Discover millions of ebooks, audiobooks, and so much more with a free trial

Only $11.99/month after trial. Cancel anytime.

Chinnara Tare
Chinnara Tare
Chinnara Tare
Ebook97 pages27 minutes

Chinnara Tare

Rating: 0 out of 5 stars

()

Read preview

About this ebook

Born and educated in Mysore, Chitra has always been a voracious reader and prolific writer. Her first literary work appeared in a Tamil magazine when she was still in her teen.
LanguageKannada
Release dateNov 25, 2017
Chinnara Tare

Read more from Chitra Ramachandran

Related to Chinnara Tare

Related ebooks

Reviews for Chinnara Tare

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Chinnara Tare - Chitra Ramachandran

    http://www.pustaka.co.in

    ಚಿಣ್ಣರ ತಾರೆ

    Chinnara Tare

    Author:

    ಚಿತ್ರಾ ರಾಮಚಂದ್ರನ್

    Chitra Ramachandran
    For more books

    http://www.pustaka.co.in/home/author/chitra-ramachandran-novels

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಚಿಣ್ಣರ ತಾರೆ

    ಚಿತ್ರಾ ರಾಮಚಂದ್ರನ್
    ಪರಿಚಯ
    ಮಕ್ಕಳೇ ,

    ನಿಮ್ಮ ಅಭಿರುಚಿಗೆ ತಕ್ಕಂತಹ ಸಮಕಾಲೀನ ಕಥೆಯೊಂದನ್ನು ನಿಮಗೆ ಕೊಡಬೇಕೆಂಬ ಬಹುದಿನಗಳ ಆಕಾಂಕ್ಷೆಯ ಫಲವಾಗಿ ಹುಟ್ಟಿದ ದೃಶ್ಯ ರೂಪಕ ಚಿಣ್ಣರ ತಾರೆ. ಈ ಕಥೆ ನಿಮಗೆ ಕನ್ನಡ ಕಥೆಗಳನ್ನು ಓದಲು ಪ್ರೇರಣೆಯಾದರೆ ನನ್ನ ಈ ಯತ್ನ ಸಾರ್ಥಕ.

    ಕನ್ನಡ ಚಲನ ಚಿತ್ರದ ಪ್ರಖ್ಯಾತ ಚಿಣ್ಣರ ತಾರೆ ಮಾಸ್ಟರ್ ಜಗ್ಗು. ಜಗ್ಗು ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತಹ ದೃಶ್ಯಗಳ ಚಿತ್ರೀಕರಣ ನಡೆಯುವ ಸಮಯ ಸಂಭವಿಸುವ ಕುತೂಹಲಕಾರೀ ಘಟನೆಗಳ ಒಂದು ದೃಶ್ಯ ರೂಪಕ 'ಚಿಣ್ಣರ ತಾರೆ'. ಈ ಕಥೆಗಾಗಿ ವಿದ್ಯಾ ಮುರಳಿ ಅವರು ರಚಿಸಿ ಕೊಟ್ಟಿರುವ ಸುಂದರವಾದ ಚಿತ್ರಗಳು ಕಥೆಯನ್ನು ಓದುವಾಗ ನಿಮಗೆ ಸಿನಿಮಾ ನೋಡುವ ಅನುಭವವನ್ನು ಕೊಡುತ್ತವೆ.

    ಕೂಡಲೇ ಓದುವ ಕುತೂಹಲವೇ? ಸರಿ, ಹಾಗಾದರೆ ಇನ್ನೇಕೆ ತಡ ? ದೃಶ್ಯ ರೂಪಕವನ್ನು ಓದಿ/ ನೋಡಿ ಆನಂದಿಸಿ.

    ಇಂತಿ,

    ನಿಮ್ಮ ಪ್ರೀತಿಯ ಸ್ನೇಹಿತಿ,

    ಚಿತ್ರಾ ರಾಮಚಂದ್ರನ್

    *****

    ಚಿಣ್ಣರ ತಾರೆ

    ಸನ್ನಿವೇಶ

    ಮಕ್ಕಳಿಗೆ ಸಾಹಸ ಕ್ರೀಡೆಗಳ ಶಿಬಿರಗಳನ್ನು ಏರ್ಪಡಿಸಿ ಕೊಡುವ ಸಂಸ್ಥೆ 'ಬೆಂಗಳೂರು ಅಡ್ವೆಂಚರ್ ಕ್ಲಬ್'. ಮಾಸ್ಟರ್ ಮುತ್ತಪ್ಪನವರು ಪ್ಯಾರಾ ಗ್ಲೈಡಿಂಗ್, ರಾಕ್ ಕ್ಲೈಮ್ಬಿಂಗ್, ರಿವರ್ ಕ್ರಾಸಿಂಗ್ ಮೊದಲಾಗಿ ಅನೇಕ ಸಾಹಸ ಕ್ರೀಡೆಗಳನ್ನು ಪಳಗಿಸಲು ಊರಾಚೆಯ ಗುಡ್ಡ ಕಾಡುಗಳ ನಡುವೆ ಒಂದು ಶಿಬಿರವನ್ನು ಏರ್ಪಡಿಸುತ್ತಾರೆ. ಅಭಿ, ಆಕಾಶ್, ಭರತ್, ಚಿರಾಗ್ ನೊಂದಿಗೆ, ಅವರಿಗಿಂತ ಕಿರಿಯವರಾದ ಪ್ರಣವ್, ಸಾಗರ್, ಅನಿಲ್, ಹರ್ಷ, ಅನಿರುಧ್ ಮತ್ತು ರವಿ ಸಹ ಮಕ್ಕಳ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ.

