್ಧಿಮತ್ತೆಯಲ್ಲಿ ಮಾನವನಿರ್ಮಿಸಿದ ಅದ್ಭುತ ಅಚ್ಚರಿಗಳು, ತಂತ್ರಜ್ಞಾನ, ಹಾಳುಮಾಡಿದ ಚರಿತ್ರೆ, ಕಟ್ಟಿದ ಸಾಮ್ರಾಜ್ಯ, ಅದರ ಭವ್ಯರೂಪಗಳು ಇವೆಲ್ಲ ಕಾಣದೆ ನಾವು ಕೂತಲ್ಲೆ ಕೂತು ಆಯಸ್ಸು ಸವೆಸುವುದೇಕೆ?. ಎಲ್ಲವನ್ನೂ ಕಾಣಲು ಎಲ್ಲರಿಗೂ ಆಗದು ಒಪ್ಪುತ್ತೇನೆ; ಇದಕ್ಕೆ ಮನಸ್ಸಿದ್ದರೆ ಸಾಲದು ಕಾಂಚಾಣ ಬೇಕು, ಚೂರಲ್ಲ ಹೆಚ್ಚು ಅದನ್ನೂ ಒಪ್ಪುತ್ತೇನೆ; ಆದರೆ, ಹಾಗಂತ ಪ್ರವಾಸವೆಂಬ ಅದ್ಭುತ ಅನುಭವದಿಂದ ವಂಚಿತರಾಗಬಾರದು.. ನಮ್ಮ ಆಯವ್ಯಯದ ಅನುಗುಣವಾಗಿ ಅಕ್ಕಪಕ್ಕದೂರಿಗೇ ಪ್ರವಾಸ ಹೋಗಬಹುದು. ಸಾಧ್ಯವಾ, ಇಂಥ ವಿದೇಶ ಪ್ರವಾಸ ಮಾಡಬಹುದು. ಕೆಲವರಿಗೆ ಹಣವಿದ್ದರೂ ಹೋಗುವ ಆಸಕ್ತಿ ಇರುವುದಿಲ್ಲ, ಎಲ್ಲಿಗೆ ಹೋಗಬೇಕೆಂಬ ಮಾಹಿತಿ ಇರುವುದಿಲ್ಲ, ಹೇಗೆ ಹೋಗುವುದು ಅದೂ ತಿಳಿದಿರುವುದಿಲ್ಲ. ಇದರಿಂದ ನಾವು ಅನುಭವವಂಚಿತರಾಗುವುದು ಗ್ಯಾರೆಂಟಿ. ಚೈತನ್ಯ ತುಂಬಿದ ಆಗಸದ ಬಣ್ಣಗಳು, ಅಲ್ಲಿ ಪಯಣಿಸುವ ಥ್ರಿಲ್, ಚೆಲುವಿನಲ್ಲಿ ಬಿರಿಯುವ ಧಾರಿಣಿಯನ್ನು ನಾವು ಅಷ್ಟಿಷ್ಟಾದರೂ ನೋಡಬೇಕಲ್ಲವೇ?

    ಹಣ, ಅನುಕೂಲ, ಆರೋಗ್ಯ ಇದ್ದರೆ ಇಂದೇ ಮನಸ್ಸು ಮಾಡಿ. ಆಸಕ್ತಿ ತಂದುಕೊಳ್ಳಿ. ಒಮ್ಮೆ ಮೈಕೊಡವಿ ಹೋದರೆ ತಿಳಿಯುವುದು, ಈ ಲೋಕ ಎಷ್ಟು ಸುಂದರವೆಂದು...!

