Discover millions of ebooks, audiobooks, and so much more with a free trial

Only $11.99/month after trial. Cancel anytime.

ಸತ್ಯವೇದ ಕಂಠಪಾಠ ಕೈಪಿಡಿ
ಸತ್ಯವೇದ ಕಂಠಪಾಠ ಕೈಪಿಡಿ
ಸತ್ಯವೇದ ಕಂಠಪಾಠ ಕೈಪಿಡಿ
Ebook180 pages44 minutes

ಸತ್ಯವೇದ ಕಂಠಪಾಠ ಕೈಪಿಡಿ

Rating: 0 out of 5 stars

()

Read preview

About this ebook

ಈ ಅನನ್ಯ ಪುಸ್ತಕದಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾದ ಪ್ರಮುಖ ಬೈಬಲ್ ವಚನಗಳನ್ನು ಕಾಣಬಹುದು. ಯೇಸು ಧರ್ಮಗ್ರಂಥಗಳನ್ನು ಕಂಠಪಾಠ ಮಾಡಿದನು - ಆದ್ದರಿಂದ ನಾವು ಮಾಡಬೇಕು! ಧರ್ಮಗ್ರಂಥಗಳನ್ನು ಕಂಠಪಾಠ ಮಾಡುವುದು ಮತ್ತು ಉತ್ತಮ ಮತ್ತು ಸುಧಾರಿತ ಪಾತ್ರವನ್ನು ಬೆಳೆಸುವುದು ನಮ್ಮ ಗುರಿಯನ್ನಾಗಿ ಮಾಡೋಣ. ನಾವು ಕ್ರಿಸ್ತನ ಅನುಯಾಯಿಗಳು!

LanguageKannada
Release dateDec 9, 2020
ISBN9781643302225
ಸತ್ಯವೇದ ಕಂಠಪಾಠ ಕೈಪಿಡಿ
Author

Dag Heward-Mills

Bishop Dag Heward-Mills is a medical doctor by profession and the founder of the United Denominations Originating from the Lighthouse Group of Churches (UD-OLGC). The UD-OLGC comprises over three thousand churches pastored by seasoned ministers, groomed and trained in-house. Bishop Dag Heward-Mills oversees this charismatic group of denominations, which operates in over 90 different countries in Africa, Asia, Europe, the Caribbean, Australia, and North and South America. With a ministry spanning over thirty years, Dag Heward-Mills has authored several books with bestsellers including ‘The Art of Leadership’, ‘Loyalty and Disloyalty’, and ‘The Mega Church’. He is considered to be the largest publishing author in Africa, having had his books translated into over 52 languages with more than 40 million copies in print.

Related to ಸತ್ಯವೇದ ಕಂಠಪಾಠ ಕೈಪಿಡಿ

Related ebooks

Reviews for ಸತ್ಯವೇದ ಕಂಠಪಾಠ ಕೈಪಿಡಿ

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    ಸತ್ಯವೇದ ಕಂಠಪಾಠ ಕೈಪಿಡಿ - Dag Heward-Mills

    ಅಧ್ಯಾಯ ೧

    _____________________________________________________________________________

    ಸತ್ಯವೇದ ಕಂಠಪಾಠವೆಂದರೆ ಏನು? 

    ಸತ್ಯವೇದ ಕಂಠಪಾಠವು ಶ್ರೇಷ್ಟವಾದ ಸೇವೆಗೆ ಅಸ್ತಿವಾರವು.ಇಂದು ಬಹಳಷ್ಟು ಮಂದಿ ಬಲವಾದ ಅಸ್ತಿವಾರದಲ್ಲಿ ನಿಲ್ಲಲಾಗದಿದ್ದರಿಂದ ಭೂಮಿಯ ಮೇಲೆ ದೇವರ ಶಕ್ತಿಯುತವಾದ ಕಾರ್ಯವನ್ನು ನಡೆಸಲು ಆಗದಿದ್ದಾರೆ.

    ಕಠಿಣ ಪರಿಶ್ರಮದಿಂದ ನಿಷ್ಟೆಯುಳ್ಳ ತಾಳ್ಮೆಯ ಮನೋಭಾವದಿಂದ,ದೇವರ ಶ್ರೇಷ್ಟವಾದ ವರಗಳನ್ನು ನಿಭಾಯಿಸಲು ಬೇಕಾದ ಗುಣವನ್ನು ಅಭಿವೃಧ್ದಿಗೊಳಿಸಬಹುದು.ಸತ್ಯವೇದದ ಕಂಠಪಾಠದಿಂದ ನಿಮ್ಮ ಸೇವೆಯು ಉನ್ನತ ಮಟ್ಟದಲ್ಲಿ ತಲುಪುವುದು.

