Discover millions of ebooks, audiobooks, and so much more with a free trial

Only $11.99/month after trial. Cancel anytime.

4D
4D
4D
Ebook278 pages1 hour

4D

Rating: 0 out of 5 stars

()

Read preview

About this ebook

ಮನುಷ್ಯ ಜೀವಿಗಳಾದ ನಾವು, ಈ ಭೂಮಿಯ ಬಂಧನದಲ್ಲಿದ್ದೇವೆ. ಈ ಲೋಕವನ್ನು ಬಿಟ್ಟು ಮತ್ತೊಂದು ಲೋಕದ ಕಲ್ಪನೆ ಸಾಕಾರಗೊಳಿಸಿಕೊಳ್ಳುವ ಕುತೂಹಲ ಮಾನವನನ್ನು ಬಿಟ್ಟಿದ್ದೇ ಇಲ್ಲ. ನಮ್ಮ ಸೌರಮಂಡಲವು ಬ್ರಹ್ಮಾಂಡಕ್ಕೆ ಹೋಲಿಸಿದರೆ ಸಣ್ಣಾತಿಸಣ್ಣ ಧೂಳಿನ ಕಣವೂ ಅಲ್ಲದ ಒಂದು ಪುಟ್ಟ ಚುಕ್ಕೆ. ಅದರಲ್ಲಿ ಅತೀ ಸಣ್ಣ ಬಿಂದು ನಮ್ಮ ಭೂಮಿ. ಈ ಭೂಮಿಯ ವಾಸಿಗಳಾದ ನಮಗೆ ಬೇರೆ ಜಗತ್ತು ಸಿಗುವುದು ದುರ್ಲಭ. ಚಂದ್ರನಲ್ಲಿಗೆ ಹೋಗುವುದು, ಮಂಗಳನ ಅನ್ವೇಷಣೆ ನಡೆಸುವುದೇ ಈಗಿನ ಮಹತ್ತರ ಸಾಧನೆಗಳಾಗಿವೆ. ಅಂತಹುದರಲ್ಲಿ ನಮ್ಮ ಸೌರಮಂಡಲ ದಾಟಿ ಅನಂತ, ಅಗಣಿತವಾಗಿರುವ ಬ್ರಹ್ಮಾಂಡದಲ್ಲಿ ನಮ್ಮಂತಹುದೇ ಲೋಕವನ್ನು ಹುಡುಕುವುದು ಹುಲ್ಲುಬಣವೆಯಲ್ಲಿ ಸೂಜಿ ಹುಡುಕಿದಂತೆ. ಅಂತಹ ಮತ್ತೊಂದು ಜಗತ್ತಿನ ಸುತ್ತ ಈ 4ಡಿ ಕಾದಂಬರಿ
LanguageKannada
Release dateJun 1, 2021
ISBN6580239406439
4D

Read more from Gurupaada Beluru

Related to 4D

Related ebooks

Reviews for 4D

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    4D - Gurupaada Beluru

    http://www.pustaka.co.in

    ಫೋರ್ಡಿ

    4D

    Author:

    ಗುರುಪಾದ ಬೇಲೂರು

    Gurupaada Beluru

    For more books

    http://www.pustaka.co.in/home/author/gurupaada-beluru

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ವಿಷಯಗಳು

    ಅಧ್ಯಾಯ 1

    ಅಧ್ಯಾಯ 2

    ಅಧ್ಯಾಯ 3

    ಅಧ್ಯಾಯ 4

    ಅಧ್ಯಾಯ 5

    ಅಧ್ಯಾಯ-6

    ಅಧ್ಯಾಯ 7

    ಅಧ್ಯಾಯ 8

    ಅಧ್ಯಾಯ 9

    ಅಧ್ಯಾಯ 10

    ಅಧ್ಯಾಯ 11

    ಅಧ್ಯಾಯ 12

    ಅಧ್ಯಾಯ 13

    ಅಧ್ಯಾಯ 14

    ಅಧ್ಯಾಯ 15

    ಅಧ್ಯಾಯ 16

    ಅಧ್ಯಾಯ 17

    ಅಧ್ಯಾಯ 18

    ಅಧ್ಯಾಯ 19

    ಅಧ್ಯಾಯ 20

    ಅಧ್ಯಾಯ 21

    ಫೋರ್ಡಿ

    ನಾಲ್ಕನೇ ಆಯಾಮದ ಸುತ್ತ.....

