Discover millions of ebooks, audiobooks, and so much more with a free trial

Only $11.99/month after trial. Cancel anytime.

Raga Sangama
Raga Sangama
Raga Sangama
Ebook99 pages30 minutes

Raga Sangama

Rating: 0 out of 5 stars

()

Read preview

About this ebook

  • - A love story with a combination of mystery. A crispy novel with a limited number of characters. Every page is filled with a curiosity which easily takes readers to last page. Lively narration is the highlight. However, the readers would turn back to understand who is saying what. It could have been presented a way better than what it is.

  • - People who are looking for a good love story and this is especially the one made of ladies; as the lead character (female) is involved in the process of investigating and providing the justice to her love.

  • - A reachable novel to its readers.

  • ರಾಗ ಸಂಗಮ
  • - ಪ್ರೇಮ ಕಥನ, ಅದರೊಳಗಿನ ತಲ್ಲಣ. ಈ ಕಾದಂಬರಿ ಬರೀ ಪ್ರೇಮ ಕಥೆಯಲ್ಲದೆ, ಒಂದು ಕೌತುಕದಿಂದಲೂ ಕೂಡಿದೆ. ಓದುಗರನ್ನು ಸರಾಗವಾಗಿ ಕೊನೆಯ ಪುಟದವರೆಗೂ ಕೊಂಡೊಯ್ಯುತ್ತದೆ.

  • - ಕೆಲವೊಂದು ಬಾರಿ ಓದುಗರು ಪುಟ ತಿರುಗಿಸಿ ನೋಡಿ, ಮತ್ತೆ ಓದಬೇಕೆನಿಸುತ್ತದೆ. ಇನ್ನು ಚೆಂದವಾಗಿ ನಿರೂಪಿಸಬಹುದಿತ್ತೆಂದು ನನ್ನ ಅನಿಸಿಕೆ.

  • - ಒಳ್ಳೆ ಪ್ರೇಮ ಕತೆ, ಹೆಂಗೆಳೆಯರಿಗೆ ಹೇಳಿ ಮಾಡಿಸಿದಂತಿದೆ. ಕಥಾನಾಯಕಿ ಇಲ್ಲಿ ತನ್ನ ಪ್ರೀತಿಗಾದ ಅನ್ಯಾಯಕ್ಕೆ ನ್ಯಾಯ ಒದಗಿಸುವ ಕಥೆಯ ತಿರುಳೇ ರಾಗ ಸಂಗಮ...
LanguageKannada
Release dateAug 12, 2019
ISBN6580200800049
Raga Sangama

Related to Raga Sangama

Related ebooks

Reviews for Raga Sangama

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Raga Sangama - Vimala Ramani

    http://www.pustaka.co.in

    ರಾಗ ಸಂಗಮ

    Raaga Sangama

    Author :

    ವಿಮಲಾ ರವಣಿ

    Vimala Ramani

    For more books

    http://www.pustaka.co.in/home/author/vimala-ramani

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಸಂಕಲ್ಪ

    ಸ್ಮಿತಾ, ತೇಜಸ್ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಇವರ ಜೀವನ ಒಂದು ಘಟ್ಟ ತಲುಪುವ ಹಂತದಲ್ಲಿರುವಾಗ ಒಂದು ದುರಂತ ಸಂಭವಿಸುತ್ತದೆ. ಅದೇನೆಂದರೆ ತೇಜಸ್‍ನ ಸಾವು! ಸ್ಮಿತಾ ಇದೇ ನೆನಪಲ್ಲಿ ಮನೋವ್ಯಾಕುಲತೆಗೆ ಒಳಗಾದಾಗ, ನಯನ್‍ನೊಂದಿಗೆ ಅವಳ ಮದುವೆ ನಿಶ್ವಯಿಸಲ್ಪಡುತ್ತದೆ. ಆದರೆ ಮತ್ತೊಂದು ದುರಂತ ಎದುರಾಗುತ್ತದೆ. ತೇಜಸ್‍ನ ಆತ್ಮ ಅವಳನ್ನು ಆಕ್ರಮಿಸುತ್ತದೆ!

    ನನ್ನ ಏನು ಮಾಡು ಅಂತೀಯಾ? ಪ್ರೇಮದ ಮಾತು ಆಡಿದರೆ ಮದುವೆ ಆಗಲಿ, ಅಂತೀಯಾ. ಆಧ್ಯಾತ್ಮದ ವಿಚಾರ ಮಾತಾಡಿದರೆ ಕಿವಿ ಮುಚ್ಚಿಕೊಳ್ತೀಯಾ! ಹಾಗಿದ್ರೆ ನಾನು ಯಾವ ಮಾತು ಆಡಲಿ?

    ಸ್ಮಿತಾ ನಕ್ಕಳು.

