Discover millions of ebooks, audiobooks, and so much more with a free trial

Only $11.99/month after trial. Cancel anytime.

Ideeke Heege ? Simple Science
Ideeke Heege ? Simple Science
Ideeke Heege ? Simple Science
Ebook303 pages1 hour

Ideeke Heege ? Simple Science

Rating: 0 out of 5 stars

()

Read preview

About this ebook

ಇದೊಂದು ಹ್ಯಾಪಿ ರೀಡಿಂಗ್ ಪುಸ್ತಕ. ಓ ಮನಸೆ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹ. ವೈಜ್ಞಾನಿಕ ಕುತೂಹಲಗಳನ್ನು ಲಘುವಾದ ಭಾಷೆಯಲ್ಲಿ ವಿವರಿಸಲಾಗಿದೆ. ಇಲ್ಲಿರುವ ವಿಷಯಗಳನ್ನು ಅಕಾಡೆಮಿಕ್ ಆಗಿ ಬಳಸಬೇಕೆಂದರೆ ಒಮ್ಮೆ ತಜ್ಞರ ಹತ್ತಿರ ಸ್ಪಷ್ಟೀಕರಣ ತೆಗೆದುಕೊಂಡರೆ ಒಳ್ಳೆಯದು.

LanguageKannada
Release dateApr 2, 2021
ISBN6580234305581
Ideeke Heege ? Simple Science

Read more from Vinay Bhat

Related to Ideeke Heege ? Simple Science

Related ebooks

Reviews for Ideeke Heege ? Simple Science

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Ideeke Heege ? Simple Science - Vinay Bhat

    http://www.pustaka.co.in

    ಇದೇಕೆ ಹೀಗೆ? ಸಿಂಪಲ್ ಸೈನ್ಸ್

    Ideeke Heege? Simple Science

    Author:

    ವಿನಯ್ ಭಟ್

    Vinay Bhat

    For more books

    http://www.pustaka.co.in/home/author/vinay-bhat

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪರಿವಿಡಿ

    ಅವನಿಗಿಂತ ಅವಳಿಗೇ ಚಳಿ ಹೆಚ್ಚು

    ಬೆಕ್ಕಿನ ಬಾಯಲ್ಲಿ ಬೌತಶಾಸ್ತ್ರ!

    ಜಾಹೀರಾತು ವಿರೋಧಿ ಟಿ.ವಿ. ರಿಮೋಟ್ ಕಂಟ್ರೋಲರ್

    ಕೋಳಿ ಮೊಟ್ಟೆಯಿಂದ ನಿಯಮ ಉಲ್ಲಂಘನೆ!

    ಒಂದು ಸಿಂಪಲ್ ಪ್ರಯೋಗ

    ಅಬ್ಬಾ, ಹಲ್ಲು ನೋವು!

    ಜೋಗುಳದಲ್ಲೂ ವಿಜ್ಞಾನವಿದೆ!

    ಯಾವುದು ಬೇಯಿಸಿದ ಮೊಟ್ಟೆ?

    ತಣ್ಣನೆಯ ಸ್ನಾನ ಮಾಡಿದರೂ ಸೆಖೆ!

    ಎತ್ತರದ ಪ್ರದೇಶದಲ್ಲಿ ಉತ್ತಮ ಆರೋಗ್ಯ

    ಕಣ್ಣು ರೆಪ್ಪೆ ಬಡಿಯಲು ಕಾರಣವೇನು ಗೊತ್ತಾ?

    ಮರದ ನೆರಳೇ ವಾಸಿ

    ನಿದ್ರೆಯಲ್ಲಿ ಸೀನು ಬರುವುದಿಲ್ಲ, ಗೊತ್ತಾ?

    ನಾನ್ ಸ್ಟಿಕ್ ಪಾತ್ರೆ ಕಂಡು ಹಿಡಿದಿದ್ದು ಹೇಗೆ ಗೊತ್ತಾ?

    ಮತ್ತೆ ಮತ್ತೆ ಚಹಾ ಕುಡಿಯುವ ಬಯಕೆ!

    ದಟ್ಟವಾದ ಕೂದಲಿನ ರಹಸ್ಯ

    ಶಬ್ದದಿಂದ ಕೊಲ್ಲಬಹುದೇ?

    ಮೊಡವೆ ರೋಗವಲ್ಲ

    ಮೈ ಮುರಿದಾಗ ಖುಷಿಯಾಗುವುದೇಕೆ?

    ಬಿಕ್ಕಳಿಕೆ ಬಂದ್ರೆ ಏನು ಮಾಡ್ತೀರಾ?

    ತಲೆ ನೋವು ತರಿಸುವ ಐಸ್ ಕ್ರೀಮ್

    ಕಾಫಿಯ ಸುವಾಸನೆ ಮತ್ತು ಉಸಿರಿನ ದುರ್ವಾಸನೆ

    ಯಾರ ಉರುಗು ಬೇಗ ಬೆಳೆಯುತ್ತದೆ?