    ಗುರುಪಾದ ಬೇಲೂರು

    ಮುತ್ತಜ್ಜಿ ಗೌರಮ್ಮನವರ

    ಅಜ್ಜಿ ಮಂಜುಳಾರವರ

    ತಾಯಿ ರಚಿತಾರವರ

    ಹಾಗೂ

    ನಮ್ಮೆಲ್ಲರ ಕಣ್ಮಣಿಯಾದ

    ನಾಲ್ಕನೇ ಜನರೇಷನ್ ನ ಮುದ್ದು

    ‘ಗಾರ್ಗಿ’ ಗೆ

    ಲೇಖಕರ ಮಾತು

    ಗೋಪಾಲ ಕೃಷ್ಣ ಅಡಿಗರ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು... ಎನ್ನುವ ಕವನದ ಕೆಲವು ಸಾಲುಗಳು ನನ್ನನ್ನು ಬಹಳ ಕಾಡಿದವು. ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ. ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ, ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಈ ಪದಗಳಲ್ಲಿ ಕವಿ ಮಾನವನ ಅದಮ್ಯ ಚೇತನದ ತುಡಿತವನ್ನು ಸುಂದರವಾಗಿ ಕಟ್ಟಿದ್ದಾರೆ. ತಾನು ಅನುಭವಿಸುತ್ತಿರುವುದರ ಆಚೆಗಿನ ಅನುಭವವನ್ನು ಪಡೆಯಲು ಸದಾ ಹಂಬಲಿಸುವ ಮನುಷ್ಯನ ಸ್ವಭಾವವನ್ನು ಎರಡು ಸ್ತರಗಳಲ್ಲಿ ವಿಶ್ಲೇಷಿಸಬಹುದು. ಲೌಕಿಕ ದೃಷ್ಟಿಯಲ್ಲಿ ಭೌತಿಕ ಜಗತ್ತಿನ ಮೋಹದ ಬಗ್ಗೆ ಹೇಳಿದಂತಿದ್ದರೆ, ಆಧ್ಯಾತ್ಮಿಕವಾಗಿ ನಾವು ಕಾಣುತ್ತಿರುವ ಲೋಕದ ಹೊರತಾದ ಮತ್ತೊಂದು ಲೋಕಕ್ಕೆ ಪರಿತಪಿಸುವ ಪಾರಮಾರ್ಥಿಕದ ತುಮುಲವನ್ನು ತೆರೆದಿಡುತ್ತದೆ.

    ಮನುಷ್ಯ ಜೀವಿಗಳಾದ ನಾವು, ಈ ಭೂಮಿಯ ಬಂಧನದಲ್ಲಿದ್ದೇವೆ. ಈ ಲೋಕವನ್ನು ಬಿಟ್ಟು ಮತ್ತೊಂದು ಲೋಕದ ಕಲ್ಪನೆ ಸಾಕಾರಗೊಳಿಸಿಕೊಳ್ಳುವ ಕುತೂಹಲ ಮಾನವನನ್ನು ಬಿಟ್ಟಿದ್ದೇ ಇಲ್ಲ. ನಮ್ಮ ಸೌರಮಂಡಲವು ಬ್ರಹ್ಮಾಂಡಕ್ಕೆ ಹೋಲಿಸಿದರೆ ಸಣ್ಣಾತಿಸಣ್ಣ ಧೂಳಿನ ಕಣವೂ ಅಲ್ಲದ ಒಂದು ಪುಟ್ಟ ಚುಕ್ಕೆ. ಅದರಲ್ಲಿ ಅತೀ ಸಣ್ಣ ಬಿಂದು ನಮ್ಮ ಭೂಮಿ. ಈ ಭೂಮಿಯ ವಾಸಿಗಳಾದ ನಮಗೆ ಬೇರೆ ಜಗತ್ತು ಸಿಗುವುದು ದುರ್ಲಭ. ಚಂದ್ರನಲ್ಲಿಗೆ ಹೋಗುವುದು, ಮಂಗಳನ ಅನ್ವೇಷಣೆ ನಡೆಸುವುದೇ ಈಗಿನ ಮಹತ್ತರ ಸಾಧನೆಗಳಾಗಿವೆ. ಅಂತಹುದರಲ್ಲಿ ನಮ್ಮ ಸೌರಮಂಡಲ ದಾಟಿ ಅನಂತ, ಅಗಣಿತವಾಗಿರುವ ಬ್ರಹ್ಮಾಂಡದಲ್ಲಿ ನಮ್ಮಂತಹುದೇ ಲೋಕವನ್ನು ಹುಡುಕುವುದು ಹುಲ್ಲುಬಣವೆಯಲ್ಲಿ ಸೂಜಿ ಹುಡುಕಿದಂತೆ.

    ಭೂಮಿಯಂತಹುದೇ ಗ್ರಹವನ್ನು ಹುಡುಕಿ ಅಲ್ಲಿ ಜೀವಾನ್ವೇಷಣೆ ಮಾಡುವುದು ಸುಲಭ ಸಾಧ್ಯದ ಕೆಲಸವಲ್ಲ. ಭೂಮಿಯನ್ನು ಬಿಟ್ಟು ಹೊರಗೆ ಜೀವಿಸಬಲ್ಲಂತಹ ಯಾವ ಸುಲಭ ಸಾಧನಗಳೂ ನಮ್ಮಲ್ಲಿಲ್ಲ. ನಮ್ಮ ಭೂಮಿಯನ್ನು ಬಿಟ್ಟು ಹೋಗುವುದು ನಮಗೆ ಅಷ್ಟು ಸುಲಭಸಾಧ್ಯವೂ ಅಲ್ಲ. ತನ್ನ ಗುರುತ್ವಾಕರ್ಷಣ ಬಲದಿಂದ ಈ ಭೂಮಿ, ತನ್ನ ಮೇಲಿರುವ ಸಕಲ ಚರಾಚರಗಳನ್ನು ಹಿಡಿದಿಟ್ಟುಕೊಂಡಿದೆ. ಅದನ್ನು ಮೀರಿ ಹೋದಾಗ ಮಾತ್ರ ನಾವು ಅಂತರಿಕ್ಷ ಸೇರಬಹುದು ಆದರೆ ತಾಯಿ ನೆಲಕ್ಕೆ ವಾಪಸ್ ಬರಲೇಬೇಕು. ಇಲ್ಲ ಅಂತರಿಕ್ಷದಲ್ಲಿ ಅಂತರ್ ಪಿಶಾಚಿಯಾಗಬೇಕು.