    *****

    ದೃಶ್ಯ – 1

    (ನೀಲಿ ಆಕಾಶದಲ್ಲಿ ತೇಲುತ್ತ ಬಂದ ಆ ಕೆಂಪು ಬಣ್ಣದ ಕೊಡೆಯಿದ್ದ ಫಲಕ ವಿಮಾನ (ಪ್ಯಾರಾ ಗ್ಲೈಡರ್), ಗುಡ್ಡ ಕಾಡುಗಳಿಂದ ಸುತ್ತುವರೆಯಲ್ಪಟ್ಟಿದ್ದ ಬಯಲಿನಲ್ಲಿ ನಿಧಾನವಾಗಿ ಇಳಿಯುತ್ತದೆ. ಅಭಿಯ ಕಾಲುಗಳು ನೆಲ ಮುಟ್ಟಿದಾಕ್ಷಣ ದೂರ ನಿಂತು ಬೆರಗಾಗಿ ನೋಡುತ್ತಿದ್ದ ಹುಡುಗರೆಲ್ಲ ಉತ್ಸಾಹದಿಂದ ಕೂಗಿ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಅಭಿಯ ಹಿಂದೆ ಹಿಂದೆಯೇ ಆಕಾಶ್ ಮತ್ತು ಭರತ್ ಚಾಲನೆಯಲ್ಲಿ ಹಸಿರು ಮತ್ತು ಹಳದಿ ಬಣ್ಣದ ಕೊಡೆಗಳು ಅರಳಿದ್ದ ಗ್ಲೈಡರ್ ಗಳು ಆಕಾಶದಿಂದ ರವಾನೆಯಾಗುತ್ತವೆ)

    ಮುತ್ತಪ್ಪ ಸಾರ್ - ವೆಲ್ ಡನ್ ಮೈ ಬಾಯ್ಸ್! ಮೂವತ್ತು ನಿಮಿಷಗಳು! ಗುಡ್! ವೆರಿ ಗುಡ್! (ಮೂವರ ಕೈ ಕುಲುಕಿ ಬೆನ್ನು ತಟ್ಟುತ್ತಾರೆ. ಇತರ ಹುಡುಗರು ಮುದುಡಿ ನೆಲಕ್ಕಪ್ಪಳಿಸಿದ ಗ್ಲೈಡರ್ಗಳ ಬಣ್ಣ ಬಣ್ಣದ ಕೊಡೆಗಳನ್ನು ಸರ ಸರನೆ ಸುರುಳಿ  ಸುತ್ತುತ್ತಾರೆ)

    ಭರತ್ - (ಹುಡುಗರನ್ನು ಕುರಿತು) ಥ್ಯಾಂಕ್ ಯು ಫ್ರೆಂಡ್ಸ್!

    ಆಕಾಶ್ - (ಹೆಲ್ಮೆಟ್ ಕಳಚಿ, ಹುಡುಗರನ್ನು ಸಮೀಪಿಸಿ) ಇರಿ! ನಾನೂ ಹೆಲ್ಪ್ ಮಾಡ್ತೀನಿ.

    ರವಿ - (ಮುತ್ತಪ್ಪ ಸಾರನ್ನು ಕುರಿತು) ನಾನು ಯಾವಾಗ ಗ್ಲೈಡ್ ಮಾಡೋದು ಸಾರ್?

    ಇತರ ಹುಡುಗರು - (ಒಕ್ಕೊರಳಿನಲ್ಲಿ) ನಾವು ಸಾರ್?

    ಮುತ್ತಪ್ಪ ಸಾರ್ - ಮಾಡುವಿರಂತೆ! ಮಾಡುವಿರಂತೆ! ಪ್ಯಾರಾ ಗ್ಲೈಡಿಂಗ್ ಮಾಡಕ್ಕೆ ವಯೋಮಿತಿ ಇದೆಯಲ್ಲಪ್ಪಾ! ನಿಮಗೆಲ್ಲ ಹದಿನಾರು ವಯಸ್ಸು ತುಂಬಬೇಕಲ್ಲ!

    ಹುಡುಗರು (ನಿರಾಸೆಗೊಂಡು ರಾಗ ಎಳೆಯುತ್ತಾರೆ ) - ಸಾರ್!

    ಮುತ್ತಪ್ಪ ಸಾರ್ - ಈಗ್ಲೂ ಇನ್ಸ್ಟ್ರಕ್ಟರ್- ಅಂದ್ರೆ ನಾನು - ಜೊತೆಗಿದ್ದು ನಿಮ್ಮನ್ನು ಗ್ಲೈಡ್ ಮಾಡಿಸಬೋದಿತ್ತು! ಆದ್ರೆ ನಿಮ್ಮ ತಾಯಿ ತಂದೆಯರ ಒಪ್ಪಿಗೆ ಬೇಕಿತ್ತಲ್ಲ! ಆದರೇನಂತೆ? ಇನ್ನೂ ಎರಡೇ ವರುಷ! ಖಂಡಿತ ನೀವೂ ಗ್ಲೈಡ್ ಮಾಡುವಿರಂತೆ!

    ಚಿರಾಗ್ - ನನಗೂ ಅಭಿ, ಆಕಾಶ್, ಭರತ್ ವಯಸ್ಸೇ ಆಗಿದೆ ಸಾರ್! ನಾನೇಕೆ ಮಾಡಬಾರದು?

    ಮುತ್ತಪ್ಪ ಸಾರ್ - ಗ್ಲೈಡರ್ ಚಾಲನೆಗೆ ವಯಸ್ಸು ಮಾತ್ರ ಸಾಲದು ಚಿರಾಗ್! ಶಕ್ತಿ, ಪುಷ್ಟಿ, ಆರೋಗ್ಯ ಸಹ ಅಷ್ಟೇ ಮುಖ್ಯ.

    Enjoying the preview?
    Page 1 of 1