    ನಮ್ಮ ಮೂಗಿನ ಎರಡು ಸೈನ್ಸ್ ವಿಷಯಗಳು

    ಕಂಪ್ಯೂಟರ್ ಕೀ ಬೋರ್ಡ್ ABCD ಕ್ರಮದಲ್ಲಿ ಯಾಕಿಲ್ಲ?

    ಎಲ್ಲಿ ನೋವಿದೆ ಅಂತ ಮಾತ್ರೆಗೆ ಹೇಗೆ ಗೊತ್ತಾಗುತ್ತೆ?

    ಸಾವನ್ನು ಊಹಿಸುವ ಶಕ್ತಿ ನಮಗಿಲ್ಲ

    ವಿಜ್ಞಾನಕ್ಕೂ ಸುಳ್ಳಿಗೂ ಏನು ಸಂಬಂಧ?

    ಜೇನುತುಪ್ಪ ಯಾಕೆ ಹಾಳಾಗುವುದಿಲ್ಲ?

    ಎಲ್ಲರ ಮೈ ಬಣ್ಣ ಒಂದೇ ರೀತಿ ಯಾಕಿಲ್ಲ?

    ಆಕಾಶದಲ್ಲಿ ಚಂದ್ರನೇ ಇರದಿದ್ದರೆ?

    ಬೆವರಿಗೆ ವಾಸನೆ ಇಲ್ಲ!

    ಚಳಿಗುಳ್ಳೆಗಳು ಏಳಲು ಏನು ಕಾರಣ ಗೊತ್ತಾ?

    ಮೊದಲ ಮಳೆಯಲ್ಲಿ ಮಣ್ಣಿನ ಸುವಾಸನೆ

    ಗಿಡಮರಗಳಿಗೂ ನೋವಾಗುತ್ತಾ?

    ನಮ್ಮ ಬಾಲ್ಯ ನಮಗೇಕೆ ನೆನಪಿರುವುದಿಲ್ಲ?

    ಹೆಂಗಸರಿಗೇ ರುಚಿ ಜಾಸ್ತಿ

    ಹತ್ತಿರ ಹೋದರೆ ಅಪಾಯ!

    ಬದುಕಲು ನಮಗೆಷ್ಟು ಅಂಗಗಳು ಬೇಕು?

    ಮಿಂಚಿನಲ್ಲಿರುವ ವಿದ್ಯುತ್ ನಮಗೆ ಸಿಗೋದಿಲ್ಲ!

    ಬೆಳದಿಂಗಳಿನಲ್ಲಿ ಎಲ್ಲವೂ ಕಪ್ಪು ಬಿಳುಪು!

    ಮರದ ಪಾತ್ರೆಗಳೇ ಸೇಫು

    ಮಹಿಳೆಯರಿಗೆ ಆಯಸ್ಸು ಹೆಚ್ಚು

    ಕಷ್ಟಪಟ್ಟು ತಯಾರಿಸಿದ ವಿದ್ಯುತ್ ಬಲ್ಬ್ ಕೆಳಗೆ ಬಿದ್ದಾಗ!!!

    ಗಗನ ಯಾತ್ರಿಗಳು ತೇಗುವುದಿಲ್ಲ!

    ಚಾಣಾಕ್ಷ ಮಾಲಿನ್ಯ!

    ಬಲೂನ್ ಉಬ್ಬಿಸಲು ಸೋಮಾರಿತನವಾದರೆ!

    ಕೋಳಿಮೊಟ್ಟೆಯ ಈ ಪ್ರಯೋಗ ಮಾಡಿ ನೋಡಿ

    ಸಂಗೀತ ಎನ್ನುವ ಔಷಧಿ

    ನೀರು ಎಂದಿಗೂ ಹಾಳಾಗುವುದಿಲ್ಲ

    ಮರವನ್ನು ಕರಗಿಸಬಹುದೇ?

    ಗುಡುಗು ಬಂದ ಮರುದಿನವೇ ಅಣಬೆ ಹುಟ್ಟುತ್ತದೆ!

    ನಿಂತುಕೊಂಡು ನಿದ್ರೆ ಮಾಡಲು ಸಾಧ್ಯವೇ?

    ಪ್ರಾಣಿಗಳ ರಕ್ತವನ್ನು ಮನುಷ್ಯರಿಗೆ ಕೊಡಬಹುದೇ?

    ಭೂಮಿ ಗುರುತ್ವಾಕರ್ಷಣೆಯ ಶಕ್ತಿ ಕಳೆದುಕೊಂಡು ಬಿಟ್ಟರೆ?