    ಗುರುತ್ವಾಕರ್ಷಣೆ ಮತ್ತು ಕಾಲವನ್ನು ಮೀರುವುದು ಮನುಷ್ಯನಿಗೆ ಕಷ್ಟಸಾಧ್ಯ. ಭೂಮಿಯ

    ಗ್ರಾವಿಟಿಯನ್ನು ದಾಟ ಬಲ್ಲನೆಂದರೂ, ವಿಶ್ವದ ಗುರುತ್ವಾಕರ್ಷಣೆಯನ್ನು ದಾಟುವುದು ಸಾಹಸವೇ ಸರಿ. ಇದನ್ನು ಸಾಧಿಸಿದರೂ ಕಾಲವನ್ನು ಮೀರುವುದು ಇನ್ನೂ ಮಾನವನ ಅಳತೆಯ ಪರಿಧಿಗೆ ಬಂದಿಲ್ಲ. ಏಕೆಂದರೆ ನಾವು ಸಮಯದ ಬಂಧಿಗಳೂ ಕೂಡ ಆಗಿದ್ದೇವೆ. ಸಮಯ, ಕಾಲ, ವೇಳೆ, ಇವೆಲ್ಲಾ ನಮಗೆ ಏಕ ಮುಖವಾಗಿ ಸಂಚರಿಸುವ ಕೊಳವೆಗಳು. ಅವುಗಳಲ್ಲಿ ಜಾರಿಹೋಗುತ್ತಿರುವ ನಾವು ಹಿಂದೆ ಹೋಗಲಾರೆವು, ಇದ್ದಲ್ಲಿ ಇರಲಾರೆವು. ಸದಾ, ಪ್ರತಿಕ್ಷಣ ಮುಂದೆ ಹೋಗುವುದಷ್ಟೆ ಕೆಲಸ. ಹಾಗಾಗಿ ಕಾಲದ ಬಂಧಿಯಾಗಿ ಸಮಯದ ಬಂಧಿಯಾಗಿ ನಾವು ಸವೆತ ಕುಸಿತಗಳಿಗೆ ಒಳಗಾಗಿ ಹುಟ್ಟು ಸಾವಿನ ಚಕ್ರದೊಳಗೆ ತಿರುಗುವುದು ಬಿಟ್ಟರೆ ಮತ್ತೇನೂ ಮಾಡಲಾರೆವು.

    ಇದು ಕಾಲ ಚಕ್ರ . ಲೌಕಿಕ-ಪಾರಮಾರ್ಥಿಕತೆಯ ನಡುವಿನ ಗೆರೆ. ವಿಜ್ಞಾನ ಇದನ್ನು ಒಂದು ರೀತಿ ಹೇಳಿದರೆ, ನಮ್ಮ ಹಿರಿಯವರು ಇದನ್ನು ಆಧ್ಯಾತ್ಮದಲ್ಲಿ ಮತ್ತೊಂದು ರೀತಿ ಹೇಳುತ್ತಾರೆ. ಕೊನೆಗೆ ಸತ್ಯವೆಂಬುದು ಒಂದೇ. ಯಾವಾಗ ಮನುಷ್ಯ ಈ ಲೌಕಿಕ ಜಗತ್ತಿನ ಬಂಧನದಿಂದ, ಭೂಮಿಯ ಗುರುತ್ವಾಕರ್ಷಣೆಯಿಂದ ಬಿಡುಗಡೆ ಪಡೆಯುತ್ತಾನೋ, ಯಾವಾಗ ಬೆಳಕಿನ ವೇಗ ಮೀರುತ್ತಾನೋ ಕಾಲನ ಬಂಧನದಿಂದ ಬಿಡುಗಡೆ ಪಡೆಯುತ್ತಾನೋ ಆಗ ಆತ ಮೋಕ್ಷ ಹೊಂದುತ್ತಾನೆ.

    ಮೂರು ಆಯಾಮಗಳ ಜಗತ್ತಿನಲ್ಲಿ ವಾಸಿಸುತ್ತಿರುವ ನಾವು ಈ ಚೌಕಟ್ಟನ್ನು ಮೀರಿ ನಾಲ್ಕನೇ ಆಯಾಮಕ್ಕೆ ಹೋದರೆ ಹೇಗಿದ್ದೀತು ಎನ್ನುವ ಕಲ್ಪನೆಯೇ ಈ ಪುಸ್ತಕದ ಕಥಾವಸ್ತು. ನಾಲ್ಕನೇ ಆಯಾಮವೆನ್ನುವುದು ಬೇರೆ ಲೋಕವೆಂದರೂ ಅದು ಬೇರೆಲ್ಲೋ ಇರುವುದಲ್ಲ. ಈ ಕ್ಷೇತ್ರದಲ್ಲಿ ಅಧ್ಯಯನ ಮಾಡಿದ ತಜ್ಞರು ಹೇಳುವಂತೆ ಇದು ಜಗತ್ತಿನ ಒಳಗಿನ ಜಗತ್ತು. ಅಥವಾ ನಾವು ಕಾಣುವ ಜಗತ್ತಿನ ಹೊರ ಜಗತ್ತು. ನೀವು ಅದನ್ನು ಅರ್ಥೈಸಿಕೊಂಡಂತೆ.

