Discover millions of ebooks, audiobooks, and so much more with a free trial

Only $11.99/month after trial. Cancel anytime.

ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ ದಂತ ಕಥೆ ( Primrose's Curse Kannada Edition)
ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ ದಂತ ಕಥೆ ( Primrose's Curse Kannada Edition)
ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ ದಂತ ಕಥೆ ( Primrose's Curse Kannada Edition)
Ebook155 pages34 minutes

ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ ದಂತ ಕಥೆ ( Primrose's Curse Kannada Edition)

Rating: 0 out of 5 stars

()

Read preview

About this ebook

ಪ್ರಿಮ್ರೋಸ್ ಫರ್ನೆಟೈಸ್ ಎಂಬ ಹೆಸರಿನ ಹನ್ನೆರಡು ವರ್ಷದ ದಿಟ್ಟ ಹುಡುಗಿಯೊಬ್ಬಳು ಕಾಡು ಪ್ರಾಣಿಗಳ‌ ಜೊತೆ ಸೇರಿ ಅತೀಂದ್ರಿಯ ಭಾಗದ ಮರ್ಕಿ ದ್ವೀಪವಾದ ನರಕಪುರ ದಲ್ಲಿನ ಅತೀಂದ್ರಿಯ ಸಾಮರ್ಥ್ಯಗಳನ್ನು ಹೇಳುವ ಸಾಹಸಮಯ ಕಾರ್ಯಾಚರಣೆ ಇದಾಗಿದೆ‌. ಈ ಕಥೆಯು ಧೈರ್ಯಶಾಲಿ ಹುಡುಗಿಯೊಬ್ಬಳು ದುಷ್ಟ ಮಾಂತ್ರಿಕ ರಾಣಿ ಎವೆಲಿನ್ ವೆಲೆಕ್ರೊನಾ ಳನ್ನ ಸೋಲಿಸುವುದು ಮತ್ತು ಮನುಕುಲದ ಮೇಲೆ ಬೀರಿದ ಶಾಪವನ್ನು ಮುರಿಯುವುದು ಹಾಗೆ, ಕಾಡು ಪ್ರಾಣಿಗಳ ಜೊತೆ ಸೇರಿ ಆ ಮಾಂತ್ರಿಕಳನ್ನು ಸೋಲಿಸುವ ಸಲುವಾಗಿ ದಿಟ್ಟ ಪ್ರಯಾಣವನ್ನು ಹೇಗೆ ಯೋಚಿಸಿ ಪ್ರಾರಂಭಿಸುತ್ತಾಳೆ? ಎನ್ನುವ ಕುತೂಹಲದೊಂದಿಗೆ ಕಥೆ ಸಾಗುತ್ತದೆ.


ಕೊನೆಗೆ ಪ್ರೀತಿಯ ಕಾಡು ಪ್ರಾಣಿಗಳ ಗುಂಪು ಮತ್ತು ಮುಗ್ದ ಹನ್ನೆರಡು ವರ್ಷದ ಬಾಲಕಿಯೂ ನಿಜವಾಗಿಯೂ ಮಾಂತ್ರಿಕ ರಾಣಿ ಎವೆಲಿನ್ ರನ್ನ ಉರುಳಿಸುವಲ್ಲಿ ಯಶಸ್ವಿಯಾಗ್ತಾರಾ? ಮನುಕುಲಕ್ಕೆ ಶಾಂತಿ, ಯೋಗಕ್ಷೇಮ ಮತ್ತು ಸಂತೋಷವನ್ನು ಮರಳಿ ತರಲು ಸಾಧ್ಯವಾಗುತ್ತದಾ?


ಇದೆಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಹಾಗೆ ಈ ಕಥೆಯ ಬಗ್ಗೆ ಇನ್ನಷ್ಟು ತಿಳಿಯಲು ಸಂಪೂರ್ಣವಾಗಿ ಈ ಪುಸ್ತಕವನ್ನು ಓದಿ.



ಈ ಪುಸ್ತಕ ನಿಜವಾದ ಸ್ನೇಹ, ಧೈರ್ಯ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತದೆ!