    ಏನೋ ಮಾಡಲು ಹೋಗಿ..

    ಐಸ್ ದೊಡ್ಡದು, ನೀರು ಚಿಕ್ಕದು!

    ಪ್ರಾಣಿಗಳಿಗೆ ಸಮಯ ಗೊತ್ತಾಗುತ್ತಾ?

    ಮೊಬೈಲ್ ವೈಬ್ರೇಶನ್ ಪಿಶಾಚಿ!

    ಭೂಮಿಗೆ ಮೂರು ಸುತ್ತು!

    ಇದು ಮಹತ್ವದ ಸಂಶೋಧನೆ ಅಲ್ವಾ?

    ನೀವು ನಿದ್ರೆಯಲ್ಲಿ ಮಾತಾಡುತ್ತೀರಾ?

    ಕಿವಿಯ ಗುಗ್ಗೆ ಬಗ್ಗೆ ಅಸಹ್ಯ ಯಾಕೆ?

    ಫೋನನ್ನು ಕಂಡರೆ ಭಯಪಡುವ ಜನರೂ ಇದ್ದಾರೆ!

    ನಮ್ಮ ಜೊಲ್ಲಿನಲ್ಲಿದೆ ನೋವು ನಿವಾರಕ ಔಷಧಿ!

    ಸಮುದ್ರದ ನೀರಿಗೆ ಉಪ್ಪು ಎಲ್ಲಿಂದ ಬಂತು?

    ಮೊಟ್ಟೆ ಮೊದಲಾ ಕೋಳಿ ಮೊದಲಾ?

    ಮಹಿಳೆಯರೇಕೆ ಬೊಕ್ಕರಾಗುವುದಿಲ್ಲ?

    ನಾಯಿಗಳು ನೆಲ ಮೂಸುತ್ತಾ ಯಾಕೆ ನಡೆಯುತ್ತವೆ?

    ಒಂದೇ ತಾಸಿಗೆ ಅಮೇರಿಕಾ!

    ಆನೆಗಿಂತಲೂ ಬಲಶಾಲಿ ಬ್ಯಾಕ್ಟೇರಿಯಾ!

    ತೋಳು ಅಥವಾ ಸೊಂಟಕ್ಕೇ ಇಂಜಕ್ಷನ್ ಯಾಕೆ?

    ಗಾಯ ಮಾಯವಾಗುವುದು ಹೇಗೆ?

    ತೆಂಗಿನಕಾಯಿ ಹೋಳನ್ನು ಬೇಯಿಸಿ ನೋಡಿ

    ಸೊಳ್ಳೆ ಕಚ್ಚುವುದಕ್ಕೂ ಕಾರಣವಿದೆ

    ಹಾಲಿನಲ್ಲಿ ಅಡಗಿ ಕುಳಿತಿರುವ ಚೀಸ್

    ಬಾಲ ಉದುರಿಸಿ ಓಡುವ ಹಲ್ಲಿ

    ಉಗುರಿನ ಮೇಲೆ ಬಿಳಿ ಕಲೆಗಳು

    ಸಿಮೆಂಟಿಗೆ ನೀರು ಯಾಕೆ ಬೇಕು?

    ಹಾರುವ ಮೊದಲು ಓಡುವ ವಿಮಾನ

    ನೋ ವಾಟರ್, ಪ್ಲೀಸ್..

    ರಕ್ತದೊತ್ತಡ ಅಳೆಯಲು ತೋಳನ್ನೇ ಯಾಕೆ ಬಳಸುತ್ತಾರೆ?

    ಚಲಿಸುವ ಬೆಂಕಿ ಸುಡುವುದಿಲ್ಲ

    ಸದಾ ಕ್ಯೂನಲ್ಲಿ ಚಲಿಸುವ ಇರುವೆಗಳು

    ನಕ್ಕರೂ ಕಣ್ಣಲ್ಲಿ ನೀರು!!!

    ನೀರಿನ ಗುಳ್ಳೆ ಮತ್ತು ಸೋಪಿನ ಗುಳ್ಳೆ

    ಅರವತ್ತಕ್ಕೆ ಅರಳು ಮರಳು ಯಾಕೆ?

    ಇದೇಕೆ ಹೀಗೆ?

    ಓ ಮನಸೆ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹ

    ಇದೊಂದು ಹ್ಯಾಪಿ ರೀಡಿಂಗ್ ಪುಸ್ತಕ. ವೈಜ್ಞಾನಿಕ ಕುತೂಹಲಗಳನ್ನು ಲಘುವಾದ ಭಾಷೆಯಲ್ಲಿ ವಿವರಿಸಲಾಗಿದೆ. ಇಲ್ಲಿರುವ ವಿಷಯಗಳನ್ನು ಅಕಾಡೆಮಿಕ್ ಆಗಿ ಬಳಸಬೇಕೆಂದರೆ ಒಮ್ಮೆ ತಜ್ಞರ ಹತ್ತಿರ ಸ್ಪಷ್ಟೀಕರಣ ತೆಗೆದುಕೊಂಡರೆ ಒಳ್ಳೆಯದು.