    ಕಾಲ ಅಥವಾ ಸಮಯವೆಂಬುದು ಒಂದು ಮೇಲು ಸ್ತರದ ಡೈಮೆನ್‍ಷನ್. 3ಡಿ ಜಗತ್ತಿನಲ್ಲಿ ಕಾಲವನ್ನು, ಸಮಯವೆಂದು ಸೀಮಿತ ಪರಿಮಿತಿಯಲ್ಲಿ ಅನುಭವಿಸುತ್ತಿದ್ದೇವೆ.. 4ಡಿ ಪ್ರಪಂಚದಲ್ಲಿ ಅದು ಕಾಲವಾಗಿ ಬದಲಾಗುತ್ತದೆ. ಸಮಯದ ರೀತಿಯಲ್ಲಿಯೇ, ಮನುಷ್ಯನ ಭಾವನೆಗಳು, ಯೋಚನೆಗಳು ಮತ್ತು ಆತನ ಮನಸ್ಸು ಕೂಡ ಮೇಲುಸ್ತರದ ಡೈಮೆನ್‍ಷನ್ ಆಗಬಲ್ಲವು. ಆದರೆ ಅವುಗಳನ್ನು ಶರೀರದ ಸಣ್ಣ ಮಿತಿಯಲ್ಲಿ ಮತ್ತು ಇಂದ್ರಿಯಗಳ ಪರಿಮಿತಿಯಲ್ಲಿ ಕಟ್ಟಿಹಾಕಲಾಗಿದೆ.

    ಈ ಪರಿಮಿತಿಗಳನ್ನು ತೆಗೆದು ಹಾಕಲು ಸಾಧ್ಯವಾದಲ್ಲಿ, ಮಾನವ ತನ್ನ ಮನಸ್ಸನ್ನು, ಯೋಚನೆಯನ್ನು ಮತ್ತು ಭಾವನೆಗಳನ್ನು ಹೊರ ಬ್ರಹ್ಮಾಂಡಕ್ಕೆ ಹರಿಬಿಟ್ಟಲ್ಲಿ ಅವನಿಗೆ ಖಂಡಿತವಾಗಿಯೂ ವಿಶ್ವರೂಪ ದರ್ಶನವಾದೀತು. ಭ್ರಾಂತಿಯ ಈ ಬಾಹ್ಯ ಪ್ರಪಂಚವನ್ನು ಹೊರತುಪಡಿಸಿದ ನಿಜ ಕಾಸ್ಮಾಸ್‍ನ ಅರಿವಾದೀತು. ಆ ಹಂತವನ್ನು ತಲುಪಿದರೆ ಅದು ನಮಗೆ ಅರಿವಿಗೆ ಬರುತ್ತದೆಯೇ ಹೊರತು ಕಣ್ಣಿಗೆ ಕಾಣಲಾರದು, ಕಿವಿಗೆ ಕೇಳಲಾರದು ಮತ್ತು ಸ್ಪರ್ಶಕ್ಕೆ ಸಿಗಲಾರದು. ಇದೇ ಸಮಾಧಿ ಯೋಗ.

    ಕಾಲದ ಹಿಡಿತ ಹೊಂದಿದರೆಂದ ಮೇಲೆ 4ಡಿ ಜೀವಿಗಳು ಸಹಜವಾಗಿಯೇ, 3ಡಿ ಜೀವಿಗಳಿಗಿಂತ ಹೆಚ್ಚು ಶಕ್ತರೂ, ಅತೀಮಾನುಷರೂ ಆಗಿರಬೇಕು. ಅಂದರೆ, ನಮ್ಮ ಹಿರಿಯರ ಕಲ್ಪನೆಯ ದೇವರು, ದೆವ್ವಗಳು ಈ ಆಯಾಮಕ್ಕೆ ಸೇರಿದವುಗಳಾಗಿರಬಹುದು. ಹಾಗಾದರೆ ಅವರೇ ಸರ್ವಶಕ್ತರೇ? ಖಂಡಿತಾ ಇಲ್ಲ. 4ಡಿ ಜಗತ್ತನ್ನೂ ಮೀರಿದ 5,6,7, ಹೀಗೆ ಹೆಚ್ಚುಹೆಚ್ಚು ಆಯಾಮಗಳ ಜಗತ್ತು ಇರಬಹುದು. ದೇವರಿಗೊಬ್ಬ ದೇವರೂ ಇರಬಹುದು!