    ಸರಿ, ನಾನು ಕೇಳ್ತೀನಿ, ನೀವು ಉತ್ತರ ಕೊಡ್ತಾ ಬನ್ನಿ. ನಿಮ್ಮ ಕಂಪ್ಯೂಟರ್ ಕ್ಲಾಸ್ ಯಾವ ಹಂತಕ್ಕೆ ಬಂದಿದೆ?

    ಫೆಂಟಾಸ್ಟಿಕ್! ನೋಡು ಸುಮಿ...

    ಹೇಳಿ...

    ಸಾರಿ ಸ್ಮಿತಾ, ಒಬ್ಬ ಹುಡುಗಿ ಸುಂದರವಾಗಿದ್ದಾಳೆ. ಅವಳೇ ಹೇಳಿಕೊಡ್ತಿದ್ದಾಳೆ. ಕಂಪ್ಯೂಟರ್ ಸ್ಟಡೀಸ್‍ನಲ್ಲಿ ಅವಳು ಎಕ್ಸ್‍ಪರ್ಟ್. ಏನು ರೂಪ...ಏನೂ ಲಾವಣ್ಯ... ಎಂಥ ತಾರುಣ್ಯ... ಏನು ನಡಿಗೆ...

    ಹ್ಞೂಂ...

    ಐ ಮೀನ್ ಅವಳ ಆಂಗ್ಲ ಪಾಂಡಿತ್ಯ ಎಂಥ ಇಂಗಲಿಷ್! ಅದೆಷ್ಟು ಹಿತ...!

    ಸಾಕು ಸಾಕು!

    ನೀನು ಯಾಕೆ ತಪ್ಪಾಗಿ ಅರ್ಥ ಮಾಡಿಕೊಳ್ತಿ?

    ಈಗ ಗೊತ್ತಾಗ್ತಿದೆ, ಯಾಕೆ ನೀವು ಒಂದು ದಿನವೂ ತಪ್ಪಿಸಿಕೊಳ್ಳದ ಹಾಗೆ ಕಂಪ್ಯೂಟರ್ ಕ್ಲಾಸಿಗೆ ಹೋಗ್ತಿದ್ದೀರಿ ಅಂತ!

    ನೋಡು ಸ್ಮಿತಾ, ಸಮ್ಮರ್ ಲೀವ್ ವ್ಯರ್ಥವಾಗಿ ಕಳೀತಿದೆ. ಜಾಲಿಯಾಗಿ ಪಿಕ್‍ನಿಕ್‍ಗೆ ಹೋಗೋಣ ಅಂದೆ. ‘ಅಮ್ಮನಿಗೆ ಹುಷಾರಿಲ್ಲ, ಊರುಬಿಟ್ಟು ಹೋಗಲು ಆಗೋಲ್ಲ’ ಅಂದುಬಿಟ್ಟೆ. ಮತ್ತೆ ನಿನ್ನ ಪ್ರತಿದಿನ ಹೀಗೆ ಸಂಧಿಸುವುದಕ್ಕಾದರೂ ಒಂದು ಕಾರಣ ಬೇಡವೇ? ಅದಕ್ಕೆ ಕಂಪ್ಯೂಟರ್ ಕ್ಲಾಸಿಗೆ ಸೇರಿಕೊಂಡೆ. ಕೆಲಸ ಸಿಕ್ಕಿದರಷ್ಟೇ ಬೇರೆ ಊರಿಗೆ ಹೋಗುವ ಛಾನ್ಸ್..."

    ನಿಜವಾದ ಕಾರಣ ಇದೇನು?"

    ಬೇಕಾದರೆ ಪಲ್ಟಿ ಹೊಡೆದು ಹೇಳ್ತೀನಿ, ಇದೇ ಕಾರಣ ಎಂದ ತೇಜಸ್ ಮೀಸೆ ಮುಟ್ಟಿ ನೋಡಿಕೊಂಡ.

    ಸುಮ್ಮ ಸುಮ್ಮನೆ ಮುಟ್ಟಬೇಡಿ!

    ನಾನೆಲ್ಲಿ ಮುಟ್ಟಿದೆ?

    ಐ ಮೀನ್ ನಿಮ್ಮ ಮೀಸೇನ! ದೊಡ್ಡ ಲಾರ್ಡ್. ಸುಮ್ಮಸುಮ್ಮನೆ ಯಾಕೆ ಮೀಸೆ ಮುಟ್ಟಿ ನೋಡಿಕೊಳ್ತೀರಿ?

    ಅಲ್ಲ, ಮೀಸೆಯ ಮೇಲೆ ಆಸೆ ಇಟ್ಟುಕೊಳ್ಳುವುದು ತಪ್ಪೇನು? ಇದು ಮಾತ್ರ ನಮ್ಮ ಇಷ್ಟದಂತೆ ಬೆಳೆಯುತ್ತದೆ. ಇನ್ನು ಮೇಲೆ ಈ ಮ್ಯಾನರಿಸಮ್‍ನ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡ್ತೀನಿ. ಓಕೆ?