    ವಿನಯ್ ಭಟ್

    *****

    ಅವನಿಗಿಂತ ಅವಳಿಗೇ ಚಳಿ ಹೆಚ್ಚು

    ಈ ವಿಷಯವನ್ನು ಬಹುಷ: ನೀವೆಲ್ಲರೂ ಗಮನಿಸಿರಬಹುದು. ‘ಇವತ್ತು ಸ್ವಲ್ಪ ಸೆಖೆ ಇದೆ’ ಎಂದು ಗಂಡ ಫ್ಯಾನ್ ಹಾಕಿಕೊಂಡು ಕುಳಿತಿದ್ದರೆ, ‘ಅಬ್ಬಾ! ಫ್ಯಾನ್ ಯಾಕೆ? ಚಳಿ ಇದೆ ಅಲ್ವಾ?’ ಎಂದು ಹೆಂಡತಿ ಗೊಣಗುತ್ತಿರುತ್ತಾಳೆ. ಗಂಡ ಹೆಂಡತಿ ಇಬ್ಬರೂ ಸೇರಿ ವಾಕಿಂಗ್‍ಗೆ ಹೊರಟಾಗ, ಗಂಡ ತೆಳುವಾದ ಟಿ ಶರ್ಟ್ ಧರಿಸಿದರೆ, ‘ನಿಮಗೆ ಚಳಿ ಆಗಲ್ವಾ?’ ಎನ್ನುತ್ತಾ ಹೆಂಡತಿ ಜಾಕೇಟ್ ಹಾಕಿಕೊಳ್ಳುತ್ತಾಳೆ. ಇದನ್ನೆಲ್ಲಾ ನೋಡಿ, ನನ್ನ ಹೆಂಡತಿಗೆ ಚಳಿ ಜಾಸ್ತಿ ಎಂದು ಯಾರಾದರೂ ಅಂದುಕೊಂಡರೆ ಅದು ಅವರ ತಪ್ಪು ತಿಳಿವಳಿಕೆ. ಏಕೆಂದರೆ, ಅಸಲಿ ವಿಷಯವೆಂದರೆ ಎಲ್ಲರ ಹೆಂಡತಿಯರಿಗೂ ಚಳಿ ಜಾಸ್ತಿ!

    ವೈಜ್ಞಾನಿಕವಾಗಿ ಹೇಳಬೇಕೆಂದರೆ, ಸಾಮಾನ್ಯವಾಗಿ ಮಹಿಳೆಯರಿಗೆ ಪುರುಷರಿಗಿಂತ ಚಳಿ ಹೆಚ್ಚು. ಹಲವಾರು ವೈಜ್ಞಾನಿಕ ಸಮೀಕ್ಷೆಗಳು ಈ ಅಂಶವನ್ನು ದೃಢ ಪಡಿಸಿವೆ. ಜೊತೆಗೆ ಒಂದಿಷ್ಟು ವೈಜ್ಞಾನಿಕ ಅಂಶಗಳೂ ಸಹ ಈ ಮಾತಿಗೆ ಬೆಂಬಲ ನೀಡುತ್ತವೆ. ಮಹಿಳೆಯರಿಗೆ ಯಾಕೆ ಹೆಚ್ಚು ಚಳಿಯಾಗುತ್ತದೆ ಎನ್ನುವುದು ಇಲ್ಲಿಯ ಚರ್ಚೆಯ ವಿಷಯ.

    ಮೊದಲಿಗೆ, ನಮಗೆ ಹೇಗೆ ಮತ್ತು ಯಾಕೆ ಚಳಿಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ. ಮನುಷ್ಯನ ದೇಹಕ್ಕೊಂದು ನಿರ್ಧಿಷ್ಟ ಉಷ್ಣಾಂಶವಿರುತ್ತದೆ. ನಾವು ಆರೋಗ್ಯವಾಗಿರಬೇಕೆಂದರೆ, ನಮ್ಮ ದೇಹದಲ್ಲಿ ಸರಾಸರಿ 37 ಡಿಗ್ರಿ ಉಷ್ಣಾಂಶವಿರಲೇಬೇಕು. ಈ ಉಷ್ಣಾಂಶವನ್ನು ಕಾಪಾಡುವ ಕೆಲಸವನ್ನು ನಮ್ಮ ದೇಹ ನಿರಂತರ ಮಾಡುತ್ತಿರುತ್ತದೆ.