LanguageKannada
Release dateAug 19, 2020
ISBN9781950263318
ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ ದಂತ ಕಥೆ ( Primrose's Curse Kannada Edition)
Author

Kiara Shankar

Kiara Shankar is a talented fifteen-year-old author/songwriter from San Francisco, California, USA. Apart from writing books and songs, she loves reading and artwork. Her debut book, Primrose's Curse, has been published in fifteen different languages including English, Spanish, Chinese, Hindi, and more. Kiara Shankar also co-writes pop song lyrics along with her Dad, Vinay Shankar. The pop hits penned by the father-daughter duo-sung by singers Primrose Fernetise, Francesca Shankar, Marla Malvins, Vin Cooper, and SpotZ the Frenchie-are now streaming on Spotify, Apple Music, YouTube Music, Amazon Music, Deezer, and more digital music streaming platforms.

Related to ಪ್ರಿಮ್ರೋಸ್ ಮೇಲಿನ ಶಾಪ

Related ebooks

Reviews for ಪ್ರಿಮ್ರೋಸ್ ಮೇಲಿನ ಶಾಪ

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    ಪ್ರಿಮ್ರೋಸ್ ಮೇಲಿನ ಶಾಪ - Kiara Shankar

    Shankar

    Copyright ©  2020 by VIKI Publishing®. All rights reserved.

    No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law.

    This is a work of fiction. The characters in this book are entirely fictional. Any resemblance to actual place, business establishments, and persons living or dead is entirely coincidental.

    Library of Congress Control Number:  2019900256

    ISBN-13: Kannada Edition

    978-1-950263-31-8 (eBook)

    978-1-950263-32-5 (Paperback)

    ISBN-13 / ISBN: (English Editions):

    978-1-950263-00-4  /  1-950263-00-2 (Paperback - Color Interior)

    978-1-950263-03-5 / 1-950263-03-7 (Paperback - B&W Interior)

    978-1-950263-01-1 / 1-950263-01-0  (Hardcover - Color Interior)

    978-1-950263-02-8 / 1-950263-02-9 (eBook)

    978-1-950-263-10-3 / 1-950263-10-X (Audiobook)

    First Edition: Aug 2020. Published by VIKI Publishing®, San Francisco, California, USA.

    Story by Kiara Shankar and Vinay Shankar, San Francisco, California, USA.

    Translation by Chandana Venkatesh, Hassan, Karnataka, India.

    Visit the publisher’s website at www.vikipublishing.com

    ಮನುಕುಲಕ್ಕೆ ಸಮರ್ಪಣೆ

    ಪರಿವಿಡಿ

    ಆರಂಭಿಕ ಜೀವನ

    ಕಾಡು ಪ್ರಾಣಿಗಳೊಂದಿಗೆ ಮುಖಾಮುಖಿಯಾದಾಗ

    ಕುಬ್ಜರನ್ನು ಭೇಟಿಯಾದಾಗ

    ರಾಣಿ ಸಾರಾಳ ಮದುವೆಗೆ ಹೋದಾಗ

    ಕಗ್ಗತ್ತಲೆಯ ನರಕಾಪುರದೆಡೆಗೆ ಬೃಹತ್ ಸಮುದ್ರಯಾನ

    ನರಕಾಪುರದ ಸರ್ವನಾಶ ಮತ್ತು ರಹಸ್ಯಮಯ ಮಾರ್ಗ

    ಕಾಣದ ಕೈಗಳ ಆಶೀರ್ವಾದ

    ಎವೆಲಿನ್ ವೆಲೆಕ್ರೋನಾ'ಳ ಸರ್ವನಾಶ

    ಮರಳಿ ಗೂಡಿನತ್ತ

    ವಿದಾಯ ಹೇಳುವ ಸಮಯವಿದು

    ಗೂಡು ಸೇರಿದ ಪ್ರಿಮ್ರೋಸ್ ಎಂಬ ಹಕ್ಕಿ

    ಲೇಖಕರ ಕುರಿತು

    ಅನುವಾದಕರ ಮಾತು

    ಆರಂಭಿಕ ಜೀವನ

    ಒಂದಾನೊಂದು ಕಾಲದಲ್ಲಿ ದಟ್ಟವಾದ ಕಾಡಿನ ಮಧ್ಯೆ ಸಣ್ಣ ಗುಡಿಸಲೊಂದರಲ್ಲಿ ಒಬ್ಬಳು ದಿಟ್ಟ ಹಾಗು ಧೈರ್ಯವಂತ ಹುಡುಗಿ ವಾಸವಾಗಿದ್ದಳು. ಅವಳೇ  ಪ್ರಿಮ್ರೋಸ್ ಫರ್ನೆಟೈಸ್,ಅವಳ ವಯಸ್ಸು ಕೇವಲ ಹನ್ನೆರಡು ವರ್ಷ.