    ಸತ್ಯವೇದ ಕಂಠಪಾಠವು ಮುಖ್ಯವಾದ ವಾಕ್ಯಗಳನ್ನು ನೀವು ಅಗತ್ಯವಿರುವಾಗ ಬಳಸಲು ನೆನಪಿನಲ್ಲಿಡಲು ಸರಳವಾಗಿ ನೆರವಾಗುವ ಕೀಲಿಕೈಯಾಗಿದೆ.

    ಕ್ರಿಸ್ತನ   ಅನುಯಾಯಿಯಾಗು

    ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಾನು ನಿಮ್ಮನ್ನು ಮಾಡುವೆನು ಅಂದನು.

    ಮತ್ತಾಯ ೪ :೧೯

    ವಾಕ್ಯವನ್ನು ಕಂಠಪಾಠ ಮಾಡುವುದರ ಮೂಲಕ ನೀವು ಯೇಸು ಕ್ರಿಸ್ತನ ಮುಖ್ಯ ಅನುಯಾಯಿಯಾಗಿಸುವುದು ಗುರಿಯಾಗಿದೆ.

    ಜೀವಿತದ ಪ್ರತಿಯೊಂದು ದಿನವು ಸತ್ಯವೇದದ ಒಂದು ವಾಕ್ಯವನ್ನು ಕಂಠಪಾಠ ಮಾಡುವ ಸಲುವಾಗಿದೆ.

    ಜೀವಿತದ ಪ್ರತಿಯೊಂದು ದಿನವು ನಿಮ್ಮ ಗುಣವನ್ನು ಇನ್ನಷ್ಟು ಸುಗುಣರಾಗುವ ಅವಕಾಶ ನೀಡಿದೆ.

    ಪ್ರತಿ ವ್ಯಕ್ತಿಯೊಂದಿಗಿನ ಸಂಭಾಷಣೆಯು ನಿಮಗೆ ವಾಕ್ಯವನ್ನು ಕಂಠಪಾಠ ಮಾಡುವ ಅವಕಾಶ ನೀಡಿದೆ.

    ಪ್ರತಿಯೊಬ್ಬ ಸಹ ವಿಶ್ವಾಸಿಯೊಂದಿಗಿನ ಸಂಭಾಷಣೆಯು ನಿಮ್ಮ ಕಂಠಪಾಠದ ಕೌಶಲ್ಯವನ್ನು ಹೆಚ್ಚಿಸುವಂತದ್ದಾಗಿದೆ.

    ಉಳಿದ ಪುಟಗಳಲ್ಲಿ,ಪ್ರತಿ ಕ್ರೈಸ್ತನು ಕಂಠಪಾಠ ಮಾಡಬೇಕಾದ ವಾಕ್ಯಗಳನ್ನು ನೀವು ಕಾಣಬಹುದು.ನಾನು ನಾನು ವೈಯಕ್ತಿಕವಾಗಿ ಆರಿಸಿದ್ದೇನೆ.ನೀವು ಈ ವಾಕ್ಯಗಳನ್ನು ಕೇವಲ ಗಮನಿಸಲು ಪ್ರಸ್ತಾಪಿಸುತ್ತಿಲ್ಲ.ಅವುಗಳು ಕಂಠಪಾಠಕ್ಕಾಗಿ !ನಿಮಗೆ ಕೆಲವೊಂದು ವಾಕ್ಯಗಳು ತಿಳಿದಿರಬಹುದು ಆದರೆ ಕೆಲವೊಂದು ವಾಕ್ಯಗಳನ್ನು ನೀವು ಹೇಳಲು ಬಲ್ಲವರಾಗಿರಬೇಕು !