    ನಮ್ಮ ಹೊರಗಿನ ವಾತಾವರಣದ ಉಷ್ಣಾಂಶದಲ್ಲಿ ಇಳಿಕೆಯಾಗಿ ಚಳಿ ಪ್ರಾರಂಭವಾದಾಗಲೂ ದೇಹದ ಉಷ್ಣಾಂಶ 37 ಡಿಗ್ರಿಗಿಂತ ಕಡಿಮೆ ಬರದಂತೆ ದೇಹವು ನೋಡಿಕೊಳ್ಳಲೇ ಬೇಕು. ಈ ಸಂದರ್ಭದಲ್ಲಿ ಅದು ಚರ್ಮಕ್ಕೆ ರಕ್ತದ ಸಂಚಾರವನ್ನು ಕಡಿಮೆ ಮಾಡಿ ಉಷ್ಣಾಂಶವನ್ನು ನಿಯಂತ್ರಿಸಿಕೊಳ್ಳುತ್ತದೆ. ಚರ್ಮಕ್ಕೆ ರಕ್ತ ಸಂಚಾರ ಕಡಿಮೆಯಾದಾಗ ನಮಗೆ ಚಳಿಯ ಅನುಭವವಾಗುತ್ತದೆ.

    ಈಗ ಹೆಣ್ಣಿನ ಚಳಿಯ ವಿಷಯ. ಸಾಮಾನ್ಯವಾಗಿ ಗಂಡಿಗಿಂತಲೂ ಹೆಣ್ಣಿಗೆ ಹೆಚ್ಚು ಚಳಿಯಾಗಲು ಮುಖ್ಯ ಕಾರಣ ಚರ್ಮದ ಒಳಗಿರುವ ಕೊಬ್ಬಿನ ಪದರದಲ್ಲಿನ ವ್ಯತ್ಯಾಸ. ನಮ್ಮೆಲ್ಲರ ಚರ್ಮದ ಒಳ ಬದಿಯಲ್ಲಿ ಒಂದು ತೆಳುವಾದ ಕೊಬ್ಬಿನ ಪದರವಿರುತ್ತದೆ. ಈ ಪದರವು, ಹೆಣ್ಣಿನ ದೇಹದಲ್ಲಿ ಗಂಡಿನ ದೇಹಕ್ಕಿಂತಲೂ ಹೆಚ್ಚು ದಪ್ಪವಾಗಿರುತ್ತದೆ. ಚಳಿಯ ವಾತಾವರಣದಲ್ಲಿ ಚರ್ಮಕ್ಕೆ ರಕ್ತ ಪೂರೈಕೆ ನಿಂತುಹೋದ ಕಾರಣ, ಕೊಬ್ಬಿನ ಪದರದ ಒಳಭಾಗಲ್ಲಿ ರಕ್ತ ಸಂಚಾರವಿರುತ್ತದೆ. ಇದರಿಂದ ರಕ್ತ ಸಂಚಾರವಾಗುವ ಚರ್ಮದ ಕೊಬ್ಬಿನ ಪದರದ ಒಳಭಾಗಕ್ಕೂ, ಹೊರಗಿನ ವಾತಾವರಣಕ್ಕೂ ಹೆಚ್ಚು ಅಂತರ ಸೃಷ್ಟಿಯಾಯಿತು. ಈ ಅಂತರದ ಪರಿಣಾಮ ಚರ್ಮಕ್ಕೆ ಚಳಿಯ ಅನುಭವ ಹೆಚ್ಚಾಗುತ್ತದೆ. ಪುರುಷನಲ್ಲಿ ಕೊಬ್ಬಿನ ಪದರ ತೆಳುವಾಗಿರುವ ಕಾರಣ, ಈ ಅಂತರವು ಕಡಿಮೆಯಿರುತ್ತದೆ. ಆದ್ದರಿಂದ ಗಂಡಿಗೆ ಸಾಮಾನ್ಯವಾಗಿ ಚಳಿ ಕಡಿಮೆ.

    ಇದರ ಜೊತೆಗೆ ಇನ್ನೊಂದು ಪ್ರಮುಖ ಅಂಶವೂ ಇದೆ. ವಾತಾವರಣದ ಚಳಿಗೆ ನಮ್ಮ ದೇಹ ನಿರಂತರ ಸ್ಪಂದಿಸುತ್ತಿರಬೇಕು ಎಂದರೆ, ದೇಹದ ಒಳಗಡೆ ಉಷ್ಣಾಂಶವು ಉತ್ಪತ್ತಿಯಾಗುತ್ತಿರಬೇಕು. ಸಾಮಾನ್ಯವಾಗಿ ದೇಹದ ಉಷ್ಣಾಂಶವನ್ನು ಉತ್ಪಾದಿಸುವ ಸಾಮರ್ಥ್ಯ ಗಂಡಿನ ದೇಹದಲ್ಲಿ ಹೆಚ್ಚಿರುತ್ತದೆ. ಈ ಸಾಮರ್ಥ್ಯ ಹೆಣ್ಣಿನ ದೇಹದಲ್ಲಿ ಸ್ವಲ್ಪ ಕಡಿಮೆ. ಇದೂ ಸಹ ಮಹಿಳೆಗೆ ಹೆಚ್ಚು ಚಳಿಯಾಗಲು ಮುಖ್ಯ ಕಾರಣ.