    ಬಂಗಾರದ ಬಣ್ಣವುಳ್ಳ ಅವಳ ಕೇಶರಾಶಿ, ನೀಲಿ ಬಣ್ಣದ ಅವಳ ಅಗಲವಾದ ನಯನಗಳು, ಗುಲಾಬಿಯ ಮೊಗ್ಗಿನಂತಿದ್ದ ತುಟಿಗಳು ಅವಳ ದೈಹಿಕ ಸೌಂದರ್ಯವನ್ನು ಸಾರುತ್ತಿದ್ದವು. ಜೊತೆಗೆ ಮನಸ್ಸಿನಿಂದಲೂ ಪ್ರಿಮ್ರೋಸ್ ಚಿನ್ನದಂತಹ ಹುಡುಗಿ.

    ಆಕೆಯ ಮನೆಯ ಆರ್ಥಿಕ  ಸ್ಥಿತಿಗತಿ ಸರಿಯಿಲ್ಲದ ಕಾರಣ ಅವಳ ಕುಟುಂಬದವರೆಲ್ಲ ಅವರಿದ್ದ ಮಿತ್ರಾಪುರ ನಗರದಿಂದ  ಬಹಳ ದೂರವಿರುವ ನಿರ್ಜನವಾದ ಕಾಡೊಂದರಲ್ಲಿ ವಾಸಿಸುವ ಪರಿಸ್ಥಿತಿ ಎದುರಾಯಿತು. ಆ ನಗರಕ್ಕೂ‌ ಕಾಡಿನಲ್ಲಿರುವ ಗುಡಿಸಲಿಗೂ ಸುಮಾರು ಒಂದು ಗಂಟೆ ಜಟಾಕ ಬಂಡಿಯಲ್ಲಿ  ಸಾಗಬೇಕಾಗಿತ್ತು.

    ಜೀವನ ನಡೆಸುವ ಸಲುವಾಗಿ ಪ್ರಿಮ್ರೋಸ್ ಹತ್ತಿ ಬಟ್ಟೆಗಳನ್ನು ಹೊಲೆಯುವ (ನೇಯುವ‌)ಮತ್ತು  ಉಣ್ಣೆ ಬಟ್ಟೆಯಲ್ಲಿ ಕಸೂತಿ ಮಾಡಿ ಸ್ವೆಟರ್ ಗಳನ್ನು ತಯಾರಿಸುತ್ತಿದ್ದಳು. ಅವಳ  ಹಿರಿಯಣ್ಣ ಸ್ಟಾನ್ಲಿ, ಕಾಡಿನಲ್ಲಿ ಸಿಗುವ ಮರಗಳನ್ನು ಕಡಿದು ನಗರದಲ್ಲಿರುವ ವ್ಯಾಪಾರಿಗಳಿಗೆ ಮಾರಾಟ ಮಾಡುವ ಕೆಲಸ ಮಾಡ್ತಾ ಇದ್ದ.

    ಸ್ಟಾನ್ಲಿ ಮರದ ತುಂಡುಗಳನ್ನ ಹಾಗೆ ಪ್ರಿಮ್ರೋಸ್ ತಯಾರಿಸಿದ ಬಟ್ಟೆಗಳನ್ನು ಮತ್ತು ಸ್ವೆಟರ್ಗಳನ್ನು ಅವರ ಮನೆಯಲ್ಲೇ ಇದ್ದ ಕಡು ಕಂದು ಬಣ್ಣದ ಜಟಾಕ ಗಾಡಿಯಲ್ಲಿ ಒಯ್ಯುತ್ತಿದ್ದ ಆ ಗಾಡಿಯನ್ನು ಹೊರುತ್ತಿದ್ದದ್ದೇ ಜಿಂಜರ್ ಎನ್ನುವ ಅವರ ಮನೆಯ ಕುದುರೆ.