    ಈ ಪುಸ್ತಕವನ್ನು ನಿಮ್ಮೊಂದಿಗೆ ಯಾವಾಗಲೂ ಇಟ್ಟುಕೊಳ್ಳಿರಿ.ಸಂದರ್ಭಗಳು ಒದಗಿದಾಗ ಈ ವಾಕ್ಯಗಳನ್ನು ಹೇಳಲು ಸಿದ್ಧರಾಗಿರಿ.ನೀವು ಕೆಲವು ತಿಂಗಳುಗಳಿಂದ ಕ್ರೈಸ್ತರಾಗಿದ್ದಲ್ಲಿ.ನೀವು ಈ ವಾಕ್ಯಗಳನ್ನು ಹೇಳಲು ಸಾಧ್ಯವಾಗುವುದು.ನೀವು ನಿಜವಾಗಿಯು ದೇವರ ವಾಕ್ಯವನ್ನು-ಹೇಳುವ ದೇವರ ಮನುಷ್ಯನಾಗಲು ಸಾಧ್ಯ.

    ಈ ವಿಶೇಷವಾದ ಸತ್ಯವೇದದ ಕಂಠಪಾಠದ ಕೈಪಿಡಿಯ ಮೂಲಕ ನೀವು ಯೇಸುಕ್ರಿಸ್ತನ ಉತ್ತಮ ಹಿಂಬಾಲಕರು ಸೇವೆಗೆ ಉತ್ತಮ ಮಾದರಿಯಾಗಿರುವಿರೆಂದು ಘೋಷಿಸುತ್ತೇನೆ!

      ಅಧ್ಯಾಯ ೨

     _______________________________________________________________________________

    ಸತ್ಯವೇದ ಕಂಠಪಾಠದ ಪ್ರಾಧಾನ್ಯತೆ

    ಒಬ್ಬ ಸೇವಕನು ದೇವರ ವಾಕ್ಯವನ್ನು ಹೊರುವವನಾಗಿರಬೇಕು.ಆತನು ದೇವರ ವಾಕ್ಯದಲ್ಲಿ ಅದರ ಮಹಿಮೆಯಲ್ಲಿ ಸಂಪೂರ್ಣವಾಗಿ ಹೊದಿಸಲ್ಪಟ್ಟವನು ಆಗಿರಬೇಕು.ಆದುದರಿಂದಲೇ ಸತ್ಯವೇದ ಕಂಠಪಾಠವು ಸೇವೆಯ ಬೆಳವಣಿಗೆಗೆ ಬಹು ಶಕ್ತಿಯುತವಾದ ಸಂಗತಿಯಾಗಿದೆ.

    ಆದಿಯಲ್ಲಿ ವಾಕ್ಯವಿತ್ತು.ಇದರ ಅರ್ಥ ದೇವರು ಮಾಡುವ ಎಲ್ಲಾ ಸಂಗತಿಯಲ್ಲಿ ದೇವರ ವಾಕ್ಯವೇ ಅಡಿಪಾಯವಾಗಿರುವುದು.

    ಇಂದು,ದೇವರ ವಾಕ್ಯದ ಕಂಠಪಾಠವು ಮುಖ್ಯತ್ವವನ್ನು ಸಂಪಾದಿಸಿದೆ ಕಾರಣ ದೇವರು ಹೆಚ್ಚು ಮಹಿಮೆಯುಳ್ಳ ಸಭೆಯನ್ನು ಕಟ್ಟುತ್ತಿದ್ದಾನೆ.ಇದು ಯೇಸು ಕ್ರಿಸ್ತನ ಸುವಾರ್ತೆಯನ್ನು ಸಾರಿದ ಹಿಂದಿನ ಸಭೆಗಿಂತಲೂ ಇದರ ಮಹಿಮೆಯು ಅಸಾಧಾರಣವಾದದ್ದಾಗಿರುವುದು.ಇದರ ಮತ್ತೊಂದು ಅರ್ಥ ಕಡೆಯ ದಿನದಲ್ಲಿ ದೇವರು ಎಬ್ಬಿಸುವ ಅಭಿಷಕ್ತರು ಮೊದಲಿಗಿಂತಲೂ ಮಹಿಮೆಯುಳ್ಳವರಾಗಿರುವರು.ಅವರು ದೇವರ ವಾಕ್ಯವನ್ನು ತಿಳಿದವರು ಅದನ್ನು ನಿರರ್ಗಳವಾಗಿ ಹೇಳಬಲ್ಲವರಾಗಿರುವರು!