    *****

    ಬೆಕ್ಕಿನ ಬಾಯಲ್ಲಿ ಬೌತಶಾಸ್ತ್ರ!

    ಪ್ರಾಣಿ ಪಕ್ಷಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳುವ ಸಹಜ ಕುತೂಹಲ ನಿಮಗಿದ್ದರೆ, ಬಹುಷ: ನಿಮ್ಮ ಕುತೂಹಲಕ್ಕೆ ಕೊನೆಯೇ ಇರುವುದಿಲ್ಲ. ಏಕೆಂದರೆ, ನಮ್ಮ ಜ್ಞಾನದ ದಾಹವನ್ನು ನಿರಂತರ ತಣಿಸುತ್ತಿರುವಷ್ಟು ಕೌತುಕಗಳು ಪ್ರಾಣಿ ಮತ್ತು ಪಕ್ಷಿ ಪ್ರಪಂಚದಲ್ಲಿವೆ. ದಿನ ಕಳೆದಂತೆ ಮತ್ತಷ್ಟು ಹೊಸ ಹೊಸ ಕೌತುಕಗಳು ಪತ್ತೆಯಾಗುತ್ತಲೇ ಇರುತ್ತವೆ.

    ನಾಯಿ ಅಥವಾ ಬೆಕ್ಕು ನೀರನ್ನು (ಅಥವಾ ಇನ್ಯಾವುದೇ ದ್ರವ ಪದಾರ್ಥವನ್ನು) ಹೇಗೆ ಕುಡಿಯುತ್ತವೆ ಎನ್ನುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಮೇಲ್ನೋಟಕ್ಕೆ ನೋಡಿದರೆ ಇವೆರಡೂ ಪ್ರಾಣಿಗಳು ನೀರು ಕುಡಿಯುವ ವಿಧಾನ ಒಂದೇ ರೀತಿಯಲ್ಲಿ ಕಾಣಿಸುತ್ತದೆ. ತೀರಾ ಹತ್ತಿರ ನಿಂತು ನೋಡಿದರೂ ವ್ಯತ್ಯಾಸ ಗೊತ್ತಾಗುವುದಿಲ್ಲ. ಆದ್ದರಿಂದ ಸುಮಾರು ಮೂರು ವರ್ಷಗಳ ಹಿಂದಿನವರೆಗೆ ಎಲ್ಲರೂ ಈ ಅಂಶವನ್ನೇ ನಂಬಿದ್ದರು. ಆದರೆ ಮೂರು ವರ್ಷಗಳ ಹಿಂದೆ ನಡೆದ ಪ್ರಯೋಗವೊಂದು, ಬೆಕ್ಕು ನೀರು ಕುಡಿಯುವ ವಿಧಾನಕ್ಕೂ, ನಾಯಿ ನೀರು ಕುಡಿಯುವ ವಿಧಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವ ಅಂಶವನ್ನು ಬಯಲು ಮಾಡಿತು. ಏನು ಆ ವ್ಯತ್ಯಾಸ ಎನ್ನುವುದನ್ನು ತಿಳಿಯುವುದರ ಮೊದಲು, ನಾಯಿ ಹೇಗೆ ನೀರು ಕುಡಿಯುತ್ತದೆ ಎನ್ನುವುದನ್ನು ತಿಳಿಯೋಣ.

    ನಾಯಿ, ನೀರನ್ನು ಕುಡಿಯಲು ಸಂಪೂರ್ಣವಾಗಿ ಅವಲಂಬಿಸಿರುವುದು ತನ್ನ ನಾಲಿಗೆಯನ್ನು. ನೀರನ್ನು ಕುಡಿಯುವ ಮೊದಲು ಅದು ತನ್ನ ನಾಲಿಗೆಯನ್ನು ಹಿಂಬದಿಗೆ ಬಾಗಿಸುತ್ತದೆ. ಹಾಗೆ ನಾಲಿಗೆಯು ಬಾಗಿದಾಗ, ಅದು ಕಪ್‍ನ ಆಕಾರವನ್ನು ತಾಳುತ್ತದೆ. ಕಪ್‍ನ ಆಕಾರವನ್ನು ಪಡೆದುಕೊಂಡ ನಾಲಿಗೆಯನ್ನು ಅದು ನೀರಿನಲ್ಲಿ ಮುಳುಗಿಸಿ, ನೀರನ್ನು ಮೇಲೆತ್ತಿ, ತನ್ನ ಬಾಯೊಳಗೆ ತುಂಬಿಸಿಕೊಳ್ಳುತ್ತದೆ. ಈಗ ನೀರು ನಾಯಿಯ ಬಾಯಿ ಸೇರಿತು!