    ಭಾರತೀಯರು ಆಯಾಮಗಳ ಜಗತ್ತಿನಲ್ಲಿ ಈ ಸಾಧನೆ ಮಾಡಿದ್ದರೆಂದು ತೋರುತ್ತದೆ. ಅದಕ್ಕಾಗಿಯೇ ಅವರಿಗೆ ನಮ್ಮ ಆಕಾಶಗಂಗೆ ಗ್ಯಾಲಕ್ಸಿ ಯಿಂದ ಹಿಡಿದು ಹತ್ತಿರದ ಆ್ಯಂಡ್ರೋಮಿಡಾ, ಸೆಂಟಾರೆಸ್ ಇತ್ಯಾದಿ ಗ್ಯಾಲಕ್ಸಿಗಳ ಆಕಾರವನ್ನು ಕಂಡಿದ್ದಷ್ಟೆ ಅಲ್ಲದೆ ಅದನ್ನು ಸಾಂಕೇತಿಕವಾಗಿ ಶಂಖ, ಚಕ್ರ, ಗದಾ, ಪದ್ಮ ಗಳೆಂದು ಗುರುತಿಸಿದರು. ಸಪ್ತರ್ಷಿ ಮಂಡಲವನ್ನು ಹೆಸರಿಸಿದರು. ಅದರಲ್ಲಿ ವಶಿಷ್ಠ ಆರುಂಧತಿ ನಕ್ಷತ್ರಗಳ ಚಲನಾ ವಿಧಾನವನ್ನು ಗುರುತಿಸಿದರು.

    ನಮ್ಮ ಜಗತ್ತನ್ನೂ ಮೀರಿದ ಮತ್ತೊಂದು ಜಗತ್ತಿನ ಕಲ್ಪನೆ , ಅದರ ಅನ್ವೇಷಣೆಯನ್ನು ಮಾನವ ತನ್ನ ಸಹಜ ಕುತೂಹಲದಿಂದ ಸಂಶೋಧಿಸುತ್ತಲೇ ಬಂದಿದ್ದಾನೆ. ಆ ಎಳೆಯನ್ನು ಹಿಡಿದು ಈ ಕಥೆ ಹೆಣೆದಿದ್ದೇನೆ. ವಿಲಿಯಂ ಸ್ಲೀಟರ್‍ನ A boy who reversed himself ಮತ್ತು ಕ್ಲಿಫೋರ್ಡ್ ಪಿಕೋವರ್ನ Surfing Through Hyperspace

    ಅಂತರ್ಜಾಲದಲ್ಲಿ ಲಭ್ಯವಿರುವ 4ಡಿ ಜಗತ್ತಿನ ವಿವರಗಳು ಈ ಕಥೆಗೆ ಸ್ಪೂರ್ತಿಯಾಗಿವೆ. ತಾಂತ್ರಿಕ ಅಂಶಗಳನ್ನು ಹೊರತುಪಡಿಸಿದರೆ ಕಥೆಯ ಕಲ್ಪನೆ ಪೂರ್ಣವಾಗಿ ಪ್ರಾದೇಶಿಕವಾಗಿರುವಂತೆ ಚಿತ್ರಿಸಿದ್ದೇನೆ. ಇದರಿಂದ ಕನ್ನಡದ ಓದುಗರಿಗೆ ಕಥೆ ಆಪ್ತವಾಗಬಹುದೆಂದು ಭಾವಿಸಿದ್ದೇನೆ. ಕಥೆಯಲ್ಲಿ ಬರುವ ತಾಂತ್ರಿಕ ವಿಷಯಗಳು ಕಥೆಯ ಓಟಕ್ಕೆ ಧಕ್ಕೆಯಾಗದಂತೆ, ಕಥೆಗೆ ಎಷ್ಟು ಅಗತ್ಯವೋ ಅಷ್ಟು ತಾಂತ್ರಿಕ ಅಂಶಗಳನ್ನು ಅಳವಡಿಸಿದ್ದೇನೆ. ಇಲ್ಲವಾದಲ್ಲಿ ಕಥೆ ಅತಾರ್ಕಿಕವಾಗುತ್ತದೆ.

    ಹಾಗೆ ನೋಡಿದರೆ, 4ಡಿ ಜಗತ್ತಿನ ಕಲ್ಪನೆಯೇ ಈಗ ನಮಗೆ ಅತಾರ್ಕಿಕ. ವಿಶ್ಲೇಷಿಸಿ ನೋಡಿದರೆ ಭೂಮಿ, ಸೂರ್ಯ,ಚಂದ್ರ ರಂತೆ ಈ ಬ್ರಹ್ಮಾಂಡವೂ ಕೂಡ ಗೋಲಾಕಾರದಲ್ಲಿ ಇರಲೇಬೇಕು. ಹಾಗಿದ್ದಾಗ ಪ್ಯಾರಲಲ್ ಲೈನ್ಸ್ ಅನ್ನುವ ಕಲ್ಪನೆಯೇ ಅತಾರ್ಕಿಕ! ತ್ರಿಕೋನಗಳ ಮೊತ್ತ 1800 ಅನ್ನುವ ವಾದವೇ ಅತಾರ್ಕಿಕ! ಯಾರಿಗೆ ಗೊತ್ತು. ಮುಂದೊಂದು ದಿನ ಈ ಅತಾರ್ಕಿಕಗಳೇ ವಾಸ್ತವಗಳಾದರೂ ಆಗಬಹುದು.