    ಈ ಮಹಿಮೆಯ ಸೇವಕರು ಮಹಿಮೆಯ ಸಭೆಯು ಹೇಗೆ ಸೃಷ್ಟಿಸಲ್ಪಡುವುದು ಮತ್ತು ಹೇಗೆ ಜನ್ಮತಾಳುವುದು? ಸತ್ಯವೇದವು ಇದರ ಕುರಿತಾಗಿ ಸ್ಪಷ್ಟವಾಗಿ ತಿಳಿಸುವುದು.ದೇವರ ವಾಕ್ಯದ ಮೂಲಕ ಸೇವಕನು ಯೇಸುವಿಗಾಗಿ ಮಹತ್ಕಾರ್ಯ ಮಾಡಲು ಅಭಿವೃದ್ದಿ ಹೊಂದಿ ಸಿದ್ಧನಾಗುತ್ತಾನೆ.ಅವೆಲ್ಲವೂ ದೇವರ ವಾಕ್ಯದ ತಿಳುವಳಿಕೆಯಲ್ಲಿಯೇ !

    ೨ ತಿಮೊಥಿ ೩:೧೬-೧೭ ರಲ್ಲಿ,ಒಬ್ಬ ಒಳ್ಳೆಯ ಸೇವಕನು ಎಲ್ಲಾ ಸುಕೃತ್ಯಗಳನ್ನು ಮಾಡಲು ಶಕ್ತನಾಗುತ್ತಾನೆ:ಅದು ವಾಕ್ಯದ ಮೂಲಕ !

     ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ. ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.

    ಸತ್ಯವೇದ ಕಂಠಪಾಠದ ಕೈಪಿಡಿಯು ನೀವು ತಿಳಿಯಬೇಕಾದ ಬಹು ಮುಖ್ಯವಾಕ್ಯಗಳನ್ನು ನಿಮಗೆ ನೀಡುವುದು.ಅದು ನೀವು ತಿಳಿದಿರಲೇಬೇಕಾದ ವಾಕ್ಯಗಳು.ಈ ವಾಕ್ಯಗಳನ್ನು ಈ ಪುಸ್ತಕದಿಂದ ಕಂಠಪಾಠದ ಕಲೆಯ ಮೂಲಕ ಹೃದಯದಲ್ಲಿ ಸ್ವೀಕರಿಸಿರಿ.ನೀವು ಈ ವಾಕ್ಯಗಳನ್ನು ಕಂಠಪಾಠ ಮಾಡುವುದರ ಮೂಲಕ ನಿಮ್ಮ ಬಲವಾದ ಸೇವೆಗೆ ನೀವು ಅಡಿಪಾಯ ಹಾಕುವಿರಿ.

    ನಮ್ಮ ರಕ್ಷಕನಾದ ಯೇಸುವಿನಂತೆ ಇರೋಣ! ಯೇಸು ಕ್ರಿಸ್ತನು ಸಂಪೂರ್ಣವಾಗಿ ವಾಕ್ಯಗಳಿಂದ ತುಂಬಿದ್ದನು.ನೀವು ಕಂಠ ಪಾಠ ಮಾಡಿದ ವಾಕ್ಯಗಳನ್ನು ನಿಮ್ಮ ನೆರೆಯವರಿಗೆ ಹೇಳಿರಿ.ನಿಮ್ಮ ಉಳಿದ ಜೀವಿತ ಕಾಲದಲ್ಲಿ ನೀವು ಕಂಠಪಾಠ ಮಾಡಿದ ವಾಕ್ಯದ ಮೂಲಕ ನೀವು ನಡೆಸಲ್ಪಡುವಿರಿ.ಯೇಸು ಕ್ರಿಸ್ತನು ಅಡವಿಯಲ್ಲಿ ಸೈತಾನನಿಗೆ ವಾಕ್ಯವನ್ನು ಹೇಳಿದನು ಅದು ಆತನು ಶೋಧನೆಯನ್ನು ಎದುರಿಸಲು ಬಳಸಿದ ಆಯುಧ.

    ಇಂದು,ಬಹುತೇಕ ಮುಖ್ಯಧರ್ಮಗಳು ತಮ್ಮ ಪರಿಶುಧ್ದ ಪುಸ್ತಕಗಳನ್ನು ಕಂಠಪಾಠ ಮಾಡುತ್ತಿದ್ದಾರೆ.ಈ ಯುವಕರುಗಳು ಈ ಧರ್ಮದ ಪುಸ್ತಕಗಳನ್ನು ಗಂಟೆ ಗಟ್ಟಲೆ ಕುಳಿತು ಕಂಠಪಾಠ ಮಾಡುತ್ತಿದ್ದಾರೆ.ಈ ರೀತಿಯ ಸಮರ್ಪಣೆಯ ಕಂಠಪಾಠವು ಅದರ ಪರಿಣಾಮಕಾರಿಯಾದ ನಂಬಿಕೆಗಾಗಿ ಅವರನ್ನು ಸಾಯಲು ಕೂಡ ಸಿದ್ಧಪಡಿಸುತ್ತಿದೆ.