    ನಾಯಿ ಬೆಕ್ಕು ಒಂದೇ ರೀತಿಯಲ್ಲಿ ನೀರು ಕುಡಿಯುತ್ತವೆ ಎಂದು ಎಲ್ಲರೂ ನಂಬಿದ್ದರೂ, ಕೆಲವು ವಿಜ್ಞಾನಿಗಳಿಗೆ ಮಾತ್ರ ಅದರ ಬಗ್ಗೆ ಸಂಶಯವಿತ್ತು. ಬೆಕ್ಕಿನ ವಿಶೇಷವೆಂದರೆ ಅದು ನೀರು ಕುಡಿಯುವಾಗ ತನ್ನ ಗದ್ದ ಮತ್ತು ಮೀಸೆಯನ್ನು ಸ್ವಲ್ಪವೂ ಒದ್ದೆ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಅದು ನೀರು ಕುಡಿಯುವ ತಂತ್ರ ಬೇರೆ ಎನೋ ಇದೆ ಎನ್ನುವುದನ್ನು ಕೆಲವರು ತರ್ಕಿಸಿದ್ದರು. ತಮ್ಮ ಕುತೂಹಲಕ್ಕೆ ಒಂದು ತಾರ್ಕಿಕ ಅಂತ್ಯ ನೀಡಲು ಬಯಸಿದ ಕೆಲವು ವಿಜ್ಞಾನಿಗಳು, ಬೆಕ್ಕು ನೀರು ಕುಡಿಯುವ ಕ್ರಿಯೆಯನ್ನು ವಿಡಿಯೋ ಮಾಡಿ, ನಂತರ ಅಭ್ಯಾಸ ಮಾಡಲು ನಿರ್ಧರಿಸಿದರು. ಅದರಂತೆ, ಅತ್ಯುತ್ತಮ ಗುಣಮಟ್ಟದ ಅಲ್ಟ್ರಾ ಸ್ಲೋ ಮೋಶನ್ ಕ್ಯಾಮರಾವನ್ನು ಬಳಸಿ, ಬೆಕ್ಕು ನೀರು ಕುಡಿಯುವುದನ್ನು ವಿಡಿಯೋ ಮಾಡಲಾಯಿತು. ನಂತರ ಆ ವಿಡಿಯೋವನ್ನು ಸ್ಲೋ ಮೋಶನ್ ಮಾಡಿ ಪರೀಕ್ಷಿಸಿದಾಗ ಬಯಲಾಯಿತು ಬೆಕ್ಕಿನ ಬಣ್ಣ!

    ಬೆಕ್ಕು ಪ್ರತಿ ಸಾರಿ ನೀರು ಕುಡಿಯುವಾಗಲೂ ಅತ್ಯಂತ ಕ್ಲಿಷ್ಟವಾದ ಬೌತಶಾಸ್ತ್ರದ ಕ್ರಿಯೆಯೊಂದು ಅದರ ಬಾಯಲ್ಲಿ ನಡೆಯುತ್ತದೆ! ನೀರನ್ನು ಕುಡಿಯುವಾಗ ಬೆಕ್ಕು ಮೊದಲಿಗೆ ತನ್ನ ನಾಲಿಗೆಯನ್ನು ಸ್ವಲ್ಪ ಹಿಂದಕ್ಕೆ ಬಾಗಿಸುತ್ತದೆ. ಆದರೆ ಗಮನಿಸಿ, ನಾಯಿಯ ಹಾಗೆ ಕಪ್‍ನ ಆಕಾರಕ್ಕೆ ಬಾಗಿಸುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬಾಗಿಸುತ್ತದೆ. ಹಾಗೆ ಬಾಗಿಸಿದಾಗ ಉಂಟಗುವ ಮೇಲೈನ್ನು ಅದು ನೀರಿಗೆ ತಾಗಿಸುತ್ತದೆ. ನೀರಿಗೆ ನಾಲಿಗೆ ತಾಗಿದ ಮರುಕ್ಷಣವೆ ಅದು ತನ್ನ ನಾಲಿಗೆಯನ್ನು ಮೇಲಕ್ಕೆ ಎಳೆದುಕೊಂಡು ಬಿಡುತ್ತದೆ. ಹೀಗೆ ನಾಲಿಗೆಯನ್ನು ಮೇಲಕ್ಕೆ ಎಳುದುಕೊಂಡಾಗ, ನಾಲಿಗೆಯ ಜೊತೆಗೆ ಸ್ವಲ್ಪ ಪ್ರಮಾಣದ ನೀರು ಸಹ ಮೇಲಕ್ಕೆ ಬರುತ್ತದೆ. ಆ ನೀರನ್ನು ಗುರುತ್ವಾಕರ್ಷಣಾ ಶಕ್ತಿ ಹಿಂದಕ್ಕೆ ಎಳೆಯುವುದಕ್ಕೆ ಮೊದಲು, ಬೆಕ್ಕು ತನ್ನ ಬಾಯನ್ನು ಮುಚ್ಚಿ ಬಿಡುತ್ತದೆ. ಆಗ ಸ್ವಲ್ಪ ಪ್ರಮಾಣದ ನೀರು ಬೆಕ್ಕಿನ ಬಾಯಲ್ಲೇ ಉಳಿದು ಬಿಡುತ್ತದೆ. ಆ ನೀರನ್ನು ಬೆಕ್ಕು ಆರಾಮಾಗಿ ಹೀರಿ ಕೊಳ್ಳುತ್ತದೆ.