    ಸ್ಮಿತಾ ನಕ್ಕಳು.

    ಮೆಲ್ಲನೆ ಅವಳ ಕೈಗಳನ್ನು ಹಿಡಿದುಕೊಂಡ. ಆದರೆ ಅವಳು ಸರಕ್ಕನೆ ತನ್ನ ಕೈಗಳನ್ನು ಹಿಂದಕ್ಕೆ ಎಳೆದುಕೊಂಡಳು.

    ಇದನ್ನೇ ಬೇಡ ಅನ್ನುವುದು. ಸ್ವಲ್ಪ ಸದರ ಕೊಟ್ಟರೆ ಸಾಕು.

    ಹೋಗಲಿಬಿಡು, ನಮ್ಮ ಮದುವೆ ಯಾವಾಗ?

    ಹ್ಞಾಂ...ಹ್ಞಾಂ...ಅಂದರೆ ಮದುವೆ ವಿಷಯಕ್ಕೆ ಬಂದುಬಿಡಿ!

    ನನ್ನ ಗ್ರಹಚಾರ! ಸಾಮಾನ್ಯವಾಗಿ ಹೆಣ್ಣು ಗಂಡ್ನ ಯಾವಾಗ ಮದುವೆ ಅಂತ ಪೀಡಿಸ್ತಾಳೆ. ಆದರೆ ಇಲ್ಲಿ ಎಲ್ಲ ಉಲ್ಟಾಪಲ್ಟಾ. ಓಹೋ, ಟಾ ಅಂದರೆ ಪುಲ್ಲಿಂಗವೆ? ಎಲ್ಲ ಉಲ್ಟೀ ಪುಲ್ಟೀ.

    ಉಲ್ಟಿ ಅಂದರೆ ಹಿಂದಿಯಲ್ಲಿ ವಾಂತಿ ಅಂತ ಅರ್ಥ.

    ಅಯ್ಯಯ್ಯೋ... ನೀನು ವಾಂತಿ ಮಾಡಿಕೊಳ್ತಿದ್ದೀಯಾ? ನಾನು ನಿರಾಪರಾಧಿ! ಯಾವ ತಪ್ಪನ್ನೂ ಮಾಡಿಲ್ಲ. ನಿನ್ನ ವಾಂತಿಗೆ ನಾನು ಕಾರಣವಲ್ಲ!

    ಪ್ಲೀಸ್ ತೇಜು... ಬೀ ಸೀರಿಯಸ್. ಊರಿನಿಂದ ನಮ್ಮ ಸಂಬಂಧಿಕರು ನಾಳೆಯ ದಿನ ನಮ್ಮ ತಾಯೀನ ನೋಡೋಕೆ ಬರ್ತಾರೆ. ಒಂದು ವಾರದವರೆಗೆ ಅವರು ಇರ್ತಾರೆ. ಆದ್ದರಿಂದ ಒಂದು ವಾರ ಕಾಲ ನಾವು ಸಂಧಿಸುವುದಕ್ಕೆ ಆಗಲ್ಲ!

    ನಿಜಕ್ಕೂ ಇದು ಸೀರಿಯಸ್ಸಾದ ವಿಚಾರ.

    ಈ ಒಂದು ವಾರವಾದರೂ ನೀವು ಸೀರಿಯಸ್ಸಾಗಿ ಕಂಪ್ಯೂಟರ್ ಕ್ಲಾಸಿಗೆ ಹೋಗಿ ನಿಮ್ಮ ಪಾಠಗಳನ್ನು ಓದಿ. ಅಂದ ಹಾಗೆ ಯಾರವಳು ಕಂಪ್ಯೂಟರ್ ಎಕ್ಸ್‍ಪರ್ಟ್? ಏನವಳ ಹೆಸರು?

    ನೀನು ನನ್ನ ಟೀಚರ್ ಏನಾದರೂ ಅಂದು ನನ್ನ ತಂಟೆಯಲ್ಲಿ ಸಿಕ್ಕಿಸಿಬಿಡಬೇಡ! ಅವರ ಹೆಸರು ನೀಲಮ್ ಅಂತ.

    ಏನು...? ನೀಲಮ್ ಅಂತಲೇ?

    ಹ್ಞೂಂ... ಆದರೆ ಹಾಲಿನಂಥ ಮನಸ್ಸು. ಆಗಾಗ ಹಳದಿ ಡ್ರೆಸ್ ಧರಿಸ್ತಾರೆ.

    ಸಾಕು ಸಾಕು ಕಾಮನಬಿಲ್ಲಿನ ವರ್ಣನೆ.

    "ಉಳಿದ ಬಣ್ಣದ

    Enjoying the preview?
    Page 1 of 1