    ತುಂಬಾ ದಿನಗಳಿಂದಲೂ ಪ್ರಿಮ್ರೋಸ್ ತಾಯಿ ಖಾಯಿಲೆಯಿಂದ ಬಳಲುತ್ತಿದ್ದ ಕಾರಣ ,ಆಕೆಯು ಒಂದು ದಿನ ತೀರಿ ಹೋದಳು. ಇದರಿಂದ ಪ್ರಿಮ್ರೋಸ್,ಅವಳ ತಂದೆ,ಮತ್ತು ಅವಳ ಹಿರಿಯಣ್ಣ ಸ್ಟಾನ್ಲಿ ದುಃಖ ಕ್ಕೆ ಈಡಾದರು‌‌.

    ಮೊದಲೇ ಆರ್ಥಿಕವಾಗಿ ಕುಸಿದಿದ್ದ ಕುಟುಂಬಕ್ಕೆ ಪ್ರಿಮ್ರೋಸ್ ಳ‌ ತಾಯಿಯ ಸಾವು ತೋಡಿಕೊಳ್ಳಲಾರದಷ್ಟು ದುಃಖ ತಂದಿತ್ತು ಹಾಗೂ ಮಾನಸಿಕವಾಗಿ ಕುಗ್ಗಿಸಿತ್ತು.

    ಒಂದು ಸಾವಿನ ನಷ್ಟದ ನಂತರ ಫರ್ನೆಟೈಸ್ ಕುಟುಂಬದಲ್ಲಿನ  ಆರ್ಥಿಕ ಪರಿಸ್ಥಿಯ ಸುಧಾರಣೆಗಾಗಿ ಸ್ಟಾನ್ಲಿ ಪ್ರತಿನಿತ್ಯವೂ ಬಿಡುವಿಲ್ಲದಂತೆ ಮರಗಳನ್ನು ಕಡಿಯುವ ಕೆಲಸದಲ್ಲೇ ದುಡಿಯಬೇಕಾಯಿತು. ಇನ್ನೂ ಪ್ರಿಮ್ರೋಸ್ ತಂದೆಯನ್ನು ನೋಡಿಕೊಳ್ಳುವ, ಮನೆ ಕೆಲಸವನ್ನೂ ಮಾಡುವುದರ ಜೊತೆಗೆ ಪ್ರತಿನಿತ್ಯ ಬಟ್ಟೆ ಹೊಲಿಯುತ್ತಲೆ ಇದ್ದಳು.

    ಒಂದಷ್ಟು ದಿನಗಳು ಉರುಳಿದವು. ಒಂದು ರಾತ್ರಿ, ಊಟದ ಸಿದ್ಧತೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಪ್ರಿಮ್ರೋಸ್ ಳ‌‌ ತಂದೆ ಪಾಶ್ವರ್ವಾಯುವಿಗೆ ತುತ್ತಾದರು. ಅವರು ಮಲಗಿದ್ದ ಹಾಸಿಗೆಯಿಂದ ಮೇಲೇಳಲು ಆಗದೆ ಮಾತನಾಡಲು ಆಗದೆ ಅವರ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡವು ಇದು ಫರ್ನೆಟೈಸ್ ಕುಟುಂಬಕ್ಕೆ‌ ಇನ್ನೊಂದು ಆಘಾತವನ್ನೇ ತಂದಿತ್ತು.

    ಪ್ರಿಮ್ರೋಸ್ ಮತ್ತು ಸ್ಟಾನ್ಲಿ ಇಬ್ಬರೂ ಅವರ ತಂದೆಗೆ ಮಾತನಾಡಲು ಸಹಾಯವಾಗುವಂತೆ  ಆರ್ಯುವೇದ ಚಿಕಿತ್ಸೆ ಕೊಡಿಸಿದರು. ಆದರೆ , ಅದು ಕೇವಲ ಅವರ ಧ್ವನಿಯನ್ನಷ್ಟೆ ಸರಿ ಮಾಡಿತ್ತು. ಆದರೂ ಅವರ ಆರೋಗ್ಯದ ಸ್ಥಿತಿ ಗತಿ ಕ್ಷಿಣಿಸುತ್ತಲೆ ಇತ್ತು. ಅವರು ಹಾಸಿಗೆ ಹಿಡಿಯುವಂತಾಯಿತು.

    ಪ್ರಿಮ್ರೋಸ್ ಹಾಸಿಗೆ ಹಿಡಿದ ತನ್ನ

    Enjoying the preview?
    Page 1 of 1