    ಎಲ್ಲಿ ಹೋದರೂ ನಿರಾಸೆ ಖಂಡಿತಾ ಆಗದು. ನೋಟ, ಶ್ರಾವ್ಯಕ್ಕೆ ಸಿಗುವ ದೃಷ್ಯಗಳು ಮಾಹಿತಿ ನಿಜಕ್ಕೂ ಗ್ರೇಟ್; ಜಂಜಾಟದ ಬದುಕಲ್ಲಿ ಕಳೆದುಹೋಗಿದ್ದ ಉತ್ಸಾಹವನ್ನು ಪ್ರವಾಸಗಳು ಮತ್ತೆ ಮರಳಿ ತಂದುಕೊಡುತ್ತವೆ; ಅಲ್ಲಿಯ ಜನ, ಭಾಷೆ, ಚರಿತ್ರೆ, ಬೆಳವಣಿಗೆಯ ಅರಿವು ಸಿಗುತ್ತದೆ; ಏಕತಾನತೆ ಕಳಚಿಹೋಗುತ್ತದೆ; ಆಗ ಬದುಕನ್ನು ಇನ್ನಷ್ಟು ಖುಷಿಯಿಂದ ಸವಿಯಬಹುದು. ವಿಭಿನ್ನ ಜನರ ಪರಿಚಯ, ವ್ಯಕ್ತಿತ್ವ, ಬದುಕಿನ ರೀತಿನೀತಿ, ಒಳಿತು ಕೆಡುಕು ಇವುಗಳ ದರ್ಶನ ಕೂಡ ಸಾಧ್ಯ. ಇವು ನಮ್ಮ ಆಂತರಿಕ ಒಳಗನ್ನು ಒರೆಗೆ ಹಚ್ಚಿಕೊಳ್ಳುವ ಸಾಧನವಾಗಬಹುದು, ಬದುಕನ್ನು ಬದಲಿಸಬಹುದು, ಚಿಕ್ಕ ಪ್ರೇರಣೆಯಾಗಬಹುದು. ಇವೇನೂ ಆಗದಿದ್ದರೂ, ಮಕ್ಕಳೊಂದಿಗೆ, ಸ್ನೇಹಿತರೊಂದಿಗೆ, ಬಂಧುಗಳೊಂದಿಗೆ ಮಾಡುವ ಪ್ರವಾಸಗಳು ಕಟ್ಟಿಕೊಡೋ ಸಂಭ್ರಮ ಹಬ್ಬಗಳಂತೆ ಜೀವನೋತ್ಸಾಹ ಹೆಚ್ಚಿಸಿಬಿಡುವುದಂತೂ ನಿಜ. ಬದುಕಿನುದ್ದಕ್ಕೂ ಸಂಭ್ರಮದ ನೆನಪಾಗಿ, ಆಗಾಗ ಎನರ್ಜಿ ಬೂಸ್ಟರ್‍ನಂತೆ ನಮ್ಮ ಸೋಲುವ ಬದುಕನ್ನು ಗೆಲುವಾಗಿಸಿಬಿಡುತ್ತವೆ.

    ಸರಿ, ನಾನೀಗ ಹೊರಡುವ ಕ್ಷಣ ಬಂದೇ ಬಿಟ್ಟಿತು. ಪ್ರಥಮಬಾರಿಗೆ ಕಾಲಿಗೆ ಷೂ ಹಾಕಿ ಲೇಸು ಕಟ್ಟುವಾಗ ಒಂದಿಷ್ಟು ಚಡಪಡಿಕೆ, ಚೂರು ಆತಂಕದಲ್ಲೆ ಕಾರು ಹತ್ತಿದೆ. ಕಾರು ಹೊರಟೇಬಿಟ್ಟಿತು.

    ಏರ್ಪೋರ್ಟ್‍ನಲ್ಲಿ ಇಳಿದಾಯಿತು.. ಸುತ್ತ ನನ್ನ ತಮ್ಮಂದಿರು, ಮೈದುನರೆಲ್ಲಾ ಪ್ರಥಮಯಾನಕ್ಕೆ ಶುಭ ಹಾರೈಸಲು ನಿಂತಿದ್ದಾರೆ. ಪ್ರತಿಭೆ ಮೇಲೆ ವಿದೇಶಯಾನಕ್ಕೆ ಹೋಗೋರಿಗೆ ಶುಭ ಹಾರೈಸುವುದು ಗೊತ್ತಿತ್ತು ಅಲ್ಲಿಯವರೆಗೆ. ಆದರೆ,

    Enjoying the preview?
    Page 1 of 1