    ನಾವು ನಮ್ಮ ಪರಿಶುದ್ಧ ಪುಸ್ತಕದ ವಾಕ್ಯಗಳನ್ನು ಕಂಠಪಾಠ ಮಾಡಿ ಕ್ರಿಸ್ತನಿಗಾಗಿ ಪರಿಣಾಮಕಾರಿಯಾಗಬೇಕು! ಅದೊಂದೇ ಮಾರ್ಗದಿಂದ ಕ್ರಿಸ್ತನಿಗಾಗಿ ದೇವರವಾಕ್ಯವನ್ನು ತಿಳಿದು ಅದನ್ನು ನಿರರ್ಗಳವಾಗಿ ಹೇಳುವುದು ಸಾಧ್ಯ !

    ನನ್ನ ವೈಯಕ್ತಿಕ ಸಾಕ್ಷಿ ನಾನು ಸೆಕೆಂಡರಿ ಶಾಲೆಯಲ್ಲಿ ಕಲಿತ ದೇವರ ವಾಕ್ಯಗಳು ನನ್ನ ಸೇವೆಗೆ ಮತ್ತು ಜೀವಿತಕ್ಕೆ ಅಸ್ತಿವಾರವಾಯಿತು.ಶಾಲೆಯ ನಂತರ ವಾಕ್ಯಗಳನ್ನು ಒಂದೊಂದಾಗಿ ಕಂಠಪಾಠ ಮಾಡುತ್ತಿದ್ದೆ.ಇದನ್ನು ನೀವು ಸ್ವೀಕರಿಸುವ ನನ್ನ ಸೇವೆಯ ಎಲ್ಲಾ ಕಡೆಯಲ್ಲೂ ಗುರುತಿಸಬಹುದು.

    ನನ್ನ ಪ್ರಾರ್ಥನೆ ಈ ಸತ್ಯವೇದದ ಕಂಠಪಾಠವು ನಿಮ್ಮ ಭವಿಷ್ಯವನ್ನು ಶಾಶ್ವತವಾಗಿ ರೂಪಿಸಲಿ.ನಿಮ್ಮ ಜೀವಿತದ ಎಲ್ಲಾ ಸತ್ಕಾರ್ಯಗಳಿಗೆ ನಿಮ್ಮನ್ನು ಸಿದ್ಧಮಾಡಲಿ.ಈ ವಾಕ್ಯಗಳನ್ನು ನೀವು ಸುಲಭವಾಗಿ ಹೇಳುವವರಾಗಿರಿ !ನಿಮ್ಮನ್ನು ಕೇಳುವವರು ವಾಕ್ಯದ ಮೂಲಕ ಅದರ ಘೋಷಣೆಯಿಂದ ಆನಂದಗೊಳ್ಳಲಿ! ಆಮೆನ್!

    ಆದಿಕಾಂಡ

    ೧.    ಆದಿಕಾಂಡ ೮:೨೨

    ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ      ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.

    ೨.    ಆದಿಕಾಂಡ ೩೨:೨೮

    ಅದಕ್ಕೆ ಆತನು�ನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.

    ೩.   ಆದಿಕಾಂಡ ೨೮:೧೬-೧೭

    ತರುವಾಯ ಯಾಕೋಬನು ನಿದ್ರೆಯಿಂದ ಎಚ್ಚತ್ತು--ನಿಶ್ಚಯವಾಗಿ ಈ ಸ್ಥಳದಲ್ಲಿ ಕರ್ತನು ಇದ್ದಾನೆ. ಇದನ್ನು ನಾನು ಅರಿಯಲಿಲ್ಲ ಅಂದನು. ಅವನು ಭಯಪಟ್ಟು--ಈ ಸ್ಥಳವು ಎಷ್ಟೋ ಭಯಂಕರ ವಾದದ್ದು; ಇದು ದೇವರ ಮನೆಯೇ ಹೊರತು ಬೇರೆಯಲ್ಲ; ಇದೇ

    Enjoying the preview?
    Page 1 of 1