    ಅದೇನೇ ಇರಲಿ, ನನ್ನ ಮೂರನೇ ಕೃತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಕನ್ನಡಿಗರು ಇದನ್ನು ಸ್ವಾಗತಿಸಿ ಪ್ರೋತ್ಸಾಹಿಸುತ್ತಾರೆಂದು ನಂಬಿದ್ದೇನೆ.

    ಧನ್ಯವಾದಗಳು.

    ಗುರುಪಾದ ಬೇಲೂರು

    ಮೊಬೈಲ್ 9448042464

    ಬೆಂಗಳೂರು

    18-08-2018

    gurupadaswamybg@gmail.com

    ಅಧ್ಯಾಯ 1

    ಆಗಸದಲ್ಲಿ ಮುಂಗಾರು ಮೋಡ ದಟ್ಟೈಸತೊಡಗಿತ್ತು. ಚೆಲ್ಲಾಟವಾಡುತ್ತಿದ್ದ ಸಣ್ಣ ಸಣ್ಣ ಬಿಳಿ ಮೋಡಗಳು ಅಮ್ಮ ಕರೆದಳೆಂದು ಮನೆಯೊಳಗೆ ಸೇರಿಕೊಳ್ಳುವ ಸಣ್ಣ ಮಕ್ಕಳಂತೆ ಕಾರ್ಮುಗಿಲ ಸಾಗರದೊಳಗೆ ಸೇರಿ ಆಕಾಶ ಕಪ್ಪಾಗತೊಡಗಿತು. ಆಗಲೋ ಈಗಲೋ ಸುರಿದೇ ಬಿಟ್ಟೇನು ಎಂಬಂತೆ ಭಾರವಾದ ಜಲದೊಡಲ ಮೋಡಗಳು ಪ್ರಸವ ವೇದನೆ ಅನುಭವಿಸುತ್ತಿರುವ ತಾಯಂದಿರಂತೆ ಮುಲುಗುಟ್ಟುತ್ತಿದ್ದವು. ಸಣ್ಣದಾಗಿ ಆರಂಭವಾದ ಗುಡುಗು, ಮಳೆರಾಯನ ಆಗಮನ ಹತ್ತಿರವಾಗುತ್ತಿದ್ದಂತೆ ಬಾಣಬಿರುಸು, ತಾಳಮದ್ದಳೆಗಳ ದುಂಧುಭಿಯೊಡನೆ ತಾರಕಕ್ಕೇರಿ, ಕಿವಿಗಡಚಿಕ್ಕುವಂತೆ ಸಿಡಿಲಿನ ಆರ್ಭಟ ಆರಂಭವಾಯಿತು. ನಟ್ಟ ನಡುವಿನ ಆಗಸದಲ್ಲಿ ಕೋಲ್ಮಿಂಚು ಕ್ಷಿತಿಜವನ್ನೇ ಎರಡಾಗಿ ಸೀಳುವಂತೆ ಫಳಾರೆಂದು ಮಿಂಚಿ ಮಾಯವಾಗುತ್ತಿತ್ತು.

    ಈ ಮಳೆಯಲ್ಲಿ ನಾನು ಇವನೊಡನೆ ಬಂದಿದ್ದೇ ತಪ್ಪಾಯಿತೆಂದುಕೊಂಡಳು ನೇತ್ರಾ. ಕಿರಣನೊಡನೆ ಹೊರಡಲು ಅವಳಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಜೋಗದ ಬಳಿಯ ಕಾಡು ಮಲ್ಲಪ್ಪನ ಗುಡಿಯ ಹೆಸರು ಹೇಳಿ ಮನೆಯವರನ್ನು ಒಪ್ಪಿಸಿ ಅವಳನ್ನು ಕರೆದುಕೊಂಡು ಬಂದಿದ್ದ ಕಿರಣ. ಸೋದರ ಮಾವನೇ ಆದರೂ, ಅವನು ತನ್ನೊಡನೆ ತೆಗೆದುಕೊಳ್ಳುತ್ತಿದ್ದ ಸಲಿಗೆ ಅವಳಿಗೆ ಅಸಹ್ಯ ಹುಟ್ಟಿಸುತ್ತಿತ್ತು. ಆದರೇನು ಮಾಡುವುದು, ತಂದೆತಾಯಿಗಳಿಗೆ ಹೇಳುವಂತಿರಲಿಲ್ಲ. ಮೇಲಾಗಿ ಅವರಿಬ್ಬರೂ ತನ್ನ ಮದುವೆಯನ್ನು ಕಿರಣನೊಡನೇ ಮಾಡಲು ನಿಶ್ಚಯಿಸಿಬಿಟ್ಟಿದ್ದರಲ್ಲಾ.