    ಇನ್ನೂ ಕುತೂಹಲಕಾರಿ ಅಂಶವೆಂದರೆ, ಬೆಕ್ಕು ಪ್ರತೀ ಸೆಕೆಂಡಿಗೆ ಈ ರೀತಿ 4 ಬಾರಿ ಮಾಡಬಲ್ಲದು! ಈ ವೇಗದ ಕ್ರಿಯೆಯನ್ನು ಬರಿಗಣ್ಣಿನಿಂದ ನೋಡುವುದು ಸಾಧ್ಯವೇ ಇಲ್ಲ. ಯಾವಾಗ ತನ್ನ ಬಾಯನ್ನು ಮುಚ್ಚಿದರೆ ಅತೀ ಹೆಚ್ಚಿನ ನೀರು ತನ್ನ ಬಾಯಲ್ಲಿ ಉಳಿಯುತ್ತದೆ ಎನ್ನುವುದನ್ನೂ ಸಹ ಬೆಕ್ಕು ಸರಿಯಾಗಿ ಲೆಕ್ಕ ಹಾಕಬಲ್ಲದು!

    ಇವೆಲ್ಲಾ ನಮಗೆ ವಿಜ್ಞಾನವಾದರೆ, ಬೆಕ್ಕಿಗೆ ಅದು ಬದುಕಿನ ಸಹಜ ಕ್ರಿಯೆ.

    *****

    ಜಾಹೀರಾತು ವಿರೋಧಿ ಟಿ.ವಿ. ರಿಮೋಟ್ ಕಂಟ್ರೋಲರ್

    ನಿಮ್ಮ ಮನೆಯ ಟಿ.ವಿ.ಯ ರಿಮೋಟ್ ಕಂಟ್ರೋಲರ್ ಹಾಳಾಗಿ ಬಿಟ್ಟಿದೆ ಎಂದಿಟ್ಟುಕೊಳ್ಳಿ. ರಿಮೋಟ್ ಇಲ್ಲ ಅಂದ ಮಾತ್ರಕ್ಕೆ ಟಿ.ವಿ. ನೋಡದೆ ಇರಲು ಸಾಧ್ಯವೇ? ನೋಡಲೇಬೇಕು. ಒಂದೇ ಚಾನೆಲ್ ಬಹಳ ಹೊತ್ತು ವೀಕ್ಷಿಸುವ ಅಭ್ಯಾಸ ಬಿಟ್ಟು ಎಷ್ಟೋ ವರ್ಷಗಳಾಗಿವೆ. ಪದೆ ಪದೇ ಟಿ.ವಿ. ಚಾನೆಲ್ ಬದಲಾಯಿಸದಿದ್ದರೆ ಮನಸ್ಸಿಗೆ ಸಮಾಧಾನವೇ ಇಲ್ಲ. ಪ್ರತಿ ಸಾರಿ ಚಾನೆಲ್ ಬದಲಾಯಿಸುವಾಗಲೂ ಎದ್ದು, ಟಿ.ವಿ. ಹತ್ತಿರವೇ ಹೋಗಿ, ಚಾನೆಲ್ ಬದಲಾಯಿಸಬೇಕು. ಅಬ್ಬಾ, ಎಷ್ಟು ಕಷ್ಟ ಅಲ್ಲವಾ? ಬಹುಷ: ನಿಮ್ಮ ಇತರ ಎಲ್ಲಾ ಕೆಲಸ ಬಿಟ್ಟು ರಿಮೋಟ್ ರಿಪೇರಿ ಮಾಡಿಸಿಕೊಂಡು ಬರ್ತೀರಿ. ರಿಮೋಟ್ ಇಲ್ಲದೇ ಒಂದೇ ಒಂದು ದಿನ

    Enjoying the preview?
    Page 1 of 1