    ತೇಜಸ್ ಅವಳಿಗೆ ಪರಿಚಯವಾಗದಿದ್ದಲ್ಲಿ, ಕಿರಣ ತನಗೆ ಇಷ್ಟವಿಲ್ಲದಿದ್ದರೂ ಮನೆಯವರ ಬಲವಂತಕ್ಕೆ ಕಟ್ಟುಬಿದ್ದು ಇದೇ ತನ್ನ ಹಣೆಬರಹ ಎಂದುಕೊಂಡು ಸುಮ್ಮನಾಗಿ ಬಿಡುತ್ತಿದ್ದಳೋ ಏನೋ, ಆದರೆ ಈಗ ತೇಜಸ್ ಅವಳ ಮನ ತುಂಬಿಬಿಟ್ಟಿದ್ದಾನೆ. ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದಾರೆ. ಇದೇ ಜೋಗದ ಜಲಪಾತದ ಮೇಲಿನ ಬಂಡೆಯ ಮೇಲೆ, ಆ ಭೀಕರ ಪ್ರಪಾತದ ಅಂಚಿನಲ್ಲಿ ಇಬ್ಬರೂ ಮಾತನಾಡಲು ಕುಳಿತರೆ ಅವರಿಗೆ ಹೊತ್ತಿನ ಪರಿವೇ ಇರುತ್ತಿರಲಿಲ್ಲ. ಅವನ ಸಾಂಗತ್ಯ ಅದೆಷ್ಟು ಚಂದ. ತೇಜಸ್‍ನ ನೆನೆಪಾದೊಡನೆ ಅವಳ ಮನಸ್ಸಿನಲ್ಲಿ ಮಧುರ ಭಾವನೆಯೊಂದು ಹಾದುಹೋಯಿತು.

    ಆದರೆ ಈಗ ತೇಜಸ್ ಜೊತೆಯಲ್ಲಿಲ್ಲ. ಇರುವುದು ಒರಟ ಕಿರಣನ ಜೊತೆಯಲ್ಲಿ. ಅವನೊಡನೆ ಈ ನಿರ್ಜನ ಪ್ರದೇಶದಲ್ಲಿ ಅಡ್ಡಾಡುವುದು ಅವಳಿಗೆ ಖಂಡಿತಾ ಇಷ್ಟದ ಕೆಲಸವಾಗಿರಲಿಲ್ಲ ಹಾಗೆಯೇ ಹೆಣ್ಣಿನ ಸಹಜ ಭಯದಿಂದ ಕಿರಣನಿಗೆ ಹೇಳಿದಳು.

    ಕಿರಣ, ಮಳೆ ಜೋರಾಗುವುದರಲ್ಲಿದೆ, ಗುಡುಗು ಸಿಡಿಲೂ ಜಾಸ್ತಿಯಾಗುತ್ತಿದೆ. ದೇವರ ದರ್ಶನವಾಯ್ತಲ್ಲ, ವಾಪಸ್ ಹೋಗೋಣ ನಡಿ

    ಇಲ್ಲೇ ಮೇಲೆ ಹೋಗೋಣ ಬಾ ನೇತ್ರಾ, ನೇಚರ್ ಅಲ್ಲಿ ಬಹಳ ಚೆನ್ನಾಗಿದೆ. ಒಂದು ಹತ್ತು ನಿಮಿಷ ಕುಳಿತು ಹೋಗೋಣ. ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಅಂದ ಕಿರಣ ಬೈಕನ್ನು ಜೋಗ ಜಲಪಾತದ ಮೇಲೆ ಇದ್ದ ಬ್ರಿಟಿಷ್ ಬಂಗಲೆ ಕಡೆ ತಿರುಗಿಸಿದ.

    ನೇತ್ರಾಳಿಗೆ ಅದು ಚಿರಪರಿಚಿತವಾದ ಜಾಗ, ಆದರೆ ಅದು ತೇಜಸ್ ನ ಜೊತೆ ಬಂದಾಗ ಕಾಣಿಸುತ್ತಿದ್ದಕ್ಕೂ, ಈಗ ಕಿರಣನ ಜೊತೆಯಲ್ಲಿ ಇರುವುದಕ್ಕೂ ಬಹಳ ವ್ಯತ್ಯಾಸ ಕಾಣಿಸಿತು ಅವಳಿಗೆ. ಅದೇ ನೀರು, ಅದೇ ಬಂಡೆಗಳು, ಅದೇ ಪ್ರಪಾತ, ಪೃಕೃತಿಯ ರಮ್ಯ ದೃಶ್ಯಗಳೆಲ್ಲಾ ಇಂದು ಅವಳಿಗೆ ರೌದ್ರರೂಪದಲ್ಲಿ ಕಾಣತೊಡಗಿದವು. ನೇತ್ರಾ ಹೆದರಿದಳು.

    ಹೇ, ಮನೆಗೆ ಹೋಗೋಣ ನಡೆಯೋ, ಮನೆಯಲ್ಲಿ ಗಾಬರಿ ಆಗ್ತಾರೆ ಅಂದಳು

    ಸುಮ್ಮನೇ ಬಾರೇ, ನನ್ನ ಹತ್ತಿರ ನಾಟಕ ಆಡಬೇಡ. ತೇಜಸ್ ನ ಜೊತೆ ಇಲ್ಲಿ ಗಂಟೆಗಟ್ಟಳೆ ಕೂರೋಕೆ ಆಗುತ್ತೆ. ನನ್ನ ಜೊತೆ ಹತ್ತು ನಿಮಿಷ ಮಾತಾಡೋಕೆ ಆಗೋಲ್ವಾ ಒರಟಾಗಿ ಹೇಳಿದ ಕಿರಣ.

    ನೇತ್ರಾಳಿಗೆ ಮಾತೇ ಹೊರಡಲಿಲ್ಲ. ಅಂದರೆ ಇವನು ಇಲ್ಲಿಗೆ ಪ್ರಿ-ಪ್ಲಾನ್ ಮಾಡಿಕೊಂಡೇ ಬಂದಿದ್ದಾನೆ ಎಂಬುದು ಖಾತ್ರಿಯಾಯಿತು. ಕಿರಣನ ಧ್ವನಿ ಬದಲಾವಣೆಯು ಅವಳ ಅರಿವಿಗೆ ಬಂತು. ಮೊದಲೇ ಪುಂಡ. ಈಗ ತಾನು ಹಟ ಮಾಡುವುದು ಸರಿಯಲ್ಲವೆಂದು ನೇತ್ರಾ ಸುಮ್ಮನಾಗಿ ಬಿಟ್ಟಳು.

    ತೇಜಸ್ ಮತ್ತು ತಾನು ಯಾವಾಗಲೂ ಕೂರುತ್ತಿದ್ದ ಬಂಡೆಯ ಕಡೆಗೇ ನಡೆದ ಕಿರಣ. ತೇಜಸ್ ಕೂರುತ್ತಿದ್ದ ಜಾಗದಲ್ಲೇ ಅವನೂ ಕುಳಿತ. ಬಾ ಇಲ್ಲಿ. ಕುಳಿತುಕೋ. ನಿನ್ನ ಹತ್ತಿರ ಮುಖ್ಯವಾದ ವಿಷಯ ಮಾತನಾಡಬೇಕು ಅಂದ.

    ಆ ವೇಳೆಗೆ ಅವನೇನು ಮಾತನಾಡಬೇಕು ಅಂತಿದ್ದಾನೆ ಅದರ ಕಲ್ಪನೆ ನೇತ್ರಾಳಿಗೆ ಬಂದಿತ್ತು. ಈಗ ಸುಮ್ಮನಿದ್ದರೆ ಕೆಲಸ ಕೆಡುತ್ತದೆ ಎಂದು ಭಾವಿಸಿ, ಜೋರು ಧ್ವನಿಯಲ್ಲಿ ಹೇಳಿದಳು

    ನೋಡು ಕಿರಣ, ಮಳೆ ಹತ್ತೀರೋದು ನೋಡು. ಸಿಡಿಲು ಜೋರಾಗ್ತಿದೆ. ಮನೆಗೆ ಹೋಗೋಣ. ಏನು ಮಾತನಾಡಬೇಕೋ ಅದನ್ನ ಅಲ್ಲೇ ಮಾತನಾಡೋಣ. ತಕ್ಷಣ ನಾವು ಹೊರಡದೆ ಇದ್ದರೆ ಮನೆ ಸೇರೋದೆ ಅನುಮಾನವಾಗುತ್ತೆ. ಹೊರಡು, ಇಲ್ಲಾ ಅಂದ್ರೆ ನಾನು ಹೊರಡ್ತೀನಿ, ನೀನು ಇಲ್ಲೇ ಇರು ಎಂದವಳೇ ನೇತ್ರಾ ತಿರುಗಿ ಹೊರಡಲು ಅನುವಾದಳು.

    ಕಿರಣನ ಮುಖಚಹರೆ ಬದಲಾಯಿತು. ಅವನು ಕೋಪದಿಂದ ಕುದಿಯತೊಡಗಿದ. "ಹೇಗೆ ಹೋಗ್ತೀಯೇ, ಇವತ್ತು ಎರಡರಲ್ಲಿ ಒಂದು ಡಿಸೈಡ್ ಆಗಲೇ ಬೇಕು. ನೀನು ತೇಜಸ್ ಜೊತೆ ಲಲ್ಲೆ ಹೊಡೆಯೋದು, ಇಬ್ಬರೂ ಮದುವೆ ಆಗಲಿಕ್ಕೆ ಪ್ಲಾನ್ ಮಾಡಿರೋದು ನನಗೆ ಗೊತ್ತಿಲ್ಲ ಅಂದುಕೊಂಡಿದ್ದೀಯಾ? ಯಾವ ಕಾರಣಕ್ಕೂ ನಾನು ಅದನ್ನ ನಡೀಲಿಕ್ಕೆ ಬಿಡೋಲ್ಲ. ಮನೆಯವರೆಲ್ಲಾ ನಮ್ಮ ಮದುವೆಗೆ ಒಪ್ಪಿದ್ದಾರೆ, ನಿನಗೇನೇ ಕಷ್ಟ. ಆ ಬಿಳಿ ಜಿರಲೆ ಹಿಂದೆ ಯಾಕೆ ಬಿದ್ದಿದ್ದೀಯಾ. ನಾಚಿಕೆ ಆಗೋಲ್ವಾ

    Enjoying the preview?
    Page 1 of 1